ವೃತ್ತಿ ರಾಶಿ ಭವಿಷ್ಯ 2020 - Career Horoscope 2020 in Kannada

ವೈದಿಕ ಜ್ಯೋತಿಷ್ಯದಲ್ಲಿ, ನಕ್ಷತ್ರಪುಂಜಗಳನ್ನು ಒಟ್ಟು 12 ರಾಶಿಚಕ್ರ ಚಿಹ್ನೆಗಳಾಗಿ ವಿಂಗಡಿಸಲಾಗಿದೆ. ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನಾ ಇವು 12 ರಾಶಿಚಕ್ರ ಚಿಹ್ನೆಗಳು. ಪ್ರತಿಯೊಬ್ಬ ವ್ಯಕ್ತಿ ಯಾವುದಾದರು ಒಂದು ರಾಶಿಚಕ್ರದ ಒಳಗೆ ಜನಿಸುತ್ತಾನೆ. ಆದ್ದರಿಂದ ಅವುಗಳ ಸ್ಥಾನದ ಪ್ರಕಾರ ತನ್ನ ಜೀವನದಲ್ಲಿ ಒಳ್ಳೆಯ ಅಥವಾ ಕೆಟ್ಟ ಪರಿಣಾಮಗಳನ್ನು ಪಡೆಯುತ್ತಾನೆ.

ವರ್ಷ 2020 ರಲ್ಲಿ ಏನು ಹೇಳುತ್ತವೆ ನಕ್ಷತ್ರಗಳ ಚಾಲನೆ ? ನೀವು ಯಶಸ್ಸನ್ನು ಪಡೆಯುತ್ತೀರಾ ಅಥವಾ ಇನ್ನು ಕಾಯಬೇಕಾ. ಇದೆಲ್ಲವನ್ನೂ ತಿಳಿಯಲು ವಾರ್ಷಿಕ ರಾಶಿ ಭವಿಷ್ಯ 2020 ಓದಿ. ವೈದಿಕ ಜ್ಯೋತಿಷ್ಯವನ್ನು ಆಧರಿಸಿದ ಈ ಜಾತಕದಲ್ಲಿ ನಿಮ್ಮ ಎಲ್ಲ ಸಾಧ್ಯತೆಗಳನ್ನು ತಿಳಿಸಲಾಗಿದೆ. ಈ ವಾರ್ಷಿಕ ರಾಶಿಫಲದ ಮೂಲಕ ನಿಮ್ಮ ವೃತ್ತಿಪರ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಮುನ್ಸೂಚನೆಗಳನ್ನು ತಿಳಿಯಬಹುದು. ನೀವು ಉದ್ಯೋಗದಲ್ಲಿದ್ದರೆ ಅಥವಾ ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ, ವರ್ಷ 2020 ರಲ್ಲಿ ನಿಮ್ಮ ವೃತ್ತಿಜೀವನ ಯಾವ ದಿಕ್ಕಿನದಲ್ಲಿರುತ್ತದೆ ಎಂಬುದನ್ನು ತಿಳಿಯಲು ನಿಮಗೆ ಕುತೂಹಲವಿರಬೇಕು. ಈ ರೀತಿಯ ಎಲ್ಲಾ ಕುತೂಹಲಗಳು ಮತ್ತು ಸಮಸ್ಯೆಗಳ ಪರಿಹಾರಗಳು ನಿಮಗೆ ಈ ಕ್ರಮದಲ್ಲಿ ಸಿಗುತ್ತವೆ.

ರಾಶಿ ಭವಿಷ್ಯ 2020 ರಲ್ಲಿನ ಮುನ್ಸೂಚನೆಯೆಂದರೆ, ಈ ವರ್ಷ ನೀವು ನಿಮ್ಮ ಮಾರ್ಗಕ್ಕೆ ಬರುವ ವಿವಿಧ ಆಯ್ಕೆಗಳನ್ನು ಆರಿಸಬೇಕಾಗುತ್ತದೆ ಮತ್ತು ಸರಿಯಾದ ಸಮಯದಲ್ಲಿ ಸರಿಯಾದ ಅವಕಾಶವನ್ನು ನಗದು ಮಾಡಿಕೊಳ್ಳಬೇಕು, ಆಗ ಮಾತ್ರ ನೀವು ಉತ್ತಮ ವರ್ಷವನ್ನು ಆನಂದಿಸಲು ಸಾಧ್ಯವಾಗುತ್ತದೆ ಎಂಬುವ ವಿಷಯಗಳ ಬಗ್ಗೆ ಮುನ್ಸೂಚನೆ.

ಈ ವರ್ಷ ನೀವು ಉದ್ಯೋಗವನ್ನು ಬದಲಾಯಿಸಲು ಬಯಸುತ್ತಿದ್ದರೆ ಅಥವಾ ಉದ್ಯೋಗದ ವರ್ಗಾವಣೆಯ ಬಗ್ಗೆ ಯೋಚಿಸುತ್ತಿದ್ದರೆ, ಯಾವ ಸಮಯದಲ್ಲಿ ನೀವು ಅದನ್ನು ಮಾಡಬೇಕು ಮತ್ತು ಅದರಲ್ಲಿ ನೀವು ಯಶಸ್ವಿಯಾಗುತ್ತಿರೋ ಇಲ್ಲವೋ ಎಂಬುದರ ಬಗ್ಗೆಯೂ ತಿಳಿಯಬಹುದು. ಈ ಬದಲಾವಣೆ ಅಥವಾ ವರ್ಗಾವಣೆಯು ನಿಮ್ಮ ವೃತ್ತಿ ಜೀವನಕ್ಕೆ ತುಂಬಾ ಒಳ್ಳೆಯದು ಎಂದು ಸಾಬೀತುಪಡಿಸುತ್ತದೆಯೋ ಅಥವಾ ಇಲ್ಲವೋ ಎಂಬುದು ಸಹ ತಿಳಿಯಬಹುದು.

ಈ ರಾಶಿ ಭವಿಷ್ಯದ ಮೂಲಕ ಜಾತಕದಲ್ಲಿನ ಒಂಬತ್ತು ಗ್ರಹಗಳು ಯಾವ ಸಮಯದಲ್ಲಿ ಯಾವ ಮನೆಗೆ ಸಾಗಣಿಸುತ್ತವೆ, ಯಾವ ಸ್ಥಾನದಲ್ಲಿರುತ್ತವೆ ಮತ್ತು ಅವುಗಳ ಸಕಾರಾತ್ಮಕ ಮತ್ತು ನಕಾರತ್ಮಕ ಪರಿಣಾಮಗಳು ಹೇಗೆ ಬೀರುತ್ತವೆ ಎಂಬುವ ಮುನ್ಸೂಚನೆಯನ್ನು ಪಡೆಯಬಹುದು ಮತ್ತು ಮುನ್ಸೂಚನೆಯನ್ನು ಪಡೆದ ನಂತರ ಅದಕ್ಕೆ ಸರಿಯಾದ ಮತ್ತು ಸುಲಭವಾಗಿ ಮಾಡಲಾಗುವ ಪರಿಹಾರಗಳನ್ನು ಸಹ ತಿಳಿಸಲಾಗಿದೆ. ರಾಶಿ ಭವಿಷ್ಯ 2020 ರ ಪ್ರಕಾರ, ವೃತ್ತಿ ಜೇವನಕ್ಕೆ ಸಂಬಂಧಿಸಿದ ಮುನ್ಸೂಚನೆಗಳ ಮೂಲಕ ನಿಮ್ಮ ಕುಟುಂಬ ಜೇವನದ ಮೇಲೆ ಬೀರುವ ಪರಿಣಾಮಗಳನ್ನು ಎದುರಿಸಲು ಹೇಗೆ ಸಿದ್ಧರಾಗಿರಬೇಕು ಎಂದು ಸಹ ತಿಳಿಯಬಹುದು.

ಹೊಸ ವರ್ಷವು ನಮ್ಮೆಲ್ಲರಿಗೂ ಆಶ್ಚರ್ಯ ಮತ್ತು ಬೆಳವಣಿಗೆಯ ನಿರೀಕ್ಷೆಗಳ ಚೀಲವಾಗಿದೆ. ವಾರ್ಷಿಕ ರಾಶಿ ಭವಿಷ್ಯ 2020 ನಿಮ್ಮ ವೃತ್ತಿಪರ ಜೀವನದಲ್ಲಿ ಘಟನೆಗಳ ಸಂಭವವನ್ನು ನಿಮಗೆ ಪರಿಚಯಿಸುತ್ತದೆ. ನಿಮ್ಮ ವೃತ್ತಿಪರ ಕನಸನ್ನು ನನಸಾಗಿಸುವ ಮಹತ್ವಾಕಾಂಕ್ಷೆ, ಉದ್ಯೋಗ ಉದ್ದೇಶಗಳಿಗಾಗಿ ಪ್ರಯಾಣಿಸಲು ಅವಕಾಶ, ಲಾಭದಾಯಕ ಫಲಿತಾಂಶಗಳನ್ನು ಪಡೆಯಲು ಅವಕಾಶವನ್ನು ನೀಡುತ್ತದೆ. 2020 ರಲ್ಲಿ ಜೀವನದಲ್ಲಿ ಯಶಸ್ಸನ್ನು ಗುರಿಯಾಗಿಸಲು ಹಲವು ಕನಸುಗಳನ್ನು ಪೂರೈಸಬೇಕು ಮತ್ತು ಯಾವುದಕ್ಕೆ ಆದ್ಯತೆ ನೀಡಬೇಕು. ಮುಂಬರುವ ವರ್ಷಕ್ಕೆ ನಿಮ್ಮ ವೃತ್ತಿಜೀವನದ ಗುರಿಗಳೇನು ಮತ್ತು ವೃತ್ತಿಪರ ಏಣಿಯ ಮೇಲ್ಭಾಗವನ್ನು ತಲುಪಲು ಯಾವ ಪ್ರಯತ್ನಗಳು ಬೇಕಾಗುತ್ತವೆ? 2020 ರಲ್ಲಿ ನಿಮ್ಮ ಕನಸಿನ ಆಸೆ ಏನು? 2020 ರಲ್ಲಿ ನಿಮ್ಮ ವೃತ್ತಿಜೀವನದಲ್ಲಿ ಯಾವ ಗ್ರಹಗಳು ಹೊರಹೊಮ್ಮುತ್ತವೆ. ವಾರ್ಷಿಕ ಜಾತಕ 2020 ಮುನ್ಸೂಚನೆಯೊಂದಿಗೆ 2020 ರ ವರ್ಷವನ್ನು ಪ್ರಾರಂಭಿಸೋಣ. ನಮ್ಮ ಪ್ರಖ್ಯಾತ ಜ್ಯೋತಿಷಿಗಳು ಗ್ರಹಗಳ ಸಾಗಣೆ ಮತ್ತು ಅವುಗಳ ಚಲನವಲನಗಳನ್ನು ಪರಿಗಣಿಸಿ ಪ್ರತಿ ರಾಶಿಚಕ್ರ ಚಿಹ್ನೆಗಾಗಿ ನಿರ್ದಿಷ್ಟವಾಗಿ ವಾರ್ಷಿಕ ಮುನ್ಸೂಚನೆಯನ್ನು ರೂಪಿಸಿದ್ದಾರೆ. ರಾಶಿ ಭವಿಷ್ಯ 2020 ನಿಮ್ಮ ನಿರ್ಧಾರಗಳನ್ನು ಉತ್ತಮವಾಗಿ ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ ಇದರಿಂದ ನೀವು ಮುಂದೆ ಸಮೃದ್ಧ ಮತ್ತು ಯಶಸ್ವಿ ಜೀವನವನ್ನು ನಡೆಸುತ್ತೀರಿ. ವೃತ್ತಿ ಜೀವನದ ಬಗ್ಗೆ ಯಾವುದೇ ರೀತಿಯ ಅಪಾಯವನ್ನು ತೆಗೆದುಕೊಳ್ಳುವ ಮೊದಲು ಒಮ್ಮೆ ಜ್ಯೋತಿಷ್ಯ ಸಲಹೆಯನ್ನು ತೆಗೆದುಕೊಳ್ಳಿ ಏಕೆಂದರೆ ನಂತರ ಪಶ್ಚತ್ತಾಪ ಪಡೆಯುವುದಕ್ಕಿಂತ ಮೊದಲೇ ಮಾಹಿತಿಯನ್ನು ಪಡೆದುಕೊಂಡು ಎಚ್ಚರವಾಗಿರುವುದು ಉತ್ತಮ ಮತ್ತು ಇದರಿಂದ ನೀವು ಯಾವುದೇ ಸವಾಲನ್ನು ಎದುರಿಸಲು ಸಾಧ್ಯವಾಗುತ್ತದೆ. ಆದ್ದರಿಂದ ನಿಮ್ಮ ವೃತ್ತಿ ಜೀವನದ ಬಗ್ಗೆ ಹೆಚ್ಚು ಮಾಹಿತವನ್ನು ಪಡೆಯಲು ನಮ್ಮ ರಾಶಿ ಭವಿಷ್ಯ 2020 ಅನ್ನು ಓದಿ ಮತ್ತು ಇದರ ಮೂಲಕ ಮುನ್ಸೂಚನೆಯನ್ನು ಪಡೆಯಿರಿ.

ಮೇಷ ರಾಶಿಭವಿಷ್ಯ 2020 ಪ್ರಕಾರ ವೃತ್ತಿ ಜೀವನ

Aries Career Horoscope 2020 Kannadaಮೇಷ ರಾಶಿ ಭವಿಷ್ಯ 2020 ರ ಪ್ರಕಾರ ಮೇಷ ರಾಶಿಚಕ್ರದ ಜನರು ವೃತ್ತಿಪರ ಜೇವನದಲ್ಲಿ ಎತ್ತರವನ್ನು ತಲುಪಲು ಉತ್ತಮ ಅವಕಾಶಗಳನ್ನು ಹೊಂದಿರುತ್ತಾರೆ. ಈ ವರ್ಷ ನೀವು ನಿಮ್ಮ ಉದ್ಯೋಗವನ್ನು ಬದಲಾಯಿಸಲು ಬಯಸುತ್ತಿದ್ದರೆ ಅದರಲ್ಲೂ ಸಹ ನೀವು ಯಶಸ್ಸನ್ನು ಪಡೆಯುತ್ತೀರಿ. ಮತ್ತು ನೀವು ಪಡೆಯುವ ಹೊಸ ಉದ್ಯೋಗದ ಆರಂಭದಲ್ಲಿ ನೀವು ಹೆಚ್ಚು ಪರಿಶ್ರಮ ಮಾಡಬೇಕಾಗುತ್ತದೆ, ಆದರೆ ಅದರ ನಂತರ ಅದು ಸುಸ್ಥಿರ ಉದ್ಯೋಗಕ್ಕೆ ಪರಿವರ್ತನಗೊಳ್ಳುತ್ತದೆ. ನೀವು ಒಂದು ಉತ್ತಮ ಕೆಲಸದ ಸ್ಥಳದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಇದಕ್ಕಾಗಿ ಜನವರಿ ಮಧ್ಯದಿಂದ ಮೇ ಮಧ್ಯದವರೆಗೆ ಸಾಕಷ್ಟು ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ನೀವು ನಿಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ ಮತ್ತು ನಿಮ್ಮ ವರಿಷ್ಠ ಅಧಿಕಾರಿಗಳಿಂದಲೂ ನಿಮ್ಮ ಕೆಲಸವನ್ನು ಪ್ರಶಂಶಿಸಲಾಗುತ್ತದೆ.

ಇಂದಿನವರೆಗೂ ನಿಮ್ಮಿಂದ ಮಾಡಲಾಗಿರುವ ಪರಿಶ್ರಮದ ಉತ್ತಮ ಫಲಿತಾಂಶವನ್ನು ಪಡೆಯುವ ಸಮಯ ಇದಾಗಿದೆ. ಮೇ ನಿಂದ ಸೆಪ್ಟೆಂಬರ್ ವರೆಗಿನ ಸಮಯ ನಿಮ್ಮ ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಲು ನಿಮಗೆ ಅವಕಾಶ ನೀಡುತ್ತದೆ ಮತ್ತು ಜನವರಿ ತಿಂಗಳಲ್ಲಿ ಕೆಲಸದ ಪ್ರದೇಶಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಡಿ, ಇಲ್ಲದಿದ್ದರೆ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.

ಈ ವರ್ಷದುದ್ದಕ್ಕೂ ನಿಮ್ಮ ವೃತ್ತಿಜೀವನವು ಪ್ರಗತಿಯಾಗುತ್ತದೆ ಎಂದು ನಂಬಿರಿ ಮತ್ತು ನೀವು ಕಷ್ಟಪಟ್ಟು ಕೆಲಸ ಮಾಡಿದರೆ, ಯಶಸ್ಸು ಮತ್ತು ಬಡ್ತಿ ಸಾಧಿಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಶನಿ ದೇವ ಅವರೇ ಇದಕ್ಕೆ ಅಡಿಪಾಯ ಹಾಕುತ್ತಿದ್ದಾರೆ. ನೀವು ಸೇವಾ ಉದ್ಯಮ, ಆಟೋಮೊಬೈಲ್, ಪ್ರಿಂಟಿಂಗ್ ಪ್ರೆಸ್, ಗ್ಯಾಸ್ ಮತ್ತು ಪೆಟ್ರೋಲ್ ಮತ್ತು ತೈಲ, ಭೂ ಸಂಬಂಧಿತ ಕೆಲಸ, ತರಕಾರಿ ಕೆಲಸ ಇತ್ಯಾದಿಗಳನ್ನು ಮಾಡಿದರೆ ಈ ವರ್ಷ ನೀವು ಬಡ್ತಿ ಪಡೆಯುವ ಸಾಧ್ಯತೆ ಹೆಚ್ಚಾಗಿದೆ. ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಸಮಯ ಉತ್ತಮವಾಗಿರುತ್ತದೆ

ಈ ವರ್ಷ ನೀವು ತುಂಬಾ ಆತ್ಮವಿಶ್ವಾಸದಿಂದ ಯಾವುದೇ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಎಂಬುದರ ಬಗ್ಗೆ ನೀವು ಹೆಚ್ಚು ಗಮನ ಹರಿಸಬೇಕು. ನಿಮ್ಮ ಅಧೀನ ಅಧಿಕಾರಿಗಳಿಗೆ ಯಾವುದೇ ರೀತಿಯ ತೊಂದರೆಗಳನ್ನು ನೀಡಬೇಡಿ ಇಲ್ಲದಿದ್ದರೆ ಪರಿಸ್ಥಿತಿಗಳು ನಿಮ್ಮ ವಿರುದ್ಧವಾಗಿ ಉಂಟಾಗಬಹುದು. ಒಟ್ಟಾರೆಯಾಗಿ ಈ ವರ್ಷ 2020 ನಿಮ್ಮ ವೃತ್ತಿಪರ ಜೀವನಕ್ಕೆ ಬಹಳಷ್ಟು ಮಟ್ಟಿಗೆ ಉತ್ತಮವಾಗಿರುವ ಸಾಧ್ಯತೆ ಇದೆ . ಆದ್ದರಿಂದ ಸಿದ್ಧರಾಗಿ ಮತ್ತು ಸಾಧ್ಯತೆಗಳನ್ನು ನಿಜವಾಗಿಯೂ ಮಾಡಿ..

ಮೇಷ ರಾಶಿಯ ವರ್ಷ 2020 ರ ವಿವರವಾದ ಮುನ್ಸೂಚನೆಯನ್ನು ಓದಿ . ಮೇಷ ರಾಶಿ ಭವಿಷ್ಯ 2020

ವೃಷಭ ರಾಶಿಭವಿಷ್ಯ 2020 ಪ್ರಕಾರ ವೃತ್ತಿ ಜೀವನ

Taurus career horoscope 2020 kannadaವೃಷಭ ರಾಶಿ ಭವಿಷ್ಯ 2020 ರ ಪ್ರಕಾರ, ವೃಷಭ ರಾಶಿಚಕ್ರದ ಜನರಿಗೆ ಸಾಕಷ್ಟು ಮಟ್ಟಿಗೆ ಉತ್ತಮವಾಗಲಿದೆ. ಏಕೆಂದರೆ ಕರ್ಮದ ಮನೆಯ ಅಧಿಪತಿ ಶನಿ ಜನವರಿ ತಿಂಗಳಲ್ಲಿ ಎಂಟನೇ ಮನೆಯಿಂದ ಹೊರಬಂದು ಒಂಬತ್ತನೇ ಮನೆಯಲ್ಲಿ ಪ್ರವೇಶಿಸುತ್ತಾನೆ. ಇದು ನಿಮ್ಮ ವೃತ್ತಿಯಲ್ಲಿ ಪ್ರಗತಿಯ ಮಾರ್ಗವನ್ನು ತೆರೆಯುತ್ತದೆ. ಮತ್ತೊಂದು ಸ್ಥಳಕ್ಕೆ ನಿಮ್ಮ ಸ್ಥಾನ ವರ್ಗಾಯಿಸಬಹುದು. ಆದರೆ ನೀವು ತೊಂದರೆಗೊಳಗಾಗುವ ಅಗತ್ಯವಿಲ್ಲ, ಏಕೆಂದರೆ ಈ ವರ್ಗಾವಣೆಯು ನಿಮ್ಮ ಒಳಿತಿಗಾಗಿ ಇರುತ್ತದೆ. ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಪ್ರಗತಿಯನ್ನು ಪಡೆಯುತ್ತೀರಿ. ಆದರೆ ಇಂದಿನವರೆಗೆ ಯಾವುದೇ ಉದ್ಯೋಗಕ್ಕೆ ನೇಮಕಗೊಂಡಿಲ್ಲದ ಜನರು ಇನ್ನು ಸ್ವಲ್ಪ ಸಮಯ ಕಾಯಬೇಕಾಗುತ್ತದೆ.

ಮಾರ್ಚ್ ನಿಂದ ಜೂನ್ ವರೆಗಿನ ಸಮಯವೂ ಕೆಲವು ತೊಂದರೆಗಳಿಂದ ತುಂಬಿರಬಹುದು ಮತ್ತು ಈ ಸಮಯದಲ್ಲಿ ನಿಮ್ಮ ಮನಸ್ಸು ನಿಮ್ಮ ಕೆಲಸದಿಂದ ಬೇಸರಗೊಳ್ಳುವ ಸಾಧ್ಯತೆ ಇದೆ. ಆದರೆ ನೀವು ಧೈರ್ಯದಿಂದ್ದರೆ ಮತ್ತು ಧೈರ್ಯದಿಂದ ನಿಮ್ಮ ಪರಿಶ್ರಮವನ್ನು ಮಾಡುತ್ತಿದ್ದರೆ ಜೂನ್ ನಂತರ ನೀವು ತುಂಬಾ ಉತ್ತಮ ಸಕಾರಾತ್ಮಕ ಬದಲಾವಣೆಗಳನ್ನು ನಿಮ್ಮ ವೃತ್ತಿಯಲ್ಲಿ ಕಾಣಬಹುದು. ಆದಾಗ್ಯೂ ಶನಿ ಒಂದು ಮಂದ ಗ್ರಹ ಆದ್ದರಿಂದ ಮುಖ್ಯವಾಗಿ ಸೆಪ್ಟೆಂಬರ್ ವರೆಗಿನ ಸಮಯವು ಖಂಡಿತವಾಗಿಯೂ ನೀವು ಕಷ್ಟಪಟ್ಟು ಕೆಲಸ ಮಾಡುವಂತೆ ಮಾಡುತ್ತದೆ. ಆದರೆ ಅದರ ನಂತರ ನೀವು ಪ್ರಗತಿಯ ಮಾರ್ಗದಲ್ಲಿ ಮುಂದುವರಿಯುತ್ತಿರಿ. ಮತ್ತು ಈ ಪ್ರಗತಿ ಧೀರ್ಘಕಾಲದ ವರೆಗೆ ನಿಮ್ಮೊಂದಿಗೆ ಇರುತ್ತದೆ. ಅದರಿಂದ ಸಂತೋಷವಾಗಿರುತ್ತೀರಿ. ನಿಮ್ಮ 100 ಪ್ರತಿಶತ ಪ್ರಯತ್ನಗಳನ್ನು ಸಹ ಮುಂದುವರಿಸುತ್ತೀರಿ. ಹಿಂದಿನ ವರ್ಷದಿಂದ ಮುಂದಿವರಿಸಿದಿರುವಂತಹ ಕೆಲಸಗಳನ್ನು ಸಹ ನೀವು ಈ ವರ್ಷವು ಮುಂದುವರಿಸಲು ಸಾಧ್ಯವಾಗುತ್ತದೆ. ನೀವು ಅನೇಕ ರೀತಿಯಿಂದ ಸ್ಪೂರ್ತಿಯನ್ನು ಪಡೆಯುವಿರಿ ಇದರ ಕಾರಣದಿಂದ ಕಾರ್ಪೊರೇಟ್ ಜಗತ್ತಿನಲ್ಲಿ ಹೆಚ್ಚಿನ ಮೆಟ್ಟಲುಗಳನ್ನು ಏರಲು ಸಾಧ್ಯವಾಗುತ್ತದೆ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಮತ್ತು ತಮ್ಮ ಕೆಲಸದ ಸ್ಥಳದಲ್ಲಿ ಹೊಸ ಕಾರ್ಯಗಳನ್ನು ಪ್ರಾರಂಭಿಸಲು ಇದು ಅನುಕೂಲಕರ ಸಮಯವಾಗಿರುತ್ತದೆ.ವರ್ಷದ ಮಧ್ಯಭಾಗವು ಇಲ್ಲಿಯವರೆಗೆ ಮಾಡಿದ ಕೆಲಸಕ್ಕೆ ಸಾಕಷ್ಟು ಆದಾಯವನ್ನು ನೀಡುತ್ತದೆ.

ಜನವರಿ, ಮೈ ಮತ್ತು ಜೂನ್ ಈ ತಿಂಗಳುಗಳ ಸಮಯದಲ್ಲಿ ನೀವು ವಿದೇಶಿ ಸಂಪರ್ಕಗಳಿಂದ ಉತ್ತಮ ಪ್ರಯೋಜನಗಳನ್ನು ಪಡೆಯುತ್ತೀರಿ. ನೀವು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಈ ಸಮಯದಲ್ಲಿ ನಿಮಗಾಗಿ ಸಾಧ್ಯತೆಗಳು ಉಧ್ಭವಿಸುತ್ತವೆ ಮತ್ತು ನಿಮ್ಮ ಕಾರ್ಯಕ್ಷಮತೆಯಿಂದ ನಿಮ್ಮ ಉನ್ನತ ಅಧಿಕಾರಿಗಳನ್ನು ಮೆಚ್ಚಿಸಲು ನಿಮಗೆ ಸಾಧ್ಯವಾಗುತ್ತದೆ. ಪರಿಣಾಮವಾಗಿ, ನೀವು ಬಡ್ತಿಯನ್ನು ಪಡೆಯಬಹುದು.ಆದ್ದರಿಂದ ಈ ಸಮಯವನ್ನು ನೀವು ಪೂರ್ಣವಾಗಿ ಬಳಸಬೇಕು ಮತ್ತು ನಿಮ್ಮ ಹಿರಿಯ ಅಧಿಕಾರಿಗಳು ನಿಮ್ಮ ಮೇಲೆ ಕೋಪಗೊಳ್ಳುವಂತಹ , ನಿಮಗೆ ಸಿಗುತ್ತಿರುವ ಬಡ್ತಿ ನಿಲ್ಲಲು ಮತ್ತು ಅದು ಮುಂದೂಡುವಂತಹ ಯಾವುದೇ ಕೆಲಸವನ್ನು ಮಾಡಬಾರದು.

ಫೆಬ್ರವರಿ ಮತ್ತು ಮಾರ್ಚ್ ನಡುವೆ, ನೀವು ಕೆಲಸದ ಸ್ಥಳದಲ್ಲಿ ಯಾರೊಂದಿಗೂ ಯಾವುದೇ ವಿವಾದಕ್ಕೆ ಸಿಲುಕದ ಒಂದು ವಿಷಯವನ್ನು ನೀವು ನೋಡಿಕೊಳ್ಳಬೇಕು ಮತ್ತು ಯಾವುದೇ ಪಿತೂರಿಯ ಭಾಗವಾಗಬೇಡಿ ಇಲ್ಲದಿದ್ದರೆ ನೀವು ದೊಡ್ಡ ಬೆಲೆ ಪಾವತಿಸಬೇಕಾಗಬಹುದು. ನಿಮ್ಮ ರಾಜತಾಂತ್ರಿಕ ಕೌಶಲ್ಯಗಳು ನಿಮ್ಮ ಕೆಲಸದ ಕ್ಷೇತ್ರದಲ್ಲಿ ಅತ್ಯಂತ ಕಷ್ಟಕರ ಜನರೊಂದಿಗೆ ವ್ಯವಹರಿಸಲು ಸಹಾಯ ಮಾಡುತ್ತದೆ. ಅದೃಷ್ಟವು ಸಂಪೂರ್ಣವಾಗಿ ನಿಮ್ಮನ್ನು ಬೆಂಬಲಿಸುತ್ತದೆ. ನೀವು ನಿಮ್ಮ ಧೈರ್ಯದ ಬಲದ ಮೇಲೆ ನಿಮ್ಮ ಕನಸುಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ. ಪರಿಶ್ರಮಿಸುವುದನ್ನು ಮುಂದುವರಿಸಿ. , ಇದರಿಂದಾಗಿ ವರ್ಷದ ಅಂತ್ಯದ ವೇಳೆಗೆ ನಿಮ್ಮ ಶಕ್ತಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಬಹುದು. ಇದರ ಪರಿಣಾಮದಿಂದಾಗಿ ನೀವು ವರ್ಷದ ಕೊನೆಯವರೆಗೆ ಸಂತೋಷದ ಸುದ್ಧಿಗಳನ್ನು ಪಡೆಯಬಹುದು. ಈ ವರ್ಷದ ಕೊನೆಯಲ್ಲಿ ಕಾನೂನು ತೊಂದರೆಗಳನ್ನು ಎದುರಿಸಬೇಕಾಗಬಹುದು. ಆದಾಗ್ಯೂ ನೀವು ಸುಲಭವಾಗಿ ಪರಿಹಾರವನ್ನು ಕಂಡುಕೊಳ್ಳುವಿರಿ, ಆದರೂ ನೀವು ಸ್ವಲ್ಪ ಜಾಗರೂಕರಾಗಿರಬೇಕು. ಈ ಸಮಯದಲ್ಲಿ, ನಿಮ್ಮ ಮೇಲೆ ಆರೋಪ ಹೊರಿಸಬಹುದು ಅಥವಾ ಮಾನಹಾನಿ ಮಾಡುವ ಸಾಧ್ಯತೆಯಿದೆ.

ನೀವು ನಿಮ್ಮ ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಬೇಕು. ಏಕೆಂದರೆ ಅವರ ಸಂಪೂರ್ಣ ಗಮನ ನಿಮ್ಮ ಮೇಲೆ ಇರಬಹುದು. ಈ ಸಂದರ್ಭದಲ್ಲಿ, ನಿಮ್ಮ ಸಣ್ಣದೊಂದು ತಪ್ಪು ನಿಮ್ಮನ್ನು ತೊಂದರೆಗೆ ಸಿಲುಕಿಸುತ್ತದೆ. ಈ ವರ್ಷ ನೀವು ಕಠಿಣ ಪರಿಶ್ರಮದಿಂದ ಗೌರವ ಮತ್ತು ಪ್ರತಿಷ್ಠೆಯನ್ನು ಪಡೆಯುವಿರಿ ಎಂಬುದರ ಬಗ್ಗೆ ಗಮನ ಹರಿಸಿ. ಕೆಲವು ಗುಪ್ತ ಶತ್ರುಗಳು ನಿಮ್ಮ ಕಚೇರಿಯಲ್ಲಿ ಸಮಸ್ಯೆಗಳನ್ನು ಮಾತು ಅಡೆತಡೆಗಳನ್ನು ಉಂಟುಮಾಡಬಹುದು. ಆದ್ದರಿಂದ ನೀವು ನಿರ್ದಿಷ್ಟವಾಗಿ ಯಾರನ್ನೂ ಹೆಚ್ಚು ಅವಲಂಬಿಸಬಾರದು ಮತ್ತು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ಮಾಡಬೇಕು. ಸೆಪ್ಟೆಂಬರ್ ನಂತರದ ಸಮಯ ಬಹಳಷ್ಟು ಉತ್ತಮವಾಗಲಿದೆ. ವೃಷಭ ರಾಶಿ 2020 (Vrishabh Rashi 2020) ರ ಪ್ರಕಾರ ವೃಷಭ ರಾಶಿಯ ಜನರು ತಮ್ಮದೇ ಆದ ಪರಿಶ್ರಮದಿಂದ ತಮ್ಮ ಗುರುತು ಮಾಡಲು ಸಾಧ್ಯವಾಗುತ್ತದೆ. ಪರಿಣಾಮವಾಗಿ, 2020 ವರ್ಷವು ಹಿಂದಿನ ವರ್ಷಕ್ಕಿಂತ ನಿಮ್ಮ ವೃತ್ತಿಜೀವನದಲ್ಲಿ ಹೆಚ್ಚಿನ ಪ್ರಗತಿಯನ್ನು ತರುತ್ತದೆ. ವರ್ಷದ ಅಂತ್ಯದ ವೇಳೆಗೆ, ನಿಮ್ಮ ವೃತ್ತಿಜೀವನದ ಬಗ್ಗೆ ನಿಮಗೆ ವಿಶ್ವಾಸವಿರುತ್ತದೆ ಮತ್ತು ನಿಮ್ಮ ಸಂತೋಷಕ್ಕೆ ಕಾರಣವೆಂದರೆ, ಇದುವರೆಗೆ ನಿಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನು ಸಾಧಿಸಿದ ನಿಜವಾದ ವ್ಯಕ್ತಿ ಎಂದು ನೀವು ಭಾವಿಸಲು ಸಾಧ್ಯವಾಗುತ್ತದೆ..

ವೃಷಭ ರಾಶಿಯ ವರ್ಷ 2020 ರ ವಿವರವಾದ ಮುನ್ಸೂಚನೆಯನ್ನು ಓದಿ . 2020 ವೃಷಭ ರಾಶಿ ಭವಿಷ್ಯ

ಮಿಥುನ ರಾಶಿ ಭವಿಷ್ಯ 2020 ರ ಪ್ರಕಾರ ವೃತ್ತಿ ಜೀವನ

Gemini career horoscope 2020 kannadaಮಿಥುನ ರಾಶಿ ಭವಿಷ್ಯ 2020 ವೃತ್ತಿಜೀವನಕ್ಕೆ 2020 ವರ್ಷವು ಸಾಮಾನ್ಯವೆಂದು ತೋರುತ್ತದೆ. ಈ ವರ್ಷ ಜನವರಿಯಲ್ಲಿ, ಶನಿಯ ಸಾಗಣೆ ನಿಮ್ಮ ಎಂಟನೇ ಮನೆಯಲ್ಲಿರುತ್ತದೆ, ಇದರಿಂದಾಗಿ ನೀವು ವಾಣಿಜ್ಯಿಕವಾಗಿ ಕೆಲವು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ನೀವು ಉದ್ಯೋಗ ಮಾಡುತ್ತಿದ್ದರೆ, ಈ ಸಮಯದಲ್ಲಿ ನೀವು ಮಾಡುತ್ತಿರುವ ಪ್ರಯತ್ನಗಳಿಗೆ ಸರಿಯಾದ ಲಾಭ ಸಿಗುತ್ತಿಲ್ಲ ಎಂದು ನಿಮಗೆ ಅನಿಸಬಹುದು. ಆದರೆ ಕಷ್ಟಪಟ್ಟು ಕೆಲಸ ಮಾಡುವ ಸಮಯ ಇದು.

ಏಳನೇ ಮನೆಯಲ್ಲಿ ಗುರುವಿನ ಸಾಗಣೆ ನಿಮ್ಮ ಪಾಲುದಾರಿಕೆ ವ್ಯವಹಾರದಲ್ಲಿ ಯಶಸ್ಸನ್ನು ನೀಡುತ್ತದೆ. ನೀವು ಪಾಲುದಾರಿಕೆಯಲ್ಲಿ ಯಾವುದೇ ವ್ಯವಹಾರವನ್ನು ಮಾಡಿದರೆ, ಜುಲೈನಿಂದ ನವೆಂಬರ್ ಮಧ್ಯದ ಸಮಯವು ನಿಮಗೆ ಉತ್ತಮವಾಗಿರುತ್ತದೆ, ಏಕೆಂದರೆ ಈ ಸಮಯದಲ್ಲಿ ನಿಮ್ಮ ಸಂಗಾತಿ ಸಹ ನಿಮಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡುತ್ತಾರೆ ಮತ್ತು ಪ್ರತಿಯೊಂದು ಕಾರ್ಯದಲ್ಲೂ ನಿಮ್ಮೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಾರೆ. ನಿಮ್ಮಿಬ್ಬರ ಜೊತೆ ಕೆಲಸ ಮಾಡುವುದರಿಂದ ಇಬ್ಬರಿಗೂ ಒಳ್ಳೆಯ ಲಾಭವಾಗುತ್ತದೆ. ಆದರೆ ಒಂದು ವಿಷಯವನ್ನು ನೆನಪಿನಲ್ಲಿಡಿ, ಜನವರಿಯಿಂದ ಮಾರ್ಚ್ ವರೆಗೆ ಮತ್ತು ನವೆಂಬರ್ ಮಧ್ಯದ ಡಿಸೆಂಬರ್ ಅಂತ್ಯದವರೆಗೆ ಸಮಯವು ಉತ್ತಮವಾಗಿರುವುದಿಲ್ಲ ಏಕೆಂದರೆ ಈ ರೀತಿಯಾಗಿ ನೀವು ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು ಮತ್ತು ನೀವು ಹಣವನ್ನು ಕಳೆದುಕೊಳ್ಳಬಹುದು. ಈ ಸಮಯದಲ್ಲಿ, ನಿಮ್ಮ ಸಂಗಾತಿಯ ಬಗ್ಗೆಯೂ ನೀವು ಗಮನ ಹರಿಸಬೇಕು.

ಮಿಥುನ ರಾಶಿ ಭವಿಷ್ಯ 2020 ರ ಪ್ರಕಾರ ಈ ವರ್ಷ ನೀವು ಯಾವುದೇ ಹೊಸ ವ್ಯಾಪಾರ ಪ್ರಾರಂಭಿಸುವುದನ್ನು ತಪ್ಪಿಸಬೇಕು. ಏಕೆಂದರೆ ನೀವು ಕಾರ್ಯವನ್ನು ಪ್ರಾರಂಭಿಸಿದರೆ, ನೀವು ಅದರಲ್ಲಿ ಕಡಿಮೆ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಇದಕ್ಕಾಗಿ, ನಿಮ್ಮ ಕ್ಷೇತ್ರದ ಅನುಭವಿ ಮತ್ತು ಪ್ರಮುಖ ವ್ಯಕ್ತಿಗಳಿಂದ ಬೆಂಬಲ ಪಡೆಯಲು ನೀವು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ ಮತ್ತು ಅವರು ನಿಮಗೆ ಸಹಾಯ ಮಾಡುತ್ತಾರೆ. ಈ ಎಲ್ಲದರ ಹೊರತಾಗಿಯೂ, ಸಂದರ್ಭಗಳು ಆಗಬಹುದು, ನೀವು ಬಯಸಿದರೂ ಸಹ ಅವರ ಸಲಹೆಯನ್ನು ಬಳಸಲು ನಿಮಗೆ ಸಾಧ್ಯವಾಗುವುದಿಲ್ಲ ಮತ್ತು ನೀವು ಸ್ವಲ್ಪ ನಷ್ಟವನ್ನು ಅನುಭವಿಸಬೇಕಾಗಬಹುದು. ವಿಶೇಷವಾಗಿ ಏಪ್ರಿಲ್, ಮೇ ಮತ್ತು ಜೂನ್ ಸಮಯಗಳು ಈ ವಿಷಯದಲ್ಲಿ ಜಾಗರೂಕರಾಗಿರುತ್ತವೆ.

ಈ ವರ್ಷ, ನಿಮ್ಮ ಕೆಲಸದಿಂದ ನೀವು ಅನೇಕ ಪ್ರವಾಸಗಳಿಗೆ ಹೋಗಬೇಕಾಗಬಹುದು, ಅವುಗಳಲ್ಲಿ ಹೆಚ್ಚಿನವು ಯಶಸ್ವಿಯಾಗುತ್ತವೆ ಮತ್ತು ನಿಮ್ಮ ವೃತ್ತಿಜೀವನವನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ ಆದರೆ ಕೆಲವು ಪ್ರವಾಸಗಳಲ್ಲಿ ನೀವು ಸಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ಸಮಯಕ್ಕೆ ಸರಿಯಾಗಿ ಇವುಗಳ ಬಗ್ಗೆ ಯೋಚಿಸಿ ಮತ್ತು ಸಂಪೂರ್ಣ ಯೋಜನೆಯೊಂದಿಗೆ ಪ್ರಯಾಣ ಮಾಡಿ ಇದರಿಂದ ಯಾವುದೇ ರೀತಿಯ ಅನಾನುಕೂಲತೆಗಳನ್ನು ತಪ್ಪಿಸಬಹುದು. ಏಪ್ರಿಲ್ ನಿಂದ ಜುಲೈ ವರೆಗೆ ಸಮಯವನ್ನು ಪ್ರವಾಸಗಳಿಗೆ ಹೆಚ್ಚು ಖರ್ಚು ಮಾಡಲಾಗುತ್ತದೆ.

ಈ ವರ್ಷ ನೀವು ನಿಮ್ಮ ಜೇವನದಲ್ಲಿ ಬಹಳಷ್ಟು ಮುಂದುವರಿಯುತ್ತಿರಿ. ಕಾಲಕಾಲಕ್ಕೆ, ನಿಮ್ಮ ವೃತ್ತಿಜೀವನದಲ್ಲಿ ನಿಮ್ಮನ್ನು ಕಾಡುವ ದೌರ್ಬಲ್ಯಗಳು ಯಾವುವು ಎಂಬುದನ್ನು ನೀವು ಪರಿಗಣಿಸಬೇಕು.ನೀವು ಅದರ ಬಗ್ಗೆ ತಿಳಿದಿದ್ದರೆ ಈ ವರ್ಷ ಇನ್ನಷ್ಟು ಪ್ರಗತಿ ಸಾಧಿಸಲು ನಿಮಗೆ ಸಾಧ್ಯವಾಗುತ್ತದೆ. ನೀವು ಉದ್ಯೋಗ ಮಾಡುತ್ತ್ತಿದ್ದರೆ , ಜನವರಿಯಿಂದ ಮಾರ್ಚ್ ವರೆಗೆ ಮತ್ತು ಜುಲೈನಿಂದ ನವೆಂಬರ್ ಮಧ್ಯದವರೆಗೆ ನಿಮ್ಮ ಕೆಲಸಕ್ಕೆ ಉತ್ತಮ ಸಮಯವಾಗಿರುತ್ತದೆ. ಈ ಸಮಯದಲ್ಲಿ, ನಿಮ್ಮ ಕಚೇರಿಯನ್ನು ಹೆಚ್ಚು ಪ್ರಶಂಸಿಸಲಾಗುತ್ತದೆ ಮತ್ತು ನಿಮ್ಮ ಅಭಿಪ್ರಾಯವನ್ನು ಗೌರವಿಸಲಾಗುತ್ತದೆ. ಈ ಸಮಯದಲ್ಲಿ ನೀವು ಬಡ್ತಿ ಸಹ ಪಡೆಯಬಹುದು ಮತ್ತು ನಿಮ್ಮ ಸಂಬಳವೂ ಹೆಚ್ಚಾಗುತ್ತದೆ.

ಮಿಥುನ ರಾಶಿಯ ವರ್ಷ 2020 ರ ವಿವರವಾದ ಮುನ್ಸೂಚನೆಯನ್ನು ಓದಿ . 2020 ಮಿಥುನ ರಾಶಿ ಭವಿಷ್ಯ

ಕರ್ಕ ರಾಶಿ ಭವಿಷ್ಯ 2020 ರ ಪ್ರಕಾರ ವೃತ್ತಿ ಜೀವನ

Cancer career horoscope 2020 kannadaಕರ್ಕ ರಾಶಿ ಭವಿಷ್ಯ 2020 ರ ಆರಂಭವು ಕರ್ಕ ರಾಶಿಚಕ್ರದ ಜನರ ವೃತ್ತಿಜೀವನಕ್ಕೆ ಶುಭವಾಗಬಹುದು. ಈ ವರ್ಷ ಯಾವುದೇ ಹೊಸ ಕೆಲಸವನ್ನು ಹುಡುಕುತ್ತೀರಿ ಮತ್ತು ನಿಮ್ಮ ಸ್ವಂತ ಸಾಮರ್ಥ್ಯಗಳ ಬಲದ ಮೇಲೆ ನೀವು ದೊಡ್ಡ ಉದ್ಯಮದೊಂದಿಗೆ ಸಂಪರ್ಕ ಸಾಧಿಸಬಹುದು. ಇದರ ಕಾರಣದಿಂದಾಗಿ ನೀವು ವೃತ್ತಿಪರ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಏಪ್ರಿಲ್ ಇಂದ ಜೂಲೈ ನಡುವೆ ಗುರುವು ನಿಮ್ಮ ಏಳನೇ ಮನೆಯಲ್ಲಿ ಶನಿಯೊಂದಿಗೆ ಸಾಗಾಣಿಸುತ್ತಾನೆ, ಇದು ನಿಮ್ಮ ವ್ಯಾಪಾರ ಮತ್ತು ಉದ್ಯೋಗಕ್ಕಾಗಿ ಉತ್ತಮ ಸಮಯವಾಗಲಿದೆ. ಈ ಅವಧಿಯಲ್ಲಿ ನೀವು ನಿಮ್ಮ ಕೆಲಸಗಳಿಂದ ಉತ್ತಮ ಲಾಭವನ್ನು ಸಹ ಪಡಯುತ್ತಿರಿ ಮತ್ತು ನಿಮ್ಮ ವೃತ್ತಿ ಜೀವನದಲ್ಲಿ ನಿಮ್ಮ ಸ್ಥಾನವು ಬಲವಾಗುತ್ತದೆ. ನೀವು ನಿಮ್ಮ ಸ್ನೇಹಿತರೊಂದಿಗೆ ವ್ಯಾಪಾರವನ್ನು ಮಾಡುತ್ತಿದ್ದರೆ. ಈ ಸಮಯದಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದು. ವ್ಯಾಪಾರದ ಪ್ರಯಾಣಗಳಿಗೆ ಈ ಸಮಯ ಸಾಮಾನ್ಯವಾಗಲಿದೆ. ಜನವರಿ ಇಂದ ಏಪ್ರಿಲ್ ಮತ್ತು ಜೂಲೈ ನಿಂದ ನವೆಂಬರ್ ಮಧ್ಯದಲ್ಲಿ ನಿಮ್ಮ ವ್ಯಾಪಾರಕ್ಕಾಗಿ ನೀವು ವಿದೇಶದಲ್ಲಿ ಅನೇಕ ಪ್ರವಾಸಗಳನ್ನು ಹೊಂದಿರಬಹುದು. ಇದರಿಂದ ನೀವು ಸಕಾರಾತ್ಮಕ ಪರಿಣಾಮಗಳನ್ನು ಪಡೆಯುತ್ತೀರಿ. ನೀವು ಉದ್ಯೋಗಕ್ಕೆ ಸಂಬಂಧ ಹೊಂದಿದ್ದರೆ ಈ ಸಮಯದಲ್ಲಿ ನೀವು ನಿಮ್ಮ ಆಸೆಯಂತೆ ವರ್ಗಾವಣೆಯನ್ನು ಪಡೆಯಬಹುದು. ಒಟ್ಟಾರೆಯಾಗಿ ಈ ವರ್ಷ 2020 ಸಾಮಾನ್ಯವಾಗಿರುತ್ತದೆ ಆದರೆ ನಿಮ್ಮ ಅನೇಕ ಮಹತ್ವಾಕಾಂಕ್ಷೆಗಳು ಪೂರ್ಣಗೊಳ್ಳುವುದರಿಂದ ನೀವು ಸಂತೋಷರಾಗಿರುತ್ತೀರಿ.

ಕರ್ಕ ರಾಶಿಯ ವರ್ಷ 2020 ರ ವಿವರವಾದ ಮುನ್ಸೂಚನೆಯನ್ನು ಓದಿ . 2020 ಕರ್ಕ ರಾಶಿ ಭವಿಷ್ಯ

ಸಿಂಹ ರಾಶಿ ಭವಿಷ್ಯ 2020 ರ ಪ್ರಕಾರ ವೃತ್ತಿ ಜೀವನ

Leo career horoscope 2020 kannadaಸಿಂಹ ರಾಶಿ ಭವಿಷ್ಯ 2020 ರ ಪ್ರಕಾರ ಸಿಂಹ ರಾಶಿಚಕ್ರದ ಜನರ ವೃತ್ತಿಪರ ಜೀವನಕ್ಕಾಗಿ ಉತ್ತಮವಾಗಿರುವ ಸಾಧ್ಯತೆ ಇದೆ. ಈ ವರ್ಷ ನೀವು ನಿಮ್ಮ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸುವಿರಿ ಮತ್ತು ಉತ್ತಮ ಪ್ರದರ್ಶನ ಮಾಡುವಲ್ಲಿ ಸಾಧ್ಯವಾಗುತ್ತದೆ. ನೀವು ಪೂರ್ತಿ ಮನಸ್ಸಿನಿಂದ ಪ್ರಯತ್ನಿಸಿದರೆ ನೀವು ನಿಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ನಡುವೆ ಸಾಮರಸ್ಯವನ್ನು ಉಳಿಸಲು ಸಾಧ್ಯವಾಗುತ್ತದೆ. ಇದು ನಿಮಗೆ ಅಗತ್ಯವಾಗಿದೆ. ವರ್ಷದ ಆರಂಭದಲ್ಲಿಯೇ 24 ಜನವರಿಗೆ ಶನಿ ನಿಮ್ಮ ಆರನೇ ಮನೆಗೆ ಪ್ರವೇಶಿಸುತ್ತಾನೆ ಮತ್ತು ಪೂರ್ತಿ ಅದೇ ಮನೆಯಲ್ಲಿ ಉಳಿದಿರುತ್ತಾನೆ. ಈ ಸಾಗಣೆಯ ಪರಿಣಾಮದಿಂದಾಗಿ ಉದ್ಯೋಗದಲ್ಲಿ ಉತ್ತಮ ಬಡ್ತಿಯನ್ನು ಪಡೆಯುವ ಸಾಧ್ಯತೆ ಇದೆ. ನಿಮ್ಮ ಕಾರ್ಯಕ್ಷಮತೆಯನ್ನು ಪ್ರಶಂಶಿಸಲಾಗುತ್ತದೆ. ಅದು ನಿಮ್ಮ ಹಿರಿಯ ಅಧಿಕಾರಿಗಳ ಅರಿವಿನಲ್ಲೂ ಬರುತ್ತದೆ. ಇದಲ್ಲದೆ ಕೆಲವು ಜನರ ಸ್ಥಳಾಂತರ ಅಂದರೆ ವರ್ಗಾವಣೆ ಸಹ ಆಗುವ ಉತ್ತಮ ಸಾಧ್ಯತೆ ಇದೆ. ಸಂತೋಷದ ವಿಷಯವೆಂದರೆ, ಈ ವರ್ಗಾವಣೆ ನಿಮ್ಮ ಆಶಯಕ್ಕೆ ಅನುಗುಣವಾಗಿ ರುವ ಸಾಧ್ಯತೆ ಇದೆ.

ಸಿಂಹ ರಾಶಿ ಭವಿಷ್ಯ 2020 ರ ಪ್ರಕಾರ, ಸಿಂಹ ರಾಶಿಚಕ್ರದ ಜನರ ವೃತ್ತಿ ಜೀವನದಲ್ಲಿ ಮೇ ಇಂದ ಸೆಪ್ಟೆಂಬರ್ ಮಧ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಉಂಟಾಗಬಹುದು. ಆದರೆ ಅದರ ನಂತರ ಪರಿಸ್ಥಿತಿ ಉತ್ತಮವಾಗುತ್ತದೆ. ಉದ್ಯೋಗವನ್ನು ಹುಡುಕುತ್ತಿರುವ ಜನರು, ಈ ವರ್ಷ ಖಂಡಿತವಾಗಿಯೂ ಉದ್ಯೋಗವನ್ನು ಪಡೆಯುವ ಸಾಧ್ಯತೆ ಇದೆ. ನಿಮ್ಮ ಧೈರ್ಯ ಮತ್ತು ಶಕ್ತಿ ಹೆಚ್ಚಾಗುತ್ತದೆ ಮತ್ತು ಇಡೀ ವರ್ಷ ನೀವು ಸಕ್ರಿಯರಾಗಿ ಕೆಲಸವನ್ನು ಮಾಡುತ್ತೀರಿ. ಇದರಿಂದಾಗಿ ನೀವು ಅನೇಕ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯಬಹುದು. ನೀವು ಪಡೆಯುವ ಕೆಲಸದ ಭಾರವನ್ನು ನಿರ್ವಹಿಸಲು ಮತ್ತು ಕಠಿಣ ಪರಿಶ್ರಮ ಮಾಡಲು ನಿಮಗೆ ಸಾಧ್ಯವಾಗುತ್ತದೆ. ಈ ವರ್ಷ ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಸಹ ಪರೀಕ್ಷಿಸಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ನಿಮ್ಮ ಹಿರಿಯ ಅಧಿಕಾರಿಗಳೊಂದಿಗಿನ ಸಂಬಂಧವನ್ನು ಸಾಮಾನ್ಯವಾಗಿ ಉಳಿಸಿ ಮತ್ತು ಯಾವುದೇ ರೀತಿಯಲ್ಲಿ ಅವರೊಂದಿಗೆ ವಿವಾದ ಮಾಡಬೇಡಿ ಇಲ್ಲದಿದ್ದರೆ ಪರಿಸ್ಥಿತಿ ನಿಮ್ಮ ವಿರುದ್ಧವಾಗಿ ಉದ್ಭವಿಸಬಹುದು. ಜೂಲೈ ನಿಂದ ಡಿಸೆಂಬರ್ ವರೆಗಿನ ಸಮಯವು ಹೆಚ್ಚು ಪ್ರಯೋಜನಕಾರಿಯಾಗಬಹುದು.

ಸಿಂಹ ರಾಶಿಭವಿಷ್ಯ 2020 ರ ಪ್ರಕಾರ, ವ್ಯಾಪಾರಕ್ಕೆ ಸಂಬಂಧಿಸಿದ ಜನರಿಗೆ ಈ ವರ್ಷ ಬಹಳಷ್ಟು ಮಟ್ಟಿಗೆ ಶುಭವಾಗಲಿದೆ. ಯಾವುದಾದರು ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸುತ್ತಿದ್ದರೆ, ಆ ಕ್ಷೇತ್ರದ ಅನುಭವಿ ಜನರ ಸಲಹೆಯನ್ನು ತೆಗೆದುಕೊಂಡು ಕೆಲಸವನ್ನು ಪ್ರಾರಂಭಿಸಬಹುದು. ಈ ವರ್ಷ ನೀವು ಉತ್ತಮ ಹಣವನ್ನು ಸಂಪಾದಿಸುವುದಲ್ಲದೆ ನಿಮ್ಮ ವ್ರಿತ್ತಿಪರ ಜೀವನದಲ್ಲಿ ಕೂಡ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ. ಒಟ್ಟಾರೆಯಾಗಿ ಈ ವರ್ಷ ಸಿಂಹ ರಾಶಿಚಕ್ರದ ಜನರ ವೃತ್ತಿಪರ ಜೇವನಕ್ಕೆ ಬಹಳಷ್ಟು ಉತ್ತಮವಾಗಿದೆ ಎಂದು ಸಾಬೀತುಪಡಿಸುತ್ತದೆ.

ಸಿಂಹ ರಾಶಿಯ ವರ್ಷ 2020 ರ ವಿವರವಾದ ಮುನ್ಸೂಚನೆಯನ್ನು ಓದಿ .2020 ಸಿಂಹ ರಾಶಿ ಭವಿಷ್ಯ

ಕನ್ಯಾ ರಾಶಿ ಭವಿಷ್ಯ 2020 ರ ಪ್ರಕಾರ ವೃತ್ತಿ ಜೀವನ

Virgo career horoscope 2020 kannadaಕನ್ಯಾ ರಾಶಿ ಭವಿಷ್ಯ 2020 ರ ಪ್ರಕಾರ ಈ ರಾಶಿಚಕ್ರದ ಜನರ ವೃತ್ತಿಜೀವನದ ಪ್ರಗತಿಪರ ವರ್ಷವೆಂದು ಸಾಬೀತುಪಡಿಸುತ್ತದೆ. ಈ ವರ್ಷ ನಿಮ್ಮ ವೃತ್ತಿ ಜೀವನದಲ್ಲಿ ಬದಲಾವಣೆಗಳು ಬರುತ್ತವೆ ಮತ್ತು ನೀವು ಬಹುಶಃ ಸ್ಥಳಾಂತರವನ್ನು ಅನುಭವಿಸುವಿರಿ. ಅಂದರೆ ಕೆಲವು ಜನರ ವರ್ಗಾವಣೆಯಾಗುತ್ತದೆ ಮತ್ತು ಕೆಲವು ಜನರು ತಮ್ಮ ಉದ್ಯೋಗವನ್ನು ಬದಲಿಸುವಲ್ಲಿ ಯಶಸ್ಸನ್ನು ಪಡೆಯುತ್ತಾರೆ. ನೀವು ವ್ಯಾಪಾರ ಮಾಡುತ್ತಿದ್ದರೆ ಪ್ರಗತಿಯನ್ನು ಪಡೆಯುತ್ತೀರಿ. ವರ್ಷದ ಆರಂಭವು ಸಾಕಷ್ಟು ಬಲವಾದ ಸಂಕೇತವನ್ನು ನೀಡುತ್ತಿದೆ. ನೀವು ನಿಮ್ಮ ಹಿರಿಯ ಅಧಿಕಾರಿಗಳ ಬೆಂಬಲವನ್ನು ಸಹ ಪಡೆಯುತ್ತೀರಿ. ನಿಮ್ಮ ಕೆಲಸದ ಕೌಶಲ್ಯವನ್ನು ನೀವು ತೋರಿಸುತ್ತೀರಿ ಮತ್ತು ಪೂರ್ತಿ ವರ್ಷ ನಿಮ್ಮ 100% ಕೊಡುಗೆ ನೀಡಲು ಪ್ರಯತ್ನಿಸುತ್ತೀರಿ. ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಅನೇಕ ಕೆಲಸಗಳನ್ನು ಪ್ರಶಂಶಿಸಲಾಗುತ್ತದೆ ಮತ್ತು ನೀವು ಖ್ಯಾತಿಯನ್ನು ಸಹ ಪಡೆಯುತ್ತೀರಿ. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಈ ವರ್ಷ ಅನೇಕ ಸಾಧನೆಗಳನ್ನು ಒದಗಿಸುವ ಕಡೆಗೆ ಸೂಚಿಸುತ್ತದೆ. ಇದಲ್ಲದೆ ನೀವು ಯಾವುದೇ ದೊಡ್ಡ ಕಂಪನಿಯೊಂದಿಗೆ ಕೆಲಸ ಮಾಡುತ್ತಿದ್ದರೆ ನಿಮ್ಮ ಕಾರ್ಯಕ್ಷಮತೆ ನಿಮ್ಮನ್ನು ಮುಂದೆ ಕೊಂಡೊಯ್ಯುತ್ತದೆ.

ಕನ್ಯಾ ರಾಶಿ ಭವಿಷ್ಯ 2020 ರ ಪ್ರಕಾರ ನೀವು ನಿಧಾನವಾಗಿ ನಿಮ್ಮ ಕೆಲಸದ ಸ್ಥಳದಲ್ಲಿ ಪ್ರಗತಿ ಹೊಂದುತ್ತೀರಿ. ನೀವು ಬಯಸುವ ಉದ್ಯೋಗವನ್ನು ಪಡೆಯಬಹುದು. ಉದ್ಯೋಗವನ್ನು ಬದಲಾಯಿಸಲು ಬಯಸುತ್ತಿರುವವರು ಯಶಸ್ಸನ್ನು ಪಡೆಯುತ್ತಾರೆ. ನಿಮ್ಮಲ್ಲಿ ಕೆಲವು ಜನರು ಇಷ್ಟಪಡುವ ಸ್ಥಳದಲ್ಲಿ ವರ್ಗಾವಣೆಯನ್ನು ಪಡೆಯಬಹುದು. ವರ್ಷದ ಮಧ್ಯದಲ್ಲಿ ನೀವು ಹೆಚ್ಚು ಅನುಕೂಲತೆಯನ್ನು ಅನುಭವಿಸುವಿರಿ ಮತ್ತು ನೀವು ನಿಮ್ಮ ಕೆಲಸವನ್ನು ಅರ್ಥಮಾಡಿಕೊಳ್ಳುವ ತಿಳುವಳಿಕೆ ಹೆಚ್ಚಾಗುತ್ತದೆ. ಇದರ ಲಾಭವು ಸಹ ನಿಮಗೆ ಸಿಗುತ್ತದೆ.

ವಿಶೇಷವಾಗಿ ಅವರು ವ್ಯಾಪಾರ ಕ್ಷೇತ್ರದಲ್ಲಿ ಪ್ರಮುಖ ಆರ್ಥಿಕ ಯಶಸ್ಸನ್ನು ಹೊಂದಿದ್ದಾರೆ. ಕನ್ಯಾ ರಾಶಿಚಕ್ರದ ಜನರಿಗೆ, ವರ್ಗಾವಣೆ ಅಥವಾ ಉದ್ಯೋಗ ಬದಲಾವಣೆಗಾಗಿ ಈ ಸಮಯ ಉತ್ತಮವಾಗಿಲ್ಲ. ಈ ವರ್ಷ ನೀವು ಕಠಿಣ ಪರಿಶ್ರಮದ ಮೂಲಕ ಮಾತ್ರ ತಮ್ಮ ವ್ಯವಹಾರದ ಮಹತ್ವಾಕಾಂಕ್ಷೆಗಳನ್ನು ಪೂರೈಸುವಲ್ಲಿ ಯಶಸ್ಸನ್ನು ಗಳಿಸುವಿರಿ. ನೀವು ಉದ್ಯೋಗದಲ್ಲಿದ್ದರೆ, ಕಠಿಣ ಪರಿಶ್ರಮವೇ ಯಶಸ್ಸಿನ ಕೀಲಿಯಾಗಿದೆ ಎಂಬುದನ್ನು ನೀವು ನೆನಪಿನಲ್ಲಿಡಬೇಕು. ಆದ್ದರಿಂದ ನಿಮ್ಮ ಅತ್ಯುತ್ತಮವಾದದನ್ನು ಮುಂದುವರಿಸಿ ಮತ್ತು ಪರಿಶ್ರಮ ಮಾಡುತ್ತೀರಿ, ಇದರಿಂದ ನೀವು ಸಾಧ್ಯವಾದಷ್ಟು ಹಣವನ್ನು ಗಳಿಸಬಹುದು.

ಕನ್ಯಾ ರಾಶಿಯ ವರ್ಷ 2020 ರ ವಿವರವಾದ ಮುನ್ಸೂಚನೆಯನ್ನು ಓದಿ.. 2020 ಕನ್ಯಾ ರಾಶಿ ಭವಿಷ್ಯ

ತುಲಾ ರಾಶಿ ಭವಿಷ್ಯ 2020 ರ ಪ್ರಕಾರ ವೃತ್ತಿ ಜೀವನ

Libra career horoscope 2020 kannadaತುಲಾ ರಾಶಿ ಭವಿಷ್ಯ 2020 ರ ಪ್ರಕಾರ, ತುಲಾ ರಾಶಿಚಕ್ರದ ಜನರನ್ನು ಕಠಿಣ ಪರಿಶ್ರಮ ಮಾಡುವ ಬಗ್ಗೆ ಸೂಚಿಸುತ್ತಿದೆ. ವರ್ಷದ ಆರಂಭದಲ್ಲಿಯೇ ಅಂದರೆ 24 ಜನವರಿಗೆ ಶನಿ ನಾಲ್ಕನೇ ಮನೆಗೆ ಪ್ರವೇಶಿಸುತ್ತಾನೆ ಮತ್ತು ನಿಮ್ಮ ಆರನೇ ಮನೆ, ಹತ್ತನೇ ಮನೆ ಮತ್ತು ಲಘ್ನದ ಮನೆಯ ಮೇಲೆ ಪರಿಣಾಮವನ್ನು ಬೀರುತ್ತದೆ. ಇದರ ಪರಿಣದಿಂದಾಗಿ, ಕೆಲಸದ ಸ್ಥಳದಲ್ಲಿ ನೀವು ಚೆನ್ನಾಗಿ ಬೆವರು ಸುರಿಯುತ್ತಿರಿ. ಏಪ್ರಿಲ್ ನಿಂದ ಜೂಲೈ ಮಧ್ಯೆ ಗುರುವಿನ ಉಪಸ್ಥಿತಿ ನಾಲ್ಕನೇ ಮನೆಯಲ್ಲಿ ಇರುವ ಕಾರಣದಿಂದಾಗಿ ನೀವು ನಿಮ್ಮ ಜ್ಞಾನವನ್ನು ಕೆಲಸದ ಸ್ಥಳದಲ್ಲಿ ಬುದ್ಧಿವಂತಿಕೆಯಿಂದ ಬಳಸುತ್ತೀರಿ. ಇದರಿಂದ ಕೆಳಸದ ಸ್ಥಳದಲ್ಲಿ ನೀವು ಗೌರವವನ್ನು ಪಡೆಯುತ್ತೀರಿ ಮತ್ತು ನಿಮ್ಮ ವೃತ್ತಿ ಜೀವನದಲ್ಲಿ ಪ್ರಗತಿ ಪ್ರಾರಂಭವಾಗುತ್ತದೆ. ಡಿಸೆಂಬರ್ , ನೀವು ದೊಡ್ಡ ಹುದ್ದೆಗೆ ನೇಮಕಾತಿ ಪಡೆಯಬಹುದು. ಜನವರಿಯಿಂದ ಏಪ್ರಿಲ್ ವರೆಗೆ ಮತ್ತು ನವೆಂಬರ್ ಮಧ್ಯದ ವರ್ಷದ ಅಂತ್ಯವು ನಿಮ್ಮ ಉದ್ಯೋಗದಲ್ಲಿನ ಬದಲಾವಣೆ ಅಥವಾ ಉತ್ತಮ ಉದ್ಯೋಗವನ್ನು ಸೂಚಿಸುತ್ತದೆ.

ತುಲಾ ರಾಶಿ ಭವಿಷ್ಯ 2020 ರ ಪ್ರಕಾರ, ಶನಿಯ ಸ್ಥಾನದಿಂದಾಗಿ, ನಿಮ್ಮ ಕಠಿಣ ಪರಿಶ್ರಮದ ನಂತರವೂ ನೀವು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯದೇ ಇರುವಂತಹ ಪರಿಸ್ಥಿತಿಯನ್ನು ಎದುರಿಸಬಹುದು, ಇದರಿಂದ ನೀವು ಮಾನಸಿಕವಾಗಿ ತೊಂದರೆಯನ್ನು ಅನುಭವಿಸಬಹುದು ಅಥವಾ ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ನಿಮಗೆ ಕೆಲವು ತೊಂದರೆಗಳು ಎದುರಾಗಬಹುದು, ಆದರೆ ನೀವು ಈ ಸವಾಲುಗಳ ಬಗ್ಗೆ ಭಯಪಡುವ ಅಗತ್ಯವಿಲ್ಲ ಏಕೆಂದರೆ ನಿಮ್ಮ ಕಠಿಣ ಪರಿಶ್ರಮ ಖಂಡಿತವಾಗಿಯೂ ನಿಮಗೆ ಉತ್ತಮ ಫಲಿತಾಂಶವನ್ನು ನೀಡುತ್ತದೆ.

ಯಶಸ್ಸು ಅನುಮಾನಾಸ್ಪದವಾಗಿರುವುದರಿಂದ ಈ ವರ್ಷ ನೀವು ಯಾವುದೇ ದೊಡ್ಡ ಉದ್ಯಮವನ್ನು ಪ್ರಾರಂಭಿಸಬಾರದು ಎಂದು ನಿಮಗೆ ಸಲಹೆ ನೀಡಲಾಗಿದೆ. ಆದರೆ ನೀವು ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ಆ ವ್ಯವಹಾರಕ್ಕೆ ಸಂಬಂಧಿಸಿದ ವೃತ್ತಿಪರ ಮತ್ತು ಅನುಭವಿ ಜನರ ಸಲಹೆಯನ್ನು ಪಡೆಯಿರಿ, ಅವರು ತೊಂದರೆಗಳನ್ನು ಎದುರಿಸಲು ಮತ್ತು ಮುಂದುವರಿಯಲು ನಿಮಗೆ ಉತ್ತಮ ಸಲಹೆಯನ್ನು ನೀಡಬಹುದು. ಆದಾಗ್ಯೂ, ಈಗಾಗಲೇ ವ್ಯವಹಾರದಲ್ಲಿ ತೊಡಗಿರುವವರಿಗೆ, 2020 ವರ್ಷವು ತುಂಬಾ ಉತ್ತಮವಾಗಿರಬಹುದು. ನೀವು ಉದ್ಯೋಗದಲ್ಲಿದ್ದೀರಾ ಅಥವಾ ವ್ಯವಹಾರದಲ್ಲಿ ಮುಂದುವರಿಯುತ್ತೀರಾ ಏಕೆಂದರೆ ಫಲಿತಾಂಶವು ಹೆಚ್ಚು ಉತ್ತಮವಾಗಿರುತ್ತದೆ ಮತ್ತು ಯಾವುದೇ ಕೆಲಸದಲ್ಲಿ ಆತುರ ಅಥವಾ ಭೀತಿಯನ್ನು ತೋರಿಸಬೇಡಿ. ವಿಶೇಷವಾಗಿ ವರ್ಷದ ಮಧ್ಯದಲ್ಲಿ, ಉದ್ಯೋಗ ವರ್ಗಾವಣೆ ಅಥವಾ ಹೊಸ ಉದ್ಯೋಗವನ್ನು ಪಡೆಯುವ ಉತ್ತಮ ಸಾಧ್ಯತೆಯಿದೆ. ಯಾವುದೇ ಗಿರಣಿಗಳು, ಗಣಿಗಳು, ಅನಿಲ, ಪೆಟ್ರೋಲಿಯಂ, ಖನಿಜಗಳು, ಸಂಶೋಧನೆ, ಶೈಕ್ಷಣಿಕ ಚಟುವಟಿಕೆಗಳು, ಸಲಹೆಗಾರರು, ಚಾರ್ಟರ್ಡ್ ಅಕೌಂಟೆಂಟ್‌ಗಳು, ವಕೀಲರು ಇತ್ಯಾದಿಗಳಿಗೆ ಸೇರಿದವರಿಗೆ 2020 ವರ್ಷವು ಸಾಧನೆಯ ವರ್ಷವಾಗಬಹುದು.

ತುಲಾ ರಾಶಿಯ ವರ್ಷ 2020 ರ ವಿವರವಾದ ಮುನ್ಸೂಚನೆಯನ್ನು ಓದಿ.. 2020 ತುಲಾ ರಾಶಿ ಭವಿಷ್ಯ

ವೃಶ್ಚಿಕ ರಾಶಿ ಭವಿಷ್ಯ 2020 ರ ಪ್ರಕಾರ ವೃತ್ತಿ ಜೀವನ

Scorpio career horoscope 2020 kannadaವೃಶ್ಚಿಕ ರಾಶಿ ಭವಿಷ್ಯ 2020 ರ ಪ್ರಕಾರ, ವೃಶ್ಚಿಕ ರಾಶಿಚಕ್ರದ ಜನರ ವೃತ್ತಿಗೆ ಈ ವರ್ಷ ಸಾಮಾನ್ಯವಾಗಿರುತ್ತದೆ. ವರ್ಷದ ಆರಂಭದಲ್ಲಿ ನೀವು ಯಾವುದೇ ಹೊಸ ಕಾರ್ಯವನ್ನು ಪ್ರಾರಂಭಿಸಬಹುದು. ಈ ಕೆಲಸದಲ್ಲಿ ನಿಮಗೆ ಉತ್ತಮ ಯಶಸ್ಸು ಕೈಗೆ ಸಿಗುತ್ತದೆ. ಹೇಗೆ ಹೇಗೆ ವರ್ಷದಲ್ಲಿ ಸಮಯ ಕಳೆಯುತ್ತದೋ , ಹಾಗೆ ನೀವು ಪ್ರಗತಿಯ ಉತ್ತುಂಗದತ್ತ ಸಾಗುತ್ತೀರಿ. ಅದೃಷ್ಟ ನಿಮಗೆ ಬೆಂಬಲ ನೀಡುತ್ತದೆ ಮತ್ತು ನೀವು ಗಮನಾರ್ಹವಾಗಿ ಯಶಸ್ಸನ್ನು ಪಡೆಯುತ್ತೀರಿ.ಈ ವರ್ಷ ನಿಮ್ಮೊಳಗೆ ತಮ್ಮ ಕೆಲಸದ ಕ್ಷೇತ್ರದ ಬಗ್ಗೆ ಸ್ವಲ್ಪ ತೃಪ್ತಿಯ ಭಾವನೆ ಉಳಿದಿರುತ್ತದೆ. ಏಕೆಂದರೆ ನೀವು ಎಷ್ಟು ಪರಿಶ್ರಮ ಮಾಡುತ್ತಿರೋ ಅಷ್ಟು ಫಲಿತಾಂಶ ನಿಮಗೆ ಸಿಗುತ್ತಿಲ್ಲ ಎಂದು ಅನುಭವಿಸುತ್ತೀರಿ. ಈ ಕಾರಣದಿಂದಾಗಿ ಸಾಕಷ್ಟು ಮಟ್ಟಿಗೆ ನೀವು ನಿಮ್ಮನ್ನು ಕಟ್ಟಿಹಾಕಿರುವ ಹಾಗೆ ಅನುಭವಿಸಬಹುದು. ನೀವು ಉದ್ಯೋಗ ಮಾಡುತ್ತಿದ್ದರೆ, ನೀವು ಇದ್ದಕ್ಕಿದ್ದಂತೆ ಆಗುವ ವರ್ಗಾವಣೆಯನ್ನು ಎದುರಿಸಬೇಕಾಗುತ್ತದೆ. ಬಹಶಃ ಆರಂಭದಲ್ಲಿ ನೀವು ಅದನ್ನು ಇಷ್ಟಪಡದಿರಬಹುದು ಆದರೆ ಬದಲಾವಣೆ ಪ್ರಕೃತಿಯ ಶಾಶ್ವತ ನಿಯಮ ಮತ್ತು ಇದು ಜೀವನದಲ್ಲಿ ಆವೇಗವನ್ನು ನೀಡುತ್ತದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಈ ವಿಷಯವನ್ನು ನೀವು ಅನುಭವಿಸಿದರೆ ವರ್ಗಾವಣೆ ನಿಮ್ಮ ಪರವಾಗಿದೆ ಎಂಬುವ ತೀರ್ಮಾನಕ್ಕೆ ನೀವು ಬರಬಹುದು. ಇದರಿಂದ ನಿಮಗೆ ಲಾಭವು ಸಿಗುತ್ತದೆ.

ವೃಶ್ಚಿಕ ರಾಶಿ ಭವಿಷ್ಯ 2020 ರ ಪ್ರಕಾರ, ವರ್ಷದ ಪೂರ್ವಾರ್ಧದಲ್ಲಿ ನೀವು ನಿಮ್ಮ ವೃತ್ತಿಪರ ಜೀವನದಲ್ಲಿ ಪ್ರಗತಿಯ ಅನೇಕ ಅವಕಾಶಗಳನ್ನು ಪಡೆಯುತ್ತೀರಿ. ಇದರಿಂದ ನೀವು ಜೀವನದಲ್ಲಿ ಮುಂದುವರಿಯುತ್ತಿರಿ. ಆದ್ದರಿಂದ ನೀವು ಈ ಸಮಯವನ್ನು ಪೂರ್ಣವಾಗಿ ಬಳಸಬೇಕು ಮತ್ತು ಎದುರಾದ ಪ್ರತಿಯೊಂದು ಅವಕಾಶದ ಲಾಭವನ್ನು ಪಡೆದುಕೊಳ್ಳಬೇಕು. ಅದೇ ಸಮಯದಲ್ಲಿ ಮತ್ತೊಂದೆಡೆ ವರ್ಷದ ಉತ್ತರಾರ್ಧದಲ್ಲಿ ನೀವು ಬಡ್ತಿಯನ್ನು ಸಹ ಪಡೆಯಬಹುದು. ಇದಲ್ಲದೆ ನಿಮ್ಮ ಸಂಬಳದಲ್ಲಿ ಹೆಚ್ಚಳವಾಗಬಹುದು ಮತ್ತು ಕೆಲವು ಜನರ ಉದ್ಯೋಗದಲ್ಲಿ ಬದಲಾವಣೆ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ನಿಮಗೆ ಸಾಧ್ಯವಾದರೆ, ನಿಮ್ಮ ಯಶಸ್ಸಿನಿಂದ ನೀವೇ ಹಾರಿಹೋಗುತ್ತೀರಿ. ಈ ವರ್ಷ ನಿಮ್ಮ ಸೃಜನಶೀಲತೆಯನ್ನು ಜೋರಾಗಿ ಹಿಡಿದುಕೊಳ್ಳುತ್ತದೆ ಮತ್ತು ನಿಮ್ಮನ್ನು ಮುಂದೆ ಕೊಂಡೊಯ್ಯುತ್ತದೆ. ವ್ಯಾಪಾರಿಗಳಿಗೆ ಈ ವರ್ಷ ಸಾಕಷ್ಟು ಉತ್ತಮವಾಗಲಿದೆ. ಆದಾಗ್ಯೂ ವರ್ಷದ ಕೊನೆಯ ತಿಂಗಳುಗಳಲ್ಲಿ ನೀವು ಕೆಲವು ಅಪಾಯಕಾರಿ ಕೆಲಸಗಳನ್ನು ಮಾಡಬೇಕಾಗುತ್ತದೆ. ಅವುಗಳ ಬಗ್ಗೆ ಜಾಗರೂಕರಾಗಿರಿ. ಈ ವರ್ಷ ನಿಮ್ಮ ಆತ್ಮವಿಶ್ವಾಸ ನಿಮ್ಮನ್ನು ಯಶಸ್ಸಿಗಾಗಿ ಪ್ರೇರೇಪಿಸುತ್ತದೆ. ಆಸ್ತಿಯಲ್ಲಿ ಹೂಡಿಕೆ ಮಾಡಲು ಬಯಸುತ್ತಿರುವ ಜನರು, ಈ ವರ್ಷ ಅವರಿಗೆ ಉತ್ತಮ ಪ್ರಯೋಜನ ಸಿಗಬಹುದು. ಇದಲ್ಲದೆ ಪೆಟ್ರೋಲಿಯಂ, ಅನಿಲ ಮತ್ತು ತೈಲಕ್ಕೆ ಸಂಬಂಧಿಸಿದ ಜನರಿಗೂ ಸಹ ಉತ್ತಮ ಲಾಭವಾಗಬಹುದು.

ವೃಶ್ಚಿಕ ರಾಶಿಯ ವರ್ಷ 2020 ರ ವಿವರವಾದ ಮುನ್ಸೂಚನೆಯನ್ನು ಓದಿ.. 2020 ವೃಶ್ಚಿಕ ರಾಶಿ ಭವಿಷ್ಯ

ಧನು ರಾಶಿ ಭವಿಷ್ಯ 2020 ರ ಪ್ರಕಾರ ವೃತ್ತಿ ಜೀವನ

Sagittarius career horoscope 2020 kannadaಧನು ರಾಶಿ ಭವಿಷ್ಯ 2020 ರ ಪ್ರಕಾರ, ಈ ವರ್ಷ ನಿಮ್ಮ ವೃತ್ತಿಪರ ಜೀವನಕ್ಕೆ ಬಹಳಷ್ಟು ಮಟ್ಟಿಗೆ ಉತ್ತಮವಾಗಿರುತ್ತದೆ ಮತ್ತು ನೀವು ಅನೇಕ ರೀತಿಯಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಒಂಕ್ಕಿಂತಹೆಚ್ಚು ಆದಾಯದ ಮೂಲಗಳನ್ನು ಪಡೆಯುತ್ತೀರಿ ಮತ್ತು ನಿರಂತರವಾಗಿ ಸಂಪಾದಿಸುತ್ತೀರಿ. ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ, ಈ ವರ್ಷ ನೀವು ಅದನ್ನು ಮಾಡಬಹುದು. ವಿದೇಶ ಮೂಲಗಳು ಮತ್ತು ಸ್ವಲ್ಪ ವಿದೇಶ ಕಂಪನಿಗಳೊಂದಿಗೆ ವ್ಯಾಪಾರದಲ್ಲಿ ಉತ್ತಮ ಲಾಭದ ಸೂಚನೆಗಳಿವೆ. ಆದಾಗ್ಯೂ ಪಾಲುದಾರಿಕೆಯ ಕೆಲಸದಲ್ಲಿ ಜಾಗರೂಕತೆಯನ್ನು ಹೊಂದುವ ಸಲಹೆ ನಿಮಗೆ ನೀಡಲಾಗಿದೆ. ನೀವು ಉದ್ಯೋಗದಲ್ಲಿದ್ದರೆ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ ಮತ್ತು ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ.

ಧನು ರಾಶಿ ಭವಿಷ್ಯ 2020 ರ ಪ್ರಕಾರ ಈ ವರ್ಷ ನೀವು ಕೆಲವು ಹಳೆಯ ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸುತ್ತೀರಿ. ಕೆಲವು ಯೋಜನೆಗಳನ್ನು ಈ ವರ್ಷ ಮುಂದುವರಿಸುತ್ತೀರಿ, ಅದರಲ್ಲಿ ನೀವು ನಿಮ್ಮ ಕಾರ್ಯ ಕೌಶಲ್ಯದಿಂದ ಸಾಕಷ್ಟು ಉತ್ತಮ ಪ್ರದರ್ಶನೆಯನ್ನು ಉಳಿಸುತ್ತೀರಿ. ನಿಮಗೆ ಸಹೋದ್ಯೋಗಿಗಳ ಸಹಾಯ ಸಿಗುತ್ತದೆ ಮತ್ತು ಹಿರಿಯ ಅಧಿಕಾರಿಗಳು ಸಹ ನಿಮ್ಮ ಪರವಾಗಿ ಇರುತ್ತಾರೆ. ಇದರಿಂದ ನೀವು ಯಶಸ್ಸಿನ ಹಾದಿಯಲ್ಲಿ ನಡೆಯುತ್ತೀರಿ. ನಿಮ್ಮಿಂದ ಮಾಡಲಾಗಿರುವ ಉತ್ತಮ ಕೆಲಸಗಳ ಸಾಕಷ್ಟು ಬಹುಮಾನವನ್ನು ನೀವು ಪಡೆಯುತ್ತೀರಿ. ನೀವು ನಿಮ್ಮ ಉನ್ನತ ಬುದ್ಧಿವಂತಿಕೆಯಿಂದ ವಿರೋಧಿಗಳ ಮೇಲೆ ಪ್ರಾಬಲ್ಯವನ್ನು ಸಾಧಿಸುವಿರಿ ಮತ್ತು ಅವರ ಪ್ರತಿಯೊಂದು ಯೋಜನೆಯನ್ನು ವಿಫಲ ಮಾಡುತ್ತೀರಿ. ನೀವು ಅದೃಷ್ಟದ ಉತ್ತಮ ಬೆಂಬಲವನ್ನು ಪಡೆಯುತ್ತೀರಿ ಮತ್ತು ನೀವು ನಿಮ್ಮ ಕನಸುಗಳನ್ನು ಈಡೇರಿಸಲು ಧೈರ್ಯದಿಂದ ಮುಂದುವರಿಯುತ್ತಿರಿ. ನೀವು ಪರಿಶ್ರಮವನ್ನು ಮುಂದುವರಿಸಬೇಕು ಅಷ್ಟೇ ಮತ್ತು ನಿಮ್ಮ ಕೆಲಸವನ್ನು ಮಾಡುತ್ತಲೇ ಇರಬೇಕು ಅಥವಾ ಜನರು ನಿಮ್ಮನ್ನು ಅನುಸರಿಸಿದರೆ, ಚೆನ್ನಾಗಿ ಒಳ್ಳೆಯ ಕಾರ್ಯವನ್ನು ಮಾಡುವುದು ನಿಮಗೆ ಉತ್ತಮ ಎಂಬುದರ ಬಗ್ಗೆ ಗಮನ ಹರಿಸಿ. ವರ್ಷದ ಅಂತ್ಯದಲ್ಲಿ ಕೆಲವು ಸಮಸ್ಯೆಗಳು ಬರಬಹುದು ಅಥವಾ ಯಾವುದೇ ಕಾನೂನು ಗೊಂದಲ ನಿಮ್ಮನ್ನು ಕಾಡಬಹುದು, ಇದರಿಂದ ನೀವು ಜಾಗರೂಕರಾಗಿರಬೇಕು. ಕೆಲಸದ ಸ್ಥಳದಲ್ಲಿ ನಿಮ್ಮ ಮಾನಹಾನಿಯನ್ನು ಎದುರಿಸುವಂತಹ ಯಾವುದೇ ಕೆಲಸದಲ್ಲಿ ಬೀಳಬೇಡಿ, ಆದಾಗ್ಯೂ ಅಂತಹ ಸಾಧ್ಯತೆ ಕಡಿಮೆಯಾಗಿದೆ.

ಧನು ರಾಶಿಯ ವರ್ಷ 2020 ರ ವಿವರವಾದ ಮುನ್ಸೂಚನೆಯನ್ನು ಓದಿ.. 2020 ಧನು ರಾಶಿ ಭವಿಷ್ಯ

ಮಕರ ರಾಶಿ ಭವಿಷ್ಯ 2020 ರ ಪ್ರಕಾರ ವೃತ್ತಿ ಜೀವನ

Capricorn career horoscope 2020 kannadaಮಕರ ರಾಶಿ ಭವಿಷ್ಯ 2020 ರ ಪ್ರಕಾರ, ಈ ವರ್ಷ ನಿಮ್ಮ ವೃತ್ತಿಪರ ಜೀವನಕ್ಕೆ ಮಿಶ್ರಿತ ಫಲಿತಾಂಶಗಳನ್ನು ನೀಡುತ್ತದೆ. ಉದ್ಯೋಗವನ್ನು ಹುಡುಕುತ್ತಿರುವ ಜನರು ಜನವರಿಯ ನಂತರ ಒಂದು ಸ್ಥಾಯಿ ಮತ್ತು ದೀರ್ಘಕಾಲದ ವರೆಗೆ ನಡೆಯುವ ಉದ್ಯೋಗವನ್ನು ಪಡೆಯುವ ಉತ್ತಮ ಸಾಧ್ಯತೆ ಇದೆ. ನಿಮ್ಮಲ್ಲಿ ಕೆಲವರ ವರ್ಗಾವಣೆಯಾಗುತ್ತದೆ. ಮತ್ತು ಕೆಲವರು ಉದ್ಯೋಗಕ್ಕೆ ಸಂಬಂಧಿಸಿದಂತೆ ಸ್ಥಳಾಂತರಗೊಳ್ಳಬೇಕಾಗುತ್ತದೆ. ನೀವು ಉದ್ಯೋಗ ಮಾಡುತ್ತಿದ್ದೀರೋ ಅಂತವ ವ್ಯಾಪಾರ, ಈ ವರ್ಷ ನೀವು ಕೆಲಸಕ್ಕೆ ಸಂಬಂಧಿಸಿದಂತೆ ಅನೇಕ ಪ್ರಯಾಣಗಳನ್ನು ಮಾಡಬೇಕಾಗುತ್ತದೆ ಮತ್ತು ವಿದೇಶಕ್ಕೆ ಹೋಗುವ ಸಾಧ್ಯತೆಯೂ ಉಂಟಾಗುತ್ತದೆ. ಒಳ್ಳೆಯ ವಿಷಯವೇನೆಂದರೆ ಈ ಪ್ರಯಾಣಗಳು ನಿಮಗಾಗಿ ಉತ್ತಮವಾಗಲಿವೆ. ನಿಮ್ಮ ಜೀವನವನ್ನು ಮುಂದುವರಿಸುವ ಅವಕಾಶವನ್ನು ನೀವು ಪಡೆಯುತ್ತೀರಿ. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಳಸ ಮಾಡುವ ಜನರಿಗೆ ಈ ವರ್ಷ ಸಾಧನೆಗಳಿಂದ ತುಂಬಿರುತ್ತದೆ. ಆದರೆ ಈ ವರ್ಷ ನೀವು ಹೆಚ್ಚು ಕಠಿಣ ಪರಿಶ್ರಮ ಮಾಡಬೇಕು ಎಂದು ಅರ್ಥ ಮಾಡಿಕೊಳ್ಳಿ. 24 ಜನವರಿಯ ನಂತರ ಶನಿ ದೇವ ನಿಮ್ಮ ಲಘ್ನದಲ್ಲಿ ಬಂದು ಹತ್ತನೇ ದೃಷ್ಟಿಯಿಂದ ಹತ್ತನೇ ಮನೆಯನ್ನು ನೋಡುತ್ತಾರೆ. ಇದರ ಕಾರಣದಿಂದ ನೀವು ಇಡೀ ವರ್ಷ ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸಿ ಸಾಕಷ್ಟು ಪರಿಶ್ರಮ ಮಾಡಬೇಕಾಗುತ್ತದೆ. ಆದಾಗ್ಯೂ ಆ ಕಠಿಣ ಪರಿಶ್ರಮದ ಅಧ್ಭುತ ಫಲಿತಾಂಶಗಳನ್ನು ಸಹ ನೀವು ಪಡೆಯುತ್ತೀರಿ.

ಮಕರ ರಾಶಿ ಭವಿಷ್ಯ 2020 ರ ಪ್ರಕಾರ, ಈ ವರ್ಷ ನೀವು ಯಾವುದೇ ಹೊಸ ಕೆಲಸ ಅಥವಾ ವ್ಯಾಪಾರವನ್ನು ಪ್ರಾರಂಭಿಸಬಾರದು. ನೀವು ಮೊದಲಿನಿಂದಲೇ ಯಾವುದಾದರು ವ್ಯಾಪಾರ ಮಡುತ್ತಿದ್ದರೆ ಅದನ್ನು ಉತ್ತಮಗೊಳಿಸಲು ಪ್ರಯತ್ನಿಸಿ ಮತ್ತು ಈ ಸಂದರ್ಭದಲ್ಲಿ ನೀವು ಮಾಡಬೇಕಾದುದನ್ನು ಮಾಡಿ ಇದರಿಂದ ನೀವು ವ್ಯವಹಾರ ಯಶಸ್ಸನ್ನು ಪಡೆಯಬಹುದು. 30 ಮಾರ್ಚ್ ರಿಂದ 30 ಜೂನ್ ನಡುವೆ ಗುರು ನಿಮ್ಮ ರಾಶಿಚಕ್ರದಲ್ಲಿ ಕುಳಿತಿರುತ್ತಾರೆ ಮತ್ತು ನೀವು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನಿಮಗೆ ಬೆಂಬಲ ನೀಡುತ್ತಾರೆ. ಈ ನಿರ್ಧಾರವು ಭವಿಷ್ಯದಲ್ಲಿ ನಿಮ್ಮ ಸಂತೋಷದ ವೃತ್ತಿಜೀವನಕ್ಕೆ ಅಡಿಪಾಯವನ್ನು ಹಾಕುತ್ತದೆ. ಪ್ರವಾಸೋದ್ಯಮ, ಸಾಮಾಜಿಕ ಸೇವೆ, ಮೆಕ್ಯಾನಿಕಲ್ ಎಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ ಇತ್ಯಾದಿಗಳಿಗೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿರುವ ಜನರು ಈ ವರ್ಷ ಉತ್ತಮ ಪ್ರಗತಿಯನ್ನು ಪಡೆಯಬಹುದು. 30 ಮಾರ್ಚ್ ರಿಂದ 30 ಜೂನ್ ನಡುವೆ ನೀವು ನಿಮ್ಮ ವ್ಯಾಪಾರದಲ್ಲಿ ಯಾವುದೇ ಸಾಧನೆಗಳನ್ನು ಪಡೆಯಬಹುದು. ಅದೇ ಸಮಯದಲ್ಲಿ ಸೆಪ್ಟೆಂಬರ್ ಮಧ್ಯದ ನಂತರ ಯಾವುದೇ ರೀತಿಯ ಅಪಾಯವನ್ನು ತಪ್ಪಿಸಬೇಕು. ನೀವು ಉದ್ಯೋಗದಲ್ಲಿದ್ದರೆ ನಿಮಗೆ ತಾಳ್ಮೆಯಿಂದಿರುವ ಸಲಹೆ ನೀಡಲಾಗಿದೆ. ಏಕೆಂದರೆ ನೀವು ವಿಷಯದಿಂದ ಅತೃಪ್ತರಾಗಿ ರಾಜೀನಾಮೆ ನೀಡುವ ಸಾಧ್ಯತೆಯಿದೆ ಮತ್ತು ಅದನ್ನು ಮಾಡಿದರೆನೀವು ತೊಂದರೆಗೆ ಸಿಲುಕಬಹುದು. ಆದ್ದರಿಂದ ತಾಳ್ಮೆಯಿಂದಿರಿ. ನೀವು ಚಿಂತನಶೀಲವಾಗಿ ನಡೆದರೆ, ನಿಮ್ಮ ನಿರ್ಧಾರಗಳು ನಿಮಗೆ ಉತ್ತಮ ಮಾರ್ಗವನ್ನು ತೋರಿಸುತ್ತವೆ ಮತ್ತು ನೀವು ಬಯಸಿದ ಕೆಲಸವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ.

ಮಕರ ರಾಶಿಯ ವರ್ಷ 2020 ರ ವಿವರವಾದ ಮುನ್ಸೂಚನೆಯನ್ನು ಓದಿ. 2020 ಮಕರ ರಾಶಿ ಭವಿಷ್ಯ

ಕುಂಭ ರಾಶಿ ಭವಿಷ್ಯ 2020 ರ ಪ್ರಕಾರ ವೃತ್ತಿ ಜೀವನ

Aquarius career horoscope 2020 kannadaಕುಂಭ ರಾಶಿ ಭವಿಷ್ಯ 2020 ರ ಪ್ರಕಾರ, ಈ ವರ್ಷ ನಿಮ್ಮ ವೃತ್ತಿಪರ ಜೀವನಕ್ಕೆ ಏರಿಳಿತಗಳಿಂದ ತುಂಬಿರಬಹುದು. ಆದ್ದರಿಂದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಚೆನ್ನಾಗಿ ಆಲೋಚಿಸಿ ತೆಗೆದುಕೊಳ್ಳಿ . ಈ ವರ್ಷ ನಿಮ್ಮ ಉದ್ಯೋಗದಲ್ಲಿ ವರ್ಗಾವಣೆಯ ಬಲವಾದ ಯೋಗವು ಉಂಟಾಗುತ್ತಿದೆ ಮತ್ತು ಕೆಲಸದ ಸ್ಥಳದಲ್ಲಿ ಒತ್ತಡದ ಪರಿಸ್ಥಿತಿ ಉಂಟಾಗಬಹುದು.ಇದರಿಂದಾಗಿ ನೀವು ನಿಮ್ಮ ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಆಲೋಚಿಸಬಹುದು. ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಈ ವರ್ಷ ಬಹಳಷ್ಟು ಮಟ್ಟಿಗೆ ನೆಮ್ಮದಿಯಿಂದ ತುಂಬಿರುವ ವರ್ಷವಾಗಿರುವ ಭರವಸೆ ಇದೆ. ಗಮನಾರ್ಹವಾಗಿ ಜನವರಿ ಇಂದ 30 ಮಾರ್ಚ್ ಮತ್ತು 30 ಜೂನ್ ರಿಂದ 20 ನವೆಂಬರ್ ಮಧ್ಯ ನಿಮ್ಮ ವ್ಯವಹಾರವು ಹಂತಹಂತವಾಗಿ ಬೆಳೆಯುತ್ತದೆ. ನೀವು ಯಶಸ್ಸಿನ ಹೊಸ ದಾಖಲೆಗಳನ್ನು ರಚಿಸುವಿರಿ.

ಕುಂಭ ರಾಶಿ ಭವಿಷ್ಯ 2020 (Kumbh Rashi 2020) ರ ಪ್ರಕಾರ, ಈ ವರ್ಷ ನಿಮ್ಮ ವ್ಯವಹಾರದ ಜೀವನಕ್ಕೆ ಸಾಧಾರಣವಾಗಿ ಶುಭವಾಗಿರಬಹುದು. ನೀವು ಯಾವುದೇ ಹೊಸ ವ್ಯಾಪರವನ್ನು ಮಾಡಲು ಬಯಸುತ್ತಿದ್ದರೆ, ನಿಮ್ಮ ಆ ವ್ಯಾಪಾರದಲ್ಲಿ ಅನುಭವ ಹೊಂದಿರುವ ಜನರು ಅಗತ್ಯವಾಗಿರಬೇಕು ಎಂಬುದರ ಬಗ್ಗೆ ಗಮನ ಹರಿಸಿ. ಇಲ್ಲದಿದ್ದರೆ ಲಾಭದ ಸ್ಥಳದಲ್ಲಿ ನಷ್ಟವಾಗಬಹುದು. ತಮ್ಮ ಕುಟುಂಬದ ಸದಸ್ಯರೊಂದಿಗೆ ಸದ್ಯಕ್ಕೆ ಯಾವುದೇ ಪಾಲುದಾರಿಕೆಯನ್ನು ಮಾಡಬೇಡಿ ಮತ್ತು ತಮ್ಮ ಕೆಲಸದ ಸ್ಥಳದಲ್ಲಿ ಅವರನ್ನು ಹಸ್ತಕ್ಷೇಪ ಮಾಡಲು ಬಿಡಬೇಡಿ. ಹೂಡಿಕೆ ಮಾಡಲು ಬಯಸುತ್ತಿದ್ದರೆ ನೀವು ಜಾಗರೂಕರಾಗಿರಬೇಕು. ಏಕೆಂದರೆ ತಮ್ಮ ವ್ಯಾಪಾರ ಅಥವಾ ಇಂತಹ ಹೂಡಿಕೆಯಲ್ಲಿ ನೀವು ನಷ್ಟವನ್ನು ಹೊಂದಿರಬಹುದು. ಈ ವರ್ಷ ನೀವು ಕೆಲಸಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಅಪಾಯ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ನೀವು ಉದ್ಯೋಗದಲ್ಲಿದ್ದರೆ ನಿಮ್ಮ ವರಿಷ್ಠ ಅಧಿಕಾರಿಗಳೊಂದಿಗೆ ಉತ್ತಮ ವ್ಯವಹಾರವನ್ನು ಹೊಂದಿರಿ, ಇದರಿಂದ ನೀವು ಯಾವುದೇ ರೀತಿಯ ಸವಾಲಿನ ಸಮಸ್ಯೆಯನ್ನು ತಪ್ಪಿಸಬಹುದು. ಜನವರಿಯ ತಿಂಗಳು ನಿಮ್ಮ ವೃತ್ತಿಪರ ಜೀವನಕ್ಕೆ ಉತ್ತಮವಾಗಲಿದೆ. ಈ ವರ್ಷ ನೀವು ಉದ್ಯೋಗ ಅಥವಾ ವ್ಯಾಪಾರದ ಸಂದರ್ಭದಲ್ಲಿ ವಿದೇಶಹಕ್ಕೆ ಹೋಗಬೇಕಾಗಬಹುದು, ಗಮನಾರ್ಹವಾಗಿ ಮಾರ್ಚ್ ರಿಂದ ಮೇ ಮಧ್ಯ. ಈ ಪ್ರಯಾಣಗಳು ನಿಮ್ಮ ಕಾರ್ಯಗಳಿಗೆ ಹೊಸ ಶಕ್ತಿಯ ಸಂವಹನ ಮಾಡುತ್ತವೆ ಮತ್ತು ನಿಮಗೆ ಲಾಭವನ್ನು ನೀಡುತ್ತವೆ.

ಕುಂಭ ರಾಶಿಯ ವರ್ಷ 2020 ರ ವಿವರವಾದ ಮುನ್ಸೂಚನೆಯನ್ನು ಓದಿ. 2020 ಕುಂಭ ರಾಶಿ ಭವಿಷ್ಯ

ಮೀನಾ ರಾಶಿ ಭವಿಷ್ಯ 2020 ರ ಪ್ರಕಾರ ವೃತ್ತಿ ಜೀವನ

Pisces career horoscope 2020 kannadaಮೀನಾ ರಾಶಿ ಭವಿಷ್ಯ 2020 ಪ್ರಕಾರ ವರ್ಷದ ಆರಂಭವು ನಿಮಗಾಗಿ ಬಹಳಷ್ಟು ಉತ್ತಮವಾಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಜನವರಿ 30 ರಿಂದ ಮಾರ್ಚ್ ವರೆಗೆ ಬಹಳಷ್ಟು ಮಟ್ಟಿಗೆ ಅನುಕೂಲಕರವಾಗಿತ್ತದೆ ಮತ್ತು ನೀವು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೆ, ಅದು ನಿಮ್ಮನ್ನು ಮುಂದುವರಿಸುವ ಕೆಲಸ ಮಾಡುತ್ತದೆ. ಅದರ ನಂತರ 30 ಜೂನ್ ವರೆಗಿನ ಸಮಯವು ನಿಮ್ಮ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ನೀವು ಹಿರಿಯ ಅಧಿಕಾರಿಗಳ ಇನ್ನಷ್ಟು ನಿಕಟ ಬರುತ್ತಿರಿ. ಇದರ ಕಾರಣದಿಂದಾಗಿ ಕಾಲ ಕಾಲಕ್ಕೆ ನೀವು ಅವರ ಕಾರಣದಿಂದ ಲಾಭ ಮತ್ತು ಸೌಲಭ್ಯಗಳನ್ನು ಪಡೆಯುತ್ತೀರಿ. ನಿಮ್ಮಲ್ಲಿ ಕೆಲವರು ಈ ವರ್ಷ ಉನ್ನತ ಬಡ್ತಿಯನ್ನು ಪಡೆಯಬಹುದು.

ಮೀನಾ ರಾಶಿ ಭವಿಷ್ಯ 2020 ರ ಪ್ರಕಾರ, ನೀವು ಯಾವುದಾದರು ವ್ಯಾಪಾರ ಮಾಡುತ್ತಿದ್ದರೆ, ಈ ವರ್ಷ ಇನ್ನಷ್ಟು ಉತ್ತಮವಾಗಿರುವ ಸಾಧ್ಯತೆ ಇದೆ. ಅದೃಷ್ಟದ ಬೆಂಬಲವು ನಿಮಗೆ ಸಿಗುತ್ತದೆ, ಇದರಿಂದ ನಿಮ್ಮ ಕೆಲಸದಲ್ಲಿ ಪ್ರಗತಿಯಾಗುತ್ತದೆ. ನೀವು ನಿಮ್ಮ ವ್ಯಾಪಾರವನ್ನು ಹೆಚ್ಚಿಸಲು ಬಯಸುತ್ತಿದ್ದರೆಅದರಲ್ಲಿ ವಿಸ್ತರಿಸಬಹುದು ಮತ್ತು ಅದರ ವಿಸ್ತರಣೆಯಿಂದಾಗಿ ನೀವು ಹೆಚ್ಚಿನ ಲಾಭ ಗಳಿಸುವ ಪರಿಸ್ಥಿತಿಯಲ್ಲಿ ಬರುವಿರಿ. ಶೇರ್ ಮಾರ್ಕೆಟ್ ಮತ್ತು ಜೂಜು ವ್ಯಾಪಾರ ಮಾಡುವ ಜನರಿವೆ ಉತ್ತಮ ಲಾಭ ಮತ್ತು ಪ್ರಗತಿಯ ಸಾಧ್ಯತೆ ಈ ವರ್ಷ ಕಂಡುಬರುತ್ತಿದೆ.

ಮೀನಾ ರಾಶಿಭವಿಷ್ಯ 2020 ರ ಪ್ರಕಾರ ಈ ವರ್ಷ ವಿಶೇಷವಾಗಿ 30 ಮಾರ್ಚ್ ರಿಂದ 30 ಜೂನ್ ವರೆಗಿನ ಸಮಯವೂ ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯುವುದನ್ನು ಸಾಬೀತುಪಡಿಸಬಹುದು. ತಮ್ಮ ಸ್ವತಃ ವ್ಯಾಪಾರ ಮಾಡುತ್ತಿರುವ ಜನರು, ಈ ವರ್ಷ ಅತ್ಯಂತ ಲಾಭವನ್ನು ಪಡೆಯುವ ಸಾಧ್ಯತೆ ಇದೆ ಮತ್ತು ವ್ಯಾಪಾರದ ಕಾರಣ ಅವರ ಗೌರವದಲ್ಲಿಯೂ ಹೆಚ್ಚಳವಾಗುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ವಿರೋಧಿಗಳಿಂದ ಸ್ವಲ್ಪ ಜಾಗರೂಕರಾಗಿರಬೇಕು. ಆದಾಗ್ಯೂ ಅವರು ನಿಮಗೆ ಹೆಚ್ಚು ಹೆಚ್ಚು ಹಾನಿ ಮಾಡಲಾಗುವುದಿಲ್ಲ ಆದರೂ ಕಾಲ ಕಾಲಕ್ಕೆ ಅವರು ನಿಮಗೆ ಮಾನಸಿಕ ಒತ್ತಡವನ್ನು ನೀಡಬಹುದು ಮತ್ತು ನಿಮ್ಮ ಕೆಲಸಗಳಲ್ಲಿ ಅಡೆತಡೆಗಳನ್ನು ಉಂಟುಮಾಡಬಹುದು. ಆರಂಭದಲ್ಲಿ ವ್ಯಾಪಾರದಲ್ಲಿ ಲಾಭವು ಸ್ವಲ್ಪ ಕಡಿಮೆ ಇರಬಹುದು ಆದರೆ ಸಮಯ ಕಳೆದ ಹಾಗೆ ನಿಮ್ಮ ಕೆಲಸ ವೇಗವನ್ನು ಹಿಡಿಯುತ್ತದೆ ಮತ್ತು ವರ್ಷ ಕೊನೆಯ ವರೆಗೆ ನೀವು ನಿಮ್ಮನ್ನು ಹೆಚ್ಚು ಅನುಕೂಲಕರ ಸ್ಥಾನದಲ್ಲಿ ಪಡೆಯುತ್ತೀರಿ. ಮೀನಾ ರಾಶಿಚಕ್ರದ ಜನರ ವೃತ್ತಿಪರ ಜೀವನಕ್ಕೆ ಈ ವರ್ಷ ಬಹಳಷ್ಟು ಉತ್ತಮವಾಗಿ ಸಾಬೀತುಪಡಿಸಬಹುದು.

ಕುಂಭ ರಾಶಿಯ ವರ್ಷ 2020 ರ ವಿವರವಾದ ಮುನ್ಸೂಚನೆಯನ್ನು ಓದಿ. 2020 ಮೀನಾ ರಾಶಿ ಭವಿಷ್ಯ

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 599/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer