Personalized
Horoscope
  • Talk To Astrologers
  • Talk To Astrologers
  • Personalized Horoscope 2025
  • Product Banner 2025
  • Brihat Horoscope
  • Ask A Question
  • Live Astrologers
Home » 2015 » Rashi Bhavishya 2015 in Kannanda Published: October 30, 2014

Rashi Bhavishya 2015 in Kannanda - ಜಾತಕ 2015 - ಜ್ಯೋತಿಷ್ಯ 2015

Rashi Bhavishya 2015 in Kannanda is based on the principles of Vedic Astrology. This 2015 Rashi Bhavishya in Kannada tells you the key to success and prosperity. Kannada horoscope for 2015, if used properly, can provide you with suggestions that will change your future and you will reach to new heights in life.

ನಿಮ್ಮ ವರ್ಷವನ್ನು ಆರಂಭಿಸಲು ಮತ್ತು ಅದನ್ನು ಮುಂಚಿತವಾಗಿ ಯೋಜಿಸಲು ಸಹಾಯ ಮಾಡಲು ಜಾತಕ 2015 ಇಲ್ಲಿದೆ. 2015ಕ್ಕೆ ಜಾತಕದ ಭವಿಷ್ಯಗಳನ್ನು ನಮ್ಮ ತಜ್ಞ ಜ್ಯೋತಿಷಿಗಳು ತಯಾರಿಸಿದ್ದಾರೆ. ಇದು ನಿಮ್ಮ ಜೀವನದ ಎಲ್ಲಾ ಪ್ರಮುಖ ಭಾಗಗಳನ್ನು ಒಳಗೊಂಡಿರುತ್ತದೆ. ಎಲ್ಲಾ ರಾಶಿಚಕ್ರದ ಚಿಹ್ನೆಗಳ ಭವಿಷ್ಯವಾಣಿಯನ್ನು ಈ ಜಾತಕ 2015ರಲ್ಲಿ ಸಂಪೂರ್ಣವಾಗಿ ನೀಡಲಾಗಿದೆ. ಈ ವಾರ್ಷಿಕ ಜಾತಕ ನಿಮ್ಮ ಚಂದ್ರರಾಶಿಗೆ ಸಂಕ್ಷಿಪ್ತವಾದ ಭವಿಷ್ಯವನ್ನು ಹೊಂದಿರುತ್ತದೆ. ಈ 2015ರ ಜ್ಯೋತಿಷ್ಯ ಭವಿಷ್ಯಗಳು ವೃತ್ತಿ, ಹಣಕಾಸು, ಕುಟುಂಬ, ಪ್ರೀತಿ, ಆರೋಗ್ಯ ಮತ್ತು ಶಿಕ್ಷಣದಂಥ ಪ್ರಮುಖ ವಿಭಾಗಗಳನ್ನು ಒಳಗೊಂಡಿರುತ್ತದೆ.

ಗಮನಿಸಿ: ಈ ಭವಿಷ್ಯಗಳು ನಿಮ್ಮ ಚಂದ್ರರಾಶಿಯನ್ನು ಆಧರಿಸಿವೆ.

ಮೇಷ ಜಾತಕ 2015 (Mesha Jathaka 2014)

Aries Rashi Bhavishya 2015 in Kannadaಮೇಷರಾಶಿಯವರೇ, ದೇವನಾದ ಗುರು ನಿಮ್ಮ ಮೇಲೆ ಆಶೀರ್ವಾದ ವೃಷ್ಟಿಯನ್ನೇ ಸುರಿಸುತ್ತಿದ್ದಾನೆ. ಒಂಬತ್ತನೇ ಮನೆಯ ದೇವನು (ಭಾಗ್ಯೇಶ) ನಿಮ್ಮ ನಾಲ್ಕನೇ ಮತ್ತು ಐದನೇ ಮನೆಯಲ್ಲಿದ್ದಾನೆ. ಆದ್ದರಿಂದ, 2015ರ ಮೊದಲಾರ್ಧದಲ್ಲಿ ನಿಮ್ಮ ಕೌಟುಂಬಿಕ ಜೀವನದ ಸುಂದರವಾಗಿರುತ್ತದೆ. ನೀವು ವಿದೇಶಕ್ಕೆ ಹೋಗಲು ಹೆಣಗಾಡುತ್ತಿದ್ದಲ್ಲಿ ಇದು ಸುಸಮಯವಾಗಿರುವಂತೆ ತೋರುತ್ತದೆ. ಹೊಸ ಕಾರು ಅಥವಾ ಮನೆ ಹೊಂದಲು ಬಯಸುತ್ತಿದ್ದೀರಾ? ಉತ್ತಮ ಪ್ರಯತ್ನ ಮಾಡಿ ಹಾಗೂ ನಿಮ್ಮ ಹಾರೈಕೆ ಪೂರ್ಣಗೊಳ್ಳುತ್ತದೆ. 2015ರ ದ್ವಿತೀಯಾರ್ಧ ಪ್ರೀತಿ ಮತ್ತು ಮದುವೆಗೆ ಅದ್ಭುತವಾದ ಅವಧಿಯಾಗಿದೆ. ಮಗುವಿಗಾಗಿ ಇಚ್ಛಿಸುವ ವಿವಾಹಿತ ಜೋಡಿಗಳಿಗೆ ಒಂದು ಸುಂದರ ಮಗು ಜನಿಸುತ್ತದೆ. ಉದ್ಯಮಿಗಳು ತಮ್ಮ ಕೆಲಸವನ್ನು ವಿಸ್ತರಿಸಲು ಹಣ ಖರ್ಚು ಮಾಡುತ್ತಾರೆ. ಒಂದು ಹೊಸತಾದ ಹಾಗೂ ಹೊಚ್ಚಹೊಸತಾದ ಯೋಜನೆಗಳನ್ನು ಮಾಡಬಹುದು. ಮೇಷ ಜಾತಕ 2015ರ ಪ್ರಕಾರ ನೀವು ಹಿರಿಯರ ಬೆಂಬಲ ಪಡೆಯಬಹುದು. ಉತ್ತಮ ಹಣ ಮಾಡುವ ಒಳ್ಳೆಯ ಅವಕಾಶಗಳಿವೆ. ಆದರೆ, ಆರನೇ ಮನೆಯಲ್ಲಿ ರಾಹು ಮತ್ತು ಎಂಟನೆಯ ಮನೆಯಲ್ಲಿ ಶನಿಯ ಸ್ಥಾನವನ್ನು ನೋಡಿದ ಮೇಲೆ, ನೀವು ನಿಮ್ಮ ಕುಟುಂಬ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಶಾಂತವಾಗುಳಿಯಲು ಸಾಧ್ಯವಾಗದಿರಬಹುದು. ನೀವು ಕಾಲಕಾಲಕ್ಕ ಈ ವಿಷಯಗಳ ಬಗ್ಗೆ ಯೋಚಿಸಬೇಕಾಗಬಹುದು. ಹನ್ನೆರಡನೆಯ ಮನೆಯಲ್ಲಿ ಕೇತು ತೊಂದರೆಗೆ ಸಿಲುಕಿ ಉನ್ಮತ್ತರಂತೆ ವರ್ತಿಸುವ ಬದಲು ಸಲಹೆ ಪಡೆಯುವುದು ಉತ್ತಮ ಎಂದು ಸೂಚಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಶ್ರಮಕ್ಕೆ ಪ್ರತಿಫಲ ಪಡೆಯುತ್ತಾರೆ.

2015ರಲ್ಲಿ ಮೇಷರಾಶಿಯವರಿಗೆ ಪರಿಹಾರ: ಒಂದು ಬೆಳ್ಳಿಯ ಚೌಕದ ತುಂಡನ್ನು ಇರಿಸಿಕೊಳ್ಳಿ.

ವೃಷಭ ಜಾತಕ 2015 (Vrushabha Jathaka 2014)

Taurus Rashi Bhavishya 2015 in Kannadaವೃಷಭರಾಶಿಯವರೇ, 2015 ರಲ್ಲಿ ದೇವನಾದ ಗುರು ನಿಮ್ಮೆಡೆಗೆ ಸಂತುಷ್ಟನಾದಂತೆ ತೋರುತ್ತದೆ. ಗುರುವಿನ ಆಶೀರ್ವಾದ ನಿಮ್ಮನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುತ್ತಿದ್ದು ನಿಮಗೆ ಯಶಸ್ಸು ತರುತ್ತಾನೆ. ನೀವು ಕೇವಲ ನಿಮ್ಮ ಕಾರ್ಯಗಳನ್ನು ಸರಿಯಾಗಿ ಮಾಡುವುದಷ್ಟೇ ಅಲ್ಲದೇ ಅದರ ಜೊತೆಗೆ ಮೆಚ್ಚುಗೆ, ಗೌರವ ಹಾಗೂ ಹೊಗಳಿಕೆಯನ್ನೂ ಸ್ವೀಕರಿಸುತ್ತೀರಿ. ಇದು ಅದ್ಭುತವಲ್ಲವೇ? ಆದರೆ, ವೃಷಭ ಜಾತಕ 2015ರ ಪ್ರಕಾರ ನಿಮ್ಮ ಏಳನೇ ಮನೆಯಲ್ಲಿರುವ ಶನಿ ನಿಮ್ಮ ಆದಾಯದಲ್ಲಿ ಅಡಚಣೆಗಳನ್ನು ತರಬಹುದು. ಆದರೆ, ಚಿಂತಿಸಬೇಡಿ; ನೀವು ಸಂತೋಷದ ಮೌಲ್ಯವನ್ನು ಅರ್ಥ ಮಾಡಿಕೊಳ್ಳಲು ಕಠಿಣ ಸಮಯಗಳು ಉತ್ತಮ ಸಮಯಕ್ಕಿಂತ ಮೊದಲು ಬರುತ್ತವೆ. ಇದರ ಜೊತೆಗೆ, ನೀವು ನಿಮ್ಮ ವೈಯಕ್ತಿಕ ಜೀವನದಲ್ಲಿ ಹೊಂದಾಣಿಕೆಯ ಕೊರತೆಯನ್ನು ಎದುರಿಸಬೇಕಾಗಬಹುದು. ಆದರೆ, ನೀವು ಕೆಲವೇ ಪ್ರಯತ್ನಗಳು ಮಾಡುವ ಮೂಲಕ ಎಲ್ಲಾ ಅಡೆತಡೆಗಳನ್ನು ದಾಟಬಹುದು. ನಿಮ್ಮ ಪ್ರೇಮ ಜೀವನದ ಬಗ್ಗೆ ಹೇಳುವುದಾದರೆ ಐದನೇ ಮನೆಯಲ್ಲಿ ರಾಹುವಿದ್ದಾನೆ ಹಾಗೂ ಇದು ಸತ್ಯಸಂಧತೆ ಮತ್ತು ನಿಷ್ಠೆ ಪ್ರೀತಿಯಲಿ ಅತ್ಯಂತ ಪ್ರಮುಖವೆಂದು ಸೂಚಿಸುತ್ತದೆ. ಆದ್ದರಿಂದ ನೀವು ನಿಮ್ಮ ಸಂಗಾತಿಗೆ ನಿಷ್ಠರಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಸಂಪತ್ತಿನ ಬಗ್ಗೆ ಹೇಳುವುದಾದರೆ ಈ ವರ್ಷ ಅದ್ಭುತವಾಗಿರಲಿದೆ. ವಾಶಿಂಗ್ ಮಶೀನ್, ಫ್ರಿಜ್‌ನಂಥ ಕೆಲವು ಗೃಹಬಳಕೆಯ ವಸ್ತುಗಳಿಂದ ವೆಚ್ಚವುಂಟಾಗಬಹುದು. ನಾವು ವೃಷಭ ಜಾತಕ 2015ರ ಪ್ರಕಾರ ವಿದ್ಯಾರ್ಥಿಗಳ ಬಗ್ಗೆ ಹೇಳುವುದಾದರೆ, ಅವರು ಕೂಡ ಕೆಲವು ಅನಿರೀಕ್ಷಿತ ಫಲಿತಾಂಶಗಳನ್ನು ಪಡೆಯಬಹುದು.

2015ರಲ್ಲಿ ವೃಷಭರಾಶಿಯವರಿಗೆ ಪರಿಹಾರ: ಕಪ್ಪು ಹಸುವಿನ ಸೇವೆ ಮಾಡಿ.

ಮಿಥುನ ಜಾತಕ 2015 (Mithuna Jathaka 2014 )

Gemini Rashi Bhavishya 2015 in Kannadaಮಿಥುನ ರಾಶಿಯವರೇ, 2015 ನಿಮಗೆ ಉಡುಗೊರೆಗಳ ಒಂದು ಮಾಯಾಪೆಟ್ಟಿಗೆಯನ್ನು ತರುತ್ತಿದೆ. ಅದ್ಭುತ ಸಮಯವೆಂಬಂತೆ ಕಾಣುತ್ತದೆ! ನಿಮ್ಮ ಪ್ರೀತಿಪಾತ್ರರಿಗೆ ನೀವು ಏನಾದರೂ ವಿಶೇಷವಾದದ್ದನ್ನು ಮಾಡಲು ಯೋಜನೆ ಹಾಕಿಕೊಂಡಿದ್ದಲ್ಲಿ ನಿಮ್ಮ ಪ್ರಯತ್ನಗಳು ಸಫಲವಾಗುತ್ತವೆ. ಇದನ್ನು ನಾವು ಸಕಾರಾತ್ಮಕ ರೀತಿಯಲ್ಲಿ "ಸುಗ್ಗು ಕಾಲ" ಎನ್ನುತ್ತೇವೆ. 2015ರಲ್ಲಿ ನೀವು ಹೆಸರು, ಕೀರ್ತಿ, ಸಂಪತ್ತು ಮತ್ತು ಒಂದು ನೀವು ಆಸೆಪಡುವ ಎಲ್ಲವನ್ನೂ ಪಡೆಯುವ ಬಲವಾದ ಅವಕಾಶಗಳನ್ನು ಹೊಂದಿದ್ದೀರಿ. ನಿಮಗೆ ಬೇರೆ ಏನು ಬೇಕು? ಮಿಥುನ ಜಾತಕ 2015ರ ಪ್ರಕಾರ, ಆರೋಗ್ಯವೂ ಉತ್ಕೃಷ್ಟವಾಗಿರುತ್ತದೆ. ನೀವು ಒಂದು ಹಳೆಯ ಬೇನೆಯನ್ನು ಹೊಂದಿದ್ದರೂ ಕೂಡ ಅದರಲ್ಲೂ ಸ್ವಲ್ಪ ಸುಧಾರಣೆ ಕಾಣಬಹುದು. ಒಟ್ಟಾರೆ, ಇದು ಭಾರೀ ಅದೃಷ್ಟದ ಸಮಯ! ಬಹುತೇಕ ಇಡೀ ವರ್ಷ ಪ್ರೀತಿಯ ವಿಷಯಗಳಲ್ಲಿ ಅದ್ಭುತವಾಗಿರುತ್ತದೆ. ನೀವು ಒಂದು ಸಂಸ್ಥೆಯಯಲ್ಲಿ ಕೆಲಸ ಮಾಡುತ್ತಿದ್ದು ಬದಲಾವಣೆ ಬಯಸುತ್ತಿದ್ದಲ್ಲಿ ಇನ್ನೂ ಉತ್ತಮವಾದದ್ದು ದೊರಕುವ ಅತ್ಯುತ್ತಮ ಅವಕಾಶಗಳಿವೆ. ಆದ್ದರಿಂದ, ಅದನ್ನು ಪಡೆದುಕೊಳ್ಳುವುದಕ್ಕಿರುವ ಯಾವುದೇ ಹೊಸ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ! ಮತ್ತೊಂದೆಡೆ, ಉದ್ಯಮಿಗಳು ಸ್ವಲ್ಪ ಶ್ರಮವಹಿಸಿ ಕೆಲಸ ಮಾಡಬೇಕಾದರೂ ಶ್ರಮಪಟ್ಟು ಕೆಲಸ ಮಾಡುವುದು ಯಾವಾಗಲೂ ಸಫಲತೆ ತರುತ್ತದೆಂದು ನೆನಪಿಡಿ. ಆದ್ದರಿಂದ, ಮಿಥುನ 2015ರ ಜಾತಕ ಹೇಳುತ್ತದೆ - ಶ್ರಮವಹಿಸಿ ಕೆಲಸ ಮಾಡಲು ಹೆದರಬೇಡಿ. ನಾವು ವಿದ್ಯಾರ್ಥಿಗಳು ಬಗ್ಗೆ ಹೇಳಬೇಕೆಂದರೆ, ಅವರು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತಿರುತ್ತಾರೆ.

2015ರಲ್ಲಿ ಮಿಥುನ ರಾಶಿಯವರಿಗೆ ಪರಿಹಾರ: ಪುಟ್ಟ ಹುಡುಗಿಯರ ಸೇವೆ ಮಾಡಿ.

ಕರ್ಕ ಜಾತಕ 2015 (Karka Jathaka 2014)

Cancer Rashi Bhavishya 2015 in Kannadaಕರ್ಕ ರಾಶಿಯವರೇ, 2015 ಕೆಲವು ವಿಷಯಗಳಲ್ಲಿ ನಿಮಗೆ ಅದ್ಭುತವಾಗಿರಬಹುದು. ನೀವು ವಿವಾಹದ ವಯಸ್ಸನ್ನು ತಲುಪಿದ್ದಲ್ಲಿ ಕಂಕಣ ಭಾಗ್ಯ ಕೂಡಿ ಬರಲಿದೆ. ಆದ್ದರಿಂದ, ಸಿದ್ಧವಾಗಿರಿ! ನೀವು ವಿವಾಹವಾಗಲೀ ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ವಿವಾಹವಾಗಲೀ ನಿಮ್ಮ ಸುತ್ತಮುತ್ತ ಮದುವೆಯ ಕಾರ್ಯಕ್ರಮವಂತೂ ನಡೆಯುತ್ತದೆ. ಕರ್ಕ ಜಾತಕ 2015ರ ಪ್ರಕಾರ, ಪ್ರೀತಿಯ ವಿಷಯಗಳಲ್ಲಿ ಒತ್ತಾಯ ಮಾಡುವುದು ಒಳ್ಳೆಯದಲ್ಲ. ಆದ್ದರಿಂದ, ಸ್ವಲ್ಪ ತಾಳ್ಮೆಯಿಂದಿರಿ ಮತ್ತು ಜಾಗರೂಕತೆಯಿಂದ ವರ್ತಿಸಿ. ಕೆಲಸಕ್ಕೆ ಸಂಬಂಧಿತ ವಿಷಯಗಳಲ್ಲಿ ಕೂಡ 2015 ಸಾಕಷ್ಟು ಒಳ್ಳೆಯದೆಂಬಂತೆ ಕಾಣುತ್ತದೆ. ಬಡ್ತಿಯ ಉತ್ತಮ ಅವಕಾಶಗಳಿವೆ. ಇದು ನಿಮಗೆ ಒಂದು ಅತ್ಯದ್ಭುತ ಸಮಯದಂತೆ ಕಾಣುತ್ತದೆ. ನೀವು ಕೆಲಸದ ಕಾರಣ ಪ್ರಯಾಣಿಸಬೇಕಾಗಬಹುದು. ಆದರೆ, ಅವುಗಳಲ್ಲಿ ಬಹಳಷ್ಟು ವಿಫಲವಾಗುತ್ತವೆ. ಆದರೆ ಕರ್ಕ 2015ರ ಜಾತಕ ನೀವು ಆರಾಮವಾಗಿರುತ್ತೀರೆಂದು ಹೇಳುತ್ತದೆ. ಈ ವರ್ಷ ನಿಮ್ಮ ಹಣಕಾಸು ಚೆನ್ನಾಗಿರುವಂತೆ ಕಂಡರೂ ವಿವೇಚನೆಯಿಲ್ಲದ ಹೂಡಿಕೆ ಒಳ್ಳೆಯದಲ್ಲ. ಅಂತಿಮವಾಗಿ, ನೀವು ಒಂದು ವಿಷಯದ ಬಗ್ಗೆ ಚಿಂತಿಸಬೇಕು. ಆರೋಗ್ಯದಲ್ಲಿ ನೀವು ಕೆಲವು ಏರಿಳಿತಗಳನ್ನು ಕಾಣಬಹುದು. ಅಂದರೆ ನೀವು ಖಂಡಿತವಾಗಿಯೂ ಅನಾರೋಗ್ಯ ಹೊಂದುತ್ತೀರಿ ಎಂದರ್ಥವಲ್ಲ. ನೀವು ಕೇವಲ ಸ್ವಲ್ಪ ಎಚ್ಚರಿಕೆ ವಹಿಸಬೇಕು. ವಿದ್ಯಾರ್ಥಿಗಳಿಗೂ ಸಹ 2015 ಮಂಗಳಕರವಾಗಲಿದೆ. ವರ್ಷದ 90% ಭಾಗ ಕರ್ಕ ರಾಶಿಯವರಿಗೆ ಅನುಕೂಲಕರವಾಗಿರುವಂತೆ ತೋರುತ್ತದೆ.

2015ರಲ್ಲಿ ಕರ್ಕ ರಾಶಿಯವರಿಗೆ ಪರಿಹಾರ: ಒಂದು ದೇವಾಲಯಕ್ಕೆ ಬಾದಾಮಿ ದಾನ ಮಾಡಿ.

ಸಿಂಹ ಜಾತಕ 2015 (Simha Jathaka 2014)

Leo Rashi Bhavishya 2015 in Kannadaಸಿಂಹ ಜಾತಕ 2015ರ ಪ್ರಕಾರ, ಈ ವರ್ಷ ನಿಮಗೆ ಮಿಶ್ರಫಲವಿದೆ. ಗೊಂದಲಗೊಳ್ಳಬೇಡಿ, ಇವುಗಳಲ್ಲಿ ಕೆಲವು ನಿಜವಾಗಿಯೂ ಸಂತೋಷ ತರುತ್ತವೆ ಹಾಗೂ ಇನ್ನೂ ಕೆಲವು ಸಾಹಸಮಯವಾಗಿರುತ್ತವೆ. 2015ರ ಮೊದಲಾರ್ಧದಲ್ಲಿ, ಗುರು ನಿಮ್ಮ ಹನ್ನೆರಡನೆಯ ಮನೆಯಲ್ಲಿದ್ದಾನೆ ಮತ್ತು ಶನಿ ನಾಲ್ಕನೇ ಮನೆಯಲ್ಲಿದ್ದಾನೆ. ಆದ್ದರಿಂದ, ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಗಾಬರಿಯಾಗಬೇಡಿ ಇದು ನಿಮ್ಮ ಸಾಮರ್ಥ್ಯವನ್ನು ಪರೀಕ್ಷಿಸಲು ಉತ್ತಮ ಸಮಯ. ನೀವು ನಿಮ್ಮ ಕೆಲವು ಪ್ರೀತಿಪಾತ್ರರ ವರ್ತನೆಯಿಂದ ಅಸಮಾಧಾನ ಹೊಂದಬಹುದಾದರೂ ವರ್ಷದ ದ್ವಿತೀಯಾರ್ಧವು ತುಲನಾತ್ಮಕವಾಗಿ ಉತ್ತಮವೆನ್ನುವಂತೆ ಕಾಣುತ್ತದೆ; ಹಾಗೂ ನಿಮ್ಮ ತೊಂದರೆಗಳು ಕ್ರಮೇಣ ದೂರವಾಗುತ್ತ ಹೋಗುತ್ತವೆ. ಆದಾಗ್ಯೂ, ಈ ಸಮಯದಲ್ಲಿ ಯಾರು ಏನೇ ಹೇಳಿದರೂ ತಲೆಕೆಡಿಸಿಕೊಳ್ಳದಂತೆ ನಾನು ಸಲಹೆ ಮಾಡುತ್ತೇನೆ. ಸಿಂಹರಾಶಿ 2015ರ ಜಾತಕದ ಪ್ರಕಾರ ಇದು ಶಾಂತವಾಗಿರಲು ಮತ್ತು ಶಾಂತಿಯಿಂದ ವಾಸಿಸಲು ಅತ್ಯುತ್ತಮ ಮಾರ್ಗವಾಗಿದೆ. ಅಲ್ಲದೇ, ನೀವು ನಿಮ್ಮ ಬುದ್ಧಿವಂತಿಕೆಯ ಯೋಜನೆಗಳಿಂದ ಕಷ್ಟಕರ ಸಂದರ್ಭಗಳ ಮೇಲೆ ಉತ್ತಮ ಹಿಡಿತ ಸಾಧಿಸುತ್ತೀರಿ. ನೀವು ಸಾಕಷ್ಟು ಬುದ್ಧಿವಂತರಂತೆ ತೋರುತ್ತಿದೆ. ನೀವು ಆಧ್ಯಾತ್ಮಿಕ ಹಾಗೂ ಧಾರ್ಮಿಕ ಚಟುವಟಿಕೆಗಳೆರಡರಲ್ಲೂ ಸಾಕಷ್ಟು ಉತ್ತಮವಾಗಿ ನಿಮ್ಮನ್ನು ತೊಡಗಿಸಿಕೊಳ್ಳುತ್ತೀರಿ. ಆದ್ದರಿಂದ ಒಟ್ಟಾರೆಯಾಗಿ, ಈ ವರ್ಷ ವಿಷಯಗಳು ತುಂಬಾ ಆಸಕ್ತಿದಾಯಕವಾಗಿ ಕಾಣುತ್ತವೆ. 2015ನೇ ವರ್ಷದಲ್ಲಿ ಅತ್ಯುತ್ತಮವಾದದ್ದನ್ನು ಬಳಸಿಕೊಳ್ಳಿ ಮತ್ತು ಅದು ನಿಮ್ಮನ್ನು ಸ್ವಲ್ಪ ಮಟ್ಟಿಗೆ ಅತಿ ಮಾನವರನ್ನಾಗೂ ಮಾಡಬಹುದು, ಹಾಗೂ ಇದು ನಿಮ್ಮೊಳಗೆ ಅಡಗಿದ ಗುಪ್ತ ಸಾಮರ್ಥ್ಯವನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ.

2015ರಲ್ಲಿ ಸಿಂಹ ರಾಶಿಯವರಿಗೆ ಪರಿಹಾರ: ಹಸುವಿಗೆ ಅಕ್ಕಿ ಮತ್ತು ಹಾಲಿನ ಮಿಶ್ರಣವನ್ನು ನೀಡಿ.

ಕನ್ಯಾರಾಶಿ ಜಾತಕ 2015 (Kanya Jathaka 2014)

Virgo Rashi Bhavishya 2015 in Kannadaಕನ್ಯಾರಾಶಿಯವರೇ, 2015ರ ಮೊದಲಾರ್ಧದಲ್ಲಿ ಹನ್ನೊಂದನೇ ಮನೆಯಲ್ಲಿ ರಾಹುವಿನ ಸ್ಥಾನ ನೀವು ವಿವಿಧ ಪ್ರಯೋಜನಗಳನ್ನು ಪಡೆಯುತ್ತೀರಿ ಎಂದು ತೋರಿಸುತ್ತಿದೆ. ಎಷ್ಟು ಆಶ್ಚರ್ಯಗಳು ನಿಮಗಾಗಿ ಕಾದಿವೆ ಎಂದು ನಿಮಗೆ ಗೊತ್ತಿಲ್ಲ. ಕನ್ಯಾರಾಶಿ ಜಾತಕ 2015ರ ಪ್ರಕಾರ, ಕುಟುಂಬದ ಸದಸ್ಯರೂ ಸಹ ಈ ಸಮಯವನ್ನು ಆನಂದಿಸಿದರೂ ಮೊದಲ ಮನೆಯಲ್ಲಿ ರಾಹುವಿನ ಸ್ಥಾನವನ್ನು ಗಮನಿಸಿದಲ್ಲಿ ಎಲ್ಲರ ಆರೋಗ್ಯವನ್ನೂ ಆರೈಕೆ ಮಾಡುವುದು ಮುಖ್ಯವಾಗಿರುತ್ತದೆ. ಆದರೆ, ಚಿಂತಿಸಬೇಕಾಗಿಲ್ಲ. ಕೇವಲ ಎಚ್ಚರಿಕೆಯಿಂದಿರಿ ಮತ್ತು ಪ್ರತಿಯೊಬ್ಬರ ಆರೋಗ್ಯದ ಮೇಲೂ ಗಮನ ನೀಡಿ. ಇವೆಲ್ಲವುಗಳ ಜೊತೆಗೆ ಮೊದಲಾರ್ಧ ಪ್ರೀತಿ, ಮದುವೆ ಅಥವಾ ಮಕ್ಕಳಿಗೂ ಅದ್ಭುತವಾಗಿರುತ್ತದೆ. ಇದರ ಜೊತೆಗೆ, ಈ ಸಮಯ ಕೆಲಸ, ವ್ಯಾಪಾರ ಮತ್ತು ಶಿಕ್ಷಣಕ್ಕೂ ಅನುಕೂಲಕರವಾಗಿದೆ. ಕನ್ಯಾರಾಶಿ 2015ರ ಜಾತಕ ಪ್ರಕಾರ 2015 ಮೋಜಿಗಾಗಿ ಸಾಕಷ್ಟು ಅವಕಾಶಗಳನ್ನು ತರಲಿದೆ. ಆದಾಗ್ಯೂ, ನೀವು ಸ್ವಲ್ಪ ಎಚ್ಚರಿಕೆಯಿಂದರಬೇಕು. ಚಿಂತಿಸುವ ಅಗತ್ಯವಿಲ್ಲ, ನಿಮಗೆ ಏನೂ ಗಂಭೀರವಾದದ್ದು ಆಗುವುದಿಲ್ಲ. ಮಧ್ಯದಲ್ಲಿ ವೆಚ್ಚಗಳು ಹೆಚ್ಚಬಹುದು ಮತ್ತು ನಿಮ್ಮ ಆರೋಗ್ಯವೂ ಕ್ಷೀಣಿಸಬಹುದು. ಚಿಂತಿಸಬೇಡಿ; ನಿಮಗೆ ಏನೂ ಗಂಭೀರವಾದದ್ದು ಸಂಭವಿಸುವುದಿಲ್ಲ. ಆದ್ದರಿಂದ, ತಾಳ್ಮೆ ಮತ್ತು ಬುದ್ದಿವಂತಿಕೆಯಿಂದ ಕೆಲಸ ಮಾಡುವುದು ಮುಖ್ಯ.

2015ರಲ್ಲಿ ಕನ್ಯಾರಾಶಿಯವರಿಗೆ ಪರಿಹಾರ: ನಿಯಮಿತವಾಗಿ ಪೀಪಲ್ ಮರಕ್ಕೆ ನೀರುಣಿಸಿ.

ತುಲಾ ಜಾತಕ 2015 (Tula Jathaka 2014)

Libra Rashi Bhavishya 2015 in Kannadaತುಲಾ ರಾಶಿಯವರೇ 2015 ಒಟ್ಟಾರೆಯಾಗಿ ನಿಮಗೆ ಚೆನ್ನಾಗಿರುವಂತೆ ಕಾಣುತ್ತದೆ. ನಾವು ತುಲಾ ಜಾತಕ 2015ರ ಪ್ರಕಾರ ಕೌಟುಂಬಿಕ ಜೀವನದ ಬಗ್ಗೆ ಮಾತನಾಡಿದಲ್ಲಿ ಕೆಲವು ಸಣ್ಣ ತಪ್ಪುಗ್ರಹಿಕೆಗಳುಂಟಾಗುವ ಸಾಧ್ಯತೆಯಿದೆ. ಆದರೆ, ಮನೆಯಲ್ಲಿ ಸಾಮರಸ್ಯಕ್ಕೆ ತೊಂದರೆಯಾಗುವುದಿಲ್ಲ. ಆರೋಗ್ಯದ ದೃಷ್ಟಿಯಿಂದಲೂ 2015 ಒಳ್ಳೆಯದು. ನೀವು ಒಂದು ಕಾರು ಅಥವಾ ಮನೆಯನ್ನು ಖರೀದಿಸಲು ಯೋಜಿಸುತ್ತಿದ್ದಲ್ಲಿ ಉಭಯಸಂಕಟದಿಂದ ಹೊರಬನ್ನಿ. ಇದು ಧೃಢ ನಿರ್ಧಾರ ತೆಗೆದುಕೊಳ್ಳಲು ಒಳ್ಳೆಯ ಸಮಯ. 2015ರ ದ್ವಿತೀಯಾರ್ಧ ನಿಮ್ಮ ಪ್ರೀತಿ ಮತ್ತು ವೈಯಕ್ತಿಕ ಜೀವನದಲ್ಲಿ ಗುಲಾಬಿಗಳ ಸುಗಂಧ ಮತ್ತು ಚಾಕೊಲೇಟುಗಳು ಮಾಧುರ್ಯವನ್ನು ತರುತ್ತವೆ. ಆದ್ದರಿಂದ ಪ್ರೀತಿಯ ಸವಾರಿಗಾಗಿ ಸಿದ್ಧವಾಗಿರಿ. ತುಲಾ 2015ರ ಜಾತಕದ ಪ್ರಕಾರ, ಈ ವರ್ಷ ನೀವು ನಿಮ್ಮ ಕೆಲಸದಲ್ಲಿ ವಿಶೇಷವಾದ ಏನಾದರೂ ಮಾಡುತ್ತೀರಿ. ನೀವು ಹೊಸ ಶಕ್ತಿ ಹೊಂದಿರುವಂತೆ ತೋರುತ್ತಿದೆ. ಬಡ್ತಿಯ ಅವಕಾಶಗಳು ಪ್ರಬಲವಾಗಿವೆ. ಸಾರ್ವಜನಿಕ ಬೆಂಬಲದ ಜೊತೆ ಗೌರವವನ್ನು ಮತ್ತು ಮರ್ಯಾದೆಯೂ ಹೆಚ್ಚಾಗುತ್ತದೆ. ಲಾಭದಾಯಕ ಅವಕಾಶಗಳೂ ಸಹ ಪ್ರಬಲವಾಗುತ್ತವೆ. ಆದರೆ, ಎರಡನೇ ಮನೆಯಲ್ಲಿ ಶನಿಯಿರುವುದರಿಂದ ವೆಚ್ಚಗಳೂ ಏರಬಹುದು. ನೀವು ಸ್ವಲ್ಪ ಜಿಪುಣರಾಗಬೇಕು. ವಿದ್ಯಾರ್ಥಿಗಳು ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ.

2015ರಲ್ಲಿ ತುಲಾ ರಾಶಿಯವರಿಗೆ ಪರಿಹಾರ: ಕೇಸರಿ ತಿಲಕವನ್ನು (ಹಣೆಯ ಮೇಲೆ ಗುರುತು) ಹಚ್ಚಿಕೊಳ್ಳಿ.

ವೃಶ್ಚಿಕ ಜಾತಕ 2015 (Vrushchika Jathaka 2014)

Scorpio Rashi Bhavishya 2015 in Kannada 2015ರಲ್ಲಿ ಬಹಳಷ್ಟು ಗ್ರಹಗಳು ನಿಮ್ಮ ಪರವಾಗಿರುವಂತೆ ತೋರುತ್ತಿವೆ. ನೀವು ಸುರಕ್ಷಿತವಾಗಿರುವಂತೆ ಕಾಣುತ್ತದೆ. ಆದ್ದರಿಂದ, 2015 ನಿಮಗೆ ಅದ್ಭುತವಾಗಿರುತ್ತದೆ. ವೃಶ್ಚಿಕ ಜಾತಕ 2015ರ ಪ್ರಕಾರ, ಶನಿಯ ಸ್ಥಾನ ಮಾತ್ರ ಸ್ವಲ್ಪ ಸಾಹಸವನ್ನು ತರಬಹುದಾಗಿದ್ದು ಉಳಿದಿದ್ದೆಲ್ಲವೂ ಅದ್ಭುತವಾಗಿರುವಂತೆ ಕಾಣುತ್ತದೆ. ಜಗತ್ತಿನಲ್ಲಿ ಮನೆಯಲ್ಲಿರುವುದಷ್ಟೇ ಅಲ್ಲದೇ ಒಂದು ಸಾಹಸವೂ ಮುಖ್ಯವಾಗಿರುತ್ತದೆ. ಕುಟುಂಬದಲ್ಲಿ ಸಾಮರಸ್ಯವಿರುತ್ತದೆ. 2015 ಪ್ರೀತಿಯ ವಿಷಯಗಳಲ್ಲಿ ಸಾಕಷ್ಟು ಧನಾತ್ಮಕವಾಗಿರುತ್ತದೆ. ಸಾಕಷ್ಟು ಮೋಹಕವಾಗಿದೆ, ಅಲ್ಲವೇ? ಆದಾಗ್ಯೂ, ಮೊದಲ ಮನೆಯಲ್ಲಿ ಶನಿಯಿರುವದರಿಂದ ವೈವಾಹಿಕ ಜೀವನದಲ್ಲಿ ಕೆಲವು ಅಡಚಣೆಗಳು ಉಂಟಾಗಬಹುದು. ಕೆಲವೊಮ್ಮೆ ಸ್ವಲ್ಪ ಪ್ರೀತಿಗಾಗಿ ಹಂಬಲಿಸುವುದು ಒಳ್ಳೆಯದೇ. ಹೆಚ್ಚುವರಿಯಾಗಿ, ಇದು ನಿಮಗೆ ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನೂ ಉಂಟುಮಾಡಬಹುದು. ಚಿಂತಿಸಬೇಡಿ, ಪ್ರಮುಖವಾದದ್ದೇನೂ ಕಾಣುತ್ತಿಲ್ಲ. ಇದು ಕೆಲಸಕ್ಕೂ ಒಳ್ಳೆಯ ಸಮಯ. ಆದ್ದರಿಂದ ಶ್ರಮಪಟ್ಟು ಕೆಲಸ ಮಾಡುವವರಿಗೆ ಇದು ಒಳ್ಳೆಯ ಸಮಯದಂತೆ ತೋರುತ್ತಿದೆ. ವೃಶ್ಚಿಕ 2015ರ ಜಾತಕದ ಪ್ರಕಾರ, ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ನೀವು ಶಾಪಿಂಗ್ ಮಾಡಬೇಕಾದ ಎಲ್ಲಾ ವಸ್ತುಗಳನ್ನು ಪಟ್ಟಿ ಮಾಡಿ. ಮತ್ತೊಂದೆಡೆ, ವಿದ್ಯಾರ್ಥಿಗಳು ಶ್ರಮವಹಿಸಿ ಕೆಲಸ ಮಾಡಿದ ನಂತರ ಧನಾತ್ಮಕ ಫಲಿತಾಂಶಗಳನ್ನು ಹೊಂದುತ್ತರೆ. ವ್ಯಾಪಾರ ಅಧ್ಯಯನದ ವಿದ್ಯಾರ್ಥಿಗಳು ವರ್ಷದ ದ್ವಿತೀಯಾರ್ಧದಲ್ಲಿ ಅತ್ಯಂತ ಒಳ್ಳೆಯ ಫಲಿತಾಂಶಗಳನ್ನ ಪಡೆಯುತ್ತಾರೆ.

2015ರಲ್ಲಿ ವೃಶ್ಚಿಕ ರಾಶಿಯವರಿಗೆ ಪರಿಹಾರ: ಕೋತಿಗಳ ಸೇವೆ ಮಾಡಿ, ಮತ್ತು ಮಾಂಸಾಹಾರ ಹಾಗೂ ಮದ್ಯ ಸೇವನೆಯಿಂದ ದೂರವಿರಿ.

ಧನು ಜಾತಕ 2015 (Dhanu Jathaka 2014)

Sagittarius Rashi Bhavishya 2015 in Kannadaಧನು ರಾಶಿಯವರೇ, 2015 ಆರಂಭದಲ್ಲಿ ಗುರು ನಿಮ್ಮ ಎಂಟನೆಯ ಮನೆಯಲ್ಲಿರುತ್ತಿದ್ದು ಇದು ತುಂಬಾ ಸಕಾರಾತ್ಮಕವೇನಲ್ಲ. ಇದು ಋಣಾತ್ಮಕವೂ ಅಲ್ಲ. ಅದರ ಜೊತೆಗೆ ಶನಿ ಹನ್ನೆರಡನೆಯ ಮನೆಯಲ್ಲಿದ್ದಾನೆ, ಆದ್ದರಿಂದ ಹಣಕಾಸಿನ ವಿಷಯಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ಆದರೆ, ನೀವು ಇವೆಲ್ಲವನ್ನು ನಿರ್ವಹಿಸುವಾಗ ಹೆದರುವ ಅಗತ್ಯವಿಲ್ಲ. ನೀವು ಹಣಕಾಸಿನಲ್ಲಿ ಒಂದು ಸಣ್ಣ ಅಡಚಣೆ ಎಲ್ಲಾ ರೀತಿಯ ತೊಂದರೆಗಳನ್ನು ತರಬಹುದೆಂದು ತಿಳಿದಿರಬೇಕು. ಯಾವುದೇ ರೀತಿಯ ತೊಂದರೆಯಿಂದ ದೂರ ಉಳಿಯಲು ಶ್ರಮವಹಿಸಿ ಕೆಲಸ ಮಾಡಿ. ಧನು ಜಾತಕ 2015ರ ಪ್ರಕಾರ, ಕೇವಲ ಒಂದು ಶಾಂತ ಮತ್ತು ಪ್ರಶಾಂತ ಮನಸ್ಸು ಮಾತ್ರ ಇದನ್ನು ಮಾಡಬಹುದು. 2015ರ ಪ್ರಕಾರ, ನೀವು ನಿಮ್ಮ ಕುಟುಂಬದ ಸದಸ್ಯರ ನಡವಳಿಕೆಯಲ್ಲೂ ಬದಲಾವಣೆಯನ್ನು ಗಮನಿಸಬಹುದು. ಈ ಬದಲಾವಣೆ ನಿಮ್ಮನ್ನು ಘಾಸಿಗೊಳಿಸಬಹುದು. ಇಡೀ ವರ್ಷ ಜೀವನದ ಎಲ್ಲಾ ಕೋನಗಳಿಂದಲೂ ನಿಮ್ಮನ್ನು ಬಲಪಡಿಸಲು ಪಣತೊಟ್ಟಂತೆ ತೋರುತ್ತದೆ. ನಿಮ್ಮಲ್ಲಿ ಅಭದ್ರತೆಯ ಭಾವನೆ ಮೂಡಬಹುದು ಹಾಗೂ ಇದು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಧನು 2015 ಜಾತಕದ ಪ್ರಕಾರ, ಪ್ರೀತಿ ವಿಷಯಗಳೂ ಸ್ವಲ್ಪ ಅಸಮಾಧಾನಕರವಾಗಿರಬಹುದು. ಆದರೆ, ನೆನಪಿಡಿ - "ಆಗುವುದೆಲ್ಲವೂ ಒಳ್ಳೆಯದಕ್ಕೇ." ಮತ್ತೊಂದೆಡೆ, 2015ರ ದ್ವಿತೀಯಾರ್ಧದಲ್ಲಿ, ನಿಮ್ಮ ಎಲ್ಲಾ ಇಚ್ಛೆಗಳೂ ನನಸಾಗಲು ಪ್ರಾರಂಭವಾಗುತ್ತವೆ. ನಿಮ್ಮ ಜೀವನದಲ್ಲಿ ಮತ್ತೆ ಸಂಪೂರ್ಣ ಆನಂದ ಬರುತ್ತದೆ. ಆದಾಯ ಸುಧಾರಿಸುತ್ತದೆ ಮತ್ತು ವಿದ್ಯಾರ್ಥಿಗಳು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ವಾಹ್! ಇದು ನಿಮಗೆ ಸಾಕಷ್ಟು ಸಾಹಸಮಯ ಸವಾರಿ.

2015 ರಲ್ಲಿ ಧನು ರಾಶಿಯವರಿಗೆ ಪರಿಹಾರ: ಒಂದು ದೇವಾಲಯದಲ್ಲಿ ತುಪ್ಪ ಮತ್ತು ಆಲೂಗೆಡ್ಡೆ ದಾನ ಮಾಡಿ.

ಮಕರ ಜಾತಕ 2015 (Makara Jathaka 2014)

Capricorn Rashi Bhavishya 2015 in Kannadaಮಕರ ರಾಶಿಯವರೇ, 2015ರ ಮೊದಲಾರ್ಧ ನಿಮಗೆ ಸಾಕಷ್ಟು ಅದ್ಭುತವಾಗಿದೆ. ಮಕರ ಜಾತಕ 2015ರ ಪ್ರಕಾರ, ನಿಮ್ಮ ಅತ್ಯುತ್ತಮ ಯೋಜನಾ ಸಾಮರ್ಥ್ಯ ನಿಮಗೆ ಯಶಸ್ಸು ತರುವುದನ್ನು ಮುಂದುವರಿಸುತ್ತದೆ. ನೀವು ಸಾಕಷ್ಟು ಮೇಧಾವಿಗಳಂತೆ ಕಾಣುತ್ತೀರಿ. ನೀವಿದ್ದಲ್ಲಿ ಎಲ್ಲವೂ ಜೋರಾಗಿ ನಡೆಯುತ್ತಿರುತ್ತದೆ. ಕೆಲಸದಲ್ಲಿ ಎಲ್ಲವೂ ಧನಾತ್ಮಕವಾಗಿರುತ್ತವೆ. ಇದು ನಿಮಗೆ ಒಂದು ಸಂಭ್ರಮದ ಸಮಯದಂತೆ ಕಾಣುತ್ತದೆ. ಆರ್ಥಿಕ ಪರಿಸ್ಥಿತಿಯೂ ಸಹ ತೃಪ್ತಿಕರವಾಗಿರುತ್ತದೆ. ಇಷ್ಟೆಲ್ಲ ಅದೃಷ್ಟಗಳು ನಿಮ್ಮೆಡೆಗೆ ಬರುತ್ತಿರುವುದು ನಿಮಗೆ ಅಚ್ಚರಿ ಮೂಡಿಸಬಹುದು. ನೀವು ಮದುವೆಯ ವಯಸ್ಸನ್ನು ತಲುಪಿದ್ದಲ್ಲಿ 2015ರ ಮೊದಲಾರ್ಧ ಈ ವಿಷಯದಲ್ಲಿ ನಿಮಗೆ ಸ್ವಲ್ಪ ಸಹಾಯ ಮಾಡಬಹುದು. ವಿದ್ಯಾರ್ಥಿಗಳು ತಮ್ಮ ಪ್ರತಿ ಪ್ರಯತ್ನದಲ್ಲೂ ಯಶಸ್ಸು ಪಡೆಯುವುದರಿಂದ ಅವರು ವಸಂತಋತುವಿನಂತೆ ಸಂತೋಷಪೂರ್ಣವಾಗಿರುತ್ತಾರೆ. ಆದಾಗ್ಯೂ, 2015ರ ದ್ವಿತೀಯಾರ್ಧದಲ್ಲಿ, ಜೀವನದ ಮಾರ್ಗದಲ್ಲಿ ತೊಂದರೆಗಳಿರಬಹುದು. ಆ ಸಮಯದಲ್ಲಿ, ಗುರು ನಿಮ್ಮ ಎಂಟನೆಯ ಮನೆಯಲ್ಲಿರುತ್ತಾನೆ. ಪರಿಣಾಮವಾಗಿ, ಆರ್ಥಿಕ ಸಮಸ್ಯೆಗಳಿಂದಾಗಿ ವಿಷಯಗಳನ್ನು ಕಷ್ಟಕರವಾದಂತೆ ತೋರುತ್ತವೆ. ಆದ್ದರಿಂದ, ನೀವು ಏನು ಮಾಡುವಾಗಲೂ ಎಚ್ಚರಿಕೆಯಿಂದಿರಬೇಕು. ಆದರೆ, ಚಿಂತಿಸಬೇಡಿ. ಇದು ದಟ್ಟ ಮೋಡಗಳಡಿಯಲ್ಲಿ ಸ್ಥಿರವಾಗಿರುವ ನಿಮ್ಮ ಸಾಮರ್ಥ್ಯಗಳನ್ನು ಅಳೆಯಲು ಒಂದು ಪರಿಪೂರ್ಣವಾದ ಸಮಯವಾಗಿದೆ. ಇದರ ಜೊತೆಗೆ ಮಕರ 2015ರ ಜಾತಕದ ಪ್ರಕಾರ, ನೀವು ಎಲ್ಲಿಯಾದರೂ ಹೂಡಿಕೆ ಮಾಡುವ ಮೊದಲು ಎರಡು ಬಾರಿ ಯೋಚಿಸುವುದು ಉತ್ತಮ ಎಂದು ಹೇಳುತ್ತದೆ.

2015ರಲ್ಲಿ ಮಕರ ರಾಶಿಯವರಿಗೆ ಪರಿಹಾರ: ಪ್ರತಿ ನಾಲ್ಕು ತಿಂಗಳಿಗೊಮ್ಮೆ ಹರಿಯುವ ನೀರಿನಲ್ಲಿ 6 ತೆಂಗಿನಕಾಯಿಗಳನ್ನು ಸಿಪ್ಪೆ ಜೊತೆ ಬಿಡಿ.

ಕುಂಭ ಜಾತಕ 2015 (Kumbha Jathaka 2014)

Aquarius Rashi Bhavishya 2015 in Kannadaಕಂಭರಾಶಿಯವರೇ, 2015 ನಿಮಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಕುಂಭ ಜಾತಕ 2015ರ ಪ್ರಕಾರ, ನೀವು ನಿಮ್ಮ ಪ್ರೀತಿಪಾತ್ರರ ಜೊತಗಿನ ಸಂಬಂಧಗಳಲ್ಲಿ ಕೆಲವು ವಿಶ್ವಾಸದ್ರೋಹವನ್ನು ಹೊಂದಬಹುದು. ಆದರೆ ತುಂಬ ದುಃಖಪಡಬೇಡಿ; ಎಲ್ಲವೂ ಕೆಲವು ಒಳ್ಳೆಯ ಕಾರಣಕ್ಕಾಗಿ ಸಂಭವಿಸುತ್ತದೆ. ನಿಮ್ಮ ಕಹಿ ಭಾಷೆ ಇದಕ್ಕೆ ಒಂದು ಕಾರಣವಾಗಿರಬಹುದು. ಆದ್ದರಿಂದ, ಸಾಧ್ಯವಾದಷ್ಟೂ ನಯವಿನಯದಿಂದಿರಲು ಪ್ರಯತ್ನಿಸಿ. ನೀವು ಕುಟುಂಬದ ಸದಸ್ಯರೊಬ್ಬರ ಆರೋಗ್ಯದ ಕಾರಣ ಒತ್ತಡದಲ್ಲಿರಬಹುದು. ಆದರೆ, ಚಿಂತೆ ಮಾಡುವಂಥದ್ದು ಏನೂ ಇಲ್ಲ, ಸಮಯ ಬಲುಬೇಗನೆ ಕಳೆಯುತ್ತದೆ. ಮತ್ತೊಂದೆಡೆ, ನಿಮ್ಮ ಆರೋಗ್ಯ ಕುಂಭ 2015ರ ಜಾತಕದ ಪ್ರಕಾರ ನಿಮ್ಮ ಆರೋಗ್ಯ ಉತ್ತಮವಾಗಿರುವಂತೆ ಕಾಣುತ್ತದೆ. ನೀವು ಮೊಕದ್ದಮೆಗಳಲ್ಲಿ ವ್ಯಸ್ತವಾಗಿರಬಹುದು. ಆದರೆ ಚಿಂತಿಸಬೇಡಿ; ನೀವು ತೊಂದರೆಗಳನ್ನು ಮೆಟ್ಟಿನಿಲ್ಲುತ್ತೀರಿ. ವರ್ಷದ ದ್ವಿತೀಯಾರ್ಧ ನಿಮ್ಮ ಪ್ರೀತಿಯ ಜೀವನಕ್ಕೆ ಸುಧಾರಣೆ ತರುತ್ತದೆ. ವೈವಾಹಿಕ ಜೀವನ ಅತ್ಯಂತ ಆನಂದದಾಯಕವಾಗಿರುತ್ತದೆ. ಮನ್ಮಥನು ನಿಮ್ಮ ಮೇಲೆ ಪ್ರಸನ್ನನಾಗಿರುವಂತೆ ಕಾಣುತ್ತದೆ. ನೀವು ಆನಂದದಲ್ಲಿರುತ್ತೀರಿ. ಕೆಲಸದ ಸ್ಥಳದಲ್ಲಿ ಉತ್ತಮ ಸುಧಾರಣೆ ಕಾಣಬಹುದು. ಇದು ಒಂದು ಸಂಭ್ರಮದ ಸಮಯ. ಆದಾಯ ಮತ್ತು ಶಿಕ್ಷಣ ಕೂಡ ಹೆಚ್ಚಾಗುತ್ತದೆ. ಈ ಬಾರಿ ನೀವು ಗುರು ಮುಟ್ಟುವಂತೆ ತೋರುತ್ತದೆ.

2015 ರಲ್ಲಿ ಕುಂಭ ಪರಿಹಾರ: ಪಾದ್ರಿಯಾದ ಹಳದಿ ಬಟ್ಟೆ ದಾನ.

ಮೀನ ಜಾತಕ 2015 (Meena Jathaka 2014)

Pisces Rashi Bhavishya 2015 in Kannadaಮೀನ ರಾಶಿಯವರೇ, 2015 ನಿಮಗೆ ಸುಂದರವಾಗಿ ಆರಂಭವಾಗುತ್ತದೆ. ಮೀನ ಜಾತಕ 2015ರ ಪ್ರಕಾರ, ನಿಮ್ಮ ಮನೆಯಲ್ಲಿ ಒಂದು ಮಂಗಳಕರ ಸಮಾರಂಭ ನಡೆಯಬಹುದು. ಇದು ಮನೆಯಲ್ಲಿನ ಸಂಭ್ರಮವನ್ನು ಆನಂದಿಸುವ ಸಮಯ. ಆದಾಗ್ಯೂ, ಕುಟುಂಬದ ಕೆಲವು ಸದಸ್ಯರ ಅಸಭ್ಯ ವರ್ತನೆ ನಿಮಗೆ ನೋವುಂಟುಮಾಡಬಹುದು. ಆದರೆ, ನೀವದನ್ನು ನಿರ್ಲಕ್ಷಿಸುವುದೊಳ್ಳೆಯದು. ಲಗ್ನದಲ್ಲಿ ಕೇತುವಿನ ಸ್ಥಾನವನ್ನು ನೋಡಿದಾಗ, ನೀವು ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕಾಗುತ್ತದೆ. ಇಂತಹ ಸನ್ನಿವೇಶದಲ್ಲಿ, ನಿಮ್ಮ ಪಥ್ಯಕ್ರಮದ ಮೇಲೆ ಒಂದು ಕಣ್ಣಿಡುವುದು ಮುಖ್ಯ. ಮೀನರಾಶಿಯವರ 2015ರ ಜಾತಕ ಹೇಳುತ್ತದೆ - ಜಾಗರೂಕತೆಯಿಂದ ಚಾಲನೆ ಮಾಡಿ. ಪ್ರೀತಿಯ ವಿಷಯಗಳಿ ಇದು ಒಳ್ಳೆಯ ಸಮಯವೆಂದು ಹೇಳಬಹುದು, ಆದರೆ ಏಳನೇ ಸ್ಥಾನದಲ್ಲಿ ರಾಹುವಿರುವುದನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ, ಪ್ರೀತಿ ಮತ್ತು ನಂಬಿಕೆ ಯಾವಾಗಲೂ ಬೇಡಿಕೆಯಲ್ಲಿರುವ ಪ್ರಮುಖ ಪದಾರ್ಥಗಳಾಗಿರುತ್ತವೆ. ನೀವು ಉತ್ತಮ ಕೆಲಸ ಪಡೆಯಬಹುದು. ನೀವು ತುಂಬ ಹಸನ್ಮುಖರಾಗಿರಬಹುದು. ಆದರೆ, ಶ್ರಮದ ಕೆಲಸ ಕೆಲಸ ಮತ್ತು ಜವಾಬ್ದಾರಿಗಳು ಹೆಚ್ಚಾಗಬಹುದು. ಆದ್ದರಿಂದ, ಸಿದ್ಧರಾಗಿರಿ. ಅಲ್ಲದೆ, ಪ್ರಯೋಜನಗಳು ಹೆಚ್ಚಾಗುವ ಉತ್ತಮ ಅವಕಾಶಗಳಿವೆ. ಇದೊಂದು ದುಪ್ಪಟ್ಟು ಸಂಭ್ರಮದ ಸಮಯ, ಆದ್ದರಿಂದ ಅನೇಕ ಒಳ್ಳೆಯ ವಿಷಯಗಳು ನಿಮ್ಮೆಡೆಗೆ ಬರುತ್ತಿವೆ. ಶಿಕ್ಷಣಕ್ಕೆ ಇದು ಒಳ್ಳೆಯ ಸಮಯವಾಗಿರುತ್ತದೆ. ಆದರೆ, 2015ರ ದ್ವಿತೀಯಾರ್ಧದಲ್ಲಿ ಕೆಲವು ತೊಂದರೆಗಳು ಉದ್ಭವಿಸುತ್ತವೆ.

2015ರಲ್ಲಿ ಮೀನರಾಶಿಯವರಿಗೆ ಪರಿಹಾರ: ಒಂದು ದೇವಾಲಯದಲ್ಲಿ ಅಕ್ಕಿ, ಬೆಲ್ಲ ಮತ್ತು ಮಸೂರಬೇಳೆಯನ್ನು ದಾನ ಮಾಡಿ.

ಪಂಡಿತ್. ಹನುಮಾನ್ ಮಿಶ್ರಾ ಇವರಿಂದ

2015 Articles

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 399/-

Brihat Horoscope

AstroSage on MobileAll Mobile Apps

AstroSage TVSubscribe

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com

Reports

Live Astrologers