13 ಏಪ್ರಿಲ್, ಸೋಮವಾರ, ರಾತ್ರಿ 8 ಗಂಟೆ 14 ನಿಮಿಷಕ್ಕೆ ಸೂರ್ಯ ದೇವರು ತನ್ನ ಆಪ್ತ ಮಿತ್ರ ಮಂಗಳನ ಸ್ವಾಮಿತ್ವದ ಮೇಷ ರಾಶಿಯಲ್ಲಿ ಪ್ರವೇಶಿಸುತ್ತಾರೆ. ಇದು ಅಗ್ನಿ ಅಂಶದ ರಾಶಿಯಾಗಿದೆ. ಈ ರಾಶಿಯಲ್ಲಿ ಸೂರ್ಯ ದೇವ ತನ್ನ ಉನ್ನತ ಸ್ಥಾನದಲ್ಲಿರುತ್ತಾರೆ ಎಂದು ಪರಿಗಣಿಸಲಾಗಿದೆ. ಈ ರೀತಿಯಲ್ಲಿ ಅಗ್ನಿ ಅಂಶದ ಸೂರ್ಯ ಗ್ರಹವು ಅಗ್ನಿ ಅಂಶದ ಮೇಷ ರಾಶಿಯಲ್ಲಿ ಪ್ರವೇಶಿಸಲಿದೆ. ಇದರಿಂದ ಜೀವನದಲ್ಲಿ ಸಂತೋಷ ಮತ್ತು ಪ್ರಗತಿ ಬರುತ್ತದೆ ಮತ್ತು ಬೇಸಿಗೆ ಕಾಲದಲ್ಲಿ ಬೇಸಿಗೆ ಹೆಚ್ಚಾಗುತ್ತದೆ.
ನಡೆಯಿರಿ ಸೂರ್ಯ ಸಂಚಾರವು ಎಲ್ಲಾ ಹನ್ನೆರಡು ರಾಶಿಚಕ್ರಗಳ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ತಿಳಿಯೋಣ:
ಈ ರಾಶಿ ಭವಿಷ್ಯ ಚಂದ್ರ ರಾಶಿಯನ್ನು ಆಧರಿಸಿದೆ. ನಿಮ್ಮ ಚಂದ್ರ ರಾಶಿ ಯನ್ನು ತಿಳಿಯಿರಿ.
ನೀವು ಯಾವುದೇ ಎಂಜಿನೀರಿಂಗ್ ಅಥವಾ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರೆ, ಅದರಲ್ಲಿ ಯಶಸ್ವಿಯಾಗುವ ಸಂಪೂರ್ಣ ಸಾಧ್ಯತೆ ಇದೆ. ಪ್ರೀತಿ ಜೀವನದಲ್ಲಿ ಯಶಸ್ಸು ಪಡೆಯುತ್ತೀರಿ ಮತ್ತು ನಿಮ್ಮ ಪ್ರೀತಿಪಾತ್ರರು ಹೃದಯವನ್ನು ತೆರೆದು ತಮ್ಮ ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. ಅವರು ತಮ್ಮ ಪ್ರೀತಿಯನ್ನು ಸ್ವೀಕರಿಸುತ್ತಾರೆ. ಇದರಿಂದ ನಿಮಗೆ ಬಹಳ ಸಂತೋಷವಾಗುತ್ತದೆ. ಆದರೆ ಈ ಸಮಯದಲ್ಲಿ ನೀವು ಅಗತ್ಯಕ್ಕಿಂತ ಹೆಚ್ಚು ಅಭಿಮಾನಿಯಾಗಬಹುದು. ಆದ್ದರಿಂದ ಸ್ವಲ್ಪ ಎಚ್ಚರದಿಂದಿರಿ. ಈ ಅಹಂಕಾರದ ನೆರಳು ನಿಮ್ಮ ದಾಂಪತ್ಯ ಜೀವನದ ಮೇಲೆ ಪರಿಣಾಮ ಬೀರಬಹುದು. ನೀವು ವಿವಾಹಿತರಾಗಿದ್ದರೆ, ಈ ಸಂಚಾರವು ಧೈರ್ಯವಾಗಿರಲು ನಿಮ್ಮನ್ನು ಒತ್ತಾಯಿಸುತ್ತದೆ. ಏಕೆಂದರೆ ನಿಮ್ಮ ಅಹಂಕಾರದಿಂದ ನಿಮಗೆ ಹಾನಿಯಾಗುವ ಸಾಧ್ಯತೆ ಇದೆ.
ಪರಿಹಾರ - ನೀವು ನಿಯಮಿತವಾಗಿ ಶ್ರೀ ಆದಿತ್ಯ ಸ್ತ್ರೋತವನ್ನು ಪಠಿಸಬೇಕು.
ಆದಾಗ್ಯೂ ಈ ಸಮಯದಲ್ಲಿ ಧಾರ್ಮಿಕ ವೆಚ್ಚಗಳು ಹೆಚ್ಚಾಗುತ್ತವೆ. ಆದರೆ ಆ ವೆಚ್ಚಗಳು ಕೌಟುಂಬಿಕ ಅಗತ್ಯಗಳು, ದೇಶೀಯ ವಸ್ತುಗಳು, ಸಾಮಾಜಿಕ ಸೇವೆ ಮತ್ತು ಧಾರ್ಮಿಕ ಕಾರ್ಯಗಳ ಮೇಲೆ ಇರಬಹುದು. ಆದ್ದರಿಂದ ಈ ಖರ್ಚುಗಳಿಂದ ಆತ್ಮಿಕವಾಗಿ ನೆಮ್ಮದಿ ಸಿಗುತ್ತದೆ. ಈ ಸಾಗಣೆಯ ಪರಿಣಾಮದಿಂದಾಗಿ ನಿಮ್ಮ ವರ್ಗಾವಣೆಯಾಗುವ ಸಂಪೂರ್ಣ ಯೋಗವು ಕೂಡಹುದು ಆದರೆ ಈ ಯೋಗಗಳು ನಿಮಗಾಗಿ ಉತ್ತಮವಾಗಿರುತ್ತವೆ. ಆದ್ದರಿಂದ ನೀವು ತೊಂದರೆಕ್ಕೊಳಗಾಗುವ ಅಗತ್ಯವಿಲ್ಲ. ಈ ಸಮಯದಲ್ಲಿ ನಿಮ್ಮ ತಾಯಿಗೆ ಉತ್ತಮ ಲಾಭವಾಗುತ್ತದೆ ಮತ್ತು ಈ ಸಂಚಾರದಲ್ಲಿ ಅವರಿಗೆ ಸಮಾಜದಲ್ಲಿ ಗೌರವ ಸಿಗುತ್ತದೆ ಮತ್ತು ಅವರು ಎಲ್ಲಾದರೂ ಕೆಲಸದಲ್ಲಿ ತೊಡಗಿದ್ದರೆ ಅದ್ಭುತ ಲಾಭ ಪಡೆಯುತ್ತಾರೆ. ನಿಮ್ಮ ತಾಯಿ ಎಲ್ಲಾದರೂ ಉದ್ಯೋಗಕ್ಕಾಗಿ ಅನ್ವಯಿಸಿದ್ದರೆ, ಈ ಸಮಯದಲ್ಲಿ ಉತ್ತಮ ಉದ್ಯೋಗ ಸಿಗಬಹುದು.
ಪರಿಹಾರ - ಭಾನುವಾರದಂದು ಯಾವುದಾದರು ಗೋಶಾಲೆ ಅಥವಾ ದೇವಾಲಯದಲ್ಲಿ ಗೋಧಿ, ತಾಮ್ರ ಮತ್ತು ಬೆಲ್ಲದ ದಾನ ಮಾಡಿ.
ನೀವು ವ್ಯಾಪಾರದಲ್ಲಿ ತೊಡಗಿದ್ದರೆ, ಈ ಸಮಯದಲ್ಲಿ ಬಯಸುವ ಯಶಸ್ಸು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ ಮತ್ತು ನೀವು ಬಹಳಷ್ಟು ಹೆಸರುವಾಸಿಯಾಗುತ್ತೀರಿ. ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಪ್ರೀತಿ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಮತ್ತು ನಿಮ್ಮ ವರ್ತನೆ ಪ್ರೀತಿಪಾತ್ರರಿಗೆ ಇಷ್ಟವಾಗದಿರಬಹುದು. ಅವರಿಗೆ ನೀವು ಅಭಿಮಾನಿ ಅನಿಸಬಹುದು. ಅಂತಹ ಸಂದರ್ಭದಲ್ಲಿ ನೀವು ಖಂಡಿತವಾಗಿಯೂ ಕಾಳಜಿ ವಹಿಸಬೇಕು. ಈ ಸಮಯದಲ್ಲಿ ಸರ್ಕಾರಿ ವಲಯದಿಂದ ನಿಮಗೆ ಲಾಭವಾಗುವ ಸಾಧ್ಯತೆ ಇದೆ. ನಿಮ್ಮ ವಿರೋಧಿಗಳ ಮೇಲೆ ಪ್ರಾಬಲ್ಯ ಸಾಧಿಸಲು ನಿಮಗೆ ಸಾಧ್ಯವಾಗುತ್ತದೆ. ಇದರಿಂದ ನಿಮ್ಮ ಮನೋಬಲದಲ್ಲಿ ಹೆಚ್ಚಳವಾಗುತ್ತದೆ ಮತ್ತು ನಿಮ್ಮ ಸಿಲುಕಿಕೊಂಡಿರುವ ಕೆಲಸಗಳು ಪೂರ್ಣಗೊಳ್ಳಬಹುದು. ಕಿರಿಯ ಸಹೋದರ ಸಹೋದರಿಯರು ಸಹ ಸಂಪೂರ್ಣವಾಗಿ ನಿಮ್ಮನ್ನು ಬೆಂಬಲಿಸುತ್ತಾರೆ ಮತ್ತು ನಿಮ್ಮ ಸಂತೋಷವನ್ನು ಹೆಚ್ಚಿಸುವಲ್ಲಿ ಸಹ ಅವರು ನಿಮಗೆ ಸಹಾಯ ಮಾಡುತ್ತಾರೆ. ಆರ್ಥಿಕವಾಗಿ ಸಹ ನಿಮಗೆ ಸಹಾಯ ಮಾಡುತ್ತಾರೆ. ಈ ಸಮಯದಲ್ಲಿ ನೀವು ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ಫಲಿತಾಂಶಗಳನ್ನು ಪಡೆಯುತ್ತೀರಿ ಮತ್ತು ನಿಮ್ಮ ಗೌರವವು ಸಹ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನಿಮ್ಮ ಸಾಮಾಜಿಕ ವಲಯವು ಹೆಚ್ಚಾಗುತ್ತದೆ.
ಪರಿಹಾರ - ನೀವು ಪ್ರತಿದಿನ ನಿಯಮಿತವಾಗಿ 108 ಬಾರಿ ಗಾಯತ್ರಿ ಮಂತ್ರವನ್ನು ಜಪಿಸಬೇಕು.
ನಂತರ ಸಂಚಾರದ ಈ ಸಮಯದಲ್ಲಿ ನೀವು ನಿಮ್ಮ ಕುಟುಂಬದ ಬಗ್ಗೆಯೂ ಯೋಚಿಸುವಿರಿ. ಆದರೆ ಅವರಿಗೆ ಕಡಿಮೆ ಸಮಯ ನೀಡುವಿರಿ. ಎರಡನೇ ಮನೆಯ ಮಾಲೀಕ ಸೂರ್ಯ ದೇವ ನಿಮ್ಮ ಮನೆಯಲ್ಲಿ ಪ್ರವೇಶಿಸಿದಾಗ, ನೀವು ನಿಮ್ಮ ವ್ಯಾಪಾರಕ್ಕೆ ವಿಸ್ತಾರವನ್ನು ನೀಡುವಿರಿ ಮತ್ತು ನಿಮ್ಮ ಉಳಿತಾಯವನ್ನು ವ್ಯಾಪಾರದಲ್ಲಿ ಹೂಡಿಕೆ ಮಾಡಬಹುದು. ಈ ಸಮಯದಲ್ಲಿ ಪೂರ್ವಜರ ವ್ಯಾಪಾರದಲ್ಲಿ ಲಾಭವಾಗುವ ಸಾಧ್ಯತೆ ಇದೆ , ಸರ್ಕಾರಿ ವಲಯದಿಂದಲೂ ನಿಮಗೆ ಲಾಭವಾಗುತ್ತದೆ ಮತ್ತು ಯಾವುದೇ ವಾಹನ ಅಥವಾ ಭವನದಿಂದ ಸಂತೋಷ ಪಡೆಯುವಿರಿ. ಸರ್ಕಾರಿ ಉದ್ಯೋಗದಲ್ಲಿ ಕಾರ್ಯನಿರತರಾಗಿರುವವರಿಗೆ ಈ ಸಮಯದಲ್ಲಿ ಯಶಸ್ಸು ಸಿಗವಹುದು. ಈ ಸಮಯದಲ್ಲಿ ನಿಮ್ಮ ತಂದೆಯ ಆರೋಗ್ಯವು ಹದಗೆಡಬಹುದು.
ಪರಿಹಾರ - ನೀವು ಸೂರ್ಯ ದೇವರ ಮಂತ್ರ “ಓಂ ಗ್ರುಣಿ ಸೂರ್ಯಾಯ್ ನಮಃ “ ವನ್ನು ಜಪಿಸಬೇಕು.
ಈ ಸಂಚಾರದ ಸಮಯದಲ್ಲಿ ಯಾವುದಾದರು ತೀರ್ಥ ಸ್ಥಾನಕ್ಕೆ ಪ್ರಯಾಣಿಸಲು ಅವಕಾಶವನ್ನು ನೀವು ಪಡೆಯುತ್ತೀರಿ, ಇದರಿಂದ ನಿಮಗೆ ಮಾನಸಿಕ ಶಾಂತಿ ಸಿಗುತ್ತದೆ ಮತ್ತು ನೀವು ಸಂತೋಷ ಪಡುವಿರಿ. ಪ್ರಯಾಣಗಳಿಗೆ ಈ ಸಾಗಣೆಯು ಸಾಕಷ್ಟು ಉತ್ತಮವಾಗಿರಲಿದೆ ಮತ್ತು ದೂರಸ್ಥ ಸ್ಥಳಗಳಿಗೆ ಪ್ರಯಾಣಿಸಲು ಅವಕಾಶ ಪಡೆಯುತ್ತೀರಿ. ನಿರ್ಧಾರ ತೆಗೆದುಕೊಳ್ಳಲಾಗುವ ನಿಮ್ಮ ಸಾಮರ್ಥ್ಯವು ಉತ್ತಮವಾಗಿರುತ್ತದೆ ಮತ್ತು ನಿಮ್ಮ ಪರಿಶ್ರಮ ಬಲದ ಮೇಲೆ ಉತ್ತಮ ಲಾಭವನ್ನು ಗಳಿಸುವಿರಿ. ಈ ಸಂಚಾರದ ಸಮಯದಲ್ಲಿ ಉದ್ಯೋಗದಲ್ಲಿ ವರ್ಗಾವಣೆಯಾಗಬಹುದು. ನಿಮ್ಮನ್ನು ಎಲ್ಲಾದರೂ ಬೇರೆ ಸ್ಥಳಕ್ಕೆ ಕಳುಹಿಸಿ ಅಲ್ಲಿನ ಮುಖ್ಯಸ್ಥರನ್ನಾಗಿಸಬಹುದು. ವ್ಯಾಪಾರದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ಹೆಚ್ಚು ಅಪಾಯವನ್ನು ತೆಗೆದುಕೊಳ್ಳಲು ಸಿದ್ಧರಾಗಿರುತ್ತೀರಿ. ಆದರೆ ಆ ಅಪಾಯದಿಂದ ನಿಮಗೆ ಉತ್ತಮ ಲಾಭವಾಗುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ದೀರ್ಘಕಾಲದ ಯಾವುದೇ ರೋಗವನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ.
ಪರಿಹಾರ - ರಾತ್ರಿಯ ವೇಳೆಯಲ್ಲಿ ತಾಮ್ರದ ಪಾತ್ರದಲ್ಲಿ ನೀರು ತುಂಬಿಸಿ ತಮ್ಮ ತಲೆಯ ಪಕ್ಕದಲ್ಲಿಡಿ ಮತ್ತು ಮರುದಿನ ಬೆಳಿಗ್ಗೆ ಆ ನೀರು ಕುಡಿಯಿರಿ.
ಈ ಸಾಗುವಿಕೆಯ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಏಕೆಂದರೆ ನೀವು ಅನಾರೋಗ್ಯಕ್ಕೆ ಒಳಗಾಗಬಹುದು. ತೀವ್ರ ಜ್ವರ ಅಥವಾ ತಲೆ ನೋವು ಉಂಟಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ಕೆಲವು ಅನಿರೀಕ್ಷಿತ ಪ್ರವಾಸಗಳಿಗೆ ಪ್ರಯಾಣಿಸುವ ಸಂದರ್ಭವು ಉಂಟಾಗುತ್ತದೆ ಆದರೆ ನೀವು ಇದನ್ನು ತಪ್ಪಿಸಬೇಕು ಏಕೆಂದರೆ ಇದರಿಂದ ನಿಮ್ಮ ಅರೋಗ್ಯ ಹದಗೆಡುವ ಮಾತ್ರವಲ್ಲದೆ ನಿಮ್ಮ ಹಣಕಾಸು ಸಹ ವ್ಯರ್ಥವಾಗಬಹುದು.
ಮಾನಸಿಕವಾಗಿ ಒತ್ತಡವು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಬಹುದು ಮತ್ತು ಈ ಸಮಯದಲ್ಲಿ ನಿಮ್ಮ ತಂದೆಗೆ ಸಹ ಹಣಕಾಸಿನ ನಷ್ಟವಾಗಬಹುದು. ಅತ್ತೆಮನೆಯ ಕಡೆಯಿಂದ ನಿಮಗೆ ಆಹ್ವಾನ ಬರಬಹುದು ಮತ್ತು ಯಾವುದೇ ಉತ್ತಮ ಕೆಲಸದಲ್ಲಿ ನಿಮ್ಮನ್ನು ಕರೆಯಲಾಗಬಹುದು. ಈ ಸಮಯದಲ್ಲಿ ನಿಮ್ಮ ಧ್ವನಿಯಲ್ಲಿ ಹೆಮ್ಮೆ ಹೆಚ್ಚಾಗಬಹುದು ಆದ್ದರಿಂದ ನೀವು ಬಹಳ ಬುದ್ಧಿವಂತಿಕೆಯ ಮೂಲಕ ಮಾತನಾಡಬೆಕು. ಏಕೆಂದರೆ ಯಾವುದೇ ಮಾತು ದೊಡ್ಡದಾಗಬಹುದು ಮತ್ತು ಇದರಿಂದ ಪರಿಸ್ಥಿತಿ ಹದಗೆಡಬಹುದು. ನಿಮ್ಮ ಕೆಲವು ದೀರ್ಘಕಾಲದ ಯೋಜನೆಗಳು ಹೊರಬರಬಹುದು. ಇದರ ಬಗ್ಗೆ ನೀವು ಸ್ವಲ್ಪ ಜಾಗರೂಕರಾಗಿರಬೇಕು, ಏಕೆಂದರೆ ನಿಮ್ಮ ವಿರೋಧಿಗಳು ಅದರ ಲಾಭವನ್ನು ಪಡೆದುಕೊಳ್ಳಲು ಪ್ರಯತ್ನಿಸಬಹುದು . ಈ ಸಮಯದಲ್ಲಿ ನೀವು ನಿಮ್ಮ ಸಾಲಗಳಿಂದ ಮುಕ್ತರಾಗಬಹುದು. ಈ ಸಂಚಾರದ ಉತ್ತಮ ಲಾಭವಾಗಬಹುದು.
ಪರಿಹಾರ - ಪ್ರತಿದಿನದ ನಿಯಮಿತವಾಗಿ ಭಗವಂತ ಶ್ರೀ ಕೃಷ್ಣ ದೇವರನ್ನು ಆರಾಧಿಸಿ ಮತ್ತು ಅವರಿಗೆ ಶ್ರೀಗಂಧವನ್ನು ಅರ್ಪಿಸಿ.
ಹಿರಿಯ ಸಹೋದರ ಸಹೋದರಿಯರು ನಿಮ್ಮನ್ನು ಬೆಂಬಲಿಸುತ್ತಾರೆ. ಅದೇ ಸಮಯದಲ್ಲಿ ಮತ್ತೊಂದೆಡೆ, ನೀವು ಉದ್ಯೋಗದಲ್ಲಿದ್ದರೆ, ಈ ಸಂಚಾರದ ಪರಿಣಾಮದಿಂದಾಗಿ ಉತ್ತಮ ಸ್ಥಾನವನ್ನು ಪಡೆಯಬಹುದು. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ ಆದರೂ ಯಾವುದೇ ರೀತಿಯ ಸಣ್ಣ ಪುಟ್ಟ ದೈಹಿಕ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಈ ಸಾಗುವಿಕೆಯ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಆದಾಯದ ಮೂಲಗಳನ್ನು ನೀವು ಪಡೆಯಬಹುದು. ನಿಮ್ಮ ವ್ಯಾಪಾರವು ಹೆಚ್ಚಾಗುತ್ತದೆ ಮತ್ತು ಈ ರಾಶಿಚಕ್ರದ ಕೆಲವು ಸ್ಥಳೀಯರ ಮದುವೆಯಾಗುವ ಸಂಪೂರ್ಣ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿಗೆ ಲಾಭವಾಗುತ್ತದೆ ಮತ್ತು ನಿಮ್ಮ ಸಾಮಾಜಿಕ ವಲಯ ಹೆಚ್ಚಾಗುತ್ತದೆ. ನಿಮ್ಮ ಸಂಪರ್ಕಗಳು ನಿಮ್ಮ ಕೆಲಸಕ್ಕೆ ಬರುತ್ತವೆ ಮತ್ತು ಅವುಗಳಿಂದ ನಿಮಗೆ ಲಾಭವಾಗಬಹುದು.
ಪರಿಹಾರ - ಬೆಳಿಗ್ಗೆ ಸೂರ್ಯೋದಯಕ್ಕಿಂತ ಮೊದಲು ಎದ್ದು ಕೆಂಪು ಬಣ್ಣದ ಹೂವುಗಳ ಸಸ್ಯಗಳಿಗೆ ಮತ್ತು ಮರಗಳ ನೀರಾವರಿ ಮಾಡಿ.
ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸಬೇಕು ಏಕೆಂದರೆ ಆರನೇ ಮನೆಯಲ್ಲಿರುವ ಸೂರ್ಯ ದೇವರು ಇದ್ದಕ್ಕಿದ್ದಂತೆ ಅನೇಕ ಅರೋಗ್ಯ ಸಮಸ್ಯೆಗಳನ್ನು ನೀಡಬಹುದು. ಈ ಸಮಯದಲ್ಲಿ ನಿಮ್ಮ ತಂದೆಯ ಅದೃಷ್ಟವು ಅವರನ್ನು ಬೆಂಬಲಿಸುತ್ತದೆ ಮತ್ತು ಅವರು ಗೌರವವನ್ನು ಪಡೆಯುತ್ತಾರೆ. ಇದಲ್ಲದೆ ದೂರಸ್ಥ ಸ್ಥಳಕ್ಕೆ ಪ್ರಯಾಣಿಸುವ ಯೋಗವಿದೆ. ಆದಾಗ್ಯೂ ಈ ಪ್ರವಾಸಗಳು ಹೆಚ್ಚು ಅನುಕೂಲಕರವಾಗಿರುವುದಿಲ್ಲ ಮತ್ತು ನೀವು ಸ್ವಲ್ಪ ಜಾಗರೂಕರಾಗಿರಬೇಕು. ಏಕೆಂದರೆ ಇದರಿಂದ ನೀವು ದೈಹಿಕ ಸಮಸ್ಯೆಗಳೊಂದಿಗೆ ಆರ್ಥಿಕ ಸಮಸ್ಯೆಗಳನ್ನು ಸಹ ಎದುರಿಸಬೇಕಾಗಬಹುದು. ತಾಯಿಮನೆ ಕಡೆಯವರಿಂದ ಯಾವುದಾದರು ಸಂತೋಷದ ಸುದ್ಧಿಯನ್ನು ಪಡೆಯಬಹದು ಮತ್ತು ಯಾವುದೇ ಸರ್ಕಾರಿ ವಿಷಯದಲ್ಲಿ ನೀವು ಯಶಸ್ವಿಯಾಗಬಹುದು. ಕಾನೂನು ಪ್ರಕರಣದಲ್ಲಿ ಯಾವುದಾದರು ವಿಷಯವಿದ್ದರೆ, ಅದರ ನಿರ್ಧಾರವು ನಿಮ್ಮ ಪರವಾಗಿ ಬರುವ ಕಾರಣದಿಂದಾಗಿ ನಿಮಗೆ ಲಾಭವಾಗುತ್ತದೆ.
ಪರಿಹಾರ - ಭಾನುವಾದ ಬೆಳಿಗ್ಗೆ ತಮ್ಮ ಮಣಿಕಟ್ಟಿನ ಮೇಲೆ ಮೌಲಿ ಅಂದರೆ ಕೆಂಪು ದಾರವನ್ನು ಆರು ಬಾರಿ ಸುತ್ತಿ ಕಟ್ಟಿ.
ನಿಮ್ಮ ಜೀವನ ಸಂಗಾತಿ ಯಾವುದೇ ಕೆಲಸದಲ್ಲಿ ತೊಡಗಿದ್ದರೆ ಈ ಸಮಯದಲ್ಲಿ ಅವರು ಕೂಡ ಲಾಭ ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಈ ಸಂಚಾರವು ನಿಮ್ಮ ಪ್ರೀತಿ ಜೀವನಕ್ಕೆ ಸ್ವಲ್ಪ ದುರ್ಬಲವಾಗಿರಬಹುದು ಏಕೆಂದರೆ ಈ ಸಮಯದಲ್ಲಿ ಪ್ರೀತಿಪಾತ್ರರು ಯಾವುದೇ ಅಹಂ ಭಾವನೆಯಿಂದ ನಿಮ್ಮನ್ನು ಏನಾದರೂ ಅನ್ನಬಹುದು. ಅಂತಹ ಸಂದರ್ಭದಲ್ಲಿ ಸಂಬಂಧವನ್ನು ಕಾಪಾಡಿಕೊಳ್ಳಲು ತಾಳ್ಮೆಯಿಂದಿರಬೇಕು. ಇದಲ್ಲದೆ ದೂರಸ್ಥ ಪ್ರಯಾಣಗಳ ಮೂಲಕ ನಿಮಗೆ ಉತ್ತಮ ಲಾಭವಾಗಬಹುದು. ನೀವು ವಿಧ್ಯಾರ್ಥಿಯಾಗಿದ್ದರೆ, ಶಿಕ್ಷಣದ ಕ್ಷೇತ್ರದಲ್ಲಿ ರೆಕಾರ್ಡ್ ದಾಖಲೆ ಮಾಡುವ ಸಮಯ ಬಂದಿದೆ. ಪ್ರಶ್ರಮವನ್ನು ಮುಂದುವರಿಸಿ ಮತ್ತು ನಿಮ್ಮ ಗುರಿಯ ಕಡೆಗೆ ಮಾತ್ರ ಗಮನ ಹರಿಸಿ. ನೀವು ಎಲ್ಲಿಂದಾದರೂ ಲೋನ್ ಅಥವಾ ಸಾಲ ತೆಗೆದುಕೊಂಡಿದ್ದರೆ ಈ ಸಮಯದಲ್ಲಿ ಅದರಿಂದ ಮುಕ್ತರಾಗಬಹುದು. ಖಂಡಿತವಾಗಿಯೂ ಪ್ರಯತ್ನಿಸಿ. ಹಿರಿಯ ಅಧಿಕಾರಿಗಳೊಂದಿಗಿನ ನಿಮ್ಮ ಸಂಬಂಧವು ಉತ್ತಮಗೊಳ್ಳುತ್ತದೆ ಮತ್ತುಈ ಸಮಯದಲ್ಲಿ ನಿಮ್ಮ ಉದ್ಯೋಗದಲ್ಲಿ ಯಾವುದೇ ಉತ್ತಮ ಸ್ಟಳಕ್ಕೆ ನಿಮ್ಮ ವರ್ಗಾವಣೆಯಾಗಬಹುದು.
ಪರಿಹಾರ - ಭಾನುವಾರದಂದು ಕೆಂಪು ಹಸುವಿಗೆ ಮಧ್ಯಾಹ್ನದ ಸಮಯದಲ್ಲಿ ಎರಡು ಕೈಯಲ್ಲಿ ತುಂಬಿಸಿ ಗೋಧಿಯನ್ನು ತಿನ್ನಿಸಿ.
ಈ ಸಮಯದಲ್ಲಿ ನಿಮಗೆ ಪೂರ್ವಜರ ಆಸ್ತಿ ಸಿಗುವ ಸಂಪೂರ್ಣ ಸಾಧ್ಯತೆ ಇದೆ ಮತ್ತು ಸರ್ಕಾರಿ ಕ್ಷೇತ್ರದಿಂದಲೂ ಲಾಭ ಪಡೆಯುತ್ತೀರಿ. ನೀವು ಉದ್ಯೋಗದಲ್ಲಿದ್ದರೆ, ಅದರಲ್ಲಿ ಸಂಬಳ ಹೆಚ್ಚಾಗಬಹುದು ಮತ್ತು ವ್ಯಾಪಾರದಲ್ಲಿ ತೊಡಗಿದ್ದರೆ ಅದರಲ್ಲಿ ಕೂಡ ಸಮಯ ಸಂತೋಷವಾಗಿರುತ್ತದೆ, ಆದರೆ ಯಾವುದೇ ವಾಹನ ಅಪಘಾತದ ಕಾರಣದಿಂದಾಗಿ ನಿಮಗೆ ಗಾಯವಾಗುವ ಸಾಧ್ಯತೆ ಇದೆ ಆದ್ದರಿಂದ ಬಹಳ ಜಾಗರೂಕರಾಗಿರಬೇಕು. ಈ ಸಮಯದಲ್ಲಿ ತಾಯಿಯ ಆರೋಗ್ಯವು ಹದಗೆಡುತ್ತದೆ ಮತ್ತು ಅವರು ಅನಾರೋಗ್ಯದ ಕಾರಣದಿಂದಾಗಿ ತೊಂದರೆಕ್ಕೊಳಗಾಗಬಹುದು. ನೀವು ಸರ್ಕಾರಿ ಕ್ಷೇತ್ರದಲ್ಲಿ ಉದ್ಯೋಗಲ್ಲಿದ್ದರೆ, ಸರ್ಕಾರಿ ವಾಹನ ಮತ್ತು ಮನೆಯ ಸಂತೋಷವನ್ನು ಪಡೆಯಬಹುದು. ಇದ್ದಕ್ಕಿದ್ದಂತೆ ನಿಮ್ಮ ಸುತ್ತಲಿನ ವಾತಾವರಣವು ಸಕಾರಾತ್ಮಕವಾಗುತ್ತದೆ ಮತ್ತು ಈ ಬದಲಾವಣೆ ನಿಮಗೆ ಇಷ್ಟವಾಗುತ್ತದೆ. ಹಿರಿಯ ಅಧಿಕಾರಿಗಳೊಂದಿಗಿನ ಉತ್ತಮ ಸಂಬಂಧದ ಲಾಭವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಭಾಗವು ಬಲಗೊಳ್ಳುತ್ತದೆ.
ಪರಿಹಾರ - ನಿಮ್ಮ ಪೋಷಕರನ್ನು ಗೌರವಿಸಿ ಮತ್ತು ಬೆಳಿಗ್ಗೆ ಬೇಗ ಎದ್ದೇಳುವ ಅಭ್ಯಾಸವನ್ನು ಅಳವಡಿಸಿಕೊಳ್ಳಿ.
ನಿಮ್ಮ ಪ್ರಯತ್ನಗಳಿಗೆ ಯಶಸ್ಸು ನೀಡುತ್ತದೆ ಮತ್ತು ಜೀವನ ಸಂಗಾತಿಯ ಅದೃಷ್ಟ ಕೂಡ ನಿಮ್ಮ ಅದೃಷ್ಟದಲ್ಲಿ ಬೆಳವಣಿಗೆಗೆ ಕಾರಣವಾಗುತ್ತದೆ. ಇದರಿಂದ ನೀವಿಬ್ಬರು ತುಂಬಾ ಉತ್ಸುಕರಾಗಿರುತ್ತೀರಿ. ಈ ಸಾಗುವಿಕೆಯಲ್ಲಿ ಕೆಲವು ಸಣ್ಣ ಪುಟ್ಟ ಪ್ರವಾಸಗಳ ಅವಕಾಶವನ್ನು ಪಡೆಯುತ್ತೀರಿ ಮತ್ತು ಈ ಪ್ರವಾಸಗಳು ನಿಮ್ಮ ಹಣಕಾಸು ಮತ್ತು ಶಕ್ತಿಯನ್ನು ಹೆಚ್ಚಿಸುತ್ತವೆ. ನೀವು ಕೆಲವು ಹೊಸ ವ್ಯಕ್ತಿಗಳನ್ನು ಭೇಟಿಯಾಗಬಹುದು, ಇವರು ನಿಮ್ಮ ವ್ಯಾಪಾರಕ್ಕೆ ಹೊಸ ದಿಕ್ಕು ನೀಡುವಲ್ಲಿ ನಿಮಗೆ ಸಹಾಯ ಮಾಡುತ್ತಾರೆ. ಈ ಸಮಯದಲ್ಲಿ ನಿಮ್ಮ ವ್ಯಾಪಾರ ಬೆಳೆಯುತ್ತದೆ. ಇದಲ್ಲದೆ ಈ ಸಮಯವೂ ನಿಮ್ಮ ತಾಯಿಗಾಗಿ ಸ್ವಲ್ಪ ದುರ್ಬಲವಾಗಿರುತ್ತದೆ. ಆದ್ದರಿಂದ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಈ ಸಮಯದಲ್ಲಿ ನಿಮ್ಮ ಸಾಮಾಜಿಕ ಚಿತ್ರವೂ ಬಲಗೊಳ್ಳುತ್ತದೆ.
ಪರಿಹಾರ - ಭಾನುವಾರದಂದು ತಾಮ್ರದ ಪಾತ್ರದಲ್ಲಿ ನೀರು ತುಂಬಿ ಅದರಲ್ಲಿ ಕೆಂಪು ಶ್ರೀಗಂಧವನ್ನು ಸೇರಿಸಿ ಆ ನೀರನ್ನು ಸೂರ್ಯ ದೇವರಿಗೆ ಅರ್ಪಿಸಿ.
ಆದಾಗ್ಯೂ, ಯಾವುದೇ ವಾದ ವಿವಾದ ಅಥವಾ ಕಾನೂನು ಪ್ರಕರಣದಿಂದ ಲಾಭವಾಗುತ್ತದೆ ಮತ್ತು ನಿಮ್ಮ ಹಣಕಾಸಿನ ಪರಿಸ್ಥಿತಿ ಬಲಗೊಳ್ಳುತ್ತದೆ. ಆರ್ಥಿಕವಾಗಿ ನೀವು ಬಲಗೊಳ್ಳುತ್ತಿರಿ ಮತ್ತು ತಾಯಿ ಕಡೆಯ ಜನರ ಮೂಲಕ ಒಳ್ಳೆಯ ಸುದ್ಧಿಯನ್ನು ಪಡೆಯುತ್ತೀರಿ ಮತ್ತು ಇದರಿಂದಲೂ ನಿಮಗೆ ಲಾಭವಾಗುತ್ತದೆ. ನೀವು ತುಂಬಾ ಸಮಯದಿಂದ ಕಾಯುತ್ತಿದ್ದ ಲೋನ್ ಅನ್ನು ಈಗ ಪಡೆಯುವ ಕಾರಣದಿಂದಾಗಿ ಸಂತೋಷ ಪಡುತ್ತೀರಿ, ಇದರಿಂದ ಸಿಲುಕಿಕೊಂಡಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಈ ಸಮಯದಲ್ಲಿ ನಿಮ್ಮ ಕುಟುಂಬಕ್ಕೆ ಯಾವುದೇ ರೀತಿಯ ಸಾಮಾಜಿಕ ಲಾಭವಾಗುತ್ತದೆ ಮತ್ತು ಸಮಾಜದ ಜನರು ನಿಮ್ಮ ಕುಟುಂಬದ ಉದಾಹರಣೆ ನೀಡುತ್ತಾರೆ. ನೀವು ವಿಧ್ಯಾರ್ಥಿಯಾಗಿದ್ದರೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿದ್ದರೆ, ಅದರಲ್ಲಿ ಅದ್ಭುತ ಯಶಸ್ಸು ಪಡೆಯುತ್ತೀರಿ. ನಿಮ್ಮ ಗುರಿಯ ಬಗ್ಗೆ ಗಮನ ಹರಿಸಿ.
ಪರಿಹಾರ - ಸ್ನಾನದ ನೀರಿನಲ್ಲಿ ಕೆಂಪು ಶ್ರೀಗಂಧವನ್ನು ಸೇರಿಸಿ ಸ್ನಾನ ಮಾಡಿ.
ರತ್ನದ ಕಲ್ಲು, ರುದ್ರಾಕ್ಷದೊಂದಿಗೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಕ್ಲಿಕ್ ಮಾಡಿ: ಆಸ್ಟ್ರೋಸೇಜ್ ಆನ್ಲೈನ್ ಶಾಪಿಂಗ್ ಸ್ಟೋರ್