ವೃಶ್ಚಿಕ ರಾಶಿ ಭವಿಷ್ಯ 2020 - Vrishchika Rashi bhavishya 2020
ವೃಶ್ಚಿಕ ರಾಶಿ ಭವಿಷ್ಯ 2020 (Vrishchika Rashi bhavishya 2020) ಪ್ರಕಾರ, ವೃಶ್ಚಿಕ ರಾಶಿಚಕ್ರದ ಸ್ಥಳೀಯರು ಈ ವರ್ಷ ಕೆಲವು ಅಪೂರ್ಣ ಕೃತಿಗಳನ್ನು ಪೂರ್ಣಗೊಳಿಸುವುದರಿಂದ ಪರಿಹಾರವನ್ನು ಪಡೆಯುತ್ತಾರೆ ಮತ್ತು ಕೆಲವು ಹೊಸ ಕೃತಿಗಳನ್ನು ಸಹ ಪ್ರಾರಂಭಿಸಬಹುದು. 2020 ರ ಅವಧಿಯಲ್ಲಿ, ನೀವು ದೀರ್ಘಕಾಲದವರೆಗೆ ಅನುಭವಿಸುತ್ತಿದ್ದ ತೊಂದರೆಗಳಿಂದ ಹೊರಬರುತ್ತೀರಿ ಮತ್ತು ಜೀವನದಲ್ಲಿ ಹೊಸ ಅಧ್ಯಾಯವನ್ನು ಶ್ರೀ ಗಣೇಶ್ ಮಾಡುತ್ತೀರಿ . ಈ ವರ್ಷ, ವೃಶ್ಚಿಕ ರಾಶಿಚಕ್ರದ ಜನರು ದುಃಖಗಳಿಂದ ಮುಕ್ತಿ ಪಡೆಯುತ್ತಾರೆ ಮತ್ತು ಜೀವನ ಚಕ್ರದಲ್ಲಿ ಸಂತೋಷವನ್ನು ಪಡೆಯುತ್ತಾರೆ ಮತ್ತು ವರ್ಷದ ಆರಂಭದಲ್ಲಿ, ಜನವರಿ 24 ರಂದು ಶಾನಿದೇವ ನಿಮ್ಮ ಮೂರನೇ ಮನೆಗೆ ಪ್ರವೇಶಿಸಲಿದ್ದಾರೆ, ಮತ್ತೊಂದೆಡೆ, ಗುರುದೇವ ಮಾರ್ಚ್ 30 ರಂದು ಮೂರನೇ ಮನೆಗೆ ಪ್ರವೇಶಿಸಲಿದ್ದಾರೆ ಮತ್ತು ಮೇ 14 ವಕ್ರೀಯರಾಗುತ್ತಾರೆ , ಮತ್ತು ಜೂನ್ 30 ರಂದು ಅದೇ ಸ್ಥಿತಿಯಲ್ಲಿ ಮತ್ತೆ ಎರಡನೇ ಮನೆಯಲ್ಲಿ ಬರುತ್ತಾರೆ . ಸೆಪ್ಟೆಂಬರ್ 13 ರಂದು, ಅವರು ಮಾರ್ಗಿಯಾಗಿರುತ್ತಾರೆ ಮತ್ತು ನವೆಂಬರ್ 20 ರಂದು ಮತ್ತೊಮ್ಮೆ ನಿಮ್ಮ ಮೂರನೇ ಮನೆಗೆ ಮರಳುತ್ತಾರೆ. ರಾಹು ಸೆಪ್ಟೆಂಬರ್ ತನಕ ನಿಮ್ಮ ಎಂಟನೇ ಮನೆಯಲ್ಲಿ ಇರುತ್ತಾರೆ ಮತ್ತು ಅದರ ನಂತರ ಏಳನೇ ಮನೆಗೆ ಪ್ರವೇಶಿಸುತ್ತಾರೆ. ಈ ವರ್ಷವು ಅನೇಕ ರೀತಿಯ ಯಾತ್ರೆಗಳಲ್ಲಿ ನಿಮ್ಮನ್ನು ಕಾರ್ಯನಿರತವಾಗಿಸುತ್ತದೆ, ಆದರೆ ಈ ಯಾತ್ರೆಗಳು ಶುಭ ಮತ್ತು ಯೋಗಕ್ಷೇಮವಾಗುವುದು ಸಂತೋಷದ ವಿಷಯವಾಗಿದೆ. ಈ ವರ್ಷವೂ ನೀವು ತೀರ್ಥಯಾತ್ರೆಗೆ ಹೋಗಬಹುದು. ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ಆಕರ್ಷಕ ಮತ್ತು ಸುಂದರವಾದ ಪ್ರವಾಸಿ ತಾಣಕ್ಕೆ ಪ್ರಯಾಣಿಸುವಿರಿ.
ವೃಶ್ಚಿಕ ರಾಶಿ ಭವಿಷ್ಯ 2020 ರ ಪ್ರಕಾರ, ನೀವು ಜೀವನ ಪ್ರಯಾಣದ ಹೊಸ ತಿರುವನ್ನು ಪ್ರವೇಶಿಸುವಿರಿ, ಅಲ್ಲಿ ನಿಮಗೆ ಬೇಕಾದುದನ್ನು ಮಾಡಲು ನಿಮಗೆ ಸಾಕಷ್ಟು ಸ್ವಾತಂತ್ರ್ಯ ಸಿಗುತ್ತದೆ. ನಿಮ್ಮ ಶಕ್ತಿಯಿಂದ ನಿಮ್ಮ ಕೆಲಸದಲ್ಲಿ ನೀವು ಯಶಸ್ಸನ್ನು ಗಳಿಸುವಿರಿ. ವರ್ಷದ ಮಧ್ಯಭಾಗವು ವ್ಯಾಪಾರ ವರ್ಗಕ್ಕೆ ತುಂಬಾ ಒಳ್ಳೆಯದು. ವಿದೇಶ ಪ್ರವಾಸಗಳೂ ಇರಬಹುದು. ಉದ್ಯೋಗಮಾಡುತ್ತಿರುವವರು ಹಠಾತ್ ವರ್ಗಾವಣೆಯ ಸಾಧ್ಯತೆಯನ್ನು ಹೊಂದಿರುತ್ತಾರೆ, ಇದರಿಂದಾಗಿ ಅವರು ಸ್ವಲ್ಪ ವಿಚಲಿತರಾಗಬಹುದು.
ಈ ರಾಶಿಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ನಿಮ್ಮ ಚಂದ್ರ ರಾಶಿ ನಿಮಗೆ ತಿಳಿದಿಲ್ಲದಿದ್ದರೆ, ಇಲ್ಲಿ ಕ್ಲಿಕ್ ಮಾಡಿ. ಚಂದ್ರ ರಾಶಿಚಕ್ರ ಕ್ಯಾಲ್ಕುಲೇಟರ್
ವೃಶ್ಚಿಕ ರಾಶಿ ಭವಿಷ್ಯ 2020 ರ ಪ್ರಕಾರ ವೃತ್ತಿ
ವೃಶ್ಚಿಕ ರಾಶಿ ಭವಿಷ್ಯ 2020 ರ ಪ್ರಕಾರ, ವೃಶ್ಚಿಕ ರಾಶಿಚಕ್ರದ ಜನರ ವೃತ್ತಿಗೆ ಈ ವರ್ಷ ಸಾಮಾನ್ಯವಾಗಿರುತ್ತದೆ. ವರ್ಷದ ಆರಂಭದಲ್ಲಿ ನೀವು ಯಾವುದೇ ಹೊಸ ಕಾರ್ಯವನ್ನು ಪ್ರಾರಂಭಿಸಬಹುದು. ಈ ಕೆಲಸದಲ್ಲಿ ನಿಮಗೆ ಉತ್ತಮ ಯಶಸ್ಸು ಕೈಗೆ ಸಿಗುತ್ತದೆ. ಹೇಗೆ ಹೇಗೆ ವರ್ಷದಲ್ಲಿ ಸಮಯ ಕಳೆಯುತ್ತದೋ , ಹಾಗೆ ನೀವು ಪ್ರಗತಿಯ ಉತ್ತುಂಗದತ್ತ ಸಾಗುತ್ತೀರಿ. ಅದೃಷ್ಟ ನಿಮಗೆ ಬೆಂಬಲ ನೀಡುತ್ತದೆ ಮತ್ತು ನೀವು ಗಮನಾರ್ಹವಾಗಿ ಯಶಸ್ಸನ್ನು ಪಡೆಯುತ್ತೀರಿ.ಈ ವರ್ಷ ನಿಮ್ಮೊಳಗೆ ತಮ್ಮ ಕೆಲಸದ ಕ್ಷೇತ್ರದ ಬಗ್ಗೆ ಸ್ವಲ್ಪ ತೃಪ್ತಿಯ ಭಾವನೆ ಉಳಿದಿರುತ್ತದೆ. ಏಕೆಂದರೆ ನೀವು ಎಷ್ಟು ಪರಿಶ್ರಮ ಮಾಡುತ್ತಿರೋ ಅಷ್ಟು ಫಲಿತಾಂಶ ನಿಮಗೆ ಸಿಗುತ್ತಿಲ್ಲ ಎಂದು ಅನುಭವಿಸುತ್ತೀರಿ. ಈ ಕಾರಣದಿಂದಾಗಿ ಸಾಕಷ್ಟು ಮಟ್ಟಿಗೆ ನೀವು ನಿಮ್ಮನ್ನು ಕಟ್ಟಿಹಾಕಿರುವ ಹಾಗೆ ಅನುಭವಿಸಬಹುದು. ನೀವು ಉದ್ಯೋಗ ಮಾಡುತ್ತಿದ್ದರೆ, ನೀವು ಇದ್ದಕ್ಕಿದ್ದಂತೆ ಆಗುವ ವರ್ಗಾವಣೆಯನ್ನು ಎದುರಿಸಬೇಕಾಗುತ್ತದೆ. ಬಹಶಃ ಆರಂಭದಲ್ಲಿ ನೀವು ಅದನ್ನು ಇಷ್ಟಪಡದಿರಬಹುದು ಆದರೆ ಬದಲಾವಣೆ ಪ್ರಕೃತಿಯ ಶಾಶ್ವತ ನಿಯಮ ಮತ್ತು ಇದು ಜೀವನದಲ್ಲಿ ಆವೇಗವನ್ನು ನೀಡುತ್ತದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಈ ವಿಷಯವನ್ನು ನೀವು ಅನುಭವಿಸಿದರೆ ವರ್ಗಾವಣೆ ನಿಮ್ಮ ಪರವಾಗಿದೆ ಎಂಬುವ ತೀರ್ಮಾನಕ್ಕೆ ನೀವು ಬರಬಹುದು. ಇದರಿಂದ ನಿಮಗೆ ಲಾಭವು ಸಿಗುತ್ತದೆ.
ವೃಶ್ಚಿಕ ರಾಶಿ ಭವಿಷ್ಯ 2020 ರ ಪ್ರಕಾರ, ವರ್ಷದ ಪೂರ್ವಾರ್ಧದಲ್ಲಿ ನೀವು ನಿಮ್ಮ ವೃತ್ತಿಪರ ಜೀವನದಲ್ಲಿ ಪ್ರಗತಿಯ ಅನೇಕ ಅವಕಾಶಗಳನ್ನು ಪಡೆಯುತ್ತೀರಿ. ಇದರಿಂದ ನೀವು ಜೀವನದಲ್ಲಿ ಮುಂದುವರಿಯುತ್ತಿರಿ. ಆದ್ದರಿಂದ ನೀವು ಈ ಸಮಯವನ್ನು ಪೂರ್ಣವಾಗಿ ಬಳಸಬೇಕು ಮತ್ತು ಎದುರಾದ ಪ್ರತಿಯೊಂದು ಅವಕಾಶದ ಲಾಭವನ್ನು ಪಡೆದುಕೊಳ್ಳಬೇಕು. ಅದೇ ಸಮಯದಲ್ಲಿ ಮತ್ತೊಂದೆಡೆ ವರ್ಷದ ಉತ್ತರಾರ್ಧದಲ್ಲಿ ನೀವು ಬಡ್ತಿಯನ್ನು ಸಹ ಪಡೆಯಬಹುದು. ಇದಲ್ಲದೆ ನಿಮ್ಮ ಸಂಬಳದಲ್ಲಿ ಹೆಚ್ಚಳವಾಗಬಹುದು ಮತ್ತು ಕೆಲವು ಜನರ ಉದ್ಯೋಗದಲ್ಲಿ ಬದಲಾವಣೆ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ನಿಮಗೆ ಸಾಧ್ಯವಾದರೆ, ನಿಮ್ಮ ಯಶಸ್ಸಿನಿಂದ ನೀವೇ ಹಾರಿಹೋಗುತ್ತೀರಿ. ಈ ವರ್ಷ ನಿಮ್ಮ ಸೃಜನಶೀಲತೆಯನ್ನು ಜೋರಾಗಿ ಹಿಡಿದುಕೊಳ್ಳುತ್ತದೆ ಮತ್ತು ನಿಮ್ಮನ್ನು ಮುಂದೆ ಕೊಂಡೊಯ್ಯುತ್ತದೆ. ವ್ಯಾಪಾರಿಗಳಿಗೆ ಈ ವರ್ಷ ಸಾಕಷ್ಟು ಉತ್ತಮವಾಗಲಿದೆ. ಆದಾಗ್ಯೂ ವರ್ಷದ ಕೊನೆಯ ತಿಂಗಳುಗಳಲ್ಲಿ ನೀವು ಕೆಲವು ಅಪಾಯಕಾರಿ ಕೆಲಸಗಳನ್ನು ಮಾಡಬೇಕಾಗುತ್ತದೆ. ಅವುಗಳ ಬಗ್ಗೆ ಜಾಗರೂಕರಾಗಿರಿ. ಈ ವರ್ಷ ನಿಮ್ಮ ಆತ್ಮವಿಶ್ವಾಸ ನಿಮ್ಮನ್ನು ಯಶಸ್ಸಿಗಾಗಿ ಪ್ರೇರೇಪಿಸುತ್ತದೆ. ಆಸ್ತಿಯಲ್ಲಿ ಹೂಡಿಕೆ ಮಾಡಲು ಬಯಸುತ್ತಿರುವ ಜನರು, ಈ ವರ್ಷ ಅವರಿಗೆ ಉತ್ತಮ ಪ್ರಯೋಜನ ಸಿಗಬಹುದು. ಇದಲ್ಲದೆ ಪೆಟ್ರೋಲಿಯಂ, ಅನಿಲ ಮತ್ತು ತೈಲಕ್ಕೆ ಸಂಬಂಧಿಸಿದ ಜನರಿಗೂ ಸಹ ಉತ್ತಮ ಲಾಭವಾಗಬಹುದು.
ವೃಶ್ಚಿಕ ರಾಶಿ ಭವಿಷ್ಯ 2020 ರ ಪ್ರಕಾರ ಆರ್ಥಿಕ ಜೀವನ
ವೃಶ್ಚಿಕ ರಾಶಿ ಭವಿಷ್ಯ 2020 ರ ಪ್ರಕಾರ, ಈ ವರ್ಷ ನಿಮಗೆ ಸಾಕಷ್ಟು ಉತ್ತಮವಾಗಲಿದೆ ಮತ್ತು ಹಣವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗುತ್ತೀರಿ. ನೀವು ಸ್ವಲ್ಪ ಎಚ್ಚರದಿಂದ ನಡೆದರೆ ಹಣವನ್ನು , ನೀವು ಉಳಿಸಲು ಸಾಧ್ಯವಾಗುತ್ತದೆ. ಮತ್ತು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಹಳ ಬಲವಾಗಿ ಮಾಡಲು ಸಾಧ್ಯವಾಗುತ್ತದೆ. ಇದರಿಂದ ನೀವು ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳಿಂದ ತೊಂದರೆಗೊಳಗಾಗುವ ಅಗತ್ಯವಿರುವುದಿಲ್ಲ. ಈ ವರ್ಷ ನೀವು ಒಳ್ಳೆಯ ಕೆಲಸಗಳ ಮೇಲೆ ಖರ್ಚು ಮಾಡುತ್ತೀರಿ ಮತ್ತು ಸ್ವಲ್ಪ ಖರ್ಚು ನಿಮ್ಮ ಸಹೋದರ ಸಹೋದರಿಯರೊಂದಿಗೆ ಪ್ರಯಾಣಗಳ ಮೇಲು ಮಾಡುತ್ತೀರಿ. ವರ್ಷದ ಉತ್ತರಾರ್ಧದಲ್ಲಿ ಆರ್ಥಿಕ ಪರಿಸ್ಥಿತಿ ಹೆಚ್ಚು ಶುಭವಾಗಲಿದೆ ಮತ್ತು ಇದರಿಂದ ನೀವು ಉತ್ತಮ ಹಣವನ್ನು ಗಳಿಸುವಿರಿ. ನೀವು ಸಾಲ ನೀಡಲು ಮನಸ್ಸು ಮಾಡಿದ್ದರೆ, ತಕ್ಷಣ ಈ ಆಲೋಚನೆಯನ್ನು ನಿಮ್ಮ ಮನಸ್ಸಿನಿಂದ ತೆಗೆದುಹಾಕಿ. ಏಕೆಂದರೆ ನೀವು ಯಾರಿಗಾದರೂ ಹಣವನ್ನು ನೀಡಿದರೆ, ಅದರ ಹಿಂದಿರುಗುವ ಸಾಧ್ಯತೆ ತುಂಬಾ ಕಷ್ಟಕರವಾಗಿರುತ್ತದೆ.
ವೃಶ್ಚಿಕ ರಾಶಿ ಭವಿಷ್ಯ 2020 ರ ಪ್ರಕಾರ, ಈ ವರ್ಷ ನಿಮ್ಮ ಹಣ ಸಕ್ರಿಯ ಹರಿವಿನಲ್ಲಿರುತ್ತದೆ. ಹಠಾತ್ ಹಣವನ್ನು ಪಡೆಯುವ ಯೋಗವು ಉದ್ಭವಿಸಬಹುದು. ಇದರ ಕಾರಣದಿಂದಾಗಿ ನಿಮ್ಮ ಕೆಲಸದಲ್ಲಿ ಯಾವುದೇ ರೀತಿಯ ವಿಳಂಬ ಆಗುವುದಿಲ್ಲ ಮತ್ತು ಹಣದ ಬಗ್ಗೆ ಯಾವುದೇ ಕೆಲಸ ನಿಲ್ಲುವುದಿಲ್ಲ. ನಿಮ್ಮ ಹತ್ತಿರ ಹಣವನ್ನು ಸಂಪಾದಿಸುವ ಒಂದಕ್ಕಿಂತ ಹೆಚ್ಚು ಮೂಲಗಳಿರುತ್ತವೆ. ನೀವು ಉಳಿಸಲು ಅಭ್ಯಾಸ ಮಾಡಬೇಕು. ಇದರಿಂದ ಈ ವರ್ಷ ನೀವು ಹಣಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸಲಾಗುವುದಿಲ್ಲ. ಅದೃಷ್ಟದ ಬೆಂಬಲ ನಿಮಗೆ ಸಿಗುತ್ತದೆ. ನೀವು ಯಾರೊಬ್ಬರಿಂದ ಎರವಲು ಪಡೆದಿದ್ದರೆ ನೀವು ಅದನ್ನು ಮರುಪಾವತಿಸಲು ಸಾಧ್ಯವಾಗುತ್ತದೆ. ಬ್ಯಾಂಕಿನ ಸಾಲ ಹೊಂದಿರುವ ಜನರು ಸಹ ಪರಿಹಾರ ಪಡೆಯಬಹುದು. ನಿಜವಾದ ಅರ್ಥದಲ್ಲಿ, ಹಣದ ವಿಷಯದಲ್ಲಿ ಮುಂದೆ ಬರಲು ಈ ವರ್ಷ ನಿಮಗೆ ಸಹಾಯ ಮಾಡುತ್ತದೆ, ನಿಮ್ಮ ಹಣವನ್ನು ಸರಿಯಾಗಿ ಬಳಸಲು ನೀವು ಕಲಿಯಬೇಕಾಗಿದೆ.
ವೃಶ್ಚಿಕ ರಾಶಿ ಭವಿಷ್ಯ 2020 ರ ಪ್ರಕಾರ ಶಿಕ್ಷಣ
ವೃಶ್ಚಿಕ ರಾಶಿ ಭವಿಷ್ಯ 2020 ರ ಪ್ರಕಾರ, ವೃಶ್ಚಿಕ ರಾಶಿಚಕ್ರದ ವಿದ್ಯಾರ್ಥಿಗಳು ಕೆಲವು ಹೋರಾಟದ ನಂತರ ಯಶಸ್ವಿಯಾಗುವ ಸಾಧ್ಯತೆಯಿದೆ. ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿರುವವರಿಗೆ ಇದು ಉತ್ತಮ ವರ್ಷವಾಗಲಿದೆ ಮತ್ತು ಅವರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಇದಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಮ್ಮ ಕೈ ಪ್ರಯತ್ನಿಸಲು ಬಯಸುವವರಲ್ಲಿ ಬಹಳಷ್ಟು ಜನರು ಯಶಸ್ಸನ್ನು ಪಡೆಯಬಹುದು. ಆದರೆ ಕಠಿಣ ಪರಿಶ್ರಮವಿಲ್ಲದೆ ಏನೂ ಸುಲಭವಾಗುವುದಿಲ್ಲ, ಆದ್ದರಿಂದ ಕಷ್ಟಪಟ್ಟು ಕೆಲಸ ಮಾಡಲು ಸಿದ್ಧರಾಗಿರಿ.
ವೃಶ್ಚಿಕ ರಾಶಿ ಭವಿಷ್ಯ 2020 (Vrishchika Rashi 2020) ಪ್ರಕಾರ, ಮಾರ್ಚ್ 30 ರಿಂದ ಜೂನ್ 30 ರವರೆಗೆ ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡುವ ಸಮಯವಾಗಲಿದ್ದು, ಈ ಸಮಯದಲ್ಲಿ ಅವರಿಗೆ ಉನ್ನತ ಶಿಕ್ಷಣದಲ್ಲಿ ಮುನ್ನಡೆಯಲು ಅವಕಾಶ ಸಿಗುತ್ತದೆ. ಕಾನೂನು, ಬೋಧನೆ, ಹಣಕಾಸು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಸಿಗುತ್ತವೆ ಮತ್ತು ಅನುಕೂಲಕರ ಯಶಸ್ಸನ್ನು ಪಡೆಯುತ್ತಾರೆ . ಈ ವರ್ಷ ನೀವು ನಿಮ್ಮ ಅಧ್ಯಯನದ ಮೇಲೆ ಹೆಚ್ಚು ಗಮನ ಹರಿಸುತ್ತೀರಿ ಮತ್ತು ನೀವು ಖಂಡಿತವಾಗಿಯೂ ಫಲಿತಾಂಶವನ್ನು ಪಡೆಯುತ್ತೀರಿ.
ವೃಶ್ಚಿಕ ರಾಶಿ ಭವಿಷ್ಯ 2020 ರ ಪ್ರಕಾರ ಕೌಟುಂಬಿಕ ಜೀವನ
ವೃಶ್ಚಿಕ ರಾಶಿ ಭವಿಷ್ಯ 2020 ರ ಪ್ರಕಾರ, ಈ ವರ್ಷ ನಿಮ್ಮ ಕುಟುಂಬ ಜೀವನವು ಉತ್ತಮವಾಗಿರಬಹುದು , ಆದರೂ ಕೇತುವಿನ ಸೆಪ್ಟೆಂಬರ್ ತನಕ ಎರಡನೇ ಮನೆಯಲ್ಲಿ ಸ್ಥಾನವು ನಡುವೆ ಒತ್ತಡವನ್ನು ಹೆಚ್ಚಿಸುವ ಕೆಲಸ ಮಾಡಬಹುದು. ಎರಡನೇ ಮನೆಯಲ್ಲೇ ಗುರುವು ಇರುವುದರ ಕಾರಣದಿಂದಾಗಿ , ಹೊಸ ಸದಸ್ಯ ಕುಟುಂಬಕ್ಕೆ ಬರಬಹುದು. ಯಾರೊಬ್ಬರ ಮದುವೆ ಅಥವಾ ಮಗುವಿನ ಜನನದಂತೆ. ತಂದೆಯ ಆರೋಗ್ಯ ಸ್ವಲ್ಪ ದುರ್ಬಲವಾಗಿರಬಹುದು, ಆದ್ದರಿಂದ ಅವರನ್ನು ನೋಡಿಕೊಳ್ಳುವುದು ಉತ್ತಮ. ಗುರು ಮತ್ತು ಶನಿಯ ಸ್ಥಾನವು ನಿಮ್ಮನ್ನು ಸಾಮಾಜಿಕವಾಗಿ ಗೌರವಿಸುವ ವ್ಯಕ್ತಿಯಾಗಿ ಸ್ಥಾಪಿಸುತ್ತದೆ ಮತ್ತು ಅದು ನಿಮ್ಮ ಹೆಸರಾಗಿರುತ್ತದೆ. ನಿಮ್ಮ ಕುಟುಂಬದೊಂದಿಗೆ ನೀವು ತೀರ್ಥಯಾತ್ರೆಗೆ ಹೋಗುತ್ತೀರಿ ಅಥವಾ ಧಾರ್ಮಿಕ ಕಾರ್ಯಗಳಲ್ಲಿ ತೊಡಗುತ್ತೀರಿ. ಸಮಾಜಕ್ಕೆ ಆಸಕ್ತಿಯಿರುವ ಯಾವುದನ್ನಾದರೂ ನೀವು ಮಾಡುತ್ತೀರಿ.
ವೃಶ್ಚಿಕ ರಾಶಿ ಭವಿಷ್ಯ 2020 (Vrishchika Rashi 2020) ಪ್ರಕಾರ, 2020 ರ ವರ್ಷಕ್ಕೆ ವೃಶ್ಚಿಕ ರಾಶಿಚಕ್ರದ ಜನರು ತಮ್ಮ ಕುಟುಂಬದ ಯೋಗಕ್ಷೇಮಕ್ಕಾಗಿ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, ಅದಕ್ಕಾಗಿ ನಿಮಗೆ ಧೈರ್ಯದ ಅಗತ್ಯವಿರುತ್ತದೆ. ಆದರೆ ಒಮ್ಮೆ ನೀವು ನಿರ್ಧಾರ ತೆಗೆದುಕೊಂಡರೆ, ಆ ನಿರ್ಧಾರದ ಫಲಿತಾಂಶದ ಬಗ್ಗೆ ನಿಮಗೆ ಖಚಿತವಾಗುತ್ತದೆ, ಅದು ಹೆಚ್ಚು ಉತ್ತಮವಾಗಿರುತ್ತದೆ. ಆದರೆ ನಿರ್ಧಾರಗಳನ್ನು ಆತುರದಿಂದ ತೆಗೆದುಕೊಳ್ಳಬಾರದು ಎಂದು ನೆನಪಿನಲ್ಲಿಡಿ ಮತ್ತು ಕೇವಲ ಯೋಚಿಸುವ ಮೂಲಕ ನಿರ್ಧಾರ ತೆಗೆದುಕೊಳ್ಳಬೇಕು. ಜೂನ್ ನಂತರ, ಪರಿಸ್ಥಿತಿಗಳು ಸಾಕಷ್ಟು ಮಟ್ಟಿಗೆ ಉತ್ತಮಗೊಳ್ಳುತ್ತವೆ ಮತ್ತು ಕುಟುಂಬದಲ್ಲಿ ಶಾಂತಿಯ ವಾತಾವರಣ ಇರುತ್ತದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಲು ಸಾಕಷ್ಟು ಅವಕಾಶವಿರುತ್ತದೆ, ಅದು ನಿಮ್ಮ ಸಂಬಂಧದಲ್ಲಿ ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ. ಈ ವರ್ಷದಲ್ಲಿ ನಿಮ್ಮ ಒಡಹುಟ್ಟಿದವರೊಂದಿಗೆ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ ಮತ್ತು ನಿಮ್ಮ ಸಂಬಂಧವು ಪ್ರೀತಿ ಮತ್ತು ಮಾಧುರ್ಯದಲ್ಲಿ ಬೆಳೆಯುತ್ತದೆ.
ವೃಶ್ಚಿಕ ರಾಶಿ ಭವಿಷ್ಯ 2020 ರ ಪ್ರಕಾರ ವೈವಾಹಿಕ ಜೀವನ ಮತ್ತು ಸಂತಾನ
ವೃಶ್ಚಿಕ ರಾಶಿ ಭವಿಷ್ಯ 2020 ರ ಪ್ರಕಾರ, ವೈವಾಹಿಕ ಜೀವನಕ್ಕಾಗಿ ಈ ವರ್ಷ ಉತ್ತಮವಾಗಲಿದೆ. ವಿಶೇಷವಾಗಿ 30 ಜೂನ್ ಮತ್ತು ಅದರ ನಂತರ 20 ನವೆಂಬರ್ ಇಂದ ಮುಂದಿನ ಸಮಯವು ನಿಮ್ಮ ದಾಂಪತ್ಯ ಜೀವನದಲ್ಲಿ ಮಾಧುರ್ಯ ಮತ್ತು ತೀವ್ರತೆಯನ್ನು ಹೆಚ್ಚಿಸುವ ಕೆಳಸ ಮಾಡುತ್ತದೆ. ನೀವು ಪರಸ್ಪ ಬಗ್ಗೆ ಗೌರವಿಸುತ್ತೀರಿ ಮತ್ತು ಪರಸ್ಪರ ಮಾತುಗಳನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಮುಂದುವರಿಯುತ್ತಿರಿ. ಮಾರ್ಚ್ ನಿಂದ ಆಗಸ್ಟ್ ಅವರಧಿಯಲ್ಲಿ ನಿಮ್ಮ ದಾಂಪತ್ಯ ಜೀವನದಲ್ಲಿ ಪ್ರಣಯ ಬೆಳೆಯುತ್ತದೆ ಮತ್ತು ನೀವು ಪರಸ್ಪರ ಬಗ್ಗೆ ಅಕ್ಶರಣೆಯನ್ನು ಅನುಭವಿಸುವಿರಿ. ನಿಮ್ಮ ಪರಸ್ಪರ ಬಗ್ಗೆ ಆಕರ್ಷಣೆ ನಿಮ್ಮ ದಮಪತ್ಯ ಜೀವನವನ್ನು ಸುಧಾರಿಸುತ್ತದೆ.
ವೃಶ್ಚಿಕ ರಾಶಿ ಭವಿಷ್ಯ 2020 (Vrishchika Rashi 2020) ರ ಪ್ರಕಾರ ನಿಮ್ಮ ಪ್ರಯತ್ನಗಳಿಂದ ನಿಮ್ಮ ಜೀವನ ಸಂಗಾತಿಗೆ ಲಾಭ ಸಿಗುತ್ತದೆ ಮತ್ತು ನಿಮಗೂ ಪ್ರಯೋಜನವಾಗಲಿದೆ ಆದ್ದರಿಂದ ಪ್ರತಿಯೊಂದು ಕೆಳಸದಲ್ಲಿ ನಿಮ್ಮ ಜೀವನ ಸಂಗಾತಿಗೆ ಸಹಾಯ ಮಾಡಿ ಮತ್ತು ಅವರನ್ನು ಮುಂದುವರಿಯಲು ಪ್ರೇರೇಪಿಸಿ. ಸೆಪ್ಟೆಂಬರ್ ನಂತರ ಪರಿಸ್ಥಿತಿಯಲ್ಲಿ ಸ್ವಲ್ಪ ಬದಲಾವಣೆ ಬರುತ್ತದೆ ಮತ್ತು ಈ ಸಮಯದಲ್ಲಿ ನೀವು ಜಾಗರೂಕರಾಗಿರಬೇಕು. ಏಕೆಂದರೆ ನಿಮ್ಮ ಸಂಬಂಧದಲ್ಲಿ ಯಾವುದಾದರು ವಿಷಯವನ್ನು ತೆಗೆದುಕೊಂಡು ತಪ್ಪು ತಿಳುವಳಿಕೆ ಉಂಟಾಗಬಹುದು. ಆದ್ದರಿಂದ ನಿಮ್ಮ ಸಂಬಂಧವನ್ನು ಜೀವಾಂತವಾಗಿ ಮತ್ತು ಶಕ್ತಿಯುಕ್ತವಾಗಿಡಲು ಯಾವುದೇ ತಪ್ಪು ತಿಳುವಳಿಕೆ ಉಂಟಾಗುವ ಮೊದಲೇ ಅದನ್ನು ಕೊನೆಗೊಳಿಸಿ. ಇದು ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷದಿಂದ ತುಂಬುತ್ತದೆ.
ವೃಶ್ಚಿಕ ರಾಶಿ ಭವಿಷ್ಯ 2020 (Vrishchika Rashi 2020) ರ ಪ್ರಕಾರ, ನಿಮ್ಮ ಮಕ್ಕಳಿಗೆ ಈ ವರ್ಷ ಕೆಲವು ಸವಾಲುಗಳಿಂದ ತುಂಬಿರಬಹುದು ಮತ್ತು ಅವರು ತಮ್ಮ ಗುರಿಯನ್ನು ಸಾಧಿಸುವಲ್ಲಿ ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಆದಾಗ್ಯೂ ಈ ಪರಿಶ್ರಮದ ಫಲಿತಾಂಶವು ಶುಭವಾಗಲಿದೆ. ನಿಮ್ಮ ಮಕ್ಕಳು ಉನ್ನತ ಶಿಕ್ಷಣದಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸುತ್ತಾರೆ. ಇದಲ್ಲದೆ ನಿಮ್ಮ ಮಗುವಿನ ಮದುವೆ ಈ ವರ್ಷ ಸಂಭವಿಸಬಹುದು, ಇದರಿಂದ ನೀವು ಸಾಕಷ್ಟು ಮಟ್ಟಿಗೆ ತೃಪರಾಗಿರುತ್ತೀರಿ.
ವೃಶ್ಚಿಕ ರಾಶಿ ಭವಿಷ್ಯ 2020 ರ ಪ್ರಕಾರ ಪ್ರೀತಿ ಜೀವನ
ವೃಶ್ಚಿಕ ರಾಶಿ ಭವಿಷ್ಯ 2020 ಪ್ರಕಾರ ವೃಶ್ಚಿಕ ರಾಶಿಚಕ್ರದ ಜನರಿಗೆ ಈ ವರ್ಷ ಕೆಲವು ಸಾಧನೆಗಳನ್ನು ತರಬಹುದು. ಏಕೆಂದರೆ ನೀವು ಒಂಟಿಯಾಗಿದ್ದರೆ ನಿಮ್ಮ ಜೀವನದಲ್ಲಿ ಒಬ್ಬ ಹೊಸ ವ್ಯಕ್ತಿ ನಾಕ್ ಮಾಡಬಹುದು. ಅವರೊಂದಿಗೆ ನೀವು ದೀರ್ಘಕಾಲದವರೆಗೆ ಸಂಬಂಧವನ್ನು ಹೊಂದಿರುವಬಹುದು. ನಿಮ್ಮ ಪ್ರೀತಿಯ ಜೀವನವನ್ನು ಅತ್ಯುತ್ತಮವಾಗಿ ಬದಲಾಯಿಸುವಂತಹ ಪರಿಸ್ಥಿತಿಗಳನ್ನು ನಿಮ್ಮ ಪ್ರೀತಿಯ ಜೀವನದಲ್ಲಿ ನೀವು ಎದುರಿಸಬೇಕಾಗುತ್ತದೆ. ಇದಕ್ಕೆ ವಿರುದ್ಧವಾಗಿ ಕೆಲವು ಜನರು ತಮ್ಮ ಪ್ರೀತಿಯ ಜೀವನದಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ನೀವು ಯಾವುದೇ ಸಂಬಂಧದಲ್ಲಿ ಬೀಳುವ ಮೊದಲು ದಯವಿಟ್ಟು ಒಮ್ಮೆ ಮರುಪರಿಶೀಲಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ. ನಿಮ್ಮ ಜೀವನದಲ್ಲಿ ಯಾರಾದರೂ ಹೊಸ ಸಂಗಾತಿ ಬಂದರೆ ಅಥವಾ ನೀವು ಮೊದಲಿನಿಂದಲೇ ಸಮಬಂಧದಲ್ಲಿ ಇದ್ದರೆ ನಿಮ್ಮ ಸಂಗಾತಿಗೆ ಸಂಪೂರ್ಣವಾಗಿ ಸಮರ್ಪಿತರಾಗಿರಿ ಮತ್ತು ಜೀವನದಲ್ಲಿ ಅವರಿಗೆ ಪ್ರಾಮುಖ್ಯತೆ ನೀಡಿ. ಕೆಲವು ಜನರು ತಮ್ಮ ವಿಶೇಷ ಸ್ನೇಹಿತರಿಗೆ ಪ್ರಸ್ತಾಪಿಸಬಹುದು, ಅವರು ತಮ್ಮ ಜೀವನದಲ್ಲಿ ಬಹಳ ಮುಖ್ಯವಾಗುತ್ತಾರೆ.
ವೃಶ್ಚಿಕ ರಾಶಿ ಭವಿಷ್ಯ 2020 (Vrishchika Rashi 2020) ರ ಪ್ರಕಾರ, 13 ಮೇ ಇಂದ 25 ಜೂನ್ ನಡುವೆ ನಿಮ್ಮ ಪ್ರೀತಿಯ ಜೀವನದಲ್ಲಿ ಏರಿಳಿತ ಬರಬಹುದು. ನಿಮ್ಮ ಪ್ರೀತಿಯ ಜೀವನದ ಬಗ್ಗೆ ನೀವು ತಂಪಾದ ಮನಸ್ಸಿನಿಂದ ಯೋಚಿಸಬೇಕಾದ ಸಮಯ ಇದು ಮತ್ತು ಈ ಸಮಯದ ನಡುವೆ ನೀವು ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ನೀವು ಇನ್ನೊಬ್ಬರಿಂದ ವಿಘಟನೆಯನ್ನು ಹೊಂದಿದ್ದರೆ ಅವರು ಈ ಸಮಯದಲ್ಲಿ ನಿಮ್ಮ ಜೀವನದಲ್ಲಿ ಮರಳಿ ಬರಬಹುದು. ನಿಮಗಾಗಿ ಈ ವರ್ಷ ಸಾಧ್ಯತೆಗಳ ವರ್ಷವಾಗಿದೆ. ಇದರಲ್ಲಿ ನೀವು ನಿಮ್ಮ ಪ್ರೀತಿಪಾತ್ರರನ್ನು ಭೇಟಿಯಾಗಬಹುದು.
ವೃಶ್ಚಿಕ ರಾಶಿ ಭವಿಷ್ಯ 2020 ರ ಪ್ರಕಾರ ಅರೋಗ್ಯ
ವೃಶ್ಚಿಕ ರಾಶಿ ಭವಿಷ್ಯ 2020 ರ ಪ್ರಕಾರ, ಆರೋಗ್ಯಕ್ಕಾಗಿ 2020 ಸಾಮಾನ್ಯವಾಗಿರುವ ಸಾಧ್ಯತೆ ಇದೆ. ಈ ವರ್ಷ ನೀವು ನಿಮ್ಮ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯದಲ್ಲಿ ಬೆಳವಣಿಗೆಯನ್ನು ಅನುಭವಿಸುವಿರಿ ಮತ್ತು ಇದನ್ನು ಇನ್ನಷ್ಟು ಉತ್ತಮಗೊಳಿಸಲು ನೀವು ಮತ್ತು ಯೋಗಾಭ್ಯಾಸ ಮತ್ತು ಪ್ರಾಣಾಯಾಮದ ಸಹಾಯವನ್ನೂ ತೆಗೆದುಕೊಳ್ಳುತ್ತೀರಿ. ಜನವರಿಯ ನಂತರ ಮಾನಸಿಕ ಮತ್ತು ದೈಹಿಕವಾಗಿ ಬಹಳಷ್ಟು ಮಟ್ಟಿಗೆ ಸರಿಯಾಗಿರುತ್ತೀರಿ. ನಿಮ್ಮ ಶಕ್ತಿಯಲ್ಲಿ ಹೆಚ್ಚಳವಾಗುತ್ತದೆ ಮತ್ತು ನೀವು ಫಿಟ್ ಆಗಿರುತ್ತೀರಿ. ಹೊಟ್ಟೆಯ ತೊಂದರೆಗಳು, ಕರುಳಿನ ಸೋಂಕುಗಳು ಮುಂತಾದ ಕೆಲವು ಸಣ್ಣ ಸಮಸ್ಯೆಗಳು ನಿಮ್ಮ ಆಹಾರ ಪದ್ಧತಿಯಿಂದ ಉಂಟಾಗಬಹುದು, ಆದ್ದರಿಂದ ನಿಮ್ಮ ದಿನಚರಿಯನ್ನು ಕಟ್ಟುನಿಟ್ಟಾಗಿ ಅನುಸರಿಸಿ.
ವೃಶ್ಚಿಕ ರಾಶಿ ಭವಿಷ್ಯ 2020 (Vrishchika Rashi 2020) ರ ಪ್ರಕಾರ, ರಾಹುವಿನ ಸ್ಥಾನವು ಕೆಲವು ತೊಂದರೆಗಳನ್ನು ಕಾಲ ಕಾಲಕ್ಕೆ ನಿಮಗೆ ನೀಡುತ್ತಿರುತ್ತದೆ ಮತ್ತು ಕೆಲವು ಸಮಸ್ಯೆಗಳು ಇದ್ದಕ್ಕಿದ್ದಂತೆ ನಿಮ್ಮ ಮುಂದೆ ಬರುತ್ತವೆ. ಅವುಗಳ ಯಾವುದೇ ಮೂಲ ಕಾರಣಗಳನ್ನು ನೀವು ನೋಡಲಾಗುವುದಿಲ್ಲ. ಆದರೆ ನಿಮ್ಮ ಆಂತರಿಕ ಶಕ್ತಿಯ ಆಧಾರದ ಮೇಲೆ ನೀವು ಈ ಎಲ್ಲಾ ಸವಾಲುಗಳನ್ನು ಪರಿಹರಿಸುತ್ತೀರಿ. ಈ ವರ್ಷ ನೀವು ಮಾಡಬೇಕಾಗಿರುವುದು ನಿಮ್ಮ ದಿನಚರಿಯನ್ನು ನಿಯಮಿತವಾಗಿರಿಸಿಕೊಳ್ಳುವುದು ಮತ್ತು ಫಿಟ್‌ನೆಸ್ ವ್ಯಾಯಾಮ ಮತ್ತು ಯೋಗ ವ್ಯಾಯಾಮದಂತಹ ಚಟುವಟಿಕೆಗಳೊಂದಿಗೆ ನಿಮ್ಮನ್ನು ಫಿಟ್ ಆಗಿಡಲು ಪ್ರಯತ್ನಿಸಿ.
ವೃಶ್ಚಿಕ ರಾಶಿ ಭವಿಷ್ಯ 2020 ರಲ್ಲಿ ಮಾಡಬೇಕಾದ ವಿಶೇಷ ಜ್ಯೋತಿಷ್ಯ ಪರಿಹಾರಗಳು
ಈ ವರ್ಷ ನೀವು ಈ ಪರಿಹಾರಗಳನ್ನು ಪೂರ್ತಿ ವರ್ಷ ಮಾಡಬೇಕು ಇದರ ಪರಿಣಾಮದಿಂದಾಗಿ ನೀವು ಅನೇಕ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯುತ್ತಿರಿ ಮತ್ತು ನೀವು ಪ್ರಗತಿಯ ಮಾರ್ಗದಲ್ಲಿ ಮುಂದುವರಿಯುತ್ತಿರಿ :
- ಈ ವರ್ಷ ನೀವು ನಿಯಮಿತವಾಗಿ ದೇಸಿ ತುಪ್ಪದ ದೀಪವನ್ನು ಹಚ್ಚಿಸಿ ಭಗವಂತ ಶ್ರೀ ಹರಿಯ ಪೂಜೆ ಮಾಡಬೇಕು.
- ಸಾಧ್ಯವಾದಷ್ಟು ಬ್ರಾಹ್ಮಣ ಮತ್ತು ಹಸಿವಿರುವವರಿಗೆ ಆಹಾರವನ್ನು ನೀಡಬೇಕು.
- ನೀಲಮಣಿ ರತ್ನ ಚಿನ್ನದ ಉಂಗುರದಲ್ಲಿ ತೋರು ಬೆರಳಿನಲ್ಲಿ ಹಾಕಿಕೊಳ್ಳಬೇಕು.
- ನೀವು ಮುತ್ತು ಸಹ ಧರಿಸಬಹುದು
- ಸೂರ್ಯ ದೇವನಿಗೆ ನೀರನ್ನು ಅರ್ಪಿಸಿ ಮತ್ತು ನಾಯಿಗಳಿಗೆ ರೊಟ್ಟಿಯನ್ನು ಹಾಕಿ.