ಮಂಗಳ ಸಂಚಾರ ಕುಂಭ ರಾಶಿಯಲ್ಲಿ - Mars Transit in Aquarius in Kannada
ಮಂಗಳ ಗ್ರಹವು 4 ಮೇ 2020, ಸೋಮವಾರ ರಂದು ರಾತ್ರಿ 7 : 59 ಗಂಟೆಗೆ ತನ್ನ ಉನ್ನತ ರಾಶಿಯಾದ ಮಕರ ರಾಶಿಚಕ್ರದಿಂದ ಹೊರಬಂದು ಕುಂಭ ರಾಶಿಚಕ್ರದಲ್ಲಿ ಪ್ರವೇಶಿಸಲಿದೆ. ಇದು ಮಂಗಳ ದೇವರ ಶತ್ರು ಶನಿ ಸ್ವಾಮಿತ್ವದ ರಾಶಿ. ಮಂಗಳವು ಬೆಂಕಿಯ ಅಂಶದ ಗ್ರಹವಾಗಿದೆ ಮತ್ತು ಕುಂಭ ರಾಶಿಯು ವಾಯು ಅಂಶದ ರಾಶಿಚಕ್ರವಾಗಿದೆ. ಈ ರೀತಿ ಒಂದು ಅಗ್ನಿ ಅಂಶದ ಗ್ರಹವು ಗಾಳಿ ತತ್ವದ ರಾಶಿಚಕ್ರದಲ್ಲಿ ಪ್ರವೇಶಿಸಿದಾಗ ವಾತಾವರಣದಲ್ಲಿ ಬೆಚ್ಚಗಿನ ಗಾಳಿ ಬೀಸಲಿದೆ.
ನಡೆಯಿರಿ, ಮಂಗಳನ ಕುಂಭ ರಾಶಿಚಕ್ರದಲ್ಲಿ ಸಂಚಾರವು ಎಲ್ಲ ಹನ್ನೆರಡು ರಾಶಿಚಿಹ್ನೆಗಳ ಮೇಲೆ ಏನು ಪರಿಣಾಮ ಬೀರಲಿದೆ ಎಂದು ತಿಳಿಯೋಣ.
ಜೀವನದಲ್ಲಿನ ಯಾವುದೇ ಸಮಸ್ಯೆಯ ಪರಿಹಾರವನ್ನು ಪಡೆಯಲು ಪ್ರಶ್ನೆ ಕೇಳಿ
ಈ ರಾಶಿ ಭವಿಷ್ಯ ಚಂದ್ರ ರಾಶಿಯನ್ನು ಆಧರಿಸಿದೆ. ನಿಮ್ಮ ಚಂದ್ರ ರಾಶಿ ಯನ್ನು ತಿಳಿಯಿರಿ.
- ಮೇಷ ರಾಶಿ
ಮೇಷ ರಾಶಿಚಕ್ರದ ಅಧಿಪತಿ ಮಂಗಳ ನಿಮ್ಮ ಹನ್ನೊಂದನೇ ಮನೆಗೆ ಸಂಚರಿಸುತ್ತದೆ. ಇದು ನಿಮ್ಮ ರಾಶಿಚಕ್ರದಿಂದ ಎಂಟನೇ ಮನೆಯ ಮಾಲೀಕ. ಮಂಗಳ ಸಂಚಾರವು ನಿಮಗಾಗಿ ಅನುಕೂಲತೆಯ ಬಾಗಿಲನ್ನು ತೆರೆಯುತ್ತದೆ ಮತ್ತು ಇದರ ಮೂಲಕ ನೀವು ಅನೇಕ ಅವಕಾಶಗಳನ್ನು ಪಡೆಯುತ್ತೀರಿ. ಈ ಸಾಗಣೆಯ ಸಮಯದಲ್ಲಿ ಅನೇಕ ರೀತಿಯ ಆರ್ಥಿಕ ಯೋಜನೆಗಳು ಯಶಸ್ವಿಯಾಗುತ್ತವೆ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ನೀವು ಹಣಕಾಸಿನ ಹೂಡಿಕೆಯ ಮೂಲಕ ಉತ್ತಮ ಪಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ. ಆಸ್ತಿಯಿಂದಲೂ ಸಹ ಲಾಭವಾಗುವ ಪ್ರಬಲ ಸಾಧ್ಯತೆ ಇದೆ.
ಕೆಲಸದ ಸ್ಥಳದಲ್ಲಿ ನೀವು ನಿಮ್ಮ ಹಿರಿಯ ಅಧಿಕಾರಿಗಳ ಅನುಗ್ರಹಕ್ಕೆ ಅರ್ಹರಾಗುವಿರಿ ಮತ್ತು ನಿಮಗೆ ವಿಶೇಷ ಸೌಲಭ್ಯಗಳು ಸಿಗಬಹುದು. ಈ ಸಂಚಾರದ ನಕಾರಾತ್ಮಕ ಪರಿಣಾಮವೇನೆಂದರೆ, ನಿಮ್ಮ ಪ್ರೀತಿ ಜೀವನದಲ್ಲಿ ಸವಾಲುಗಳು ಬರಲಿವೆ ಮತ್ತು ಪರಸ್ಪರ ವಿಚಾರಗಳಲ್ಲಿ ವ್ಯತ್ಯಾಸ ಉಂಟಾಗಬಹುದು, ಈ ಕಾರಣದಿಂದ ನಿಮ್ಮಿಬ್ಬರ ವಿವಾದ ಉದ್ಭವಿಸುವ ಸಾಧ್ಯತೆಯೂ ಇದೆ. ನೀವು ವಿವಾಹಿತರಾಗಿದ್ದರೆ, ನಿಮ್ಮ ಮಕ್ಕಳಿಗೆ ಈ ಸಂಚಾರವು ಸಾಮಾನ್ಯವಾಗಿರಲಿದೆ. ಆದಾಗ್ಯೂ ಅವರ ಅರೋಗ್ಯ ಹದಗೆಡಬಹುದು. ನೀವು ವಿಧ್ಯಾರ್ಥಿಯಾಗಿದ್ದರೆ, ಈ ಸಂಚಾರದ ಪರಿಣಾಮದಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ನೀವು ಹಣಕಾಸಿನ ಹೂಡಿಕೆ ಮಾಡುವಲ್ಲಿ ಯಶಸ್ವಿಯಾಗುವಿರಿ ಮತ್ತು ವಿರೋಧಿಗಳ ಮೇಲೆ ಪ್ರಾಬಲ್ಯ ಸಾಧಿಸಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಪ್ರಯತ್ನಗಳಿಗೆ ಎಲ್ಲಾ ರೀತಿಯಲ್ಲಿ ಲಾಭವಾಗುತ್ತದೆ. ನೀವು ಯಾವ ಕೆಲಸದಲ್ಲಿ ಕೈ ಹೌಕುವಿರೋ ಅದು ಹೊಳೆಯುತ್ತದೆ ಎಂದು ಹೇಳಬಹುದು.
ಪರಿಹಾರ - ನೀವು ಪ್ರತಿದಿನ ನಿಯಮಿತವಾಗಿ “ ಓಂ ಅಂಗ್ ಅಂಗಾರಕಾಯ್ ನಮಃ “ ಮಂಗಳ ಗ್ರಹ ಮಂತ್ರವನ್ನು ಜಪಿಸಬೇಕು.
ಶಿಕ್ಷಣ ಮತ್ತು ವೃತ್ತಿ ಜೀವನ ಕ್ಷೇತ್ರದಲ್ಲಿ ಸಮಸ್ಯೆಗಳು ಉಂಟಾಗುತ್ತಿದ್ದರೆ ಆಸ್ಟ್ರೋ ರಿಪೋರ್ಟ್ ಅನ್ನು ಬಳಸಿಕೊಳ್ಳಿ
- ವೃಷಭ ರಾಶಿ
ವೃಷಭ ರಾಶಿಚಕ್ರದ ಸ್ಥಳೀಯರಿಗೆ ಮಂಗಳ ಸಂಚಾರವು ಹತ್ತನೇ ಮನೆಯಲ್ಲಿರುತ್ತದೆ. ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ನೀವು ಅದ್ಭುತ ಯಶಸ್ಸು ಪಡೆಯಬಹುದು. ಮಂಗಳ ಗ್ರಹವು ನಿಮ್ಮ ರಾಶಿಚಕ್ರದ ಏಳನೇ ಮತ್ತು ಹನ್ನೆರಡನೇ ಮನೆಯ ಮಾಲೀಕ. ಮಂಗಳ ಸಂಚಾರದ ಈ ಸಮಯದಲ್ಲಿ, ಕೆಲಸದ ಸ್ಥಳದಲ್ಲಿ ನಿಮ್ಮ ಅಧಿಕಾರಗಳು ಮತ್ತು ಕರ್ತವ್ಯಗಳೊಂದಿಗೆ ಸಂಬಳ ಕೂಡ ಹೆಚ್ಚಾಗುವ ಸಂಪೂರ್ಣ ಸಾಧ್ಯತೆ ಇರುತ್ತದೆ. ಈ ಕಾರಣದಿಂದಾಗಿ ನಿಮ್ಮೊಂದಿಗೆ ಕೆಲಸ ಮಾಡುತ್ತಿರುವ ಕೆಲವರು ನಿಮ್ಮ ವಿರುದ್ಧವಾಗಿ ಪಿತೂರಿಯನ್ನು ರಚಿಸಬಹುದು ಮತ್ತು ನಿಮ್ಮ ಚಿತ್ರವನ್ನು ಹದಗೆಡಿಸಲು ಪ್ರಯತ್ನಿಸಬಹುದು.
ಇದನ್ನು ತಪ್ಪಿಸಲು ನೀವು ಹೆಚ್ಚಿನ ಅಭಿಮಾನ ಮತ್ತು ಹೆಚ್ಚಿನ ಮನೋಬಲದಿಂದ ತಪ್ಪಿಸಬೇಕು. ಈ ಸಂಚಾರದ ಪರಿಣಾಮದಿಂದಾಗಿ ನೀವು ನಿಮ್ಮ ಕೆಲಸಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವಿರಿ ಆದರೆ ದೇಹಕ್ಕೆ ಕಡಿಮೆ ಪ್ರಾಮುಖ್ಯತೆ ನೀಡುವುದರಿಂದ ಅರೋಗ್ಯ ಸಂಬಂಧಿತ ಸಮಸ್ಯೆಗಳು ಉಂಟಾಗಬಹುದು ಮತ್ತು ನೀವು ಆಯಾಸವನ್ನು ಅನುಭವಿಸಬಹುದು. ಈ ಸಂಚಾರದ ಪರಿಣಾಮದಿಂದಾಗಿ ಕುಟುಂಬದಲ್ಲಿ ಕೆಲವು ಏರಿಳಿತಗಳು ಉಳಿದಿರುತ್ತವೆ ಮತ್ತು ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ನೀವು ಚಿಂತೆಕ್ಕೊಳಗಾಗಬಹುದು. ಪ್ರೀತಿ ಜೀವನದ ದೃಷ್ಟಿಯಿಂದ ಈ ಸಂಚಾರವು ಹೆಚ್ಚು ಅನುಕೂಲಕರವಾಗಿರುವುದಿಲ್ಲ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಪ್ರೀತಿಪಾತ್ರರನ್ನು ಸಾಧ್ಯವಾದಷ್ಟು ಕಡಿಮೆ ಭೇಟಿಸಲು ಪ್ರಯತ್ನಿಸಿ. ಇದರಿಂದ ನಿಮ್ಮಿಬ್ಬರ ನಡುವಿನ ವಿವಾದವನ್ನು ತಪ್ಪಿಸಬಹುದು. ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಮತ್ತು ಸಾಧ್ಯವಾದರೆ ಜಿಮ್ ಜಾಯಿನ್ ಮಾಡಿ.
ಪರಿಹಾರ - ಮಂಗಳ ಗ್ರಹದ ಅನುಕೂಲಕರ ಪರಿಣಾಮವನ್ನು ಪಡೆಯಲು ನೀವು ಮಂಗಳವಾರದಂದು ಲವಂಗದ ಸಿಹಿ ಎಲೆಅಡಿಕೆಯನ್ನು ಬಜರಂಗಬಲಿ ದೇವರಿಗೆ ಅರ್ಪಿಸಿ.
- ಮಿಥುನ ರಾಶಿ
ಮಂಗಳ ಸಂಚಾರವು ಮಿಥುನ ರಾಶಿಚಕ್ರದಿಂದ ಒಂಬತ್ತನೇ ಮನೆಯಲ್ಲಿರುತ್ತದೆ. ಇದು ನಿಮ್ಮ ಆರನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ. ಈ ಸಂಚಾರದ ಪರಿಣಾಮವಾಗಿ ಕೆಲಸದ ಸ್ಥಳದಲ್ಲಿ ನೀವು ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ಏಕೆಂದರೆ ನಿಮ್ಮ ವರ್ಗಾವಣೆ ಸಂಭವಿಸಬಹುದು. ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ತಂದೆಯೊಂದಿಗಿನ ನಿಮ್ಮ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಮತ್ತು ಅವರ ಅರೋಗ್ಯ ಸಹ ಹದಗೆಡಬಹುದು. ಇದಲ್ಲದೆ, ಈ ಸಂಚಾರವು ನಿಮಗೆ ಸಾಮಾನ್ಯವಾಗಿ ಆರ್ಥಿಕ ಲಾಭವನ್ನು ನೀಡುತ್ತದೆ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಆದಾಯವನ್ನು ಹೆಚ್ಚಿಸುವ ದಿಕ್ಕಿನಲ್ಲಿ ನೀವು ಹೆಚ್ಚು ಪ್ರಯತ್ನಿಸುತ್ತೀರಿ ಮತ್ತು ಹೊಸ ಅವಕಹಗಳನ್ನು ಹುಡುಕುವಿರಿ.
ಈ ಸಮಯದಲ್ಲಿ ದೀರ್ಘಕಾಲದ ಪ್ರಯಾಣಗಳ ಅವಕಾಶವನ್ನು ಸಹ ನೀವು ಪಡೆಯುತ್ತೀರಿ, ಈ ಈ ಪ್ರವಾಸಗಳನ್ನು ಭವಿಷ್ಯದಲ್ಲಿ ಒಂದು ವಿಶೇಷ ಆಲೋಚನೆಯೊಂದಿಗೆ ಮಾಡುತ್ತೀರಿ. ಸಂಚಾರದ ಪರಿಣಾಮದಿಂದಾಗಿ ನಿಮ್ಮ ಸಹೋದರ ಸಹೋದರಿಯರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದರೆ ಇದರಿಂದ ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಪ್ರಬಲವಾಗುತ್ತದೆ ಮತ್ತು ಮನೋಬಲ ಹೆಚಾಗುತ್ತದೆ. ಇದರ ಮೂಲಕ ಕೆಲಸಗಳಲ್ಲಿ ಯಶಸ್ಸು ಪಡೆಯಲಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಕೌಟುಂಬಿಕವಾಗಿ ಈ ಸಂಚಾರವು ಹೆಚ್ಚು ಅನುಕೂಲಕರವಾಗಿರುವುದಿಲ್ಲ. ನಿಮ್ಮ ಕುಟುಂಬದಲ್ಲಿ ವಿಶೇಷವಾಗಿ ನಿಮ್ಮ ತಾಯಿಯ ಆರೋಗ್ಯವು ಹದಗೆಡಬಹುದು ಮತ್ತು ಅವರ ಸ್ವಭಾವದಲ್ಲಿ ಉದ್ವೇಗ ಹೆಚ್ಚಾಗಬಹುದು. ಮಂಗಳ ಈ ಸಂಚಾರವು ಕಠಿಣ ಪ್ರಯತ್ನದ ನಂತರವೇ ಯಶಸ್ಸನ್ನು ಸೂಚಿಸುತ್ತದೆ. ಆದ್ದರಿಂದ ನೀವು ಹೆಚ್ಚು ಪರಿಶ್ರಮಿಸಬೇಕು. ವಿರೋಧಿಗಳ ದೃಷ್ಟಿಕೋನದಿಂದ ಈ ಸಂಚಾರವು ದುರ್ಬಲವಾಗಿರುತ್ತದೆ ಮತ್ತು ನೀವು ಅವರ ಮೇಲೆ ಪ್ರಾಬಲ್ಯ ಸಾಧಿಸುವಿರಿ.
ಪರಿಹಾರ - ನೀವು ಮಂಗಳವಾರದಂದು ವಿಧಾನದಿಂದ ಮಂಗಳ ದೇವರ ಪೂಜೆ ಮಾಡಬೇಕು.
- ಕರ್ಕ ರಾಶಿ
ಮಂಗಳ ಗ್ರಹವು ಕರ್ಕ ರಾಶಿಚಕ್ರದ ಎಂಟನೇ ಮನೆಯಲ್ಲಿ ಸಾಗುತ್ತದೆ. ಮಂಗಳ ನಿಮ್ಮ ಐದನೇ ಮನೆ ಅಂದರೆ ತ್ರಿಕೋನ ಮತ್ತು ಹತ್ತನೇ ಮನೆ ಅಂದರೆ ಕೇಂದ್ರ್ರ ಮನೆಯ ಅಧಿಪತಿಯಾಗಿ ನಿಮಗಾಗಿ ಲಾಭದಾಯಕ ಗ್ರಹವಾಗಿದೆ, ಆದ್ದರಿಂದ ಈ ಸಂಚಾರದ ಸಾಕಷ್ಟು ಪ್ರಾಮುಖ್ಯತೆ ಇರಲಿದೆ. ಮಂಗಳ ಗ್ರಹವು ಎಂಟನೇ ಮನೆಯಲ್ಲಿ ಸಂಚರಿಸುವ ಕಾರಣದಿಂದಾಗಿ ಅರೋಗ್ಯ ಸಮಬಂಧಿತ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಅನಿಯಮಿತ ರಕ್ತದೊತ್ತಡ, ಅಪಘಾತ, ಗಾಯಗಳಂತಹ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಯಾವುದೇ ವಾಹನವನ್ನು ಬಹಳ ಎಚ್ಚರದಿಂದ ಚಲಾಯಿಸಿ. ಹಣವನ್ನು ಪಡೆಯಲು ರಹಸ್ಯ ಮಾರ್ಗಗಳನ್ನು ನೀವು ಹುಡುಕುವಿರಿ ಮತ್ತು ಭಾಗಶಃ ಅವುಗಳಲ್ಲಿ ನೀವು ಯಶಸ್ಸುಸಹ ಪಡೆಯಬಹುದು.
ಮಂಗಳ ಸಾಚಾರದ ಸಮಯದಲ್ಲಿ ನೀವು ಪರಿಗಣಿಸದೆ ಇರುವಂತಹ ಕೆಲವು ಅನಿರೀಕ್ಷಿತ ಪ್ರಯಾಣಗಳನ್ನು ಸಹ ಮಾಡಬೇಕಾಗಬಹುದು.ಇದರಿಂದಾಗಿ ದೈಹಿಕ ಮತ್ತು ಆರ್ಥಿಕ ನಷ್ಟವನ್ನು ಎದುರಿಸಬೇಕಾಗಬಹುದು. ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಕುಟುಂಬದ ವಾತಾವರಣವು ಉತ್ತಮವಾಗಿರಲಿದೆ. ಆದರೆ ಸಹೋದರ ಸಹೋದರಿಯರು ಕೆಲವು ಸವಾಲುಗಳ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ಕೆಲಸದ ಸ್ಥಳದಲ್ಲೂ ಹಲವು ಸಮಸ್ಯೆಗಳ ನಂತರ ಪ್ರಯೋಜನ ಪಡೆಯುವ ಸಮಯ ಬರುತ್ತದೆ. ನೀವು ಯಾವುದೇ ವಿಷಯವನ್ನು ಹೇಳುವುಳಕ್ಕೆ ಮೊದಲು ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ಏಕೆಂದರೆ ಅತ್ತೆಮನೆಯವರೊಂದಿಗಿನ ನಿಮ್ಮ ಸಂಬಂಧವು ಹದಗೆಡಬಹುದು. ಈ ಸಂಚಾರದ ಪರಿಣಾಮದಿಂದಾಗಿ ಜೀವನ ಸಂಗಾತಿಯ ಆರೋಗ್ಯವು ಬಳಲಬಹುದು ಮತ್ತು ನೀವು ಮಾನಸಿಕ ಒತ್ತಡಕ್ಕೊಳಗಾಗಾಹುದು. ಆದರೆ ಇದನ್ನು ನಿಮ್ಮ ಮೇಲೆ ಪ್ರಾಬಲ್ಯ ಸಿದ್ಧಿಸಲು ಅನುಮತಿಸಬೇಡಿ.
ಪರಿಹಾರ - ಮೂರು ಮುಖ ರುದ್ರಾಕ್ಷ ವನ್ನು ಕೆಂಪು ದಾರದಲ್ಲಿ ಹಾಕಿ ಮಂಗಳವಾರದಂದು ಧರಿಸಬೇಕು.
- ಸಿಂಹ ರಾಶಿ
ರಾಶಿಚಕ್ರದ ಸ್ಥಳೀಯರಿಗೆ ಮಂಗಳ ಲಾಭದಾಯಕ ಗ್ರಹವಾಗಿದೆ ಏಕೆಂದರೆ ಇದು ನಿಮ್ಮ ನಾಲ್ಕನೇ ಮನೆ ಮತ್ತು ಒಂಬತ್ತನೇ ಮನೆಯ ಮಾಲೀಕ. ಮಂಗಳ ಗ್ರಹದ ಸಂಚಾರವು ನಿಮ್ಮ ರಾಶಿಚಕ್ರದಿಂದ ಏಳನೇ ಮನೆಯಲ್ಲಿರುತ್ತದೆ. ಇದನ್ನು ನಿಮಗಾಗಿ ಹೆಚ್ಚು ಅನುಕೂಲಕರ ಎಂದು ಪರಿಗಣಿಸಲಾಗುವುದಿಲ್ಲ. ಈ ಸಾಗುವಿಕೆಯ ಪರಿಣಾಮದಿಂದಾಗಿ ನಿಮ್ಮ ದಾಂಪತ್ಯ ಜೀವನದಲ್ಲಿ ಒತ್ತಡ ಮತ್ತು ಜಗಳದ ಸಾಧ್ಯತೆ ಹೆಚ್ಚಾಗುತ್ತದೆ ಮತ್ತು ನಿಮ್ಮಿಬ್ಬರ ಸಂಬಂಧವು ಸಾಮಾನ್ಯವಾಗಿ ಉಳಿಯಲು ಸಾಧ್ಯವಾಗುವುದಿಲ್ಲ. ನಿಮ್ಮ ಜೀವನ ಸಂಗಾತಿಯ ನಡವಳಿಕೆಯಲ್ಲಿ ನೀವು ಬದಲಾವಣೆಯನ್ನು ಕಾಣುವಿರಿ ಮತ್ತು ಅವರು ಸ್ವಭಾವತಃ ಬಹಳ ಕೋಪದಲ್ಲಿರುತ್ತಾರೆ. ಈ ಕಾರಣದಿಂದ ಸಣ್ಣ ವಿಷಯದಿಂದಲೂ ನಿಮ್ಮ ಸಂಬಂಧ ಹದಗೆಡಬಹುದು.
ಈ ಸಂಚಾರದ ಸಕಾರಾತ್ಮಕ ಪರಿಣಾಮವೇನೆಂದರೆ, ವ್ಯಾಪಾರದ ವಿಷಯದಲ್ಲಿ ನೀವು ಉತ್ತಮ ಲಾಭವನ್ನು ಪಡೆಯುತ್ತೀರಿ. ನಿಮ್ಮ ತಂದೆ ಕೂಡ ಈ ಸಮಯದಲ್ಲಿ ತಮ್ಮ ಜೀವನದಲ್ಲಿ ಉತ್ತಮ ಪ್ರಗತಿಯನ್ನು ಪಡೆಯುತ್ತಾರೆ ಮತ್ತು ನಿಮ್ಮ ಕೆಲಸದ ಸ್ಥಳದಲ್ಲಿಯೂ ನೀವು ಪ್ರಗತಿ ಪಡೆಯುತ್ತೀರಿ. ನೀವು ಉದ್ಯೋಗದಲ್ಲಿದ್ದರೆ ಬಡ್ತಿ ಪಡೆಯಬಹುದು. ಇದಲ್ಲದೆ ನಿಮ್ಮ ಆರೋಗ್ಯವು ಬಲಗೊಳ್ಳುತ್ತದೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತರಾಗುವಿರಿ. ಸಂಚಾರದ ಪರಿಣಾಮದಿಂದಾಗಿ ನೀವು ಭಾಗಶಃ ಪ್ರಯೋಜನ ಪಡೆಯುವ ಸಾಧ್ಯತೆ ಇರುತ್ತದೆ. ಆದಾಗ್ಯೂ ಈ ಸಮಯದಲ್ಲಿ ಯಾವುದೇ ವಿಷ್ಯದ ಬಗ್ಗೆ ನಿಮ್ಮ ತಾಯಿ ಮತ್ತು ಜೀವನ ಸಂಗಾತಿಯ ನಡುವೆ ವಿವಾದವಾಗುವ ಸಾಧ್ಯತೆ ಇದೆ ಮತ್ತು ಇದರಿಂದ ಕುಟುಂಬದಲ್ಲಿ ಒತ್ತಡ ಉಳಿದಿರುತ್ತದೆ.
ಪರಿಹಾರ - ನೀವು ಪ್ರತಿ ಮಂಗಳವಾರದಂದು ನಿಯಮಿತವಾಗಿ ಮಲ್ಲಿಗೆ ಎಣ್ಣೆಯ ದೀಪವನ್ನು ಬೆಳಗಿಸಿ ಸುಂದರಕಾಂಡವನ್ನು ಪಠಿಸಬೇಕು.
- ಕನ್ಯಾ ರಾಶಿ
ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಮಂಗಳ ದೇವ ಮೂರನೇ ಮತ್ತು ಎಂಟನೇ ಮನೆಯ ಮಾಲೀಕನಾಗಿ ಹೆಚ್ಚು ಅನುಕೂಲಕರ ಗ್ರಹವಾಗಿರುವುದಿಲ್ಲ ಮತ್ತು ಇದು ನಿಮ್ಮ ರಾಶಿಚಕ್ರದಿಂದ ಆರನೇ ಮನೆಯಲ್ಲಿ ಸಂಚರಿಸುತ್ತದೆ. ಈ ಕಾರಣದಿಂದ ನಿಮ್ಮ ಪ್ರಯತ್ನಗಳಲ್ಲಿ ಯಶಸ್ಸು ಸಿಗುತ್ತದೆ ಆದರೆ ಅರೋಗ್ಯ ದುರ್ಬಲವಾಗಿರುತ್ತದೆ. ಈ ಸಮಯದಲ್ಲಿ ನೀವು ರಕ್ತ ಸಂಬಂಧಿತ ಯಾವುದೇ ದೈಹಿಕ ಸಮಸ್ಯೆಯಿಂದ ಬಳಲಬಹುದು. ಈ ಸಂಚಾರದ ಅನುಕೂಲಕರ ಭಾಗವೇನೆಂದರೆ, ಆರ್ಥಿಕವಾಗಿ ನೀವು ಕೆಲವು ಲಾಭವನ್ನು ಪಡೆಯಬಹುದು ಮತ್ತು ನಿಮ್ಮ ತಲೆಯ ಮೇಲೆ ಏರಿರುವ ಯಾವುದೇ ಲೋನ್ ಅಥವಾ ಸಾಲವನ್ನು ಮರುಪಾವತಿಸಲು ಸಂಪೂರ್ಣವಾಗಿ ಪ್ರಯತ್ನಿಸುವಿರಿ. ಅದರಿಂದ ನೀವು ಮುಕ್ತರಾಗಬಹುದು.
ಈ ಸಮಯದಲ್ಲಿ ನೀವು ನಿಮ್ಮ ಶತ್ರುಗಳ ಮೇಲೆ ಪ್ರಾಬಲ್ಯ ಸಾಧಿಸುವಿರಿ ಮತ್ತು ಇದಲ್ಲದೆ ಕಾನೂನು ಪ್ರಕರಣದಲ್ಲಿ ಯಾವುದೇ ವಿಷಯ್ ನಡೆಯುತ್ತಿದ್ದರೆ, ಅದು ಕೂಡ ನಿಮ್ಮ ಪರವಾಗಿ ಬರಬಹುದು. ಆದರೆ ನಿಮಗೆ ಸಂಬಂಧಿಸದೆ ಇರುವ ಇಂತಹ ಇತರರ ವಿಷಯಗಳಲ್ಲಿ ತಲೆ ಹಾಕುವುದನ್ನು ತಪ್ಪಿಸಬೇಕು. ನೀವು ಉದ್ಯೋಗದಲ್ಲಿದ್ದರೆ ಮಂಗಳನ ಈ ಸಂಚಾರವು ಉತ್ತಮ ಪರಿಣಾಮಗಳನ್ನು ಒದಗಿಸುತ್ತದೆ ಮತ್ತು ನಿಮ್ಮ ಉದ್ಯೋಗದಲ್ಲಿನ ಸ್ಥಾನವು ಬಲಗೊಳ್ಳುತ್ತದೆ. ನೀವು ಅತಿಯಾದ ದ್ರವ ಸೇವನೆಯನ್ನು ಸಾಧ್ಯವಾದಷ್ಟು ಸೇವಿಸಬೇಕು. ಇದರಿಂದ ಪಿತ್ತರಸ ಸ್ವಭಾವವು ನಿಮ್ಮ ದೇಹದಲ್ಲಿ ಶಾಂತಿಯಾಗಿ ಉಳಿಯುತ್ತದೆ ಮತ್ತು ನೀವು ಅನಾರೋಗ್ಯಕ್ಕೆ ಒಳಗಾಗುವುದಿಲ್ಲ.
ಪರಿಹಾರ - ನೀವು ಮಂಗಳವಾರದಂದು ನಿಯಮಿತವಾಗಿ ಹನುಮಾನ್ ಚಾಲೀಸವನ್ನು ಪಠಿಸಬೇಕು.
- ತುಲಾ ರಾಶಿ
ಮಂಗಳ ಸಂಚಾರವು ತುಲಾ ರಾಶಿಚಕ್ರದ ಐದನೇ ಮೆನೆಯಲ್ಲಿರುತ್ತದೆ. ಮಂಗಳ ನಿಮ್ಮ ರಾಶಿಚಕ್ರಕ್ಕೆ ಐದನೇ ಮತ್ತು ಏಳನೇ ಮನೆಯ ಮಲೀಕನಾಗಿರುವ ಕಾರಣದಿಂದಾಗಿ ಪ್ರತಿವಿಷ ಕೂಡ ಆಗಿದೆ ಮತ್ತು ಐದನೇ ಮನೆಯಲ್ಲಿ ಮಂಗಳ ಸಂಚಾರವು ಅನುಕೂಲಕರವಾಗಿರುವುದಿಲ್ಲ. ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಉದ್ಯೋಗದಲ್ಲಿ ಕೆಲವು ಬದಲಾವಣೆಗಳು ಬರಲಿವೆ ಈ ಸಮಯದಲ್ಲಿ ನೀವು ನಿಮ್ಮ ಉದ್ಯೋಗವನ್ನು ಬಿಡಬಹುದು ಮತ್ತು ಮತ್ತೊಂದು ಉದ್ಯೋಗಕ್ಕಾಗಿ ಪ್ರಯತ್ನಿಸಬಹುದು.
ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ವಿವಾಹಿತ ಜೀವನವು ಚೆನ್ನಾಗಿರುತ್ತದೆ ಆದರೆ ನಿಮ್ಮ ಮಕ್ಕಳಿಗೆ ದೈಹಿಕ ನೋವಾಗಬಹುದು. ವಿದ್ಯಾರ್ಥಿಗಳ ವಿಷಯದಲ್ಲಿ ಈ ಸಂಚಾರವು ಹೆಚ್ಚು ಅನುಕೂಲಕರವಾಗಿರುವುದಿಲ್ಲ ಏಕೆಂದರೆ ಇಲ್ಲಿರುವ ಮಂಗಳವು ನಿಮ್ಮ ಏಕಾಗ್ರತೆಯನ್ನು ಭಂಗಗೊಳಿಸುತ್ತದೆ ಮತ್ತು ಅಧ್ಯಯನದಲ್ಲಿ ಅಡಚಣೆಗಳನ್ನು ಉದ್ಭವಿಸುತ್ತದೆ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ಪ್ರೀತಿ ಜೀವನದ ದೃಷ್ಟಿಯಿಂದಲೂ ಸಹ ಈ ಸಂಚಾರವು ಹೆಚ್ಚು ಅನುಕೂಲಕರವಾಗಿರುವುದಿಲ್ಲ. ಆದಾಗ್ಯೂ ಕೆಲವು ವಿಶೇಷ ಪರಿಸ್ಥಿತಿಗಳಲ್ಲಿ ಈ ಸಂಚಾರವು ಪ್ರೀತಿ ಮದುವೆಯ ಸ್ಥಿತಿಯನ್ನು ಸಹ ತಯಾರಿಸುತ್ತದೆ. ಮಂಗಳನ ಸಂಚಾರವು ದೈಹಿಕವಾಗಿ ನಿಮ್ಮನ್ನು ಕಾಡಬಹುದು. ಆದರೆ ಆರ್ಥಿಕವಾಗಿ ಇದು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಮತ್ತು ಆದಾಯದಲ್ಲಿ ಹೆಚ್ಚಳವಾಗುತ್ತದೆ . ನೀವು ವ್ಯಾಪಾರದಲ್ಲಿ ತೊಡಗಿದ್ದರೆ, ವ್ಯಾಪಾರದ ವಿಷಯದಲ್ಲಿ ನಿಮ್ಮ ಬುದ್ಧಿ ಓಡುತ್ತದೆ. ನಿಮ್ಮ ವೆಚ್ಚಗಳು ನಿಯಂತ್ರಣದಲ್ಲಿರುತ್ತವೆ. ಇದರಿಂದ ಆರ್ಥಿಕವಾಗಿ ನೀವು ಸಂತೋಷವಾಗಿರುತ್ತೀರಿ.
ಪರಿಹಾರ - ಮಂಗಳ ಸಂಚಾರದ ವಿಶೇಷ ಲಾಭವನ್ನು ಪಡೆಯಲು ನೀವು ಮಂಗಳವಾರದಂದು ಬೆಲ್ಲವನ್ನು ಸೇವಿಸಬೇಕು.
- ವೃಶ್ಚಿಕ ರಾಶಿ
ಮಂಗಳ ಗ್ರಹವು ವೃಶ್ಚಿಕ ರಾಶಿಚಕ್ರದ ಸ್ಥಳೀಯರ ರಾಶಿ ಮಾಲೀಕ, ಆದ್ದರಿಂದ ಇದರ ಸಂಚಾರವು ನಿಮಗಿ ಬಹಳಷ್ಟು ಪ್ರಮುಖವಾಗಿರುತ್ತದೆ. ಇದು ನಿಮ್ಮ ಆರನೇ ಮನೆಯ ಮಾಲೀಕ. ಮತ್ತು ಮಂಗಳನ ಸಾಗಣೆ ನಿಮ್ಮ ರಾಶಿಚಕ್ರದಿಂದ ನಾಲ್ಕನೇ ಮನೆಯಲ್ಲಿರುತ್ತದೆ, ಈ ಸ್ಥಾನವನ್ನು ಹೆಚ್ಚು ಅನುಕೂಲಕರವೆಂದು ಪರಿಗಣಿಸಲಾಗುವುದಿಲ್ಲ. ಈ ಪರಿಸ್ಥಿತಿಯಲ್ಲಿ ನೀವು ಕುಟುಂಬ ಒತ್ತಡವನ್ನು ಎದುರಿಸಬೇಕಾಗಬಹುದು. ಮನೆಯಲ್ಲಿ ಕುಟುಂಬದ ಸದಸ್ಯರು ಪರಸ್ಪರರ ಬಗ್ಗೆ ಕೋಪದ ಭಾವನೆಯನ್ನು ಹೊಂದಿರುತ್ತಾರೆ ಮತ್ತು ವಿವಾದ-ಜಗಳ ಹೆಚ್ಚಾಗುತ್ತದೆ. ತಾಯಿಯ ಆರೋಗ್ಯವು ದುರ್ಬಲಗೊಳ್ಳುತ್ತದೆ ಮತ್ತು ಅವರು ಅನಾರೋಗ್ಯಕ್ಕೆ ಒಳಗಾಗಬಹುದು.
ಅವರ ಸ್ವಭಾವದಲ್ಲೂ ಉಗ್ರತೆಯನ್ನು ಕಾಣಲಾಗುತ್ತದೆ. ಈ ಕಾರಣದಿಂದಾಗಿ ಮಾನಸಿಕವಾಗಿ ನೀವು ಅಸಮಾಧಾನವನ್ನು ಅನುಭವಿಸುವಿರಿ. ಈ ಸಂಚಾರದ ಪರಿಣಾಮದಿಂದಾಗಿ ಯಾವುದೇ ವಿವಾದದ ಕಾರಣದಿಂದಾಗಿ ನೀವು ಸಂತೋಷ ಪಡೆಯಬಹುದು. ವಿವೇಶವಾಗಿ ಆಸ್ತಿ ವಿವಾದದ ಮೂಲಕ ಯಶಸ್ಸು ಪಡೆಯಬಹುದು. ಇದಲ್ಲದೆ, ನೀವು ಯಾವುದಾದರೂ ಹೊಸ ಚಲಿಸಬಲ್ಲ ಅಥವಾ ಸ್ಥಿರವಾದ ಆಸ್ತಿಯನ್ನು ಖರೇದಿಸುವಲ್ಲಿ ಯಶಸ್ವಿಯಾಗಬಹುದು. ಮಂಗಳ ಸಾಚಾರದ ಪರಿಣಾಮದಿಂದಾಗಿ ನಿಮ್ಮ ದಾಂಪತ್ಯ ಜೀವನದಲ್ಲಿ ಒತ್ತಡ ಮತ್ತು ಘರ್ಷಣೆಯ ಪರಿಸ್ಥಿತಿ ಉಂಟಾಗುತ್ತದೆ. ಆದ್ದರಿಂದ ವಿವಾದದಿಂದ ದೂರವಿರುವುದು ಉತ್ತಮವಾಗಿರುತ್ತದೆ. ಆದಾಗ್ಯೂ ಮಂಗಳ ಸಂಚಾರವು ನಿಮ್ಮ ಕೆಲಸದ ಸ್ಥಳದಲ್ಲಿ ಅದ್ಭುತ ಪರಿಸ್ಥಿತಿಯನ್ನು ನಿರ್ಮಿಸುತ್ತದೆ ಮತ್ತು ನೀವು ನಿಮ್ಮ ಕೆಲಸದಲ್ಲಿ ಬಲಗೊಳ್ಳುತ್ತಿರಿ. ಈ ಸಂಚಾರದ ಪರಿಣಾಮದಿಂದಾಗಿ ಭಾಗಶಃ ಹಣದ ಲಾಭವನ್ನು ಪಡೆಯುತ್ತೀರಿ. ಆದಾಗ್ಯೂ ನಿಮ್ಮ ವೆಚ್ಚಗಳಾದರು ಇದರಿಂದ ನಿಮ್ಮ ಪರಿಸ್ಥಿತಿ ಇದ್ದಂಗೆ ಇರುತ್ತದೆ.
ಪರಿಹಾರ - ಮಂಗಳ ಗ್ರಹದ ಶುಭ ಪರಿಣಾಮವನ್ನು ಪಡೆಯಲು ನೀವು "ಓಂ ಕ್ರಾಂ ಕ್ರೀಂ ಕ್ರೌಂ ಸಃ ಭೌಮಾಯ ನಮಃ" ಮಂಗಳ ಬೀಜ ಮಂತ್ರವನ್ನು ಜಪಿಸಬೇಕು.
- ಧನು ರಾಶಿ
ಧನು ರಾಶಿಚಕ್ರದ ಸ್ಥಳೀಯರಿಗೆ ಐದನೇ ಮನೆ ಮತ್ತು ಹನ್ನೆರಡನೇ ಮನೆಯ ಮಾಲೀಕ. ಇದು ನಿಮ್ಮ ರಾಶಿಚಕ್ರದ ಮಾಲೀಕ ಗುರುವಿನ ಆಪ್ತ ಮಿತ್ರ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಮೂರನೇ ಮನೆಯಲ್ಲಿ ಪ್ರವೇಶಿಸುತ್ತದೆ. ಮೂರನೇ ಮನೆಯಲ್ಲಿ ಮಂಗಳ ಸಾಗಣೆಯನ್ನು ಅನುಕೂಲಕರ ಎಂದು ಪರಿಗಣಿಸಗಿದೆ. ಆದ್ದರಿಂದ ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಶಕ್ತಿಯು ರೆಕ್ಕೆಗಳನ್ನು ಪಡೆಯುತ್ತದೆ ಮತ್ತು ನೀವು ನಿಮ್ಮ ಕೆಲಸದ ದಕ್ಷತೆ ಮತ್ತು ತಾಂತ್ರಿಕ ಸಾಮರ್ಥ್ಯದಿಂದಾಗಿ ಅನೇಕ ಕ್ಷೇತ್ರಗಳಲ್ಲಿ ಯಶಸ್ಸಿನ ಧ್ವಜವನ್ನು ಹರಿಸುವಿರಿ.
ನಿಮ್ಮ ಪ್ರಯತ್ನಗಳಿಗೆ ಯಶಸ್ಸು ಸಿಗುತ್ತದೆ. ಶಿಕ್ಷಣದ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ ಮತ್ತು ನೀವು ಬಹಳ ಸಂತೋಷಪುವಿರಿ. ಈ ಸಮಯದಲ್ಲಿ ನಿಮ್ಮ ಪ್ರೀತಿ ಜೇವನದಲ್ಲಿ ಮಾಧುರ್ಯ ಬರುತ್ತದೆ ಮತ್ತು ನಿಮ್ಮ ಜೇವನದಲ್ಲಿ ಹೊಸ ವ್ಯಕ್ತಿ ಪ್ರವೇಶಿಸಬಹುದು. ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಮಾನಸಿಕ ಒತ್ತಡ ದೂರವಾಗುತ್ತದೆ. ನೀವು ನಿಮ್ಮನ್ನು ಹೆಚ್ಚು ನಂಬುವಿರಿ, ಆದ್ದರಿಂದ ಪ್ರತಿಯೊಂದು ಕೆಲಸವನ್ನು ನೀವೇ ಪೂರ್ಣಗೊಳಿಸಲು ಬಯಸುತ್ತೀರಿ. ಇದು ಕೆಲಸದ ಪ್ರಗತಿಯನ್ನು ವೇಗಗೊಳಿಸುತ್ತದೆ ಮತ್ತು ಸಮಯ ಇರುವಾಗಲೇ ನೀವು ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುತ್ತೀರಿ. ನೀವು ನಿಮ್ಮ ವಿರೋಧಿಗಳ ಮೇಲೆ ಪ್ರಾಬಲ್ಯ ಸಾಧಿಸುವಿರಿ ಮತ್ತು ಅವರಿಂದ ಭಯಪಡುವುದಿಲ್ಲ. ನೀವು ಯಾವುದೇ ಕ್ರೀಡೆಯಲ್ಲಿ ತೊಡಗಿದ್ದರೆ, ಈ ಸಂಚಾರದ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ ಮತ್ತು ನಿಮ್ಮಆಟದ ಸಾಮರ್ಥ್ಯವು ಬಲವಾಗಿರುತ್ತದೆ. ಪ್ರವಾಸಗಳ ಸಾಧ್ಯತೆ ಇದೆ. ಆದಾಗ್ಯೂ ಈ ಪ್ರವಾಸಗಳಿಂದ ನೀವು ಆರ್ಥಿಕವಾಗಿ ನಿಮಗೆ ಲಾಭದಾಯಕ ಎಂದು ಸಾಬೀತುಪಡಿಸುತ್ತದೆ. ಕೆಲಸದ ಸ್ಥಳಕ್ಕಾಗಿಯೂ ಈ ಸನ್ಛ್ಛ್ರಾವು ಅನುಕೂಲ ಪಿಬಲಿತಾಂಶವನ್ನು ನೀಡುತ್ತದೆ ಎಂದು ಸಾಬೀತುಪಡಿಸುತ್ತದೆ.
ಪರಿಹಾರ - ನೀವು ವಿಶೇಷವಾಗಿ ಗುರುವಾರದಂದು ಹಸುವಿನ ಚಿತ್ರದ ವಿಧಿ-ವಿಧಾನದೊಂದಿಗೆ ಪೂಜೆ ಮಾಡಬೇಕು.
- ಮಕರ ರಾಶಿ
ಮಕರ ರಾಶಿಚಕ್ರದ ಸ್ಥಳೀಯರಿಗೆ ಮಂಗಳ ಗ್ರಹವು ಸಂತೋಷದ ಅಂದರೆ ನಾಲ್ಕನೇ ಮನೆ ಮತ್ತು ಆದಾಯದ ಮನೆ ಅಂದರೆ ಹನ್ನೊಂದನೇ ಮನೆಯ ಮಾಲೀಕ. ಮಂಗಳ ಸಂಚಾರವು ನಿಮ್ಮ ರಾಶಿಚಕ್ರದಿಂದ ಎರಡನೇ ಮನೆಯಲ್ಲಿರುತ್ತದೆ. ಇದು ನಿಮ್ಮ ಆರ್ಥಿಕ ಬಾಗಿಲನ್ನು ತೆರೆಯುತ್ತದೆ ಮತ್ತು ಕಡಿಮೆ ಪ್ರಯತ್ನದಿಂದಲೂ ಆರ್ಥಿಕ ಯಶಸ್ಸು ಪಡೆಯುವಿರಿ ಮತ್ತು ನಿಮ್ಮ ಸಾಮಾಜಿಕ ಮಟ್ಟವು ಹೆಚ್ಚಾಗುತ್ತದೆ . ಮಂಗಳ ಸಂಚಾರದ ದುರ್ಬಲ ಭಾಗವೇನೆಂದರೆ, ಕುಟುಂಬದಲ್ಲಿ ಒತ್ತಡವನ್ನು ಕಾಣಬಹುದು ಮತ್ತು ನಿಮ್ಮ ಧ್ವನಿಯಲ್ಲಿ ಕಹಿ ಮತ್ತು ಕೋಪವನ್ನು ಕಾಣಲಾಗುತ್ತದೆ. ಇದರಿಂದ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆಸ್ತಿಯ ವಿಷಯದಲ್ಲಿ ಈ ಸಂಚಾರವು ಅನುಕೂಲಕರವಾಗಿರುತ್ತದೆ ಮತ್ತು ಅದರಿಂದ ನಿಮಗೆ ಲಾಭವಾಗುತ್ತದೆ.
ಶಿಕ್ಷಣದ ಕ್ಷೇತ್ರದಲ್ಲಿ ಈ ಸಂಚಾರವು ಹೆಚ್ಚು ಅನುಕೂಲಕರ ಎಂದು ಹೇಳಲಾಗುವುದಿಲ್ಲ. ನಿಮ್ಮ ಅಧ್ಯಯನದ್ಲಲಿ ಅಡಚಣೆಗಳು ಉಂಟಾಗಬಹುದು. ಆರೋಗ್ಯದ ವಿಷಯದಲ್ಲಿ ಹೆಚ್ಚು ಅನುಕೂಲತೆ ಕಂಡುಬರುತ್ತಿಲ್ಲ ಮತ್ತು ನಿಮ್ಮ ರೋಗ ನಿರೋಧಕ ಸಾಮರ್ಥ್ಯವು ದುರ್ಬಲವಾಗಿರುವ ಕಾರಣದಿಂದಾಗಿ ನೀವು ಶೀಘ್ರದಲ್ಲೇ ಅನಾರೋಗ್ಯಕ್ಕೆ ಒಳಗಾಗಬಹುದು. ಈ ಸಮಯದಲ್ಲಿ ಹೆಚ್ಚು ಮಸಾಲೆಯುಕ್ತ ಆಹಾರ ಸೇವಿಸುವುದನ್ನು ತಪ್ಪಿಸಿ ಮತ್ತು ಕುಟುಂಬದಲ್ಲಿ ಶಾಂತಿ ಸ್ಥಾಪಿಸಲು ಪ್ರಯತ್ನಿಸಿ. ಈ ಸಮಯದಲ್ಲಿ ನಿಮಗೆ ಅಗತ್ಯವಿದ್ದರೆ, ನಿಮ್ಮ ಹಿರಿಯ ಸಹೋದರ ಸಹೋದರಿಯರು ನಿಮಗೆ ಆರ್ಥಿಕವಾಗಿ ಸಹಾಯ ಮಾಡುತ್ತಾರೆ, ಇದರಿಂದ ನಿಮ್ಮ ಸಂಬಂಧವು ಸುಧಾರಿಸುತ್ತದೆ. ಜೇವನ ಸಂಗಾತಿಯ ಆರೋಗ್ಯದಲ್ಲಿ ಕುಸಿತವನ್ನು ಕಾಣಬಹುದು. ಅವರ ಬಗ್ಗೆ ವಿಶೇಷ ಕಾಳಜಿ ವಹಿಸಿ ಮತ್ತು ಅಗತ್ಯವಿದ್ದರೆ ವೈದ್ಯರಿಗೆ ತೋರಿಸಿ.
ಪರಿಹಾರ - ನೀವು ಮಂಗಳ ದೇವರ ದುರದೃಷ್ಟದ ಪರಿಣಾಮದಿಂದ ತಪ್ಪಿಸಲು ಮಂಗಳ ದೇವರಿಗೆ ಬೆಲ್ಲವನ್ನು ಅರ್ಪಿಸಬೇಕು.
- ಕುಂಭ ರಾಶಿ
ಮಂಗಳ ಗ್ರಹವು ಕುಂಭ ರಾಶಿಚಕ್ರದ ಸ್ಥಳೀಯರ ಮೊದಲನೇ ಮನೆಯಲ್ಲಿರುತ್ತದೆ ಅಂದರೆ ನಿಮ್ದೇ ರಾಶಿಚಕ್ರದಲ್ಲಿ ಮಂಗಳ ಸಂಚಾರವು ಸಂಭವಿಸುವ ಕಾರಣದಿಂದಾಗಿ ಈ ಸಂಚಾರದ ವಿಶೇಷ ಪರಿಣಾಮ ಬೀರಲಿದೆ. ಮಂಗಳ ನಿಮ್ಮ ರಾಶಿಚಕ್ರಕ್ಕಾಗಿ ಮೂರನೇ ಮತ್ತು ಹತ್ತನೇ ಮನೆಯ ಮಾಲೀಕ. ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಸ್ವಭಾವದಲ್ಲಿ ವಿಶೇಷ ಬದಲಾವಣೆಯನ್ನು ಕಾಣಲಾಗುತ್ತದೆ. ನೀವು ಸ್ವಾಭಾವಿಕವಾಗಿ ಕೋಪ ಮತ್ತು ಹಠಮಾರಿಯಾಗಿರಬಹುದು. ವಾಹನ ಚಲಾಯಿಸುವ ಸಮಯದಲ್ಲಿ ನೀವು ಜಾಗರೂಕರಾಗಿರುವ ಅಗತ್ಯವಿದೆ.
ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಸಹೋದರ ಸಹೋದರಿಯರು ನಿಮ್ಮನ್ನು ಬೆಂಬಲಿಸುತ್ತಾರೆ ಮತ್ತು ನೀವು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ. ಕೆಲಸದ ಸ್ಟಳದಲ್ಲೂ ಈ ಸಂಚಾರದ ಉತ್ತಮ ಲಾಭವನ್ನು ಪಡೆಯುತ್ತೀರಿ. ನೀವು ನಿಮ್ಮ ಕೆಲಸಗಳನ್ನು ಬಹಳ ಚುರುಕುತನ ಮತ್ತು ತ್ವರಿತತೆಯಿಂದ ಮುಗಿಸುವಿರಿ. ಈ ಕಾರಣದಿಂದ ನಿಮ್ಮನ್ನು ಪ್ರಶಂಸಿಸಲಾಗುತ್ತದೆ. ಮಂಗಳ ಸಂಚಾರದ ಪರಿಣಾಮವು ನಿಮ್ಮ ಕುಟುಂಬ ಜೀವನವನ್ನು ತೊಂದರೆ ಮತ್ತು ಅಸಮಾಧಾನಗೊಳಿಸುತ್ತದೆ. ಇದಲ್ಲದೆ ಕುಟುಂಬದ ಹಿರಿಯ ಜನರ ಆರೋಗ್ಯವು ಬಳಲಬಹುದು. ಏಕೆಂದರೆ ಮಂಗಳನ ಏಳನೇ ದೃಷ್ಟಿಯು ನಿಮ್ಮ ದಾಂಪತ್ಯ ಜೀವನದ ಮೇಕೆ ಪರಿಣಾಮ ಬೀರುತ್ತದೆ, ಈ ಕಾರಣದಿಂದಾಗಿ ನಿಮ್ಮ ದಾಂಪತ್ಯ ಜೀವನವು ತೊಂದರೆಕ್ಕೊಳಗಾಗುತ್ತದೆ. ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಆರೋಗ್ಯವು ದುರ್ಬಲಗೊಳ್ಳಬಹುದು. ಆದ್ದರಿಂದ ವಿಶೇಷವಾಗಿ ನಿಮ್ಮ ಆರೋಗ್ಯದ ಬಗೆಗಿನ ಅಜಾಗರೂಕತೆಯನ್ನು ತಪ್ಪಿಸಿ.
ಪರಿಹಾರ - ಮಂಗಳ ಗ್ರಹದ ಅಶುಭಕರ ಪರಿಣಾಮದಿಂದ ತಪ್ಪಿಸಲು ನೀವು ತಾಮ್ರದ ಪಾತ್ರದಿಂದ ಮಂಗಳ ದೇವರಿಗೆ ಎಡೆ ಇಡಬೇಕು.
- ಮೀನಾ ರಾಶಿ
ಮೀನಾ ರಾಶಿಚಕ್ರದ ಸ್ಥಳೀಯರಿಗೆ ಮಂಗಳ ಎರಡನೇ ಮತ್ತು ಒಂಬತ್ತನೇ ಮನೆಯ ಮಾಲೀಕ ಮತ್ತು ಮಂಗಳ ಸಾಚಾರವು ನಿಮ್ಮ ರಾಶಿಚಕ್ರದಿಂದ ಹನ್ನೆರಡನೇ ಮನೆಯಲ್ಲಿರುತ್ತದೆ. ಈ ಸಂಚಾರದ ಪರಿಣಾಮದಿಂದಾಗಿ ವಿದೇಶಿ ಮೂಲಗಳ ಮೂಲಕ ನಿಮಗೆ ಲಾಭವಾಗುತ್ತದೆ. ಕೆಲಸಕ್ಕೆ ಸಂಬಂಧಿಸಿದಂತೆ ದೇಶದಿಂದ ಹೊರಹೋಗಿ ಪ್ರಯಾಣಿಸಬಹುದು. ಈ ಸಂಚಾರವು ವಿದೇಶದಲ್ಲಿ ನಿಮಗೆ ಬಹಳಷ್ಟು ಲಾಭವನ್ನು ನೀಡಬಹುದು. ಈ ಸಂಚಾರದ ಪರಿಣಾಮದಿಂದಾಗಿ ದಾಂಪತ್ಯ ಜೀವನದಲ್ಲಿ ನೀವು ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ಏಕೆಂದರೆ ಈ ಸಮಯದಲ್ಲಿ ನಿಮ್ಮಿಬ್ಬರ ನಡುವೆ ಘರ್ಷಣೆ ಉಂಟಾಗಬಹುದು.
ಈ ಸಮಯದಲ್ಲಿ ಜೀವನ ಸಂಗಾತಿಯ ನಡವಳಿಕೆ ನಿಮ್ಮನ್ನು ಆಶ್ಚರ್ಯಗೊಳಿಸಬಹುದು. ಏಕೆಂದರೆ ಅವರಿಂದ ಅಂತಹ ನಡವಳಿಕೆಯನ್ನು ನೀವು ನಿರೀಕ್ಷಿಸಿರುವುದಿಲ್ಲ. ಈ ಸಂಹಾರವು ನಿಮ್ಮ ಸಹೋದರ ಸಹೋದರಿಯರಿಗೆ ಹೆಚ್ಚು ಅನುಕೂಲಕರವಾಗಿರುವುದಿಲ್ಲ, ಆದ್ದರಿಂದ ಖಂಡಿತವಾಗಿಯೂ ಅವರ ಬಗ್ಗೆ ಕಾಳಜಿ ವಹಿಸಿ. ಈ ಸಂಚಾರದ ಪರಿಣಾಮದಿಂದಾಗಿ ಆದಾಯದಲ್ಲಿ ಸಾಮಾನ್ಯವಾಗಿ ಹೆಚ್ಚಳವಾಗುತ್ತದೆ. ಆದರೆ ನಿಮ್ಮ ವೆಚ್ಚವು ಸಹ ಸ್ವಲ್ಪ ಹೆಚ್ಚಾಗಬಹುದು. ಆದಾಗ್ಯೂ, ನಿಮ್ಮ ವಿರೋಧಿಗಳ ಬಗ್ಗೆ ನೀವು ತೊಂದರೆಕ್ಕೊಳಗಾಗುವ ಅವಶ್ಯಕತೆ ಇಲ್ಲ. ಏಕೆಂದರೆ ಅವರು ನಿಮ್ಮನ್ನು ಏನು ಮಾಡಲು ಸಾಧ್ಯವಾಗುವುದಿಲ್ಲ, ಈ ಸಮಯದಲ್ಲಿ ನೀವು ಹಣಕಾಸಿನ ಹೂಡಿಕೆಯ ಬಗ್ಗೆ ಯೋಚಿಸಬಹುದು. ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಏಕೆಂದರೆ ಈ ಸಮಯದಲ್ಲಿ ಕಣ್ಣಿಗೆ ಸಂಬಂಧಿಸಿದ ಸಮಸ್ಯೆ ಅಥವಾ ನಿದ್ರಾಹೀನತೆಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.
ಪರಿಹಾರ - ನೀವು ಮಂಗಳವಾರದಂದು ಮೂರು ಮುಖ ರುದ್ರಾಕ್ಷವನ್ನು ಧರಿಸಬೇಕು, ಇದರಿಂದ ನಿಮ್ಮ ಅದೃಷ್ಟವು ಬಲಗೊಳ್ಳುತ್ತದೆ.
ರತ್ನದ ಕಲ್ಲು, ರುದ್ರಾಕ್ಷದೊಂದಿಗೆ ಎಲ್ಲಾ ಜ್ಯೋತಿಷ್ಯ ಪರಿಹಾರಕ್ಕಾಗಿ ಕ್ಲಿಕ್ ಮಾಡಿ: ಆಸ್ಟ್ರೋಸೇಜ್ ಆನ್ಲೈನ್ ಶಾಪಿಂಗ್ ಸ್ಟೋರ್ ``
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
- Rashifal 2025
- Horoscope 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ராசி பலன் 2025
- రాశిఫలాలు 2025
- ರಾಶಿಭವಿಷ್ಯ 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025