ಶುಕ್ರ ಸಂಚಾರ ವೃಷಭ ರಾಶಿಯಲ್ಲಿ - Venus Transit in Taurus in Kannada
ಜೀವನದಲ್ಲಿನ ಎಲ್ಲಾ ರೀತಿಯ ಸಂತೋಷ ಮತ್ತು ಸಂಪನ್ಮೂಲಗಳ ಅಂಶ ಮತ್ತು ಭೌತಿಕ ಸಂತೋಷವನ್ನು ಒದಗಿಸುವ ಶುಕ್ರ ಗ್ರಹವು 28 ಮಾರ್ಚ್ 2020 ರಂದು ಶನಿವಾರದ ಮಧ್ಯಾಹ್ನ 15:36 ಗಂಟೆಗೆ ತನ್ನ ಸ್ವರಾಶಿಯಾದ ವೃಷಭ ರಾಶಿಯಲ್ಲಿ ಪ್ರವೇಶಿಸಲಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ ಶುಕ್ರನ ಸಂಚಾರದ ವಿಶೇಷ ಪರಿಣಾಮವು ಎಲ್ಲಾ ಹನ್ನೆರಡು ರಾಶಿಚಕ್ರಗಳ ಮೇಲೆ ಬೀರುತ್ತದೆ. ವೃಷಭ ರಾಶಿಚಜೆಕ್ರ ಭೂಮಿಯ ಅಂಶದ ರಾಶಿ ಮತ್ತು ಶುಕ್ರನ ಸ್ವತಃ ರಾಶಿಯಾಗಿದೆ. ಇದರ ಸಂಯೋಗದ ಕಾರಣದಿಂದಾಗಿ ಸಂತೋಷದ ಆಸೆ ಹೆಚ್ಚಾಗುತ್ತದೆ ಮತ್ತು ಈ ದಿಕ್ಕಿನಲ್ಲಿ ಪರಿಶ್ರಮಿಸುವಿರಿ. ನಡೆಯಿರಿ ಈಗ ಶುಕ್ರನ ಸಂಚಾರವು ವೃಷಭ ರಾಶಿಯಲ್ಲಿದ್ದಾಗ ಎಲ್ಲಾ ರಾಶಿಚಕ್ರದ ಜನರ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದರ ಬಗ್ಗೆ ತಿಳಿಯೋಣ:
ಈ ರಾಶಿ ಭವಿಷ್ಯ ಚಂದ್ರ ರಾಶಿಯನ್ನು ಆಧರಿಸಿದೆ. ನಿಮ್ಮ ಚಂದ್ರ ರಾಶಿ ತಿಳಿಯಿರಿ
ಮೇಷ
ಶುಕ್ರ ದೇವ ನಿಮ್ಮ ರಾಶಿಚಕ್ರದಿಂದ ಎರಡನೇ ಮನೆಗೆ ಸಾಗಣಿಸುತ್ತಾರೆ. ಶುಕ್ರ ನಿಮ್ಮ ಎರಡನೇ ಮನೆ ಮತ್ತು ಏಳನೇ ಮನೆಯ ಮಾಲೀಕ. ಶುಕ್ರನ ಈ ಸಂಚಾರದಿಂದಾಗಿ ನಿಮ್ಮ ಧ್ವನಿಯಲ್ಲಿ ಆಕರ್ಷಣೆ ಹೆಚ್ಚಾಗುತ್ತದೆ ಮತ್ತು ನೀವು ನಿಮ್ಮ ಪ್ರೀತಿ ಮತ್ತು ಆಕರ್ಷಕ ಮಾತುಗಳಿಂದ ನಿಮ್ಮ ಸುತ್ತಲಿರುವ ಜನರನ್ನು ಆಕರ್ಷಿಸಲು ನಿಮಗೆ ಸಾಧ್ಯವಾಗುತ್ತದೆ. ಇದು ನಿಮ್ಮ ಸ್ನೇಹಿತರ ಸಂಖ್ಯೆಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಸಾಮಾಜಿಕ ಮಟ್ಟವು ಹೆಚ್ಚಾಗುತ್ತದೆ. ನೀವು ಉತ್ತಮ ಮತ್ತು ರುಚಿಕರ ಭಕ್ಷ್ಯಗಳನ್ನು ಆನಂದಿಸುವಿರಿ. ಈ ಸಮಯದಲ್ಲಿ ನೀವು ಉತ್ತಮ ಬಟ್ಟೆ ಮತ್ತು ಆಭರಣಗಳನ್ನು ಖರೀದಿಸಬಹುದು.
ಇದರೊಂದಿಗೆ ಯಾವುದಾದರು ಹೊಸ ಗ್ಯಾಡ್ಜೆಟ್ ಖರೀದಿಸುವ ಸಾಧ್ಯತೆ ಇದೆ. ನಿಮ್ಮ ಆದಾಯದಲ್ಲಿ ಹೆಚ್ಚಳವಾಗುತ್ತದೆ ಮತ್ತು ನಿಮಗೆ ಬಹಳ ಲಾಭವಾಗುತ್ತದೆ, ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ವ್ಯಾಪಾರದ ಮೂಲಕ ಕೂಡ ನೀವು ಉತ್ತಮ ಲಾಭವನ್ನು ಪಡೆಯಲಿದ್ದೀರಿ. ನಿಮ್ಮ ವ್ಯಾಪಾರವು ಬಲವಾಗಿ ಮುಂದುವರಿಯುತ್ತದೆ. ನೀವು ವಿವಾಹಿತರಾಗಿದ್ದರೆ, ನಿಮ್ಮ ಜೀವನ ಸಂಗಾತಿಯಿಂದ ಉತ್ತಮ ಸಂತೋಷ ಮತ್ತು ಲಾಭವನ್ನು ನೀವು ಪಡೆಯುತ್ತೀರಿ. ಅಂದರೆ ಈ ಸಂಚಾರವು ಎಲ್ಲಾ ರೀತಿಯಲ್ಲಿ ಲಾಭದ ಹಾದಿಯನ್ನು ನಿಮಗಾಗಿ ತೆರೆಯುತ್ತದೆ. ಮತ್ತೊಂದೆಡೆ, ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಐಷಾರಾಮಿಯಲ್ಲಿ ಹೆಚ್ಚಳವಾಗುತ್ತದೆ, ಇದನ್ನು ನಿಯಂತ್ರಿಸುವ ಅಗತ್ಯವಿದೆ. ಇಲ್ಲದಿದ್ದರೆ ಇದು ಯಾವುದೇ ರೀತಿಯ ದೈಹಿಕ ಸಮಸ್ಯೆಯನ್ನು ಉದ್ಭವಿಸಬಹುದು. ಈ ಸಂಚಾರವು ಸಮಾಜದಲ್ಲಿ ನಿಮಗೆ ಉತ್ತಮ ಗೌರವವನ್ನು ನೀಡುತ್ತದೆ.
ಪರಿಹಾರ - ಶುಕ್ರವಾರದಂದು ನೀವು ಶಿವ ಲಿಂಗದ ಮೇಲೆ ಅಕ್ಕಿಯನ್ನು ಅರ್ಪಿಸಬೇಕು.
ಮಂಗಳ ಸಂಚಾರದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಮಕರ ರಾಶಿಯಲ್ಲಿ ಮಂಗಳ ಸಂಚಾರ
ವೃಷಭ
ಶುಕ್ರನ ಈ ಸಂಚಾರವು ನಿಮ್ಮ ರಾಶಿಚಕ್ರಕ್ಕೆ ಬಹಳಷ್ಟು ಪ್ರಮುಖವಾಗಲಿದೆ ಏಕೆಂದರೆ ಇದು ನಿಮ್ಮದೇ ರಾಶಿಚಕ್ರದಲ್ಲಿ ಆಗಲಿದೆ ಮತ್ತು ಶುಕ್ರ ನಿಮ್ಮ ರಾಶಿಚಕ್ರದ ಅಧಿಪತಿ ಮತ್ತು ನಿಮ್ಮ ಆರನೇ ಮನೆಯ ಮಾಲೀಕ ಕೂಡ. ಆದ್ದರಿಂದ ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಏರಿಳಿತದ ಪರಿಸ್ಥಿತಿ ಉದ್ಭವಿಸಬಹದು ಮತ್ತು ನೀವು ನಿಮ್ಮ ಆಹಾರ ಪಾನೀಯದ ಬಗ್ಗೆ ವಿಶೇಷ ಕಾಳಜಿ ವಹಿಸ ಬೇಕು. ಸಮತೋಲಿತ ಆಹಾರದ ಮೂಲಕ ನೀವು ನಿಮ್ಮ ರೋಗಗಳನ್ನು ನಿವಾರಿಸಬಹುದು. ನಿಮ್ಮ ವ್ಯಕ್ತಿತ್ವದಲ್ಲಿ ಆಕರ್ಷಣೆ ಹೆಚ್ಚಾಗುತ್ತದೆ ಮತ್ತು ನೀವು ಯಾವುದೇ ರೀತಿಯ ಸೌಂದರ್ಯದ ಬಗ್ಗೆ ಆಕರ್ಷಿತರಾಗಿರುತ್ತೀರಿ. ಶುಕ್ರನ ಈ ಸಾಗುವಿಕೆಯ ಕಾರಣದಿಂದಾಗಿ ನಿಮ್ಮ ದಾಂಪತ್ಯ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ನಿಮ್ಮ ಸಂಬಂಧದಲ್ಲಿನ ಬಿರುಕು ಕೊನೆಗೊಳ್ಳಲಾಗುತ್ತದೆ. ನಿಮ್ಮ ಸಂಬಂಧದಲ್ಲಿ ಆಂತರಿಕ ಕ್ಷಣಗಳು ಹೆಚ್ಚಾಗುತ್ತವೆ ಮತ್ತು ಮತ್ತು ಸಂಬಂಧದಲ್ಲಿ ನಿಕಟತೆ ಹೆಚ್ಚಾಗುತ್ತದೆ.
ವ್ಯಾಪಾರದ ವಿಷಯದಲ್ಲಿ ನಿಮ್ಮ ಮೂಲಕ ಮಾಡಲಾಗಿರುವ ಬಹಳಷ್ಟು ಪ್ರಯತ್ನಗಳು ಯಶಸ್ವಿಯಾಗುತ್ತವೆ ಮತ್ತು ಈ ಸಮಯದಲ್ಲಿ ನೀವು ನಿಮ್ಮ ವ್ಯಾಪಾರಕ್ಕೆ ಸಂಬಂಧಿಸಿದ ಕೆಲವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಈ ಸಾಗುವಿಕೆಯ ಸಮಯದಲ್ಲಿ ನೀವು ಮಹಿಳೆಯರನ್ನು ಗೌರವಿಸಬೇಕು ಎಂಬುದರ ಬಗ್ಗೆ ವಿಶೇಷ ಗಮನ ಹರಿಸಬೇಕು. ಮಹಿಳೆಯರ ವಿರುದ್ಧವಾಗಿ ಯಾವುದೇ ಕಠಿಣ ಮಾತನ್ನು ಹೇಳಬೇಡಿ. ಇದರಿಂದ ನಿಮಗೆ ಹಾನಿಯಾಗಬಹುದು. ನೀವು ವಿವಾಹಿತರಾಗಿದ್ದರೆ, ಈ ಸಮಯದಲ್ಲಿ ನಿಮ್ಮ ಆಂತರಿಕ ಸಂಬಂಧದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ ಆದ್ದರಿಂದ ನಿಮ್ಮ ಸ್ವತಃ ಭಾವನೆಗಳನ್ನು ನಿಯಂತ್ರಿಸಲು ಪ್ರಯತ್ನಿಸಿ. ಈ ಸಮಯದಲ್ಲಿ ನೀವು ವಿವಾದಗಳಲ್ಲಿ ಹೆಚ್ಚಾಗಿ ಮನಸ್ಸು ಹೊಂದಿರುತ್ತೀರಿ. ಆದಾಗ್ಯೂ ಇದನ್ನು ತಪ್ಪಿಸುವುದು ಬಹಳ ಉತ್ತಮ. ನಿಮ್ಮ ವಿರೋಧಿಗಳಿಂದ ಸ್ವಲ್ಪ ಜಾಗರೂಕರಾಗಿರಿ ಏಕೆಂದರೆ ಅವರು ನಿಮ್ಮ ಚಿತ್ರವನ್ನು ಹದಗೆಡಿಸಲು ಪ್ರಯತ್ನಿಸಬಹುದು.
ಪರಿಹಾರ - ಈ ಸಮಯದಲ್ಲಿ ನೀವು ಉತ್ತಮ ಗುಣಮಟ್ಟದ ಓಪಲ್ ರತ್ನವನ್ನು ಧರಿಸುವುದು ನಿಮಗೆ ಅತ್ಯುತ್ತಮ.
ಮಂಗಳ ಸಂಚಾರದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಮಕರ ರಾಶಿಯಲ್ಲಿ ಮಂಗಳ ಸಂಚಾರ
ಮಿಥುನ
ಶುಕ್ರ ದೇವರ ಈ ಸಂಚಾರವು ನಿಮಗೆ ಬಹಳ ಪ್ರಮುಖವಾಗಲಿದೆ. ಏಕೆಂದರೆ ನಿಮ್ಮ ಹನ್ನೆರಡನೇ ಮನೆಗೆ ಪ್ರವೇಶಿಸುತ್ತದೆ. ನಿಮಗಾಗಿ ಶುಕ್ರ ದೇವರು ಐದನೇ ಮನೆಯೊಂದಿಗೆ ನಿಮ್ಮ ಹನ್ನೆರಡನೇ ಮನೆಯ ಮಾಲೀಕ ಕೂಡ ಆಗಿದ್ದಾರೆ. ಈ ಮನೆಯಲ್ಲಿ ಗೋಚರದ ಕಾರಣದಿಂದಾಗಿ ಇದ್ದಕ್ಕಿದ್ದಂತೆ ನಿಮ್ಮ ವೆಚ್ಚದಲ್ಲಿ ಅನಿರೀಕ್ಷಿತ ಹೆಚ್ಚಳವನ್ನು ಕಾಣಲಾಗುತ್ತದೆ, ಇದರಿಂದ ನಿಮ್ಮ ಆರ್ಥಿಕ ಹೊರೆ ಹೆಚ್ಚಾಗುತ್ತದೆ ಆದರೆ ಶುಕ್ರನ ಈ ಸಾಗುವಿಕೆಯಿಂದಾಗಿ ನಿಮ್ಮ ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಯೂ ಇದೆ ಮತ್ತು ಹೆಚ್ಚಾಗಿರುವ ಈ ವೆಚ್ಚಗಳನ್ನು ಬಹಳ ಸುಲಭವಾಗಿ ನಿಭಾಯಿಸಲು ನಿಮಗೆ ಸಾಧ್ಯವಾಗುತ್ತದೆ. ನೈಸರ್ಗಿಕವಾಗಿ ನೀವು ಸಂತೋಷವನ್ನು ಅನುಭವಿಸುವ ದಿಕ್ಕಿನಲ್ಲಿ ಮುಂದುವರಿಯುತ್ತಿರಿ ಮತ್ತು ನಿಮ್ಮ ಆಂತರಿಕ ಸಂಬಂಧದಲ್ಲಿ ಹೆಚ್ಚಳವಾಗುತ್ತದೆ. ಶಿಕ್ಷಣ ಉದ್ದೇಶದಿಂದ ವಿದೇಶಕ್ಕೆ ಹೋಗುವ ನಿಮ್ಮ ಆಸೆ ಈಡೇರಬಹುದು.
ವಿದೇಶದಲ್ಲಿನ ಯಾವುದಾದರು ಉತ್ತಮ ಕಾಲೇಜು ಅಥವಾ ವಿಶ್ವವಿದ್ಯಾಲಯದಲ್ಲಿ ನೀವು ಪ್ರವೇಶ ಪಡೆಯಬಹುದು ಮತ್ತು ಇದರಿಂದ ನೀವು ತುಂಬಾ ಸಂತೋಷ ಪಡೆಯುತ್ತೀರಿ. ಈ ಸಮಯದಲ್ಲಿ ನೀವು ನಿಮ್ಮ ವಿರೋಧಿಗಳ ಬಗ್ಗೆ ಜಾಗರೂಕರಾಗಿರಬೇಕು ಏಕಂದರೆ ಅವರು ನಿಮ್ಮ ಚಿತ್ರವನ್ನು ಹದಗೆಡಿಸಲು ಪ್ರಯತ್ನಿಸಬಹುದು. ಈ ಸಮಯದಲ್ಲಿ ನಿಮ್ಮಲ್ಲಿ ಕೆಲವರು ವಿದೇಶಕ್ಕೆ ಪ್ರಯಾಣಿಸಲು ಅವಕಾಶವನ್ನು ಪಡೆಯಬಹುದು. ಇದಲ್ಲದೆ ಈ ಸಮಯದಲ್ಲಿ ಉತ್ತಮ ಮತ್ತು ಸಿಹಿ ನಿದ್ರೆಯ ಲಾಭವನ್ನು ನೀವು ಪಡೆಯಬಹುದು. ಈ ಸಮಯದಲ್ಲಿ ನೀವು ನೆಮ್ಮದಿಯಾಗಿ ನಿದ್ರೆ ಮಾಡುತ್ತೀರಿ ಇದರಿಂದ ದೈಹಿಕವಾಗಿ ನೀವು ಆರಾಮವನ್ನು ಪಡೆಯುತ್ತೀರಿ ಆದರೆ ಹೆಚ್ಚು ಐಷಾರಾಮಿ ಅಭ್ಯಾಸವು ನಿಮ್ಮ ದೇಹಕ್ಕೆ ಹಾನಿ ನೀಡಬಹುದು. ಆದ್ದರಿಂದ ಅದನ್ನು ನೀವು ವಿಶೇಷವಾಗಿ ನಿಯಂತ್ರಿಸುವ ಅಗತ್ಯವಿದೆ. ಈ ಸಮಯದಲ್ಲಿ ನಿಮ್ಮ ಮಕ್ಕಳು ಕೆಲವು ಅನಗತ್ಯ ವೆಚ್ಚಗಳನ್ನು ಮಾಡಿಸಬಹುದು ಅಂದರೆ ಅವರಿಗಾಗಿ ನೀವು ಏನಾದರು ದೊಡ್ಡದಾಗಿ ಖರ್ಚಿಸಬೇಕು.
ಪರಿಹಾರ - ನೀವು ಪ್ರತಿದಿನ ನಿಯಮಿತವಾಗಿ ಹಸುವಿಗೆ ಆಹಾರವನ್ನು ನೀಡಬೇಕು.
ಮಂಗಳ ಸಂಚಾರದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಮಕರ ರಾಶಿಯಲ್ಲಿ ಮಂಗಳ ಸಂಚಾರ
ನೀವು ಯಾವುದೇ ಸಮಸ್ಯೆಯಿಂದ ಬಳಲುತ್ತಿದ್ದರೆ ಪರಿಹಾರಕ್ಕಾಗಿ ಪ್ರಶ್ನೆ ಕೇಳಿ
ಕರ್ಕ
ಶುಕ್ರನ ಸಂಚಾರವು ನಿಮ್ಮ ರಾಶಿಚಕ್ರದಿಂದ ಹನ್ನೊಂದನೇ ಮನೆಯಲ್ಲಿರುತ್ತದೆ. ನಿಮಗಾಗಿ ಶುಕ್ರ ನಾಲ್ಕನೇ ಮತ್ತು ಹನ್ನೊಂದನೇ ಮನೆಯ ಮಾಲೀಕ. ತನ್ನದೇ ರಾಶಿಯಲ್ಲಿ ಹನ್ನೊಂದನೇ ಮನೆಯಲ್ಲಿ ಶುಕ್ರನ ಇರುವಿಕೆಯು ನಿಮ್ಮನ್ನು ಶ್ರೀಮಂತನನ್ನಾಗಿಸುತ್ತದೆ ಮತ್ತು ಲಕ್ಷ್ಮಿಯನ್ನು ಒದಗಿಸುತ್ತದೆ. ಅಂದರೆ ನಿಮ್ಮ ಆರ್ಥಿಕ ಪರಿಸ್ಥಿತಿ ಬಹಳಷ್ಟು ಬಲವಾಗಿರುತ್ತದೆ. ಆದಾಯದಲ್ಲಿ ಹೆಚ್ಚಳವಾಗುತ್ತದೆ ಮತ್ತು ಉತ್ತಮ ಜನರೊಂದಿಗೆ ನೀವು ಸಂಪರ್ಕವನ್ನು ಹೊಂದುವಿರಿ. ಸಮಾಜದಲ್ಲಿನ ಉತ್ತಮ ಜನರೊಂದಿಗೆ ನಿಮ್ಮ ಸಾಮರಸ್ಯ ಉಂಟಾಗುತ್ತದೆ ಮತ್ತು ಜೀವನದಲ್ಲಿ ಯಶಸ್ಸಿನ ದಿಕ್ಕಿನಲ್ಲಿ ಮುಂದುವರಿಯುತ್ತಿರಿ. ವ್ಯಾಪಾರದ ವಿಷಯದಲ್ಲಿ ನೀವು ಅದ್ಭುತ ಫಲಿತಾಂಶವನ್ನು ಪಡೆಯುತ್ತೀರಿ ಮತ್ತು ನಿಮ್ಮ ವ್ಯಾಪಾರ ಬೆಳೆಯುತ್ತದೆ. ಆಸ್ತಿಯ ವಿಷಯದಲ್ಲಿ ನಿಮಗೆ ಲಾಭವಾಗುತ್ತದೆ ಮತ್ತು ಯಾವುದೇ ಆಸ್ತಿಯ ಮೂಲಕ ಬಾಡಿಗೆಯ ಆದಾಯವು ಆಗಬಹುದು.
ನಿಮ್ಮ ಕಚೇರಿಯಲ್ಲಿ ನಿಮ್ಮ ಬಾಸ್ ಮತ್ತು ಹಿರಿಯ ಅಧಿಕಾರಿಗಳೊಂದಿಗಿನ ನಿಮ್ಮ ಸಂಬಂಧವು ಬಹಳ ಉತ್ತಮವಾಗುತ್ತದೆ. ಇದರಿಂದ ನಿಮ್ಮ ಕೆಲಸವೂ ಸಹ ತುಂಬಾ ಚೆನ್ನಾಗಿ ನಡೆಯುತ್ತದೆ. ನಿಮ್ಮ ಪ್ರೀತಿ ಜೀವನಕ್ಕೆ ಈ ಸಂಚಾರವು ತುಂಬಾ ಒಳ್ಳೆಯದೆಂದು ಸಾಬೀತುಪಡಿಸುತ್ತದೆ ಮತ್ತು ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ. ನಿಮ್ಮಿಬ್ಬರ ನಡುವಿನ ತಿಳುವಳಿಕೆ ಉತ್ತಮವಾಗುತ್ತದೆ. ವೃಷಭ ರಾಶಿಚಕ್ರದಲ್ಲಿ ಶುಕ್ರನ ಸಾಗುವಿಕೆಯು ನಿಮ್ಮ ಆಸೆಗಳನ್ನು ಈಡೇರಿಸಲು ನಿಮಗೆ ಸಹಕವಾಗುತ್ತದೆ. ದೀರ್ಘಕಾಲದಿಂದ ಸಿಲುಕಿಕೊಂಡಿರುವ ನಿಮ್ಮ ಆಸೆಗಳು ಪೂರ್ಣಗೊಳ್ಳಲಾಗುತ್ತವೆ, ಇದರಿಂದ ನಿಮಗೆ ಸಂತೋಷವಾಗುತ್ತದೆ. ಇಷ್ಟೇ ಅಲ್ಲದೆ, ಶಿಕ್ಷಣದ ಕ್ಷೇತ್ರದಲ್ಲೂ ನೀವು ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ ಮತ್ತು ನಿಮ್ಮ ಶಿಕ್ಷಣದ ಮಟ್ಟವು ಉತ್ತಮವಾಗಿರುತ್ತದೆ. ನೀವು ವಿವಾಹಿತರಾಗಿದ್ದರೆ ಈ ಸಮಯದಲ್ಲಿ ನಿಮ್ಮ ಮಕ್ಕಳು ಪ್ರಗತಿ ಹೊಂದಿರುತ್ತಾರೆ ಮತ್ತು ಅದರಿಂದ ನಿಮಗೆ ನೆಮ್ಮದಿ ಸಿಗುತ್ತದೆ.
ಪರಿಹಾರ - ನೀವು ಶುಕ್ರವಾರದಂದು ಶ್ರೀ ಸೂಕ್ತವನ್ನು ಪಠಿಸಬೇಕು.
ಮಂಗಳ ಸಂಚಾರದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಮಕರ ರಾಶಿಯಲ್ಲಿ ಮಂಗಳ ಸಂಚಾರ
ಸಿಂಹ
ಸಿಂಹ ರಾಶಿಚಕ್ರದ ಸ್ಥಳೀಯರಿಗಾಗಿ ಶುಕ್ರ ಗ್ರಹದ ಸಾಗಣೆ ಹತ್ತನೇ ಮನೆಯಲ್ಲಿರುತ್ತದೆ ಮತ್ತು ಶುಕ್ರ ನಿಮ್ಮ ಮೂರನೇ ಮತ್ತು ಹತ್ತನೇ ಮನೆಯ ಮಾಲೀಕರಾಗಿದ್ದಾರೆ. ಹತ್ತನೇ ಮನೆಯಲ್ಲಿ ಶುಕ್ರನ ಸಂಚಾರವು ನಿಮ್ಮ ಕೆಲಸದಲ್ಲಿ ಪ್ರಗತಿಯನ್ನು ತರಲಿದೆ ಏಕೆಂದರೆ ಇಲ್ಲಿ ಶುಕ್ರ ಸ್ವರಾಶಿಯಾಗಿದೆ ಮತ್ತು ನೀವು ನಿಮ್ಮ ಕೆಲಸದಲ್ಲಿ ಉತ್ತಮಕ್ಕಾಗಿ ಮತ್ತು ಉತ್ತಮ ಗೌರವಕ್ಕಾಗಿ ನೀವು ಮನಸ್ಸು ಹೊಂದಿ ಪರಿಶ್ರಮಿಸುವಿರಿ ಆದರೆ ಶುಕ್ರನ ಪ್ರಕೃತಿಯ ಪ್ರಕಾರ ನೀವು ಯಾವುದೇ ರೀತಿಯ ವಡಗಟ್ಟುವಿಕೆ ಅಥವಾ ವಿವಾದವನ್ನು ತಪ್ಪಿಸಬೇಕು ಏಕೆಂದರೆ ಅಂತಹ ವಿಷಯಗಳಲ್ಲಿ ನಿಮ್ಮ ತೊಡಗಿಸಿಕೊಳ್ಳುವಿಕೆ ನಿಮ್ಮ ವಿರುದ್ಧವಾಗಬಹುದು ಮತ್ತು ಹಿರಿಯ ಅಧಿಕಾರಿಗಳು ನಿಮ್ಮ ಮೇಲೆ ಕೋಪಗೊಳ್ಳಬಹುದು.
ಈ ಸಂಚಾರದ ಪರಿಣಾಮದಿಂದಾಗಿ, ನಿಮ್ಮ ಕೌಟುಂಬಿಕ ಜೀವನದಲ್ಲಿ ಸಂತೋಷದ ಹೆಚ್ಚಳವಾಗುತ್ತದೆ. ಕುಟುಂಬದಲ್ಲಿ ಯಾವುದೇ ಹೊಸ ವಾಹನ ಅಥವಾ ಆಸ್ತಿಯನ್ನು ಖರೀದಿಸುವ ಸಾಧ್ಯತೆ ಇದೆ. ಪರಸ್ಪರ ಸದಸ್ಯರ ನಡುವೆ ಸಾಮರಸ್ಯ ಚೆನ್ನಾಗಿರುತ್ತದೆ ಮತ್ತು ನಿಮ್ಮ ಕೆಲಸದಲ್ಲಿ ನಿಮ್ಮ ಸಹೋದರ ಸಹೋದರಿಯರು ಸಹ ನಿಮ್ಮನ್ನು ಬೆಂಬಲಿಸುತ್ತಾರೆ. ತಂದೆ ಸಂಪೂರ್ಣವಾಗಿ ನಿಮ್ಮನ್ನು ಸಹಕರಿಸುತ್ತಾರೆ, ಆದ್ದರಿಂದ ಈ ಸಮಯದಲ್ಲಿ ನಿಮ್ಮ ವೃತ್ತಿಜೀವನವು ಉತ್ಕರ್ಷಗಿರುತ್ತದೆ ಮತ್ತು ನೀವು ಪ್ರಗತಿಯ ಶಿಖರದ ಕಡೆಗೆ ಮುಂದುವರಿಯುತ್ತಿರಿ. ನಿಮ್ಮ ತಾಯಿ ನೆಮ್ಮದಿ ಪಡೆಯುತ್ತಾರೆ ಮತ್ತು ಕುಟುಂಬದಲ್ಲಿ ಸಂತೋಷದ ಯಾವುದೇ ಹೊಸ ವಸ್ತು ತರಬಹುದು. ಕುಟುಂಬದಲ್ಲಿ ಒಳ್ಳೆಯ ಕಾರ್ಯ ಸಂಭವಿಸಬಹುದು, ಈ ಕಾರಣದಿಂದ ನೆಂಟರು ಬರುತ್ತಾರೆ, ಇದರಿಂದ ಕುಟುಂಬದಲ್ಲಿ ಉಲ್ಲಾಸದ ವಾತಾವರಣವಿರುತ್ತದೆ.
ಪರಿಹಾರ - ಶುಕ್ರ ಗ್ರಹದ ಅನುಕೂಲತೆಯನ್ನು ಪಡೆಯಲಿಕ್ಕಾಗಿ ನೀವು ತಾಯಿ ಲಕ್ಷ್ಮಿಯನ್ನು ಆರಾಧಿಸಬೇಕು.
ಮಂಗಳ ಸಂಚಾರದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಮಕರ ರಾಶಿಯಲ್ಲಿ ಮಂಗಳ ಸಂಚಾರ
ಕನ್ಯಾ
ನಿಮಗಾಗಿ ಶುಕ್ರ ದೇವ ನಿಮ್ಮ ಒಂಬತ್ತನೇ ಮನೆಯ ಮತ್ತು ಎರಡನೇ ಮನೆಯ ಮಾಲೀಕರಾಗಿದ್ದಾರೆ ಮತ್ತು ತನ್ನ ಸಂಚಾರದ ಸಮಯದಲ್ಲಿ ಅವರು ನಿಮ್ಮ ಒಂಬತ್ತನೇ ಮನೆಗೆ ಪ್ರವೇಶಿಸಲಿದ್ದಾರೆ, ಅದು ನಿಮ್ಮ ಅದೃಷ್ಟದ ಸ್ಥಾನವಾಗಿದೆ. ಆದ್ದರಿಂದ ಶುಕ್ರ ದೇವರ ಅನುಗ್ರಹದಿಂದ ಈ ಸಂಚಾರದ ಸಮಯದಲ್ಲಿ ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಮತ್ತು ಅದರ ಕಾರಣದಿಂದಾಗಿ ನಿಮ್ಮ ನಿಲ್ಲಿಸಿದ ಕೃತಿಗಳು ಪ್ರಾರಂಭವಾಗುತ್ತವೆ. ಹಣಕಾಸು ಪಡೆಯುವ ಹಾದಿ ತೆರೆಯುತ್ತದೆ ಮತ್ತು ಎಲ್ಲಾದರೂ ನಿಮ್ಮ ಹಣಕಾಸು ಸಿಲುಕಿಕೊಂಡಿದ್ದರೆ, ಅದು ಕೂಡ ಮರಳಿ ಬರಲಾಗುತ್ತದೆ. ನಿಮ್ಮ ಸಾಮಾಜಿಕ ಪರಿಸ್ಥಿತಿ ಸಹ ಉತ್ತಮಗೊಳ್ಳುತ್ತದೆ ಮತ್ತು ಈ ಸಂಚಾರದ ಸಮಯದಲ್ಲಿ ಯಾವುದೇ ಸುಂದರವಾದ ಮತ್ತು ದರ್ಶನೀಯ ಸ್ಥಳಕ್ಕೆ ಹೋಗಲು ಅವಕಾಶವನ್ನು ಪಡೆಯುತ್ತೀರಿ.
ನೀವು ಕುಟುಂಬ ಅಥವಾ ಪ್ರೀತಿಪಾತ್ರರೊಂದಿಗೆ ದೂರಸ್ಥ ಪ್ರಯಾಣಗಳಿಗೆ ಹೋಗಬಹುದು, ಇದರಿಂದ ನೀವು ಆನಂದವನ್ನು ಅನುಭವಿಸುತ್ತೀರಿ. ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಉದ್ಯೋಗದಲ್ಲಿ ವರ್ಗಾವಣೆಯ ಸಾಧ್ಯತೆ ಇದೆ. ಇದು ನಿಮಗೆ ಹಿತಕರವಾಗಿರುತ್ತದೆ ಮತ್ತು ನೀವು ಉತ್ತಮ ಲಾಭವನ್ನು ಪಡೆಯುತ್ತೀರಿ. ವ್ಯಾಪಾರದ ದೃಷ್ಟಿಯಿಂದ, ಹೆಚ್ಚು ಕಠಿಣ ಪರಿಶ್ರಮದ ನಂತರ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಲಾಗುತ್ತದೆ ಎಂದು ಈ ಸಂಚಾರವು ಸಾಬೀತುಪಡಿಸುತ್ತದೆ. ನಿಮ್ಮ ಹಣಕಾಸು ಬೆಳೆಯುತ್ತದೆ ಮತ್ತು ನೀವು ಶ್ರೀಮಂತರಾಗುವಿರಿ. ಈ ಸಂಚಾರದ ಸಮಯದಲ್ಲಿ ನಿಮ್ಮ ಕಿರಿಯ ಸಹೋದರ ಸಹೋದರಿಯರಿಗೆ ಸಹ ಉತ್ತಮ ಲಾಭವಾಗುತ್ತದೆ ಮತ್ತು ಅವರ ಕೆಸಲಸದ ಸ್ಥಳದಲ್ಲಿ ಪ್ರಗತಿ ಪಡೆಯಲಿದ್ದಾರೆ. ಕುಟುಂಬದಲ್ಲಿ ಮದುವೆಗೆ ಅರ್ಹರಾದ ಯಾರಾದರೂ ಕಿರಿಯ ಸಹೋದರ ಅಥವಾ ಸಹೋದರಿಯಿದ್ದರೆ, ಅವರ ಮದುವೆಯಾಗುವ ಸಾಧ್ಯತೆ ಇದೆ. ನಿಮ್ಮ ಸ್ನೇಹಿತರ ಸಂಖ್ಯೆ ಹೆಚ್ಚಾಗಬಹುದು ಮತ್ತು ಪ್ರವಾಸದ ಸಮಯದಲ್ಲಿ ಹೊಸ ಜನರೊಂದಿಗೆ ಭೇಟಿಯಾಗಬಹುದು.
ಪರಿಹಾರ - ಆರು ಮುಖ ರುದ್ರಾಕ್ಷವನ್ನು ಧರಿಸುವುದು ನಿಮಗೆ ಉತ್ತಮ.
ಮಂಗಳ ಸಂಚಾರದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಮಕರ ರಾಶಿಯಲ್ಲಿ ಮಂಗಳ ಸಂಚಾರ
ತುಲಾ
ನಿಮ್ಮ ರಾಶಿಚಕ್ರದ ಸ್ವಾಮಿ ಶುಕ್ರ ದೇವ ತನ್ನ ಈ ಸಂಚಾರದ ಸಮಯದಲ್ಲಿ ನಿಮ್ಮ ಎಂಟನೇ ಮನೆಯಲ್ಲಿ ತನ್ನ ಸ್ವರಾಶಿ ವೃಷಭದಲ್ಲಿ ಪ್ರವೇಶಿಸುತ್ತದೆ. ಎಂಟನೇ ಮನೆಯ ಮಾಲೀಕ ಎಂಟನೇ ಮನೆಯಲ್ಲಿ ನೆಲೆಗೊಳ್ಳುವುದರಿಂದ ಈ ಮನೆಯ ನಿರ್ದಿಷ್ಟ ಗುಣಲಕ್ಷಣಗಳನ್ನು ಪ್ರದರ್ಶಿಸಲಾಗುತ್ತದೆ. ಈ ಕಾರಣದಿಂದಾಗಿ ಇದ್ದಕ್ಕಿದ್ದಂತೆ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ ಮತ್ತು ಅನಿರೀಕ್ಷಿತವಾಗಿ ಹಣಕಾಸಿನ ಲಾಭವಾಗುವ ಸಾಧ್ಯತೆ ಇದೆ. ಈ ಸಂಚಾರದ ಸಮಯದಲ್ಲಿ ಸಂತೋಷವನ್ನು ಅನುಭವಸಿಲಾಗುವ ನಿಮ್ಮ ಪ್ರಕೃತಿ ಹೆಚ್ಚಾಗುತ್ತದೆ ಮತ್ತು ಬಹಳ ಕಠಿಣ ಪರಿಶ್ರಮ ಮಾಡುತ್ತೀರಿ. ನಿಮ್ಮನ್ನು ನೀವು ಶ್ರೇಷತೆಯ ಕಡೆಗೆ ಕೊಂಡೊಯ್ಯುತ್ತೀರಿ.
ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸುವ ಅಗತ್ಯವಿದೆ. ಆದ್ದರಿಂದ ನೀವು ನಿಮ್ಮ ಆಹಾರ ಪಾನೀಯದ ಬಗ್ಗೆ ಸ್ವಲ್ಪ ಗಮನ ಹರಿಸಬೇಕು. ನೀವು ವಿವಾಹಿತರಾಗಿದ್ದರೆ, ಈ ಸಂಚಾರದ ಸಮಯದಲ್ಲಿ ಯಾವುದಾದರು ಸಮಾರಂಭ ಅಥವಾ ಮದುವೆಯಲ್ಲಿ ಅತ್ತಕಡೆಯವರ ಸದಸ್ಯರನ್ನು ಭೇಟಿಯಾಗುವ ಅವಕಾಶವನ್ನು ಪಡೆಯಲಿದ್ದೀರಿ. ಅವರೊಂದಿಗಿನ ನಿಮ್ಮ ಸಂಬಂಧವು ಉತ್ತಮ ಮತ್ತು ಬಲಗೊಳ್ಳುತ್ತದೆ. ಸಂಬಂಧದಲ್ಲಿ ಸಂತೋಷ ಬರುತ್ತದೆ. ಈ ಸಮಯದಲ್ಲಿ ಬಯಸಿದಿರುವ ಕೆಲವು ಪ್ರವಾಸಗಳಿಗೆ ನೀವು ಹೋಗಬೇಕಾಗಬಹುದು ಆದರೆ ಆ ಪ್ರಯಾಣಗಳು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತವೆ. ಈ ಸಾಗುವಿಕೆ ನಿಮಗೆ ಉತ್ತಮವಾಗಿರುತ್ತದೆ. ಅನಿಯಮಿತ ಆಹಾರ ಪಾನೀಯದ ಕಾರಣದಿಂದಾಗಿ ಕೆಲವು ಅರೋಗ್ಯ ಸಮಸ್ಯೆಗಳು ಉಂಟಾಗಬಹುದು. ವೃತ್ತಿ ಜೀವನಕ್ಕೆ ಈ ಸಾಗಣೆ ಉತ್ತಮವೆಂದು ಸಾಬೀತುಪಡಿಸುತ್ತದೆ ಮತ್ತು ನೀವು ನಿಮ್ಮನ್ನು ಸಿದ್ಧಪಡಿಸಲು ಅವಕಾಶ ಪಡೆಯುತ್ತೀರಿ.
ಪರಿಹಾರ - ನಿಯಮಿತವಾಗಿ ಶುಕ್ರ ಗ್ರಹದ ಮಂತ್ರವನ್ನು ಜಪಿಸಬೇಕು “ಓಂ ಶುಂ ಶುಕ್ರಾಯ್ ನಮಃ“
ಮಂಗಳ ಸಂಚಾರದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಮಕರ ರಾಶಿಯಲ್ಲಿ ಮಂಗಳ ಸಂಚಾರ
ವೃಶ್ಚಿಕ
ವೃಶ್ಚಿಕ ರಾಶಿಚಕ್ರದ ಸ್ಥಳೀಯರಿಗೆ ಈ ಸಾಗುವಿಕೆಯು ತುಂಬಾ ಪ್ರಮುಖವಾಗಲಿದೆ ಏಕೆಂದರೆ ನಿಮ್ಮ ಏಳನೇ ಮನೆಯ ಸ್ವಾಮಿ ಶುಕ್ರ ದೇವ ತನ್ನದೇ ಮನೆಯಲ್ಲಿ ಮರಳಿ ಬರಲಿದ್ದಾರೆ. ಇದು ನಿಮ್ಮ ಹನ್ನೆರಡನೇ ಮನೆಯ ಮಾಲೀಕ ಕೂಡ. ಈ ಕಾರಣದಿಂದಾಗಿ ನಿಮ್ಮ ಕೌಟುಂಬಿಕ ಜೀವನದಲ್ಲಿ ಸಂತೋಷದ ಮಳೆ ಬೀಳುತ್ತದೆ. ನಿಮ್ಮ ಸಂಬಂಧ್ಡದಲ್ಲಿ ಯಾವುದೇ ಒತ್ತಡ ನಡೆಯುತ್ತಿದ್ದರೆ ಅದರಿಂದ ಸಹ ಮುಕ್ತರಾಗುತ್ತೀರಿ ಮತ್ತು ನಿಮ್ಮಿಬ್ಬರ ನಡುವೆ ನಿಕಟತೆ ಹೆಚ್ಚಾಗುತ್ತದೆ. ಪ್ರೀತಿ ಬೆಳೆಯುತ್ತದೆ ಮತ್ತು ಈ ಸಂಬಂಧವನ್ನು ಉತ್ತಮಗೊಳಿಸಲು ಸಾಧ್ಯವಾಗುತ್ತದೆ. ವಿದೇಶಿ ಮೂಲಗಳಿಂದ ಹಣಕಾಸಿನ ಲಾಭವಾಗುತ್ತದೆ. ಆಮದು ರಫ್ತು ವ್ಯಾಪರದಲ್ಲಿ ತೊಡಗಿರುವ ಜನರಿಗೆ ಅದ್ಭುತ ಲಾಭವಾಗುತ್ತದೆ. ನೀವು ಯಾವುದೇ ಹೊಸ ವ್ಯಾಪಾರವನ್ನು ಆರಂಭಿಸಲು ಬಯಸುತ್ತಿದ್ದರೆ, ಆ ವಿಷಯದಲ್ಲಿ ಸಹ ಈ ಸಮಯದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ಅರೋಗ್ಯ ಬಲಗೊಳ್ಳುತ್ತದೆ.
ನಿಮ್ಮ ವ್ಯಕ್ತಿತ್ವ ಸುಧಾರಿಸುತ್ತದೆ. ನೀವು ಆಕರ್ಷಕರಾಗುವಿರಿ ಮತ್ತು ಸಮಾಜದಲ್ಲಿ ನೀವು ಉತ್ತಮ ಗೌರವವನ್ನು ಪಡೆಯುತ್ತೀರಿ. ನೀವು ನಿಮ್ಮ ಜೀವನ ಸಂಗಾತಿಯ ಮೇಲೆ ಬಹಳಷ್ಟು ಖರ್ಚಿಸುವಿರಿ ಮತ್ತು ಈ ಖರ್ಚು ನಿಮಗೆ ಆತ್ಮಿಕ ತೃಪ್ತಿಯನ್ನು ನೀಡುತ್ತದೆ ಏಕೆಂದರೆ ಇದರಿಂದ ನಿಮ್ಮ ಜೀವನ ಸಂಗಾತಿಯ ಮುಖದ ಮೇಲೆ ಉತ್ತಮವಾದ ನಗುವನ್ನು ಕಾಣಲಾಗುತ್ತದೆ.
ಪರಿಹಾರ - ವಿಶೇಷ ಲಾಭಕ್ಕಾಗಿ ನೀವು ಕುಬೇರ ಮಂತ್ರವನ್ನು ಜಪಿಸಬೇಕು.
ಮಂಗಳ ಸಂಚಾರದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಮಕರ ರಾಶಿಯಲ್ಲಿ ಮಂಗಳ ಸಂಚಾರ
ಧನು
ನಿಮ್ಮ ರಾಶಿಚಕ್ರದಿಂದ ಆರನೇ ಮನೆಯಲ್ಲಿ ಶುಕ್ರನ ಸಂಚಾರವಿರುತ್ತದೆ ಮತ್ತು ಇದು ನಿಮ್ಮದೇ ರಾಶಿಚಕ್ರದಲ್ಲಾಗುತ್ತದೆ. ಶುಕ್ರ ನಿಮ್ಮ ಆರನೇ ಮತ್ತು ಹನ್ನೊಂದನೇ ಮನೆಯ ಮಾಲೀಕ. ಶುಕ್ರನ ಸಾಗುವಿಕೆಯ ಈ ಸ್ಥಾನವನ್ನು ಹೆಚ್ಚು ಅನುಕೂಲಕರ ಎಂದು ಪರಿಗಣಿಸುವುದಿಲ್ಲ ಆದ್ದರಿಂದ ಈ ಸಮಯದಲ್ಲಿ ದೈಹಿಕ ಸಮಸ್ಯೆಗಳು ನಿಮ್ಮನ್ನು ಸುತ್ತುವರಿಯಬಹುದು. ಅರೋಗ್ಯ ಪೀಡಿತವಾಗುವುದರಿಂದಾಗಿ ರೋಗಗಳಾಗಬಹುದು. ಇದರೊಂದಿಗೆ ನಿಮ್ಮ ಆದಾಯ ಕುಸಿಯಬಹುದು. ಅಂದರೆ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ ಮತ್ತು ನಿಮ್ಮ ಆದಾಯ ಕಡಿಮೆಯಾಗುತ್ತದೆ, ಈ ಕಾರಣದಿಂದಾಗಿ ನಿಮ್ಮ ಆರ್ಥಿಕ ಸ್ಥಿತಿ ದುರ್ಬಲಗೊಳ್ಳುತ್ತದೆ ಮತ್ತು ನಿಮ್ಮ ಜೇಬಿನ ಮೇಲೆ ಸಾಕಷ್ಟು ಹೊರೆ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನಿಮ್ಮ ವಿರೋಧಿಗಳು ಸಹ ಬಲವಾಗಿ ನಿಲ್ಲಲಿದ್ದಾರೆ.
ಅವರು ನಿಮ್ಮ ಚಿತ್ರವನ್ನು ಹದಗೆಡಿಸಲು ಸಂಪೂರ್ಣವಾಗಿ ಪ್ರಯತ್ನಿಸುತ್ತಾರೆ, ಆದ್ದರಿಂದ ನೀವು ಸ್ವಲ್ಪ ಜಾಗರೂಕರಾಗಿರಬೇಕು. ವಾದ ವಿವಾದಗಳಲ್ಲಿ ಯಾವುದೇ ರೀತಿಯ ಸಮಯವನ್ನು ವ್ಯರ್ಥಗೊಳಿಸಬೇಡಿ ಏಕೆಂದರೆ ಇದರಿಂದ ನಿಮಗೆ ಯಾವುದೇ ಲಾಭವಾಗುವುದಿಲ್ಲ, ನಿಮಗೆ ಹಾನಿಯಾಗುವ ಸಾಧ್ಯತೆ ಇದೆ. ನಿಮ್ಮ ಸುತ್ತಲಿನ ಮಹಿಳೆಯರನ್ನು ವಿಶೇಷವಾಗಿ ಗೌರವಿಸಿ ಏಕೆಂದರೆ ಶುಕ್ರನ ಸಂಚಾರ ಅನುಕೂಲಕರವಾಗಿಲ್ಲದಿದ್ದರೆ ಮಹಿಳೆಯರೊಂದಿಗೆ ವಿವಾದದ ಕಾರಣದಿಂದಾಗಿ ಹಾನಿಯನ್ನು ತೋರಿಸುತ್ತದೆ. ನಿಮ್ಮ ಮಹತ್ವಾಕಾಂಕ್ಷೆಗಳನ್ನು ಪೂರ್ಣಗೊಳಿಸಲು ನೀವು ಸಾಧ್ಯವಾದಷ್ಟು ಪರಿಶ್ರಮಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಯ ಕ್ಷೇತ್ರದಲ್ಲಿ ಈ ಸಂಚಾರವು ನಿಮನ್ನು ಹೆಚ್ಚು ಕಠಿಣ ಪರಿಶ್ರಮ ಮಾಡಲು ಸೂಚಿಸುತ್ತಿದೆ. ನೀರಿನಿಂದ ಉಂಟಾಗುವ ರೋಗಗಳಿಂದಾಗಿ ತೊಂದರೆಕ್ಕೊಳಗಾಗುವ ಸಾಧ್ಯತೆ ಇದೆ.
ಪರಿಹಾರ : ಶುಕ್ರವಾರದಂದು ನೀವು ಸಕ್ಕರೆ ಅಥವಾ ಅಕ್ಕಿಯ ದಾನ ಮಾಡಬೇಕು.
ಮಂಗಳ ಸಂಚಾರದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಮಕರ ರಾಶಿಯಲ್ಲಿ ಮಂಗಳ ಸಂಚಾರ
ಮಕರ
ನಿಮ್ಮ ರಾಶಿಚಕ್ರಕ್ಕಾಗಿ ಶುಕ್ರನ ಸಂಚಾರವು ಬಹಳ ಪ್ರಮುಖವಾಗಿದೆ ಏಕೆಂದರೆ ನಿಮಗಾಗಿ ಇದು ಸಂಯೋಜಕ ಗ್ರಹವಾಗಿದೆ. ತನ್ನ ಸಂಚಾರದ ಈ ಸಮಯದಲ್ಲಿ ಶುಕ್ರ ನಿಮ್ಮ ಐದನೇ ಮನೆಯಲ್ಲಿ ಪ್ರವೇಶಿಸುತ್ತದೆ, ಇದು ಬಹಳ ಅನುಕೂಲಕರ ಸ್ಥಾನವಾಗಿದೆ ಮತ್ತು ಶುಕ್ರ ತನ್ನದೇ ರಾಶಿಚಕ್ರದಲ್ಲಿರುವ ಕಾರಣದಿಂದಾಗಿ ಬಹಳಷ್ಟು ಬಲವಾಗಿರುತ್ತದೆ, ಆದ್ದರಿಂದ ಈ ಸಾಗಣೆಯ ಪರಿಣಾಮದಿಂದಾಗಿ ನಿಮ್ಮ ಆದಾಯವು ಹೆಚ್ಚಾಗುತ್ತದೆ. ನಿಮ್ಮ ಗೌರವವು ಹೆಚ್ಚಾಗುತ್ತದೆ. ಶಿಕ್ಷಣದಲ್ಲಿ ನೀವು ಉತ್ತಮ ಫಲಿತಾಂಶವನ್ನು ಪಡೆಯಲಿದ್ದೀರಿ ಮತ್ತು ಜೀವನದಲ್ಲಿ ನೀವು ಪ್ರಗತಿಯ ಕಡೆಗೆ ಮುಂದುವರಿಯುತ್ತೀರಿ. ನಿಮ್ಮ ಪ್ರೀತಿ ಸಂಬಂಧದಲ್ಲಿ ಸಂತೋಷದ ಕ್ಷಣಗಳು ಬರುತ್ತವೆ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಮನಸ್ಸಿನ ವಿಷಯಗಳನ್ನು ಹಂಚಿಕೊಳ್ಳುತ್ತೀರಿ ಮತ್ತು ನಿಮ್ಮಿಬ್ಬರ ನಡುವೆ ಆತ್ಮೀಯ ಸಂಬಂಧವು ಹೆಚ್ಚಾಗುತ್ತದೆ. ನಿಮ್ಮ ಪ್ರೀತಿ ಸಹ ಹೆಚ್ಚಾಗುತ್ತದೆ.
ಶಿಕ್ಷಣದ ಕ್ಷೇತ್ರದಲ್ಲಿ ನೀವು ಅದ್ಭುತ ಫಲಿತಾಂಶವನ್ನು ಪಡೆಯುತ್ತೀರಿ ಮತ್ತು ಇದು ಸಾಧನೆಗಳನ್ನು ಪಡೆಯುವ ಸಮಯವಾಗಬಹುದು. ಇದಲ್ಲದೆ ನಿಮ್ಮನ್ನು ವಿದ್ವಾಂಸರಲ್ಲಿ ಎಣಿಸಲಾಗುತ್ತದೆ. ನೀವು ವಿವಾಹಿತರಾಗಿದ್ದರೆ, ನಿಮ್ಮ ಮಕ್ಕಳಿಗೆ ಈ ಸಮಯವು ತುಂಬಾ ಅನುಕೂಲಕರವಾಗಿರಲಿದೆ. ಈ ಸಮಯದಲ್ಲಿ ಕೆಲವರು ಮಕ್ಕಳನ್ನು ಹೊಂದಬಹುದು ಮತ್ತು ಕೆಲವರು ಮಕ್ಕಳ ಮೂಲಕ ಸಂತೋಷವನ್ನು ಪಡೆಯಬಹುದು. ಈ ಸಮಯದಲ್ಲಿ ನೀವು ನಿಮ್ಮ ಉದ್ಯೋಗದಲ್ಲಿ ಬದಲಾವಣೆ ತರುವ ಬಗ್ಗೆ ಪರಿಗಣಿಸಲು ಅವಕಾಶ ಪಡೆಯುತ್ತೀರಿ ಮತ್ತು ತಮ್ಮ ಉದ್ಯೋಗವನ್ನು ಬಿಟ್ಟಿರುವವರು ಅಥವಾ ಉದ್ಯೋಗ ಹೋಗಿರುವವರು ಈ ಸಮಯದಲ್ಲಿ ಹೊಸ ಕೆಲಸವನ್ನು ಪಡೆಯಬಹುದು. ವ್ಯಾಪಾರಕ್ಕೆ ಈ ಸಮಯವೂ ಬಹಳ ಪ್ರಯೋಜನಕಾರಿಯಾಗಿದೆ.
ಪರಿಹಾರ - ನೀವು ಉತ್ತಮ ಗುಣಮಟ್ಟದ ಓಪಲ್ ರತ್ನವನ್ನು ಧರಿಸಬೇಕು.
ಮಂಗಳ ಸಂಚಾರದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಮಕರ ರಾಶಿಯಲ್ಲಿ ಮಂಗಳ ಸಂಚಾರ
ಕುಂಭ
ಶುಕ್ರ ಗ್ರಹದ ಸಂಚಾರವು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ತರಲಿದೆ ಮತ್ತು ಅನೇಕ ರೀತಿಯ ಸಂತೋಷವನ್ನು ಪಡೆಯಲಿದ್ದೀರಿ ಏಕೆಂದರೆ ಶುಕ್ರ ಗ್ರಹದ ಸಂಚಾರದ ಸಮಯದಲ್ಲಿ ನಿಮ್ಮ ನಾಲ್ಕನೇ ಮನೆಗೆ ಪ್ರವೇಶಿಸುತ್ತದೆ, ಇದು ಇದರ ತನ್ನದೇ ಮನೆಯಾಗಿದೆ. ಇದಲ್ಲದೆ ಶುಕ್ರ ನಿಮ್ಮ ಅದೃಷ್ಟ ಅಂದರೆ ನಿಮ್ಮ ಒಂಬತ್ತನೇ ಮನೆಯ ಮಾಲೀಕ. ಈ ಕಾರಣದಿಂದಾಗಿ ನಿಮ್ಮ ಅದೃಷ್ಟದಲ್ಲಿ ಹೆಚ್ಚಳವಾಗುತ್ತದೆ ಮತ್ತು ಅದೃಷ್ಟದಲ್ಲಿನ ಪ್ರಬಲತೆಯ ಕಾರಣದಿಂದಾಗಿ ಈ ಸಮಯದಲ್ಲಿ ನೀವು ಸುಂದರವಾದ ಮನೆಯನ್ನು ಕಟ್ಟಬಹುದು ಅಥವಾ ಯಾವುದೇ ಉತ್ತಮ ವಾಹನವನ್ನು ಖರೀದಿಸಬಹುದು. ನಿಮ್ಮ ಬಳಿ ಮೊದಲಿನಿಂದಲೇ ಮನೆಯಿದ್ದರೆ, ನೀವು ಅದರ ಅಲಂಕಾರ ಮತ್ತು ಆಂತರಿಕ ಅಲಂಕಾರದ ಮೇಲೆ ಹಣಕಾಸು ಖರ್ಚಿಸುತ್ತಿರಿ. ಈ ಸಮಯದಲ್ಲಿ ಕುಟುಂಬದಲ್ಲಿ ಸಂತೋಷ ಮತ್ತು ಆನಂದವಿರುತ್ತದೆ. ಯಾವುದೇ ಒಳ್ಳೆಯ ಸಮಾರಂಭ ಸಂಭವಿಸಬಹುದು, ಇದರಿಂದ ನೆಂಟರು ಬರಬಹುದು.
ಕುಟುಂಬದಲ್ಲಿ ಹರ್ಷಚಿತ್ತವಿರುತ್ತದೆ. ನಿಮ್ಮ ತಾಯಿ ಸಂತೋಷದ ಸ್ಥಿತಿಯಲ್ಲಿರುತ್ತಾರೆ. ಈ ಸಾಗುವಿಕೆಯ ಅನುಕೂಲಕರ ಪರಿಣಾಮದಿಂದಾಗಿ ಕೆಲಸದ ಸ್ಥಳದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ವೃತ್ತಿ ಜೀವನದಲ್ಲಿ ನೀವು ಮುಂದುವರಿಯುತ್ತಿರಿ ಮತ್ತು ನಿಮ್ಮ ಕೆಳಸದಲ್ಲಿ ನಿಮ್ಮನ್ನು ಗೌರವಿಸಲಾಗುತ್ತದೆ ಮತ್ತು ಪ್ರಶಂಸಿಸಲಾಗುತ್ತದೆ. ನೀವು ಯಾವುದೇ ಆಸ್ತಿಯ ಮೇಲೆ ಹೂಡಿಕೆ ಮಾಡಿದ್ದರೆ, ಈ ಸಮಯದಲ್ಲಿ ಅದರಲ್ಲಿ ಕೂಡ ಲಾಭವನ್ನು ಪಡೆಯಬಹುದು. ವಿದೇಶದಲ್ಲಿ ವಾಸಿಸುತ್ತಿರುವ ಜನರು ಈ ಸಮಯದಲ್ಲಿ ಹಿಂತಿರುಗಿ ಬರುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಮಯ ಕಳೆಯುವುದರಿಂದಾಗಿ ನೀವು ಸಾಕಷ್ಟು ತೃಪ್ತಿಯನ್ನು ಪಡೆಯುತ್ತೀರಿ. ನೆಮ್ಮದಿಯ ಕಾರಣದಿಂದಾಗಿ ನಿಮ್ಮ ಮಾನಸಿಕ ಒತ್ತಡವು ಕೊನೆಗೊಳ್ಳುತ್ತದೆ.
ಪರಿಹಾರ - ಶುಕ್ರನ ವಿಶೇಷ ಲಾಭವನ್ನು ಪಡೆಯಲಿಕ್ಕಾಗಿ ನೀವು ಆರು ಮುಖ ರುದ್ರಾಕ್ಷವನ್ನು ಧರಿಸಬೇಕು.
ಮಂಗಳ ಸಂಚಾರದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಮಕರ ರಾಶಿಯಲ್ಲಿ ಮಂಗಳ ಸಂಚಾರ
ಮೀನಾ
ಮೀನಾ ರಾಶಿಚಕ್ರಕ್ಕಾಗಿ ಶುಕ್ರ ದೇವ ಮೂರನೇ ಮತ್ತು ಎಂಟನೇ ಮನೆಯ ಮಾಲೀಕ ಮತ್ತು ತನ್ನ ಈ ಸಂಚಾರದ ಸಮಯದಲ್ಲಿ ನಿಮ್ಮ ಮೂರನೇ ಮನೆಗೆ ಪ್ರವೇಶಿಸಲಿದ್ದಾರೆ. ಈ ಸಂಚಾರವು ನಿಮಗೆ ಹೆಚ್ಚು ಅನುಕೂಲಕರವಾಗಿಲ್ಲ, ಆದ್ದರಿಂದ ಈ ಸಂಚಾರದ ಸಮಯದಲ್ಲಿ ಸ್ವಲ್ಪ ಜಾಗರೂಕರಾಗಿರಿ, ವಿಶೇಷವಾಗಿ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಈ ಸಮಯದಲ್ಲಿ ನಿಮ್ಮ ಆರೋಗ್ಯವು ಕುಸಿಯಬಹುದು ಮತ್ತು ನೀವು ರೋಗಕ್ಕೊಳಗಾಗಬಹುದು. ಇದಲ್ಲದೆ ಪ್ರವಾಸಗಳಿಗೆ ಈ ಸಮಯ ಉತ್ತಮವಾಗಿರುತ್ತದೆ.
ಪ್ರಯಾಣಗಳಿಂದ ನೀವು ಉತ್ತಮ ಫಲಿತಾಂಶವನ್ನು ಪಡೆಯಬಹುದು ಮತ್ತು ಒಬ್ಬ ವಿಶೇಷ ವ್ಯಕ್ತಿಯನ್ನು ಭೇಟಿಸಲು ಅವಕಾಶ ಪಡೆಯಬಹುದು. ಇದಲ್ಲದೆ ಖಂಡಿತವಾಗಿಯೂ ನಿಮ್ಮ ಆದಾಯ ಹೆಚ್ಚಾಗುತ್ತದೆ ಮತ್ತು ನಿಮ್ಮ ಸಹೋದರ ಸಹೋದರಿಯರು ಈ ಸಮಯದಲ್ಲಿ ಬಹಳಷ್ಟು ಲಾಭವನ್ನು ಪಡೆಯಬಹುದು, ಇದರಿಂದ ಅವರು ತುಂಬಾ ಸಂತೋಷಪಡುತ್ತಾರೆ. ಈ ಸಮಯದಲ್ಲಿ ನೀವು ಮಾನಸಿಕ ಒತ್ತಡವನ್ನು ಎದುರಿಸಬೇಕಾಗಬಹುದು. ನೀವು ನಿಮ್ಮ ಕೆಲಸದ ಸ್ಥಳದಲ್ಲಿ ವಿಶೇಷವಾಗಿ ನಿಮ್ಮೊಂದಿಗೆ ಕೆಲಸ ಮಾಡುತ್ತಿರುವ ಜನರ ಮೇಲೆ ಅವಲಂಬಿತರಾಗಿರಬೇಕಾಗುತ್ತದೆ. ಆದಾಗ್ಯೂ ಅವರು ನಿಮ್ಮ ಪರವಾಗಿರುತ್ತಾರೆ ಮತ್ತು ಅವರೊಂದಿಗಿನ ನಿಮ್ಮ ಸಂಬಂಧವು ಬಲಗೊಳ್ಳುತ್ತದೆ. ಇದರ ಪರಿಣಾಮವು ನಿಮ್ಮ ಕೆಲಸದ ಮೇಲೆ ಅನುಕೂಲಕರವಾಗಿ ಬೀರುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಹವ್ಯಾಸವನ್ನು ಪ್ರಯತ್ನಿಸುತ್ತೀರಿ ಮತ್ತು ನೀವು ಅದನ್ನು ಮಾಡಿದರೆ ನಿಜವಾಗಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ ಮತ್ತು ಗೌರವ ಹೆಚ್ಚಾಗುತ್ತದೆ.
ಪರಿಹಾರ - ಶುಕ್ರವಾರದಂದು ಯಾವುದೇ ದೇವಸ್ಥಾನದಲ್ಲಿ ಅಲಂಕಾರದ ವಸ್ತುಗಳನ್ನು ಅರ್ಪಿಸಿ.
ಮಂಗಳ ಸಂಚಾರದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಮಕರ ರಾಶಿಯಲ್ಲಿ ಮಂಗಳ ಸಂಚಾರ
ರತ್ನದಕಲ್ಲು, ರುದ್ರಾಕ್ಷದ ಜೊತೆಯಲ್ಲಿ ಎಲ್ಲಾಜ್ಯೋತಿಷ್ಯ ಪರಿಹಾರಕ್ಕಾಗಿ ಕ್ಲಿಕ್ ಮಾಡಿ: ಆಸ್ಟ್ರೋಸೇಜ್ ಆನ್ ಲೈನ್ ಶಾಪಿಂಗ್ ಸ್ಟೋರ್
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
- Rashifal 2025
- Horoscope 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ராசி பலன் 2025
- రాశిఫలాలు 2025
- ರಾಶಿಭವಿಷ್ಯ 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025