ವೈವಾಹಿಕ ಮತ್ತು ಮಕ್ಕಳ ರಾಶಿ ಭವಿಷ್ಯ 2020 - Married Life and Children Horoscope 2020 in Kannada
ಹೊಸ ವರ್ಷದ ಬಗ್ಗೆ ನಮ್ಮ ಮನಸ್ಸಿನಲ್ಲಿ ಹೊಸ ಭರವಸೆಗಳು ಜಾಗೃತಗೊಳ್ಳಲು ಪ್ರಾರಂಭಿಸುತ್ತವೆ. ನಾವು ಹೊಸ ಉತ್ಸಾಹದೊಂದಿಗೆ ನಮ್ಮ ಗುರಿಗಳನ್ನು ಸಾಧಿಸಲು ಪ್ರತಿಜ್ಞೆ ಮಾಡುತ್ತೇವೆ. ಇದರೊಂದಿಗೆ ನಮ್ಮ ಮನಸ್ಸಿನಲ್ಲಿ ಈ ಹೊಸ ವರ್ಷ ನಮಗಾಗಿ ಹೇಗಿರುತ್ತದೆ ಎಂಬುವ ಪ್ರಶ್ನೆಯು ಬರುತ್ತದೆ. ವರ್ಷ 2020 ಮತ್ತು ನಿಮ್ಮ ಜೀವನದ ನಡುವಿನ ಅಂತರವು ಸ್ವಲ್ಪ ದೂರದಲ್ಲಿದೆ. ಆದ್ದರಿಂದ ಮುಂಬರುವ ವರ್ಷ 2020 ಹೇಗಿರುತ್ತದೆ ಮತ್ತು ನಿಮ್ಮ ಜೀವನದ ಮೇಲೆ ಏನು ಪರಿಣಾಮಗಳು ಬೀರುತ್ತವೆ ಎಂಬುವ ಅನೇಕ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಬರುವುದು ಕಡ್ಡಾಯ.
ವೈದಿಕ ಜ್ಯೋತಿಷ್ಯದಲ್ಲಿ, ನಕ್ಷತ್ರಪುಂಜಗಳನ್ನು ಒಟ್ಟು 12 ರಾಶಿಚಕ್ರ ಚಿಹ್ನೆಗಳಾಗಿ ವಿಂಗಡಿಸಲಾಗಿದೆ. ಮೇಷ, ವೃಷಭ , ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನಾ ಇವು 12 ರಾಶಿಚಕ್ರ ಚಿಹ್ನೆಗಳು. ಪ್ರತಿಯೊಬ್ಬ ವ್ಯಕ್ತಿ ಯಾವುದಾದರು ಒಂದು ರಾಶಿಚಕ್ರದ ಒಳಗೆ ಜನಿಸುತ್ತಾನೆ. ಅದರ ಪರಿಣಾಮವಾಗಿ ಅವನಿಗೆ ಪ್ರವೃತ್ತಿ ಇದೆ. ಎಲ್ಲಾ ರಾಶಿಚಕ್ರ ಚಿಹ್ನೆಗಳು ವಿಭಿನ್ನ ಅಧಿಪತಿ ಗ್ರಹಗಳನ್ನು ಹೊಂದಿರುತ್ತವೆ. ಮತ್ತು ನಿರ್ದಿಷ್ಟ ವಿಭಾಗದಲ್ಲಿ ವಿಭಿನ್ನ ಗ್ರಹಗಳ ನಿರ್ದಿಷ್ಟ ರಾಶಿಚಕ್ರದಲ್ಲಿ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಉದಾಹರಣೆಗೆ, ಮೇಷ ರಾಶಿಚಕ್ರದ ಅಧಿಪತಿ ಮನಗಳ, ವೃಷಭ ರಾಶಿಚಕ್ರದ ಮಾಲೀಕ ಶುಕ್ರ ಮತ್ತು ಮಿಥುನ ರಾಶಿಚಕ್ರದ ಅಧಿಪತಿ ಬುಧ. ಅಂತಹ ಪರಿಸ್ಥಿತಿಯಲ್ಲಿ, ಒಂದು ನಿರ್ದಿಷ್ಟ ವರ್ಷದಲ್ಲಿ ಯಾವ ಗ್ರಹಗಳು ನಿಮ್ಮ ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತವೆ ಮತ್ತು ಆ ಪರಿಣಾಮವು ಅನುಕೂಲಕರವಾಗಿದೆಯೇ ಅಥವಾ ಪ್ರತಿಕೂಲವಾಗಿದೆಯೇ ಎಂದು ತಿಳಿಯುವುದು ಬಹಳ ಮುಖ್ಯ. ಈ ಜಾತಕ 2020 ರ ಸಹಾಯದಿಂದ, ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಜನರ ಜೀವನದಲ್ಲಿ ಯಾವ ಪ್ರಮುಖ ಬದಲಾವಣೆಗಳು ಸಂಭವಿಸಲಿವೆ , ಈ ಮಾಹಿತಿಯನ್ನು ನಿಮಗೆ ಪ್ರಸ್ತುತಪಡಿಸಲಿದೆ. ಆದ್ದರಿಂದ 2020 ರಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾದ ರಾಶಿಚಕ್ರಗಳು ಯಾವುವು ಮತ್ತು ಜೀವನದಲ್ಲಿ ಮುಂದುವರಿಯಲು ಅವಕಾಶವನ್ನು ಪಡೆಯುವ ರಾಶಿಚಕ್ರಗಳು ಯಾವುವು ಎಂದು ನಿಮಗೆ ತಿಳಿಯುತ್ತದೆ.
ನಮ್ಮ ಭವಿಷ್ಯವನ್ನು ರೂಪಿಸುವಲ್ಲಿ ಮದೆವೆಯಂತಹ ನಿಕಟ ಒಡನಾಟವು ಪ್ರಮುಖ ಪಾತ್ರವಹಿಸುತ್ತದೆ. ಏಕೆಂದರೆ ಅದು ಎರಡು ದೇಹಗಳನ್ನು ತಮ್ಮ ಉಳಿದ ಜೀವನಕ್ಕೆ ಒಂದೇ ಆತ್ಮವಾಗಿ ಮಾಡುತ್ತದೆ. ಒಬ್ಬ ವ್ಯಕ್ತಿಯು ತನ್ನ ದಾಂಪತ್ಯ ಜೀವನದಲ್ಲಿ ಬಹಳಷ್ಟು ಜವಾಬ್ದಾರಿಗಳು, ಕರ್ತವ್ಯಗಳು ಮತ್ತು ನಂಬಿಕೆಯನ್ನು ಒಳಗೊಂಡಿರುತ್ತಾನೆ. ಅದಕ್ಕಾಗಿ ಉತ್ತಮ ಪಾಲುದಾದರೊಂದಿಗೆ ಸಂಪರ್ಕ ಸಾಧಿಸುವುದು ಹೆಚ್ಚು ಮುಖ್ಯವಾಗಿರುತ್ತದೆ. ಮುಂದೆ ಅದ್ಭುತ ಜೀವನವನ್ನು ನಡೆಸಲು ಫಲಪ್ರದ ಬಂಧವು ಸಹಾಯ ಮಾಡುತ್ತದೆ. ಮುಂದಿನ ಪೀಳಿಗೆಯನ್ನು ಅತ್ಯಂತ ಶ್ರದ್ಧೆ ಮತ್ತು ಕಠಿಣತೆಯಿಂದ ಮುಂದುವರಿಸುವುದು ಅತ್ಯಗತ್ಯವಾದ್ದರಿಂದ ಒಬ್ಬರು ಪರವಾಗಿ ರಚಿಸಲು ಬಯಸಿದಾಗ ಇದು ಅಗತ್ಯವಾಗುತ್ತದೆ. ಆದ್ದರಿಂದ, 2020 ರ ವೈವಾಹಿಕ ಮತ್ತು ಮಕ್ಕಳ ಜಾತಕದ ದೃಷ್ಟಿಯಿಂದ ಇನ್ನಷ್ಟು ತಿಳಿದುಕೊಳ್ಳಲು ಮುಂದೆ ಓದಿ.
ಹೊಸ ವರ್ಷಕ್ಕೆ ಧುಮುಕಿದ ತಕ್ಷಣ, ಕೆಲವು ಸ್ಥಳೀಯರು ತಮ್ಮ ದಾಂಪತ್ಯ ಜೀವನವನ್ನು ಉತ್ತಮಗೊಳಿಸಲು ಮತ್ತು ಹೊಸ ವರ್ಷದಿಂದ ಎಲ್ಲವನ್ನು ಚೆನ್ನಾಗಿ ನಿರ್ವಹಿಸಲು ಆರಂಭಿಸುತ್ತಾರೆ. ಕೆಲವರು ತಮ್ಮ ಮಕ್ಕಳ ಬಗ್ಗೆ ತಿಳಿಯಲು ಉತ್ಸುಕರಾಗಿರುತ್ತಾರೆ. ಇಂದಿನವರೆಗೂ ಒಬ್ಬಂಟಿಯಾಗಿರುವವರು, ಇನ್ನು ಎಷ್ಟು ಸಮಯ ಕಾಯಬೇಕೆಂದು ಯೋಚಿಸುತ್ತಾರೆ.
ನಮ್ಮ ಈ ರಾಶಿ ಭವಿಷ್ಯ 2020 ರ ಮೂಲಕ, ನೀವು ನಿಮ್ಮ ದಾಂಪತ್ಯ ಜೀವನ ಮತ್ತು ಮಕ್ಕಳ ಬಗ್ಗೆ ನಿಖರವಾದ ಮುನ್ಸೂಚನೆಯನ್ನು ಪಡೆಯಬಹುದು. ಉದಾಹರಣೆಗೆ :- ಒಬ್ಬಂಟಿಯಾಗಿರುವವರು ತಮ್ಮ ಜೀವನದಲ್ಲಿ ಯಾವ ಸಮಯದಲ್ಲಿ ತಮ್ಮ ಪಾಲುದಾರರನ್ನು ಭೇಟಿಯಾಗಬಹುದು, ಅವರ ಮದುವೆ ಯಾವಾಗ ಸಂಭವಿಸುತ್ತದೆ, ವಿವಾಹಿತರು ತಮ್ಮ ದಾಂಪತ್ಯ ಜೀವನದಲ್ಲಿ ಯಾವ ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ, ದಾಂಪತ್ಯ ಜೀವನದಲ್ಲಿ ಅವರು ಎಷ್ಟು ಮಕ್ಕಳನ್ನು ಹೊಂದಿರುತ್ತಾರೆ, ಮಕ್ಕಳ ಅರೋಗ್ಯ, ಜೀವನ ಸಂಗಾತಿಯ ಅರೋಗ್ಯ, ಮಕ್ಕಳ ಶೈಕ್ಷಣಿಕ ಜೀವನ ಹೇಗಿರುತ್ತದೆ, ಯಾವ ವಿಷಯದಲ್ಲಿ ಅವರು ಮುಂದುವರಿಯುತ್ತಾರೆ, ಜೀವನ ಸಂಗಾತಿಯ ಮೂಲಕ ಲಾಭವಾಗುತ್ತದೆಯೋ ಅಥವಾ ನಷ್ಟವಾಗುತ್ತದೆಯೋ ಮತ್ತು ಇದಲ್ಲದೆ ಜೀವನ ಸಂಗಾತಿ ತನ್ನ ಎಲ್ಲಾ ಕರ್ತವ್ಯಗಳನ್ನು ಪೂರ್ಣಗೊಳಿಸುತ್ತಾರೋ ಇಲ್ಲವೋ ಎಂಬುದರ ಬಗ್ಗೆಯೂ ತಿಳಿಯಬಹುದು. ನಮ್ಮ ಈ ರಾಶಿ ಭವಿಷ್ಯ 2020 ರ ಮೂಲಕ, ನೀವು ನಿಮ್ಮ ಮಾವಂದಿರೊಂದಿಗೆ ಎಂತಹ ಸಂಬಂಧವನ್ನು ಹೊಂದಿರುತ್ತೀರಿ ಎಂಬುದರ ಬಗ್ಗೆಯೂ ತಿಳಿಯಬಹುದು.
ಒಟ್ಟಾರೆಯಾಗಿ ಈ ವರ್ಷ 2020 ರಲ್ಲಿ ಹನ್ನೆರಡು ರಾಶಿಚಕ್ರಗಳ ಸ್ಥಳೀಯರ ದಾಂಪತ್ಯ ಜೀವನ ಮತ್ತು ಮಕ್ಕಳ ಬಗ್ಗೆ ಇಡೀ ವರ್ಷದ ಮುನ್ಸೂಚನೆಯನ್ನು ಕಾಣಬಹುದು ಮತ್ತು ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸಲು ಪರಿಹಾರಗಳನ್ನು ಸಹ ಪಡೆಯಬಹುದು.
ಮೇಷ ರಾಶಿಭವಿಷ್ಯ 2020 ರ ಪ್ರಕಾರ ವೈವಾಹಿಕ ಜೇವನ ಮತ್ತು ಸಂತಾನ
ಮೇಷ ರಾಶಿ ಭವಿಷ್ಯ 2020 ರ ಪ್ರಕಾರ ಈ ವರ್ಷ ನಿಮ್ಮ ದಾಂಪತ್ಯಅಂದರೆ ವೈವಾಹಿಕ ಜೇವನಕ್ಕೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ ಎಂದು ಸಾಬೀತುಪಡಿಸುತ್ತದೆ. ಹೇಗಾದರೂ, ಈ ವರ್ಷ ನಿಮ್ಮ ಮಕ್ಕಳಿಗೆ ತುಂಬಾ ಒಳ್ಳೆಯದು ಮತ್ತು ಅವರು ಯಾವುದೇ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯಬಹುದು. ಪ್ರೀತಿಯ ಮದುವೆಗಾಗಿ ಪ್ರಯತ್ನಿಸುವ ಜನರು ಹೆಚ್ಚು ಶ್ರಮಿಸಬೇಕಾಗುತ್ತದೆ ಏಕೆಂದರೆ ಈ ವರ್ಷ ಅವರ ಮುಂದೆ ಅನೇಕ ಅಡತಡೆಗಳು ಉಂಟಾಗಬಹುದು, ಅದನ್ನು ಅವರು ಎದುರಿಸಬೇಕಾಗುತ್ತದೆ. ಅಕ್ಟೋಬರ್‌ನಿಂದ ನವೆಂಬರ್ ಮಧ್ಯದವರೆಗೆ ಸಮಯವು ಅವರಿಗೆ ತುಂಬಾ ಅನುಕೂಲಕರವಾಗಿರಬಹುದು ಮತ್ತು ಆದ್ದರಿಂದ ಅವರ ಪ್ರಯತ್ನಗಳು ಬಣ್ಣವನ್ನು ತರುತ್ತವೆ.
ಮೇಷ ರಾಶಿ ಭವಿಷ್ಯ 2020 ರ ಪ್ರಕಾರ ಈ ವರ್ಷ, ನಿಮ್ಮ ಮಗು ಸಾಕಷ್ಟು ಪ್ರಗತಿ ಸಾಧಿಸುತ್ತದೆ ಮತ್ತು ಅವರ ನಡವಳಿಕೆ ಮತ್ತು ಅವರ ಶಿಕ್ಷಣದ ಪ್ರಗತಿಯ ಬಗ್ಗೆ ನೀವು ಸಾಕಷ್ಟು ತೃಪ್ತರಾಗಿ ಕಾಣುವಿರಿ. ಅವರ ಜೀವನದಲ್ಲಿ ಪ್ರಬುದ್ಧತೆ ಬರುತ್ತದೆ ಮತ್ತು ಅವರು ಮೊದಲಿಗಿಂತ ಜೀವನವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಾರೆ. ಜನವರಿಯಿಂದ ಮಾರ್ಚ್‌ವರೆಗೆ ಮತ್ತು ನಂತರ ನವೆಂಬರ್ ಮಧ್ಯದಿಂದ ಡಿಸೆಂಬರ್‌ವರೆಗೆ ಅವರಿಗೆ ಹೆಚ್ಚು ಅನುಕೂಲಕರವಾಗಿಲ್ಲ, ಆದ್ದರಿಂದ ಈ ಸಮಯದಲ್ಲಿ ಅವರ ಆರೋಗ್ಯ ಮತ್ತು ಅವರ ದಿನಚರಿಯ ಬಗ್ಗೆ ಗಮನ ಹರಿಸಿ.
ನಿಮ್ಮ ವೈವಾಹಿಕ ಜೇವನ ಸಂತೋಷವಾಗಿ ಉಳಿದಿರುತ್ತದೆ. ನಿಮ್ಮ ಧೈಯವನ್ನು ಕಾಪಾಡಿಕೊಳ್ಳಿ ಮತ್ತು ಜೀವನದ ಮೌಲ್ಯಗಳ ಬಗೆಗಿನ ನಿಮ್ಮ ಜವಾಬ್ದಾರಿಯನ್ನು ಸಹ ನೆನಪಿಡಿ. ಆದಾಗ್ಯೂ, ವರ್ಷದ ಕೊನೆಯಲ್ಲಿ, ನಿಮ್ಮ ಅತ್ತೆಮನೆಯ ಕಡೆಯಿಂದ ಕೆಲವು ಗೊಂದಲಗಳು ಉಂಟಾಗಬಹುದು.ಅಕ್ಟೋಬರ್‌ನಿಂದ ನವೆಂಬರ್‌ವರೆಗೆ, ನಿಮ್ಮ ಸಂಗಾತಿಯೊಂದಿಗೆ ಯಾವುದರ ಬಗ್ಗೆಯೂ ಭಿನ್ನಾಭಿಪ್ರಾಯಗಳು ಉಂಟಾಗಬಹುದು, ಆದ್ದರಿಂದ ನೀವು ಎಲ್ಲ ಸಮಸ್ಯೆಗಳನ್ನು ಸಮಯಕ್ಕೆ ತೆರವುಗೊಳಿಸಿ ಇದರಿಂದ ನೀವು ನಂತರ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ.
ಮೇಷ ರಾಶಿಯ ಜಾತಕವನ್ನು ವಿವರವಾಗಿ ಓದಿ - 2020 ಮೇಷ ರಾಶಿ ಭವಿಷ್ಯ
ವೃಷಭ ರಾಶಿ ಭವಿಷ್ಯ 2020 ರ ಪ್ರಕಾರ ವೈವಾಹಿಕ ಜೀವನ ಮತ್ತು ಸಂತಾನ
ವೃಷಭ ರಾಶಿ ಭವಿಷ್ಯ 2020 ರ ಪ್ರಕಾರ ವೃಷಭ ರಾಶಿಚಕ್ರದ ಜನರ ದಾಂಪತ್ಯ ಜೇವನಕ್ಕೆ ಈ ವರ್ಷದ ಆರಂಭವು ತುಂಬಾ ಒಳ್ಳೆಯದಲ್ಲ. ಅವರು ತಮ್ಮ ಜೀವನ ಸಂಗಾತಿಯ ಕೋಪ ಮತ್ತು ಅಹೆಮ್ನ ಸಂಘರ್ಷದಿಂದ ಬದುಕುಳಿಯಬೇಕಾಗಿದೆ ಇಲ್ಲದಿದ್ದರೆ ನಿಮ್ಮ ದಾಂಪತ್ಯ ಜೇವನವು ತೊಂದರೆಗಳಿಂದ ತುಂಬಿರಬಹುದು. ನೀವು ತುಂಬಾ ಧೈರ್ಯದಿಂದ ಕೆಲಸ ಮಾಡಬೇಕು ಮತ್ತು ಪ್ರತಿಯೊಂದು ಹೆಜ್ಜೆಯನ್ನು ಬುದ್ಧಿವಂತಿಕೆಯಿಂದ ಮುಂದುವರಿಸಬೇಕು, ಆಗ ಮಾತ್ರ ನೀವು ನಿಮ್ಮ ದಾಂಪತ್ಯ ಜೇವನವನ್ನು ಆನಂದಿಸಲು ಸಾಧ್ಯವಾಗುತ್ತದೆ.
ಮಾರ್ಚ್ ತಿಂಗಳಲ್ಲಿ ನೀವು ಹೆಚ್ಚು ಗಮನ ಹರಿಸಬೇಕು ಏಕೆಂದರೆ ಈ ಸಮಯದಲ್ಲಿ ನಿಮ್ಮ ಅತ್ತೆಮನೆ ಸದಸ್ಯರೊಂದಿಗೆ ನಿಮ್ಮ ಜಗಳ ಸಂಭವಿಸಬಹುದು ಅಥವಾ ನಿಮ್ಮ ಜೆವೀಣಾ ಸಂಗಾತಿಯ ಮೂಲಕ ತನ್ನ ತವರುಮನೆಯ ಪರವಾಗಿರುವ ಕಾರಣದಿಂದ ನಿಮ್ಮಿಬ್ಬರ ನಡುವೆ ಬಿರುಕು ಉಂಟಾಗಬಹುದು. ಇದರ ನಂತರ ಡಿಸೆಂಬರ್ ತಿಂಗಳಲ್ಲಿ ನಿಮ್ಮ ಜೇವನ ಸಂಗಾತಿಯ ಆರೋಗ್ಯವು ಹದಗೆಡುವ ಸಮಸ್ಯೆಗಳು ಹೆಚ್ಚಾಗಬಹುದು
ಫೆಬ್ರವರಿ, ಏಪ್ರಿಲ್, ಮೇ ಮತ್ತು ಡಿಸೆಂಬರ್ ತಿಂಗಳುಗಳು ನಿಮ್ಮ ವೈವಾಹಿಕ ಜೇವನಕ್ಕಾಗಿ ಉತ್ತಮವಾಗಿರುತ್ತವೆ. ಈ ಸ್ಮಾಸಮಯದಲ್ಲಿ ತ್ತು ನಿಮ್ಮ ಜೇವನ ಸಂಗಾತಿಯ ನಡುವೆ ಆಕರ್ಷಣೆ, ಪ್ರೀತಿ, ಪ್ರಣಯ ಮತ್ತು ಸಮರ್ಪಣೆಯ ಮನೋಭಾವ ಬೆಳೆಯುತ್ತದೆ. ಪರಸ್ಪರ ಬಗ್ಗೆ ತಿಳುವಳಿಕೆ ಬೆಳೆಯುತ್ತದೆ ಮತ್ತು ಇದರಿಂದ ನಿಮ್ಮ ವೈವಾಹಿಕ ಜೀವನವು ಸಿಹಿಯಾಗಿರುತ್ತದೆ
ನಾವು ಮಕ್ಕಳ ಬಗ್ಗೆ ಮಾತನಾಡಿದರೆ, ವರ್ಷದ ಆರಂಭವು ಅವರಿಗೆ ತುಂಬಾ ಶುಭವಾಗುವುದಿಲ್ಲ. ಎಂಟನೇ ಮನೆಯಲ್ಲಿ ಗುರು ಇರುವಿಕೆಯು ನಿಮ್ಮ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅವರ ಶಿಕ್ಷಣಕ್ಕೆ ತೊಂದರೆಗಳು ಮತ್ತು ಅಡೆತಡೆಗಳನ್ನು ಉಂಟುಮಾಡುತ್ತದೆ. ಆದರೆ ಏಪ್ರಿಲ್ ನಿಂದ ಜುಲೈ ಆರಂಭದ ಅವಧಿ ಮಕ್ಕಳಿಗೆ ತುಂಬಾ ಶುಭ. ಈ ಸಮಯದಲ್ಲಿ, ಹೊಸದಾಗಿ ಮದುವೆಯಾದ ಕೆಲವು ಜನರು ಸಂತಾನೋತ್ಪತ್ತಿ ಉಡುಗೊರೆಯನ್ನು ಪಡೆಯುತ್ತಾರೆ ಎಂದು ಅಂತಹ ಚಿಹ್ನೆಗಳು ಕಂಡುಬರುತ್ತವೆ. ನೀವು ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ, ಸೆಪ್ಟೆಂಬರ್ ನಂತರ, ನಿಮ್ಮ ಇತರ ಮಕ್ಕಳ ಆರೋಗ್ಯವು ಹದಗೆಡಬಹುದು, ಆದ್ದರಿಂದ ಅವರ ಮೇಲೆ ವಿಶೇಷ ಗಮನ ಹರಿಸಬೇಕಾಗುತ್ತದೆ.
ಪ್ಟೆಂಬರ್ ನಂತರ ನಿಮ್ಮ ಮಗು ಉನ್ನತ ಶಿಕ್ಷಣಕ್ಕಾಗಿ ಹೆಸರಾಂತ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಬಹುದು, ಈ ಕಾರಣದಿಂದಾಗಿ ನೀವು ತೃಪ್ತಿಯನ್ನು ಅನುಭವಿಸುವಿರಿ. ಒಟ್ಟಾರೆಯಾಗಿ, ಈ ವರ್ಷ ನಿಮ್ಮ ಮಕ್ಕಳಿಗೆ ಉತ್ತಮವಾಗಿರುತ್ತದೆ, ಆದರೆ ಅವರ ನಡವಳಿಕೆ ಮತ್ತು ಅವರ ಆರೋಗ್ಯದ ಬಗ್ಗೆ ನೀವು ವಿಶೇಷ ಗಮನ ಹರಿಸಬೇಕು.
ವೃಷಭ ರಾಶಿಯ ಜಾತಕವನ್ನು ವಿವರವಾಗಿ ಓದಿ - 2020 ವೃಷಭ ರಾಶಿ ಭವಿಷ್ಯ
ಮಿಥುನ ರಾಶಿ ಭವಿಷ್ಯ 2020 ರ ಪ್ರಕಾರ ವೈವಾಹಿಕ ಜೀವನ ಮತ್ತು ಸಂತಾನ
ಮಿಥುನ ರಾಶಿ ಭವಿಷ್ಯ 2020 ರ ಪ್ರಕಾರ ಮಿಥುನ ರಾಶಿಚಕ್ರದ ಜನರ ದಾಂಪತ್ಯ ಜೇವನವು ಏರಿಳಿತಗಳಿಂದ ತುಂಬಿರುತ್ತದೆ. ಆದ್ದರಿಂದ, ವರ್ಷದ ಆರಂಭದಿಂದಲೇ ನೀವು ಪ್ರತಿ ಹೆಜ್ಜೆಯನ್ನು ಜಾಗರೂಕತೆಯಿಂದ ಹಾಕುವುದು ಅಗತ್ಯವಾಗಿರುತ್ತದೆ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಯನ್ನು ಉಂಟುಮಾಡುವ ಯಾವುದನ್ನೂ ಮಾಡಬೇಡಿ. ವರ್ಷದ ಆರಂಭದಲ್ಲಿ ನಿಮ್ಮ ಏಳನೇ ಮನೆಯಲ್ಲಿರುವ ಐದು ಗ್ರಹಗಳ ಸಂಯೋಜನೆಯು ವೈವಾಹಿಕ ಜೀವನದಲ್ಲಿ ಸಮಸ್ಯೆ ಮತ್ತು ತೊಂದರೆಗಳನ್ನು ಸೂಚಿಸುತ್ತದೆ.
ನಿಮ್ಮ ಸಂಗಾತಿಯ ಆರೋಗ್ಯವು ನಿಮಗೆ ಕಳವಳ ಉಂಟುಮಾಡಬಹುದು, ಆದ್ದರಿಂದ ಅವರಿಗೆ ವಿಶೇಷ ಗಮನ ಕೊಡಿ ಮತ್ತು ಅದು ನಿಮ್ಮ ಕರ್ತವ್ಯವೂ ಆಗಿದೆ. ಏಪ್ರಿಲ್ ನಿಂದ ಜುಲೈ ವರೆಗೆ ಮತ್ತು ನಂತರ ನವೆಂಬರ್ ನಿಂದ ಡಿಸೆಂಬರ್ ವರೆಗೆ ನಿರ್ದಿಷ್ಟವಾಗಿ ಜಾಗರೂಕರಾಗಿರಿ ಎಂದು ಸೂಚಿಸುತ್ತದೆ ಏಕೆಂದರೆ ಈ ಸಮಯದಲ್ಲಿ ನಿಮ್ಮ ವೈವಾಹಿಕ ಜೀವನದಲ್ಲಿ ಉದ್ವಿಗ್ನತೆಯು ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಾಗಬಹುದು ಮತ್ತು ಪ್ರತಿಕೂಲ ಸಂದರ್ಭದಲ್ಲಿ, ಸಂಬಂಧದಲ್ಲಿ ಪ್ರತ್ಯೇಕತೆಯ ಪರಿಸ್ಥಿತಿಯೂ ಉದ್ಭವಿಸುತ್ತದೆ.
ನಿಮ್ಮ ಮಾವಂದಿರೊಂದಿಗೆ ನೀವು ಉತ್ತಮ ಸಂಬಂಧವನ್ನು ಸಹ ಸ್ಥಾಪಿಸಬೇಕು ಇದರಿಂದ ಭವಿಷ್ಯದಲ್ಲಿ ಸಮಯ ಬಂದಾಗ ಅವರ ಬೆಂಬಲ ಮತ್ತು ಸಹಾಯವನ್ನು ಪಡೆಯಬಹುದು. ಇದರಿಂದ ನೀವು ಅವರ ಮತ್ತು ನಿಮ್ಮ ಕುಟುಂಬದ ಸಹಕಾರದಿಂದ ನಿಮ್ಮ ಜೀವನ ಸಂಗಾತಿಯನ್ನು ಮಾನವರಿಸಬಹುದು ಮತ್ತು ಒಂದು ಉತ್ತಮ ದಾಂಪತ್ಯ ಜೀವನವನ್ನು ಕಳೆಯಬಹುದು. ಜೂಲೈ ಇಂದ ನವೆಂಬರ್ ವರೆಗೆ ಸಮಯ ಸ್ವಲ್ಪ ಮಟ್ಟಿಗೆ ಉತ್ತಮವಾಗಿರುತ್ತದೆ ಮತ್ತು ಈ ಸಮಯದಲ್ಲಿ, ನಿಮ್ಮ ಸಂಗಾತಿ ಮತ್ತು ನಿಮ್ಮ ಅಭಿಪ್ರಾಯಗಳು ಅನೇಕ ವಿಷಯಗಳ ಬಗ್ಗೆ ಪ್ರಮುಖ ಚರ್ಚೆಗಳಾಗಿವೆ ಮತ್ತು ನೀವು ನಿಮ್ಮ ಜೀವನದ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ.
ಈ ಸಮಯದಲ್ಲಿ, ನಿಮ್ಮ ಸಂಗಾತಿಯ ಮತ್ತು ನಿಮ್ಮ ನಡುವಿನ ಆಕರ್ಷಣೆಯೊಂದಿಗೆ ಪರಸ್ಪರ ತಿಳುವಳಿಕೆ ಬೆಳೆಯುತ್ತದೆ. ಈ ಸಂಬಂಧದಲ್ಲಿ ನಿಮ್ಮ ಪಾತ್ರವನ್ನು ನಿರ್ವಹಿಸಲು ನೀವಿಬ್ಬರೂ ಸಿದ್ಧರಾಗಿರುತ್ತೀರಿ. ವಾಸ್ತವವಾಗಿ, ನೀವು ನಿಮ್ಮ ಸಂತೋಷದ ಕುಟುಂಬ ಜೀವನವನ್ನು ಅನುಭವಿಸಲು ಇದು ಉತ್ತಮ ಸಮಯವಾಗಿರುತ್ತದೆ. ಈ ಸಮಯವನ್ನು ನೀವು ಪೂರ್ಣವಾಗಿ ಬಳಸಿಕೊಳ್ಳಬೇಕು ಎಂಬುದನ್ನು ನೆನಪಿನಲ್ಲಿಡಿ, ಇದರಿಂದಾಗಿ ನಿಮ್ಮ ಸಂಬಂಧವನ್ನು ನೀವು ಬಲಪಡಿಸುತ್ತೀರಿ, ಪ್ರತಿಕೂಲ ಸಂದರ್ಭಗಳಲ್ಲಿಯೂ ಸಹ ಇದು ಯಾವುದೇ ಸಮಸ್ಯೆಯನ್ನು ಉಂಟುಮಾಡುವುದಿಲ್ಲ. ನಿಮ್ಮ ಜೀವನ ಸಂಗಾತಿ ಉದ್ಯೋಗದಲ್ಲಿದ್ದರೆ, ಆಗಸ್ಟ್ / ಅಕ್ಟೋಬರ್ ತಿಂಗಳಲ್ಲಿ ಅವನು / ಅವಳು ವಿಶೇಷ ಬಡ್ತಿ ಪಡೆಯಬಹುದು.
ಮಿಥುನ ರಾಶಿ ಭವಿಷ್ಯ 2020 (Mithun Rashi 2020) ರ ಪ್ರಕಾರ ಈ ವರ್ಷದ ಆರಂಭವು ನಿಮ್ಮ ಮಕ್ಕಳಿಗೆ ತುಂಬಾ ಉತ್ತಮವಾಗಿರುತ್ತದೆ ಮತ್ತು ಅವರು ತಮ್ಮ ಶಿಕ್ಷಣದ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ, ಇದರಿಂದ ಶಿಕ್ಷಣದ ಕ್ಷೇತ್ರದಲ್ಲಿ ಅನಿರೀಕ್ಷಿತ ಯಶಸ್ಸನ್ನು ಪಡೆಯುತ್ತಾರೆ. ಅವರು ಉನ್ನತ ಶಿಕ್ಷಣವನ್ನು ಪಡೆಯಲು ಪ್ರಯತ್ನಿಸುತ್ತಿದ್ದರೆ, ಇದರಲ್ಲಿ ಯಶಸ್ಸನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಕಂಡುಬರುತ್ತಿದೆ. ಅವರು ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರೆ, ಈ ಅವಧಿಯಲ್ಲಿ ಅವರು ಸಾಕಷ್ಟು ಪ್ರಗತಿಯನ್ನು ಪಡೆಯಬಹುದು. ಈ ವರ್ಷ, ನಿಮ್ಮ ಮದುವೆಯಾಗುವ ಮಕ್ಕಳು ಮದುವೆಯಾಗಬಹುದು. ಏಪ್ರಿಲ್ ನಿಂದ ಜೂಲೈ ವರೆಗಿನ ಸಮಯವು ನಿಮ್ಮ ಮಕ್ಕಳ ಆರೋಗ್ಯಕ್ಕೆ ಅನುಕೂಲಕರವಾಗಿಲ್ಲ , ಆದ್ದರಿಂದ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.ಇದರ ನಂತರ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಮತ್ತು ಅವರಿಗೆ ಉತ್ತಮ ಸಮಯ ಸೆಪ್ಟೆಂಬರ್ ಮಧ್ಯದ ನಂತರ ಪ್ರಾರಂಭವಾಗುತ್ತದೆ.
ಮಿಥುನ ರಾಶಿಯ ಜಾತಕವನ್ನು ವಿವರವಾಗಿ ಓದಿ - 2020 ಮಿಥುನ ರಾಶಿ ಭವಿಷ್ಯ
ಕರ್ಕ ರಾಶಿ ಭವಿಷ್ಯ 2020 ರ ಪ್ರಕಾರ ವೈವಾಹಿಕ ಜೀವನ ಮತ್ತು ಸಂತಾನ
ಕರ್ಕ ರಾಶಿ ಭವಿಷ್ಯ 2020 ರ ಪ್ರಕಾರ ಕರ್ಕ ರಾಶಿಚಕ್ರದ ಜನರ ದಾಂಪತ್ಯ ಜೀವನ ಮಿಶ್ರಿತವಾಗಿ ಇರುವ ಸಾಧ್ಯತೆ ಇದೆ. ಈ ವರ್ಷ ನಿಮ್ಮ ದಾಂಪತ್ಯ ಜೀವನದಲ್ಲಿ ಸಂತೋಷವನ್ನು ಅನುಭವಿಸುವಿರಿ ಮತ್ತು ತಮ್ಮ ಜೀವನ ಸಂಗಾತಿಯೊಂದಿಗೆ ಸಂತೋಷವಾಗಿ ತಮ್ಮ ವೈವಾಹಿಕ ಜೀವನವನ್ನು ಕಳೆಯುವಿರಿ. ನಿಮ್ಮ ದಾಂಪತ್ಯ ಜೀವನಕ್ಕೆ ಜನವರಿಯ ತಿಂಗಳು ಸ್ವಲ್ಪ ತೊಂದರೆಗಳಿಂದ ತುಂಬಿರಬಹುದು. ಈ ಸಮಯದಲ್ಲಿ ಯಾವುದೊ ವಿಷಯದ ಬಗ್ಗೆ ನಿಮ್ಮಿಬ್ಬರ ನಡುವೆ ವಿವಾದವಾಗಬಹುದು. ಆದರೆ ನೀವು ಧೈರ್ಯವನ್ನು ತೋರಿಸುವುದರಿಂದ ಸಮಯ ಬಹಳಷ್ಟು ಉತ್ತಮವಾಗಲಿದೆ. ಪೂರ್ತಿ ವರ್ಷ ಪರಿಸ್ಥಿತಿ ನಿಮ್ಮ ಪರವಾಗಿರುತ್ತದೆ ಮತ್ತು ಜೀವನ ಸಂಗಾತಿ ನಿಮ್ಮ ಬಗ್ಗೆ ಸಂಪೂರ್ಣವಾಗಿ ಸಮರ್ಪಿತರಾಗಿರುತ್ತಾರೆ. ಆದರೆ ಮೇ ಮಧ್ಯದಿಂದ ಸೆಪ್ಟೆಂಬರ್ ಕೊನೆಯ ವರೆಗಿನ ಸಮಯವು ಏರಿಳಿತದಿಂದ ತುಂಬಿರಬಹುದು ಮತ್ತು ಅದರ ಪರಿಣಾಮವು ನಿಮ್ಮ ದಾಂಪತ್ಯ ಜೀವನದ ಮೇಲೆ ನಕಾರಾತ್ಮಕವಾಗಿ ಬೀರಬಹುದು. ಫೆಬ್ರವರಿ ಇಂದ ಮೇ ಮತ್ತು ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಸಮಯ ನಿಮ್ಮ ದಾಂಪತ್ಯ ಜೀವನಕ್ಕೆಸಂತೋಷದಿಂದ ಇರುತ್ತದೆ. ಡಿಸೆಂಬರ್ ಕೊನೆಯಲ್ಲಿ ಮತ್ತು ಮೇ ಮಧ್ಯದಿಂದ ಸೆಪ್ಟೆಂಬರ್ ನಡುವಿನ ಸಮಯ ಜೀವನ ಸಂಗಾತಿಯ ಆರೋಗ್ಯವನ್ನು ಸಹ ದುರ್ಬಲಗೊಳಿಸಬಹುದು. ಮಾರ್ಚ್ ಕೊನೆಯಿಂದ ಮೇ ವರೆಗಿನ ಸಮಯದಲ್ಲಿ ಮಂಗಳನ ಉಪಸ್ಥಿತಿ ನಿಮ್ಮ ಜೀವನ ಸಂಗಾತಿಯ ಪ್ರವೃತ್ತಿಯನ್ನು ಹೆಚ್ಚಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ಯಾವುದೇ ವಿವಾದವನ್ನು ಹೆಚ್ಚಿಸಲು ಬಿಡಬೇಡಿ ಆಗ ಮಾತ್ರ ನಿಮ್ಮ ದಾಂಪತ್ಯ ಜೀವನ ಉತ್ತಮವಾಗಿರುತ್ತದೆ.
ಕರ್ಕ ರಾಶಿ ಭವಿಷ್ಯ 2020 ರ ಪ್ರಕಾರ ವರ್ಷದ ಆರಂಭವು ನಿಮ್ಮ ಮಕ್ಕಳಿಗಾಗಿ ಹೆಚ್ಚು ಅನುಕೂಲಕರವಾಗಿಲ್ಲ ಏಕೆಂದರೆಗುರುವು ಎಂಟನೇ ಮನೆಯಲ್ಲಿ ಸಾಗಾಣಿಸುತ್ತಾನೆ. ಈ ಕಾರಣದಿಂದ ನೀವು ನಿಮ್ಮ ಮಕ್ಕಳ ಬಗ್ಗೆ ಚಿಂತೆ ಮಾಡಬಹುದು ಮತ್ತು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ನಿಮಗಾಗಿ ಮುಖ್ಯ ಕಾಳಜಿ ಮಗುವಿನ ಆರೋಗ್ಯವಾಗಿರುತ್ತದೆ, ನೀವು ಅದರ ಮೇಲೆ ಕೇಂದ್ರೀಕರಿಸಿದರೆ, ಆಗ ಅನೇಕ ವಿಷಯಗಳು ಉತ್ತಮಗೊಳ್ಳುತ್ತವೆ. ಏಕೆಂದರೆ ಈ ಕಾರಣಗಳಿಂದಾಗಿ ನಿಮ್ಮ ಮಕ್ಕಳು ತಮ್ಮ ಅಧ್ಯಯನದ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ . ವರ್ಷದ ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಗಮನ ಹರಿಸಿ. ಆದಾಗ್ಯೂ ಜೂಲೈ ಮಧ್ಯದಿಂದ ನವೆಂಬರ್ ವರೆಗಿನ ಸಮಯವು ಉತ್ತಮವಾಗಿರುವ ಸಾಧ್ಯತೆ ಇದೆ. ಅದರ ನಂತರ ಸಮಯವೂ ಸ್ವಲ್ಪ ಪ್ರತಿಕೂಲವಾಗಬಹುದು.
ಕರ್ಕ ರಾಶಿಯ ಜಾತಕವನ್ನು ವಿವರವಾಗಿ ಓದಿ - 2020 ಕರ್ಕ ರಾಶಿ ಭವಿಷ್ಯ
ಸಿಂಹ ರಾಶಿ ಭವಿಷ್ಯ 2020 ರ ಪ್ರಕಾರ ವೈವಾಹಿಕ ಜೀವನ ಮತ್ತು ಸಂತಾನ
ಸಿಂಹ ರಾಶಿ ಭವಿಷ್ಯ 2020 ರ ಪ್ರಕಾರ, ಸಿಂಹ ರಾಶಿಚಕ್ರದ ಜನರ ದಾಂಪತ್ಯ ಜೀವನದಲ್ಲಿ ಕೆಲವು ಒತ್ತಡಗಳಿರಬಹುದು. ನಿಮ್ಮ ಏಳನೇ ಮೆಮ್ಯ ಅಧಿಪತ್ಯ ಶನಿ ದೇವ 24 ಜನವರಿಯ ನಂತರ ಆರನೇ ಮನೆಯಲ್ಲಿ ಪ್ರವೇಶಿಸುತ್ತಾನೆ ಮತ್ತು ಪೂರ್ತಿ ವರ್ಷ ಇದೇ ಮನೆಯಲ್ಲಿ ಇರುತ್ತಾನೆ. ಇದರ ಪರಿಣಾಮದಿಂದಾಗಿ ನಿಮ್ಮ ದಾಂಪತ್ಯ ಜೇವನದಲ್ಲಿ ಒತ್ತಡವು ಹೆಚ್ಚಾಗುತ್ತದೆ ಮತ್ತು ನಿಮ್ಮ ಜೀವನ ಸಂಗಾತಿಯ ಆರೋಗ್ಯದ ಮೇಲು ಪರಿಣಾಮ ಬೀರುತ್ತದೆ. ನಿಮ್ಮ ವೈವಾಹಿಕ ಜೀವನದ ಮಹತ್ವವನ್ನು ನೀವು ಅರಿತುಕೊಳ್ಳುವ ಸಮಯ ಇದು. ಆದಾಗ್ಯೂ, ಗುರುವು ಏಪ್ರಿಲ್ ನಿಂದ ಜುಲೈ ಮಧ್ಯದವರೆಗೆ ಮತ್ತು ಮತ್ತೆ ನವೆಂಬರ್ ನಂತರ ಗುರುವು ಸಹ ಆರನೇ ಮನೆಯಲ್ಲಿರುತ್ತಾನೆ. ಇದರಿಂದ ಈ ಪರಿಸ್ಥಿತಿಯಲ್ಲಿ ಸುಧಾರಣೆ ಬರುತ್ತದೆ. ಆದರೂ ಸ್ವಲ್ಪ ಒತ್ತಡ ಉಳಿಯಬಹುದು. ನಿಮ್ಮಿಬ್ಬರ ನಡುವೆ ಯಾವುದಾದರು ವಿಷಯದ ಬಗ್ಗೆ ಜಗಳವಾಗಬಹುದು ಅಥವಾ ತಪ್ಪು ತಿಳುವಳಿಕೆ ಉಂಟಾಗಬಹುದು. ನಿಮ್ಮ ಸಂಗಾತಿಯು ಕೆಲಸ ಮಾಡುತ್ತಿದ್ದರೆ, ಅವರು ಸ್ಥಳಾಂತರಗೊಂಡ ಕಾರಣ ಅಥವಾ ವಿದೇಶ ಪ್ರವಾಸದ ಕಾರಣ ಈ ಸಮಯದಲ್ಲಿ ಅವರು ನಿಮ್ಮಿಂದ ದೂರವಿರಬೇಕಾಗಬಹುದು.
ಸಿಂಹ ರಾಶಿ ಭವಿಷ್ಯ 2020 ರ ಪ್ರಕಾರ, ಮೇ ಮಧ್ಯದಿಂದ ಸೆಪ್ಟೆಂಬರ್ ಅಂತ್ಯದ ವರೆಗಿನ ಸಮಯ ದಾಂಪತ್ಯ ಜೀವನಕ್ಕೆ ಬಹಳಷ್ಟು ಉತ್ತಮವಾಗಿರುತ್ತದೆ ಮತ್ತು ಈ ಸಮಯದಲ್ಲಿ ನಿಮ್ಮ ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ನಿಮ್ಮ ಜೀವನ ಸಂಗಾತಿಯು ಸಾಧನೆಯನ್ನು ಪಡೆಯಬಹುದು ಆ ಕಾರಣದಿಂದಾಗಿ ನೀವು ಸಂತೋಷವಾಗಿರುತ್ತೀರಿ ಮತ್ತು ನೀವು ಲಾಭವನ್ನು ಪಡೆಯಬಹುದು. ಒಟ್ಟಾರೆಯಾಗಿ ನೀವು ಜೆವೀಣಾ ಸಂಗಾತಿಯೊಂದಿಗೆ ನಿಲ್ಲಬೇಕು ಮತ್ತು ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮತ್ತು ನಿಮ್ಮ ವೈವಾಹಿಕ ಜೀವನವನ್ನು ಸಂತೋಷಪಡಿಸಲು ನೀವು ಬಯಸಿದರೆ, ಜೀವನ ಸಂಗಾತಿಯ ಮಹತ್ವವನ್ನು ಗುರುತಿಸಿ, ಅವರಿಗೆ ನಿಮ್ಮ ಜೀವನದಲ್ಲಿ ಉತ್ತಮ ಸ್ಥಾನವನ್ನು ನೀಡಿ. ಅವರ ಮನಸ್ಸಿಗೆ ಯಾವುದೇ ಹೊರೆ ಬರದಂತೆ ಕಾಲಕಾಲಕ್ಕೆ ಅವರೊಂದಿಗೆ ಮಾತನಾಡುತ್ತಲೇ ಇರಿ.
ಸಿಂಹ ರಾಶಿ ಭವಿಷ್ಯ 2020 (Simha Rashi 2020) ರ ಪ್ರಕಾರ, ವರ್ಷದ ಆರಂಭವು ನಿಮ್ಮ ಮಕ್ಕಳಿಗಾಗಿ ಬಹಳಷ್ಟು ಉತ್ತಮವಾಗಿರಬಹುದು. ಐದನೇ ಮನೆಯ ಮಾಲೀಕ ಗುರು ದೇವವರ್ಷದ ಆರಂಭದಲ್ಲಿ ಕುಳಿತಿರುತ್ತಾನೆ, ಇದು ನಿಮ್ಮ ಮಕ್ಕಳು ಪ್ರಗತಿಯನ್ನು ಪಡೆಯುವ ಸಮಯವಾಗಿರುತ್ತದೆ. ಮತ್ತು ಅವರು ತಮ್ಮ ಕೆಲಸವನ್ನು ಸಂತೋಷದ ಮನಸ್ಸಿನಿಂದ ಮಾಡುತ್ತಾರೆ ಮತ್ತು ನೀವು ಸಹ ತೃಪ್ತರಾಗುತ್ತೀರಿ. ಇದರ ನಂತರ 30 ಮಾರ್ಚ್ಗೆ ಗುರು ಆರನೇ ಮನೆಯಲ್ಲಿ ಪ್ರವೇಶಿಸುತ್ತಾನೆ, ಅಂದಿನಿಂದ, ಮಗು ಸಾಂದರ್ಭಿಕವಾಗಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದರ ನಂತರ ಜುಲೈನಿಂದ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬರುತ್ತದೆ ಮತ್ತು ನಿಮ್ಮ ಮಕ್ಕಳು ಸುಸಂಸ್ಕೃತರಾಗುತ್ತಾರೆ ಮತ್ತು ನಿಮ್ಮ ಬಗ್ಗೆ ಅವರ ಪ್ರೀತಿಯನ್ನು ಸಹ ತೋರಿಸುತ್ತಾರೆ. ಹೊಸದಾಗಿ ಮದುವೆಯಾದ ದಂಪತಿಗಳು ಈ ವರ್ಷ ಮಕ್ಕಳನ್ನು ಹೊಂದುವ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ನಿಮ್ಮ ಸಂತಾನ ಮದುವೆಗೆ ಅರ್ಹರಾಗಿದ್ದರೆ ಈ ವರ್ಷ ಅವರ ಮದುವೆಯಾಗಬಹುದು. 2020 ವರ್ಷವು ಸಾಮಾನ್ಯವಾಗಿ ನಿಮ್ಮ ಮಕ್ಕಳಿಗೆ ತುಂಬಾ ಒಳ್ಳೆಯದು.
ಸಿಂಹ ರಾಶಿಯ ಜಾತಕವನ್ನು ವಿವರವಾಗಿ ಓದಿ - 2020 ಸಿಂಹ ರಾಶಿ ಭವಿಷ್ಯ
ಕನ್ಯಾ ರಾಶಿ ಭವಿಷ್ಯ 2020 ವೈವಾಹಿಕ ಜೀವನ ಮತ್ತು ಸಂತಾನ
ಸಿಂಹ ರಾಶಿ ಭವಿಷ್ಯ 2020 ರ ಪ್ರಕಾರ, ವಿವಾಹಿತ ದಂಪತಿಗಳಿಗಾಗಿ ಸಾಧನೆಗಳಿಂದ ತುಂಬಿರುತ್ತದೆ. ನಿಮ್ಮ ಸಂಗಾತಿಯು ಕೆಲಸ ಮಾಡುತ್ತಿದ್ದರೆ, ಈ ವರ್ಷ ಅವರು ಯಾವುದೇ ಸಾಧನೆಯನ್ನು ಪಡೆಯಬಹುದು ಮತ್ತು ಹೆಚ್ಚಿನ ಹಣ ಲಾಭದ ಸಾಧ್ಯತೆ ಇರುತ್ತದೆ, ಇದರಿಂದಾಗಿ ನೀವು ಸಹ ಪ್ರಯೋಜನ ಪಡೆಯುತ್ತೀರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷದ ಮಳೆ ಬೀಳುತ್ತದೆ. ಮೇ ಮತ್ತು ಸೆಪ್ಟೆಂಬರ್ ನಡುವೆ, ಸ್ಥಳದ ಬದಲಾವಣೆಯಾಗುತ್ತದೆ, ಇದರಿಂದಾಗಿ ನೀವು ಸ್ವಲ್ಪ ಸಮಯದವರೆಗೆ ಪರಸ್ಪರ ದೂರವಿರಬೇಕಾಗಬಹುದು, ಆದರೆ ಈ ದೂರವು ನಿಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ. ಮೇ 15 ಮತ್ತು ಸೆಪ್ಟೆಂಬರ್ 15 ರ ನಡುವೆ, ಕುಟುಂಬ ಸಂಬಂಧಗಳಲ್ಲಿ ಉದ್ವಿಗ್ನತೆ ಸಾಧ್ಯತೆ ಇದೆ , ಆದ್ದರಿಂದ ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿಯನ್ನು ಬೆಂಬಲಿಸಿ ಮತ್ತು ಅವರೊಂದಿಗೆ ಪರಸ್ಪರ ಸಾಮರಸ್ಯವನ್ನು ಕಾಪಾಡಿಕೊಳ್ಳಿ. ಈ ಡಿಸೆಂಬರ್ 15 ರ ವೇಳೆಗೆ ಪರಿಸ್ಥಿತಿಗಳು ತುಂಬಾ ಅನುಕೂಲಕರವಾಗಿರುತ್ತವೆ ಮತ್ತು ವರ್ಷದ ಕೊನೆಯ 15 ದಿನಗಳಲ್ಲಿ ಪರಿಸ್ಥಿತಿ ಮತ್ತೆ ಬದಲಾಗಬಹುದು. ಆದರೆ ಒಟ್ಟಾರೆಯಾಗಿ ಈ ವರ್ಷವು ನಿಮ್ಮ ವೈವಾಹಿಕ ಜೀವನಕ್ಕೆ ತುಂಬಾ ಒಳ್ಳೆಯದು.
ಕನ್ಯಾರಾಶಿ ರಾಶಿಭವಿಷ್ಯ 2020 ರ ಪ್ರಕಾರ, ವರ್ಷದ ಆರಂಭವು ಸಾಮಾನ್ಯವಾಗಿ ನಿಮ್ಮ ಮಕ್ಕಳಿಗೆ ಶುಭವಾಗಲಿದೆ. ವರ್ಷದ ಆರಂಭದಲ್ಲಿ ಮಗು ಸಾಮಾನ್ಯವಾಗಿ ವರ್ತಿಸುತ್ತದೆ, ಆದರೆ ಏಪ್ರಿಲ್ ನಂತರ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಜೀವನ ಪಥದಲ್ಲಿ ಮುಂದುವರಿಯುತ್ತದೆ. ನೀವು ಇನ್ನೂ ಮಕ್ಕಳಿಲ್ಲದವರಾಗಿದ್ದರೆ, ಈ ವರ್ಷ ನಿಮ್ಮ ಆಸೆ ಈಡೇರಬಹುದು ಮತ್ತು ಮಕ್ಕಳನ್ನು ಪಡೆಯುವ ಮೂಲಕ ನೀವು ಕುಟುಂಬದಲ್ಲಿ ಸಂತೋಷವನ್ನು ಪಡೆಯಬಹುದು. ಮದುವೆಗೆ ಅರ್ಹರಾಗಿರುವ ಜನರ ಮಕ್ಕಳ ಈ ವರ್ಷ ಮದುವೆಯಾಗಬಹುದು. ಯಾವುದೇ ಪ್ರಮುಖ ಕಾಯಿಲೆಗಳು ಬರದಂತೆ ಮೇ ಮತ್ತು ಸೆಪ್ಟೆಂಬರ್ ನಡುವೆ ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಉಳಿದ ಸಮಯವು ಹೆಚ್ಚಾಗಿ ಅನುಕೂಲಕರವಾಗಿ ಉಳಿಯುವ ಸಾಧ್ಯತೆಯಿದೆ.
ಕನ್ಯಾ ರಾಶಿಯ ಜಾತಕವನ್ನು ವಿವರವಾಗಿ ಓದಿ - 2020 ಕನ್ಯಾ ರಾಶಿ ಭವಿಷ್ಯ
ತುಲಾ ರಾಶಿ ಭವಿಷ್ಯ 2020 ರ ಪ್ರಕಾರ ವೈವಾಹಿಕ ಜೀವನ ಮತ್ತು ಸಂತಾನ
ತುಲಾ ರಾಶಿ ಭವಿಷ್ಯ 2020 ರ ಪ್ರಕಾರ, ವರ್ಷದ ಆರಂಭವು ಸ್ವಲ್ಪ ದುರ್ಬಲವಾಗಿರಬಹುದು ಮತ್ತು ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿಯ ಆರೋಗ್ಯವು ಕ್ಷೀಣಿಸುವ ಸಾಧ್ಯತೆಯಿದೆ. ಆದರೆ ಫೆಬ್ರವರಿ ನಂತರ, ಪರಿಸ್ಥಿತಿ ಸಾಕಷ್ಟು ಸಾಮಾನ್ಯವಾಗುತ್ತದೆ ಮತ್ತು ನೀವು ಉತ್ತಮ ವೈವಾಹಿಕ ಜೀವನದ ಲಾಭವನ್ನು ಪಡೆಯುತ್ತೀರಿ. ನಿಮ್ಮ ಸಂಗಾತಿಯು ಉದ್ಯೋಗ ಮಾಡುವ ವ್ಯಕ್ತಿಯಾಗಿದ್ದರೆ, ಅವರು ತನ್ನ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯಬಹುದು, ಆದರೆ ಈ ಸಮಯದಲ್ಲಿ ಅವರ ಮತ್ತು ನಿಮ್ಮ ನಡುವೆ ಕೆಲವು ವಿಷಯಗಳ ಬಗ್ಗೆ ಬಿಸಿ ಚರ್ಚೆ ನಡೆಯಬಹುದು. ಜೂನ್ 30 ರಿಂದ ನವೆಂಬರ್ 20 ರ ವರೆಗಿನ ಸಮಯವು ವಿವಾಹಿತ ಜೀವನದಲ್ಲಿ ಸಮಸ್ಯೆಗಳಿಗೆ ಕಾರಣವಾಗಬಹುದು, ಆದ್ದರಿಂದ ಈ ಸಮಯದಲ್ಲಿ ಬಹಳ ಜಾಗರೂಕರಾಗಿರಿ ಮತ್ತು ತಾಳ್ಮೆಯಿಂದಿರಿ, ಆದರೆ ಈ ಸಮಯದ ಮೊದಲು ಮತ್ತು ನಂತರ ಪರಿಸ್ಥಿತಿಗಳು ಹೆಚ್ಚು ಸುಗಮವಾಗುತ್ತವೆ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ಮಾಧುರ್ಯ ಮತ್ತು ಸಾಮರ್ಥ್ಯ ಬರುತ್ತದೆ.
ತುಲಾ ರಾಶಿ ಭವಿಷ್ಯ 2020 (ತುಲಾ ರಾಶಿ 2020) ರ ಪ್ರಕಾರ, ವರ್ಷದ ಆರಂಭವು ನಿಮ್ಮ ಮಕ್ಕಳಿಗೆ ಸಾಮಾನ್ಯವಾಗಬಹುದು. ನಿಮ್ಮ ಮಗು ಯಶಸ್ಸನ್ನು ಸಾಧಿಸಲು ಶ್ರಮಿಸಬೇಕಾಗುತ್ತದೆ, ಆಗ ಮಾತ್ರ ಅವರು ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ ಮತ್ತು ಅವರು ತನ್ನ ಗುರಿಯನ್ನು ಸಾಧಿಸಲು ಮಾನಸಿಕವಾಗಿ ಸಿದ್ಧರಾಗುತ್ತಾರೆ. ನಿಮ್ಮ ಮಗು ಮದುವೆಗೆ ಅರ್ಹವಾಗಿದ್ದರೆ ಈ ವರ್ಷ ನಿಮ್ಮ ಮಕ್ಕಳ ಮದುವೆಯಾಗಬಹುದು. ನೀವು ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಏಕೆಂದರೆ ಈ ವರ್ಷ ಅವರ ದುರ್ಬಲ ಭಾಗವಾಗಲಿದೆ.
ತುಲಾ ರಾಶಿಯ ಜಾತಕವನ್ನು ವಿವರವಾಗಿ ಓದಿ - 2020 ತುಲಾ ರಾಶಿ ಭವಿಷ್ಯ
ವೃಶ್ಚಿಕ ರಾಶಿ ಭವಿಷ್ಯ 2020 ರ ಪ್ರಕಾರ ವೈವಾಹಿಕ ಜೀವನ ಮತ್ತು ಸಂತಾನ
ವೃಶ್ಚಿಕ ರಾಶಿ ಭವಿಷ್ಯ 2020 ರ ಪ್ರಕಾರ, ವೈವಾಹಿಕ ಜೀವನಕ್ಕಾಗಿ ಈ ವರ್ಷ ಉತ್ತಮವಾಗಲಿದೆ. ವಿಶೇಷವಾಗಿ 30 ಜೂನ್ ಮತ್ತು ಅದರ ನಂತರ 20 ನವೆಂಬರ್ ಇಂದ ಮುಂದಿನ ಸಮಯವು ನಿಮ್ಮ ದಾಂಪತ್ಯ ಜೀವನದಲ್ಲಿ ಮಾಧುರ್ಯ ಮತ್ತು ತೀವ್ರತೆಯನ್ನು ಹೆಚ್ಚಿಸುವ ಕೆಳಸ ಮಾಡುತ್ತದೆ. ನೀವು ಪರಸ್ಪ ಬಗ್ಗೆ ಗೌರವಿಸುತ್ತೀರಿ ಮತ್ತು ಪರಸ್ಪರ ಮಾತುಗಳನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಮುಂದುವರಿಯುತ್ತಿರಿ. ಮಾರ್ಚ್ ನಿಂದ ಆಗಸ್ಟ್ ಅವರಧಿಯಲ್ಲಿ ನಿಮ್ಮ ದಾಂಪತ್ಯ ಜೀವನದಲ್ಲಿ ಪ್ರಣಯ ಬೆಳೆಯುತ್ತದೆ ಮತ್ತು ನೀವು ಪರಸ್ಪರ ಬಗ್ಗೆ ಅಕ್ಶರಣೆಯನ್ನು ಅನುಭವಿಸುವಿರಿ. ನಿಮ್ಮ ಪರಸ್ಪರ ಬಗ್ಗೆ ಆಕರ್ಷಣೆ ನಿಮ್ಮ ದಮಪತ್ಯ ಜೀವನವನ್ನು ಸುಧಾರಿಸುತ್ತದೆ.
ವೃಶ್ಚಿಕ ರಾಶಿ ಭವಿಷ್ಯ 2020 (Vrishchika Rashi 2020) ರ ಪ್ರಕಾರ ನಿಮ್ಮ ಪ್ರಯತ್ನಗಳಿಂದ ನಿಮ್ಮ ಜೀವನ ಸಂಗಾತಿಗೆ ಲಾಭ ಸಿಗುತ್ತದೆ ಮತ್ತು ನಿಮಗೂ ಪ್ರಯೋಜನವಾಗಲಿದೆ ಆದ್ದರಿಂದ ಪ್ರತಿಯೊಂದು ಕೆಳಸದಲ್ಲಿ ನಿಮ್ಮ ಜೀವನ ಸಂಗಾತಿಗೆ ಸಹಾಯ ಮಾಡಿ ಮತ್ತು ಅವರನ್ನು ಮುಂದುವರಿಯಲು ಪ್ರೇರೇಪಿಸಿ. ಸೆಪ್ಟೆಂಬರ್ ನಂತರ ಪರಿಸ್ಥಿತಿಯಲ್ಲಿ ಸ್ವಲ್ಪ ಬದಲಾವಣೆ ಬರುತ್ತದೆ ಮತ್ತು ಈ ಸಮಯದಲ್ಲಿ ನೀವು ಜಾಗರೂಕರಾಗಿರಬೇಕು. ಏಕೆಂದರೆ ನಿಮ್ಮ ಸಂಬಂಧದಲ್ಲಿ ಯಾವುದಾದರು ವಿಷಯವನ್ನು ತೆಗೆದುಕೊಂಡು ತಪ್ಪು ತಿಳುವಳಿಕೆ ಉಂಟಾಗಬಹುದು. ಆದ್ದರಿಂದ ನಿಮ್ಮ ಸಂಬಂಧವನ್ನು ಜೀವಾಂತವಾಗಿ ಮತ್ತು ಶಕ್ತಿಯುಕ್ತವಾಗಿಡಲು ಯಾವುದೇ ತಪ್ಪು ತಿಳುವಳಿಕೆ ಉಂಟಾಗುವ ಮೊದಲೇ ಅದನ್ನು ಕೊನೆಗೊಳಿಸಿ. ಇದು ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷದಿಂದ ತುಂಬುತ್ತದೆ.
ವೃಶ್ಚಿಕ ರಾಶಿ ಭವಿಷ್ಯ 2020 (Vrishchika Rashi 2020) ರ ಪ್ರಕಾರ, ನಿಮ್ಮ ಮಕ್ಕಳಿಗೆ ಈ ವರ್ಷ ಕೆಲವು ಸವಾಲುಗಳಿಂದ ತುಂಬಿರಬಹುದು ಮತ್ತು ಅವರು ತಮ್ಮ ಗುರಿಯನ್ನು ಸಾಧಿಸುವಲ್ಲಿ ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಆದಾಗ್ಯೂ ಈ ಪರಿಶ್ರಮದ ಫಲಿತಾಂಶವು ಶುಭವಾಗಲಿದೆ. ನಿಮ್ಮ ಮಕ್ಕಳು ಉನ್ನತ ಶಿಕ್ಷಣದಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸುತ್ತಾರೆ. ಇದಲ್ಲದೆ ನಿಮ್ಮ ಮಗುವಿನ ಮದುವೆ ಈ ವರ್ಷ ಸಂಭವಿಸಬಹುದು, ಇದರಿಂದ ನೀವು ಸಾಕಷ್ಟು ಮಟ್ಟಿಗೆ ತೃಪರಾಗಿರುತ್ತೀರಿ.
ವೃಶ್ಚಿಕ ರಾಶಿಯ ಜಾತಕವನ್ನು ವಿವರವಾಗಿ ಓದಿ - 2020 ವೃಶ್ಚಿಕ ರಾಶಿ ಭವಿಷ್ಯ
ಧನು ರಾಶಿ ಭವಿಷ್ಯ 2020 ರ ಪ್ರಕಾರ ವೈವಾಹಿಕ ಜೀವನ ಮತ್ತು ಸಂತಾನ
ಧನು ರಾಶಿ ಭವಿಷ್ಯ 2020 ರ ಪ್ರಕಾರ ನಿಮ್ಮ ವೈವಾಹಿಕ ಜೀವನ ಬಹಳಷ್ಟು ಬಹಳಷ್ಟು ಮಧುರವಾಗಲಿದೆ. ವರ್ಷದ ಆರಂಭದಲ್ಲಿ 24 ಜನವರಿ ಇಂದ ಶನಿಯು ಮಕರ ರಾಶಿಚಕ್ರದಲ್ಲಿ ಹಾದುಹೋಗುತ್ತಾನೆ ಮತ್ತು ನಿಮ್ಮ ದಾಂಪತ್ಯ ಜೀವನದಲ್ಲಿ ಗುರುವಿನ ಸಂಪೂರ್ಣ ಕೃಪೆ ಇರುತ್ತದೆ ಮತ್ತು ದಾಂಪತ್ಯ ಜೀವನ ಪರಸ್ಪರ ತಿಳುವಳಿಕೆಯಿಂದ ತುಂಬಾ ಚೆನ್ನಾಗಿ ನಡೆಯುತ್ತದೆ. ಆದಾಗ್ಯೂ ಮತ್ತೊಂದೆಡೆ ನಿಮ್ಮ ಜೀವನ ಸಂಗಾತಿಯ ಅರೋಗ್ಯ ಸ್ವಲ್ಪ ದುರ್ಬಲವಾಗಿರಬಹುದು. ಇದು ನಿಮ್ಮ ಚಿಂತೆಗೆ ಕಾರಣವಾಗಬಹುದು ಆದ್ದರಿಂದ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಧನು ರಾಶಿ ಭವಿಷ್ಯ 2020 (Dhanu Rashi 2020) ರ ಪ್ರಕಾರ, ಜನವರಿ ಇಂದ ಮಾರ್ಚ್ ಕೊನೆಯವರೆಗೆ ಮತ್ತು ಅದರ ನಂತರ ಜೂನ್ ಮಧ್ಯದಿಂದ ನವೆಂಬರ್ ವರೆಗಿನ ಸಮಯ ನಿಮ್ಮ ದಾಂಪತ್ಯ ಜೀವನಕ್ಕೆ ಬಹಳ ಮುಖ್ಯವೆಂದು ಸಾಬೀತುಪಡಿಸುತ್ತದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ದಾಂಪತ್ಯ ಜೀವನವು ಅದರ ಅತ್ಯುತ್ತಮ ರೂಪದಲ್ಲಿ ನಿಮ್ಮ ಮುಂದೆ ಬರುತ್ತದೆ. ನೀವಿಬ್ಬರು ಒಂದು ಉತ್ತ್ತಮ ವೈವಾಹಿಕ ಜೀವನವನ್ನು ಅನುಭವಿಸುವಿರಿ ಮತ್ತು ಪರಸ್ಪ ಬಗ್ಗೆ ಉತ್ತಮ ದಾಂಪತ್ಯ ಸಂತೋಷವನ್ನು ಆನಂದಿಸುವಿರಿ. ಪರಸ್ಪರ ಬಗ್ಗೆ ಗೌರವದ ಭಾವನೆ ಉಂಟಾಗುತ್ತದ್ ಮತ್ತೆ ಪರಸ್ಪರ ಬಗೆಗಿನ ಭಾವನೆಗಳನ್ನು ಅರ್ಥಮಾಡಿಕೊಂಡು ಗಂಡ ಹೆಂಡತಿಯ ರೂಪದಲ್ಲಿ ನೀವು ಜೀವನದ ವೇಗವನ್ನು ಮುಂದುವರಿಸುತ್ತೀರಿ. 30 ಮಾರ್ಚ್ ನಿಂದ 30 ಜೂನ್ ಮತ್ತು 20 ನವೆಂಬರ್ ನಂತರ ಪರಿಸ್ಥಿತಿಗಳು ಸ್ವಲ್ಪ ಬದಲಾಗಬಹುದು ನಿಮ್ಮ ಕುಟುಂಬದಲ್ಲಿ ಒಬ್ಬ ಹೊಸ ಸದ್ಯಸ ಬರಬಹುದು. ಈ ಹೊಸ ಸದಸ್ಯ ಯಾರೊಬ್ಬರ ಜನನ ಅಥವಾ ವಿವಾಹದ ರೂಪದಲ್ಲಿರಬಹುದು.
ವಾರ್ಷಿಕ ರಾಶಿ ಭವಿಷ್ಯ 2020 ರ ಪ್ರಕಾರ ಐದನೇ ಮನೆಯಲ್ಲಿ ಗುರುವಿನ ದೃಷ್ಟಿ ನಿಮ್ಮ ಮಕ್ಕಳಿಗಾಗಿ ಬಹಳಷ್ಟು ಉತ್ತಮ ಪರಿಸ್ಥಿತಿಯನ್ನು ಉಂಟುಮಾಡುತ್ತದೆ. ಮಕ್ಕಳಿಲ್ಲದೆ ಇರುವ ಜನರು ಮಕ್ಕಳನ್ನು ಹೊಂದಬಹುದು ಮತ್ತು ಮಕ್ಕಳ ಇಲಾಖೆಗೆ ತಯಾರಿ ನಡೆಸುತ್ತಿರುವವರು ಅಥವಾ ಪ್ರಯತ್ನಿಸುತ್ತಿರುವವರ ಮಕ್ಕಳ ಮದುವೆ ಸಂಭವಿಸಬಹುದು.
ಧನು ರಾಶಿಯ ಜಾತಕವನ್ನು ವಿವರವಾಗಿ ಓದಿ - 2020 ಧನು ರಾಶಿ ಭವಿಷ್ಯ
ಮಕರ ರಾಶಿ ಭವಿಷ್ಯ 2020 ರ ಪ್ರಕಾರ ವೈವಾಹಿಕ ಜೀವನ ಮತ್ತು ಸಂತಾನ
ಮಕರ ರಾಶಿ ಭವಿಷ್ಯ 2020 ಪ್ರಕಾರ ದಾಂಪತ್ಯ ಜೀವನದಲ್ಲಿ ಏರಿಳಿತದ ಪರಿಸ್ಥಿತಿ ಉಳಿದಿರಬಹುದು. । 24 ಜನವರಿ ರಿಂದ 30 ಮಾರ್ಚ್ ಮಧ್ಯ ನಿಮ್ಮ ಸಂಬಂಧದಲ್ಲಿ ಒತ್ತಡ ಹೆಚ್ಚಾಗಬಹುದು. ನೀವು ತುಂಬಾ ಕಾರ್ಯನಿರತರಾಗುತ್ತೀರಿ ಅಥವಾ ಕೆಲಸಕ್ಕೆ ಸಂಬಂಧಿಸಿದಂತೆ ದೂರ ಹೋಗಬಹುದು ಅದು ನಿಮ್ಮ ಜೀವನ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಆದರೆ 30 ಮಾರ್ಚ್ ಗೆ ಗುರುವಿನ ಸಾಗಣೆ ನಿಮ್ಮ ರಾಶಿಚಕ್ರದಲ್ಲಿ ಇರುವಾಗ, ಆಗ ನಿಮ್ಮ ವೈವಾಹಿಕ ಜೀವಾಂದಲ್ಲಿ ಸಂತೋಷದ ಕ್ಷಣಗಳು ಬರುತ್ತವೆ ಮತ್ತು ನಿಮ್ಮ ದಾಂಪತ್ಯ ಜೀವನ ಮಾಧುರ್ಯವಾಗಿರುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳು ಪರಿಹರಿಸಲಾಗುತ್ತವೆ ಮತ್ತು ಪರಸ್ಪರ ಬೆಗ್ಗೆ ಹೆಚ್ಚಿನ ಸಮಯವನ್ನು ನೀಡುತ್ತಿರಿ ಮತ್ತು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೀರಿ. ಇದು ನಿಮ್ಮ ಪರಸ್ಪರ ಸಮನ್ವಯವನ್ನು ಸುಧಾರಿಸುತ್ತದೆ. 30 ಜೂನ್ ರಿಂದ 20 ನವೆಂಬರ್ ವರೆಗೆ ಪರಿಸ್ಥಿತಿ ಮತ್ತೆ ಸಮಸ್ಯೆಯಾಗಿ ಉಳಿಯಬಹುದು. ಆದ್ದರಿಂದ ಈ ಸಮಯದಲ್ಲಿ ನೀವು ಜಾಗರೂಕತೆಯಿಂದ ಇರಬೇಕು ಮತ್ತು ನೀವು ಯಾವುದೇ ಜಗಳದಲ್ಲಿ ಬೀಳಬಾರದು. ನೀವು ನಿಮ್ಮ ಜೀವನ ಸಂಗಾತಿಯನ್ನು ಗೌರವಿಸಬೇಕು.. 20 ನವೆಂಬರ್ ನಂತರ ಪರಿಸ್ಥಿತಿಗಳು ಉತ್ತಮವಾಗುತ್ತವೆ ಮತ್ತು ಇಡೀ ವರ್ಷ ಉತ್ತಮ ದಾಂಪತ್ಯ ಜೀವನವನ್ನು ಆನಂದಿಸುತ್ತೀರಿ.
ಮಕರ ರಾಶಿ ಭವಿಷ್ಯ 2020 ರ ಪ್ರಕಾರ ವರ್ಷದ ಆರಂಭವು ಮಕ್ಕಳಿಗೆ ಹೆಚ್ಚು ಉಪಯುಕ್ತವಲ್ಲ ಮತ್ತು ಈ ಸಮಯದಲ್ಲಿ ಅವರ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅಗತ್ಯವಾಗಿದೆ. ಆದಾಗ್ಯೂ ಅವರು ನಿಮ್ಮ ಬಗ್ಗೆ ಸಮರ್ಪಿತರಾಗಿರುತ್ತಾರೆ. ಈ ವರ್ಷದ ಮಧ್ಯಭಾಗವು ಮಕ್ಕಳಿಗೆ ಸೂಕ್ತವಾಗಿದೆ ಮತ್ತು ಅವರು ತಮ್ಮ ಕ್ಷೇತ್ರದಲ್ಲಿ ಪ್ರಗತಿಯನ್ನು ಪಡೆಯುತ್ತಾರೆ. ಆದರೆ ಸೆಪ್ಟೆಂಬರ್ ಮಧ್ಯದ ನಂತರ ರಾಹುವಿನ ಸಾಗಣೆ ನಿಮ್ಮ ಐದನೇ ಮನೆಯಲ್ಲಿ ಇರುವ ಸಮಯದಲ್ಲಿ ಮಕ್ಕಳು ಸ್ವಲ್ಪ ಹಠಮಾರಿ ಮತ್ತು ಅವರಿಗೆ ಇಷ್ಟದ ಪ್ರಕಾರ ಇರಬಹದು ಮತ್ತು ಅವರನ್ನು ನೀವು ನಿರ್ವಹಿಸುವಲ್ಲಿ ಕೆಲವು ಬಿಕ್ಕಟ್ಟುಗಳು ಸಹ ಬರಬಹುದು, ಅವರ ಆರೋಗ್ಯದ ಮೇಲು ಪರಿಣಾಮವನ್ನು ಬೀರಬಹುದು. ವರ್ಷದ ಮಧ್ಯದಲ್ಲಿ ನೀವು ಮಕ್ಕಳನ್ನು ಪಡೆಯಬಹುದು. ನಿಮ್ಮ ಮಕ್ಕಳು ವಯಸ್ಕರಾಗಿದ್ದರೆ, ಈ ಸಮಯದಲ್ಲಿ ನಿಮ್ಮಿಂದ ಅವರ ಸಂಬಂಧದ ಮೇಲು ಸ್ವಲ್ಪ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ವರ್ಷ ನಿಮ್ಮ ಮಕ್ಕಳಲ್ಲಿ ಒಬ್ಬರ ಮದುವೆಯಾಗಬಹುದು. ಇದರ ಕಾರಣದಿಂದಾಗಿ ನಿಮ್ಮ ಕ್ಟುಂಬದಲ್ಲಿ ಸಂತೋಷದ ವಾತಾವರಣ ಉಂಟಾಗುತ್ತದೆ.
ಮಕರ ರಾಶಿಯ ಜಾತಕವನ್ನು ವಿವರವಾಗಿ ಓದಿ - 2020 ಮಕರ ರಾಶಿ ಭವಿಷ್ಯ
ಕುಂಭ ರಾಶಿ ಭವಿಷ್ಯ 2020 ರ ಪ್ರಕಾರ ವೈವಾಹಿಕ ಜೀವನ ಮತ್ತು ಸಂತಾನ
ಕುಂಭ ರಾಶಿ ಭವಿಷ್ಯ 2020 ರ ಪ್ರಕಾರ ಈ ವರ್ಷ ನಿಮ್ಮ ವೈವಾಹಿಕ ಜೀವನಕ್ಕೆ ಮಿಶ್ರಿತ ಫಲಿತಾಂಶಗಳನ್ನು ತಂದಿದೆ.ಈ ವರ್ಷ ದಾಂಪತ್ಯ ಜೀವನದಲ್ಲಿ ಕೆಲವೊಮ್ಮೆ ಬಿಸಿಲು ಇದ್ದರೆ ಕೆಲವೊಮ್ಮೆ ನೆರಳನ್ನು ಅನುಭವಿಸಬಹುದು. ಜನವರಿ 30 ರಿಂದ ಮಾರ್ಚ್ ಮಧ್ಯ ಗುರು ನಿಮ್ಮ ಹನ್ನೊಂದನೇ ಮನೆಯಲ್ಲಿ ಕುಳಿತಿದ್ದು ಏಳನೇ ಮನೆಗೆ ಸಂಪೂರ್ಣ ದೃಷ್ಟಿಯನ್ನು ನೀಡುತ್ತಾರೆ. ಇದರ ಕಾರಣದಿಂದಾಗಿ ನಿಮ್ಮ ದಾಂಪತ್ಯ ಜೀವನ ಮಾಧುರ್ಯದೊಂದಿಗೆ ನಡೆಯುತ್ತಿರುತ್ತದೆ ಮತ್ತು ನಿಮ್ಮ ಪರಸ್ಪರ ಸಮನ್ವಯದಿಂದಾಗಿ ದಾಂಪತ್ಯ ಜೀವನದಲ್ಲಿ ಸಂತೋಷವು ಮೇಲುಗೈ ಸಾಧಿಸುತ್ತದೆ. ಇದರ ನಂತರ 30 ಜೂನ್ ವರೆಗಿನ ಸಮಯವೂ ಸವಾಲುಗಳಿಂದ ಇರುತ್ತದೆ ಮತ್ತು ಈ ಸಮಯದಲ್ಲಿ ದಾಂಪತ್ಯ ಜೀವನದಲ್ಲಿ ಜಗಳ ಅಥವಾ ಅಪಶ್ರುತಿಯ ಸಾಧ್ಯತೆಗಳು ಹೆಚ್ಚಾಗಬಹುದು. ನಿಮ್ಮ ಮತ್ತು ನಿಮ್ಮ ಜೀವನ ಸಂಗಾತಿಯ ಆರೋಗ್ಯವು ದುರ್ಬಲವಾಗಿರುತ್ತದೆ, ಇದರಿಂದ ದಾಂಪತ್ಯ ಜೀವನದಲ್ಲಿನ ಸಂತೋಷದ ಮೇಲೆ ಪರಿಣಾಮ ಬೀರುತ್ತದೆ. 30 ಜೂನ್ ರಿಂದ 20 ನವೆಂಬರ್ ಮಧ್ಯ ಸಂಬಂಧಗಳಲ್ಲಿ ಭಾವನಾತ್ಮಕ ತಿರುವು ಬರುತ್ತದೆ ಮತ್ತು ನೀವಿಬ್ಬರು ಪರಸ್ಪರ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತೀರಿ ಮತ್ತುಪರಸ್ಪರ ನಿಕಟ ಬರುತ್ತಿರಿ. ಇದರ ಪರಿಣಾಮವಾಗಿ ದಾಂಪತ್ಯ ಜೀವನದಲ್ಲಿ ಮತ್ತೆ ಹೊರಬರುತ್ತದೆ. ಆದಾಗ್ಯೂ ಅದರ ನಂತರದ ಸಮಯವು ಸ್ವಲ್ಪ ತೊಂದರೆಗೊಳಿಸಬಹುದು ಆದ್ದರಿಂದ ಈ ವರ್ಷ ನೀವು ವೈವಾಹಿಕ ಜೀವನದ ಬಗ್ಗೆ ತಾಳ್ಮೆ ತೋರಿಸಬೇಕು ಮತ್ತು ಸಮಯದ ಪ್ರಕಾರ ನಡೆಯಬೇಕು ಕುಂಭ ರಾಶಿ ಭವಿಷ್ಯ 2020 ರ ಪ್ರಕಾರ, ಸೆಪ್ಟೆಂಬರ್ ಮಧ್ಯದ ವರೆಗೆ ರಾಹುವಿನ ಸಾಗಣೆ ನಿಮ್ಮ ಐದನೇ ಮನೆಯಲ್ಲಿ ಇರುತ್ತದೆ, ಇದರ ಕಾರಣದಿಂದಾಗಿ ಇದು ನಿಮ್ಮ ಮಕ್ಕಳ ಆರೋಗ್ಯದ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಬಹುದು. ಗರ್ಭಿಣಿಯರು ಗಮನಾರ್ಹವಾಗಿ ಜಾಗರೂಕರಾಗಿರಬೇಕು. ನಿಮ್ಮ ಮಕ್ಕಳ ಪ್ರಗತಿಯ ಹಾದಿಯಲ್ಲಿ ಕೆಲವು ಅಡೆತಡೆಗಳು ಬರುತ್ತವೆ. ಆದರೆ ಅವರು ಕಠಿಣ ಪರಿಶ್ರಮ ಸಹ ಮಾಡುತ್ತಾರೆ ಅದರ ಆಹ್ಲಾದಕರ ಪರಿಣಾಮ ಅವರಿಗೆ ಸಿಗುತ್ತದೆ. ಈ ವರ್ಷ ನಿಮ್ಮ ಮಕ್ಕಳ ಮದುವೆಯಾಗುವುದರಿಂದ ಮನೆ ಮತ್ತು ಕುಟುಂಬದಲ್ಲಿ ಸಂತೋಷ ಬರುತ್ತದೆ.
ಕುಂಭ ರಾಶಿಯ ಜಾತಕವನ್ನು ವಿವರವಾಗಿ ಓದಿ - 2020 ಕುಂಭ ರಾಶಿ ಭವಿಷ್ಯ
ಮೀನಾ ರಾಶಿ ಭವಿಷ್ಯ 2020 ರ ಪ್ರಕಾರ ವೈವಾಹಿಕ ಜೀವನ ಮತ್ತು ಸಂತಾನ
ಮೀನಾ ರಾಶಿ ಭವಿಷ್ಯ 2020 ರ ಪ್ರಕಾರ ವೈವಾಹಿಕ ಜೀವನದಲ್ಲಿ ಈ ವರ್ಷ ನೀವು ಅನೇಕ ರೀತಿಯ ಅನುಭವಗಳನ್ನು ಹೊಂದಿರುತ್ತೀರಿ.ಅವುಗಳಲ್ಲಿ ಕೆಲವು ಒಳ್ಳೆಯದಾಗಿರುತ್ತವೆ ಮತ್ತು ಕೆಲವುಗಳಲ್ಲಿ ನೀವು ನಿಮ್ಮ ಬುದ್ದಿವಂತಿಕೆ ಮತ್ತು ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಪರಿಚಯಿಸಬೇಕಾಗುತ್ತದೆ. 30 ಮಾರ್ಚ್ ರಿಂದ 30 ಜೂನ್ ಸಮಯವೂ ಪ್ರೀತಿಯ ಜೀವನಕ್ಕೆ ಬಹಳಷ್ಟು ನೆಮ್ಮದಿಯನ್ನು ನೀಡುವುದಾಗಿ ಸಾಬೀತುಪಡಿಸುತ್ತದೆ ಮತ್ತು ಈ ಸಮಯದಲ್ಲಿ ನಿಮ್ಮ ಸಂಬಂಧದಲ್ಲಿ ಸ್ವಾಭಾವಿಕತೆಯ ವಾಸನೆ ಬರುತ್ತದೆ. ನಿಮ್ಮ ಪರಸ್ಪರ ಸಮನ್ವಯ ಇನ್ನಷ್ಟು ಉತ್ತಮವಾಗಲಿದೆ ಮತ್ತು ನೀವಿಬ್ಬರು ಒಟ್ಟಾಗಿ ಸೇರಿ ಉತ್ತಮ ದಾಂಪತ್ಯ ಜೀವನವನ್ನು ಮುಂದುವರಿಸುತ್ತೀರಿ. ಮಕ್ಕಳಿಲ್ಲದಿರುವ ಜನರು, ಅವರು ಈ ಸಮಯದಲ್ಲಿ ಮಕ್ಕಳನ್ನು ಹೊಂದುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಅವರ ಸಂತೋಷಕ್ಕೆ ಸ್ಥಾನವಿರವುದಿಲ್ಲ. 30 ಜೂನ್ ರಿಂದ 20 ನವೆಂಬರ್ ಮಧ್ಯದ ಪರಿಸ್ಥಿತಿಗಳು ಸ್ವಲ್ಪ ಒತ್ತಡವನ್ನು ಹೆಚ್ಚಿಸುತ್ತವೆ ಮತ್ತು ಈ ಸಮಯದಲ್ಲಿ ನಿಮ್ಮ ದಾಂಪತ್ಯ ಜೀವನದ ಮೇಲೆ ಪರಿಣಾಮ ಬೀರದೆ ಇರುವಂತಹ ಏನನ್ನು ಮಾಡಬಾರದೆಂದು ನೀವು ನಿಮ್ಮ ಕಡೆಯಿಂದ ಸಂಪೂರ್ಣ ಪ್ರಯತ್ನಿಸಬೇಕು. ಸೆಪ್ಟೆಂಬರ್ ತಿಂಗಳು ಜೀವನ ಸಂಗಾತಿಯೊಂದಿಗೆ ನಿಮ್ಮ ಪ್ರೀತಿಯನ್ನು ಹೆಚ್ಚಿಸುವಂತೆ ಸಾಬೀತುಪಡಿಸುತ್ತದೆ ಮತ್ತು ನಿಮ್ಮ ದಾಂಪತ್ಯ ಜೇವನದಲ್ಲಿ ಮಾಧುರ್ಯವು ಒಳಗೊಂಡಿರುತ್ತದೆ. ಈ ವರ್ಷ ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಯಾವುದಾದರು ತೀರ್ಥ ಯಾತ್ರೆಗೂ ಹೋಗಬಹುದು. ನಿಮ್ಮ ಅತ್ತೆಮನೆ ಸದಸ್ಯರೊಂದಿಗೆ ಉತ್ತಮ ಸಮಬಂಧವನ್ನು ಹೊಂದಿರಿ ಮತ್ತು ಅವರೊಂದಿಗೆ ಚೆನ್ನಾಗಿ ವರ್ತಿಸಿ.
ಮೀನಾ ರಾಶಿ ಭವಿಷ್ಯ 2020 ರ ಪ್ರಕಾರ, ಈ ವರ್ಷ ನಿಮ್ಮ ಮಕ್ಕಳಿಗೆ ಸಾಮಾನ್ಯವಾಗಿ ಇರುವ ಸಾಧ್ಯತೆ ಕಂಡುಬರುತ್ತಿದೆ. ನಿಮ್ಮ ಮಕ್ಕಳಲ್ಲಿ ಒಬ್ಬರು ಈ ವರ್ಷ ಮದುವೆಯಾಗಬಹುದು, ಅದರಿಂದ ನೀವು ಸಂತೋಷ ಮತ್ತು ತೃಪ್ತರಾಗಿ ಕಾಣುತ್ತೀರಿ. ಆದಾಗ್ಯೂ ಮತ್ತೊಂದೆಡೆ ನೀವು ನಿಮ್ಮ ಮಗುವಿನ ಆರೋಗ್ಯದ ಬಗ್ಗೆ ಗಮನ ಹರಿಸಬಕೇಗುತ್ತದೆ. ಏಕೆಂದರೆ ಈ ವರ್ಷ ಅವರ ಆರೋಗ್ಯದಲ್ಲಿ ಕುಸಿತವನ್ನು ಕಾಣಬಹುದು.ಅವರ ಮನಸ್ಸಿನಲ್ಲಿ ಯಾವುದೇ ವಿಷಯ ಮನೆ ಮಾಡದೇ ಇರುವ ಹಾಗೆ ನೀವು ಅವರೊಂದಿಗೆ ಒಬ್ಬ ಸ್ನೇಹಿತನ ಹಾಗೆ ವರ್ತಿಸಿ ಮತ್ತು ಮಾತನಾಡಿ. ಅವರು ಮಾನಸಿಕವಾಗಿ ತೊಂದರೆಗೊಳಗಾಗಬಹುದು, ಆದ್ದರಿಂದ ಅವರನ್ನು ಏಕಾಂಗಿಯಾಗಿ ಬಿಡಬೇಡಿ ಮತ್ತು ಕಾಲಕಾಲಕ್ಕೆ ಅವರನ್ನು ಎಲ್ಲಾದರೂ ಸುತ್ತಾಡಲು ಕರೆದುಕೊಂಡು ಹೋಗಿ.
ಮೀನಾ ರಾಶಿಯ ಜಾತಕವನ್ನು ವಿವರವಾಗಿ ಓದಿ - 2020 ಮೀನಾ ರಾಶಿ ಭವಿಷ್ಯ
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
- Rashifal 2025
- Horoscope 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ராசி பலன் 2025
- రాశిఫలాలు 2025
- ರಾಶಿಭವಿಷ್ಯ 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025