• Varun
  • Abhinayaa
  • Kamal
  • Jyoti

ಧನು ರಾಶಿಯಲ್ಲಿ ಶುಕ್ರ ಸಂಚಾರ (4th January 2021)

ವೈದಿಕ ಶಾಸ್ತ್ರದಲ್ಲಿ ಶುಕ್ರ ಗ್ರಹವನ್ನು ಸೌಮ್ಯ ಮತ್ತು ಶುಭ ಗ್ರಹವೆಂದು ಪರಿಗಣಿಸಲಾಗಿದೆ. ಇದು ಲೌಖಿಕ ಸುಖಗಳು, ಪ್ರೀತಿ ಭೌತಿಕ ಸೌಕರ್ಯಗಳ ಅಂಶ. ಅಂದವಾದ ಬಟ್ಟೆಗಳು, ಆಭರಣ, ಸೌಂದರ್ಯ, ಸಮೃದ್ಧಿ, ವಾಹನಗಳ ಅಂಶವೆಂದು ಪರಿಗಣಿಸಲಾಗುವ ಶುಕ್ರ ಗ್ರಹವು ವರ್ಷ 2021 ರಲ್ಲಿ ವೃಶ್ಚಿಕ ರಾಶಿಯಿಂದ ಧನು ರಾಶಿಯಲ್ಲಿ ಪ್ರವೇಶಿಸಲಿದೆ. 04 ಜನವರಿ, ಸೋಮವಾರ ಬೆಳಿಗ್ಗೆ 04 ಗಂಟೆ 51 ನಿಮಿಷಕ್ಕೆ ಸಂಚಾರವು ಸಂಭವಿಸಲಿದೆ.

ಅಂತಹ ಪರಿಸ್ಥಿತಿಯಲ್ಲಿ ಈ ಸಾಗಣೆಯು ವಿಭಿನ್ನ ರಾಶಿಗಳ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ಧನು ರಾಶಿಯಲ್ಲಿ ಶುಕ್ರನ ಸಂಚಾರವು ನಿಮ್ಮ ರಾಶಿ ಚಿಹ್ನೆಯ ಮೇಲೆ ಏನು ಪರಿಣಾಮ ಬೀರುತ್ತದೆ ಮತ್ತು ಈ ಸಂಚಾರದದಿಂದಾಗಿ ನೀವು ಏನು ಫಲಿತಾಂಶಗಳನ್ನು ಪಡೆಯುತ್ತೀರಿ?

ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ

ಮೇಷ ರಾಶಿ

ಧನು ರಾಶಿಯಲ್ಲಿ ಶುಕ್ರ ಸಂಚಾರದ ಸಮಯದಲ್ಲಿ, ಇದು ನಿಮ್ಮ ರಾಶಿಚಕ್ರದ ಒಂಬತ್ತನೇ ಮನೆಯಲ್ಲಿ ಕುಳಿತುಕೊಳ್ಳುತ್ತದೆ. ಶುಕ್ರನ ಈ ಸಂಚಾರದ ಪರಿಣಾಮವು, ವಿಶೇಷವಾಗಿ ನಿಮ್ಮ ಕೆಲಸದ ಸ್ಥಳಕ್ಕೆ ಪ್ರಯೋಜನಕಾರಿಯಾಗಿದೆ. ಈ ಸಮಯದಲ್ಲಿ ನೀವು ಪ್ರವಾಸದ ಅವಕಾಶವನ್ನು ಪಡೆಯುತ್ತೀರಿ. ಇಡದಿಂದಾಗಿ ನೀವು ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ವ್ಯಾಪಾರಸ್ಥರು ಸಹ ಹೊಸ ವ್ಯಾಪಾರ ಅತಃವ ಪಾಲುದಾರಿಕೆಯ ವ್ಯಾಪಾರದಿಂದ ಶುಭ ಫಲಿತಾಂಶಗಳನ್ನು ಪಡೆಯಬಹುದು. ಏಕೆಂದರೆ ಈ ಸಮಯದಲ್ಲಿ ಅವರು ತಮ್ಮ ವ್ಯಾಪಾರವನ್ನು ವಿಸ್ತರಿಸಲು, ಮಾರುಕಟ್ಟೆಯಲ್ಲಿ ಹೊಸ ಉತ್ಪನ್ನಗಳು ಮತ್ತು ಆಲೋಚನೆಗಳನ್ನು ಬಳಸುವುದರಿಂದ ಪ್ರಯೋಜನ ಪಡೆಯುತ್ತಾರೆ.

ಆದಾಗ್ಯೂ, ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಆದಾಯ ಮತ್ತು ವೆಚ್ಚಗಳ ನಡುವೆ ಸರಿಯಾದ ಸಮತೋಲನವನ್ನು ಉಳಿಸಿಕೊಳ್ಳಲು ನಿಮಗೆ ಸಲಹೆ ನೀಡಲಾಗಿದೆ. ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ವಿವಾಹಿತ ಜನರಿಗೆ ಈ ಸಂಚಾರದ ಸಮಯದಲ್ಲಿ, ತಮ್ಮ ಜೀವನ ಸಂಗಾತಿ ಮತ್ತು ಮಕ್ಕಳೊಂದಿಗಿನ ಸಂಬಂಧವನ್ನು ಸುಧಾರಿಸುವ ಅಗತ್ಯವಿದೆ.

ಈ ಸಾಚಾರದ ಸಮಯದಲ್ಲಿ ಶುಕ್ರ ಗ್ರಹವು ಇತರ ಗ್ರಹಗಳೊಂದಿಗೆ ಸೇರಿ, ನಿಮ್ಮ ರಾಶಿಯಲ್ಲಿ “ಪಾಪ ಕರ್ತರಿ” ಯೋಗವನ್ನು ನಿರ್ಮಿಸುತ್ತದೆ. ಇದರ ಪರಿಣಾಮದಿಂದಾಗಿ, ಪ್ರೀತಿಯ ಸಂಬಂಧದಲ್ಲಿರುವ ಜನರು ತಮ್ಮ ಪ್ರೀತಿಪಾತ್ರರೊಂದಿಗೆ ಜಗಳ ಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಅಹಂ ನಿಮ್ಮ ಸಂಬಂಧದ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬೇಡಿ. ಕುಟುಂಬ ಜೀವನಕ್ಕೆ ಸಮಯ ಉತ್ತಮವಾಗಿರುತ್ತದೆ. ಮನೆ - ಕುಟುಂಬದಲ್ಲಿ ಯಾವುದೇ ಧಾರ್ಮಿಕ ಅಥವಾ ಮಂಗಲಿಕ ಕಾರ್ಯಕ್ರಮವನ್ನು ಆಯೋಜಿಸುವ ಸಾಧ್ಯತೆ ಇದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಇನ್ನೂ ಒಬ್ಬಂಟಿಯಾಗಿರುವವರು, ಬೇರೆ ಪ್ರದೇಶದ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ ಇದೆ. ಈ ರಾಶಿಚಕ್ರದ ವಿದ್ಯಾರ್ಥಿಗಳ ಬಗ್ಗೆ ಮಾತನಾಡಿದರೆ, ವಿದ್ಯಾರ್ಥಿಗಳು ಈ ಸಮಯದಲ್ಲಿ ತಮ್ಮ ಅಧ್ಯಯನದತ್ತ ಗಮನ ಹರಿಸುತ್ತಾರೆ. ಮತ್ತೊಂದೆಡೆ, ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಈ ಸಮಯದಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಬಹುದು. ಒಟ್ಟಾರೆಯಾಗಿ, ಶುಕ್ರ ಸಂಚಾರವು ಮೇಷ ರಾಶಿಚಕ್ರದ ಸ್ಥಳೀಯರಿಗೆ ಉತ್ತಮವಾಗಿರಲಿದೆ.

ಪರಿಹಾರ - ಪ್ರತಿದಿನ ನಿಯಮಿತವಾಗಿ ಸೂರ್ಯೋದಯದ ಸಮಯದಲ್ಲಿ ಭಗವಂತ ಪರಶುರಾಮರ ಅವತಾರದ ಕಥೆಯನ್ನು ಓದಿ. ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ.


ನಿಮ್ಮ 250+ ಪುಟಗಳ ವರ್ಣರಂಜಿತ ಜಾತಕವನ್ನುಪಡೆಯಿರಿ: ಆಸ್ಟ್ರೋಸೇಜ್ ಬೃಹತ್ ಕುಂಡಲಿ

ವೃಷಭ ರಾಶಿ

ಶುಕ್ರ ದೇವ ನಿಮ್ಮ ಮೊದಲನೇ ಮತ್ತು ಆರನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಎಂಟನೇ ಮನೆಗೆ ಪ್ರವೇಶಿಸುತ್ತಾರೆ. ಶುಕ್ರಗ್ರಹವು ನಿಮ್ಮ ರಾಶಿಯಿಂದ ಎಂಟನೇ ಮನೆಯಲ್ಲಿರುವುದು, ನಿಮ್ಮ ವೃತ್ತಿಪರ ಮತ್ತು ಕೆಲಸದ ಸ್ಥಳಕ್ಕೆ ಉತ್ತಮವೆಂದು ಸಾಬೀತುಪಡಿಸುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸದ ಮೆಚ್ಚುಗೆಯನ್ನು ನೀವು ಪಡೆಯುತ್ತೀರಿ. ಇದರೊಂದಿಗೆ ನಿಮ್ಮ ಹಿರಿಯ ಅಧಿಕಾರಿಗಳ ಮೂಲಕ ಪ್ರಶಸ್ತಿ ಮತ್ತು ಪ್ರಗತಿಯನ್ನು ಪಡೆಯಲು ಸಹ ಸಾಧ್ಯವಾಗುತ್ತದೆ. ಶುಕ್ರನ ಸಂಚಾರವು ನಿಮನ್ನು ಮೊದಲಿಗಿಂತ ಹೆಚ್ಚು ಕಠಿಣ ಪರಿಶ್ರಮ ಮಾಡಲು ಪ್ರೇರೇಪಿಸುತ್ತದೆ. ಇದರಿಂದಾಗಿ ನೀವು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತೀರಿ. ತಮ್ಮ ಉದ್ಯೋಗವನ್ನು ಬದಲಾಯಿಸಲು ಯೋಚಿಸುತ್ತಿದ್ದ ಜನರಿಗೆ ಈ ಸಮಯ ಒಳ್ಳೆಯದು.

ವ್ಯಾಪರಸ್ಥರು ಈ ಸಂಚಾರದ ಸಮಯದಲ್ಲಿ ಯಾವುದೇ ಹಳೆಯ ಸಾಲದಿಂದ ಮುಕ್ತರಾಗಬಹುದು. ಈ ಸಮಯದಲ್ಲಿ ಆತುರದಲ್ಲಿನ ವೆಚ್ಚಗಳನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗಿದೆ.

ಈ ಸಂಚಾರದ ಸಮಯದಲ್ಲಿ ಇದ್ದಕ್ಕಿದ್ದಂತೆ ನಿಮ್ಮ ಯಾವುದೇ ಪೂರ್ವಜರ ಆಸ್ತಿಯ ಮೂಲಕ ಲಾಭವನ್ನು ಪಡೆಯುವ ಸಾಧ್ಯತೆಯೂ ಇದೆ. ಇದರೊಂದಿಗೆ ಹೊಸ ಮನೆಯಲ್ಲಿ ಖರೀದಿಸಲು ಸಹ ನೀವು ಯೋಜಿಸಬಹುದು. ಆರ್ಥಿಕ ದೃಷ್ಟಿಯಿಂದ, ಈ ಸಮಯ ಉತ್ತಮವಾಗಿರುತ್ತದೆ.

ಇನ್ನೂ ಒಬ್ಬಂಟಿಯಾಗಿರುವ ಈ ರಾಶಿಚಕ್ರದ ಸ್ಥಳೀಯರಿಗೆ ಈ ಸಮಯ ಉತ್ತಮವಾಗಿರಲಿದೆ. ಆದಾಗ್ಯೂ, ದಾಂಪತ್ಯ ಸ್ಥಳೀಯರು ತಮ್ಮ ಮಕ್ಕಳ ಕಳಪೆ ಆರೋಗ್ಯದ ಕಾರಣದಿಂದಾಗಿ ಒತ್ತಡವನ್ನು ಅನುಭವಿಸಬಹುದು. ವಿದ್ಯಾರ್ಥಿಗಳಿಗೆ ಸಮಯ ಉತ್ತಮ, ಏಕೆಂದರೆ ಅವರು ಯಾವುದೇ ಹೊಸ ಕೋರ್ಸ್ ಅಥವಾ ವಿಷಯವನ್ನು ಆರಂಭಿಸಲು ಅನೇಕ ಶುಭ ಅವಕಾಶಗಳನ್ನು ಪಡೆಯುತ್ತಾರೆ. ಇದಲ್ಲದೆ ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರುವ ಅಗತ್ಯವಿದೆ. ಏಕೆಂದರೆ ಈ ಸಂಚಾರದ ಸಮಯದಲ್ಲಿ ನೀವು ಶೀತ ಮತ್ತು ಕಣ್ಣಿನ ಸಮಸ್ಯೆಗಳಿಂದ ಬಳಲುತ್ತಬಹುದು ಎಂದು ನಿರೀಕ್ಷಿಸಲಾಗಿದೆ. ಅಂತಹ ಸಮಯದಲ್ಲಿ ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಬೇಡಿ.

ಪರಿಹಾರ - ನಿಮ್ಮ ಬಲಗೈ ಉಂಗುರದ ಬೆರಳಿನಲ್ಲಿ, ಬಿಳಿ ಓಪಲ್ ಅಥವಾ ವಜ್ರವನ್ನು ಧರಿಸಿ. ಇದರಿಂದಾಗಿ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ

ಮಿಥುನ ರಾಶಿ ಭವಿಷ್ಯ

ಈ ಸಂಚಾರದ ಸಮಯದಲ್ಲಿ ಶುಕ್ರ ದೇವ ನಿಮ್ಮ ರಾಶಿಯಿಂದ ಏಳನೇ ಮನೆಗೆ ಪ್ರವೇಶಿಸುತ್ತದೆ. ಶುಕ್ರನ ಈ ಸಂಚಾರವು ನಿಮಗೆ ವಿಶೇಷವಾಗಿ ಶುಭವಾಗಲಿದೆ. ಏಕೆಂದರೆ ಶುಕ್ರ ಐದನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ. ಅಂತಹ ಪರಿಸ್ಥಿತಿಯಲ್ಲಿ ವೈಯಕ್ತಿಕ ಜೀವನಕ್ಕೆ ಸಮಯ ಉತ್ತಮವಾಗಿರುತ್ತದೆ. ವಿಶೇಷವಾಗಿ ನೀವು ಒಬ್ಬಂಟಿಯಾಗಿದ್ದರೆ, ಈ ಸಮಯದಲ್ಲಿ ನೀವು ಬಲವಾದ ಸಂಬಂಧವನ್ನು ಹೊಂದಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಪ್ರೀತಿಯ ಸಂಬಂಧದಲ್ಲಿರುವ ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಈ ಸಮಯ ಶುಭವಾಗಿರಲಿದೆ.

ಇದಲ್ಲದೆ ಸಮಯದಲ್ಲಿ ಶುಕ್ರ ದೇವ, ಮೂರನೇ ಮನೆಯ ಅಧಿಪತಿ ಸೂರ್ಯ ಮತ್ತು ನಿಮ್ಮದೇ ರಾಶಿಯ ಅಧಿಪತಿ ಬುಧನೊಂದಿಗೆ ಸಂಯೋಜಿಸುತ್ತದೆ. ಇದರ ಪರಿಣಾಮದಿಂದಾಗಿ, ಪ್ರೇರಕ, ಸಂವಹನ ಮತ್ತು ಪ್ರಶಂಸೆ ಮಾಡುವ ನಿಮ್ಮ ಕಲೆಯು, ನಿಮ್ಮ ಸಂಗಾತಿಯನ್ನು ನಿಮ್ಮತ್ತ ಆಕರ್ಷಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ನಿಮ್ಮಿಬ್ಬರ ಸಂಬಂಧವು ಇನ್ನಷ್ಟು ಬಲಗೊಳ್ಳುತ್ತದೆ. ಆದಾಗ್ಯೂ, ಈ ಸಮಯದಲ್ಲಿ ಸೂರ್ಯನ ಸ್ಥಾನವು ನಿಮ್ಮಿಬ್ಬರ ನಡುವೆ ಸಣ್ಣ ಪುಟ್ಟ ವಿಷಯಗಳ ಬಗೆಗಿನ ವಿವಾದಗಳಿಗೆ ಕಾರಣವಾಗಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ವಿವಾಹಿತ ಜನರಿಗೆ ಈ ಸಂಚಾರವು ಪ್ರತಿಕೂಲವಾಗಿರಲಿದೆ. ಏಕೆಂದರೆ ಈ ಸಮಯದಲ್ಲಿ, ನಿಮ್ಮ ಜೀವನ ಸಂಗಾತಿಯ ಆರೋಗ್ಯವು ಕ್ಷೀಣಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಈ ಸಮಯದಲ್ಲಿ , ಕೆಲಸದ ಸ್ಥಳಕ್ಕೆ ಸಂಬಂಧಿಸಿದ ಪ್ರಯಾಣಕ್ಕೆ ಹೋಗುವುದು ನಿಮಗೆ ಒಳ್ಳೆಯದು. ನೀವು ಇದರ ಮೂಲಕ ಪ್ರಗತಿ ಮತ್ತು ಆರ್ಥಿಕ ಪ್ರಯೋಜನವನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತೀರಿ. ವ್ಯಾಪಾರಸ್ಥರು ಸಹ ಪಾಲುದಾರಿಕೆಯ ವ್ಯಾಪಾರದಿಂದ ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಲು ಅವಕಾಶವನ್ನು ಪಡೆಯುತ್ತಾರೆ. ಇದರೊಂದಿಗೆ ಅವರು ತಮ್ಮ ಸಾಮಾಜಿಕ ಮತ್ತು ಹೊಸ ಮೂಲಗಳಿಂದ ವ್ಯಾಪಾರವನ್ನು ವಿಸ್ತರಿಸಲು ಅವಕಾಶವನ್ನು ಪಡೆಯುತ್ತಾರೆ.

ಆರೋಗ್ಯದ ಬಗ್ಗೆ ಮಾತನಾಡಿದರೆ, ನಿಮಗೆ ಮುಖಕ್ಕೆ ಸಂಬಂಧಿಸಿದ ಕೆಲವು ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ. ಇದರೊಂದಿಗೆ ನಿಮಗೆ ಚರ್ಮ ರೋಗ, ಹಾರ್ಮೋನ್ ಮತ್ತು ಮೂತ್ರಕೋಶದ ಸೋಂಕು ಉದ್ಭವಿಸುವ ಸಾಧ್ಯತೆ ಇದೆ.

ಪರಿಹಾರ - ವಿಶೇಷ ಲಾಭಕ್ಕಾಗಿ, ಚಿಕ್ಕ ಹುಡುಗಿಯರಿಗೆ ಅಲಂಕಕ್ಕೆ ಸಂಬಂಧಿಸಿದ ವಸ್ತುಗಳನ್ನು ನೀಡಿ.

ಕರ್ಕ ರಾಶಿ

ಈ ಸಂಚಾರದ ಸಮಯದಲ್ಲಿ ಶುಕ್ರ ದೇವ ನಿಮ್ಮ ರಾಶಿಚಕ್ರದ ಆರನೇ ಮನೆಗೆ ಪ್ರವೇಶಿಸುತ್ತಾರೆ. ನಿಮ್ಮ ಜಾತಕದಲ್ಲಿ ಶುಕ್ರನ ಈ ಸ್ಥಾನವು, ನಿಮ್ಮ ತಾಯಿಯ ಆರೋಗ್ಯದಲ್ಲಿ ಕುಸಿತವನ್ನು ತರುತ್ತದೆ. ಏಕೆಂದರೆ ಶುಕ್ರ ನಿಮ್ಮ ನಾಲ್ಕನೇ ಮನೆಯ ಅಧಿಪತಿ, ಇದು ತಾಯಿ, ಜಾಮೀನು ಮತ್ತು ಆರಾಮವನ್ನು ತೋರಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ರಾಶಿಚಕ್ರದ ರೋಗ ಮತ್ತು ಅಡೆತಡೆಗಳ ಆರನೇ ಮನೆಯಲ್ಲಿ ಕುಳಿತಿರುವುದು ನಿಮಗೆ ಪ್ರತಿಕೂಲವಾಗಿರುತ್ತದೆ.

ಇದರೊಂದಿಗೆ ಈ ಸಂಚಾರದ ಸಮಯದಲ್ಲಿ ಶುಕ್ರ ನಿಮ್ಮ ಎರಡನೇ ಮನೆಯ ಅಧಿಪತಿ ಸೂರ್ಯ ಮತ್ತು ಹನ್ನೆರಡನೇ ಮನೆಯ ಅಧಿಪತಿ ಬುಧದೊಂದಿಗೆ ಸಂಯೋಜಿಸುತ್ತಾರೆ. ಇದರ ಪರಿಣಾಮದಿಂದಾಗಿ, ಈ ಸಮಯದಲ್ಲಿ ನೀವು ಯಾವುದೇ ರೀತಿಯ ಭೂಮಿಯನ್ನು ಖರೀದಿಸುವುದು ಅಥವಾ ಮಾರಾಟ ಮಾಡುವುದನ್ನು ತಪ್ಪಿಸಬೇಕಾಗಿದೆ. ಇಲ್ಲದಿದ್ದರೆ, ನಿಮ್ಮ ಹಣಕಾಸಿ ಮತ್ತು ಶಕ್ತಿ ಎರಡೂ ಹಾನಿಗೊಳಗಾಗುತ್ತವೆ.

ಯಾವುದೇ ಪೂರ್ವಜರ ಆಸ್ತಿಗೆ ಸಂಬಂಧಿಸಿದಂತೆ ನಿಮ್ಮ ಸಂಬಂಧಿಕರೊಂದಿಗೆ ನೀವು ವಿವಾದ ಮಾಡಬಹುದು. ಇದರಿಂದಾಗಿ ಕುಟುಂಬದ ಪರಿಸರವು ಹಾಳಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಪ್ರತಿ ಸನ್ನಿವೇಶದಲ್ಲೂ ನೀವು ನಿಮ್ಮನ್ನು ಶಾಂತವಾಗಿರಿಸಿ ಮತ್ತು ಸಕಾರಾತ್ಮಕವಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಿ.

ಕೆಲಸದ ಸ್ಥಳದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ನಿಮ್ಮ ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ವ್ಯಾಪಾರಸ್ಥರು ಹೊಸ ಕೆಲಸವನ್ನು ಪ್ರಾರಂಭಿಸುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ, ನಿಮ್ಮ ಮೇಲೆ ಸಾಲದ ಹೊರೆ ಹೆಚ್ಚಾಗಬಹುದು. ಇದರಿಂದಾಗಿ ನೀವು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು. ಆದ್ದರಿಂದ ಈ ಸಮಯದಲ್ಲಿ ಯಾವುದೇ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವ ಸಮಯದಲ್ಲಿ ಹಿರಿಯರ ಅಥವಾ ಅನುಭವಿ ವ್ಯಕ್ತಿಗಳ ಸಲಹೆಯನ್ನು ಪಡೆದುಕೊಳ್ಳಿ.

ಆರೋಗ್ಯದ ದೃಷ್ಟಿಯಿಂದಲೂ, ಸಮಯವೂ ಸ್ವಲ್ಪ ತೊಂದರೆಗೊಳಿಸಬಹುದು. ಏಕೆಂದರೆ ಈ ಸಮಯದಲ್ಲಿ ನಿಮ್ಮ ಮಲಗುವ ಕಳಪೆ ರೀತಿಯಿಂದಾಗಿಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಸಾಧ್ಯವಾದಷ್ಟು ನಿದ್ರೆ ಮಾಡಿ ಮತ್ತು ಯೋಗ ಧ್ಯಾನವನ್ನು ಆಶ್ರಯಿಸಿ.

ಪರಿಹಾರ - ಸೋಮವಾರ ಮತ್ತು ಶುಕ್ರವಾರ ಸಕ್ಕರೆ, ಅಕ್ಕಿ, ಗೋಧಿ ಹಿಟ್ಟು, ಹಾಲು ಇತ್ಯಾದಿಗಳಂತಹ ಬಿಳಿ ವಸ್ತುಗಳನ್ನು ದಾನ ಮಾಡಿ

ಸಿಂಹ ರಾಶಿ

ಈ ಸಂಚಾರದ ಸಮಯದಲ್ಲಿ ಶುಕ್ರ ಗ್ರಹವು, ಸಿಂಹ ರಾಶಿಚಕ್ರದ ಸ್ಥಳೀಯರ ಐದನೇ ಮನೆಗೆ ಪ್ರವೇಶಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಈ ಸಂಚಾರವು ಶುಭ ಫಲಿತಾಂಶಗಳನ್ನು ತರುತ್ತದೆ. ಕೆಲಸದ ಸ್ಥಳದಲ್ಲಿ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ, ಏಕೆಂದರೆ ನಿಮ್ಮ ಹತ್ತನೇ ಮನೆಯ ಸ್ವಾಮಿ ಶುಕ್ರ, ಈ ಸಮಯದಲ್ಲಿ ನಿಮ್ಮ ಐದನೇ ಮನೆಯಲ್ಲಿ ಕುಳಿತಿದ್ದು, ನಿಮ್ಮ ಉತ್ತಮ ಆಲೋಚನೆಗಳು ಮತ್ತು ಸಲಹೆಗಳೊಂದಿಗೆ ನಿಮ್ಮ ಮೇಲಧಿಕಾರಿಗಳ ಗಮನವನ್ನು ಸೆಳೆಯುತ್ತದೆ. ಇದರಿಂದಾಗಿ ನೀವು ಸ್ಥಾನಮಾನವನ್ನು ಪಡೆಯುತ್ತೀರಿ.

ಉದ್ಯೋಗದಲ್ಲಿರುವ ಜನರು ಈ ಸಮಯದಲ್ಲಿ ಅಪೇಕ್ಷಿತ ವರ್ಗಾವಣೆಯನ್ನು ಪಡೆಯುವ ಸಾಧ್ಯತೆ ಇದೆ. ವ್ಯಾಪಾರಸ್ಥರು ಸಹ ತಮ್ಮ ತಂತ್ರಕ್ಕೆ ಅನುಗುಣವಾಗಿ, ಉತ್ತಮ ಲಾಭ ಮತ್ತು ಪ್ರಯೋಜನವನ್ನು ಗಳಿಸುತ್ತಾರೆ. ಈ ರಾಶಿಚಕ್ರದ ಕೆಲವು ಜನರು ತಮ್ಮ ಕಲೆ ಮತ್ತು ಹವ್ಯಾಸಗಳಿಂದ ಉತ್ತಮ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ.

ಸಿಂಹ ರಾಶಿಚಕ್ರಡಾ ಸ್ಥಳೀಯರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಇನ್ನೂ ಒಬ್ಬಂಟಿಯಾಗಿದ್ದರೆ ಮತ್ತು ಪ್ರೇಮಿಯನ್ನು ಹುಡುಕುತ್ತಿದ್ದರೆ, ಈ ಸಮಯವು ನಿಮಗೆ ಸೂಕ್ತವವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಹುಡುಕಾಟವು ಪೂರ್ಣಗೊಳ್ಳಬಹುದು. ವಿವಾಹಿತ ಜನರು ಸಹ ತಮ್ಮ ಜೀವನ ಸಂಗಾತಿಯ ಬೆಂಬಲ, ಪ್ರೀತಿ ಮತ್ತು ಪ್ರಣಯವನ್ನು ಪಡೆಯುತ್ತಾರೆ. ಇದರೊಂದಿಗೆ ನಿಮ್ಮ ದಾಂಪತ್ಯ ಜೀವನದಲ್ಲಿ ಮಕ್ಕಳೊಂದಿಗೂ ನೀವು ನಿಮ್ಮ ಸಂಬಂಧವನ್ನು ಬಲಪಡಿಸಲು ಪ್ರಯತ್ನಿಸುತ್ತೀರಿ.

ವಿದ್ಯಾರ್ಥಿಗಳಿಗೆ ಸಮಯ ಉತ್ತಮವಾಗಿರುತ್ತದೆ. ವಿಶೇಷವಾಗಿ ಕಲೆ ಮತ್ತು ಕರಕುಶಲ ಕ್ಷೇತ್ತಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಇದಲ್ಲದೆ ಆರೋಗ್ಯದ ದೃಷ್ಟಿಯಿಂದ ಸಮಯ ಸಾಮಾನ್ಯವಾಗಿರಲಿದೆ.

ಪರಿಹಾರ - ಯಾವುದೇ ವಿಶೇಷ ಅಥವಾ ಶುಭ ಕೆಲಸವನ್ನು ಮಾಡುವ ಮೊದಲು, ಚಿಕ್ಕ ಹುಡುಗಿಯರ ಕಾಲು ಮುಟ್ಟಿ ಅವರ ಆಶೀರ್ವಾದವನ್ನು ಪಡೆಯಿರಿ.

ಕನ್ಯಾ ರಾಶಿ

ಶುಕ್ರ ದೇವ ಕನ್ಯಾ ರಾಶಿಚಕ್ರದ ಸ್ಥಳೀಯರ ಎರಡನೇ ಮತ್ತು ಒಂಬತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ನಾಲ್ಕನೇ ಮನೆಗೆ ಪ್ರವೇಶಿಸುತ್ತಾರೆ. ಪರಿಣಾಮವಾಗಿ, ಈ ಸಮಯದಲ್ಲಿ ನಿಮ್ಮ ತಾಯಿಯ ಆರೋಗ್ಯವು ಸುಧಾರಿಸಬಹುದು. ಈ ಸಂಚಾರವು ನಿಮ್ಮ ಸಂತೋಷ ಸಂಪನ್ಯೂಲಗಳನ್ನು ಹೆಚ್ಚಿಸುತ್ತದೆ, ಇದರಿಂದಾಗಿ ನೀವು ಯಾವುದೇ ಹೊಸ ಭೂಮಿ ಅಥವಾ ವಾಹನವನ್ನು ಖರೀದಿಸಲು ಯೋಜಿಸಬಹುದು.

ಕೆಲಸದ ಸ್ಥಳದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ, ವೃತ್ತಿ ಜೀವನದಲ್ಲಿ ನೀವು ಹೆಸರು, ಖ್ಯಾತಿ ಮತ್ತು ಪ್ರತಿಷ್ಠೆಯನ್ನು ಪಡೆಯಲು ಸಾಧ್ಯವಾಗುತ್ತದೆ. ನೀವು ನಿಮ್ಮ ತಂದೆ ಮತ್ತು ಹಿರಿಯ ಅಧಿಕಾರಿಗಳ ಬೆಂಬಲವನ್ನು ಪಡೆಯುತ್ತೀರಿ. ಕುಟುಂಬ ವ್ಯಾಪಾರದೊಂದಿಗೆ ಸೇರಿರುವ ಈ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ಅನೇಕ ಶುಭ ಅವಕಾಶಗಳನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.

ತಮ್ಮ ಕುಟುಂಬದೊಂದಿಗೆ ಸಮಯವನ್ನು ಕಳೆಯಲು ಬಯಸುತ್ತಿರುವ ಜನರ ಆಸೆಯೂ ಈ ಸಮಯದಲ್ಲಿ ಈಡೇರುತ್ತದೆ. ಇದರಿಂದಾಗಿ ಕುಟುಂಬದ ಪರಿಸರದಲ್ಲಿ ಸಂತೋಷ ಉಂಟಾಗುತ್ತದೆ ಮತ್ತು ನೀವು ಕೂಡ ಶಾಂತಿ ಮತ್ತು ಉತ್ಸಾಹವನ್ನು ಅನುಭವಿಸುತ್ತೀರಿ

ಪ್ರೀತಿಯ ಸಂಬಂಧಕ್ಕೆ ಸಮಯ ಶುಭವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಸಂಗಾತಿ ಮತ್ತು ಪ್ರೀತಿಯ ಭಾವನೆಗಳು ಮತ್ತು ಅವರ ಬೇಡಿಕೆಗಳ ಕಡೆಗೆ ನೀವು ಹೆಚ್ಚು ಒಲವು ಹೊಂದಿರುತ್ತೀರಿ. ಇದು ನಿಮ್ಮ ಸಂಬಂಧದಲ್ಲಿ ಶಕ್ತಿ ಮತ್ತು ಒಗ್ಗಟ್ಟನ್ನು ತರುತ್ತದೆ.

ಪರಿಹಾರ - ಪ್ರತಿದಿನ ಬೆಳಿಗ್ಗೆ ಶ್ರೀ ಲಕ್ಷ್ಮಿ ನಾರಾಯಣ ದೇವರನ್ನು ಆರಾಧಿಸಿ.

ತುಲಾ ರಾಶಿ

ಶುಕ್ರ ನಿಮ್ಮದೇ ರಾಶಿಯ ಅಧಿಪತಿಯಾಗಿದ್ದು, ಈ ಸಂಚಾರದ ಸಮಯದ್ಲಲಿ ನಿಮ್ಮ ಮೂರನೇ ಮನೆಗೆ ಸಾಗುತ್ತಾರೆ. ತುಲಾ ರಾಶಿಚಕ್ರದ ಸ್ಥಳೀಯರಿಗೆ ಶುಕ್ರನ ಈ ಸಂಚಾರವು ವಿಶೇಷವಾಗಿ ಅನುಕೂಲಕರವೆಂದು ಸಾಬೀತುಪಡಿಸುತ್ತದೆ. ಏಕೆಂದರೆ ನಿಮ್ಮ ರಾಶಿಯ ಅಧಿಪತಿ ಈ ಸಮಯದಲ್ಲಿ ನಿಮ್ಮ ಮೂರನೇ ಮನೆಯಲ್ಲರುತ್ತಾರೆ. ಇದನ್ನು ಸಹೋದರ ಸಹೋದರಿಯರ ಮನೆಯೆಂದು ಪರಿಗಣಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಸಹೋದರ ಸಹೋದರಿಯರ ವಿಶೇಷ ಲಾಭವನ್ನು ಪಡೆಯುತ್ತೀರಿ.

ಕೆಲಸದ ಸ್ಥಳದಲ್ಲಿ ನೀವು ಗುರಿಗಳತ್ತ ಮಹತ್ವಾಕಾಂಕ್ಷಿ, ಧೈರ್ಯಶಾಲಿ ಮತ್ತು ನಿಮ್ಮ ಗುರಿಗಳತ್ತ ಹೆಚ್ಚು ಗಮನ ಹರಿಸುವುದನ್ನು ಕಾಣಲಾಗುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಯಶಸ್ಸನ್ನು ಸಾಧಿಸಲು ನೀವು ಹೆಚ್ಚುವರಿ ಪರಿಶ್ರಮ ಮತ್ತು ಪ್ರಯತ್ನವನ್ನು ಮಾಡಬೇಕಾಗಿಲ್ಲ. ಏಕೆಂದರೆ ಈ ಸಮಯದಲ್ಲಿ ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ.

ಜಾತಕದ ಮೂರನೇ ಮನೆಯು ಸಂವಹನದ ಮಾರ್ಗಗಳನ್ನು ತೋರಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ತಂಡದ ಮನೋಭಾವಗಳಿಂದ ಪರಿಪೂರ್ಣರಾಗಿ, ಅಗತ್ಯವಾದ ಸಂವಹನ ಮಾಡಿ ನಿಮ್ಮ ಸಹೋದ್ಯೋಗಿಗಳ ಬೆಂಬಲವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ. ಈ ಸಮಯದಲ್ಲಿ ಅವರ ಬೆಗೆಗಿನ ನಿಮ್ಮ ದೃಷ್ಟಿಕೋನವು ಸಹ ಉತ್ತಮವಾಗಲು ಸಾಧ್ಯವಾಗುತ್ತದೆ. ಇದರೊಂದಿಗೆ ವಿಚಾರ ವಿನಿಮಯಕ್ಕೆ ಸಮಯ ಶುಭವಾಗಿದೆ. ಇದರಿಂದಾಗಿ ನೀವು ವಿಶೇಷ ಅವಕಾಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಸಂಚಾರವು ಸ್ವಲ್ಪ ದೂರ ಪ್ರಯಾಣಿಸಲು ನಿಮಗೆ ಅವಕಾಶವನ್ನು ನೀಡುತ್ತದೆ. ಈ ಪ್ರಯಾಣದಿಂದ ನೀವು ಉತ್ತಮ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ.

ಒಬ್ಬಂಟಿಯಾಗಿರುವವರು ಈ ಸಮಯದಲ್ಲಿ ಇದ್ದಕ್ಕಿದ್ದಂತೆ ವಿಶೇಷ ವ್ಯಕ್ತಿಯೊಂದಿಗೆ ಭೇಟಿಯಾಗಬಹುದು. ವಿವಾಹಿತ ಜನರು ತಮ್ಮ ಹೆಚ್ಚುವರಿ ಆಸೆಗಳಿಂದಾಗಿ ಕೆಲವು ಸಮಸ್ಯೆಗಳನ್ನು ಅನುಭವಿಸಬಹುದು.

ಪರಿಹಾರ - ಶುಕ್ರ ಗ್ರಹದ ಪ್ರಯೋಜನವನ್ನು ಪಡೆಯಲು ಸ್ಪಟಿಕ ಮಾಲೆಯನ್ನು ಧರಿಸುವುದು ಉತ್ತಮ.

ವೃಶ್ಚಿಕ ರಾಶಿ

ಶುಕ್ರ ದೇವ ಸಂಚಾರದ ಈ ಸಮಯದಲ್ಲಿ ವೃಶ್ಚಿಕ ರಾಶಿಚಕ್ರದ ಸ್ಥಳೀಯರ ಎರಡನೇ ಮನೆಗೆ ಪ್ರವೇಶಿಸುತ್ತದೆ. ಶುಕ್ರನ ಈ ಸಂಚಾರವು ನಿಮಗೆ ವಿಶೇಷವಾಗಿ ಶುಭವಾಗಿರಲಿದೆ. ವೈಯಕ್ತಿಕ ಜೀವನದಲ್ಲಿ, ಅವಿವಾಹಿತರು ತಮಗಾಗಿ ವಿಶೇಷ ಸಂಗಾತಿಯನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ವಾಹಿತ ಜನರು ಸಹ ಜೀವನ ಸಂಗಾತಿಯ ಬೆಂಬಲವನ್ನು ಪಡೆಯುತ್ತಾರೆ. ಇದರಿಂದಾಗಿ ಅವರು ಉತ್ತಮ ಸಮಯವನ್ನು ಕಳೆಯಲು ಅವಕಾಶವನ್ನು ಪಡೆಯುತ್ತಾರೆ. ನೀವು ನಿಮ್ಮ ದಾಂಪತ್ಯ ಜೀವನವನ್ನು ವಿಸ್ತರಿಸಲು ಯೋಚಿಸುತ್ತಿದ್ದರೆ, ಈ ಸಾಗಣೆಯು ವಿಶೇಷವಾಗಿ ನಿಮಗೆ ಅದೃಷ್ಟಶಾಲಿ ಎಂದು ಸಾಬೀತುಪಡಿಸುತ್ತದೆ.

ಕೆಲಸದ ಸ್ಥಳದಲ್ಲಿ ನೀವು ಹೊಸ ವ್ಯಾಪಾರ ಅಥವಾ ಹೊಸ ಕೆಲಸವನ್ನು ಆರಂಭಿಸಲು ಅವಕಾಶವನ್ನು ಪಡೆಯುತ್ತೀರಿ. ಶುಕ್ರ ಗ್ರಹವು ಈ ಸಮಯದಲ್ಲಿ ನಿಮ್ಮ ಎರಡನೇ ಮನೆಯಲ್ಲಿರುತ್ತದೆ, ಇದು ಕುಟುಂಬವನ್ನು ತೋರಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ವ್ಯಾಪಾರವನ್ನು ಅಪರಿಚಿತ ವ್ಯಕ್ತಿಯೊಂದಿಗೆ ಮಾಡುವ ಬದಲು, ನಿಮ್ಮ ಸ್ನೇಹಿತರು, ಜೀವನ ಸಂಗಾತಿ, ಸಹೋದರ ಸಹೋದರಿಯರು ಅಥವಾ ಇತರ ಪರಿಚಿತ ವ್ಯಕ್ತಿಯೊಂದಿಗೆ ಮಾಡಬೇಕು. ಇದು ನಿಮಗೆ ಭಾವನಾತ್ಮಕ ಮತ್ತು ಆರ್ಥಿಕ ಭದ್ರತೆಯನ್ನು ನೀಡುತ್ತದೆ. ಈ ಸಮಯದಲ್ಲಿ ನೀವು ವಿವಿಧ ಮೂಲಗಳಿಂದಲೂ ಆರ್ಥಿಕ ಸಹಾಯವನ್ನು ಪಡೆಯಲು ಸಾಧ್ಯವಾಗುತ್ತದೆ.

ಶುಕ್ರ ನಿಮ್ಮ ಏಳನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ, ಎಂಟನೇ ಮನೆಯಲ್ಲಿ ಉಪಸ್ಥಿತಿಯು ನಿಮ್ಮ ಜೀವನ ಸಂಗಾತಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಅವರು ಒತ್ತಡ ಮತ್ತು ಆಯಾಸವನ್ನು ಅನುಭವಿಸುತ್ತಾರೆ. ಅಂತಹ ಸಂದರ್ಭದಲ್ಲಿ ಸಾಧ್ಯವಾದಷ್ಟು ನಿಮ್ಮ ಜೀವನ ಸಂಗಾತಿಯೊನಿಗೆ ಸಮಯವನ್ನು ಕಳೆಯಿರಿ, ಇದರಿಂದಾಗಿ ನಿಮ್ಮಿಬ್ಬರ ಸಂಬಂಧವು ಇನ್ನಷ್ಟು ಬಲಗೊಳ್ಳಲು ಸಾಧ್ಯವಾಗುತ್ತದೆ.

ಪರಿಹಾರ - ಶುಕ್ರನ ವಿಶೇಷ ಲಾಭವನ್ನು ಪಡೆಯಲು ಪ್ರತಿದಿನ ಸೂರ್ಯೋದಯದ ಸಮಯದಲ್ಲಿ ನಿಯಮಿತವಾಗಿ “ಅಷ್ಟಲಕ್ಷ್ಮಿ ಸ್ತೋತ್ರವನ್ನು” ಪಠಿಸಿ.


ಮದುವೆಯಲ್ಲಿ ವಿಳಂಬ ಅಥವಾ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿವೆಯೇ? ಪರಿಹಾರಗಳನ್ನು ಪಡೆಯಿರಿ: ಜ್ಯೋತಿಷ್ಯ ಸಮಾಲೋಚನೆ

ಧನು ರಾಶಿ

ಶುಕ್ರ ಗ್ರಹವು ಸಂಚಾರದ ಸಮಯದಲ್ಲಿ ಧನು ರಾಶಿಚಕ್ರದ ಸ್ಥಳೀಯರ ಲಗ್ನದ ಮನೆ ಅಂದರೆ ಮೊದಲನೇ ಮನೆಗೆ ಪ್ರವೇಶಿಸುತ್ತದೆ. ಇದು ನಿಮ್ಮ ವ್ಯಕ್ತಿತ್ವ, ಗೌರವ ಮತ್ತು ನಡವಳಿಕೆಯನ್ನು ತೋರಿಸುತ್ತದೆ. ಈ ಸಮಯದಲ್ಲಿ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.

ಕೆಲಸದ ಸ್ಥಳದಲ್ಲಿ ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಅನೇಕ ಅವಕಾಶಗಳನ್ನು ಪಡೆಯುತ್ತೀರಿ. ಇದರಿಂದಾಗಿ ನೀವು ನಿಮ್ಮ ವೃತ್ತಿಪರ ಜೀವನದಲ್ಲಿ ಮುಂದುವರಿಯಲು ಸಾಧ್ಯವಾಗುತ್ತದೆ. ತಮ್ಮ ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿರುವವರು, ಈ ಸಮಯದಲ್ಲಿ ಅಪೇಕ್ಷಿತ ಉದ್ಯೋಗವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಇದರಿಂದಾಗಿ ನಿಮ್ಮ ಬಡ್ತಿಯೊಂದಿಗೆ ಸಂಬಳವೂ ಹೆಚ್ಚಾಗಬಹುದು. ವ್ಯಾಪಾರಸ್ಥರು ಸಹ ಈ ಸಂಚಾರದಿಂದ ವಿಶೇಷ ಲಾಭ ಸಿಗುತ್ತದೆ.

ಈ ಸಮಯದಲ್ಲಿ ಸ್ನೇಹಿತರೊಂದಿಗಿನ ನಿಮ್ಮ ಸಂಬಂಧವು ಬಲಗೊಳ್ಳುತ್ತದೆ. ಈ ಕಾರಣದಿಂದಾಗಿ ನೀವು ನಿಮ್ಮ ಮನೆಯಲ್ಲಿ ವೈವುದೇ ಸಣ್ಣಪುಟ್ಟ ಪಾರ್ಟಿ ಅಥವಾ ಕಾರ್ಯಕ್ರಮವನ್ನು ಯೋಜಿಸಬಹುದು. ಇದು ನಿಮಗೆ ಸಂತೋಷವನ್ನು ನೀಡುತ್ತದೆ. ಮೊದಲನೇ ಮನೆಯಲ್ಲಿ ಶುಕ್ರನ ಉಪಸ್ಥಿತಿಯು, ಧನು ರಾಶಿಚಕ್ರದ ಅವಿವಾಹಿತರನ್ನು ಪ್ರೇರಕ ಶಕ್ತಿಯೊಂದಿಗೆ ವಿರುದ್ಧ ಲಿಂಗದ ಜನರ ಕಡೆಗೆ ಆಕರ್ಷಿಸುತ್ತದೆ. ಮತ್ತೊಂದೆಡೆ, ವಿವಾಹಿತ ಮತ್ತು ಪ್ರೇಮಿಗಳು ತಮ್ಮ ಸಂಗಾತಿಯ ಕೋಪದಿಂದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಏಕೆಂದರೆ ಹೆಚ್ಚುವರಿ ಕೆಲಸದ ಕಾರಣದಿಂದಾಗಿ, ನೀವು ನಿಮ್ಮ ಸಂಗಾತಿಗೆ ಸಮಯವನ್ನು ನೀಡಲು ಸಾಧ್ಯವಾಗದಿರಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವುದು ಹೆಚ್ಚು ಅವಶ್ಯಕ.

ಅರೋಗ್ಯ ಜೀವನದಲ್ಲೂ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಯೋಗ, ವ್ಯಾಯಾಮ ಮತ್ತು ಸರಿಯಾದ ಆಹಾರ ಪಾನೀಯದತ್ತ ಗಮನ ಹರಿಸಿ, ಈ ಸಂಚಾರದ ಶುಭ ಫಲಿತಾಂಶಗಳನ್ನುಆನಂದಿಸಿ.

ಪರಿಹಾರ - ಪ್ರತಿದಿನ ಬೆಳಿಗ್ಗೆ, ಶುಕ್ರ ಯಂತ್ರವನ್ನು ಆರಾಧಿಸಿ.

ಮಕರ ರಾಶಿ

ಸಂಚಾರದ ಈ ಸಮಯದಲ್ಲಿ ಶುಕ್ರ ದೇವ ಮಕರ ರಾಶಿಚಕ್ರದ ಸ್ಥಳೀಯರ ಹನ್ನೆರಡನೇ ಮನೆಗೆ ಸಾಗುತ್ತಾರೆ. ನಿಮ್ಮ ಆರನೇ ಮನೆಯ ಅಧಿಪತಿ ಬುಧ ಮತ್ತು ಎಂಟನೇ ಮನೆಯ ಮಾಲೀಕ ಸೂರ್ಯನೊಂದಿಗೆ ಕುಳಿತಿದ್ದು, ನಿಮಗೆ ಉತ್ತಮ ಫಲಿತಾಂಶಗಳ್ನ್ನು ಒದಗಿಸುತ್ತಾರೆ. ಶುಕ್ರನ ಈ ಸಂಚಾರವು ವಿಶೇಷವಾಗಿ, ವಿದೇಶಕ್ಕೆ ಹೋಗಲು ಬಯಸುತ್ತಿರುವ ಜನರು ಮತ್ತು ಯಾವುದೇ ಬಹುರಾಷ್ಟ್ರೀಯ ಕಂಪನಿ ಅಥವಾ ವಿದೇಶಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಉತ್ತಮವಾಗಿರಲಿದೆ. ವಿದೇಶಕ್ಕೆ ಹೋಗಿ ಶಿಕ್ಷಣ ಪಡೆಯಲು ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೂ ಸಂಚಾರದ ಸಮಯದಲ್ಲಿ ಯಾವುದೇ ಶುಭ ಸುದ್ಧಿ ಸಿಗುವ ಸಾಧ್ಯತೆ ಇದೆ.

ನಿಮ್ಮ ಶತ್ರುಗಳು ಅಥವಾ ಪ್ರತಿಸ್ಪರ್ಥಿಗಳೊಂದಿಗೆ ಯಾವುದೇ ರೀತಿಯ ವಿವಾದವನ್ನು ಪರಿಹರಿಸಲು ಸಮಯವು ವಿಶೇಷವಾಗಿ ಉತ್ತಮವಾಗಿರುತ್ತದೆ.

ಆರ್ಥಿಕ ದೃಷ್ಟಿಯಿಂದಲೂ, ನೀವು ವಿವಿಧ ಅವಕಾಶಗಳು ಮತ್ತು ಮೂಲಗಳಿಂದ ಲಾಭವನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಕೆಲವು ಜನರು ವ್ಯಾಪಾರದ ಉತ್ತಮ ಅವಕಾಶಗಳನ್ನು ಸಹ ಪಡೆಯುತ್ತಾರೆ. ಆದಾಗ್ಯೂ, ಈ ಸಮಯದಲ್ಲಿ ನೀವು ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು, ಅದರ ಲಾಭ ಮತ್ತು ನಷ್ಟದ ಬಗ್ಗೆ ಸರಿಯಾಗಿ ವಿಚಾರಿಸಲು ಸಲಹೆ ನಿಮಗೆ ನೀಡಲಾಗಿದೆ. ಇಲ್ಲದಿದ್ದರೆ ನಿಮಗೆ ಹಾನಿಯಾಗಬಹುದು.ಈ ಸಮಯವೂ ವಿವಾಹಿತ ಜನರಿಗೆ ಸ್ವಲ್ಪ ವಿರುದ್ಧವಾಗಿರುತ್ತದೆ. ನಿಮ್ಮ ಜೀವನ ಸಂಗಾತಿ ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ನಿರೀಕ್ಷಿಸಲಾಗಿದೆ. ಆದ್ದರಿಂದ ಅವರೊಂದಿಗೆ ಉತ್ತಮವಾಗಿ ವರ್ತಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ.

ಪರಿಹಾರ - ಪ್ರತಿದಿನ ಸೂರ್ಯೋದಯದ ಸಮಯದಲ್ಲಿ ಶ್ರೀ ಸೂಕ್ತವನ್ನು ಜಪಿಸುವುದು ನಿಮಗೆ ಉತ್ತಮ.

ಕುಂಭ ರಾಶಿ

ಶಕ್ರ ಗ್ರಹವು ಸಂಚಾರದ ಈ ಸಮಯದಲ್ಲಿ ಕುಂಭ ರಾಶಿಚಕ್ರದ ಸ್ಥಳೀಯರ ಹನ್ನೊಂದನೇ ಮನೆಗೆ ಪ್ರವೇಶಸಿಸುತ್ತದೆ. ಹನ್ನೊಂದನೇ ಮನೆಯನ್ನು ಯಶಸ್ಸು, ಪ್ರಯೋಜನ ಮತ್ತು ಪ್ರಗತಿಯ ಮನೆಯೆಂದು ಪರಿಗಣಿಸಲಾಗಿದೆ. ಆದ್ದರಿಂದ ಈ ಸಮಯದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಮದುವೆಗೆ ಅರ್ಹರಾಗಿರುವ ಜನರು ಈ ಸಮಯದಲ್ಲಿ ಮದುವೆಯಾಗಲು ಅವಕಾಶವನ್ನು ಪಡೆಯುತ್ತಾರೆ. ನೀವು ವಿವಾಹಿತರಾಗಿದ್ದರೆ, ನಿಮ್ಮ ಜೀವನದಲ್ಲಿ ಸಂತೋಷ ಬರುತ್ತದೆ ಮತ್ತು ಈ ಸಮಯದಲ್ಲಿ ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಇದರೊಂದಿಗೆ ನೀವು ನಿಮ್ಮ ಸಂಗಾತಿಯ ಮೂಲಕ ಯಾವುದೇ ದೊಡ್ಡ ಲಾಭವನ್ನು ಸಹ ಪಡೆಯಬಹುದು.

ಇದಲ್ಲದೆ ನೀವು ನಿಮ್ಮ ಸ್ನೇಹಿತರೊಂದಿಗೂ ಉತ್ತಮ ಸಮಯವನ್ನು ಕಳೆಯುತ್ತೀರಿ. ನಿಮ್ಮ ಸಾಮಾಜಿಕ ನೆಟ್ವರ್ಕಿಂಗ್ ಕೌಶಲ್ಯಗಳ ಸಾಮರ್ಥ್ಯದಿಂದ, ನೀವು ಹೊಸ ಸ್ನೇಹಿತರನ್ನು ಮತ್ತು ಹೊಸ ಸಂಪರ್ಕಗಳನ್ನು ಮಾಡಲು ಸಾಧ್ಯವಾಗುತ್ತದೆ. ಇದರಿಂದಾಗಿ ಭವಿಷ್ಯದಲ್ಲಿ ನೀವು ಲಾಭವನ್ನು ಪಡೆಯುತ್ತೀರಿ.

ಕೆಲಸದ ಪ್ರದೇಶದಲ್ಲಿ ನೀವು ಒಂದು ಸಮಯದಲ್ಲಿ ಅನೇಕ ಕೆಲಸಗಳಲ್ಲಿ ತೊಡಗುತ್ತೀರಿ, ಅದು ನಿಮ್ಮ ಕೆಲಸದ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತದೆ. ಈ ಸಮಯದಲ್ಲಿ ನೀವು ಹಿರಿಯ ಅಧಿಕಾರಿಗಳಲ ಮೆಚ್ಚುಗೆಯನ್ನು ಸಹ ಪಡೆಯುತ್ತೀರಿ. ವ್ಯಾಪಾರಸ್ಥರು ವಿವಿಧ ಮೂಲಗಳಿಂದ ಲಾಭವನ್ನು ಗಳಿಸುತ್ತಾರೆ. ಅದೇ ಸಮಯದಲ್ಲಿ ಮತ್ತೊಂದೆಡೆ, ನೀವು ಶೇರ್ ಮಾರ್ಕೆಟ್, ಇತ್ಯಾದಿಯಲ್ಲಿ ಹೂಡಿಕೆ ಮಾಡಿದರೆ, ಈ ಸಮಯದಲ್ಲಿ ಉತ್ತಮ ಲಾಭವನ್ನು ಪಡೆಯುವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಏಕೆಂದರೆ ಈ ಸಮಯದಲ್ಲಿ ನೀವು ಅದೃಶದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ.

ಪರಿಹಾರ - ಪ್ರತಿದಿನ ಶುಕ್ರ ಹೋರಾ ಸಮಯದಲ್ಲಿ, ಶುಕ್ರ ಗ್ರಹದ ಮಂತ್ರವನ್ನು ಜಪಿಸಿ. ಇದರಿಂದಾಗಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.

ಮೀನಾ ರಾಶಿ

ಶುಕ್ರ ಮೀನಾ ರಾಶಿಚಕ್ರದ ಸ್ಥಳೀಯರ ಎಂಟನೇ ಮನೆಯ ಅಧಿಪತಿ ಇದನ್ನು ಪರಿವರ್ತನೆ ಮತ್ತು ಬದಲಾವಣೆಯ ಮೆನೆಯೆಂದು ಪರಿಗಣಿಸಲಾಗಿದೆ. ಸಂಚಾರದ ಈ ಸಮಯದಲ್ಲಿ ನಿಮ್ಮ ರಾಶಿಚಕ್ರದ ಹತ್ತನೇ ಮನೆಯಲ್ಲಿ ಕುಳಿತಿರುವುದು ನಿಮಗೆ ಸಾಮಾನ್ಯ ಅಥವಾ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ.

ಎಂಟನೇ ಮನೆಯ ಅಧಿಪತಿ ಶುಕ್ರ ಈ ಸಮಯದಲ್ಲಿ ನಿಮ್ಮ ಏಳನೇ ಮನೆಯ ಮಾಲೀಕ ಬುಧದೊಂದಿಗೆ ಸಂಯೋಜಿಸುತ್ತಾರೆ. ಇದರಿಂದಾಗಿ ನಿಮ್ಮ ಜೀವನ ಸಂಗಾತಿ ಅಥವಾ ಪ್ರೇಮಿಯ ನಡುವೆ ಸ್ವಲ್ಪ ದೂರ ಉಂಟಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಸಮಯದಲ್ಲಿ ಕಿರಿಯ ಸಹೋದರ ಸಹೋದರಿಯರೊಂದಿಗೆ ವಿವಾದವೂ ಸಂಭವಿಸಬಹುದು. ಇದರಿಂದಾಗಿ ಕುಟುಂಬ ಪರಿಸರವು ನಕಾರಾತ್ಮಕವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕುಟುಂಬದ ವಾತಾವರಣವನ್ನು ಉತ್ತಮಗೊಳಿಸಲು ನೀವು ಶಾಂತವಾಗಿರಿ ಮತ್ತು ನಿಮ್ಮ ಭಾಷೆಯನ್ನು ನಿಯಂತ್ರಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ.

ಕೆಲಸದ ಸ್ಥಳದಲ್ಲಿ ಇದ್ದಕ್ಕಿದ್ದಂತೆ ಅನೇಕ ಬದಲಾವಣೆಗಳನ್ನು ನೀವು ಎದುರಿಸಬೇಕಾಗಬಹುದು. ಇದರಿಂದಾಗಿ ನೀವು ಸ್ವಲ್ಪ ಆತಂಕವನ್ನು ಅನುಭವಿಸುತ್ತೀರಿ ಮತ್ತು ಈ ಕಾರಣದಿಂದಾಗಿ ನಿಮ್ಮಲ್ಲಿ ಅವ್ಯವಸ್ಥೆ ಕಾಣುತ್ತದೆ. ಆದರೆ ಈ ಬದಲಾವಣೆಗಳು ನಿಮ್ಮನ್ನು ಹೆಚ್ಚು ಆರ್ಥಿಕ ಜವಾಬ್ದಾರಿಯುತವಾಗಿಸಲು ಸಹಾಯ ಮಾಡುತ್ತದೆ.

ಅದೇ ಸಮಯದಲ್ಲಿ ಮತ್ತೊಂದೆಡೆ, ಉದ್ಯೋಗದಲ್ಲಿರುವ ಜನರ ಮನಸ್ಸಿನಲ್ಲಿ ತಮ್ಮ ಉದ್ಯೋಗದ ಬಗ್ಗೆ ಸಮಸ್ಯೆ ನತ್ತು ತೃಪ್ತಿಯ ಕಾರಣದಿಂದಾಗಿ ಅದನ್ನು ಬದಲಾಯಿಸುವ ಆಲೋಚನೆಗಳು ಮೇಲುಗೈ ಸಾಧಿಸಬಹದು. ಆದ್ದರಿಂದ ಈ ಸಮಯದಲ್ಲಿ ಉದ್ಯೋಗದ ಬದಲಾವಣೆಯನ್ನು ತಪ್ಪಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಆದರೆ ಇದಕ್ಕೆ ವಿರುದ್ಧವಾಗಿ, ವ್ಯಾಪಾರದಲ್ಲಿ ತೊಡಗಿರುವ ಈ ರಾಶಿಚಕ್ರದ ಸ್ಥಳೀಯರಿಗೆ ಸಮಯ ಉತ್ತಮವಾಗಿರುತ್ತದೆ. ಏಕೆಂದರೆ ಅವರು ತಮ್ಮ ಸಾಮಾಜಿಕ ವಲಯವನ್ನು ವಿಸ್ತರಿಸಲು ಮತ್ತು ಅದರ ಮೂಲಕ ಹೊಸ ವ್ಯಾಪಾರದ ಉತ್ತಮ ಅವಕಾಶಗಳನ್ನು ಸೃಷ್ಟಿಸಲು ಸಹಾಯ ಸಿಗುತ್ತದೆ. ವಿದ್ಯಾರ್ಥಿಗಳಿಗೂ ಸಮಯ ಉತ್ತಮವಾಗಿರುತ್ತದೆ. ವಿಶೇಷವಾಗಿ ಸರ್ಕಾರೀ ಅಥವಾ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ.

ಪರಿಹಾರ - ಪ್ರತಿದಿನ ಬೆಳಿಗ್ಗೆ ನಿಮ್ಮ ಹೆಣೆಯ ಮೇಲೆ ಬಿಳಿ ಶ್ರೀಗಂಧವನ್ನು ಹಚ್ಚಿಸಿ.


ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 799/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com