ಸಿಂಹ ರಾಶಿ ಭವಿಷ್ಯ 2020 - Simha Rashi bhavishya 2020

ಕರ್ಕ ರಾಶಿ ಭವಿಷ್ಯ 2020 ಸಿಂಹ ರಾಶಿ ಭವಿಷ್ಯ 2020 ರ ಪ್ರಕಾರ, ಸಿಂಹ ರಾಶಿಚಕ್ರದ ಜನರು ಈ ವರ್ಷ ಮಿಶ್ರಿತ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ವರ್ಷ ನೀವು ಕೆಲವು ಹೊಸ ಅವಕಾಶಗಳನ್ನು ಪಡೆಯಬಹುದು ಮತ್ತು ಆ ಅವಕಾಶಗಳನ್ನು ನಿಮ್ಮ ಕಡೆಗೆ ತಿರುಗಿಸಲು ನಿಮ್ಮ ಹತ್ತಿರ ಪೂರ್ಣ ಶಕ್ತಿ ಮತ್ತು ತ್ರಾಣವೂ ಸಹ ಇರುತ್ತದೆ. ನೀವು ಯಾವ ಕೆಲಸದಲ್ಲಿ ಕೈ ಹಾಕುವಿರೋ, ಅದರಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ ಮತ್ತು ನಿಮ್ಮ ಎಲ್ಲಾ ಉದ್ಯಮಗಳು ಸರಾಗವಾಗಿ ನಡೆಯುತ್ತವೆ. ಈ ವರ್ಷದ ಆರಂಭದಲ್ಲಿ ರಾಹು ಮಿಥುನ ರಾಶಿಚಕ್ರದಲ್ಲಿ ನಿಮ್ಮ ಹನ್ನೊಂದನೇ ಮನೆಯಲ್ಲಿ ಇರುತ್ತಾನೆ ಸೆಪ್ಟೆಂಬರ್ ಮಧ್ಯದಿಂದ ವೃಷಭ ರಾಶಿಚಕ್ರದಲ್ಲಿ ನಿಮ್ಮ ಹತ್ತನೇ ಮನೆಗೆ ಸಾಗಣಿಸುತ್ತಾನೆ. ವರ್ಷದ ಆರಂಭದಲ್ಲಿ ಸರ್ವಪ್ರಥಮವಾಗಿ ಶನಿಯು 24 ಜನವರಿಗೆ ಆರನೇ ಮನೆಯಲ್ಲಿ ತನ್ನ ಸ್ವತಃ ರಾಶಿ ಮಕರ ರಾಶಿಚಕ್ರದಲ್ಲಿ ಪ್ರವೇಶಿಸುತ್ತಾನೆ. ಅದೇ ಸಮಯದಲ್ಲಿ 30 ಮಾರ್ಚ್ ಗೆ ಗುರು ದೇವನು ಸಹ ಮಕರ ರಾಶಿಚಕ್ರದಲ್ಲಿ ಪ್ರವೇಶಿಸುತ್ತಾನೆ ಮತ್ತು ವಕ್ರತೆಯಾಗಿ 30 ಜೂನ್ ಗೆ ಮತ್ತೆ ನಿಮ್ಮ ಐದನೇ ಮನೆಯಲ್ಲಿ ಧನು ರಾಶಿಚಕ್ರದಲ್ಲಿ ಬರುತ್ತಾನೆ ಇದರ ನಂತರ 20 ನವೆಂಬರ್ ಗೆ ಮತ್ತೆ ನಿಮ್ಮ ಆರನೇ ಮನೆಗೆ ಬರುತ್ತಾನೆ.

ಸಿಂಹ ರಾಶಿ ಭವಿಷ್ಯ 2020 (Simha Rashi 2020) ರ ಪ್ರಕಾರ, ಈ ವರ್ಷ ಕಡಿಮೆ ದೂರದ ಪ್ರಯಾಣಗಳನ್ನು ಹೆಚ್ಚಾಗಿ ಮಾಡುತ್ತೀರಿ ಮತ್ತು ಈ ಪ್ರಯಾಣಗಳಿಂದ ನೀವು ಲಾಭವನ್ನು ಪಡೆಯುತ್ತೀರಿ. ಈ ವರ್ಷದ ಆರಂಭದಲ್ಲಿ ನೀವು ಯಾವುದಾದರು ತೀರ್ಥ ಯಾತ್ರೆಗೂ ಹೋಗಬಹುದು. ಇದಲ್ಲದೆ ಸಮಾಜ ಸೇವೆಗೆ ಸಮಬಂಧಿಸಿದ ಕಾರ್ಯಗಳ ಕರಣದಿಂದಾಗಿಯೂ ನೀವು ಕೆಲವು ಪ್ರಯಾಣಗಳನ್ನು ಮಾಡಬಹುದು. ಶನಿ ಮತ್ತು ಗುರುವಿನ ಸಂಯೋಜನೆಯ ಪರಿಣಾಮದಿಂದಾಗಿ ಏಪ್ರಿಲ್ ಇಂದ ಜೂಲೈ ಮಧ್ಯದಿಂದ ಮತ್ತು ನಂತರ ನವೆಂಬೆರ್ ಮಧ್ಯದ ನಂತರ ವಿದೇಶ ಪ್ರವಾಸಕ್ಕೆ ಉತ್ತಮ ಅವಕಾಶದ ಸಾಧ್ಯತೆ ಇದೆ. ಈ ವರ್ಷ, ನಿಮ್ಮ ಬಹುದಿನಗಳ ಆಶಯಗಳು ಈಡೇರುತ್ತವೆ, ಅದು ನಿಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಜನವರಿ, ಮಾರ್ಚ್ ನಿಂದ ಮೇ ಮಧ್ಯೆ ನೀವು ನಿಮ್ಮ ಸ್ವತಃ ಮನೆಯನ್ನು ನಿರ್ಮಿಸುವ ಅತಃವ ಆಸ್ತಿಯನ್ನು ಖರೀದಿಸಲು ಯಾವುದೇ ಸಾಲವನ್ನು ತೆಗೆದುಕೊಳ್ಳಬಹುದು. ಈ ವರ್ಷ ನೀವು ಅನೇಕ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದುವಿರಿ ಮತ್ತು ಅವುಗಳ ಬಗ್ಗೆ ತಿಳಿಯಲು ಬಯಸುವಿರಿ. ಕೆಲವು ಕಲಾತ್ಮಕ ಆಸಕ್ತಿಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯಬಹುದು. ವರ್ಷ 2020 ನಿಮಗೆ ಮೈಲಿಗಲ್ಲು ಎಂದು ಸಾಬೀತುಪಡಿಸಬಹುದು. ಏಕೆಂದರೆ ಈ ವರ್ಷ ನೀವು ನಿಮ್ಮ ಕ್ಷೇತ್ರದಲ್ಲಿ ಸ್ಥಾಪನೆಯಾಗಲು ನಿರೀಕ್ಷಿಸಬಹುದು. ಆದ್ದರಿಂದ ಪ್ರತಿಯೊಂದು ಅವಕಾಶವನ್ನು ನಗದು ಮಾಡಲು ಮತ್ತು ಉನ್ನತ ಯಶಸ್ಸನ್ನು ಪಡೆಯಲು ಸಿದ್ಧರಾಗಿರಿ.

ಈ ರಾಶಿಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ನಿಮ್ಮ ಚಂದ್ರ ರಾಶಿ ನಿಮಗೆ ತಿಳಿದಿಲ್ಲದಿದ್ದರೆ, ಇಲ್ಲಿ ಕ್ಲಿಕ್ ಮಾಡಿ. ಚಂದ್ರ ರಾಶಿಚಕ್ರ ಕ್ಯಾಲ್ಕುಲೇಟರ್

ಸಿಂಹ ರಾಶಿ ಭವಿಷ್ಯ 2020 ರ ಪ್ರಕಾರ ವೃತ್ತಿ

ಸಿಂಹ ರಾಶಿ ಭವಿಷ್ಯ 2020 ರ ಪ್ರಕಾರ ಸಿಂಹ ರಾಶಿಚಕ್ರದ ಜನರ ವೃತ್ತಿಪರ ಜೀವನಕ್ಕಾಗಿ ಉತ್ತಮವಾಗಿರುವ ಸಾಧ್ಯತೆ ಇದೆ. ಈ ವರ್ಷ ನೀವು ನಿಮ್ಮ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸುವಿರಿ ಮತ್ತು ಉತ್ತಮ ಪ್ರದರ್ಶನ ಮಾಡುವಲ್ಲಿ ಸಾಧ್ಯವಾಗುತ್ತದೆ. ನೀವು ಪೂರ್ತಿ ಮನಸ್ಸಿನಿಂದ ಪ್ರಯತ್ನಿಸಿದರೆ ನೀವು ನಿಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ನಡುವೆ ಸಾಮರಸ್ಯವನ್ನು ಉಳಿಸಲು ಸಾಧ್ಯವಾಗುತ್ತದೆ. ಇದು ನಿಮಗೆ ಅಗತ್ಯವಾಗಿದೆ. ವರ್ಷದ ಆರಂಭದಲ್ಲಿಯೇ 24 ಜನವರಿಗೆ ಶನಿ ನಿಮ್ಮ ಆರನೇ ಮನೆಗೆ ಪ್ರವೇಶಿಸುತ್ತಾನೆ ಮತ್ತು ಪೂರ್ತಿ ಅದೇ ಮನೆಯಲ್ಲಿ ಉಳಿದಿರುತ್ತಾನೆ. ಈ ಸಾಗಣೆಯ ಪರಿಣಾಮದಿಂದಾಗಿ ಉದ್ಯೋಗದಲ್ಲಿ ಉತ್ತಮ ಬಡ್ತಿಯನ್ನು ಪಡೆಯುವ ಸಾಧ್ಯತೆ ಇದೆ. ನಿಮ್ಮ ಕಾರ್ಯಕ್ಷಮತೆಯನ್ನು ಪ್ರಶಂಶಿಸಲಾಗುತ್ತದೆ. ಅದು ನಿಮ್ಮ ಹಿರಿಯ ಅಧಿಕಾರಿಗಳ ಅರಿವಿನಲ್ಲೂ ಬರುತ್ತದೆ. ಇದಲ್ಲದೆ ಕೆಲವು ಜನರ ಸ್ಥಳಾಂತರ ಅಂದರೆ ವರ್ಗಾವಣೆ ಸಹ ಆಗುವ ಉತ್ತಮ ಸಾಧ್ಯತೆ ಇದೆ. ಸಂತೋಷದ ವಿಷಯವೆಂದರೆ, ಈ ವರ್ಗಾವಣೆ ನಿಮ್ಮ ಆಶಯಕ್ಕೆ ಅನುಗುಣವಾಗಿ ರುವ ಸಾಧ್ಯತೆ ಇದೆ.

ಸಿಂಹ ರಾಶಿ ಭವಿಷ್ಯ 2020 ರ ಪ್ರಕಾರ, ಸಿಂಹ ರಾಶಿಚಕ್ರದ ಜನರ ವೃತ್ತಿ ಜೀವನದಲ್ಲಿ ಮೇ ಇಂದ ಸೆಪ್ಟೆಂಬರ್ ಮಧ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಉಂಟಾಗಬಹುದು. ಆದರೆ ಅದರ ನಂತರ ಪರಿಸ್ಥಿತಿ ಉತ್ತಮವಾಗುತ್ತದೆ. ಉದ್ಯೋಗವನ್ನು ಹುಡುಕುತ್ತಿರುವ ಜನರು, ಈ ವರ್ಷ ಖಂಡಿತವಾಗಿಯೂ ಉದ್ಯೋಗವನ್ನು ಪಡೆಯುವ ಸಾಧ್ಯತೆ ಇದೆ. ನಿಮ್ಮ ಧೈರ್ಯ ಮತ್ತು ಶಕ್ತಿ ಹೆಚ್ಚಾಗುತ್ತದೆ ಮತ್ತು ಇಡೀ ವರ್ಷ ನೀವು ಸಕ್ರಿಯರಾಗಿ ಕೆಲಸವನ್ನು ಮಾಡುತ್ತೀರಿ. ಇದರಿಂದಾಗಿ ನೀವು ಅನೇಕ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯಬಹುದು. ನೀವು ಪಡೆಯುವ ಕೆಲಸದ ಭಾರವನ್ನು ನಿರ್ವಹಿಸಲು ಮತ್ತು ಕಠಿಣ ಪರಿಶ್ರಮ ಮಾಡಲು ನಿಮಗೆ ಸಾಧ್ಯವಾಗುತ್ತದೆ. ಈ ವರ್ಷ ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಸಹ ಪರೀಕ್ಷಿಸಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ನಿಮ್ಮ ಹಿರಿಯ ಅಧಿಕಾರಿಗಳೊಂದಿಗಿನ ಸಂಬಂಧವನ್ನು ಸಾಮಾನ್ಯವಾಗಿ ಉಳಿಸಿ ಮತ್ತು ಯಾವುದೇ ರೀತಿಯಲ್ಲಿ ಅವರೊಂದಿಗೆ ವಿವಾದ ಮಾಡಬೇಡಿ ಇಲ್ಲದಿದ್ದರೆ ಪರಿಸ್ಥಿತಿ ನಿಮ್ಮ ವಿರುದ್ಧವಾಗಿ ಉದ್ಭವಿಸಬಹುದು. ಜೂಲೈ ನಿಂದ ಡಿಸೆಂಬರ್ ವರೆಗಿನ ಸಮಯವು ಹೆಚ್ಚು ಪ್ರಯೋಜನಕಾರಿಯಾಗಬಹುದು.

ಸಿಂಹ ರಾಶಿಭವಿಷ್ಯ 2020 ರ ಪ್ರಕಾರ, ವ್ಯಾಪಾರಕ್ಕೆ ಸಂಬಂಧಿಸಿದ ಜನರಿಗೆ ಈ ವರ್ಷ ಬಹಳಷ್ಟು ಮಟ್ಟಿಗೆ ಶುಭವಾಗಲಿದೆ. ಯಾವುದಾದರು ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸುತ್ತಿದ್ದರೆ, ಆ ಕ್ಷೇತ್ರದ ಅನುಭವಿ ಜನರ ಸಲಹೆಯನ್ನು ತೆಗೆದುಕೊಂಡು ಕೆಲಸವನ್ನು ಪ್ರಾರಂಭಿಸಬಹುದು. ಈ ವರ್ಷ ನೀವು ಉತ್ತಮ ಹಣವನ್ನು ಸಂಪಾದಿಸುವುದಲ್ಲದೆ ನಿಮ್ಮ ವ್ರಿತ್ತಿಪರ ಜೀವನದಲ್ಲಿ ಕೂಡ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ. ಒಟ್ಟಾರೆಯಾಗಿ ಈ ವರ್ಷ ಸಿಂಹ ರಾಶಿಚಕ್ರದ ಜನರ ವೃತ್ತಿಪರ ಜೇವನಕ್ಕೆ ಬಹಳಷ್ಟು ಉತ್ತಮವಾಗಿದೆ ಎಂದು ಸಾಬೀತುಪಡಿಸುತ್ತದೆ.

ಸಿಂಹ ರಾಶಿ ಭವಿಷ್ಯ 2020 ರ ಪ್ರಕಾರ ಆರ್ಥಿಕ ಜೀವನ

ಸಿಂಹ ರಾಶಿ ಭವಿಷ್ಯ 2020 ರ ಪ್ರಕಾರ, ಸಿಂಹ ರಾಶಿಚಕ್ರಕ್ಕೆ ವರ್ಷ 2020 ಅನೇಕ ಏರಿಳಿತದಿಂದ ತುಂಬಿರುವ ಹೊರೆತಾಗಿಯೂ ಬಹಳಷ್ಟು ಉತ್ತಮವಾಗಲಿದೆ. ಈ ವರ್ಷದ ಸಮಯದಲ್ಲಿ ಒಂದೆಡೆ ನೀವು ಹೆಚ್ಚು ಲಾಭವನ್ನು ಪಡೆಯಲು ಪ್ರಯತ್ನಿಸಿದರೆ ಮತ್ತೊಂದೆಡೆ ಗ್ರಹಗಳ ಸ್ಥಾನವು ಹೆಚ್ಚು ಖರ್ಚುಗಳನ್ನು ಸೂಚಿಸುತ್ತಿದ್ದವೆ. ಆದ್ದರಿಂದ ಈ ವರ್ಷ ನೀವು ನಿಮ್ಮ ಹಣಕಾಸಿನ ನಿರ್ವಹಣೆಯನ್ನು ತುಂಬಾ ಆಲೋಚಿಸಿ ಅರ್ಥಮಾಡಿಕೊಂಡು ಮಾಡಬೇಕು ಮತ್ತು ಹಣದ ವಹಿವಾಟಿನ ಮೊದಲು ಚೆನ್ನಾಗಿ ಪರಿಗಣನೆ ಮಾಡುವುದು ಉತ್ತಮ. ಕೆಲವೊಮ್ಮೆ ನಿಮ್ಮ ಹಣವನ್ನು ಯಾವುದೇ ಶ್ರಮವಿಲ್ಲದೆ ಖರ್ಚು ಮಾಡಲಾಗಿದೆ ಎಂದು ನಿಮಗೆ ಅನಿಸುತ್ತದೆ. ಇದನ್ನು ತಪ್ಪಿಸಲು ನೀವು ಒಂದು ಉತ್ತಮ ಬಜೆಟ್ ಯೋಜನೆಯನ್ನು ತಯಾರಿಸಬೇಕು ಮತ್ತು ಅದನ್ನು ಅನುಸರಿಸಬೇಕು. ಇಲ್ಲದಿದ್ದರೆ ಆರ್ಥಿಕ ಸಮಸ್ಯೆಗಳು ನಿಮ್ಮ ಸುತ್ತಲೂ ಇರುವ ಹಾಗೆ ಅನುಭವಿಸುವಿರಿ.

ವರ್ಷದ ಆರಂಭದಿಂದ ಮಾರ್ಚ್ ಅಂತ್ಯದವರೆಗೆ ಮತ್ತು ಮತ್ತೆ ವಿಶೇಷವಾಗಿ ಜುಲೈನಿಂದ ನವೆಂಬರ್ ವರೆಗೆ ನಿಮಗೆ ಉತ್ತಮ ಹಣದ ಮೂಲವಿರುತ್ತದೆ ಮತ್ತು ನೀವು ಉತ್ತಮ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಅದೃಷ್ಟದ ಬೆಂಬಲವನ್ನು ಸಹ ನೀವು ಪಡೆಯುತ್ತೀರಿ. ಕೆಲವು ಜನರು ಸಂಪತ್ತು ಅಥವಾ ಯಾವುದೇ ಪೂರ್ವಜರ ಆಸ್ತಿಯನ್ನು ಆನುವಂಶಿಕವಾಗಿ ಪಡೆಯುವ ಸಾಧ್ಯತೆ ಕಾಣಿಸಿಕೊಳ್ಳುತ್ತದೆ. ಈ ವರ್ಷ ನೀವು ಹಣವನ್ನು ಸಂಪಾದಿಸಲು ಹೆಚ್ಚು ಪರಿಶ್ರಮ ಮಾಡಬೇಕಾಗುತ್ತದೆ. ಆದರೆ ವರ್ಷದ ಅಂತ್ಯದ ದಿನಗಳಲ್ಲಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಗಮನಾರ್ಹವಾಗಿ ಸುಧಾರಣೆ ಬರುತ್ತದೆ. ರಾಹುವಿನ ಹನ್ನೊಂದನೇ ಮನೆಯಲ್ಲಿ ಉಪಸ್ಥಿತಿ ಸೆಪ್ಟೆಂಬರ್ ವರೆಗೆ ನೀವು ಹಣವನ್ನು ಪಡೆಯುವ ಅನೇಕ ಮಾರ್ಗಗಳಲ್ಲಿ ಹೋಗುತ್ತದೆ. ಮಾರ್ಗಗಳನ್ನು ಪಡೆಯುವಲ್ಲಿ ನೀವು ಯಶಸ್ವಿಯಾದರೆ, ನೀವು ಹೆಚ್ಚಿನ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಖರ್ಚುಗಳು ಏನೇ ಇರಲಿ, ಆದರೆ ನಿಮ್ಮ ಆದಾಯವು ಉತ್ತಮವಾಗಿರುತ್ತದೆ ಮತ್ತು ನಿಮ್ಮ ಹಣದ ಹರಿವನ್ನು ಸುಲಭವಾಗಿ ನಿಯಂತ್ರಿಸಲು ನಿಮಗೆ ಸಾಧ್ಯವಾಗುತ್ತದೆ ಎಂದು ನೀವು ವಿಶ್ರಾಂತಿಯಿಂದ ಇರಬೇಕು. ಆರ್ಥಿಕ ಹೂಡಿಕೆಯಲ್ಲೂ ನೀವು ಯಶಸ್ಸನ್ನು ಪಡೆಯಬಹುದು. ನೀವು ನಿಮ್ಮ ಹಣದ ಹರಿಯನ್ನು ಸುಲಭವಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ. ಈ ವರ್ಷ ನಿಮ್ಮ ಜೀವನದಲ್ಲಿ ಹಠಾತ್ ಹಣದ ಅವಕಾಶಗಳು ಬರುತ್ತವೆ. ಇದು ಭವಿಷ್ಯದಲ್ಲಿ ನಿಮಗೆ ಉತ್ತಮ ಆರ್ಥಿಕ ಜೀವನಕ್ಕೆ ದಾರಿ ಮಾಡಿಕೊಡುತ್ತದೆ.

ಸಿಂಹ ರಾಶಿ ಭವಿಷ್ಯ 2020 ರ ಪ್ರಕಾರ ವೈವಾಹಿಕ ಜೀವನ ಮತ್ತು ಸಂತಾನ

ಸಿಂಹ ರಾಶಿ ಭವಿಷ್ಯ 2020 ರ ಪ್ರಕಾರ, ಸಿಂಹ ರಾಶಿಚಕ್ರದ ಜನರ ದಾಂಪತ್ಯ ಜೀವನದಲ್ಲಿ ಕೆಲವು ಒತ್ತಡಗಳಿರಬಹುದು. ನಿಮ್ಮ ಏಳನೇ ಮೆಮ್ಯ ಅಧಿಪತ್ಯ ಶನಿ ದೇವ 24 ಜನವರಿಯ ನಂತರ ಆರನೇ ಮನೆಯಲ್ಲಿ ಪ್ರವೇಶಿಸುತ್ತಾನೆ ಮತ್ತು ಪೂರ್ತಿ ವರ್ಷ ಇದೇ ಮನೆಯಲ್ಲಿ ಇರುತ್ತಾನೆ. ಇದರ ಪರಿಣಾಮದಿಂದಾಗಿ ನಿಮ್ಮ ದಾಂಪತ್ಯ ಜೇವನದಲ್ಲಿ ಒತ್ತಡವು ಹೆಚ್ಚಾಗುತ್ತದೆ ಮತ್ತು ನಿಮ್ಮ ಜೀವನ ಸಂಗಾತಿಯ ಆರೋಗ್ಯದ ಮೇಲು ಪರಿಣಾಮ ಬೀರುತ್ತದೆ. ನಿಮ್ಮ ವೈವಾಹಿಕ ಜೀವನದ ಮಹತ್ವವನ್ನು ನೀವು ಅರಿತುಕೊಳ್ಳುವ ಸಮಯ ಇದು. ಆದಾಗ್ಯೂ, ಗುರುವು ಏಪ್ರಿಲ್ ನಿಂದ ಜುಲೈ ಮಧ್ಯದವರೆಗೆ ಮತ್ತು ಮತ್ತೆ ನವೆಂಬರ್ ನಂತರ ಗುರುವು ಸಹ ಆರನೇ ಮನೆಯಲ್ಲಿರುತ್ತಾನೆ. ಇದರಿಂದ ಈ ಪರಿಸ್ಥಿತಿಯಲ್ಲಿ ಸುಧಾರಣೆ ಬರುತ್ತದೆ. ಆದರೂ ಸ್ವಲ್ಪ ಒತ್ತಡ ಉಳಿಯಬಹುದು. ನಿಮ್ಮಿಬ್ಬರ ನಡುವೆ ಯಾವುದಾದರು ವಿಷಯದ ಬಗ್ಗೆ ಜಗಳವಾಗಬಹುದು ಅಥವಾ ತಪ್ಪು ತಿಳುವಳಿಕೆ ಉಂಟಾಗಬಹುದು. ನಿಮ್ಮ ಸಂಗಾತಿಯು ಕೆಲಸ ಮಾಡುತ್ತಿದ್ದರೆ, ಅವರು ಸ್ಥಳಾಂತರಗೊಂಡ ಕಾರಣ ಅಥವಾ ವಿದೇಶ ಪ್ರವಾಸದ ಕಾರಣ ಈ ಸಮಯದಲ್ಲಿ ಅವರು ನಿಮ್ಮಿಂದ ದೂರವಿರಬೇಕಾಗಬಹುದು.

ಸಿಂಹ ರಾಶಿ ಭವಿಷ್ಯ 2020 ರ ಪ್ರಕಾರ, ಮೇ ಮಧ್ಯದಿಂದ ಸೆಪ್ಟೆಂಬರ್ ಅಂತ್ಯದ ವರೆಗಿನ ಸಮಯ ದಾಂಪತ್ಯ ಜೀವನಕ್ಕೆ ಬಹಳಷ್ಟು ಉತ್ತಮವಾಗಿರುತ್ತದೆ ಮತ್ತು ಈ ಸಮಯದಲ್ಲಿ ನಿಮ್ಮ ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ನಿಮ್ಮ ಜೀವನ ಸಂಗಾತಿಯು ಸಾಧನೆಯನ್ನು ಪಡೆಯಬಹುದು ಆ ಕಾರಣದಿಂದಾಗಿ ನೀವು ಸಂತೋಷವಾಗಿರುತ್ತೀರಿ ಮತ್ತು ನೀವು ಲಾಭವನ್ನು ಪಡೆಯಬಹುದು. ಒಟ್ಟಾರೆಯಾಗಿ ನೀವು ಜೆವೀಣಾ ಸಂಗಾತಿಯೊಂದಿಗೆ ನಿಲ್ಲಬೇಕು ಮತ್ತು ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮತ್ತು ನಿಮ್ಮ ವೈವಾಹಿಕ ಜೀವನವನ್ನು ಸಂತೋಷಪಡಿಸಲು ನೀವು ಬಯಸಿದರೆ, ಜೀವನ ಸಂಗಾತಿಯ ಮಹತ್ವವನ್ನು ಗುರುತಿಸಿ, ಅವರಿಗೆ ನಿಮ್ಮ ಜೀವನದಲ್ಲಿ ಉತ್ತಮ ಸ್ಥಾನವನ್ನು ನೀಡಿ. ಅವರ ಮನಸ್ಸಿಗೆ ಯಾವುದೇ ಹೊರೆ ಬರದಂತೆ ಕಾಲಕಾಲಕ್ಕೆ ಅವರೊಂದಿಗೆ ಮಾತನಾಡುತ್ತಲೇ ಇರಿ.

ಸಿಂಹ ರಾಶಿ ಭವಿಷ್ಯ 2020 (Simha Rashi 2020) ರ ಪ್ರಕಾರ, ವರ್ಷದ ಆರಂಭವು ನಿಮ್ಮ ಮಕ್ಕಳಿಗಾಗಿ ಬಹಳಷ್ಟು ಉತ್ತಮವಾಗಿರಬಹುದು. ಐದನೇ ಮನೆಯ ಮಾಲೀಕ ಗುರು ದೇವವರ್ಷದ ಆರಂಭದಲ್ಲಿ ಕುಳಿತಿರುತ್ತಾನೆ, ಇದು ನಿಮ್ಮ ಮಕ್ಕಳು ಪ್ರಗತಿಯನ್ನು ಪಡೆಯುವ ಸಮಯವಾಗಿರುತ್ತದೆ. ಮತ್ತು ಅವರು ತಮ್ಮ ಕೆಲಸವನ್ನು ಸಂತೋಷದ ಮನಸ್ಸಿನಿಂದ ಮಾಡುತ್ತಾರೆ ಮತ್ತು ನೀವು ಸಹ ತೃಪ್ತರಾಗುತ್ತೀರಿ. ಇದರ ನಂತರ 30 ಮಾರ್ಚ್ಗೆ ಗುರು ಆರನೇ ಮನೆಯಲ್ಲಿ ಪ್ರವೇಶಿಸುತ್ತಾನೆ, ಅಂದಿನಿಂದ, ಮಗು ಸಾಂದರ್ಭಿಕವಾಗಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದರ ನಂತರ ಜುಲೈನಿಂದ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬರುತ್ತದೆ ಮತ್ತು ನಿಮ್ಮ ಮಕ್ಕಳು ಸುಸಂಸ್ಕೃತರಾಗುತ್ತಾರೆ ಮತ್ತು ನಿಮ್ಮ ಬಗ್ಗೆ ಅವರ ಪ್ರೀತಿಯನ್ನು ಸಹ ತೋರಿಸುತ್ತಾರೆ. ಹೊಸದಾಗಿ ಮದುವೆಯಾದ ದಂಪತಿಗಳು ಈ ವರ್ಷ ಮಕ್ಕಳನ್ನು ಹೊಂದುವ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ನಿಮ್ಮ ಸಂತಾನ ಮದುವೆಗೆ ಅರ್ಹರಾಗಿದ್ದರೆ ಈ ವರ್ಷ ಅವರ ಮದುವೆಯಾಗಬಹುದು. 2020 ವರ್ಷವು ಸಾಮಾನ್ಯವಾಗಿ ನಿಮ್ಮ ಮಕ್ಕಳಿಗೆ ತುಂಬಾ ಒಳ್ಳೆಯದು.

ಸಿಂಹ ರಾಶಿ ಭವಿಷ್ಯ 2020 ರ ಪ್ರಕಾರ ಶಿಕ್ಷಣ

ಸಿಂಹ ರಾಶಿ ಭವಿಷ್ಯ 2020 ರ ಪ್ರಕಾರ ಸಿಂಹ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಸಾಕಷ್ಟು ಯಶಸ್ಸನ್ನು ಸಾಬೀತುಪಡಿಸಲು ಉತ್ತಮ ಅವಕಾಶವಿದೆ. ನೀವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ ಮತ್ತು ನಿಮ್ಮ ಸ್ಥೈರ್ಯ ಗಮನಾರ್ಹವಾಗಿ ಹೆಚ್ಚಾಗುತ್ತದೆ. ವರ್ಷದ ಆರಂಭವು ಬಹಳಷ್ಟು ಉತ್ತಮವಾಗಿರುತ್ತದೆ ಮತ್ತು ಮಾರ್ಚ್ ಅಂತ್ಯದ ವರೆಗೆ ನೀವು ನಿಮ್ಮ ಶಿಕ್ಷಣದಲ್ಲಿ ಸಾಕಷ್ಟು ಮಟ್ಟಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ ಮತ್ತು ಯಶಸ್ವಿಯಾಗುತ್ತೀರಿ. ಇದರ ನಂತರ ಜೂನ್ ಕೊನೆಯ ವರೆಗಿನ ಸಮಯದಲ್ಲಿ ನಿಮ್ಮ ಶಿಕ್ಷಣದಲ್ಲಿ ಕೆಲವು ಬದಲಾವಣೆಗಳು ಕಂಡುಬರುತ್ತವೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವವರ ಈ ಆಸೆಯನ್ನು ಈ ಅವಧಿಯಲ್ಲಿ ಈಡೇರಿಸಬಹುದು. ಅದರ ನಂತರ, ಜುಲೈ ಆರಂಭದಿಂದ ನವೆಂಬರ್ ಕೊನೆಯ ವಾರದವರೆಗೆ, ಮರು ಶಿಕ್ಷಣಕ್ಕೆ ಉತ್ತಮ ಸಮಯವಿರುತ್ತದೆ ಮತ್ತು ನೀವು ಉತ್ತಮ ಸಾಧನೆಗಳನ್ನು ಪಡೆಯುತ್ತೀರಿ.

ಸಿಂಹ ರಾಶಿಭವಿಷ್ಯ 2020 (Simha Rashi 2020) ರ ಪ್ರಕಾರ ಎಲೆಕ್ಟ್ರಾನಿಕ್ಸ್, ಹಾರ್ಡ್‌ವೇರ್, ವಿಧಾನ ಮತ್ತು ಕಾನೂನು (ಲೊ), ಸಾಮಾಜಿಕ ಸೇವೆ, ಕಂಪನಿ ಕಾರ್ಯದರ್ಶಿ ಮತ್ತು ಸೇವಾ ಪೂರೈಕೆದಾರ ಕ್ಷೇತ್ರಗಳಲ್ಲಿ ತೊಡಗಿರುವ ಸಿಂಹ ರಾಶಿಚಕ್ರದ ಜನರು ಈ ವರ್ಷ ಸಾಕಷ್ಟು ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ವಾಸ್ತವವಾಗಿ, ಈ ವರ್ಷ ಸಿಂಹ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಸುವರ್ಣ ವರ್ಷಗಳಲ್ಲಿ ಒಂದಾಗಿದೆ.

ಸಿಂಹ ರಾಶಿ ಭವಿಷ್ಯ 2020 ರ ಪ್ರಕಾರ ಕೌಟುಂಬಿಕ ಜೀವನ

ಸಿಂಹ ರಾಶಿ ಭವಿಷ್ಯ 2020 ರ ಪ್ರಕಾರ, ಈ ವರ್ಷ ನಿಮ್ಮ ಕುಟುಂಬ ಜೀವನಕ್ಕೆ ಕೆಲವು ಸವಾಲುಗಳನ್ನು ತರುವ ಸಾಧ್ಯತೆ ಇದೆ. ವರ್ಷದ ಆರಂಭವು ಉತ್ತಮವಾಗಿರುತ್ತದೆ ಮತ್ತು ಕುರಂಭದಲ್ಲಿ ಹೊಸ ಸದಸ್ಯರೂ ಬರುವ ಸಾಧ್ಯತೆ ಇದೆ. ನೀವು ನಿಮ್ಮ ಸಹೋದರ-ಸಹೋದರಿಯರ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ ಮತ್ತು ಸಮಾಜದಲ್ಲೋ ನಿಮ್ಮ ಮತ್ತು ನಿಮ್ಮ ಕುಟುಂಬದ ಗೌರವ ಹೆಚ್ಚಾಗುತ್ತದೆ. ನೀವು ನಿಮ್ಮ ಕುಟುಂಬದ ಅಗತ್ಯಗಳ ಬಗ್ಗೆ ಗಮನ ಹರಿಸಿ ಕೆಲಸ ಮಾಡಬೇಕು. ಇದು ಕೆಲವೊಮ್ಮೆ ನಿಮ್ಮ ನಿಯಂತ್ರಣದಲ್ಲಿರುವುದಿಲ್ಲ ಮತ್ತು ಇದಕ್ಕಾಗಿ ನೀವು ಅಸಮಾಧಾನಗೊಳ್ಳುತ್ತೀರಿ. ಈ ವರ್ಷ ಕೆಲವು ಜನರ ತಮ್ಮ ಕುಟುಂಬದಿಂದ ಪ್ರತ್ಯೇಕತೆಯು ಸಂಭವಿಸಬಹುದು. ಇದಲ್ಲದೆ ಈ ವರ್ಷ ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಕಾರ್ಯ ನಿರತರಾಗಿರುವ ಕಾರಣದಿಂದ ಮತ್ತು ಜೀವನದ ಇತರ ಅಂಶಗಳಿಗೆ ಹೆಚ್ಚಿನ ಸಮಯವನ್ನು ನೀಡುವುದರಿಂದ ನಿಮ್ಮ ಕುಟುಂಬಕ್ಕೆ ಹೆಚ್ಚಿನ ಸಮಯವನ್ನು ನೀಡಲು ನಿಮಗೆ ಸಾಧ್ಯವಾಗುವುದಿಲ್ಲ, ಇದರ ಕೊರತೆಯು ನಿಮ್ಮ ಕುಟುಂಬ ಸದಸ್ಯರನ್ನು ತೊಂದರೆಗೊಳಿಸುತ್ತದೆ.

ನೀವು ಕುಟುಂಬವನ್ನು ಒಟ್ಟಿಗೆ ಇರಿಸಲು ಬಯಸಿದರೆ ನಿಮ್ಮ ಜೀವನದಲ್ಲಿ ಕೆಲವು ಹೊಂದಾಣಿಕೆಗಳಿಗೆ ನೀವು ಸಿದ್ಧರಾಗಿರಬೇಕು. ಇಲ್ಲದಿದ್ದರೆ ಪರಿಸ್ಥಿತಿ ನಿಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ನೀವು ನಿಮ್ಮ ಕುಟುಂಬದೊಂದಿಗೆ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಬೇಕು ಮತ್ತು ನಿಮ್ಮ ಕಡೆಯಿಂದ ಹೆಚ್ಚು ಕೊಡುಗೆ ನೀಡಲು ಸಿದ್ಧರಾಗಿರಬೇಕು. ಆದ್ದರಿಂದ, ಯಾವುದೇ ನಿರ್ಧಾರಕ್ಕೆ ಮುಂಚಿತವಾಗಿ ನೀವು ಪೂರ್ಣ ಸಮಯ ತೆಗೆದುಕೊಳ್ಳುವುದು ಮತ್ತು ಸಮಸ್ಯೆಗಳನ್ನು ಚಿಂತನಶೀಲವಾಗಿ ಪರಿಹರಿಸುವುದು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಸಾಕಷ್ಟು ಸಂಪನ್ಮೂಲಗಳನ್ನು ಸಜ್ಜುಗೊಳಿಸುವುದು ನಿಮಗೆ ಅಗತ್ಯವಾಗಿರುತ್ತದೆ. ವರ್ಷದ ಮಧ್ಯದಲ್ಲಿ ಕುಟುಂಬ ಜೀವನದಲ್ಲಿ ಕಳವಳಗಳು ಹೆಚ್ಚಾಗಬಹುದು. ಆದರೆ ನೀವು ಎಲ್ಲರನ್ನೂ ಒಟ್ಟಾಗಿ ಸೇರಿಸಿ ನಡೆದರೆ, ಕ್ರಮೇಣ ಸಮಸ್ಯೆಗಳು ನಿಯಂತ್ರಣಕ್ಕೆ ಬರುತ್ತವೆ. ಪೂರ್ತಿ ವರ್ಷ ನೀವು ಕುಟುಂಬ ಜೀವನದಲ್ಲಿ ಮಿಶ್ರಿತ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಧಾನವಾಗಿ, ಆದರೆ ವಿವಿಧ ಸಮಸ್ಯೆಗಳ ಹೊರತಾಗಿಯೂ, ಕುಟುಂಬದಲ್ಲಿ ಶಾಂತಿಯ ವಾತಾವರಣ ನಿಧಾನವಾಗಿ ಬೆಳೆಯುತ್ತದೆ. ಏಪ್ರಿಲ್ ನಿಂದ ಜೂಲೈ ಮಧ್ಯೆ ಗುರು ಮತ್ತು ಶನಿಯ ಆರನೇ ಮನೆಯಲ್ಲಿ ಇರುವ ಕಾರಣದಿಂದ ನೀವು ನಿಮ್ಮ ಶತ್ರುಗಳ ಮೇಲೆ ಪ್ರಾಬಲ್ಯ ಸಾಧಿಸಲು ಸಾಧ್ಯವಾಗುತ್ತದೆ ಮತ್ತು ಇದರೊಂದಿಗೆ, ಸಾಮಾಜಿಕ ಸೇವೆಯ ಕೆಲವು ಕಾರ್ಯಗಳನ್ನು ನೈತಿಕ ಕಟ್ಟುಪಾಡುಗಳಾಗಿ ನಿರ್ವಹಿಸುತ್ತೀರಿ.

ಸಿಂಹ ರಾಶಿ ಭವಿಷ್ಯ 2020 ರ ಪ್ರಕಾರ ಪ್ರೀತಿ ಜೀವನ

ಸಿಂಹ ರಾಶಿ ಭವಿಷ್ಯ 2020 ರ ಪ್ರಕಾರ, ಸಿಂಹ ರಾಶಿಚಕ್ರದ ಜನರಿಗೆ ಅನೇಕ ಬದಲಾವಣೆಗಳನ್ನು ತರಲಾಗುತ್ತದೆ.ನಿಮ್ಮಲ್ಲಿ ಕೆಲವು ಜನರರಿಗೆ ಅವರ ಪ್ರೀತಿ ಸಂಗಾತಿ ಸಿಗಬಹುದು, ಅದೇ ಸಮಯದಲ್ಲಿ, ಕೆಲವು ಜನರು ಒಂದು ಸಂಬಂಧದ ಅಂತ್ಯದಿಂದಾಗಿ ಮತ್ತೊಂದು ಸಂಬಂಧವನ್ನು ಪ್ರಾರಂಭಿಸುವ ಸಾಧ್ಯತೆಯನ್ನು ನೋಡುತ್ತಾರೆ. ಒಂದಕ್ಕಿಂತ ಹೆಚ್ಚು ಸಂಬಂಧಗಳಲ್ಲಿ ನೀವು ನಿಮ್ಮನ್ನು ಸಿಲುಕಿಸಿಕೊಂಡಿರುವ ಸನ್ನಿವೇಶವೂ ಉಂಟಾಗಬಹುದು. ಆದ್ದರಿಂದ ವಿಶೇಷವಾಗಿ ಈ ವರ್ಷ ನಿಮ್ಮ ಪ್ರೀತಿ ಜೀವನವು ಏರಿಳಿತದಿಂದ ತುಂಬಿರುತ್ತದೆ. ನಿಮ್ಮ ಜೀವನದಲ್ಲಿ ಪ್ರೀತಿಯ ಕೊರತೆ ಇರುವುದಿಲ್ಲ. ಆದರೂ ಕೆಲವು ಕಾರಣಗಳಿಂದಾಗಿ ನೀವು ನಿಮ್ಮ ಪ್ರೀತಿಯ ಜೀವನದಲ್ಲಿ ತೃಪ್ತಿಯನ್ನು ಅನುಭವಿಸುದಿಲ್ಲ. ಈ ಅವಧಿಯಲ್ಲಿ ನೀವು ನಿಮ್ಮ ಸಂಗಾತಿಯ ಬಗ್ಗೆ ಹೆಚ್ಚಾಗಿ ತಿಳಿದಿಕೊಳ್ಳಲು ಪ್ರಯತ್ನಿಸುತ್ತಿರಿ ಮತ್ತು ಅವರ ಅಗತ್ಯಗಳನ್ನು ಪೂರೈಸಲು ಸಹ ಪ್ರಯತ್ನಿಸುತ್ತೀರಿ.

ಆದರೆ ವಿಪರೀತ ದದ್ದು ಸರಿಯಲ್ಲ ಎಂಬುದನ್ನು ನೆನಪಿನಲ್ಲಿಡಿ. ಆದ್ದರಿಂದ ಎಲ್ಲೆಡೆ ಉಪಕ್ರಮ ತೆಗೆದುಕೊಳ್ಳುವ ಅಭ್ಯಾಸವನ್ನು ತಪ್ಪಿಸಿ ಅವರ ಜೀವನದಲ್ಲಿ ನಿಮ್ಮ ಪ್ರಾಮುಖ್ಯತೆಯನ್ನು ಮಿತಿಗೆ ತೋರಿಸಲು ಪ್ರಯತ್ನಿಸಬೇಡಿ. ನೀವು ನಿಮ್ಮ ಪ್ರೀತಿಯ ಜೇವನದಲ್ಲಿ ನಿಮಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರೆ, ನೀವು ಪ್ರೀತಿಯ ವಿಷಯದಲ್ಲಿ ವೈಫಲ್ಯವನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ತಮ್ಮ ಪ್ರೀತಿಯ ಜೀವನವನ್ನು ಸಂತೋಷವಾಗಿ ಮಾಡಲು ನಿಮ್ಮ ಸಂಗಾತಿಗೆ ಪ್ರಾಮುಖ್ಯತೆಯನ್ನು ನೀಡಿ ಮತ್ತು ಅವರು ನಿಮಗೆ ಎಷ್ಟು ಮುಖ್ಯ ಎಂದು ಅವರಿಗೆ ತಿಳಿಸಿ. ಈ ವರ್ಷದ ಅಂತ್ಯವು ಪ್ರೀತಿಯ ಜೀವನದಲ್ಲಿ ಕೆಲವು ಹಠಾತ್ ಚಲನೆಯನ್ನು ಉಂಟುಮಾಡುತ್ತದೆ. ನಿಮ್ಮ ಪ್ರೀತಿಯ ಜೀವನದಲ್ಲಿ ವೇಗವಾಗಿ ಬದಲಾವಣೆಗಳು ಬರುತ್ತವೆ. ಮಾತು ನೀವು ನಿಮ್ಮ ಸಂಗಾತಿಯೊಂದಿಗೆ ಪ್ರಣಯದ ಕ್ಷಣಗಳನ್ನು ಕಳೆಯುವ ಅವಕಾಶಗಳನ್ನು ಪಡೆಯುತ್ತೀರಿ. ಈ ಮಧ್ಯೆ ನಗುವಿನ ಅವಕಾಶಗಳು ಬರುತ್ತವೆ ಮತ್ತು ಕೆಲವೊಮ್ಮೆ ಅಳುವಿನ ಅವಕಾಶಗಳು ಬರುತ್ತವೆ. ಆದರೆ ಇದು ಪ್ರೀತಿಯಲ್ಲಿ ಮುಳುಗುವ ಸಮಯವಾಗಿದೆ. ಜನವರಿ ಇಂದ ಮಾರ್ಚ್ ಅಂತ್ಯ ಮತ್ತು ಜೂಲೈ ಮಧ್ಯದಿಂದ ನವೆಂಬರ್ ವರೆಗಿನ ಸಮಯ ಪ್ರೀತಿ ಜೀವನಕ್ಕೆ ಸಾಕಷ್ಟು ಉತ್ತಮವಾಗಲಿದೆ ಮತ್ತು ಈ ಸಮಯ್ದಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ಸಂಪೂರ್ಣವಾಗಿ ಸಂಪರ್ಕ ಹೊಂದುತ್ತೀರಿ ಮತ್ತು ತಮ್ಮ ಜೀವನದ ಪ್ರಮುಖ ಕ್ಷಣಗಳನ್ನು ಹಂಚಿಕೊಳ್ಳುತ್ತೀರಿ. ಈ ಅವಧಿಯಲ್ಲಿ ನಿಮ್ಮಲ್ಲಿ ಕೆಲವರು ಅದೃಷ್ಟವಂತರು ತಮ್ಮ ಪ್ರಿಯತಮೆಯನ್ನು ಮದುವೆಯಾಗುವುದರಲ್ಲಿ ಯಶಸ್ಸನ್ನು ಪಡೆಯಬಹುದು.

ಸಿಂಹ ರಾಶಿ ಭವಿಷ್ಯ 2020 ರ ಪ್ರಕಾರ ಅರೋಗ್ಯ

ಸಿಂಹ ರಾಶಿ ಭವಿಷ್ಯ 2020 ರ ಪ್ರಕಾರ, ಈ ವರ್ಷ ನಿಮ್ಮ ಅರೋಗ್ಯ ಸಾಕಷ್ಟು ಮಟ್ಟಿಗೆ ಉತ್ತಮವಾಗಿರುವ ಸಾಧ್ಯತೆ ಕಂಡುಬರುತ್ತಿದೆ. ವರ್ಷದ ಆರಂಭವು ನಿಮಗೆ ಅನುಕೂಲಕರವಾಗಿರುತ್ತದೆ. ನೀವು ಉತ್ತಮ ದಿನಚರಿ ಮತ್ತು ಆಹಾರ ಶೈಲಿಯನ್ನು ಅನುಸರಿಸುತ್ತೀರಿ, ಪೂರ್ತಿ ವರ್ಷ ವ್ಯಾಯಾಮವನ್ನು ಮಾಡಿವಿರಿ. ಇದರಿಂದ ನೀವು ಬಹಳಷ್ಟು ಮಟ್ಟಿಗೆ ಆರೋಗ್ಯಕರವಾಗಿರಲು ಸಾಧ್ಯವಾಗುತ್ತದೆ. ಏಪ್ರಿಲ್ ನಿಂದ ಜೂಲೈ ಮಧ್ಯೆ ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಗಮನ ನೀಡಬೇಕು ಏಕೆಂದರೆ ಈ ಸಮಯದಲ್ಲಿ ಎಂಟನೇ ಮನೆಯ ಸ್ವಾಮಿ ಗುರು ನಿಮ್ಮ ಆರನೇ ಮನೆಗೆ ಸಾಗಾಣಿಸುತ್ತಾನೆ, ಇದು ರೋಗಗಳ ಅಂಶವಾಗಿದೆ ಮತ್ತು ಅಂತಹ ಪರಿಷ್ಟಿತಿಯಲ್ಲಿ ನಿಮಗೆ ಯಾವುದೇ ದೀರ್ಘಕಾಲದ ರೋಗ ಉಧ್ಭವಿಸುವ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ಹೆಚ್ಚಿನ ಕೊಬ್ಬಿನ ಆಹಾರವನ್ನು ಸಹ ತಪ್ಪಿಸಬೇಕು. ಏಕೆಂದರೆ ನೀವು ಬೊಜ್ಜು ಅಥವಾ ಮಧುಮೇಹದಿಂದ ಕೂಡ ಹೋರಾಡಬೇಕಾಗಬಹುದು. ಈ ಸಮಯದ ನಂತರ ನವೆಂಬರ್ ಮಧ್ಯದ ವರೆಗೆ ನಿಮ್ಮ ಆರೋಗ್ಯವು ಸುಧಾರಿಸುತ್ತದೆ ಮತ್ತು ನೀವು ದೀರ್ಘಕಾಲದ ಕಾಯಿಲೆಗಳಿಂದ ಚೇತರಿಸಿಕೊಳ್ಳುತ್ತೀರಿ. ಆದಾಗ್ಯೂ ನವೆಂಬರ್ ಮಧ್ಯದ ನಂತರ ಡಿಸೆಂಬರ್ ವರೆಗಿನ ಸಮಯವು ಮತ್ತೆ ಕೆಲವು ತೊಂದರೆಗಳನ್ನು ನೀಡಬಹುದು.

ಸಿಂಹ ರಾಶಿ ಭವಿಷ್ಯ 2020 (Simha Rashi 2020) ರ ಪ್ರಕಾರ ಸಿಂಹ ರಾಶಿಚಕ್ರದ ಜನರು ಈ ವರ್ಷ ಮಾನಸಿಕವಾಗಿ ಮತ್ತು ದೈಹಿಕವಾಗಿ ಖಚಿತರಾಗಿರಬೇಕು ಏಕೆಂದರೆ ಈ ಮಧ್ಯೆ ನಿಮ್ಮ ಆರೋಗ್ಯವನ್ನು ಪರೀಕ್ಷಿಸಬಹುದು. ವಿಪರೀತ ಒತ್ತಡವು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಬಾರದು ಎಂಬುದನ್ನು ನೆನಪಿನಲ್ಲಿಡಿ. ಈ ವರ್ಷ ನೀವು ಹೆಚ್ಚು ಕೆಲಸ ಮಾಡುತ್ತೀರಿ, ಈ ಕಾರಣದಿಂದ ದೈಹಿಕ ಆಯಾಸವೂ ನಿಮ್ಮನ್ನು ಕಾಡುತ್ತದೆ. ಆದ್ದರಿಂದ ಕೆಲಸದ ನಡುವೆ ನಿಮ್ಮ ವಿಶ್ರಾಂತಿಗಾಗಿ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿ . ಹೇಗಾದರೂ, ನೀವು ಇಡೀ ವರ್ಷದ ಬಗ್ಗೆ ಮಾತನಾಡಿದರೆ, ಸಾಮಾನ್ಯವಾಗಿ ನಿಮಗೆ ಉತ್ತಮ ಸಮಯವಿರುತ್ತದೆ ಮತ್ತು ಯಾವುದೇ ದೊಡ್ಡ ರೋಗ ಉಂಟಾಗುವ ಸಾಧ್ಯತೆ ಕಡಿಮೆ ಇದೆ.

ಸಿಂಹ ರಾಶಿ ಭವಿಷ್ಯ 2020 ರಲ್ಲಿ ಮಾಡಬೇಕಾದ ವಿಶೇಷ ಜ್ಯೋತಿಷ್ಯ ಪರಿಹಾರಗಳು

ಈ ವರ್ಷ ನೀವು ಈ ಪರಿಹಾರಗಳನ್ನು ಪೂರ್ತಿ ವರ್ಷ ಮಾಡಬೇಕು ಇದರ ಪರಿಣಾಮದಿಂದಾಗಿ ನೀವು ಅನೇಕ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯುತ್ತಿರಿ ಮತ್ತು ನೀವು ಪ್ರಗತಿಯ ಮಾರ್ಗದಲ್ಲಿ ಮುಂದುವರಿಯುತ್ತಿರಿ :

  • ನೀವು ಪ್ರತಿದಿನ ಸೂರ್ಯೋದಯಕ್ಕಿಂತ ಮುಂಚೆ ಎದ್ದೇಳಿ ಮತ್ತು ಉದಯಿಸುತ್ತಿರುವ ಕೆಂಪು ಸೂರ್ಯನನ್ನು ಬರಿಗಣ್ಣಿನಿಂದ ನೋಡಿ. ಅದರ ನಂತರ ಸ್ನಾನ ಮಾಡಿದ ನಂತರ ತಾಮ್ರದ ಪಾತ್ರೆಯಲ್ಲಿ ಕೆಂಪು ಹೂವುಗಳು ಮತ್ತು ಕೆಂಪು ಕುಂಕುಮವನ್ನು ಸೇರಿಸಿ ಮತ್ತು ಸೂರ್ಯ ದೇವರಿಗೆ ನೀರಿನಿಂದ ಅರ್ಗ್ಯವನ್ನು ಅರ್ಪಿಸಿ ಮತ್ತು ಆದಿತ್ಯ ಹೃದಯ ಸ್ತ್ರೋತವನ್ನು ಪಠಿಸಿ
  • ಇದಲ್ಲದೆ ನೀವು ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಸೂರ್ಯ ಯಂತ್ರ ಸ್ಥಾಪನೆ ಮಾಡಿ ಸೂರ್ಯನ ನಕಾರಾತ್ಮಕ ಪ್ರಭಾವವನ್ನು ನಷ್ಟ ಮಾಡಬಹುದು ಮತ್ತು ವೃತ್ತಿಯಲ್ಲಿ ಯಶಸ್ಸು ಮತ್ತು ಸಮಾಜದಲ್ಲಿ ಗೌರವವನ್ನು ಸಹ ಹೆಚ್ಚಿಸಬಹುದು.

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 399/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer