• Varun
  • Abhinayaa
  • Kamal
  • Jyoti

ಕುಂಭ ರಾಶಿಯಲ್ಲಿ ಬುಧ ಸಂಚಾರ (25th January 2021)

ಜ್ಯೋತಿಷ್ಯದಲ್ಲಿ ಬುಧ ಗ್ರಹವನ್ನು ನವ ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಈಗ, ಈ ಗ್ರಹವು 25 ಜನವರಿ 2021 ರಂದು ಮಧ್ಯಾಹ್ನ4 ಗಂಟೆ 19 ನಿಮಿಷಕ್ಕೆ ಶನಿ ಅಧಿಪತ್ಯದ ಕುಂಭ ರಾಶಿಯಲ್ಲಿ ತನ್ನ ಸ್ಥಾನವನ್ನು ಬದಲಾಯಿಸುತ್ತದೆ. ಈ ರಾಶಿಯಲ್ಲಿ ಬುಧ ಸಂಚಾರವು ಎಲ್ಲಾ ಸ್ಥಳೀಯರಿಗೆ ಮುಖ್ಯವಾಗುತ್ತದೆ. ಏಕೆಂದರೆ ಈ ಸಾಗಣೆಯಿಂದ ಪ್ರಭಾವಿತರಾದ ಜನರು ಹೊಸ ವಿಷಯಗಳನ್ನು ಕಲಿಯಲು ಮತ್ತು ಜ್ಞಾನವನ್ನು ಪಡೆಯಲು ಹೆಚ್ಚಿನ ಆಸಕ್ತಿ ವಹಿಸುತ್ತಾರೆ.

ನೀವು ಯಾವುದೇ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ಪರಿಹಾರಕ್ಕಾಗಿ ಪ್ರಶ್ನೆ ಕೇಳಿ

ಬುಧ ಗ್ರಹವನ್ನು ಬುದ್ಧಿವಂತಿಕೆ, ಧ್ವನಿ, ಪ್ರಜ್ಞೆ, ವ್ಯಾಪಾರ, ಅಂಕಿ ಅಂಶಗಳು ಮತ್ತು ಚರ್ಮ, ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಬುಧದ ಈ ಸಾಗಣೆಯು ಪ್ರತಿ ರಾಶಿಚಕ್ರದ ಮೇಲೆ ಯಾವುದಾದರೂ ಒಂದು ರೂಪದಲ್ಲಿ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ.

ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ

ಮೇಷ ರಾಶಿ

ಮೇಷ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಮೂರನೇ ಮತ್ತು ಆರನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಹನ್ನೊಂದನೇ ಅಂದರೆ ಲಾಭದ ಸ್ಥಾನದಲ್ಲಿ ಸಂಚರಿಸುತ್ತದೆ, ಈ ಸ್ಥಾನದ ಮೂಲಕ ನಿಮ್ಮ ಲಾಭ, ಮಹತ್ವಾಕಾಂಕ್ಷೆಗಳ ಪೂರೈಕೆ ಮತ್ತು ವಿವಿಧ ರೀತಿಯ ಸಾಧನೆಗಳ ಬಗ್ಗೆ ಕಂಡುಹಿಡಿಯಲಾಗುತ್ತದೆ. ಬುಧ ಸಂಚಾರದಿಂದಾಗಿ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.

ಕುಟುಂಬ ಜೀವನದಲ್ಲಿ ನಿಮ್ಮ ಸಹೋದರ ಸಹೋದರಿಯರು ಪ್ರಗತಿ ಹೊಂದುತ್ತಾರೆ ಮತ್ತು ಅವರು ಹಣಕಾಸು ಪಡೆಯುವ ಸಾಧ್ಯತೆ ಅದೇ ಸಮಯದಲ್ಲಿ ಮತ್ತೊಂದೆಡೆ, ಪ್ರೀತಿಯ ಸಂಬಂಧದ ಬಗ್ಗೆ ಮಾತನಾಡಿದರೆ, ಈ ಸಂಚಾರದ ಸಮಯದಲ್ಲಿ ಬುಧವು ಶನಿಯಿಂದ ದೂರವಾಗಿ ನಿಮ್ಮನ್ನು ಹಿಂಜರಿಕೆಯಿಂದ ಮುಕ್ತಗೊಳಿಸುತ್ತದೆ. ಇದರಿಂದಾಗಿ ನೀವು ನಿಮ್ಮ ಭಾವನೆಗಳನ್ನು ನಿಮ್ಮ ಪ್ರೇಮಿಯೊಂದಿಗೆ ಮುಕ್ತರಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಇದರಿಂದಾಗಿ ನಿಮ್ಮ ಸಂಬಂಧದಲ್ಲಿ ಹೊಸತನ ಉಂಟಾಗುತ್ತದೆ ಮತ್ತು ನೀವಿಬ್ಬರೂ ನಿಮ್ಮ ಸಂಬಂಧವನ್ನು ಎಂಮುಂದುವರಿಸುವುದನ್ನು ಕಾಣಲಾಗುತ್ತದೆ. ಮನೆಗೆ ಅತಿಥಿ ಬರಬಹುದು ಅಥವಾ ಬಹಳ ಸಮಯದ ನಂತರ ನೀವು ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿಯಾಗಲು ಅವಕಾಶವನ್ನು ಪಡೆಯುತ್ತೀರಿ. ಇದರಿಂದಾಗಿ ನೀವು ಸಂತೋಷವನ್ನು ಅನುಭವಿಸುತ್ತೀರಿ.

ಕೆಲಸದ ಸ್ಥಳದಲ್ಲಿ ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ನಿಮ್ಮ ಆದಾಯವು ಹೆಚ್ಚಾಗುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಸಂಪಾದಕ, ಬರವಣಿಗೆ, ಇತ್ಯಾದಿ ಕ್ಷೇತ್ರಗಳೊಂದಿಗೆ ಸಂಬಂಧ ಹೊಂದಿರುವ ಜನರು ಸಹ ಈ ಸಮಯದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ಇದರೊದಿಗೆ ಸಾರ್ವಜನಿಕ ವ್ಯವಹಾರ, ಪ್ರಯಾಣ, ಹಣಕಾಸು ವಲಯ, ಇತ್ಯಾದಿಗಳಿಗೆ ಸಂಬಂಧಿಸಿದ ವ್ಯಾಪಾರಸ್ಥರು ತಮ್ಮ ವ್ಯಾಪಾರವನ್ನು ವಿಸ್ತರಿಸಲು ಅವಕಾಶಗಳನ್ನು ಪಡೆಯುತ್ತಾರೆ. ಏಕೆಂದರೆ ಈ ಸಂಚಾರವು ನಿಮಗೆ ಶುಭವಾಗಿ ಕಂಡುಬರುತ್ತಿದೆ. ಕೆಲವು ಸ್ಥಳೀಯರು ತಮ್ಮ ಹವ್ಯಾಸ ಮತ್ತು ಕಲೆಯನ್ನು ಸರಿಯಾಗಿ ಬಳಸುವುದರ ಮೂಲಕವೂ ಉತ್ತಮವಾಗಿ ಗಳಿಸಬಹುದು.

ಮತ್ತೊಂದೆಡೆ, ಯಾವುದೇ ಬ್ಯಾಂಕ್ ಅಥವಾ ಇತರ ಸಂಸ್ಥೆಗಳಿಂದ ಸಾಲದ ಸಹಾಯವನ್ನು ಬಯಸುತ್ತಿರುವ ಜನರು ಈ ಸಂಚಾರದ ಸಮಯದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ.

ಪರಿಹಾರ - ವಿಶೇಷವಾಗಿ ಬುಧ ಹೋರಾ ಸಮಯದಲ್ಲಿ ಬುಧ ಮಂತ್ರವನ್ನು ಜಪಿಸುವುದು ನಿಮಗೆ ಉತ್ತಮ.

ವೃಷಭ ರಾಶಿ

ವೃಷಭ ರಾಶಿಯ ಅಧಿಪತಿ ಶುಕ್ರನ ಸ್ನೇಹಿತ ಬುಧ ಸಂಚಾರವು ನಿಮ್ಮ ರಾಶಿಯಿಂದ ಹತ್ತನೇ ಮನೆಯಲ್ಲಿರುತ್ತದೆ. ಇದರ ಮೂಲಕ ಕರ್ಮ ಮತ್ತು ವ್ಯವಹಾರದ ಬಗ್ಗೆ ಮಾಹಿತಿ ಸಿಗುತ್ತದೆ. ಬುಧ ದೇವ ನಿಮ್ಮ ಜಾತಕದ ಎರಡನೇ ಮತ್ತು ಐದನೇ ಮನೆಯ ಅಧಿಪತಿ. ಆದ್ದರಿಂದ ಬುಧ ಸಂಚಾರವು ನಿಮಗೆ ಅನುಕೂಲಕರವಾಗಿರಲಿದೆ.

ಕೆಲಸದ ಸ್ಥಳದಲ್ಲಿ ಹೆಚ್ಚಿನ ದೃಢ ಶಕ್ತಿಯಿಂದಾಗಿ, ನಿಮ್ಮ ಪ್ರಯತ್ನಗಳಿಗಿಂತ ನಿಮ್ಮ ಮಾತುಗಳಿಂದ ಇತರರ ವಿಶ್ವಾಸವನ್ನು ಗೆಲ್ಲಲು ನಿಮಗೆ ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಇದರಿಂದಾಗಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಹೊಸ ಅವಕಾಶಗಳನ್ನು ಹುಡುಕುತ್ತಿರುವ ಜನರು ಸಹ, ಯಾವುದೇ ಹೊಸ ಶುಭ ಸುದ್ಧಿಯನ್ನು ಪಡೆಯಬಹುದು.

ಅದೇ ಸಮಯದಲ್ಲಿ ಮತ್ತೊಂದೆಡೆ, ವ್ಯಾಪಾರಕ್ಕೆ ಸಂಬಂಧಿಸಿದ ಜನರು ತಮ್ಮ ಅವಲೋಕನ, ವಿಶ್ಲೇಷಣೆ, ಬುದ್ಧಿವಂತಕೆ ಮತ್ತು ವ್ಯಾಪಾರದ ಉತ್ತಮ ತಿಳುವಳಿಕೆಯಿಂದಾಗಿ ಅನೇಕ ಲಾಭಗಳನ್ನು ಪಡೆಯಬಹುದು. ಇದು ಅವರ ವ್ಯಪಾರವನ್ನು ವಿಸ್ತರಿಸಲು ಸಹಾಯ ಮಾಡುತ್ತದೆ.

ಆರ್ಥಿಕ ಜೀವನಕ್ಕೂ ಈ ಸಮಯ ವಿಶೇಷವಾಗಿ ಉತ್ತಮವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಮೂಲಕ ಮಾಡಲಾಗುವ ಪ್ರತಿಯೊಂದು ಹೂಡಿಕೆಯು ಪ್ರಯೋಜನಕಾರಿಯಾಗಲಿದೆ. ಇದರಿಂದಾಗಿ ನೀವು ನಿಮ್ಮ ಸಂಪತ್ತನ್ನು ಮುಂದುವರಿಸುವಲ್ಲಿ ಯಶಸ್ವಿಯಾಗುತ್ತೀರಿ ಮತ್ತು ಭವಿಷ್ಯದಲ್ಲಿ ಹೂಡಿಕೆಯ ಉತ್ತಮ ಪ್ರಯೋಜನವನ್ನು ಪಡೆಯುತ್ತೀರಿ.

ಕುಟುಂಬ ಜೀವನದಲ್ಲಿ, ನಿಮ್ಮ ತಂದೆಯೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ಇದರಿಂದಾಗಿ ಅವರು ನಿಮಗೆ ಆರ್ಥಿಕ ಸಹಾಯವನ್ನು ನೀಡುತ್ತಾರೆ. ಈ ಸಮಯದಲ್ಲಿ ಅತ್ತೆಮನೆ ಪರವಾಗಿ, ಪ್ರತಿಯೊಂದು ವಿವಾದವು ಮುಗಿಯುತ್ತದೆ. ಇದು ನಿಮ್ಮ ವೈವಾಹಿಕ ಜೀವನದಲ್ಲಿ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.

ಪರಿಹಾರ - ಬುಧ ಗ್ರಹದ ಅನುಕೂಲತೆಯನ್ನು ಪಡೆಯಲು, ಸೂರ್ಯೋದಯದ ಸಮಯದಲ್ಲಿ ಪ್ರತಿದಿನ ನೀವು ನಿಯಮಿತವಾಗಿ ವಿಷ್ಣುಶಸ್ರನಾಮವನ್ನು ಜಪಿಸಬೇಕು.


ನಿಮ್ಮ ಜಾತಕದಲ್ಲಿ ಉಂಟಾಗುವ ರಾಜ ಯೋಗ ಮತ್ತು ಅದರ ಶಕ್ತಿಯನ್ನು ತಿಳಿಯಿರಿ

ಮಿಥುನ ರಾಶಿ

ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ನಿಮ್ಮ ರಾಶಿಯ ಅಧಿಪತಿಯಾಗಿರುವ ಕಾರಣದಿಂದಾಗಿ ತುಂಬಾ ಪ್ರಮುಖವಾಗಿದೆ. ಇದರೊಂದಿಗೆ ಅವರು ನಿಮ್ಮ ನಾಲ್ಕನೇ ಮನೆಯ ಮಾಲೀಕ ಕೂಡ ಆಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ರಾಶಿಯಿಂದ ಹೊರಬಂದು ಕುಂಭ ರಾಶಿಯಲ್ಲಿ ಪ್ರವೇಶಿಸುವ ಸಮಯದಲ್ಲಿ ನಿಮ್ಮ ಒಂಬತ್ತನೇ ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಇದು ಅದೃಷ್ಟದ ಸ್ಥಾನವಾಗಿದೆ. ಈ ರೀತಿ ಬುಧ ಸಂಚಾರವು ನಿಮಗೆ ಸಾಮಾನ್ಯಕ್ಕಿಂತ ತುಂಬಾ ಅನುಕೂಲಕರವಾಗಿರಲಿದೆ.

ಈ ಸಮಯದಲ್ಲಿ ನೀವು ನಿಮ್ಮನ್ನು ಹೆಚ್ಚು ಆಶಾವಾದಿ ಮತ್ತು ಸಕಾರಾತ್ಮಕವಾಗಿ ಅನುಭವಿಸುತ್ತೀರಿ. ಇದು ನಿಮ್ಮ ಅರೋಗ್ಯಜೀವನದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಇದರ ಪರಿಣಾಮದಿಂದಾಗಿ ನೀವು ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ವಿಯಾಗುತ್ತೀರಿ. ಏಕೆಂದರೆ ಈ ಸಮಯದಲ್ಲಿ ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯಲು ಸಾಧ್ಯವಾಗುತ್ತದೆ.

ಈ ಸಮಯದಲ್ಲಿ ನಿಮ ಮನೋಬಲವು ಹೆಚ್ಚಾಗುತ್ತದೆ. ಇದರಿಂದಾಗಿ ನೀವು ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಉತ್ತಮ ರೀತಿಯಿಂದ ನಿಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ವ್ಯಕ್ತಪಡಿಸಿ, ಇತರರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ. ಇದರಿಂದಾಗಿ ನಿಮ್ಮ ಮೇಲಧಿಕಾರಿಗಳು ನಿಮ್ಮತ್ತ ಆಕರ್ಷಿತರಾಗುತ್ತಾರೆ ಮತ್ತು ಅವರಿಂದ ನೀವು ಹೊಸ ಅವಕಾಶ ಮತ್ತು ಜವಾಬ್ದಾರಿಗಳನ್ನು ಪಡೆಯುತ್ತೀರಿ.

ವ್ಯಾಪಾರಸ್ಥರ ಬಗ್ಗೆ ಮಾತನಾಡಿದರೆ, ಹೊಸ ಕೆಲಸ ಮತ್ತು ಹೊಸ ನೀತಿಗಳನ್ನು ಆರಂಭಿಸಲು ಇದು ನಿಮಗೆ ಅನುಕೂಲಕರವಾಗಿರಲಿದೆ. ಇದರೊಂದಿಗೆ ವಿದೇಶಿ ಯೋಜನೆಗಳು, ಆಮದು-ರಫ್ತು ಮತ್ತು ವಿದೇಶಿ ಸಂಸ್ಥೆಗಳೊಂದಿಗೆ ಸಂಬಂಧಿಸಿರುವ ಜನರು ಪ್ರಗತಿ ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ವಿದೇಶಕ್ಕೆ ಹೋಗಿ ಶಿಕ್ಷಣವನ್ನು ಪಡೆಯಲು ಬಯಸುತ್ತಿರುವ ವಿದ್ಯಾರ್ಥಿಗಳಿಗೆ ಈ ಸಂಚಾರವು ಶುಭ ಸುದ್ಧಿಯನ್ನು ನೀಡುತ್ತದೆ.

ವೈಯಕ್ತಿಕ ಜೀವನದಲ್ಲಿ ನೀವು ನಿಮ್ಮ ಪ್ರೀತಿಯ ಸಂಬಂಧವನ್ನು ಆನಂದಿಸುವುದನ್ನು ಕಾಣಲಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ಬುಧ ದೇವ ತುಂಬಾ ಶುಭ ಸ್ಥಿತಿಯಲ್ಲಿದ್ದು, ನಿಮಗೆ ಶಕ್ತಿ ಮತ್ತು ಆಕರ್ಷಣೆಯನ್ನು ನೀಡುತ್ತದೆ. ಇದರಿಂದಾಗಿ ನೀವು ಅನೇಕ ಜನರನ್ನು ನಿಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತೀರಿ. ಇದರೊಂದಿಗೆ ನೀವು ಸ್ನೇಹಿತರನ್ನು ಮತ್ತು ಹೊಸ ಸಂಪರ್ಕಗಳನ್ನು ಬಹಳ ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ. ವಿಶೇಷವಾಗಿ ಈ ಸಂಚಾರದ ಸಮಯದಲ್ಲಿ ವಿರುದ್ಧ ಲಿಂಗದ ಜನರು ನಿಮ್ಮತ್ತ ಹೆಚ್ಚು ಆಕರ್ಷಿತರಾಗುತ್ತಾರೆ.

ಪರಿಹಾರ - ಬುಧನ ಅನುಕೂಲಕರ ಫಲಿತಾಂಶಗಳನ್ನು ಹೆಚ್ಚಿಸಲು ಬುಧವಾರ ಹಸವಿಗೆ ಹಸಿರು ಮೇವು ತಿನ್ನಿಸಿ.

ಕರ್ಕ ರಾಶಿ

ಬುಧ ಗ್ರಹವು ನಿಮ್ಮ ರಾಶಿಚಕ್ರದ ಮೂರನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಕುಂಭ ರಾಶಿಯಲ್ಲಿ ಪ್ರವೇಶಿಸುವ ಸಮಯದಲ್ಲಿ ಇದು ನಿಮ್ಮ ರಾಶಿಯಿಂದ ಎಂಟನೇ ಮನೆಗೆ ಸಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ಇದರೊಂದಿಗೆ ಬುಧ ಗ್ರಹವು ನಿಮ್ಮ ಎರಡನೇ ಮನೆಯ ಮೇಲೆ ದೃಷ್ಟಿ ಹಾಕುತ್ತಾರೆ. ಇದು ಧ್ವನಿ, ಸಂವಹನ ಮತ್ತು ಸಂಪನ್ಮೂಲಗಳ ಮನೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಮೂಲಕ ಮೂಡಲಾಗಿರುವ ಹಿಂದಿನ ಪ್ರತಿಯೊಂದು ಹೂಡಿಕೆಯಿಂದ ನೀವು ಲಾಭವನ್ನು ಪಡೆಯುತ್ತೀರಿ. ಅದೇ ಸಮಯದಲ್ಲಿ ಮತ್ತೊಂದೆಡೆ, ಸಂಶೋಧನೆಯ ಕೆಲಸದಲ್ಲಿ ತೊಡಗಿರುವ ಜನರಿಗೆ ಈ ಸಂಚಾರವು ವಿಶೇಷವಾಗಿ ಅನುಕೂಲಕರವಾಗಿರುತ್ತದೆ.

ಕೆಲಸದ ಸ್ಥಳದಲ್ಲಿ ನೀವು ಪ್ರತಿಯೊಂದು ಕಾರ್ಯವನ್ನು ಕಲಿಯಲು ಮತ್ತು ಅರ್ಥಮಾಡಿಕೊಳ್ಳುವ ನಿಮ್ಮ ಸಾಮರ್ಥ್ಯವು ನಿಮ್ಮ ಕೆಲಸದ ಕೌಶಲ್ಯವನ್ನು ಅಭಿವೃದ್ಧಿಪಡಿಸುತ್ತದೆ. ಈ ಕಾರಣದಿಂದಾಗಿ ನಿಮ್ಮ ಮೇಲಧಿಕಾರಿಗಳು ನಿಮ್ಮನ್ನು ಪ್ರಶಂಸಿಸುವುದನ್ನು ತಡೆಯಲು ಸಾಧ್ಯವಾಗುವುದಿಲ್ಲ. ಬುಧನ ಈ ಸ್ಥಾನವು ಪ್ರತಿಯೊಂದು ಸಮಸ್ಯೆಯ ಮೂಲವನ್ನು ತಲುಪಲು ಮತ್ತು ಅದನ್ನು ಪರಿಹರಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಇದರಿಂದಾಗಿ ನಿಮ್ಮ ಸಾಮರ್ಥ್ಯವು ಬೆಳೆಯುತ್ತದೆ ಮತ್ತು ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಉನ್ನತ ಸ್ಥಾನವನ್ನು ಸಾಧಿಸಲು ಸಾಧ್ಯವಾಗುತ್ತದೆ

ವ್ಯಾಪಾರಸ್ಥರು, ವಿಶೇಷವಾಗಿ ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಜನರು ತಮ್ಮ ಆದಾಯವನ್ನು ಹೆಚ್ಚಿಸಲು ಅನೇಕ ಅವಕಾಶಗಳನ್ನು ಹೊಂದಿರುತ್ತಾರೆ.

ವೈಯಕ್ತಿಕ ಜೀವನದಲ್ಲಿ ನೀವು ನಿಮ್ಮ ಕೌಶಲ್ಯಗಳು, ನಿಮ್ಮ ರಾಜತಾಂತ್ರಿಕತೆ ಮತ್ತು ಜಾಣತನದಿಂದ ನಿಮ್ಮ ಕುಟುಂಬ ಮತ್ತು ಸಮಾಜದ ಇತರ ಜನರ ನಡುವೆ ಒಂದು ಸುಂದರವಾದ ಸಾಮಾಜಿಕ ವಲಯವನ್ನು ಕಾಪಾಡಿಕೊಳ್ಳುತ್ತ, ಅವರ ಹೃದಯವನ್ನು ಜಯಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ ದಾಂಪತ್ಯ ಸ್ಥಳೀಯರು, ತಮ್ಮ ಅತ್ತೆಮನೆಯ ಭಾಗದಿಂದ ಯಾವುದೇ ಉಡುಗೊರೆ ಮತ್ತು ಬೆಂಬಲವನ್ನು ಪಡೆಯುತ್ತಾರೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಕೆಲವು ಸ್ಥಳೀಯರು ಸಂಚಾರದ ಸಮಯದಲ್ಲಿ ತಮ್ಮ ಹಳೆಯ ಸಾಲಗಳನ್ನು ಮರುಪಾವತಿಸುವಲ್ಲಿ ಯಶಸ್ವಿಯಾಗುತ್ತಾರೆ.

ಈ ಸಮಯದಲ್ಲಿ ನೀವು ಪ್ರತಿಯೊಂದು ವಿರುದ್ಧ ಪರಿಸ್ಥಿತಿಯನ್ನು ಭೇದಿಸಲು ನಿಮಗೆ ಸಾಧ್ಯವಾಗುತ್ತದೆ. ಇದರಿಂದಾಗಿ ನೀವು ನಿಮ್ಮೊಂದಿಗೆ ಸೇರಲು ಸಹಾಯ ಸಿಗುತ್ತದೆ. ಈ ಪರಿಸ್ಥಿತಿಯು ಜೀವನದ ಹಲವು ಆಯಾಮಗಳಲ್ಲಿ ಯಶಸ್ಸನ್ನು ಸಾಧಿಸಲು ನಿಮಗೆ ಸಹಾಯಕರವೆಂದು ಸಾಬೀತುಪಡಿಸಬಹುದು.

ಪರಿಹಾರ - ಬುಧ ಗ್ರಹದ ಅನುಕೂಲತೆಯನ್ನು ಪಡೆಯಲು, ನೀವು ನಿಮ್ಮ ಮನೆಯಲ್ಲಿ ಪ್ರತಿದಿನ ಬೆಳಿಗ್ಗೆ ಕರ್ಪುರವನ್ನು ಬೆಳಗಿಸಬೇಕು.

ಸಿಂಹ ರಾಶಿ

ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ನಿಮ್ಮ ಎರಡನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ. ಈ ಎರಡೂ ಮನೆಗಳನ್ನು ಹಣದ ಮನೆಯೆಂದು ಕರೆಯಲಾಗುತ್ತದೆ. ಆದ್ದರಿಂದ ಬುಧ ಸಂಚಾರವು ನಿಮಗೆ ತುಂಬಾ ವಿಶೇಷವಾಗಿರುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಕುಂಭ ರಾಶಿಯಲ್ಲಿ ಸಂಚಾರದ ಸಮಯದಲ್ಲಿ ಇದು ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ಕುಳಿತಿರುತ್ತಾರೆ. ಇದು ಪಾಲುದಾರಿಕೆ ಮತ್ತು ಇದನ್ನು ವ್ಯಾಪಾರದ ಮನೆಯೆಂದು ಕರೆಯಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಬುಧ ಸಂಚಾರದ ಪರಿಣಾಮದಿಂದಾಗಿ, ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.

ವೈವಾಹಿಕ ಜೀವನದಲ್ಲೂ, ಈ ಸಮಯ ವಿಶೇಷವಾಗಿ ಶುಭವಾಗಿರಲಿದೆ. ಏಕೆಂದರೆ ಈ ಸಮಯದಲ್ಲಿ ನೀವು ನಿಮ್ಮ ಸಂಗಾತಿಯಿಂದ ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತೀರಿ. ಇದರೊಂದಿಗೆ ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂವಾದವು ಸರಾಗವಾಗಿ ನಡೆಯುತ್ತದೆ. ಇದರಿಂದಾಗಿ ನಿಮ್ಮಿಬ್ಬರ ನಡುವಿನ ಅಂತರವು ಕೊನೆಗೊಳ್ಳುತ್ತವೆ ಮತ್ತು ನೀವು ಪ್ರೀತಿಯಿಂದ ತುಂಬಿರುವ ಜೀವನವನ್ನು ಕಳೆಯುತ್ತೀರಿ. ಈ ಸಮಯದಲ್ಲಿ ನೀವಿಬ್ಬರೂ ಸಹ ಒಬ್ಬರನ್ನೊಬ್ಬರು ಬಹಿರಂಗವಾಗಿ ಗೌರವಿಸುವಿರಿ.

ಈ ಸಂಚಾರವು ನಿಮ್ಮ ಸಂತೋಷ ಸಂಪನ್ಮೂಲಗಳನ್ನು ಹೆಚ್ಚಿಸುತ್ತದೆ. ಇದರೊಂದಿಗೆ ನಿಮ್ಮ ತಂದೆಗೂ ಕೆಲಸದ ಸ್ಥಳದಲ್ಲಿ ಯಾವುದೇ ರೀತಿಯ ಲಾಭ ಸಿಗುತ್ತದೆ. ಇದು ಕುಟುಂಬದ ವಾತಾವರಣದಲ್ಲಿ ಸಂತೋಷವನ್ನು ತರುತ್ತದೆ.

ವ್ಯಾಪಾರಸ್ಥರು ಈ ಸಮಯದಲ್ಲಿ, ಪಾಲುದಾರಿಕೆಯ ವ್ಯಾಪಾರದಿಂದ ಲಾಭ ಮತ್ತು ವಿಸ್ತರಣೆಯ ಅನೇಕ ಅವಕಾಶಗಳನ್ನು ಪಡೆಯುತ್ತೀರಿ. ಇದರೊಂದಿಗೆ ಸ್ವಲ್ಪ ದೂರದ ಪ್ರಯಾಣ ಮಾಡುವುದು ನಿಮಗೆ ಉತ್ತಮ. ಏಕೆಂದರೆ ಇದರಿಂದ ನೀವು ಉತ್ತಮ ಫಲಿತಾಂಶಗಳನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತೀರಿ.

ವಿದ್ಯಾರ್ಥಿಗಳಿಗೂ ನಿಮ್ಮ ಶಿಕ್ಷಣದ ಬಗ್ಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ. ಇದರಿಂದಾಗಿ ಅವರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.

ಪರಿಹಾರ - ಬುಧ ಸಂಚಾರದ ಸಮಯದಲ್ಲಿ ನೀವು ನಿಮ್ಮ ಬಲಗೈಯ ಚಿಕ್ಕ ಬೆರಳಿನಲ್ಲಿ ಚಿನ್ನ ಅಥವಾ ಬೆಳ್ಳಿಯಲ್ಲಿ ನೀವು ಪಚ್ಛೆ ರತ್ನವನ್ನು(ಪನ್ನ ) ಧರಿಸಬೇಕು.

ಕನ್ಯಾ ರಾಶಿ

ಬುಧ ಸಂಚಾರದ ಸಮಯದಲ್ಲಿ ಕನ್ಯಾ ರಾಶಿಚಕ್ರದ ಸ್ಥಳೀಯರು ಕೆಲವು ಅರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಏಕೆಂದರೆ ಬುಧ ದೇವ ನಿಮ್ಮ ರಾಶಿಯ ಅಧಿಪತಿಯಾಗಿರುವುದರ ಜೊತೆಗೆ, ಬುಧವು ನಿಮ್ಮ ಹತ್ತನೇ ಮನೆಯನ್ನು ಸಹ ಆಕ್ರಮಿಸಿಕೊಂಡಿದೆ. ತನ್ನ ಈ ಸಂಚಾರದ ಸಮಯದಲ್ಲಿ ಬುಧ ದೇವ ನಿಮ್ಮ ರಾಶಿಯಿಂದ ಆರನೇ ಮನೆಗೆ ಪ್ರವೇಶಿಸುತ್ತದೆ. ಈ ಮನೆಯನ್ನು ಶತ್ರು, ರೋಗ ಮತ್ತು ಸಾಲದ ಮನೆಯೆಂದು ಪರಿಗಣಿಸಲಾಗಿದೆ.

ಇದರೊಂದಿಗೆ ಈ ಸಮಯದಲ್ಲಿ ಬುಧವು ನಿಮ್ಮ ಹನ್ನೆರಡನೇ ಮನೆಯ ಮೇಲೆ ದೃಷ್ಟಿ ಹಾಕುತ್ತದೆ. ಇದು ವೆಚ್ಚಗಳನ್ನು ತೋರಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಖರ್ಚಿನಲ್ಲಿ ಅತಿಯಾದ ಹೆಚ್ಚಳವು, ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸಲು ದೊಡ್ಡ ಕಾರಣವಾಗಬಹುದು. ಇದು ನಿಮ್ಮ ಅರೋಗ್ಯ ಜೀವನದ ಮೇಲೆ ಪರಿಣಾಮವನ್ನು ಬೀರುತ್ತದೆ. ಅರೋಗ್ಯ ಸಮಸ್ಯೆಗಳಿರುವ ಹೊರತಾಗಿಯೂ, ನೀವು ಕೆಲಸದ ಸ್ಥಳದಲ್ಲಿ ನಿಮ್ಮ ಜವಾಬ್ದಾರಿಗಳನ್ನು ಪೂರೈಸುವಲ್ಲಿ ನಿರತರಾಗಿರುವುದನ್ನು ಕಾಣಲಾಗುತ್ತದೆ. ಇದು ನಿಮ್ಮ ಪ್ರೀತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದು ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಅಂತರವನ್ನು ಹೆಚ್ಚಿಸುತ್ತದೆ.

ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ಉನ್ನತ ಸ್ಥಾನ ಮತ್ತು ಮೇಲಧಿಕಾರಿಗಳ ಮೆಚ್ಚುಗೆಯನ್ನು ಪಡೆಯುತ್ತೀರಿ. ಇದಲ್ಲದೆ ಈ ಸಮಯದಲ್ಲಿ ಯಾವುದೇ ರೀತಿಯ ವಾದ ಮತ್ತು ಜಗಳಗಳಿಂದ ದೂರವಿರಬೇಕು.

ಆರೋಗ್ಯದ ದೃಷ್ಟಿಯಿಂದ ಈ ಸಮಯ ನಿಮ್ಮನ್ನು ಕಾಡಬಹುದು. ಆದ್ದರಿಂದ ನೀವು ನಿಮ್ಮನ್ನು ಆಶಾವಾದಿ ಮತ್ತು ಸಕಾರಾತ್ಮಕವಾಗಿಡಲು ಪ್ರಯತ್ನಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ ಮತ್ತು ಸಾಧ್ಯವಾದಷ್ಟು ಯೋಗ ಮತ್ತು ಧ್ಯಾನವನ್ನು ಆಶ್ರಯಿಸಿದರೆ ನೀವು ನಿಮ್ಮ ದೈನಂದಿನ ದಿಚಾರಿಯನ್ನು ಸುಧಾರಿಸಬಹುದು.

ಪರಿಹಾರ - ಬುಧ ದೇವರ ವಿಶೇಷ ಅನುಗ್ರಹವನ್ನು ಪಡೆಯಲು, ಸೂರ್ಯೋದಯದ ಸಮಯದಲ್ಲಿ ಗಜೇಂದ್ರ-ಮೋಕ್ಷ ಸ್ತೋತ್ರವನ್ನು ಪಠಿಸಿ.

ತುಲಾ ರಾಶಿ

ತುಲಾ ರಾಶಿಗಾಗಿ ಬುಧ ದೇವ ಒಂಬತ್ತನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ. ಸಂಚಾರದ ಈ ಸಮಯದಲ್ಲಿ ಬುಧ ದೇವ ನಿಮ್ಮ ಐದನೇ ಮನೆಯಲ್ಲಿ ಕುಳಿತಿರುತ್ತಾರೆ. ಈ ಸಮಯದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.

ಉನ್ನತ ಶಿಕ್ಷಣದ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ. ಇದರೊಂದಿಗೆ ವಿದೇಶಿ ವಿವಿಶ್ವದ್ಯಾಲಯಗಳ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಬಯಸುತ್ತಿರುವ ವಿದ್ಯಾರ್ಥಿಗಳು ಸಹ ತಮ್ಮ ಪಪ್ರಯತ್ನಗಳಿಂದ ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ.

ಒಬ್ಬಂಟಿಯಾಗಿರುವ ಜನರಿಗೆ ಈ ಸಮಯವು ವಿಶೇಷವಾಗಿ ಉತ್ತಮವಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ಅವರು ತಮ್ಮ ಆಸೆಗಳನ್ನು ಮತ್ತು ಭಾವನೆಗಳನ್ನು ನಿಮ್ಮ ಪ್ರೇಮಿಯ ಮುಂದೆ ತೆರೆದಿಡಲು ಸಾಧ್ಯವಾಗುತ್ತದೆ. ಇದರಿಂದಾಗಿ ಅವರು ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ ಮತ್ತು ಅವರು ಪ್ರೇಮಿಯಿಂದ ಸರಿಯಾದ ಉತ್ತರವನ್ನು ಪಡೆಯುವ ಸಾಧ್ಯತೆಯೂ ಇದೆ.

ಪ್ರೀತಿಯ ಸಂಬಂಧಕ್ಕೆ ಇದು ಉತ್ತಮ ಸಮಯ. ವಿವಾಹಿತ ಜನರು ತಮ್ಮ ಜೀವನ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತಾರೆ. ಇದು ಅವರ ಸಂಬಂಧವನ್ನು ಬಲಪಡಿಸುತ್ತದೆ. ತಮ್ಮ ದಾಂಪತ್ಯ ಜೀವನವನ್ನು ವಿಸ್ತರಿಸಲು ಯೋಚಿಸುತ್ತಿದ್ದ ಜನರಿಗೆ ಈ ಸಂಚಾರವು ಯಾವುದೇ ಶುಭ ಸುದ್ಧಿಯನ್ನು ನೀಡಬಹುದು.

ಕೆಲಸದ ಸ್ಥಳದಲ್ಲಿ ನಿಮ್ಮ ಸೃಜನಶೀಲ ಮತ್ತು ಸಹಜ ಶಕ್ತಿಯು ಹೆಚ್ಚಾಗುತ್ತದೆ. ಇದರಿಂದಾಗಿ ನಿಮ್ಮ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನೀವು ಸಾಮರ್ಥ್ಯರಾಗುತ್ತೀರಿ. ನೀವು ನಿಮ್ಮ ಆಲೋಚನೆಗಳನ್ನು ಇತರರ ಮುಂದೆ ತೆರೆದಿಡುವುದನ್ನು ಕಾಣಲಾಗುತ್ತದೆ. ಇದರ ಪರಿಣಾಮದಿಂದಾಗಿ, ಕೆಲಸದ ಸ್ಥಳದಲ್ಲಿ ನೀವು ಯಶಸ್ಸು ಪಡೆಯುತ್ತೀರಿ. ಸರ್ಕಾರಿ ಸೇವೆಯಲ್ಲಿ ಕೆಲಸ ಮಾಡುತ್ತಿರುವ ಸ್ಥಳೀಯರು ತಮ್ಮ ವರ್ಗಾವಣೆಯ ಬಗ್ಗೆ ಕೆಲವು ಅನುಕೂಲಕರ ಸುದ್ಧಿಗಳನ್ನು ಪಡೆಯಬಹುದು. ಇದ್ದಕ್ಕಿದ್ದಂತೆ ಲಾಭವನ್ನು ಪಡೆಯುವ ಸಂಪೂರ್ಣ ಸಾಧ್ಯತೆಯೂ ಕಂಡುಬರುತ್ತಿದೆ.

ಪರಿಹಾರ - ಬುಧವಾರ ಅಗತ್ಯವಿರುವ ಜನರಿಗೆ ಹಸಿರು ಬಣ್ಣದ ಬಟ್ಟೆ ಅಥವಾ ತಿನ್ನುವ ಪದಾರ್ಥಗಳನ್ನು ದಾನ ಮಾಡಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಚಕ್ರದ ಸ್ಥಾಕೀಯರಿಗೆ ಬುಧ ದೇವ ಎಂಟನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಕುಂಭರಾಶಿಯಲ್ಲಿ ಸಂಚಾರದ ಈ ಸಮಯದಲ್ಲಿ ನಿಮ್ಮ ನಾಲ್ಕನೇ ಮನೆಗೆ ಪ್ರವೇಶಿಸುತ್ತಾರೆ. ಇದು ನಿಮ್ಮ ಸಂತೋಷ ಸಂಪನ್ಮೂಲಗಳು, ತಾಯಿ, ಜಮೀನು, ಇತ್ಯಾದಿಗಳ ಮನೆಯಾಗಿದೆ. ಆದ್ದರಿಂದ ಈ ಮನೆಯಲ್ಲಿ ಬುಧ ಸಂಚಾರದಿಂದಾಗಿ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.

ಕುಟುಂಬ ಪರಿಸರವು ಶಾಂತ ಮತ್ತು ಸಂತೋಷವಾಗಿರುತ್ತದೆ. ಈ ಕಾರಣದಿಂದಾಗಿ ನೀವು ಸಹ ನಿಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯವನ್ನು ಕಳೆಯಲು ಅವಕಾಶವನ್ನು ಪಡೆಯುತ್ತೀರಿ. ಕುಟುಂಬದ ಸದಸ್ಯರೊಂದಿಗೆ ನೀವು ಪುಕ್ನಿಕ್ ಅಥವಾ ವಿಹಾರಕ್ಕೆ ಹೋಗಲು ಯೋಜಿಸಬಹುದು, ಅದರಿಂದಾಗಿ ನಿಮ್ಮ ಹಣ ಖರ್ಚಾಗುತ್ತದೆ.

ಇದರ ಹೊರತಾಗಿಯೂ, ತಾಯಿಯ ಆರೋಗ್ಯವು ಹದಗೆಡುವ ಸಾಧ್ಯತೆ ಇದೆ. ವಿಶೇಷವಾಗಿ ಅವರು ಹಾರ್ಮೋನ್ಗಳು, ಹೃದಯ ರೋಗ ಅಥವಾ ಯಾವುದೇ ರೀತಿಯ ಅಲರ್ಜಿಯನ್ನು ಹೊಂದಿದ್ದರೆ, ನೀವು ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು ಬಹಳ ಮುಖ್ಯ.

ಈ ಸಮಯದಲ್ಲಿ ನೀವು ನಿಮ್ಮ ಪೂರ್ವಜರ ಆಸ್ತಿಯನ್ನು ಪಡೆಯುವ ಸಾಧ್ಯತೆಯೂ ಇದೆ. ಈ ಕಾರಣದಿಂದಾಗಿ ಇದ್ದಕ್ಕಿದ್ದಂತೆ ನೀವು ಲಾಭ ಮತ್ತು ಪ್ರಯೋಜನವನ್ನು ಪಡೆಯಬಹುದು. ಕೆಲವು ಸ್ಥಳೀಯರು ಭೂಮಿ ಅಥವಾ ಹೊಸ ವಾಹನವನ್ನು ಖರೀದಿಸಲು ಸಹ ಯೋಜಿಸಬಹುದು. ಇದು ಅವರ ಆರಾಮ ಮತ್ತು ಐಷಾರಾಮಿಗಳನ್ನು ಹೆಚ್ಚಿಸುತ್ತದೆ.

ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿಯ ಆದಾಯ ಹೆಚ್ಚಾಗುತ್ತದೆ. ಇದರ ಪರಿಣಾಮವಾಗಿ, ನೀವು ಅವರಿಂದ ಆರ್ಥಿಕ ಬೆಂಬಲವನ್ನು ಪಡೆಯುತ್ತೀರಿ ಮತ್ತು ನೀವು ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುತ್ತೀರಿ.

ಈ ಸಂಚಾರವು ವ್ಯಾಪಾರದಲ್ಲಿ ತೊಡಗಿರುವ ಸ್ಥಳೀಯರನ್ನು ಒತ್ತಡದಿಂದ ಮುಕ್ತರಾಗಿಡಲು ಸಹಾಯಕರವೆಂದು ಸಾಬೀತುಪಡಿಸುತ್ತದೆ. ಏಕೆಂದರೆ ಈ ಸಮಯದಲ್ಲಿ ನೀವು ಕಡಿಮೆ ಪರಿಶ್ರಮ ಮತ್ತು ಪ್ರಯತ್ನಗಳ ಹೊರತಾಗಿಯೂ, ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಹೇಗಾದರೂ, ನಿಮ್ಮ ಆರಾಮ ವಲಯಕ್ಕೆ ನಿಮ್ಮನ್ನು ಸೀಮಿತಗೊಳಿಸುವಲ್ಲಿ ಜಾಗರೂಕರಾಗಿರಬೇಕು, ಇಲ್ಲದಿದ್ದರೆ ಭವಿಷ್ಯದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಪರಿಹಾರ - ಬುಧ ದೇವರ ವಿಶೇಷ ಅನುಗ್ರಹವನ್ನು ಪಡೆಯಲು ನೀವು ಪ್ರತಿದಿನ ತುಳಸಿ ಸಸ್ಯವನ್ನು ಪೂಜಿಸಬೇಕು.

ಧನು ರಾಶಿ

ಧನು ರಾಶಿಚಕ್ರದ ಸ್ಥಳೀಯರಿಗೆ ಬುಧ ದೇವ ಏಳನೇ ಮತ್ತು ಹತ್ತನೇ ಮನೆಯ ಅಧಿಪತಿಯಾಗಿದ್ದಾರೆ ಮತ್ತು ಸಂಚಾರದ ಈ ಸಮಯದಲ್ಲಿ ಮಕರ ರಾಶಿಯಿಂದ ಹೊರಬಂದು ಕುಂಭ ರಾಶಿಗೆ ಪ್ರವೇಶಿಸುತ್ತ, ನಿಮ್ಮ ರಾಶಿಯಿಂದ ಮೂರನೇ ಮನೆಗೆ ಪ್ರವೇಶಿಸುತ್ತಾರೆ. ಇದು ಧೈರ್ಯ, ಸಾಹಸ, ಸಹಿದಾರ ಸಹೋದರಿಯರು, ಪ್ರಯತ್ನ ಮತ್ತು ಸಂವಹನಗಳ ಮನೆಯಾಗಿದೆ. ಅಂತಹ ಸಂದರ್ಭದಲ್ಲಿ, ಬುಧ ಸಂಚಾರದ ಸಮಯದಲ್ಲಿ ನೀವು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತೀರಿ.

ಈ ಸಮಯದಲ್ಲಿ ತುಲಾ ರಾಶಿಚಕ್ರದ ಜನರಿಗೆ ಕೆಲಸದ ಸ್ಥಳಕ್ಕೆ ಸಂಬಂಧಿಸಿದ ಅಲ್ಪ ದೂರ ಪ್ರಯಾಣವು ಲಾಭದಾಯಕಾಗಿರುತ್ತದೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯನ್ನು ಕೆಲಸದ ಸ್ಥಳದಲ್ಲಿ ಪ್ರಶಂಸಿಸಲಾಗುತ್ತದೆ, ಇದು ನಿಮ್ಮ ಧೈರ್ಯ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ.

ಇದರಿಂದಾಗಿ ನೀವು ನಿಮ್ಮ ಪ್ರತಿಯೊಂದು ಕೆಲಸವನ್ನು ಸಮಯಕ್ಕೆ ಮೊದಲು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುತ್ತೀರಿ.

ಕುಟುಂಬ ಜೀವನದಲ್ಲಿ ಕುಟುಂಬ ಸದಸ್ಯರು, ಸ್ನೇಹಿತರು, ಸಂಬಂಧಿಕರು ಮತ್ತು ನೆರೆಹೊರೆಯವರೊಂದಿಗೆ ಸಂವಹವನ್ನು ಸ್ಥಾಪಿಸಲು ನೀವು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಆಗ ಮಾತ್ರ ನೀವು ಸಾಮಾಜಿಕ ಗೌರವವನ್ನು ಪಡೆಯಲು ಸಾಧ್ಯವಾಗುತ್ತದೆ. ಇದರಿಂದಾಗಿ ಕುಟುಂಬ ಪರಿಸರ ಮತ್ತು ನಿಮ್ಮ ಸ್ವಭಾವದಲ್ಲಿ ಸಕಾರಾತ್ಮಕತೆಯನ್ನು ಕಾಣಲಾಗುತ್ತದೆ.

ಈ ಸಮಯದಲ್ಲಿ ವಿದ್ಯಾರ್ಥಿಗಳು ಹೆಚ್ಚು ಕುತೂಹಲವನ್ನು ಹೊಂದಿರುತ್ತಾರೆ. ಈ ಕಾರಣದಿಂದಾಗಿ ಅವರು ಹೊಸ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯ ಸಿಗುತ್ತದೆ. ಇದಲ್ಲದೆ , ನೀವು ಸಾಮಾಜಿಕ ಮಾಧ್ಯಮ, ಇಂಟರ್ನೆಟ್, ಇತ್ಯಾದಿಗಳ ಸಹಾಯದಿಂದ ನಿಮ್ಮ ಹೆಚ್ಚುವರಿ ವ್ಯವಹಾರವನ್ನು ನೀವು ವಿಸ್ತರಿಸುವುದು ಕಂಡುಬರುತ್ತದೆ.

ಪರಿಹಾರ - ಬುಧ ಗ್ರಹದ ಈ ಸಂಚಾರದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಲು, ಗಣೇಶ ದೇವರನ್ನು ಪೂಜಿಸಿ


ವರ್ಷ 2021 ರ ನಿಮ್ಮ ಸ್ಥಿತಿಯನ್ನು ತಿಳಿದುಕೊಳ್ಳಿ - ವಾರ್ಷಿಕ ರಾಶಿ ಭವಿಷ್ಯ 2021

ಮಕರ ರಾಶಿ

ಮಕರ ರಾಶಿಚಕ್ರದ ಸ್ಥಳೀಯರಿಗೆ ಬುಧ ಸಂಚಾರವು ತುಂಬಾ ಮುಖ್ಯವಾಗಿದೆ . ಏಕೆಂದರೆ ಇದು ನಿಮ್ಮ ಆರನೇ ಮನೆಯ ಅಧಿಪತಿಯಾಗಿರುವುದರ ಜೊತೆಗೆ ನಿಮ್ಮ ಅದೃಷ್ಟದ ಮನೆಯ ಮಾಲೀಕ ಕೂಡ ಆಗಿದೆ. ತನ್ನ ಸಂಚಾರದ ಸಮಯದಲ್ಲಿ ನಿಮ್ಮ ಎರಡನೇ ಮನೆಗೆ ಹಾದುಹೋಗುತ್ತದೆ. ಅಂತಹ ಸಂದರ್ಭದಲ್ಲಿ ಈ ಸಂಚಾರದ ಪರಿಣಾಮವಾಗಿ, ನಿಮ್ಮ ರಾಶಿಯಲ್ಲಿ ಧನ ಯೋಗವು ನಿರ್ಮಿಸುತ್ತದೆ, ಇದು ನಿಮ್ಮ ಆರ್ಥಿಕ ಜೀವನದಲ್ಲಿ ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.

ಆರ್ಥಿಕ ಜೀವನಕ್ಕೆ ಇದು ಉತ್ತಮ ಸಮಯ. ನೀವು ಸಂಪತ್ತು ಅಥವಾ ಮನೆಯನ್ನು ಖರೀದಿಸಲು ಯೋಜಿಸಬಹುದು. ಇದರೊಂದಿಗೆ ನಿಮ್ಮ ತಂದೆಯ ಮೂಲಕ ಆರ್ಥಿಕ ಮತ್ತು ಭಾವನಾತ್ಮಕ ಬೆಂಬಲವನ್ನು ಪಡೆಯುತ್ತೀರಿ. ಇದು ನಿಮ್ಮ ಗುರಿಯತ್ತ ಮುನ್ನಡೆಯಲು ನಿಮ್ಮನ್ನು ಪ್ರತ್ಸಾಹಿಸುವ ಕೆಲಸ ಮಾಡುತ್ತದೆ.

ವ್ಯಾಪಾರಸ್ಥರು ಈ ಸಮಯದಲ್ಲಿ, ಇತರರನ್ನು ಪ್ರಭಾವಿಸುವಲ್ಲಿ ಯಶಸ್ವಿಯಾಗುತ್ತಾರೆ. ಕೆಲಸದ ಸ್ಥಳಕ್ಕೆ ಸಂಬಂಧಿಸಿದ ಪ್ರಯಾಣ ಮಾಡುವುದು ನಿಮ್ಮ ಹಣದ ಲಾಭಕ್ಕೆ ಮುಖ್ಯ ಕಾರಣವಾಗಿದೆ.

ಈ ಸಂಚಾರದ ಸಮಯದಲ್ಲಿ, ನೀವು ಯಾರಿಗಾದರೂ ಸಾಲ ನೀಡುವುದನ್ನು ತಪ್ಪಿಸಬೇಕು. ವಿಶೇಷವಾಗಿ ಸ್ನೇಹಿತರು ಅಥವಾ ಕುಟುಂಬದ ಆಪ್ತ ಸದಸ್ಯರಿಗೆ ನಿಮ್ಮ ಹಣ ನೀಡುವುದನ್ನು ತಪ್ಪಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಇಲ್ಲದಿದ್ದರೆ ಅವರೊಂದಿಗೆ ಜಗಳ ಅಥವಾ ವಾದದ ಸಾಧ್ಯತೆ ಇದೆ. ಶೇರ್ ಮಾರ್ಕೆಟ್ ಗೆ ಸಂಬಂಧಿಸಿದ ಜನರು ಇದ್ದಕ್ಕಿದ್ದಂತೆ ಲಾಭವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.

ಈ ಸಮಯದಲ್ಲಿ ಸಂವಹನ ನಡೆಸುವ ಸಮಯದಲ್ಲಿ ನಿಮ್ಮ ಪದಗಳನ್ನು ಚಿಂತನಶೀಲವಾಗಿ ಬಳಸಬೇಕು. ಸ್ಪರ್ಧಾತ್ಮಕ ಅಥವಾ ಸರ್ಕಾರಿ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಈ ಸಮಯದಲ್ಲಿ ತಮ್ಮನ್ನು ಚಿಂತೆ ಮುಕ್ತವಾಗಿರಿಸಿಕೊಂಡು ಮುಂದುವರಿಯುವಂತೆ ಸೂಚಿಸಲಾಗಿದೆ. ಏಕೆಂದರೆ ಈ ಸಮಯದಲ್ಲಿ ಅವರು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತಾರೆ.

ಪರಿಹಾರ - ಅತ್ತೆ, ಚಿಕ್ಕಮ್ಮ, ಮುಂತಾದ ತಾಯಿಯಂತಹ ಮಹಿಳೆಯರಿಗೆ ಉಡುಗೊರೆಗಳನ್ನು ನೀಡಿದರೆ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.

ಕುಂಭ ರಾಶಿ

ಬುಧದ ಈ ಸಾಗಣೆ ನಿಮಗೆ ತುಂಬಾ ಮುಖ್ಯ, ಏಕೆಂದರೆ ಇದು ನಿಮ್ಮದೇ ರಾಶಿಯಲ್ಲಿ ಸಂಭವಿಸಲಿದೆ. ಬುಧ ಕುಂಭ ರಾಶಿಯ ಐದನೇ ಮತ್ತು ಎಂಟನೇ ಮಾಲೀಕ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಮೊದಲನೇ ಮನೆಗೆ ಪ್ರವೇಶಸಿಯುತ್ತಾರೆ. ಇದು ನಿಮಗೆ ಮಿಶ್ರ ಆದರೆ, ಪ್ರಮುಖ ಫಲಿತಾಂಶಗಳನ್ನು ನೀಡುತ್ತದೆ.

ವಿವಾಹಿತ ಜನರು ತಮ್ಮ ಜೀವನ ಸಂಗಾತಿಯ ಪ್ರಗತಿಯಿಂದ ಸಂತೋಷಪಡುತ್ತಾರೆ. ಅದೇ ಸಮಯದಲ್ಲಿ ಮತ್ತೊಂದೆಡೆ, ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುತ್ತಿರುವ ಜನರ ಮಕ್ಕಳು ವಿದೇಶಕ್ಕೆ ಹೋಗಲು ಅವಕ್ಶವನ್ನು ಪಡೆಯುತ್ತಾರೆ. ನೀವು ಸಹ ಜೀವನ ಸಂಗಾತಿ ಅಥವಾ ಪ್ರೇಮಿಯಿಂದ ಸಂಪೂರ್ಣ ಪ್ರೀತುಯನ್ನು ಪಡೆಯುತ್ತಾರೆ. ಇದರಿಂದಾಗಿ ನಿಮ್ಮಿಬ್ಬರ ನಡುವಿನ ಸಂಬಂಧವು ಇನ್ನಷ್ಟು ಬಲಗೊಳ್ಳುತ್ತದೆ.

ಕೆಲಸದ ಸ್ಥಳದಲ್ಲಿ ನಿಮ್ಮ ಕಠಿಣ ಪರಿಶ್ರಮ ಮತ್ತು ಕೆಲಸದ ಸಾಮರ್ಥ್ಯದಿಂದಾಗಿ ನೀವು ಇತರರ ಪ್ರಶಂಸೆಯನ್ನು ಪಡೆಯುತ್ತೀರಿ. ಇದರೊಂದಿಗೆ ನಿಮ್ಮ ಕಾರ್ಯತಂತ್ರಗಳನ್ನು ಯೋಜಿಸಲು ಮತ್ತು ಭವಿಷ್ಯದ ಯೋಜನೆಗಳನ್ನು ಪೂರೈಸಲು ಇದು ಅತ್ಯುತ್ತಮ ಸಮಯ. ಏಕೆಂದರೆ ನಿಮ್ಮ ಮನಸ್ಸು ಸೃಜನಶೀಲ ಆಲೋಚನೆಗಳು ಮತ್ತು ಸಲಹೆಗಳಿಂದ ತುಂಬಿರುತ್ತದೆ. ಇದು ನಿಮ್ಮ ಪ್ರಗತಿಯಲ್ಲಿ ಭಾರಿ ಜಿಗಿತಕ್ಕೆ ಕಾರಣವಾಗುತ್ತದೆ. ಮತ್ತೊಂದೆಡೆ, ನೀವು ವ್ಯಾಪಾರದಲ್ಲಿ ತೊಡಗಿದ್ದರೆ, ಪಾಲುದಾರಿಕೆ ಅಥವಾ ಯಾವುದೇ ರೀತಿಯ ಹೂಡಿಕೆಯ ಮೂಲಕ ನೀವು ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷಿಸಬೇಡಿ ಎಂದು ನಿಮಗೆ ಸೂಚಿಸಲಾಗಿದೆ.

ನಿಮ್ಮ ಲಗ್ನದ ಮನೆಯಲ್ಲಿ ಬುಧನ ಉಪಸ್ಥಿತಿಯು, ನಿಮ್ಮನ್ನು ಹೆಚ್ಚು ಆಕರ್ಷಕವಾಗಿ ಮತ್ತು ಉತ್ಸಾಹಭರಿತ ಯುವಕರಾಗಲು ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ, ನಿಮ್ಮ ಆಲೋಚನೆಗಳು ಮತ್ತು ಸಲಹೆಗಳಲ್ಲಿ ನಿಮ್ಮ ಪ್ರಾಮಾಣಿಕತೆಯನ್ನು ಕಾಣಲಾಗುತ್ತದೆ. ಇದರ ಪರಿಣಾಮವಾಗಿ ನೀವು ಸಂಪೂರ್ಣ ಗೌರವ ಮತ್ತು ಪ್ರತಿಷ್ಠೆಯನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.

ಪರಿಹಾರ - ಬುಧವಾರ ಪಾಲಕ ಅಥವಾ ಹಸಿರು ಬೇಳೆಯನ್ನು ಸೇವಿಸಿ.

ಮೀನಾ ರಾಶಿ

ಬುಧವು ಮೀನಾ ರಾಶಿಯ ಸಂತೋಷದ ಮನೆ ಅಂದರೆ ನಾಲ್ಕನೇ ಮತ್ತು ಏಳನೇ ಮನೆಯ ಮಾಲೀಕನಾಗಿ, ಕುಂಭ ರಾಶಿಯಲ್ಲಿ ಸಂಚಾರದ ಸಮಯದಲ್ಲಿ ನಿಮ್ಮ ರಾಶಿಯಿಂದ ಹನ್ನೆರಡನೇ ಮನೆಗೆ ಪ್ರವೇಶಿಸುತ್ತದೆ. ಹನ್ನೆರಡನೇ ಮನೆಯನ್ನು ವೆಚ್ಚ ಮತ್ತು ನಷ್ಟದ ಮನೆಯೆಂದು ಪರಿಗಣಿಸಲಾಗಿದೆ. ಆದ್ದರಿಂದ ಬುಧ ದರವ ಪರಿಣಾಮದಿಂದಾಗಿ ಈ ಸಮಯದಲ್ಲಿ ಉತ್ತಮ ಮತ್ತು ಆರಾಮದಾಯಕ ಜೀವನವನ್ನು ನಡೆಸಲು ನಿಮ್ಮ ಹೆಚ್ಚಿನ ಹಣವನ್ನು ಖರ್ಚು ಮಾಡುವುದನ್ನು ಕಾಣಲಾಗುತ್ತದೆ.

ಬುಧವು ಸಂಚಾರದ ಈ ಸಮಯದಲ್ಲಿ ನಿಮ್ಮ ಆರನೇ ಮನೆಯ ಮೇಲೂ ದೃಷ್ಟಿ ಹಾಕುತ್ತದೆ. ಈ ಕಾರಣದಿಂದಾಗಿ ನೀವು ನಿಮ್ಮ ಶತ್ರುಗಳೊಂದಿಗೆ ಎಲ್ಲಾ ರೀತಿಯ ವಾದಗಳು ಮತ್ತು ಜಗಳದಿಂದ ದೂರವಿರಲು ನಿಮಗೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕೆಲಸದ ಸ್ಥಳದಲ್ಲಿ ನಿಮ್ಮ ಚಿತ್ರ ಹದಗೆಡಬಹುದು.

ನ್ಯಾಯಾಲಯ - ಕಚೇರಿಯ ವಿಷಯಗಳಿಂದಲೂ ಈ ಸಮಯದಲ್ಲಿ ನೀವು ನಿಮ್ಮನ್ನು ತಪ್ಪಿಸಬೇಕು. ಇಲ್ಲದಿದ್ದರೆ, ನೀವು ನಿಮ್ಮ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗಬಹುದು. ಈ ಸಮಯದಲ್ಲಿ ಭೌತಿಕ ಸಂಪನ್ಮೂಲಗಳ ಬಯಕೆಗಳ ಬಗ್ಗೆ ನಿಮ್ಮ ಅಸಡ್ಡೆ ಮತ್ತು ಆತುರದ ಸ್ವಭಾವವು ನಿರ್ಧಾರ ತೆಗೆದುಕೊಳ್ಳುವ ನಿಮ್ಮ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು.

ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಂತಹ ಸಂದರ್ಭದಲ್ಲಿ ನೀವು ಆರಂಭದಿಂದಲೇ, ಹೆಚ್ಚು ಕಠಿಣ ಪರಿಶ್ರಮ ಮಾಡಲು ನಿಮಗೆ ಸೂಚಿಸಲಾಗಿದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ತಂತ್ರದ ಪ್ರಕಾರ ಅಳವಡಿಸಿಕೊಳ್ಳಲು ನೀವು ವಿಫಲರಾಗುತ್ತೀರಿ. ಅದು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ.

ಕೆಲಸದ ಸ್ಥಳದಲ್ಲಿ ಉಂಟಾಗುತ್ತಿದ್ದ ಈ ಪರಿಸ್ಥಿತಿಗಳ ಕಾರಣದಿಂದಾಗಿ ನಿಮ್ಮ ಜೀವನ ಶೈಲಿ ಪ್ರಭಾವಿತವಾಗುತ್ತದೆ. ವಿಶೇಷವಾಗಿ ನಿಮ್ಮ ಮಲಗುವ ವಿಧಾನದ ಅಡ್ಡಪರಿಣಾಮಗಳು ನಿಮಗೆ ಕೆಲವು ರೀತಿಯ ಕಾಯಿಲೆಗಳನ್ನು ಸಹ ನೀಡುತ್ತವೆ. ಅಂತಹ ಸಂದರ್ಭದಲ್ಲಿ ಸಾಧ್ಯವಾದಷ್ಟು ನಿಮ್ಮನ್ನು ಶಾಂತವಾಗಿರಿಸಿ ಎಂದು ಸೂಚಿಸಲಾಗಿದೆ. ಆದಾಗ್ಯೂ, ಬುಧ ಸಾಂಚಾರವು ಆಮದು-ರಫ್ತಿಗೆ ಸಂಬಂಧಿಸಿದ ವ್ಯಾಪಾರಸ್ಥರಿಗೆ ಉತ್ತಮವಾಗಿ ಕಂಡುಬರುತ್ತಿದೆ.

ಪ್ರೀತಿಯ ಸಂಬಂಧದಲ್ಲಿರುವ ಕುಂಭ ರಾಶಿಚಕ್ರದ ಸ್ಥಳೀಯರು ತಮ್ಮ ಪ್ರೀತಿಪಾತ್ರರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಸೂಚಿಸಲಾಗಿದೆ. ಏಕೆಂದರೆ ಈ ಸಮಯದಲ್ಲಿ ಅವರು ಆರೋಗ್ಯದ ಹಾನಿಯನ್ನು ಹೊಂದುವ ಸಾಧ್ಯತೆ ಇದೆ. ಇದು ನಿಮ್ಮ ಪ್ರೀತಿಯ ಸಂಬಂಧದ ಮೇಲೆ ಪರಿಣಾಮ ಬೀರಬಹುದು.

ಬುಧನ ವಿಶೇಷ ಅನುಗ್ರಹವನ್ನು ಪಡೆಯಲು ಬುಧವಾರದಂದು ಸಮುದ್ರಪಾಲದ ಮೂಲವನ್ನು ಹಸಿರು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಕುತ್ತಿಗೆಯಲ್ಲಿ ಧರಿಸಿ.


ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 799/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com