ತುಲಾ ರಾಶಿಯಲ್ಲಿ ಬುಧ ಸಂಚಾರ ( 22nd September 2021 )

ಲ್ಯಾಟಿನ್ ಮತ್ತು ಸ್ಪ್ಯಾನಿಷ್ ಭಾಷೆಯಲ್ಲಿ ಬುಧ ಗ್ರಹವನ್ನು - ಮುರ್ಕ್ಯೂರಿಯೋ, ಗ್ರೀಕ್ ಭಾಷೆಯಲ್ಲಿ ಎಮರಿಸ್ ಎಂದು ಕರೆಯಲಾಗುತ್ತದೆ. ಅಂದರೆ ಜ್ಞಾನ, ಬುದ್ಧಿ, ಇಂದ್ರಿಗಳು, ಮೆದುಳಿನ ಶಕ್ತಿ ಇತ್ಯಾದಿ. ಇದು ಮೆದುಳು ಮತ್ತು ಮನಸ್ಸಿಗೆ ಸಂಬಂಧಿಸಿದೆ. ವೈದಿಕ ಜ್ಯೋತಿಷ್ಯದಲ್ಲಿ ಬುಧವು ಗುರು ಮತ್ತು ಚಂದ್ರನಿಗೆ ಸಂಬಂಧಿಸಿದೆ ಎಂದು ಹೇಳಲಾಗಿದೆ. ಆದ್ದರಿಂದ ಇದು ಎರಡೂ ಗ್ರಹಗಳ ವಿಶೇಷತೆಗಳನ್ನು ಹೊಂದಿದೆ. ಬುಧ ಗ್ರಹವು ಸಂವಹನ ಕೌಶಲ್ಯ, ವಿಶ್ಲೇಷಣಾತ್ಮಕ ಸಾಮರ್ಥ್ಯಗಳು ಮತ್ತು ಬುದ್ಧಿಯ ಪ್ರಮುಖ ಅಂಶವಾಗಿದೆ. ಆದ್ದರಿಂದ ಇದು ವಕೀಲರು, ಮಾರಾಟಗಾರರು, ಕಲಾವಿದರು ಮತ್ತು ವಿಜ್ಞಾನಿಗಳ ವೃತ್ತಿಯ ಮೇಲೆ ಪ್ರಮುಖ ಪರಿಣಾಮವನ್ನು ಬೀರುತ್ತದೆ.

ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಸಮಸ್ಯೆಗಳ ಪರಿಹಾರವನ್ನು ತಿಳಿಯಲು ಪರಿಣಿತ ಜ್ಯೋತಿಷಿಗಳೊಂದಿಗೆ ಚಾಟ್ ಮತ್ತು ಕರೆಯಲ್ಲಿ ಮಾತನಾಡಿ

ಬುಧವಾರ ಬುಧ ಗ್ರಹಕ್ಕೆ ಸಮರ್ಪಿಸಲಾಗಿದೆ. ಬುಧದ ಜ್ಯೋತಿಷ್ಯ ಬಣ್ಣ ಹಸಿರು ಮತ್ತು ತಿಳಿ ಹಸಿರು. ಬುಧ ಗ್ರಹಕ್ಕೆ ಸಂಬಂಧಿಸಿದ ರತ್ನ ಪಚ್ಚೆ. ನಿಜವಾದ ದೃಷ್ಟಿಯಲ್ಲಿ ಬುಧವು ಬೂದು ಬಣ್ಣವನ್ನು ಹೊಂದಿರುತ್ತದೆ. ಇದು ಕಲ್ಲು ಮತ್ತು ಧೂಳಿನ ಗ್ರಹವಾಗಿದೆ. ಬುಧ ಗ್ರಹವು ಮಿಥುನ ಮತ್ತು ಕನ್ಯಾ ರಾಶಿಯ ಅಧಿಪತಿ, ಕಾಲಪುರುಷ ಜಾತಕದಲ್ಲಿ ಇದು ಮೂರನೇ ಮತ್ತು ಆರನೇ ಮನೆಯಾಗಿದೆ. ಮೂರನೇ ಮನೆ ಧೈರ್ಯ, ಸಂವಹನ ಮತ್ತು ಸಹೋದರ ಸಹೋದರಿಯರನ್ನು ತೋರಿಸುತ್ತದೆ ಮತ್ತು ಆರನೇ ಮನೆ ಆರೋಗ್ಯದ ಮನೆಯಾಗಿದೆ. ಬುಧ ಗ್ರಹವು ಸೂರ್ಯ ಮತ್ತು ಶುಕ್ರನೊಂದಿಗೆ ಸ್ನೇಹವನ್ನು ಹೊಂದಿರುತ್ತದೆ ಮತ್ತು ಚಂದ್ರನೊಂದಿಗೆ ವೈರತ್ವವನ್ನು ಹೊಂದಿರುತ್ತದೆ. ಇದು ಶನಿ, ಮಂಗಳ ಮತ್ತು ಗುರುವಿನೊಂದಿಗೆ ತಟಸ್ಥವಾಗಿದೆ. ಬುಧ ಗ್ರಹವನ್ನು ಸೌರಮಂಡಲದ ಅತ್ಯಂತ ಚಿಕ್ಕ ಗ್ರಹವೆಂದು ಪರಿಗಣಿಸಲಾಗಿದೆ ಮತ್ತು ಇದು ಭೂಮಿಯ ಗ್ರಾತ್ರಕ್ಕಿಂತ ⅓ ಪಟ್ಟು ಚಿಕ್ಕದಾಗಿದೆ. ಇದು ಸೂರ್ಯನಿಗೆ ಅತ್ಯಂತ ನಿಕಟವಾದ ಗ್ರಹವೆಂದು ಪರಿಗಣಿಸಲಾಗಿದೆ. ತುಲಾ ರಾಶಿಯಲ್ಲಿ ಬುಧ ಸಂಚಾರವು ಮಾರ್ಕೆಟಿಂಗ್ ವೃತ್ತಿಪರರು, ವ್ಯಾಪಾರಿಗಳು ಮತ್ತು ಸೃಜನಶೀಲ ಜನರಿಗೆ ಉತ್ತಮ ಸಮಯವೆಂದು ಸಾಬೀತುಪಡಿಸುತ್ತದೆ.

ಈ ಗ್ರಹವು ವ್ಯಾಪಾರ ಮತ್ತು ಸಂವಹನದ ಅಂಶವಾಗಿದೆ. ಜ್ಯೋತಿಷ್ಯದಲ್ಲಿ ಬುಧವನ್ನು ದೇವರ ಸಂದೇಶವಾಹಕ ಎಂದು ಪರಿಗಣಿಸಲಾಗಿದೆ. ಇದು ಎಲ್ಲಾ ರೀತಿಯ ಸಂವಹನ ಚಟುವಟಿಕೆಗಳು ಅಥವಾ ಲಿಖಿತ ಕೃತಿಗಳು, ಸ್ಪಷ್ಟ ಚಿಂತನೆ, ಸೃಜನಶೀಲ ಕೌಶಲ್ಯ, ವ್ಯಾಪಾರ ಜ್ಞಾನ, ಪ್ರಯಾಣ, ಸಾಫ್ಟ್ವೇರ್, ಪರಿಣತಿ ಮತ್ತು ಗಣಿತದ ಮೇಲೆ ಪರಿಣಾಮ ಬೀರುತ್ತದೆ. ಬುಧವು ನಿಮ್ಮ ನಿಯಮಿತ ಜೀವನವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಸಹ ನಿಯಂತ್ರಿಸುತ್ತದೆ. ತುಲಾ ರಾಶಿಯಲ್ಲಿ ಬುಧನ ಉಪಸ್ಥಿತಿಯು ಜನರ ನವೀನ ಆಲೋಚನೆಗಳು, ಮಾತನಾಡುವ ಸಾಮರ್ಥ್ಯ ಮತ್ತು ಲೇಖನದ ಕೌಶಲ್ಯವನ್ನು ಹೆಚ್ಚಿಸುತ್ತದೆ. ತುಲಾ ರಾಶಿಯಲ್ಲಿ ಬುಧನ ಸಂಚಾರವು ಕೆಲವು ಹೊಸ ಬದಲಾವಣೆಗಳನ್ನು ತರಬಹುದು. ಉದಾಹರಣೆಗೆ - ಮಹಿಳೆಯರಿಗೆ ಸಂಬಂಧಿಸಿದ ಹೊಸ ವಸ್ತುಗಳು ಮಾರುಕಟ್ಟೆಯಲ್ಲಿ ಬರಬಹುದು. ಈ ಸಮಯದಲ್ಲಿ ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಸುದ್ದಿಗಳನ್ನು ಸಹ ಪಡೆಯಬಹುದು. ವ್ಯಾಪಾರದ ಬಗ್ಗೆ ಮಾತನಾಡಿದರೆ, ಕ್ಯಾಸಿನೊ, ವೈನ್, ಐಷಾರಾಮಿ ವಾಹನ, ಸುಗಂಧ ದ್ರವ್ಯ, ಆಭರಣ, ಬಟ್ಟೆ ಮತ್ತು ಜವಳಿ ಮಾರುಕಟ್ಟೆಯಲ್ಲಿ ಉತ್ಕರ್ಷ ಉಂಟಾಗಬಹುದು. ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮ ಸಂವಹನದಲ್ಲೂ ಬೆಳವಣಿಗೆಯನ್ನು ಕಾಣಬಹುದು.

ಬುಧ ಸಂಚಾರವು 22 ಸೆಪ್ಟೆಂಬರ್ 2021 ರಂದು ಬೆಳಿಗ್ಗೆ, 7:52 ಗಂಟೆಗೆ ಸಂಭವಿಸಲಿದೆ ಮತ್ತು 2 ಅಕ್ಟೋಬರ್ 2021 ರಂದು ಮಧ್ಯಾಹ್ನ 3:23 ಗಂಟೆಗೆ ಕನ್ಯಾ ರಾಶಿಗೆ ಗೋಚರಿಸುತ್ತದೆ.

ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ

मेष / ಮೇಷ ರಾಶಿ

ಮೇಷ ರಾಶಿಚಕ್ರದ ಸ್ಥಳೀಯರಿಗೆ ಬುಧ ದೇವ ಮೂರನೇ ಮತ್ತು ಆರನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಮದುವೆ ಮತ್ತು ಪಾಲುದಾರಿಕೆಯ ಏಳನೇ ಮನೆಗೆ ಸಾಗುತ್ತದೆ. ಈ ಸಂಚಾರದ ಸಮಯದಲ್ಲಿ ಬುಧವು ಮೇಷ ರಾಶಿಚಕ್ರದ ಸ್ಥಳೀಯರಿಗೆ ಅದೃಷ್ಟವನ್ನು ತರುತ್ತದೆ. ನಿಮ್ಮ ಮಕ್ಕಳ ಕಡೆಯಿಂದ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ನಿಮ್ಮ ಮಕ್ಕಳು ನಿಮಗೆ ಸಂತೋಷವನ್ನು ನೀಡುತ್ತಾರೆ. ಮಕ್ಕಳನ್ನು ಹೊಂದಲು ಬಯಸುತ್ತಿರುವ ದಂಪತಿಗಳು ಈ ಸಮಯದಲ್ಲಿ ಒಳ್ಳೆಯ ಸುದ್ದಿಯನ್ನು ಪಡೆಯಬಹುದು ವೃತ್ತಿಪರವಾಗಿ ನಿಮ್ಮ ಕೆಲಸದ ಹೊರೆ ಹೆಚ್ಚಾಗುತ್ತದೆ ಮತ್ತು ಈ ಸಮಯದಲ್ಲಿ ನಿಮ್ಮ ಪ್ರದರ್ಶನವು ಸಹ ಉತ್ತಮವಾಗಿರುತ್ತದೆ, ಈ ಕಾರಣದಿಂದಾಗಿ ನಿಮಗೆ ಹೊಸ ಜವಾಬ್ದಾರಿಗಳನ್ನು ನೀಡಲಾಗುತ್ತದೆ. ಪರಿಣಾಮವಾಗಿ ಈ ಸಮಯದಲ್ಲಿ ನೀವು ಕೆಲವು ಚಿಂತೆಗಳಿಗೆ ಒಳಗಾಗಬಹುದು. ನಿಮ್ಮ ಸಹೋದ್ಯೋಗಿಗಳೊಂದಿಗೆ ಕೆಲವು ಭಿನ್ನಾಭಿಪ್ರಾಯಗಳು ಉದ್ಭವಿಸಬಹುದು. ಆದ್ದರಿಂದ ಆಂತರಿಕ ರಾಜಕೀಯದಲ್ಲಿ ನಿಮ್ಮನ್ನು ತೊಡಗಿಸಿಕಿಕೊಳ್ಳಬೇಡಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಈ ಸಂಚಾರವು ನಿಮ್ಮ ಸಂವಹನ ಕೌಶಲ್ಯವನ್ನು ಸುಧಾರಿಸುತ್ತದೆ ಮತ್ತು ನಿಮ್ಮ ಆಲೋಚನೆಗಳನ್ನು ಸಂಘಟಿಸಲು ಮತ್ತು ನಿಮ್ಮ ಬುದ್ಧಿವಂತಿಕೆಯ ಕೌಶಲ್ಯಗಳಿಂದ ಇತರರ ಮೇಲೆ ಪರಿಣಾಮ ಬೀರಲು ಸಹ ಈ ಸಮಯ ಉತ್ತಮವಾಗಿರುತ್ತದೆ. ಈ ರಾಶಿಚಕ್ರದ ಕೆಲವು ಜನರು ಈ ಸಮಯದಲ್ಲಿ ಹೊಸ ವ್ಯಾಪಾರವನ್ನು ಆರಂಭಿಸಬಹುದು. ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ನಿಮ್ಮನ್ನು ಆರೋಗ್ಯವಾಗಿಡಲು ನೀವು ಪ್ರಯತ್ನಿಸಬೇಕು ಮತ್ತು ಸಮತೋಲಿತ ಆಹಾರವನ್ನು ಸೇವಿಸಬೇಕು .

ಪರಿಹಾರ - ವಿಷ್ಣು ದೇವರನ್ನು ಪೂಜಿಸುವುದು ನಿಮಗೆ ಉತ್ತಮ.

वृषभ / ವೃಷಭ ರಾಶಿ

ವೃಷಭ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಎರಡನೇ ಮತ್ತು ಐದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಸಾಲ, ಶತ್ರು ಮತ್ತು ರೋಗಗಳ ಆರನೇ ಮನೆಗೆ ಸಾಗಲಿದೆ. ಈ ಸಂಚಾರದ ಸಮಯದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಈ ರಾಶಿಚಕ್ರದ ಸ್ಥಳೀಯರು ತಮ್ಮ ಸಂವಹನ ಕೌಶಲ್ಯದ ಮೇಲೆ ಕೆಲಸ ಮಾಡಲು ಉತ್ತಮ ಅವಕಾಶವನ್ನು ಪಡೆಯುತ್ತಾರೆ. ಈ ಸಮಯದಲ್ಲಿ ಕೆಲವು ಸ್ಥಳೀಯರು ಹೊಸ ಉದ್ಯೋಗವನ್ನು ಪಡೆಯಬಹುದು. ಬುಧದ ಈ ಸಂಚಾರದ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ. ವಿಶೇಷವಾಗಿ ನಿಮ್ಮ ಕುಟುಂಬದ ಸದಸ್ಯರು ಮತ್ತು ಮಕ್ಕಳ ಮೇಲೆ ಹೆಚ್ಚು ಹಣ ಖರ್ಚಾಗಬಹುದು. ಆದ್ದರಿಂದ ನಿಮ್ಮ ವೆಚ್ಚಗಳನ್ನು ನಿಯಂತ್ರಿಸಲು ಮತ್ತು ಭವಿಷ್ಯಕ್ಕಾಗಿ ಹಣವನ್ನು ಉಳಿಸಲು ನಿಮಗೆ ಸೂಚಿಸಲಾಗಿದೆ. ನೀವು ಯಾವುದೇ ಲೋನ್ ಅಥವಾ ಸಾಲವನ್ನು ತೆಗೆದುಕೊಂಡಿದ್ದರೆ, ಈ ಸಮಯದಲ್ಲಿ ಅದನ್ನು ಮರು ಪಾವತಿಸಲು ತುಂಬಾ ಕಷ್ಟವಾಗಬಹುದು. ಪ್ರೀತಿಯ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ನಡುವೆ ಉತ್ತಮ ಸಾಮರಸ್ಯ ಹೊಂದಿರುತ್ತೀರಿ ಎಂಬುದು ಸ್ಪಷ್ಟವಾಗಿದೆ. ಯಾವುದೇ ಕಾರಣದಿಂದಾಗಿ ನಿಮ್ಮಿಬ್ಬರ ನಡುವೆ ಅಂತರವಿದ್ದರೆ, ಪರಿಸ್ಥಿತಿಗಳನ್ನು ನಿವಾರಿಸಲು ಇದು ಅತ್ಯಂತ ಉತ್ತಮ ಸಮಯವಾಗಿರುತ್ತದೆ. ಸಮಾಜದಲ್ಲಿ ನಿಮ್ಮ ಹೆಸರು, ಖ್ಯಾತಿ ಮತ್ತು ಗೌರವ ಹೆಚ್ಚಾಗುತ್ತದೆ. ವಿವಾಹಿತ ಜನರು ಈ ಸಮಯದಲ್ಲಿ ತಮ್ಮ ಮಕ್ಕಳಿಂದ ಸಂತೋಷವನ್ನು ನಿರೀಕ್ಷಿಸಬಹುದು, ಏಕೇನರೆ ಮಕ್ಕಳು ತಮ್ಮ ಕ್ಷೇತ್ರದಲ್ಲಿ ಪ್ರಗತಿಯನ್ನು ಪಡೆಯುತ್ತಾರೆ. ಆರೋಗ್ಯದ ಬಗ್ಗೆ ಮಾತನಾಡಿದರೆ, ಸಾರಾಯಿ ಕುಡಿಯುವುದು ನಿಮಗೆ ಉತ್ತಮವಲ್ಲ, ಈ ಸಮಯದಲ್ಲಿ ಎದೆ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳು ನಿಮ್ಮ ಚಿಂತೆಯ ವಿಷಯವಾಗಬಹುದು.

ಪರಿಹಾರ - ಮೂರು, ಆರು ಮತ್ತು ಹದಿನಾಲ್ಕು ಮುಖಿ ರುದ್ರಾಕ್ಷವನ್ನು ಧರಿಸುವುದು ನಿಮಗೆ ಉತ್ತಮ.


ಜಾತಕದಲ್ಲಿರುವ ರಾಜ ಯೋಗದ ಬಗೆಗಿನ ಎಲ್ಲಾ ಮಾಹಿತಿಯನ್ನು ಪಡೆಯಿರಿ

मिथुन / ಮಿಥುನ ರಾಶಿ

ಮಿಥುನ ರಾಶಿಚಕ್ರದ ಜನರಿಗೆ ಬುಧ ಗ್ರಹವು ಮೊದಲನೇ ಮತ್ತು ನಾಲ್ಕನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಪ್ರೀತಿ, ಪ್ರಣಯ ಮತ್ತು ಮಕ್ಕಳ ಐದನೇ ಮನೆಗೆ ಗೋಚರಿಸುತ್ತದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಆಲೋಚನೆಗಳನ್ನು ನೀವು ವ್ಯವಸ್ಥಿತವಾಗಿ ವ್ಯಕ್ತಪಡಿಸಲು ಬಯಸುತ್ತೀರಿ ಮತ್ತು ಹೆಚ್ಚಿನ ಸ್ಪಷ್ಟತೆಗಾಗಿ ಆಲೋಚನೆಗಳನ್ನು ಬರೆಯಬಹುದು. ಈ ಸಮಯದಲ್ಲಿ ನಿಮ್ಮ ಶಕ್ತಿಯ ಮಟ್ಟ ಮತ್ತು ಉತ್ಸಾಹದಲ್ಲಿ ಹೆಚ್ಚಳವಾಗುತ್ತದೆ. ಆದಾಗ್ಯೂ, ನೀವು ನಿಮ್ಮ ಅತಿಯಾದ ಆತ್ಮವಿಶ್ವಾಸವನ್ನು ನಿಯಂತ್ರಣದಲ್ಲಿಡಬೇಕು. ಏಕೆಂದರೆ ಇದರಿಂದ ನಿಮ್ಮ ಸಹೋದರ ಸಹೋದರಿಯರೊಂದಿಗೆ ನಿಮ್ಮ ಸಂಘರ್ಷವಾಗಬಹುದು. ಈ ಸಮಯದಲ್ಲಿ ನೀವು ಹೆಚ್ಚು ಹಣವನ್ನು ಗಳಿಸಲು ಅಪಾಯಗಳತ್ತ ಸಹ ಒಲವು ತೋರಬಹುದು. ಇದಲ್ಲದೆ, ಬೆಟ್ಟಿಂಗ್ ಬಗ್ಗೆಯೂ ಸಹ ನೀವು ಒಲವು ತೋರಬಹುದು. ಆದರೆ ಯಾವುದೇ ನಿರ್ಧಾರವನ್ನು ನೀವು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಬಕು. ಏಕೆಂದರೆ ಅತಂಹ ಕೆಲಸಗಳಲ್ಲಿ ಲಾಭವನ್ನು ಪಡೆಯುವ ಬದಲು ದೊಡ್ಡ ನಷ್ಟವಾಗುವ ಸಾಧ್ಯತೆಯೂ ಇರಬಹುದು. ವೃತ್ತಿಪರವಾಗಿ ಕೆಲವು ಕಂಪನಿಗಳೊಂದಿಗೆ ಹೊಸ ಒಪ್ಪಂದಗಳು ಮತ್ತು ಹೊಸ ಉದ್ಯಮಗಳನ್ನು ಆರಂಭಿಸುವ ಸಾಧ್ಯತೆಯೂ ಇದೆ ಮತ್ತು ಈ ಹಂತದ ಸಮಯದಲ್ಲಿ ನೀವು ವ್ಯಾಪಾರ ಪ್ರಸ್ತಾಪಗಳಲ್ಲಿ ಹೊಸ ಯೋಜನೆಗಳತ್ತ ಗಮನ ಹರಿಸುವಿರಿ. ಸಂಬಂಧಗಳ ಮೇಲೆ ದೃಷ್ಟಿ ಹಾಕಿದರೆ ನಿಮ್ಮ ಕುಟುಂಬ ಮತ್ತು ನಿಕಟ ಸ್ನೇಹಿತರೊಂದಿಗೆ ನೀವು ಉತ್ತಮ ಗುಣಮಟ್ಟದ ಸಮಯವನ್ನು ಕಳೆಯುತ್ತೀರಿ ಮತ್ತು ಪ್ರತಿಯೊಂದು ರೀತಿಯ ಮೋಜಿನ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ಮಿಥುನ ರಾಶಿಚಕ್ರದ ಜನರು ವೈಯಕ್ತಿಕ ಜೀವನದಲ್ಲಿ ಕೆಲವು ಮಾನಸಿಕ ಒತ್ತಡಗಳನ್ನು ಅನುಭವಿಸಬಹುದು, ಇದಲ್ಲದೆ ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ನೀವು ಬಗ್ಗೆ ವಿಶೇಷ ಕಾಳಜಿವಹಿಸಬೇಕು.

ಪರಿಹಾರ - ಹಸಿರು ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವುದು ನಿಮಗೆ ಉತ್ತಮ.

कर्क / ಕರ್ಕ ರಾಶಿ

ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಮೂರನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ನಿಮ್ಮ ಮನೆ, ಸಂಪತ್ತು ಮತ್ತು ತಾಯಿಯ ನಾಲ್ಕನೇ ಮನೆಗೆ ಪ್ರವೇಶಿಸಲಿದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಸಂವಹನ ಕೌಶಲ್ಯ ಹೆಚ್ಚಾಗುತ್ತದೆ ಮತ್ತು ಇದು ಸಭೆಗಳನ್ನು ಉದ್ದೇಶಿಸಿ ಮಾತನಾಡಲು, ಸಂದೇಶಗಳನ್ನು ಕಳುಹಿಸಲು ಅಥವಾ ಪ್ರೀತಿಪಾತ್ರರಿಗೆ ನಿಮ್ಮ ಮಾತುಗಳನ್ನು ವ್ಯಕ್ತಪಡಿಸುವಲ್ಲಿ ನಿಮಗೆ ಸಹಾಯ ಮಾಡುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ಶಾಂತ ಮತ್ತು ಸಂಯಮದ ಸ್ವಭಾವದೊಂದಿಗೆ ಕುಟುಂಬದ ವಿಷಯಗಳತ್ತ ಗಮನ ಹರಿಸುವ ಮತ್ತು ಪರಿಸ್ಥಿತಿಗಳನ್ನು ನಿಭಾಯಿಸುವ ಅಗತ್ಯವಿದೆ. ವಿಶೇಷವಾಗಿ ನಿಮ್ಮ ಸಹೋದರ-ಸಹೋದರಿಯರಿಯರೊಂದಿಗೆ ಭಿನ್ನಾಭಿಪ್ರಾಯ ಅಥವಾ ವಿವಾದದ ಪರಿಸ್ಥಿತಿಯನ್ನು ತಪ್ಪಿಸಬೇಕು. ನಿಮ್ಮ ವೆಚ್ಚಗಳನ್ನು ನಿಯಂತ್ರಿಸಿ ಮತ್ತು ನೀವು ಎಷ್ಟು ಖರ್ಚು ಮಾಡುತ್ತಿದ್ದೀರಿ ಎಂಬುದರ ಬಗ್ಗೆ ಗಮನ ಹರಿಸಿ. ಈ ಸಮಯದಲ್ಲಿ ಯಾರಿಗೂ ಸಾಲ ನೀಡಬೇಡಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಈ ಅವಧಿಯಲ್ಲಿ ನೀವು ವಾಹನವನ್ನು ಖರೀದಿಸುವ ಸಾಧ್ಯತೆ ಇದೆ. ಕೆಲವು ಸ್ಥಳೀಯರು ಹೊಸ ಮನೆಯನ್ನು ಖರೀದಿಸಲು ಸಹ ಆಲೋಚನೆ ಮಾಡಬಹುದು. ಈ ದಿಕ್ಕಿನಲ್ಲಿ ನೀವು ಹೂಡಿಕೆ ಮಾಡಬಹುದು. ಕೆಲವು ಸ್ಥಳೀಯರು ತಮ್ಮ ಮನೆ ಅಥವಾ ಕಚೇರಿಯನ್ನು ನವೀಕರಿಸಲು ಸಹ ಹಣವನ್ನು ಹೂಡಿಕೆ ಮಾಡಬಹುದು.

ಕುಟುಂಬ ಜೀವನದ ಮೇಲೆ ದೃಷ್ಟಿ ಹಾಕಿದರೆ, ನಿಮ್ಮ ಕುಟುಂಬದೊಂದಿಗೆ ನೀವು ಕೆಲವು ಸಮಯವನ್ನು ಕಳೆಯುವಿರಿ, ವಿಶೇಷವಾಗಿ ನಿಮ್ಮ ತಾಯಿಯೊಂದಿಗೆ. ಅವರ ಪ್ರೀತಿ ಮತ್ತು ಸ್ನೇಹವು ನಿಮಗೆ ಮಾನಸಿಕ ಶಾಂತಿಯನ್ನು ಒದಗಿಸುತ್ತದೆ. ಈ ಸಮಯದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಸಹ ನೀವು ಉತ್ತಮ ಸಮಯವನ್ನು ಕಳೆಯುತ್ತೀರಿ. ನಿಮ್ಮ ಪ್ರೀತಿಸುತ್ತಿರುವ ವ್ಯಕ್ತಿಯೊಂದಿಗೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದು. ಈ ಸಮಯದಲ್ಲಿ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ಪ್ರತಿಯೊಂದು ಕೆಲಸದಲ್ಲಿ ನಿಮ್ಮ ಅತ್ಯುತ್ತಮವಾದದ್ದನ್ನು ನೀಡಲು ಪ್ರಯತ್ನಿಸಿ. ನೀವು ಹಣ, ಖ್ಯಾತಿ ಮತ್ತು ಪ್ರತಿಯನ್ನು ಪಡೆಯುವ ಸಮಯ ಇದು. ಈ ಸಮಯದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ತೊಂದರೆಗೊಳಿಸಬಹುದು ಆದ್ದರಿಂದ ನಿಯಮಿತವಾಗಿ ವ್ಯಾಯಾಮ ಮಾಡಿ ಮತ್ತು ಅರೋಗ್ಯ ಮತ್ತು ಸಮತೋಲಿತ ಆಹಾರವನ್ನು ಸೇವಿಸಿ.

ಪರಿಹಾರ - ಮನೆಯಲ್ಲಿ ಮನಿ ಪ್ಲಾಂಟ್ ಅಥವಾ ಹಸಿರು ಗಿಡಗಳನ್ನು ನೆಡುವುದು ನಿಮಗೆ ಉತ್ತಮ.

सिंह / ಸಿಂಹ ರಾಶಿ

ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಹನ್ನೊಂದನೇ ಮತ್ತು ಎರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಧೈರ್ಯ, ಅಲ್ಪ ಪ್ರಯಾಣ ಮತ್ತು ಲೇಖನದ ಮೂರನೇ ಮನೆಗೆ ಸಾಗುತ್ತದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಧ್ವನಿ ಮತ್ತು ಸಂವಹನದಲ್ಲಿ ಸ್ಪಷ್ಟತೆ ಮತ್ತು ನಿಖರತೆಯನ್ನು ಕಾಣಲಾಗುತ್ತದೆ. ಈ ಸಂಚಾರವು ನಿಮಗೆ ಹಣಕಾಸಿನ ಲಾಭವನ್ನು ನೀಡುತ್ತದೆ, ಆದರೆ ಯಾವುದೇ ಹೂಡಿಕೆ ಮಾಡುವ ಮೊದಲು ಜಾಗರೂಕರಾಗಿರುವ ಅಗತ್ಯವಿದೆ. ಇದರಿಂದ ನೀವು ಹೂಡಿಕೆಗೆ ಸಂಬಂಧಿಸಿದ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಎಲ್ಲಾ ಗಮನವನ್ನು ನೀವು ಸಂವಹನದ ಮೇಲೆ ಕೇಂದ್ರೀಕರಿಸಬಹುದು ಮತ್ತು ಈ ಸಮಯದಲ್ಲಿ ಸೋಶಿಯಲ್ ಮೀಡಿಯ ಪ್ಲಾಟ್ಫಾರ್ಮ್ ಅನ್ನು ಹೆಚ್ಚು ಬಳಸಬಹುದು. ಈ ಸಂಚಾರದ ಸಮಯದಲ್ಲಿ ಅಲ್ಪ ದೂರದ ಪ್ರಯಾಣಗಳ ಸಾಧ್ಯತೆಯೂ ಇದೆ. ನಿಮ್ಮ ಕೌಶಲ್ಯ ಮತ್ತು ಉತ್ತಮ ಸ್ಮರಣೆಗೆ ನೀವು ಜನರಿಂದ ಮೆಚ್ಚುಗೆಯನ್ನು ಪಡೆಯುತ್ತೀರಿ. ಆದ್ದರಿಂದ ಯಾವುದೇ ಕೆಲಸವನ್ನು ಸಕಾರಾತ್ಮಕತೆಯೊಂದಿಗೆ ಆರಂಭಿಸಲು ನಿಮಗೆ ಸಲಹೆ ನೀಡಲಾಗಿದೆ. ಇದರಿಂದಾಗಿ ನೀವು ಯಶಸ್ಸು ಪಡೆಯುತ್ತೀರಿ. ನೀವು ಆಧ್ಯಾತ್ಮಿಕ ಅಥವಾ ಧಾರ್ಮಿಕ ಚಟುವಟಿಕೆಗಳಲ್ಲೂ ಭಾಗವಹಿಸಬಹುದು. ನೀವು ತುಂಬಾ ಸಮಯದಿಂದ ಹುಡುಕುತ್ತಿರುವ ನಿಮ್ಮ ಮನಸ್ಸಿನ ಶಾಂತಿಯನ್ನು ನಿಮಗೆ ನೀಡುತ್ತದೆ. ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ರಾಶಿಚಕ್ರದ ಕೆಲವು ಜನರು ಒತ್ತಡಕ್ಕೆ ಬಲಿಯಾಗಬಹುದು. ನಿಮ್ಮ ಬುದ್ಧಿ ಮತ್ತು ಹೃದಯವನ್ನು ಸಮತೋಲಿತಗೊಳಿಸಲು ಯೋಗ ಮತ್ತು ಧ್ಯಾನವನ್ನು ಆಶ್ರಯಿಸಬಹುದು

ಪರಿಹಾರ - ಹಸಿರು ಬಟ್ಟೆಗಳನ್ನು ಧರಿಸುವುದು ನಿಮಗೆ ಉತ್ತಮ.

कन्या / ಕನ್ಯಾ ರಾಶಿ

ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಬುಧ ದೇವ ಹತ್ತನೇ ಮತ್ತು ಮೊದಲನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಸಂವಹನ, ಕುಟುಂಬ ಮತ್ತು ಧ್ವನಿಯ ಎರಡನೇ ಮನೆಗೆ ಗೋಚರಿಸಲಿದೆ. ಈ ಸಂಚಾರದ ಸಮಯದಲ್ಲಿ ನೀವು ಅನುಕೂಲಕರ ಸಮಯವನ್ನು ಆನಂದಿಸುವಿರಿ. ಏಕೆಂದರೆ ನಿಮ್ಮ ಕುಟುಂಬದೊಂದಿಗೆ ಕಳೆಯಲು ನೀವು ಉತ್ತಮ ಗುಣಮಟ್ಟದ ಸಮಯವನ್ನು ಹೊಂದಿರುತ್ತೀರಿ ಮತ್ತು ಕುಟುಂಬದ ಸದಸ್ಯರನ್ನು ನೀವು ಚೆನ್ನಾಗಿ ನೋಡಿಕೊಳ್ಳುತ್ತೀರಿ ಮತ್ತು ಅವರ ಅಗತ್ಯಗಳಿಗೆ ಹಣಕಾಸು ಖರ್ಚು ಮಾಡಲು ಹಿಂಜರಿಯುವಿದಿಲ್ಲ. ಈ ಸಮಯದಲ್ಲಿ ನಿಮ್ಮ ಧ್ವನಿಯತ್ತ ಗಮನ ಹರಿಸುವ ಮತ್ತು ಕಠೋರ ಪದಗಳನ್ನು ಬಳಸುವುದನ್ನು ತಪ್ಪಿಸುವ ಅಗತ್ಯವಿದೆ. ಆರ್ಥಿಕವಾಗಿ ಜಾಗರೂಕರಾಗಿರಿ ಮತ್ತು ಯೋಜನೆಗಳು ಮತ್ತು ಸರಿಯಾದ ಬಜೆಟ್ ಯೋಜನೆಯನ್ನು ತಯಾರಿಸಿ ಖರ್ಚು ಮಾಡಿ. ನೀವು ಬುದ್ಧಿವಂತರಾಗಿದ್ದರೆ, ಬುದ್ಧಿಯನ್ನು ಸರಿಯಾಗಿ ಬಳಸುವ ಮೂಲಕ ನೀವು ಹಣಕಾಸು ಗಳಿಸಬಹದು. ಈ ಸಮಯದಲ್ಲಿ ಗಣಿತ, ಭೌತಶಾಸ್ತ್ರ, ಸಂಖ್ಯಾಶಾಸ್ತ್ರ ಮತ್ತು ಅರ್ಥಶಾಸ್ತ್ರದಂತಹ ವಿಷಯಗಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಮತ್ತು ಅವರು ತಮ್ಮ ವಿಷಯಗಳನ್ನು ಅರ್ತಿಮಾಡಿಕೊಳ್ಳುವಲ್ಲಿ ಸಾಮರ್ತ್ಯರಾಗುತ್ತಾರೆ. ಈ ಕ್ಷೇತ್ರಗಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ಮಾಡುತ್ತಾರೆ. ವೃತ್ತಿಪರವಾಗಿ ನೀವು ಉತ್ತಮ ಅವಕಾಶಗಳನ್ನು ಪಡೆಯುತ್ತೀರಿ, ಇದು ನಿಮ್ಮ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ನೀವು ನಿಮ್ಮ ಹೆಚ್ಚಿನ ಸಂಪರ್ಕಗಳು ಮತ್ತು ಸಂಬಂಧಿಕರನ್ನು ಬಲಪಡಿಸಲು ಸಹ ನಿಮಗೆ ಸಾಧ್ಯವಾಗುತ್ತದೆ. ನೀವು ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ನಿಮ್ಮ ವಿಭಿನ್ನ ಚಿತ್ರವನ್ನು ರೂಪಿಸಬಹುದು ಮತ್ತು ವೃತ್ತಿ ಜೀವನದ ಕ್ಷೇತ್ರದಲ್ಲಿ ಹೊಸ ಎತ್ತರವನ್ನು ಪಡೆಯಬಹುದು. ಆರೋಗ್ಯದ ದೃಷ್ಟಿಕೋನದಿಂದ, ಸಣ್ಣ ಪುಟ್ಟ ಸಮಸ್ಯೆಗಳು ಅಥವಾ ಗಾಯವಾಗುವ ಸಾಧ್ಯತೆ ಇದೆ. ಆದ್ದರಿಂದ ನಿಮ್ಮ ಆರೋಗ್ಯದತ್ತ ವಿಶೇಷ ಕಾಳಜಿ ವಹಿಸಲು ನಿಮಗೆ ಸಲಹೆ ನೀಡಲಾಗಿದೆ.

ಪರಿಹಾರ - ಬುಧವಾರದಂದು ಮನೆಯಲ್ಲಿ ಬಾಳೆಮರವನ್ನು ನೆಡುವುದು ನಿಮಗೆ ಒಳ್ಳೆಯದು.


ಬೃಹತ್ ಕುಂಡಲಿ: ನಿಮ್ಮ ಜೀವನದ ಮೇಲೆ ಗ್ರಹಗಳ ಪರಿಣಾಮ ಮತ್ತು ಪರಿಹಾರವನ್ನು ತಿಳಿಯಿರಿ

तुला / ತುಲಾ ರಾಶಿ

ತುಲಾ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಒಂಬತ್ತನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಆತ್ಮ ಮತ್ತು ವ್ಯಕ್ತಿತ್ವದ ಮೊದಲನೇ ಮನೆಗೆ ಸಾಗುತ್ತದೆ. ಈ ಸಂಚಾರದ ಸಮಯದಲ್ಲಿ ನಿಮಗೆ ಆರ್ಥಿಕ ಲಾಭವಾಗುತ್ತದೆ, ಈ ಸಂಚಾರದ ಸಮಯದಲ್ಲಿ ನಿಮ್ಮ ಪ್ರಯತ್ನಗಳಿಂದ ಕೆಲಸದ ಸ್ಥಳದಲ್ಲಿ ಗೆಲ್ಲುವ ಬಯಕೆ ನಿಮ್ಮಲ್ಲಿ ಬಲವಾಗಿರುತ್ತದೆ. ಆದರೆ ನಿಮ್ಮ ಭಾವನೆಗಳನ್ನು ನೀವು ನಿಯಂತ್ರಣದಲ್ಲಿಡಬೇಕು ಮತ್ತು ಬುದ್ಧಿವಂತಿಕೆಯೊಂದಿಗೆ ವರ್ತಿಸಬೇಕು. ಇಲ್ಲದಿದ್ದರೆ ಜನರು ಇದನ್ನು ಅಹಂಕಾರವೆಂದು ಪರಿಗಣಿಸಬಹುದು ಮತ್ತು ಇದು ನಿಮ್ಮ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಬಹುದು. ಸಂಬಂಧಗಳ ಬಗ್ಗೆ ಮಾತನಾಡಿದರೆ, ನಿಮ್ಮ ಸಂಗಾತಿಯ ಅಗತ್ಯಗಳ ಮೇಲೆ ನೀವು ಖರ್ಚು ಮಾಡಬಹುದು. ಇದು ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ ಮತ್ತು ನಿಮ್ಮ ಸಂಗಾತಿ ಸಂತೋಷಪಡುತ್ತಾರೆ. ವೃತ್ತಿಪರವಾಗಿ ಇದು ಸ್ವಲ್ಪ ಕಠಿಣ ಸಮಯ. ಆದ್ದರಿಂದ ನಿಮ್ಮ ಕೆಲಸದತ್ತ ಕೇಂದ್ರೀಕರಿಸುವುದು ಉತ್ತಮ, ವೃತ್ತಿಪರ ವಿಷಯಗಳಲ್ಲಿ ನೀವು ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು.

ತಮ್ಮ ವ್ಯಾಪಾರವನ್ನು ವಿಸ್ತರಿಸುವ ಬಗ್ಗೆ ಯೋಚಿಸುತ್ತಿರುವ ಜನರ ಯೋಜನೆಯು ಸ್ವಲ್ಪ ಸಮಯದ ವರೆಗೆ ಸ್ಥಗಿತಗೊಳ್ಳಬಹುದು. ಈ ಸಂಚಾರದ ಸಮಯದಲ್ಲಿ ಈ ರಾಶಿಚಕ್ರದ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಗೊಂದಲಕ್ಕೊಳಗಾಗಬಹುದು. ಸರಿಯಾದ ನಿವಾರಣೆಯನ್ನು ಪಡೆಯಲು ನೀವು ಶಿಕ್ಷಕರು ಮತ್ತು ಪೋಷಕರಿಂದ ಸಮಾಲೋಚನೆಯನ್ನು ಪಡೆದುಕೊಳ್ಳಬೇಕು. ಅದೃಷ್ಟವು, ಸಂಪೂರ್ಣ ಹೃದಯದಿಂದ ಕೆಲಸ ಮಾಡುವ ಈ ರಾಶಿಚಕ್ರದ ವೃತ್ತಿಪರ ಜನರ ಪರವಾಗಿರುತ್ತದೆ ಮತ್ತು ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಅನುಕೂಲಕರ ಫಲಿತಾಂಶಗಳನ್ನು ಸಹ ಪಡೆಯುತ್ತೀರಿ. ಬುಧ ಸಂಚಾರವು ಈ ರಾಶಿಚಕ್ರದ ಸ್ಥಳೀಯರ ಸಂವಹನ ಕೌಶಲ್ಯವನ್ನು ಹೆಚ್ಚಿಸುತ್ತದೆ. ಈ ಸಮಯದಲ್ಲಿ ನೀವು ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸಬಹುದು. ಆರೋಗ್ಯದ ದೃಷ್ಟಿಕೋನದಿಂದ, ತುಲಾ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿ ಅನುಭವಿಸುತ್ತಾರೆ. ಆದರೂ ನಿಯಮಿತವಾಗಿ ವ್ಯಾಯಾಮ ಮಾಡಲು ನಿಮಗೆ ಸಲಹೆ ನೀಡಲಾಗಿದೆ

ಪರಿಹಾರ - ನಿಮ್ಮ ಜೀವನದಲ್ಲಿ ಸಕಾರಾತ್ಮಕತೆಯನ್ನು ತರಲು ವಿಷ್ಣು ಸಹಸ್ತ್ರನಾಮವನ್ನು ಪಠಿಸುವುದು ನಿಮಗೆ ಉತ್ತಮ.

वृश्चिक / ವೃಶ್ಚಿಕ

ವೃಶ್ಚಿಕ ರಾಶಿಚಕ್ರದ ಜನರಿಗೆ ಬುಧ ಗ್ರಹವು ಎಂಟನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ವಿದೇಶಿ ಲಾಭ, ನಷ್ಟ, ಮೋಕ್ಷದ ಹನ್ನೆರಡನೇ ಮನೆಗೆ ಪ್ರವೇಶಿಸಲಿದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಸಂವಹನವನ್ನು ನೀವು ಸೀಮಿತಗೊಳಿಸಬೇಕು ಮತ್ತು ಯಾರೊಂದಿಗಾದರೂ ಮಾತನಾಡುವಾಗ ತುಂಬಾ ಜಾಗರೂಕರಾಗಿರಬೇಕು. ಹನ್ನೆರಡನೇ ಮನೆಯಲ್ಲಿರುವ ಬುಧವು ನಿಮ್ಮನ್ನು ಮಹತ್ವಕಾಂಕ್ಷಿಯನ್ನಾಗಿಸುತ್ತದೆ. ಇದು ನಿಮಗೆ ಒಳ್ಳೆಯದು ಎಂದು ಹೇಳಲಾಗುವುದಿಲ್ಲ. ಈ ಸಮಯದಲ್ಲಿ ಪ್ರಯಾಣ ಮಾಡುವ ಸಾಧ್ಯತೆ ಇದೆ ಮತ್ತು ಕೆಲಸದ ಸ್ಥಳಕ್ಕೆ ಸಂಬಂಧಿಸಿದ ಯಾವುದೇ ಮೀಟಿಂಗ್ ನಲ್ಲಿ ವಿಳಂಬವಾಗಬಹುದು. ಆರ್ಥಿಕವಾಗಿ ನಿಮ್ಮ ಅನವಶ್ಯಕ ವೆಚ್ಚಗಳತ್ತ ನೀವು ಗಮನ ಹರಿಸಬೇಕು, ವಿಶೇಷವಾಗಿ ಪ್ರಯಾಣಕ್ಕೆ ಸಂಬಂಧಿಸಿದಂತೆ ನೀವು ಜಾಗರೂಕರಾಗಿರಬೇಕು. ಈ ಸಮಯದಲ್ಲಿ ನೀವು ನಿಮ್ಮ ಬಗ್ಗೆಯೂ ಗಮನ ಹರಿಸಬೇಕು. ಈ ಸಮಯದಲ್ಲಿ ನೀವು ದೀರ್ಘಾವಧಿಯ ವೈದ್ಯಕೀಯ ಪಾಲಿಸಿಯನ್ನು ತೆಗೆದುಕೊಳ್ಳಬಹುದು ಅಥವಾ ದೀರ್ಘಕಾಲ ದೃಷ್ಟಿಕೋನದೊಂದಿಗೆ ಹೂಡಿಕೆ ಮಾಡುವ ಸಾಧ್ಯತೆಯೂ ಇದೆ. ಈ ವೃತ್ತಿಪರವಾಗಿ ನಿಮ್ಮ ಆಕಾಂಕ್ಷೆಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ನೀವು ಮೌಲ್ಯಮಾಪನ ಮಾಡಬಹುದು ಮತ್ತು ನಂತರ ಅದರ ಪ್ರಕಾರ, ನೀವು ಸಂಚಾರದ ಸಮಯದಲ್ಲಿ ನಿಮ್ಮ ಭವಿಷ್ಯದ ತಂತ್ರವನ್ನು ನೀವು ತಯಾರಿಸಬಹುದು.

ಈ ರಾಶಿಚಕ್ರದ ವ್ಯಾಪಾರಸ್ಥರು ತಮ್ಮ ವ್ಯಾಪಾರದಲ್ಲಿ ಸಕಾರಾತ್ಮಕತೆಯನ್ನು ಕಾಣಬಹುದು. ನೀವು ಹೊಸ ಕೌಶಲ್ಯವನ್ನು ಕಲಿಯಬಹುದು ಮತ್ತು ಸಾರ್ವಜನಿಕ ಸಂಬಂಧಗಳು ಮತ್ತು ತಂಡದ ಕೆಲಸಗಳನ್ನು ಸುಧಾರಿಸುವತ್ತ ಮುಂದುವರಿಯುವಿರಿ. ಇದರೊಂದಿಗೆ ಇಲ್ಲಿಯವರೆಗಿನ ನಿಮ್ಮ ಅನುಭವವು ಈ ಸಮಯದಲ್ಲಿ ಹೊಸ ಎತ್ತರಗಳನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತವೆ. ಸಂಬಂಧಿಕರ ಬಗ್ಗೆ ಮಾತನಾಡಿದರೆ, ಶಾಂತವಾಗಿರಿ ಮತ್ತು ಸ್ನೇಹಿತರೊಂದಿಗೆ ಹೆಚ್ಚು ಸೇರಿಕೊಳ್ಳಬೇಡಿ. ನಿಮ್ಮ ಪ್ರೀತಿ ಮತ್ತು ವೈವಾಹಿಕ ಜೀವನವು ಉತ್ತಮವಾಗಿರುತ್ತದೆ. ಯಾವುದೇ ಸಂಘರ್ಷವನ್ನು ತಪ್ಪಿಸಲು ನಿಮ್ಮ ಧ್ವನಿಯನ್ನು ನಿಯಂತ್ರಿಸಿ. ಆರೋಗ್ಯದ ಜೀವನದ ಬಗ್ಗೆ ಮಾತನಾಡಿದರೆ, ನೀವು ಅತಿಯಾಗಿ ಮದ್ಯಪಾನ ಮತ್ತು ಧೂಮಪಾನವನ್ನು ಸೇವಿಸುವುದನ್ನು ತಪ್ಪಿಬೇಕು. ಇಲ್ಲದಿದ್ದರೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಾಗುವ ಸಾಧ್ಯತೆ ಇದೆ.

ಪರಿಹಾರ - ಬುಧವಾರ ಮನೆಯಲ್ಲಿ ಬಾಳೆಗಿಡವನ್ನು ನೆಡುವುದು ಉತ್ತಮ


ವೃತ್ತಿ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಲು ಈಗಲೇ ಆದೇಶಿಸಿ - ಕಾಗ್ನಿ ಆಸ್ಟ್ರೋ ರಿಪೋರ್ಟ್

धनु / ಧನು ರಾಶಿ

ಧನು ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಏಳನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಲಾಭ, ಆದಾಯ ಮತ್ತು ಆಸೆಗಳ ಹನ್ನೊಂದನೇ ಮನೆಗೆ ಸಾಗುತ್ತದೆ. ವೃತ್ತಿಪರವಾಗಿ ಈ ಸಂಚಾರದ ಸಮಯದಲ್ಲಿ ನೀವು ಹೊಸ ಪಾಲುದಾರಿಕೆಯಲ್ಲಿ ತೊಡಗಬಹುದು ಮತ್ತು ನಿಮ್ಮ ವ್ಯಾಪಾರದಲ್ಲಿ ಮುಂದುವರಿಯಬಹುದು. ಪರಿಣಾಮವಾಗಿ, ಈ ಸಮಯದಲ್ಲಿ ಯಾವುದೇ ಕೆಲಸವನ್ನು ಪೂರ್ಣಗೊಳಿಸುವಲ್ಲಿ ನೀವು ಯಶಸ್ವಿಯಾಗುವಿರಿ. ಆರ್ಥಿಕವಾಗಿ , ಈ ಅವಧಿಯಲ್ಲಿ ನೀವು ಸಾಲ ಅಥವಾ ಲೋನ್ ಅನ್ನು ಮರುಪಾವತಿಸಬಹುದು. ನಿಮ್ಮ ಜೀವನ ಸಂಗಾತಿ ಮತ್ತು ಮಕ್ಕಳ ಮೇಲೆ ಹಣವನ್ನು ಕರ್ಚಿಸುವಿರಿ, ಇದು ಅವರಿಗೆ ಸಂತೋಷವನ್ನು ನೀಡುತ್ತದೆ. ವಿವಾಹಿತ ಜನರ ಜೀವನವು ಶಾಂತಿಯುತವಾಗಿರುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿ ನೀವು ಸಮಸ್ಯೆಯನ್ನು ಹೊಂದಿದ್ದರೆ, ನೀವು ಚಿಂತೆ ಮಾಡುವ ಅಗತ್ಯವಿಲ್ಲ. ಏಕೆಂದರೆ ದಾಂಪತ್ಯ ಜೀವನಕ್ಕೆ ಇದು ಒಂದು ಉತ್ತಮ ಸಮಯವಾಗಿರುತ್ತದೆ. ಇದಲ್ಲದೆ ಈ ಸಂಚಾರದ ಹೆಚ್ಚಿನ ಸಮಯವನ್ನು ನೀವು ಸ್ನೇಹಿತರು, ಕುಟುಂಬದ ಸದಸ್ಯರು ಮತ್ತು ಸಾರ್ವಜನಿಕ ಜೀವನದಲ್ಲಿ ಕಳೆಯಬಹುದು. ಅರೋಗ್ಯ ಜೀವನದ ಮೇಲೆ ದೃಷ್ಟಿ ಹಾಕಿದರೆ, ಈ ಸಮಯದಲ್ಲಿ ನೀವು ಆರೋಗ್ಯವಾಗಿರುತ್ತೀರಿ ಮತ್ತು ಜೀವನವನ್ನು ಸಂಪೂರ್ಣವಾಗಿನ ಆನಂದಿಸುವಿರಿ.

ಪರಿಹಾರ - ಹಾಸಿಗೆ ಅಥವಾ ಮನೆಯ ನಾಲ್ಕು ಮೂಲೆಗಳಲ್ಲಿ ನಾಲ್ಕು ಕಂಚಿನ ಉಂಗುರಗಳನ್ನು ಇರಿಸಿ.

मकर / ಮಕರ ರಾಶಿ

ಮಕರ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಆರನೇ ಮತ್ತು ಒಂಬತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ವೃತ್ತಿ ಜೀವನ, ಹೆಸರು ಮತ್ತು ಖ್ಯಾತಿಯ ಹತ್ತನೇ ಮನೆಗೆ ಸಾಗಲಿದೆ. ಈ ಸಂಚಾರದ ಸಮಯವು ನಿಮಗೆ ಅನುಕೂಲಕರವಾಗಿರುತ್ತದೆ. ಏಕೆಂದರೆ ಇದು ನಿಮ್ಮ ಕೆಲಸದ ಸ್ಥಳದಲ್ಲಿ ನಿಮಗೆ ಯಶಸ್ಸು ನೀಡುತ್ತದೆ ಮತ್ತು ನೀವು ದೀರ್ಘಕಾಲದಿಂದ ಯಾವುದೇ ಉದ್ಯೋಗ ಅಥವಾ ಕಂಪನಿಗೆ ಸೇರಿದ್ದರೆ, ನೀವು ಬಡ್ತಿ ಪಡೆಯಲಿ ನಿರೀಕ್ಷಿಸಬಹುದು. ಈ ಸಂಚಾರದ ಸಮಯದಲ್ಲಿ ವ್ಯಾಪಾರಸ್ಥರು ಸಹ ಲಾಭವನ್ನು ಪಡೆಯಬಹುದು. ನಿಮ್ಮ ಅಪೂರ್ಣ ಯೋಜನೆಗಳನ್ನು ಪೂರ್ಣಗೊಳಿಸಲು ಸಹ ನಿಮಗೆ ಸಾಧ್ಯವಾಗುತ್ತದೆ. ಇದಲ್ಲದೆ ತಮ್ಮ ವ್ಯಾಪಾರವನ್ನು ವಿಸ್ತರಿಸಲು ಬಯಸುತ್ತಿರುವ ಜನರಿಗೂ ಈ ಸಮಯ ಅನುಕೂಲಕರವಾಗಿರಲಿದೆ. ತಮ್ಮ ಜೀವನವನ್ನು ಉತ್ತಮಗೊಳಿಸಲು ಈ ಸಂಚಾರದ ಸಮಯದಲ್ಲಿ ನೀವು ಅನೇಕ ಅವಕಾಶಗಳನ್ನು ಪಡೆಯಬಹುದು. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಯೂ ಇದೆ ಮತ್ತು ಈ ರಾಶಿಚಕ್ರದ ಕೆಲವು ಜನರು ವಿದೇಶದಲ್ಲಿ ಉದ್ಯೋಗವನ್ನು ಪಡೆಯಬಹುದು. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಇತ್ಯಾದಿಗಳಲ್ಲಿ ಕೆಲಸ ಮಾಡುತ್ತಿರುವ ಜನರು ಈ ಸಮಯದಲ್ಲಿ ಲಾಭವನ್ನು ಪಡೆಯುತ್ತಾರೆ. . ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ಸಂಬಂಧಗಳನ್ನು ಬಲಪಡಿಸುವ ಸಮಯ ಇದು. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ನೀವು ಚಿಂತೆಗೆ ಒಳಗಾಗಬಹುದು. ಈ ಸಮಯದಲ್ಲಿ ನಿಮ್ಮ ಆಹಾರದ ಬಗ್ಗೆ ನೀವು ಕಾಳಜಿ ವಹಿಸಬೇಕು ಮತ್ತು ಸುತ್ತಮುತ್ತಲೂ ಸ್ವಚ್ಛತೆಯನ್ನು ಇರಿಸಬೇಕು. ನಿಮ್ಮ ದೇಹವನ್ನು ಚೆನ್ನಾಗಿ ನೋಡಿಕೊಳ್ಳಿ ಮತ್ತು ಕೆಲಸದೊಂದಿಗೆ ವಿಶ್ರಾಂತಿಯನ್ನು ಸಹ ಪಡೆಯಿರಿ.

ಪರಿಹಾರ - ಮೆನಯಲ್ಲಿನ ದೇವಸ್ಥಾದಲ್ಲಿ ಕರ್ಪುರವನ್ನು ಬೆಳಗಿಸುವುದು ನಿಮಗೆ ಉತ್ತಮ.

कुंभ / ಕುಂಭ ರಾಶಿ

ಕುಂಭ ರಾಶಿಚಕ್ರದ ಜನರಿಗೆ ಬುಧ ಗ್ರಹವು ಐದನೇ ಮತ್ತು ಎಂಟನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಧರ್ಮ, ಅದೃಷ್ಟ ಮತ್ತು ಪ್ರಯಾಣದ ಐದನೇ ಮನೆಗೆ ಸಾಗುತ್ತದೆ. ಈ ಅವಧಿಯಲ್ಲಿ ನೀವು ಧರ್ಮ, ತಂದೆ, ದೂರಸ್ಥ ಪ್ರಯಾಣ, ಅತ್ತೆಮನೆ ಕಡೆಯ ಜನರೊಂದಿಗಿನ ಸಂಬಂಧ, ಪ್ರಕಾಶನ, ಉನ್ನತ ಶಿಕ್ಷಣದಂತಹ ವಿಷಯಗ ಬಗ್ಗೆ ಹೆಚ್ಚು ಗಮನ ಹರಿಸುತ್ತೀರಿ. ಈ ಸಮಯದಲ್ಲಿ ಭಾವನಾತ್ಮಕ ಜವಾಬ್ದಾರಿಗಳಿಂದ ನೀವು ಮುಕ್ತಿ ಪಡೆಯಬಹುದು. ನಿಮ್ಮ ಅರ್ಹತೆಗಳನ್ನು ಸರಿಯಾಗಿ ಬಳಸಿಕೊಳ್ಳುವ ಸಮಯ ಇದು. ಆರ್ಥಿಕವಾಗಿ, ದೀರ್ಘಾವಧಿಯ ನಂತರವು ನಿಮಗೆ ಲಾಭವನ್ನು ಒದಗಿಸುವಂತಹ ಹೂಡಿಕೆಗಳನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗಿದೆ. ನಿಮಗೆ ಅರ್ಥವಾಗದಿರುವಂತಹ ಯೋಜನೆಯಲ್ಲೂ ಹೂಡಿಕೆ ಮಾಡಬೇಡಿ. ಏಕೆಂದರೆ ಇದರಿಂದ ನೀವು ತಪ್ಪು ದಿಕ್ಕಿನಲ್ಲಿ ಹೋಗಬಹುದು ಮತ್ತು ನಷ್ಟವನ್ನು ಎದುರಿಸಬೇಕಾಗಬಹುದು. ಯಾವುದೇ ಮೀಟಿಂಗ್ ಅಥವಾ ಯಾರೊಂದಿಗಾದರೂ ಭೇಟಿ ಮಾಡುವಾಗ ಮಾತುಗಳನ್ನು ಸ್ಪಷ್ಟವಾಗಿರಿಸಿ, ಇದರಿಂದ ಯಾವುದೇ ರೀತಿಯ ತಪ್ಪುಗ್ರಹಿಕೆ ಉಧ್ಭವಿಸುವುದಿಲ್ಲ. ಸಂಬಂಧಗಳಲ್ಲಿ ಅವಶ್ಯಕ ಪ್ರಯತ್ನಗಳ ಅಗತ್ಯವಿದೆ, ಏಕೆಂದರೆ ಇದರಿಂದಾಗಿ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಮತೋಲನವಿರುತ್ತದೆ. ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯ ನಿಮಗೆ ಅನುಕೂಲಕರವಾಗಿರುತ್ತದೆ.

ಪರಿಹಾರ - ಭಗವಂತ ವಿಷ್ಣುವಿನ ಪೂಜೆ ಮಾಡಿ ಮತ್ತು ಕರ್ಪುರವನ್ನು ಅರ್ಪಿಸಿ.

मीन / ಮೀನ ರಾಶಿ

ಮೀನ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ನಾಲ್ಕನೇ ಮತ್ತು ಏಳನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಹಠಾತ್ ಲಾಭ - ನಷ್ಟ ಮತ್ತು ಸಾವಿನ ಎಂಟನೇ ಮನೆಗೆ ಗೋಚರಿಸುತ್ತದೆ. ಈ ಸಮಯದಲ್ಲಿ ವ್ಯಾಪಾರಸ್ಥರು ಮತ್ತು ಉದ್ಯೋಗಪರು ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಜೀವನದಲ್ಲಿ ಏರಿಳಿತಗಳು ಉದ್ಭವಿಸಬಹುದು. ನಿಮ್ಮ ವೃತ್ತಿಪರ ಜೀವನದಲ್ಲಿ ಅಡೆತಡೆಗಳನ್ನು ಕಾಣಲಾಗುತ್ತದೆ. ನಿಮ್ಮ ವಿರೋಧಿಗಳಿಂದ ಜಾರಾಗರೂಕರಾಗಿರಿ. ಏಕೆಂದರೆ ಈ ಸಮಯದಲ್ಲಿ ಅವರು ಸಕ್ರಿಯರಾಗಿರುತ್ತಾರೆ. ಸಂಶೋಧನಾ ಕೆಲಸದಲ್ಲಿ ತೊಡಗಿರುವ ವಿದ್ಯಾರ್ಥಿಗಳು ಅನುಕೂಲಕರ ಸಮಯವನ್ನು ಆನಂದಿಸಲಿದ್ದಾರೆ. ಇದಲ್ಲದೆ ನಿಮ್ಮ ಕಾರ್ಯಗಳಿಗೆ ಹೊಸ ವೇಗ ಮತ್ತು ದಿಕ್ಕು ಸಿಗುತ್ತದೆ. ಆರ್ಥಿಕವಾಗಿ ನಿಮ್ಮ ಮನೆ ಮತ್ತು ವಾಹನಕ್ಕಾಗಿ ವಿಮಾ ಪಾಲಿಸಿಗಯನ್ನು ತೆಗೆದುಕೊಳ್ಳಬೇಕು, ಇದರಿಂದಾಗಿ ಭವಿಷ್ಯದಲ್ಲಿ ನೀವು ಇದರ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಸಂಬಂಧಗಳಲ್ಲಿ ನಿಮ್ಮ ಸಂವಹನದ ಬಗ್ಗೆ ನೀವು ಜಾಗರೂಕರಾಗಿರಬೇಕು, ಜೀವನ ಸಂಗಾತಿ ಅಥವಾ ಪ್ರೀತೀಪಾತ್ರರೊಂದಿಗೆ ಯಾವುದೇ ರೀತಿಯ ತಪ್ಪುಗ್ರಹಿಕೆಯನ್ನು ತಪ್ಪಿಸಲು ಪ್ರಯತ್ನಿಸಿ. ಆಲೋಚನೆಗಳಲ್ಲಿ ಭಿನ್ನಾಭಿಪ್ರಾಯದ ಸಾಧ್ಯತೆ ಇದೆ. ಆರೋಗ್ಯದ ಜೀವನದ ಮೇಲೆ ದೃಷ್ಟಿ ಹಾಕಿದರೆ, ನೀವು ಲೈಂಗಿಕ ಸಮಸ್ಯೆಗಳನ್ನು ಎದುರಿಸಬಹುದು. ಆದ್ದರಿಂದ ನೀವು ಜಾಗರೂಕರಾಗಿರಿ ಮತ್ತು ಆಹಾರದ ಬಗ್ಗೆ ಕಾಳಜಿ ವಹಿಸಿ ಎಂದು ಸೂಚಿಸಲಾಗಿದೆ. ನೀವು ಸಾಕಷ್ಟು ನೀರು ಕುಡಿಯಬೇಕು ಮತ್ತು ಆರೋಗ್ಯವಾಗಿರಲು ಯೋಗ ಮತ್ತು ಧ್ಯಾನವನ್ನು ಆಶ್ರಯಿಸಬೇಕು.

ಪರಿಹಾರ - ಶುಭ ಫಲಿತಾಂಶಗಳನ್ನು ಪಡೆಯಲು ಬುಧವಾರದಂದು ಬಡ ಜನರಿಗೆ ಮತ್ತು ಅಗತ್ಯವಿರುವವರಿಗೆ ಹಣ್ಣುಗಳ ದಾನ ಮಾಡಿ.


ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

ನಮ್ಮ ಈ ಲೇಖನವನ್ನು ನೀವು ಇಷ್ಟಪಟ್ಟಿದ್ದೀರಿ ಎಂದು ನಾವು ಭಾವಿಸುತ್ತೇವೆ. ಆಸ್ಟ್ರೋಸೇಜ್ ವಾರ್ತಾದೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಧನ್ಯವಾದಗಳು.

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 399/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer