Personalized
Horoscope
  • AstroSage Big Horoscope
  • Ask A Question
  • Raj Yoga Report
  • Shani Report
  • Career Counseling

ರಾಶಿ ಭವಿಷ್ಯ 2016 - Kannada Horoscope 2016

ಪರದೆ ಸರಿಸಿ ಮತ್ತು ನಮ್ಮ ರಾಶಿ ಭವಿಷ್ಯ 2016ರ ಮೂಲಕ ನಿಮ್ಮ ಭವಿಷ್ಯದ ಒಂದು ಮುನ್ನೋಟ ಪಡೆಯಿರಿ. ಹಣಕಾಸು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸುತ್ತದೆಯೇ? ನಿಮ್ಮ ಜೀವನದಲ್ಲಿ ಪ್ರೀತಿಯ ಏಳಿಗೆಯಾಗುತ್ತದೆಯೇ? ಸಾಮರಸ್ಯವು ನಿಮ್ಮ ಕೌಟುಂಬಿಕ ಜೀವನವನ್ನು ಆಕರ್ಷಕವಾಗಿಡುತ್ತದೆಯೇ? ಈ ಉಚಿತ ಓದುವಿಕೆಯ ಜೊತೆಗೆ ಈಗ ಎಲ್ಲದಕ್ಕೂ ಉತ್ತರಗಳನ್ನು ಪಡೆಯಿರಿ.

ಮೇಷ

ಮೇಷ 2016ನೇ ವರ್ಷವು ಈ ರಾಶಿಯ ಜಾತಕರ ಮೇಲೆ ಮಿಶ್ರ ಫಲಿತಾಂಶಗಳ ಮಳೆ ಸುರಿಸುತ್ತದೆ. ದೈನಂದಿನ ಜೀವನದಲ್ಲಿ ಒತ್ತಡ ಬರುವ ಸಾಧ್ಯತೆಯಿದೆ; ಆದರೆ, ವೃತ್ತಿಪರ ಜೀವನದ ನಿಮಗೆ ಹೇರಳ ಯಶಸ್ಸನ್ನು ಅನುಗ್ರಹಿಸುವ ಸಾಧ್ಯತೆಯಿದೆ. ಮೇಷ ರಾಶಿಯವರು ಹಾರಾಡಲು ಪ್ರಾರಂಭಿಸಬೇಡಿ, ಏಕೆಂದರೆ ಈ ಯಶಸು ಸ್ವಲ್ಪ ವಿಳಂಬದ ನಂತರ ಬರುತ್ತದೆ. ಉದ್ಯಮಿಗಳು ಬೃಹತ್ ಹೂಡಿಕೆಗಳನ್ನು ಮಾಡದಿರಲು ಸಲಹೆ ನೀಡಲಾಗುತ್ತದೆ. ಈ ವರ್ಷ ಅನಗತ್ಯವಾಗಿ ಹಣ ಖರ್ಚು ಮಾಡುವ ಹವ್ಯಾಸಕ್ಕೆ ಕಡಿವಾಣ ಹಾಕುವುದು ಮುಖ್ಯ. ನಿಮ್ಮ ಪ್ರೀತಿಯ ಜೀವನದಲ್ಲಿ ಆಸಕ್ತಿದಾಯಕವಾಗಿದ್ದೇನೂ ಕಾಣುತ್ತಿಲ್ಲ. ಲೈಂಗಿಕ ಜೀವನವೂ ಅದರ ಅನ್ಯೋನ್ಯತೆ ಮತ್ತು ಆನಂದವನ್ನು ಕಳೆದುಕೊಳ್ಳುತ್ತದೆ. ಅನುಪಯುಕ್ತ ವಾದಗಳಿಗೆ ಗಮನ ನೀಡಬೇಡಿ. ನೀವು ಯಾವಾಗಲೂ ಜಗಳಗಳಿಂದ ಪ್ರಚೋದನೆ ಹೊಂದಿದರೂ, ಅದರಿಂದ ಧನಾತ್ಮಕವಾದದ್ದೇನೂ ಹೊರಹೊಮ್ಮುವುದಿಲ್ಲ. ಷೇರು ಮಾರುಕಟ್ಟೆಯಿಂದ ದೂರವಿರಿ. ಆಗಸ್ಟ್ ನ ನಂತರ ಒಳ್ಳೆಯದು ನಿಮ್ಮ ಜೀವನವನ್ನು ಪ್ರವೇಶಿಸಿದರೂ, ವರ್ಷವಿಡೀ ಎಚ್ಚರಿಕೆಯಿಂದಿರುವ ಅಗತ್ಯವಿದೆ.

ವೃಷಭ

ವೃಷಭವೃಷಭ ರಾಶಿಯವರು ಈ ವರ್ಷದಲ್ಲಿ ಅಭಿವೃದ್ಧಿಶೀಲ ಸಮಯವನ್ನು ಹೊಂದಿರುತ್ತಾರೆ. ಸಂಗಾತಿಯ ಜೊತೆಗಿನ ಬಂಧ ಶುದ್ಧ ಮತ್ತು ಪ್ರೀತಿಪೂರ್ಣವಾಗಿದ್ದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಈ ವರ್ಷ ನಿಮ್ಮ ವೈವಾಹಿಕ ಜೀವನ ಆನಂದದಾಯಕವಾಗಿರುತ್ತದೆ ಮತ್ತು ನೀವು ನಿಮ್ಮ ಪ್ರೀತಿಪಾತ್ರರ ಜೊತೆಗೆ ಉಲ್ಲಾಸಕರ ಕ್ಷಣಗಳನ್ನು ಅನುಭವಿಸುತ್ತೀರಿ. ಸೇವೆಯಲ್ಲಿರುವ ಜನರು ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು. ಲಾಭವು ಉದ್ಯಮಿಗಳಿಗೆ ತಕ್ಷಣವೇ ದೊರಕದಿದ್ದರೂ ಅದು ಸ್ಥಿರವಾಗಿ ಬರುತ್ತದೆ. ಪ್ರೀತಿಯ ಜೀವನವು ಎಲ್ಲಾ ವಿಧದ ಸಂತೋಷವನ್ನೂ ನಿಮಗೆ ಒದಗಿಸಿ ಏಳಿಗೆ ತರುತ್ತದೆ. ಆಂತರಿಕ ಆನಂದವಿರುವಾಗ ಏನನ್ನಾದರೂ ಸಾಧಿಸುವುದು ಸುಲಭವಾಗುತ್ತದೆ. ಆದರೆ, ನಿಮ್ಮ ಗಮನ ನಿಮ್ಮ ಲೈಂಗಿಕ ಆಸಕ್ತಿಗಳಿಂದಾಗಿ ಏರುಪೇರಾಗಬಹುದು. ಇದು ಅಕ್ರಮ ಸಂಬಂಧಗಳಿಗೆ ಜನ್ಮ ನೀಡಬಹುದು. ನೀವು ಇಂಥ ವಿಷಯಗಳ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವಷ್ಟು ಬುದ್ಧಿವಂತರಾಗಿದ್ದೀರಿ; ಆದ್ದರಿಂದ, ಅವುಗಳಿಂದ ದೂರವಿರಿ. ಕೊನೆಯದಾಗಿ, ಈ ವರ್ಷ ಹಣಕಾಸು ಅಸಾಧಾರಣವಾಗಿರುವಂತೆ ತೋರುತ್ತದೆ. ನೀವು ಒಳ್ಳೆಯ ಹಣ ಮಾಡುತ್ತೀರಿ. 2016 ಆರ್ಥಿಕವಾಗಿ ನಿಮಗೆ ಬಹಳಷ್ಟು ನೀಡುತ್ತದೆ.

ಮಿಥುನ

ಮಿಥುನ ಈ ವರ್ಷದ ಹೆಚ್ಚಿನ ಭಾಗ ನಿಮಗೆ ಅನುಕೂಲವಾಗಿರುವಂತೆ ಕಾಣುತ್ತದೆ. ಪ್ರೀತಿ ಮತ್ತು ಕಾಳಜಿ ನಿಮ್ಮ ಸಂಗಾತಿಯನ್ನು ನಿಮ್ಮ ಹತ್ತಿರ ತರುತ್ತದೆ; ಹೀಗೆ, ಎಲ್ಲವೂ ಸಾಮರಸ್ಯದಿಂದಿರುತ್ತದೆ. ಮತ್ತೊಂದೆಡೆ, ನಿಮ್ಮ ಸಂಬಂಧಿಗಳೊಂದಿಗೆ ನಿಮ್ಮ ಸಂಗಾತಿಯ ಸಂಬಂಧ ಸಿಹಿಯಾಗಿಯೂ ಮತ್ತು ಹುಳಿಯಾಗಿಯೂ ಇರಬಹುದು. ನಿಮ್ಮ ದೇಹವೇ ನಿಮ್ಮ ದೇವಸ್ಥಾನ; ಆದ್ದರಿಂದ, ನೀವು ಇದರೆಡೆಗೆ ಗಂಭೀರತೆ ತೋರಿಸುವುದನ್ನು ಖಚಿತಪಡಿಸಿಕೊಳ್ಳಿ. ಆರೋಗ್ಯಕರ ಆಹಾರ ಮತ್ತು ವ್ಯಾಯಾಮಗಳು ನಿಮ್ಮ ದೈನಂದಿನ ರೂಢಿಯಲ್ಲಿರಬೇಕು. ಒಳಬರುವ ಹಣದಲ್ಲಿ ಸ್ವಲ್ಪ ಅಡಚಣೆಯಾಗುವ ಸಂಭವನೀಯತೆಯಿರುವುದರಿಂದ, ನಿಮ್ಮ ವೆಚ್ಚಗಳನ್ನು ನಿಯಂತ್ರಣದಲ್ಲಿಡಿ. ಎಲ್ಲ ಆರ್ಥಿಕ ಬಿಕ್ಕಟ್ಟಿನಿಂದಲೂ ಮುಕ್ತವಾಗಿರಲು, ಸಾಲ ಮಾಡಬೇಡಿ. ವೇದಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2016 ಉದ್ಯಮಿಗಳಿಗೆ ಲಾಭ ತರುತ್ತದೆ. ಹಣ ಮಾಡಲು ಅವರು ಅಕ್ರಮ ಮಾರ್ಗ ಹಿಡಿಯಬಹುದು ಆದರೆ ಇದನ್ನು ತಪ್ಪಿಸಬೇಕು. ಪ್ರಣಯವು ನಿಮ್ಮ ಜೀವನದಲ್ಲಿ ಬೆಚ್ಚನೆಯ ಭಾವ ಮೂಡಿಸುವುದರಿಂದ ಪ್ರೀತಿಯ ವಿಷಯಗಳು ಭರವಸೆ ಮೂಡಿಸುತ್ತವೆ. ಸಾಮಾನ್ಯ ವಿಷಯಗಳನ್ನು ಹೊರತುಪಡಿಸಿ ನಿಮಗೆ ಯಾವ ತೊಂದರೆಯನ್ನೂ ಮುಂಗಾಣಲಾಗಿಲ್ಲ.

ಕರ್ಕ

ಕರ್ಕ ಕರ್ಕರಾಶಿಯವರು ವೈಯಕ್ತಿಕ ಜೀವನದಲ್ಲಿ ಒಂದು ಅದ್ಭುತವಾದ ವರ್ಷವನ್ನು ಅನುಭವಿಸುತ್ತಾರೆ. ಆದರೆ, ಕುಟುಂಬದ ಸದಸ್ಯರೊಡನೆ ನಿಮ್ಮ ಬಾಂಧವ್ಯ ಅಷ್ಟೇನೂ ಉತ್ತಮವಾಗಿರುವುದಿಲ್ಲ. ನಿಮ್ಮ ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿರಬೇಕು, ಇಲ್ಲದಿದ್ದಲ್ಲಿ ಯಾವುದಾದರೂ ಪ್ರಮುಖ ರೋಗ ನಿಮ್ಮ ಮೇಲೆ ದಾಳಿ ಮಾಡಬಹುದು. ನಿಮ್ಮ ಹಣಕಾಸಿನ ಬಗ್ಗೆ ಜಾಗರೂಕರಾಗಿರಿ. ಯಾರನ್ನಾದರೂ ಕುರುಡಾಗಿ ನಂಬುವುದು ಆರ್ಥಿಕ ಆಯಾಮದಲ್ಲಿ ನಷ್ಟಕ್ಕೆ ಕಾರಣವಾಗಬಹುದು. ಯಾರಾದರೂ ನಿಮ್ಮ ವಿರುದ್ಧ ತಂತ್ರ ಹೆಣೆಯಬಹುದಾದ್ದರಿಂದ ನಿಮ್ಮ ಕಣ್ಣುಗಳು ಮತ್ತು ಕಿವಿಗಳನ್ನು ತೆರೆದಿರಿಸುವುದು ಉತ್ತಮ. ಈ ವರ್ಷ ಕೆಲಸದ ಬದಲಾವಣೆಗೆ ಅತ್ಯುತ್ತಮ; ಆದ್ದರಿಂದ ಕೆಲಸ ಬದಲಾಯಿಸುವ ನಿಮ್ಮ ಯೋಜನೆಗೆ ಇನ್ನೂ ಹೆಚ್ಚಿನ ಒತ್ತು ಕೊಡಿ. ಕೆಲವು ಕರ್ಕರಾಶಿಯವರ ಕೆಲಸದ ಒತ್ತಡ ತುಂಬಾ ಹೆಚ್ಚಾಗುತ್ತದೆ. ಕೆಲವು ಕರ್ಕರಾಶಿಯವರು ಬೇರೆ ಜಾತಿಯವರನ್ನು ಪ್ರೀತಿಸಬಹುದು. ಆದರೆ, ಈ ಬಂಧ ಪ್ರಬಲವಾಗಿರುವಂತೆ ತೋರುತ್ತದೆ. ಇದು ಈ ವರ್ಷ ನಿಮ್ಮ ಲೈಂಗಿಕ ಆಸಕ್ತಿಗಳನ್ನು ನಿಯಂತ್ರಿಸಿಕೊಳ್ಳುವಂತೆ ಸೂಚಿಸಲಾಗಿದೆ. ನಿಮ್ಮ ಲೈಂಗಿಕ ಜೀವನವನ್ನು ಭಾವೋದ್ರಿಕ್ತವಾಗಿರಿಸಿಕೊಳ್ಳಲು ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.

ಸಿಂಹ

ಸಿಂಹ ಸಿಂಹರಾಶಿಯವರು 2016ರಲ್ಲಿ ಲಾಭದಾಯಕ ಸಮಯವನ್ನು ಹೊಂದಿರುತ್ತಾರೆ. ನಿಮ್ಮ ಜೀವನದ ಪ್ರತಿಯೊಂದು ಅಂಶವೂ ಸರಿಯಾದ ದಾರಿಯಲ್ಲಿಯೇ ಹೋಗುತ್ತದೆ. ನೀವು ನಿಮ್ಮ ಸಂಗಾತಿ ಮತ್ತು ನಿಮಗೆ ಹತ್ತಿರವಾಗಿರುವ ಇತರರ ಜೊತೆ ಹೃತ್ಪೂರ್ವಕ ಸಂಬಂಧ ಹೊಂದಿರುತ್ತೀರಿ. ನಿಮ್ಮ ಆರೋಗ್ಯವನ್ನು ಗಮನಿಸಿದಲ್ಲಿ ತೂಕ ಹೆಚ್ಚಾಗುವಂತೆ ಕಾಣುತ್ತದೆ. ಅದನ್ನು ನಿಯಂತ್ರಣದಲ್ಲಿಡಲು ಮತ್ತು ನಿಮ್ಮ ದೇಹವನ್ನು ರೋಗಮುಕ್ತವಾಗಿಡಲು ಭಾರೀ ಆಹಾರ ತಿನ್ನುವುದನ್ನು ನಿಲ್ಲಿಸಿ. ಮದ್ಯದಿಂದ ದೂರವಿರುವುದು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಿಮ್ಮ ಆರ್ಥಿಕ ಜೀವನದ ಬಗ್ಗೆ ಮಾತನಾಡಬೇಕಾದಲ್ಲಿ ಈ ವರ್ಷ ಅದಕ್ಕೂ ಸಾಕಷ್ಟು ಚೆನ್ನಾಗಿರುವಂತೆ ತೋರುತ್ತದೆ. ನಿಮ್ಮ ಸಂಪತ್ತು ಮತ್ತು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಗಳೆರಡೂ ಹೆಚ್ಚಾಗುತ್ತವೆ. ನೀವು ವ್ಯಾಪಾರ ಮಾಡುತ್ತಿದ್ದರೂ ಅಥವಾ ಯಾವುದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೂ ಲಾಭ ಖಚಿತವಾಗಿದೆ. ಹೆಸರು, ಕೀರ್ತಿ, ಮತ್ತು ಮೆಚ್ಚುಗೆ ನಿಮ್ಮ ವೃತ್ತಿಪರ ಜೀವನದಲ್ಲಿ ಪ್ರವೇಶ ಪಡೆಯುತ್ತವೆ. 2016ರ ಜಾತಕದ ಪ್ರಕಾರ, ಪ್ರೀತಿಯ ಜೀವನದ ನಕ್ಷೆ ಮೇಲಕ್ಕೇರುತ್ತಿರುವಂತೆ ತೋರುತ್ತದೆ. ಅವಿವಾಹಿತ ಸಿಂಹರಾಶಿಯವರು ಈ ವರ್ಷ ಮದುವೆಯಾಗಬಹುದು. ನಿಮ್ಮ ಲೈಂಗಿಕ ಜೀವನದ ಮೇಲೆ ಬೆಳಕು ಚೆಲ್ಲುವುದು ನಿಮ್ಮ ದೈಹಿಕ ಆಸೆಗಳನ್ನು ಈಡೇರಿಸುತ್ತದೆ. ನಿಮ್ಮ ಸಂಗಾತಿಯ ಜೊತೆ ನೀವು ನಿಕಟ ಕ್ಷಣಗಳನ್ನು ಆನಂದಿಸುತ್ತೀರಿ.

ಕನ್ಯಾರಾಶಿ

ಕನ್ಯಾರಾಶಿ ದುರದೃಷ್ಟವಶಾತ್, ನಿಮ್ಮ ಸಂಗಾತಿಯ ಜೊತೆ ನೀವು ಇಚ್ಛಿಸಿದಷ್ಟು ಬಂಧವನ್ನು ನೀವು ಹೊಂದುವುದಿಲ್ಲ. ಕುಟುಂಬದ ಸದಸ್ಯರೊಡನೆಯೂ ಜಗಳವಾಗುವ ಸಾಧ್ಯತೆ ತುಂಬಾ ಇದೆ. ಆರೋಗ್ಯದ ಮೇಲೆಯೂ ಪರಿಣಾಮವಾಗುವಂತೆ ತೋರುವುದರಿಂದ ನಿಮ್ಮ ಜೀವನದ ಪ್ರತಿಯೊಂದು ಆಯಾಮವೂ ತೊಂದರೆಗೆ ಸಿಲುಕುವಂತೆ ತೋರುತ್ತದೆ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ; ನೀವು ಅದನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಂಡಷ್ಟೂ ಅದು ನಿಮಗೇ ಒಳ್ಳೆಯದು. ಹಣಕಾಸಿಗೆ ಸಂಬಂಧಿಸಿದ ನಷ್ಟಗಳುಂಟಾಗುವ ಸಾಕಷ್ಟು ಸಾಧ್ಯತೆಯಿದೆ. ಹನ್ನೆರಡನೆಯ ಮನೆಯಲ್ಲಿ ಗುರುವಿರುವುದು ನಿಮಗೆ ತೊಂದರೆಗಳನ್ನು ತರುವ ನಿರೀಕ್ಷೆಯಿದೆ. ಆಗಸ್ಟ್ ವರೆಗೂ ನಿಮ್ಮ ನಿರೀಕ್ಷೆಗಳನ್ನು ಅತಿಯಾಗಿರಿಕೊಳ್ಳಬೇಡಿ. ನೀವು ಈ ತಿಂಗಳ ನಂತರವೇ ಸುಧಾರಣೆಯನ್ನು ಅನುಭವಿಸುತ್ತೀರಿ. ಅದರೆ ನೀವು ಕೆಲಸದಲ್ಲಿದ್ದಲ್ಲಿ ನೀವು ಹೆಚ್ಚು ವಿಷಯಗಳನ್ನೇನೂ ಎದುರಿಸುವುದಿಲ್ಲ. ನಿಮ್ಮ ಪ್ರೀತಿಯ ಜೀವನದ ಬಗ್ಗೆ ಸಾಧ್ಯತೆಗಳನ್ನು ಚರ್ಚಿಸುವುದು ಎಲ್ಲವೂ ಚೆನ್ನಾಗಿ ಹಾಗೂ ಸುಗಮವಾಗಿ ನಡೆಯುತ್ತಿದೆಯೆಂದು ತೋರಿಸುತ್ತದೆ. ನಿಮ್ಮ ಆಲೋಚನೆಗಳ ಮೇಲೆ ನಿಯಂತ್ರಣ ಹೊಂದುವುದು ನಿಜವಾಗಿಯೂ ಒಳ್ಳೆಯದು.

ತುಲಾ

ತುಲಾಅವಿಭಕ್ತ ಕುಟುಂಬ ಹೊಂದಿರುವ ತುಲಾ ರಾಶಿಯವರಿಗೆ ಕುಟುಂಬದ ಸದಸ್ಯರ ನಡುವೆ ಸಾಮರಸ್ಯಯ ಕೊರತೆ ಕಾಣಿಸಲಿದೆ. ಮತ್ತೊಂದೆಡೆ, ವಿಭಕ್ತ ಕುಟುಂಬಗಳನ್ನು ಹೊಂದಿರುವ ತುಲಾರಾಶಿಯವರು ಆಹ್ಲಾದಕರ ಕೌಟುಂಬಿಕ ಜೀವನವನ್ನು ಅನುಭವಿಸುವಿರಿ. ನೀವು ನಿಮ್ಮ ಸಂಗಾತಿಯಲ್ಲಿ ನಂಬಿಕೆಯಿಡಬೇಕು. 2016 ಈ ರಾಶಿಯ ಕೆಲವು ಜಾತಕರಿಗೆ ಕುಟುಂಬದ ಜೀವನದ ಕೊನೆಯಾಗಬಹುದು. ನೀವು ಮತ್ತು ನಿಮ್ಮ ಮಕ್ಕಳು ನಡುವಿನ ಬಂದವನ್ನು ಗಮನಿಸಿದಲ್ಲಿ, ನಿಮ್ಮ ಮಕ್ಕಳ ಕಡೆಯಿಂದ ಕೆಲವು ತೊಂದರೆಗಳು ಬರುವ ಸಾಧ್ಯತೆಯಿದೆ. ಸೇವೆಯಲ್ಲಿರುವವರ ವೃತ್ತಿಪರ ಜೀವನ ಉತ್ತಮವಾಗಿರುವಂತೆ ತೋರುತ್ತದೆ; ಆದರೆ ಉದ್ಯಮಿಗಳು ತಮ್ಮ ವ್ಯವಹಾರದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಭವಿಷ್ಯವನ್ನು ನಿಕಟವಾಗಿ ಗಮನಿಸುವುದು ಆಗಸ್ಟ್ 11ರ ನಂತರ ತೀವ್ರ ವಿಷಯಗಳು ಉಲ್ಬಣಿಸುವುದನ್ನು ತೋರಿಸುತ್ತವೆ. ಅನಿರೀಕ್ಷಿತ ವೆಚ್ಚಗಳು ಉದ್ಭವಿಸಬಹುದು. ಈ ವೆಚ್ಚಗಳು ಭಾರೀ ಆಗಿರಬಹುದು, ಮುಂಚಿತವಾಗಿ ಎಚ್ಚರಿಕೆಯಿಂದಿರಿ. ಹಣ ನೀಡುವಾಗ ಅಥವಾ ಪಡೆಯುವಾಗ ಎಚ್ಚರಿಕೆಯಿಂದಿರಿ, ಇಲ್ಲದಿದ್ದರೆ ಸಮಸ್ಯೆಗಳುಂಟಾಗಬಹುದು. ಸಮಯವನ್ನು ಪ್ರೀತಿ ಪ್ರಣಯಗಳಲ್ಲಿ ವ್ಯರ್ಥ ಮಾಡದಿರುವುದು ಉತ್ತಮ. ನೀವು ಮತ್ತು ನಿಮ್ಮ ಸಂಗಾತಿಯ ನಡುವಿನ ತಿಳುವಳಿಕೆಗಿಂತ ಬೇರೆ ಏನೂ ಬೇಕಾಗಿಲ್ಲ. ದೈಹಿಕ ಸಂತೋಷಕ್ಕಾಗಿ ನಿಮ್ಮ ಆರೋಗ್ಯವನ್ನು ಅಪಾಯಕ್ಕೆ ಈಡು ಮಾಡಬೇಡಿ.

ವೃಶ್ಚಿಕ

ವೃಶ್ಚಿಕ ಇದು ವೃಶ್ಚಿಕರಾಶಿಯವರು ಜೀವನದ ಪ್ರತಿಯೊಂದು ಘಟ್ಟದಲ್ಲೂ ತಮ್ಮ ಸಂಗಾತಿಯ ಜೊತೆ ಸಹಯೋಗ ಹೊಂದಿರಬೇಕಾದ ವರ್ಷವಾಗಿದೆ. ವೈಯಕ್ತಿಕ ಜೀವನ ನಿರಂತರ ಏರುಪೇರುಗಳ ಮೂಲಕ ಸಾಗುತ್ತದೆ. ನಿಮ್ಮ ಮಕ್ಕಳ ನಡವಳಿಕೆ ಕೆಲವೊಮ್ಮೆ ನಿಮ್ಮ ಮೇಲೆ ಒತ್ತಡ ಹಾಕಬಹುದು. ಸೋಮಾರಿತನದಮೇಲೆ ನಿಯಂತ್ರಣ ಹೊಂದಲು ಮತ್ತು ನಿಮ್ಮನ್ನು ಸಕ್ರಿಯವಾಗಿರಿಕೊಳ್ಳಲು ಇರಿಸಿಕೊಳ್ಳಲು ಸೂಚಿಸಲಾಗಿದೆ. ಕಡಿಮೆ ಆಸಕ್ತಿಯಿರುವಂತೆ ನಡೆದುಕೊಳ್ಳುವುದು ಮತ್ತು ವಿನೋದ ಮತ್ತು ಸಂತೋಷ ಸಮಯ ಕಳೆಯುವುದು ನಿಮ್ಮ ಪ್ರಯತ್ನಗಳ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ನಿಮ್ಮ ಹಣವನ್ನು ಸುರಕ್ಷಿತವಾಗಿರಿಕೊಳ್ಳಿ ಮತ್ತು ಆಗಸ್ಟ್ ವರೆಗೂ ಸಾಧ್ಯವಾದಷ್ಟು ಉಳಿಸಲು ಪ್ರಯತ್ನಿಸಿ. ಹೂಡಿಕೆಗಳನ್ನು ಈ ತಿಂಗಳ ನಂತರವೇ ಮಾಡಬೇಕು. ಪ್ರೀತಿ ಜೀವನದ ಬಗ್ಗೆ ಮಾತನಾಡುವುದಾದರೆ ಶಾಂತವಾಗಿರಿ ಮತ್ತು ಅನುಮಾನಗಳು ಮತ್ತು ತಪ್ಪುಗ್ರಹಿಕೆಗಳನ್ನು ನಿಮ್ಮ ನಡುವೆ ಬರಲು ಬಿಡದಿರಿ. ಆಗಸ್ಟ್ ವರೆಗೂ ನಿಮ್ಮ ಪ್ರೀತಿ ಜೀವನದಲ್ಲಿ ಎಚ್ಚರಿಕೆಯಿಂದಿರಿ. ವೈವಾಹಿಕ ಜೀವನ ನಿಮಗೆ ಎಲ್ಲ ರೀತಿಯ ಸಂತೋಷಗಳನ್ನೂ ನೀಡುತ್ತದೆ ಮತ್ತು ನೀವು ದೈಹಿಕ ಅನ್ಯೋನ್ಯತೆಯನ್ನು ಅನುಭವಿಸುವಿರಿ. ಆದಾಗ್ಯೂ, ಅದರ ಮೇಲೆ ನಿಯಂತ್ರಣ ಹೊಂದುವುದೊಳ್ಳೆಯದು ಮತ್ತು ಅದನ್ನು ಅತಿಯಾಗಿ ಮಾಡಬೇಡಿ.

ಧನು ರಾಶಿ

ಧನು ರಾಶಿ ಧನು ರಾಶಿಯವರು ಕೆಲವೊಮ್ಮೆ ಕುಟುಂಬದ ಸದಸ್ಯರೊಂದಿಗೆ ವಾಗ್ವಾದಗಳಲ್ಲಿ ಸಿಲುಕಿಕೊಳ್ಳಬಹುದು. ಒಡಹುಟ್ಟಿದವರ ಜೊತೆಗೂ ಜಗಳಗಳಾಗಬಹುದು. ರೋಗಾಣುಗಳು ಮತ್ತು ಕಲುಷಿತ ವಸ್ತುಗಳು ಈ ವರ್ಷ ರೋಗಗಳಿಗೆ ದಾರಿ ಮಾಡಿಕೊಡಬಹುದು. ಈ ವರ್ಷ ಕೆಲಸದಲ್ಲಿರುವ ಜಾತಕರಿಗೆ ಅನುಕೂಲಕರವಾಗಿದೆ. ಆಗಸ್ಟ್ ನಲ್ಲಿ ಅಭಿವೃದ್ಧಿ ಮತ್ತಷ್ಟು ಸುಧಾರಿಸುತ್ತದೆ. ಆಗಸ್ಟ್ ಮೊದಲು ನಿಮ್ಮ ಕೋಪವನ್ನು ನಿಯಂತ್ರಣದಲ್ಲಿರಿಸಿಕೊಳ್ಳುವಂತೆ ಸೂಚಿಸಲಾಗಿದೆ. ವಾದಗಳನ್ನು ತಪ್ಪಿಸಲು ಮತ್ತು ಎಲ್ಲರೊಂದಿಗೆ ಸೌಹಾರ್ದಯುತವಾಗಿರಲು ಈ ವರ್ತನೆ ಬಹಳ ಮುಖ್ಯವಾಗಿದೆ. ನಿಮ್ಮ ಆರ್ಥಿಕ ಜೀವನದಲ್ಲಿ ಎಲ್ಲವೂ ಚೆನ್ನಾಗಿರುತ್ತದಾದರೂ ನೀವು ವಂಚನೆ ಮತ್ತು ಮೋಸಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳುವ ಅಗತ್ಯವಿದೆ. ಉದ್ಯಮಿಗಳ ವಿಧಿಲಿಖಿತದ ಕಾರ್ಡ್ ಒಂದು ಪ್ರತಿಕೂಲವಾದ ವರ್ಷದ ಭವಿಷ್ಯ ನುಡಿಯುತ್ತಿದೆ. ನಿಮ್ಮ ಚಟುವಟಿಕೆಗಳು ಮತ್ತು ನಿರ್ಧಾರಗಳ ಬಗ್ಗೆ ಎಚ್ಚರದಿಂದಿರಿ, ಇಲ್ಲದಿದ್ದಲ್ಲಿ ನೀವು ಜೈಲಿಗೆ ಹೋಗಬೇಕಾಗಬಹುದು. ಇಂತಹ ಪ್ರತಿಕೂಲ ಸಂದರ್ಭಗಳನ್ನು ತಪ್ಪಿಸಲು, ಅಕ್ರಮ ವಸ್ತುಗಳು ಮತ್ತು ವಿಷಯಗಳಿಂದ ದೂರವಿರಿ. ಕಡೆಯದಾಗಿ, ಈ ವರ್ಷ ನಿಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ನಿಮ್ಮ ಉತ್ತಮ ಪ್ರಯತ್ನಗಳನ್ನು ಮಾಡಿ.

ಮಕರ

ಮಕರವೈಯಕ್ತಿಕ ಜೀವನ ನೀವು ನಿರೀಕ್ಷಿಸಿದಷ್ಟು ಶಾಂತಿ ಮತ್ತು ಆನಂದವನ್ನು ನೀಡುವುದಿಲ್ಲ. ಕುಟುಂಬದ ಸದಸ್ಯರು ಮತ್ತು ಸಂಗಾತಿಯ ಜೊತೆ ಘರ್ಷಣೆಗಳು ಸಾಧ್ಯವಿದ್ದು ಇದು ಕೌಟುಂಬಿಕ ವಾತಾವರಣದ ಮೇಲೆ ಪ್ರಭಾವ ಬೀರಬಹುದು. ಈ ವರ್ಷದ ನಕ್ಷತ್ರಗಳು ನೀವು ನಿಮ್ಮ ಮಾತನ್ನು ನಿಯಂತ್ರಿಸಬೇಕೆಂದು ಕೋರುತ್ತವೆ. ಈ ಸಲಹೆಯನ್ನು ಅನುಸರಿಸಿ ಅಥವಾ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿ. ಅಜೀರ್ಣ, ತಲೆನೋವು, ಮತ್ತು ಮಾನಸಿಕ ಒತ್ತಡಗಳು ನಿಮ್ಮ ಆರೋಗ್ಯ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಕೇತುವಿನ ಯಾವುದೇ ದಶೆಯಿಲ್ಲದಿದ್ದಲ್ಲಿ ಆರ್ಥಿಕ ಜೀವನವು ತೀವ್ರ ಲಾಭವನ್ನು ತರುತ್ತದೆ. ನಿಮ್ಮ ಕೆಲಸದ ಮೂಲಕ ದೊಡ್ಡ ಪ್ರಯೋಜನಗಳು ನಿಮ್ಮನ್ನು ತಲುಪುತ್ತವೆ; ಆ ಮೂಲಕ, ನಿಮಗೆ ಘನತೆ ಮತ್ತು ಗೌರವ ತರುತ್ತವೆ. ನಿಮ್ಮಲ್ಲಿ ಕೆಲವರಿಗೆ ಹೊಸ ಮತ್ತು ಉತ್ತಮವಾದ ಕೆಲಸ ಸಿಗುತ್ತದೆ. ಇಂಥದೇ ಲಾಭ ಮತ್ತು ಫಲಿತಾಂಶಗಳನ್ನು ಉದ್ಯಮಿಗಳಿಗೂ ಊಹಿಸಲಾಗಿದೆ. ಅವರಿಗೆ ಈ ವರ್ಷ ಸಾಕಷ್ಟು ಅದೃಷ್ಟಶಾಲಿಯಾಗಿದೆ. ನೀವು ಸರ್ಕಾರೀ ವ್ಯವಹಾರಗಳು ಅಥವಾ ಒಪ್ಪಂದಗಳನ್ನೂ ಪಡೆಯಬಹುದು. 2016 ಹಾಗೂ ನಿಮ್ಮ ಪ್ರೇಮ ಜೀವನಕ್ಕೂ ಅದ್ಭುತವಾದ ವರ್ಷವಾಗಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ, ಈ ವರ್ಷ ನಿಮ್ಮ ಅತ್ಯುತ್ತಮ ವರ್ಷಗಳಲ್ಲೊಂದಾಗಿದೆ.

ಕುಂಭರಾಶಿ

 ಕುಂಭರಾಶಿ ಮನೆಯ ಸಂಗತಿಗಳು ಎಂದಿನಂತೆ ತೋರುತ್ತವೆ. ಸಣ್ಣ ಸಮಸ್ಯೆಗಳು ಬರಬಹುದಾದರೂ, ಏಳನೇ ಮನೆಯಲ್ಲಿ ಗುರುವಿರುವುದು ಪರಿಸ್ಥಿತಿ ಕೈಮೀರಲು ಅವಕಾಶ ನೀಡುವುದಿಲ್ಲ. ಮಿದುಳು ನಿಮಗೆ ಕೆಲವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.

2016 ನಿಮ್ಮ ಆರ್ಥಿಕ ಜೀವನವನ್ನು ಅದ್ಭುತವಾಗಿಡುತ್ತದೆ. ನೀವು ಆನಂದಿಸಲು ಕೇವಲ ಹಣಕಾಸು ಮಾತ್ರವೇ ಕಾರಣವಾಗದೇ ಸ್ನೇಹಿತರೂ ಉಪಯುಕ್ತವೆಂದು ಸಾಬೀತಾಗುತ್ತಾರೆ. ಆದರೆ ಇದರರ್ಥ ಭಾವನೆಗಳಲ್ಲಿ ತೇಲಿಹೋಗಿ ನಿಮ್ಮ ಸ್ನೇಹ ಮತ್ತು ಬಂಧಗಳಿಗೆ ಹಾನಿ ಮಾಡಿಕೊಳ್ಳಬೇಕೆಂದಲ್ಲ. ಉದ್ಯೋಗಗಳಲ್ಲಿರುವ ಕುಂಭರಾಶಿಯವರು ಈ ವರ್ಷ ಅವರಿಗೆ ಹೆಸರು, ಕೀರ್ತಿ, ಘನತೆ, ಮತ್ತು ಪ್ರಗತಿಗಳ ಮಳೆಯಾಗುವುದನ್ನು ನೋಡುತ್ತಾರೆ. ನಿಮ್ಮ ಮೇಲಿನವರಾಗಲೀ ಅಥವಾ ಸಹೋದ್ಯೋಗಿಗಳಾಗಲೀ ಎಲ್ಲರೂ ನಿಮ್ಮಲ್ಲಿರುವ ಪರಿಣಿತ ಉದ್ಯೋಗಿಯನ್ನು ಗುರುತಿಸುತ್ತಾರೆ ಹಾಗೂ ನಿಮ್ಮನ್ನು ಮುಕ್ತವಾಗಿ ಶ್ಲಾಘಿಸುತ್ತಾರೆ. ಅಧೀರರಾಗಬೇಡಿ, ನೀವು ಉದ್ಯಮಿಯಾಗಿದ್ದರೂ 2016 ನಿಮಗೆ ಲಾಭದಾಯಕವಾಗಿಯೇ ಇರುತ್ತದೆ. ಕಡೆಯದಾಗಿ; ಪ್ರೀತಿ ಜೀವನವೂ ಸರಿಯಾದ ನಿಟ್ಟಿನಲ್ಲಿಯೇ ಸಾಗುತ್ತದೆ.

ಮೀನರಾಶಿ

 ಮೀನರಾಶಿ ಈ ವರ್ಷ ಮೀನರಾಶಿಯವರಿಗೆ ಹೂವಿನ ಹಾಸಿಗೆಯಾಗದಿರಬಹುದು. ಕೌಟುಂಬಿಕ ಪರಿಸ್ಥಿತಿಗಳು ಅಷ್ಟೇನೂ ಭರವಸೆದಾಯಕವಾಗಿ ತೋರುವುದಿಲ್ಲ. ನಿಮ್ಮ ದಾರಿಯಿಂದ ತೊಂದರೆಗಳನ್ನು ದೂರವಿಡಲು ಎಚ್ಚರಿಕೆಯ ವರ್ತನೆ ಮತ್ತು ಬುದ್ಧಿವಂತ ನಡೆಗಳು ಮುಖ್ಯವಾಗಿವೆ. ನೀವು ಮಾಡುವ ಯಾವುದೇ ತಪ್ಪುಗಳು ದೊಡ್ಡ ಅನಾಹುತಗಳಿಗೆ ಕಾರಣವಾಗಬಹುದು; ಹೀಗಾಗಿ, ಎಲ್ಲದರ ಬಗ್ಗೆಯೂ ಜಾಗ್ರತೆಯಿಂದಿರಿ. ಕರುಳು, ಯಕೃತ್ತು, ಮತ್ತು ಮೂತ್ರಪಿಂಡವು ಚಿಂತೆಗೆ ಕಾರಣವಾಗಬಹುದು. ಹಣಕಾಸಿನ ಅಂಶಗಳು ಸಾಮಾನ್ಯವಾಗಿ ತೋರುತ್ತವೆ. ಕೆಲಸದ ಮುಂಚಿನ ಹಂತಗಳಲ್ಲಿ ಹಣಕಾಸಿನ ತೊಂದರೆಗಳಿವೆ; ಆದರೆ, ನಂತರ ಅಗಾಧವಾದ ಯಶಸ್ಸು ನಿಮಗಾಗಿ ಕಾದಿದೆ. ನಿಮ್ಮ ಜೀವನದಲ್ಲಿ ಅದೃಷ್ಟ ಮತ್ತು ಯೋಗಕ್ಷೇಮ ತರುವಲ್ಲಿ ಕೆಲಸದಲ್ಲಿನ ಪ್ರಗತಿ ಒಂದು ಪ್ರೇರಕಶಕ್ತಿಯಾಗಿರುತ್ತದೆ. ವ್ಯಾಪಾರದಲ್ಲಿರುವ ಮೀನರಾಶಿಯವರು ಆಗಸ್ಟ್ ನಂತರ ಬೃಹತ್ ಯಶಸ್ಸನ್ನು ಕಾಣುತ್ತಾರೆ. ನೀವು ಹೊಸ ವ್ಯಾಪಾರ ಪಾಲುದಾರರ ಜೊತೆಗೂ ಸಹಯೋಗ ಹೊಂದಬಹುದು. ಪ್ರೀತಿ ಜೀವನ ಆಗಸ್ಟ್ ನಂತರ ಸರಿಯಾದ ದಿಕ್ಕಿನಲ್ಲಿ ಸಾಗುತ್ತದೆ. ಅದರ ಮೊದಲು ಕಟ್ಟೊಲುಮೆಯ ಕ್ಷಣಗಳನ್ನು ನಿರೀಕ್ಷಿಸಬೇಡಿ.

2016ರ ಜಾತಕ ನಿಮಗೆ ಉಪಯುಕ್ತವಾಗಿರುತ್ತದೆಂದು, ಮತ್ತು ಇದು ಯಶಸ್ಸು ಮತ್ತು ಸಮೃದ್ಧಿಯ ಮಾರ್ಗದಲ್ಲಿ ಸಾಗಲು ನಿಮಗೆ ಸಹಾಯ ಮಾಡುತ್ತದೆಂದು ನಾವು ಆಶಿಸುತ್ತೇವೆ.

2016 Articles

Astrological services for accurate answers and better feature

50% off

Get AstroSage Year Book with 50% discount

Buy AstroSage Year Book at Best Price.

Big Horoscope
What will you get in 100+ pages Big Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
Love
Will you be able to rekindle with your lost love?
Health & Fitness
It is said that health is the real wealth. If you are not

Astrological remedies to get rid of your problems

Red Coral / Moonga
(3 Carat)

Get the Best Results of Your Deeds with this Combo.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Your Big Horoscope

100+ pages @ Rs. 650/-

Big horoscope

AstroSage on MobileAll Mobile Apps

AstroSage TVSubscribe

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com

Reports