ವೃಶ್ಚಿಕ ರಾಶಿಯಲ್ಲಿ ಶುಕ್ರ ಸಂಚಾರ ( 2nd October 2021 )

ಶುಕ್ರ ಗ್ರಹವು ಸಮೃದ್ಧಿ, ಸಂತೋಷ ಇತ್ಯಾದಿಯ ಅಂಶವಾಗಿದೆ, ವಾಸ್ತವವಾಗಿ ಅದರ ಸ್ವಭಾವವು ಸ್ತ್ರೀಲಿಂಗವಾಗಿದೆ. ಜ್ಯೋತಿಷ್ಯದಲ್ಲಿ ಶುಕ್ರವನ್ನು ಸೌಂದರ್ಯ, ಫಲವತ್ತತೆ ಮತ್ತು ಸಮೃದ್ಧಿಯ ಅಂಶ ಗ್ರಹವೆಂದು ಪರಿಗಣಿಸಲಾಗಿದೆ. ಈ ಗ್ರಹವು ಪುರುಷನ ಜಾತಕದಲ್ಲಿ ಹೆಂಡತಿಯ ಅಂಶವಾಗಿದೆ. ಇದು ರಾಶಿಚಕ್ರದ ಏಳನೇ ರಾಶಿ ತುಲಾ ರಾಶಿಯ ಅಧಿಅಪತಿ, ಕಾಲಪುರುಸ್ಶ ಜಾತಕದಲ್ಲಿ ಏಳನೇ ಮನೆಯನ್ನು ಮದುವೆಯ ಮನೆಯೆಂದು ಪರಿಗಣಿಸಲಾಗಿದೆ. ಆದ್ದರಿಂದ ಯಾವುದೇ ವ್ಯಕ್ತಿಯ ಜಾತಕದಲ್ಲಿ ಇದನ್ನು ಮದುವೆಯ ಪ್ರಮುಖವಾದ ಅಂಶವೆಂದು ಪರಿಗಣಿಸಲಾಗಿದೆ. ಇದು ರುಚಿ ಕಲೆ ಮತ್ತು ಸೌಂದರ್ಯ ಶಾಸ್ತ್ರವನ್ನು ವ್ಯಾಖ್ಯಾನಿಸುತ್ತದೆ.

ಆಸ್ಟ್ರೋಸೇಜ್ ವಾರ್ತಾ ಮೂಲಕ ಪ್ರಪಂಚದಾದ್ಯಂತದ ಕಲಿತ ಜ್ಯೋತಿಷಿಗಳೊಂದಿಗೆ ಕರೆಯಲ್ಲಿ ಮಾತನಾಡಿ

ಸೌಂದರ್ಯದ ದೇವರೆಂದು ಕರೆಯಲಾಗುವ ಈ ಗ್ರಹದ ಮೂಲಕ ಸೃಜನಶೀಲ, ಕಲೆ, ಆಭರಣ ಇತ್ಯಾದಿ ಎಲ್ಲವೂ ಪ್ರಭಾವಿತವಾಗುತ್ತವೆ. ನೃತ್ಯ, ಸಂಗೀತ, ಮನರಂಜನೆ, ಭೌತಿಕ ಸಂತೋಷ, ಸುಗಂಧ, ಫ್ಯಾಷನ್, ರಂಗಭೂಮಿ ಮುಂತಾದ ಪ್ರಪಂಚದ ಎಲ್ಲಾ ಉತ್ತಮವಾಗಿ ಕಾಣಿಸುವ ಮತ್ತು ಸಂತೋಷವನ್ನು ನೀಡುವ ಕ್ರಿಯೆಗಳು ಈ ಗ್ರಹದ ಅಡಿಯಲ್ಲಿ ಬರುತ್ತವೆ. ಭೂಮಿಯ ಮೇಲಿನ ಜೀವನದ ನಿರಂತರತೆಯನ್ನು ಕಾಪಾಡಿಕೊಳ್ಳಲು ಮುಖ್ಯವಾಗಿರುವಂತಹ ಜನನಾಂಗಗಳು ಮತ್ತು ಸಂತಾನೋತ್ಪತ್ತಿಯಂತಹ ಅಂಗಗಳನ್ನು ನಿಯಂತ್ರಿಸುತ್ತದೆ. ಪ್ರೀತಿಯ ಉಷ್ಣತೆ ಮತ್ತು ಆಳವಾದ ಭಾವನೆಗಳ ಬಗ್ಗೆ ಸಹಾನುಭೂತಿಯು ಶುಕ್ರ ಗ್ರಹದ ಮೂಲಕ ಉತ್ಪತ್ತಿಯಾಗುತ್ತದೆ. ಉತ್ತಮ ದಶೆ ಮತ್ತು ಜಾತಕದಲ್ಲಿ ಉತ್ತಮ ಸ್ಥಾನದಲ್ಲಿರುವ ಶುಕ್ರವು ಜೀವನದಲ್ಲಿ ಬಲವಾದ ಸಂಬಂಧವನ್ನು ಸೃಷ್ಟಿಸುತ್ತಾನೆ ಮತ್ತು ಪ್ರತಿಕೂಲ ಶುಕ್ರವು ವ್ಯಕ್ತಿಯನ್ನು ಬ್ರಹ್ಮಚರ್ಯದ ಸ್ಥಿತಿಯತ್ತ ಕೊಂಡೊಯ್ಯಬಹುದು. ಈ ಸೌಮ್ಯ ಗ್ರಹವು ಗುರುವಿನ ಉನ್ನತ ರಾಶಿ ಮೀನದಲ್ಲಿ ಉನ್ನತವಾಗಿ ಮತ್ತು ಬುಧದ ಕನ್ಯಾ ರಾಶಿಯಲ್ಲಿ ದುರುದ್ವೇಷಪೂರಿತವಾಗಿದೆ ಎಂದು ಪರಿಗಣಿಸಲಾಗಿದೆ. ಈ ಗ್ರಹವು ಪ್ರೀತಿ ಮತ್ತು ವಾತ್ಸಲ್ಯದ ತನ್ನ ಸ್ವರಾಶಿ ತುಲಾದಿಂದ ಮಂಗಳದ ಗುಪ್ತ ರಾಶಿಯೆಂದು ಕರೆಯಾಲಾಗುವ ವೃಶ್ಚಿಕ ರಾಶಿಗೆ ಗೋಚರಿಸುತ್ತದೆ. ಈ ಸಾಗಣೆಯ ಸಮಯದಲ್ಲಿ ಪ್ರೀತಿಯ ಭಾವನೆಯು ತೀವ್ರಗೊಳ್ಳುವ ಮೂಲಕ ಭಾವೋದ್ರೇಕದ ಭಾವನೆಯಾಗಿ ಬದಲಾಗುತ್ತದೆ. ಶುಕ್ರನ ಈ ಸಂಚಾರವು 2 ಅಕ್ಟೋಬರ್ 2021 ರಂದು ಬೆಳಿಗ್ಗೆ 9.35 ಗಂಟೆಗೆ ಸಂಭವಿಸಲಿದೆ ಮತ್ತು 30 ಅಕ್ಟೋಬರ್ ರಂದು 15.56 ಗಂಟಿಯ ವರೆಗೆ ಶುಕ್ರ ಗ್ರಹವು ಇದೆ ರಾಶಿಯಲ್ಲಿರುತ್ತದೆ. ಇದರ ನಂತರ ಇದು ಗುರುವಿನ ಸ್ವಾಮಿತ್ವದ ಧನು ರಾಶಿಗೆ ಪ್ರವೇಶಿಸುತ್ತದೆ.

ನಡೆಯಿರಿ ಎಲ್ಲಾ ಹನ್ನೆರಡು ರಾಶಿಗಳ ಮೇಲೆ ಈ ಸಂಚಾರದ ಪರಿಣಾಮದ ಬಗ್ಗೆ ತಿಳಿಯೋಣ:-

ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ.

मेष / ಮೇಷ ರಾಶಿ

ಮೇಷ ರಾಶಿಚಕ್ರದ ಸ್ಥಳೀಯರಿಗೆ ಶುಕ್ರವು ಸಂಗ್ರಹಿಸಿದ ಹಣ, ಉಳಿತಾಯ ಅತ್ತು ಕುಟುಂಬಕ್ಕೆ ಸಂಬಂಧಿಸಿದ ಎರಡನೇ ಮನೆ ಮತ್ತು ಮದುವೆ, ಸಂಘ ಮತ್ತು ಪಾಲುದಾರಿಕೆಗೆ ಸಂಬಂಧಿಸಿದ ಏಳನೇ ಮನೆಯ ಅಧಿಪತಿ. ಸಂಚಾರದ ಸಮಯದಲ್ಲಿ ಇದು ಎಂಟನೇ ಮನೆಗೆ ಗೋಚರಿಸುತ್ತದೆ. ವಿವಾಹಿತ ಜನರು ತಮ್ಮ ಜೀವನ ಸಂಗಾತಿಯೊಂದಿಗೆ ಸಮಸೆಗಳನ್ನು ಎದುರಿಸಬಹುದು. ಅವರು ತಮ್ಮ ಜೀವನ ಸಂಗಾತಿಯ ಕಳಪೆ ಆರೋಗ್ಯದ ಬಗ್ಗೆಯೂ ಚಿಂತೆಗೆ ಒಳಗಾಗಬಹುದು. ನಿಮ್ಮ ನಿಕಟ ಸಂಬಂಧಗಳಲ್ಲೂ ಕೆಲವು ಬಿಕ್ಕಟ್ಟುಗಳು ಉಂಟಾಗಬಹುದು. ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಜನರು ಸಹ ಈ ಸಮಯದಲ್ಲಿ ಜಾಗರೂಕರಾಗಿರಬೇಕು. ಈ ಸಮಯದಲ್ಲಿ ಯಾವುದೇ ರಹಸ್ಯ ಶತ್ರುವು ನಿಮಗೆ ಹಾನಿಯನ್ನುಂಟುಮಾಡಬಹುದು. ಈ ಸಂಚಾರದ ಸಮಯದಲ್ಲಿ ನಿಮ್ಮ ಕ್ಲೈಂಟ್ ಮತ್ತು ಪಾಲುದಾರರೊಂದಿಗೆ ನೀವು ಸ್ಪಷ್ಟವಾಗಿ ಮಾತನಾಡಬೇಕು. ನಿಮ್ಮ ತಪ್ಪು ಮಾತುಗಳು ಸಂಬಂಧದಲ್ಲಿ ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು. ವ್ಯಾಪಾರದಲ್ಲಿ ತೊಡಗಿರುವ ಜನರು ಅನಿರೀಕ್ಷಿತವಾಗಿ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ನೀವು ಕಾನೂನು ಬಾಹಿರವಾಗಿ ಹಣಕಾಸು ಸಂಪಾದಿಸಬಹುದು. ಆದಾಗ್ಯೂ ಕಾನೂನು ಬಾಹಿರ ಚಟುವಟಿಕೆಗಳಿಂದ ದೂರವಿರಲು ನಿಮಗೆ ಸಲಹೆ ನೀಡಲಾಗಿದೆ. ಈ ಸಮಯದಲ್ಲಿ ಪೂರ್ವಜರ ಆಸ್ತಿಯಿಂದಲೂ ನಿಮಗೆ ಲಾಭವಾಗಬಹುದು. ಪೂರ್ವಜರ ಆಸ್ತಿಗೆ ಸಂಬಂಧಿಸಿದ ಯಾವುದೇ ವಾದ ನಡೆಯುತ್ತಿದ್ದರೆ, ಅದನ್ನು ತೊಡೆದುಹಾಕಲು ಇದು ಉತ್ತಮ ಸಮಯ. ಈ ಸಮಯದಲ್ಲಿ ನಿಮ್ಮ ತಾಯಿ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಎದುರಿಸಬಹುದು. ಆದ್ದರಿಂದ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲು ನಿಮಗೆ ಸೂಚಿಸಲಾಗಿದೆ.

ಪರಿಹಾರ - “ ಓಂ ಶುಕ್ರಾಯ್ ನಮಃ “ ಮಂತ್ರವನ್ನು 108 ಬಾರಿ ಜಪಿಸುವುದು ನಿಮಗೆ ಉತ್ತಮ.

वृषभ / ವೃಷಭ ರಾಶಿ

ವೃಷಭ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ಆತ್ಮ, ದೇಹ ಇತ್ಯಾದಿಯ ಮೊದಲನೇ ಮತ್ತು ರೋಗಗಳು, ಸಾಲ ಇತ್ಯಾದಿಯ ಆರನೇ ಮನೆಯ ಅಧಿಪತಿ. ಸಂಚಾರದ ಸಮಯದಲ್ಲಿ ಇದು ನಿಮ್ಮ ಮದುವೆ, ಪಾಲುದಾರಿಕೆಯ ಏಳನೇ ಮನೆಗೆ ಗೋಚರಿಸುತ್ತದೆ. ಈ ರಾಶಿಚಕ್ರದ ವಿವಾಹಿತ ಜನರು ತಮ್ಮ ದಾಂಪತ್ಯ ಜೀವನದಲ್ಲಿ ಸಂತೋಷವನ್ನು ಪಡೆಯುತ್ತಾರೆ. ಈ ಸಮಯದಲ್ಲಿ ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಪ್ರಣಯದ ಭೋಜನಕ್ಕೆ ಹೋಗಬಹುದು. ನಿಮ್ಮ ಜೀವನ ಸಂಗಾತಿಯು ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ, ಅವರು ಪ್ರಗತಿಯನ್ನು ಪಡೆಯಬಹುದು. ಈ ರಾಶಿಚಕ್ರದ ಸ್ಥಳೀಯರು ಒಂಟಿಯಾಗಿದ್ದರೆ ಅಥವಾ ಪ್ರೀತಿಯ ಸಂಬಂಧದಲ್ಲಿದ್ದರೆ, ಅವರು ಮದುವೆಯಾಗಬಹುದು. ಪಾಲುದಾರಿಕೆಯ ವ್ಯಾಪರದಲ್ಲಿ ತೊಡಗಿರುವ ಜನರು ಉತ್ತಮ ಲಾಭವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಈ ಸಮಯದಲ್ಲಿ ವೃಷಭ ರಾಶಿಚಕ್ರದ ಜನರು ಕಾನೂನು ವಿವಾದದಲ್ಲೂ ಯಶಸ್ಸು ಪಡೆಯುತ್ತಾರೆ. ಈ ಸಂಚಾರದ ಅವಧಿಯಲ್ಲಿ ನೀವು ಸಂತೋಷ, ಪ್ರೀತಿ ಮತ್ತು ಸ್ನೇಹದ ಭಾವನೆಯಿಂದ ತುಂಬಿರುತ್ತೀರಿ. ಈ ಸಮಯದಲ್ಲಿ, ನಿಮ್ಮ ಸ್ಟೈಲ್ ಮತ್ತು ಬಟ್ಟೆಗಳತ್ತ ನೀವು ವಿಶೇಷ ಗಮನ ಹರಿಸುತ್ತೀರಿ. ಇದು ನಿಮ್ಮ ವ್ಯಕ್ತಿತ್ವವನ್ನು ಆಕರ್ಷಕವಾಗಿಸುತ್ತದೆ, ಇದು ಜನರನ್ನು ನಿಮ್ಮ ಕಡೆಗೆ ವಿಶೇಷವಾಗಿ ವಿರುದ್ಧ ಲಿಂಗದ ಜನರನ್ನು ಆಕರ್ಷಿಸುತ್ತದೆ.

ಪರಿಹಾರ - ಪ್ರತಿದಿನ ಸುಗಂಧ ದ್ರವ್ಯವನ್ನು ಬಳಸುವುದು ಮತ್ತು ವಿಶೇಷವಾಗಿ ಶ್ರೀಗಂಧದ ಸುಗಂಧ ದ್ರವ್ಯವು ಶುಭವನ್ನು ತರುತ್ತದೆ

मिथुन / ಮಿಥುನ ರಾಶಿ

ಮಿಥುನ ರಾಶಿಚಕ್ರದ ಜನರಿಗೆ ಶುಕ್ರ ಗ್ರಹವು ಮಕ್ಕಳು, ಪ್ರಣಯ, ಪ್ರೀತಿ ಮತ್ತು ಭಾವನೆಗಳ ಐದನೇ ಮತ್ತು ನಷ್ಟ, ವಿದೇಶ ಪ್ರಯಾಣದ ಹನ್ನೆರಡನೇ ಮನೆ ಅಧಿಪತಿ. ಸಂಚಾರದ ಸಮಯದಲ್ಲಿ ಇದು ಶತ್ರು, ರೋಗ, ಸ್ಪರ್ಧೆಯ ನಿಮ್ಮ ಆರನೇ ಮನೆಗೆ ಗೋಚರಿಸುತ್ತದೆ. ಈ ಸಂಚಾರದ ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ಜನರು ಯಶಸ್ಸು ಪಡೆಯುತ್ತಾರೆ. ಆದಾಗ್ಯೂ ನಿಮ್ಮ ಪ್ರಯತ್ನಗಳನ್ನು ನೀವು ಹೆಚ್ಚಿಸಬೇಕು. ಖಾಸಗಿ ವಲಯದಲ್ಲಿ ವಿಶೇಷವಾಗಿ ಪ್ರಯಾಣ, ಪ್ರವಾಸೋದ್ಯಮ, ಮಾಧ್ಯಮ ಅಥವಾ ಮನರಂಜನಾ ಉದ್ಯಮದಲ್ಲಿರುವ ಜನರು ಅದೃಷ್ಟವಂತರು. ಈ ರಾಶಿಚಕ್ರದ ಜನರು ಉದ್ಯೋಗದಲ್ಲಿ ಉತ್ತಮ ಅವಕಾಶಗಳನ್ನು ಪಡೆಯುತ್ತಾರೆ. ಆದಾಯದಲ್ಲಿ ಹೆಚ್ಚಳ ಮತ್ತು ಬಡ್ತಿ ಪಡೆಯುವ ಸಾಧ್ಯತೆಯೂ ಇದೆ. ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲು ಈ ರಾಶಿಚಕ್ರದ ಉದ್ಯಮಿಗಳು ಪ್ರಯಾಣದ ಅವಕಾಶಗಳನ್ನು ಪಡೆಯಬಹುದು. ಕೆಲಸದ ಸ್ಥಳದ ವಾತಾವರಣವು ಉತ್ತಮವಾಗಿರುತ್ತದೆ. ನಿಮ್ಮ ತಂಡ ಮತ್ತು ಸಹೋದ್ಯೋಗಿಗಳ ಬೆಂಬಲವನ್ನು ನೀವು ಪಡೆಯುತ್ತೀರಿ. ಪ್ರೀತಿಯ ಸಂಬಂಧದಲ್ಲಿರುವ ಜನರು ತಮ್ಮ ಸಂಗಾತಿಯೊಂದಿಗೆ ಜಗಳ ಮಾಡಬಹುದು, ಆದ್ದರಿಂದ ವಿವಾದದ ಸ್ಥಿತಿಯಿಂದ ದೂರವಿರಲು ನಿಮಗೆ ಸಲಹೆ ನೀಡಲಾಗಿದೆ. ವಿವಾಹಿತ ಜನರ ಜೀವನದಲ್ಲೂ ಭಿನ್ನಾಭಿಪ್ರಾಯದ ಸಾಧ್ಯತೆ ಇದೆ. ಈ ರಾಶಿಚಕ್ರದ ಜನರಿಗೆ ಮಕ್ಕಳ ಆರೋಗ್ಯದ ಬಗ್ಗೆ ಕೆಲವು ಸಮಸ್ಯೆಗಳಾಗಬಹುದು.

ಪರಿಹಾರ - ಶುಕ್ರವಾರ ಚಿಕ್ಕ ಹುಡುಗಿಯರಿಗೆ ಬಿಳಿ ಬಣ್ಣದ ಆಹಾರ ಅಥವಾ ಬಿಳಿ ಆಭರಣಗಳ ದಾನ ಮಾಡಿ.

कर्क / ಕರ್ಕ ರಾಶಿ

ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ಸಂತೋಷ, ತಾಯಿ ಇತ್ಯಾದಿಯ ನಾಲ್ಕನೇ ಮತ್ತು ಲಾಭ, ಹಿರಿಯ ಸಹೋದರ-ಸಹೋದರಿಯರು ಮತ್ತು ಆದಾಯದ ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ನಿಮ್ಮ ಮಕ್ಕಳು, ಪ್ರಣವ, ಶಿಕ್ಷಣ ಇತ್ಯಾದಿಯ ಐದನೇ ಮನೆಗೆ ಪ್ರವೇಶಿಸುತ್ತದೆ. ಆರ್ಥಿಕವಾಗಿ ಈ ಸಂಚಾರವು ನಿಮಗೆ ತುಂಬಾ ಉತ್ತಮವಾಗಿರುತ್ತದೆ. ಉದ್ಯೋಗದಲ್ಲಿರುವ ಜನರು ವೇತನದಲ್ಲಿ ಹೆಚ್ಚಳವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ವ್ಯಾಪಾರದಲ್ಲಿ ತೊಡಗಿರುವ ಜನರು ಸಹ ಈ ಸಮಯದಲ್ಲಿ ತಮ್ಮ ಡೀಲಿಂಗ್ ಮೂಲಕ ಉತ್ತಮ ಹಣಕಾಸು ಗಳಿಸಬಹುದು. ಫ್ಯಾಷನ್, ಇಂಟೀರಿಯರ್ ಕ್ಷೇತ್ರದಲ್ಲಿರುವ ಜನರಿಗೂ ಈ ಸಂಚಾರವು ಪ್ರಯೋಜನಕಾರಿಯಾಗಿದೆ ಮತ್ತು ನೀವು ಹೊಸ ಗುರುತನ್ನು ಪಡೆಯುತ್ತೀರಿ. ಪ್ರಸ್ತುತ ಸಮಯದಲ್ಲಿ ಮಾಡುತ್ತಿರುವ ಕೆಲಸದಲ್ಲಿ ಕೂಡ ನೀವು ಉತ್ತಮ ಹಣವನ್ನು ಪಡೆಯುತ್ತೀರಿ ಮತ್ತು ಹಿಂದಿನ ಸಮಯದಲ್ಲಿ ನಿಮ್ಮ ಮೂಲಕ ಮಾಡಲಾದ ಕಠಿಣ ಪರಿಶ್ರಮದಿಂದಲೂ ನೀವು ಶುಭ ಫಲಿತಾಂಶಗಳನ್ನು ಪಡೆಯಬಹುದು. ಆಭರಣ ಇತ್ಯಾದಿಯ ವ್ಯಾಪಾರದಲ್ಲಿ ತೊಡಗಿರುವ ಜನರು ಸಹ ಉತ್ತಮ ಮಾರಾಟ ಮತ್ತು ಉತ್ತಮ ಹಣವನ್ನು ಗಳಿಸುತ್ತಾರೆ. ತಮ್ಮ ಹವ್ಯಾಸವನ್ನು ತಮ್ಮ ವ್ಯಾಪಾರವನ್ನಾಗಿ ಬದಲಾಯಿಸಲು ಬಯಸುತ್ತಿರುವವರು ಸಹ ಯಶಸ್ಸು ಪಡೆಯುತ್ತಾರೆ. ವೈಯಕ್ತಿಕ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಏರುತ್ತದೆ. ಕುಟುಂಬ ಮತ್ತು ಮಕ್ಕಳೊಂದಿಗೆ ಸಮತೋಲನ ಉಳಿದಿರುತ್ತದೆ

ಪರಿಹಾರ - ಪ್ರತಿದಿನ ಸಂಜೆ ಮಲ್ಲಿಗೆ, ಗುಲಾಬಿ ಅಥವಾ ಶ್ರೀಗಂಧ ಸುಗಂಧದ ದೀಪವನ್ನು ಬೆಳಗಿಸಿ.


250+ಪುಟಗಳ ಬೃಹತ್ ಕುಂಡಲಿಯ ಮೂಲಕ ಗ್ರಹಗಳ ನಕಾರಾತ್ಮಕ ಪರಿಣಾಮಗಳಿಗೆ ವಿಶೇಷ ಪರಿಹಾರಗಳನ್ನು ಪಡೆಯಿರಿ

सिंह / ಸಿಂಹ ರಾಶಿ

ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ಮೂರನೇ ಮತ್ತು ಹತ್ತನೇ ಮನೆಯ ಅಧಿಪತಿ. ಮೂರನೇ ಮನೆಯನ್ನು ಧೈರ್ಯ, ಅಲ್ಪ ದೂರದ ಪ್ರಯಾಣಗಳ ಮನೆಯೆಂದು ಪಗಣಿಸಲಾಗಿದೆ ಮತ್ತು ಹತ್ತನೇ ಮನೆಯನ್ನು ವೃತ್ತಿ ಜೀವನ, ಗೌರವ - ಪ್ರತಿಷ್ಠೆ ಇತ್ಯಾದಿಯ ಮೆನೆಯೆಂದು ಪರಿಗಣಿಸಲಾಗಿದೆ. ಸಂಚಾರದ ಸಮಯದಲ್ಲಿ ಇದು ನಿಮ್ಮ ಕುಟುಂಬ, ತಾಯಿ ಮತ್ತು ವಿಶ್ರಾಂತಿಯ ನಾಲ್ಕನೇ ಮನೆಗೆ ಗೋಚರಿಸುತ್ತದೆ. ಈ ಸಮಯದಲ್ಲಿ ನಿಮ್ಮ ಮನೆಯಲ್ಲಿ ಸಂತೋಷವಿರುತ್ತದೆ, ಮನೆಯ ಸದಸ್ಯರಿಗಾಗಿ ಏನಾದರೂ ಮಾಡುವ ಪ್ರೇರಣೆ ನಿಮ್ಮಲ್ಲಿ ಜಾಗೃತಗೊಳ್ಳುತ್ತದೆ. ನಿಮ್ಮ ಕುಟುಂಬದ ಸದಸ್ಯರು ಸಹ ನಿಮ್ಮ ನಿರ್ಧಾರದಲ್ಲಿ ನಿಮ್ಮನ್ನು ಬೆಂಬಲಿಸುತ್ತಾರೆ. ಈ ರಾಶಿಚಕ್ರದ ಕೆಲವು ಜನರು ವಾಹನವನ್ನು ಖರೀದಿಸಬಹುದು, ಇದು ನಿಮ್ಮ ಸಂತೋಷವನ್ನು ಹೆಚ್ಚಿಸುತ್ತದೆ. ನಿಮ್ಮ ತಾಯಿಯೊಂದಿಗಿನ ನಿಮ್ಮ ಸಂಬಂಧವು ಬಲಗೊಳ್ಳುತ್ತದೆ ಮತ್ತು ನೀವು ಅವರ ಸ್ನೇಹ ಮತ್ತು ವಾತ್ಸಲ್ಯವನ್ನು ಪಡೆಯುತ್ತೀರಿ. ಕೌಟುಂಬಿಕ ವ್ಯಾಪಾರದಲ್ಲಿ ತೊಡಗಿರುವ ಜನರಿಗೆ ಈ ಸಮಯ ಶುಭವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ನಿಮ್ಮ ಸಾಮರಸ್ಯ ತುಂಬಾ ಉತ್ತಮವಾಗಿರುತ್ತದೆ, ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಇದು ನಿಮಗೆ ಸಹಾಯ ಮಾಡುತ್ತದೆ. ಮನೆಯಿಂದಲೇ ಕೆಲಸ ಮಾಡುತ್ತಿರುವ ಜನರ ವೃತ್ತಿ ಜೀವನಕ್ಕೆ ಈ ಸಮಯ ಉತ್ತಮವಾಗಿದೆ. ಕಲೆ, ಫ್ಯಾಷನ್ ಡಿಸೈನಿಂಗ್ ಗೆ ಸಂಬಂಧಿಸಿದ ಜನರು ಸೃಜನಶೀಲ ಆಲೋಚನೆಗಳನ್ನು ಹೊಂದಿರುತ್ತಾರೆ ಮತ್ತು ನೀವು ಅನೇಕ ಸವಾಲುಗಳಿಂದ ತುಂಬಿರುವ ಯೋಜನೆಗಳನ್ನು ಅತ್ಯಂತ ಯಶಸ್ಸಿನೊಂದಿಗೆ ಪೂರ್ಣಗೊಳಿಸುತ್ತೀರಿ. ಉದ್ಯೋಗಕ್ಕೆ ಸಂಬಂಧಿಸಿರುವ ಜನರು ಅಪೇಕ್ಷಿತ ಸ್ಥಳಕ್ಕೆ ವರ್ಗಾವಣೆಯನ್ನು ಪಡೆಯಬಹುದು. ಆಸ್ತಿಗೆ ಸಂಬಂಧಿಸಿದ ಹೂಡಿಕೆ ಮಾಡಲು ಬಯಸುತ್ತಿರುವ ಜನರಿಗೆ ಸಮಯ ಉತ್ತಮವಾಗಿದೆ. ನೀವು ಅಪೇಕ್ಷಿತ ಸ್ಥಳದಲ್ಲಿ ಆಸ್ತಿಯನ್ನು ಗಳಿಸಬಹುದು.

ಪರಿಹಾರ - ಪ್ರತಿದಿನ ಸೋಂಪು ಮತ್ತು ನಿಂಬೆಯನ್ನು ಸೇವಿಸಿ

कन्या / ಕನ್ಯಾ ರಾಶಿ

ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ಎರಡನೇ ಮತ್ತು ಒಂಬತ್ತನೇ ಮನೆಯ ಅಧಿಪತಿ. ಎರಡನೇ ಮನೆಯನ್ನು ಧ್ವನಿ, ಹಣ, ಕುಟುಂಬ ಇತ್ಯಾದಿಯ ಮನೆ ಮತ್ತು ಒಂಬತ್ತನೇ ಮನೆಯನ್ನು ಧರ್ಮ, ಗುರು ಮತ್ತು ಆಧ್ಯಾತ್ಮಿಕತೆಯ ಮನೆಯೆಂದು ಪರಿಗಣಿಸಲಾಗಿದೆ. ಸಂಚಾರದ ಸಮಯದಲ್ಲಿ ಶುಕ್ರವು ನಿಮ್ಮ ಮೂರನೇ ಮನೆಗೆ ಗೋಚರಿಸುತ್ತದೆ. ಇದನ್ನು ಧೈರ್ಯ ಮತ್ತು ಸಂವಹನದ ಅಂಶದ ಮನೆಯೆಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ನಿಮ್ಮ ಧ್ವನಿ ಸಿಹಿಯಾಗಿರುತ್ತದೆ ಮತ್ತು ನಿಮ್ಮ ವ್ಯಕ್ತಿತ್ವದಿಂದ ಜನರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ. ನಿಮ್ಮ ವ್ಯಕ್ತಿತ್ವದಲ್ಲಿ ಹೊಳೆಯುತ್ತದೆ, ಇದರಿಂದ ಜನರು ನಿಮ್ಮ ಹತ್ತಿರ ಬರಲು ಬಯಸುತ್ತಾರೆ. ಸಮಾಜದಲ್ಲಿ ನೀವು ಗೌರವವನ್ನು ಪಡೆಯುತ್ತೀರಿ ಮತ್ತು ನೀವು ಹೊಸ ಸ್ನೇಹಿತರನ್ನು ಮಾಡಬಹುದು. ಕಿರಿಯ ಸಹೋದರ - ಸಹೋದರಿಯರೊಂದಿಗೆ ಸಹ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ. ಕಿರಿಯ ಸಹೋದರ-ಸಹೋದರಿಯರು ಅತಃವ ಸ್ನೇಹಿತರೊಂದಿಗೆ ಆಲ್ಪ ದೂರದ ಪ್ರಯಾಣಕ್ಕೆ ಹೋಗಲು ಯೋಜಿಸಬಹುದು. ಈ ಸಮಯದಲ್ಲಿ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ ಮತ್ತು ಪ್ರತಿಯೊಂದು ಕ್ಷೇತ್ರದಲ್ಲಿ ನೀವು ಯಶಸ್ಸು ಪಡೆಯುತ್ತೀರಿ. ಧಾರ್ಮಿಕ ಪ್ರವೃತ್ತಿಗಳು ಸಹ ಹೆಚ್ಚಾಗಬಹುದು. ಈ ಸಮಯದಲ್ಲಿ ನೀವು ಧಾರ್ಮಿಕ ಸ್ಥಳಗಳು ಅಥವಾ ಧಾರ್ಮಿಕ ಚಟುವಟಿಕೆಗಳಲ್ಲಿ ಹಣಕಾಸಿನ ದಾನ ಮಾಡಬಹುದು. ಈ ಸಮಯದಲ್ಲಿ ಅಗತ್ಯವಿರುವ ಜನರಿಗೆ ಸಹಾಯ ಮಾಡುವಿರಿ. ಉನ್ನತ ಶಿಕ್ಷಣವನ್ನು ಗಳಿಸುತ್ತಿರುವ ವಿದ್ಯಾರ್ಥಿಗಳಿಗೆ ಈ ಸಮಯ ಅದ್ಭುತವಾಗಿರುತ್ತದೆ. ಯಾವುದೇ ವಿಷಯವನ್ನು ಅರ್ಥಮಾಡಿಕೊಳ್ಳುವಲ್ಲಿ ಅಥವಾ ನೆನಪಿಟ್ಟುಕೊಳ್ಳುವಲ್ಲಿ ನಿಮಗೆ ತೊಂದರೆ ಇರುವುದಿಲ್ಲ. ಇನ್ನೂ ಒಂಟಿಯಾಗಿರುವ ಜನರು ಈ ಸಮಯದಲ್ಲಿ ಅಪೇಕ್ಷಿತ ಪ್ರೀತಿಯನ್ನು ಪಡೆಯಾಗುವುದಿಲ್ಲ ಮತ್ತು ಇದಕ್ಕಾಗಿ ನೀವು ಸಾಕಷ್ಟು ಪ್ರಯತ್ನಿಸಬೇಕಾಗಬಹುದು.

ಪರಿಹಾರ - ಶುಕ್ರವಾರ ನಿಮ್ಮ ಮನೆಯಲ್ಲಿ ಬಿಳಿ ಹೂವಿನ ಗಿಡವನ್ನು ಮತ್ತು ನೆಡೆಯಿರಿ ಮತ್ತು ಅದನ್ನು ನೋಡಿಕೊಳ್ಳಿ.


ರಾಜಯೋಗ ರಿಪೋರ್ಟ್ ಮೂಲಕ ನಿಮ್ಮ ಅದೃಷ್ಟ ಮತ್ತು ಜೀವನದಲ್ಲಿ ಸಂತೋಷ ಯಾವಾಗ ಬರುತ್ತದೆ ಎಂದು ತಿಳಿಯಿರಿ.

तुला / ತುಲಾ ರಾಶಿ

ತುಲಾ ರಾಶಿಚಕ್ರದ ಜನರಿಗೆ ಶುಕ್ರ ಗ್ರಹವು ಆತ್ಮ ಮತ್ತು ವ್ಯಕ್ತಿತ್ವದ ಮೊದಲನೇ ಮತ್ತು ರಹಸ್ಯ ವಿಧ್ಯೆ ಇತ್ಯಾದಿಯ ಎಂಟನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ನಿಮ್ಮ ಎರಡನೇ ಮನೆಗೆ ಸಾಗುತ್ತದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಧಾರ್ಮಿಕ ಭಾಗವು ಬಲಗೊಳ್ಳುತ್ತದೆ ಮತ್ತು ಹಣಕಾಸಿನ ಕೊರತೆ ಇರುವುದಿಲ್ಲ, ಹಣವನ್ನು ಗಳಿಸುವ ವಿಧಾನಗಳು ಹೆಚ್ಚಾಗುತ್ತವೆ. ಈ ಸಂಚಾರದ ಸಮಯದಲ್ಲಿ ನೀವು ಕಾನೂನು ಬಾಹಿರ ರೀತಿಗಳಿಂದಲೂ ಹಣವನ್ನು ಗಳಿಸಬಹುದು. ಆದಾಗ್ಯೂ, ನೀವು ಅಂತಹ ಕೆಲಸಗಳಿಂದದೂರವಿರಬೇಕು ಮತ್ತು ಎಲ್ಲವನ್ನೂ ನೀವು ಪ್ರಾಮಾಣಿಕವಾಗಿ ಮಾಡಬೇಕು. ಈ ರಾಶಿಚಕ್ರದ ಸ್ಥಳೀಯರು ಪೂರ್ವಜರ ಆಸ್ತಿಯಿಂದಲೂ ಲಾಭವನ್ನು ಪಡೆಯಬಹುದು. ಮಾಮ ಕಡೆಯ ಜನರಿಂದಲೂ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಸಂಶೋಧನಾ ಕೆಲಸದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಇದುನ್ ತುಂಬಾ ಅನುಕೂಲಕರ ಸಮಯವಾಗಿರುತ್ತದೆ. ಈ ರಾಶಿಚಕ್ರದ ವಿದ್ಯಾರ್ಥಿಗಳು ಅಧ್ಯಯನದತ್ತ ಮನಸ್ಸು ಹೊಂದಿರುತ್ತಾರೆ ಮತ್ತು ಈ ಸಮಯದಲ್ಲಿ ಆಳವಾದ ರಹಸ್ಯಗಳನ್ನು ನೀವು ಬಹಿರಂಗಪಡಿಸಬಹುದು. ಫ್ಯಾಶನ್ ಮತ್ತು ಇವೆಂಟ್ ನಿರ್ವಾಹಕರಿಗೆ ಇದು ಉತ್ತಮ ಸಮಯ. ನಿಮ್ಮ ತಾಯಿಗೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಾಗಬಹುದು. ಕೌಟುಂಬಿಕ ಸಂತೋಶದತ್ತ ನೀವು ಆಕರ್ಷಿತರಾಗುತ್ತೀರಿ ಮತ್ತು ಮನೆಯಲ್ಲಿ ಕುಟುಂಬದ ಜನರೊಂದಿಗೆ ಸಮಯವನ್ನು ಕಳೆಯುತ್ತೀರಿ. ಕುಟುಂಬದಿಂದ ದೂರವಿರುವ ಜನರು ಮನೆಗೆ ಹೋಗಲು ಅವಕಾಶವನ್ನು ಪಡೆಯಬಹುದು. ಈ ಸಮಯದಲ್ಲಿ ಈ ರಾಶಿಚಕ್ರದ ಮಹಿಳೆಯರು ಕೆಲವು ಅರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ವ್ಯಾಪಾರದಲ್ಲಿ ಚಿಂತಶೀಲವಾಗಿ ಹೂಡಿಕೆ ಮಾಡಿ, ಇಲ್ಲದಿದ್ದರೆ ನಷ್ಟವಾಗುವ ಸಾಧ್ಯತೆ ಇದೆ.

ಪರಿಹಾರ - ಲಕ್ಷ್ಮಿ ತಾಯಿಯನ್ನು ಪೂಜಿಸಿ ಮತ್ತು ಶುಕ್ರವಾರದಂದು ಅವರಿಗೆ ಕಮಲದ ಹೂವನ್ನು ಅರ್ಪಿಸಿ.

वृश्चिक / ವೃಶ್ಚಿಕ ರಾಶಿ ಭವಿಷ್ಯ

ವೃಶ್ಚಿಕ ರಾಶಿಗೆ ಶುಕ್ರ ದೇವ ಹನ್ನೆರಡನೇ ಮತ್ತು ಏಳನೇ ಮನೆಯ ಅಧಿಪತಿ. ಹನ್ನೆರಡನೇ ಮನೆಯನ್ನು ವೆಚ್ಚ ಮತ್ತು ನಷ್ಟದ ಮನೆ ಮತ್ತು ಏಳನೇ ಮನೆಯನ್ನು ಪಾಲುದಾರಿಕೆ ಮತ್ತು ಬೆಂಬಲದ ಮನೆಯೆಂದು ಪರಿಗಣಿಸಲಾಗಿದೆ. ಸಂಚಾರದ ಸಮಯದಲ್ಲಿ ನಿಮ್ಮದೇ ರಾಶಿ ಅಂದರೆ ನಿಮ್ಮ ಮೊದಲನೇ ಮನೆಗೆ ಗೋಚರಿಸುತ್ತದೆ. ಇದು ಆತ್ಮ ಮತ್ತು ದೇಹದ ಅಂಶದ ಮನೆ. ಈ ಸಂಚಾರದ ಸಮಯದಲ್ಲಿ ವಿರುದ್ಧ ಲಿಂಗದ ಜನರು ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ. ಈ ಸಮಯದಲ್ಲಿ ನೀವು ಧನಾತ್ಮಕ ಮತ್ತು ಸಂತೋಷವಾಗಿರುತ್ತೀರಿ. ನೀವು ಯಾವುದೇ ಕಲಾತ್ಮಕ ಸ್ಥಳದಲ್ಲಿ ಅಥವಾ ತೆರೆದ ಗಾಳಿಯಲ್ಲಿ ಆನಂದಿಸಬಹುದು. ಈ ಸಂಚಾರದ ಸಮಯದಲ್ಲಿ ನೀವು ಸೌಂದರ್ಯದ ಅಭಿಮಾನಿಯಾಗುತ್ತೀರಿ. ವಿವಾಹಿತ ಜನರು ತಮ್ಮ ಜೀವನ ಸಂಗಾತಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತಾರೆ. ಈ ಸಮಯದಲ್ಲಿ ಜೀವನ ಸಂಗಾತಿಯೊಂದಿಗೆ ನೀವು ಉತ್ತಮ ಗುಣಮಟ್ಟದ ಸಮಯವನ್ನು ಕಳೆಯಬಹುದು ಮತ್ತು ಅವರೊಂದಿಗೆ ಎಲ್ಲಾದರೂ ಸುತ್ತಾಡಲು ಸಹ ಹೋಗಬಹುದು. ಜೀವನ ಸಂಗಾತಿ ಅಥವಾ ಪ್ರೀತಿಪಾತ್ರರಿಗೆ ಯಾವುದೇ ಉಡುಗೊರೆಯನ್ನು ತೆಗೆದುಕೊಳ್ಳಬಹುದು. ಇನ್ನೂ ಒಂಟಿಯಾಗಿರುವವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಈ ಸಮಯ ಅನುಕೂಲಕ್ರವಾಗಿದೆ. ಮದುವೆಗಾಗಿ ಅಪೇಕ್ಷಿತ ಸಂಗಾತಿಯನ್ನು ಬಯಸುವವರು, ತಮ್ಮ ಆತ್ಮ ಸಂಗಾತಿಯನ್ನು ಪಡೆಯಬಹುದು. ಕಲೆ ಮತ್ತು ಡಿಸೈನಿಂಗ್ ಕ್ಷೇತ್ರದಲ್ಲಿ ತೊಡಗಿರುವ ಜನರಿಗೂ ಸಮಯ ಉತ್ತಮವಾಗಿದೆ. ನಿಮ್ಮ ಸೃಜನಶೀಲತೆ ಉತ್ತುಂಗದಲ್ಲಿರುತ್ತದೆ. ಆಮದು - ರಫ್ತಿಗೆ ಸಂಬಂದಿಸಿದ ವ್ಯಾಪಾರದಲ್ಲಿ ತೊಡಗಿರುವ ಜನರ ವ್ಯಾಪಾರವು ವಿಸ್ತರಿಸುತ್ತದೆ. ಈ ಸಮಯದಲ್ಲಿ ನೀವು ಸಂತೋಷ ಸೌಕರ್ಯಗಳ ಮೇಲೆ ಖರ್ಚು ಮಾಡಬಹುದು.

ಪರಿಹಾರ - ನಿಮ್ಮ ಕೈಚೀಲದಲ್ಲಿ ಬೆಳ್ಳಿಯ ತುಂಡನ್ನು ಇಟ್ಟುಕೊಳ್ಳಿ.

धनु / ಧನು ರಾಶಿ

ಧನು ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ದೇವ ಆರನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ. ಆರನೇ ಮನೆಯನ್ನು ಸೇವೆ, ಅರೋಗ್ಯ ಇತ್ಯಾದಿಯ ಮನೆಯೆಂದು ಮತ್ತು ಹನ್ನೊಂದನೇ ಮನೆಯನ್ನು ಯಶಸ್ಸು ಮತ್ತು ಲಾಭದ ಮನೆಯೆಂದು ಪರಿಗಣಿಸಲಾಗಿದೆ. ಶುಕ್ರ ಸಂಚಾರವು ನಿಮ್ಮ ಹನ್ನೆರಡನೇ ಮನೆಯಲ್ಲಿ ಸಂಭವಿಸಲಿದೆ, ಇದನ್ನು ವೆಚ್ಚ ಮತ್ತು ವಿದೇಶ ಪ್ರಯಾಣಗಳ ಮನೆಗೆಯೆಂದು ಕರೆಯಲಾಗುತ್ತದೆ. ಈ ಸಮಯವು ನಿಮಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಈ ಸಮಯದಲ್ಲಿ ಹಣಕಾಸು ಗಳಿಸಲು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಯಶಸ್ಸು ಪಡೆಯಲು ನೀವು ಬುದ್ಧಿವಂತಿಕೆಯನ್ನು ಬಳಸಬೇಕಾಗುತ್ತದೆ. ಈ ಸಮಯದಲ್ಲಿ ವಿದೇಶಕ್ಕೆ ಹೋಗಲು ನೀವು ಅವಾಶವನ್ನು ಪಡೆಯಬಹುದು ಇದರಿಂದಾಗಿ ನಿಮ್ಮ ವೃತ್ತಿ ಜೀವನದಲ್ಲಿ ಕೆಲವು ಧನಾತ್ಮಕತೆಯನ್ನು ಪಡೆಯುತ್ತೀರಿ. ಈ ಸಮಯದಲ್ಲಿ ಆದಾಯಕ್ಕಿಂತ ಹೆಚ್ಚು ಖರ್ಚುಗಳಾಗಬಹುದುನ್ ಮತ್ತು ಅನಗತ್ಯ ವಸ್ತುಗಳ ಮೇಲೆ ವೆಚ್ಚಗಳು ಹೆಚ್ಚಾಗಬಹುದು. ವಿವಾಹಿತ ಜನರ ಜೀವನದಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು. ಪ್ರತಿಯೊಂದು ಪರಿಸ್ಥಿತಿಯನ್ನು ಪರಿಹರಿಸಲು ನೀವು ಮನಸ್ಸಿನಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಬೇಕು. ನೀವು ಶಿಕ್ಷಕರಾಗಿದ್ದರೆ, ಶೇರ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ, ನೀವು ಯಶಸ್ಸು ಪಡೆಯುವ ಸಾಧ್ಯತೆ ಇದೆ. ವಿದೇಶಕ್ಕೆ ಸಂಬಂಧಿಸಿದ ವ್ಯಾಪಾರದಲ್ಲಿ ತೊಡಗಿರುವ ಜನರು ಈ ಸಮಾಯ್ದಲ್ಲಿ ಯಶಸ್ಸು ಪಡೆಯುತ್ತಾರೆ. ವಿದೇಶಿ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನೀವು ಕೆಲಸಕ್ಕಾಗಿ ವಿದೇಶಿ ಪ್ರವಾಸಕ್ಕೂ ಹೋಗಬಹುದು ಮತ್ತು ನೀವು ಯಶಸ್ಸು ಪಡೆಯುತ್ತೀರಿ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ತಪ್ಪಿಸಿ, ಇಲ್ಲದಿದ್ದರೆ ನೀವು ಗೊಂದಲಕ್ಕೊಳಗಾಗಬಹುದು.

ಪರಿಹಾರ - ‘ಓಂ ಶ್ರೀ ಶ್ರೀಯೇ ನಮಃ’ ಮಂತ್ರವನ್ನು 108 ಬಾರಿ ಜಪಿಸಿ.

मकर / ಮಕರ ರಾಶಿ

ಮಕರ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ದೇವ ಐದನೇ ಮತ್ತು ಹತ್ತನೇ ಮನೆಯ ಅಧಿಪತಿ. ಐದನೇ ಮನೆಯನ್ನು ಪ್ರಣಯ, ಮಕ್ಕಳು ಇತ್ಯಾದಿಯ ಮನೆಯೆಂದು ಮತ್ತು ಹತ್ತನೇ ಮನೆಯನ್ನು ವೃತ್ತಿ ಜೀವನ ಮತ್ತು ವ್ಯಾಪಾರದ ಮನೆಯೆಂದು ಪರಿಗಣಿಸಲಾಗಿದೆ. ಸಂಚಾರದ ಸಮಯದಲ್ಲಿ ಇದು ನಿಮ್ಮ ಲಾಭದ ಹನ್ನೊಂದನೇ ಮನೆಗೆ ಗೋಚರಿಸುತ್ತದೆ. ಈ ಸಮಯವು ನಿಮಗೆ ಪ್ರಯೋಜನಕಾರಿಯಾಗಲಿದೆ. ಈ ಸಮಯದಲ್ಲಿ ನೀವು ಆರ್ಥಿಕ ಲಾಭವನ್ನು ಗಳಿಸುತ್ತೀರಿ ಮತ್ತು ವ್ಯಾಪಾರ ಮತ್ತು ವೃತ್ತಿ ಜೀವನದಲ್ಲೂ ಯಶಸ್ಸನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನೀವು ಭೌತಿಕ ಸಂಪನ್ಮೂಲಗಳಿಗಾಗಿ ಖರ್ಚು ಮಾಡುವಿರಿ. ಕೆಲಸದ ಸ್ಥಳದಲ್ಲಿ ನಿಮ್ಮ ಮೇಲಧಿಕಾರಿಗಳು ನಿಮ್ಮ ಕೆಲಸವನ್ನು ಪ್ರಶಂಸಿಸುತ್ತಾರೆ ಮತ್ತು ಇದು ನಿಮ್ಮ ಆದಾಯವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಫ್ಯಾಷನ್, ಡಿಸೈನಿಂಗ್, ಮನರಂಜನಾ ಮತ್ತು ಮಾಧ್ಯಮ ಉದ್ಯಮಕ್ಕೆ ಸಂಬಂಧಿಸಿದ ಜನರು ಯಶಸ್ಸನ್ನು ಪಡೆಯುತ್ತಾರೆ. ಸಾಮಾಜಿಕ ವಲಯದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಜನರು ನಿಮ್ಮ ಸಲಹೆಯನ್ನು ಪಡೆಯಲು ಬಯಸುತ್ತಾರೆ ಮತ್ತು ನಿಮ್ಮನ್ನು ತನ್ನ ಸಂಗಾತಿಯಲ್ಲಿ ಇರಿಸಿಕೊಳ್ಳಲು ಬಯಸುತ್ತಾರೆ. ಕಲೆ, ಇಂಟೀರಿಯರ್, ಅಧ್ಯಾತ್ಮ, ತಂತ್ರ - ಮಂತ್ರದತ್ತ ನಿಮ್ಮ ಒಲವು ಹೆಚ್ಚಾಗಬಹುದು. ನಿಮ್ಮ ಪೋಷಕರು ಮತ್ತು ಮಕ್ಕಳಿಂದ ನೀವು ಲಾಭವನ್ನು ಪಡೆಯಬಹುದು. ಪ್ರಣಯದ ಸಂಬಂಧಕ್ಕೆ ಈ ಸಮಯ ಒಳ್ಳೆಯದು, ಸಂಬಂಧವು ಸುಧಾರಿಸುತ್ತದೆ ಮತ್ತು ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಗುಣಮಟ್ಟದ ಸಮಯವನ್ನು ಕಳೆಯಬಹುದು. ನೀವು ಸಂತೋಷವಾಗಿರುತ್ತೀರಿ ಮತ್ತು ಜನರ ನಡುವೆ ಆಕರ್ಷಣೆಯ ಕೇಂದ್ರವಾಗಿರುತ್ತೀರಿ. ಈ ಅವಧಿಯಲ್ಲಿ ನೀವು ಬಹಳಷ್ಟು ಸ್ನೇಹಿತರನ್ನು ಮಾಡಿಕೊಳ್ಳಬಹುದು.

ಪರಿಹಾರ - ಬಲಗೈಯ ಉಂಗುರುದ ಬೆರಳಿಗೆ ಉತ್ತಮ ಗುಣಮಟ್ಟದ ವಜ್ರದ ಉಂಗುರವನ್ನು ಧರಿಸುವುದು ನಿಮಗೆ ಉತ್ತಮ.

कुंभ / ಕುಂಭ ರಾಶಿ

ಕುಂಭ ರಾಶಿಚಕ್ರದ ಜನರಿಗೆ ಶುಕ್ರ ಗ್ರಹವು ನಾಲ್ಕನೇ ಮತ್ತು ಒಂಬತ್ತನೇ ಮನೆಯ ಅಧಿಪತಿ. ನಾಲ್ಕನೇ ಮನೆಯನ್ನು ವಿಶ್ರಾಂತಿ, ಸಂತೋಷ ಮತ್ತು ಕುಟುಂಬದ ಮನೆಯೆಂದು ಮತ್ತು ಒಂಬತ್ತನೇ ಮನೆಯನ್ನು ಅದೃಷ್ಟ, ಧರ್ಮ ಇತ್ಯಾದಿಯ ಮನೆಯೆಂದು ಪರಿಗಣಿಸಲಾಗಿದೆ. ಸಂಚಾರದ ಸಮಯದಲ್ಲಿ ಇದು ನಿಮ್ಮ ಹತ್ತನೇ ಮನೆಗೆ ಪ್ರವೇಶಿಸುತ್ತದೆ. ಇದನ್ನು ವ್ಯಾಪಾರ ಮತ್ತು ನಿಮ್ಮ ಕರ್ಮದ ಅಂಶವೆಂದು ಪರಿಗಣಿಸಲಾಗಿದೆ. ನಿಮ್ಮ ಹತ್ತನೇ ಮನೆ ವೃಶ್ಚಿಕ ರಾಶಿಗೆ ಸೇರಿದೆ. ಇದರ ಅಧಿಪತಿ ಮಂಗಳ. ಅಂದರೆ ನಿಮ್ಮ ಪ್ರಯತ್ನಗಳ ಬಗ್ಗೆ ನೀವು ತುಂಬಾ ಶಕ್ತಿಯುತವಾಗಿರುತ್ತೀರಿ. ಈ ಸಮಯದಲ್ಲಿ ವೃತ್ತಿ ಜೀವನದಲ್ಲಿ ವ್ಯಾಪಾರವಾಗಿರಲಿ ಅಥವಾ ಉದ್ಯೋಗವಾಗಿರಲಿ, ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಯಶಸ್ಸು ಪಡೆಯುತ್ತೀರಿ. ನೀವು ಸರ್ಕಾರಿ ಉದ್ಯೋಗದಲ್ಲಿದ್ದರೆ, ಉನ್ನತ ಹುದ್ದೆಗೆ ತಲುಪಬಹುದು. ಈ ಸಮಯದಲ್ಲಿ ಮೇಲಧಿಕಾರಿಗಳ ಮೂಲಕ ನಿಮ್ಮ ಕೆಲಸವನ್ನು ಪ್ರಶಂಸಿಸಬಹುದು ಮತ್ತು ನೀವು ಬಡ್ತಿ ಪಡೆಯುವ ಸಂಪೂರ್ಣ ಸಾಧ್ಯತೆಯೂ ಇದೆ. ಈ ಸಮಯದಲ್ಲಿ ನೀವು ನಿಮ್ಮ ಕುಟುಂಬದ ಸದಸ್ಯರಿಂದಲೂ ಬೆಂಬಲವನ್ನು ಪಡೆಯುತ್ತೀರಿ. ಆಸ್ತಿಯಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯ. ಭೌತಿಕ ಸೌಕರ್ಯಗಳ ಮೇಲೆ ನೀವು ಖರ್ಚು ಮಾಡುವಿರಿ, ಇದು ನಿಮಗೆ ತೃಪ್ತಿ ಮತ್ತು ಸಂತೋಷವನ್ನು ನೀಡುತ್ತದೆ. ಈ ಸಮಯದಲ್ಲಿ ಪೂರ್ವಜರ ಆಸ್ತಿಯನ್ನು ಪಡೆಯುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಸಮಯ್ ಉತ್ತಮ, ಈ ಸಮಯದಲ್ಲಿ ಅಧ್ಯಯನದತ್ತ ನೀವು ಕೇಂದ್ರೀಕರಿಸುವಿರಿ ಮತ್ತು ನಿಮ್ಮ ವಿಷಯದಲ್ಲಿ ಹೆಚ್ಚು ಆಸಕ್ತಿ ಹೊಂದುವಿರಿ.

ಪರಿಹಾರ - ಶುಕ್ರವಾರ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸುವುದು ನಿಮಗೆ ಉತ್ತಮ.

मीन / ಮೀನ ರಾಶಿ

ಮೀನ ರಾಶಿಚಕ್ರದ ಸ್ಥಳೀಯರಿಗೆ ಶುಕ್ರ ಗ್ರಹವು ಮೂರನೇ ಮತ್ತು ಎಂಟನೇ ಮನೆಯ ಅಧಿಪತಿ. ಮೂರನೇ ಮನೆಯನ್ನು ಸಹೋದರ-ಸಹೋದರಿಯರು ಮತ್ತು ನಿಮ್ಮ ಪ್ರಯತ್ನಗಳ ಬಗ್ಗೆ ಪರಿಗಣಿಸಲಾಗುತ್ತದೆ, ಅದೇ ಸಮಯದಲ್ಲಿ ಮತ್ತೊಂದೆಡೆ, ಎಂಟನೇ ಮನೆಯ ಮೂಲಕ ಅನಿಶ್ಚಿತತೆಗಳು ಮತ್ತು ಗೂಡ ವಿಜ್ಞಾನದ ಪರಿಗಣಿಸಲಾಗುತ್ತದೆ. ಸಂಚಾರದ ಸಮಯದಲ್ಲಿ ಶುಕ್ರ ದೇವ ನಿಮ್ಮ ಒಂಬತ್ತನೇ ಮನೆಗೆ ಪ್ರವೇಶಿಸುತ್ತಾರೆ. ಈ ಸಂಚಾರದ ಸಮಯದಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ಸಮಾನವಾಗಿ ಈ ಸಂಚಾರದ ಸಮಯದಲ್ಲಿ ನೀವು ಸಂತೋಷವಾಗಿರುತ್ತೀರಿ. ಜೀವನದ ಸಣ್ಣ ಪುಟ್ಟ ಕ್ಷಣಗಳನ್ನು ಸಹ ನೀವು ಆನಂದಿಸುವಿರಿ. ಕೆಲಸದ ಕ್ಷೇತ್ರದಲ್ಲಿ ನೀವು ಬುದ್ಧಿವಂತಿಕೆಯೊಂದಿಗೆ ಕೆಲಸ ಮಾಡುವಿರಿ. ಇದು ನಿಮಗೆ ಯಶಸ್ಸು ನೀಡುತ್ತದೆ. ಆದಾಗ್ಯೂ, ಅದೃಷ್ಟವು ನಿಮ್ಮನ್ನು ಹೆಚ್ನು ಬೆಂಬಲಿಸುವುದಿಲ್ಲ. ಇದರಿಂದಾಗಿ ದಣಿವರಿಯದ ಪ್ರಯತ್ನಗಳ ನಂತರವೂ, ನೀವು ಮೇಲಧಿಕಾರಿಗಳ ಹೃದಯವನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ. ಪ್ರೀತಿಯ ಸಂಬಂಧದ ಬಗ್ಗೆ ಹೆಚ್ಚು ಜಾಗರೂಕರಾಗಿರುವ ಅಗತ್ಯವಿದೆ, ಸಣ್ಣ ವಿವಾದವು ಸಹ ಸಂಬಂಧವನ್ನು ಹದಗೆಡಿಸಬಹುದು. ಈ ಸಮಯದಲ್ಲಿ ನಿಮ್ಮ ಮೂರನೇ ಮನೆಯ ಮೇಲೆ ಶುಕ್ರನ ದೃಷ್ಟಿ ಇರುತ್ತದೆ ಆದ್ದರಿಂದ ಸಂವಹನ ಸಾಮರ್ಥ್ಯವು ಉತ್ತಮವಾಗುತ್ತದೆ, ನೀವು ಶಿಕ್ಷಕರಾಗಿದ್ದರೆ, ಯಶಸ್ಸು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಸಾಮಾಜಿಕ ವಲಯದಲ್ಲಿ ತುಂಬಾ ಚಿಂತನಶೀಲವಾಗಿ ಮಾತನಾಡಿ, ಏಕೆಂದರೆ ಒಂದು ತಪ್ಪು ಪದವು ನಿಮ್ಮ ಪ್ರತಿಷ್ಠೆಯನ್ನು ಹಾಳುಮಾಡಬಹುದು.

ಪರಿಹಾರ - ಶುಕ್ರವಾರ ತುಳಸಿ ಗಿಡವನ್ನು ನೆಟ್ಟು ಅದನ್ನು ಚೆನ್ನಾಗಿ ನೋಡಿಕೊಳ್ಳಿ.


ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

ನೀವು ಈ ಲೇಖನವನ್ನು ಇಷ್ಟಪಟ್ಟಿದ್ದೀರಿ ಎಂದು ನಾವು ಭಾವಿಸುತ್ತೇವೆ. ಆಸ್ಟ್ರೋಸೇಜ್‌ನೊಂದಿಗೆ ಸೇರಿದ್ದಕ್ಕಾಗಿ ತುಂಬಾ ಧನ್ಯವಾದಗಳು.

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 599/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer