Kannada Jathaka 2014 - Kannada Horoscope 2014
Get set for a new year with our Kannada Jathaka 2014. We bring you all the information you need to lead a hassle free 2014 with our Kannada horoscope 2014. We have covered every important aspects of your life like, family, career, health, love life, finance and education. Use our Kannada Jathaka 2014 and find out which aspect of your life is problem free and which is likely to give you problems. Our Kannada Horoscope 2014 is written by some of our best astrologers who have mastered the subject of horoscope predictions. These predictions are made keeping in mind your Moon signs.
You can completely sort out your year right from the beginning and avoid any uncertainties from taking place. With the help of our Kannada Jathaka 2014 you can know beforehand which of the sections will pose difficulties and which of the aspects will bring you happiness. Is your career going to be, will you have a sound health in 2014, will there be any family worries, you can get to all about this in advance with our Kannada Horoscope 2014. So, use our Kannada Jathaka 2014 and plan your year accordingly and spent a smooth and relaxed yer with family and friends.
Note: These predictions are based on your Moon sign. If you are not sure about your moon sign, please visit the following page - AstroSage Moon Sign Calculator.
ಜಾತಕ 2014 ಜ್ಯೋತಿಷ್ಯ
ಜಾತಕ 2014 ಈಗ ಅಸ್ಟ್ರೋಸೇಜ್‌ನಲ್ಲಿ ಲಭ್ಯವಿದೆ. ಪ್ರತಿ ವರ್ಷದ ಹಾಗೆ, ನಾವು ನಿಮಗೆ 2014ರ ಅತ್ಯುತ್ತಮವಾದ ಜಾತಕವನ್ನು ನೀಡಲು ಪ್ರಯತ್ನಪಟ್ಟಿದ್ದೇವೆ. 2014ರ ಜಾತಕ ವೈದಿಕ ಜ್ಯೋತಿಷ್ಯ ತತ್ವದ ಮೇಲೆ ಆಧರಿತವಾಗಿದೆ. ಜ್ಯೋತಿಷ್ಯ 2014ರಲ್ಲಿ, ನೀವು ಜೀವನದ ಎಲ್ಲಾ ಅಂಶಗಳ ಬಗೆಗೂ ಭವಿಷ್ಯ ತಿಳಿಯುತ್ತೀರಿ. ಜಾತಕ 2014ನ್ನು ನೀಡುವ ಅನೇಕ ಜ್ಯೋತಿಷಿಗಳು, ಕಂಪನಿಗಳು ಮತ್ತು ವೆಬ್ ಸೈಟ್ ಗಳಿವೆ, ಆದರೆ ವಿಶ್ವಾಸಾರ್ಹ ಮೂಲವನ್ನು ಕಂಡುಕೊಳ್ಳುವುದು ಬಹಳ ಕಷ್ಟ. ಅಸ್ಟ್ರೋಸೇಜ್ 2014ರ ಮುನ್ನೋಟಗಳನ್ನು ಎಲ್ಲವೂ ಮನಸ್ಸಿನಲ್ಲಿಟ್ಟುಕೊಂಡು ತಯಾರಿಸಲಾಗಿದೆ. ವಿಶ್ವದಲ್ಲಿ ಲಭ್ಯವಿರುವ 2014ರ ಜಾತಕಗಳ ಗುಂಪಿನ ನಡುವೆ, ನಾವು ನಿಮಗೆ ತೃಪ್ತಿ ನೀಡಲು ಪ್ರಯತ್ನಿಸಿದ್ದೇವೆ. ಈ 2014ರ ಜ್ಯೋತಿಷ್ಯದ ಜೊತೆಗೆ, ನೀವು ಸ್ವಲ್ಪ ಲಾಭ ಪಡೆಯಲು ಸಾಧ್ಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ. ಭವಿಷ್ಯ 2014 ನಿಮಗೆ ಮುಂಚಿತವಾಗಿಯೇ ಎಲ್ಲವನ್ನೂ ಯೋಜಿಸಲು ಸಹಾಯ ಮಾಡುತ್ತದೆ. ನೀವು ಈಗ ಮುಂಚಿತವಾಗಿ ನಿಮ್ಮ ಭವಿಷ್ಯ ತಿಳಿಯುತ್ತೀರಿ. ಆದ್ದರಿಂದ, ನೀವು ಸಿದ್ಧವಾಗಿರಬಹುದು ಮತ್ತು ಭವಿಷ್ಯದ ಬಗ್ಗೆ ತಯಾರಿ ನಡೆಸಬಹುದು. ಜಾತಕ 2014ನ್ನು ನಮ್ಮ ತಜ್ಞ ಜ್ಯೋತಿಷಿಗಳು ಅಭಿವೃದ್ಧಿಪಡಿಸಿದ್ದಾರೆ. ಅವರು ನಿಮಗೆ ಅತ್ಯುತ್ತಮವಾದದ್ದನ್ನು ನೀಡಲು ತಮ್ಮ ಹಲವಾರು ವರ್ಷಗಳ ಅನುಭವನ್ನು ಬಳಸಿದ್ದಾರೆ. ಈ ಜಾತಕದಲ್ಲಿ, ಈ ವರ್ಷ ನಿಮಗೆ ಹೇಗಿರುತ್ತದಂದು ತಿಳಿಯಲು ಸಹಾಯವಾಗುತ್ತದೆ. ಇದಲ್ಲದೇ, ಇದು ನಿಮ್ಮ ಜೀವನದ ಪ್ರತಿ ಅಂಶವನ್ನೂ ಆಳವಾಗಿ ವಿವರಿಸುತ್ತದೆ. ಇದು ಪ್ರೇಮ ಜೀವನ, ಕೌಟುಂಬಿಕ ಜೀವನ, ವೃತ್ತಿ ಜೀವನ, ವೃತ್ತಿ, ಉದ್ಯೋಗ, ಹಣಕಾಸು ಅಥವಾ ಏನಾದರೂ ಅಗಿರಬಹುದು.
ಈ ಜಾತಕ 2014ನ್ನು ನೀವು ಓದಲು ಪ್ರಾರಂಭಿಸಿದಾಗ; ಇದು ಮೊದಲು ನಿಮಗೆ ವರ್ಷದ ಬಗ್ಗೆ ಒಂದು ಸಾರ್ವತ್ರಿಕ ಕಲ್ಪನೆಯನ್ನು ನೀಡುತ್ತದೆ. ಇದಲ್ಲದೆ, ಜಾತಕ 2014 ನಿಮಗೆ ನಿಮ್ಮ ವೈಯಕ್ತಿಕ ಜೀವನದ ಮುನ್ನೋಟಗಳನ್ನು ನೀಡುತ್ತದೆ ಹಾಗೂ ಇದು ನಿಮಗೆ ಮನೆಯಲ್ಲಿ ಯಾವುದೇ ಸಮಸ್ಯೆಯಿಂದ ದೂರ ಉಳಿಯಲು ಸಹಾಯ ಮಾಡುತ್ತದೆ. ಏಕೆಂದರೆ ಏನಾದರೂ ಬರುತ್ತಿದ್ದಲ್ಲಿ ನೀವು ಮುಂಚಿತವಾಗಿ ತಿಳಿಯಬಹುದು. ಆ ನಂತರ, ಜ್ಯೋತಿಷ್ಯ 2014 ಪ್ರೇಮ ಜೀವನದ ಕಡೆಗೆ ನಿಮ್ಮ ಗಮನ ಕೊಂಡೊಯುತ್ತದೆ. ಪ್ರೇಮ ಒಬ್ಬರ ಜೀವನದ ಅತ್ಯಂತ ನಿರ್ಣಾಯಕ ಅಂಶಗಳಲ್ಲೊಂದಾಗಿದೆ. ನೀವು ಜೀವನದಲ್ಲಿ ಪ್ರೀತಿ ಹೊಂದಿಲ್ಲದಿದ್ದರೆ, ಎಲ್ಲವೂ ಟೊಳ್ಳಾಗುತ್ತದೆ. ಆದ್ದರಿಂದ, ನಿಮ್ಮ ಜಾತಕ 2014ರ ಮುನ್ನೋಟಗಳು ಮುಂದಿನ ಸಮಯದಲ್ಲಿ ನಿಮ್ಮ ಪ್ರೀತಿ ಹೇಗಿರುತ್ತದೆ ಹಾಗೂ ನೀವು ಅದರಲ್ಲಿ ಹೇಗೆ ಸಮತೋಲನ ಸಾಧಿಸಬಹುದು ಎಂದು ತಿಳಿಸುತ್ತದೆ. ಆ ನಂತರ, ಮತ್ತೊಂದು ಪ್ರಮುಖ ಅಂಶ ಬರುತ್ತದೆ; ಅದೆಂದರೆ, ವೃತ್ತಿ. ನಾವೆಲ್ಲರೂ ನಮ್ಮ ಜೀವನದಲ್ಲಿ ವೃತ್ತಿಯ ಮಹತ್ವವನ್ನು ತಿಳಿದಿದ್ದೇವೆ. ಆದ್ದರಿಂದ, 2014ರ ಜ್ಯೋತಿಷ್ಯ ಮುನ್ನೋಟಗಳು ನೀವು ಚೆನ್ನಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತವೆ. ಇದಲ್ಲದೆ, ನಾವು ನಿಮ್ಮ ಕೆಲಸದ ಸ್ಥಳದ ಬಗ್ಗೆಯೂ ಮಾತನಾಡುತ್ತೇವೆ. ಇದು ಸಾಕಷ್ಟು ಅನುಕೂಲಕರ ಮತ್ತು ಸ್ನೇಹಶೀಲವಾಗಿರಬೇಕು. ಜಾತಕ 2014ರ ಮುನ್ನೋಟಗಳು ಅವುಗಳನ್ನು ಯಾವಾಗಲೂ ಅನುಕೂಲಕರವಾಗಿಡುತ್ತವೆ. ಮುಂದೆ, ನಿಮ್ಮ ಹಣಕಾಸು ಪರಿಸ್ಥಿತಿಯೂ ಬಹಳ ಮುಖ್ಯವಾದ ಅಂಶವಾಗಿದೆ. ನೀವು ಹೂಡಿಕೆಯಲ್ಲಿ ಒಂದು ತಪ್ಪು ನಿರ್ಧಾರದಿಂದ ಯಾವಾಗ ತೊಂದರೆ ಎದುರಿಸಬೇಕಾಗುತ್ತದೆಂದು ನಿಮಗೆ ತಿಳಿದಿರುವುದಿಲ್ಲ. ಆದ್ದರಿಂದ, ನಿಮ್ಮ ಆರ್ಥಿಕ ಸ್ಥಿತಿಗಾಗಿನ ಜ್ಯೋತಿಷ್ಯ 2014ರ ಮುನ್ನೋಟಗಳು ನಿಮ್ಮ ಆಸ್ತಿಗಳಿಗಾಗಿ ಅತ್ಯುತ್ತಮವಾದದ್ದನ್ನು ನಿರ್ಧರಿಸಲು ಸಹಾಯ ಮಾಡುತ್ತವೆ.
ಗಮನಿಸಿ: ಈ ಮುನ್ನೋಟಗಳು ನಿಮ್ಮ ಚಂದ್ರರಾಶಿಯನ್ನು ಆಧರಿಸಿವೆ. ನಿಮ್ಮ ಚಂದ್ರರಾಶಿಯ ಬಗ್ಗೆ ನಿಮಗೆ ತಿಳಿದಿರದಿದ್ದಲ್ಲಿ, ಇಲ್ಲಿ ಕ್ಲಿಕ್ ಮಾಡಿ: ಅಸ್ಟ್ರೋಸೇಜ್ ಚಂದ್ರರಾಶಿ ಕೋಷ್ಟಕ.
ಮೇಷರಾಶಿ ಜಾತಕ 2014 ಜ್ಯೋತಿಷ್ಯ (Mesha Jathaka 2014)
ಮೇಷ ರಾಶಿಯ ರಾಶಿಚಕ್ರದವರಿಗೆ 2014 ಉತ್ತಮ ವರ್ಷವಾಗಿರುತ್ತದೆ. ಜಾತಕ 2014ರ ಜ್ಯೋತಿಷ್ಯ ಕೌಟುಂಬಿಕ ಜೀವನ ಸಂತೋಷಕರವಾಗಿರುತ್ತದೆ ಎಂದು ತಿಳಿಸುತ್ತದೆ. ಆದರೆ, ಶನಿ ಮತ್ತು ರಾಹು 7ನೇ ಮನೆಯಲ್ಲಿವೆ. ಇದು 2014ರಲ್ಲಿ ನಿಮ್ಮ ಸಂಗಾತಿಯ ಜೊತೆ ಕೆಲವು ಭಿನ್ನಾಭಿಪ್ರಾಯಗಳನ್ನು ಉಂಟುಮಾಡಬಹುದು. ಅಲ್ಲದೆ, 2014ರ ಜಾತಕದ ಮುನ್ನೋಟಗಳ ಪ್ರಕಾರ, ಇದು ನಿಮ್ಮ ಸಂಗಾತಿಗೆ ಆರೋಗ್ಯದ ತೊಂದರೆಗಳನ್ನೂ ನೀಡಬಹುದು. ಆರೋಗ್ಯದ ವಿಷಯಕ್ಕೆ ಬಂದಾಗ, 2014ರ ಜ್ಯೋತಿಷ್ಯ ನೀವು ಕೆಲವು ಏಳುಬೀಳುಗಳನ್ನು ನೋಡಬಹುದು ಎಂದು ಭವಿಷ್ಯ ನುಡಿಯುತ್ತದೆ. ಆದ್ದರಿಂದ, ನೀವು ರೋಗಗಳನ್ನು ತಪ್ಪಿಸಲು ಜಾಗರೂಕರಾಗಿರಬೇಕು. ಅಲ್ಲದೆ, ಇದು ಪ್ರೀತಿ ಬದುಕಿಗೆ ಉತ್ತಮ ಸಮಯವಾಗಿದೆ. ಆದರೆ, ಅಂತರ್ಜಾತೀಯ ಸಂಬಂಧಗಳಿಗೆ ಇದು ಒಳ್ಳೆಯ ಸಮಯವಲ್ಲ. ಆದ್ದರಿಂದ ನಿಮ್ಮ ಪ್ರೀತಿಪಾತ್ರ ಸಂಗಾತಿ ನಿಮ್ಮ ಜಾತಿಯವರಲ್ಲದಿದ್ದಲ್ಲಿ ಎಚ್ಚರಿಕೆಯಿಂದಿರಿ. ವೃತ್ತಿಯಲ್ಲಿ, ಈ ವರ್ಷ ನಿಮಗೆ ಬಡ್ತಿಯನ್ನು ತರಬಹುದು. ಜಾತಕ 2014ರ ಮುನ್ನೋಟಗಳು ನೀವು ಆರ್ಥಿಕವಾಗಿ ಸಕಾರಾತ್ಮಕ ಸಮಯವನ್ನು ನೋಡುತ್ತೀರಿ ಎಂದು ಹೇಳುತ್ತದೆ. ನೀವು ಉನ್ನತ ಶಿಕ್ಷಣಕ್ಕಾಗಿ ಹೋಗಬಯಸಿದರೆ, ನೀವು ಅತ್ಯಂತ ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು. ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಲು ಯೋಜಿಸುತ್ತಿರುವ ವಿದ್ಯಾರ್ಥಿಗಳಿಗೆ ಜೂನ್ 2014ರ ನಂತರದ ಸಮಯ ಸಾಕಷ್ಟು ಅನುಕೂಲಕರವಾಗಿದೆಯೆಂದು ತೋರುತ್ತದೆ. ಒಂದು ನಿವಾರಣಾ ಕ್ರಮವಾಗಿ ಕಪ್ಪು ಹಸುಗಳಿಗೆ ಸೇವೆ ಸಲ್ಲಿಸಿ. ಈಗ ವೃಷಭ ರಾಶಿಯ ಬಗ್ಗೆ ಮಾತನಾಡೋಣ.
ವೃಷಭ ರಾಶಿ ಜಾತಕ 2014 ಜ್ಯೋತಿಷ್ಯ (Vrushabha Jathaka 2014)
ವೃಷಭ ರಾಶಿಚಕ್ರದವರಿಗೆ 2014 ಅಚ್ಚರಿಗಳಿಂದ ತುಂಬಿಹೋಗಿದೆ. 2014ರ ಜಾತಕದ ನಿಮ್ಮ ಜ್ಯೋತಿಷ್ಯದ ಪ್ರಕಾರ, ನೀವು ನಿಮ್ಮ ಪ್ರೀತಿಪಾತ್ರರಿಗೆ ವಿಶೇಷವಾಗಿರುವುದರ ಬಗ್ಗೆ ಚಿಂತಿಸಬಹುದು. ನಿಮ್ಮ 2014ರ ಜ್ಯೋತಿಷದ ಪ್ರಕಾರ, ಇದು ನಿಮ್ಮ ಖ್ಯಾತಿಯನ್ನು ವರ್ಧಿಸುತ್ತದೆ. ನೀವು ಈಗಾಗಲೇ ಕೆಲವು ಹಳೆಯ ರೋಗದಿಂದ ಬಳಲುತ್ತಿರದಿದ್ದಲ್ಲಿ, ಈ ವರ್ಷ ನಿಮಗೆ ಉತ್ತಮ ಆರೋಗ್ಯ ನೀಡಲಿದೆ. ನೀವು ಹಳೆಯ ರೋಗದಿಂದ ಬಳಲುತ್ತಿದರೂ ಕೂಡ, ಸುಧಾರಣೆ ನಿರೀಕ್ಷಿಸಬಹುದು. ಕೆಲವು ಸಣ್ಣ ವ್ಯತ್ಯಾಸಗಳಿರಬಹುದಾದರೂ ಇದು ಪ್ರೀತಿ ಬದುಕಿಗೆ ಉತ್ತಮ ಸಮಯವಾಗಿದೆ. 2014ರ ಮುನ್ನೋಟಗಳು ನಿಮಗೆ ಯಾವುದೇ ವಾದವನ್ನು ತಪ್ಪಿಸಲು ಸಾಧ್ಯವಾದಲ್ಲಿ ಅದು ಒಳ್ಳೆಯದೆಂದು ಸೂಚಿಸುತ್ತದೆ. 2014ರ ಜಾತಕದ ಮುನ್ನೋಟಗಳ ಪ್ರಕಾರ, ಇದು ವೃತ್ತಿಗೆ ಸಕಾರಾತ್ಮಕ ಅವಧಿಯಾಗಿದೆ. ನಿರುದ್ಯೋಗಿಯಾಗಿದ್ದವರು ಉದ್ಯೋಗ ಪಡೆಯಬಹುದಾದರೂ ವ್ಯಾಪಾರಿಗಳು ಹೆಚ್ಚಿನ ಶ್ರಮಪಡಬೇಕು, ಏಕೆಂದರೆ ನಿಮ್ಮ ಪ್ರಯತ್ನವಿಲ್ಲದೇ ನೀವು ಹೆಚ್ಚು ಸಕಾರಾತ್ಮಕ ಫಲಿತಾಂಶಗಳನ್ನು ತರಲು ಸಾಧ್ಯವಾಗುವುದಿಲ್ಲ. ನೀವು ಶ್ರಮಪಟ್ಟಿದ್ದರೆ, ನಿಮ್ಮ ಬಹುತೇಕ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಆರ್ಥಿಕವಾಗಿ, 2014 ನಿಮಗೆ ಅನುಕೂಲಕರವಾಗಿರುತ್ತದೆ. ಜಾತಕ 2014ರ ಪ್ರಕಾರ, ವರ್ಷದ ಮೊದಲಾರ್ಧದಲ್ಲಿ ಹಣ ಉಳಿಸುವ ಉತ್ತಮ ಸಾಧ್ಯತೆಗಳಿವೆ. ಮತ್ತೊಂದೆಡೆ, ವರ್ಷದ ದ್ವಿತೀಯಾರ್ಧ ಆದಾಯದಲ್ಲಿ ಏರಿಕೆ ತರಬಹುದು. 2014ರ ಜ್ಯೋತಿಷ್ಯದ ಮುನ್ನೋಟಗಳ ಪ್ರಕಾರ ವಿದ್ಯಾರ್ಥಿಗಳು ಅನುಕೂಲಕರ ಫಲಿತಾಂಶವನ್ನು ಪಡೆಯುತ್ತಾರೆ. ಒಂದು ನಿವಾರಣಾ ಕ್ರಮವಾಗಿ, 2014ನ್ನು ಇನ್ನಷ್ಟು ಸುಧಾರಿಸಲು ಹುಡುಗಿಯರ ಸೇವೆ ಮಾಡಿ. ಈಗ, 2014 ಮಿಥುನ ರಾಶಿಯವರಿಗೆ ಏನನ್ನು ತರುತ್ತಿದೆ ಎಂಬುದನ್ನು ನೋಡೋಣ:
ಮಿಥುನ ರಾಶಿ ಜಾತಕ 2014 ಜ್ಯೋತಿಷ್ಯ (Mithuna Jathaka 2014 )
2014ರ ಜಾತಕದ ಮಿಥುನ ರಾಶಿಚಕ್ರದವರ ಭವಿಷ್ಯಗಳು ಈ ವರ್ಷ ಅವರಿಗೆ ಅನುಕೂಲಕರವಾಗಿರುತ್ತವೆ ಎಂದು ಹೇಳುತ್ತವೆ. 2014ರಲ್ಲಿ ನಿಮ್ಮ ಕುಟುಂಬದಲ್ಲಿ ಕೆಲವು ಪ್ರಮುಖವಾದ ಕಾರ್ಯಗಳಿರಬಹುದು. ಅಲ್ಲದೆ, ಮನೆಯಲ್ಲಿ ಒಂದು ಮದುವೆ ಅಥವಾ ನವಜಾತರು ಬರುವ ಒಳ್ಳೆಯ ಸಾಧ್ಯತೆಗಳಿವೆ. ಆದರೆ, ನಿಮ್ಮ ಆರೋಗ್ಯದ ಮೇಲೆ ಗಮನವಿರಲಿ. ನೀವು ಯಾವುದೇ ಪ್ರಮುಖ ಅನಾರೋಗ್ಯವನ್ನು ಎದುರಿಸದಿದ್ದರೂ, ಆಗಾಗ ಬರುವ ರೋಗಗಳು ನಿಮ್ಮನ್ನು ಭಾಧಿಸಬಹುದು. 2014ರ ಮುನ್ನೋಟಗಳು ಪ್ರೀತಿಗೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಹಠ ಮಾಡಬಾರದು ಎಂದು ಸೂಚಿಸುತ್ತವೆ. ಇಲ್ಲದಿದ್ದರೆ, ನಿಮ್ಮ ಪ್ರೀತಿಯ ಸಂಗಾತಿ ಬೇರೆಯವರೆಡೆ ಆಕರ್ಷಿತರಾಗಬಹುದು. ನಿಮ್ಮ 2014ರ ಜ್ಯೋತಿಷ್ಯದ ಪ್ರಕಾರ, ನೀವು ಸಾಮಾಜಿಕವಾಗಿ ನಿಮ್ಮಿಂದ ಪ್ರತ್ಯೇಕವಾದ ಯಾರೆಡೆಗಾದರೂ ಆಕರ್ಷಿತರಾಗಬಹುದು. ಇದು ವ್ಯಾಪಾರ ಮತ್ತು ಕೆಲಸಕ್ಕೆ ಒಂದು ಒಳ್ಳೆಯ ಸಮಯವಾಗಿದೆ. ನೀವು ನಿರುದ್ಯೋಗದಿಂದ ಪರಿಹಾರ ಪಡೆಯಬಹುದು ಅಥವಾ ಒಂದು ಬಡ್ತಿ ಪಡೆಯಬಹುದು. ಅಲ್ಲದೆ, ಇದು ಆರ್ಥಿಕವಾಗಿ ಕೂಡ ಒಂದು ಸಕಾರಾತ್ಮಕ ಕಾಲ. 2014ರ ಜಾತಕದ ಪ್ರಕಾರ, ನಿಮ್ಮ ಆದಾಯದ ಮೂಲಗಳು ಹೆಚ್ಚಾಗಬಹುದು. ಅಪಾಯಕಾರಿ ಹೂಡಿಕೆಗಳಿಂದ ದೂರವಿರಲು ಪ್ರಯತ್ನಿಸಿ. ವಿದ್ಯಾರ್ಥಿಗಳಿಗೆ 2014 ಸಾಕಷ್ಟು ಒಳ್ಳೆಯದು. ಜಾತಕ 2014ರ ಪ್ರಕಾರ ಈ ಸಮಯ ವಿಶೇಷವಾಗಿ ಉನ್ನತ ಶಿಕ್ಷಣಕ್ಕೆ ಒಳ್ಳೆಯದು. ಈ ವರ್ಷ ನಿಮ್ಮ ಭವಿಷ್ಯ ಸುಧಾರಿಸಲು ದೇವಾಲಯದಲ್ಲಿ ಬಾದಾಮಿಗಳನ್ನು ದಾನ ಮಾಡಿ. ಈಗ 2014ರಲ್ಲಿ ಕರ್ಕ ರಾಶಿಯಯವರಿಗೆ ಏನಿದೆ ಎಂದು ನೋಡೋಣ:
ಕರ್ಕ ರಾಶಿ ಜಾತಕ 2014 ಜ್ಯೋತಿಷ್ಯ (Karka Jathaka 2014)
2014 ಕರ್ಕ ರಾಶಿಯವರಿಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. 2014ರ ಜಾತಕದ ಪ್ರಕಾರ, ನೀವು ವರ್ಷದ ಮೊದಲಾರ್ಧದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಾಲ್ಕನೇ ಮನೆಯಲ್ಲಿ ರಾಹು ಮತ್ತು ಶನಿ ನಿಮ್ಮ ಮಾನಸಿಕ ಶಾಂತಿಗೆ ಭಂಗ ತರಬಹುದು. 2014ರ ಜ್ಯೋತಿಷ್ಯವು ನೀವು ಗೃಹಜೀವನದಿಂದಾಗಿ ಒತ್ತಡದಲ್ಲಿರಬಹುದು ಎಂದು ಭವಿಷ್ಯ ನುಡಿಯುತ್ತದೆ. 2014ರಲ್ಲಿ ನೀವು ನಿಮ್ಮ ಕುಟುಂಬದ ಸದಸ್ಯರೊಡನೆ ಉತ್ತಮವಾಗಿ ಹೊಂದಿಕೊಳ್ಳದಿರಬಹುದು. ಇದು ನಿಮಗೆ ಒತ್ತಡ ನೀಡುತ್ತದೆ. ಈ ಸಮಯ ಆರೋಗ್ಯ, ಉದ್ಯೋಗ, ಶಿಕ್ಷಣ ಮತ್ತು ಪ್ರಯಾಣಕ್ಕೆ ಅನುಕೂಲಕರವಲ್ಲ. ಇಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಆರೋಗ್ಯದ ಬಗ್ಗೆ ಯಾವತ್ತೂ ಎಚ್ಚರಿಕೆಯಿಂದಿರಬೇಕು. ಜಾತಕ 2014ರ ಜ್ಯೋತಿಷ್ಯ ನಿಮ್ಮ ಕೆಲಸದಲ್ಲಿ ಪರಿವರ್ತನೆಯ ನಿರೀಕ್ಷೆಯಿದೆ ಎಂದೂ ಭವಿಷ್ಯವಾಣಿ ನುಡಿಯುತ್ತದೆ. ನಿಮ್ಮ ಹಿರಿಯ ಸಹೋದ್ಯೋಗಿಗಳೊಡನೆ ಯಾವುದೇ ಅನುಪಯುಕ್ತ ವಾದವನ್ನು ತಪ್ಪಿಸಿ; ಅಲ್ಲದೆ ಪ್ರಮುಖವಲ್ಲದ ಪ್ರಯಾಣವನ್ನೂ ತಪ್ಪಿಸಿ. ಆದರೆ, ದ್ವಿತೀಯಾರ್ಧ ಸಾಕಷ್ಟು ಒಳ್ಳೆಯದೆಂದು ಸಾಬೀತಾಗುತ್ತದೆ. ಅಷ್ಟಷ್ಟಾಗಿ ನಿಮ್ಮ ತೊಂದರೆಗಳು ಕಡಿಮೆಯಾಗುತ್ತವೆ. 2014 ಮುನ್ನೋಟಗಳು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳು ನಿಮಗೆ ಶಾಂತಿ ತರುತ್ತವೆಂದು ಹೇಳುತ್ತವೆ. ವರ್ಷದ ದ್ವಿತೀಯಾರ್ಧದಲ್ಲಿ, ನಿಮ್ಮ ಶಿಕ್ಷಣದ ಮಟ್ಟ ಸುಧಾರಿಸುತ್ತದೆ ಮತ್ತು ಉನ್ನತ ಶಿಕ್ಷಣಕ್ಕಾಗಿನ ನಿಮ್ಮ ಎಲ್ಲಾ ಪ್ರಯತ್ನಗಳೂ ಫಲ ನೀಡುತ್ತವೆ. ನಿಮ್ಮ ತೊಂದರೆಗಳನ್ನು ಓಡಿಸಲು ಅನ್ನದೊಂದಿಗೆ ಹಾಲು ಬೆರೆಸಿ ಒಂದು ಹಸುವಿಗೆ ಉಣಿಸಿ. ಈಗ ಸಿಂಹ ರಾಶಿಯವರ ಬಗ್ಗೆ ಮಾತನಾಡೋಣ:
ಸಿಂಹ ರಾಶಿ ಜಾತಕ 2014 ಜ್ಯೋತಿಷ್ಯ (Simha Jathaka 2014)
ಸಿಂಹ ರಾಶಿಯವರು ವರ್ಷದ ಮೊದಲಾರ್ಧದಲ್ಲಿ ಹಲವಾರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. 2014ರ ಜಾತಕ ನಿಮ್ಮ ಕುಟುಂಬ ಸದಸ್ಯರು ವರ್ಷದ ಮೊದಲಾರ್ಧದಲ್ಲಿ ಸಂತೋಷವಾಗಿರುತ್ತಾರೆ ಎಂದು ತಿಳಿಸುತ್ತದೆ. 2014ರಲ್ಲಿ ಆದಾಯ ಮೂಲಗಳು ಸುಧಾರಿಸುತ್ತವೆ. ನೀವು ಸ್ನೇಹಿತರು ಮತ್ತು ಸಂಬಂಧಿಗಳಿಂದ ಅಪಾರ ಬೆಂಬಲ ಪಡೆಯುತ್ತೀರಿ. 2014ರ ಜ್ಯೋತಿಷ್ಯ ಮುನ್ನೋಟಗಳ ಪ್ರಕಾರ, ಈ ಸಮಯ ಮಕ್ಕಳಾಗಲು ಮತ್ತು ಶಿಕ್ಷಣಕ್ಕೂ ಅನುಕೂಲಕರವಾಗಿರುತ್ತದೆ. ಆದಾಗ್ಯೂ, ಐದನೇ ಮನೆಯಲ್ಲಿ ಶನಿಯ ಇರುವಿಕೆ ನಿಮಗೆ ಮಕ್ಕಳಿಗೆ ಸಂಬಂಧಿಸಿದ ಆತಂಕಗಳನ್ನು ನೀಡಬಹುದು; ಆದಾಗ್ಯೂ, ಎಲ್ಲಾ ಸಮಸ್ಯೆಗಳೂ ಸಮಯದೊಂದಿಗೆ ಪರಿಹಾರ ಹೊಂದುತ್ತವೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಇದು ಉತ್ತಮ ಸಮಯವಾಗಿದೆ. 2014ರ ಜ್ಯೋತಿಷ್ಯದ ಪ್ರಕಾರ, ಇದು ಪ್ರೇಮ ಸಂಬಂಧಗಳು ಮತ್ತು ವಂಶದ ಬೆಳವಣಿಗಗೂ ಒಂದು ಸಕಾರಾತ್ಮಕ ಅವಧಿಯಾಗಿದೆ. 2014ರ ಜಾತಕ ಅನೇಕ ಅನುಕೂಲಕರ ಅವಕಾಶಗಳು ನಿಮ್ಮೆಡೆ ಬರುತ್ತವೆಂದು ಹೇಳುತ್ತವೆ. ನಿಮ್ಮ 2014ರ ಜ್ಯೋತಿಷ್ಯದ ಪ್ರಕಾರ, ನೀವು ವೃತ್ತಿಜೀವನದಲ್ಲಿ ಒಳ್ಳೆಯ ಸಾಧನೆ ಮಾಡುತ್ತೀರಿ. 2014ರಲ್ಲಿ ಬಡ್ತಿಯ ಅವಕಾಶಗಳೂ ಬರಬಹುದು. ವಿದ್ಯಾರ್ಥಿಗಳು ಬಯಸಿದ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಬಹುದು. ಆದಾಗ್ಯೂ, ಉತ್ತರಾರ್ಧದ ಅವಧಿಯಲ್ಲಿ ಖರ್ಚು ಹೆಚ್ಚಾಗಬಹುದು. ಅಲ್ಲದೆ, ಈ ಅವಧಿ ಆರೋಗ್ಯದ ದೃಷ್ಟಿಯಿಂದ ಅಷ್ಟೊಂದು ಸಕಾರಾತ್ಮಕವಲ್ಲ. ನೀವು ಕೆಲವು ಅನುಪಯುಕ್ತ ಪ್ರಯಾಣಗಳಿಗಾಗಿ ಹೋಗಬೇಕಾಬಹುದು. ಒಂದು ನಿವಾರಣಾ ಕ್ರಮವಾಗಿ ಅರಳಿ ಮರಕ್ಕೆ ನೀರುಣಿಸಿ. ಈಗ, ಕನ್ಯಾರಾಶಿಯವರ ಬಗ್ಗೆ ಚರ್ಚಿಸೋಣ.
ಕನ್ಯಾರಾಶಿ ಜಾತಕ 2014 ಜ್ಯೋತಿಷ್ಯ (Kanya Jathaka 2014)
ಕನ್ಯಾರಾಶಿಯವರಿಗೆ ಒಟ್ಟಾರೆಯಾಗಿ 2014 ಒಂದು ಅನುಕೂಲಕರ ವರ್ಷವಾಗಿದೆ. 2014ರಲ್ಲಿ ಮನೆಯಲ್ಲಿ ಒಂದು ಸಕಾರಾತ್ಮಕ ವಾತಾವರಣ ಇರುತ್ತದೆ. ನೀವು ಆರೋಗ್ಯಕರವಾಗಿ ಮತ್ತು ಸಂತೋಷವಾಗಿರುತ್ತೀರಿ. ಆದರೆ, ನಿಮ್ಮ ನಾಲಿಗೆಯ ಮೇಲೆ ಹಿಡಿತವಿರಿಸಿಕೊಳ್ಳುವಂತೆ ನಾನು ಸಲಹೆ ಮಾಡುತ್ತೇನೆ. ಹೆಚ್ಚುವರಿಯಾಗಿ, ನೀವು ಅನಗತ್ಯ ವೆಚ್ಛಗಳನ್ನು ತಪ್ಪಿಸಬೇಕು. ವಿಶೇಷವಾಗಿ ದ್ವಿತೀಯಾರ್ಧ ಪ್ರೇಮ ಸಂಬಂಧಗಳು ಮತ್ತು ಮದುವೆಗೆ ಉತ್ತಮವಾಗಿದೆ. ಜಾತಕ 2014ರ ಪ್ರಕಾರ, ನೀವು ನಿಮ್ಮ ವೃತ್ತಿಯಲ್ಲಿ ಅಸಾಧಾರಣವಾದದ್ದೇನಾದರೂ ಮಾಡಬಹುದು. ಬಡ್ತಿ ಕೂಡ ಸಾಧ್ಯವಿದೆ. ನೀವು 2014ರಲ್ಲಿ ಹೆಚ್ಚು ಅವಕಾಶಗಳನ್ನು ಪಡೆಯಬಹುದು. ಆದರೆ, ಶನಿ ಮತ್ತು ರಾಹು ಎರಡನೇ ಮನೆಯಲ್ಲಿದ್ದಾರೆ. ಆದ್ದರಿಂದ, ನಿಮಗೆ ಹಣ ಉಳಿಸಲು ಸ್ವಲ್ಪ ಕಷ್ಟವಾಗುತ್ತದೆ. ಆದರೆ, ಜುಲೈನಲ್ಲಿ ರಾಹುವಿನ ಸಂಚಾರ ನಿಮಗೆ ಉಳಿತಾಯ ಮಾಡಲು ಸಹಾಯ ಮಾಡಬಹುದು ಮತ್ತು ಈ ಸಂಚಾರ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. 2014ರ ಜ್ಯೋತಿಷ್ಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ ಎಂದು ಭವಿಷ್ಯ ನುಡಿಯುತ್ತದೆ. ನಿಮಗೆ ವಸ್ತುಗಳನ್ನು ಸಕಾರಾತ್ಮಕವಾಗಿಸಲು ನಿಮ್ಮ ಹಣೆಯ ಮೇಲೆ ಕೇಸರಿ ತಿಲಕ ಹಚ್ಚಿಕೊಳ್ಳಿ. ಈಗ ತುಲಾ ರಾಶಿಯವರನ್ನು ನೋಡೋಣ:
ತುಲಾರಾಶಿ ಜಾತಕ 2014 ಜ್ಯೋತಿಷ್ಯ (Tula Jathaka 2014)
ತುಲಾ ರಾಶಿಯವರು 2014ರಲ್ಲಿ ಮಿಶ್ರ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ನೀವು ಆಧ್ಯಾತ್ಮಿಕ ಸ್ವಭಾವದವರಾಗಿದ್ದಲ್ಲಿ ನಿಮ್ಮ ಒಂಬತ್ತನೇ ಮನೆಯಲ್ಲಿರುವ ಗುರು ನಿಮ್ಮ ಅದೃಷ್ಟವನ್ನು ಬಲಪಡಿಸುತ್ತಿರುವುದರಿಂದ ನಿಮ್ಮ ಕುಟುಂಬದಲ್ಲಿ ಸಾಮರಸ್ಯಮಯ ವಾತಾವರಣ ರಚಿಸಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ಮೊದಲ ಮನೆಯಲ್ಲಿ ಶನಿ ಮತ್ತು ರಾಹು ನಿಮ್ಮ ಆರೋಗ್ಯಕ್ಕೆ ಕೆಲವು ತೊಂದರೆಗಳನ್ನು ಉಂಟುಮಾಡಬಹುದು. ಆದರೆ, ಜುಲೈನಲ್ಲಿ, ರಾಹುವಿನ ಸಂಚಾರದ ನಂತರ, ಆರೋಗ್ಯ ಸಂಬಂಧಿತ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ. ಇದು ಪ್ರೀತಿಗೆ ಸಂಬಂಧಿಸಿದ ವಿಷಯಗಳಲ್ಲಿ ಒಳ್ಳೆಯ ವರ್ಷವಾಗಿರುತ್ತದೆ. ಆದರೆ ನಿಮ್ಮ ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು. 2014ರ ಜಾತಕ ನಿಮಗೆ ಸಮಯ ಮತ್ತು ಹಣವನ್ನು ಪೋಲು ಮಾಡುವ ಅಷ್ಟೇನೂ ಪ್ರಮುಖವಲ್ಲದ ಮೊಕದ್ದಮೆಗಳನ್ನು ತಪ್ಪಿಸುವಂತೆ ಸೂಚಿಸುತ್ತದೆ. ನೀವು 2014ರಲ್ಲಿ ವೃತ್ತಿಜೀವನದಲ್ಲೂ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದರೆ ನೀವು ಅಡಚಣೆಗಳನ್ನು ಹೊಂದಿದ್ದಾಗಲೂ ಕೆಲವು ವಿಷಯಗಳಲ್ಲಿ ಯಶಸ್ಸು ಪಡೆಯುತ್ತೀರಿ. ಆರ್ಥಿಕವಾಗಿ, 2014 ಒಂದು ಸಾಮಾನ್ಯ ವರ್ಷವಾಗಿರುತ್ತದೆ. ವಿದ್ಯಾರ್ಥಿಗಳು ಶ್ರಮವಹಿಸಿದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು. ವಿದೇಶದಲ್ಲಿ ಶಿಕ್ಷಣ ಪಡೆಯಬಯಸುವವರಿಗೆ ಈ ಸಮಯವು ಸಕಾರಾತ್ಮಕವಾಗಿರುತ್ತದೆ. ನಿವಾರಣಾ ಕ್ರಮವಾಗಿ ಮಂಗಗಳ ಸೇವೆ ಮಾಡಿ. ಅಲ್ಲದೆ ಮಾಂಸಾಹಾರ ಮತ್ತು ಮದ್ಯವನ್ನು ತಪ್ಪಿಸಿ. ಈಗ ವೃಶ್ಚಿಕ ರಾಶಿಯವರ ಬಗ್ಗೆ ಮಾತನಾಡೋಣ:
ವೃಶ್ಚಿಕರಾಶಿ ಜಾತಕ 2014 ಜ್ಯೋತಿಷ್ಯ (Vrushchika Jathaka 2014)
ನಿಮ್ಮ 2014ರ ಜ್ಯೋತಿಷ್ಯದ ಪ್ರಕಾರ ವೃಶ್ಚಿಕ ರಾಶಿಯವರಿಗೆ ವರ್ಷದ ಪ್ರಾರಂಭದಲ್ಲಿ ಗುರು ಎಂಟನೆಯ ಮನೆಯಲ್ಲಿ ನೆಲೆಸಿದ್ದಾನೆ. 2014ರ ಆರಂಭಿಕ ಹಂತದಲ್ಲಿ, ನೀವು ಕೆಲವು ಉತ್ತಮ ಫಲಿತಾಂಶಗಳನ್ನು ಪಡೆಯಲು ಶ್ರಮವಹಿಸಿ ಕೆಲಸ ಮಾಡಬೇಕಾಗುತ್ತದೆ. 2014ರ ಜಾತಕ ನಿಮ್ಮ ಕುಟುಂಬದ ಸದಸ್ಯರು ವಿಚಿತ್ರವಾಗಿ ವರ್ತಿಸಬಹುದು ಎಂದು ಭವಿಷ್ಯ ನುಡಿಯುತ್ತದೆ. ಅಭದ್ರತೆಯ ಭಾವನೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾದ್ದರಿಂದ ಜಾಗರೂಕರಾಗಿರಿ. ನಿಮ್ಮ 2014ರ ಜಾತಕ ನೀವು ಸಾಧ್ಯವಾದಷ್ಟೂ ಮೊಕದ್ದಮೆಗಳನ್ನು ತಪ್ಪಿಸಬೇಕೆಂದು ಸೂಚಿಸುತ್ತದೆ. ಅನಗತ್ಯ ಪ್ರವಾಸಗಳೂ ನಿಮಗೆ ಒಳ್ಳೆಯದಲ್ಲ. ಪ್ರೀತಿಯ ವಿಷಯದಲ್ಲೂ ಕೆಲವು ಅಪಶ್ರುತಿಗಳಿರಬಹುದು. ಶ್ರಮವಹಿಸಿ ಕೆಲಸ ಮಾಡುವುದೂ ನಿರೀಕ್ಷಿತ ಫಲಿತಾಂಶಗಳನ್ನು ನೀಡುವುದಿಲ್ಲ. ಗುರು ಆ ಹಂತದಲ್ಲಿ ನಿಮ್ಮ ಒಂಬತ್ತನೇ ಮನೆಯಲ್ಲಿರುವುದರಿಂದ 2014ರ ದ್ವಿತೀಯಾರ್ಧ ಸುಧಾರಣೆಗಳನ್ನು ತರಲಿದೆ. ಜುಲೈನಲ್ಲಿ ರಾಹು ನಿಮ್ಮ ಹನ್ನೊಂದನೇ ಮನೆಯನ್ನು ತಲುಪುತ್ತಾನೆ. ಈ ಸಂಚರಣೆ ನಿಮಗೆ ಸುಧಾರಣೆಗಳನ್ನು ತರುತ್ತದೆ. ಇದರ ಪರಿಣಾಮವಾಗಿ, ವಿದ್ಯಾರ್ಥಿಗಳು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ; ಮತ್ತು ನಿಮ್ಮ ಗಳಿಕೆಯೂ ಹೆಚ್ಚಾಗಬಹುದು. ಆಲೂಗಡ್ಡೆಗಳ ಜೊತೆಗೆ ತುಪ್ಪದ ದಾನ ನಿಮಗೆ ಲಾಭದಾಯಕವಾಗಬಹುದು. ಈಗ ಧನುರಾಶಿಯವರನ್ನು ನೋಡೋಣ:
ಧನುರಾಶಿ ಜಾತಕ 2014 ಜ್ಯೋತಿಷ್ಯ (Dhanu Jathaka 2014)
ಧನುರಾಶಿಯವರಿಗೆ 2014ರ ಮೊದಲ ಭಾಗ ಬಹಳ ಉತ್ತಮವಾಗಿರುತ್ತದೆ. ನಿಮ್ಮ 2014 ಜ್ಯೋತಿಷ್ಯದ ಮುನ್ನೋಟಗಳು ಕುಟುಂಬದಲ್ಲಿ ಸಾಮರಸ್ಯವಿರುತ್ತದೆ ಎಂದು ಭವಿಷ್ಯ ನುಡಿಯುತ್ತವೆ. ನಿಮಗೆ ಮರುಚೇತನ ಬಂದಂತೆ ನಿಮಗನಿಸುತ್ತದೆ. ನಿಮ್ಮ ಹನ್ನೊಂದನೇ ಮನೆಯಲ್ಲಿರುವ ಶನಿ ಮತ್ತು ರಾಹು ನಿಮಗೆ ಏರಿಕೆಗಳನ್ನು ಸೂಚಿಸುತ್ತಿದ್ದಾರೆ. ಆದರೆ, ಲಗ್ನದ ಮನೆಯ ಮೇಲಿನ ಶನಿಯ ಪ್ರಭಾವ ನಿಮ್ಮಲ್ಲಿ ಕೆಲವು ನಕಾರಾತ್ಮಕತೆಯನ್ನು ತರಬಹುದು. ಆದ್ದರಿಂದ, ನಿಮ್ಮ ಪ್ರಯತ್ನಗಳು ಯಾವುದೇ ನಕಾರಾತ್ಮಕ ಕ್ರಿಯೆ ಮತ್ತು ಕೆಟ್ಟ ಹವ್ಯಾಸಗಳನ್ನು ತಪ್ಪಿಸುವತ್ತ ಗಮನ ಹರಿಸಬೇಕು. ನಿಮ್ಮ 2014ರ ಜಾತಕ ನೀವು ಪ್ರೀತಿ ಮತ್ತು ಮದುವೆಗೆ ಸಂಬಂಧಿಸಿದ ವಿಷಯಗಳಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯಬಹುದು ಎಂದು ಸೂಚಿಸುತ್ತವೆ. ಆದಾಗ್ಯೂ, ಐದನೇ ಮನೆಯಲ್ಲಿ ಶನಿಯ ಪ್ರಭಾವವಿರುವುದರಿಂದ ನಿಮ್ಮ ಪ್ರೀತಿಯ ಸಂಗಾತಿಯ ಜೊತೆ ಕೆಲವೊಮ್ಮೆ ವಾದಗಳುಂಟಾಗಬಹುದು. ನೀವು ಚಿಕ್ಕಪುಟ್ಟ ವಿಚಾರಗಳಲ್ಲಿ ವಾದಗಳನ್ನು ತಪ್ಪಿಸುವುದು ಒಳ್ಳೆಯದು. ಇದು ವೃತ್ತಿಪರವಾಗಿ ಒಂದು ಸಕಾರಾತ್ಮಕ ಅವಧಿ. ವಿದ್ಯಾರ್ಥಿಗಳು ಅವರ ಪರಿಶ್ರಮಕ್ಕೆ ಪ್ರತಿಫಲ ಪಡೆಯುತ್ತಾರೆ. ಆದಾಗ್ಯೂ, ನೀವು ಉತ್ತರಾರ್ಧದಲ್ಲಿ ನಿಮ್ಮ ಜೀವನದ ಪ್ರತಿ ಹಂತದಲ್ಲೂ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. 2014ರ ಮುನ್ನೋಟಗಳ ಪ್ರಕಾರ, ಎಚ್ಚರಿಕೆಯಿಂದ ಹಣ ಹೂಡುವುದ ವಿವೇಕಯುತವಾಗಿರಬಹುದು. ಶೀಘ್ರ ಹಣ ಮಾಡುವ ದುರಾಸೆಯಿಂದ ದೂರವಿರಿ. ಉದ್ಯೋಗಸ್ಥರು ಬಹಳ ಎಚ್ಚರಿಕೆಯಿಂದಿರಬೇಕು. ನೀವು ನಿಮ್ಮ ಕೆಲಸ ಬದಲಾಯಿಸಬೇಕಾಗಬಹುದು ಅಥವಾ ಒಂದು ಬೇಡದ ಜಾಗಕ್ಕೆ ನಿಮ್ಮನ್ನು ವರ್ಗ ಮಾಡಬಹುದು. ವಿಷಯಗಳನ್ನು ಸುಧಾರಿಸಲು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಹರಿಯುವ ನೀರಿನಲ್ಲಿ ತೆಂಗಿನಕಾಯಿಗಳನ್ನು ಬಿಡಿ. 2014ರಲ್ಲಿ ಮಕರ ರಾಶಿಯವರ ಭವಿಷ್ಯವನ್ನು ನೋಡೋಣ:
ಮಕರರಾಶಿ ಜಾತಕ 2014 ಜ್ಯೋತಿಷ್ಯ (Makara Jathaka 2014)
ಮಕರ ರಾಶಿಯವರಿಗೆ 2014 ಮಿಶ್ರ ಫಲಿತಾಂಶಗಳನ್ನು ಹೊಂದಿದೆ. ಈ ತಿಂಗಳ ಆರಂಭದಲ್ಲಿ ಗುರು ನಿಮ್ಮ ಐದನೇ ಮನೆಗೆ ಹೋಗುತ್ತಾನೆ. ಹಣಕಾಸಿನ ವಿಷಯಗಳಲ್ಲಿ ಏಳುಬೀಳುಗಳನ್ನು ಕಾಣಬಹುದು. ನೀವು ಸಾಲಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ವಿಶೇಷ ಗಮನ ಹರಿಸಬೇಕಾಗುತ್ತದೆ. ನಿಮ್ಮ ಜಾತಕ 2014ರ ಜ್ಯೋತಿಷ್ಯ ಕುಟುಂಬದ ಸದಸ್ಯರೊಂದಿಗೆ ಕೆಲವು ಭಿನ್ನಾಭಿಪ್ರಾಯಗಳಿರಬಹುದೆಂದು ಹೇಳುತ್ತದೆ. ಅಲ್ಲದೆ, ಆರೋಗ್ಯ ಅಷ್ಟೇನೂ ಉತ್ತಮವಾಗಿರದಿರಬಹುದು. ಆದರೆ ರೋಗಗಳು ನಿಮ್ಮನ್ನು ಹೆಚ್ಚು ಭಾಧಿಸುವುದಿಲ್ಲ. ಕೆಲವು ಭಿನ್ನಾಭಿಪ್ರಾಯಗಳು ಅಥವಾ ನ್ಯಾಯಾಲಯದ ಪ್ರಕರಣಗಳೂ ಉಂಟಾಗಬಹುದಾದ ಸ್ವಲ್ಪ ಸಾಧ್ಯತೆಗಳಿವೆ. ಆದರೆ ಈ ಬಾರಿ ತೊಂದರೆಗಳಿದ್ದರೂ ಕೂಡ ನೀವು ಮೊಕದ್ದಮೆಗಳಲ್ಲಿ ಜಯ ಸಾಧಿಸಬಹುದು. ನಿಮ್ಮ ಶತ್ರುಗಳು ಕೆಲವು ಹಂತದವರೆಗೆ ನಿಮಗೆ ತೊಂದರೆ ನೀಡಬಹುದಾದರೂ ಕೊನೆಯಲ್ಲಿ ಜಯ ನಿಮ್ಮದೇ ಆಗಿರುತ್ತದೆ. ನೀವು ಉತ್ತರಾರ್ಧದ ಅವಧಿಯಲ್ಲಿ ಪ್ರೀತಿಯ ವ್ಯವಹಾರಗಳಲ್ಲಿ ಸುಧಾರಣೆಯನ್ನು ಗಮನಿಸಬಹುದು. ಮದುವೆ ಸುಖ ಶಾಂತಿಯನ್ನು ತರಬಹುದು. ನಿಮ್ಮ ಮನೆಯಲ್ಲಿ ಯಾವುದೇ ಶ್ರೇಯಸ್ಕರ ಸಮಾರಂಭ ಆಯೋಜಿಸಲ್ಪಡಬಹುದು. ನೀವು ಪಾಲುದಾರಿಕೆಯಲ್ಲಿದ್ದಲ್ಲಿ ನೀವು ಲಾಭ ಹೊಂದುತ್ತೀರಿ. 2014ರ ಜಾತಕದ ಪ್ರಕಾರ ಗಳಿಕೆಗಳು ಮತ್ತು ಜ್ಞಾನಗಳೆರಡೂ ಅಭಿವೃದ್ಧಿಯಾಗುತ್ತವೆ. ಒಬ್ಬ ಅರ್ಚಕರಿಗೆ ಹಳದಿ ಬಣ್ಣದ ಬಟ್ಟೆಗಳನ್ನು ದಾನ ಮಾಡುವುದು ನಿಮಗೆ ಪ್ರಯೋಜನಕಾರಿಯೆಂದು ಸಾಬೀತಾಗಬಹುದು. ಈಗ ಕುಂಭರಾಶಿಯವರ ಬಗ್ಗೆ ಮಾತನಾಡಲು ಅವಕಾಶ:
ಕುಂಭರಾಶಿಯವರ ಜಾತಕ 2014 ಜ್ಯೋತಿಷ್ಯ (Kumbha Jathaka 2014)
ಕುಂಭರಾಶಿಯವರು 2014ರಲ್ಲಿ ಒಂದು ಅದ್ಭುತ ಆರಂಭವನ್ನು ಹೊಂದುತ್ತಾರೆ. ನಿಮ್ಮ ಕುಟುಂಬದಲ್ಲಿ ಕೆಲವು ಶ್ರೇಯಸ್ಕರ ಸಮಾರಂಭಗಳು ನಡೆಯಬಹುದು. ಈ ಸಮಯ ಕುಟುಂಬ ಯೋಜನೆಗೂ ಉತ್ತಮ ಸಮಯವೆನ್ನಬಹುದು. ಈ ಸಮಯಾವಧಿ ಶಿಕ್ಷಣಕ್ಕೂ ಅತ್ಯಂತ ಶ್ರೇಯಸ್ಕರವೆಂದು ಹೇಳಬಹುದು. ನಿಮ್ಮ ಜಾತಕ 2014ರ ಪ್ರಕಾರ ದೂರದ ಸ್ಥಳಗಳಿಗೆ ಪ್ರಯಾಣ ಪ್ರಯೋಜನಕಾರಿಯೆಂದು ಸಾಬೀತಾಗಬಹುದು. ವಿಶೇಷವಾಗಿ ಆಧ್ಯಾತ್ಮಿಕ ಯಾತ್ರೆಗಳಿಗೆ ಈ ಸಮಯ ಒಳ್ಳೆಯದಾಗಿದೆ. ನೀವು ಉತ್ತಮ ಆರೋಗ್ಯವನ್ನು ಆನಂದಿಸುವಿರಿ; ಆದರೆ ನಿಮ್ಮ ಆಹಾರದ ಮೇಲೆ ಗಮನವಿರಿಸುವುದು ಅತ್ಯಗತ್ಯವಾಗಿರುತ್ತದೆ. ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದಿರಿ. ನೀವು ಒಂದು ಉತ್ತಮ ಕೆಲಸ ಪಡೆಯಬಹುದು. ತಾರೆಗಳು ಮೇಲೇರುವ ಲಾಭವನ್ನು ಸೂಚಿಸುತ್ತವೆ. ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಇದು ಒಳ್ಳೆಯ ಸಮಯ. ಆದಾಗ್ಯೂ, ನೀವು ದ್ವಿತೀಯಾರ್ಧದಲ್ಲಿ ಕೆಲವು ಅಡಚಣೆಗಳನ್ನು ಎದುರಿಸಬಹುದು. ಕೆಲವರು ಯಾವುದೇ ಕಾರಣವಿಲ್ಲದೆ ನಿಮ್ಮ ವಿರುದ್ಧ ನಿಲ್ಲಬಹುದು. 2014ರ ಜ್ಯೋತಿಷ್ಯದ ಪ್ರಕಾರ ಸಾಲದ ವಿನಿಮಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಕೂಡ ಉಂಟಾಗಬಹುದು. ನೀವು ಯಾವುದೇ ಗಮನಾರ್ಹ ಹೂಡಿಕೆ ಮಾಡುವುದನ್ನು ತಪ್ಪಿಸುವುದು ಒಳ್ಳೆಯದು. ನೀವು ನೀರಿನ ಮಾರ್ಗದಿಂದ ಪ್ರಯಾಣಿಸುತ್ತಿದ್ದಲ್ಲಿ ಸಾಧ್ಯವಾದಷ್ಟೂ ಅದನ್ನು ತಪ್ಪಿಸಲು ಪ್ರಯತ್ನಿಸಿ. ನಕ್ಷತ್ರಗಳ ಋಣಾತ್ಮಕ ಪರಿಣಾಮಗಳನ್ನು ಓಡಿಸಲು ದೇವಾಲಯದಲ್ಲಿ ಅಕ್ಕಿ, ಬೆಲ್ಲ ಮತ್ತು ಕಡಲೆಕಾಳನ್ನು ದಾನ ಮಾಡಿ. ಈಗ ರಾಶಿಚಕ್ರದ ಕೊನೆಯ ರಾಶಿಯಾದ ಮೀನರಾಶಿಯ ಬಗ್ಗೆ ಮಾತನಾಡೋಣ:
ಮೀನ ರಾಶಿ ಜಾತಕ 2014 ಜ್ಯೋತಿಷ್ಯ (Meena Jathaka 2014)
ಮೀನರಾಶಿಯವರಿಗೆ 2014ನೇ ವರ್ಷ ಸಾಕಷ್ಟು ಪ್ರಯೋಜನಕಾರಿಯಾಗುತ್ತದೆ. ನೀವು ಶನಿಯ ಧೈಯ್ಯಾದಿಂದ ಪ್ರಭಾವಿತರಾದರೂ ಗುರುವಿನ ಆಶೀರ್ವಾದ ನಿಮ್ಮೊಂದಿಗಿರುತ್ತದೆ. ಮನೆಯಲ್ಲಿ ಸಾಮರಸ್ಯವಿರುತ್ತದೆ. ನೀವು ಉತ್ತಮ ಆರೋಗ್ಯವನ್ನು ಆನಂದಿಸುವಿರಿ. ಒಂದು ಹೊಸ ಮನೆ ಅಥವಾ ವಾಹನ ಕೊಳ್ಳಲು ಕೂಡ ಸಮಯ ಉತ್ತಮವಾಗಿದೆ. 2014ರ ಜಾತಕದ ನಿಮ್ಮ ಮುನ್ನೋಟಗಳ ಪ್ರಕಾರ, ದ್ವಿತೀಯಾರ್ಧ ಮದುವೆ ಮತ್ತು ಪ್ರೀತಿಗೆ ಉತ್ತಮವೆಂದು ಸಾಬೀತಾಗುತ್ತದೆ. ಆದರೆ ಜುಲೈ ನಂತರ ರಾಹು ನಿಮ್ಮ ಏಳನೇ ಮನೆಗೆ ಹೋಗುವುದರಿಂದ ವೈವಾಹಿಕ ಜೀವನದಲ್ಲಿ ಒತ್ತಡವುಂಟಾಗಬಹುದು. 2014ರ ಜ್ಯೋತಿಷ್ಯದ ಪ್ರಕಾರ ನೀವು ನಿಮ್ಮ ಸ್ವಂತ ವ್ಯವಹಾರದ ಬೆಳವಣಿಗೆಗೆ ಸ್ವಲ್ಪ ಹಣ ಖರ್ಚು ಮಾಡಬಹುದು. ಹಿರಿಯರು ನಿಮಗೆ ಸಹಾಯ ಮಾಡುತ್ತಾರೆ. ನಿಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವಾಗ ನೀವು ಹೊಸತೇನಾದರೂ ಮಾಡಬಹುದು. ತಾರೆಗಳು ಸುಧಾರಿತ ಆದಾಯವನ್ನು ಸೂಚಿಸುತ್ತವೆ. ಆದರೆ ನೀವು ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿದ್ದಲ್ಲಿ ಎಚ್ಚರಿಕೆಯಿಂದಿರುವಂತೆ ನಾನು ಸಲಹೆ ಮಾಡುತ್ತೇನೆ. ವಿದ್ಯಾರ್ಥಿಗಳಿಗೆ 2014ರ ಜಾತಕ ಸಾಕಷ್ಟು ಅನುಕೂಲಕರವಾಗಿದೆ. ಆದರೆ, ಉನ್ನತ ಶಿಕ್ಷಣಕ್ಕಾಗಿ ಹೋಗಲು ಯೋಜಿಸುತ್ತಿರುವವರಿಗೂ ಈ ಸಮಯ ಸಕಾರಾತ್ಮಕವಾಗಿರುತ್ತದೆ. ಹೆಚ್ಚು ಪ್ರಯೋಜನಗಳನ್ನು ಪಡೆಯಲು ನಿಮ್ಮ ಕಿಸೆಯಲ್ಲಿ ಒಂದು ಬೆಳ್ಳಿಯ ತುಂಡನ್ನು ಇಟ್ಟುಕೊಂಡಿರಿ.
ಪಂಡಿತ್ ಹನುಮಾನ್ ಮಿಶ್ರಾರವರಿಂದ
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
AstroSage TVSubscribe
- Rashifal 2025
- Horoscope 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ராசி பலன் 2025
- రాశిఫలాలు 2025
- ರಾಶಿಭವಿಷ್ಯ 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025