30 ಜೂನ್ ರಂದು ಗುರುವಿನ ಸಂಚಾರ ಮೀನಾ ರಾಶಿಯಲ್ಲಿ - Jupiter Transit in Sagittarius in Kannada
ಗುರು ಗ್ರಹವು ತನ್ನ ದುರದೃಷ್ಟದ ರಾಶಿಯಿಂದ ಹೊರಬಂದು ತನ್ನ ಮೂಲತ್ರಿಕೋಣ ಧನು ರಾಶಿಚಕ್ರದಲ್ಲಿ 30 ಜೂನ್ 2020 ರಂದು, ಸಾಯಂಕಾಲ 16:30 ಗಂಟೆಗೆ ಪ್ರವೇಶಿಸುತ್ತಾರೆ.ಈ ಸಮಯದಲ್ಲಿ ಗುರು ದೇವ ವಕ್ರ ವೇಗದಲ್ಲಿರುತ್ತಾರೆ. ಜ್ಯೋತಿಷ್ಯದ ಪ್ರಕಾರ, ಶುಭ ಗ್ರಹವು ತನ್ನ ವಕ್ರ ಸ್ಥಾನದಲ್ಲಿ ಇನ್ನೂ ಹೆಚ್ಚು ಶುಭ ಫಲಿತಾಂಶಗಳನ್ನು ನೀಡುತ್ತದೆ ಎಂದು ಪರಿಗಣಿಸಲಾಗಿದೆ. ಧನು ರಾಶಿಯಲ್ಲಿ ಗುರು ಗ್ರಹವು 20 ನವೆಂಬರ್ 2020 ಬೆಳಿಗ್ಗೆ 06:26 ನಿಮಿಷದ ವರೆಗೆ ಇರುತ್ತಾರೆ. ಅದರ ನಂತರ ಮಕರ ರಾಶಿಯಲ್ಲಿ ಹಾದುಹೋಗುತ್ತಾರೆ. ನಡೆಯಿರಿ ವಿವಿಧ ಚಂದ್ರ ರಾಶಿಗಳಿಗೆ ಗುರು ಸಂಚಾರವು ಹೇಗಿರುತ್ತದೆ ಎಂದು ತಿಳಿಯೋಣ.
ಜೀವನದಲ್ಲಿನ ಯಾವುದೇ ರೀತಿಯ ಸಮಸ್ಯೆಗಳ ನಿವಾರಣೆಗಾಗಿ ಜ್ಯೋತಿಷಿಯರನ್ನು ಪ್ರಶ್ನೆ ಕೇಳಿ
ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ತಿಳಿಯಿರಿ ನಿಮ್ಮ ಚಂದ್ರ ರಾಶಿ
- ಮೇಷ ರಾಶಿಚಕ್ರ
ಮೇಷ ರಾಶಿಚಕ್ರದ ಸ್ಥಳೀಯರಿಗೆ ಗುರುವಿನ ವಕ್ರ ಸಂಚಾರವು ಬಹಳಷ್ಟು ಶುಭವಾಗಿರಲಿದೆ, ನೀವು ನಕಾರಾತ್ಮಕ ಆಲೋಚನೆಗಳಿಂದ ಮುಕ್ತಿ ಪಡೆದು ಸಕಾರಾತ್ಮಕತೆಯ ದಿಕ್ಕಿನಲ್ಲಿ ಮುಂದುವರಿಯಬಹುದು.
ವೃತ್ತಿಯಲ್ಲಿ ತೊಡಗಿರುವ ಜನರು ಅನೇಕ ಅವಕಾಶಗಳನ್ನು ಪಡೆಯುತ್ತಾರೆ, ಇದರೊಂದಿಗೆ ನಿಮ್ಮ ನಿರ್ವಹಣಾ ಸಾಮರ್ಥ್ಯವು ಕೂಡ ಹೆಚ್ಚಾಗುತ್ತದೆ. ಹಿರಿಯ ಅಧಿಕಾರಿಗಳೊಂದಿಗೆ ನಿಮ್ಮ ಅಸ್ತವ್ಯಸ್ತತೆ ಏನೇ ಇರಲಿ ಅದು ಕೊನೆಗೊಳ್ಳುವ ಕಡೆಗೆ ಮುಂದುವರಿಯುತ್ತದೆ. ನಿಮ್ಮ ಮೇಲೆ ನಿಮ್ಮ ವಿಶ್ವಾಸವು ಬಲಗೊಳ್ಳುತ್ತದೆ, ಇದರಿಂದ ನೀವೇ ಸ್ವತಃ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಾಮರ್ಥ್ಯರಗುವಿರಿ. ಗುರುವಿನ ದುರದೃಷ್ಟದ ಸ್ಥಿತಿಯಲ್ಲಿರುವ ಕಾರಣದಿಂದಲೂ ಇದು ಮೇಷ ರಾಶಿಚಕ್ರದ ಸ್ಥಳೀಯರ ಸ್ವಭಾವದ ಅಂತರ್ಗತ ಗುಣವಾಗಿದೆ.
ವಕ್ರ ಗುರುವಿನ ಈ ಸ್ಥಿತಿಯಲ್ಲಿ, ಆಧ್ಯಾತ್ಮಿಕತೆಯ ಕಡೆಗೆ ನಿಮ್ಮ ಒಲವು ಹೆಚ್ಚಾಗುತ್ತದೆ. ಇದರಿಂದ ನಿಮ್ಮೊಂದಿಗೆ ನೀವು ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮನ್ನು ಕಾಡುತ್ತಿದ್ದ ನಿಮ್ಮ ಹಿಂದಿನ ಭಾವನೆಗಳಿಂದ ಹೊರಬರಲು ನಿಮಗೆ ಸಹಾಯಕ ಸಿದ್ಧವಾಗುತ್ತದೆ. ಇದರಿಂದ ನೀವು ಆರೋಗ್ಯದ ಲಾಭವನ್ನು ಸಹ ಪಡೆಯುತ್ತೀರಿ ಮತ್ತು ನಿಮ್ಮ ಆಲೋಚನಾ ಪ್ರಕ್ರಿಯೆಯೂ ಸ್ಪಷ್ಟವಾಗಿರುತ್ತದೆ, ಅದರಿಂದ ಹೊಸ ದಿಕ್ಕಿನ ಕಡೆಗೆ ಮುಂದುವರಿಯಲು ಸಹಾಯ ಸಿಗುತ್ತದೆ. ಪ್ರಯಾಣಗಳಲ್ಲಿ ಕೂಡ ಲಾಭವಾಗುತ್ತದೆ.
ವಿದ್ಯಾಥಿಗಳಿಗೆ ಕೂಡ ಈ ವಕ್ರ ಸಂಚಾರವು ಒಳ್ಳೆಯ ಸುದ್ಧಿಯನ್ನು ತರುತ್ತದೆ. ಉನ್ನತ ಶಿಕ್ಷಣದಲ್ಲಿ ಬರುತ್ತಿದ್ದ ಅಡ್ಡಿಗಳು ಕೊನೆಗೊಳ್ಳಲು ಪ್ರಾರಂಭಿಸುತ್ತವೆ. ಆದ್ದರಿಂದ ನಿಮ್ಮ ಪ್ರಯತ್ನಗಳಲ್ಲಿ ಪ್ರಾಮಾಣಿಕರಾಗಿದ್ದರೆ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ.
ಪರಿಹಾರ - ಗುರುವಾರದ ಉಪವಾಸ ಮತ್ತು ಗುರುವಾರದಂದು ಕೇಸರಿ ತಿಲಕವನ್ನು ಹಣೆ ಮತ್ತು ಹೊಕ್ಕುಳದ ಮೇಲೆ ಹೆಚ್ಚಿಸುವುದು ಸಾಕಷ್ಟು ಶುಭವಾಗಿರುತ್ತದೆ.
- ವೃಷಭ ರಾಶಿಚಕ್ರ
ವೃಷಭ ರಾಶಿಚಕ್ರದ ಸ್ಥಳೀಯರಿಗೆ ವಕ್ರ ಗುರುವಿನ ಸಂಚಾರವು ಮಿಶ್ರ ಫಲಿತಾಂಶಗಳನ್ನು ತರುತ್ತದೆ. ಗುರುವು ನಿಮ್ಮ ಒಂಬತ್ತನೇ ಮನೆಯಿಂದ ಮತ್ತೆ ನಿಮ್ಮ ಎಂಟನೇ ಮನೆಗೆ ಸಂಚರಿಸುತ್ತದೆ.
ಈ ಸಂಚಾರವು ಬದಲಾವಣೆಯೊಂದಿಗೆ ಅನಿಶ್ಚಿತತೆಯ ಕಡೆಗೆ ಸೂಚಿಸುತ್ತಿದೆ.ಇದರಿಂದ ನೀವು ಸ್ವಲ್ಪ ಅಸಮಾಧಾನ ಮತ್ತು ಚಿಂತೆಯನ್ನು ಅನುಭವಿಸುತ್ತೀರಿ, ಭವಿಷ್ಯದ ಬಗ್ಗೆಯೂ ಸ್ವಲ್ಪ ಆಂತಕವನ್ನುಂಟು ಮಾಡುತ್ತದೆ ಏಕೆಂದರೆ ಸಣ್ಣ ವಿಷಯಗಳನ್ನು ದೊಡ್ಡದಾಗಿ ತೋರಿಸುವುದು ಗುರು ಗ್ರಹದ ಅಂತರ್ಗತ ಗುಣವಾಗಿದೆ. ಆದ್ದರಿಂದ ಆರಂಭದಲ್ಲಿ ಯಾವುದೇ ಬದಲಾವಣೆಗೆಳು ನಿಮ್ಮನ್ನು ವಿಚಲಿತಗೊಳಿಸಬಹುದು. ಆದರೆ ಈಸಮಯವೂ ನಿಮಗೆ ಒಳ್ಳೆಯದು ಎಂದು ನೀವು ಅರ್ಥಮಾಡಿಕೊಳ್ಳಬೇಕು. ಏಕೆಂದರೆ ಅದು ನಿಮ್ಮನ್ನು ಆತ್ಮಾವಲೋಕನ ಮಾಡಲು ಮತ್ತು ನಿಮ್ಮನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ನಿಮ್ಮಲ್ಲಿ ಏನು ಕೊರತೆಯಿದೆ, ನೀವು ಸರಿಯಾದ ದಿಕ್ಕು ಪಡೆಯಲು ಮತ್ತು ಮುಂದುವರಿಯಲು ಏನು ಮಾಡುವ ಅಗತ್ಯವಿದೆ ಎಂಬುದನ್ನು ತಿಳಿಯಲು ಈ ಸಮಯದಲ್ಲಿ ನಿಮಗೆ ಸಹಾಯ ಸಿಗುತ್ತದೆ. ಇದರಿಂದ ನೀವು ನಿಮ್ಮ ವೃತ್ತಿಪರ ಮತ್ತು ಕುಟುಂಬ ಸಂಬಂಧಗಳನ್ನು ಅರ್ಥಮಾಡಿಕೊಳ್ಳಲು ಸಹ ನಿಮಗೆ ಸಹಾಯ ಸಿಗುತ್ತದೆ. ವೃತ್ತಿಪರರು ಈ ಸಮಯವನ್ನು ಸಂಶೋಧನಾ ಕಾರ್ಯಗಳಲ್ಲಿ, ಅವರ ಅಭ್ಯಾಸದಲ್ಲಿ,ತಮ್ಮ ಕೌಶಲ್ಯಗಳನ್ನು ಹೆಚ್ಚಿಸುವಲ್ಲಿ ಬಳಸಬೇಕು, ಇದರಿಂದ ಅವರಿಗೆ ಹೊಸ ಮರ್ಗಳು ತೆರೆಯುತ್ತವೆ. ಇದಲ್ಲದೆ ಆಕಸ್ಮಿಕ ಪ್ರಯೋಜನಗಳನ್ನು ಸಹ ಪಡೆಯಬಹುದು.
ಪರಸ್ಪರ ಸಂಬಂಧಗಳಲ್ಲಿ ಸ್ವಲ್ಪ ಒತ್ತಡದ ಪರಿಸ್ಥಿತಿ ಇರಬಹುದು, ಆದರೆ ನಿಮ್ಮ ಜೀವನದಲ್ಲಿ ಯಾವುದೇ ವಿಷಯ ಅಥವಾ ಅನಗತ್ಯವಾಗಿದ್ದ ವ್ಯಕ್ತಿ, ಸ್ವಯಂಚಾಲಿತವಾಗಿ ನಿಮ್ಮಿಂದ ದೂರವಾಗುತ್ತಾರೆ ಎಂಬುದನ್ನು ಕಲಿಸಲು ಈ ವಕ್ರ ಗುರುವಿನ ಸಂಚಾರವು ಬಂದಿದೆ. ಇದನ್ನು ನೀವು ಅರ್ಥಮಾಡಿಕೊಂಡರೆ, ಬಾಂಧವ್ಯದಿಂದ, ಭಾವನಾತ್ಮಕ ಬಾಂಧವ್ಯದಿಂದ ದೂರವಿರಲು ಮತ್ತು ಹೊರಬರಲು ನೀವು ಸಹಾಯವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ಗೂಢ ವಿಷಯಗಳನ್ನು ತಿಳಿದಿಕೊಳ್ಳಲು ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ಯಾವುದೇ ವಿಷಯವನ್ನು ಅದರ ಆಧಾರಭೂತ ಮತ್ತು ಮೂಲದಿಂದ ಅರ್ಥಮಾಡಿಕೊಳ್ಳಲು ಇದು ಉತ್ತಮ ಸಮಯ. ಹಾಗೆ ಮಾಡುವ ವಿದ್ಯಾರ್ಥಿಗಳು ಮುಂದುವರಿಯಲು ಸಹಾಯ ಪಡೆಯುತ್ತಾರೆ. ಆರೋಗ್ಯದ ವಿಷಯದಲ್ಲಿ ಸ್ವಲ್ಪ ಎಚ್ಚರದಿಂದಿರುವ ಅಗತ್ಯವಿದೆ. ಹೊಟ್ಟೆ ಅಥವಾ ಹೊಟ್ಟೆಯ ಕೆಳಗಿನ ಭಾಗಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು.
ಪರಿಹಾರ - ಲಲಿತಾ ಸಹಸ್ತ್ರನಾಮವನ್ನು ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ಜಪಿಸುವುದು ಅತ್ಯಂತ ಶುಭ ಫಲಿತಾಂಶಗಳನ್ನು ನೀಡುತ್ತದೆ.
- ಮಿಥುನ ರಾಶಿಚಕ್ರ
ಈ ಸಮಯ ಸಂಚಾರವು ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಸಾಕಷ್ಟು ಶುಭವಾಗಿರುತ್ತದೆ. ವಕ್ರ ಗುರುವು ನಿಮ್ಮ ಎಂಟನೇ ಮನೆಯಿಂದ ಮತ್ತೆ ನಿಮ್ಮ ಏಳನೇ ಮನೆಯಲ್ಲಿ ಸಾಗಾಣಿಸುತ್ತದೆ. ಪರಿಣಾಮವಾಗಿ ಸಂಬಂಧಗಳಲ್ಲಿ ಸಾಮರಸ್ಯವನ್ನು ಉಳಿಸಿಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ. ಪ್ರೀತಿ ಸಂಬಂಧದಲ್ಲಿ ಯಾವುದೇ ರೀತಿಯ ಸವಾಲುಗಳನ್ನು ಎದುರಿಸುತ್ತಿದ್ದರೆ, ನಿಮ್ಮ ಸಂಬಂಧವನ್ನು ಸುಧಾರಿಸುವಲ್ಲಿ ಸಹಾಯ ಪಡೆಯುತ್ತೀರಿ. ಮದುವೆಗೆ ಕಾಯುತ್ತಿದ್ದ ಸ್ಥಳೀಯರು ಈ ಸಮಯದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು.
ವ್ಯಾಪಾರ / ವೃತ್ತಿಪರ ಜೀವನದಲ್ಲಿ ಬರುತ್ತಿದ್ದ ಸಮಸ್ಯೆಗಳ ನಿವಾರಣೆ ಸಿಗಲು ಆರಂಭವಾಗುತ್ತದೆ, ಹೊಸ ಮಾರ್ಗಗಳು ಸಿಗಲು ಆರಂಭಿಸುತ್ತವೆ. ಕೆಲಸದ ಸ್ಥಳದಲ್ಲಿ ಸ್ಥಿರತೆಯ ಕಡೆಗೆ ಮುಂದುವರಿಯುತ್ತೀರಿ. ನಿಮ್ಮ ಧೈರ್ಯ ಮತ್ತು ಸಾಹಸದಲ್ಲಿ ಹೆಚ್ಚಳವಾಗುತ್ತದೆ, ಇದರ ಮೂಲಕ ಅನಿಶ್ಚಿತತೆಯಿಂದ ಹೊರಬರಲು ಸಾಧ್ಯವಾಗುತ್ತದೆ. ವಿಚಾರಗಳು ಮತ್ತು ಮಾಹಿತಿಯನ್ನು ಉತ್ತಮವಾಗಿ ವಿನಿಮಯ ಮಾಡಿಕೊಳ್ಳುವುದು ಮಿಥುನ ರಾಶಿಯ ನೈಸರ್ಗಿಕ ಗುಣವಾಗಿದೆ. ಆದ್ದರಿಂದ ಈ ಸಂಚಾರದ ಸಮಯದಲ್ಲಿ ನೀವು ಎಷ್ಟು ಹೆಚ್ಚು ಜನರೊಂದಿಗೆ ಭೇಟಿಯಾಗುತ್ತಿರೋ, ಅಷ್ಟೇ ಉತ್ತಮ ಅವಕಾಶಗಳನ್ನು ಪಡೆಯುತ್ತೀರಿ ಮತ್ತು ಅಷ್ಟೇ ನೀವು ನಿಮ್ಮ ಆದಾಯವನ್ನು ಹೆಚ್ಚಿಸಲು ಸಹಾಯ ಪಡೆಯುತ್ತೀರಿ. ಈ ವಕ್ರ ಸಂಚಾರವು ನಿಮ್ಮ ಕೌಶಲ್ಯಗಳನ್ನು ತೋರಿಸಲು ನಿಮಗೆ ಉತ್ತಮ ವೇದಿಕೆಯನ್ನು ನೀಡುತ್ತದೆ, ಆದ್ದರಿಂದ ಯಾವುದೇ ಅವಕಾಶವನ್ನು ಕೈಯಿಂದ ಹೋಗಲು ಬಿಡಬೇಡಿ.
ತಂದೆಯೊಂದಿಗಿನ ಸಂಬಂಧಲ್ಲಿ ಬಲ ಬರುತ್ತದೆ, ವೃತ್ತಿಪರ ಜೀವನದಲ್ಲಿ ಒಬ್ಬ ದೊಡ್ಡ ವ್ಯಕ್ತಿಯೊಂದಿಗೆ ಭೇಟಿ ಮತ್ತು ಅವರ ಸಲಹೆ ಜೀವನವನ್ನು ಹೊಸ ದಿಕ್ಕಿನ ಕಡೆಗೆ ತಿರುಗಿಸಬಹುದು. ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ಸಂಚಾರವು ಶುಭವಾಗಿರುತ್ತದೆ, ಆದರೂ ನಿಮ್ಮ ಆಹಾರ ಪಾನೀಯದ ಬಗ್ಗೆ ಅಜಾಗರೂಕತೆಯನ್ನು ವಹಿಸಬೇಡಿ, ಇಲ್ಲದಿದ್ದರೆ ದೇಹದ ತೂಕ ಹೆಚ್ಚಳದಂತಹ ಸಮಸ್ಯೆಗಳು ಸಂಭವಿಸಬಹುದು. ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಈ ವಕ್ರ ಗುರುವಿನ ಸಂಚಾರವು ಸಾಕಷ್ಟು ಅನುಕೂಲಕರ ಫಲಿತಾಂಶಗಳನ್ನು ತರುತ್ತದೆ, ಆದ್ದರಿಂದ ನಿಮ್ಮ ಪ್ರಯತ್ನಗಳನ್ನು ನಿರಂತರವಾಗಿ ಮುಂದುವರಿಸಿ.
ಪರಿಹಾರ - ವಿಷ್ಣು ಸಹಸ್ತ್ರನಾಮವನ್ನು ಜಪಿಸುವುದು ನಿಮಗೆ ಬಹಳ ಶುಭವಾಗಿರುತ್ತದೆ.
- ಕರ್ಕ ರಾಶಿಚಕ್ರ
ಗುರುವಿನ ಈ ವಕ್ರ ಸಂಚಾವು ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಮಿಶ್ರ ಪರಿಣಾಮಗಳನ್ನು ನೀಡುತ್ತದೆ. ಈ ಸಂಚಾರವು ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಅಡೆತಡೆಗಳನ್ನು ಉಂಟುಮಾಡುತ್ತದೆ, ಆದರೆ ಇದರೊಂದಿಗೆ ನಿಮ್ಮ ಧೈರ್ಯದ ಪ್ರವೃತ್ತಿ ಮತ್ತು ಯುದ್ಧದ ಸ್ವಭಾವವನ್ನು ಸಹ ಹೆಚ್ಚಿಸುತ್ತದೆ, ಇದು ಈ ಅಡೆತಡೆಗಳನ್ನು ನಿಮಗೆ ಸಹಾಯಕವಾಗಿರುತ್ತದೆ.
ಉದ್ಯೋಗಗಳು, ನಿರ್ವಹಣಾ ಕ್ಷೇತ್ರ, ಬೋಧನೆ, ಶಿಕ್ಷಕರು ಅಥವಾ ಸಲಹಾ ವೃತ್ತಿಯಲ್ಲಿ ತೊಡಗಿರುವ ಸ್ಥಳೀಯರಿಗೆ ಗುರುವಿನ ಈ ವಕ್ರ ಸಂಚಾರವು ಅನುಕೂಲಕರವಾಗಿರುತ್ತದೆ ಅಥವಾ ತಮ್ಮ ಕೌಶಲ್ಯಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡುತ್ತಿರುವವರು ಉತ್ತಮ ಯಶಸ್ಸು ಪಡೆಯುತ್ತಾರೆ. ವ್ಯಾಪಾರದಲ್ಲಿ ತೊಡಗಿರುವ ಸ್ಥಳೀಯರು ತಮ್ಮ ಸಂಪನ್ಮೂಲಗಳಿಗೆ ಅನುಗುಣವಾಗಿ ಮಾತ್ರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು, ಯಾವುದೇ ರೀತಿಯ ಲೋನ್ ಅಥವಾ ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನೀವು ಅದೃಷ್ಟವನ್ನು ಆಶ್ರಯಿಸಬಾರದು, ನಿಮ್ಮ ಕೌಶಲ್ಯಗಳನ್ನು ನಂಬಬೇಕು ಎಂಬುದು ಈ ಸಾರಿಗೆಯ ಸಂದೇಶವಾಗಿದೆ.
ಕುಟುಂಬ ಜೀವನದಲ್ಲೂ ಸ್ವಲ್ಪ ಸಾಮರಸ್ಯವನ್ನು ಹೆಚ್ಚಿಸಲು ಸಹಾಯ ಪಡೆಯುತ್ತೀರಿ. ಕುಟುಂಬದಲ್ಲಿ ಒಬ್ಬ ಹೊಸ ಅತಿಥಿ ಬರಬಹುದು. ವಿದ್ಯಾರ್ತಿಗಳಿಗೆ ಗುರುವಿನ ಈ ವಕ್ರ ಸಂಚಾರವು ಅನುಕೂಲಕರವಾಗಿರುತ್ತದೆ. ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಮಾಡುತ್ತಿರುವವರಿಗೆ ಈ ಸಂಚಾರವು ಉತ್ತಮವಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ ಈ ಸಂಚಾರವು ನಿಮ್ಮನ್ನು ಸ್ವಲ್ಪ ತೊಂದರೆಗೊಳಿಸಬಹುದು.ವಿಶೇಷವಾಗಿ ಒಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಆದ್ದರಿಂದ ನಿಮ್ಮ ಆಹಾರ ಪಾನೀಯದ ಬಗ್ಗೆ ವಿಶೇಷ ಗಮನ ಹರಿಸಿ. ಇದಕ್ಕಿಂತ ಹೆಚ್ಚಾಗಿ ನಕಾರಾತ್ಮಕತೆಯಿಂದ ಎಷ್ಟು ದೂರವಿರುತ್ತಿರೋ ಅಷ್ಟೇ ಉತ್ತಮ ಆರೋಗ್ಯದ ಲಾಭವನ್ನು ಪಡೆಯುತ್ತೀರಿ.ವ್ಯಾಯಾಮ ಯೋಗ ಇತ್ಯಾದಿಗಳನ್ನು ದಿನಚರಿಯಲ್ಲಿ ಸೇರಿಸಿ, ಇದರಿಂದ ನೀವು ತುಂಬಾ ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ಪರಿಹಾರ - ದೇವಿಯ ಯಾವುದೇ ಸ್ವರೂಪವನ್ನು ಪೂಜಿಸಿದರೆ ನಿಮಗೆ ಉತ್ತಮ ಫಲಿತಾಂಶವನ್ನು ಒದಗಿಸುತ್ತದೆ.
- ಸಿಂಹ ರಾಶಿ
ಈ ವಕ್ರ ಗುವುವಿನ ಸಂಚಾರವು ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಅನುಕೂಲಕರ ಪರಿಣಾಮಗಳನ್ನು ತರಲಿದೆ. ಈ ಸಮಯವೂ ಹೊಸ ಯೋಜನೆಗಳನ್ನು ಮಾಡಲು ಮತ್ತು ಅವುಗಳನ್ನು ಕಾರ್ಯಗತಗೊಳಿಸಲು ಅತ್ಯಂತ ಶುಭವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ನಿರ್ವಹಣಾ ಸಾಮರ್ಥ್ಯವು ಉತ್ತುಂಗದಲ್ಲಿರುತ್ತದೆ. ನಿಮ್ಮ ಬುದ್ಧಿವಂತಿಕೆಯ ಸಾಮರ್ಥ್ಯ, ನಿರ್ಧಾರ ತೆಗೆದುಕ್ಳ್ಳುವಿಕೆಯು ಸ್ಪಷ್ಟವಾಗಿರುತ್ತದೆ. ಈ ಖಾರಾದಿಂದಾಗಿ ಜನರು ಪ್ರಮುಖ ವಿಷಯಗಳ ಕುರಿತ ಸಲಹೆ ಪಡೆಯಲು ನಿಮ್ಮ ಬಳಿಗೆ ಬರುತ್ತಾರೆ ಮತ್ತು ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನೀವು ಸಕಾರಾತ್ಮಕತೆಯಿಂದ ತುಂಬಿರುತ್ತೀರಿ ಮತ್ತು ಕ್ರಿಯಾತ್ಮಕತೆ ಹೆಚ್ಚಾಗುತ್ತದೆ, ಆದರಿಂದ ಈ ಸಮಯದಲ್ಲಿ ನಿಮ್ಮ ಅಪೂರ್ಣ ಕಾರ್ಯ ಏನೇ ಇದ್ದರೂ ಅದನ್ನು ಪೂರ್ಣಗೊಳಿಸಿ. ಈ ಸಮಯ ದಲ್ಲಿ ನಿಮ್ಮ ಹಾದಿಯಲ್ಲಿ ಬರುತ್ತಿದ್ದ ಅಡೆತಡೆಗಳು ದೂರವಾಗುತ್ತವೆ ಮತ್ತು ಹೊಸ ಅವಕಾಶಗಳನ್ನು ಪಡೆಯುತ್ತೀರಿ. ಉದ್ಯೋಗದಲ್ಲಿರುವವರು ತಮ್ಮ ಉದ್ಯೋಗದಲ್ಲಿ ಬದಲಾವಣೆಯನ್ನು ಬಯಸುತ್ತಿದ್ದರೆ, ಅವರು ಉತ್ತಮ ಸ್ಥಳದಲ್ಲಿ ಹೊಸ ಅವಕಾಶವನ್ನು ಪಡೆಯಬಹುದು.
ಪ್ರೀತಿ ಜೀವನಕ್ಕೆ ಈ ವಕ್ರ ಸಂಚಾರವು ತುಂಬಾ ಶುಭವಾಗಿರುತ್ತದೆ, ನೀವು ಹೊಸ ಸಂಬಂಧವನ್ನು ಹೊಂದಲು ಬಯಸಿರಿ ಅಥವಾ ಹಳೆಯ ಸಂಬಂಧವನ್ನು ಸುಧಾರಿಸಲು ಬಯಸಿರಿ, ಪರಿಸ್ಥಿತಿಗಳು ನಿಮಗೆ ಅನುಕೂಲಕರವಾಗಿರುತ್ತವೆ. ಮಕ್ಕಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಬರುತ್ತಿದ್ದ ಸಮಸ್ಯೆಗಳು ದೂರವಾಗುತ್ತವೆ. ಈ ಸಮಯವೂ ವಿದ್ಯಾರ್ಥಿಗಳಿಗೆ ಶುಭ ಸುದ್ಧಿಯನ್ನು ತರುತ್ತದೆ, ಉನ್ನತ ಶಿಕ್ಷಣದಲ್ಲಿ ಬರುತ್ತಿದ್ದ ಬಿಕ್ಕಟ್ಟುಗಳು ದೂರವಾಗುತ್ತವೆ, ಸಂಶೋಧನಾ ವಿಷಯಕ್ಕೆ ಸಂಬಧಿಸಿದ ವಿಧ್ಯಾರ್ಥಿಗಳು ಬಹಳ ಉತ್ತಮ ಯಶಸ್ಸು ಪಡೆಯುತ್ತಾರೆ. ಅಧ್ಯಾತ್ಮ ಅಥವಾ ಗೂಢ ವಿಷಯಗಳಂತಹ ಜ್ಯೋತಿಷ್ಯ ವಿಷಯಗಳ ಬಗ್ಗೆ ನಿಮ್ಮ ಸಾಕಷ್ಟು ಆಸಕ್ತಿ ಹೆಚ್ಚಾಗುತ್ತದೆ, ಹೊಸದನ್ನು ಕಲಿಯಲು ಕುತೂಹಲ ಇರುತ್ತದೆ.
ಆರೋಗ್ಯದ ದೃಷ್ಟಿಯಿಂದಲೂ ಈ ಸಮಯವು ಉತ್ತಮವಾಗಿರುತ್ತದೆ, ವಕ್ರ ಗುರುವಿನ ದೃಷ್ಟಿ ರಕ್ಷಣಾ ಗುರಾಣಿಯಾಗಿ ಕಾರ್ಯನಿರ್ವಹಿಸುತ್ತದೆ, ಆದರೆ ನೀವು ನಿಮ್ಮ ಆಹಾರ ಪಾನೀಯ ಮತ್ತು ವ್ಯಾಯಾಮದ ಬಗ್ಗೆ ಗಮನ ಹರಿಸಬೇಕು. ಏಕೆಂದರೆ ಈ ಸಮಯದಲ್ಲಿ ನಿಮ್ಮ ತೂಕ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಈ ಸಮಯದಲ್ಲಿ ನೀವು ಇನ್ನೊಂದು ವಿಷಯದ ಬಗ್ಗೆ ಜಾಗರೂಕರಾಇರ್ಬೇಕು, ಅದೇನೆಂದರೆ ನಿಮ್ಮ ಅಹಂ ಭಾವನೆ. ಏಕೇದರೆ ನಿಮಗೆ ಎಲ್ಲವೂ ತಿಳಿದಿದೆ ಎಂದು ನೀವು ಭಾವಿಸಬಹುದು ಮತ್ತು ಅಲ್ಲೇ ನೀವು ತಪ್ಪು ಮಾಡುತ್ತೀರಿ.
ಪರಿಹಾರ - ಸೂರ್ಯ ದೇವರಿಗೆ ನೀರು ಅರ್ಪಿಸುವುದು, ಸೂರ್ಯಾಸ್ತಕಮ್ ಅನ್ನು ಪಠಿಸುವುದು ನಿಮಗೆ ತುಂಬಾ ಶುಭವಾಗಿರುತ್ತದೆ.
- ಕನ್ಯಾ ರಾಶಿಚಕ್ರ
ಕನ್ಯಾ ರಾಶಿಚಕ್ರಕ್ಕೆ ಈ ವಕ್ರ ಗುರುವಿನ ಸಂಚಾರವು ಉತ್ತಮ ಪರಿಣಾಮಗಳನ್ನು ತರುತ್ತದೆ. ಈ ಸಂಚಾರವು ನಿಮ್ಮ ಐದನೇ ಮನೆಯಿಂದ ನಿಮ್ಮ ನಾಲ್ಕನೇ ಮನೆಯಲ್ಲಿರುತ್ತದೆ. ಈ ಐದನೇ ಮನೆಯಲ್ಲಿ ಶನಿ ದೇವರೊಂದಿಗೆ ಕುಳಿತಿರುತ್ತಾರೆ.
ಗುರುವು ತಮ್ಮ ವಕ್ರ ಸ್ಥಾನದಲ್ಲಿದ್ದು ನಿಮಗೆ ಪರಿಹಾರವನ್ನು ತಂದಿದ್ದಾರೆ. ನೀವು ನಿಮ್ಮ ಸಾಮಾನ್ಯ ಜೀವನವಾಗಲಿ ಅಥವಾ ನಿಮ್ಮ ಕೆಲಸದ ಕ್ಷೇತ್ರವಾಗಲಿ ನೀವು ನಿಮ್ಮ ಪ್ರಯತ್ನಗಳನ್ನು ಮಾಡುತ್ತಿರುತ್ತೀರಿ. ನೀವು ಮನಸ್ಸಿನ ಶಾಂತಿ ಪಡೆಯುವ ಸ್ಥಳಗಳಲ್ಲಿ, ನೀವು ಸಂತೋಷ ಮತ್ತು ಆನಂದವನ್ನು ಅನುಭವಿಸುವ ಸ್ಥಳಗಳಲ್ಲಿ ಮಾತ್ರ ಕೆಲಸ ಮಾಡುತ್ತೀರಿ ಎಂದು ಇದು ಸೂಚಿಸುತ್ತದೆ. ಈ ಸಂಚಾರವು ನಿಮ್ಮ ಸಂತೋಷ ಸಂಪನ್ಮೂಲಗಳನ್ನು ಹೆಚ್ಚಿಸುತ್ತದೆ. ಹೊಸ ವಾಹನ ಅಥವಾ ಮನೆಯನ್ನು ಪಡೆಯುವ ಸಾಧ್ಯತೆ ಇದೆ. ಹಳೆಯ ಆಸ್ತಿಯ ಬಾಕಿ ಇರುವ ಪ್ರಕರಣಗಳನ್ನು ಪರಿಹರಿಸಲಾಗುತ್ತದೆ.
ಗುರುವಿನ ಈ ವಕ್ರ ಸಂಚಾರದ ಸಮಯವು ಅಧ್ಯಾತ್ಮ, ಮೆಡಿಟೇಶನ್, ಯೋಗದ ಮೂಲಕ ನಿಮ್ಮನ್ನು ಸೇರಿಸಲು ಉತ್ತಮ ಸಮಯ. ನೀವು ಅನುಭವಿಸುತ್ತಿದ್ದ ಎಲ್ಲಾ ಭಾವನಾತ್ಮಕ ತೊಂದರೆಗಳನ್ನು ತೊಡೆದುಹಾಕಲು ಇದು ನಿಮಗೆ ಸಹಾಯ ಮಾಡುತ್ತದೆ. ತಾಯಿಗೆ ಆರೋಗ್ಯದಲ್ಲಿ ಸಂಪೂರ್ಣ ಲಾಭ ಸಿಗುತ್ತದೆ. ಅವರೊಂದಿಗಿನ ಸಂಬಂಧವು ಬಲಗೊಳ್ಳುತ್ತದೆ. ಜೀವನ ಸಂಗಾತಿಯೊಂದಿಗಿನ ಸಂಬಂಧದಲ್ಲಿ ಮಾಧುರ್ಯ ಬರುತ್ತದೆ . ಅವರ ಕೆಲಸದಲ್ಲಿ ಬರುತ್ತಿದ್ದ ಸಮಸ್ಯೆಗಳು ದೂರವಾಗುತ್ತವೆ.
ಹೊಸ ಸಂಬಂಧವನ್ನು ಹೊಂದಲು ಬಯಸುತ್ತಿರುವ ಜನರು ಸ್ವಲ್ಪ ಜಾಗರೂಕರಾಗಿರಬೇಕು. ವಿದ್ಯಾರ್ಥಿ ವರ್ಗಕ್ಕೂ ಸಮಯ ಅನುಕೂಲಕರವಾಗಿದೆ. ಆದರೆ ಅನೇಕ ಬಾರಿ ನೀವು ಆರಾಮವನ್ನು ಇಷ್ಟಪಡುತ್ತೀರಿ, ಇದು ಸಮಸ್ಯೆಯನ್ನು ಸ್ವಲ್ಪ ಹೆಚ್ಚಿಸಬಹುದು. ಇದರ ಬಗ್ಗೆ ನೀವು ಗಮನ ಹರಿಸಬೇಕು. ಆರೋಗ್ಯದ ದೃಷ್ಠಿಯಿಂದ ಗುರುವಿನ ವಕ್ರ ಸಂಚಾರವು ನಿಮಗೆ ತುಂಬಾ ಶುಭವಾಗಿರುತ್ತದೆ. ನಿಮ್ಮ ಸಣ್ಣ ಪುಟ್ಟ ಸಮಸ್ಯೆಗಳಿಂದ ನೀವು ಮುಕ್ತರಾಗಲು ನಿಮಗೆ ಸಹಾಯ ಸಿಗುತ್ತದೆ.
ಪರಿಹಾರ - ಪ್ರತಿ ಬುಧವಾರದಂದು ಹಸಿರು ವಸ್ತುಗಳ ದಾನ ಮಾಡುವುದು ನಿಮಗೆ ಶುಭವಾಗಿರುತ್ತದೆ.
- ತುಲಾ ರಾಶಿಚಕ್ರ
ತುಲಾ ರಾಶಿಚಕ್ರದ ಸ್ಥಳೀಯರಿಗೆ ಗುರುವಿನ ವಕ್ರ ಸಂಚಾರವು ನಾಲ್ಕನೇ ಮನೆಯಿಂದ ಮೂರನೇ ಮನೆಯಲ್ಲಿರುತ್ತದೆ. ಇದನ್ನು ಪರಾಕ್ರಮ, ಸಾಹಸ ಮತ್ತು ಆಕ್ತಿಯ ಮನೆಯೆಂದು ಪರಿಗಣಿಸಲಾಗಿದೆ. ನೀವು ನಿಗಡಪಡಿಸಿದ ಮಿತಿಗಳನ್ನು ಮೀರಲು ಪ್ರಯತ್ನಿಸುತ್ತೀರಿ ಎಂದು ಇದು ತೋರಿಸುತ್ತದೆ. ಇದರಿಂದ ನಿಮಗೆ ಹೊಸ ಅವಕಾಶಗಳು ಸಿಗುತ್ತವೆ. ನೀವು ಹೊಸ ಆಲೋಚನೆಗಳು ಮತ್ತು ಪ್ರಯೋಗಗಳಿಂದ ಹಿಂದೆ ಸರಿಯುವುದಿಲ್ಲ. ಇದರಿಂದ ಲಾಭದ ಸಾಧ್ಯತೆಗಳು ಹೆಚ್ಚಾಗುತ್ತವೆ. ನಿಮ್ಮ ಸಂವಹನ ಕೌಶಲ್ಯಗಳು ಸಹ ಹೆಚ್ಚಾಗುತ್ತವೆ. ಇದರಂದಾಗಿ ನೀವು ನಿಮ್ಮ ಭಾವನೆಗಳನ್ನು ಎಲ್ಲರ ಮುಂದೆ ಇನ್ನಷ್ಟು ಸ್ಪಷ್ಟವಾಗಿ ವ್ಯಕ್ತಪಡಿಸಲು ನಿಮಗೆ ಸಾಧ್ಯವಾಗುತ್ತದೆ. ಇದು ನಿಮ್ಮ ವ್ಯವಹಾರ ಮತ್ತು ಸಂಬಂಧಗಳಿಗೆ ಉತ್ತಮ ಫಲಿತಾಂಶಗಳನ್ನು ತರುತ್ತದೆ.
ನಿಮ್ಮ ಕೌಶಲ್ಯಗಳನ್ನು ಇನ್ನಷ್ಟು ಪರಿಷ್ಕರಿಸುವ ಸಮಯ ಇದು. ಏಕೆಂದರೆ ಈ ಸಮಯವೂ ನಿಮ್ಮ ಕೌಶಲ್ಯಗಳಿಗೆ ತಕ್ಕಂತೆ ಅವಕಾಶಗಳನ್ನು ಒದಗಿಸುತ್ತದೆ. ಈ ಸಮಯವೂ ನಿಮ್ಮನ್ನು ನೀವು ಹುಡುಕುವ ಸಮಯವಾಗಿರುತ್ತದೆ. ಈ ಸಮಯದಲ್ಲಿ ನೀವು ಇಷ್ಟಪಡುವ ಕೆಲಸಗಳನ್ನು ಮಾಡಿ ಏಕೆಂದರೆ ನಿಮಗೆ ಇಷ್ಟಪಡುವ ಕೆಲಸಗಳನ್ನು ನೀವು ಎಷ್ಟು ಮಾಡುತ್ತಿರೋ, ಅಷ್ಟೇ ನಿಮ್ಮನ್ನು ನೀವು ಮುಕ್ತರಾಗಿ ಕಾಣುವಿರಿ. ಅದು ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಉತ್ತಮಗೊಳಿಸುತ್ತದೆ. ಇದರೊಂದಿಗೆ ನಿಮ್ಮ ಪ್ರಯತ್ನಗಳು ಸರಿಯಾದ ದಿಕ್ಕನ್ನು ಸಹ ಪಡೆಯುತ್ತವೆ.
ಈ ಸಮಯದಲ್ಲಿ ಸಹೋದರ ಸಹೋದರಿಯರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಜೀವನ ಸಂಗಾತಿಯ ಬೆಂಬಲವು ಕೂಡ ನಿಮ್ಮ ಪ್ರಗತಿಗೆ ಸಹಕಾರಿಯಾಗುತ್ತದೆ. ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಈ ಸಮಯವು ಅತ್ಯಂತ ಶುಭವಾಗಿರುತ್ತದೆ. ಈ ಸಮಯ ನಿಮಗೆ ಒಳ್ಳೆಯದು, ಆದರೆ ನೀವು ಇತರರನ್ನು ಸಂತೋಷಪಡಿಸುವಲ್ಲಿ ನಿಮ್ಮ ಸಾಕಷ್ಟು ಸಮಯವನ್ನು ಕಳೆಯುತ್ತೀರಿ.
ಪರಿಹಾರ - ಶಿಕ್ಷಕ ಅಥವಾ ಗುರುವಿನಂತಹ ವ್ಯಕ್ತಿಯಿಂದ ಆಶೀರ್ವಾದ ಪಡೆಯುವುದು ಬಹಳ ಶುಭವಾಗಿರುತ್ತದೆ. ತುಳಸಿ ಪ್ರತಿದಿನ ನೀರಾರಿ ಮಾಡುವುದು ಕೂಡ ನಿಮಗೆ ಉತ್ತಮ.
- ವೃಶ್ಚಿಕ ರಾಶಿಚಕ್ರ
ವೃಶ್ಚಿಕ ರಾಶಿಚಕ್ರದ ಸ್ಥಳೀಯರಿಗೆ ಗುರುವಿನ ಈ ವಕ್ರ ಸಂಚಾರವು ಬಹಳಷ್ಟು ಉತ್ತಮವಾಗಿರುತ್ತದೆ. ಗುರು ದೇವ ಮೂರನೇ ಮನೆಯಿಂದ ನಿಮ್ಮ ಎರಡನೇ ಮನೆಗೆ ಹಾದುಹೋಗುತ್ತಾರೆ. ಇದು ಹಣ ಮತ್ತು ಕುಟುಂಬದ ಮಾಯೆಯಾಗಿದೆ. ಈ ಸಮಯವೂ ನಿಮಗೆ ಪರಿಹಾರವನ್ನು ನೀಡಲಿದೆ ಎಂದು ಇದು ತೋರಿಸುತ್ತದೆ. ದಣಿವರಿಯದ ಪ್ರಯತ್ನಗಳ ನಂತರವೂ, ಹಿಂದಿನ ಕೆಲವು ಸಮಯದಿಂದ ನಿಮಗೆ ಸರಿಯಾದ ದಿಕ್ಕು ಸಿಗುತ್ತಿರಲಿಲ್ಲ, ಆ ದಿಕ್ಕು ಈಗ ಸಿಗಲು ಪ್ರಾರಂಭವಾಗುತ್ತದೆ. ಆದಾಯದಲ್ಲೂ ಹೆಚ್ಚಳವನ್ನು ಕಾಣಲಾಗುತ್ತದೆ, ವೃತ್ತಿ, ಉದ್ಯೋಗದಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತೀರಿ. ಯಾವುದೇ ಹೊಸ ಜವಾಬ್ದಾರಿ ಅಥವಾ ಹಿಸ ಸ್ಥಾನವನ್ನು ಸಹ ಪಡೆಯಬಹುದು.
ಕಳೆದ ಸಾಕಷ್ಟು ಸಮಯದಿಂದ ತಮ್ಮ ಸ್ವಂತ ವ್ಯಾಪಾರವನ್ನು ಬಯಸುತ್ತಿದ್ದ ಸ್ಥಳೀಯರಿಗೆ ಗುರುವಿನ ವಕ್ರತೆ ಅನುಕೂಲಕರವಾಗಿದೆ ಮತ್ತು ಮೊದಲಿನಿಂದಲೇ ವ್ಯಾಪಾರದಲ್ಲಿ ತೊಡಗಿರುವವರು ತಮ್ಮ ಸಂಪನ್ಮೂಲಗಳನ್ನು ಸರಿಯಾಗಿ ಬಳಸಲು ಸಾಧ್ಯವಾಗುತ್ತದೆ ಇದರಿಂದ ಅವರು ಉತ್ತಮ ಲಾಭವನ್ನು ಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಈ ಸಮಯದಲ್ಲಿ ನೀವು ಹಣಕಾಸು ಸಂಗ್ರಹಿಸುವಲ್ಲಿ ನಿಮ್ಮ ಸಂಪೂರ್ಣ ಗಮನ ಹರಿಸಬೇಕು.
ನೀವು ಕುಟುಂಬದೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ಪ್ರಯತ್ನಿಸುತ್ತೀರಿ. ಇದರಿಂದ ಕುಟುಂಬ ಸಂಬಂಧದಲ್ಲಿ ಮಾಧುರ್ಯ ಬರುತ್ತದೆ. ಕುಟುಂಬ ಬೆಳೆಯುವ ಸಾಧ್ಯತೆ ಇದೆ. ದೀರ್ಘಕಾಲದಿಂದ ಮದುವೆಯಾಗಲು ಬಯಸುತ್ತಿರುವ ಸ್ಥಳೀಯರು ಈ ಸಮಯದಲ್ಲಿ ಒಳ್ಳೆಯ ಸುದ್ಧಿಯನ್ನು ಪಡೆಯಬಹುದು.ವಿದ್ಯಾರ್ಥಿಗಳಿಗೆ ಶುಭ ಚಿಹ್ನೆಗಳು ಕಂಡುಬರುತ್ತಿವೆ. ವಿಧ್ಯೆಯನ್ನು ಪಡೆಯಲು ಅನುಕೂಲಕರ ವಾತಾವರಣವನ್ನು ಪಡೆಯುತ್ತೀರಿ. ಅಡೆತಡೆಗಳು ದೂರವಾಗುತ್ತವೆ. ಆರೋಗ್ಯದ ದೃಷ್ಟಿಯಿಂದಲೂ ಗುರುವಿನ ಈ ಸಂಚಾರವು ವೃಶ್ಚಿಕ ರಾಶಿಚಕ್ರದ ಸ್ಥಳೀಯರಿಗೆ ಉತ್ತಮವಾಗಿರುತ್ತದೆ.
ಪರಿಹಾರ - ಬೆಳ್ಳಿಯ ಗಿಲಸಿನಲ್ಲಿ ನೀವು ಕುಡಿಯುವುದು ನಿಮಗೆ ಶುಭವಾಗಿರುತ್ತದೆ.
- ಧನು ರಾಶಿಚಕ್ರ
ಗುರು ಗ್ರಹದ ವಕ್ರ ಸಂಚಾರವು ನಿಮ್ಮ ಎರಡನೇ ಮನೆಯಿಂದ ನಿಮ್ಮ ಮೊದಲನೇ ಮನೆಯಲ್ಲಿರುತ್ತದೆ. ಇದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಸರ್ವ ಪ್ರಥಮವಾಗಿ ಸ್ವಭಾವದಲ್ಲಿ ಬದಲಾವಣೆಯನ್ನು ಅನುಭವಿಸುತ್ತಿರಿ. ಕಳೆದ ಸ್ವಲ್ಪ ಸಮಯದಿಂದ ನೀವು ಆಯಾಸವನ್ನು ಅನುಭವಿಸುತ್ತಿದ್ದೀರಿ, ಈ ಸಮಯದಲ್ಲಿ ಅದು ದೂರವಾಗುತ್ತದೆ ಮತ್ತು ನೀವು ನಿಮ್ಮನ್ನು ಶಕ್ತಿಯುತರಾಗಿ ಅನುಭವಿಸುತ್ತೀರಿ.
ನೀವು ಸಕಾರಾತ್ಮಕತೆಯೊಂದಿಗೆ ಮುಂದುವರಿಯುತ್ತೀರಿ. ಇದು ನಿಮ್ಮ ಕಾರ್ಯ ಸಾಮರ್ಥ್ಯ ಮತ್ತು ನಿರ್ಧಾರ ಸಾಮರ್ಥ್ಯದಲ್ಲಿ ಕಂಡುಬರುತ್ತದೆ. ಧರ್ಮ, ಅಧ್ಯಾತ್ಮದಲ್ಲಿ ಕೂಡ ಆಸಕ್ತಿ ಹೆಚ್ಚಾಗುತ್ತದೆ. ನಿಮ್ಮಲ್ಲಿ ಸಮಾಜಕ್ಕೆ ಕೊಡುಗೆ ನೀಡುವ ಭಾವನೆಯು ಬರುತ್ತದೆ ಮತ್ತು ಅದಕ್ಕಾಗಿ ನೀವು ಪ್ರಯತ್ನಗಳನ್ನು ಸಹ ಮಾಡುತ್ತೀರಿ. ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಆದ್ದರಿಂದ ನಿಮ್ಮ ಮುಂದೆ ಪ್ರಸ್ತುತವಾಗಿರುವ ಯಾವುದೇ ಅವಕಾಶಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಡಿ.
ಗುರುವು ನಿಮ್ಮ ರಾಶಿಚಕ್ರಕ್ಕೆ ನಾಲ್ಕನೇ ಮನೆಯ ಮಾಲೀಕ ಆದ್ದರಿಂದ ಭೂಮಿ ಆಸ್ತಿಗೆ ಸಂಬಂಧಿಸಿದ ಯಾವುದೇ ವಿಷಯವು ನಡೆಯುತ್ತಿದ್ದರೆ, ಅವು ಕಾರ್ಯಗತಗೊಳಿಸುತ್ತವೆ ಮತ್ತು ಹೊಸ ಮನೆ ಇತ್ಯಾದಿಯ ಹಾದಿ ತೆರೆಯುತ್ತದೆ. ಮದುವೆಯಾಗಲು ಕಾಯುತ್ತಿರುವವರಿಗೆ ಗುರುವಿನ ಬದಲಾವಣೆಯು ಒಳ್ಳೆಯ ಸುದ್ಧಿಯನ್ನು ತರುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ವಿವಾಹಿತರು ಅಥವಾ ಯಾವುದೇ ಸಂಬಂಧದಲ್ಲಿರುವವರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಸ್ವಲ್ಪ ಜಾಗರೂಕರಾಗಿರಿ, ಏಕೆಂದರೆ ಅನೇಕ ಬಾರಿ ನೀವು ನಿಮ್ಮ ಸಂಗಾತಿಯ ಸ್ನೇಹಿತರಾಗುವುದರಕ್ಕಿಂತ ಸಲಹೆಗಾರರಾಗಲು ಹೆಚ್ಚು ಪ್ರಯತ್ನಿಸುತ್ತೀರಿ.
ಮಕ್ಕಳ ದೃಷ್ಟಿಯಿಂದ ಈ ಬದಲಾವಣೆ ಶುಭ ಸುದ್ಧಿಯನ್ನು ತರುತ್ತದೆ. ವಿದ್ಯಾರ್ಥಿಗಳಿಗೆ ಈ ಸಮಯವು ಉತ್ತಮವಾಗಿರಲಿದೆ ಮತ್ತು ಕುಟುಂಬದ ಸಂಪೂರ್ಣ ಬೆಂಬಲವನ್ನು ಸಹ ಪಡೆಯುತ್ತೀರಿ. ಎಲ್ಲಾ ದೃಷ್ಟಿಯಿಂದ ಈ ಸಂಚಾರವು ಶುಭವಾಗಿರಲಿದೆ ಎಂದು ಹೇಳುವುದು ತಪ್ಪಲ್ಲ.
ಪರಿಹಾರ - ಗುರುವಾರದಂದು ಉಪವಾಸವನ್ನು ಅನುಸರಿಸಿ ಮತ್ತು ಬಾಳೆ ಗಿಡವನ್ನು ಪೂಜಿಸಿ.
- ಮಕರ ರಾಶಿಚಕ್ರ
ಗುರುವಿನ ಈ ವಕ್ರ ಸಂಚಾರವು ಮಕರ ರಾಶಿಚಕ್ರದ ಸ್ಥಳೀಯರಿಗೆ ಶುಭತೆಯನ್ನು ತರಲಿದೆ. ನಿಮ್ಮ ಲಗ್ನದ ಮನೆಯಿಂದ ಗುರುವು ನಿಮ್ಮ ಹನ್ನೆರಡನೇ ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಈ ಸಂಚಾರವು ಆಮದು / ರಫ್ತು ಮತ್ತು ವಿದೇಶದ ಯಾವದೇ ಕಂಪನಿಯಲ್ಲಿ ಕೆಲಸದಲ್ಲಿರುವ ಸ್ಥಳೀಯರಿಗೆ ವಿಶೇಷವಾಗಿ ಶುಭವಾಗಿರುತ್ತದೆ. ವಿದೇಶಕ್ಕೆ ಹೋಗಲು ಬಯಸುತ್ತಿರುವವರಿಗೆ ಈ ಸಂಚಾರವು ಶುಭ ಸುದ್ಧಿಯನ್ನು ತರಲಿದೆ. ಈ ಸಮಯದಲ್ಲಿ ನಿಮ್ಮ ಬಗ್ಗೆ ನಿಮ್ಮ ನಂಬಿಕೆ ಬೆಳೆಯಲು ಬೆಳೆಯಲು ಪ್ರಾರಂಭವಾಗುತ್ತದೆ ಮತ್ತು ಇತರರ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಇದಲ್ಲದೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನೀವು ಯಶಸ್ವಿಯಾಗುತ್ತೀರಿ.
ನೀವು ಎಷ್ಟು ಪ್ರಯಾಣ ಮಾಡುತ್ತಿರೋ ಅಷ್ಟೇ ಲಾಭವನ್ನು ಪಡೆಯುತ್ತೀರಿ. ಆದರೆ ಪ್ರಯಾಣಕ್ಕಾಗಿ ಮೊದಲಿನಿಂದಲೇ ಉತ್ತಮ ಬಜೆಟ್ ಯೋಜನೆಯನ್ನು ತಯಾರಿಸುವುದು ಸರಿಯಾಗಿರುತ್ತದೆ. ಆಧ್ಯಾತ್ಮಿಕ ಮತ್ತು ಧಾರ್ಮಿಕ ಚಟುವಟುಕೆಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ಇವುಗಳಲ್ಲಿ ನೀವು ಮುಂದುವರಿದು ಭಾಗವಹಿಸುತ್ತೀರಿ. ಆದರೆ ಆರೋಗ್ಯದ ದೃಷ್ಟಿಯಿಂದ ಈ ಸಮಯವು ಸ್ವಲ್ಪ ದುರ್ಬಲವಾಗಿರಬಹುದು. ಕೆಲವು ಅನಗತ್ಯ ಸಂದರ್ಭಗಳನ್ನು ಸಹ ಎದುರಿಸಬೇಕಾಗಬಹುದು. ಆದ್ದರಿಂದ ನಿಮ್ಮ ಆಹಾರ ಪಾನೀಯದ ಬಗ್ಗೆ ಗಮನ ಹರಿಸಬೇಕಾಗುತ್ತದೆ.
ಸಂಬಂಧದಲ್ಲಿ ಹೊಸತನವು ಬರುತ್ತದೆ. ಕೆಟ್ಟ ಸಂಬಂಧದಿಂದ ಅಥವಾ ನೀವು ಭಾವನಾತ್ಮಾವಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದ ಸಂಬಂಧದಿಂದ ಹೊರಬರಲು ನಿಮಗೆ ಸಹಾಯ ಸಿಗುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ, ಈ ಸಾಚಾರವು ನಿಮಗೆ ಉತ್ತಮವಾಗಿರುತ್ತದೆ.
ಪರಿಹಾರ - ಶನಿ ಮಂತ್ರವನ್ನು ಜಪಿಸುವುದು ಮಕರ ರಾಶಿಚಕ್ರದ ಸ್ಥಳೀಯರಿಗೆ ತುಂಬಾ ಶುಭವಾಗಿರುತ್ತದೆ.
- ಕುಂಭ ರಾಶಿಚಕ್ರ
ಕುಂಭ ರಾಶಿಚಕ್ರದ ಸ್ಥಳೀಯರಿಗೆ ವಕ್ರ ಗುರುವಿನ ಸಂಚಾರವು ಆದಾಯದ ಹೊಸ ಮೂಲಗಳನ್ನು ತೆರೆಯುತ್ತದೆ. ವೆಚ್ಚಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗುತ್ತೀರಿ. ನಿಮ್ಮ ಯೋಜನೆಗಳು ಏನೇ ಇರಲಿ, ಅವು ಕಾರ್ಯಗತಗೊಳ್ಳಲು ಪ್ರಾರಂಭವಾಗುತ್ತವೆ. ಇದಲ್ಲದೆ ನೀವು ಎಷ್ಟು ಜನರನ್ನು ಭೇಟಿ ಮಾಡುತ್ತಿರೋ ಅಷ್ಟೇ ಲಾಭವನ್ನು ಪಡೆಯುತ್ತೀರಿ. ಹಳೆಯ ಸ್ನೇಹಿತ ನಿಮಗೆ ಯಾವುದೇ ಹೊಸ ಸಾಧ್ಯತೆಯನ್ನು ತರುಬಹುದು.
ಸಾಮಾಜಿಕ ಪ್ರತಿಷ್ಠೆಯು ಹೆಚ್ಚಾಗುತ್ತದೆ. ಈ ಸಮಯದಲ್ಲಿ ನೀವು ಹೆಚ್ಚು ಮಹತ್ವಕಾಂಕ್ಷಿಯಾಗುತ್ತೀರಿ. ಗುರಿಗಳ ಬಗ್ಗೆ ಇನ್ನಷ್ಟು ಜಾಗರೂಕರಾಗಿರುತ್ತೀರಿ ಇದರಿಂದ ನಿಮಗೆ ಲಾಭವಾಗುವ ಸಾಧ್ಯತೆ ಇರುತ್ತದೆ. ವ್ಯಾಪಾರಸ್ಥರಿಗೆ ಕೂಡ ಈ ಬದಲಾವಣೆಯು, ತಮ್ಮ ವ್ಯಾಪಾರವನ್ನು ಇನ್ನಷ್ಟು ಮುಂದುವರಿಸಲು ಅವಕಾಶಗಳನ್ನು ಒದಗಿಸುತ್ತದೆ.
ಹಿರಿಯ ಸಹೋದರ ಸಹೋದರಿಯರೊಂದಿಗಿನ ವಿರೋಧಾಭಾಸವು ಕೊನೆಗೊಳ್ಳುತ್ತದೆ. ಮಕ್ಕಳ ಬದಿಗೆ ವಕ್ರ ಗುರುವಿನ ಈ ಸ್ಥಾನವು ಬಹಳಷ್ಟು ಶುಭವಾಗಿರುತ್ತದೆ. ಕುಟುಂಬದಲ್ಲಿ ಹೆಚ್ಚಳದ ಸಾಧ್ಯತೆ ಇದೆ. ಇದಲ್ಲದೆ ಮಕ್ಕಳ ಪ್ರಗತಿಯಿಂದ ನೀವು ಸಾಕಷ್ಟು ಸಂತೋಷವನ್ನು ಪಡೆಯುತ್ತೀರಿ. ಪ್ರೀತಿ ಸಂಬಂಧದಲ್ಲಿ ತಾಜಾತನ ಬರುತ್ತದೆ. ಹೊಸ ಶಕ್ತಿಯಿಂದ ತುಂಬಿರುತ್ತೀರಿ. ಇದರಿಂದ ನಿಮ್ಮ ಸಂಗಾತಿಯು ನಿಮ್ಮಿಂದ ಸಂತೋಷವಾಗಿರುತ್ತಾರೆ.
ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವಲ್ಲಿ ಕುಟುಂಬದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಇದರಿಂದ ಅವರು ಪ್ರಗತಿಯ ಹಾದಿಯಲ್ಲಿ ಮುಂದುವರಿಯುವುದನ್ನು ಕಾನಾಲಾಗುತ್ತದೆ. ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿ ಉದ್ಯೋಗವನ್ನು ಹುಡುಕುತ್ತಿರುವವರು ಕೂಡ ಉತ್ತಮ ಅವಕಾಶಗಳನ್ನು ಪಡೆಯುತ್ತಾರೆ. ಆರೋಗ್ಯದ ದೃಷ್ಟಿಯಿಂದಲೂ ಸಮಯ ಉತ್ತಮವಾಗಿರಲಿದೆ. ನೀವು ನಿಮ್ಮ ಆಹಾರ ಪಾನೀಯದ ಬಗ್ಗೆ ಗಮನ ಹರಿಸುವ ಅಗತ್ಯವಿದೆ. ಕೊಬ್ಬಿನ ಆಹಾರ ಸೇವಿಸುವುದನ್ನು ತಪ್ಪಿಸುವುದು ಶುಭವಾಗಿರುತ್ತದೆ.
ಪರಿಹಾರ - ಮಧ್ಯದ ಬೆರಳಿನಲ್ಲಿ ಪಿತಾಂಬರಿ ರತ್ನವನ್ನು ಧರಿಸುವುದು ಶುಭವಾಗಿರುತ್ತದೆ.
- ಮೀನಾ ರಾಶಿ
ಮೀನಾ ರಾಶಿಚಕ್ರದ ಸ್ಥಳೀಯರಿಗೆ, ಗುರುವಿನ ಬದಲಾವಣೆಯು ಲಾಭದ ಮನೆಯಿದ ಶನಿಯೊಂದಿಗೆ ಕುಳಿತಿದ್ದು, ಅಲ್ಲಿಂದ ಹತ್ತನೇ ಮನೆಯಲ್ಲಿ ತನ್ನ ಮೂಲ ತ್ರಿಕೋನ ರಾಶಿಯಲ್ಲಿರುತ್ತದೆ. ಇದು ಉದ್ಯೋಗದಲ್ಲಿ ಪ್ರಗತಿ ಮತ್ತು ಬದಲಾವಣೆಯನ್ನು ತೋರಿಸುತ್ತದೆ. ಈ ಬದಲಾವಣೆಯು ನಿಮ್ಮನ್ನು ಹೆಚ್ಚು ಕಾರ್ಯ ಆಧಾರಿತವಾಗಿಸುತ್ತದೆ, ಈಗ ನಿಮ್ಮ ಗಮನವು ಗುರಿಯಿಂದ ತಪ್ಪಿಸಿ ಅಥವಾ ಪ್ರಶಂಸೆಯಿಂದ ತಪ್ಪಿಸಿ ಕೇವಲ ಕೆಲಸವನ್ನು ಸುಗಮವಾಗಿ, ನಾವೀನ್ಯತೆ ಮತ್ತು ಸೃಜನಶೀಲತೆಯಿಂದ ಹೇಗೆ ಮಾಡುವುದು ಎಂಬುದರ ಕಡೆಗೆ ಮಾತ್ರ ಇರುತ್ತದೆ. ಇದರಿಂದ ಯಶಸ್ಸಿನೊಂದಿಗೆ ಉನ್ನತ ಅಧಿಕಾರಿಗಳ ಮತ್ತು ಪ್ರಶಂಸೆಯನ್ನು ಸಹ ನೀವು ಪಡೆಯುತ್ತೀರಿ.
ತಂದೆಯ ಆರೋಗ್ಯದ ಸುಧಾರಣೆಯೊಂದಿಗೆ ಅವರೊಂದಿಗಿನ ಸಂಬಂಧದಲ್ಲಿ ಕೂಡ ಮಾಧುರ್ಯ ಬರುತ್ತದೆ. ಅವರಿಂದ ನೀವು ಬಹಳಷ್ಟು ಪ್ರೋತ್ಸಾಹನ ಮತ್ತು ಬೆಂಬಲವನ್ನು ಸಹ ಪಡೆಯುತ್ತೀರಿ. ಇದರಿಂದ ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ. ನಿಮ್ಮ ಮಾತಿನ ಶಕ್ತಿ ಕೂಡ ಹೆಚ್ಚಾಗುತ್ತದೆ. ಇದರಿಂದ ನೀವು ಬಹಳಷ್ಟು ಜನರ ಸಲಹೆಯನ್ನು ಸಹ ಪಡೆದುಕೊಳ್ಳುತ್ತೀರಿ. ಸರ್ಕಾರಿ ಕ್ಷೇತ್ರದಿಂದಲೂ ಲಾಭವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಹೊಸ ಮನೆ ಅಥವಾ ವಾಹನವನ್ನು ಖರೀದಿಸುವ ಸಾಧ್ಯತೆಯೂ ಇದೆ.
ಶತ್ರುಗಳ ಮೇಲೆ ಪ್ರಾಬಲ್ಯ ಸಾಧಿಸುವಿರಿ. ಕಾನೂನು ಪ್ರಕರಣದಲ್ಲಿ ಸಿಲುಕಿಕೊಂಡಿರುವ ವಿಷಯಗಳು ವೇಗದೊಂದಿಗೆ ಮುಂದುವರಿಯುತ್ತವೆ. ಪ್ರೀತಿ ವಿಷಯಗಳಲ್ಲಿ ಈ ಸಂಚಾರವು ಸ್ವಲ್ಪ ಮಿಶ್ರ ಫಲಿತಾಂಶಗಳನ್ನು ನೀಡಬಹುದು.ಇದಕ್ಕಾಗಿ ನೀವು ವ್ಯಾಪಾರ ಮತ್ತು ಕುಟುಂಬದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು. ಈ ಸಮಯದಲ್ಲಿ ನಿಮ್ಮ ಮನೋಬಲವು ಹೆಚ್ಚಾಗಿರುತ್ತದೆ ಆದ್ದರಿಂದ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಮಯವನ್ನು ಹಾಳುಮಾಡಬೇಡಿ.
ಪರಿಹಾರ - ಭಗವಂತ ವಿಷ್ಣುವಿನ ಮತ್ಸ್ಯ ಅವತಾರದ ಕಥೆಯನ್ನು ಪಠಿಸುವುದು ನಿಮಗೆ ಉತ್ತಮವಾಗಿರುತ್ತದೆ.
Astrological services for accurate answers and better feature
Astrological remedies to get rid of your problems

AstroSage on MobileAll Mobile Apps
- Numerology Weekly Horoscope: 17 August, 2025 To 23 August, 2025
- Save Big This Janmashtami With Special Astrology Deals & Discounts!
- Janmashtami 2025: Date, Story, Puja Vidhi, & More!
- 79 Years of Independence: Reflecting On India’s Journey & Dreams Ahead!
- Sun Transit In Leo Blesses Some Zodiacs; Yours Made It To The List?
- Venus Nakshatra Transit Aug 2025: 3 Zodiacs Destined For Luck & Prosperity!
- Janmashtami 2025: Read & Check Out Date, Auspicious Yoga & More!
- Sun Transit Aug 2025: Golden Luck For Natives Of 3 Lucky Zodiac Signs!
- From Moon to Mars Mahadasha: India’s Astrological Shift in 2025
- Vish Yoga Explained: When Trail Of Free Thinking Is Held Captive!
- अंक ज्योतिष साप्ताहिक राशिफल: 17 अगस्त से 23 अगस्त, 2025
- जन्माष्टमी स्पेशल धमाका, श्रीकृष्ण की कृपा के साथ होगी ऑफर्स की बरसात!
- जन्माष्टमी 2025 कब है? जानें भगवान कृष्ण के जन्म का पावन समय और पूजन विधि
- भारत का 79वां स्वतंत्रता दिवस, जानें आने वाले समय में क्या होगी देश की तस्वीर!
- सूर्य का सिंह राशि में गोचर, इन राशि वालों की होगी चांदी ही चांदी!
- जन्माष्टमी 2025 पर बना दुर्लभ संयोग, इन राशियों पर बरसेगी श्रीकृष्ण की विशेष कृपा!
- अगस्त में इस दिन बन रहा है विष योग, ये राशि वाले रहें सावधान!
- कजरी तीज 2025 पर करें ये विशेष उपाय, मिलेगा अखंड सौभाग्य का वरदान
- अगस्त के इस सप्ताह मचेगी श्रीकृष्ण जन्माष्टमी की धूम, देखें व्रत-त्योहारों की संपूर्ण जानकारी!
- बुध कर्क राशि में मार्गी: इन राशियों को रहना होगा सावधान, तुरंत कर लें ये उपाय
- Horoscope 2025
- Rashifal 2025
- Calendar 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ராசி பலன் 2025
- రాశిఫలాలు 2025
- ರಾಶಿಭವಿಷ್ಯ 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025