ಧನು ರಾಶಿ ಭವಿಷ್ಯ 2021 - Sagittarius Horoscope 2021 in Kannada
ಧನು ರಾಶಿ ಭವಿಷ್ಯ 2021 ರ ಮೂಲಕ, ಮುಂಬರುವ ವರ್ಷವೂ ಧನು ರಾಶಿಚಕ್ರದ ಸ್ಥಳೀಯರಿಗೆ ವಿಶೇಷವಾದದ್ದನ್ನು
ಏನು ತರಲಿದೆ ಎಂದು ಆಸ್ಟ್ರೋಸೇಜ್ ನಿಮಗೆ ತಿಳಿಸಲಿದೆ. ಅಲ್ಲದೆ, ನಿಮ್ಮ ಜೀವನದ ಪ್ರತಿಯೊಂದು ಪ್ರದೇಶದ
ಬಗ್ಗೆ ಈ ವರ್ಷದ ಎಲ್ಲಾ ಮುನ್ನೋಟಗಳನ್ನು ನಾವು ವಿವರವಾಗಿ ನೀಡಲಿದ್ದೇವೆ. ನಿಮ್ಮ ವೃತ್ತಿ ಜೀವನದ
ಬಗ್ಗೆ ಮಾತನಾಡಿದರೆ ವರ್ಷ 2021 ಧನು ರಾಶಿಚಕ್ರದ ಸ್ಥಳೀಯರಿಗೆ ಉತ್ತಮ ಫಲಿತಾಂಶಗಳನ್ನು ನೀಡಲಿದೆ.
ಏಕೆಂದ್ರೆ ಈ ವರ್ಷ ಶನಿ ಮತ್ತು ಗುರು ದೇವರ ದೃಷ್ಟಿಯು ಕೆಲಸದ ಸ್ಥಳದಲ್ಲಿ ನಿಮಗೆ ಸಂಪೂರ್ಣ ಯಶಸ್ಸನ್ನು
ಒದಗಿರುತ್ತಾರೆ. ಇದರಿಂದಾಗಿ ನಿಮ್ಮ ಪ್ರಗತಿಯೊಂದಿಗೆ ಗೌರವವು ಹೆಚ್ಚಾಗುತ್ತದೆ. ಈ ಸಮಯದಲ್ಲಿ ಅಪೇಕ್ಷಿತ
ವರ್ಗಾವಣೆಯನ್ನು ಪಡೆಯಬಹುದು ಮತ್ತು ನೀವು ವಿದೇಶಕ್ಕೆ ಹೋಗಲು ಬಯಸುತ್ತಿದ್ದರೆ, ಈ ವರ್ಷ ನಿಮಗೆ ಕೆಲಸದ
ಕ್ಷೇತ್ರದಿಂದ ವಿದೇಶಕ್ಕೆ ಹೋಗಲು ಅವಕಾಶ ಸಹ ಸಿಗಬಹುದು.
ಅರೋಗ್ಯ ಸಮಾಲೋಚನೆ ಯೊಂದಿಗೆ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗೆ ಜ್ಯೋತಿಷ್ಯ ಪರಿಹಾರವನ್ನು ಪಡೆಯಿರಿ
ನಿಮ್ಮ ಆರ್ಥಿಕ ಜೀವನವು ಈ ವರ್ಷ ನಿರೀಕ್ಷೆಗಿಂತ ಹೆಚ್ಚು ಉತ್ತಮವಾಗಿರುತ್ತದೆ. ಶನಿ ದೇವ ನಿಮ್ಮ ಆರ್ಥಿಕ ಜೀವನವನ್ನು ಬಲಪಡಿಸುವುದರೊಂದಿಗೆ ನಿಮಗೆ ಹಣದ ಲಾಭವನ್ನು ಸಹ ಒದಗಿಸುತ್ತಾರೆ. ಕೇತುವಿನ ಪರಿಣಾಮವು ಈ ವರ್ಷ ನಿಮ್ಮ ವೆಚ್ಚಗಳನ್ನು ಹಾಗೆಯೆ ಉಳಿಸುತ್ತಾರೆ, ಈ ಕಾರಣದಿಂದಾಗಿ ನೀವು ಹಣಕಾಸಿಗೆ ಸಂಬಂಧಿಸಿದ ಪ್ರತಿಯೊಂದು ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಸಾಮರ್ಥ್ಯವನ್ನು ಹೊಂದಿರುತ್ತೀರಿ. ಯಾರಿಗಾದರೂ ಸಾಲ ಕೊಟ್ಟಿದ್ದರೆ ಅದನ್ನು ಮರಳಿ ಪಡೆಯುವಿರಿ ಮತ್ತು ಸಂಪತ್ತಿಗೆ ಸಂಬಂಧಿಸಿದ ಎಲ್ಲ ವಿವಾದವು ಕೊನೆಗೊಳ್ಳುತ್ತದೆ, ಇದರಿಂದ ನೀವು ಲಾಭವನ್ನು ಪಡೆಯಬಹುದು.
ನಿಮ್ಮ ಮುಂಬರುವ 12 ತಿಂಗಳ ಜಾತಕವನ್ನು ಪಡೆಯಿರಿ - ಆಸ್ಟ್ರೋಸೇಜ್ ವಾರ್ಷಿಕ ಪತ್ರಿಕೆ
ಧನು ರಾಶಿ ಭವಿಷ್ಯ 2021 ರ ಪ್ರಕಾರ, ವಿದ್ಯಾರ್ಥಿಗಳ ಬಗ್ಗೆ ಮಾತನಾಡಿದರೆ, ಶಿಕ್ಷಣದ ಕ್ಷೇತ್ರದಲ್ಲಿ ಧನು ರಾಶಿಚಕ್ರದ ಸ್ಥಳೀಯರು ಈ ವಾರ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ನಿಮ್ಮ ಶಿಕ್ಷಕರು ಮತ್ತು ಇತರ ವಿದ್ಯಾರ್ಥಿಗಳಿಂದ ಬೆಂಬಲವನ್ನು ನೀವು ಪಡೆಯುತ್ತೀರಿ. ನಿಮ್ಮ ರಾಶಿಚಕ್ರದ ಆರನೇ ಮನೆಯಲ್ಲಿರುವ ರಾಹುವಿನ ಶುಭ ಎಲ್ಲಾ ವಿಷಯಗಳನ್ನು ಅರ್ಥಮಾಡುಕೊಳ್ಳುವಲ್ಲಿ ಯಶಸ್ಸು ಪಡೆಯುತ್ತೀರಿ. ಸಾಂದರ್ಭಿಕವಾಗಿ ಕೇತುವು ನಿಮ್ಮ ಗಮನವನ್ನು ಗೊಂದಲಗೊಳಿಸಲು ಪ್ರಯತ್ನಿಸುತ್ತಾರೆ, ಆದರೆ ನೀವು ನಿಮ್ಮ ಪರಿಶ್ರಮವನ್ನು ನಿಲ್ಲಿಸದೆ ಮುಂದುವರಿಸಬೇಕಾಗುತ್ತದೆ. ಕುಟುಂಬ ಜೀವನವನ್ನು ನೋಡಿದರೆ, ಅದಕ್ಕಾಗಿ ಸಮಯ ಅನುಕೂಲಕರವಾಗಿರಲಿದೆ. ಏಕೆಂದರೆ ನೀವು ಕುಟುಂಬದ ಸಂತೋಷವನ್ನು ಪಡೆಯುತ್ತೀರಿ. ಇದರೊಂದಿಗೆ ತಂದೆ-ತಾಯಿಯ ಆರೋಗ್ಯವು ಸುಧಾರಿಸುತ್ತದೆ. ಗ್ರಹಗಳ ಸ್ಥಿತಿ ನಿಮ್ಮ ಕುಟುಂಬದಲ್ಲಿ ಯಾವುದೇ ಮಂಗಳ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ಇದರಿಂದಾಗಿ ಮನೆಯಲ್ಲಿ ಸಂತೋಷದಿಂದ ತುಂಬಿರುವ ವಾತಾವರಣವನ್ನು ಕಾಣಲಾಗುತ್ತದೆ.
ನೀವು ವಿವಾಹಿತರಾಗಿದ್ದರೆ, ಈ ವರ್ಷ ನಿಮಗೆ ಕೆಲವು ಬದಲಾವಣೆಗಳನ್ನು ತರಲಿದೆ. ಆರಂಭದಲ್ಲಿ ಜೀವನ ಸಂಗಾತಿಯ ಆರೋಗ್ಯವು ಹದಗೆಡುತ್ತದೆ ಮತ್ತು ಇದರೊಂದಿಗೆ ಗುರು ಗ್ರಹವು ಐದನೇ ಮನೆಯಲ್ಲಿ ನೆಲೆಗೊಂಡು ಅಧ್ಯಯನದಲ್ಲಿ ಮಕ್ಕಳಿಗೆ ಕಷ್ಟವನ್ನು ನೀಡಬಹುದು. ಅಂತಹ ಪರಿಸ್ಥಿತಿಯಲ್ಲಿ ಅವರ ಬಗ್ಗೆ ಹೆಚ್ಚು ಗಮನ ಹರಿಸುವ ಅಗತ್ಯವಿರುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಇತರ ಕ್ಷೇತ್ರಗಳ ಪ್ರಕಾರ ಈ ವರ್ಷ ನೀವು ನಿಮ್ಮ ಪ್ರೀತಿ ಜೀವನದಲ್ಲಿ ಹೆಚ್ಚು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಸಂಗಾತಿ ನಿಮ್ಮ ಮಾತುಗಳಿಗೆ ಕಡಿಮೆ ಪ್ರಾಮುಖ್ಯತೆ ನೀಡುತ್ತಾರೆ. ಇದರಿಂದಾಗಿ ನಿಮ್ಮಿಬ್ಬರ ನಡುವೆ ಪ್ರತಿಯೊಂದು ವಿಷಯದ ಬಗ್ಗೆ ವಿವಾದದ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ ನಿರಂತರವಾಗಿ ಪ್ರೇಮಿಗೆ ವಿವರಿಸುತ್ತಾ, ಪ್ರತಿ ವಿವಾದವನ್ನು ಪರಿಹರಿಸಲು ಪ್ರಯತ್ನಿಸಿ.
ಆರೋಗ್ಯದ ದೃಷ್ಟಿಯಿದ, ಈ ವರ್ಷವೂ ತುಂಬಾ ಸಕಾರಾತ್ಮಕವಾಗಿರಲಿದೆ. ಏಕೆಂದರೆ ಈ ವರ್ಷ ನೀವು ತುಂಬಾ ಆರೋಗ್ಯವಾಗಿರುತ್ತೀರಿ. ಆದಾಗ್ಯೂ ನೆರಳಿನ ಗ್ರಹವು ನಡು ನಡುವೆ ನಿಮಗೆ ಕಷ್ಟವನ್ನು ನೀಡಲು ಪ್ರಯತ್ನಿಸುತ್ತದೆ, ಆದರೆ ನೀವು ನಿಮ್ಮ ಉತ್ತಮ ಆಹಾರ ಪಾನೀಯದಿಂದ ಪ್ರತಿಯೊಂದು ರೋಗದಿಂದ ಮುಕ್ತರಾಗಲು ಸಾಧ್ಯವಾಗುತ್ತದೆ.
Read in English - Sagittarius Horoscope 2021
ಧನು ರಾಶಿ ಭವಿಷ್ಯ 2021 ರ ಪ್ರಕಾರ ವೃತ್ತಿ ಜೀವನ - Career life according to Sagittarius horoscope 2021
ಧನು ರಾಶಿ ಭವಿಷ್ಯ 2021 ರ ಪ್ರಕಾರ, ವರ್ಷ 2021 ಧನು ರಾಶಿಚಕ್ರದ ಸ್ಥಳೀಯರ ವೃತ್ತಿ ಜೀವನದಲ್ಲಿ ಅನುಕೂಲಕರ ಫಲಿತಾಂಶಗಳನ್ನು ತರಲಿದೆ. ಈ ವರ್ಷ ಕೆಲಸದ ಸ್ಥಳದಲ್ಲಿ ನೀವು ಸಂಪೂರ್ಣ ಯಶಸ್ಸು ಪಡೆಯುವಿರಿ. ನಿಮ್ಮ ಸಹೋದ್ಯೋಗಿಗಳು ಮತ್ತು ನಿಮ್ಮ ಹಿರಿಯ ಅಧಿಕಾರಿಗಳು ನಿಮಗೆ ಸಂಪೂರ್ಣ ಬೆಂಬಲ ನೀಡುವುದನ್ನು ಕಾಣಲಾಗುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ವೃತ್ತಿ ಜೀವನದಲ್ಲಿ ಪ್ರಗತಿ ಪಡೆಯಲು ಮತ್ತು ನಿರಂತರವಾಗಿ ಮುಂದುವರಿಯಲು ನಿಮ್ಮ ನಿಕಟರಿಂದ ಪ್ರೋತ್ಸಾಹವನ್ನು ಪಡೆಯುತ್ತೀರಿ, ಇದರಿಂದ ನೀವು ಬಡ್ತಿ ಪಡೆಯುತ್ತೀರಿ ಮತ್ತು ಹಣದ ಲಾಭವನ್ನು ಸಹ ಪಡೆಯುತ್ತೀರಿ. ಗ್ರಹಗಳ ಶುಭ ಸ್ಥಾನದ ಕಾರಣದಿಂದಾಗಿ ಜನವರಿ, ಮೇ, ಜೂನ್, ಆಗಸ್ಟ್, ಸೆಪ್ಟೆಂಬರ್ ಮತ್ತು ಡಿಸೆಂಬರ್ ತಿಂಗಳು ಅತ್ಯಂತ ಶುಭವಾಗಿರಲಿವೆ.
ಈ ಸಮಯದಲ್ಲಿ ನೀವು ನಿಮ್ಮ ಪ್ರತಿಯೊಂದು ಕೆಲಸದಲ್ಲಿ ಹೆಚ್ಚು ಪರಿಶ್ರಮ ಮಾಡುವಿರಿ ಮತ್ತು ಅದನ್ನು ಸಮಯಕ್ಕಿಂತ ಮುಂಚೆಯೇ ಪೂರ್ಣಗೊಳಿಸುವಿರಿ. ಅಲ್ಲದೆ ಮೇ ಮತ್ತು ಆಗಸ್ಟ್ ತಿಂಗಳುಗಳು ನಿಮ್ಮ ಸ್ಥಳಾಂತರಕ್ಕೆ ಉತ್ತಮವಾಗಿ ಕಾಣುತ್ತಿವೆ. ಉದ್ಯೋಗದಲ್ಲಿ ನೀವು ವರ್ಗಾವಣೆಯನ್ನು ಬಯಸುತ್ತಿದ್ದರೆ, ಈ ಸಮಯದಲ್ಲಿ ಅದು ಪೂರ್ಣಗೊಳ್ಳಬಹುದು ಮತ್ತು ಅದರಲ್ಲಿ ನಿಮಗೆ ಯಶಸ್ಸು ಸಿಗಬಹುದು. ಏಕೆಂದರೆ ಸೂರ್ಯ ದೇವರ ಸಂಚಾರವು ನಿಮ್ಮ ಒಂಬತ್ತನೇ ಮನೆಯಲ್ಲಿ ಸಂಭವಿಸಲಿದೆ. ಇದಲ್ಲದೆ ನವೆಂಬರ್ ತಿಂಗಳಲ್ಲಿ ಕೆಲಸದ ಸ್ಥಳಕ್ಕೆ ಸಂಬಂಧಿಸಿದ ಯಾವುದೇ ವಿದೇಶಿ ಪ್ರಯಾಣದ ಅವಕಾಶವನ್ನು ನೀವು ಪಡೆಯುತ್ತೀರಿ. ಇದರಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಮೇ ಮತ್ತು ಜೂನ್ ತಿಂಗಳುಗಳಲ್ಲಿ ನಿಮ್ಮ ಪದೋನ್ನತಿಯ ಸಾಧ್ಯತೆ ಇದೆ.
ಆದಾಗ್ಯೂ ಈ ವರ್ಷ ನಿಮ್ಮ ವಿರೋಧಿಗಳು ಸಕ್ರಿಯರಾಗಿರುತ್ತಾರೆ, ಆದರೆ ನೀವು ನಿಮ್ಮ ಜಾಗರೂಕತೆಯಿಂದ ಅವರ ಮೇಲೆ ಪ್ರಾಬಲ್ಯ ಸಾಧಿಸುವುದನ್ನು ಕಾಣಲಾಗುತ್ತದೆ. ವ್ಯಾಪಾರಸ್ಥರು ಸಹ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಪಾಲುದಾರಿಕೆಯ ತೊಡಗಿರುವವರು ಸಹೋದ್ಯೋಗಿಯ ಬೆಂಬಲವನ್ನು ಪಡೆಯುತ್ತಾರೆ. ಇದರಿಂದ ಅವರು ವ್ಯಾಪಾರದಲ್ಲಿ ಯಶಸ್ಸು ಪಡೆಯುತ್ತಾರೆ. ವಿದೇಶದಿಂದ ಲಾಭವನ್ನು ಗಳಿಸುವಲ್ಲಿ ನೀವು ಯಶಸ್ವಿಯಾಗುವಿರಿ.
ಧನು ರಾಶಿ ಭವಿಷ್ಯ 2021 ರ ಪ್ರಕಾರ ಆರ್ಥಿಕ ಜೀವನ - Financial life according to Sagittarius horoscope 2021
ಧನು ರಾಶಿ ಭವಿಷ್ಯ 2021 ರ ಪ್ರಕಾರ, ವರ್ಷ 2021 ಧನು ರಾಶಿಚಕ್ರದ ಸ್ಥಳೀಯರ ಆರ್ಥಿಕ ಜೀವನದಲ್ಲಿ ಅನೇಕ ಬದಲಾವಣೆಯನ್ನು ತರಲಿದೆ. ಏಕೆಂದರೆ ಈ ಇಡೀ ವರ್ಷ ಶನಿ ದೇವ ನಿಮ್ಮ ಎರಡನೇ ಮನೆಯಲ್ಲಿರುತ್ತಾರೆ ಮತ್ತು ನಿಮ್ಮ ಆರ್ಥಿಕ ಜೀವನಕ್ಕೆ ಬಲವನ್ನು ಒದಗಿಸುತ್ತಾರೆ. ಅದರ ಮೂಲಕ ನಿಮಗೆ ಅಪಾರ ಸಂಪತ್ತು ಸಿಗುತ್ತದೆ. ಗ್ರಹಗಳ ಸಂಚಾರವು ಅನುಕೂಲಕರವಾಗಿರುವುದರಿಂದ ನಿಮಗೆ ಜನವರಿ ತಿಂಗಳ ಅಂತ್ಯದಿಂದ ಜೂಲೈ, ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳು ತುಂಬಾ ಶುಭವಾಗಿರುತ್ತವೆ. ಈ ಸಮಯದಲ್ಲಿ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ಅಲ್ಲದೆ ನಿಮ್ಮ ಆದಾಯವು ಸಹ ನಿರಂತರವಾಗಿ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಸಹ ಬಲಗೊಳ್ಳುತ್ತದೆ ಮತ್ತು ನಿವು ಮಾನಸಿಕ ಒತ್ತಡದಿಂದಲೂ ಮುಕ್ತರಾಗುವಿರಿ.
2021 ರಲ್ಲಿ ನೆರಳಿನ ಗ್ರಹ ಕೇತುವು ವರ್ಷದುದ್ದಕ್ಕೂ ನಿಮ್ಮ ಹನ್ನೆರಡನೇ ಮನೆಯಲ್ಲಿ ಇರುತ್ತದೆ. ಈ ಕಾರಣದಿಂದಾಗಿ ನೀವು ನಡು ನಡುವೆ ಕೆಲವು ವೆಚ್ಚಗಳನ್ನು ಸಹ ಹೊಂದಿರುತ್ತೀರಿ. ಡಿಸೆಂಬರ್ ಅಂತ್ಯದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ನಿಮ್ಮ ವೆಚ್ಚಗಳು ನಿಮಗೆ ಒತ್ತು ನೀಡಲು ಪ್ರಯತ್ನಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ ನೀವು ಸರಿಯಾದ ತಂತ್ರದೊಂದಿಗೆ ನಿಮ್ಮ ಹಣವನ್ನು ಖರ್ಚಿಸಬೇಕು. ಆದ್ದರಿಂದ ನಿಮ್ಮ ಹಣವನ್ನು ಮುಂಚಿತವಾಗಿ ಸಂಗ್ರಹಿಸುವುದು ನಿಮಗೆ ಉತ್ತಮ.
ಧನು ರಾಶಿ ಭವಿಷ್ಯ 2021 ಪ್ರಕಾರ ಶಿಕ್ಷಣ - Education life according to Sagittarius horoscope 2021
ಧನು ರಾಶಿ ಭವಿಷ್ಯ 2021 ರ ಪ್ರಕಾರ, ಶಿಕ್ಷಣ ಕ್ಷೇತ್ರದಲ್ಲಿ ಧನು ರಾಶಿಚಕ್ರದ ಸ್ಥಳೀಯರು ಸಂಪೂರ್ಣ ಯಶಸ್ಸು ಪಡೆಯುತ್ತಾರೆ. ಈ ವರ್ಷದುದ್ದಕ್ಕೂ ನೀವು ನಿಮ್ಮ ಪರಿಶ್ರಮದ ಫಲಿತಾಂಶಗಳನ್ನು ಪಡೆಯುತ್ತೀರಿ. ಏಕೆಂದರೆ ರಾಹುವು ನಿಮ್ಮ ರಾಶಿಚಕ್ರದ ಆರನೇ ಮನೆಯಲ್ಲಿ ಕುಳಿತಿರುವುದರಿಂದಾಗಿ ನೀವು ನಿಮ್ಮ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಪಡೆಯುತ್ತೀರಿ. ರಾಹುವಿನ ಈ ಶುಭ ಸ್ಥಾನವು ನಿಮಗೆ ತುಂಬಾ ಅದೃಷ್ಟವಾಗಿರಲಿದೆ. ಇದರೊಂದಿಗೆ ಆರಂಭದಿಂದಲೇ ಶನಿ ದೇವರು ಗುರುವಿನೊಂದಿಗೆ ನಿಮ್ಮ ಎರಡನೇ ಮನೆಯಲ್ಲಿ ಜೋಡಿಯಾಗಿರುತ್ತಾರೆ. ಈ ಕಾರಣದಿಂದಾಗಿ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ನೀವು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ್ದರೆ, ಜನವರಿ ಮತ್ತು ಏಪ್ರಿಲ್ ಮತ್ತು ನಂತರ ಸೆಪ್ಟೆಂಬರ್ ಶುಭವೆಂದು ಸಾಬೀತುಪಡಿಸುತ್ತವೆ. ಈ ಸಮಯದಲ್ಲಿ ನೀವು ಪ್ರತಿಯೊಂದು ವಿಷಯವನ್ನು ಅರ್ಥಮಾಡಿಕೊಳ್ಳುವಲ್ಲಿ ಯಾವುದೇ ತೊಂದರೆಯನ್ನು ಎದುರಿಸುವುದಿಲ್ಲ
ವಾರ್ಷಿಕ ರಾಶಿ ಭವಿಷ್ಯ 2021 ರ ಪ್ರಕಾರ, ವಿದೇಶದಲ್ಲಿ ಶಿಕ್ಷಣ ಪಡೆಯಲು ಕನಸು ಕಾಣುತ್ತಿರುವ ವಿದ್ಯಾರ್ಥಿಗಳ ಕನಸು ಈ ವರ್ಷ ಸೆಪ್ಟೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಈಡೇರಬಹುದು. ಏಕೆಂದರೆ, ಈ ಸಮಯದಲ್ಲಿ ಗ್ರಹಗಳ ಶುಭ ದೃಷ್ಟಿಯು ಯಾವುದೇ ವಿದೇಶಿ ಕಾಲೇಜ್ ಅಥವಾ ಸ್ಕೂಲ್ ಅಲ್ಲಿ ದಾಖಲಿಸಲು ನಿಮಗೆ ಸಹಾಯ ಮಾಡುತ್ತವೆ. ಈ ವರ್ಷದುದ್ದಕ್ಕೂ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಲೇ ಇರುವಿರಿ ಆದರೆ, ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ನೀವು ಅಗತ್ಯವಿದೆ, ಏಕೆಂದರೆ ಈ ಸಮಯದಲ್ಲಿ ಗ್ರಹಗಳು ನಿಮ್ಮ ಗಮನವನ್ನು ಗೊಂದಲಗೊಳಿಸಲು ಪ್ರಯತ್ನಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಗಮನವನ್ನು ಬೇರೆಡೆಗೆ ತಿರುಗಿಸಿದರೆ ನೀವು ತೊಂದರೆಕ್ಕೊಳಗಾಗಬಹುದು. ಈ ವರ್ಷ ನಿಮ್ಮ ಆರೋಗ್ಯವು ಸಹ ನಿಮ್ಮ ಅಧ್ಯಯನಕ್ಕೆ ಅಡ್ಡಿಯಾಗಬಹುದು. ಅಂತಹ ಸಂದರ್ಭದಲ್ಲಿ ಉತ್ತಮ ಆಹಾರ ಪಾನೀಯವನ್ನು ಸೇವಿಸಿ ಮತ್ತು ನಿಮ್ಮ ಸಹವಾಸ ಮತ್ತು ಅಧ್ಯಯನಗಳ ಬಗ್ಗೆ ವಿಶೇಷ ಗಮನ ಹರಿಸಿ. ಸಾಧ್ಯವಾದಷ್ಟು ನಿಮ್ಮ ಫೋನ್ ನಿಂದ ದೂರವಿರಿ.
ಧನು ರಾಶಿ ಭವಿಷ್ಯ 2021 ರ ಪ್ರಕಾರ ಕುಟುಂಬ ಜೀವನ - Family life according to Sagittarius horoscope 2021
ಧನು ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷದುದ್ದಕ್ಕೂ ನಿಮ್ಮ ಕುಟುಂಬ ಜೀವನವು ಉತ್ತಮವಾಗಿರಲಿದೆ. ನಿಮ್ಮ ಪ್ರಕಾರದಲ್ಲಿ ನಡೆಯುತ್ತಿದ್ದರುವ , ಪ್ರತಿಯೊಂದು ರೀತಿಯ ವಿವಾದಗಳು ಕೊನೆಗೊಳ್ಳುತ್ತವೆ. ಏಕೆಂದರೆ ಈ ವರ್ಷ ನಿಮ್ಮ ರಹಸಿಚಕ್ರದಿಂದ ಎರಡನೇ ಮನೆಯಲ್ಲಿರುವ ಶನಿ ದೇವರ ದೃಷ್ಟಿಯು ನಿಮ್ಮ ನಾಲ್ಕನೇ ಮನೆಯ ಮೇಲಿರುತ್ತದೆ. ಇದರಿಂದಾಗಿ ಕುಟುಂಬದ ಎಲ್ಲಾ ಸದಸ್ಯರಲ್ಲಿ ಸಹೋದರತ್ವ ಮತ್ತುಒಗ್ಗಟ್ಟನ್ನು ಹೆಚ್ಚಾಗುತ್ತದೆ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಅಲ್ಲದೆ ಶನಿಯೊಂದಿಗೆ ಗುರುವಿನ ಸಂಯೋಗವು ನಿಮಗೆ ಇನ್ನಷ್ಟು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ಕಾರಣದಿಂದಾಗಿ ನೀವು ಪುರಾತನ ವಿಚಾರಗಳನ್ನು ಪರಿಗಣಿಸಿ ಮನೆಯ ದುರಸ್ತಿ ಕಾರ್ಯವನ್ನು ನಡೆಸುವ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಇದರಿಂದ ಮನೆಯ ವಾತಾವರಣವು ಸಂತೋಷದಿಂದ ತುಂಬಿರುತ್ತದೆ. ಕುಟುಂಬದಲ್ಲಿ ಯಾರಾದರೂ ಮದುವೆಗೆ ಅರ್ಹರಾಗಿದ್ದಾರೆ, ಈ ವರ್ಷ ಅವರ ಮದುವೆಯ ಸಾಧ್ಯತೆ ಇದೆ. ಏಕೆಂದರೆ ಗ್ರಹಗಳ ಚಲನೆಯು ನಿಮಗೆ ಅನುಕೂಲಕರವಾಗಿರಲಿದೆ. ಮನೆಯಲ್ಲಿ ಯಾವುದೇ ಹೊಸ ಅತಿಥಿಯ ಆಗಮನದ ಸಾಧ್ಯತೆಗಳನ್ನು ಸಹ ಕಾಣಲಾಗುತ್ತಿದೆ.
ಜನವರಿ ರಿಂದ ಏಪ್ರಿಲ್ ಮತ್ತು ಸೆಪ್ಟೆಂಬರ್ ತಿಂಗಳ ಮೊದಲಿನ ವಾರದಿಂದ ನವೆಂಬರ್ ಮಧ್ಯದ ವರೆಗೆ ನಿಮ್ಮ ತಾಯಿಯ ಕಡೆಯ ಜನರೊಂದಿಗೆ ನೀವು ಯಾವುದೇ ಪ್ರಯಾಣಕ್ಕೆ ಹೋಗುವ ಸಾಧ್ಯತೆ ಕಂಡುಬರುತ್ತಿದೆ. ನಿಮ್ಮ ಸಹೋದರ ಸಹೋದರಿಯರಿಗೆ ಈ ವರ್ಷ ಉತ್ತಮವಾಗಿರಲಿದೆ. ನಿಮ್ಮ ತಂದೆ ನಿಮ್ಮನ್ನು ಬೆಂಬಲಿಸುತ್ತಾರೆ, ಅಲ್ಲದೆ ಈ ಸಮಯದಲ್ಲಿ ಅವರ ಆರೋಗ್ಯವು ಸುಧಾರಿಸುವುದನ್ನು ಸಹ ಕಾಣಲಾಗುತ್ತದೆ.
ಈಗ ಆಸ್ಟ್ರೋಸೇಜ್ ವಾರ್ತಾ ಮೂಲಕ ಪರಿಣಿತ ಜ್ಯೋತಿಷಿಗಳೊಂದಿಗೆ ನೇರವಾಗಿ ಕರೆಯಲ್ಲಿ ಮಾತನಾಡಿ
ಧನು ರಾಶಿ ಭವಿಷ್ಯ 2021 ಪ್ರಕಾರ ಮಕ್ಕಳು ಮತ್ತು ವೈವಾಹಿಕ ಜೀವನ - Children & Marriage life according to Sagittarius horoscope 2021
ಧನು ರಾಶಿ ಭವಿಷ್ಯ 2021 ರ ಪ್ರಕಾರ, ವಿವಾಹಿತ ಜನರಿಗೆ ಈ ವರ್ಷ ಉತ್ತಮವಾಗಿರಲಿದೆ. ಆರಂಭದಲ್ಲಿ ನಿಮ್ಮ ಜೀವನ ಸಂಗಾತಿಯ ಆರೋಗ್ಯವು ಕೆಲವು ಸಮಸ್ಯೆಗಳನ್ನು ನೀಡಬಹುದು, ಆದರೆ ಈ ಸಮಯದಲ್ಲಿ ಪ್ರತಿಕ್ಷಣ ನೀವು ಅವರೊಂದಿಗೆ ನಿಂತಿರುವುದನ್ನು ಕಾಣಲಾಗುತ್ತದೆ. ಇದು ಕಾಲಾನಂತರದಲ್ಲಿ ಅವರ ಆರೋಗ್ಯವನ್ನು ಸುಧಾರಿಸುತ್ತದೆ. ಈ ವರ್ಷ ಜನವರಿ ತಿಂಗಳ ಮೊದಲನೇ ವಾರದಲ್ಲಿ ನಿಮ್ಮ ದಾಂಪತ್ಯ ಜೀವನದಲ್ಲಿ ಕೂಡ ಪ್ರೀತಿ ಮತ್ತು ಆಕರ್ಷಣೆ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. 2021 ರ ಜ್ಯೋತಿಷ್ಯ ಮುನ್ಸೂಚನೆಯ ಪ್ರಕಾರ, ಮಾರ್ಚ್ ತಿಂಗಳಲ್ಲಿ ನೀವು ನಿಮ್ಮ ಕುಟುಂಬದೊಂದಿಗೆ ಯಾವುದೇ ಪ್ರಯಾಣಕ್ಕೆ ಹೋಗಲು ಅವಕಾಶವನ್ನು ಪಡೆಯಬಹುದು. ಆದಾಗ್ಯೂ ಈ ಪ್ರಯಾಣವು ಚಿಕ್ಕದಾಗಿರುತ್ತದೆ, ಆದರೆ ಈ ಸಮಯದಲ್ಲಿ ನಿಮ್ಮ ಮತ್ತು ಜೀವನ ಸಂಗಾತಿಯ ನಡುವೆ ನಿಕಟತೆ ಹೆಚ್ಚಾಗುತ್ತದೆ. ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ಯಾವುದೇ ವಿಷಯ ಅತಃವ ಯಾವುದೇ ಸಲಹೆಯನ್ನು ಪಡೆಯಲು ಬಯಸುತ್ತಿದ್ದರೆ ಅದಕ್ಕಾಗಿ ಈ ಸಮಯವೂ ತುಂಬಾ ಉತ್ತಮವಾಗಿರಲಿದೆ.
ದಾಂಪತ್ಯ ಜೀವನದಲ್ಲಿ ಏಪ್ರಿಲ್ ತಿಂಗಳಲ್ಲಿ ಸ್ವಲ್ಪ ಕೋಲಾಹಲ ಉಂಟಾಗಬಹುದು. ಈ ಕಾರಣದಿಂದಾಗಿ ಏಪ್ರಿಲ್ ಮತ್ತು ಮೇ ತಿಂಗಳು ಕೂಡ ಸ್ವಲ್ಪ ತೊಂದರೆಯನ್ನು ನೀಡಬಹುದು. ಏಕೆಂದರೆ ಈ ಸಮಯದಲ್ಲಿ ಮಂಗಳ ಗ್ರಹವು ನಿಮ್ಮ ರಾಶಿಚಕ್ರದ ಏಳನೇ ಮೆನಯಲ್ಲಿ ಕುಳಿತಿರುತ್ತದೆ. ಇದರಿಂದಾಗಿ ನಿಮ್ಮ ಕೋಪಗೊಳ್ಳುವ ವರ್ತನೆಯು ನಿಮ್ಮ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಜೀವನ ಸಂಗಾತಿಯ ಆರೋಗ್ಯವು ಹದಗೆಡಬಹುದು. ಅಲ್ಲದೆ ಮಕ್ಕಳು ಕೂಡ ತಮ್ಮ ಅಧ್ಯಯನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಂತಹ ಸಂದರ್ಭದಲ್ಲಿ ನೀವು ಯಾವಾಗಲು ಅವರೊಂದಿಗೆ ಸ್ತಂಭದಂತೆ ನಿಲ್ಲಬೇಕು. ಇದನ್ನು ಹೊರೆತುಪಡಿಸಿ ಈ ವರ್ಷವೂ ಉತ್ತಮವಾಗಿರಲಿದೆ. ಮಕ್ಕಳು ಎಲ್ಲ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ಮಾಡುತ್ತಾರೆ, ಇದರಿಂದ ನೀವು ಸಹ ಸಂತೋಷವನ್ನು ಅನುಭವಿಸುವಿರಿ.
ಧನು ರಾಶಿ ಭವಿಷ್ಯ 2021 ರ ಪ್ರಕಾರ ಪ್ರೀತಿ ಜೀವನ - Love life according to Sagittarius horoscope 2021
ಧನು ರಾಶಿ ಭವಿಷ್ಯ 2021 ರ ಪ್ರಕಾರ, ಧನು ರಾಶಿಚಕ್ರದ ಸ್ಥಳೀಯರ ಪ್ರೀತಿ ಜೀವನವು ಈ ವರ್ಷ ಹೆಚ್ಚು ಪರಿಣಾಮ ಬೀರಲಿದೆ. ನೀವು ನಿಮ್ಮ ಪ್ರೀತಿಪಾತ್ರರಿಂದ ಪ್ರೀತಿಯನ್ನು ಪಡೆಯುತ್ತೀರಿ ಆದರೆ ನಿಮ್ಮಿಬ್ಬರ ನಡುವೆ ಸಂಘರ್ಷವು ಸ್ಪಷ್ಟವಾಗಿ ಕಾಣುತ್ತದೆ. ವರ್ಷದ ಆರಂಭದಲ್ಲಿ ಮಂಗಳ ದೇವ ನಿಮ್ಮ ಐದನೇ ಮನೆಯಲ್ಲಿ ನೆಲೆಗೊಂಡಿರುವ ಕಾರಣದಿಂದಾಗಿ ಪ್ರೀತಿ ಜೀವನದಲ್ಲಿ ವಿವಾದದ ಪರಿಸ್ಥಿತಿ ಹೆಚ್ಚಾಗಿರಲಿದೆ. ಈ ಸಮಯದಲ್ಲಿ ನೀವು ಅಗತ್ಯಕ್ಕಿಂತ ಹೆಚ್ಚು ಭಾವುಕರಾಗಿರುತ್ತೀರಿ. ಫೆಬ್ರವರಿ ತಿಂಗಳಲ್ಲಿ ನೀವು ಅವರೊಂದಿಗೆ ಯಾವುದೇ ಪ್ರಯಾಣಕ್ಕೆ ಹೋಗಲು ಯೋಜಿಸಬಹುದು. ಈ ಸಮಯದಲ್ಲಿ ಅವರೊಂದಿಗೆ ಮಾತನಾಡಿ ಎಲ್ಲಾ ವಿವಾದಗಳನ್ನು ಪರಿಹರಿಸಲು ಪ್ರಯತ್ನಿಸುವುದನ್ನು ಕಾಣಲಾಗುತ್ತದೆ.
ಏಪ್ರಿಲ್, ಜೂಲೈ ಮತ್ತು ಸೆಪ್ಟೆಂಬರ್ ತಿಂಗಳುಗಳು ನಿಮ್ಮ ಪ್ರೀತಿ ಜೀವನಕ್ಕೆ ಉತ್ತಮವಾಗಿರಲಿವೆ. ಇದಲ್ಲದೆ ಮಾರ್ಚ್ ತಿಂಗಳು ನಿಮ್ಮಿಬ್ಬರ ನಡುವೆ ವಿವಾದವನ್ನು ತರಲಿದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಸಂಯಮದಿಂದಿರಬೇಕು. ನಿಮ್ಮಿಬ್ಬರ ನಡುವಿನ ಯಾವುದೇ ವಿವಾದದಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪ ಇರಬಾರದು ಎಂಬುದರ ಬಗ್ಗೆ ರಾಶಿ ಭವಿಷ್ಯ 2021 ಸೂಚಿಸುತ್ತಿದೆ. ಇಲ್ಲದಿದ್ದರೆ, ನಿಮ್ಮಿಬ್ಬರ ಸಂಬಂಧವು ಹದಗೆಡಬಹುದು.
ಧನು ರಾಶಿ ಭವಿಷ್ಯ 2021 ರ ಪ್ರಕಾರ ಅರೋಗ್ಯ ಜೀವನ - Health life according to Sagittarius horoscope 2021
ಧನು ರಾಶಿ ಭವಿಷ್ಯ 2021 ರ ಪ್ರಕಾರ, ನಿಮ್ಮ ಅರೋಗ್ಯ ಜೀವನವು ಹಿಂದಿನ ವರ್ಷಕ್ಕಿಂತ ಹೆಚ್ಚು ಉತ್ತಮವಾಗಿರಲಿದೆ. ಆದಾಗ್ಯೂ ಶನಿ ದೇವ ನಿಮ್ಮ ಪರೀಕ್ಷೆಯನ್ನು ತೆಗೆದುಕೊಳ್ಳುತ್ತ ನಡು ನಡುವೆ ನಿಮಗೆ ಕಷ್ಟವನ್ನು ನೀಡುತ್ತಿರುತ್ತಾರೆ. ಆದರೆ ನಿಮಗೆ ಯಾವುದೇ ದೊಡ್ಡ ರೋಗವಾಗುವುದಿಲ್ಲ. ಇದರೊಂದಿಗೆ ನಿಮ್ಮ ಹನ್ನೆರಡನೇ ಮನೆಯಲ್ಲಿ ಕೇತುವಿನ ದೃಷ್ಟಿಯು ನಿಮಗೆ ಜ್ವರ, ಹುಣ್ಣು, ಕೆಮ್ಮು ಅಥವಾ ಶೀತದಂತಹ ಸಣ್ಣ ಸಮಸ್ಯೆಗಳನ್ನು ನೀಡುತ್ತದೆ. ಆದರೆ ಇದು ನಿಮ್ಮ ಕೆಲಸದ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ.
ಅಂತಹ ಸಂದರ್ಭದಲ್ಲಿ ಯಾವುದೇ ಸೋಂಕಿನಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ನಿಮಗೆ ಉತ್ತಮವಾಗಿರುತ್ತದೆ. ಒಟ್ಟಾರೆಯಾಗಿ ನೋಡಿದರೆ, ದೃಷ್ಟಿಯಿಂದ ಈ ವರ್ಷ ನಿಮಗೆ ಉತ್ತಮವಾಗಿರಲಿದೆ. ರಾಶಿ ಭವಿಷ್ಯ 2021 ಪ್ರಕಾರ, ನೀವು ಸಮಯ ಪಡೆದಾಗಲೆಲ್ಲ ಶುದ್ಧ ಗಾಳಿ ಮತ್ತು ಶುದ್ಧ ನೀರು ನಿಮಗೆ ಅಗತ್ಯವಾಗಿರುತ್ತದೆ. ಇದರಿಂದ ನೀವು ಸಂತೋಷ ಮತ್ತು ತಾಜಾತನವನ್ನು ಅನುಭವಿಸುತ್ತೀರಿ.
ಧನು ರಾಶಿ ಭವಿಷ್ಯ 2021 ರ ಪ್ರಕಾರ ಜ್ಯೋತಿಷ್ಯ ಪರಿಹಾರ - Astrological remedies according Sagittarius horoscope 2021
- ಉತ್ತಮ ಗುಣಮಟ್ಟದ ನೀಲಮಣಿ ರತ್ನವನ್ನು ಚಿನ್ನದ ಉಂಗುರದಲ್ಲಿ ತಯಾರಿಸಿ, ಗುರುವಾರದಂದು ನಿಮ್ಮ ತೋರು ಬೆರಳಿನಲ್ಲಿ ಮಧ್ಯಾಹ್ನ 12:00 ರಿಂದ 1:30 ಮಧ್ಯೆ ಧರಿಸಿ. ಇದರಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.
- ಶನಿವಾರದಂದು ಅಶ್ವತ್ಥ ಮರವನ್ನು ಮುಟ್ಟದೆ ನೀರನ್ನು ಅರ್ಪಿಸಿ.
- ಗುರುವಾರದಂದು ದೇವಾಲಯದಲ್ಲಿ ಬಾಳೆಮರವನ್ನು ಪೂಜಿಸಿ ಅದಕ್ಕೆ ಕಡಲೆ ಬೇಳೆಯನ್ನು ಅರ್ಪಿಸುವುದು ನಿಮಗೆ ತುಂಬಾ ಉತ್ತಮವಾಗಿರುತ್ತದೆ.
- ಭಾನುವಾರ ಬೆಳಿಗ್ಗೆ 8:00 ಗಂಟೆಗಿಂತ ಮೊದಲು ತಾಮ್ರದ ಉಂಗುರದಲ್ಲಿ ಮಾಣಿಕ್ಯ ರತ್ನವನ್ನು ತಯಾರಿಸಿ ಅನಾಮಿಕಾ ಬೆರಳಿನಲ್ಲಿ ಧರಿಸುವುದರಿಂದ ನಿಮಗೆ ಶುಭ ಫಲಿತಾಂಶ ಸಿಗುತ್ತದೆ.
- ಮೂರು ಮುಖ ರುದ್ರಾಕ್ಷ ದಿಂದಲೂ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ಇದನ್ನು ನೀವು ಯಾವುದೇ ಮಂಗಳವಾರದಂದು ಧರಿಸಬಹುದು.
- ಪ್ರತಿ ಶನಿವಾರದಂದು ಸಾಸವೆ ಎಣ್ಣೆ ಮತ್ತು ಸಂಪೂರ್ಣ ಉದ್ದಿನ ಬೇಳೆಯನ್ನು ಬಡವರಿಗೆ ಮತ್ತು ಅಗತ್ಯವಿರುವವರಿಗೆ ದಾನ ಮಾಡಿ.
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
- Dev Diwali 2025: Shivvaas Yoga Will Bring Fortune!
- November 2025: A Quick Glance Into November 2025
- Weekly Horoscope November 3 to 9, 2025: Predictions & More!
- Tarot Weekly Horoscope From 2 November To 8 November, 2025
- Numerology Weekly Horoscope: 2 November To 8 November, 2025
- Venus Transit In Libra: Showers Of Love Incoming!
- Devuthani Ekadashi 2025: Check Out Its Date, Katha, & More!
- November 2025 Numerology Monthly Horoscope: Read Now
- Tarot Talks: November Monthly Messages For The Zodiac Signs!
- Venus Transit In Libra Brings Balance & Justice To The World!
- देव दिवाली 2025: शिववास योग से खुलेंगे सौभाग्य के द्वार, एक उपाय बदल देगा किस्मत!
- नवंबर 2025 में है देवउठनी एकादशी, देखें और भी बड़े व्रत-त्योहारों की लिस्ट!
- नवंबर के इस पहले सप्ताह में अस्त हो जाएंगे मंगल, जानें किन राशियों के लिए रहेगा अशुभ?
- टैरो साप्ताहिक राशिफल 02 से 08 नवंबर, 2025: क्या होगा भविष्यफल?
- अंक ज्योतिष साप्ताहिक राशिफल: 02 नवंबर से 08 नवंबर, 2025
- शुक्र का तुला राशि में गोचर: इन राशियों के प्रेम जीवन में आएगी ख़ुशियों की बहार!
- देवउठनी एकादशी के बाद खुलते हैं शुभ कार्यों के द्वार, पढ़ें पूरी कथा और महिमा!
- मासिक अंक फल नवंबर 2025: ये महीना किसके लिए है ख़ास?
- टैरो मासिक राशिफल: नवंबर 2025 में इन राशियों को मिलेगा बड़ा तोहफा!
- शुक्र का तुला राशि में गोचर: राशि सहित देश-दुनिया पर देखने को मिलेगा प्रभाव






