ಬುಧ ಸಂಚಾರ ತುಲಾ ರಾಶಿಯಲ್ಲಿ (22 ಸೆಪ್ಟೆಂಬರ್ 2020)

22 ಸೆಪ್ಟೆಂಬರ್ 2020 ರಂದು ಬುಧ ಗ್ರಹವು ತುಲಾ ರಾಶಿಯಲ್ಲಿ ಸಂಚರಿಸಲಿದೆ. ಬುಧ ದೇವ 16:55 ಗಂಟೆಗೆ ಕನ್ಯಾ ರಾಶಿಯಿಂದ ಹೊರಬಂದು ತುಲಾ ರಾಶಿಯಲ್ಲಿ ಪ್ರವೇಶಿಸುತ್ತಾರೆ ಮತ್ತು 14 ಅಕ್ಟೋಬರ್ ರಂದು ವಕ್ರರಾಗಿ ಈ ರಾಶಿಚಕ್ರದಲ್ಲಿ 6:32 ವರೆಗೆ ಇರುತ್ತಾರೆ. ಇದರ ನಂತರ 3 ನವೆಂಬರ್ ರಂದು ಈ ರಾಶಿಚಕ್ರದಲ್ಲಿ ಮಾರ್ಗಿಯಾಗಲು ಆರಂಭಿಸುತ್ತಾರೆ ಮತ್ತು 28 ನವೆಂಬರ್ ರಂದು 07 ಗಂಟೆ 04 ನಿಮಿಷಕ್ಕೆ ವೃಶ್ಚಿಕ ರಾಶಿಚಕ್ರದಲ್ಲಿ ಪ್ರವೇಶಿಸುತ್ತಾರೆ. ಆದಾಗ್ಯೂ ಕೆಳಗೆ ನೀಡಲಾಗಿರುವ ರಾಶಿ ಭವಿಷ್ಯವು ಬುಧನ ತುಲಾ ರಾಶಿಯಲ್ಲಿ ಸಂಚಾರದ ಬಗ್ಗೆ ಮಾತ್ರ.

ಜೀವನದಲ್ಲಿ ಬರುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಜ್ಯೋತಿಷಿಯಿಂದ ಪ್ರಶ್ನೆ ಕೇಳಿ

ಬುಧ ಗ್ರಹವು ಎಲ್ಲಾ ಗ್ರಹಗಳಳ್ಳಿ ಯುವರಾಜನ ಸ್ಥಾನವನ್ನು ಹೊಂದಿದೆ ಮತ್ತು ಜಾತಕದಲ್ಲಿ ಇದರ ಉತ್ತಮ ಷ್ಠಾನವು ವ್ಯಕ್ತಿಗೆ ತಾರ್ಕಿಕ ಸಾಮರ್ಥ್ಯವನ್ನು ನೀಡುತ್ತದೆ. ಇದರೊಂದಿಗೆ ವ್ಯಕ್ತಿಯು ಗಣಿತದ ವಿಷಯಗಳಲ್ಲಿ ಉತ್ತಮ ಪ್ರದರ್ಶನ ಮಾಡುತ್ತಾನೆ. ಜಾತಕದಲ್ಲಿ ಬುಧ ಗ್ರಹವು ದುರ್ಬಲ ಸ್ಥಾನದಲ್ಲಿದ್ದರೆ, ವ್ಯಕ್ತಿಯ ತಾರ್ಕಿಕ ಸಾಮರ್ಥ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರೊಂದಿಗೆ ಚರ್ಮಕ್ಕೆ ಸಂಬಂಧಿಸಿದ ರೋಗಗಳು ಸಹ ಉದ್ಭವಿಸಬಹುದು. ನಡೆಯಿರಿ ಈಗ ತುಲಾ ರಾಶಿಯಲ್ಲಿ ಬುಧ ಗ್ರಹದ ಸಂಚಾರವು ಎಲ್ಲಾ ಹನ್ನೆರಡು ರಾಶಿಚಕ್ರದ ಸ್ಥಳೀಯರ ಜೀವನದಲ್ಲಿ ಏನು ಬದಲಾವಣೆ ತರುತ್ತದೆ ಎಂದು ತಿಳಿಯೋಣ.

ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ

  1. ಮೇಷ ರಾಶಿ

ಬುಧ ಗ್ರಹವು ಮೇಷ ರಾಶಿಚಕ್ರದ ಸ್ಥಳೀಯರ ಏಳನೇ ಮನೆಗೆ ಸಂಚರಿಸುತ್ತದೆ. ಈ ಮನೆಯ ಮೂಲಕ ಜೀವನದಲ್ಲಿ ಸಂಭವಿಸಲಾಗುವ ಪಾಲುದಾರಿಕೆ ಮತ್ತು ಜೀವನ ಸಂಗಾತಿಯ ಬಗ್ಗೆ ಪರಿಗಣಿಸಲಾಗುತ್ತದೆ. ಈ ಮನೆಯಲ್ಲಿ ಬುಧನ ಸ್ಥಾನವು ನಿಮ್ಮ ಜೀವಾಂದಲ್ಲಿ ಸವಾಲುಗಳನ್ನು ತರಬಹುದು. ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ಕುಟುಂಬದ ಸದಸ್ಯರೊಂದಿಗೆ ನಿಮ್ಮ ವಿರೋಧಾಭಾಸವಾಗಬಹುದು. ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಕೋಪವನ್ನು ನಿಯಂತ್ರಿಸಿ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಬೇಕು.

ಅದೇ ಸಮಯದಲ್ಲಿ ಮತ್ತೊಂದೆಡೆ, ಜೀವನದಲ್ಲಿ ಅನೇಕ ಏರಿಳಿತಗಳನ್ನು ಬರಬಹುದು. ಈ ಸಂಚಾರದ ಸಮಯದಲ್ಲಿ ಯಾವುದೇ ಹಳೆಯ ವಿಷಯದ ಬಗ್ಗೆ ವಿವಾದ ಮಾಡುವುದನ್ನು ನೀವು ತಪ್ಪಿಸಬೇಕು. ಸಾಧ್ಯವಾದಾಷ್ಟ್ಯ ಜೀವನ ಸಂಗಾತಿಯೊಂದಿಗೆ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು. ಆರ್ಥಿಕ ಭಾಗದ ಬಗ್ಗೆಯೂ ನೀವು ಜಾಗರೂಕರಾಗಿರುವ ಅಗತ್ಯವಿದೆ. ನಿಮ್ಮ ವೆಚ್ಚಗಳ ಬಗ್ಗೆ ಗಮನ ಹರಿಸಿ ಮತ್ತು ಸಾಲ ತೆಗೆದುಕೊಳ್ಳುವುದು ಅಥವಾ ನೀಡುವುದನ್ನು ತಪ್ಪಿಸಿ. ಹಣಕಾಸಿನ ಉಳಿತಾಯದ ಬಗ್ಗೆ ನೀವು ಉತ್ತಮ ಬಜೆಟ್ ಯೋಜನೆಯನ್ನು ತಯಾರಿಸಬೇಕು.

ಈ ರಾಶಿಚಕ್ರದ ಸ್ಥಳೀಯರು ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿದ್ದರೆ, ಈ ಸಂಚಾರದ ಸಮಯದಲ್ಲಿ ಅವರು ತುಂಬಾ ಎಚ್ಚರದಿಂದಿರಬೇಕು. ನಿಮ್ಮ ಸಂಗಾತಿಯ ಚಟುವಟಿಕೆಗಳ ಮೇಲೆ ನಿಗಾ ಇರಿಸಿ. ಹೊಸ ವ್ಯಾಪಾರವನ್ನು ಆರಂಭಿಸುವ ಬಗ್ಗೆ ಯೋಚಿಸುತ್ತಿರುವ ಸ್ಥಳೀಯರು ಸ್ವಲ್ಪ ಸಮಯಕ್ಕೆ ತಮ್ಮ ಆಲೋಚನೆಯನ್ನು ಮುಂದೂಡಬೇಕು. ಈ ಸಮಯದಲ್ಲಿ ಮೇಷ ರಾಶಿಚಕ್ರದ ಸ್ಥಳೀಯರು ತಮ್ಮ ಆರೋಗ್ಯದ ಬಗ್ಗೆ ಕೂಡ ವಿಶೇಷ ಕಾಳಜಿವಹಿಸಬೇಕು. ನಿಮ್ಮನ್ನು ಆರೋಗ್ಯವಾಗಿರಿಸಲು ಪೌಷ್ಟಿಕ ಭೋಜನವನ್ನು ಸೇವಿಸಿ.

ಪರಿಹಾರ - ಬುಧವಾರದಂದು ಹಸುವಿಗೆ ಹಸಿರು ಮೇವು ತಿನ್ನಿಸಿ, ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.

  1. ವೃಷಭ ರಾಶಿ

ನಿಮ್ಮ ಎರಡನೇ ಮತ್ತು ಐದನೇ ಮನೆಯ ಮಾಲೀಕ ಬುಧ ದೇವರ ಸಂಚಾರವು ನಿಮ್ಮ ಆರನೇ ಮನೆಯಲ್ಲಿ ಸಂಭವಿಸಲಿದೆ. ಈ ಮನೆಯ ಮೂಲಕ ರೋಗ, ಸಾಲ, ವಿವಾದ, ಕೊರತೆ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ವೃಷಭ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹದ ಈ ಸಂಚಾರವು ಶುಭವೆಂದು ಸಾಬೀತುಪಡಿಸುತ್ತದೆ. ಈ ರಾಶಿಚಕ್ರದ ವಿದ್ಯಾರ್ಥಿಗಳು ಶಿಕ್ಷಣದ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ನಿಮ್ಮ ಬುದ್ಧಿವಂತಿಕೆಯ ಸಾಮರ್ಥ್ಯದ ಮೇಲೆ ಸಹಪಾಠಿಗಳ ನಡುವೆ ವಿಭಿನ್ನ ಸ್ಥಾನವನ್ನು ರಚಿಸಬಹುದು. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿದ್ದರೆ ಅದರಲ್ಲಿ ಯಶಸ್ಸು ಪಡೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ಸ್ಪರ್ಧಿಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಬಹುದು.

ವಾದ - ವಿವಾದದ ಪರಿಸ್ಥಿತಿಯಲ್ಲಿ ನೀವು ಮೇಲುಗೈ ಸಾಧಿಸುವಿರಿ. ನಿಮ್ಮ ಪ್ರೀತಿಯ ಜೀವನದ ಮೇಲೆ ದೃಷ್ಟಿ ಹಾಕಿದರೆ, ಈ ಸಮಯದಲ್ಲಿ ಪ್ರೀತಿಪಾತ್ರರೊಂದಿಗೆ ನಿಮ್ಮ್ ಸಾಮರಸ್ಯ ಉತ್ತಮವಾಗಿರುತ್ತದೆ. ಯಾವುದೇ ವಿಷಯದ ಬಗ್ಗೆ ನಿಮ್ಮಿಬ್ಬರ ನಡುವೆ ಅಂತರ ಬಂದಿದ್ದರೆ, ಈ ಸಮಯದಲ್ಲಿ ಅದನ್ನು ನಿವಾರಿಸಲಾಗುತ್ತದೆ. ಸಾಮಾಜಿಕ ಮಟ್ಟದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗುತ್ತದೆ. ದಾಂಪತ್ಯ ಜೀವಾಂದಲ್ಲಿ ಮಕ್ಕಳ ಕಾರಣದಿಂದ ಸಂತೋಷ ಉಂಟಾಗಬಹುದು. ಈ ಸಮಯದಲ್ಲಿ ನಿಮ್ಮ ಮಕ್ಕಳು ಪ್ರಗತಿಯನ್ನು ಹೊಂದುವ ಸಾಧ್ಯತೆ ಇದೆ. ಆರ್ಥಿಕ ಭಾಗದ ಮೇಲೆ ದೃಷ್ಟಿ ಹಾಕಿದರೆ, ಈ ಸಮಯದಲ್ಲಿ ನೀವು ನಿಮ್ಮ ಸಾಲಗಳಿಂದ ಮುಕ್ತರಾಗಬಹುದು. ಒಟ್ಟಾರೆಯಾಗಿ ಹೇಳಿದರೆ, ಬುಧ ಸಂಚಾರವು ವೃಷಭ ರಾಶಿಚಕ್ರದ ಸ್ಥಳೀಯರಿಗೆ ಉತ್ತಮವಾಗಿರುತ್ತದೆ ಎಂದು ಸಾಬೀತುಪಡಿಸುತ್ತದೆ.

ಪರಿಹಾರ - ಬುಧವಾರದಂದು ಬಡವರಿಗೆ ಹಣ್ಣುಗಳ ದಾನ ಮಾಡಿದರೆ, ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ

  1. ಮಿಥುನ ರಾಶಿ

ಬುಧ ಗ್ರಹವು ಮಿಥುನ ರಾಶಿಚಕ್ರದ ಸ್ಥಳೀಯರ ಐದನೇ ಮನೆಗೆ ಸಾಗುತ್ತದೆ. ಐದನೇ ಮನೆಯ ಮೂಲಕ ನಿಮ್ಮ ಬುದ್ಧಿವಂತಿಕೆ, ಮಕ್ಕಳು, ಪ್ರೀತಿ ಜೀವನ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಐದನೇ ಮನೆಯಲ್ಲಿ ಬುಧದ ಸ್ಥಾನವು ನಿಮ್ಮ ಕುಟುಂಬದ ವಾತಾವರಣವು ಆಹ್ಲಾದಕರವಾಗಿರುತ್ತದೆ ಎಂದು ಸೂಚಿಸುತ್ತದೆ. ಮನೆಯ ಕಿರಿಯ ಸದಸ್ಯರೊಂದಿಗೆ ನೀವು ಸಾಕಷ್ಟು ಸಮಯವನ್ನು ಕಳೆಯುತ್ತೀರಿ ಮತ್ತು ನಿಮ್ಮ ಎಲ್ಲಾ ಸಮಸ್ಯೆಗಳನ್ನು ಮರೆತುಹೋಗುವಿರಿ. ನಿಮ್ಮ ಕೆಲಸಗಳನ್ನು ನೀವು ಗಂಭೀರತೆಯಿಂದ ಮಾಡೇಕು ಬಯಸುವಿರಿ. ಈ ಕಾರಣದಿಂದ ನಿಮ್ಮ ಜೀವನದಲ್ಲಿ ಸಕಾರಾತ್ಮಕತೆ ಉಳಿದಿರುತ್ತದೆ. ಸಾಮಾಜಿಕ ಸ್ಥಾನಮಾನದ ಬಗ್ಗೆ ಮಾತನಾಡಿದರೆ, ನಿಮ್ಮ ನಿಮಕ ಸ್ನೇಹಿತರೊಂದಿಗೆ ಸಮಯವನ್ನು ಕಳೆಯಲು ಅವಕಾಶವನ್ನು ಪಡೆಯಬಹುದು.

ಅದೇ ಸಮಯದಲ್ಲಿ ಮತ್ತೊಂದೆಡೆ, ಈ ರಾಶಿಚಕ್ರದ ಜನರು ಮನರಂಜನೆಗಾಗಿ ಸಹ ಖರ್ಚು ಮಾಡಲು ಹಿಂಜರಿಯುವುದಿಲ್ಲ. ಆದಾಗ್ಯೂ, ನಿಮ್ಮ ಬಜೆಟ್ ಪ್ರಕಾರ ಖರ್ಚು ಮಾಡಲು ನಿಮಗೆ ಸಲಹೆ ನೀಡಲಾಗಿದೆ. ನೀವು ಬ್ಯಾಟಿಂಗ್ ಮಾಡಿದರೆ, ನಿಮಗೆ ಲಾಭವಾಗಬಹುದು. ಆದರೆ ಅಂತಹ ಯಾವುದೇ ಕೆಲಸವನ್ನು ಮಾಡದಿರುವುದು ನಿಮಗೆ ಉತ್ತಮ. ಒಂದು ಬಾರಿ ಲಾಭವನ್ನು ಪಡೆದ ನಂತರ ಅಂತಹ ಕೃತಿಗಳಲ್ಲಿ ನೀವು ಅನೇಕ ಬಾರಿ ನಷ್ಟವನ್ನು ಸಹ ಪಡೆಯಬಹುದು. ಈ ರಾಶಿಚಕ್ರದ ವಿದ್ಯಾರ್ಥಿಗಳು ಸಹ ಬುಧ ಸಂಚಾರದಿಂದ ಲಾಭವನ್ನು ಪಡೆಯಬಹುದು. ಮತ್ತು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.

ಪರಿಹಾರ - ತಾಯಿ ದುರ್ಗೆಯನ್ನು ಆರಾಧಿಸಿ.

  1. ಕರ್ಕ ರಾಶಿ

ಬಧ ದೇವ ಕರ್ಕ ರಾಶಿಚಕ್ರದ ಸ್ಥಳೀಯರ ಹನ್ನೆರಡನೇ ಮತ್ತು ಮೂರನೇ ಮನೆಯ ಅಧಿಪತಿ. ಸಂಚಾರದ ಈ ಸಮಯದಲ್ಲಿ ಬುಧ ದೇವ ನಿಮ್ಮ ನಾಲ್ಕನೇ ಮನೆಗೆ ಸ್ಸಾಗುತ್ತಾರೆ. ಈ ಮನೆಯಂ ಮೂಲಕ ತಾಯಿ, ಸಂತೋಷ, ವಾಹನ, ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಬುಧ ಗ್ರಹವು ನಾಲ್ಕನೇ ಮನೆಯಲ್ಲಿರುವ ಕಾರಣದಿಂದಾಗಿ, ನಿಮ್ಮ ಕುಟುಂಬ ಜೀವನದಲ್ಲಿ ಶಾಂತಿ ಉಳಿದಿರುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ತಾಯಿಯೊಂದಿಗೆ ಉತ್ತಮ ಸಮಯವನ್ನು ಕಳೆಯಬಹುದು. ತಾಯಿಯ ಸ್ನೇಹ ನಿಮಗೆ ಮಾನಸಿಕ ಶಾಂತಿಯನ್ನು ನೀಡುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ ಮನೆಯಿಂದ ದೂರವಿದ್ದು, ಉದ್ಯೋಗ ಅಥವಾ ಅಧ್ಯಯನ ಮಾಡುತ್ತಿರುವವರು ಈ ಸಂಚಾರದ ಸಮಯದಲ್ಲಿ ತಮ್ಮ ಮನೆಗೆ ಬರಬಹುದು.

ಅದೇ ಸಮಯದಲ್ಲಿ ಮತ್ತೊಂದೆಡೆ, ವೃತ್ತಿಪರರ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ಆದಾಯವು ಹೆಚ್ಚಾಗುವ ಸಾಧ್ಯತೆ ಇದೆ. ಆದಾಗ್ಯೂ ಇದರ ಹೊರೆತಾಗಿಯೂ, ನಿಮ್ಮ ಆರ್ಥಿಕ ಆತಂಕಗಳು ಉಳಿದಿರುತ್ತವೆ. ಈ ರಾಶಿಚಕ್ರದ ವಿದ್ಯಾರ್ಥಿಗಳು ಈ ಸಮಯದಲ್ಲಿ ಅಧ್ಯಯನದಿಂದ ಗಮನವನ್ನು ತೆಗೆಯಬಹುದು, ತಮ್ಮ ಸ್ನೇಹಿತರೊಂದಿಗೆ ಹೆಚ್ಚು ಸಮಯವನ್ನು ಕಳೆಯಬಹುದು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬಹುದು. ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡದೆ ಮತ್ತು ಸಮಯ ಕೋಷ್ಠಕದ ಪ್ರಕಾರ ಅಧ್ಯಯನ ಮಾಡಲು ಸಲಹೆ ನೀಡಲಾಗಿದೆ. ಈ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ಆರೋಗ್ಯದ ಸಮಸ್ಯೆಗಳನ್ನು ಹೊಂದಿರಬಹುದು. ನಿಮ್ಮ ಆರೋಗ್ಯವನ್ನು ಸುಧಾರಿಸಲು ನೀವು ನಿಯಮಿತವಾಗಿ ವ್ಯಾಯಾಮವನ್ನು ಮಾಡಬೇಕು ಮತ್ತು ಸಮತೋಲಿತ ಆಹಾರವನ್ನು ಸೇವಿಸಬೇಕು.

ಪರಿಹಾರ - ಬುಧವಾರದಂದು ಹಸಿರು ಬಳೆಗಳ ದಾನ ಮಾಡಿ, ಶುಭ ಫಲಿತಾಂಶಗಳನ್ನು ಪಡೆಯುವಿರಿ.

  1. ಸಿಂಹ ರಾಶಿ

ಬುಧ ದೇವ ಸಿಂಹ ರಾಶಿಚಕ್ರದ ಸ್ಥಳೀಯರ ಮೂರನೇ ಮನೆಗೆ ಸಾಗುತ್ತಾರೆ. ಈ ಮನೆಯನ್ನು ಪರಾಕ್ರಮದ ಮನೆಯೆಂದು ಸಹ ಕರೆಯಲಾಗುತ್ತದೆ ಮತ್ತು ಇದರ ಮೂಲಕ ಸಹೋದರ ಸಹೋದರಿಯರೊಂದಿಗಿನ ನಿಮ್ಮ ಸಂಬಂಧ, ಧೈರ್ಯ, ಲೇಖನ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಈ ಮನೆಯಲ್ಲಿ ಬುಧ ಗ್ರಹದ ಸಂಚಾರದಿಂದಾಗಿ ಕಿರಿಯ ಸಹೋದರ ಸಹೋದರಿಯರೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ನೀವು ಅವರಿಗೆ ಸಹಾಯ ಮಾಡಲು ಮುಂದೆ ಬರುವಿರಿ ಮತ್ತು ಅವರು ಸಹ ಎಲ್ಲಾ ಪರಿಸ್ಥಿತಿಯಲ್ಲಿ ನಿಮ್ಮನ್ನು ಬೆಂಬಲಿಸುತ್ತಾರೆ. ಕುಟುಂಬದ ವಾತಾವರಣವು ಸಾಮಾನ್ಯವಾಗಿರುತ್ತದೆ ಮತ್ತು ಕುಟುಂಬದ ಸದಸ್ಯರ ನಡುವೆ ಸಾಮರಸ್ಯ ಉಳಿದಿರುತ್ತದೆ. ಕುಟುಂಬದ ಉತ್ತಮ ವಾತಾವರಣದ ಕಾರಣದಿಂದಾಗಿ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ನೀವು ಉತ್ತಮ ಪ್ರದಾರ್ಶನ ಮಾಡುವಿರಿ. ಸಾಮಾಜಿಕ ಮಟ್ಟದಲ್ಲಿ ನೀವು ನಿಮ್ಮ ಸ್ನೇಹಿತರು ಮತ್ತು ಆಪ್ತರ ಮೂಲಕ ಪ್ರಯೋಜನವನ್ನು ಪಡೆಯಬಹುದು.

ನಿಮ್ಮ ಆರ್ಥಿಕ ಭಾಗದ ಮೇಲೆ ದೃಷ್ಟಿ ಹಾಕಿದರೆ, ಹಣ ಸಂಬಂಧಿತ ವಹಿವಾಟುಗಳ ಬಗ್ಗೆ ನೀವು ವಿಶೇಷವಾಗಿ ಜಾಗರೂಕರಾಗಿರಬೇಕು. ನಿಮ್ಮ ಒಂದು ಸಣ್ಣ ತಪ್ಪು ಸಹ ನಿಮಗೆ ದೊಡ್ಡ ನಷ್ಟವನ್ನುಂಟು ಮಾಡಬಹುದು. ಈ ರಾಶಿಚಕ್ರದ ಕೆಲವು ಸ್ಥಳೀಯರು ಈ ಸಮಯದಲ್ಲಿ ಉದ್ದೇಶಪೂರ್ವಕ ಭಯದಿಂದ ಬಳಲುತ್ತಬಹುದು. ಈ ಕಾರಣದಿಂದಾಗಿ ನೀವು ಮಾನಸಿಕ ಒತ್ತಡಕ್ಕೊಳಗಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ವೈಗಾ ಧ್ಯಾನವನ್ನು ಆಶ್ರಯಿಸಬೇಕು.

ಪರಿಹಾರ - ನೀವು ನಪುಂಸಕರ ಆಶೀರ್ವಾದವನ್ನು ಪಡೆಯಬೇಕು, ಇದರಿಂದ ನಿಮ್ಮ ಜೀವನದಲ್ಲಿ ಸಕಾರಾತ್ಮಕತೆ ಉಂಟಾಗುತ್ತದೆ.

  1. ಕನ್ಯಾ ರಾಶಿ

ಬುಧ ಗ್ರಹವು ಕನ್ಯಾ ರಾಶಿಚಕ್ರದ ಸ್ಥಳೀಯರ ಲಗ್ನದ ಮನೆಯ ಮಾಲೀಕ ಮತ್ತು ಸಂಚಾರದ ಈ ಸಮಯದಲ್ಲಿ ಕನ್ಯಾ ರಾಶಿಚಕ್ರದ ಸ್ಥಳೀಯರ ಎರಡನೇ ಮನೆಗೆ ಸಾಗಲಿದೆ. ಎರಡನೇ ಮನೆಯ ಮೂಲಕ ನಿಮ್ಮ ಕುಟುಂಬ ಧ್ವನಿ ಮತ್ತು ಸಂಪತ್ತಿನ ಬಗ್ಗೆ ಪರಿಗಣಿಸಲಗುತದೆ. ಈ ಮನೆಯಲ್ಲಿ ಬುಧನ ಸ್ಥಾನದಿಂದಾಗಿ ನಿಮ್ಮ ಕುಟುಂಬ ಜೀವನವು ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನೀವು ಮನೆಯ ಪ್ರತಿಯೊಬ್ಬ ಸದಸ್ಯರನ್ನು ಚೆನ್ನಾಗಿ ನೋಡಿಕೊಳ್ಳುವಿರಿ ಮತ್ತು ಅವರ ಅಗತ್ಯಗಳಿಗಾಗಿ ಖರ್ಚು ಮಾಡಲು ಸಹ ಹಿಂಜರಿಯುವುದಿಲ್ಲ ಸಾಮಾಜಿಕ ಮಟ್ಟದ ಮೇಲು ನೀವು ಪರಿಣಾಮ ಬೀರುವಿರಿ . ನಿಮ್ಮ ಧ್ವನಿಯ ಬಲದ ಮೇಲೆ ನೀವು ಜನರನ್ನು ಪ್ರಭಾವಿಸುವಲ್ಲಿ ಯಶಸ್ವಿಯಾಗುತ್ತೀರಿ. ಈ ರಾಶಿಚಕ್ರದ ವ್ಯಾಪಾರಸ್ಥರು ತಮ್ಮ ಹಿಂದಿನ ಯೋಜನೆಗಳ ಮೂಲಕ ಲಾಭವನ್ನು ಪಡೆಯಬಹುದು. ಬುಧ ಸಂಚಾರದ ಈ ಸಮಯದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ಈ ರಾಶಿಚಕ್ರದ ವಿದ್ಯಾರ್ಥಿಗಳು ತಮ್ಮ ತಾರ್ಕಿಕ ಸಾಮರ್ಥ್ಯದಿಂದ ಗುರುಗಳು ಮತ್ತು ಸಹಪಾಠಿಗಳನ್ನು ಪ್ರಭಾವಿಸಬಹುದು. ಈ ಸಮಯದಲ್ಲಿ ಈ ರಾಶಿಚಕ್ರದ ವಿದ್ಯಾರ್ಥಿಗಳು ಕಠಿಣ ವಿಷಯಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸಹ ಸಾಮರ್ತ್ಯರಾಗುತ್ತಾರೆ. ನೀವು ವೃತ್ತಿಪರರಾಗಿದ್ದರೆ ಮತ್ತು ಕೆಲಸದ ಸ್ಥಳದಲ್ಲಿ ಯಾವುದೇ ಸ್ಥಾನದಲ್ಲಿದ್ದರೆ. ನಿಮ್ಮ ಅಧೀನ ಕೆಲಸ ಮಾಡುತ್ತಿರುವವರ ಬಗ್ಗೆ ಸಹ ಹರಿಸಬೇಕು ಮತ್ತು ಅವರ ಅಗತ್ಯಗಳನ್ನು ನೋಡಿಕೊಳ್ಳಬೇಕು.

ಪರಿಹಾರ - ವಿಷ್ಣು ದೇವರನ್ನು ಪೂಜಿಸಿ ,ಅತ್ತು ಅವರಿಗೆ ಕರ್ಪುರವನ್ನು ಅರ್ಪಿಸುವುದು ನಿಮಗೆ ಶುಭವಾಗಿರುತ್ತದೆ.

  1. ತುಲಾ ರಾಶಿ

ಬುಧ ದೇವ ತುಲಾ ರಾಶಿಚಕ್ರದ ಸ್ಥಳೀಯರ ಲಗ್ನದ ಮನೆಗೆ ಸಾಗುತ್ತದೆ. ಲಗ್ನದ ಮನೆಯ ಮೂಲಕ ನಿಮ್ಮ ಅರೋಗ್ಯ, ಚರಿತ್ರ, ಬುದ್ಧಿ, ಅದೃಷ್ಟ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಈ ಮನೆಯಲ್ಲಿ ಬುಧ ಸಂಚಾರದ ಪರಿಣಾಮದಿಂದಾಗಿ ಈ ರಾಶಿಚಕ್ರದ ವ್ಹಯಪರಸ್ಥರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನೀವು ನಿಮ್ಮ ವ್ಯಾಪಾರವನ್ನು ವಿಸ್ತರಿಸುವ ಬಗ್ಗೆ ಪರಿಗಣಿಸುತ್ತಿದ್ದರೆ, ಅದು ಕ್ಲೇಯವು ಕಾರಣಗಳಿಂದಾಗಿ ಮುಂದೂಡಬಹುದು. ಈ ರಾಶಿಚಕ್ರದ ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಈ ಸಮಯದಲ್ಲಿ ಗೊಂದಲಕ್ಕೊಳಗಾಗಬಹುದು.

ನಿಮ್ಮ ಸಮಸ್ಯೆಗಳಿಗೆ ಸರಿಯಾದ ಪರಿಹಾರವನ್ನು ಪಡೆಯಲು ನೀವು ನಿಮ್ಮ ಗುರುಗಳು ಅಥವಾ ಪೋಷಕರೊಂದಿಗೆ ಮಾತನಾಡಬೇಕು. ತುರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ. ಸಾಮಾಜಿಕ ಮಟ್ಟದಲ್ಲೂ ಈ ರಾಶಿಚಕ್ರದ ಸ್ಥಳೀಯರು ಜಾಗರೂಕರಾಗಿರುವ ಅಗತ್ಯವಿದೆ. ಸಾಧ್ಯವಾದಷ್ಟು ಕಡಿಮೆ ಮಾತನಾಡಿ ಮತ್ತು ವಾದ-ವಿವಾದದ ಪರಿಸ್ಥಿತಿಗಳಿಂದ ದೂರವಿರಿ. ಈ ಸಮಯದಲ್ಲಿ ನಿಮ್ಮ ಮೂಲಕ ಹೇಳಲಾಗುವ ಯಾವುದೇ ಮಾತು ಇತರರನ್ನು ನೋಯಿಸಬಹುದು, ಬುಧ ಸಂಚಾರದ ಸಮಯದಲ್ಲಿ ನೀವು ನಿಮ್ಮ ನಡವಳಿಕೆಯಲ್ಲಿ ಸಕಾರಾತ್ಮಕ ಬದಲಾವಣೆ ತರುವ ಅಗತ್ಯವಿದೆ. ಇದಕ್ಕಾಗಿ ಸಜ್ಜನರ ಸಹವಾಸದಲ್ಲಿರಿ ಮತ್ತು ಒಳ್ಳೆಯ ಪುಸ್ತಕಗಳನ್ನು ಓದಿ. ಈ ರಾಶಿಚಕ್ರದ ವೃತ್ತಿಪರರು ಈ ಸಂಚಾರದ ಸಮಯದಲ್ಲಿ ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ. ಈ ಕಾರಣದಿಂದ ಅವರು ತಮ್ಮ ಕೆಲಸದ ಸ್ಥಳದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ.

ಪರಿಹಾರ - ವಿಷ್ಣು ಸಹಸ್ತ್ರನಾಮ ಸ್ತ್ರೋತವನ್ನು ಪಠಿಸುವುದರಿಂದ ನಿಮ್ಮ ಜೀವನದಲ್ಲಿ ಸಕಾರಾತ್ಮಕತೆ ಉಂಟಾಗುತ್ತದೆ.

  1. ವೃಶ್ಚಿಕ ರಾಶಿ

ಬುಧ ಗ್ರಹವು ವೃಶ್ಚಿಕ ರಾಶಿಚಕ್ರದ ಸ್ಥಳೀಯರ ಹನ್ನೆರಡನೇ ಮನೆಗೆ ಸಾಗುತ್ತಾರೆ. ಈ ಮನೆಯನ್ನು ನಷ್ಟದ ಮನೆಯೆಂದು ಕರೆಯಲಾಗುತ್ತದೆ ಮತ್ತು ಇದರ ಮೂಲಕ ನಿಮ್ಮ ವೆಚ್ಚ, ಪ್ರತ್ಯೇಕತೆ, ದುರ್ಬಲತೆ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಬುಧ ಸಂಚಾರವು ನಿಮ್ಮ ಜೀವನದಲ್ಲಿ ಕೆಲವು ಆರ್ಥಿಕ ಸವಾಲುಗಳನ್ನು ತರಬಹುದು. ನಿಮ್ಮ ವೆಚ್ಚಗಳು ಹೆಚ್ಚಾಗಬಹುದು ಈ ಕಾರಣದಿಂದಾಗಿ ನಿಮ್ಮ ಮಾನಸಿಕ ಒತ್ತಡ ಸಹ ಹೆಚ್ಚಾಗಬಹುದು. ಹಣಕಾಸಿನ ಉಳಿತಾಯಕ್ಕಾಗಿ ನೀವು ಉತ್ತಮ ಬಜೆಟ್ ಯೋಜನೆಯನ್ನು ಅನುಸರಿಸಿದರೆ, ಹಣವನ್ನು ಉಳಿಸಲು ಸಾಮರ್ಥ್ಯರಾಗಬಹುದು. .

ವಿದೇಶಕ್ಕೆ ಸಂಬಂಧಿಸಿದ ವ್ಯಾಪಾರದಲ್ಲಿ ತೊಡಗಿರುವವರು ಅಥವಾ ಯಾವುದೇ ವಿದೇಶಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಈ ಸಂಚಾರವು ಉತ್ತಮವಾಗಿರಬಹುದು. ಲಾಭವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಆರೋಗ್ಯದ ದೃಷ್ಟಿಯಿಂದ ಈ ಸಂಚಾರವು ನಿಮಗೆ ಶುಭವೆಂದು ಹೇಳಲಾಗುವುದಿಲ್ಲ. ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸಬೇಕು. ನಿಮ್ಮ ದಿನಚರಿಯಲ್ಲಿ ವ್ಯಾಯಾಮಕ್ಕೆ ಸ್ಥಾನವನ್ನು ನೀಡಿ.

ಪರಿಹಾರ - ಬುಧ ಬೀಜ ಮಂತ್ರವನ್ನು ಜಪಿಸುವುದು ನಿಮಗೆ ಶುಭವಾಗಿರುತ್ತದೆ.


ನಿಮ್ಮ ಜಾತಕದ ಶುಭ ಯೋಗವನ್ನು ತಿಳಿಯಲು ಈಗಲೇ ಖರೀದಿಸಿ ಆಸ್ಟ್ರೋಸೇಜ್ ಬೃಹತ್ ಕುಂಡಲಿ
  1. ಧನು ರಾಶಿ

ಬುಧ ಗ್ರಹವು ಧನು ರಾಶಿಚಕ್ರದ ಸ್ಥಳೀಯರ ಹನ್ನೊಂದನೇ ಮನೆಗೆ ಸಾಗಲಿದೆ. ಇದನ್ನು ಲಾಭದ ಮನೆಯೆಂದು ಸಹ ಕರೆಯಲಾಗುತ್ತದೆ ಮತ್ತು ಈ ಮನೆಯಲ್ಲಿ ಬುಧ ಗ್ರಹವು ನೆಲೆಗೊಂಡಿರುವ ಕಾರಣದಿಂದಾಗಿ ಧನು ರಾಶಿಚಕ್ರದ ಸ್ಥಳೀಯರಿಗೆ ಲಾಭವನ್ನು ಒದಗಿಸುತ್ತದೆ. ಈ ಸಮಯದಲ್ಲಿ ನಿಮ್ಮ ಜೀವನದ ವಿವಿಧ ಕ್ಷೇತ್ರಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಕಾಣಬಹುದು. ಉದ್ಯೋಗದಲ್ಲಿರುವ ಈ ರಾಶಿಚಕ್ರದ ಸ್ಥಳೀಯರು ತಮ್ಮ ಕೆಲಸದ ಸ್ಥಳದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಬುಧ ಸಂಚಾರದ ಈ ಸಮಯದಲ್ಲಿ ಕೆಲವು ಸ್ಥಳೀಯರು ತಮ್ಮ ಕೆಲಸದ ಸ್ಥಳದಲ್ಲಿ ಉನ್ನತ ಸ್ಥಾನವನ್ನು ಅಥವಾ ಬಡ್ತಿ ಪಡೆಯಬಹುದು. ಇದರೊಂದಿಗೆ ಅವರ ಅಧಯವು ಹೆಚ್ಚಾಗುವ ಸಂಪೂರ್ಣ ಸಾಧ್ಯತೆ ಇದೆ. ಹಣವನ್ನು ಸರಿಯಾಗಿ ಹೇಗೆ ಬಳಸುವುದು ಎಂಬುದರ ಬಗ್ಗೆ ನೀವು ಪರಿಗಣಿಸಬೇಕು.

ನಿಮ್ಮೊಂದಿಗೆ ನಿಮ್ಮ ಜೀವನ ಸಂಗಾತಿ ಸಹ ತಮ್ಮ ಕೆಲಸದ ಸ್ಥಳದಲ್ಲಿ ಲಾಭವನ್ನು ಪಡೆಯಬಹುದು. ಇದಲ್ಲದೆ ಈ ರಾಶಿಚಕ್ರದ ಸ್ಥಳೀಯರು ಉನ್ನತ ಅಧಿಕಾರಿಗಳ ಬೆಂಬಲನ್ನು ಸಹ ಪಡೆಯಬಹುದು. ಇದರೊಂದಿಗೆ ಹೊಸ ವಿಷಯಗಳನ್ನು ಕಲಿಯಲು ಅವಕಾಶವನ್ನು ಪಡೆಯುತ್ತಾರೆ. ಕುಟುಂಬದ ಜೇವನದ ಬಗ್ಗೆ ಮಾತನಾಡಿದರೆ, ಹಿರಿಯ ಸಹೋದರ ಸಹೋದರಿಯರೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ಇದರಿಂದಾಗಿ ಕುಟುಂಬದ ವಾತಾವರಣವು ಉತ್ತಮವಾಗುತ್ತದೆ. ಸಾಮಾಜಿಕ ಮಟ್ಟದಲ್ಲಿ ನೀವು ನಿಮ್ಮ ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಕಳೆಯಬಹುದು. ಈ ರಾಶಿಚಕ್ರದ ದೀರ್ಘಕಾಲದಿಂದ ಯಾವುದೇ ರೋಗದಿಂದ ಬಳಲುತ್ತಿದ್ದರೆ, ಬುಧ ಸಂಚಾರದ ಈ ಸಮಯದಲ್ಲಿ ಅವರು ಆರಾಮವನ್ನು ಪಡೆಯಬಹುದು.

ಪರಿಹಾರ - ಬುಧವಾರದ ದಿನದಂದು ಹಸಿರು ಹಣ್ಣುಗಳ ದಾನ ಮಾಡುವುದು ನಿಮಗೆ ಶುಭವಾಗಿರುತ್ತದೆ.

  1. ಮಕರ ರಾಶಿ

ಬುಧ ಗ್ರಹವು ಮಕರ ರಾಶಿಚಕ್ರದ ಸ್ಥಳೀಯರ ಹತ್ತನೇ ಮನೆಗೆ ಸಂಚರಿಸುತ್ತದೆ. ಇದನ್ನು ಕರ್ಮದ ಮನೆಯೆಂದು ಸಹ ಕರೆಯಲಾಗುತ್ತದೆ ಮತ್ತು ಇದರ ಮೂಲಕ ನಿಮ್ಮ ಕೆಲಸದ ಸ್ಥಳ, ನಾಯಕತ್ವದ ಸಾಮರ್ಥ್ಯ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಈ ಮನೆಯ ನಿಮ್ಮ ಕರ್ಮ ಮತ್ತು ಕರ್ಮ ಕ್ಷೇತ್ರದ ಬಗ್ಗೆಯೂ ಪರಿಗಣಿಸಲಾಗುತ್ತದೆ ಆದ್ದರಿಂದ ಬುಧ ಸಂಚಾರದ ಈ ಸಮಯದಲ್ಲಿ ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಯಶಸ್ಸು ಪಡೆಯುತ್ತೀರಿ. ನೀವು ದೀರ್ಘಕಾಲದಿಂದ ಯಾವುದೇ ಸಂಸ್ಥೆಯೊಂದಿಗೆ ಸೇರಿದ್ದರೆ, ಈ ಸಮಯದಲ್ಲಿ ನೀವು ಉನ್ನತ ಸ್ಥಾನವನ್ನು ಪಡೆಯಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಈ ರಾಶಿಚಕ್ರದ ವ್ಯಾಪಾರಸ್ಥರಿಗೂ ಲಾಭವಾಗುವ ಸಂಪೂರ್ಣ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ನಿಮ್ಮ ಅಪೂರ್ಣ ಯೋಜನೆಗಳನ್ನು ಸಹ ಪೂರ್ಣಗೊಳಿಸಬಹುದು.

ಈ ಸಮಯದಲ್ಲಿ ನಿವು ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಬಯಸುತ್ತಿದ್ದರೆ, ಸಮಯ ಉತ್ತಮವಾಗಿರುತ್ತದೆ. ಈ ರಾಶಿಚಕ್ರದ ಜನರು ಜೀವನವನ್ನು ಉತ್ತಮಗೊಳಿಸಲು ಈ ಸಮಯದಲ್ಲಿ ಅನೇಕ ಅವಕಾಶಗಳನ್ನು ಪಡೆಯಬಹುದು. ಆದರೆ ನೀವು ಸ್ವಲ್ಪ ಜಾಗರೂಕರಾಗಿರಬೇಕು ಮತ್ತು ಸರಿಯಾದ ಸಮಯದಲ್ಲಿ ಹೆಜ್ಜೆಯನ್ನು ಹಾಕಬೇಕು ಎಂದು ನಿಮಗೆ ಸಕಾಶೇ ನೀಡಲಾಗಿದೆ. ಈ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಈ ಸಮಯವೂ ಅನುಕೂಲಕರವಾಗಿ ಕಂಡುಬರುತ್ತಿದೆ. ಶಿಕ್ಷಣದ ಕ್ಷೇತ್ರದಲ್ಲಿ ನೀವು ಸಾಧನೆಯನ್ನು ಪಡೆಯಬಹುದು. ಈ ಸಮಯದಲ್ಲಿ ನಿಮ್ಮ ಏಕಾಗ್ರತೆ ಬೆಳೆಯುತ್ತದೆ ಮತ್ತು ಕಠಿಣ ವಿಷಯಗಳನ್ನು ಸಹ ನೀವು ಬಹಳ ಸುಲಭವಾಗಿ ಅರ್ಥಮಾಡಿಕೊಳ್ಳುವಿರಿ. ಕುಟುಂಬದ ವಾತಾವರಣವು ಉತ್ತಮವಾಗಿರುತ್ತದೆ. ಆದಾಗ್ಯೂ ಈ ಸಮಯದಲ್ಲಿ ನೀವು ನಿಮ್ಮ ಕೋಪವನ್ನು ನಿಯಂತ್ರಿಸುವ ಅಗತ್ಯವಿದೆ. ಹೊರಗಿನ ಹುರಿದ ಆಹಾರ ಸೆವ್ರಿಸುವುದನ್ನು ತಪ್ಪಿಸಿದರೆ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.

ಪರಿಹಾರ - ಮನೆಯ ಪೂಜಾಸ್ಥಳದಲ್ಲಿ ಕರ್ಪುರವನ್ನು ಬೆಳಗಿಸಿ, ಜೀವನದಲ್ಲಿ ಸಕಾರಾತ್ಮಕತೆ ಬರುತ್ತದೆ.

ವರ್ಣರಂಜಿತ ಬೃಹತ್ ಕುಂಡಲಿ ನಿಮ್ಮ ಆಹ್ಲಾದಕರ ಜೀವನಕ್ಕೆ ಪ್ರಮುಖವಾಗಿದೆ

  1. ಕುಂಭ ರಾಶಿ ಭವಿಷ್ಯ

ಶನಿ ಮಾಲೀಕತ್ವದ ಕುಂಭ ರಾಶಿಚಕ್ರದ ಸ್ಥಳೀಯರ ಒಂಬತ್ತನೇ ಮನೆಗೆ ಬುಧ ಗ್ರಹವು ಪ್ರವೇಶಿಸಲಿದೆ. ಈ ಮನೆಯ ಮೂಲಕ ನಿಮ್ಮ ಅದೃಷ್ಟ, ಧರ್ಮ-ಕರ್ಮ, ಪ್ರಯಾಣ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಬುಧ ಗ್ರಹದ ಈ ಸಂಚಾರವು ಕುಂಭ ರಾಶಿಚಕ್ರದ ಸ್ಥಳೀಯರಿಗೆ ಅನೇಕ ವಿಷಯಗಳಲ್ಲಿ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನೀವು ಮಾನಸಿಕ ಶಾಂತಿಯನ್ನು ಪಡೆಯಲು ಧರ್ಮ- ಕರ್ಮದ ಕಾರ್ಯಗಳನ್ನು ಮಾಡುವಿರಿ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಈ ಸಮಯದಲ್ಲಿ ನೀವು ಆಧ್ಯಾತ್ಮಿಕತೆಗೆ ಸಂಬಂಧಿಸಿದ ಪುಸ್ತಕಗಳ ಅಧ್ಯಯನ ಸಹ ಮಾಡುವಿರಿ. ಇದರೊಂದಿಗೆ ಕೆಲವರು ಯೋಗ ಇತ್ಯಾದಿಗಳನ್ನು ಆಸಕ್ತಿವಹಿಸುತ್ತಾರೆ. ಕುಟುಂಬ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ನೀವು ಪ್ರಯತ್ನಿಸುತ್ತೀರಿ. ಈ ಸಮಯದಲ್ಲಿ ನೀವು ಕುಟುಂಬದೊಂದಿಗೆ ಧಾರ್ಮಿಕ ಯಾತ್ರೆಗೂ ಹೋಗಬಹುದು.

ಈ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಬುಧ ಸಂಚಾರವು ಉತ್ತಮವಾಗಿರುತ್ತದೆ. ನಿಮ್ಮ ತಾರ್ಕಿಕ ಸಾಮರ್ಥ್ಯ ಹೆಚ್ಚಾಗುತ್ತದೆ. ಗಣಿತ, ವಿಜ್ಞಾನಗಳಂತಹ ವಿಷಯಗಳಲ್ಲಿ ನೀವು ಉತ್ತಮ ಪ್ರದರ್ಶನ ಮಾಡುವಿರಿ. ಈ ರಾಶಿಚಕ್ರದ ನಿರುದ್ಯೋಗಿಗಳು ಈ ಸಮಯದಲ್ಲಿ ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ ಮತ್ತು ಯಾವುದೇ ಉತ್ತಮ ಉದ್ಯೋಗವನ್ನು ಪಡೆಯಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ವ್ಯಾಪಾರಸ್ಥರಿಗೆ ಕೂಡ ಅನುಕೂಲಕರವಾಗಿರುತ್ತದೆ. ನೀವು ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣಿಸಿದರೆ, ಲಾಭ ಸಂಪೂರ್ಣ ಸಾಧ್ಯತೆ ಇದೆ.

ಪರಿಹಾರ - ವಿಶೇಷವಾಗಿ ಬುಧವಾರದಂದು ಹಸಿರು ವಸ್ತುಗಳ ದಾನ ಮಾಡುವುದು ನಿಮಗೆ ಶುಭವಾಗಿರುತ್ತದೆ.

  1. ಮೀನಾ ರಾಶಿ

ಬುಧ ಗ್ರಹವು ಮೀನಾ ರಾಶಿಚಕ್ರದ ಸ್ಥಳೀಯರ ಎಂಟನೇ ಮನೆಗೆ ಸಾಗುತ್ತದೆ. ಈ ಮನೆಯ ಮೂಲಕ ನಿಮ್ಮ ಜೀವನದಲ್ಲಿ ಉಂಟಾಗುವ ಏರಿಳಿತ, ಅಡೆತಡೆ, ರಹಸ್ಯ ವಿಧ್ಯೆ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಮೀನಾ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹದ ಸಂಚಾರವು ಸವಾಲುಗಳಿಂದ ತುಂಬಿರಲಿದೆ. ಕೆಲಸದ ಸ್ಥಳದಲ್ಲಿ ನೀವು ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು. ನಿಮ್ಮನ್ನು ಯಾವುದೇ ಸುಳ್ಳು ಸಿಲುಕಿಸಬಹುದು. ಏಕೆಂದರೆ ಈ ಸಮಯದಲ್ಲಿ ನಿಮ್ಮ ಶತ್ರುಗಳು ಸಕ್ರಿಯರಾಗಿರುತ್ತಾರೆ. ಈ ಸಮಯದಲ್ಲಿ ನೀವು ಹೆಚ್ಚು ಜಾಗರೂಕರಾಗಿರುವ ಅಗತ್ಯವಿದೆ. ಆದಾಗ್ಯೂ ನೀವು ಕಡೆಗೆ ಮುಂದುವರಿಯಿರಿ ಮತ್ತು ಯೋಗ ಧ್ಯಾನವನ್ನು ಆಶ್ರಯಿಸಿದರೆ ಸಂಚಾರದ ಈ ಸಮಯದಲ್ಲಿ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು.

ಆಧ್ಯಾತ್ಮಿಕ ಪ್ರಗತಿಯ ಅವಕಾಶಗಳನ್ನು ಪಡೆಯುವಿರಿ. ಯಾವುದೇ ರೀತಿಯ ಸಂಶೋಧನೆಯ ಕೆಲಸದಲ್ಲಿ ತೊಡಗಿರುವ ಈ ರಾಶಿಚಕದ ಜನರಿಗೆ ಈ ಸಂಚಾರವು ಉತ್ತಮವಾಗಿರಬಹುದು. ನಿಮ್ಮ ಸಂಶೋಧನೆಗೆ ಹೊಸ ವೇಗ ಸಿಗಬಹುದು. ವಾಹನವನ್ನು ಚಲಾಯಿಸುತ್ತಿರುವ ಈ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ತುಂಬಾ ಎಚ್ಚರದಿಂದ ವಾಹನವನ್ನು ಚಲಾಯಿಸಬೇಕು. ಇಲ್ಲದಿದ್ದರೆ ನೀವು ಮಾತ್ರವಲ್ಲ, ಬೇರೊಬ್ಬರ ಕಾರಣದಿಂದಾಗಿ ಸಹ ನೀವು ಅಪಘಾತಕ್ಕೆ ಬಲಿಯಾಗಬಹುದು. ಮೀನಾ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ತಮ್ಮ ಆರೋಗ್ಯದ ಬಗ್ಗೆ ಕೂಡ ವಿಶೇಷ ಕಾಳಜಿ ವಹಿಸಬೇಕು. ನಿಮ್ಮ ಆಹಾರ ಪಾನೀಯದ ಬಗ್ಗೆ ಗಮನ ಹರಿಸಿ. ನಿಮ್ಮ ಹೊಟ್ಟೆಯನ್ನು ಆರೋಗ್ಯವಾಗಿಡಲು ಸಾಧ್ಯವಾದಷ್ಟು ನೀರು ಕುಡಿಯಿರಿ, ಸಮಯಕ್ಕೆ ನಿದ್ರೆ ಮಾಡಿ ಮತ್ತು ಎದ್ದೇಳಿ.

ಪರಿಹಾರ - ಅತ್ತೆ, ಅಥವಾ ಚಿಕ್ಕ ಹುಡುಗಿಯರಿಗೆ ಯಾವುದೇ ಉರುಗೋರೆಯನ್ನು ನೀಡಿ. ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆಯುವಿರಿ.


ಯಂತ್ರ, ರತ್ನದ ಕಲ್ಲು ಇತ್ಯಾದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ ಆಸ್ಟ್ರೋಸೇಜ್ ಆನ್ಲೈನ್ ಶಾಪಿಂಗ್ ಸ್ಟೋರ್

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 399/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer