ಸೂರ್ಯ ಸಂಚಾರ ಕರ್ಕ ರಾಶಿಯಲ್ಲಿ - Sun Transit in Cancer in Kannada
16 ಜೂಲೈ 2020 ರಂದು ಬೆಳಿಗ್ಗೆ 10:32 ಗಂಟೆಗೆ ಸೂರ್ಯನ ಸಾಗಣೆ ಕರ್ಕ ರಾಶಿಯಲ್ಲಿ ಸಂಭವಿಸುತ್ತಿದೆ ಮತ್ತು 16 ಆಗಸ್ಟ್ 2020 ಸಾಯಂಕಾಲ 18:56 ಗಂಟೆ ವರೆಗೆ ಅದೇ ರಾಶಿಚಕ್ರದಲ್ಲಿರುತ್ತದೆ. ಸೂರ್ಯ ಆತ್ಮದ ಅಂಶ ಗ್ರಹವಾಗಿದೆ ಮತ್ತು ಇದು ನಿಮ್ಮ ನಾಯಕತ್ವದ ಸಾಮರ್ಥ್ಯ, ಆಡಳಿತದ ಸಾಮರ್ಥ್ಯ, ತಂದೆ ಇತ್ಯಾದಿಯ ಅಂಶವಾಗಿದೆ. ಜಾತಕದಲ್ಲಿ ಸೂರ್ಯ ಬಲವಾದ ಸ್ಥಾನದಲ್ಲಿದ್ದರೆ ವ್ಯಕ್ತಿ ಒಬ್ಬ ರಾಜನಂತೆ ಜೀವನ ಕಳೆಯುತ್ತಾನೆ, ಆದರೆ ಜಾತಕದಲ್ಲಿ ಸೂರ್ಯ ದುರ್ಬಲ ಸ್ಥಾನದಲ್ಲಿದ್ದರೆ, ವ್ಯಕ್ತಿಯು ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು. ಸೂರ್ಯ ಗ್ರಹವನ್ನು ಬಲಪಡಿಸಲು ಸೂರ್ಯ ದೇವರಿಗೆ ಸಂಬಂಧಿಸಿದ ಪರಿಹಾರಗಳನ್ನು ಮಾಡಬೇಕು.
ಜೀವನದಲ್ಲಿ ಬರುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಜ್ಯೋತಿಷಿಯಿಂದ ಪ್ರಶ್ನೆ ಕೇಳಿ
ಕರ್ಕ ರಾಶಿಯಲ್ಲಿ ಸೂರ್ಯನ ಸಂಚಾರವು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಏನಾದರು ಬದಲಾವಣೆಯನ್ನು ತರಲಿದೆ. ನಡೆಯಿರಿ ಈ ಸಂಚಾರವು ನಿಮ್ಮ ರಾಶಿಚಕ್ರದ ಮೇಲೆ ಏನು ಪರಿಣಾಮ ಬೀರಲಿದೆ ಎಂದು ತಿಳಿಯೋಣ.
ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ
- ಮೇಷ ರಾಶಿ ಭವಿಷ್ಯ
ಸೂರ್ಯ ಗ್ರಹದ ಸಂಚಾರವು ಮೇಷ ರಾಶಿಚಕ್ರದ ನಾಲ್ಕನೇ ಮನೆಯಲ್ಲಿ ಆಗುತ್ತಿದೆ. ಇದು ನಿಮ್ಮ ಮನಸ್ಸು, ಮನೆ, ಸಂತೋಷ ಸಂಪನ್ಮೂಲ ಮತ್ತು ತಾಯಿಯ ಅಂಶವಾಗಿದೆ. ಮೇಷ ರಾಶಿಚಕ್ರದ ಸ್ಥಳೀಯರಾಗಿರುವ ಕಾರಣದಿಂದಾಗಿ ನೀವು ಎಲ್ಲಾ ಕೆಲಸವನ್ನು ತುಂಬಾ ಬೇಗ ಮಾಡಲು ಬಯಸುತ್ತೀರಿ ಆದಷ್ಟೇ ಈ ಸಂಚಾರದ ಸಮಯದಲ್ಲಿ ನಿಮ್ಮ ಕೆಲವು ಕೆಲಸಗಳಲ್ಲಿ ವಿಳಂಬವಾಗಬಹುದು. ಈ ಕಾರಣದಿಂದ ನಿಮ್ಮಲ್ಲಿ ಆಕ್ರಮಣಕಾರಿ ಮತ್ತು ನಿರಾಶೆಯ ಭಾವನೆ ಬರಬಹುದು. ನಿಮ್ಮ ಕೋಪವನ್ನು ಮನೆಯ ಸದಸ್ಯರ ಮೇಲೆ ತೋರಿಸಬಹುದು. ಈ ಕಾರಣದಿಂದಾಗಿ ನೀವು ಮಾನಸಿಕವಾಗಿ ತೊಂದರೆಕ್ಕೊಳಗಾಗಬಹುದು ಮತ್ತು ಮನೆಯ ವಾತಾವರಣವು ಹದಗೆಡಬಹುದು.
ಈ ಸಂಚಾರದ ಸಮಯದಲ್ಲಿ ನಿಮ್ಮಲ್ಲಿ ಆರ್ಥಿಕ ವಿಷಯಗಳ ಬಗ್ಗೆ ಅನಿಶ್ಚಿತತೆಯ ಭಾವನೆ ಉಂಟಾಗಬಹುದು. ಈ ಕಾರಣದಿಂದಾಗಿ ನೀವು ನಿಮ್ಮ ಅರ್ಹತೆಯನ್ನು ಅನುಅನಿಸಬಹುದು, ಇದರಿಂದ ನೀವು ನಿಮ್ಮ ಅನೇಕ ಕೆಲಸಗಳನ್ನು ಅಪೂರ್ಣವಾಗಿ ಬಿಡಬಹುದು. ಈ ಸಮಯದಲ್ಲಿ ನೀವು ಇಷ್ಟಪದಿರುವಂತಹ ಯಾವುದೇ ಕೆಲಸ ನಿಮಗೆ ಸಿಗಬಹುದು, ಈ ಕಾರಣದಿಂದಾಗಿ ಕೆಲಸದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ವಿವಾದವಾಗಬಹುದು. ಆದ್ದರಿಂದ ಕೆಲಸದ ಸ್ಥಳದಲ್ಲಿ ನೀವು ಯಾವುದೇ ರೀತಿಯ ವಿವಾದವನ್ನು ತಪ್ಪಿಸಬೇಕು.
ಈ ಸಮಯದಲ್ಲಿ ಆಸ್ತಿಗೆ ಸಂಬಂಧಿಸಿದ ವಿಷಯಗಳು ಮುಂದೂಡಬಹುದು ಮತ್ತು ಪರಿಣಾಮಗಳಲ್ಲಿ ಅಡಚಣೆ ಬರಬಹುದು ಆದ್ದರಿಂದ ಈ ಸಂಚಾರದ ಸಮಯದಲ್ಲಿ ಈ ವಿಷಯಗಳ ಬಗ್ಗೆ ಆಲೋಚಿಸಬೇಡಿ, ಇಲ್ಲದಿದ್ದರೆ ನಿಮ್ಮ ಅಮೂಲ್ಯ ಸಮಯ ಹಾಳಾಗಬಹುದು. ಆದಾಗ್ಯೂ ಈ ಸಾಚಾರವು ನಿಮ್ಮ ಜೀವನ ಸಂಗಾತಿಗೆ ಶುಭತೆಯನ್ನು ತರಲಿದೆ. ಅವರು ಕೆಲಸದ ಸ್ಥಳದಲ್ಲಿ ಮತ್ತು ಸಮಾಜದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ.
ಪರಿಹಾರ - ನೀವು ಮಲಗುವ ಕೊಠಡಿಯಲ್ಲಿ ತಾಮ್ರದ ಬಟ್ಟಲಿನಲ್ಲಿ ಗುಲಾಬಿ ಹೂವನ್ನು ಇಡುವುದರಿಂದ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.
- ವೃಷಭ ರಾಶಿ ಭವಿಷ್ಯ
ವೃಷಭ ರಾಶಿಚಕ್ರದ ಸ್ಥಳೀಯರ ಸಾಹಸ ಮತ್ತು ಧೈರ್ಯದಲ್ಲಿ ಹೆಚ್ಚಳವನ್ನು ಕಾಣಲಾಗುತ್ತದೆ. ಏಕೆಂದರೆ ಸೂರ್ಯ ನಿಮ್ಮ ಪ್ರಯತ್ನ, ಧೈರ್ಯ ಮತ್ತು ಸಹೋದರ ಸಹೋದರಿಯರ ಮೂರನೇ ಮನೆಯಲ್ಲಿ ಸಂಚರಿಸುತ್ತಿದ್ದಾರೆ. ನೀವು ತುಂಬಾ ಕಠಿಣ ಪರಿಶ್ರಮಿ ಮತ್ತು ನಿಮ್ಮ ಕೆಲಸಗಳಿಂದ ಉತ್ಪಾದಕತೆಯನ್ನು ಹೆಚ್ಚಿಸುವವರು. ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಗುರಿಗಳನ್ನು ಸಾಧಿಸಲು ಸಂಪೂರ್ಣ ಪರಿಶ್ರಮ ಮಾಡುತ್ತೀರಿ. ಈ ಕಾರಣದಿಂದಾಗಿ ನೀವು ಇತರರಿಂದ ಉತ್ತಮರೆಂದು ಸಾಬೀತುಪಡಿಸುತ್ತಿರಿ.
ಈ ರಾಶಿಚಕ್ರದ ವೃತ್ತಿಪರರ ಬಗ್ಗೆ ಮಾತನಾಡಿದರೆ, ಆದಾಯದಲ್ಲಿ ಹೆಚ್ಚಳವನ್ನು ನಿರೀಕ್ಷಿಸುತ್ತಿರುವ ಜನರು ಈ ಸಮಯದಲ್ಲಿ ಯಾವುದೇ ಉತ್ತಮ ಸುದ್ಧಿಯನ್ನು ಪಡೆಯಬಹುದು. ಈ ಸಂಚಾರದಿಂದ ನಿಮ್ಮ ಜೀವನದಲ್ಲಿ ಸಂತೋಷ ಬರುತ್ತದೆ ಮತ್ತು ನಿಮ್ಮ ಆರ್ಥಿಕ ಭಾಗವು ಬಲವಾಗಿರುತ್ತದೆ ಮತ್ತು ಆರೋಗ್ಯದ ಬಗ್ಗೆಯೂ ಯಾವುದೇ ಸಮಸ್ಯೆ ಇರುವುದಿಲ್ಲ. ಸೂರ್ಯ ನಿಮ್ಮ ನಾಲ್ಕನೇ ಮನೆಯ ಮಾಲೀಕ, ಇಲ್ಲಿ ಸೂರ್ಯ ಗ್ರಹ ತನ್ನಿಂದ ಹನ್ನೆರಡನೇ ಮನೆಗೆ ಸಂಚರಿಸುತ್ತಾರೆ. ಈ ಸಮಯದಲ್ಲಿ ನಿಮ್ಮ ಮೂಲಕ ಮಾಡಲಾಗುವ ಪ್ರಯಾಣಗಳು ನಿಮಗೆ ಫಲಪ್ರದವೆಂದು ಸಾಬೀತುಪಡಿಸುತ್ತವೆ. ಈ ಸಮಯದಲ್ಲಿ ನಿಮ್ಮಲ್ಲಿ ಶಕ್ತಿಯ ಹೆಚ್ಚಳವಿರುತ್ತದೆ. ಈ ಕಾರಣದಿಂದ ನೀವು ನಿಮ್ಮ ಆರಾಮ ವಲಯದಿಂದ ಹೊರಬರಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನೀವು ಹೊಸ ವಿಷಯಗಳಲ್ಲಿ ಕೈಹಾಕಬಹುದು. ಇದರಿಂದ ನೀವು ಯಶಸ್ಸು ಮತ್ತು ಗೌರವವನ್ನು ಪಡೆಯಬಹುದು.
ನಿಮ್ಮ ಸಹೋದರ ಸಹೋದರಿಯರೊಂದಿಗೆ ಸಮಯ ಕಳೆಯಲು ಇದು ಉತ್ತಮ ಸಮಯ. ಮೂರನೇ ಮನೆ ನಿಮ್ಮಕೇಳುವ ಸಾಮರ್ಥ್ಯವನ್ನು ಸಹ ತೋರಿಸುತ್ತದೆ ಎಂಬುದರ ಬಗ್ಗೆ ವಿಶೇಷ ಗಮನ ಹರಿಸಿ ಮತ್ತು ಅನೇಕ ಬಾರಿ ಸೂರ್ಯನನ್ನು ಕ್ರೂರ ಗ್ರಹವೆಂದು ಕರೆಯಲಾಗುತ್ತದೆ ಆದ್ದರಿಂದ ಈ ಸಂಚಾರದ ಸಮಯದಲ್ಲಿ ನಿಮ್ಮ ಕೇಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು.
ಪರಿಹಾರ - ಭಾನುವಾರದ ದಿನದಂದು ಹಸುವಿಗೆ ಬೆಲ್ಲ ತಿನ್ನಿಸುವುದು ನಿಮಗೆ ಶುಭವಾಗಿರುತ್ತದೆ .
- ಮಿಥುನ ರಾಶಿ ಭವಿಷ್ಯ
ಮಿಥುನ ರಾಶಿಚಕ್ರದ ಸ್ಥಳೀಯರು ಸ್ವಭಾವತಃ ಆಕರ್ಷಣೆ ಮತ್ತು ಸಿಹಿ ಮಾತನಾಡುವವರು. ಆದರೆ ನಿಮ್ಮ ಧ್ವನಿಯ ಎರಡನೇ ಮನೆಯಲ್ಲಿ ಸೂರ್ಯನ ಸಂಚಾರವು ಕೆಲವೊಮ್ಮೆ ನಿಮ್ಮ ಮಾತುಗಳಲ್ಲಿ ಕಠೋರತೆಯನ್ನು ಉಂಟುಮಾಡಬಹುದು. ಈ ಸಂಚಾರದ ಸಮಯದಲ್ಲಿ ನಿಮ್ಮ ಕುಟುಂಬದಲ್ಲಿ ಕೆಲವು ಸಮಸ್ಯೆಗಳು ಬರಬಹುದು. ಸೂರ್ಯ ನಿಮ್ಮ ಉಳಿತಾಯದ ಮನೆಯಲ್ಲಿ ಕುಳಿತಿದ್ದಾರೆ ಆದ್ದರಿಂದ ಈ ಸಂಚಾರದ ಸಮಯದಲ್ಲಿ ನಿಮ್ಮ ಆರ್ಥಿಕ ಭಾಗವು ಸ್ವಲ್ಪ ದುರ್ಬಲವಾಗಿರಬಹುದು.
ನಿಮ್ಮ ಗುರಿಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಸಾಕಾರಗೊಳಿಸಲು ನೀವು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಈ ಸಂಚಾರದ ಸಮಯದಲ್ಲಿ ಯಾವುದೇ ಕೆಲಸವನ್ನು ನೀವು ಹಾಪೋಹಗಳ ಆಧಾರದ ಮೇಲೆ ಪ್ರಾರಂಭಿಸಬಾರದು. ಇದನ್ನು ಮಾಡುವುದರಿಂದ ನಿಮಗೆ ಆರ್ಥಿಕ ತೊಂದರೆಯಾಗಬಹುದು.
ಈ ಮನೆಯಿಂದ ನಿಮ್ಮ ಆಹಾರ ಪಾನೀಯದ ಬಗ್ಗೆ ತಿಳಿಯುತ್ತದೆ, ಈ ಮನೆಯಲ್ಲಿ ಸೂರ್ಯನ ಸ್ಥಾನದಿಂದಾಗಿ ನೀವು ನಿಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಾಗಬಹುದು. ಕಣ್ಣಿಗೆ ಸಂಬಂಧಿಸಿದ ಸಮಸ್ಯೆ ಉಂಟಾಗಬಹುದು. ಆದ್ದರಿಂದ ನಿಮ್ಮ ಕಣ್ಣುಗಳ ಮೇಲೆ ಹೆಚ್ಚು ಒತ್ತಡವನ್ನು ಹಾಕಬೇಡಿ. ನಿಮ್ಮ ಸಹೋದರ ಸಹೋದರಿಯರು ವಿದೇಶದಲ್ಲಿ ವಾಸಿಸಲು ಬಯಸುತ್ತಿದ್ದರೆ ಅಥವಾ ಯಾವುದೇ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸದಲ್ಲಿದ್ದರೆ, ಈ ಸಮಯ ಅವರಿಗೆ ಶುಭವೆಂದು ಸಾಬೀತುಪಡಿಸಬಹುದು.
ಪರಿಹಾರ - ಸೂರ್ಯೋದಯದ ಸಮಯದಲ್ಲಿ ಗಾಯತ್ರಿ ಮಂತ್ರವನ್ನು ಜಪಿಸುವುದು ನಿಮಗೆ ಶುಭವಾಗಿರುತ್ತದೆ.
- ಕರ್ಕ ರಾಶಿ ಭವಿಷ್ಯ
ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯನ ಸಂಚಾರವು ಅವರ ಲಗ್ನದ ಮನೆಯಲ್ಲಿರುತ್ತದೆ. ಇದು ನಿಮ್ಮ ನಾಯಕತ್ವ ಮತ್ತು ಆಡಳಿತಾತ್ಮಕ ಗುಣಗಳನ್ನು ಹೆಚ್ಚಿಸುತ್ತದೆ ಈ ಸಂಚಾರದಿಂದ ನೀವು ಸಂಘಟಿತರಾಗುವ ಬಗ್ಗೆ ಯೋಚಿಸುವಿರಿ. ಈ ಸಮಯದಲ್ಲಿ ನೀವು ಬಾಕಿ ಇರುವ ಕಾರ್ಯಗಳು ಮತ್ತು ಪ್ರಯತ್ನಗಳನ್ನು ಪೂರ್ಣಗೊಳಿಸಬಹುದು. ಈ ಸಂಚಾರದ ಕಾರಣದಿಂದಾಗಿ ನಿಮ್ಮ ಸ್ವಭಾವದಲ್ಲಿ ನೀವು ಬೆಚ್ಚಗಿರುತ್ತೀರಿ ಮತ್ತು ನಿಮ್ಮ ಆಪ್ತ ಜನರ ಬಗೆ ರಕ್ಷಣಾತ್ಮಕವಾಗಿರುತ್ತೀರಿ. ಆದಾಗ್ಯೂ ನಿಮ್ಮ ತಂದೆಯೊಂದಿಗೆ ನೀವು ಕೆಲವು ಸೈದ್ಧಾಂತಿಕ ವ್ಯತ್ಯಾಸಗಳನ್ನು ಹೊಂದಿರಬಹುದು. ಇದರಿಂದ ಮನೆಯ ವಾತಾವರಣವು ಹದಗೆಡಬಹುದು.
ಸೂರ್ಯನ ದೃಷ್ಟಿ ನಿಮ್ಮ ಏಳನೇ ಮನೆಯ ಮೇಲೆ ಇದೆ ಆದ್ದರಿಂದ ಜೀವನ ಸಂಗಾತಿಯೊದಿಗೆ ವಿವಾದ ಸಂಭವಿಸಬಹುದು. ಇದರಿಂದ ದಾಂಪತ್ಯ ಜೀವನದಲ್ಲಿ ಏರಿಳಿತ ಬರುತ್ತದೆ. ಏಕೆಂದರೆ ಈ ಸಮಯದಲ್ಲಿ ನೀವು ಶೀಘ್ರಅಲ್ಲೇ ಪ್ರತಿಕ್ರಿಯೆ ನೀಡುತ್ತೀರಿ. ಇದು ನಿರ್ಧಾರ ತೆಗೆದುಕೊಳ್ಳುವ ನಿಮ್ಮ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ನಿಮ್ಮ ಸಂಬಂಧದ ಮೇಲು ನಕಾರಾತ್ಮಕ ಪರಿಣಾಮ ಬೀರಬಹುದು. ಆದ್ದರಿಂದ ನಿಮ್ಮ ಅಹಂಕಾರವನ್ನು ನಿಮ್ಮ ನಿರ್ಧಾರಗಳ ಮೇಲೆ ಪ್ರಾಬಲ್ಯ ಸಾಧಿಸಲು ಅನುಮತಿಸಬೇಡಿ.
ನಿಮಗೆ ರಕ್ತದೊತ್ತಡ, ಹೃದಯ ಇತ್ಯಾದಿಗೆ ಸಂಬಂಧಿಸಿದ ಯಾವುದೇ ದೀರ್ಘಕಾಲದ ಸಮಸ್ಯೆಗಳನ್ನು ಹೊಂದಿದ್ದರೆ, ಈ ಸಮಯದಲ್ಲಿ ಯಾವುದೇ ರೀತಿಯ ವ್ಯಂಗ್ಯವನ್ನು ತೆಗೆದುಕೊಳ್ಳಬೇಡಿ ಏಕೆಂದರೆ ನಿಮ್ಮ ಆರೋಗ್ಯವು ಕ್ಷೀಣಿಸುವ ಸಾಧ್ಯತೆಗಳಿವೆ. ಯೋಗ, ಧ್ಯಾನ, ದೈಹಿಕ ವ್ಯಾಯಾಮ ಇತ್ಯಾದಿಗಳು ನಿಮ್ಮ ಅನೇಕ ಸಮಸ್ಯೆಗಳನ್ನು ನಿವಾರಿಸಬಲ್ಲವು ಮತ್ತು ನಿಮಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಇದು ನಿಮ್ಮ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಕೇಂದ್ರೀಕರಿಸುವ ಶಕ್ತಿಯನ್ನು ಸಹ ನೀಡುತ್ತದೆ.
ಪರಿಹಾರ - ಸೂರ್ಯೋದಯದ ಸಮಯದಲ್ಲಿ ಪ್ರತಿದಿನ ನಿಯಮಿತವಾಗಿ ಸೂರ್ಯ ದೇವರಿಗೆ ನೀರನ್ನು ಅರ್ಪಿಸುವುದು ನಿಮಗೆ ಶುಭವಾಗಿರುತ್ತದೆ.
- ಸಿಂಹ ರಾಶಿ ಭವಿಷ್ಯ
ಸಿಂಹ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಾವಹಿಸಬೇಕು. ಏಕೆಂದರೆ ಸೂರ್ಯ ನಿಮ್ಮ ವೆಚ್ಚ ಮತ್ತು ವಿದೇಶಿ ಪ್ರಯಾಣಗಳ ಹನ್ನೆರಡನೇ ಮನೆಗೆ ಸಂಚರಿಸುತ್ತಿದ್ದಾರೆ. ಈ ಸಂಚಾರದಿಂದ ನಿಮ್ಮ ಆತ್ಮವಿಶ್ವಾಸದಲ್ಲಿ ಕೊರತೆ ಬರಬಹುದು ಮತ್ತು ನೀವು ನಿಮ್ಮ ಅರ್ಹತೆಯನ್ನು ಅನುಮಾನಿಸಬಹುದು. ಇದರ ಪರಿಣಾಮದಿಂದಾಗಿ ನಿಮ್ಮ ಮನೋಬಲ ಕಡಿಮೆಯಾಗುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಕೆಲಸದ ಸ್ಥಳದಲ್ಲಿ ನೀವು ಸಂತೋಷದೊಂದಿಗೆ ಕೆಲಸ ಮಾಡುವುದನ್ನು ಹೊರೆತುಪಡಿಸಿ ಇತರರಿಂದ ಪ್ರಶಂಸೆ ಪಡೆಯಲು ಪ್ರಯತ್ನಿಸುವುದನ್ನು ಕಾಣಲಾಗುತ್ತದೆ. ಈ ಕಾರದಿಂದ ಕೆಲವು ನಿರ್ಧಾರಗಳನ್ನು ನೀವು ತುರಾತುರಿಯಲ್ಲಿ ತೆಗೆದುಕೊಳ್ಳಬೇಕಾಗಬಹುದು.
ಈ ಸಂಚಾರದ ಸಮಯದಲ್ಲಿ ಯಾವುದೇ ಕಾನೂನು ಬಾಹಿರ ಕೆಲಸವಾದರೆ, ಯಾವುದೇ ನಿಯಮವು ನಿಮ್ಮ ಮೂಲಕ ಉಲ್ಲಂಘಿಸಲಾದರೆ, ನೀವು ಅನಗತ್ಯ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳಬಹುದು. ನಿಮ್ಮ ವೃತ್ತಿಪರ ಜೀವನದ ಬಗ್ಗೆ ಮಾತನಾಡಿದರೆ, ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸರಿಯಾದ ಸಮಯವಲ್ಲ.
ಆರ್ಥಿಕವಾಗಿ ಯಾವುದೇ ರೀತಿಯ ಹೂಡಿಕೆಗೆ ಈ ಸಮಯವೂ ಉತ್ತಮವಲ್ಲ. ಇದರಿಂದ ನಿಮ್ಮ ಮೂಲಕ ಸಂಗ್ರಹಿಸಿರುವ ಹಣ ಕೂಡ ಮುಗಿಯುಹೋಗಬಹುದು ಮತ್ತು ಮಾನಸಿಕವಾಗಿ ನೀವು ಅಸಮಾಧಾನಗೊಳ್ಳಬಹುದು. ಈ ಸಮಯದಲ್ಲಿ ಯಾವುದೇ ನಿರ್ಧಾರವನ್ನು ನೀವು ಬಹಳ ಚಿಂತನಶೀಲವಾಗಿ ತೆಗೆದುಕೊಳ್ಳಬೇಕು. ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ಜೇವನ ಸಂಗಾತಿಯೊಂದಿಗೆ ವಿರೋಧಾಭಾಸವಾಗುವ ಸಂಪೂರ್ಣ ಸಾಧ್ಯತೆ ಇದೆ ಏಕೆಂದರೆ ಈ ಸಮಯದಲ್ಲಿ ಸ್ವಭಾವತಃ ನೀವು ಹೆಚ್ಚು ಕೋಪದಲ್ಲಿರುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ ನೀವು ಜೀವನ ಸಂಗಾತಿಯೊಂದಿಗೆ ತಾಳ್ಮೆಯಿಂದ ಮಾತನಾಡಬೇಕು, ಇದರಿಂದ ನಿಮ್ಮ ವೈಯಕ್ತಿಕ ಜೀವನದಲ್ಲಿ ಒಳ್ಳೆಯ ಬದಲಾವಣೆ ಬರಬಹುದು.
ಪರಿಹಾರ - ಭಾನುವಾರ ನಿಮ್ಮ ಬಲಗೈಯ ಸಣ್ಣ ಬೆರಳಿನಲ್ಲಿ ತಾಮ್ರ ಅಥವಾ ಚಿನ್ನದ ಉಂಗುರದಲ್ಲಿ ಮಾಣಿಕ್ಯ ರತ್ನವನ್ನು (8-9 ಕ್ಯಾರೆಟ್ ) ಧರುಸಿವುದು ನಿಮಗೆ ಶುಭವಾಗಿರುತ್ತದೆ.
- ಕನ್ಯಾ ರಾಶಿ ಭವಿಷ್ಯ
ಸೂರ್ಯ ಗ್ರಹವು ನಿಮ್ಮ ಹನ್ನೊಂದನೇ ಮನೆಗೆ ಸಾಗಣಿಸುತ್ತದೆ ಆದ್ದರಿಂದ ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಅತ್ಯಂತ ಶುಭವಾಗಿರುತ್ತದೆ. ನೀವು ಆಮದು ರಫ್ತ್ತುವಿನ ಕೆಲಸದಳ್ಳಿ ತೊಡಗಿದ್ದರೆ ಅಥವಾ ಯಾವುದೇ ವಿದೇಶಿ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದರೆ ಈ ಸಂಚಾರವು ನಿಮಗೆ ಲಾಭದಾಯಕವೆಂದು ಸಾಬೀತುಪಡಿಸುತ್ತದೆ. ಈ ಸಮಯದಲ್ಲಿ ನಿಮ್ಮ ವೃತ್ತಿಪರ ಜೀವನದಲ್ಲಿ ಇದ್ದಕ್ಕಿದ್ದಂತೆ ಹಣಕಾಸಿನ ಲಾಭವಾಗುವ ಸಾಧ್ಯತೆ ಇದೆ, ಇದರಿಂದ ನಿಮ್ಮ ಆರ್ಥಿಕ ಭಾಗವು ಬಲಗೊಳ್ಳುತ್ತದೆ.
ನಿಮಗೆ ನಿಮ್ಮ ತಂದೆ, ತಂದೆಯಂತಹ ಅಥವಾ ಯಾವುದೇ ಸರ್ಕಾರಿ ಸಂಸ್ಥೆಯ ಮೂಲಕ ಕೂಡ ಈ ಸಮಯದಲ್ಲಿ ಲಾಭವಾಗಬಹುದು. ಈ ರಾಶಿಚಕ್ರದ ಸ್ಥಳೀಯರು ಉದ್ಯೋಗದಲ್ಲಿದ್ದರೆ, ಅವರು ತಮ್ಮ ಪ್ರಯತ್ನಗಳ ಉತ್ತಮ ಫಲಿತಾಂಶವನ್ನು ಪಡೆಯಬಹುದು. ನಿಮ್ಮ ಕೆಲಸವನ್ನು ಹಿರಿಯ ಅಧಿಕಾರಿಗಳ ಮೂಲಕ ಪ್ರಶಂಸಿಸಬಹುದು. ಈ ರಾಶಿಚಕ್ರದ ಜನರು ತಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಕೆಲವು ಪ್ರವಾಸಗಳನ್ನು ಸಹ ಮಾಡುತ್ತಾರೆ ಮತ್ತು ಅದರಿಂದ ಅಪೇಕ್ಷಿತ ಲಾಭವನ್ನು ಪಡೆಯಬಹುದು.
ನಿಮ್ಮ ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ಯಾವುದೇ ದೀಘಕಾಲದ ರೋಗದಿಂದ ನೀವು ಮುಕ್ತರಾಗಬಹುದು ಒಟ್ಟಾರೆಯಾಗಿ ಹೇಳಿದರೆ ಸೂರ್ಯನ ಸಂಚಾರವು ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಸಾಕಷ್ಟು ಉತ್ತಮವಾಗಿರಲಿದೆ. ಆದರೆ ಸೂರ್ಯನ ಈ ಸ್ಥಾನವು ನಿಮ್ಮ ದೃಷ್ಟಿಕೋನವನ್ನು ಕೆಲವೊಮ್ಮೆ ಕಠೋರವಾಗಿಸಬಹುದು, ಇದು ನಮ್ಮ ಸ್ವಭಾವವಲ್ಲ. ಇದರಿಂದಾಗಿ ನೀವು ಕೆಲವು ಸಮಸೆಗಳನ್ನು ಸಹ ಎದುರಿಸಬೇಕಾಗಬಹುದು.
ಪರಿಹಾರ - ಪ್ರತಿದಿನ ಸೂರ್ಯೋದಯದ ಸಮಯದಲ್ಲಿ ಸೂರ್ಯಾಷ್ಟಕವನ್ನು ಪಠಿಸುವುದು ನಿಮಗೆ ಉತ್ತಮವಾಗಿರುತ್ತದೆ.
- ತುಲಾ ರಾಶಿ ಭವಿಷ್ಯ
ಸೂರ್ಯನ ಸಂಚಾರವು ತುಲಾ ರಾಶಿಚಕ್ರದ ಸ್ಥಳೀಯರ ಹತ್ತನೇ ಮನೆಯಲ್ಲಾಗುತ್ತಿದೆ. ಈ ಮನೆಯಲ್ಲಿ ಸೂರ್ಯ ದೇವ ತನ್ನ ದಿಗ್ಬಲಿ ಸ್ಥಾನದಲ್ಲಿರುತ್ತಾರೆ. ಈ ಮನೆಯ ಮೂಲಕ ನಿಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಬಗ್ಗೆ ಪರಿಗಣಿಸಲಾಗುತ್ತದೆ. ಸೂರ್ಯನ ಈ ಸಂಚಾರವು ತುಲಾ ರಾಶಿಚಕ್ರದ ಸ್ಥಳೀಯರಲ್ಲಿ ಸಕ್ರಿಯತೆಯನ್ನು ತುಂಬುತ್ತದೆ ಮತ್ತು ನೀವು ನಿರ್ವಹಣೆ ಮತ್ತು ನಾಯಕತ್ವದ ಗುಣಗಳನ್ನು ಹೊಂದುತ್ತೀರಿ. ಇದರಿಂದ ನೀವು ನಿಮ್ಮ ಹಳೆಯ ಗುರಿಗಳನ್ನು ಸಾಧಿಸುವ ಶಕ್ತಿಯನ್ನು ಪಡೆಯುತ್ತೀರಿ ಮತ್ತು ಹೊಸ ಕೆಲಸವನ್ನು ಚೆನ್ನಾಗಿ ಮಾಡಲು ಸಾಧ್ಯವಾಗುತ್ತದೆ.ಈ ಕಾರಣದಿಂದಾಗಿ ಉನ್ನತ ಅಧಿಕಾರಿಗಳ ನಡುವೆ ನಿಮ್ಮ ಚಿತ್ರವನ್ನು ಸುಧಾರಿಸುತ್ತದೆ. ಈ ಸಮಯದಲ್ಲಿ ನೀವು ಹೊಸ ಜವಾಬ್ದಾರಿಗಳನ್ನು ಸಹ ಪಡೆಯಬಹುದು. ಇದಲ್ಲದೆ ಈ ರಾಶಿಚಕ್ರದ ಕೆಲವು ಸ್ಥಳೀಯರು ಉತ್ತಮ ಸ್ಥಾನವನ್ನು ಪಡೆಯಬಹುದು.
ತಂದೆ ಅಥವಾ ಯಾವುದೇ ಸರ್ಕಾರಿ ಸಂಸ್ಥೆಯ ಮೂಲಕ ನೀವು ಲಾಭವನ್ನು ಪಡೆಯಬಹುದು. ಸರ್ಕಾರಿ ಉದ್ಯೋಗಕ್ಕೆ ತಯಾರಿ ನಡೆಸುತ್ತಿರುವ ಈ ರಾಶಿಚಕ್ರದ ಸ್ಥಳೀಯರು ಅಪೇಕ್ಷಿತ ಫಲಿತಾಂಶವನ್ನು ಪಡೆಯಬಹುದು.ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಹ ಈ ಸಮಯದಲ್ಲಿ ಪ್ರಯೋಜನವನ್ನು ಪಡೆಯಬಹುದು. ಸೂರ್ಯನ ಸಂಚಾರದ ಕಾರಣದಿಂದಾಗಿ ಸಾಮಾಜಿಕ ಜೇವನದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ.
ಸುರ್ಯ ಸಂಚಾರದ ಈ ಸಮಯದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಹ ದೂರವಾಗುತ್ತವೆ. ಆದಾಗ್ಯೂ ಸೂರ್ಯನ ಈ ಸಂಚಾರದ ಸಮಯದಲ್ಲಿ ಪ್ರತಿ ಬಾರಿ ನೀವು ನಿಮ್ಮನ್ನು ಸರಿಯೆಂದು ಸಾಬೀತುಪಡಿಸಬಹುದು. ಈ ಕಾರಣದಿಂದಾಗಿ ನೀವು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಈ ರಾಶಿಚಕ್ರದ ಸ್ಥಳೀಯರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಪರಿಹಾರ - ಯಾವುದೇ ವಿಶೇಷ ಕೆಲಸಕ್ಕೆ ಹೋಗುವ ಮೊದಲು ತಂದೆ, ತಂದೆಯಂತಹ ಅಥವಾ ದೇವರ ವಿಗ್ರಹದ ಕಾಲು ಮುಟ್ಟಿ ಆಶೀರ್ವಾದವನ್ನು ಪಡೆಯುವುದು ನಿಮಗೆ ಶುಭವಾಗಿರುತ್ತದೆ.
- ವೃಶ್ಚಿಕ ರಾಶಿ ಭವಿಷ್ಯ
ಸೂರ್ಯ ದೇವ ವೃಶ್ಚಿಕ ರಾಶಿಚಕ್ರದ ಸ್ಥಳೀಯರ ಹತ್ತನೇ ಮನೆಯ ಮಾಲೀಕನಾಗಿದ್ದು ನಿಮ್ಮ ಒಂಬತ್ತನೇ ಮನೆಗೆ ಸಂಚರಿಸುತ್ತಾರೆ. ಸೂರ್ಯನ ಈ ಸ್ಥಾನವು ನಿಮ್ಮ ಕೆಲಸಗಳಲ್ಲಿ ವಿಳಂಬವನ್ನು ತರಬಹುದು ಮತ್ತು ವೃತ್ತಿಪರ ಜೀವನದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಸೂರ್ಯನು ನೆಲೆಗೊಂಡಿರುವ ಬಲವಾದ ಸ್ಥಾನದಿಂದ ಹನ್ನೆರಡನೇ ಮನೆಯಲ್ಲಿ ಕುಳಿತಿರುವುದು ಇದಕ್ಕೆ ಕಾರಣ. ಈ ಸಮಯದಲ್ಲಿ ತಂದೆ ಅಥವಾ ತಂದೆಯಂತಹ ಜನರೊಂದಿಗೆ ದೂರು ಉಂಟಾಗಬಹುದು. ಈ ಸಂಚಾರದ ಸಮಯದಲ್ಲಿ ನೀವು ಯಾವುದೇ ಕಾನೂನು ಬಾಹಿರ ಕೆಲಸವನ್ನು ಮಾಡಬಾರದು. ಇಲ್ಲದಿದ್ದರೆ ಯಾವುದೇ ದೊಡ್ಡ ಸಮಸ್ಯೆಯಲ್ಲಿ ನೀವು ಸಿಲುಕಿಕೊಳ್ಳಬಹುದು.
ವೃತ್ತಿಪರ ಜೀವನದಲ್ಲಿ ಈ ರಾಶಿಚಕ್ರದ ಸ್ಥಳೀಯರು ಯಾವುದೇ ಸುಳ್ಳು ಆರೋಪದಲ್ಲಿ ಸಿಲುಕಿಕೊಳ್ಳಬಹುದು. ಇದರಿಂದಾಗಿ ನೀವು ಅಸಮಾಧಾನಗೊಳ್ಳಬಹುದು. ನಿಮ್ಮ ಧ್ವನಿಯ ಅಂಶದ ಮನೆಯಾದ ಮೂರನೇ ಮನೆಯ ಮೇಲೆ ಸೂರ್ಯ ದೃಷ್ಟಿ ನೀಡುತ್ತಿದ್ದಾರೆ, ಆದ್ದರಿಂದ ನಿಮ್ಮ ಮಾತುಗಳಲ್ಲಿ ಕಠೋರತೆ ಉಂಟಾಗಬಹುದು. ಈ ಕಾರಣದಿಂದ ಕುಟುಂಬದ ಸದಸ್ಯರು ಮತ್ತು ಜೀವನ ಸಂಗಾತಿಯೊಂದಿಗೆ ಸಾಮರಸ್ಯವನ್ನು ಕಾಪಾಡಿಕೊಳ್ಳುವಲ್ಲಿ ಸಮಸ್ಯೆ ಉಂಟಾಗಬಹುದು.
ಈ ಸಂಚಾರದ ಸಮಯದಲ್ಲಿ ನಿಮ್ಮ ಆರ್ಥಿಕ ಭಾಗವು ಸ್ವಲ್ಪ ದುರ್ಬಲವಾಗಿರಬಹುದು. ಆದ್ದರಿಂದ ನಿಮ್ಮ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಈ ಸಮಯದಲ್ಲಿ ಯಾವುದೇ ರೀತಿಯ ವಿಶೇಷವಾಗಿ ಧಾರ್ಮಿಕ ಪ್ರಯಾಣಗಳನ್ನು ಮಾಡಬೇಡಿ ಏಕೆಂದರೆ ಇದರಿಂದ ನಿಮಗೆ ನಷ್ಟವಾಗುವ ಸಾಧ್ಯತೆ ಇದೆ. ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ಕೀಲು ಮತ್ತು ಕಾಲುಗಳಿಗೆ ಸಮಬಂಧಿಸಿದ ಸಮಸ್ಯೆಗಳಾಗಬಹುದು. ಆದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಪರಿಹಾರ - ಈ ಸಂಚಾರದ ಸಮಯದಲ್ಲಿ ಹರಿವಂಶ ಪುರಾಣವನ್ನು ಪಠಿಸುವುದು ನಿಮಗೆ ಶುಭಾಗಿರುತ್ತದೆ.
- ಧನು ರಾಶಿ ಭವಿಷ್ಯ
ಸೂರ್ಯನ ಈ ಸಂಚಾರವು ನಿಮ್ಮ ಎಂಟನೇ ಮನೆಯಲ್ಲಿರುತ್ತದೆ ಇದನ್ನು ಅನಿಶ್ಚಿತತೆ ಮತ್ತು ಬದಲಾವಣೆಯ ಮೆನೆಯೆಂದು ಸಹ ಕರೆಯಲಾಗುತ್ತದೆ. ಸೂರ್ಯನ ಸಂಚಾರವು ಧನು ರಾಶಿಚಕ್ರದ ಸ್ಥಳೀಯರಿಗೆ ಸವಾಲುಗಳಿಂದ ತುಂಬಿರಲಿದೆ. ಈ ಸಮಯದಲ್ಲಿ ಯಾವುದೇ ರೀತಿಯ ನಷ್ಟವಾಗಬಹುದು. ಈ ಕಾರಣದಿಂದಾಗಿ ನೀರು ಆರ್ಥಿಕವಾಗಿ ದುರ್ಬಲತೆಯನ್ನು ಆಭವಿಸಬಹುದು.
ವೃತ್ತಿಪರ ಜೇವನದಲ್ಲಿ ಹಿರಿಯ ಅಧಿಕಾರಿ ಅಥವಾ ಸರ್ಕಾರದಿಂದ ಸಮಸ್ಯೆಯಾಗಬಹುದು. ಈ ಸಮಯದಲ್ಲಿ ನಿಮ್ಮ ವಿರೋಧಿಗಳು ಸಕ್ರಿಯರಾಗಬಹುದು. ಈ ಕಾರಣದಿಂದಾಗಿ ನಿಮ್ಮ ಜೀವನದಲ್ಲಿ ಏರಿಳಿತ ಉಂಟಾಗಬಹುದು ಮತ್ತು ನಿಮ್ಮ ಪ್ರಗತಿಯ ವೇಗ ನಿಧಾನವಾಗಬಹುದು. ಈ ಸಂಚಾರದ ಸಮಯದಲ್ಲಿ ಯಾವುದೇ ಸಾಲ ತೆಗೆದುಕೊಳ್ಳುವುದು ಅಥವಾ ಯಾರಿಗಾದರೂ ಸಾಲ ನೀಡುವುದನ್ನು ತಪ್ಪಿಸಬೇಕು.
ಈ ಸಂಚಾರದ ಸಮಯದಲ್ಲಿ ನೀವು ಯಾವುದೇ ಕಾನೂನು ಪ್ರಕರಣದಲ್ಲೂ ಬೀಳಬಹುದು ಇದರಿಂದ ನಿಮ್ಮ ಮಾನಸಿಕ ಶಾಂತಿ ಭಂಗವಾಗಬಹುದು. ಮಾತನಾಡುವ ಸಮಯದಲ್ಲಿ ಸ್ವಲ್ಪ ಕಠೋರರಾಗಬಹುದು. ಈ ಕಾರಣದಿಂದ ಕುಟುಂಬ ಮತ್ತು ಅತ್ತೆಮನೆಯ ಸದಸ್ಯರೊಂದಿಗೆ ನಿಮ್ಮ ಜಗಳವಾಗಬಹುದು. ಈ ಕಾರಣದಿಂದಾಗಿ ವೈಯಕ್ತಿಕ ಜೀವನದಲ್ಲಿ ಏರಿಳಿತ ಬರಬಹುದು.
ಈ ಸಂಚಾರದ ಸಮಯದಲ್ಲಿ ನಿಮ್ಮ ಅರೋಗ್ಯ ಜೀವನವು ಉತ್ತಮವಾಗಿರುವುದಿಲ್ಲ ಮತ್ತು ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಈ ಸಮಯದಲ್ಲಿ ವಾಹನವನ್ನು ತುಂಬಾ ಜಾಗರೂಕತೆಯಿಂದ ಚಲಾಯಿಸಬೇಕು. ಸೂರ್ಯ ನಿಮ್ಮ ಆಹಾರ ಪಾನೀಯದ ಎರಡನೇ ಮನೆಯ ಮೇಲೆ ದೃಷ್ಟಿ ಹಾಕುತ್ತಾರೆ ಆದ್ದರಿಂದ ಈ ಸಮಯದಲ್ಲಿ ವಿಶೇಷವಾಗಿ ನಿಮ್ಮ ಆಹಾರದ ಬಗ್ಗೆ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಹೊಟ್ಟೆ ಅಥವಾ ಹಲ್ಲುಗಳಿಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.
ಪರಿಹಾರ - ಬೆಲಪತ್ರದ ಮೂಲವನ್ನು ಬಿಳಿ ದಾರದಲ್ಲಿ ಕಟ್ಟಿ ಅದನ್ನು ನಿಮ್ಮ ಕುತ್ತಿಗೆಗೆ ಧರಿಸಿ ನಿಮಗೆ ಶುಭವಾಗುತ್ತದೆ.
- ಮಕರ ರಾಶಿ ಭವಿಷ್ಯ
ಸೂರ್ಯನ ಸಂಚಾರವು ಮಕರ ರಾಶಿಚಕ್ರದ ಏಳನೇ ಮನೆಯಲ್ಲಿರುತ್ತದೆ. ಈ ಮನೆಯಿಂದ ಪಾಲುದಾರಿಕೆ ಮತ್ತು ಜೀವನ ಸಂಗಾತಿಯ ಬಗ್ಗೆ ಪರಿಗಣಿಸಲಾಗುತ್ತದೆ. ಈ ಮನೆಯಲ್ಲಿ ಸೂರ್ಯನ ಸಾಚಾರವು ಮಕರ ರಾಶಿಚಕ್ರದ ಸ್ಥಳೀಯರಿಗೆ ಶುಭವೆಂದು ಹೇಳಲಾಗುವುದಿಲ್ಲ. ಸೂರ್ಯನ ಈ ಸ್ಥಾನದ ಕಾರಣದಿಂದಾಗಿ ಕೆಲಸದ ಸ್ಥಳದಲ್ಲಿ ನೀವು ನಿಮ್ಮ ಸಹೋದ್ಯೋಗಿ ಅಥವಾ ಹಿರಿಯ ಅಧಿಕಾರಿಯೊಂದಿಗೆ ವಿವಾದ ಮಾಡಬಹುದು. ಇದರಿಂದ ನೀವು ಮಾನಸಿಕ ಒತ್ತಡಕ್ಕೊಳಗಾಗಬಹುದು ಮತ್ತು ಸಮಸ್ಯೆಗಳು ಹೆಚ್ಚಾಗಬಹುದು.
ನೀವು ಯಾವುದೇ ವ್ಯಾಪಾರದಲ್ಲಿದ್ದರೆ, ಪಾಲುದಾರರೊಂದಿಗೆ ವಿವಾದವಾಗಬಹುದು. ಈ ಸಮಯದಲ್ಲಿ ನಿಮ್ಮ ಸ್ಪರ್ಧಿ ನಿಮ್ಮಿಂದ ಒಂದು ಹೆಜ್ಜೆ ಮುಂದಿರಬಹುದು. ಈ ಸಮಯದಲ್ಲಿ ನಿಮ್ಮ ಕೆಲವು ಕೆಲಸಗಳು ಸಿಲುಕಿಕೊಳ್ಳಬಹುದು. ಈ ಕಾರಣದಿಂದ ನೀವು ನಿಮ್ಮನ್ನು ಒಬ್ಬಂಟಿಯಾಗಿ ಅನುಭವಿಸಬಹುದು. ಈ ಸಮಯದಲ್ಲಿ ಹೆಚ್ಚು ಅಗತ್ಯವಿದ್ದಾಗ ಮಾತ್ರ ಪ್ರಯಾಣ ಮಾಡಿ ಏಕೆಂದರೆ ಈ ಸಂಚಾರದ ಸಮಯದಲ್ಲಿ ಪ್ರವಾಸಗಳ ಮೂಲಕ ಆರ್ಥಿಕ ಲಾಭ ಅಥವಾ ಯಾವುದೇ ಯಶಸ್ಸು ಪಡೆಯುವ ಸಾಧ್ಯತೆ ತುಂಬಾ ಕಡಿಮೆಯಿದೆ. ಈ ಮನೆಯ ಮೂಲಕ ಸಾಮಾಜಿಕ ಜೀವನದ ಬಗ್ಗೆಯೂ ತಿಳಿಯುತ್ತದೆ ಆದ್ದರಿಂದ ಸಾಮಾಜಿಕ ಮಟ್ಟದಲ್ಲಿ ಕೂಡ ನೀವು ತುಂಬಾ ಜಾಗರೂಕರಾಗಿರಬೇಕು ಎಂದು ನಿಮಗೆ ಸಲಹೆ ನೀಡಲಾಗಿದೆ. ಅದನ್ನು ಮಾಡದಿದ್ದರೆ ನಿಮ್ಮ ಚಿತ್ರ ಹದಗೆಡುವ ಸಂಪೂರ್ಣ ಸಾಧ್ಯತೆ ಇದೆ.
ಈ ರಾಶಿಚಕ್ರದ ಪ್ರೇಮಿಗಳ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ಜೇವನ ಸಂಗಾತಿಯ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತೀರಿ. ಈ ಕಾರಣದಿಂದಾಗಿ ನಿಮ್ಮಿಬ್ಬರ ನಡುವೆ ವಿವಾದವಾಗಬಹುದು. ಈ ರಾಶಿಚಕ್ರದ ವಿವಾಹಿತ ಜನರು ತಮ್ಮ ಜೀವನ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
ಪರಿಹಾರ - ನೀರು ಕುಡಿಯಲು ತಾಮ್ರದ ಪಾತ್ರವನ್ನು ಬಳಸುವುದು ನಿಮಗೆ ಶುಭವಾಗಿರುತ್ತದೆ.
- ಕುಂಭ ರಾಶಿ ಭವಿಷ್ಯ
ಸೂರ್ಯನ ಸಂಚಾರವು ಕುಂಭ ರಾಶಿಚಕ್ರದ ಸ್ಥಳೀಯರ ಆರನೇ ಮನೆಯಲ್ಲಾಗುತ್ತಿದೆ. ಈ ಮನೆಯಿಂದ ನಿಮ್ಮ ಶತ್ರು, ಸ್ಪರ್ಧೆ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಆರನೇ ಮನೆಯಲ್ಲಿ ಸೂರ್ಯನ ಸಂಚಾರವು ಕುಂಭ ರಾಶಿಚಕ್ರದ ಸ್ಥಳೀಯರಿಗೆ ಶುಭವಾಗಿರಲಿದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಸ್ಪರ್ಧಾತ್ಮಕ ಸಾಮರ್ಥ್ಯವು ಹೆಚ್ಚಾಗುತ್ತದೆ, ಈ ಕಾರಣದಿಂದಾಗಿ ನೀವು ಇತರರಿಂದ ಉತ್ತಮವಾಗಿ ಪ್ರದರ್ಶನ ಮಾಡಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಗುರಿಗಳನ್ನು ಮತ್ತು ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.
ಹೊಸ ಉದ್ಯೋಗವನ್ನು ಹುಡುಕುತ್ತಿರುವ ಈ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ಅನೇಕ ಅವಕಾಶಗಳನ್ನು ಪಡೆಯಬಹುದು. ಇದರೊಂದಿಗೆ ಪ್ರಸ್ತುತ ಉದ್ಯೋಗದಿಂದ ಷ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ನಿಮಗ್ಗೆ ಉತ್ತಮ ಸ್ಥಾನ ಸೀಗೆಬಹುದು ಅಥವಾ ನಿಮ್ಮ ಆದಾಯ ಹೆಚ್ಚಾಗಬಹುದು.
ಈ ಸಮಯದಲ್ಲಿ ಪ್ರವಾಸಗಳು ಶುಭವಾಗಿರುತ್ತವೆ. ವಿಶೇಷವಾಗಿ ಕೆಲಸಕ್ಕೆ ಸಂಬಂಧಿಸಿದ ಪ್ರಯಾಣಗಳ ಮೂಲಕ ಲಾಭವನ್ನು ಪಡೆಯಬಹುದು. ಕಾನೂನು ಕೆಲಸಗಳಲ್ಲಿ ಕೂಡ ಸೂರ್ಯನ ಈ ಸ್ಥಾನವು ನಿಮಗೆ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ವಿರೋಧಿಗಳ ಮೀ ಪ್ರಾಬಲ್ಯ ಸಾಧಿಸುವಿರಿ. ನಿಮ್ಮ ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ಆರೋಗ್ಯವಾಗಿರುತ್ತೀರಿ ಮತ್ತು ನಿಮ್ಮ ರೋಗನಿರೋಧಕ ಸಾಮರ್ಥ್ಯವ ಅದ್ಭುತವಾಗಿರುತ್ತದೆ. ಈ ಕಾರಣದಿಂದ ನೀವು ಜೀವನವನ್ನು ಆನಂದಿಸಲು ಸಾಧ್ಯವಾಗುತ್ತದೆ. ಆದಾಗ್ಯೂ ಈ ಸಮಯದಲ್ಲಿ ನೀವು ಜೀವನ ಸಂಗಾತಿಯ ಬಗ್ಗೆ ಸ್ವಲ್ಪ ತೊಂದರೆಕ್ಕೊಳಗಾಗಬಹುದು.
ಪರಿಹಾರ - ಬಾದಾಮಿ ಸೇವಿಸುವುದು ಮತ್ತು ಅಗತ್ಯವಿರುವವರಿಗೆ ದಾನದ ಮಾಡುವುದು ನಿಮಗೆ ಶುಭವಾಗಿರುತ್ತದೆ.
- ಮೀನಾ ರಾಶಿ ಭವಿಷ್ಯ
ಮೀನಾ ರಾಶಿಚಕ್ರದ ಸ್ಥಳೀಯರ ಪ್ರಯತ್ನಗಳು ಸರಿಯಾದ ದಿಕ್ಕಿನಲ್ಲಿ ಹೋಗುವ ಬದಲು ದಾರಿ ತಪ್ಪಬಹುದು. ಏಕೇನರೆ ಸೂರ್ಯನ ಸಾಗಣೆ ಮೀನಾ ರಾಶಿಚಕ್ರದ ಸ್ಥಳೀಯಾಯ್ರ ಐದನೇ ಮನೆಯಲ್ಲಿ ನಡೆಯುತ್ತಿದೆ. ಈ ಮನೆಯಿಂದ ನಿಮ್ಮ ಯೋಜನೆ ಮತ್ತು ಬುದ್ಧಿಯ ಬಗ್ಗೆ ತಿಳಿಯುತ್ತದೆ ವೃತ್ತಿಪರ ಜೀವನದಲ್ಲಿ ನೀವು ಯೋಚಿಸದಿರುವಂತಹ ಕೆಲಸ ನಿಮಗೆ ಸಿಗಬಹುದು. ಇದಲ್ಲದೆ ಈ ಸಮಯದಲ್ಲಿ ಉನ್ನತ ಅಧಿಕಾರಿಗಳೊಂದಿಗೆ ನಿಮ್ಮ ವಿರೋಧಾಭಾಸವಾಗಬಹುದು. ಈ ಕಾರಣದಿಂದಾಗಿ ಅನಗತ್ಯ ಒತ್ತಡ ಮತ್ತು ಚಿಂತೆಯ ಪರಿಸ್ಥಿತಿ ಉಂಟಾಗಬಹುದು.
ನಿಮ್ಮ ಶತ್ರುಗಳು ಅಥವಾ ವಿರೋಧಿಗಳು ನಿಮ್ಮನ್ನು ಗುರಿಯಾಗಿಸಬಹುದು ಮತ್ತು ಗುರಿಗಳನ್ನು ಸಾಧಿಸುವಲ್ಲಿ ನಿಮ್ಮನ್ನು ಹಿಂದಕ್ಕೆ ಎಳೆಯುವಂತಹ ಪರಿಸ್ಥಿತಿಗಳನ್ನು ನೀವು ಎದುರಿಸಬಹುದು. ಈ ಸಮಯದಲ್ಲಿ ನಿಮ್ಮ ನೈಸರ್ಗಿಕ ಗುಣವಾದ ಜಾಗರೂಕ ಮತ್ತು ಆಶಾವಾದಿಯಾಗಿರಿ. ನಿಮ್ಮ ವೈಯಕ್ತಿಕ ಸಂಬಂಧಗಳ ಬಗ್ಗೆ ಮಾತನಾಡಿದರೆ, ಸೂರ್ಯನ ಈ ಸ್ಥಾನದ ಕಾರಣದಿಂದಾಗಿ ವೈಯಕ್ತಿಕ ಜೀವನದಲ್ಲಿ ನಿಮ್ಮ ನಡವಳಿಕೆ ಸ್ವಲ್ಪ ಕಠೋರವಾಗಿರಬಹುದು. ಈ ಕಾರಣದಿಂದ ನಿಮ್ಮ ಸಂಬಂಧದಲ್ಲಿ ಅಹಂಕಾರದ ಮುಖಾಮುಖಿಯಾಗುವ ಸಾಧ್ಯತೆ ಇದೆ.
ವಿವಾಹಿತ ಜನರ ಬಗ್ಗೆ ಮಾತನಾಡಿದರೆ, ಸಣ್ಣ ಪುಟ್ಟ ವಿಷಯಗಳ ಬಗ್ಗೆಯೂ ನೀವು ಬೇಗನೆ ಕೋಪಗೊಳ್ಳಬಹುದು ಮತ್ತು ಅಸಮಾಧಾನಗೊಳ್ಳಬಹುದು. ಈ ಕಾರಣದಿಂದಾಗಿ ನಿಮ್ಮ ಮನೆಯ ವಾತಾವರಣವು ಹದಗೆಡಬಹುದು. ನಿಮ್ಮ ವರ್ತನೆಯಲ್ಲಿ ನೀವು ಕಠೋರತೆಯನ್ನು ತರಬಾರದು ಏಕೆಂದರೆ ಇದು ಮೀನಾ ರಾಶಿಚಕ್ರದ ಸ್ಥಳೀಯರ ಮೂಲ ಸ್ವಭಾವವಲ್ಲ. ಬದಲಿಗೆ ನಿಮ್ಮ ನಡವಳಿಕೆಯಲ್ಲಿ ನೀವು ನಮ್ಯತೆಯನ್ನು ತರಬೇಕು. ನಿಮ್ಮ ಆರೋಗ್ಯದ ಜೀವನದ ಬಗ್ಗೆ ಮಾತನಾಡಿದರೆ, ನಿಮಗೆ ಅನಿಲ ಸಮಸ್ಯೆ ಉಂಟಾಗಬಹುದು. ಆದ್ದರಿಂದ ನೀವು ಅತಿಯಾಗಿ ಹುರಿದ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸಬಾರದು.
ಪರಿಹಾರ - ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ಆದಿತ್ಯ ಹೃದಯ ಸ್ತ್ರೋತವನ್ನು ಪಠಿಸುವುದು ನಿಮಗೆ ಶುಭವಾಗಿರುತ್ತದೆ.