ಕರ್ಕ ರಾಶಿಯಲ್ಲಿ ಶುಕ್ರ ಸಂಚಾರ (1 ಸೆಪ್ಟೆಂಬರ್ 2020)

ಸೌಂದರ್ಯ, ಕಲೆ ಮತ್ತು ಸೃಜನಶೀಲತೆಯ ಅಂಶ, ಶುಕ್ರ ಗ್ರಹವು 1 ಸೆಪ್ಟೆಂಬರ್ ರಂದು 02:02 ಗಂಟೆಗೆ ಮಿಥುನ ರಾಶಿಯಿಂದ ಹೊರಬಂದು ಕರ್ಕ ರಾಶಿಯಲ್ಲಿ ಪ್ರವೇಶಿಸುತ್ತದೆ. 28 ಸೆಪ್ಟೆಂಬರ್ 1 ಗಂಟೆ 1 ನಿಮಿಷದ ವರೆಗೆ ಶುಕ್ರ ಗ್ರಹವು ಅದೇ ರಾಶಿಯಲ್ಲಿ ಇರುತ್ತದೆ ಮತ್ತು ಅದರ ನಂತರ ಸಿಂಹ ರಾಶಿಗೆ ಪ್ರವೇಶಿಸುತ್ತದೆ. ನಡೆಯಿರಿ, ಈ ಸಂಚಾರವು ನಿಮ್ಮ ರಾಶಿಚಕ್ರದ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ತಿಳಿಯೋಣ.

ಜೀವನದಲ್ಲಿನ ಯಾವುದೇ ರೀತಿಯ ಪರಿಹಾರಕ್ಕಾಗಿ ಪ್ರಶ್ನೆ ಕೇಳಿ

ಶುಕ್ರ ದೇವರ ಸಂಚಾರವು 1 ಸೆಪ್ಟೆಂಬರ್ 2020 ರಂದು ರಾಶಿಚಕ್ರದ ನಾಲ್ಕನೇ ರಾಶಿ ಕರ್ಕದಲ್ಲಿ ಸಂಭವಿಸುತ್ತದೆ. ಶುಕ್ರನನ್ನ ಶುಭ ಗ್ರಹವೆಂದು ಹೇಳಲಾಗುತ್ತದೆ ಮತ್ತು ಇದರ ಶುಭ ಪರಿಣಾಮಗಳಿಂದಾಗಿ ಒಬ ವ್ಯಕ್ತಿಯು ಕಲಾತ್ಮಕ ಕೃತಿಗಳಲ್ಲಿ ಪರಿಣತಿಯನ್ನು ಹೊಂದುತ್ತಾನೆ . ಒಬ್ಬ ವ್ಯಕ್ತಿಯ ಜಾತಕದಲ್ಲಿ ಶುಕ್ರ ಉತ್ತಮ ಸ್ಥಿತಿಯಲ್ಲಿದ್ದರೆ, ಅವರು ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ವ್ಯಕ್ತಿ ನಟನೆ, ಗಾಯನ ಇತ್ಯಾದಿ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸುತ್ತಾರೆ.

ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ನಿಮ್ಮ ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ತಿಳಿಯಿರಿ.

  1. ಮೇಷ ರಾಶಿ

ಮೇಷ ರಾಶಿಚಕ್ರದ ಸ್ಥಳೀಯರ ನಾಲ್ಕನೇ ಮನೆಯಲ್ಲಿ ಶುಕ್ರ ಗ್ರಹವು ಸಾಗಾಣಿಸುತ್ತದೆ. ಈ ಮನೆಯ ಮೂಲಕ ನಿಮ್ಮ ತಾಯಿ, ಕುಟುಂಬ, ವಾಹನ, ಸಂತೋಷ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಮೇಷ ರಾಶಿ ಜನರು ಶುಕ್ರನ ಈ ಸಂಚಾರದ ಸಮಯದಲ್ಲಿ ಶಾಂತಿಯುತ ವಾತಾವರಣದಲ್ಲಿ ಇರಲು ಇಷ್ಟಪಡುತ್ತಾರೆ. ನೀವು ಸಮಾಜಕ್ಕಿಂತ ಹೆಚ್ಚು ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯುತ್ತೀರಿ. ಆದಾಗ್ಯೂ ನಿಮ್ಮನ್ನು ಮನರಂಜಿಸಲು ಹೊಸ ತಂತ್ರಗಳನ್ನು ನೀವು ಕಂಡುಹಿಡಿಯಬಹುದು.

ಈ ರಾಶಿಚಕ್ರದ ಕೆಲವು ಜನರು ಗಾಯನ, ನಟನೆ ಇತ್ಯಾದಿಗಳನ್ನು ಕಲಿಯುವತ್ತ ಸಾಗಬಹುದು. ಈ ಸಂಚಾರದ ಸಮಯದಲ್ಲಿ ಕುಟುಂಬದ ಸದಸ್ಯರು ನಿಮ್ಮ ಪ್ರತಿಯೊಂದು ಕಠಿಣ ಪರಿಸ್ಥಿತಿಯಲ್ಲಿ ನಿಮ್ಮನ್ನು ಬೆಂಬಲಿಸುತ್ತಾರೆ. ವಿವಾಹಿತ ಜನರ ಸಂಗಾತಿ ಈ ಸಂಚಾರದ ಸಮಯದ್ಲಲಿ ಲಾಭವನ್ನು ಪಡೆಯಬಹುದು. ಕೆಲಸದ ಸ್ಥಳದಲ್ಲಿ ಅವರು ಉತ್ತಮ ಹುದ್ದೆಯನ್ನು ಪಡೆಯುವ ಸಾಧ್ಯತೆ ಇದೆ.

ಪ್ರೀತಿಯಲ್ಲಿರುವ ಈ ರಾಶಿಚಕ್ರದ ಸ್ಥಳೀಯರು ಈ ಸಂಚಾರದ ಸಮಯದಲ್ಲಿ ತುಂಬಾ ಭಾವುಕರಾಗಬಹುದು ಮತ್ತು ಪ್ರೀತಿಪಾತ್ರರ ಸಣ್ಣ ಪುಟ್ಟ ವಿಷಯಗಳನ್ನು ಸಹ ಹೃದಯಕ್ಕೆ ತೆಗೆದುಕೊಳ್ಳಬಹುದು. ನಿಮ್ಮ ಈ ವರ್ತನೆಯ ಕಾರಣದಿಂದಾಗಿ ಪ್ರೀತಿ ಜೀವನದಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ನಿಮ್ಮ ಭಾವನೆಗಳನ್ನು ನಿಯಂತ್ರಿಸಲು ಪ್ರಯತ್ನಿಸಿ. ಮೇಷ ರಾಶಿಚಕ್ರದ ಸ್ಥಳೀಯರ ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ಶೀತದಂತಹ ಸಣ್ಣ ಪುಟ್ಟ ಸಮಸ್ಯೆಗಳ ಹೊರೆತಾಗಿ ನಿಮಗೆ ಯಾವುದೇ ದೊಡ್ಡ ಸಮಸ್ಯೆಗಳು ಆಗುವುದಿಲ್ಲ.

ಪರಿಹಾರ - ಶುಕ್ರವಾರದಂದು ಸಂತೋಷಿ ತಾಯಿಯನ್ನು ಪೂಜಿಸಿ.

  1. ವೃಷಭ ರಾಶಿ

ಶುಕ್ರ ಗ್ರಹವು ವೃಷಭ ರಾಶಿಚಕ್ರದ ಮೂರನೇ ಮನೆಗೆ ಸಾಗಣಿಸುತ್ತದೆ. ಮೂರನೇ ಮನೆಯ ಮೂಲಕ ಧೈರ್ಯ, ಪರಾಕ್ರಮ, ಕಿರಿಯ ಸಹೋದರ ಸಹೋದರಿಯರು, ಸಣ್ಣ ಪ್ರವಾಸಗಳು ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಶುಕ್ರನ ಈ ಸಂಚಾರವು ನಿಮ್ಮ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ, ನಿಮ್ಮಲ್ಲಿ ಹೊಸದನ್ನು ಮಾಡುವ ಬಯಕೆ ಈ ಸಮಯದಲ್ಲಿ ಎಚ್ಚರಗೊಳ್ಳಬಹುದು. ಆದಾಗ್ಯೂ ಯಾವುದೇ ಪರಿಸ್ಥಿತಿಯಲ್ಲಿ ನೀವು ಅತಿಯಾದ ಮಹತ್ವಾಕಾಂಕ್ಷೆಯಿಂದ ದೂರವಾಗಿರಬೇಕು. ನಿಮ್ಮ ಸೃಜನಶೀಲತೆಯ ಮೂಲಕ ಸಮಾಜದಲ್ಲಿ ನೀವು ನಿಮ್ಮ ವಿಭಿನ್ನ ಗುರುತನ್ನು ರಚಿಸಬಹುದು.

ಬರೆಯುವ ಕೆಲಸವನ್ನು ಮಾಡುವ ಈ ರಾಶಿಚಕ್ರದ ಸ್ಥಳೀಯರು ಈ ಸಂಚಾರದ ಸಮಯದಲ್ಲಿ ಪ್ರಶಂಸೆಯನ್ನು ಪಡೆಯಬಹುದು. ಈ ಸಮಯದಲ್ಲಿ ನೀವು ಧೈರ್ಯಶಾಲಿ ಕಾರ್ಯಗಳನ್ನು ಮಾಡಲು ಯಾವುದೇ ಗಿರಿಧಾಮಕ್ಕೆ ಹೋಗಬಹುದು, ನೀವು ವಿವಾಹಿತರಾಗಿದ್ದರೆ, ನಿಮ್ಮ ಜೀವನ ಸಂಗಾತಿಯನ್ನು ಸಹ ನಿಮ್ಮೊಂದಿಗೆ ಕೊಂಡೊಯ್ಯಿರಿ. ಇದರಿಂದ ನಿಮ್ಮ ಸಂಬಂಧವು ಸುಧಾರಿಸುತ್ತದೆ.

ವ್ಯಾಪಾರಕ್ಕೆ ಸಂಬಂಧಿಸಿದ ಈ ರಾಶಿಚಕ್ರದ ಜನರು ತಮ್ಮ ಕೌಶಲ್ಯದ ಬಲದ ಮೇಲೆ ಈ ಸಮಯದಲ್ಲಿ ಲಾಭವನ್ನು ಗಳಿಸಬಹುದು. ಶುಕ್ರನ ಈ ಸಂಚಾರವು ಈ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಕೂಡ ಉತ್ತಮವಾಗಿರುತ್ತದೆ. ನೀವು ಪುಸ್ತಕಗಳ ಮಧ್ಯೆ ಹೆಚ್ಚು ಸಮಯವನ್ನು ಕಳೆಯಲು ಇಷ್ಟಪಡುವಿರಿ ಮತ್ತು ಕಠಿಣ ವಿಷಯಗಳನ್ನು ಬಹಳ ಸುಲಭವಾಗಿ ಅರ್ಥಮಾಡಿಕೊಳ್ಳುವಿರಿ. ಈ ಸಮಯದಲ್ಲಿ ತಮ್ಮ ಜೀವನವನ್ನು ಆನಂದಿತಗೊಳಿಸಲು ಈ ರಾಶಿಚಕ್ರದ ಜನರು ತಮ್ಮ ಸ್ನೇಹಿತರು ಅಥವಾ ನಿಕಟ ಜನರನ್ನು ಭೇಟಿ ಮಾಡಬಹುದು.

ಪರಿಹಾರ - ಶುಕ್ರವಾರದ ದಿನದಂದು ಗಣೇಶ ದೇವರನ್ನು ಪೂಜಿಸುವುದು ನಿಮಗೆ ಶುಭವಾಗಿರುತ್ತದೆ.

  1. ಮಿಥುನ ರಾಶಿ

ಶುಕ್ರ ಮಿಥುನ ರಾಶಿಚಕ್ರದ ಸ್ಥಳೀಯರ ಎರಡನೇ ಮನೆಗೆ ಪ್ರವೇಶಿಸಲಿದೆ. ಇದು ನಿಮ್ಮ ಕುಟುಂಬ, ಸಂತೋಷ ಇತ್ಯಾದಿಯ ಮನೆಯಾಗಿದೆ. ಈ ಮನೆಯಲ್ಲಿ ಶುಕ್ರ ಸಂಚಾರದಿಂದಾಗಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ವಿಶೇಷವಾಗಿ ಈ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಈ ಸಮಯ ಅತ್ಯಂತ ಅನುಕೂಲಕರವಾಗಿರಲಿದೆ. ಶಿಕ್ಷಣದ ಕ್ಷೇತ್ರದಲ್ಲಿ ಬರುತ್ತಿದ್ದ ನಿಮ್ಮ ಅನೇಕ ಸಮಸ್ಯೆಗಳು ಈ ಸಮಯದಲ್ಲಿ ದೂರವಾಗಬಹುದು. ಈ ಸಮಯದಲ್ಲಿ ಗುರುಗಳ ಬೆಂಬಲವನ್ನು ಪಡೆಯಲು ನೀವು ಪ್ರಯತ್ನಿಸುತ್ತೀರಿ.

ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ವಾತಾವರಣ ಉತ್ತಮವಾಗಿರುತ್ತದೆ. ನೀವು ಕುಟುಂಬ ವ್ಯಾಪಾರದಲ್ಲಿ ತೊಡಗಿದ್ದರೆ, ನಿಮಗೆ ಲಾಭವಾಗಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಪಾಲುದಾರಿಕೆಯ ವ್ಯಾಪಾರ ಮಾಡುತ್ತಿರುವ ಜನರಿಗೆ ಕೂಡ ಲಾಭವಾಗುವ ಸಂಪೂರ್ಣ ಸಾಧ್ಯತೆ ಇದೆ. ಇದು ನಿಮ್ಮ ಧ್ವನಿಯ ಮನೆ. ಆದ್ದರಿಂದ ಶುಭ ಗ್ರಹ ಶುಕ್ರ ಈ ಮನೆಯಲ್ಲಿ ನೆಲೆಗೊಳ್ಳುವ ಕಾರಣದಿಂದಾಗಿ ಈ ಸಮಯದಲ್ಲಿ ನಿಮ್ಮ ಧ್ವನಿಯಲ್ಲಿ ಹೊಳಪು ಬರುತ್ತದೆ. ನಿಮ್ಮ ಮಾತುಗಳಿಂದ ನಿಮ್ಮ ಮುಂದಿರುವವಾರ ಹೃದಯವನ್ನು ನೀವು ಗೆಲ್ಲಬಹುದು. ಸಾಮಾಜಿಕ ಮಟ್ಟದಲ್ಲಿ ನೀವು ಗೌರವವನ್ನು ಪಡೆಯುತ್ತೀರಿ.

ಪ್ರೀತಿ ಸಂಬಂಧದಲ್ಲಿರುವ ಈ ರಾಶಿಚಕ್ರದ ಪ್ರೇಮಿಗಳ ಸಂಬಂಧದಲ್ಲಿ ಈ ಸಮಯದಲ್ಲಿ, ಉತ್ತಮ ಬದಲಾವಣೆಗಳು ಉಂಟಾಗಬಹುದು. ನಿಮ್ಮ ಮಕ್ಕಳು ಈ ಸಮಯದಲ್ಲಿ ಪ್ರಗತಿಯ ಹಾದಿಯಲ್ಲಿ ಮುಂದುವರಿಯುತ್ತಾರೆ. ಈ ಸಮಯದಲ್ಲಿ ನೀವು ಆಹಾರ ಪಾನೀಯಕ್ಕಾಗಿ ಸಾಕಷ್ಟು ಖರ್ಚು ಮಾಡಬಹುದು. ನಿಮ್ಮ ಅರೋಗ್ಯ ಜೇವನದ ಬಗ್ಗೆ ಮಾತನಾಡಿದರೆ, ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು ಆದ್ದರಿಂದ ನಿಮ್ಮ ಕಣ್ಣುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ.

ಪರಿಹಾರ - ಶುಕ್ರವಾರದ ದಿನದಂದು ಹಣೆಯ ಮೇಲೆ ಬಿಳಿ ಶ್ರೀಗಂಧದ ತಿಲಕವನ್ನು ಹಚ್ಚಿಸಿ, ಶುಭ ಫಲಿತಾಂಶವನ್ನು ಪಡೆಯುತ್ತಿರಿ.

  1. ಕರ್ಕ ರಾಶಿ

ಕರ್ಕ ರಾಶಿಚಕ್ರದ ಸ್ಥಳೀಯರ ಲಗ್ನದ ಮನೆಯಲ್ಲಿ ಶುಕ್ರ ದೇವರ ಸಂಚಾರದಿಂದಾಗಿ ನಿಮ್ಮ ಸ್ವಭಾವದಲ್ಲಿ ಈ ಸಮಯದಲ್ಲಿ ಸಕಾರಾತ್ಮಕ ಬದಲಾವಣೆಗಳು ಬರುತ್ತವೆ. ಇದು ನಿಮ್ಮ ಬುದ್ಧಿಯ ಮನೆಯಾಗಿದೆ ಆದ್ದರಿಂದ ಶುಕ್ರ ಸಂಚಾರದಿಂದಾಗಿ ನಿಮ್ಮ ಬೌದ್ಧಿಕ ಸಾಮರ್ಥ್ಯ ಹೆಚ್ಚಾಗುತ್ತದೆ. ಈ ರಾಶಿಚಕ್ರದ ಜನರು ತಮ್ಮ ಸೃಜನಶೀಲತೆಯಿಂದ ಈ ಸಮಯದಲ್ಲಿ ಜನರನ್ನು ಪ್ರಭಾವಿಸಬಹುದು. ನೀವು ಮಾಧ್ಯಮ ಅತಃವ ಚಲನಚಿತ್ರೋದ್ಯಮದೊಂದಿಗೆ ಸಂಬಂಧವನ್ನು ಹೊಂದಿದ್ದರೆ, ಶುಕ್ರ ಸಂಚಾರದ ಈ ಸಮಯದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ.

ಉದ್ಯೋಗದಲ್ಲಿರುವ ಈ ರಾಶಿಚಕ್ರದ ಜನರು ತಮ್ಮ ಪ್ರತಿಯೊಂದು ಕೆಲಸದಲ್ಲಿ ದಕ್ಷತೆಯನ್ನು ತರಲು ಪ್ರತ್ನಿಸುತ್ತಾರೆ, ಈ ಕಾರಣದಿಂದಾಗಿ ನಿಮ್ಮ ಹಿರಿಯ ಅಧಿಕಾರಿಗಳು ನಿಮ್ಮಿಂದ ಸಂತೋಷವಾಗಿರುತ್ತಾರೆ. ಸೌಂದರ್ಯ ಉತ್ಪನ್ನಗಳಿಗೆ ಸಂಬಂಧಿಸಿದ ವ್ಯಾಪಾರ ಮಾಡುತ್ತಿರುವ ಈ ರಾಶಿಚಕ್ರದ ಜನರು ಈ ಸಮಯದಲ್ಲಿ ಪ್ರಯೋಜನವನ್ನು ಪಡೆಯಬಹುದು. ಕುಟುಂಬ ಜೀವನವು ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಕುಟುಂಬದ ಯಾವುದೇ ರೀತಿಯ ಅಸ್ತವ್ಯಸ್ತತೆ ಉಂಟಾಗುವುದಿಲ್ಲ ಈ ಕಾರಣದಿಂದಾಗಿ ನೀವು ಮಾನಸಿಕ ಸಂತೋಷವನ್ನು ಸಹ ಪಡೆಯುತ್ತೀರಿ.

ಶುಕ್ರ ಸಂಚಾರವು ನಿಮ್ಮ ಆರೋಗ್ಯಕ್ಕೂ ಉತ್ತಮವಾಗಿರುತ್ತದೆ. ಸಣ್ಣ ಪುಟ್ಟ ರೋಗಗಳು ನಿಮ್ಮನ್ನು ಕಾಡಬಹುದು ಆದರೆ ಇದರಿಂದಾಗಿ ನಿಮ್ಮ ಜೀವನದಲ್ಲಿ ಯಾವುದೇ ದೊಡ್ಡ ಬದಲಾವಣೆ ಉಂಟಾಗುವುದಿಲ್ಲ. ಶುಕ್ರವನ್ನು ಭೌತಿಕ ಗ್ರಹವೆಂದು ಪರಿಗಣಿಸಲಾಗಿದೆ ಆದ್ದರಿಂದ ಈ ಸಮಯದಲ್ಲಿ ನೀವು ಭೌತಿಕ ಸಂತೋಷಗಳನ್ನು ಪಡೆಯಲು ಸಿದ್ಧರಾಗಿರುತ್ತೀರಿ. ಒಟ್ಟಾರೆಯಾಗಿ, ಶುಕ್ರ ಸಂಚಾರವು ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಶುಭವೆಂದು ಸಾಬೀತುಪಡಿಸುತ್ತದೆ.

ಪರಿಹಾರ - ಶ್ವೇತರ್ಕ ಗಣಪತಿಯನ್ನು ಪೂಜಿಸುವುದು ನಿಮಗೆ ಶುಭವಾಗಿರುತ್ತದೆ.


ಕೋಗ್ನಿ ಆಸ್ಟ್ರೋ ರಿಪೋರ್ಟ್ ಮೂಲಕ ನಿಮ್ಮ ಜೀವನದಲ್ಲಿ ಬರುತ್ತಿರುವ ಸಮಸ್ಯೆಗಳನ್ನು ಪರಿಹರಿಸಿ.
  1. ಸಿಂಹ ರಾಶಿ

ಶುಕ್ರ ಗ್ರಹವು ಸಿಂಹ ರಾಶಿಚಕ್ರದ ಸ್ಥಳೀಯರ ಹನ್ನೆರಡನೇ ಮನೆಗೆ ಸಾಗುತ್ತದೆ. ಈ ಮನೆಯನ್ನು ವಿದೇಶ, ವೆಚ್ಚ, ನಷ್ಟ ಇತ್ಯಾದಿಗಳ ಮೆನೆಯೆಂದು ಕರೆಯಲಾಗುತ್ತದೆ. ಈ ಸಂಚಾರದ ಸಮಯದಲ್ಲಿ ವಿದೇಶಕ್ಕೆ ಸಂಬಂಧಿಸಿದ ವ್ಯಾಪಾರದಲ್ಲಿ ತೊಡಗಿರುವ ಅಥವಾ ವಿದೇಶಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ಸಿಂಹ ರಾಶಿಚಕ್ರದ ಜನರಿಗೆ ಪ್ರಯೋಜನವಾಗುತ್ತದೆ. ವಿದೇಶಿ ಪ್ರಯಾಣಗಳು ಕೂಡ ಈ ರಾಶಿಚಕ್ರದ ಜನರಿಗೆ ಪ್ರಯೋಜನಕಾರಿಯಾಗಿದೆ.

ಸಿಂಹ ರಾಶಿಚಕ್ರದ ಜನರು ಈ ಸಮಯದಲ್ಲಿ ತಮ್ಮ ಆರ್ಥಿಕ ಭಾಗದ ಬಗ್ಗೆ ಗಮನ ಹರಿಸುವ ಅಗತ್ಯವಿದೆ. ಏಕೆಂದರೆ ಅನೇಕ ಬಾರಿ ನೀವು ಹೆಚ್ಚು ಪ್ರದರ್ಶಿಸುವುದಕ್ಕಾಗಿ ವೆಚ್ಚದ ಬಗ್ಗೆ ಗಮನ ಹರಿಸುವುದಿಲ್ಲ. ಆದ್ದರಿಂದ ಹೆಚ್ಚು ಪ್ರದರ್ಶಿಸುವುದರಿಂ ದ ದೂರವಿರಿ ಮತ್ತು ಹಣವನ್ನು ಉಳಿಸಿ. ವೈವಾಹಿಕ ಜೀವನದಲ್ಲಿ ಜೀವನ ಸಂಗಾತಿಯೊಂದಿಗೆ ವಿವಾದವಾಗುವ ಸಾಧ್ಯತೆ ಇದೆ, ಈ ಸಮಯದಲ್ಲಿ ನೀವು ತುಂಬಾ ಭೌತಿಕವಾದಿಗಳಾಗಿರುತ್ತೀರಿ, ಆಧ್ಯಾತ್ಮಿಕ ಸಂತೋಷಗಳಿಗಿಂತ ಹೆಚ್ಚಿನ ಭೌತಿಕ ಸುಖಗಳತ್ತ ಓಡುತ್ತೀರಿ. ಈ ಕಾರಣದಿಂದಾಗಿ ನಿಮ್ಮ ಜೀವನ ಸಂಗಾತಿ ಸ್ವಲ್ಪ ಅಸಮಾಧಾನಗೊಳ್ಳಬಹುದು.

ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಕೂಡ ವಿಶೇಷ ಗಮನ ಹರಿಸುವ ಅಗತ್ಯವಿದೆ, ವಿಶೇಷವಾಗಿ ನಿಮ್ಮ ಎಡ ಕಣ್ಣಿನ ಬಗ್ಗೆ ಕಾಳಜಿ ವಹಿಸಿ. ಈ ಸಂಚಾರದ ಸಮಯದಲ್ಲಿ ಹೆಚ್ಚು ಟಿವಿ ನೋಡುವುದನ್ನು ಮತ್ತು ಮೊಬೈಲ್ ಯೂಸ್ ಮಾಡುವುದನ್ನು ತಪ್ಪಿಸಿ. ಶುಕ್ರನ ಈ ಸಂಚಾರವು ವಿದೇಶಕ್ಕೆ ಹೋಗಲು ಬಯಸುತ್ತಿರುವ ನಿಮ್ಮ ಆಸೆಗೆ ಬಲವನ್ನು ನೀಡಬಹುದು ಮತ್ತು ನೀವು ವಿದೇಶಕ್ಕೆ ಹೋಗಲು ನಿಮ್ಮ ಪ್ರಯತ್ನಗಳನ್ನು ಹೆಚ್ಚಿಸಬಹುದು.

ಪರಿಹಾರ - ಶುಕ್ರವಾರದಂದು ಸುಗಂಧ ದ್ರವ್ಯ ದಾನ ಮಾಡುವುದು ನಿಮಗೆ ಶುಭವಾಗಿರುತ್ತದೆ.

  1. ಕನ್ಯಾ ರಾಶಿ

ಶುಕ್ರ ಗ್ರಹವು ಕನ್ಯಾ ರಾಶಿಚಕ್ರದ ಶತಾಳೀಯರ ಲಾಭದ ಮನೆ ಅಂದರೆ ಹನ್ನೊಂದನೇ ಮನೆಗೆ ಸಾಗುತ್ತದೆ. ಈ ಮನೆಯ ಮೂಲಕ ಸ್ನೇಹಿತರು, ಹಿರಿಯ ಸಹೋದರ ಸಹೋದರಿಯರು ಇತ್ಯಾದಿಯ ಬಗ್ಗೆ ಪರಿಗಭಿಸಲಾಗುತ್ತದೆ. ಕನ್ಯಾ ರಾಶಿಚಕ್ರದ ಜನರಿಗೆ ಸಂಚಾರದ ಈ ಸಮಯದಲ್ಲಿ ಆರ್ಥಿಕ ಲಾಭವಾಗುವ ಪ್ರಬಲ ಸಾಧ್ಯತೆ ಇದೆ. ವ್ಯಾಪಾರದಲ್ಲಿ ತೊಡಗಿರುವ ಈ ರಾಶಿಚಕ್ರದ ಸ್ಥಳೀಯರು ತಮ್ಮ ವ್ಯಾಪಾರವನ್ನು ವಿಸ್ತರಿಸುವ ಬಗ್ಗೆ ಆಲೋಚಿಸಬಹುದು, ಈ ಸಮಯ ಅವರಿಗೆ ಅನುಕೂಲಕರವಾಗಿರುತ್ತದೆ. ಇದರೊಂದಿಗೆ ಉದ್ಯೋಗದಲ್ಲಿರುವ ಜನರು ಈ ಸಂಚಾರದ ಸಮಯದಲ್ಲಿ ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ.

ಇನ್ನೂ ಒಬ್ಬಂಟಿಯಾಗಿರುವ ಜನರು ಈ ಸಮಯದಲ್ಲಿ ಯಾವುದೇ ಉತ್ತಮ ಸಂಬಂಧದ ಪ್ರಸ್ತಾಪವನ್ನು ಪಡೆಯಬಹುದು ಮತ್ತು ಅವರ ಮದುವೆ ಫಿಕ್ಸ್ ಆಗಬಹುದು. ಇದಲ್ಲದೆ ಕುಟುಂಬ ಜೀವನದಲ್ಲಿ ಕೂಡ ನೀವು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತೀರಿ. ಹಿರಿಯ ಸಹೋದರ ಸಹೋದರಿಯರೊಂದಿಗಿನ ನಿಮ್ಮ ಸಂಬಂಧವು ಬಲಗೊಳ್ಳುತ್ತದೆ ಮತ್ತು ನಿಮ್ಮನ್ನು ಬೆಂಬಲಿಸಲು ಅವರು ಯಾವಾಗಲು ಸಿದ್ಧರಾಗಿರುತ್ತಾರೆ. ದೀರ್ಘಕಾಲದಿಂದ ಯಾವುದೋ ರೋಗದಿಂದ ಬಳಲುತ್ತಿದ್ದ ಈ ರಾಶಿಚಕ್ರದ ಜನರು, ಈ ಸಂಚಾರದ ಸಮಯದಲ್ಲಿ ಅವರ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು.

ಈ ಸಮಯದಲ್ಲಿ ನಿಮಗೆ ಸಹಾಯ ಮಾಡಲು ನಿಮ್ಮ ಸ್ನೇಹಿತರು ಮುಂದೆ ಬರಬಹುದು ಮತ್ತು ನೀವು ಸಹ ಅವರಿಗೆ ಸಹಾಯ ಮಾಡುವುದರಿಂದ ಹಿಂದೆ ಸರಿಯುವುದಿಲ್ಲ. ನಿಮ್ಮ ಮೂಲಕ ನೀಡಿದ ಯಾವುದೇ ಸಲಹೆಯು ನಿಮ್ಮ ಒಬ್ಬ ಸ್ನೇಹಿತರಿಗೆ ತುಂಬಾ ಉಪಯುಕ್ತವಾಗಿರಬಹುದು. ಈ ರಾಶಿಚಕ್ರದ ಕೆಲವರು ಮನರಂಜನಾ ಚಟುವಟಿಕೆಗಳಲ್ಲಿ ಸಾಕಷ್ಟು ಹಣವನ್ನು ಖರ್ಚು ಮಾಡಬಹುದು. ಆದಾಗ್ಯೂ ನಿಮ್ಮ ಬಡ್ಜೆಟ್ ಪ್ರಕಾರ ಎಲ್ಲಾ ಕೆಲಸಗಳನ್ನು ಮಾಡಲು ನಿಮಗೆ ಸಲಹೆ ನೀಡಲಾಗಿದೆ.

ಪರಿಹಾರ - ಚಿಕ್ಕ ಹುಡುಗಿಯರಿಗೆ ಉಡುಗೊರೆ ನೀಡುವುದು ನಿಮಗೆ ಶುಭವಾಗಿರುತ್ತದೆ.


ನಿಮ್ಮ ಜಾತಕದಲ್ಲಿ ಯಾವುದೇ ದೋಷವಿದೆಯೇ? ತಿಳಿಯಲು ಈಗಲೇ ಖರೀದಿಸಿ ಆಸ್ಟ್ರೋಸೇಜ್ ಬೃಹತ್ ಕುಂಡಲಿ
  1. ತುಲಾ ರಾಶಿ

ಶುಕ್ರ ಗ್ರಹವು ತುಲಾ ರಾಶಿಚಕ್ರದ ಜನರ ಹತ್ತನೇ ಮನೆಗೆ ಸಾಗುತ್ತದೆ. ಈ ಮನೆಯ ಮೂಲಕ ನಿಮ್ಮ ಕರ್ಮದ ಬಗ್ಗೆ ಪರಿಗಣಿಸಲಾಗುತ್ತದೆ. ನಿಮ್ಮ ಹತ್ತನೇ ಮನೆಯಲ್ಲಿ ಶುಕ್ರ ಸಂಚಾರವು ಕೆಲಸದ ಸ್ಥಳದಲ್ಲಿ ನಿಮಗೆ ಪ್ರಗತಿಯನ್ನು ನೀಡುತ್ತದೆ. ಕೆಲಸದ ಸ್ಥಳದಲ್ಲಿ ಈ ಸಮಯದಲ್ಲಿ ನೀವು ನಿಮ್ಮ ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಸ್ಥಾಪಿಸಲು ಪ್ರಯತ್ನಿಸುತ್ತೀರಿ. ಕಳೆದ ಸಮಯದಲ್ಲಿ ನೀವು ಉತ್ತಮ ಕೆಲಸ ಮಾಡಿದ್ದರೆ, ಈ ಅವಧಿಯಲ್ಲಿ ನೀವು ಬಡ್ತಿ ಪಡೆಯಬಹುದು. ವ್ಯಾಪಾರದಲ್ಲಿ ತೊಡಗಿರುವ ಈ ರಾಶಿಚಕ್ರದ ಸ್ಥಳೀಯರಿಗೆ ಈ ಸಮಯ ಉತ್ತಮವಾಗಿರುತ್ತದೆ ಮತ್ತು ವ್ಯಾಪಾರದಲ್ಲಿ ಲಾಭವನ್ನು ಪಡೆಯಲು ಈ ಸಮಯದಲ್ಲಿ ನೀವು ಯಾವುದೇ ಹೊಸ ಯೋಜನೆಯನ್ನು ಸಹ ರಚಿಸಬಹುದು.

ರಾಜಕೀಯದಲ್ಲಿರುವ ಈ ರಾಶಿಚಕ್ರದ ಜನರು ತಮ್ಮ ಮಾತುಗಳಿಂದ ಜನರ ಮೇಲೆ ಪರಿಣಾಮ ಬೀರಬಹುದು. ಈ ಸಮಯದಲ್ಲಿ ನಿಮ್ಮ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಬಹುದು. ಸಾಮಾಜಿಕ ಮಟ್ಟದಲ್ಲಿ ಜನರೊಂದಿಗೆ ನೀವು ಉತ್ತಮ ಸಂಬಂಧವನ್ನು ಹೊಂದುತ್ತೀರಿ. ಈ ರಾಶಿಚಕ್ರದ ವಿದ್ಯಾರ್ಥಿಗಳ ಬಗ್ಗೆ ಮಾತನಾಡಿದರೆ, ನೀವು ನಿಮ್ಮ ಗುರಿಗಳನ್ನು ಸಾಧಿಸಲು ಗಂಭೀರಗಾಗಿರುತ್ತೀರಿ ಮತ್ತು ಶಿಕ್ಷಣದ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ನಿರಂತರವಾಗಿ ಪ್ರಯತ್ನಸುತ್ತೀರಿ.

ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ತಂದೆಯೊಂದಿಗೆ ಯಾವುದೇ ರೀತಿಯ ವಿರೋಧಾಭಾಸವಿದ್ದರೆ, ಈ ಸಮಯದಲ್ಲಿ ಅದು ದೂರವಾಗಬಹುದು. ಆರೋಗ್ಯದ ಬಗ್ಗೆ ಎಚ್ಚರದಿಂದಿರುವ ಅಗತ್ಯವಿದೆ.

ಪರಿಹಾರ - ವಿವಾಹಿತ ಮಹಿಳೆಯರಿಗೆ ಅಲಂಕಾರದ ವಸ್ತುಗಳ ದಾನ ಮಾಡುವುದು ನಿಮಗೆ ಶುಭವಾಗಿರುತ್ತದೆ.

  1. ವೃಶ್ಚಿಕ ರಾಶಿ

ಶುಕ್ರ ಗ್ರಹವು ವೃಶ್ಚಿಕ ರಾಶಿಚಕ್ರದ ಸ್ಥಳೀಯರ ಒಂಬತ್ತನೇ ಮನೆಗೆ ಸಾಗುತ್ತದೆ. ಈ ಮನೆ ನಿಮ್ಮ ಧಾರ್ಮಿಕ ಪ್ರವೃತ್ತಿ, ಅದೃಷ್ಟ, ದೀರ್ಘಕಾಲದ ಪ್ರಯಾಣ ಇತ್ಯಾದಿಗಳ ಅಂಶವಾಗಿದೆ. ಒಂಬತ್ತನೇ ಮನೆಯಲ್ಲಿ ಶುಕ್ರನ ಸಂಚಾರದಿಂದಾಗಿ ನಿಮ್ಮ ಚಿತ್ರದಲ್ಲಿ ಸಕಾರಾತ್ಮಕ ಬದಲಾವಣೆ ಬರುತ್ತದೆ, ಆಧ್ಯಾತ್ಮಿಕ ಚಟುವಟಿಕೆಗಳನ್ನು ಮಾಡಲು ಹೆಚ್ಚು ಆಸಕ್ತಿ ವಹಿಸುತ್ತೀರಿ ಮತ್ತು ಜನರಿಗೆ ಸೇವೆ ಸಲ್ಲಿಸಲು ಮುಂದೆ ಬರುತ್ತೀರಿ. ಈ ಸಮಯದಲ್ಲಿ ಆಧ್ಯಾತ್ಮಿಕ ವಿಷಯಗಳನ್ನು ತಿಳಿದಿಕೊಳ್ಳಲು, ಈ ವಿಷಯಗಳ ಬಗ್ಗೆ ಉತ್ತಮ ಜ್ಞಾನ ಹೊಂದಿರುವ ವ್ಯಕ್ತಿಯನ್ನು ಸಹ ನೀವು ಭೇಟಿ ಮಾಡಬಹುದು.

ಅದೇ ಸಮಯದಲ್ಲಿ ಮತ್ತೊಂದೆಡೆ, ಈ ಸಮಯದಲ್ಲಿ ಕೆಲವು ಜನರು ತಮ್ಮ ಕುಟುಂಬದೊಂದಿಗೆ ಧಾರ್ಮಿಕ ಪ್ರಯಾಣಗಳಿಗೆ ಸಹ ಹೋಗಬಹುದು. ಕುಟುಮಬ ಜೀವನದ ಬಗ್ಗೆ ಮಾತನಾಡಿದರೆ, ವಾತಾವರಣ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ಮನೆಯ ಹಿರಿಯ ಸದ್ಯರೊಂದಿಗೆ ಸಮಯ ಕಳೆಯುವುದನ್ನು ನೀವು ಇಷ್ಟಪಡುತ್ತೀರಿ. ಈ ರಾಶಿಚಕ್ರದ ಉನ್ನತ ಶಿಕ್ಷಣವನ್ನು ಗಳಿಸುತ್ತಿರುವವರು, ತಮ್ಮ ಗುರುಗಳ ಸಹಾಯವನ್ನು ಪಡೆಯಬಹುದು.

ಕೆಲಸಕ್ಕೆ ಸಂಬಂಧಿಸಿದಂತೆ ದೀರ್ಘಕಾಲದ ಪ್ರಯಾಣಕ್ಕೆ ಹೋಗುವ ಈ ರಾಶಿಚಕ್ರದ ಜನರು ಈ ಸಮಯದಲ್ಲಿ ಲಾಭವನ್ನು ಪಡೆಯುತ್ತಾರೆ. ಅದೇ ಸಮಯದಲ್ಲಿ ಮತ್ತೊಂದೆಡೆ, ನಟನೆ, ಗಾಯನ, ನೃತ್ಯ ಇತ್ಯಾದಿಯಲ್ಲಿ ಶಿಕ್ಷಣವನ್ನು ಪಡೆಯುತ್ತಿರುವ ಜನರಿಗೂ ಈ ಸಮಯದಲ್ಲಿ ಲಾಭವಾಗುತ್ತದೆ. ಅಲ್ಲದೆ ಕಳೆಯ ಈ ಕ್ಷೇತ್ರಗಳಲ್ಲಿ ತಮ್ಮ ಅದೃಷ್ಟವನ್ನು ಬಯಸುವವರಿಗೆ, ಶುಕ್ರನ ಈ ಸಾಗಣೆಯು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.

ಪರಿಹಾರ - ಶುಕ್ರ ಬೀಜ ಮಂತ್ರವನ್ನು ಜಪಿಸುವುದು ನಿಮಗೆ ಶುಭವಾಗಿರುತ್ತದೆ.


ಜಾತಕದಲ್ಲಿರುವ ರಾಜಯೋಗದ ಎಲ್ಲಾ ಮಾಹಿತಿಯನ್ನು ಪಡೆಯಿರಿ
  1. ಧನು ರಾಶಿ

ಧನು ರಾಶಿಯ ಎಂಟನೇ ಮನೆಯಲ್ಲಿ ಶುಕ್ರ ಸಂಚಾರದಿಂದಾಗಿ ಈ ರಾಶಿಚಕ್ರದ ಸ್ಥಳೀಯರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಎಂಟನೇ ಮನೆಯ ಮೂಲಕ ನಿಮ್ಮ ಜೀವನದಲ್ಲಿ ಬರಲಾಗುವ ಅಡೆತಡೆಗಳು, ವಯಸ್ಸು, ಅಪಘಾತ ಇತ್ಯಾದಿಯ ಬಗ್ಗೆ ತಿಳಿಯಲಾಗುತ್ತದೆ. ಶುಕ್ರ ಸಂಚಾರದ ಸಮಯದಲ್ಲಿ ನಿಮ್ಮ ಶತ್ರುಗಳು ಸಕ್ರಿಯರಾಗಬಹುದು. ಆದ್ದರಿಂದ ನಿಮ್ಮ ಮುಖದ ಮುಂದೆ ನಿಮ್ಮ ಸ್ನೇಹಿತರಾಗಿ ಮತ್ತು ನಿಮ್ಮ ಬೆನ್ನಿನ ಹಿಂದೆ ನಿಮ್ಮ ವಿರುದ್ಧವಾಗಿ ಪಿತೂರಿ ರಚಿಸುವಂತಹ ಜನರಿಂದ ನೀವು ನಿಮ್ಮನ್ನು ತಪ್ಪಿಸಬೇಕು.

ನಿಮ್ಮ ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ಅಲ್ಲಿ ಕೂಡ ಒತ್ತಡದ ಪರಿಸ್ಥಿತಿ ಉಂಟಾಗಬಹುದು, ಹಿರಿಯ ಸಹೋದರ ಸಹೋದರಿಯರೊಂದಿಗೆ ವಿರೋಧಾಭಾಸವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ಅತಿಯಾಗಿ ಕೋಪಗೊಳ್ಳುವುದನ್ನು ತಪ್ಪಿಸಬೇಕು ಮತ್ತು ಸಂಬಂಧಗಳನ್ನು ಸುಧಾರಿಸುವತ್ತ ಕೆಲಸ ಮಾಡಬೇಕು. ವ್ಯಾಪಾರಸ್ಥರು ಮತ್ತು ವೃತ್ತಿಪರರು ಈ ಸಮಯದಲ್ಲಿ ಯಾವುದೇ ರೀತಿಯ ವಹಿವಾಟಿನ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ಈ ಸಂಚಾರದ ಸಮಯದಲ್ಲಿ ನೀವು ಯಾರಿಗೂ ಸಾಲವನ್ನು ನೀಡಬಾರದು ಇಲ್ಲದಿದ್ದರೆ ನಿಮ್ಮ ಹಣ ಮುಳುಗಬಹುದು.

ನಿಮ್ಮ ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ನಿಮಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಉಂಟಾಗಬಹುದು, ಆದ್ದರಿಂದ ನಿಮ್ಮ ಆಹಾರ ಪಾನೀಯಾದ್ ಬಗ್ಗೆ ವಿಶೇಷ ಕಾಳಜಿ ವಹಿಸಿ. ಈ ಸಮಯದಲ್ಲಿ ನಿಮ್ಮ ತಪ್ಪುಗಳಿಗೂ ಇತರರನ್ನು ತಪ್ಪು ಎಂದು ಸಾಬೀತುಪಡಿಸಲು ಪ್ರಯತ್ನಿಸಬಹುದು. ಈ ಕಾರಣದಿಂದಾಗಿ ಕುಟುಂಬ ಮತ್ತು ಸಾಮಾಜಿಕ ಜೀವನದಲ್ಲಿ ನೀವು ಬಿಕ್ಕಟ್ಟುಗಳನ್ನು ಎದುರಿಸಬೇಕಾಗಬಹುದು. ಮನಸ್ಸಿನ ಶಾಂತಿಗಾಗಿ ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕಾಗಿ ಈ ಸಮಯದಲ್ಲಿ ನೀವು ಯೋಗ ಧ್ಯಾನವನ್ನು ಆಶ್ರಯಿಸುವುದು ನಿಮಗೆ ಉತ್ತಮವಾಗಿರುತ್ತದೆ.

ಪರಿಹಾರ - ಲಲಿತ ಸಹಸ್ತ್ರನಾಮವನ್ನು ಪಠಿಸಿ, ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.

  1. ಮಕರ ರಾಶಿ

ಶುಕ್ರ ಗ್ರಹವು ಮಕರ ರಾಶಿಚಕ್ರದ ಏಳನೇ ಮನೆಗೆ ಸಾಗಲಿದೆ. ಈ ಮನೆಯ ಮೂಲಕ ನಿಮ್ಮ ಪಾಲುದಾರಿಕೆ ಮತ್ತು ವೈವಾಹಿಕ ಜೀವನದ ಬಗ್ಗೆ ಪರಿಗಣಿಸಲಾಗುತ್ತದೆ. ಶುಕ್ರನ ಈ ಸಂಚಾರವು ಆಭೂಷಣ ಮತ್ತು ಬಟ್ಟೆಯ ವ್ಯಾಪಾರದಲ್ಲಿ ತೊಡಗಿರುವ ಜನರಿಗೆ ಪ್ರಯೋಜನಕಾರಿಯಾಗುತ್ತದೆ. ಇದರೊಂದಿಗೆ ಕಳೆಯ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೂ ಈ ಸಂಚಾರದ ಸಮಯದಲ್ಲಿ ಪ್ರೌಯೋಜನವಾಗುತ್ತದೆ. ನಿಮ್ಮ ಸೃಜನಾತ್ಮಕ ಅರ್ಹತೆಯನ್ನು ಈ ಸಮಯದಲ್ಲಿ ಪ್ರಶಂಸಿಸಲಾಗುತ್ತದೆ. ಈ ರಾಶಿಚಕ್ರದ ಸ್ಥಳೀಯರ ವ್ಯಕ್ತಿತ್ವವು ಆಕರ್ಷಿತವಾಗಿರುತ್ತದೆ, ಈ ಕಾರಣದಿಂದಾಗಿ ಜನರು ನಿಮ್ಮತ್ತ ಆಕರ್ಷಿತರಾಗುತ್ತಾರೆ.

ಇನ್ನು ಒಬ್ಬಂಟಿಯಾಗಿರುವವರ ಜೀವನದಲ್ಲಿ ಒಬ್ಬ ವಿಶೇಷ ವ್ಯಕ್ತಿ ಬಾಗಿಲು ತಟ್ಟಬಹುದು. ನಿಮ್ಮ ದಾಂಪತ್ಯ ಜೀವನಕ್ಕೂ ಈ ಸಮಯ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿ ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಬಹುದು ಅಥವಾ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸಬಹುದು. ಅಂತಹ ಸಮಯದಲ್ಲಿ ಸಂಗಾತಿಯ ವಿಷಯಕ್ಕೆ ಪ್ರತಿಕ್ರಿಯೆ ನೀಡುವ ಮೊದಲು ಅದಕ್ಕೆ ಕಾರಣವೆಂದು ತಿಳಿಯಲು ಪ್ರಯತ್ನಿಸಿ. ಈ ರಾಶಿಚಕ್ರದ ಅನೇಕ ಸ್ಥಳೀಯರ ಆಸೆಗಳು ಈ ಸಮಯದಲ್ಲಿ ಈಡೇರಬಹುದು.

ಪರಿಹಾರ - ಮನೆ ಅಥವಾ ಕಚೇರಿಯಲ್ಲಿ ಶುಕ್ರ ಯಂತ್ರವನ್ನು ಸ್ಥಾಪಿಸುವುದರಿಂದ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.

  1. ಕುಂಭ ರಾಶಿ

ಸೌಂದರ್ಯದ ಅಂಶ ಶುಕ್ರ ಗ್ರಹವು ಕುಂಭ ರಾಶಿಯ ಆರನೇ ಮನೆಗೆ ಸಾಗಲಿದೆ. ಈ ಮನೆಯ ಮೂಲಕ ನಿಮ್ಮ ಶತ್ರು, ಕೊರತೆ, ವಿವಾದ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಶುಕ್ರನ ಈ ಸಂಚಾರವು ನಿಮ್ಮ ಅರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು. ಆದ್ದರಿಂದ ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ಈ ಸಮಯದಲ್ಲಿ ಹೆಚ್ಚು ಮಸಾಲೆಯುಕ್ತ ಆಹಾರ ಸೇವಿಸುವುದನ್ನು ತಪ್ಪಿಸಿ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಿ.

ಈ ರಾಶಿಯ ಜನರು ಕೆಲಸದ ಸ್ಥಳದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನೀವು ಮಾಡಲು ಸಾಧ್ಯವಾಗದ ಕೆಲಸವನ್ನು ನಿಮಗೆ ನೀಡುವ ಸಾಧ್ಯತೆ ಇದೆ. ಆದಾಗ್ಯೂ ನೀವು ನಿಮ್ಮ ಧೈರ್ಯವನ್ನು ಕಳೆದುಕೊಳ್ಳಬಾರದು ಮತ್ತು ನಿಮ್ಮ ಪರಿಶ್ರಮದ ಬಲದ ಮೇಲೆ ನೀವು ಎಲ್ಲಾ ರೀತಿಯ ಕೆಲಸವನ್ನು ಮಾಡಬಲ್ಲರು ಎಂದು ಸಾಬೀತುಪಡಿಸಲು ಪ್ರಯತ್ನಿಸಬೇಕು. ಇದರಿಂದ ಕೆಲಸದ ಸ್ಥಳದಲ್ಲಿ ನೀವು ನಿಮ್ಮ ಚಿತ್ರವನ್ನು ಸುಧಾರಿಸಬಹುದು.

ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ನಿಮ್ಮ ತಂದೆಯ ಕಳಪೆ ಆರೋಗ್ಯವು ನಿಮ್ಮ ಚಿಂತೆಗೆ ಕಾರಣವಾಗಬಹುದು. ಈ ರಾಶಿಚಕ್ರದ ಕೆಲವು ಸ್ಥಳೀಯರು ಈ ಸಮಯದಲ್ಲಿ ತಮ್ಮೊಳಗೆ ಕೊರತೆಯನ್ನು ಅನುಭವಿಸಬಹುದು, ಈ ಕಾರಣದಿಂದಾಗಿ ನಿಮ್ಮ ಪೂರ್ಣಗೊಳ್ಳುತ್ತಿದ ಕ್ಕೆಳಸವು ಸಹ ಹದಗೆಡಬಹುದು. ಈ ಸಮಯದಲ್ಲಿ ನೀವು ನಿಮ್ಮ ಶತ್ರುಗಳಿಂದ ಭಯಪಡುತ್ತೀರಿ. ಈ ಸಮಯದಲ್ಲಿ ನೀವು ಯಾವುದೇ ರೀತಿಯ ವಿವಾದದಲ್ಲಿ ಭಾಗವಹಿಸುವುದನ್ನು ತಪ್ಪಿಸಬೇಕು.

ಪರಿಹಾರ - ಶುಕ್ರವಾರದಂದು ಹಾಲಿನ ದಾನ ಮಾಡುವುದು ನಿಮಗೆ ಶುಭವಾಗಿರುತ್ತದೆ.

  1. ಮೀನಾ ರಾಶಿ

ಶುಕ್ರ ಗ್ರಹವು ಮೀನಾ ರಾಶಿಯ ಐದನೇ ಮನೆಗೆ ಪ್ರವೇಶಿಸಲಿದೆ. ಈ ಮನೆಯ ಮೂಲಕ ಮಕ್ಕಳು, ಶಿಕ್ಷಣ ಇತ್ಯಾದಿಯ ಬಗ್ಗೆ ಪರಿಗಣಿಸಲಾಗುತ್ತದೆ. ಶುಕ್ರನ ಈ ಸಂಚಾರವು ಮೀನಾ ರಾಶಿಚಕ್ರದ ಸ್ಥಳೀಯರಿಗೆ ಶುಭ ಫಲಿತಾಂಶವನ್ನು ನೀಡುತ್ತದೆ. ಈ ಸಂಚಾರದಿಂದ ವಿದ್ಯಾರ್ಥಿಗಳಿಗೆ ವಿಶೇಷ ಲಾಭವಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ಕಠಿಣ ವಿಷಯಗಳನ್ನು ಸಹ ಸುಲಭವಾಗಿ ಅರ್ಥಮಾಡಿಕೊಳ್ಳುವಿರಿ. ಅದೇ ಸಮಯದಲ್ಲಿ ಮತ್ತೊಂದೆಡೆ ಹಾಡುಗಾರಿಕೆ, ನುಡುಸುವಿಕೆ ಮುಂತದ ಸೃಜನಶೀಲ ಕೆಲಸಗಳನ್ನು ಮಾಡುವ ಜನರು ತಮ್ಮ ಹವ್ಯಾಸವನ್ನು ತಮ್ಮ ವೃತ್ತಿಯಾಗಿ ಪರಿವರ್ತಿಸಬಹುದು.

ಸಂಶೋಧನೆಯ ಕೆಲಸದಲ್ಲಿ ತೊಡಗಿರುವ ಈ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಕೂಡ ಶುಕ್ರನ ಈ ಸಂಚಾರವು ಶುಭವೆಂದು ಸಾಬೀತುಪಡಿಸುತ್ತದೆ. ಈ ರಾಶಿಚಕ್ರದ ಜನರು ಈ ಸಮಯದಲ್ಲಿ ಹೊಸ ಆಲೋಚನೆಗಳನ್ನು ಹೊಂದಿರುತ್ತಾರೆ, ಇದರ ಮೂಲಕ ನೀವು ಯಾವುದೇ ಹೊಸ ವಿಷಯವನ್ನು ಆರಂಭಿಸಬಹುದು. ಈ ಸಮಯದಲ್ಲಿ ನಿಮ್ಮ ಹವ್ಯಾಸವನ್ನು ಪೂರೈಸಲು ನೀವು ಪ್ರಯತ್ನಿಸುತ್ತೀರಿ. ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ ಈ ಸಮಯದಲ್ಲಿ ನಿಮ್ಮ ಮಕ್ಕಳ ಬದಿಯಿಂದ ಯಾವುದೇ ಶುಭ ಸುದ್ಧಿಯನ್ನು ನೀವು ಪಡೆಯಬಹುದು.

ಪ್ರೀತಿಯಲ್ಲಿರುವ ಮೀನಾ ರಾಶಿಚಕ್ರದ ಪ್ರೇಮಿಗಳಿಗೆ ಕೂಡ ಶುಕ್ರನ ಈ ಸಂಚಾರವು ಅನುಕೂಲಕರವಾಗಿರುತ್ತದೆ ಆದಾಗ್ಯೂ ಈ ಸಮಯದಲ್ಲಿ, ನೀವು ನಂತರ ಪೂರೈಸಲು ಸಾಧ್ಯವಾಗದಿರುವಂತಹ ಯಾವುದೇ ಭರವಸೆಯನ್ನುನಿಮ್ಮ ಪ್ರೀತಿಪಾತ್ರರಿಗೆ ನೀವು ನೀಡಬಾರದು. ಈ ರಾಶಿಚಕ್ರದ ಕೆಲವ್ರು ಧೈರ್ಯಶಾಲಿ ಕಾರ್ಯಗಳನ್ನು ಮಾಡಲು ಗಿರಿಧಾಮಕ್ಕೆ ಹೋಗಬಹುದು. ಒಟ್ಟಾರೆಯಾಗಿ ಮೀನಾ ರಾಶಿಚಕ್ರದ ಜನರು ಈ ಸಂಚಾರದ ಸಮಾಯ್ದಲ್ಲಿ ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ.

ಪರಿಹಾರ - ಶುಕ್ರವಾರದಂದು ಕ್ಯಾಸ್ಟರ್ನ್ ಮೂಲವನ್ನು ಧರಿಸುವುದರಿಂದ ನಿಮ್ಮಲ್ಲಿ ಸಕಾರಾತ್ಮಕತೆ ಬರುತ್ತದೆ.


ಯಂತ್ರ, ರತ್ನದ ಕಲ್ಲು ಇತ್ಯಾದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ ಆಸ್ಟ್ರೋಸೇಜ್ ಆನ್ಲೈನ್ ಶಾಪಿಂಗ್ ಸ್ಟೋರ್

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 399/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer