ಸೂರ್ಯ ಸಂಚಾರ ತುಲಾ ರಾಶಿಯಲ್ಲಿ (17 ಅಕ್ಟೋಬರ್ 2020)

17 ಅಕ್ಟೋಬರ್ ರಂದು ಬೆಳಿಗ್ಗೆ 06:50 ಗಂಟೆಗೆ ಸೂರ್ಯ ಗ್ರಹವು ತುಲಾ ರಾಶಿಗೆ ಪ್ರವೇಶಿಸುತ್ತದೆ ಮತ್ತು 16 ನವೆಂಬರ್ 2020 ರಂದು ಬೆಳಿಗ್ಗೆ 06:39 ವರೆಗೆ ಇದೆ ರಾಶಿಯಲ್ಲಿರುತ್ತದೆ. ವೈದಿಕ ಜ್ಯೋತಿಷ್ಯದಲ್ಲಿ ತಂದೆ, ನಾಯಕತ್ವ, ಅಸೆ, ಧೈರ್ಯ, ಮೊಲೆಗಳನ್ನು ಪ್ರತಿನಿಧಿಸುವ ಸೂರ್ಯ ಗ್ರಹವು ಸಂಚಾರದ ಈ ಸಮಯದಲ್ಲಿ ತನ್ನ ದುರ್ಬಲ ಸ್ಥಾನದಲ್ಲಿರುತ್ತದೆ. ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯನನ್ನು ಮೇಷ ರಾಶಿಯಲ್ಲಿ ಉನ್ನತ ಮತ್ತು ತುಲಾ ರಾಶಿಯಲ್ಲಿ ದುರ್ಬಲವೆಂದು ಪರಿಗಣಿಸಲಾಗಿದೆ.

ಜೀವನದ ಯಾವುದೇ ಸಮಸ್ಯೆಯ ಪರಿಹಾರವನ್ನು ಪಡೆಯಲು ಪ್ರಶ್ನೆ ಕೇಳಿ ಪ್ರಶ್ನೆ ಕೇಳಿ

ಸೂರ್ಯನ ಈ ಸಂಚಾರವು ಎಲ್ಲಾ 12 ರಾಶಿಗಳ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ತಿಳಿಯಿರಿ

ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ

  1. ಮೇಷ ರಾಶಿ

ಸೂರ್ಯ ದೇವ ಮೇಷ ರಾಶಿಚಕ್ರದ ಪ್ರೀತಿ, ಬುದ್ಧಿ, ಮಕ್ಕಳು ಇತ್ಯಾದಿಯ ಐದನೇ ಮನೆಯ ಅಧಿಪತಿ, ಈ ಸಂಚಾರದ ಸಮಯದಲ್ಲಿ ನಿಮ್ಮ ಪ್ರೀತಿ ಮತ್ತು ಸಂಬಂಧ ಏಳನೇ ಮನೆಗೆ ಪ್ರವೇಶಿಸುತ್ತದೆ. ಸೂರ್ಯನ ಈ ಸ್ಥಾನದಿಂದ ನಿಮ್ಮ ಜೀವನದಲ್ಲಿ ಏರಿಳಿತಗಳು ಬರಬಹುದು ಎಂಬುದರ ಬಗೆ ತಿಳಿಯುತ್ತದೆ ಮತ್ತು ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ನಿಮ್ಮ ಸಂಬಂಧವು ಹದಗೆಡುವ ಸಾಧ್ಯತೆ ಇದೆ.

ವಾಣಿಜ್ಯಿಕವಾಗಿ, ಐದನೇ ಮನೆಯನ್ನು ಯೋಜನೆ ಮತ್ತು ನಿಮ್ಮ ಆಲೋಚನೆಗಳನ್ನು ಪ್ರತಿನಿಧಿಸುತ್ತದೆ. ಈ ಮನೆಯನ್ನು ಅಧಿಪತಿ ಸೂರ್ಯ ದುರ್ಬಲ ಷ್ಠಾನದಲ್ಲಿರುತ್ತಾರೆ. ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಆಲೋಚನೆಗಳನ್ನು ವಾಸ್ತವವಾಗಿಸಲು ನೀವು ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತೀರಿ ಎಂದು ಇದು ತೋರಿಸುತ್ತದೆ ಆದರೆ ಹಾಗೆ ಮಾಡುವುದು ತುಂಬಾ ಕಷ್ಟಕರವಾಗಿರುತ್ತದೆ. ಈ ಸಾಚಾರದ ಸಮಯದಲ್ಲಿ ಕೆಳಸದ ಸ್ಥಳದಲ್ಲಿ ಉನ್ನತ ನಿರ್ವಹಣೆಯೊಂದಿಗೆ ಸಂಬಂಧದಲ್ಲಿ ಕೆಲವು ಬದಲಾವಣೆಗಳು ಬರಬಹುದು. ಆದರೆ ಈ ವ್ಯತ್ಯಾಸಗಳನ್ನು ನೀವು ಹೆಚ್ಚಿಸದಿರುವುದು ನಿಮಗೆ ಉತ್ತಮ.

\ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಈ ರಾಶಿಚಕ್ರದ ಸ್ಥಳೀಯರ ತಮ್ಮ ಪಾಲುದಾರರೊಂದಿಗೆ ವಿವಾದವಾಗುವ ಸಾಧ್ಯತೆ ಇದೆ. ಅಂತಹ ಸಮಯದಲ್ಲಿ ನೀವು ನಿಮ್ಮ ಕಾಗದಪತ್ರಗಳನ್ನು ಬಹಳ ಜಾಗರೂಕತೆಯಿಂದ ಇಡಬೇಕು ಮತ್ತು ಪಾಲುದಾರಿಕೆ ಕೊನೆಗೊಳ್ಳುವ ಪರಿಸ್ಥಿತಿಯಲ್ಲಿ ಹೊಸ ಅವಕಾಶಗಳನ್ನು ಹುಡುಕಲು ಸಿದ್ಧರಾಗಿರಬೇಕು.

ಈ ಸಂಚಾರದ ಸಮಯದಲ್ಲಿ ಈ ರಾಶಿಚಕ್ರದ ಸ್ಥಳೀಯರ ಮಕ್ಕಳ ಆರೋಗ್ಯವು ದುರ್ಬಲವಾಗಿರಬಹುದು, ಇದು ನಿಮ್ಮ ಚಿಂತೆಯ ವಿಷಯವಾಗಿದೆ. ಸೂರ್ಯನ ಮೇಲೆ ಶನಿಯ ದೃಷ್ಟಿ ಕೂಡ ಬೀಳುತ್ತಿದೆ. ಆದ್ದರಿಂದ ಸೂರ್ಯ ಸಂಚಾರದ ಈ ಸಮಯದಲ್ಲಿ ತಂದೆಯೊಂದಿಗಿನ ನಿಮ್ಮ ಸಂಬಂಧವು ಹದಗೆಡುವ ಸಾಧ್ಯತೆ ಇದೆ.

ಪರಿಹಾರ - ನಿಮ್ಮ ಬಲಗೈಯ ಉಂಗುರದ ಬೆರಳಿನಲ್ಲಿ ತಾಮ್ರ ಅಥವಾ ಚಿನ್ನದಲ್ಲಿ ಮಾಣಿಕ್ಯ ರತ್ನವನ್ನು ತಯಾರಿಸಿ ಧರಿಸುವುದು ನಿಮಗೆ ಶುಭವಾಗಿರುತ್ತದೆ.

ಮುಂದಿನ ವಾರದ ಮೇಷ ರಾಶಿ ಭವಿಷ್ಯ

  1. ವೃಷಭ ರಾಶಿ

ವೃಷಭ ರಾಶಿಚಕ್ರದ ಆರನೇ ಮನೆಯಲ್ಲಿ ಸೂರ್ಯ ಸಂಚಾರವು ಸಂಭವಿಸಲಿದೆ. ಈ ಮನೆಯ ಮೂಲಕ ಸ್ಪರ್ಧೆಗಳು, ಶತ್ರು ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಈ ಸಂಚಾರವು ನಿಮಗೆ ಶುಭವೇನು ಸಾಬೀತುಪಡಿಸುತ್ತದೆ.

ವೃತ್ತಿಪರ ಜೀವನದಲ್ಲಿ ನೀವು ಶಿಕ್ತಿಯಿಂದ ತುಂಬಿರುತ್ತೀರಿ, ಉತ್ಸಾಹವನ್ನು ಕಾಣಲಾಗುತ್ತದೆ. ನಿಮ್ಮ ಸಿಲುಕಿಕೊಂಡಿರುವ ಕೆಲಸಗಳನ್ನು ಈ ಸಮಯದಲ್ಲಿ ಪೂರ್ಣಗೊಳಿಸುವಲ್ಲಿ ನೀವು ಯಶಸ್ವಿಯಾಗುವಿರಿ. ನಿಮ್ಮ ಸ್ಪರ್ಧಿಗಳ ಮೇಲೆ ನೀವು ಗೆಲ್ಲುವಿರಿ ಮತ್ತು ನಿಮ್ಮ ಶತ್ರುಗಳು ನಿಮ್ಮಿಂದ ದೂರವಿರುತ್ತಾರೆ. ಮೇಷ ರಾಶಿಚಕ್ರದ ಸ್ಥಳೀಯರಾಗಿರುವುದರಿಂದ ನಿಮ್ಮ ಮುಂದೆ ಬರುವ ಕಾರ್ಯಗಳನ್ನು ಸ್ಥಿರಗೊಳಿಸುವ ನಿಮ್ಮ ಸಾಮರ್ಥ್ಯ ನಿಮ್ಮ ಶಕ್ತಿ. ಈ ಸಂಚಾರದ ಅವಧಿಯಲ್ಲಿ ನೀವು ಇದೆ ರೀತಿಯ ಕೃತಿಗಳನ್ನು ಪಡೆಯಬಹುದು.

ದೀರ್ಘಕಾಲದಿಂದ ಉದ್ಯೋಗದಲ್ಲಿ ಬದಲಾವಣೆ ಮಾಡಲು ಪ್ರಯತ್ನಿಸುತ್ತಿರುವ ವೃತ್ತಿಪರ ಜನರಿಗೆ ಈ ಸಂಚಾರವು ಶುಭವೆಂದು ಸಾಬೀತುಪಡಿಸುತ್ತದೆ. ಸೂರ್ಯನ ಈ ಸಂಚಾರದ ಸಮಯದಲ್ಲಿ ನೀವು ಅನೇಕ ಅವಕಾಶಗಳನ್ನು ಪಡೆಯಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಕೆಲವು ಸ್ಥಳೀಯರು ತಮ್ಮ ಪ್ರಸ್ತುತ ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳನ್ನು ಅಡೆಯಬಹುದು, ಇದರಿಂದಾಗಿ ಅವರ ಅರ್ಹತೆ ಮತ್ತು ಅನುಭವವನ್ನು ಸುಧಾರಿಸುತ್ತದೆ.

ವೈಯಕ್ತಿಕ ಜೀವನದಲ್ಲಿ ತಾಯಿಯ ಕಳಪೆ ಆರೋಗ್ಯವು ನಿಮ್ಮ ಸಮಸ್ಯೆಯ ವಿಷಯವಾಗಬಹುದು. ಪೂರ್ವಜರ ಆಸ್ತಿಯ ಬಗ್ಗೆ ನಿಮ್ಮ ಸಹೋದರ ಸಹೋದರಿಯರೊಂದಿಗಿನ ಕೆಲವು ಕಾನೂನು ಸಮಸ್ಯೆಗಳಿಂದಾಗಿ, ನಿಮ್ಮ ಹಣ ವ್ಯರ್ಥವಾಗಬಹುದು. ಆದಾಗ್ಯೂ ನಿರ್ಧಾರವು ನಿಮ್ಮ ಪರವಾಗಿ ಬರುವ ಸಂಪೂರ್ಣ ಸಾಧ್ಯತೆ ಇದೆ.

ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ಈ ರಾಶಿಚಕ್ರದ ವಿದ್ಯಾರ್ಥಿಗಳು ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ಆರೋಗ್ಯದ ದೃಷ್ಟಿಯಿಂದ ನೋಡಿದರೆ, ಈ ಸಾಚಾರವು ನಿಮಗೆ ಅನುಕೂಲಕರವೆಂದುನ್ ಸಾಬೀತುಪಡಿಸುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ಯಾವುದೇ ದೀರ್ಘಕಾಲದ ರೋಗದಿಂದ ಮುಕ್ತರಾಗುವಿರಿ. ಸೂರ್ಯ ದೇವ ನಾಲ್ಕನೇ ಮನೆಯ ಮಾಲೀಕ, ಇದು ವಾಹನ ಇತ್ಯಾದಿಯನ್ನು ಪ್ರತಿನಿಧಿಸುತ್ತದೆ ಮತ್ತು ಈ ಸಂಚಾರದ ಸಮಯದಲ್ಲಿ ತನ್ನ ದುರ್ಬಲ ಸ್ಥಿತಿಲ್ಲಿದೆ, ಆದ್ದರಿಂದ ಈ ಸಮಯದಲ್ಲಿನ ನೀವು ವಾಹನವನ್ನು ಬಹಳ ಎಚ್ಚರದಿಂದ ಚಲಾಯಿಸಬೇಕು. ಇಲ್ಲದಿದ್ದರೆ ಯಾವುದೇ ಅಪಘಾತ ಸಂಭವಿಸುವ ಸಾಧ್ಯತೆ ಇದೆ.

ಪರಿಹಾರ - ಸೂರ್ಯೋದಯದ ಸಮಯದಲ್ಲಿ ಸೂರ್ಯ ನಮಸ್ಕಾರ ಮಾಡುವುದು ನಿಮಗೆ ಶುಭವಾಗಿರುತ್ತದೆ.

ಮುಂದಿನ ವಾರದ ವೃಷಭ ಭರಾಶಿ ಭವಿಷ್ಯ

ಶಿಕ್ಷಣ ಮತ್ತು ವೃತ್ತಿ ಜೀವನದಲ್ಲಿ ಸಮಸ್ಯೆಗಳು ಉಂಟಾಗುತ್ತಿದ್ದರೆ ಕಾಗ್ನಿ ಆಸ್ಟ್ರೋ ರಿಪೋರ್ಟ್ ಅನ್ನು ಬಳಸಿ

  1. ಮಿಥುನ ರಾಶಿ

ಸೂರ್ಯ ದೇವ ಮಿಥುನ ರಾಶಿಚಕ್ರದ ಸ್ಥಳೀಯಯರ ಪ್ರಯತ್ನಗಳ ಮನೆಯ ಮಾಲೀಕನಾಗಿದ್ದು, ಈ ಸಂಚಾರದ ಸಮಯದಲ್ಲಿ ಪ್ರೀತಿ, ಮಕ್ಕಳು ಮತ್ತು ಬುದ್ಧಿಯ ಐದನೇ ಮನೆಯಲ್ಲಿ ಸಂಚರಿಸುತ್ತಾರೆ. ಈ ಸಂಚಾರವು ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಉತ್ತಮವೆಂದು ಹೇಳಲಾಗುವುದಿಲ್ಲ.

ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ವೈದಿಕ ಜ್ಯೋತಿಷ್ಯದಲ್ಲಿ ಮೂರನೇ ಮನೆಯು ಪ್ರಯತ್ನಗಳ ಬಗ್ಗೆ ಹೇಳುತ್ತದೆ ಮತ್ತು ನಿಮ್ಮ ಈ ಮನೆಯ ಅಧಿಪತಿ ದುರ್ಬಲ ಸ್ಥಿತಿಯಲ್ಲಿದ್ದಾರೆ, ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಯತ್ನಗಳು ಸರಿಯಾದ ದಿಕ್ಕಿನಲ್ಲಿ ಹೋಗುವುದಿಲ್ಲ. ಈ ಕಾರಣದಿಂದ ನೀವು ತೊಂದರೆಕ್ಕೊಳಗಾಗಬಹುದು. ಇದು ನಿಮ್ಮ ಜೀವನದ ಇತರ ಕ್ಷೇತ್ರಗಳ ಮೇಲು ಕೆಟ್ಟ ಪರಿಣಾಮವನ್ನು ಬೀರಬಹುದು. ಆದಾಗ್ಯೂ ಈ ರಾಶಿಚಕ್ರದ ಕೆಲವು ಸ್ಥಳೀಯರು ತಮ್ಮ ಹವ್ಯಾಸವನ್ನು ತಮ್ಮ ವೃತ್ತಿಯಾಗಿ ಪರಿವರ್ತಿಸಲು ಬಯಸುತ್ತಿದ್ದರೆ, ಈ ಸಮಯವೂ ತುಂಬಾ ಅನುಕೂಲಕರವಾಗಿರುತ್ತದೆ. ಈ ಸಂಚಾರದ ಸಮಯದಲ್ಲಿ ಯಾವುದೇ ಪ್ರಯಾಣವನ್ನು ತಪ್ಪಿಸುವುದು ನಿಮಗೆ ಉತ್ತಮ. ಏಕೆಂದರೆ ಈ ಪ್ರಯಾಣದಿಂದ ನಿಮಗೆ ಹಾನಿಯಾಗುವ ಸಂಪೂರ್ಣ ಸಾಧ್ಯತೆ ಇದೆ.

ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಸಂಚಾರದ ಸಮಯದಲ್ಲಿ ಕಿರಿಯ ಸಹೋದರ ಸಹೋದರಿಯರೊಂದಿಗೆ ವಿವಾದದ ಸಾಧ್ಯತೆಯಿದೆ. ಆದ್ದರಿಂದ ಅವರೊಂದಿಗೆ ಸಮಯವನ್ನು ಕಳೆಯಿರಿ. ಅವರ ಮಾತುಗಳನ್ನು ಗಮನ ಹರಿಸಿ ಕೇಳಿ. ಇದರಿಂದಾಗಿ ನಿಮ್ಮ ನಡುವಿನ ತಪ್ಪುಗ್ರಹಿಕೆಗಳನ್ನು ನಿವಾರಿಸಬಹುದು.

ಮೂರನೇ ಮನೆಯಿಂದ ನಿಮ್ಮ ಸಂವಹನ ಸಾಮರ್ಥ್ಯವನ್ನು ಪರಿಗಣಿಸಲಾಗುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಪ್ರೀತಿಪಾತ್ರರು ಅಥವಾ ಜೀವನ ಸಂಗಾತಿಯೊಂದಿಗೆ ನಿಮ್ಮ ಮಾತುಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ ನಿಮ್ಮ ಸಂಬಂಧದಲ್ಲಿ ಏರಿಳಿತ ಉಂಟಾಗಬಹುದು. ಈ ಸಮಯದಲ್ಲಿ ನೀವು ಇಮೇಲ್, ಶುಭಾಶಯ ಪತ್ರಗಳನ್ನು ಆಶ್ರಯಿಸುವ ಮೂಲಕ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಬೇಕು. ಇದನ್ನು ಮಾಡುವುದರಿಂದ ನಿಮ್ಮಿಬ್ಬರ ನಡುವಿನ ಅಂತರವು ಕಡಿಮೆಯಾಗುತ್ತದೆ.

ನಿಮ್ಮ ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ನೀವು ಹೊರಗಿನ ಹುರಿದ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ನಿಮ್ಮನ್ನು ಕಾಡಬಹುದು. ನಿಮ್ಮ ದಿನಚರಿಯಲ್ಲಿ ಯೋಗ, ಧ್ಯಾನ ಅಥವಾ ಯಾವುದೇ ದೈಹಿಕ ಚಟುವಟಿಕೆಗಳಿಗೆ ಸ್ಥಾನವನ್ನು ನೀಡಿ. ಇದರಿಂದಾಗಿ ನಿಮ್ಮ ಶಕ್ತಿಗೆ ಸರಿಯಾದ ದಿಕ್ಕು ನೀಡಲು ಸಾಧ್ಯವಾಗುತ್ತದೆ.

ಪರಿಹಾರ - ಭಾನುವಾರದಂದು ತಾಮ್ರದ ದಾನ ಮಾಡುವುದು ನಿಮಗೆ ಶುಭವಾಗಿರುತ್ತದೆ.

ಮುಂದಿನ ವಾರದ ಮಿಥುನ ರಾಶಿ ಭವಿಷ್ಯ

  1. ಕರ್ಕ ರಾಶಿ

ಸೂರ್ಯ ದೇವ ನಿಮ್ಮ ಕುಟುಂಬ, ಹಣ, ಸಂಪನ್ಮೂಲಗಳು ಇತ್ಯಾದಿಗಳ ಅಂಶವಾದ ಮೂರನೇ ಮನೆಯ ಅಧಿಪತಿ. ಸಂಚಾರದ ಈ ಸಮಯದಲ್ಲಿ ದುರ್ಬಲ ಸ್ಥಿತಿಯಲ್ಲಿ ನಿಮ್ಮ ನಾಲ್ಕನೇ ಮನೆಯಲ್ಲಿ ಕುಳಿತಿರುತ್ತಾರೆ. ಈ ಪರಿಸ್ಥಿತಿಯಲ್ಲಿ ಸೂರ್ಯ ದೇವರನ್ನು ಸಾಕಷ್ಟು ದುರ್ಬಲವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಇದು ಬಹಳ ಶುಭವೆಂದು ಹೇಳಲಾಗುವುದಿಲ್ಲ.

ವೃತ್ತಿಪರ ಜೀವನವನ್ನು ನೋಡಿದರೆ, ಎರಡನೇ ಮನೆಯು ಸಂಪನ್ಮೂಲಗಳನ್ನು ಸೂಚಿಸುತ್ತದೆ ಮತ್ತು ಇದರ ಮಾಲೀಕ ಸೂರ್ಯ ತನ್ನ ದುರ್ಬಲ ಸ್ಥಿತಿಯಲ್ಲಿದ್ದರೆ. ಸೂರ್ಯನ ಈ ಸಾಗಣೆಯ ಸಮಯದಲ್ಲಿ ನಿಮ್ಮ ಸಂಪನ್ಮೂಲಗಳನ್ನು ಸರಿಯಾಗಿ ಬಳಸಲು ನಿಮಗೆ ಸಾಧ್ಯವಾಗುವುದಿಲ್ಲ ಎಂದು ಇದು ಸೂಚಿಸುತ್ತದೆ. ಈ ಕಾರಣದಿಂದಾಗಿ ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯ ಸಾಮರ್ಥ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಆದ್ದರಿಂದ ಈ ಸಂಚಾರದ ಸಮಯದಲ್ಲಿ ಸಂಪನ್ಮೂಲಗಳನ್ನು ಸರಿಯಾಗಿ ಬಳಸುವುದು ನಿಮ್ಮ ಆದ್ಯತೆಯಾಗಿರಬೇಕು.

ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ವೈದಿಕ ಜ್ಯೋತಿಷ್ಯದಲ್ಲಿ ನಾಲ್ಕನೇ ಮನೆಯ ಮೂಲಕ ನಿಮ್ಮ ತಾಯಿಯ ಬಗ್ಗೆ ಪರಿಗಣಿಸಲಾಗುತ್ತದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ತಾಯಿಯ ಆರೋಗ್ಯವು ದುರ್ಬಲವಾಗಿರಬಹುದು. ಈ ಕಾರಣದಿಂದಾಗಿ ನೀವು ತೊಂದರೆಕ್ಕೊಳಗಾಗಬಹುದು. ನಾಲ್ಕನೇ ಮನೆಯ ಮೂಲಕ ಆಸ್ತಿಯ ಬಗ್ಗೆ ತಿಳಿಯಲಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಆಸ್ತಿಗೆ ಸಂಬಂಧಿಸಿದ ವಹಿವಾಟು ಇತ್ಯಾದಿಗಳಲ್ಲಿ ಬಿಕ್ಕಟ್ಟು ಉಂಟಾಗಬಹುದು. ಆದ್ದರಿಂದ ಆಸ್ತಿಗೆ ಸಂಬಂಧಿಸಿದ ಕೆಲಸಗಳನ್ನು ಈ ಸಮಯದಲ್ಲಿ ಮಾಡದಿದ್ದರೆ, ಆಸ್ತಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡದಿದ್ದರೆ ನಿಮಗೆ ಒಳ್ಳೆಯದು ಮತ್ತು ನೀವು ನಿಮ್ಮ ಶಕ್ತಿಯನ್ನು ಉಳಿಸಲು ಸಾಧ್ಯವಾಗುತ್ತದೆ.

ನಿಮ್ಮ ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ವಾಹನವನ್ನು ಜಾಗರೂಕತೆಯಿಂದ ಚಲಾಯಿಸಬೇಕು ಇಲ್ಲದಿದ್ದರೆ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ವೈದಿಕ ಜ್ಯೋಗಿಸ್ಯದಲ್ಲಿ ಸೂರ್ಯ ನಿಮ್ಮ ಕಣ್ಣುಗಳನ್ನು ಪ್ರತಿನಿಧಿಸುತ್ತಾನೆ ಮತ್ತು ಈ ಸಂಚಾರದ ಸಮಯದಲ್ಲಿ ಇದು ತನ್ನ ದುರ್ಬಲ ಸ್ಥಿತಿಯಲ್ಲಿದೆ. ಈ ಸಮಯದಲ್ಲಿ ನೀವು ನಿದ್ರಾಹೀನತೆಯ ಸಮಸ್ಯೆಯನ್ನು ಹೊಂದಬಹುದು. ಮತ್ತು ಒತ್ತಡಕ್ಕೊಳಗಾಗಬಹುದು. ಈ ಕಾರಣದಿಂದಾಗಿ ನಿಮ್ಮ ಕಣ್ಣುಗಳ ,ಎಲೆ ಕೆಟ್ಟ ಪರಿಣಾಮ ಬೀರಬಹುದು. ವಿಶೇಷವಾಗಿ ಬಳಗಣ್ಣಿನ ಮೇಲೆ. ಆದ್ದರಿಂದ ನೀವು 7-8 ಗಂಟೆಗಳಂ ಸಾಕಷ್ಟು ನಿದ್ರೆಯನ್ನು ಪಡೆಯಬೇಕು ಮತ್ತು ನಿಮ್ಮ ಕಣ್ಣುಗಳನ್ನು ತಣಿಸುವುದನ್ನು ತಪ್ಪಿಸಬೇಕು.

ಪರಿಹಾರ - ರಾಮ ರಕ್ಷಾ ಸ್ತ್ರೋತವನ್ನು ಪಠಿಸುವುದು ನಿಮಗೆ ಶುಭವಾಗಿರುತ್ತದೆ.

ಮುಂದಿನ ವಾರದ ಕರ್ಕ ರಾಶಿ ಭವಿಷ್ಯ

ನಿಮ್ಮ ಜೀವನದ ವಿವರವಾದ ಮುನ್ಸೂಚನೆಯನ್ನು ಪಡೆಯಿರಿ : ಈಗಲೇ ಆದೇಶಿಸಿ ಅಸ್ಗ್ಟ್ರಾಸೆಜ್ ಬೃಹತ್ ಕುಂಡಲಿ ಆಸ್ಟ್ರೋಸೇಜ್ ಬೃಹತ್ ಕುಂಡಲಿ

  1. ಸಿಂಹ ರಾಶಿ

ಸೂರ್ಯ ಗ್ರಹವು ಸಿಂಹ ರಾಶಿಚಕ್ರದ ಸ್ಥಳೀಯರ ಮೂರನೇ ಮನೆಗೆ ಸಾಗುತ್ತದೆ. ಈ ಮನೆಯ ಮೂಲಕ ನಿಮ್ಮ ಸಾಹಸ, ಪರಾಕ್ರಮ, ಆಸೆಗಳು ಮತ್ತು ಕಿರಿಯ ಸಹೋದರ ಸಹೋದರಿಯರ ಬಗ್ಗೆ ಪರಿಗಣಿಸಲಾಗುತ್ತದೆ. ಸೂರ್ಯನ ಈ ಸ್ಥಾನವು ನಿಮ್ಮ ಮಹತ್ವಾಕಾಂಕ್ಷೆಗಳು ಮತ್ತು ಸಾಹಸ ಸ್ವಭಾವವವು ಉತ್ತುಂಗದಲ್ಲಿರುತ್ತದೆ ಎಂದು ಸೂಚಿಸುತ್ತದೆ.

ವೃತ್ತಿಪರ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ಯಾವುದೇ ಹೊಸದನ್ನು ಮಾಡಲು ಹಿಂಜರಿಯುವುದಿಲ್ಲ. ಅದನ್ನು ಮಾಡುವುದು ಮುಂಬರುವ ಸಮಯದಲ್ಲಿ ನಿಮ್ಮ ಯಶಸ್ಸಿಗೆ ಬಹಳ ಒಳ್ಳೆಯದು. ಈ ಸಮಯದಲ್ಲಿ ನಿಮ್ಮ ಸೃಜನಶೀಲತೆ ಗರಿಷ್ಠವಾಗಿರುತ್ತದೆ. ಪ್ರಯತ್ನಗಳು ಮತ್ತು ಕ್ರ್ಯಗಳನ್ನು ವರ್ಚಸ್ವಿ ರೀತಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ ಈ ಸಮಯದಲ್ಲಿ ನೀವು ಉನ್ನತ ಅಧಿಕಾರಿಗಳ ಪ್ರಶಂಸೆಯನ್ನು ಪಡೆಯಬಹುದು.

ನಿಮ್ಮ ಸಾಮರ್ಥ್ಯಗಳನ್ನು ಪೂರ್ಣವಾಗಿ ಬಳಸಿಕೊಳ್ಳಲು ಇದು ಉತ್ತಮ ಸಮಯ. ಆದ್ದರಿಂದ ನೀವು ಕ್ರೀಡೆಗೆ ಸಂಬಂಧಿಸಿದ ಯಾವುದೇ ವೃತ್ತಿಯಲ್ಲಿ ತೊಡಗಿದ್ದಾರೆ, ನೀವು ಹೊಸ ಅವಕಾಶಗಳನ್ನು ಪಡೆಯಬಹುದು. ಇದರಿಂದ ವೃತ್ತಿ ಜೀವನದಲ್ಲಿ ನೀವು ಮುಂದುವರಿಯಲು ಸಹಾಯ ಸಿಗುತ್ತದೆ.

ವೈಯಕ್ತಿಕ ಜೀವನದಲ್ಲಿ ನೀವು ಬಹಳಷ್ಟು ಉತ್ಸುಕರಾಗಿರುವಿರಿ ಮತ್ತು ನಿಮ್ಮ ಆಪ್ತರ ಬಗ್ಗೆ ನಿಮ್ಮ ವರ್ತನೆ ರಕ್ಷಣಾತ್ಮಕವಾಗಿರುತ್ತದೆ. ಇದರಿಂದ ನಿಮ್ಮ ಮನೆಯ ವಾತಾವರಣವು ಬಹಳ ಸೌಹಾರ್ದಯುತವಾಗಿರುತ್ತದೆ. ಪ್ರೀತಿ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮಲ್ಲಿ ಸಹಾಯಕ ಮತ್ತು ಕಾಳಜಿ ವಹಿಸುವ ನಿಮ್ಮ ಭಾಗವು ಮುಂದೆಬರುತ್ತದೆ ಮತ್ತು ಸಂಗಾತಿಗೆ ಆರಾಮ ಮತ್ತು ಸೌಕರ್ಯವನ್ನು ಒದಗಿಸಲು ಸಹಾಯ ಮಾಡುತ್ತದೆ.

ಆದಾಗ್ಯೂ ಸಿಂಹ ರಾಶಿಚಕ್ರದ ಸ್ಥಳೀಯರಾಗಿರುವ ಕಾರಣದಿಂದಾಗಿ ನಿಮ್ಮ ಘನತೆಯ ಪ್ರಜ್ಞೆ ನಿಮ್ಮ ನೈಸರ್ಗಿಕ ಸ್ವಭಾವ. ನೀವು ಜನರನ್ನು ಗೌರವಿಸುತ್ತೀರಿ ಮತ್ತು ಅವರಿಂದ ಕೂಡ ಗೌರವವನ್ನು ಬಯಸುತ್ತೀರಿ. ಹೇಗಾದರೂ ಘನತೆ ಮತ್ತು ಹೆಮ್ಮೆಯ ನಡುವೆ ಬಹಳ ಕಡಿಮೆ ವ್ಯತ್ಯಾಸವಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಕೆಲವೊಮ್ಮೆ ನೀವು ನಿಮ್ಮ ಈ ಅಂತರವನ್ನು ಕೊನೆಗೊಳಿಸುತ್ತೀರಿ ಮತ್ತು ಜೀವನದ ಅನೇಕ ಉತ್ತಮ ಅವಕಾಶಗಳನ್ನು ಕೈಯಿಂದ ಕಳೆದುಕೊಳ್ಳುತ್ತೀರಿ. ಈ ಸಂಚಾರದ ಸಮಯದಲ್ಲಿ ನೀವು ಈ ವಿಷಯದ ಬಗ್ಗೆ ಕಾಳಜಿ ವಹಿಸಬೇಕು.

ನಿಮ್ಮ ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯವೂ ಉತ್ತಮವಾಗಿರುತ್ತದೆ. ಆದಾಗ್ಯೂ ಮೂರನೇ ಮನೆ ನಿಮ್ಮ ಕಿವಿಯ ಅಂಶವಾಗಿದೆ ಮತ್ತು ಈ ಸಮಯದಲ್ಲಿ ಸೂರ್ಯ ದುರ್ಬಲ ಸ್ಥಿತಿಯಲ್ಲಿರುತ್ತಾರೆ. ಈ ಸಮಯದಲ್ಲಿ ನೀವು ಕಿವಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಹೊಂದಬಹುದು. ಆದ್ದರಿಂದ ಈ ಸಮಯದಲ್ಲಿ ಇಯರ್ ಫೋನ್ ಅನ್ನು ನೀವು ಹೆಚ್ಚಿನ ಪ್ರಮಾಣದಲ್ಲಿ ಕೇಳಬಾರದು. ಇದರೊಂದಿಗೆ ಕಿವಿಯ ಸ್ವಚ್ಛತೆಯ ಬಗ್ಗೆಯೂ ಕಾಳಜಿ ವಹಿಸಬೇಕು.

ಪರಿಹಾರ - ಚಿನ್ನ ಅಥವಾ ತಾಮ್ರದಲ್ಲಿ ಹೊದಿಸಿದ ನಕ್ಷತ್ರ ಮಾಣಿಕ್ಯ ರತ್ನವನ್ನು (5-6 ಕ್ಯಾರೆಟ್ ) ಧರಿಸುವುದು ಶುಭ ಫಲಿತಾಂಶಗಳನ್ನು ನೀಡುತ್ತದೆ.

ಮುಂದಿನ ವಾರದ ಸಿಂಹ ರಾಶಿ ಭವಿಷ್ಯ

  1. ಕನ್ಯಾ ರಾಶಿ

ಭೂಮಿಯ ಅಂಶದ ಕನ್ಯಾ ರಾಶಿಚಕ್ರದ ಸ್ಥಲಿಯರಿಗೆ ಸೂರ್ಯ ಸಂಚಾರವು ಸಂಗ್ರಹವಾದ ಹಣಕಾಸು, ಕುಟುಂಬ ಮತ್ತು ಉಳಿತಾಯದ ಎರಡನೇ ಮನೆಯಲ್ಲಿರುತ್ತದೆ. ಸೂರ್ಯ ದೇವ ನಿಮ್ಮ ವೆಚ್ಚ ಮತ್ತು ಅನಿಶ್ಚಿತತೆಯ ಸ್ಥಿತಿಗಳ ನಿಮ್ಮ ಹನ್ನೆರಡನೇ ಮನೆಯ ಮಾಲೀಕ. ಆದ್ದರಿಂದ ಸೂರ್ಯ ಸಂಚಾರವು ನಿಮಗೆ ಬಹಳ ಉತ್ತಮವೆಂದು ಹೇಳಲಾಗುವುದಿಲ್ಲ.

ವೈಯಕ್ತಿಕವಾಗಿ ನೀವು ಕೆಲವು ಅನಗತ್ಯ ಸಂದರ್ಭಗಳನ್ನು ಎದುರಿಸಬೇಕಾಗಬಹುದು. ಇದರ ಪರಿಣಾಮವಾಗಿ ಹೆಚ್ಚು ವೆಚ್ಚವಾಗಬಹುದು. ಇದರೊಂದಿಗೆ ಚೌಕಾಶಿ ಮಾಡುವುದರಿಂದ ಅನಗತ್ಯ ಒತ್ತಡ ಮತ್ತು ಮಾನಸಿಕ ಅಸ್ವಸ್ಥತೆ ಉಂಟಾಗಬಹುದು. ಎರಡನೇ ಮನೆಯ ಮೂಲಕ ನಿಮ್ಮ ಧ್ವನಿಯ ಬಗ್ಗೆ ಪರಿಗಣಿಸಲಾಗುತ್ತದೆ. ಆದ್ದರಿಂದ ಮಾತನಾಡುವ ಸಮಯದಲ್ಲಿ ನೀವು ಸರಿಯಾದ ಪದಗಳನ್ನು ಆರಿಸಬೇಕು. ಯಾರನ್ನಾದರೂ ಗೇಲಿ ಮಾಡುವುದು ಅಥವಾ ಚುಚ್ಚು ಮಾತನಾಡುವುದನ್ನು ಈ ಸಂಚಾರದ ಸಮಯದಲ್ಲಿ ತಪ್ಪಿಸಿ, ಇಲ್ಲದಿದ್ದರೆ ಉಳಿದ ಜನರ ಮೂಲಕ ಹೃದಯವನ್ನು ನೋಯಿಸಬಹುದು.

ವೃತ್ತಿಪರ ಮತ್ತು ಆರ್ಥಿಕವಾಗಿ ಈ ಸಮಯವೂ ಉತ್ತಮವಾಗಿಲ್ಲ. ಆದ್ದರಿಂದ ಈ ಸಂಚಾರದ ಸಮಯದಲ್ಲಿ ನೀವು ಯಾವುದೇ ಹೂಡಿಕೆಯನ್ನು ತಪ್ಪಿಸಬೇಕು ಏಕೆಂದರೆ ಈ ಸಮಯದಲ್ಲಿನ ಹೂಡಿಕೆಗಳ ಮೂಲಕ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ವಿಶೇಷವಾಗಿ ಕೆಲಸದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಯಾವುದೇ ರೀತಿಯ ಸಂಘರ್ಷ ಮತ್ತು ವಿವಾದವಾಗುವ ಸಾಧ್ಯತೆ ಇದೆ. ಇದರಿಂದಾಗಿ ಈ ಸಂಚಾರದ ಸಮಯದಲ್ಲಿ ನೀವು ತೊಂದರೆಕ್ಕೊಳಗಾಗಬಹುದು. ಈ ಸಮಯದಲ್ಲಿ ನಿಮ್ಮ ಸಂಯಮವನ್ನು ಕಾಪಾಡಿಕೊಳ್ಳುವುದು ನಿಮಗೆ ಅತ್ಯಗತ್ಯ.

ಈ ಸಮಯದಲ್ಲಿ ವಿದ್ಯಾರ್ಥಿಗಳ ಏಕಾಗ್ರತೆಯಲ್ಲಿ ಕೊರತೆಯನ್ನು ಕಾಣಬಹುದು. ಈ ಕಾರಣದಿಂದಾಗಿ ಉನ್ನತ ಶಿಕ್ಷಣವನ್ನು ಗಳಿಸುತ್ತಿರುವ ಜನರ ಅಧ್ಯಯನದಲ್ಲಿ ಕೊರತೆಯ ಸಾಧ್ಯತೆ ಇದೆ.

ಆರೋಗ್ಯದ ಜೀವನದ ಬಗ್ಗೆ ಕಣ್ಣು ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.

ಪರಿಹಾರ - ಸೂರ್ಯ ದೇವರನ್ನು ಆರಾಧಿಸಿ ಮತ್ತು ಆದಿತ್ಯ ಸ್ತ್ರೋತವನ್ನು ಪಠಿಸುವುದು ನಿಮಗೆ ಶುಭವಾಗಿರುತ್ತದೆ.

ಮುಂದಿನ ವಾರದ ಕನ್ಯಾ ರಾಶಿ ಭವಿಷ್ಯ

  1. ತುಲಾ ರಾಶಿ

ಸೂರ್ಯ ಸಂಚಾರವು ತುಲಾ ರಾಶಿಚಕ್ರದ ಲಗ್ನದ ಮನೆಯಲ್ಲಿ ಸಂಭವಿಸಲಿದೆ. ಈ ಮನೆಯ ಮೂಲಕ ನಿಮ್ಮ ಆತ್ಮ , ವ್ಯಕ್ತಿತ್ವ, ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಸೂರ್ಯ ಸಂಚಾರವು ನಿಮಗೆ ಅನುಕೂಲವಾಗಿರುವುದಿಲ್ಲ ಎಂದು ಸೂಚಿಸುತ್ತದೆ.

ವಾಣಿಜ್ಯಿಕವಾಗಿ, ನಿಮ್ಮ ಯಶಸ್ಸು ಮತ್ತು ಲಾಭದ ಹನ್ನೊಂದನೇ ಮನೆಯ ಮಾಲೀಕ ಸೂರ್ಯನ ಈ ಸ್ಥಾನವು ನಿಮಗೆ ಉತ್ತಮವಾಗಿರುವುದಿಲ್ಲ. ಏಕೆಂದರೆ ಸೂರ್ಯ ದೇವ ಇಲ್ಲಿ ದುರ್ಬಲ ಸ್ಥಿತಿಯಲ್ಲಿರುತ್ತಾರೆ. ಈ ಸಂಚಾರದ ಸಮಯದಲ್ಲಿ, ನಿಮ್ಮ ದೃಷ್ಟಿಕೋನದಲ್ಲಿ ಮನೋಬಲದ ಕೊರತೆಯನ್ನು ಕಾಣಲಾಗುತ್ತದೆ ಮತ್ತು ಈ ಕಾರಣದಿಂದಾಗಿ ನೀವು ಇತರರನ್ನು ಸಂತೋಷಪಡಿಸಲು ಪ್ರಯತ್ನಿಸುವುದನ್ನು ಕಾಣಲಾಗುತ್ತದೆ. ಇದರಿಂದಾಗಿ ನೀವು ಸಮಾಧಾನಗೊಳ್ಳಬಹುದು. ಇದು ನಿಮ್ಮ ಕೆಲಸದ ಸ್ಥಳದಲ್ಲಿ ಉಂಟಾಗುವ ನಕಾರಾತ್ಮಕ ಪರಿಣಾಮಗಳನ್ನು ಇನ್ನಷ್ಟು ಹೆಚ್ಚಿಸಬಹುದು. ಆದ್ದರಿಂದ ಸೂರ್ಯ ಸಂಚಾರದ ಈ ಸಮಯದಲ್ಲಿ ನೀವುನ್ ನಿಮ್ಮ ನಿರ್ಧಾರಗಳ ಬಗ್ಗೆ ಬಲವಾಗಿರಬೇಕು. ಮತ್ತು ನೀವು ನಿಮ್ಮ ಸ್ಮಾರ್ಥ್ಯದ ಮೇಲೆ ನಂಬಿಕೆಯಿಡಬೇಕು.

ವೈಯಕ್ತಿಕವಾಗಿ, ನೀವು ಸಣ್ಣ ವಿಷಯಗಳ ನೆಪವಾಗಿ ಆಕ್ರಮಣಕಾರಿ ಮತ್ತು ಸುಲಭವಾಗಿ ಕೋಪಗೊಳ್ಳಬಹುದು. ಇದು ನಿಮ್ಮ ಕುಟುಂಬ ಜೀವನ ಮತ್ತು ವೈಯಕ್ತಿಕ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ಈ ಸಂಚಾರದ ಸಮಯದಲ್ಲಿ ನೀವು ತಾಳ್ಮೆಯಿಂದಿರಿ ಮತ್ತು ತಮ್ಮ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ. ಇದು ಮಾತ್ರ ನಿಮಗೆ ಉತ್ತಮವಾಗಿರುತ್ತದೆ. ಹನ್ನೊಂದನೇ ಮನೆಯ ಮೂಲಕ ನಿಮ್ಮ ಸ್ನೇಹಿತರ ಬಗ್ಗೆ ಪರಿಗಣಿಸಲಾಗುತ್ತದೆ ಮತ್ತು ಇದರ ಮಾಲೀಕ ನಿಮ್ಮ ಲಗ್ನದ ಮನೆಯಲ್ಲಿ ದುರ್ಬಲ ಸ್ಥಿತಿಯಲ್ಲಿರುತ್ತದೆ. ಆದ್ದರಿಂದ ಈ ಸಮಯದಲ್ಲಿ ನೀವು ನಿಮ್ಮ ಸ್ನೇಹಿತರೊಂದಿಗೆ ಸಮಯವನ್ನು ಕಳೆಯುವಿರಿ ಮತ್ತು ಇದರಿಂದ ನಿಮಗೆ ಲಾಭವಾಗುವ ಸಾಧ್ಯತೆ ಇದೆ.

ನಿಮ್ಮ ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ಸೂರ್ಯ ಶುಷ್ಕ ಗ್ರಹ ಮತ್ತು ಪಿತ್ತರಸ ಪ್ರಕೃತಿಯ ಅಂಶ. ಆದ್ದರಿಂದ ಈ ಸಮಯದಲ್ಲಿ ನಿಮಗೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಈ ಸಮಸ್ಯೆಯನ್ನು ಪರಿಹರಿಸಲು ಈ ಸಮಯದಲ್ಲಿ ಸಾಕಷ್ಟು ನೀರು ಕುಡಿಯಿರಿ, ಮಸಾಲೆಯುಕ್ತ ಮತ್ತು ಹೆಚ್ಚು ಹುರಿದ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ.

ಪರಿಹಾರ - ಪ್ರತಿದಿನ ನಿಯಮಿತವಾಗಿ 108 ಬಾರಿ ಗಾಯತ್ರಿ ಮಂತ್ರವನ್ನು ಜಪಿಸುವುದು ನಿಮಗೆ ಶುಭವಾಗಿರುತ್ತದೆ.

ಮುಂದಿನ ವಾರದ ತುಲಾ ರಾಶಿ ಭವಿಷ್ಯ

ನಿಮ್ಮ ಜಾತಕದಲ್ಲಿ ರಾಜ ಯೋಗವಿದೆಯೇ ಎಂದು ತಿಳಿದಿದೆಯೇ? ಈಗಲೇ ಆದೇಶಿಸಿ ರಾಜ ಯೋಗ ರಿಪೋರ್ಟ್

  1. ವೃಶ್ಚಿಕ ರಾಶಿ

ಸೂರ್ಯ ಗ್ರಹವು ವೃಶ್ಚಿಕ ರಾಶಿಚಕ್ರದ ಸ್ಥಳೀಯರ ಹನ್ನೆರಡನೇ ಮನೆಗೆ ಸಾಗಲಿದೆ. ಈ ಮಾಯಾ ಮೂಲಕ ವಿದೇಶ ಮತ್ತು ಜೀವನದಲ್ಲಿ ಉಂಟಾಗುವ ಹಾನಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಹನ್ನೆರಡನೇ ಮನೆಯಲ್ಲಿ ಸೂರ್ಯ ಸಂಚಾರವು ನಿಮಗೆ ಶುಭವೆಂದು ಹೇಳಲಾಗುವುದಿಲ್ಲ.

ವೃತ್ತಿಪರ ಜೀವನವನ್ನು ನೋಡಿದರೆ, ನಿಮ್ಮ ಕರ್ಮ ಮತ್ತು ವೃತ್ತಿಯ ಹತ್ತನೇ ಮನೆಯ ಮಾಲೀಕ ಹನ್ನೆರಡನೇ ಮನೆಯಲ್ಲಿ ದುರ್ಬಲ ಸ್ಥಿತಿಯಲ್ಲಿ ಕುಳಿತಿದ್ದಾರೆ, ಈ ಸಂಚಾರದ ಸಮಯದಲ್ಲಿ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ಏರಿಳಿತದ ಪರಿಸ್ಥಿತಿ ಉಂಟಾಗಬಹುದು. ನಿಮ್ಮ ಸಮಸ್ಯೆಯ ಪರಿಹಾರ ಸಾಧ್ಯವಿಲ್ಲ ಎಂದು ನಿಮಗೆ ಅನಿಸಬಹುದು. ಈ ಕಾರಣದಿಂದಾಗಿ ನೀವು ನಿಮ್ಮ ಕೆಲಸಗಳನ್ನು ಮಧ್ಯದಲ್ಲೇ ಬಿಡಬಹುದು, ಆದಾಗ್ಯೂ ಹಾಗೆ ಮಾಡಬಾರದು ಮತ್ತು ತಮ್ಮ ಕೆಲಸಗಳಲ್ಲಿ ನಿರಂತರತೆಯನ್ನು ಹೊಂದಿರಬೇಕು.

ನಿಮ್ಮ ಮೂಲಕ ಮಾಡಲಾಗಿರುವ ಕೆಲಸಗ ಪ್ರಶಂಸೆ ಪಡೆಯುವ ಪ್ರವೃತ್ತಿಯನ್ನು ಸಹ ನೀವು ಹೊಂದಿರಬಹುದು. ಈ ಕಾರಾಣದಿಂದಾಗಿ ನಿಮಗೆ ಯಾವುದೇ ಸರಿ ಎಂದು ಯೋಚಿಸುವ ಬದಲು, ಇತರರ ದೃಷ್ಟಿಯಲ್ಲಿ ಉತ್ತಮವಾಗಲು ನೀವು ಪ್ರತಿಯೊಂದು ಕೆಲಸವನ್ನು ಮಾಡುತ್ತೀರಿ. ಇದು ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಈ ಸಮಯದಲ್ಲಿ ನೀವು ಗುರುವಿನಂತೆ ಭಾವಿಸುವ ನಿಮ್ಮ ಹಿರಿಯ ಅಧಿಕಾರಿಗಳು ನಿಮಗೆ ಸಹಾಯ ಮಾಡಬಹುದು. ಆದಾಗ್ಯೂ ಈ ಸಮಯದಲ್ಲಿ ವಿದೇಶಕ್ಕೆ ಸಂಬಂಧಿಸಿದ ಯಾವುದೇ ಕೆಲಸದ ಲಹ್ಭವನ್ನು ನೀವು ಪಡೆಯಬಹುದು. ಆದ್ದರಿಂದ ನೀವು ನಿಮ್ಮ ಶಕ್ತಿಯನ್ನು ಈ ಕ್ಷೇತ್ರದಲ್ಲಿ ಬಳಸಿಕೊಂಡರೆ ನಿಮಗೆ ಶುಭವಾಗಿರುತ್ತದೆ.

ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ತಂದೆ ಅಥವಾ ತಂದೆಯಂತಹ ವ್ಯಕ್ತಿಯೊಂದಿಗೆ ನಿಮ್ಮ ವಿವಾದವಾಗಬಹುದು. ಇದು ಮನೆಯ ವಾತಾವರಣವನ್ನು ಹದಗೆಡಿಸುತ್ತದೆ. ಆದ್ದರಿಂದ ಮಾತನಾಡುವ ಸಮಯದಲ್ಲಿ ನಿಮ್ಮ ಗಡಿಯ ಹೊರಗೆ ಹೋಗುವುದನ್ನು ತಪ್ಪಿಸಿ. ಕಾನೂನು ಉಲ್ಲಂಘಿಸುವ ಯಾವುದೇ ಕೆಲಸವನ್ನು ನೀವು ಈ ಸಮಯದಲ್ಲಿ ಮಾಡಬಾರದು, ಇಲ್ಲದಿದ್ದರೆ ಯಾವುದೇ ದೊಡ್ಡ ಸಮಸ್ಯೆಯಲ್ಲಿ ಸಿಲುಕಿಕೊಳ್ಳಬಹುದು.

ನಿಮ್ಮ ಅರೋಗ್ಯ ಜೇವನದ ಮೇಲೆ ದೃಷ್ಟಿ ಹಾಕಿದರೆ, ದುರ್ಬಲ ಸೂರ್ಯನ ಮೇಲೆ ಶನಿಯ ದೃಷ್ಟಿಯಿರುವ ಕಾರನಾಡಿದ್ನಾಗಿ ನೀವು ನಿದ್ರೆಗೆ ಸಂಬಂಧಿಸಿದ ಸಮಸ್ಯೆಯನ್ನು ಹೊಂದಬಹುದು. ಈ ಕಾರಣದಿಂದಾಗಿ ಇದು ನಿಮ್ಮ ಕಣ್ಣುಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಪರಿಹಾರ - ಸೂರ್ಯ ದೇವರನ್ನು ಪೂಜಿಸಿ ಮತ್ತು ಸೂರ್ಯ ಅಷ್ಟಕಂ ಅನ್ನು ಪಠಿಸುವುದು ನಿಮಗೆ ಶುಭವಾಗಿರುತ್ತದೆ.

ಮುಂದಿನ ವಾರದ ವೃಶ್ಚಿಕ ರಾಶಿ ಭವಿಷ್ಯ

  1. ಧನು ರಾಶಿ

ಧನು ರಾಶಿಚಕ್ರದ ಸ್ಥಳೀಯರ ಅದೃಷ್ಟದ ಮನೆಯ ಅಧಿಪತಿ ಸೂರ್ಯ ದೇವ ಸಂಚಾರದ ಈ ಸಮಯದಲ್ಲಿ ಲಾಭದ ಹನ್ನೊಂದನೇ ಮನೆಗೆ ಸಾಗುತ್ತದೆ. ಈ ಸಂಚಾರವು ನಿಮಗೆ ಹಲವು ವಿಧಗಳಲ್ಲಿ ಯಶಸ್ವಿಯಾಗುತ್ತದೆ ಎಂದು ಸಾಬೀತುಪಡಿಸುತ್ತದೆ. ಈ ಸಂಚಾರದ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ನೀವು ನಿಮ್ಮ ಹಿರಿಯ ಅಧಿಕಾರಿಗಳ ಪ್ರಶಂಸೆ ಮತ್ತು ಹೆಮ್ಮೆಯನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಈ ಕಾರಣದಿಂದಾಗಿ ನೀವು ಕಡಿಮೆ ಪ್ರಯತ್ನಗಳ ನಂತರವೂ ಅನೇಕ ಪ್ರಮುಖವಾದ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ನಿಮ್ಮ ಅಧೀನ ಅಧಿಕಾರಿಗಳಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ.

ಹನ್ನೊಂದನೇ ಮನೆ ನೆಟ್ವರ್ಕ್ ಮತ್ತು ಸಂವಹನವನ್ನು ಸಹ ಪ್ರತಿನಿಧಿಸುತ್ತದೆ. ಆದ್ದರಿಂದ ಸೂರ್ಯನ ಈ ಸಂಚಾರದ ಸಮಯದಲ್ಲಿ ನೀವು ಸಾಮಾಜಿಕವಾಗಿ ಸಕ್ರಿಯರಾಗಿದ್ದರೆ, ಲಾಭವನ್ನು ಪಡೆಯಬಹುದು. ಈ ಸಮಯದಲ್ಲಿ ಪ್ರಯಾಣ ಮಾಡುವುದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ವಿಶೇಷವಾಗಿ ಕೆಲಸಕ್ಕೆ ಸಂಬಂಧಿಸಿದ ಪ್ರಯಾಣಗಳು ನಿಮಗೆ ಆರ್ಥಿಕವಾಗಿ ಪ್ರಯೋಜನಕಾರಿಯಾಗಿರುತ್ತದೆ.

ನಿಮ್ಮ ವೈಯಕ್ತಿಕ ಜೀವನದ ಮೇಲೆ ದೃಷ್ಟಿ ಹಾಕಿದರೆ, ತಂದೆಯೊಂದಿಗೆ ಯಾವುದೇ ವಿಷಯದ ಬಗ್ಗೆ ಭಿನ್ನಾಭಿಪ್ರಾಯವಿದ್ದರೆ, ಈ ಸಮಯದಲ್ಲಿ ಅದು ದೂರವಾಗುತ್ತದೆ. ಇದರೊಂದಿಗೆ ಈ ಸಮಯದಲ್ಲಿ ನಿಮ್ಮ ತಮ್ಮ ಕೆಲಸದ ಸ್ಥಳದ್ಲಲಿ ಪ್ರಗತಿ ಪಡೆಯಬಹುದು. ಪ್ರೀತಿ ಮತ್ತು ಸಂಬಂಧದಲ್ಲಿ ಹೊಸ ಶಕ್ತಿ ಸಂವಹನ ಮಾಡುತ್ತದೆ. ಆದರೆ ಕೊಲವೊಮ್ಮೆ ನೀವು ನಿಮ್ಮ ಆದರ್ಶಗಳ ಬಗ್ಗೆ ನೀವು ಬಹಳ ಕಟ್ಟುನಿಟ್ಟಾಗಿರಬಹುದು. ಈ ಕಾರಣದಿಂದಾಗಿ ಸಂಘರ್ಷದ ಪರಿಸ್ಥಿತಿ ಉಂಟಾಗಬಹುದು.

ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನೀವು ನಿಮ್ಮನ್ನು ಆರೋಗ್ಯಕರವಾಗಿ ಅನುಭವಿಸುತ್ತೀರಿ. ಯಾವುದೇ ಸಮಸ್ಯೆಯಿಂದ ತೊಂದರೆ ಗೀಡಾಗಿದ್ದರೆ, ಈ ಸಮಯದಲ್ಲಿ ಅದನ್ನು ಸುಧಾರಿಸಾಲು ನೀವು ಸಂಪೂರ್ಣ ಪ್ರಯತ್ನ ಮಾಡುವಿರಿ.

ಪರಿಹಾರ - ಭಾನುವಾರದಂದು ಹಸುವಿಗೆ ಬೆಲ್ಲವನ್ನು ತಿನ್ನಿಸುವುದು ನಿಮಗೆ ಶುಭವಾಗಿರುತ್ತದೆ.

ಮುಂದಿನ ವಾರದ ಧನು ರಾಶಿ ಭವಿಷ್ಯ

  1. ಮಕರ ರಾಶಿ

ಸೂರ್ಯ ದೇವ ಮಕರ ರಾಶಿಚಕ್ರದ ಸ್ಥಳೀಯರ ಹತ್ತನೇ ಮನೆಗೆ ಸಾಗುತ್ತಾರೆ. ಈ ಮನೆಯ ಮೂಲಕ ನಿಮ್ಮ ಕರ್ಮ ಮತ್ತು ವೃತ್ತಿಯ ಬಗ್ಗೆ ಪರಿಗಣಿಸಲಾಗುತ್ತದೆ. ಹತ್ತನೇ ಮನೆಯಲ್ಲಿ ಸೂರ್ಯ ಶಕ್ತಿಶಾಲಿ ಸ್ಥಿತಿಯಲ್ಲಿದ್ದರೆ. ಸೂರ್ಯನ ಈ ಸಂಚಾರವು ನಿಮಗೆ ಶುಭವಾಗಿರುತ್ತದೆ ಎಂದು ಸೂಚಿಸುತ್ತಿದೆ.

ವೃತ್ತಿಪರ ಜೀವನವನ್ನು ನೋಡಿದರೆ, ಈ ಸಂಚಾರವು ನಿಮಗೆ ಶುಭವಾಗಿರುತ್ತದೆ. ಮತ್ತು ಈ ಸಮಯದಲ್ಲಿ ನೀವು ಸಕ್ರಿಯರಾಗಿರುತ್ತೀರಿ. ಸೂರ್ಯ ನಿಮ್ಮ ಎಂಟನೇ ಮನೆಯ ಮಾಲೀಕ ಮಾತು ಸಂಚಾರದ ಈ ಸಮಯದಲ್ಲಿ ನಿಮ್ಮ ಹತ್ತನೇ ಮನೆಯುಲ್ಲಿ ಕುಳಿತಿರುತ್ತಾರೆ. ಆದ್ದರಿಂದ ನೀವು ಜೀವನದಲ್ಲಿ ಯಾವುದೇ ಸಮಸ್ಯೆಯನ್ನು ಹೊಂದಿದ್ದರೆ, ಈ ಸಮಯದಲ್ಲಿ ಪ್ರತಿ ಸಮಸ್ಯೆಯ ಮೂಲವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೀರಿ ಮತ್ತು ಅದನ್ನು ನಿವಾರಿಸಲು ಪ್ರಯತ್ನಿಸುತ್ತೀರಿ. ಈ ಕಾರಣದಿಂದಾಗಿ ಕೆಲಸದ ಸ್ಥಳದಲ್ಲಿ ನಿಮ್ಮ ಹಿರಿಯ ಅಧಿಕಾರಿಗಳು ಮತ್ತು ಅಧೀನ ಅಧಿಕಾರಿಗಳಿಂದ ಎರಡು ಹೆಜ್ಜೆ ಮುಂದೆಯಿರುವವಿರಿ. ಕೆಲಸದ ಸ್ಥಳದಲ್ಲಿ ಹೊಸ ಸ್ಥಾನವನ್ನು ಪಡೆಯುವ ಸಾಧ್ಯತೆ ಇದೆ. ನೀವು ಯಾವುದೇ ಸರ್ಕಾರಿ ಸಂಸ್ಥೆಯಲ್ಲಿ ಕೆಲಸ ಮಾಡಲು ಅವಕಾಶವನ್ನು ಹುಡುಕುತ್ತಿದ್ದರೆ ಅಥವಾ ಗುತ್ತಿಗೆ ಮಾಡುತ್ತಿದ್ದರೆ, ಈ ಸಂಚಾರದ ಸಮಯದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.

ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ತಂದೆಯೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ಪ್ರೀತಿ ಜೀವನದಲ್ಲಿ ಈ ಸಮಯದಲ್ಲಿ ಪ್ರೀತಿಪಾತ್ರರ ಕಡೆಯಿಂದ ಈ ಸಮಯದಲ್ಲಿ ಯಾವುದೇ ಉಡುಗೊರೆಯನ್ನು ಪಡೆಯಬಹುದು. ಇದು ನಿಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ.

ಸಶೋಧನೆ ಕಾರ್ಯ, ಉನ್ನತ ಅಧ್ಯಯನ ಅಥವಾ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಈ ಸಮಯದಲ್ಲಿ ಅನುಕೂಲಕರ ವಾತಾವರಣ ಮತ್ತು ಬೆಂಬಲವನ್ನು ಪಡೆಯುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ವಿದ್ಯಾರ್ಥಿಗಳು ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ.

ನೀವು ರಕ್ತದೊತ್ತಡ ಅಥವಾ ಕೊಲೆಸ್ಟ್ರಾಲ್ ಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಹೊಂದಿದ್ದರೆ, ಈ ಸಮಯದಲ್ಲಿ ನೀವು ಜಾಗರೂಕರಾಗಿರುವ ಅಗತ್ಯವಿದೆ. ದೈಹಿಕ ಚಟುವಟಿಕೆಯನ್ನು ಮಾಡುವುದು ಮತ್ತು ಒತ್ತಡದಿಂದ ದೂರವಿರುವುದು ನಿಮ್ಮ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಬಹುದು.

ಪರಿಹಾರ - ಮನೆಯ ಉತ್ತರ - ಪೂರ್ವ ದಿಕ್ಕಿನಲ್ಲಿ ಸೂರ್ಯ ದೇವರ ಚಿತ್ರವನ್ನು ಇಡುವುದು ನಿಮಗೆ ಶುಭವಾಗಿರುತ್ತದೆ.

ಮುಂದಿನ ವಾರದ ಮಕರ ರಾಶಿ ಭವಿಷ್ಯ

  1. ಕುಂಭ ರಾಶಿ

ಸೂರ್ಯ ದೇವ ಕುಂಭ ರಾಶಿಹಾಕ್ರದ ಸ್ಥಳೀಯರ ಒಂಬತ್ತನೇ ಮನೆಗೆ ಸಾಗುತ್ತಾರೆ. ಇದು ಅದೃಷ್ಟ, ಧರ್ಮ, ದೂರಸ್ಥ ಪ್ರಯಾಣ ಇತ್ಯಾದಿಗಳ ಅಂಶವಾಗಿದೆ. ಈ ಮನೆಯಲ್ಲಿ ಸೂರ್ಯ ಸಂಚಾರದ ಸಮಯದಲ್ಲಿ ನೀವು ಹೆಚ್ಚು ಉತ್ತಮ ಫಲಿತಾಂಶಗಳನ್ನು ನೀಡುವುದಿಲ್ಲ.

ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ನಿಮ್ಮ ಸಂಬಂಧ ಮತ್ತು ಜೀವನ ಸಂಗಾತಿಯ ಏಳನೇ ಮನೆಯ ಅಧಿಪತಿ ಈ ಸಂಚಾರದ ಸಮಯದಲ್ಲಿ ದುರ್ಬಲ ಸ್ಥಿತಿಯಲ್ಲಿದೆ. ಈ ಸಮಯದಲ್ಲಿ ಜೇವನ ಸಂಗಾತಿಯೊಂದಿಗೆ ನಿಮ್ಮ ವಿವಾದವಾಗುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ನಿಮ್ಮ ಸಂಬಂಧವು ಪ್ರಭಾವಿಸಬಹುದು. ಆದರೆ ಪ್ರತಿಯೊಂದು ಸಂದರ್ಭದಲ್ಲೂ ನೀವು ನಿಮ್ಮ ಜೀವನ ಸಂಗಾತಿಯನ್ನು ಮನವರಿಕೆ ಮಾಡಬೇಕು. ಏಕೆಂದರೆ ಅವರ ಬೆಂಬಲವು ನಿಮ್ಮ ಪ್ರಗತಿ ಮತ್ತು ಅದೃಷ್ಟದೊಂದಿಗೆ ಸಂಬಂಧವನ್ನು ಹೊಂದಿದೆ.

ವೈಯಕ್ತಿಕ ಜೀವನದ ಮೇಲೆ ದೃಷ್ಟಿ ಹಾಕಿದರೆ, ಕೆಲಸಕ್ಕೆ ಸಂಬಂಧಿಸಿದ ಪ್ರಯಾಣಗಳಿಗೆ ಈ ಸಮಯವೂ ಉತ್ತಮವಾಗಿಲ್ಲ, ನಿಮ್ಮ ವೆಚ್ಚಗಳು ಹೆಚ್ಚಾಗಬಹುದು ಮತ್ತು ನಷ್ಟವಾಗುವ ಸಾಧ್ಯತೆ ಇದೆ. ಇದಲ್ಲದೆ ನಿಮ್ಮ ಆಲೋಚನೆಗಳು ಮತ್ತು ಯೋಜನಗಳನ್ನು ಸಹ ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಇದು ನಿಮ್ಮನ್ನು ನಿರಾಶೆಗೊಳಿಸಬಹುದು ಮತ್ತು ನೀವು ಹಿರಿಯ ನಿರ್ವಹಣೆಯೊಂದಿಗೆ ಸಂಘರ್ಷಗಳನ್ನು ಹೊಂದಿರಬಹುದು. ಅಂತಹ ಸಂದರ್ಭದಲ್ಲಿ ನೀವು ಧೈರ್ಯರಾಗಿರಬೇಕು. ನೀವು ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿದ್ದರೆ, ನಷ್ಟವನ್ನು ಪಡೆಯಬಹುದು. ಆದ್ದರಿಂದ ಸೂರ್ಯ ಸಂಚಾರದ ಸಮಯದಲ್ಲಿ ನೀವು ನಿಮ್ಮ ತಂದೆ, ತಂದೆಯಂತಹ ಅಥವಾ ಅನುಭವಿ ವ್ಯಕ್ತಿಗಳ ಸಲಹೆಯನ್ನು ಪಡೆದ ನಂತರ ಮಾತ್ರ ಯಾವುದೇ ಹೆಜ್ಜೆಯನ್ನು ಹಾಕಬೇಕು. ಉನ್ನತ ಶಿಕ್ಷಣವನ್ನು ಗಳಿಸುತ್ತಿರುವ ಈ ರಾಶಿಚಕ್ರದ ವಿದ್ಯಾರ್ಥಿಗಳ ಏಕಾಗ್ರತೆಯಲ್ಲಿ ಕೊರತೆ ಉಂಟಾಗಬಹುದು ಮತ್ತು ಫಲಿತಾಂಶಗಳ ಮೇಲೆ ಇದಾರೆ ಕೆಟ್ಟ ಪರಿಣಾಮ ಬೀರಬಹುದು.

ಆರೋಗ್ಯವು ಸಾಮಾನ್ಯವಾಗಿರುತ್ತದೆ ಆದರೆ ನಿಮ್ಮ ಅಹ್ರ ಪಾನೀಯದ ಬಗ್ಗೆ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

ಪರಿಹಾರ - ಸೂರ್ಯ ದೇವರ ಚಿನ್ನದ ಲೇಪಿತ ಪೆಂಡೆಂಟ್ ಅನ್ನು ಚಿನ್ನದ ಸರಪಳಿಯಲ್ಲಿ ಧರಿಸುವುದರಿಂದ ಶುಭ ಫಲಿತಾಂಶಗಳನ್ನು ಪಡೆಯುವಿರಿ.

ಮುಂದಿನ ವಾರದ ಕುಂಭ ರಾಶಿ ಭವಿಷ್ಯ

  1. ಮೀನಾ ರಾಶಿ

ಸೂರ್ಯ ಸಂಚಾರವು ಮೀನಾ ರಾಶಿಚಕ್ರದ ಸ್ಥಳೀಯರ ಬದಲಾವಣೆ ಮತ್ತು ಅನಿಶ್ಚಿತತೆಯ ಎಂಟನೇ ಮನೆಯಲ್ಲಿ ಸಂಭವಿಸಲಿದೆ. ಈ ಕಾರಣದಿಂದಾಗಿ ನಿಮ್ಮ ಜೀವನದಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು.

ಆರ್ಥಿಕ ಮತ್ತು ವೃತ್ತಿಪರ ಜೀವನವನ್ನು ನೋಡಿದರೆ, ಈ ಸಮಯವೂ ಸವಾಲುಗಳಿಂದ ತುಂಬಿರುತ್ತದೆ. ಉದ್ಯೋಗದಲ್ಲಿ ನೀವು ಬದಲಾವಣೆಯನ್ನು ಬಯಸುತ್ತಿದ್ದರೆ, ಈ ಸಂಚಾರದ ಸಮಯದಲ್ಲಿ ನಿಮ್ಮ ಯೋಚನೆಯನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಬೇಡಿ. ಈ ಸಮಯದಲ್ಲಿ ನಿಮ್ಮ ಶತ್ರುಗಳು ನಿಮ್ಮ ವಿರುದ್ಧವಾಗಿ ಯಾವುದೇ ರೀತಿಯ ಫಿತೂರಿಯನ್ನು ರಚಿಸಬಹುದು. ಆದ್ದರಿಂದ ಈ ಸಂಚಾರದ ಸಮಯದಲ್ಲಿ ನೀವು ತುಂಬಾ ಜಾಗರೂಕರಾಗಿರಬೇಕು. ಇದಲ್ಲದೆ ಸೂರ್ಯ ಸಂಚಾರದ ಈ ಸಮಯದಲ್ಲಿ ಯಾವುದೇ ರೀತಿಯ ಲೋನ್ ಅಥವಾ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು.

ಸೂರ್ಯ ಗ್ರಹವು ನಿಮ್ಮ ಧ್ವನಿಯ ಎರಡನೇ ಮನೆಯ ಮೇಲೆ ದೃಷ್ಟಿ ಹಾಕುತ್ತಿದೆ, ಆದ್ದರಿಂದ ಮಾತನಾಡುವ ಸಮಯದಲ್ಲಿ ನೀವು ಸ್ವಲ್ಪ ಕಠೋರರಾಗಬಹುದು. ಈ ಕಾರಣದಿಂದಾಗಿ ಮನೆಯ ಸದಸ್ಯರ ಮತ್ತು ಪ್ರೀತಿಪಾತ್ರರೊಂದಿಗಿನ ನಿಮ್ಮ ಸಂಬಂಧವು ಹದಗೆಡಬಹುದು. ಏನ್ ಸಂಚಾರದ ಸಮಯದಲ್ಲಿ ನಿಮ್ಮ ಮಾಮ ಆರೋಗ್ಯಕ್ಕೆ ಸಮಬಂಧಿಸಿದ ಸಮಸ್ಯೆಯನ್ನು ಹೊಂದಬಹುವುದು. ಎಂಟನೇ ಮನೆಯ ಮೂಲಕ ಜೀವನ ಸಂಗಾತಿಯ ಕುಟುಂಬದ ಬಗ್ಗೆ ಪರಿಗಣಿಸಲಾಗುತ್ತದೆ, ಸೂರ್ಯ ಸಂಚಾರದ ಕಾರಣದಿಂದಾಗಿ, ಅತ್ತೆ ಮನೆಯ ಸದಸ್ಯರೊಂದಿಗೆ ನಿಮ್ಮ ವಿವಾದವಾಗಬಹುದು. ಇದರಿಂದಾಗಿ ಜೀವನ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಸಹ ಹದಗೆಡುವ ಸಾಧ್ಯತೆ ಇದೆ.

ನಿಮ್ಮ ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ರೋಗ ನಿರೋಧಕ ಸಾಮರ್ಥ್ಯವು ಕಡಿಮೆಯಾಗಬಹುದು. ಈ ಕಾರಣದಿಂದಾಗಿ ಕಣ್ಣು ಮತ್ತು ಹಲ್ಲುಗಹಲ್ಲುಗಳಿಗೆ ಸಂಬಂಧಿಸಿದ ಸಮಸ್ಯೆ ನಿಮ್ಮನ್ನು ಕಾಡಬಹುದು. ಆದ್ದರಿಂದ ನಿಮ್ಮ ಆಹಾರ ಪಾನೀಯದ ಬಗ್ಗೆ ವಿಶೇಷ ಗಮನ ಹರಿಸಿ ಮತ್ತುನ್ ಯೋಗ - ಧ್ಯಾನಕ್ಕೆ ನಿಮ್ಮ ದಿನಚರಿಯಲ್ಲಿ ಸ್ಥಾನವನ್ನು ನೀಡಿ, ಇದರಿಂದ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.

ಪರಿಹಾರ - ಯಾವುದೇ ಅಗತ್ಯವಾದ ಕೆಳಸವನ್ನು ಮಾಡುವ ಮೊದಲು ತಂದೆ ಅಥವಾ ತಂದೆಯಂತಹ ಜನರ ಆಶೀರ್ವಾದವನ್ನು ಪಡೆಯುವುದು ನಿಮಗೆ ಶುಭವಾಗಿರುತ್ತದೆ.

ಮುಂದಿನ ವಾರದ ಮೀನಾ ರಾಶಿ ಭವಿಷ್ಯ

ರತ್ನದ ಕಲ್ಲು ಇತ್ಯಾದಿಗಳಂತಹ ಜ್ಯೋತಿಷ್ಯ ಪರಿಹಾರಗಳಿಗೆ ಆಸ್ಟ್ರೋಸೇಜ್ ಆನ್ಲೈನ್ ಸ್ಟೋರ್ ಅನ್ನು ಸಂಪರ್ಕಿಸಿ

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 399/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer