Personalized
Horoscope
  • Talk To Astrologers
  • Talk To Astrologers
  • Personalized Horoscope 2025
  • Product Banner 2025
  • Brihat Horoscope
  • Ask A Question
  • Live Astrologers

Kannada Horoscope 2018: ರಾಶಿ ಭವಿಷ್ಯ

We, at AstroSage, has brought you the Kannada horoscope 2018. It is going to help you with all your plans related to this year. This Rashi Bhavishya for 2018 sheds light on all important aspects of life such as marriage, love, finance, health and children. If you want an amazing 2018, read this horoscope now.

ರಾಶಿ ಭವಿಷ್ಯ 2018 ಕಲ್ಪನೆಯು ವೇದ ಜ್ಯೋತಿಷ್ಯಶಾಸ್ತ್ರದ ಆಧಾರದಲ್ಲಿದೆ. ಪ್ರತಿ ರಾಶಿಗೂ 2018 ರಲ್ಲಿ ಏನಿದೆ ಎಂಬುದನ್ನು ನೋಡೋಣ.

ಮೇಷ ರಾಶಿ ಭವಿಷ್ಯ (Mesha Rashi Bhavishya 2018)

ಮೇಷಮೇಷ ರಾಶಿಗೆ 2018ರಲ್ಲಿ ಸಂಪೂರ್ಣ ಉತ್ಸಾಹದಿಂದ ವರ್ಷ ಆರಂಭವಾಗುತ್ತದೆ ಎಂದು ಭವಿಷ್ಯ ಹೇಳುತ್ತದೆ. ಉತ್ತಮ ನಿರ್ಧಾರವು ವರ್ಷವಿಡೀ ನಿಮಗೆ ಉತ್ತಮ ಸುದ್ದಿಗಳನ್ನು ಹೊತ್ತು ತರುತ್ತದೆ. ಕೌಟುಂಬಿಕ ಜೀವನದಲ್ಲಿ ಸಮಸ್ಯೆ ಇರಬಹುದು. ಅತಿಯಾ ಕೆಲಸದ ಒತ್ತಡ ಮತ್ತು ಊಟ ಸಮಯಕ್ಕೆ ಸರಿಯಾಗಿ ಮಾಡದಿರುವುದರಿಂದ ಮನೆಯಲ್ಲಿ ಖುಷಿ ಕಡಿಮೆಯಾದಂತೆ ನಿಮಗೆ ಭಾಸವಾಗಬಹುದು. ಮೊದಲ ಎರಡು ತಿಂಗಳು ಆರೋಗ್ಯದ ವಿಚಾರದಲ್ಲಿ ಉತ್ತಮವಾಗಿಲ್ಲದಿರಬಹುದು. ಆದಾಯ ಹೆಚ್ಚುತ್ತದೆ. ನಿಮ್ಮ ವೃತ್ತಿ ಜೀವನದಲ್ಲಿ ಏಳ್ಗೆ ಕಾಣುತ್ತದೆ. ದೀರ್ಘ ಪ್ರಯಾಣ ಅನುಕೂಲಕರವಾಗಿರುತ್ತದೆ ಮತ್ತು ಉತ್ತಮ ಫಲಿತಾಂಶಗಳನ್ನು ಒದಗಿಸುತ್ತದೆ. ಅಕ್ಟೋಬರ್‌ ಉತ್ತರಾರ್ಧದ ನಂತರ ಗಳಿಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು. ಕಠಿಣ ಪರಿಶ್ರಮ ಅಗತ್ಯವಿರುತ್ತದೆ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು ಮತ್ತು ವೈವಾಹಿಕ ಜೀವನದಲ್ಲಿ ನೀವು ಹೆಚ್ಚು ಸಮಯ ಮೀಸಲಿಡಬೇಕಾಗಬಹುದು ಮತ್ತು ಹೆಚ್ಚು ಬದ್ಧತೆ ಪ್ರದರ್ಶಿಸಬೇಕಾಗಬಹುದು. ನಿಧಾನವಾಗಿ ಇತರರ ಹೃದಯವನ್ನು ಗೆಲ್ಲಲು ನಿಮಗೆ ಸಾಧ್ಯವಾಗುತ್ತದೆ. ಕೆಲಸದಿಂದ ಆಗಾಗ್ಗೆ ಮನಸು ದೂರವಾಗುವ ಸಾಧ್ಯತೆಯಿರುತ್ತದೆ. ಒಟ್ಟಾರೆಯಾಗಿ ನಿಮಗೆ ಉತ್ತಮ ಹಾಗೂ ಪ್ರಗತಿಯ ವರ್ಷ ಇದಾಗಿರುತ್ತದೆ.

ವೃಷಭ ರಾಶಿ ಭವಿಷ್ಯ (Vrushabh Rashi Bhavishya 2018)

ವೃಷಭ ಅತಿರೇಕದಿಂದ ವರ್ಷಾರಂಭವಾಗುವ ಸಾಧ್ಯತೆಯಿದ್ದು, ಇದು ನಿಮ್ಮ ಮೇಲೆ ಅಡ್ಡಪರಿಣಾಮ ಬೀರಬಹುದು. ಹೀಗಾಗಿ ನೀವು ಆರೋಗ್ಯದ ಮೇಲೆ ಗಮನ ಹರಿಸಬೇಕು. ನಿಧಾನವಾಗಿ ನೀವು ಆತ್ಮವಿಶ್ವಾಸವನ್ನು ಗಳಿಸುತ್ತೀರಿ ಮತ್ತು ಏನನ್ನಾದರೂ ಸಾಧಿಸಲು ಬಯಸುತ್ತೀರಿ. ಯಶಸ್ಸನ್ನು ಸಾಧಿಸಲು ನೀವು ವರ್ಷಪೂರ್ತಿ ಕಠಿಣ ಪರಿಶ್ರಮ ವಹಿಸಬೇಕು. ಕೆಲಸದಲ್ಲಿ ಕೆಲವು ನಿರಾಸೆಗಳೂ ಇರಬಹುದು. ಅಕ್ಟೋಬರ್ ನಂತರ, ನಿಮ್ಮ ಹಣಕಾಸು ಸ್ಥಿತಿ ಸುಧಾರಿಸುತ್ತದೆ ಮತ್ತು ನಿಮ್ಮ ವೈವಾಹಿಕ ಜೀವನ ಬೆಳಗುತ್ತದೆ. 2018 ವೃಷಭ ರಾಶಿ ಭವಿಷ್ಯದ ಪ್ರಕಾರ ಕೆಲವು ಸಣ್ಣ ಪ್ರವಾಸಗಳು ಉತ್ತಮ ಫಲಿತಾಂಶ ನೀಡುತ್ತವೆ. ನೀವು ತೀರ್ಥಯಾತ್ರಗೂ ತೆರಳಬಹುದು. ಮಕ್ಕಳು ಉತ್ತಮವಾಗಿ ಬೆಳೆಯುತ್ತಾರೆ. ನೀವು ವಿವಾದಗಳು ಮತ್ತು ಸಂಘರ್ಷಗಳಿಂದ ದೂರವಿರಬೇಕು. ಇದರಿಂದ ನಿಮಗೆ ಆರ್ಥಿಕ ನಷ್ಟವಾಗುತ್ತದೆ. ಮೊದಲ ಎರಡು ತಿಂಗಳಲ್ಲಿ, ಯಾವುದೇ ವಿವಾದಗಳಿಂದ ದೂರವಿರಿ. ಇದು ನಿಮ್ಮ ವ್ಯಕ್ತಿತ್ವಕ್ಕೆ ಹಾನಿ ಮಾಡುತ್ತದೆ. ಆದಾಗ್ಯೂ, ನೀವು ಜೀವನದ ಸವಾಲುಗಳನ್ನು ವೇಗವಾಗಿ ಎದುರಿಸಬೇಕಿದೆ. ಆರೋಗ್ಯ ಸಮಸ್ಯೆಯ ಸಾಧ್ಯತೆಯಿದೆ. ನೀವು ತೂಕ ಹೆಚ್ಚಿಸಿಕೊಳ್ಳುವ ಸಾಧ್ಯತೆಯಿರುವುದರಿಂದ ಆಹಾರದ ಮೇಲೆ ನಿಗಾ ಇರಲಿ. ನೀವು ಬಾಳಸಂಗಾತಿ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ವೆಚ್ಚ ಮಾಡಬಹುದು. ಒಟ್ಟಾರೆ ಸರಾಸರಿಯಾಗಿ ವರ್ಷದಲ್ಲಿ ನೀವು ಹಲವು ಹೊಸ ಸಂಗತಿಗಳನ್ನು ಕಲಿಯುತ್ತೀರಿ. ನೀವು ಉತ್ತಮ ವೈವಾಹಿಕ ಮತ್ತು ಹಣಕಾಸಿನ ಸ್ಥಿತಿಯನ್ನು ಹೊಂದಿರುತ್ತೀರಿ.

ಮಿಥುನ ರಾಶಿ ಭವಿಷ್ಯ (Mithuna Rashi Bhavishya 2018)

ಮಿಥುನ ಮಿಥುನದ ಶಕ್ತಿ ನಿಮ್ಮನ್ನು ವರ್ಷಾದ್ಯಂತ ಆವರಿಸಲಿದೆ. ಆದರೂ, ಮೊದಲ ತಿಂಗಳಲ್ಲಿ ನಿಮ್ಮ ಮಾತುಗಳು ಘರ್ಷಣೆಗೆ ಕಾರಣವಾಗಬಹುದಾದ್ದರಿಂದ, ನಿಮ್ಮ ಮಾತುಗಳ ಮೇಲೆ ಗಮನವಿರಲಿ. ನಿಮ್ಮ ಕೆಲಸವನ್ನು ವಿಸ್ತರಿಸುವುದಕ್ಕೆ ನೀವು ಮನೆಯಿಂದ ಹೊರಗೆ ಹೋಗಬಹುದು ಮತ್ತು ನೀವು ಅಲ್ಲಿ ಉತ್ತಮವಾಗಿ ಗಳಿಸಬಹುದು. ಆದರೆ, ಇದು ನಿಮ್ಮನ್ನು ನಿಮ್ಮ ಪ್ರೀತಿ ಪಾತ್ರರಿಂದ ಒಮ್ಮೆ ದೂರವಿಡಬಹುದು. ಹೀಗಾಗಿ, ವೈಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲಿ ಸಮತೋಲನ ಅಗತ್ಯವಿದೆ. ಮಿಥುನ ರಾಶಿಗೆ 2018ರ ರಾಶಿ ಭವಿಷ್ಯದ ಪ್ರಕಾರ ಮಕ್ಕಳು ತುಂಟರಾಗಿರುತ್ತಾರೆ. ಆದರೆ ಅವರು ಹೊಸ ಸಂಗತಿಗಳನ್ನು ತಿಳಿಯಲು ಆಸಕ್ತರಾಗಿರುತ್ತಾರೆ ಮತ್ತು ಅವರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಅವಿವಾಹಿತರಾಗಿದ್ದರೆ ಡಿಸೆಂಬರ್‌ ಮಧ್ಯದವರೆಗೆ ನಿಮ್ಮ ಇಷ್ಟದ ಸಂಗಾತಿಯೊಂದಿಗೆ ವಿವಾಹವಾಗುತ್ತೀರಿ. ವರ್ಷದ ಕೊನೆಯ ತ್ರೈಮಾಸಿಕದ ಅವಧಿಯಲ್ಲಿ ವೆಚ್ಚ ಹೆಚ್ಚಾಗಬಹುದು. ನಿಮ್ಮ ಆರೋಗ್ಯದಲ್ಲಿ ಏರುಪೇರಾಗಬಹುದು ಮತ್ತು ಗಾಳಿ ಸಂಬಂಧಿ ರೋಗಗಳು, ಗಂಟು ನೋವು ಇತ್ಯಾದಿ ಸಂಬಂಧಿಸಿದಂತೆ ಸಮಸ್ಯೆಗಳನ್ನು ಎದುರಿಸಬಹುದು. ಅತಿಯಾದ ನಾರಿನಂಶವಿರುವ ಆಹಾರ ಸೇವಿಸಬೇಡಿ. ಈ ವರ್ಷದಲ್ಲಿ ವ್ಯಾಪಾರ ಹೆಚ್ಚು ಲಾಭ ತಂದುಕೊಡುತ್ತದೆ. ನಿಮ್ಮ ಹಿಂದಿನ ಕಠಿಣ ಪರಿಶ್ರಮವು ನಿಮ್ಮ ವೃತ್ತಿಜೀವನದ ಯಶಸ್ಸಿಗೆ ಅಡಿಪಾಯವಾಗುತ್ತದೆ. ಒಟ್ಟಾರೆಯಾಗಿ, ನೀವು ಬೆಳೆಯಲು ಮತ್ತು ಯಶಸ್ಸು ಸಾಧಿಸಲು ಹಲವು ಅವಕಾಶಗಳನ್ನು ಈ ವರ್ಷ ಒದಗಿಸುತ್ತದೆ.

ಕರ್ಕಾಟಕ ರಾಶಿ ಭವಿಷ್ಯ (Karka Rashi Bhavishya 2018)

ಕರ್ಕ ಕರ್ಕಾಟಕ ರಾಶಿಗೆ 2018ರ ರಾಶಿ ಭವಿಷ್ಯದ ಪ್ರಕಾರ, ನಿಮ್ಮ ಸುತ್ತ ಇನ್ನಷ್ಟು ಹುಮ್ಮಸ್ಸು ಕಂಡುಬರಲಿದೆ ಮತ್ತು ನೀವು ಇತರರನ್ನು ಮುನ್ನಡೆಸುತ್ತೀರಿ. ನಿಮ್ಮ ಆತ್ಮೀಯರಲ್ಲಿ ಕೆಲವರು ನಿಮ್ಮನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರಬಹುದು ಮತ್ತು ಇದು ನಿಮ್ಮ ಸಂಬಂಧ ಹಳಸಲು ಕಾರಣವಾಗಬಹುದು. ಆಗಾಗ್ಗೆ ಸಣ್ಣಪುಟ್ಟ ಸಮಸ್ಯೆಗಳ ಹೊರತಾಗಿಯೂ ಕೌಟುಂಬಿಕ ಜೀವನ ಸೌಹಾರ್ದಯುತವಾಗಿರುತ್ತದೆ. ನೀವು ಗೌರವವನ್ನು ಗಳಿಸಬಹುದು ಮತ್ತು ವೃತ್ತಿ ಜೀವನವೂ ವೃದ್ಧಿಸಬಹುದು. ನಿಮ್ಮ ಸಾಮಾಜಿಕ ಸ್ಥಿತಿಗತಿಗಳು ಸುಧಾರಿಸಬಹುದು. ಯಾವುದೇ ದೀರ್ಘಕಾಲೀನ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ನಿಮ್ಮ ಆರೋಗ್ಯ ಮೇಲೆ ಹೆಚ್ಚಿನ ಗಮನ ಇರಲಿ. ನಿಮ್ಮ ವೈವಾಹಿಕ ಜೀವನದಲ್ಲಿ ಖುಷಿ ಕಡಿಮೆಯಾದ ಭಾಸ ನಿಮಗೆ ಉಂಟಾಗಬಹುದು. ನಿಮ್ಮ ವೈವಾಹಿಕ ಜೀವನವನ್ನು ಸುಸ್ಥಿತಿಯಲ್ಲಿಡಲು ವಾಗ್ವಾದಗಳನ್ನು ದೂರವಿಡಬೇಕು. ವೆಚ್ಚ ಹೆಚ್ಚಾಗಬಹುದು. ಗಳಿಕೆಯೂ ಇರುತ್ತದೆ. ಆದರೆ ನಿಮ್ಮ ಹಣಕಾಸಿನಲ್ಲಿ ಅತಿಯಾದ ವೆಚ್ಚವು ಅಸಮತೋಲನ ಸೃಷ್ಟಿಸವುದರಿಂದ, ನೀವು ಅದನ್ನು ನಿರ್ವಹಿಸಬೇಕು. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಾರೆ ಮತ್ತು ಮಕ್ಕಳು ಬದ್ಧತೆ ಮೆರೆಯುತ್ತಾರೆ. ವರ್ಷವಿಡೀ ನೀವು ಜೀವನವನ್ನು ಅನುಭವಿಸುವುದು ಮತ್ತು ವೆಚ್ಚ ಮಾಡುವುದಾಗಿರುವುದರಿಂದ, ನೀವು ಐಷಾರಾಮಿ ಜೀವನವನ್ನು ನಡೆಸುತ್ತೀರಿ. ಇದಕ್ಕಾಗಿ ನೀವು ಕಠಿಣ ಪರಿಶ್ರಮ ವಹಿಸಬೇಕು. ಒಟ್ಟಾರೆಯಾಗಿ, ಈ ವರ್ಷವು ಕೆಲವು ಸವಾಲುಗಳೊಂದಿಗೆ ಉತ್ತಮವಾಗಿರುತ್ತದೆ.

ಸಿಂಹ ರಾಶಿ ಭವಿಷ್ಯ (Simha Rashi Bhavishya 2018)

ಸಿಂಹ ಸಿಂಹ ರಾಶಿಗೆ 2018ರ ರಾಶಿ ಭವಿಷ್ಯದ ಪ್ರಕಾರ, ನೀವು ಧಾರ್ಮಿಕ ವಿಚಾರಗಳಿಂದ ಗಳಿಕೆ ಮಾಡುತ್ತೀರಿ ಮತ್ತು ನೀವು ತೀರ್ಥಯಾತ್ರೆಗೂ ತೆರಳಬಹುದು. ಸೋದರರ ಆರೋಗ್ಯ ಜನವರಿ-ಫೆಬ್ರವರಿಯಲ್ಲಿ ಹದಗೆಡಬಹುದು. ಆದರೆ ನೀವು ಧೈರ್ಯ ಹೆಚ್ಚಾಗುತ್ತದೆ. ಪ್ರೇಮ ಜೀವನವು ಸಮ್ಮಿಶ್ರ ಹಂತಗಳನ್ನು ಎದುರಿಸಬಹುದು. ಒಂದೆಡೆ, ಕೆಲವು ತಪ್ಪು ಗ್ರಹಿಕೆಗಳನ್ನು ನೀವು ಗಳಿಸಬಹುದು. ಇನ್ನೊಂದೆಡೆ ನಿಮ್ಮ ಪ್ರೀತಿಪಾತ್ರರೊಂದಿಗೆ ಮೆಚ್ಚುಗೆ ಗಳಿಸಬಹುದು. ನಿಮ್ಮ ಕ್ರಮಗಳು ನಿಮ್ಮನ್ನು ಯಶಸ್ಸಿನ ಕಡೆಗೆ ಕೊಂಡೊಯ್ಯುತ್ತದೆ. ಆದರೂ, ನೀವು ಆಲಸ್ಯವನ್ನು ದೂರವಿಡಬೇಕು. ವೈವಾಹಿಕ ಖುಷಿ ಹೆಚ್ಚಾಗಬಹುದು. ನಿಮ್ಮ ಜೀವನ ಮುಂದೆ ಸಾಗಿ, ಸನ್ನಿವೇಶಗಳು ನಿಮ್ಮ ಪರವಾಗಿರುತ್ತದೆ ಮತ್ತು ಹಣಕಾಸಿನ ವಿಚಾರದಲ್ಲಿ ನೀವು ಉತ್ತಮವಾಗಿರುವುದನ್ನು ನೀವು ಮನಗಾಣುತ್ತೀರಿ. ಮಕ್ಕಳು ಹೆಚ್ಚು ಶ್ರಮವಹಿಸಬೇಕು ಮತ್ತು ನೀವು ಅವರ ಕಾಳಜಿ ವಹಿಸಬೇಕು. ಹಾಗೆಯೇ ಅವರನ್ನು ನೀವು ಪ್ರೋತ್ಸಾಹಿಸಬೇಕು. ವಿದೇಶ ಪ್ರವಾಸದ ಅವಕಾಶಗಳು ಹೆಚ್ಚಿವೆ. ಜನವರಿ-ಫೆಬ್ರವರಿ ಅವಧಿಯಲ್ಲಿ ಗರ್ಭಿಣಿಯರು ಹೆಚ್ಚು ಕಾಳಜಿ ವಹಿಸಬೇಕು. ಅಕ್ಟೋಬರ್ ಮಧ್ಯದಲ್ಲಿ ಕೌಟುಂಬಿಕ ಮತ್ತು ವೃತ್ತಿಪರ ಜೀವನವು ಧನಾತ್ಮಕ ಬದಲಾವಣೆಗಳನ್ನು ಕಾಣುತ್ತವೆ. ಸಾರ್ವಜನಿಕವಾಗಿಯೂ ನಿಮ್ಮ ಗೌರವ ಹೆಚ್ಚುತ್ತದೆ.

ಕನ್ಯಾ ರಾಶಿ ಭವಿಷ್ಯ (Kanya Rashi Bhavishya 2018)

ಕನ್ಯಾರಾಶಿ 2018ರ ಕನ್ಯಾ ರಾಶಿ ಭವಿಷ್ಯದ ಪ್ರಕಾರ ನಿಮಗೆ ಈ ವರ್ಷವು ಅತ್ಯಂತ ಅಧಿಕ ಸಾಧನೆ ಮಾಡುವ ವರ್ಷವಾಗಿದೆ. ಹಲವು ಉತ್ತಮ ಅವಕಾಶಗಳು ನಿಮಗೆ ಉತ್ತಮ ಹಣಕಾಸು ಫಲಿತಾಂಶವನ್ನು ನೀಡುತ್ತವೆ. ನಿಮ್ಮ ಸಾಮಾಜಿಕ ವಲಯವು ಸಕ್ರಿಯವಾಗಿರುತ್ತದೆ ಮತ್ತು ನಿಮ್ಮ ಸಾಮಾಜಿಕ ಸ್ಥಿತಿಗತಿಯೂ ಸುಧಾರಿಸುತ್ತದೆ. ಸ್ನೇಹಿತರು ಮತ್ತು ಪ್ರೀತಿಪಾತ್ರರ ಜತೆ ಉತ್ತಮ ಸಮಯ ಕಳೆಯುತ್ತೀರಿ. ವಿದ್ಯಾರ್ಥಿಗಳು ಗಮನ ಕೇಂದ್ರೀಕರಣದಲ್ಲಿ ಕೊರತೆ ಎದುರಿಸಬಹುದು. ಹೀಗಾಗಿ ಕಠಿಣ ಪರಿಶ್ರಮ ಅವರ ಯಶಸ್ಸಿಗೆ ಮುಖ್ಯವಾಗಿರುತ್ತದೆ. ಮಕ್ಕಳ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು ಮತ್ತು ಸ್ವಲ್ಪ ಮಟ್ಟಿನ ಕಿರಿಕಿರಿಯನ್ನು ಅವರು ಅವರು ಅನುಭವಿಸಬಹುದಾದ್ದರಿಂದ ಮಕ್ಕಳ ಕಾಳಜಿ ವಹಿಸಬೇಕು. ನೀವು ಉತ್ತಮ ವೃತ್ತಿಪರ ಜೀವನವನ್ನು ಅನುಭವಿಸುತ್ತೀರಿ. ನಿಮ್ಮ ಪ್ರಯತ್ನಗಳು ಯಶಸ್ಸು ಸಾಧಿಸುತ್ತವೆ. ಯಾವುದೇ ದೀರ್ಘಾವಧಿ ನಿರೀಕ್ಷೆಗಳು ಪೂರ್ಣಗೊಳ್ಳುತ್ತವೆ. ವರ್ಷಪೂರ್ತಿ ಆದಾಯದ ಒಳಹರಿವು ಉತ್ತಮವಾಗಿರುತ್ತದೆ. ಜನವರಿಯಲ್ಲಿ, ಕೆಲವು ಅನಿರೀಕ್ಷಿತ ಗಳಿಕೆ ಆಗಮಿಸುವ ಸಾಧ್ಯತೆಯಿದೆ. ಅಕ್ಟೋಬರ್ ನಂತರ, ಇದು ಇನ್ನೂ ಹೆಚ್ಚಾಗುತ್ತದೆ. ನಿಮ್ ಬಾಳಸಂಗಾತಿಯಿಂದ ನೀವು ಗಳಿಕೆ ಮಾಡಬಹುದು. ಆದರೆ ಅವರು ಅಕ್ಟೋಬರ್‌ವರೆಗೆ ಕಡಿಮೆ ಉತ್ಸಾಹ ಹೊಂದಿರುತ್ತಾರೆ ಅಥವಾ ಯಾವುದೇ ಆರೋಗ್ಯ ಸಮಸ್ಯೆಗಳು ಕಂಡುಬರಬಹುದು. ಆದರೂ, ಅವರಿಂದ ನೀವು ಸಂಪೂರ್ಣ ಬೆಂಬಲ ಪಡೆಯುತ್ತೀರಿ. ಕೆಲವು ಕಚೇರಿ ಕಾರಣಗಳಿಂದ ಅಥವಾ ಕೆಲಸದ ಕಾರಣಗಳಿಂದ ನೀವು ಕುಟುಂಬದಿಂದ ದೂರಹೋಗಬೇಕಾದೀತು. ಕುಟುಂಬದಲ್ಲಿ ಯಾವುದೇ ಪವಿತ್ರ ಆಚರಣೆಗಳು ನಡೆಯಬಹುದು. ಯಾವುದೇ ಹೊಸ ಸೇರ್ಪಡೆಯ ಸಾಧ್ಯತೆಯೂ ಇರಬಹುದು. ಒಟ್ಟಾರೆಯಾಗಿ, ಈ ವರ್ಷವು ನಿಮಗೆ ಎಲ್ಲ ದೃಷ್ಟಿಯಿಂದಲೂ ಅನುಕೂಲಕರವಾಗಿದೆ. ಕೌಟುಂಬಿಕ ಜೀವನದಲ್ಲಿ ಶಾಂತಿ ಕಾಪಾಡಿಕೊಂಡು ವಾಗ್ವಾದಗಳನ್ನು ದೂರವಿಡಬೇಕಷ್ಟೇ.

ತುಲಾ ರಾಶಿ ಭವಿಷ್ಯ (Tula Rashi Bhavishya 2018)

ತುಲಾ2018ರ ತುಲಾ ರಾಶಿ ಭವಿಷ್ಯದ ಪ್ರಕಾರ, ವರ್ಷದ ಆರಂಭವು ಉತ್ಸಾಹಕರವಾಗಿರುತ್ತದೆ. ಆದರೆ ಅತಿರೇಕವೂ ಇರುತ್ತದೆ. ಕೌಟುಂಬಿಕ ಹಾಗೂ ವೈವಾಹಿಕ ಸಂಗತಿಗಳಲ್ಲಿ ಇದನ್ನು ನಿಯಂತ್ರಿಸಬೇಕಾಗಿದೆ. ಜನವರಿಯಿಂದ ಮಾರ್ಚ್‌ವರೆಗೆ ನಿಮ್ಮ ಆರೋಗ್ಯ ಕ್ಷೀಣಿಸಬಹುದು. ಮಾತನ್ನು ಹೊರಹಾಕುವ ಮೊದಲು ಯೋಚಿಸಿ. ಇವು ಇತರರ ಭಾವನೆಗಳನ್ನು ಘಾಸಿಗೊಳಿಸಬಹುದು. ಕೆಲಸದ ಸ್ಥಳವು ಉತ್ತಮವಾಗಿರುತ್ತದೆ ಮತ್ತು ಇಲ್ಲಿ ನಿಮ್ಮ ಕಲ್ಪನೆಗಳು ಆಕಾರ ಪಡೆಯುತ್ತವೆ ಮತ್ತು ಸಂಗತಿಗಳು ನಿಮ್ಮ ಪರವಾಗಿರುತ್ತವೆ. ಅಲಸ್ಯವನ್ನು ನಿವಾರಿಸಿಕೊಳ್ಳಬೇಕು. ಸಹೋದ್ಯೋಗಿಗಳು ನಿರ್ಲಿಪ್ತವಾಗಿರುತ್ತಾರೆ. ಹೀಗಾಗಿ, ನಿಮ್ಮ ಸಾಮರ್ಥ್ಯದ ಮೇಲೆಯೇ ನೀವು ಅವಲಂಬಿತರಾಗಿರಬೇಕು. ಜನವರಿಯಿಂದ ಮಾರ್ಚ್‌ವರೆಗೆ ನಿಮ್ಮ ಗಳಿಕೆಯಲ್ಲಿ ಏರಿಕೆ ಸಾಧ್ಯತೆಯೂ ಇದೆ. ಅದರ ನಂತರ, ನಿಮ್ಮ ಪ್ರಯತ್ನಗಳು ಹೊಸ ಸಾಧ್ಯತೆಗಳನ್ನು ತೆರೆಯಬಹುದು. ಕೌಟುಂಬಿಕ ಜೀವನದಿಂದ ನೀವು ಹೊರಗಿಡಲ್ಪಟ್ಟಂತೆ ಭಾಸವಾಗುವುದರಿಂದ ಬದ್ಧತೆ ಮತ್ತು ಖುಷಿ ಕಡಿಮೆ ಇರಬಹುದು ಮತ್ತು ನಿಮ್ಮ ಕೌಟುಂಬಿಕ ಜೀವನಕ್ಕೆ ಸಾಕಷ್ಟು ಸಮಯವನ್ನು ಮೀಸಲಿಡಲು ಸಾಧ್ಯವಾಗದೇ ಇರಬಹುದು. ಈ ಬಗ್ಗೆ ನೀವು ಗಮನಹರಿಸಬೇಕು. ಕಡಿಮೆ ದೂರದ ಪ್ರಯಾಣಗಲು ಮತ್ತು ಕೆಲವು ದೀರ್ಘ ಅಥವಾ ವಿದೇಶ ಪ್ರಯಾಣವನ್ನು ನೀವು ನಡೆಸಬಹುದಾಗಿದೆ. ಮಕ್ಕಳು ಉತ್ತಮವಾಗಿರುತ್ತಾರೆ ಮತ್ತು ಉತ್ತಮ ಜೀವನವನ್ನು ನಡೆಸುತ್ತಾರೆ. ಮಕ್ಕಳು ಕಠಿಣ ಪರಿಶ್ರಮವಹಿಸುತ್ತಾರೆ ಮತ್ತು ನಂತರ ಅವರ ಕಠಿಣ ಪರಿಶ್ರಮದ ಫಲ ಅನುಭವಿಸುತ್ತಾರೆ. ಮಾರ್ಚ್‌ ನಂತರ ವೈವಾಹಿಕ ಜೀವನ ಪ್ರಗತಿ ಕಾಣುತ್ತದೆ. ಒಟ್ಟಾರೆಯಾಗಿ ನಿಮಗೆ ಪ್ರಗತಿಯ ವರ್ಷ ಇದಾಗಿರುತ್ತದೆ. ಆದಾಯವನ್ನು ಹೆಚ್ಚಿಸುವತ್ತ ನೀವು ಗಮನ ಹರಿಸಬೇಕು.

ವೃಶ್ಚಿಕ ರಾಶಿ ಭವಿಷ್ಯ(Vrushchika Rashi Bhavishya 2018)

ವೃಶ್ಚಿಕ 2018ರ ವೃಶ್ಚಿಕ ರಾಶಿ ಭವಿಷ್ಯದ ಪ್ರಕಾರ, ಈ ವರ್ಷವು ಕೆಲವು ಸವಾಲುಗಳನ್ನು ಹೊತ್ತು ತರಲಿದೆ ಮತ್ತು ಅವುಗಳನ್ನು ಎದುರಿಸಲು ನೀವು ಸಿದ್ಧವಿದ್ದರೆ ಸಾಧನೆ ನಿಮ್ಮ ಕಡೆಗಿರುತ್ತದೆ. ಜನವರಿಯಿಂದ ಮಾರ್ಚ್‌ವರೆಗೆ ನಿಮ್ಮ ಅರೋಗ್ಯ ಕ್ಷೀಣಿಸಬಹುದು. ಅದರ ನಂತರದಲ್ಲಿ ನೀವು ಇಂತಹ ಸಮಸ್ಯೆಗಳಿಂದ ಹೊರಬರುತ್ತೀರಿ ಮತ್ತು ಸಾಮರ್ಥ್ಯ ಗಳಿಸುತ್ತೀರಿ. ನಿಮ್ಮ ವಿರೋಧಿಗಳ ಮೇಲೆ ನೀವು ಯಶಸ್ಸು ಸಾಧಿಸುತ್ತೀರಿ. ಹಣಕಾಸಿನ ವಿಚಾರದಲ್ಲಿ, ವರ್ಷದಲ್ಲಿ ಮತ್ತು ಅದರಲ್ಲೂ ವಿಶೇಷವಾಗಿ ಅಕ್ಟೋಬರ್‌ನಲ್ಲಿ ನೀವು ನಿಮ್ಮ ಹಣಕಾಸಿನ ಮೇಲೆ ಪರಿಣಾಮ ಬೀರುವ ಹೆಚ್ಚುವರಿ ವೆಚ್ಚವನ್ನು ಹೊಂದಿರುತ್ತೀರಿ. ಅಕ್ಟೋಬರ್‌ ನಂತರ, ಉತ್ತಮ ಫಲಿತಾಂಶಗಳು ಹೆಚ್ಚಾಗಿ ಕಂಡುಬರುತ್ತವೆ. ಹೂಡಿಕೆ ಮಾಡುವ ಮೊದಲು ನೀವು ಪರಿಶೀಲನೆ ಮಾಡಬೇಕಿರುತ್ತದೆ. ಉತ್ತಮ ಆದಾಯವನ್ನು ಗಳಿಸಲು ನೀವು ಹೆಚ್ಚು ಪರಿಶ್ರಮ ಪಡಬೇಕಿರುವ ವರ್ಷ ಇದಾಗಿದೆ. ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದವರಿಗೆ ಈ ವರ್ಷ ಸೂಕ್ತವಾದದ್ದಾಗಿದೆ. ಮಕ್ಕಳು ಜೀವನವನ್ನು ಅನುಭವಿಸುತ್ತಾರೆ ಮತ್ತು ತುಂಟತನ ಮಾಡುತ್ತಾರೆ. ಗಮನ ಕೇಂದ್ರೀಕರಣ ಸಮಸ್ಯೆಯೂ ಇರಬಹುದು. ವರ್ಷದ ಬಹುತೇಕ ಸಮಯದಲ್ಲಿ ಕೌಟುಂಬಿಕ ಜೀವನದಲ್ಲಿ ಸೌಹಾರ್ದತೆ ಇರುತ್ತದೆ. ವೈವಾಹಿಕ ಜೀವನವು ಉತ್ತಮ ಫಲಿತಾಂಶ ನೀಡುತ್ತದೆ. ಬಾಳಸಂಗಾತಿಯು ನಿಮಗೆ ಪ್ರೋತ್ಸಾಹಕವಾಗಿರುತ್ತಾರೆ. ಕೆಲಸದ ಸ್ಥಳವು ಸವಾಲಿನದಾಗಿರುತ್ತದೆ ಮತ್ತು ಪ್ರಗತಿಯದ್ದಾಗಿರುತ್ತದೆ. ಒಟ್ಟಾರೆಯಾಗಿ ಮಿಶ್ರಿತ ಫಲಿತಾಂಶಗಳು ಕಂಡುಬರುತ್ತವೆ.

ಧನು ರಾಶಿ ಭವಿಷ್ಯ (Dhanu Rashi Bhavishya 2018)

ಧನು ರಾಶಿ ಧನು ರಾಶಿಯ 2018ರ ಭವಿಷ್ಯದ ಪ್ರಕಾರ, ಜೀವನದಲ್ಲಿ ಮುಂದೆ ಸಾಗಲು ನಿಮಗೆ ಹಲವು ಅವಕಾಶಗಳನ್ನು ಈ ವರ್ಷ ಒದಗಿಸುತ್ತದೆ. ಈ ವರ್ಷ ಪರಿಪೂರ್ಣವಾಗಲು ನಿಮ್ಮ ಬದ್ಧತೆ ಸಾಕಷ್ಟಿರಬೇಕು. ಆದಾಯ ಒಳಹರಿವು ಮಾರ್ಚ್‌ವರೆಗೆ ಹೆಚ್ಚುತ್ತದೆ. ನಂತರ ಮೇವರೆಗೆ ನಿಮ್ಮ ವೆಚ್ಚ ಹೆಚ್ಚಾಗುತ್ತದೆ. ಆದರೆ ಅದರ ನಂತರದಲ್ಲಿ ವರ್ಷಪೂರ್ತಿ ನೀವು ಉತ್ತಮ ದಿಕ್ಕಿನಲ್ಲಿ ಸಾಗುತ್ತೀರಿ. ಹೀಗಾಗಿ, ಹಣಕಾಸು ನಿಮ್ಮ ಚಿಂತೆಗೆ ಕಾರಣವಾಗುವುದಿಲ್ಲ. ನಿಮ್ಮ ಗಳಿಕೆಯ ದಾರಿಗಳನ್ನು ಹೆಚ್ಚಿಸುವುದರತ್ತ ಗಮನ ಹರಿಸಬೇಕು ಮತ್ತು ಒಂದಕ್ಕಿಂತ ಹೆಚ್ಚು ಮೂಲದಿಂದ ನೀವು ಗಳಿಸಬಹುದಾಗಿದೆ. ಶನಿಯು ಕಠಿಣ ಪರಿಶ್ರಮಕ್ಕೆ ನಿಮ್ಮನ್ನು ತಯಾರು ಮಾಡುತ್ತಾನೆ. ಆದರೆ, ಅತಿಯಾಗಿ ಕೆಲಸ ಮಾಡಬೇಡಿ. ಇದರಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಮಾರ್ಚ್‌ನಿಂದ ಮೇವರೆಗೆ ಸ್ವಲ್ಪ ಮಂಕಾದಂತೆ ಇರುತ್ತದೆ ಮತ್ತು ಅಕ್ಟೋಬರ್ ನಂತರ ಕೆಲವು ಆರೋಗ್ಯ ಸಮಸ್ಯೆ ಕಂಡುಬರಬಹುದು. ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ. ಮಕ್ಕಳು ಶ್ರಮಜೀವಿಗಳಾಗಿರುತ್ತಾರೆ ಮತ್ತು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಾರೆ. ಆಗಾಗ್ಗೆ ಸಣ್ಣಪುಟ್ಟ ಸಮಸ್ಯೆಗಳ ಹೊರತಾಗಿಯೂ ಕೌಟುಂಬಿಕ ಜೀವನ ಸೌಹಾರ್ದಯುತ ಹಾಗೂ ಉತ್ತಮವಾಗಿರುತ್ತದೆ. ಆದರೂ, ಕೌಟುಂಬಿಕ ಜೀವನದಲ್ಲಿ ನೀವು ದೂರವಾದಂತೆ ಅಥವಾ ಬದ್ದತೆ ಕಡಿಮೆಯಾದಂತೆ ಭಾಸವಾಗುವುದನ್ನು ದೂರವಿಡಬೇಕು ಮತ್ತು ತಪ್ಪು ಶಬ್ದಗಳನ್ನು ಹೊರಹಾಕಬಾರದು. ವೈವಾಹಿಕ ಜೀವನವು ಉತ್ತಮ ಫಲಿತಾಂಶ ನೀಡುತ್ತವೆ. .ಆದರೆ ಬಾಳಸಂಗಾತಿಯ ಆರೋಗ್ಯವು ನಿಮ್ಮನ್ನು ಚಿಂತೆಗೀಡು ಮಾಡಬಹುದು. ಪ್ರೇಮ ಜೀವನವು ಸಶಕ್ತವಾಗುತ್ತದೆ. ಶತ್ರುಗಳ ವಿರುದ್ಧ ನಿಮಗೆ ಮೇಲುಗೈಯಾಗುತ್ತದೆ. ಒಟ್ಟಾರೆಯಾಗಿ ನಿಮಗೆ ಉತ್ತಮ ವರ್ಷ ಇದಾಗಿರುತ್ತದೆ. ಆರೋಗ್ಯದ ಮೇಲೆ ಗಮನವಿರಲಿ.

ಮಕರ ರಾಶಿ ಭವಿಷ್ಯ(Makara Rashi Bhavishya 2018)

ಮಕರಜೀವನ ಏನು ಎಂಬುದನ್ನು ನೀವು 2018ರಲ್ಲಿ ತಿಳಿದುಕೊಳ್ಳುತ್ತೀರಿ. ಒಂದೆಡೆ ನಿಮ್ಮ ವೆಚ್ಚ ಹೆಚ್ಚಾಗುತ್ತದೆ ಮತ್ತು ನಿಮ್ಮ ಹಣಕಾಸು ಕುಸಿದಿದೆ ಎಂಬ ಭಾವವನ್ನೂ ನೀವು ಅನುಭವಿಸುತ್ತೀರಿ. ಇನ್ನೊಂದೆಡೆ, ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಆದರೆ, ನೀವು ಕೆಲವು ಬಾಹ್ಯ ಸಂಪರ್ಕಗಳನ್ನು ಗಳಿಸುತ್ತೀರಿ ಮತ್ತು ಅವುಗಳ ಮೂಲಕ ನಿಮ್ಮ ಆದಾಯ ಹೆಚ್ಚುತ್ತದೆ. 2018ರ ವೇದಿಕ್ ರಾಶಿಭವಿಷ್ಯದ ಪ್ರಕಾರ, ನೀವು ಆಧ್ಯಾತ್ಮಿಕ ಅಂಶಗಳನ್ನು ಬೆಳವಣಿಗೆ ಕಂಡುಕೊಳ್ಳುತ್ತೀರಿ ಮತ್ತು ಕೆಲವು ಕಾಲ ನೀವು ಐಹಿಕ ಜಗತ್ತಿನಿಂದ ಸಂಪರ್ಕ ಕಡಿದುಕೊಂಡಂತೆ ಭಾಸವಾಗುತ್ತೀರಿ. ಕೆಲಸದ ಸ್ಥಳದಲ್ಲಿ, ನೀವು ಅಧಿಕಾರ ಪಡೆಯುತ್ತೀರಿ. ಆದರೆ ವಿವಾದಗಳಿಂದ ದೂರವಿರುತ್ತಿರಿ. ನಿಮ್ಮ ಪ್ರೊಫೈಲ್ ಮತ್ತು ಗೌರವವು ಕೆಲಸದ ಸ್ಥಳದಲ್ಲಿ ಹೆಚ್ಚುತ್ತದೆ ಮತ್ತು ನೀವು ಹೊಸ ಅಸೈನ್‌ಮೆಂಟ್ ಪಡೆಯಬಹುದು ಅಥವಾ ಹೊಸ ಪ್ರಾಜೆಕ್ಟ್‌ ಪಡೆಯಬಹುದು. ವಿದ್ಯಾರ್ಥಿಗಳು ಶಿಕ್ಷಣದತ್ತ ಹಾಗೂ ಹೊಸ ಸಂಗತಿಗಳನ್ನು ಕಲಿಯುವುದರ ಕಡೆಗೆ ಹೆಚ್ಚು ಗಮನ ಹರಿಸುತ್ತಾರೆ. ಮಾರ್ಚ್‌ ಮತ್ತು ಮೇಯಲ್ಲಿ ಅವರು ತಮ್ಮ ಪರ ಅಲೆ ಇರುವುದರಿಂದ ಹಿರಿಯರೊಂದಿಗೆ ಉತ್ತಮ ಸಂಬಂಧವನ್ನು ನಿರ್ವಹಿಸುತ್ತಾರೆ. ಕೌಟುಂಬಿಕ ಜೀವನ ಉತ್ತಮವಾಗಿರುತ್ತದೆ ಮತ್ತು ಒಟ್ಟಾಗಿರುವಿಕೆಯು ಹೆಚ್ಚು ಸಾಮರ್ಥ್ಯವನ್ನು ನೀಡುತ್ತದೆ. ವೈವಾಹಿಕ ಜೀವನದಲ್ಲಿ ಕೆಲವು ತಪ್ಪುಗ್ರಹಿಕೆಗಳು ಕಂಡುಬರಬಹುದು. ಇದನ್ನು ನೀವು ನಿವಾರಿಸಬೇಕು. ಅಕ್ಟೋಬರ್‌ ನಂತರ, ನಿಮ್ಮ ವೈವಾಹಿಕ ಜೀವನ ಸುಧಾರಿಸುತ್ತದೆ ಮತ್ತು ನೀವು ವೈಯಕ್ತಿಕ ಜೀವನವನ್ನು ಖುಷಿಪಡುತ್ತೀರಿ. ಒಟ್ಟಾರೆಯಾಗಿ, ಜೀವನದಲ್ಲಿ ಮುಂದೆ ಸಾಗಲು ಮತ್ತು ನಿಮ್ಮ ದೌರ್ಬಲ್ಯವನ್ನು ಸುಧಾರಿಸಿಕೊಳ್ಳಲು ಉತ್ತಮ ವರ್ಷವಾಗಿದೆ.

ಕುಂಭ ರಾಶಿ ಭವಿಷ್ಯ (Kumbha Rashi Bhavishya 2018)

 ಕುಂಭರಾಶಿ ಇದು 2018ರಲ್ಲಿ ಕುಂಭ ರಾಶಿಯವರಿಗೆ ಭವಿಷ್ಯವಾಗಿದೆ. ವರ್ಷದ ಅವಧಿಯಲ್ಲಿ ನಿಮ್ಮ ನಿರ್ಧಾರಗಳು ಅಡಿಪಾಯ ಹಾಕುತ್ತವೆ. ನಿಮ್ಮ ಮೂಲ ಗಮನವು ಶ್ರೀಮಂತಿಕೆಯನ್ನು ಹೆಚ್ಚಿಸುವುದಾಗಿರುತ್ತದೆ ಮತ್ತು ನಿಮ್ಮ ಕಠಿಣ ಪರಿಶ್ರಮದಿಂದ ನೀವು ಈ ವರ್ಷವನ್ನು ಗಳಿಕೆಯ ವರ್ಷವನ್ನಾಗಿಸುತ್ತೀರಿ ಮತ್ತು ಹಣಕಾಸು ಸ್ಥಿತಿಯು ಸುಧಾರಿಸುತ್ತದೆ. ದೀರ್ಘ ಪ್ರಯಾಣದ ಸಾಧ್ಯತೆಯಿದೆ. ನೀವು ಉತ್ತಮ ಹಾಗೂ ಉತ್ಪಾದಕ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ನಿಮ್ಮ ಆರೋಗ್ಯದ ಸ್ಥಿತಿ ಉತ್ತಮವಾಗಿರುತ್ತದೆ ಮತ್ತು ಯಾವುದೇ ಈ ಹಿಂದಿನ ಅನಾರೋಗ್ಯದಿಂದ ದೂರವಿರುತ್ತೀರಿ. ಹಿರಿಯರು ನಿಮ್ಮನ್ನು ಮೆಚ್ಚುತ್ತಾರೆ. ನೀವು ಪುಣ್ಯದ ಕೆಲಸಗಳಲ್ಲಿ ತೊಡಗುತ್ತೀರಿ. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಬಾಂಧವ್ಯದ ಭಾವ ಮೂಡುತ್ತದೆ. ಆದರೂ, ಮೊದಲ ಎರಡು ತಿಂಗಳು ಸ್ವಲ್ಪ ಸವಾಲಿನದಾಗಿರುತ್ತದೆ. ನಿಮ್ಮ ಬಾಳಸಂಗಾತಿಯಲ್ಲಿ ಕೆಲವು ಅನಾರೋಗ್ಯ ಅಥವಾ ವಾಗ್ವಾದಗಳು ಉಂಟಾಗಬಹುದು. ಪ್ರೇಮ ಸಂಬಂಧದಲ್ಲಿರುವವರು ಹೆಚ್ಚು ಗಮನ ಕೇಂದ್ರೀಕರಿಸಬೇಕಾಗುತ್ತದೆ ಮತ್ತು ಪರಸ್ಪರರು ಉತ್ತಮವಾಗಿ ಅರ್ಥ ಮಾಡಿಕೊಳ್ಳಬೇಕಿರುತ್ತದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ವಹಿಸಬೇಕು ಮತ್ತು ಮಕ್ಕಳು ಸ್ವಲ್ಪ ಕಿರಿಕಿರಿ ಅನುಭವಿಸುತ್ತಾರೆ. ಆದರೆ ನಿಮ್ಮ ಪ್ರೀತಿ ಮತ್ತು ಕಾಳಜಿ ಅವರನ್ನು ಉತ್ತಮಗೊಳಿಸುತ್ತದೆ. ಒಟ್ಟಾರೆಯಾಗಿ ನಿಮಗೆ ಧನಾತ್ಮಕ ಹಾಗೂ ಪ್ರಗತಿಯ ವರ್ಷ ಇದಾಗಿರುತ್ತದೆ.

ಮೀನ ರಾಶಿ ಭವಿಷ್ಯ (Meena Rashi Bhavishya 2018)

 ಮೀನರಾಶಿ 2018ರ ರಾಶಿಭವಿಷ್ಯದ ಪ್ರಕಾರ ವರ್ಷಪೂರ್ತಿ ತಮ್ಮ ಆರೋಗ್ಯದ ಕಾಳಜಿಯನ್ನು ಸೂಕ್ಷ್ಮ ಮೀನ ರಾಶಿ ವ್ಯಕ್ತಿಗಳು ತೆಗೆದುಕೊಳ್ಳಬೇಕಾಗುತ್ತದೆ. ಅದರಲ್ಲೂ ಅಕ್ಟೋಬರ್‌ವರೆಗೆ ಹೆಚ್ಚು ಕಾಳಜಿ ವಹಿಸಬೇಕು. ಅದರ ನಂತರ ಅವರು ಜೀವನವನ್ನು ಉತ್ತಮವಾಗಿ ಅನುಭವಿಸುತ್ತಾರೆ. ಅತಿಯಾದ ಒತ್ತಡ ಮತ್ತು ಅತಿಯಾದ ಕೆಲಸ ನಿಮ್ಮನ್ನು ಸಂಕಷ್ಟಕ್ಕೆ ದೂಡುತ್ತದೆ. ಕೆಲಸದ ಸ್ಥಳದಲ್ಲಿ, ನಿರೀಕ್ಷಿತ ಫಲಿತಾಂಶಗಳನ್ನು ಪಡೆಯಲು ಹೆಚ್ಚುವರಿ ಪ್ರಯತ್ನ ಹಾಕುವುದರಲ್ಲಿ ನೀವು ನಂಬಿಕೆ ಇರಿಸಬೇಕು. ಹಿರಿಯರು ಬೇಡಿಕೆ ಇಡುತ್ತಾರೆ. ಹೀಗಾಗಿ ಒಂದೇ ಬಾರಿಗೆ ನೀವು ಈ ಎಲ್ಲವನ್ನೂ ನಿರ್ವಹಿಸಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಜನವರಿಯು ಸ್ವಲ್ಪ ಸವಾಲಿನ ವಿಷಯವಾಗಿರುತ್ತದೆ. ಹೀಗಾಗಿ ಯಾವುದೇ ದೊಡ್ಡ ವಹಿವಾಟನ್ನು ಫೆಬ್ರವರಿಗೆ ಮುಂದೂಡಿ. ಅದರ ನಂತರ ನಿಮ್ಮ ಆದಾಯವು ಉತ್ತಮ ಹರಿವು ಕಾಣುತ್ತದೆ. ಯಾವುದೇ ಈಡೇರದ ಪ್ರಯಾಣ ಈ ಅವಧಿಯಲ್ಲಿ ನಡೆಯಬಹುದಾಗಿದೆ. ವೈವಾಹಿಕ ಜೀವನ ಉತ್ತಮವಾಗಿರುತ್ತದೆ ಮತ್ತು ನಿಮ್ಮ ಬಾಳಸಂಗಾತಿಯು ನಿಮಗೆ ಎಲ್ಲ ದೃಷ್ಟಿಯಿಂದಲೂ ನೆರವಾಗುತ್ತಾರೆ. ವೃತ್ತಿಪರ ಅಂಶಗಳಿಂದ ನಿಮ್ಮ ಪ್ರಸ್ತುತ ನಿವಾಸವನ್ನು ನೀವು ಬದಲಿಸಬಹುದು. ಮಕ್ಕಳು ತುಂಟತನ ಮಾಡುತ್ತಾರೆ ಮತ್ತು ಅವರನ್ನು ನೀವು ಉತ್ತಮ ದಿಕ್ಕಿಗೆ ಮಾರ್ಗದರ್ಶಿಸಬೇಕು. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಅಡ್ಡದಾರಿಗಳನ್ನು ಕಂಡುಕೊಳ್ಳುತ್ತಾರೆ ಮತ್ತು ಅವರು ಮಾನಸಿಕವಾಗಿ ಅಸ್ಥಿರವಾಗುತ್ತಾರೆ. ಉತ್ತಮ ಫಲಿತಾಂಶಗಳನ್ನು ನೀಡುವ ಅಡ್ಡ ದಾರಿಗಳನ್ನು ನೀವೂ ಜೀವನದಲ್ಲಿ ಹಿಡಿಯಬಹುದು. ಆದರೆ ನಂತರ ಅವುಗಳನ್ನು ನಿಲ್ಲಿಸಬೇಕಿರುತ್ತದೆ. ಅಕ್ಟೋಬರ್ ನಂತರ, ನೀವು ಜೀವನದಲ್ಲಿ ಹೆಚ್ಚು ಧನಾತ್ಮಕ ಬದಲಾವಣೆಗಳನ್ನು ಕಂಡುಕೊಳ್ಳುತ್ತೀರಿ. ಒಟ್ಟಾರೆಯಾಗಿ, ಈ ವರ್ಷದಲ್ಲಿ ನಿಮ್ಮ ಆರೋಗ್ಯದ ಮೇಲೆ ನೀವು ಮೊದಲ ಆದ್ಯತೆ ನೀಡಬೇಕು ಮತ್ತು ಜೀವನದ ವಿವಿಧ ಹಂತದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬೇಕಿದೆ.

ಇದು 2018ರಲ್ಲಿ ನಾವು ನಿಮಗಾಗಿ ನೀಡಬಹುದಾದ ಸಂಗತಿಗಳಾಗಿವೆ. ಈ ಉಚಿತ ಭವಿಷ್ಯದ ಉತ್ತಮ ಬಳಕೆ ಮಾಡಿಕೊಳ್ಳಿ ಮತ್ತು ಈ ವರ್ಷವನ್ನು ಇನ್ನಷ್ಟು ಉತ್ತಮವಾಗಿಸಿ.

Read Other Zodiac Sign Horoscope 2018

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 399/-

Brihat Horoscope

AstroSage on MobileAll Mobile Apps

AstroSage TVSubscribe

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com

Reports

Live Astrologers