ಶನಿಯು ಶಿಸ್ತುಬದ್ಧ ಮತ್ತು ನ್ಯಾಯಯುತ ಗ್ರಹವಾಗಿದೆ. ಒಬ್ಬ ಶಿಕ್ಷಕನು ನಮ್ಮ ಶಕ್ತಿಯನ್ನು ಅರ್ಥಮಾಡಿಕೊಂಡು ನಮ್ಮನ್ನು ಸರಿಯಾದ ದಾರಿಯಲ್ಲಿ ಸಾಗಿಸಲು ಪ್ರಯತ್ನಿಸುತ್ತಾನೆ ಮತ್ತು ತಪ್ಪು ಮಾಡಿದರೆ ಶಿಕ್ಸಿಸುತ್ತ್ತಾನೆ ಆ ರೀತಿ ಈ ಶನಿಯು ಸಹ ಶಿಸ್ತಿಯಲ್ಲಿ ಉಳಿದು ನಮ್ಮನ್ನು ನಮ್ಮ ಮಿತಿಗೆ ಬಂಧಿಸುತ್ತಾನೆ. ಮಕರ ರಾಶಿಚಕ್ರದಲ್ಲಿ ಶನಿಯ ಆಗಮನದಿಂದಾಗಿ, ಪ್ರಯತ್ನಗಳಿಂದ ಮಾತ್ರ ನಮಗೆ ಯಶಸ್ಸು ಮತ್ತು ಲಾಭ ಸಿಗುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ನಮ್ಮ ಭವಿಷ್ಯಕ್ಕಾಗಿ ಸರಿಯಾದ ಯೋಜನೆಗಳನ್ನು ರೂಪಿಸುವ ಮೂಲಕ ನಾವು ನಮ್ಮ ಅಡಿಪಾಯವನ್ನು ಬಲಪಡಿಸುವ ಸಮಯ ಇದು. ಮಕರ ರಾಶಿಚಕ್ರದಲ್ಲಿ ಶನಿಯ ಸಾಗಣೆಯಿಂದಾಗಿ, ನಾವು ನಮ್ಮ ಗುರಿಯ ಮೇಲೆ ನಿಗಾ ಇಡಬೇಕು, ಇದರಿಂದ ನಾವು ಬಲವಾದ ಫಲಿತಾಂಶಗಳನ್ನು ತಲುಪಬಹುದು. ಶನಿಯ ಸಾಗಣೆ 2020 ರಲ್ಲಿ ನಿಮ್ಮ ರಾಶಿಚಕ್ರ ಚಿಹ್ನೆಗಳ ಪ್ರಕಾರ ನಿಮ್ಮ ವ್ಯವಹಾರ, ಉದ್ಯೋಗ, ಮದುವೆ, ಪ್ರೀತಿ, ಮಕ್ಕಳು, ಶಿಕ್ಷಣ ಮತ್ತು ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯೋಣ.
ಮೇಷ ರಾಶಿಚಕ್ರದಲ್ಲಿ ಶನಿ ಹತ್ತನೇ ಮತ್ತು ಹನ್ನೊಂದನೇ ಮನೆಗಳ ಮಾಲೀಕನಾಗಿ ರಾಶಿಚಕ್ರದಿಂದ ಹತ್ತನೇ ಮನೆಯಲ್ಲಿ ಸಾಗಾಣಿಸುತ್ತಾನೆ. ಹತ್ತನೇ ಮನೆ ಕರ್ಮದ ಮನೆ ಮತ್ತು ಶನಿಯು ಸಹ ಕರ್ಮದ ಸ್ವಾಮಿ. ಈ ಸಾಗಣೆಯಲ್ಲಿ ನಿಮ್ಮ ಪರಿಶ್ರಮ ಮತ್ತು ಸಂಘರ್ಷತುಂಬಾ ಹೆಚ್ಚಾಗುತ್ತದೆ. ಹೊಸ ಕೆಲಸದ ಬಗ್ಗೆ ಯೋಚಿಸುತ್ತಿದ್ದರೆ ಏಪ್ರಿಲ್ ವರೆಗೆ ಪ್ರಾರಂಭಿಸಿ ಏಕೆಂದರೆ 11 ಮೇ ಇಂದ ಶನಿಯ ವಕ್ರತೆಯ ಕಾರಣದಿಂದಾಗಿ ಹೊಸ ಕೆಲಸಗಳಲ್ಲಿ ಅಡಚಣೆಗಳು ಬರಬಹುದು ಮತ್ತು ನೀವು ನಿರೀಕ್ಷಿಸುತ್ತಿದ್ದ ಲಾಭವು ಸಮಯಕ್ಕೆ ಲಭ್ಯವಿರುವುದಿಲ್ಲ. ನಿಮ್ಮ ಆರೋಗ್ಯಕ್ಕೆ ಅನುಗುಣವಾಗಿ ಈ ವರ್ಷ ಸಾಮಾನ್ಯವಾಗಿರುತ್ತದೆ. ಯಾವುದೇ ಚರ್ಮದ ಕಾಯಿಲೆ ಕಿರಿಕಿರಿ ಉಂಟುಮಾಡುತ್ತದೆ, ಆದ್ದರಿಂದ ಅಸಡ್ಡೆ ಮಾಡಬೇಡಿ. ಶನಿಯ ಶಕ್ತಿಯುತವಾದ ಅತಿಕ್ರಮಣದಿಂದಾಗಿ ನಿಮ್ಮಲ್ಲಿ ಉತ್ಸಾಹದ ಕೊರತೆಯಿಲ್ಲ ಮತ್ತು ನೀವು ಯಾವುದೇ ಕೆಲಸವನ್ನು ಹೆದರಿಸುವಿರಿ. ಪೋಷಕರ ಬೆಂಬಲವು ಸಂಪೂರ್ಣ ಬಲದಿಂದ ಉಳಿಯುತ್ತದೆ ಮತ್ತು ನೀವು ಅವರೊಂದಿಗೆ ಧಾರ್ಮಿಕ ಪ್ರಯಾಣಕ್ಕೆ ಹೋಗಬಹುದು. ಮನೆಗೆ ಸಂಬಂಧಿಸಿದ ಯಾವುದೇ ಕೆಲಸದಲ್ಲಿ ಹಣವನ್ನು ಖರ್ಚು ಮಾಡಬಹುದು ಮತ್ತು ನಿಮ್ಮ ಸ್ವತಃ ಮನೆಯ ಕನಸು ಈ ಶನಿಯ ಸಾಗಣೆಯಲ್ಲಿ ಯಶಸ್ವಿಯಾಗುತ್ತದೆ.
ಶನಿ ಸಂಚಾರದ ಪರಿಹಾರ: ನೀವು ಮಹಾರಾಜ ದಶರಥ ಕೃತ ನೀಲ ಶನಿ ಸ್ತ್ರೋತವನ್ನು ಪಠಿಸಬೇಕು ಮತ್ತು ಶನಿವಾರದ ದಿನದಂದು ಸಂಜೆಯ ವೇಳೆ ಅರಳಿ ಮರ ಬುಡದಲ್ಲಿ ಸಾಸ್ವೆ ಎಣ್ಣೆಯ ದೀಪವನ್ನು ಬೆಳಗಿಸಬೇಕು.
ವೃಷಭ ರಾಶಿಚಕ್ರದಲ್ಲಿ ಶನಿಯು ಒಂಬತ್ತನೇ ಮತ್ತು ಹತ್ತನೇ ಮನೆಗಳ ಮಾಲೀಕನಾಗಿ ವೃಷಭ ರಾಶಿಚಕ್ರದಿಂದ ಒಂಬತ್ತನೇ ಮನೆಯಲ್ಲೇ ಸಗಣಿಸುತ್ತಾನೆ . ಶನಿಯ ಅದೃಷ್ಟದ ಸ್ಥಳದಲ್ಲಿ ಸಾಗಣೆಯಿಂದಾಗಿ ತಂದೆಯೊಂದಿಗೆ ಕೆಲವು ವಿವಾದಗಳು ಉಂಟಾಗಬಹುದು. ನೀವು ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಕೆಲಸದ ಸ್ಥಳದಲ್ಲಿ ಹೆಚ್ಚಿನ ಶ್ರಮದ ನಂತರ ಲಾಭದ ಸಾಧ್ಯತೆ ಕಡಿಮೆ ಕಂಡುಬರುತ್ತಿದೆ. ನೀವು ತಾಳ್ಮೆ ಮತ್ತು ಧೈರ್ಯದಿಂದ ಕೆಲಸ ಮಾಡಿದರೆ ಉತ್ತಮವಾಗಿರುತ್ತದೆ. ಬಡ್ತಿಯ ಬಗ್ಗೆ ಬಾಯಾಸುತ್ತಿದ್ದರೆ, ಶನಿಯ ಸಾಗಣೆಯು ನಿಮ್ಮನ್ನು ಹೆಚ್ಚು ಸಮಯ ಕಾಯುವಂತೆ ಮಾಡುತ್ತದೆ. ಹೊಸ ಉದ್ಯೋಗಕ್ಕಾಗಿ ವರ್ಷದ ಆರಂಭವು ಉತ್ತಮವಾಗಲಿದೆ. ವರ್ಷದ ಮಧ್ಯದಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ಮಾಡಬೇಡಿ. ಈ ವರ್ಷ, ಸೋಮಾರಿತನವನ್ನು ನಿಮ್ಮಿಂದ ದೂರವಿಡಿ, ಇಲ್ಲದಿದ್ದರೆ ಕೆಲವು ಪ್ರಮುಖ ಕಾರ್ಯಗಳನ್ನು ನಾಳೆ ಕೆಲಸವನ್ನು ಮುಂದೂಡುವ ಅಭ್ಯಾಸದಿಂದ ಬಿಡಲಾಗುತ್ತದೆ. ರಾಹುವಿನ ಧ್ವನಿಯ ಮನೆಯಲ್ಲಿ ಸಾಗಾಣಿಸುವುದರಿಂದ, ನಿಮ್ಮ ಭಾಷಣವನ್ನು ನೀವು ಬಹಳ ಚಿಂತನಶೀಲವಾಗಿ ಬಳಸಬೇಕಾಗುತ್ತದೆ ಮತ್ತು ನೀವು ಸಮಯಕ್ಕೆ ಪೂರೈಸಲು ಸಾಧ್ಯವಿಲ್ಲದ ಯಾವುದೇ ಭರವಸೆಯನ್ನು ಮಾಡಬೇಡಿ.
ಶನಿ ಸಂಚಾರದ ಪರಿಹಾರ: ನೀವು ವಿಶೇಷವಾಗಿ ಉತ್ತಮ ಗುಣಮಟ್ಟದ್ ನೀಲಮಣಿ ರತ್ನ ವನ್ನು ಶನಿವಾರದಂದು ಮಧ್ಯದ ಬೆರಳಿನಲ್ಲಿ ಪಂಚಧಾತು ಅಥವಾ ಅಷ್ಟಧಾತು ಉಂಗುರದಲ್ಲಿ ಧರಿಸಬೇಕು ಮತ್ತು ಶನಿ ಮಂತ್ರವನ್ನು ಜಪಿಸಬೇಕು.
ಮಿಥುನ ರಾಶಿಚಕ್ರದಲ್ಲಿ ಶನಿ ಎಂಟನೇ ಮತ್ತು ಒಂಬತ್ತನೇ ಮನೆಗಳ ಮಾಲೀಕನಾಗಿ ಮಿಥುನ ರಾಶಿಚಕ್ರದಿಂದ ಎಂಟನೇ ಮನೆಯಲ್ಲಿ ಸಾಗಾಣಿಸುತ್ತಿದ್ದಾನೆ. ಈ ವರ್ಷಶನಿಯ ಪರಿಣಾಮ ನಿಮ್ಮ ಕರ್ಮದ ಮನೆಯಲ್ಲಿ ಇರುತ್ತದೆ. ಈ ಕಾರಣದಿಂದಾಗಿ ಕೆಲಸದ ಸ್ಥಳದಲ್ಲಿ ವಿಳಂಬದೊಂದಿಗೆ ಅಡಚಣೆಯಾಗುತ್ತದೆ ಮತ್ತು ಎಂಟನೇ ಮನೆಯಲ್ಲಿ ಶನಿಯ ಪರಿಣಾಮವಿರುವುದರಿಂದಾಗಿ ಹಠಾತ್ ತೊಂದರೆಗಳನ್ನು ಎದುರಿಸಬೇಕಾಗಬಹುದು.ಆರ್ಥಿಕ ಪರಿಸ್ಥಿತಿಗಳು ಸಹ ಬಹಳ ದುರ್ಬಲವಾಗಿ ಕಂಡುಬರುತ್ತಿವೆ. ಮತ್ತು ಹಣಕ್ಕೆ ಸಂಬಂಧಿಸಿದ ಕೆಲಸದಲ್ಲಿ, ಈ ಶನಿಯು ಆದಾಯ ಮತ್ತು ಲಾಭದಲ್ಲಿ ಕಡಿಮೆ ಮಾಡುತ್ತಾನೆ. ಈ ವರ್ಷ ವಿದೇಶ ಪ್ರವಾಸಕ್ಕೆ ಉತ್ತಮವಾಗಿರುತ್ತದೆ ಮತ್ತು ಅಲ್ಲಿಗೆ ಸಂಪರ್ಕಗೊಂಡಿರುವ ಎಲ್ಲಾ ಕೆಲಸಗಳು ಸಮಯಕ್ಕೆ ಆಗುತ್ತವೆ. ಕಳೆದ ವರ್ಷದಲ್ಲಿ ಭೂಮಿಗೆ ಸಂಬಂಧಿಸಿದ ಯಾವುದೇ ವಿವಾದದಲ್ಲಿ ಇಂದುವರೆಗೂ ಹೋರಾಡುತ್ತಿದ್ದರೆ ಈ ವರ್ಷವೂ ಅಲ್ಲಿಂದಲೂ ಸಹ ಪರಿಹಾರವನ್ನು ಪಡಯುವ ಹಾಗೆ ಕಾಣುತ್ತಿದೆ. ಶನಿಯ ನಿಮ್ಮ ರಾಶಿಚಕ್ರದಿಂದ ಎಂಟನೇ ಮನೆಯಲ್ಲಿ ಹಾದುಹೋಗುವುದರಿಂದ, ಕೆಲವೊಮ್ಮೆ ನೀವು ಗೊಂದಲಕ್ಕೊಳಗಾಗುತ್ತೀರಿ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ಇದು ಸಂಭವಿಸಿದಲ್ಲಿ, ಹಿರಿಯರ ಸಲಹೆಯನ್ನು ಪಡೆಯಿರಿ ಅಥವಾ ಸ್ವಲ್ಪ ಸಮಯದವರೆಗೆ ಅದನ್ನು ಮುಂದೂಡಿ.
ಶನಿ ಸಂಚಾರದ ಪರಿಹಾರ: ನೀವು ಶನಿವಾರದ ಉಪವಾಸವನ್ನಿಡಬೇಕು ಅಥವಾ ಶನಿ ಪ್ರದೋಷದ ಉಪವಾಸವನ್ನು ಸಹ ನೀವು ಮಾಡಬಹುದು. ಇದಲ್ಲದೆ ಶನಿವಾರದ ದಿನದಂದು ಕಪ್ಪು ಬಟ್ಟೆ ಧರಿಸುವುದನ್ನು ತಪ್ಪಿಸಿ.
ಕರ್ಕ ರಾಶಿಚಕ್ರದಲ್ಲಿ ಶನಿಯು ಏಳನೇ ಮತ್ತು ಎಂಟನೇ ಮನೆಗಳ ಮಾಲೀಕನಾಗಿ ಕರ್ಕ ರಾಶಿಚಕ್ರದಿಂದ ಏಳನೇ ಮನೆಗೆ ಸಾಗಾಣಿಸುತ್ತಾನೆ. ಈ ವರ್ಷ ಸೋಮಾರಿತನವನ್ನು ದೂರವಿಡಿ, ಏಕೆಂದರೆ ಶನಿ ಸೋಮಾರಿ ಜನರಿಗೆ ಶುಭ ಫಲಿತಾಂಶಗಳನ್ನು ನೀಡುವುದಿಲ್ಲ. ವರ್ಷದ ಆರಂಭದಲ್ಲಿ, ನೀವು ಕಳೆದ ವರ್ಷದಲ್ಲಿ ತೆಗೆದುಕೊಳ್ಳಲು ಸಾಧ್ಯವಾಗದ ಕೆಲವು ಪ್ರಮುಖ ವ್ಯವಹಾರ ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ವಿದೇಶಗಳಿಗೆ ಸಂಬಂಧಿಸಿದ ಯೋಜನೆಗಳು ಸಹ ಇರುತ್ತವೆ, ಅದರಿಂದ ನೀವು ಪ್ರಯೋಜನವನ್ನು ಪಡೆಯುತ್ತೀರಿ. ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಮತ್ತು ವಾಹನವನ್ನು ಸಹ ಬಹಳ ಎಚ್ಚರಿಕೆಯಿಂದ ಓಡಿಸಬೇಕು. ಈ ವರ್ಷ ನೀವು ಮಹಿಳಾ ಸ್ನೇಹಿತರಿಂದ ಲಾಭ ಪಡೆಯುತ್ತೀರಿ. ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಅಲಂಕಾರಕ್ಕಾಗಿ ಹಣವನ್ನು ಖರ್ಚು ಮಾಡಬಹುದು, ಇದರಲ್ಲಿ ನಿಮ್ಮ ಕುಟುಂಬವು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ವರ್ಷದ ಮಧ್ಯದಲ್ಲಿ ನಿಮ್ಮ ಆರೋಗ್ಯದತ್ತ ಗಮನ ಹರಿಸಿ. ಯಾವುದೇ ದೀರ್ಘಕಾಲದ ಕಾಯಿಲೆ ಗೊಂದಲವನ್ನುಂಟು ಮಾಡುತ್ತದೆ. ಸ್ವಲ್ಪವೂ ಅಸಡ್ಡೆ ಮಾಡಬೇಡಿ. ಯಾರೊಂದಿಗೂ ವಿವಾದಗಳು ಇರಬಹುದು, ಅದನ್ನು ಪರಿಹರಿಸಲು ನಿಮಗೆ ಹಣ ಖರ್ಚಾಗಬಹುದು, ಜಾಗರೂಕರಾಗಿರಬೇಕು.
ಶನಿ ಸಂಚಾರದ ಪರಿಹಾರ: ನೀವು ಪ್ರತಿಯೊಂದು ಶನಿವಾರದಂದು ನಿಯಮಿತವಾಗಿ ಯಾವುದೇ ಲೋಹದ ಅಥವಾ ಮಣ್ಣಿನ ಬಟ್ಟಲಿನಲ್ಲಿ ಸಾಸ್ವೆ ಎಣ್ಣೆಯನ್ನು ತುಂಬಿಸಿದ ನಂತರ ಅದರಲ್ಲಿ ನಿಮ್ಮ ಮುಖವನ್ನು ನೋಡಿ ಅದನ್ನು ದಾನ ಮಾಡಬೇಕು ಅಂದರೆ ಛಾಯಾ ಪಾತ್ರದ ದಾನ ಮಾಡಬೇಕು ಮತ್ತು ಸಾಧ್ಯವಾದಷ್ಟು ಬಡವರಿಗೆ ಸಹಾಯ ಮಾಡಬೇಕು.
ಸಿಂಹ ರಾಶಿಚಕ್ರದಲ್ಲಿ ಶನಿಯು ಆರನೇ ಮತ್ತು ಏಳನೇ ಮನೆಗಳ ಮಾಲೀಕನಾಗಿ, ಸಿಂಹ ರಾಶಿಚಕ್ರದಿಂದ ಆರನೇ ಮನೆಗೆ ಸಾಗಾಣಿಸುತ್ತಾನೆ . ಈ ಶನಿ ನಿಮಗೆ ಈ ವರ್ಷ ಸರಿಯಾದ ದಿಕ್ಕಿನಲ್ಲಿ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ ಮತ್ತು ಮ್ಮ ಗುರಿಯನ್ನು ತಲುಪಲು ಸಹಾಯ ಮಾಡುತ್ತದೆ. ಈ ವರ್ಷ ನಿಮ್ಮ ಪರಿಶ್ರಮ ಮತ್ತು ಸಂಘರ್ಷ ಹೆಚ್ಚಾಗುತ್ತದೆ.ಇದರಿಂದ ನೀವು ತುಂಬಾ ಕಾರ್ಯನಿರತರಾಗಿರುತ್ತೀರಿ ಎಂಬುದನ್ನು ಅನುಭವಿಸುವಿರಿ. ಯಾವುದಾದರು ಸ್ಥಳದ ಮೇಲೆ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಬಹಳ ಬುದ್ಧಿವಂತಿಕೆಯಿಂದ ಮಾಡಿ ಇಲ್ಲದಿದ್ದರೆ ವರ್ಷದ ಮಧ್ಯದಲ್ಲಿ ಮೋಸ ಆಗಬಹುದು. ಉದ್ಯೋಗಕ್ಕೆ ಸಂಬಂಧಿಸಿದ ಯಾವುದೇ ಬದಲಾವಣೆಯನ್ನು ಮಾಡಲು ಯೋಚಿಸುತ್ತಿದ್ದರೆ, ವರ್ಷದ ಮಧಯ್ದಲ್ಲಿ ಮಾಡಬೇಡಿ. ಯಾವುದೇ ಉತ್ತಮ ಸ್ಥಾನವನ್ನು ಪಡೆಯಲು ಆತುರಪಡಬೇಡಿ. ತಾಳ್ಮೆಯಿಂದ ನಡೆದರೆ ಬಡ್ತಿ ಪಡೆಯಬಹುದು. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣುತ್ತಿವೆ. ಯಾವುದೇ ಹಳೆಯ ಕಾಯಿಲೆಯ ಕರಣದಿಂದಾಗಿ ಮಾನಸಿಕ ಒತ್ತಡ ಇರುತ್ತದೆ. ಯಾರೋ ಹಳೆಯ ಕೋಪಗೊಂಡಿರುವ ಸಹವರ್ತಿ ಹಿಂತಿರುಗಬಹುದು, ಇದರಿಂದ ನೀವು ಅವರನ್ನು ನಿಮ್ಮವರೆಂದು ಬಯಸುವಿರಿ.
ಶನಿ ಸಂಚಾರದ ಪರಿಹಾರ: ಪ್ರತಿ ಶನಿವಾರದಂದು ನಿಯಮಿತವಾಗಿ ಕಪ್ಪು ಉದ್ದಿನ ಬೇಳೆಯ ದಾನ ಮಾಡಬೇಕು ಮತ್ತು ಸಾಧ್ಯವಾದರೆ ಅರಳಿ ಮರದ ಬುಡದಲ್ಲಿ ಎಳ್ಳಿನ ಎಣ್ಣೆಯ ದೀಪವನ್ನು ಸಂಜೆಯ ವೇಳೆ ಬೆಳಗಿಸಬೇಕು ಮತ್ತು ಅರಳಿ ಮರದ ಸುತ್ತಲೂ ಸುತ್ತಬೇಕು.
ಕನ್ಯಾ ರಾಶಿಚಕ್ರದಲ್ಲಿ ಶನಿಯು ಐದನೇ ಮತ್ತು ಆರನೇ ಮನೆಗಳ ಮಾಲೀಕನಾಗಿ ಕನ್ಯಾ ರಾಶಿಚಕ್ರದಿಂದ ಐದನೇ ಮನೆಯಲ್ಲೇ ಸಾಗಾಣಿಸುತ್ತಿದ್ದಾನೆ. ಶನಿಯ ಈ ಸಾಗಣೆಯಿಂದ ಈ ವರ್ಷ ನೀವು ಸ್ಥಗಿತಗೊಂಡ ಶಿಕ್ಷಣವನ್ನು ಪುನರಾರಂಭಿಸಬಹುದು ಅಥವಾ ನೀವು ಯಾವುದೇ ಹೊಸ ಸಂಶೋಧನೆ ಹುಡುಕಬಹುದು. ಶನಿಯ ಪರಿಸ್ಥಿತಿ ನಿಮ್ಮ ಆಲೋಚನೆಯನ್ನು ಗಂಭೀರಗೊಳಿಸುತ್ತದೆ, ಇದರಿಂದ ನೀವು ಬಹಳ ಆಳವಾಗಿ ಹೋಗಿ , ಯಾವುದೊ ಪ್ರಮುಖ ನಿರ್ಧಾರ ತೆಗೆದುಕೊಳ್ಳಬಹುದು. ವ್ಯವಹಾರದ ಬಗ್ಗೆ ಈ ವರ್ಷ ಕೆಲವು ಗೊಂದಲಗಳು ಉಂಟಾಗುತ್ತವೆ ಮತ್ತು ಹೊಸ ಕೆಲಸದ ಬಗ್ಗೆ ಇಕ್ಕಟ್ಟು ಇರುತ್ತದೆ. ಸಹೋದ್ಯೋಗಿಗಳ ನಡುವೆ ವ್ಯತ್ಯಾಸಗಳು ಕೂಡ ಉಂಟಾಗಬಹುದು. ಸಿಲುಕಿಕೊಂಡಿರುವ ಯಾವುದಾದರು ಹಳೆಯ ಸರ್ಕಾರಿ ಕೆಲಸ ಈ ವರ್ಷ ಪೂರ್ಣಗೊಳ್ಳುತ್ತವೆ. ತಂದೆ ತಾಯಿಯ ಸಂಪೂರ್ಣವಾಗಿ ಬೆಂಬಲ ಪಡೆಯುತ್ತೀರಿ. ನಿಮ್ಮ ಹಣವನ್ನು ದುಬಾರಿ ಭೌತಿಕ ವಸ್ತುವಿಗೆ ಖರ್ಚು ಮಾಡಬಹುದು. ನೀವು ನಿಮ್ಮ ಮಹಿಳಾ ಗೆಳತಿಗಾಗಿ ಆಭರಣಗಳನ್ನು ಸಹ ಖರೀದಿಸಬಹುದು. ವಾಹನ ಮತ್ತು ಮನೆಗೆ ಸಂಬಂಧಿಸಿದ ವೆಚ್ಚಗಳಿಗೆ ವರ್ಷದ ಮಧ್ಯ ಭಾಗವು ಉತ್ತಮವಾಗಿಲ್ಲ.
ಶನಿ ಸಂಚಾರದ ಪರಿಹಾರ: ನೀವು ಶನಿ ಪ್ರದೋಷ ಉಪವಾಸವನ್ನಿಡಬೇಕು ಮತ್ತು ಶನಿವಾರದ ದಿನದಂದು ಸಾಸ್ವೆ ಎಣ್ಣೆಯಲ್ಲಿ ಐದು ಧಾನ್ಯಗಳು ಉದ್ದಿನ ಬೆಳೆಯನ್ನು ಹಾಕಿ ಅದರ ದೀಪವನ್ನು ಬೆಳಗಿಸಬೇಕು.
ತುಲಾ ರಾಶಿಚಕ್ರದಲ್ಲಿ ಶನಿಯು ನಾಲ್ಕನೇ ಮತ್ತು ಐದನೇ ಮನೆಗಳ ಮಾಲೀಕನಾಗಿ ತುಲಾ ರಾಶಿಚಕ್ರದಿಂದ ನಾಲ್ಕನೇ ಮನೆಗೆ ಸಾಗಣಿಸುತ್ತಾನೆ. ತುಲಾ ರಾಶಿಚಕ್ರದ ಜನರಿಗೆ ಈ ವರ್ಷ ಶನಿಯು ವ್ಯಾಪಾರ ಸಂಬಂಧಿತ ವಿಷಯಗಳಲ್ಲಿ ಹೊಸ ಅವಕಾಶಗಳನ್ನು ನೀಡುತ್ತಾನೆ . ಆದರೆ ಯಾವುದೇ ಪ್ರಕಾರದ ಅಹಂಕಾರವು ನಿಮ್ಮ ನಷ್ಟಕ್ಕೆ ಕಾರಣವಾಗಬಹುದು. ನೀವು ವಿದೇಶಕ್ಕೆ ಸಂಬಂಧಿಸಿದ ಯಾವುದೇ ಯೋಜನೆಗಾಗಿ ಕಾಯುತ್ತಿದ್ದರೆ, ಅದನ್ನು ಪಡೆದ ನಂತರ ನಿಮಗೆ ಲಾಭ ಸಿಗುತ್ತದೆ. ಯಾರಿಂದಲೂ ಕೇಳಿ ದೊಡ್ಡ ಹೂಡಿಕೆ ಮಾಡಬೇಡಿ ಮತ್ತು ಈ ವರ್ಷದ ಮಧ್ಯದಲ್ಲಿ ಭೂಮಿಯ ಮೇಲೆ ಹೂಡಿಕೆ ಮಾಡುವ ಬಗ್ಗೆ ಯೋಚಿಸಿ. ಶನಿಯ ವಕ್ರತೆ ಆಗುವುದರ ಪರಿಣಾಮದಿಂದಾಗಿ ತಾಯಿಯೊಂದಿಗೆ ವಿವಾದವಾಗುವ ಸಾಧ್ಯತೆ ಹೆಚ್ಚಾಗಿದೆ. ಏಕೆಂದರೆ ಈ ಕಾರಣದಿಂದಾಗಿ ನೀವು ಮಾನಸಿಕ ಒತ್ತಡವನ್ನು ಸಹ ಎದುರಿಸಬೇಕಾಗಬಹುದು. ಈ ವರ್ಷ ಸಣ್ಣ ಸಣ್ಣ ಪ್ರವಾಸಗಳ ಯೋಗವು ಸಹ ಇದೆ. ಮತ್ತು ಸೆಪ್ಟೆಂಬರ್ ನಂತರ ವಿದೇಶಕ್ಕೆ ಹೋಗುವ ಕನಸು ಕೂಡ ನಿಜವಾಗಬಹುದು. ಯಾವುದೇ ರೀತಿಯ ವಿವಾದ ಅಥವಾ ಗೊಂದಲಗಳಿಂದ ನಿಮ್ಮನ್ನು ತಪ್ಪ್ಪಿಸುವುದು ನಿಮಗೆ ಉತ್ತಮವಾಗಿರುತ್ತದೆ
ಶನಿ ಸಂಚಾರದ ಪರಿಹಾರ: ನೀವು ಉತ್ತಮ ಗುಣಮಟ್ಟದ ನೀಲಮಣಿ ರತ್ನವನ್ನು ಧರಿಸಬೇಕು. ಈ ರತ್ನವನ್ನು ಪಂಚಧಾತು ಅಥವಾ ಅಷ್ಟಧಾತುವಿನ ಉಂಗುರದಲ್ಲಿ ಶನಿವಾರದಂದು ಮಧ್ಯದ ಬೆರಳಿನಲ್ಲಿ ಧರಿಸಬೇಕು. ಇದಲ್ಲದೆ ನೀವು ಪದ್ಮರಾಗ/ಅಮೆಥಿಸ್ಟ್ ರತ್ನ ವನ್ನು ಸಹ ಧರಿಸಬಹುದು.
ವೃಶ್ಚಿಕ ರಾಶಿಚಕ್ರದಲ್ಲಿ ಶನಿಯು ಮೂರನೇ ಮತ್ತು ನಾಲ್ಕನೇ ಮನೆಗಳ ಮಾಲೀಕನಾಗಿ ವೃಶ್ಚಿಕ ರಾಶಿಚಕ್ರದಿಂದ ಮೂರನೇ ಮನೆಗೆ ಸಾಗಣಿಸುತ್ತಾನೆ. ಶನಿಯ ಈ ಸಾಗಣೆಯಿಂದಾಗಿ ನಿಮ್ಮ ಮೇಲೆ ನಡಿಯುತ್ತಿರುವ ಶನಿಯ ಏಳುವರೆ ಈಗ ಕೊನೆಗೊಳ್ಳುತ್ತದೆ. ಈ ವರ್ಷ ನೀವು ಸ್ವಲ್ಪ ಸೋಮಾರಿತನವನ್ನು ಅನುಭವಿಸುವಿರಿ. ನಿಮ್ಮ ಕೆಲಸವನ್ನು ನಾಳೆಯ ಮೇಲೆ ಮುಂದೂಡಲು ಬಯಸಿದರೆ, ನಷ್ಟವೂ ಸಹ ನಿಮ್ಮದೇ ಆಗಿರುತ್ತದೆ. ವ್ಯಾಪಾರದಲ್ಲಿ ಯಾವುದೇ ಹೊಸ ಕೆಲಸವನ್ನು ಮಾಡಲು ಬಯಸುತ್ತಿದ್ದರೆ ಈ ಸಮಯ ಹೊಸ ಕೆಲಸಕ್ಕೆ ಉತ್ತಮವಾಗಿದೆ. ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಮತ್ತು ಕೆಲಸದಲ್ಲಿ ಆರ್ಥಿಕ ಪರಿಸ್ಥಿತಿಯಿಂದ ಯಾವುದೇ ಅಡಚಣೆಗಳು ಬರುವುದಿಲ್ಲ. ವರ್ಷದ ಮಧ್ಯದಲ್ಲಿ ಯಾವುದೇ ವಿಷಯದಿಂದ ತಾಯಿಯೊಂದಿಗೆ ಜಗಳವಾಗಬಹುದು.ಒಬ್ಬ ಸ್ನೇಹಿತನ ಸಹಾಯದಿಂದ ನಿಮ್ಮ ಕೆಲಸ ಸರಿಯಾಗಿ ಆಗುತ್ತದೆ. ಆದರೆ ಅದೇ ಸ್ನೇಹಿತನೊಂದಿಗೆ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ. ನಿಮ್ಮ ಹಳೆಯ ಸ್ಥಗಿತಗೊಂಡಿರುವ ಶಿಕ್ಷಣ ಈ ವರ್ಷಮತ್ತೆ ಆರಂಭವಾಗುತ್ತದೆ ಮತ್ತು ಪೂರ್ಣಗೊಳ್ಳುತ್ತದೆ.
ಶನಿ ಸಂಚಾರದ ಪರಿಹಾರ: ನೀವು ಶನಿವಾರದಂದು ಇರುವೆಗಳಿಗೆ ಹಿಟ್ಟನ್ನು ಹಾಕಬೇಕು ಮತ್ತು ಯಾವುದೇ ಧಾರ್ಮಿಕ ಸ್ಥಳದಲ್ಲಿ ನಿಯಮಿತವಾಗಿ ಸ್ವಚ್ಛತೆಯ ಕೆಲಸವನ್ನು ಮಾಡಬೇಕು.
ಧನು ರಾಶಿಚಕ್ರದಲ್ಲಿ ಶನಿಯು ಎರಡನೇ ಮತ್ತು ಮೂರನೇ ಮನೆಗಳ ಮಾಲೀಕನಾಗಿ ಧನು ರಾಶಿಚಕ್ರದಿಂದ ಎರಡನೇ ಮನೆಗೆ ಸಾಗಾಣಿಸುತ್ತಾನೆ. ಈ ವರ್ಷ ಯಾವುದಾದರು ಹೊಸ ಕಾರ್ಯವನ್ನು ಪ್ರಾರಂಭಿಸಲು ಬಯಸುತ್ತಿದ್ದರೆ ನೀವು ನಿಮ್ಮ ಪೂರ್ಣ ಗಮನದಿಂದಲೇ ಮಾಡಿ, ಆಗ ಮಾತ್ರ ಶನಿ ನಿಮಗೆ ಯಶಸ್ಸನ್ನು ನೀಡುತ್ತಾನೆ. ಶನಿಯ ಏಳುವರೆ ಕೊನೆಯ ಹಂತದಲ್ಲಿರುವುದರಿಂದ ಹೋಗುತ್ತಿರುವ ಈ ಶನಿಯು ನಿಮ್ಮನ್ನು ಚಿನ್ನದಂತೆ ಸುಟ್ಟಿ ಪ್ರಕಾಶವಾಗಿ ಮಾಡುತ್ತಾನೆ. ವ್ಯವಹಾರಕ್ಕಾಗಿ ಈ ವರ್ಷ ತುಂಬಾ ಪರಿಶ್ರಮ ಮತ್ತು ಸಂಘರ್ಷದಿಂದ ತುಂಬಿರುತ್ತದೆ ಮತ್ತು ಇದರ ಪರಿಣಾಮಗಳು ಉತ್ತಮವಾಗಿರುತ್ತವೆ. ಆರ್ಥಿಕ ಪರಿಸ್ಥಿತಿಗಳಿಗೆ ಈ ಸಾಗಣೆ ಸ್ವಲ್ಪ ಒತ್ತಡವನ್ನು ತರುತ್ತದೆ ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯಗಳು ಇರುತ್ತವೆ ಆದರೆ ನಿಮ್ಮ ಯಾವುದೇ ಕೆಲಸವೂ ನಿಲ್ಲುವುದಿಲ್ಲ. ಈ ಶನಿ ನಿಮಗೆ ಭೂಮಿಗೆ ಸಂಬಂಧಿಸಿದ ಲಾಭವು ನೀಡಬಹುದು. ವಿದೇಶಕ್ಕೆ ಹೋಗಲು ಯೋಚಿಸುತ್ತ್ತಿದ್ದರೆ ಈ ವರ್ಷ ಬಹಳ ಅಡಚಣೆಗಳನ್ನು ಎದುರಿಸಬೇಕಾಗಬಹುದು. ತಂದೆಯ ಕಡೆಯಿಂದ ಆಥಿಕ ಬೆಂಬಲವನ್ನು ಪಡೆಯುತ್ತೀರಿ. ತಾಯಿಯ ಆಶೀರ್ವಾದ ನಿಮ್ಮ ಮೇಲೆ ಎಂದಿಗೂ ಇರುತ್ತದೆ.
ಶನಿ ಸಂಚಾರದ ಪರಿಹಾರ: ನೀವು ಶನಿವಾರದಂದು ಯಾವುದೇ ಕಪ್ಪು ಬಟ್ಟೆ ಅಥವಾ ಕಪ್ಪು ದಾರದಲ್ಲಿ ಉಮ್ಮತಿ ಮೂಲವನ್ನು ಧರಿಸಬೇಕು. ಈ ಮೂಲವನ್ನು ನೀವು ಕುತ್ತಿಗೆ ಅಥವಾ ತೋಳಿನಲ್ಲಿ ಧರಿಸಬಹುದು. ಇದರೊಂದಿಗೆ ಹನುಮಂತನನ್ನು ಆರಾಧಿಸುವದು ಲಾಭಕಾರಿಯಾಗಿರುತ್ತದೆ.
ಮಕರ ರಾಶಿಚಕ್ರದಲ್ಲಿ ಶನಿಯು ಮಕರ ರಾಶಿ ಮತ್ತು ಎರಡನೇ ಮನೆಯ ಮಾಲೀಕನಾಗಿ ಮಕರ ರಾಶಿಚಕ್ರದಲ್ಲೇ ಸಾಗಾಣಿಸುತ್ತಾನೆ. ಶನಿಯ ಏಳೂವರೆಯ ಎರಡನೇ ಹಂತವು ಪ್ರಾರಂಭವಾಗುತ್ತಿದೆ. ಇದರಿಂದ ಮಾನಸಿಕ ಒತ್ತಡ ಇರುತ್ತದೆ ಆದರೆ ಶನಿಯ ತನ್ನ ಸ್ವತಃ ರಾಶಿಚಕ್ರದಲ್ಲಿ ಸಾಗಣೆಯಿಂದಾಗಿ ಈ ಮಾನಸಿಕ ಒತ್ತಡದಿಂದ ಹೋರಾಡಲು ಪ್ರೇರಣೆ ಸಹ ಶನಿಯೇ ನೀಡುತ್ತಾನೆ. ಈ ಸಾಗಣೆಯಿಂದಾಗಿ ನಿಮ್ಮ ನಿರ್ಧಾರದ ಬಲದಲ್ಲಿ ಸಮತೋಲನ ಮತ್ತು ಆಳ ಬರುತ್ತದೆ ಮತ್ತು ನಿಮಗೆ ಹೊಸ ಗಮ್ಯಸ್ಥಾನ ಸಿಗುತ್ತದೆ. ವ್ಯವಹಾರಕ್ಕೆ ಈ ಸಾಗಣೆ ಹೊಸ ಅವಕಾಶಗಳನ್ನು ತರುತ್ತದೆ ಮತ್ತು ಆರ್ಥಿಕ ಪರಿಸ್ಥಿತಿಗಳಲ್ಲಿ ಲಾಭ ಉಳಿದಿರುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಮೂಲಕ ವಿದೇಶಕ್ಕೆ ಹೋಗುವ ನಿಮ್ಮ ಕನಸನ್ನು ಸಹ ಪೂರೈಸಬಹುದು ಮತ್ತು ನೀವು ತಮ್ಮ ಸ್ವತಃ ಮನೆಯನ್ನು ಖರೀದಿಸಲು ಯೋಚಿಸುತ್ತಿದ್ದರೆ, ಈ ಕನಸ್ಸು ಸಹ ಖಂಡಿತವಾಗಿಯೂ ಸಂಪೂರ್ಣವಾಗುತ್ತದೆ. ಜೀವನ ಸಂಗಾತಿಯೊಂದಿಗೆ ಕೆಲವು ವಿವಾದಗಳು ಉಳಿದಿರುತ್ತವೆ ಆದರೆ ನೀವು ನಿಮ್ಮ ತಿಳುವಳಿಕೆಗಳಿಂದಾಗಿ ಈ ತೊಂದರೆಯನ್ನು ಪರಿಹರಿಸುತ್ತೀರಿ ವರ್ಷದ ಕೊನೆಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಯಾವುದೇ ಪ್ರಕಾರದ ಅಪಘಾತದ ಯೋಗವು ಉಂಟಾಗುತ್ತಿದೆ ಆದ್ದರಿಂದ ವಾಹನವನ್ನು ಉಬಹಳ ಎಚ್ಚರಿಕೆಯಿಂದ ಚಲಾಯಿಸಿ.
ಶನಿ ಸಂಚಾರದ ಪರಿಹಾರ: ನೀವು ಶನಿವಾರದಂದು ಚೇಳು ಊರಿಗಿಡದ ಮೂಲ ವನ್ನು ಧರಿಸುವುದು ಅತ್ಯಂತ ಉತ್ತಮವಾಗಿರುತ್ತದೆ. ಈ ಮೂಲವನ್ನು ನೀವು ಯಾವುದೇ ಕಪ್ಪು ಬಟ್ಟೆಯಲ್ಲಿ ಸುತ್ತಿ ಅಥವಾ ಹೊಲಿದು ನಿಮ್ಮ ತೋಳು ಅಥವಾ ಕುತ್ತಿಗೆಯಲ್ಲಿ ಧರಿಸಬಹುದು ಮತ್ತು ಇದಲ್ಲದೆ ಶನಿ ದೇವನನ್ನು ಆರಾಧಿಸುವುದು ಉತ್ತಮ.
ಕುಂಭ ರಾಶಿಚಕ್ರದಲ್ಲಿ ಶನಿಯು ಹನ್ನೆರಡನೇ ಮತ್ತು ಮೊದಲನೆ ಮನೆಗಳ ಮಾಲೀಕನಾಗ ಕುಂಭ ರಾಶಿಚಕ್ರದಿಂದ ಹನ್ನೆರಡನೇ ಮನೆಗೆ ಸಾಗಣಿಸುತ್ತಾನೆ. ಕುಂಭ ರಾಶಿಚಕ್ರದ ಜನರಿಗೆ ಶನಿ ಏಳೂವರೆದ ಮೊದಲನೇ ಹಂತ ಪ್ರಾರಂಭವಾಗುತ್ತದೆ. ಇದರಿಂದ ನಿಮ್ಮ ರಾಶಿಚಕ್ರದಲ್ಲಿ ಸಂಘರ್ಷ ಮತ್ತು ಪರಿಶ್ರಮ ಇನ್ನು ಹೆಚ್ಚಾಗುತ್ತದೆ ಮತ್ತು ನಿಮಗೆ ನಿಮ್ಮ ಜೀವನದ ನಿಜಾಯಿತಿ ತಿಳಿಯುತ್ತದೆ. ಈ ಸಮಯದಲ್ಲಿ ನಿಮ್ಮವರೇ ನಿಮ್ಮಿಂದ ದೂರ ಹೋಗುತ್ತಾರೆ ಮತ್ತು ಎಂದಿಗೂ ಯೋಚಿಸದೆ ಇರುವಂತಹ ಸಂಬಂಧಗಳು ನಿಮ್ಮ ಹತ್ತಿರ ಬರುತ್ತವೆ. ಜೀವನ ಸಂಗಾತಿಯೊಂದಿಗೆ ಯಾವುದೇ ವಿಷಯದಿಂದ ದೂರ ಹೋಗಬಹುದು. ಹೊಸ ಕೆಲಸವನ್ನು ಆರಂಭಿಸುವ ಮೊದಲು ಯಾರಾದರೂ ಹಿರಿಯರ ಸಲಹೆಯನ್ನು ತೆಗೆದುಕೊಳ್ಳಿ.. ವ್ಯವಹಾರದಲ್ಲಿ ಯಾವುದೇ ದೊಡ್ಡ ಹೂಡಿಕೆಗಾಗಿ ಯೋಚಿಸಿ, ಅರ್ಥಮಾಡಿಕೊಂಡು ಮುಂದುವರಿಸಿ. ಉದ್ಯೋಗದ ಬದಲಾವಣೆಗಾಗಿ ವರ್ಷದ ಮಧ್ಯದ ಸಮಯ ಉತ್ತಮವಾಗಿಲ್ಲ. ಮನೆಯ ಅಲಂಕಾರದ ವಸ್ತುಗಳ ಮೇಲೆ ಹಣವನ್ನು ಖರ್ಚು ಮಾಡಬಹುದು ಮತ್ತು ನಿಮ್ಮ ಹೊಸ ವಾಹನದ ಕನಸು ಸಹ ನಿಜವಾಗಬಹುದು.
ಶನಿ ಸಂಚಾರದ ಪರಿಹಾರ: ನೀವು ಶನಿವಾರದಂದು ಆರಂಭಿಸಿ ನಿಯಮಿತವಾಗಿ ಶನಿ ದೇವನ ಬೀಜ ಮಂತ್ರ ಓಂ ಫ್ರಾಂ ಪ್ರೀಂ ಪ್ರೌ೦ ಸಃ ಶನೈಶ್ಚರಾಯ್ ನಮಃ ಅನ್ನು ಜಪಿಸಬೇಕು ಮತ್ತು ಶನಿವಾರದಂದು ವಿಕಲಾಂಗರಿಗೆ ಭೋಜನ ನೀಡಬೇಕು.
ಮೀನಾ ರಾಶಿಚಕ್ರದಲ್ಲಿ ಶನಿಯು ಹನ್ನೊಂದನೇ ಮತ್ತು ಹನ್ನೆರಡನೇ ಮನೆಗಳ ಮಾಲೀಕನಾಗಿ ಮೀನಾ ರಾಶಿಚಕ್ರದಿಂದ ಹನ್ನೊಂದನೇ ಮನೆಗೆ ಸಾಗಣಿಸುತ್ತಾನೆ. ಶನಿಯ ಹನ್ನೊಂದನೇ ಮನೆಯಲ್ಲಿ ಸಾಗಾಣಿಸುವುದರಿಂದ, ಇದರ ಸಂಪೂರ್ಣ ಪರಿಣಾಮ ನಿಮ್ಮ ರಾಶಿಚಕ್ರದ ಮೇಲೆ ಉಳಿದುರುತ್ತದೆ. ಈ ಸಮಯದಲ್ಲಿ ಸೋಮಾರಿತನವನ್ನು ನಿಮ್ಮ ಮೇಲೆ ಪ್ರಾಬಲ್ಯಗೊಳಿಸಲು ಬಿಡಬೇಡಿ, ಇಲ್ಲದಿದ್ದರೆ ನೀವು ಬಹಳ ಮುಖ್ಯವಾದ ಅವಕಾಶಗಳಿಂದ ವಂಚಿತರಾಗುತ್ತೀರಿ. ವ್ಯವಹಾರಕ್ಕೆ ಸಂಬಂಧಿಸಿದ ಬಹಳಷ್ಟು ಹೊಸ ಅವಕಾಶಗಳು ಬರುತ್ತವೆ ಮತ್ತು ನೀವು ಮುಂದುವರಿಯುವ ಅವಕಾಶಗಳು ದೊರೆಯುತ್ತವೆ. ಈ ವರ್ಷ ನೀವು ಒಂದು ಹೊಸದಾಗಿ ಮಾಡಿ ತೋರಿಸುತ್ತೀರಾ. ಸಮಾಜದಲ್ಲಿ ನಿಮ್ಮ ಹೊಸ ಗುರುತು ರೂಪುಗೊಳ್ಳುತ್ತದೆ. ನಿಮ್ಮ ವೈವಾಹಿಕ ಜೀವನವು ಈ ವರ್ಷ ಸಂತೋಷವಾಗಿರುತ್ತದೆ. ಮತ್ತು ನಿಮ್ಮ ಜೀವನದಲ್ಲಿ ಹೊಸ ವ್ಯಕ್ತಿಯು ಬರುವುದರಿಂದ ನೀವು ಇನ್ನಷ್ಟು ಸಂತೋಷವಾಗಿರುತ್ತೀರಿ, ಅರೋದ್ಯದ ಕಡೆಯಿಂದ ಈ ಸಾಗಣೆ ಉತ್ತಮವಾಗಿರುತ್ತದೆ ಆದರೆ ಸೋಮಾರಿತನದಿಂದ ದೂರವಿರಿ. ಈ ವರ್ಷ ತಂದೆ ತಾಯಿಯ ಬೆಂಬಲವು ಪೂರ್ಣ ರೀತಿಯಾಗಿ ನಿಮ್ಮ ಕಡೆ ಇರುತ್ತದೆ ಮತ್ತು ನಿಮ್ಮ ಆರ್ಥಿಕ ಲಾಭಗಳಿಗೂ ಸಹ ಅವರು ನಿಮಗೆ ಸಹಾಯ ಮಾಡುತ್ತಾರೆ .
ಶನಿ ಸಂಚಾರದ ಪರಿಹಾರ: ನೀವು ಶನಿವಾರದಂದು ಶುಭ ಶನಿ ಯಂತ್ರ ವನ್ನು ಪೂಜಿಸಬೇಕು ಮತ್ತು ಶನಿವಾರ ದಿನದಂದೇ ಬಡವರಿಗೆ ಉಚಿತ ಔಷಧಿಗಳನ್ನು ವಿತರಿಸಬೇಕು.