ಧನು ರಾಶಿ ಭವಿಷ್ಯ 2020 - Dhanu Rashi bhavishya 2020
ಧನು ರಾಶಿ ಭವಿಷ್ಯ 2020 (Dhanu Rashi 2020) ರ ಪ್ರಕಾರ, ಧನು ರಾಶಿಚಕ್ರದ ಜನರಿಗೆ ಈ ವರ್ಷ ಸಾಕಷ್ಟು
ಮಟ್ಟಿಗೆ ಉತ್ತಮವಾಗಲಿದೆ ಮತ್ತು ಈ ವರ್ಷ ನೀವು ನಿಮ್ಮ ವೈಯಕ್ತಿಕ ಸಂಬಂಧಗಳಿಗೆ ಸ್ಥಿರತೆ ಮತ್ತು ಬಲವನ್ನು
ನೀಡುತ್ತಿರಿ. ಈವರ್ಷ ಶನಿ ದೇವ ನಿಮ್ಮ ಎರಡನೇ ಮನೆಯಲ್ಲಿ ಸ್ವತಃ ರಾಶಿಚಕ್ರದಲ್ಲಿ ಇರುತ್ತಾನೆ ಮತ್ತು
ಅದೇ ಸಮಯದಲ್ಲಿ ಗುರು ದೇವ 30 ಮಾರ್ಚ್ ಗೆ ಎರಡನೇ ಮನೆಗೆ ಪ್ರವೇಶಿಸುತ್ತಾರೆ ಮತ್ತು 14 ಮೇ ಗೆ ವಕ್ರತೆ
ಆದ ನಂತರ 30 ಜೂನ್ ಗೆ ಮತ್ತೆ ಧನು ರಾಶಿಚಕ್ರದಲ್ಲಿ ಹಾದುಹೋಗುತ್ತಾರೆ. ಇಲ್ಲಿ ಅವರು 20 ನವೆಂಬರ್
ವರೆಗೆ ಇರುತ್ತಾರೆ ಮತ್ತು ನಂತರ ರಾಶಿಚಕ್ರದಲ್ಲಿ ಮರಳಿ ಬರುತ್ತಾರೆ. ರಾಹುವಿನ ಸಾಗಣೆ ಸೆಪ್ಟೆಂಬರ್
ಮಧ್ಯದ ನಂತರ ನಿಮ್ಮ ಏಳನೇ ಮನೆಯಲ್ಲಿ ಇರುತ್ತದೆ ಮತ್ತು ಅದರ ನಂತರ ಆರನೇ ಮನೆಯಲ್ಲಿ ಇರುತ್ತದೆ.
ಈ ವರ್ಷ ಪ್ರಯಾಣಗಳಿಗೆ ಒಳ್ಳೆಯ ಸಂಕೇತಗಳಿಲ್ಲ. ಆದ್ದರಿಂದ ಯಾವುದೇ ದೊಡ್ಡ ಯೋಜನೆಯನ್ನು ಪರಿಗಣಿಸಬೇಡಿ. ಆದಾಗ್ಯೂ ಸೆಪ್ಟೆಂಬರ್ ನಂತರ ಪರಿಸ್ಥಿತಿಯಲ್ಲಿ ಬದಲಾವಣೆ ಉಂಟಾಗುತ್ತದೆ ಮತ್ತು ನಿಮಗೆ ತೃಪ್ತಿ ನೀಡುವ ಕೆಲವು ದೂರದ ಪ್ರಯಾಣಗಳು ಇರುತ್ತವೆ. ವರ್ಷದ ಪೂರ್ವಾರ್ಧದಲ್ಲಿ ಯಾತ್ರಿಗಳಿಗೆ ಪರಿಸ್ಥಿತಿ ಹೆಚ್ಚು ಉತ್ತಮವಾಗಿ ಇರುವುದಿಲ್ಲ ಆದರೆ ಮಧ್ಯ ಭಾಗದಲ್ಲಿ ಸ್ವಲ್ಪ ಚೆನ್ನಾಗಿ ಇರುತ್ತದೆ . ಸೆಪ್ಟೆಂಬರ್ ನಂತರ ಪರಿಸ್ಥಿತಿಗಳು ವಿದೇಶ ಪ್ರವಾಸಕ್ಕೆ ಸಾಕಷ್ಟು ಸೂಕ್ತವಾಗಿರುತ್ತವೆ. ಈ ಸಮಯದಲ್ಲಿ ನೀವು ಬಯಸಿದರೆ ನೀವು ಇಷ್ಟಪಡುವ ಸ್ಥಳದಲ್ಲಿ ವರ್ಗಾವಣೆಯನ್ನು ಪಡೆಯಬಹುದು. ಈ ವರ್ಷ ನೀವು ಸಮಾಜಕ್ಕೆ ಒಳ್ಳೆಯದಾಗುವಂತಹ ಕೆಲವು ಕೆಲಸಗಳನ್ನು ಸಹ ಮಾಡುತ್ತೀರಿ ಮತ್ತು ನೀವು ಲೋಕೋಪಕಾರಿಯಾಗುತ್ತೀರಿ.
ನೀವು ಯಾರನ್ನಾದರೂ ತೊಂದರೆಗಳಲ್ಲಿ ನೋಡಿ ಅವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತೀರಿ. ಸಾಮರಸ್ಯ ಮತ್ತು ಶಾಂತಿಯನ್ನು ಉಳಿಸಲು ಪ್ರಯತ್ನಿಸುತ್ತೀರಿ. ಯಾವುದೇ ಹೊಸ ಒಪ್ಪಂದವನ್ನು ಆಲೋಚಿಸಿ ಮತ್ತು ಅರ್ಥಮಾಡಿಕೊಂಡಿ ಅಳವಡಿಸಿಕೊಳ್ಳಿ. ತಮ್ಮ ಅಹಂಕಾರವನ್ನು ನಿಯಂತ್ರಿಸುವುದು ನಿಮ್ಮ ಮೊದಲನೇ ಅಧ್ಯತೆಯಾಗಿರಬೇಕು ಏಕೆಂದರೆ ನೀವು ಇದರಲ್ಲಿ ವಿಫಲರಾದರೆ ಅನೇಕ ಅವಕಾಶಗಳನ್ನು ಕಳೆದುಕೊಳ್ಳುತ್ತೀರಿ. ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ ಆದರೆ ಇದು ನಿಮ್ಮ ಜೀವನ ಚಕ್ರವನ್ನು ಇನ್ನಷ್ಟು ಉತ್ತಮಗೊಳಿಸಲು ನಿಮಗೆ ಸಹಾಯ ಮಾಡುತ್ತದೆ. ವರ್ಷ 2020 ನಿಮ್ಮ ಜೀವನದ ಒಂದು ಒಳ್ಳೆಯ ಮತ್ತು ಮುಖ್ಯವಾದ ವರ್ಷವಾಗಿ ಸಾಬೀತುಪಡಿಸುತ್ತದೆ. ನೀವು ಸಮಾಜ ಸೇವೆಯ ಚಟುವಟಿಕೆಗಳಲ್ಲಿ ಮುಂದುವರಿದು ಭಾಗವಹಿಸುತ್ತೀರಿ. ನೀವು ಪ್ರಯತ್ನಿಸಿದರೆ ಈ ವರ್ಷ ನಿಮ್ಮ ಸ್ವಂತ ಮನೆಯನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಮತ್ತು ಅಸ್ತಿಯನ್ನು ಖರೀದಿಸಲು ಬಯಸಿದರೆ ಅದರಲ್ಲೂ ಯಶಸ್ಸನ್ನು ಪಡೆಯಬಹುದು.
ಈ ರಾಶಿಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ನಿಮ್ಮ ಚಂದ್ರ ರಾಶಿ ನಿಮಗೆ ತಿಳಿದಿಲ್ಲದಿದ್ದರೆ, ಇಲ್ಲಿ ಕ್ಲಿಕ್ ಮಾಡಿ. ಚಂದ್ರ ರಾಶಿಚಕ್ರ ಕ್ಯಾಲ್ಕುಲೇಟರ್
ಧನು ರಾಶಿ ಭವಿಷ್ಯ 2020 ರ ಪ್ರಕಾರ ವೃತ್ತಿ
ಧನು ರಾಶಿ ಭವಿಷ್ಯ 2020 ರ ಪ್ರಕಾರ, ಈ ವರ್ಷ ನಿಮ್ಮ ವೃತ್ತಿಪರ ಜೀವನಕ್ಕೆ ಬಹಳಷ್ಟು ಮಟ್ಟಿಗೆ ಉತ್ತಮವಾಗಿರುತ್ತದೆ ಮತ್ತು ನೀವು ಅನೇಕ ರೀತಿಯಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಒಂಕ್ಕಿಂತಹೆಚ್ಚು ಆದಾಯದ ಮೂಲಗಳನ್ನು ಪಡೆಯುತ್ತೀರಿ ಮತ್ತು ನಿರಂತರವಾಗಿ ಸಂಪಾದಿಸುತ್ತೀರಿ. ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ, ಈ ವರ್ಷ ನೀವು ಅದನ್ನು ಮಾಡಬಹುದು. ವಿದೇಶ ಮೂಲಗಳು ಮತ್ತು ಸ್ವಲ್ಪ ವಿದೇಶ ಕಂಪನಿಗಳೊಂದಿಗೆ ವ್ಯಾಪಾರದಲ್ಲಿ ಉತ್ತಮ ಲಾಭದ ಸೂಚನೆಗಳಿವೆ. ಆದಾಗ್ಯೂ ಪಾಲುದಾರಿಕೆಯ ಕೆಲಸದಲ್ಲಿ ಜಾಗರೂಕತೆಯನ್ನು ಹೊಂದುವ ಸಲಹೆ ನಿಮಗೆ ನೀಡಲಾಗಿದೆ. ನೀವು ಉದ್ಯೋಗದಲ್ಲಿದ್ದರೆ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ ಮತ್ತು ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ.
ಧನು ರಾಶಿ ಭವಿಷ್ಯ 2020 ರ ಪ್ರಕಾರ ಈ ವರ್ಷ ನೀವು ಕೆಲವು ಹಳೆಯ ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸುತ್ತೀರಿ. ಕೆಲವು ಯೋಜನೆಗಳನ್ನು ಈ ವರ್ಷ ಮುಂದುವರಿಸುತ್ತೀರಿ, ಅದರಲ್ಲಿ ನೀವು ನಿಮ್ಮ ಕಾರ್ಯ ಕೌಶಲ್ಯದಿಂದ ಸಾಕಷ್ಟು ಉತ್ತಮ ಪ್ರದರ್ಶನೆಯನ್ನು ಉಳಿಸುತ್ತೀರಿ. ನಿಮಗೆ ಸಹೋದ್ಯೋಗಿಗಳ ಸಹಾಯ ಸಿಗುತ್ತದೆ ಮತ್ತು ಹಿರಿಯ ಅಧಿಕಾರಿಗಳು ಸಹ ನಿಮ್ಮ ಪರವಾಗಿ ಇರುತ್ತಾರೆ. ಇದರಿಂದ ನೀವು ಯಶಸ್ಸಿನ ಹಾದಿಯಲ್ಲಿ ನಡೆಯುತ್ತೀರಿ. ನಿಮ್ಮಿಂದ ಮಾಡಲಾಗಿರುವ ಉತ್ತಮ ಕೆಲಸಗಳ ಸಾಕಷ್ಟು ಬಹುಮಾನವನ್ನು ನೀವು ಪಡೆಯುತ್ತೀರಿ. ನೀವು ನಿಮ್ಮ ಉನ್ನತ ಬುದ್ಧಿವಂತಿಕೆಯಿಂದ ವಿರೋಧಿಗಳ ಮೇಲೆ ಪ್ರಾಬಲ್ಯವನ್ನು ಸಾಧಿಸುವಿರಿ ಮತ್ತು ಅವರ ಪ್ರತಿಯೊಂದು ಯೋಜನೆಯನ್ನು ವಿಫಲ ಮಾಡುತ್ತೀರಿ. ನೀವು ಅದೃಷ್ಟದ ಉತ್ತಮ ಬೆಂಬಲವನ್ನು ಪಡೆಯುತ್ತೀರಿ ಮತ್ತು ನೀವು ನಿಮ್ಮ ಕನಸುಗಳನ್ನು ಈಡೇರಿಸಲು ಧೈರ್ಯದಿಂದ ಮುಂದುವರಿಯುತ್ತಿರಿ. ನೀವು ಪರಿಶ್ರಮವನ್ನು ಮುಂದುವರಿಸಬೇಕು ಅಷ್ಟೇ ಮತ್ತು ನಿಮ್ಮ ಕೆಲಸವನ್ನು ಮಾಡುತ್ತಲೇ ಇರಬೇಕು ಅಥವಾ ಜನರು ನಿಮ್ಮನ್ನು ಅನುಸರಿಸಿದರೆ, ಚೆನ್ನಾಗಿ ಒಳ್ಳೆಯ ಕಾರ್ಯವನ್ನು ಮಾಡುವುದು ನಿಮಗೆ ಉತ್ತಮ ಎಂಬುದರ ಬಗ್ಗೆ ಗಮನ ಹರಿಸಿ. ವರ್ಷದ ಅಂತ್ಯದಲ್ಲಿ ಕೆಲವು ಸಮಸ್ಯೆಗಳು ಬರಬಹುದು ಅಥವಾ ಯಾವುದೇ ಕಾನೂನು ಗೊಂದಲ ನಿಮ್ಮನ್ನು ಕಾಡಬಹುದು, ಇದರಿಂದ ನೀವು ಜಾಗರೂಕರಾಗಿರಬೇಕು. ಕೆಲಸದ ಸ್ಥಳದಲ್ಲಿ ನಿಮ್ಮ ಮಾನಹಾನಿಯನ್ನು ಎದುರಿಸುವಂತಹ ಯಾವುದೇ ಕೆಲಸದಲ್ಲಿ ಬೀಳಬೇಡಿ, ಆದಾಗ್ಯೂ ಅಂತಹ ಸಾಧ್ಯತೆ ಕಡಿಮೆಯಾಗಿದೆ.
ಧನು ರಾಶಿ ಭವಿಷ್ಯ 2020 ರ ಪ್ರಕಾರ ಆರ್ಥಿಕ ಜೀವನ
ಧನು ರಾಶಿ ಭವಿಷ್ಯ 2020 ರ ಪ್ರಕಾರ, ನೀವು ಎಷ್ಟು ಹೆಚ್ಚಾಗಿ ಕಠಿಣ ಪರಿಶ್ರಮ ಮಾಡುವಿರೋ ಅಷ್ಟೇ ಹೆಚ್ಚಾಗಿ ಹಣದ ಲಾಭವನ್ನು ಪಡೆಯುತ್ತೀರಿ. ಅಂದರೆ ನೀವು ನಿಮ್ಮ ವೈಯಕ್ತಿಕ ಪ್ರಯತ್ನಗಳಿಂದ ಬಹಳಷ್ಟು ಮಟ್ಟಿಗೆ ಲಾಭದ ಪರಿಸ್ಥಿತಿಗಳಲ್ಲಿ ಇರುತ್ತೀರಿ. ಆದಾಗ್ಯೂ ಹೂಡಿಕೆ ಮಾಡುವ ಮೊದಲು ಚೆನ್ನಾಗಿ ಯೋಚಿಸಿ ಪರಿಗಣಿಸಿ ಎಂದು ಸಲಹೆ ನೀಡಲಾಗಿದೆ. ಇದಲ್ಲದೆ ಕೆಲವು ಅನಿರೀಕ್ಷಿತ ಖರ್ಚುಗಳು ಸಹ ನಿಮ್ಮನ್ನು ಕಾಡಬಹುದು. ಅದರಲ್ಲಿ ಮುಖ್ಯವಾಗಿ ನಿಮ್ಮ ಕುಟುಂಬದ ಒಬ್ಬ ಸದಸ್ಯರ ಆರೋಗ್ಯ ಹದಗೆಡುವ ಕಾರಣದಿಂದಾಗಿ ಮಾಡಲಾಗುವ ಖರ್ಚುಗಳು ಒಳಗೊಂಡಿರುತ್ತವೆ. ಮಾರ್ಚ್ ಅಂತ್ಯದಿಂದ ಜೂನ್ ಅಂತ್ಯದ ವರೆಗಿನ ಸಮಯವು ಹಣವನ್ನು ಸಂಗ್ರಹಿಸಲು ಬಹಳಷ್ಟು ಉತ್ತಮವಾಗಲಿದೆ ಮತ್ತು ಈ ಸಮಯದಲ್ಲಿ ನೀವುಉಳಿಸಲು ಸಾಧ್ಯವಾಗುತ್ತದೆ.
ಧನು ರಾಶಿ ಭವಿಷ್ಯ 2020 (Dhanu Rashi 2020) ರ ಪ್ರಕಾರ, ನೀವು ಯಾವುದೇ ಅಲ್ಪಾವಧಿಯ ಹೂಡಿಕೆ ಮಾಡಲು ಬಯಸುತ್ತಿದ್ದರೆ, ಅದರಲ್ಲಿ ನೀವು ಪ್ರಯೋಜನವನ್ನು ಪಡೆಯಬಹುದು ಆದರೆ ಧೀರ್ಘಕಾಲದ ಹೂಡಿಕೆಗಾಗಿ ಸಮಯ ಅನುಕೂಲಕರವಾಗಿಲ್ಲ. ವರ್ಷದ ಮಧ್ಯದಲ್ಲಿ ಅನಗತ್ಯ ವೆಚ್ಚಗಳು ಉಂಟಾಗಬಹುದು. ಇದು ನಿಮ್ಮ ಬಡ್ಜೆಟ್ ಮೇಲೆ ಪರಿಣಾಮ ಬೀರಬಹುದು. ಮನೆಯಲ್ಲಿ ಯಾವುದೇ ಮಾಂಗಳಿಕ ಕಾರ್ಯಕ್ರಮದ ಸಂದರ್ಭದಲ್ಲೂ ನೀವು ಖರ್ಚು ಮಾಡಬಹುದು. ಆದ್ದರಿಂದ ಒಂದೆಡೆ ಹಣದ ಹರಿವು ಉತ್ತಮವಾಗಿರುತ್ತದೆ ಮತ್ತು ನೀವು ಹಣವನ್ನು ಗಳಿಸುವಿರಿ, ಅದೇ ಸಮಯದಲ್ಲಿ ಮತ್ತೊಂದೆಡೆ, ವೆಚ್ಚಗಳು ಸಹ ಉಳಿಯುತ್ತವೆ. ಹಣಕ್ಕೆ ಸಂಬಂಧಿಸಿದ ಅಥವಾ ಪೂರ್ವಜರ ಆಸ್ತಿಗೆ ಸಂಬಂಧಿಸಿದ ಕಾನೂನು ಕ್ರಮವಿದ್ದರೆ ಅಥವಾ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಉಳಿದಿದ್ದರೆ, ನಿಮ್ಮ ಪರವಾಗಿ ಬರುವ ಮೂಲಕ ನಿಮಗೆ ಲಾಭ ಸಿಗುತ್ತದೆ. ವರ್ಷದ ಕೊನೆಯಲ್ಲಿ ಪರಿಸ್ಥಿತಿ ತುಂಬಾ ಚೆನ್ನಾಗಿರುತ್ತದೆ. ಈ ವರ್ಷ ನೀವು ಉತ್ತಮ ಬಟ್ಟೆ, ಆಭರಣ ಮತ್ತು ಸೌಕರ್ಯಗಳಿಗಾಗಿ ಖರ್ಚು ಮಾಡುತ್ತೀರಿ. ಇತರರನ್ನು ಅವಲಂಬಿಸುವ ಬದಲು, ನೀವೇ ಪ್ರಯತ್ನಿಸಿ ಇದರಿಂದ ನಿಮಗೆ ಗರಿಷ್ಠ ಲಾಭ ಸಿಗುತ್ತದೆ. ಯಾರಿಗಾದರೂ ಹಣವನ್ನು ನೀಡುವ ಮೊದಲು, ಚೆನ್ನಾಗಿ ಯೋಚಿಸಿ ಮತ್ತು ನಿಮ್ಮ ತಿಳಿದಿರುವವರಿಗೆ ಮಾತ್ರ ಹಣವನ್ನು ನೀಡಿ.
ಧನು ರಾಶಿ ಭವಿಷ್ಯ 2020 ರ ಪ್ರಕಾರ ಶಿಕ್ಷಣ
ಧನು ರಾಶಿ ಭವಿಷ್ಯ 2020 ರ ಪ್ರಕಾರ, ವಿದ್ಯಾರ್ಥಿಗಳಿಗೆ ಈ ವರ್ಷ ಮಿಶ್ರಿತ ಫಲಿತಾಂಶಗಳನ್ನು ನೀಡುತ್ತದೆ. ಜನವರಿ ಇಂದ ಮಾರ್ಚ್ ಕೊನೆಯ ವರೆಗಿನ ಸಮಯ ಸಾಕ್ಷ್ಟು ಉತ್ತಮವಾಗಲಿದೆ ಮತ್ತು ಈ ಸಮಯ ನಿಮ್ಮ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಎರಡಲ್ಲೂ ಯಶಸ್ಸನ್ನು ನೀಡಲು ಸಾಮರ್ಥ್ಯವಾಗಿದೆ. ನೀವು ನಿಮ್ಮ ಶಿಕ್ಷಣದ ಕ್ಷೇತ್ರದಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತೀರಿ ಮತ್ತು ಉತ್ತಮ ಪರಿಣಾಮಗಳನ್ನು ಪಡೆಯುತ್ತಿರಿ. ನಿಮ್ಮ ಮನಸ್ಸು ಸ್ವಾಭಾವಿಕವಾಗಿ ಶಿಕ್ಷಣದತ್ತ ಒಲವು ತೋರಿಸುತ್ತದೆ. ಒಂದು ಏಪ್ರಿಲ್ ನಿಂದ ಮೂವತ್ತು ಜೂನ್ ವರೆಗೆ ಸಮಯ ಸ್ವಲ್ಪ ಸವಾಲುಗಳಿಂದ ತುಂಬಿರಬಹುದು ಮತ್ತು ಈ ಅವಧಿಯಲ್ಲಿ ನೀವು ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಇದರ ನಂತರ ನವೆಂಬರ್ ಮಧ್ಯದ ವರೆಗೆ ನೀವು ನಿಮ್ಮ ಕ್ಲವೆರ್ಗೆ ಹಿಂತಿರುಗುತ್ತೀರಿ ಮತ್ತು ಶಿಕ್ಷಣದ ಕ್ಷೇತ್ರದಲ್ಲಿ ಪ್ರವರ್ತಕರಾಗಲು ಪ್ರಯತ್ನಿಸುತ್ತೀರಿ.
ಧನು ರಾಶಿ ಭವಿಷ್ಯ 2020 (Dhanu Rashi 2020) ರ ಪ್ರಕಾರ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬೈಹಾಗವಹಿಸುವ ವಿದ್ಯಾರ್ಥಿಗಳಿಗೆ ಈ ವರ್ಷ ಸಾಧನೆಗಳಿಂದ ತುಂಬಿಯಿರುತ್ತದೆ. ಇದಲ್ಲದೆ ನೀವು ಉನ್ನತ ಶಿಕ್ಷಣವನ್ನು ಪಡೆಯಲು ಯಾವುದೇ ಹೆಚ್ಚು ಮಾನ್ಯತೆಯನ್ನು ಪಡೆದಿರುವ ಸಂಸ್ಥೆಯಲ್ಲಿ ಪ್ರವೇಶವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ವರ್ಷ ನಿಮ್ಮ ವಿದ್ವಾಂಸ ವಿದ್ಯಾರ್ಥಿಗಳೆಂದು ಪರಿಗಣಿಸಲಾಗುತ್ತದೆ ಮತ್ತು ಪ್ರತಿಯೊಬ್ಬರೂ ನಿಮ್ಮನ್ನು ಮೆಚ್ಚುತ್ತಾರೆ. ಇದೀಗ ತಮ್ಮ ಉನ್ನತ ಶಿಕ್ಷಣವನ್ನು ಪಡೆದು ಮುಂದಿವರಿಯಲು ಪ್ರಯತ್ನಿಸುತ್ತಿರುವ ಜನರಿಗೆ ಉದ್ಯೋಗದ ಉತ್ತಮ ಅವಕಾಶಗಳು ಸಿಗುತ್ತವೆ ಮತ್ತು ಮಧ್ಯ ಸೆಪ್ಟೆಂಬರ್ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೀವು ಅದ್ಭುತ ಯಶಸ್ಸನ್ನು ಪಡೆಯಬಹುದು. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣ ಮನಸ್ಸಿನಿಂದ ಅಧ್ಯಯನದ ಬಗ್ಗೆ ಸಮರ್ಪಿತರಾಗಿ ಏಕಾಗ್ರತೆಯಲ್ಲಿರಿ ಮತ್ತು ಅಧ್ಯಯನವನ್ನು ಮಾಡಿ.
ಧನು ರಾಶಿ ಭವಿಷ್ಯ 2020 ರ ಪ್ರಕಾರ ಕೌಟುಂಬಿಕ ಜೀವನ
ಧನು ರಾಶಿ ಭವಿಷ್ಯ 2020 ರ ಪ್ರಕಾರ, ವರ್ಷದ ಆರಂಭ ನಿಮ್ಮ ಕೌಟುಂಬಿಕ ಜೀವನಕ್ಕೆ ಸಾಕಷ್ಟು ಅನುಕೂಲಕರವಾಗಲಿದೆ ಮತ್ತು ಇದರ ನಂತರ ಪರಿಸ್ಥಿತಿಗಳು ನಿಮ್ಮ ಪರವಾಗಿ ಇರುತ್ತವೆ. ನೀವು ಆಸ್ತಿಗೆ ಸಂಬಂಧಿಸಿದ ಲಾಭವನ್ನು ಹೊಂದಿದ್ದೀರಿ. ಈ ವರ್ಷ ನೀವು ಕೆಲವು ಆಸ್ತಿಯನ್ನು ಮಾಡುತ್ತೀರಿ. ಕೆಲವು ಆಸ್ತಿಯನ್ನು ಮಾರಾಟ ಮಾಡಿ ಅಥವಾ ಬಾಡಿಗೆಗೆ ಕೊಟ್ಟು ಅದರಿಂದ ಹಣವನ್ನು ಗಳಿಸುತ್ತೀರಿ. ಎರಡನೇ ಮನೆಯಲ್ಲಿ ಶನಿ ದೇವರ ಉಪಸ್ಥಿತಿ ಇರುವುದರಿಂದ ನೀವು ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಮತ್ತು ಶನಿಯ ಶುಭವು ನಿಮಗೆ ಕೌಟುಂಬಿಕ ಸಂತೋಷವನ್ನು ನೀಡುತ್ತದೆ. 30 ಮಾರ್ಚ್ ನಿಂದ 30 ಜೂನ್ ಮತ್ತು ಅದರ ನಂತರ 20 ನವೆಂಬರ್ ನಂತರ ಗಮನಾರ್ಹವಾಗಿ ಗುರುವಿನ ಸಾಗಣೆ ನಿಮ್ಮ ಎರಡನೇ ಮನೆಯಲ್ಲಿ ಇದ್ದಾಗ ನಿಮ್ಮ ಕೌಟುಂಬಿಕ ಜೀವನಕ್ಕೆ ಸಮಯ ಅನುಕೂಲಕರವಾಗಲಿದೆ. ಈ ಸಮಯದಲ್ಲಿ ಪರಸ್ಪ ಸಮಬಂಧದಲ್ಲಿ ತೀವ್ರತೆ ಬರುತ್ತದೆ.
ಧನು ರಾಶಿ ಭವಿಷ್ಯ 2020 (Dhanu Rashi 2020) ರ ಪ್ರಕಾರ, ಕುಟುಂಬದಲ್ಲಿ ಯಾವುದಾದರು ಹಬ್ಬ ಅಥವಾ ಕಾರ್ಯಕ್ರಮ ಸಂಭವಿಸಬಹುದು. ಇದಲ್ಲದೆ ಹೊಸ ಸದಸ್ಯ ಬರುವುದರಿಂದಲೂ ನಿಮ್ಮ ಕುಟುಂಬದಲ್ಲಿ ಸಂತೋಷದ ಮಳೆಯಾಗುತ್ತದೆ. ಪರಸ್ಪರ ತಿಳುವಳಿಕೆ ಹೆಚ್ಚಾಗುತ್ತದೆ ಮತ್ತು ಎಲ್ಲರು ಪರಸ್ಪರ ಬಗ್ಗೆ ಗೌರವದ ಭಾವನೆಯನ್ನು ಹೊಂದಿರುತ್ತಾರೆ. ಇದರಿಂದ ನಿಮ್ಮ ಕುಟುಂಬ ಜೀವನದಲ್ಲಿ ಸಂತೋಷ ಹರಳುತ್ತದೆ. ಆದಾಗ್ಯೂ ಮತ್ತೊಂದೆಡೆ 24 ಜನವರಿ ನಂತರ ಶನಿಯ ಎರಡನೇ ಮನೆಯಲ್ಲಿ ಹೋಗುವುದು, ನಿಮ್ಮ ಸ್ಥಳವನ್ನು ಸಹ ಬದಲಾಯಿಸಬಹುದು. ಸ್ವಲ್ಪ ಸಮಯದಕ್ಕಾಗಿ ನೀವು ನಿಮ್ಮ ಕುಟುಂಬದಿಂದ ದೂರ ಹೋಗುವ ಸಾಧ್ಯತೆಯೂ ಇದೆ. ಆದರೆ ಈ ಸಮಯದಲ್ಲಿ ನೀವು ಉತ್ತಮ ಮತ್ತು ಸುಖದಿಂದ ತುಂಬಿರುವ ಜೀವನವನ್ನು ಆನಂದಿಸುವ ಸಾಧ್ಯತೆಯೂ ಇದೆ.
ಧನು ರಾಶಿ ಭವಿಷ್ಯ 2020 ರ ಪ್ರಕಾರ ವೈವಾಹಿಕ ಜೀವನ ಮತ್ತು ಸಂತಾನ
ಧನು ರಾಶಿ ಭವಿಷ್ಯ 2020 ರ ಪ್ರಕಾರ ನಿಮ್ಮ ವೈವಾಹಿಕ ಜೀವನ ಬಹಳಷ್ಟು ಬಹಳಷ್ಟು ಮಧುರವಾಗಲಿದೆ. ವರ್ಷದ ಆರಂಭದಲ್ಲಿ 24 ಜನವರಿ ಇಂದ ಶನಿಯು ಮಕರ ರಾಶಿಚಕ್ರದಲ್ಲಿ ಹಾದುಹೋಗುತ್ತಾನೆ ಮತ್ತು ನಿಮ್ಮ ದಾಂಪತ್ಯ ಜೀವನದಲ್ಲಿ ಗುರುವಿನ ಸಂಪೂರ್ಣ ಕೃಪೆ ಇರುತ್ತದೆ ಮತ್ತು ದಾಂಪತ್ಯ ಜೀವನ ಪರಸ್ಪರ ತಿಳುವಳಿಕೆಯಿಂದ ತುಂಬಾ ಚೆನ್ನಾಗಿ ನಡೆಯುತ್ತದೆ. ಆದಾಗ್ಯೂ ಮತ್ತೊಂದೆಡೆ ನಿಮ್ಮ ಜೀವನ ಸಂಗಾತಿಯ ಅರೋಗ್ಯ ಸ್ವಲ್ಪ ದುರ್ಬಲವಾಗಿರಬಹುದು. ಇದು ನಿಮ್ಮ ಚಿಂತೆಗೆ ಕಾರಣವಾಗಬಹುದು ಆದ್ದರಿಂದ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಧನು ರಾಶಿ ಭವಿಷ್ಯ 2020 (Dhanu Rashi 2020) ರ ಪ್ರಕಾರ, ಜನವರಿ ಇಂದ ಮಾರ್ಚ್ ಕೊನೆಯವರೆಗೆ ಮತ್ತು ಅದರ ನಂತರ ಜೂನ್ ಮಧ್ಯದಿಂದ ನವೆಂಬರ್ ವರೆಗಿನ ಸಮಯ ನಿಮ್ಮ ದಾಂಪತ್ಯ ಜೀವನಕ್ಕೆ ಬಹಳ ಮುಖ್ಯವೆಂದು ಸಾಬೀತುಪಡಿಸುತ್ತದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ದಾಂಪತ್ಯ ಜೀವನವು ಅದರ ಅತ್ಯುತ್ತಮ ರೂಪದಲ್ಲಿ ನಿಮ್ಮ ಮುಂದೆ ಬರುತ್ತದೆ. ನೀವಿಬ್ಬರು ಒಂದು ಉತ್ತ್ತಮ ವೈವಾಹಿಕ ಜೀವನವನ್ನು ಅನುಭವಿಸುವಿರಿ ಮತ್ತು ಪರಸ್ಪ ಬಗ್ಗೆ ಉತ್ತಮ ದಾಂಪತ್ಯ ಸಂತೋಷವನ್ನು ಆನಂದಿಸುವಿರಿ. ಪರಸ್ಪರ ಬಗ್ಗೆ ಗೌರವದ ಭಾವನೆ ಉಂಟಾಗುತ್ತದ್ ಮತ್ತೆ ಪರಸ್ಪರ ಬಗೆಗಿನ ಭಾವನೆಗಳನ್ನು ಅರ್ಥಮಾಡಿಕೊಂಡು ಗಂಡ ಹೆಂಡತಿಯ ರೂಪದಲ್ಲಿ ನೀವು ಜೀವನದ ವೇಗವನ್ನು ಮುಂದುವರಿಸುತ್ತೀರಿ. 30 ಮಾರ್ಚ್ ನಿಂದ 30 ಜೂನ್ ಮತ್ತು 20 ನವೆಂಬರ್ ನಂತರ ಪರಿಸ್ಥಿತಿಗಳು ಸ್ವಲ್ಪ ಬದಲಾಗಬಹುದು ನಿಮ್ಮ ಕುಟುಂಬದಲ್ಲಿ ಒಬ್ಬ ಹೊಸ ಸದ್ಯಸ ಬರಬಹುದು. ಈ ಹೊಸ ಸದಸ್ಯ ಯಾರೊಬ್ಬರ ಜನನ ಅಥವಾ ವಿವಾಹದ ರೂಪದಲ್ಲಿರಬಹುದು.
ವಾರ್ಷಿಕ ರಾಶಿ ಭವಿಷ್ಯ 2020 ರ ಪ್ರಕಾರ ಐದನೇ ಮನೆಯಲ್ಲಿ ಗುರುವಿನ ದೃಷ್ಟಿ ನಿಮ್ಮ ಮಕ್ಕಳಿಗಾಗಿ ಬಹಳಷ್ಟು ಉತ್ತಮ ಪರಿಸ್ಥಿತಿಯನ್ನು ಉಂಟುಮಾಡುತ್ತದೆ. ಮಕ್ಕಳಿಲ್ಲದೆ ಇರುವ ಜನರು ಮಕ್ಕಳನ್ನು ಹೊಂದಬಹುದು ಮತ್ತು ಮಕ್ಕಳ ಇಲಾಖೆಗೆ ತಯಾರಿ ನಡೆಸುತ್ತಿರುವವರು ಅಥವಾ ಪ್ರಯತ್ನಿಸುತ್ತಿರುವವರ ಮಕ್ಕಳ ಮದುವೆ ಸಂಭವಿಸಬಹುದು.
ಧನು ರಾಶಿ ಭವಿಷ್ಯ 2020 ರ ಪ್ರಕಾರ ಪ್ರೀತಿ ಜೀವನ
ಧನು ರಾಶಿ ಭವಿಷ್ಯ 2020 ರ ಪ್ರಕಾರ, ಈ ವರ್ಷ ನಿಮ್ಮ ಪ್ರೀತಿ ಜೀವನಕ್ಕೆ ಬಹಳಷ್ಟು ಮಟ್ಟಿಗೆ ತೃಪ್ತಿಯಾಗಿರುತ್ತದೆ ಎಂದು ಸಾಬೀತುಪಡಿಸುತ್ತದೆ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಜೀವನವನ್ನು ಆನಂದಿಸುವಿರಿ.ನಿಮ್ಮ ಪ್ರೀತಿಯ ಜೀವನದಲ್ಲಿ ಆಳ ಬರುತ್ತದೆ ಮತ್ತು ನೀವಿಬ್ಬರು ಪರಸ್ಪರ ಬಗ್ಗೆ ಸಮರ್ಪಿತರಾಗಿ ಪರಸ್ಪರ ಮಾತುಗಳನ್ನು ಕೇಳುತ್ತೀರಿ ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೀರಿ. ನಿಜವಾಗಿಯೂ ನಿಮ್ಮ ಈ ಪ್ರವೃತ್ತಿ ನಿಮ್ಮನ್ನು ಒಬ್ಬ ಉತ್ತಮ ಪ್ರೇಮಿಯಾಗಿ ಮಾಡುತ್ತದೆ ಮತ್ತು ಈ ಕಾರಣದಿಂದಾಗಿ ನಿಮ್ಮ ಪ್ರೀತಿಪಾತ್ರರು ಸಹ ನಿಮ್ಮಿಂದ ದೂರ ಹೋಗುವುದನ್ನು ಪರಿಗಣಿಸುವುದಿಲ್ಲ. ಆದಾಗ್ಯೂ ನೀವು ನಿಮ್ಮ ಅಹಂಕಾರವನ್ನು ನಿಯಂತ್ರಿಸಬೇಕು ಇಲ್ಲದಿದ್ದರೆ ಪರಿಸ್ಥಿತಿ ವಿರುದ್ಧವಾಗಬಹುದು. ನೀವು ಪ್ರೀತಿ ಜೀವನದಲ್ಲಿದ್ದರೆ, ನೀವು ಒಬ್ಬಂಟಿಯಾಗಿಲ್ಲ ನೀವು ಒಬ್ಬರ ಜೊತೆಯಲ್ಲಿ ಇದ್ದೀರಿ ಎಂಬುದನ್ನು ನೆನಪಿನಲ್ಲಿಡಿ. ಆದ್ದರಿಂದ ನಿಮ್ಮ ಮುಂದೆ ಇರುವ ವ್ಯಕ್ತಿಗೆ ಸಮಾನ ಪ್ರಾಮುಖ್ಯತೆಯನ್ನು ನೀಡಿ, ಇದರಿಂದ ಅವರು ನಿಮ್ಮ ಜೀವನದಲ್ಲಿ ಯಾವುದೇ ಪ್ರಾಮುಖ್ಯತೆಯನ್ನು ಹೊಂದಿಲ್ಲ ಎಂದು ಭಾವಿಸುವುದಿಲ್ಲ.
ಧನು ರಾಶಿ ಭವಿಷ್ಯ 2020 ರ ಪ್ರಕಾರ, ನೀವು ಪ್ರಾಮಾಣಿಕವಾಗಿರಬೇಕು ಮತ್ತು ತನ್ನ ಸಂಗಾತಿಯ ಬಗ್ಗೆ ಸಂಪೂರ್ಣ ಸಮರ್ಪಿತರಾಗಿರಬೇಕು. ವರ್ಷದ ಮಧ್ಯದಲ್ಲಿ ನಿಮ್ಮ ಪ್ರೀತಿಯ ಜೀವನದಲ್ಲಿ ಪ್ರಣಯ ಮತ್ತು ಕಾಮಪ್ರಚೋದಕದ ಪರಿಣಾಮ ಉಳಿಯಬಹುದು. ನಿಮ್ಮ ನಡುವೆ ಆಕರ್ಷಣೆ ಹೆಚ್ಚಾಗುತ್ತದೆ ಅಮ್ತ್ತು ಇದರಿಂದ ನಿಮ್ಮ ಪ್ರೀತಿಯ ಜೀವನ ಹರಳುತ್ತದೆ. ಕೆಲವು ಜನರಿಗೆ ಪ್ರೀತಿ ಮದುವೆಯ ಉಡುಗೊರೆ ಸಿಗಬಹುದು. ವಿಶೇಷವಾಗಿ ಜನವರಿ ಇಂದ ಮಾರ್ಚ್ ಕೊನೆ ಮತ್ತು ಅದರ ನಂತರ ಜೂಲೈ ಮಧ್ಯದಿಂದ ನವೆಂಬರ್ ನಡುವೆ. ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ವಿಷಯವೆಂದರೆ, ವರ್ಷದ ಕೊನೆಯಲ್ಲಿ ನಿಮ್ಮ ಪ್ರೀತಿಯ ಜೀವನದ ಭವಿಷ್ಯದ ಬಗ್ಗೆ ನೀವು ಬಹಳ ಮುಖ್ಯವಾದ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ, ಆದ್ದರಿಂದ ನಿಮ್ಮಹೃದಯವನ್ನು ಕೇಳಿ ಮತ್ತು ಅದರ ಪ್ರಕಾರವೇ ಕೆಲಸ ಮಾಡಿ. ನೀವು ಮೊದಲಿನಿಂದಲೇ ಯಾವುದಾದರು ಸಂಬಂಧದಲ್ಲಿದ್ದರೆ ಈ ಸಮಯದಲ್ಲಿ ನಿಮ್ಮ ಸಂಬಂಧವು ಇನ್ನಷ್ಟು ಬಲವಾಗಬಹುದು ಮತ್ತು ಇದರಲ್ಲಿ ಸ್ಥಿರತೆಯ ಪ್ರಜ್ಞೆ ಬರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ನೀವು ಇನ್ನೂ ಒಬ್ಬಂಟಿಯಾಗಿದ್ದರೆ, ನಿಮ್ಮ ಸೃಜನಶೀಲತೆಯ ಬಲದ ಮೇಲೆ ಯಾರಾದರೂ ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ.
ಧನು ರಾಶಿ ಭವಿಷ್ಯ 2020 ರ ಪ್ರಕಾರ ಅರೋಗ್ಯ
ಧನು ರಾಶಿ ಭವಿಷ್ಯ 2020 ರ ಪ್ರಕಾರ, ಈ ವರ್ಷ ನಿಮ್ಮ ಆರೋಗ್ಯವು ಸಣ್ಣ ಪುಟ್ಟ ಸಮಸ್ಯೆಗಳನ್ನು ಬಿಟ್ಟು ಬಹಳಷ್ಟು ಮಟ್ಟಿಗೆ ಸಾಮಾನ್ಯವಾಗಲಿದೆ ಮತ್ತು ನೀವು ಉತ್ತಮ ಆರೋಗ್ಯವನ್ನು ಆನಂದಿಸುವಿರಿ. ಮಾನಸಿಕವಾಗಿ ಮತ್ತು ದೈಹಿಕವಾಗಿ ಎರಡೂ ರೂಪದಲ್ಲಿಯೂ ನೀವು ಸ್ವಲ್ಪ ಉತ್ಸಾಹವನ್ನು ಅನುಭವಿಸಬಹುದು. ಆದರೆ ಇದರ ಹೊರೆತಾಗಿಯೂ ಯಾವುದೇ ದೊಡ್ಡ ರೋಗದ ಸಾಧ್ಯತೆ ಕಂಡುಬರಿತ್ತಿಲ್ಲ. ನೀವು ಕೊಲವೊಮ್ಮೆ ಹೆದರಿಕೆ ಅಥವಾ ಮಾನಸಿಕ ಅಸ್ವಸ್ಥತೆಯನ್ನು ಹೊಂದಿರಬಹುದು. ಇಂದನ್ನು ನಿಯಂತ್ರಿಸುವುದು ನಿಮಗೆ ಅಗತ್ಯವಾಗಿದೆ ಮತ್ತು ನಿಮ್ಮ ಜೀವನದ ಶಕ್ತಿಯನ್ನು ವ್ಯರ್ಥವಾಗಿ ನಷ್ಟ ಮಾಡಬೇಡಿ ಮತ್ತು ನಿಮ್ಮ ಗುರಿಯನ್ನು ಸಾಧಿಸಲು ಅದನ್ನು ಬಳಸಿ ಎಂಬುದನ್ನು ನೆನಪಿನಲ್ಲಿಡಿ
ಧನು ರಾಶಿ ಭವಿಷ್ಯ 2020 (Dhanu Rashi 2020) ರ ಪ್ರಕಾರ, 1 ಜನವರಿ ಇಂದ 30 ಮಾರ್ಚ್ ಮತ್ತು ಅದರ ನಂತರ 30 ಜೂನ್ ಇಂದ 20 ನವೆಂಬರ್ ವರೆಗಿನ ಸಮಯ ನಿಮ್ಮ ಆರೋಗ್ಯಕ್ಕೆ ಸಂಜೀವನೀಯ ಕೆಲಸ ಮಾಡುತ್ತದೆ ಮತ್ತು ಹಳೆಯ ಸಮಯದಿಂದ ನಡೆಯುತ್ತಿರುವ ಯಾವುದೇ ಹಳೆ ರೋಗ ಅಥವಾ ದೈಹಿಕ ಸಮಸ್ಯೆ ದೂರವಾಗಬಹುದು. ಇದರಿಂದ ನೀವು ನಿಮ್ಮನ್ನು ಹೆಚ್ಚು ಶಕ್ತಿಯುತವಾಗಿ ಅನುಭವಿಸುವಿರಿ. ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕ ಆಲೋಚನೆಗಳು ಬರುತ್ತವೆ ಮತ್ತು ನೀವು ಮಾನಸಿಕವಾಗಿ ತೃಪ್ತರಾಗಿ ಕಾಣುವಿರಿ ಮತ್ತು ನಿಮ್ಮಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ. ನೀವು ನಿಮ್ಮ ಆಹಾರದ ಅಭ್ಯಾಸಗಳ ಬಗ್ಗೆ ಜಾಗರೂಕರಾಗಿರುತ್ತೀರಿ ಮತ್ತು ಈ ಜೀವನ ಶೈಲಿ ನಿಮಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ. ಆದಾಗ್ಯೂ ವರ್ಷದ ಮಧ್ಯದ ಭಾಗವು ನಿಮಗೆ ನಿಮ್ಮನ್ನು ಹೆಚ್ಚು ಶ್ರಮಿಸುವಂತೆ ಮಾಡುತ್ತದೆ, ಈ ಕಾರಣದಿಂದಾಗಿ ನೀವು ಆಯಾಸವನ್ನು ಅನುಭವಿಸುವಿರಿ ಮತ್ತು ಈ ಆಯಾಸವು ನಿಮಗೆ ಕೆಲವು ತೊಂದರೆಗಳನ್ನು ನೀಡಬಹುದು. ಏಕೆಂದರೆ ಈ ಸಮಯದಲ್ಲಿ ನಿಮ್ಮ ಮಾನಸಿಕ ಸ್ಥಿತಿ ಸ್ವಲ್ಪ ಪ್ರಕ್ಷುಬ್ಧವಾಗಿರುತ್ತದೆ. ನೀವು ಕೆಲಸದ ನಡುವೆ ವಿಶ್ರಾಂತಿಗಾಗಿ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬೇಕು ಇಲ್ಲದಿದ್ದರೆ ನೀವು ಅನಾರೋಗ್ಯಕ್ಕೆ ಒಳಗಾಗಬಹುದು. ನೀವು ಸ್ನಾಯುಗಳು ಮತ್ತು ನರಗಳು ಇತ್ಯಾದಿಗಳಿಗೆ ಸಂಬಂಧಿಸಿದ ಯಾವುದೇ ಬಿಕ್ಕಟ್ಟನ್ನು ಹೊಂದಿರಬಹುದು. ಇದಲ್ಲದೆ ನಿಮ್ಮನ್ನು ಹೆಚ್ಚು ಕಾಡುವ ಯಾವುದೇ ದೊಡ್ಡ ಸಮಸ್ಯೆಯ ಸಾಧ್ಯತೆ ಕಡಿಮೆ ಇದೆ.
ಧನು ರಾಶಿ ಭವಿಷ್ಯ 2020 ರಲ್ಲಿ ಮಾಡಬೇಕಾದ ವಿಶೇಷ ಜ್ಯೋತಿಷ್ಯ ಪರಿಹಾರಗಳು
ಈ ವರ್ಷ ನೀವು ಈ ಪರಿಹಾರಗಳನ್ನು ಪೂರ್ತಿ ವರ್ಷ ಮಾಡಬೇಕು ಇದರ ಪರಿಣಾಮದಿಂದಾಗಿ ನೀವು ಅನೇಕ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯುತ್ತಿರಿ ಮತ್ತು ನೀವು ಪ್ರಗತಿಯ ಮಾರ್ಗದಲ್ಲಿ ಮುಂದುವರಿಯುತ್ತಿರಿ :
- ಈ ವರ್ಷ ನೀವು ಪ್ರತಿಯೊಂದು ಶನಿವಾರ ಛಾಯಾ ಪಾತ್ರದ ದಾನ ಮಾಡಬೇಕು . ಇದಕ್ಕಾಗಿ ಯಾವುದೇ ಮಣ್ಣಿನ ಅಥವಾ ಲೋಹದ ಬಾಟಲಿನಲ್ಲಿ ಸಾಸ್ವೇ ಎಣ್ಣೆಯನ್ನು ತುಂಬಿ ಅದರಲ್ಲಿ ನಿಮ್ಮ ಮುಖವನ್ನು ನೋಡಿ ನಂತರ ಆ ಎಣ್ಣೆಯನ್ನು ದಾನ ಮಾಡಿ .
- ಬೆಳಿಗ್ಗೆ ಯಾವುದೇ ಧಾರ್ಮಿಕ ಸ್ಥಳಕ್ಕೆ ಹೋಗಿ ಸ್ವಚ್ಛಗೊಳಿಸಿವ ಕೆಲಸವನ್ನು ಮಾಡಿ. ಇರುವೆ ಮತ್ತು ಮೀನುಗಳಿಗೆ ಏನಾದರು ತಿನ್ನಲು ಹಾಕಿ.
- ಮಹಾರಾಜ ದಶರಥ ಕೃತ ನೀಲ ಶನಿ ಸ್ತ್ರೋತವನ್ನು ಪಠಿಸಿ.
- ತಾಮ್ರದ ಪಾತ್ರೆಯಲ್ಲಿ ಕುಂಕುಮವನ್ನು ಸೇರಿಸಿ ಸೂರ್ಯ ದೇವರಿಗೆ ಅರ್ಪಿಸಿ.
- ಇದಲ್ಲದೆ ನೀವು ಮನೆಯಲ್ಲಿ ಶನಿ ಯಂತ್ರ ಸಹ ಸ್ಥಾಪಿಸಬಹುದು.
Astrological services for accurate answers and better feature
Astrological remedies to get rid of your problems

AstroSage on MobileAll Mobile Apps
- Sun Transit In Leo Blesses Some Zodiacs; Yours Made It To The List?
- Venus Nakshatra Transit Aug 2025: 3 Zodiacs Destined For Luck & Prosperity!
- Janmashtami 2025: Read & Check Out Date, Auspicious Yoga & More!
- Sun Transit Aug 2025: Golden Luck For Natives Of 3 Lucky Zodiac Signs!
- From Moon to Mars Mahadasha: India’s Astrological Shift in 2025
- Vish Yoga Explained: When Trail Of Free Thinking Is Held Captive!
- Kajari Teej 2025: Check Out The Remedies, Puja Vidhi, & More!
- Weekly Horoscope From 11 August To 17 August, 2025
- Mercury Direct In Cancer: These Zodiac Signs Have To Be Careful
- Bhadrapada Month 2025: Fasts & Festivals, Tailored Remedies & More!
- सूर्य का सिंह राशि में गोचर, इन राशि वालों की होगी चांदी ही चांदी!
- जन्माष्टमी 2025 पर बना दुर्लभ संयोग, इन राशियों पर बरसेगी श्रीकृष्ण की विशेष कृपा!
- अगस्त में इस दिन बन रहा है विष योग, ये राशि वाले रहें सावधान!
- कजरी तीज 2025 पर करें ये विशेष उपाय, मिलेगा अखंड सौभाग्य का वरदान
- अगस्त के इस सप्ताह मचेगी श्रीकृष्ण जन्माष्टमी की धूम, देखें व्रत-त्योहारों की संपूर्ण जानकारी!
- बुध कर्क राशि में मार्गी: इन राशियों को रहना होगा सावधान, तुरंत कर लें ये उपाय
- भाद्रपद माह 2025: त्योहारों के बीच खुलेंगे भाग्य के द्वार, जानें किस राशि के जातक का चमकेगा भाग्य!
- अंक ज्योतिष साप्ताहिक राशिफल: 10 से 16 अगस्त, 2025
- टैरो साप्ताहिक राशिफल (10 अगस्त से 16 अगस्त, 2025): इस सप्ताह इन राशि वालों की चमकेगी किस्मत!
- कब है रक्षाबंधन 2025? क्या पड़ेगा भद्रा का साया? जानिए राखी बांधने का सही समय
- Horoscope 2025
- Rashifal 2025
- Calendar 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ராசி பலன் 2025
- రాశిఫలాలు 2025
- ರಾಶಿಭವಿಷ್ಯ 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025