ಪೆನಂಬ್ರಲ್ ಚಂದ್ರ ಗ್ರಹಣ - Lunar Eclipse on 5th june 2020 in Kannada

ಈ ವರ್ಷ ಸಂಭವಿಸುವ ನಾಲ್ಕು ಚಂದ್ರಗ್ರಹಣಗಳಲ್ಲಿ ಎರಡನೇ ಚಂದ್ರ ಗ್ರಹಣವು ಜೂನ್ 5-6 ರ ರಾತ್ರಿ ಸಂಭವಿಸುತ್ತದೆ. ಏಕೆಂದರೆ ಈ ಚಂದ್ರ ಗ್ರಹಣವು ಉಪ ನೆರಳು ಚಂದ್ರ ಗ್ರಹಣವಾಗಲಿದೆ. ಆದ್ದರಿಂದ ನೋಡಲು ಸ್ವಲ್ಪ ಕಷ್ಟವಾಗುತ್ತದೆ. ಏಕೆಂದರೆ ಗ್ರಹಣ ಸಮಯದಲ್ಲಿ ಚಂದ್ರನ ಬೆಳಕು ಸಾಮಾನ್ಯಕ್ಕಿಂತ ಸ್ವಲ್ಪ ಕಡಿಮೆ ಇರುತ್ತದೆ. ಭಾರತದಲ್ಲಿ ಈ ಗ್ರಹಣವು 5 ಜೂನ್ 2020 ರಂದು ರಾತ್ರಿ 11 ಗಂಟೆ 16 ನಿಮಿಷಕ್ಕೆ ಆರಂಭವಾಗುತ್ತದೆ ಮತ್ತು 6 ಜೂನ್ 2020, ರಂದು 02 ಗಂಟೆ 34 ನಿಮಿಷಕ್ಕೆ ಕೊನೆಗೊಳ್ಳುತ್ತದೆ. ಈ ಗ್ರಹವು ಮಧ್ಯಾಹ್ನ 12 ಗಂಟೆ 54 ನಿಮಿಷದಲ್ಲಿ ತನ್ನ ಉತ್ತುಂಗಕ್ಕೇರುತ್ತದೆ. ಒಟ್ಟಾರೆಯಾಗಿ ಈ ಗ್ರಹಣವು ಮೂರು ಗಂಟೆ ಹದಿನೆಂಟು ನಿಮಿಷಗಳ ವರೆಗೆ ನಡೆಯುತ್ತದೆ.

ಸೂರ್ಯ, ಭೂಮಿ ಮತ್ತು ಚಂದ್ರ ಒಂದು ನೇರವಾದ ಸರಳ ರೇಖೆಯಲ್ಲಿ ಬಂದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ಈ ಸಮಯದಲ್ಲಿ ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬರುತ್ತದೆ. ಇದರಿಂದಾಗಿ ಚಂದ್ರನ ಗೋಚರತೆ ಕಡಿಮೆಯಾಗುತ್ತದೆ.

ಚಂದ್ರ ಗ್ರಹಣದ ರೀತಿಗಳ ಬಗ್ಗೆ ಮಾತನಾಡಿದರೆ, ಒಟ್ಟು ಮೂರು ವಿಧದ ಚಂದ್ರ ಗ್ರಹಣಗಳಿವೆ. ಪೂರ್ಣ ಚಂದ್ರ ಗ್ರಹಣ, ಭಾಗಶಃ ಚಂದ್ರ ಗ್ರಹಣ ಮತ್ತು ಪೆನಂಬ್ರಲ್ ಚಂದ್ರ ಗ್ರಹಣ. ಪೆನಂಬ್ರಲ್ ಚಂದ್ರ ಗ್ರಹಣದಲ್ಲಿ ಚಂದ್ರ, ಭೂಮಿಯ ನೆರಳಿನ ಕ್ಷೇತ್ರದಲ್ಲಿ ಬರುತ್ತದೆ ಮತ್ತು ಚಂದ್ರನ ಮೇಲೆ ಬೀಳುವ ಸೂರ್ಯನ ಬೆಳಕು ಕತ್ತರಿಸಿದಂತೆ ಕಂಡುಬರುತ್ತದೆ.

चंद्रग्रहण का प्रभाव - ಚಂದ್ರ ಗ್ರಹಣದ ಪರಿಣಾಮ

ಮಹಾನ್ ಓಶೋ ಅನಡೆಯುವ ವರ ಮಾತಿನಲ್ಲಿ ಹೇಳಿದರೆ, ನಾವು ಭಿನ್ನವಾಗಿಲ್ಲ. ಆ ಒಂದು ಭ್ರಬಿಮನೊಂದಿಗೆ , ಆ ಒಂದು ಬ್ರಹ್ಮಾಂಡದೊಂದಿಗೆ ಇದ್ದೇವೆ ಮತ್ತು ಪ್ರತಿಯೊಂದು ಘಟನೆಯ ಭಾಗೀದಾರರು. ಅಂದರೆ ವಿಶ್ವದಲ್ಲಿ ನಡೆಯುವ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಘಟನೆಗಳು ಭೂಮಿಯ ಮೇಲೆ ವಾಸಿಸುವ ಮಾನವರ ಮನಸ್ಸು ಮತ್ತು ಜೀವನದ ಮೇಲೆ ಒಂದು ನಿರ್ದಿಷ್ಟ ಪರಿಣಾಮವನ್ನು ಬೀರುತ್ತದೆ.

ಆದ್ದರಿಂದ ಇದನ್ನು ಗಮನದಲ್ಲಿಟ್ಟುಕೊಂಡು ಈ ಉಪವಿಭಾಗದ ಚಂದ್ರ ಗ್ರಹಣವು ಎಲ್ಲಾ ಹನ್ನೆರಡು ರಾಶಿಚಕ್ರಗಳ ಮೇಲೆ ಯಾವ ಮತ್ತು ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿಯೋಣ.

ಯಾವುದೇ ಸಮಸ್ಯೆಯಿಂದ ಬಳಲುತ್ತಿದ್ದರೆ, ನಿವಾರಣೆಗಾಗಿ ಜ್ಯೋತಿಷಿಯ ಬಳಿ ಪ್ರಶ್ನೆ ಕೇಳಿ

  1. ಮೇಷ ರಾಶಿ

ಜೂನ್ 5 ರಂದು ಸಂಭವಿಸುತ್ತಿರುವ ಚಂದ್ರ ಗ್ರಹಣವು ನಿಮ್ಮ ಎಂಟನೇ ಮನೆಯ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಬದಲಾವಣೆ ಮತ್ತು ಅನಿಶ್ಚಿತತೆಯ ಮನೆ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಉದ್ಯೋಗವನ್ನು ಕಳೆದುಕೊಳ್ಳುವ ಮತ್ತು ಕಳ್ಳತನದಂತಹ ಘಟನೆಗಳು ನಿಮ್ಮೊಂದಿಗೆ ಸಂಭವಿಸಬಹುದು ಎಂದು ಇದು ಸೂಚಿಸುತ್ತಿದೆ, ಇದು ನಿಮ್ಮ ಜೀವನದಲ್ಲಿ ಒತ್ತಡ ಮತ್ತು ಆತಂಕವನ್ನು ಉಂಟುಮಾಡುತ್ತದೆ. ಈ ಗ್ರಹಣದಿಂದ ನಿಮ್ಮ ಅರೋಗ್ಯ ಜೀವನದ ಮೇಲೆ ಬಿನಾಕಾರಾತ್ಮಕ ಪರಿಣಾಮ ಬೀರಬಹುದು. ತುರಾತುರಿಯಲ್ಲಿ ಯಾವುದೇ ಫಲಿತಾಂಶವನ್ನು ಬಯಸುವ ಮೂಲಕ ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಆದ್ದರಿಂದ ಈ ಸಮಯದಲ್ಲಿ ಸಾಧ್ಯವಾದಷ್ಟು ತಾಳ್ಮೆಯಿಂದಿರಿ ಮತ್ತು ಸರಿಯಾದ ಸಮಯಕ್ಕಾಗಿ ಕಾಯಲು ನಿಮಗೆ ಸಲಹೆ ನೀಡಲಾಗಿದೆ. ಮೇಷ ರಾಶಿಯ ನಾಲ್ಕನೇ ಮನೆಯನ್ನು ಚಂದ್ರ ನಿಯಂತ್ರಿಸುವುದರಿಂದ, ಈ ಸಮಯದಲ್ಲಿ ನೀವು ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ವಿಷ್ಯ ಕಾಳಜಿ ವಹಿಸಬೇಕಾಗಬಹದು ಎಂದು ಇದು ಸೂಚಿಸುತ್ತದೆ.

ಪರಿಹಾರ - ಚಂದ್ರ ಗ್ರಹಣದ ಸಮಯದಲ್ಲಿ ಶಿವ ಚಾಲೀಸವನ್ನು ಪಠಿಸಿ ಮತ್ತು ಕೇಳಿ

  1. ವೃಷಭ ರಾಶಿ

ವೃಷಭ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ಜೀವನ ಸಂಗಾತಿಯೊಂದಿಗಿನ ತಮ್ಮ ಸಂಬಂಧವನ್ನು ಬಲಪಡಿಸುವ ಅಗತ್ಯವಿದೆ, ಎಕೆದ್ನಾರೆ ಚಂದ್ರ ಗ್ರಹಣವು ನಿಮ್ಮ ಏಳನೇ ಮನೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದನ್ನು ವೈವಾಹಿಕ ಸಂಬಂಧದ ಮನೆ ಎಂದು ಪರಿಗಣಿಸಲಾಗಿದೆ. ಇದಲ್ಲದೆ ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಜನರು ತಮ್ಮ ಪಾಲುದಾರರೊಂದಿಗೆ ಸ್ಪಷ್ಟವಾಗಿ ಮಾತನಾಡುವ ಅಗತ್ಯವಿದೆ. ಇದರಿಂದ ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ನಿಮ್ಮಿಬ್ಬರ ನಡುವೆ ಯಾವುದೇ ವ್ಯತ್ಯಾಸವಿರುವುದಿಲ್ಲ. ಏಕೆಂದರೆ ಚಂದ್ರ ವಿಚಾರಣೆಯ ಮೂರನೇ ಮನೆಯನ್ನು ನಿಯಂತ್ರಿಸುತ್ತಾನೆ, ಆದ್ದರಿಂದ ಇತರರೊಂದಿಗೆ ಚರ್ಚಿಸುವಾಗ ಮತ್ತು ಅವರ ಸಲಹೆಗಳನ್ನು ಗಮನಿಸಿದ ನಂತರವೇ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಿ ಎಂದು ಸಲಹೆ ನೀಡಲಾಗಿದೆ. ಸಹೋದರ ಸಹೋದರಿಯರೊಂದಿಗೆ ಸಮಯ ಕಳೆಯಿರಿ ಮತ್ತು ಈ ಸಮಯದಲ್ಲಿ ಹೆಚ್ಚು ಶೀತ ತಿನ್ನುವುದನ್ನು ತಪ್ಪಿಸಿ.

ಪರಿಹಾರ - ಚಂದ್ರ ಗ್ರಹಣದ ಸಮಯದಲ್ಲಿ ಚಂದ್ರ ಬೀಜ ಮಂತ್ರವನ್ನು ಜಪಿಸಿ.

  1. ಮಿಥುನ ರಾಶಿ

ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಈ ಚಂದ್ರ ಗ್ರಹಣವು ಅವರ ಆರನೇ ಮನೆಯಿಂದ ಹಾದುಹೋಗುತ್ತದೆ. ಆರನೇ ಮನೆ ದಿನಚರಿಯನ್ನು ಪ್ರತಿನಿಧಿಸುತ್ತದೆ. ಅಂತಹ ಸಂದರ್ಭದಲ್ಲಿ ಚಂದ್ರ ಗ್ರಹಣಕ್ಕೆ ಕೆಲವು ದಿನಗಳ ಮೊದಲು ಅಥವಾ ಚಂದ್ರ ಗ್ರಹಣದ ಕೆಲವು ದಿನಗಳ ವರೆಗೆ ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದರೊಂದಿಗೆ ಈ ಸಮಯದಲ್ಲಿ ನಿಮ್ಮ ರೋಗನಿರೋಧಕ ಸಾಮರ್ಥ್ಯವು ಕೂಡ ಸಾಕಷ್ಟು ದುರ್ಬಲವಾಗಿರಬಹುದು. ಈ ಕಾರಣದಿಂದ ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದು ನಿಮಗೆ ಸಲಹೆ ನೀಡಲಾಗಿದೆ. ಯಾವುದೇ ರೀತಿಯ ವಿವಾದ ಅಥವಾ ಜಗಳದಿಂದ ದೂರವಿರಿ. ಇದಲ್ಲದೆ ಈ ಸಮಯದಲ್ಲಿ ನಿಮ್ಮ ವೆಚ್ಚಗಳನ್ನು ನಿಯಂತ್ರಿಸಿ. ಇಲ್ಲದಿದ್ದರೆ ನೀವು ಸಾಲ ತೆಗೆದುಕೊಳ್ಳಬೇಕಾಗುತ್ತದೆ. ಇದು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು.

ಪರಿಹಾರ - ಚಂದ್ರ ಗ್ರಹಣದ ಸಮಯದಲ್ಲಿ ರಾಧಾ ಕೃಷ್ಣ ದೇವರನ್ನು ಪೂಜಿಸಿ.

  1. ಕರ್ಕ ರಾಶಿ

ಈ ಚಂದ್ರ ಗ್ರಹಣದ ಸಮಯದಲ್ಲಿ, ನಕಾರಾತ್ಮಕ ಆಲೋಚನೆಗಳು ಮತ್ತು ಚಿಂತೆಗಳ ಕಾರಣದಿಂದಾಗಿ ನಿಮ್ಮಲ್ಲಿ ಸೃಜನಶೀಲತೆಯ ಸ್ವಲ್ಪ ಕೊರತೆಯನ್ನು ಅನುಭವಿಸುತ್ತೀರಿ. ಈ ಕಾರಣದಿಂದಾಗಿ ಈ ಸಮಯದಲ್ಲಿ ಕೆಲವು ಯೋಜನೆಗಳನ್ನು ತೆಗೆದುಕೊಳ್ಳುವಲ್ಲಿ ನೀವು ವಿಫಲರಾಗಬಹುದು. ಈ ಸಮಯದಲ್ಲಿ ನೀವು ಒಬ್ಬಂಟಿಯಾಗಿರಲು ಮತ್ತು ಯಾರೊಂದಿಗೂ ಮಾತನಾಡಲು ಬಯಸುವುದಿಲ್ಲ. ಆದರೆ ಹಾಗೆ ಮಾಡುವುದರಿಂದ ಖಿನ್ನತೆ ಮತ್ತು ನಕಾರಾತ್ಮಕತೆಗೆ ಮತ್ತಷ್ಟು ಉತ್ತೇಜನವನ್ನು ಪಡೆಯಬಹುದು. ಏಕೆಂದರೆ ಕರ್ಕ ರಾಶಿಯನ್ನು ಆಳವಾದ ಚಿಂತನೆಗೆ ಸಮಬಂದ್ಜಿಸಿದ ರಾಶಿ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಧ್ಯಾನ ಮತ್ತು ಯೋಗ ಮಾಡಿ. ಇದರಿಂದ ನಿಮಗೆ ಸಾಕಷ್ಟು ಸಹಾಯವಾಗುತ್ತದೆ. ಇದಲ್ಲದೆ ಯಾರಾದರೂ ವಿಶ್ವಾಸಾರ್ಹ ವ್ಯಕ್ತಿಯೊಂದಿಗೆ ಮಾತನಾಡಲು ಸಹ ಇದು ಸಹಾಯಕರವೆಂದು ಸಾಬೀತುಪಡಿಸುತ್ತದೆ. ಟೆಲೆವಿಜನ್ ಮತ್ತು ಸಾಮಾಜಿಕ ಮಧ್ಯಮದಿಂದ ದೂರವಿದ್ದು, ಈ ಸಮಯದಲ್ಲಿ ನಿಮ್ಮ ಮಕ್ಕಳೊಂದಿಗೆ ಸಮಯ ಕಳೆಯಿರಿ ಮತ್ತು ಯಾವುದೇ ರೀತಿಯ ಸೃಜನಶೀಲ ಕೆಲಸಗಳನ್ನು ಮಾಡಿ, ಇದರಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹದು

ಪರಿಹಾರ - ಚಂದ್ರ ಗ್ರಹಣದ ಸಮಯದಲ್ಲಿ ತಾಯಿ ಮಹಾಗೌರಿಯ ಮಂತ್ರದ ಮೂಲಕ ಅವರನ್ನು ಪೂಜಿಸಿ.


ಕೋಗ್ನಿಅಸ್ಟ್ರೋ ರಿಪೋರ್ಟ್ ಮೂಲಕ ನಿಮ್ಮ ವೃತ್ತಿಯಲ್ಲಿ ಬರುತ್ತಿರುವ ಸಮಸ್ಯೆಯನ್ನು ನಿವಾರಿಸಿ

  1. ಸಿಂಹ ರಾಶಿ

ಚಂದ್ರ ಗ್ರಹಣವು ಸಿಂಹ ರಾಶಿಚಕ್ರದ ಸ್ಥಳೀಯರ ನಾಲ್ಕನೇ ಮನೆಯಿಂದ ಹಾದುಹೋಗುತ್ತದೆ, ಇದನ್ನು ಬಾಲ್ಯ ಮತ್ತು ಅಂತರಾತ್ಮದ ಮನೆಯೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ನಿಮ್ಮ ಜೀವನಕ್ಕೆ ಸಂಬಂಧಿಸಿದ ಹಿಂದಿನ ಯಾವುದೇ ಕೆಟ್ಟ ಭಾಗವು ನಿಮ್ಮ ಮುಂದೆ ಬರಬಹುದು ಎಂದು ಸೂಚಿಸುತ್ತದೆ, ಇದರಿಂದ ನಿಮ್ಮ ಜೀವನದಲ್ಲಿ ದುಃಖ ಬರುವ ಸಾಧ್ಯತೆ ಇದೆ. ಆದರೆ ಆ ಹಿಂದಿನ ಸಮಯದ ನೋವನ್ನು ಗುರುತಿಸುವುದು ಮತ್ತು ಅದನ್ನು ಸರಿಪಡಿಸಲು ಈ ಸಮಯವೂ ತುಂಬಾ ಸೂಕ್ತವೆಂದು ಸಾಬೀತುಪಡಿಸಬಹದು ಎಂಬುದನ್ನು ನೀವು ಇಲ್ಲಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇದಲ್ಲದೆ ಕುಟುಂಬ ಸದಸ್ಯರೊಬ್ಬರೊಂದಿಗೆ ವಿರೋಧಾಭಾಸ ನಡೆಯುತ್ತಿದ್ದರೆ ಅದನ್ನು ನಿವಾರಿಸಲು ಸಹ ಈ ಸಮಯವೂ ಶುಭವಾಗಿರುತ್ತದೆ. ಮನೆ ದುರಸ್ತಿ ಮಾಡಬೇಕಾಗಬಹುದು, ಇದರಿಂದ ನಿಮ್ಮ ಕೆಲವು ವೆಚ್ಚಗಳಾಗಬಹುದು.

ಪರಿಹಾರ - ಚಂದ್ರ ಗ್ರಹಣದ ಸಮಯದಲ್ಲಿ ಸೌಂದರ್ಯ ಲಹರಿಯನ್ನು ಓದುವುದು ಅಥವಾ ಕೇಳುವುದು ಪ್ರಯೋಜನಕಾರಿಯಾಗುತ್ತದೆ.

  1. ಕನ್ಯಾ ರಾಶಿ

ಚಂದ್ರ, ಕನ್ಯಾ ರಾಶಿಚಕ್ರದ ಆದಾಯದ ಮನೆಯನ್ನು ನಿಯಂತ್ರಿಸುತ್ತದೆ, ಆದ್ದರಿಂದ ಅಂತಹ ಸಂದರ್ಭದಲ್ಲಿ ಚಂದ್ರ ಗ್ರಹಣವು ಕನ್ಯಾ ರಾಶಿಚಕ್ರದ ಸ್ಥಳೀಯರ ಆದಾಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹಣದ ಹರಿವನ್ನು ಸುಗಮವಾಗಿಡಲು, ಈ ರಾಶಿಚಕ್ರದ ಜನರು ಹೆಚ್ಚು ಕೆಲಸ ಅಥವಾ ಹೆಚ್ಚು ಶ್ರಮಿಸಬೇಕಾಗುತ್ತದೆ. ಇದಲ್ಲದೆ, ಚಂದ್ರನು ಹಾದುಹೋಗುವ ಮೂರನೇ ಮನೆ ಈ ಸಮಯದಲ್ಲಿ ನೀವು ಗಡುವನ್ನು ಅಥವಾ ಭರವಸೆ ನೀಡುವುದನ್ನು ತಪ್ಪಿಸಬೇಕೆಂದು ಸೂಚಿಸುತ್ತದೆ. ಎಕೆದ್ನಾರೆ ಈ ಸಮಯದಲ್ಲಿ ನೀವು ನಿಮ್ಮ ಗಡುವನ್ನು ಪೂರೈಸಲು ಸಾಧ್ಯವಾಗದಿರಬಹುದು. ಇದಲ್ಲದೆ ಸಹೋದರ ಸಹೋದರಿಯರು ಮತ್ತು ಸ್ನೇಹಿತರೊಂದಿಗಿನ ಯಾವುದೇ ಹಳೆಯ ವಿವಾದವನ್ನು ನಿವಾರಿಸಲು ಈ ಸಮಯವೂ ಅತ್ಯಂತ ಶುಭವೆಂದು ಸಾಬೀತುಪಡಿಸಬಹುದು.

ಪರಿಹಾರ - ಚಂದ್ರ ಗ್ರಹಣದ ಸಮಯದಲ್ಲಿ “ ಓಂ ನಮೋ ಭಾಗವತೇ ವಾಸುದೇವಯ್ “ ಮಂತ್ರವನ್ನು ಜಪಿಸಿ ಮತ್ತು ಧ್ಯಾನ ಮಾಡಿ

  1. ತುಲಾ ರಾಶಿ

ಚಂದ್ರ ನಿಮ್ಮ ವೃತ್ತಿಪರ, ತಂದೆ ಮತ್ತು ಸ್ಥಾನಮಾನದ ಹತ್ತನೇ ಮನೆಯನ್ನು ನಿಯಂತ್ರಿಸುತ್ತದೆ. ಚಂದ್ರ ಗ್ರಹಣದ ಸಮಯದಲ್ಲಿ ನೀವು ನಿಮ್ಮ ಜೀವನದಲ್ಲಿ ಅಸಮಾಧಾನವನ್ನು ಎದುರಿಸಬೇಕಾಗುತ್ತದೆ ಎಂದು ಸೂಚಿಸುತ್ತದೆ. ನಿಮ್ಮ ಕೆಲಸದಲ್ಲಿ ಸ್ವಲ್ಪ ಕೋಲಾಹಲ ಉಂಟಾಗಬಹುದು. ಏಕೆಂದರೆ ಈ ಸಮಯದಲ್ಲಿ ನಿಮ್ಮ ಕೆಲಸದ ಸಾಮರ್ಥ್ಯವು ನಿರೀಕ್ಷೆಗಿಂತ ಕಡಿಮೆ ಇರಬಹುದು. ಈ ಪರಿಸ್ಥಿತಿಯು ನಿಮ್ಮ ಮತ್ತು ಹಿರಿಯ ಮತ್ತು ಉನ್ನತ ಅಧಿಕಾರಿಗಳೊಂದಿಗೆ ಕೆಲವು ಭಿನ್ನಾಭಿಪ್ರಾಯಗಳನ್ನು ಉಂಟುಮಾಡುತ್ತದೆ ಎಂದು ಸಾಬೀತುಪಡಿಸಬಹುದು. ಆದರೆ, ಈ ಸಮಯದಲ್ಲಿ ನೀವು ಸಾಧ್ಯವಾದಷ್ಟು ಸಭ್ಯರಾಗಿರಲು ನಿಮಗೆ ಸ೩ಲಹೆ ನೀಡಲಾಗಿದೆ. ಇಲ್ಲದಿದ್ದರೆ ಈ ಸಮಯದಲ್ಲಿ ನೀವು ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದು ನಿಮ್ಮ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಬಹುದು. ಆದಾಗ್ಯೂ ಈ ವ್ಯಾಪರದಲ್ಲಿ ತೊಡಗಿರುವ ಈ ರಾಶಿಚಕ್ರದ ಸ್ಥಳೀಯರು ಇದ್ದಕ್ಕಿದ್ದಂತೆ ಲಾಭವನ್ನು ಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ ಈ ಸಮಯದಲ್ಲಿ ನಿಮ್ಮ ತಂದೆಯ ಆರೋಗ್ಯವು ದುರ್ಬಲವಾಗಿರಬಹುದು. ಆದ್ದರಿಂದ ಸ್ವಲ್ಪ ಗಮನ ಹರಿಸಿ.

ಪರಿಹಾರ - ಚಂದ್ರ ಗ್ರಹಣದ ಸಮಯದಲ್ಲಿ “ ಶ್ರೀ ರುದ್ರ ಸ್ತ್ರೋತವನ್ನು ಪಠಿಸಿ ಅಥವಾ ಕೇಳಿ.

  1. ವೃಶ್ಚಿಕ ರಾಶಿ

ಈ ಚಂದ್ರ ಗ್ರಹಣವು ವೃಶ್ಚಿಕ ರಾಶಿಚಕ್ರದ ಮಾಧ್ಯಮದಿಂದ ಹಾದುಹೋಗುತ್ತದೆ. ಅಂದರೆ ಈ ಸಮಯದಲ್ಲಿ ಈ ರಾಶಿಚಕ್ರದ ಸ್ಥಳೀಯರು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಲು ಸಲಹೆ ನೀಡಲಾಗಿದೆ. ಏಕೆಂದರೆ ಈ ಸಮಯದಲ್ಲಿ ನೀವು ನೀರಿನಿಂದ ಹರಡುವ ಕೆಲವು ಕಾಯಿಲೆಗಳಿಗೆ ಅಥವಾ ಸೋಂಕುಗಳಿಗೆ ಒಳಗಾಗಬಹುದು. ಇದರೊಂದಿಗೆ ವಾಹನ ಚಲಾಯಿಸುವ ಸಮಯದಲ್ಲಿ ವಿಶೇಷ ಕಾಳಜಿ ವಹಿಸುವ ಅಗತ್ಯವಿದೆ, ಇಲ್ಲದಿದ್ದರೆ ಯಾವುದೇ ದೊಡ್ಡ ಅಪಘಾತವಾಗಬಹುದು. ಇದಲ್ಲದೆ ಈ ಸಮಯದಲ್ಲಿ ನೀವು ವಿಕ್ಟಿಮ್-ಕಾಂಪ್ಲೆಕ್ಸ್ಗೆ ಬಲಿಯಾಗಿದ್ದೀರಿ ಎಂದು ನಿಮಗೆ ಅನಿಸಬಹುದು. ಈ ಕಾರಣದಿಂದಾಗಿ ನೀವು ವಿಷಯಗಳನ್ನು ಮಧ್ಯದಲ್ಲೇ ಬಿಡಬಹುದು. ಆದ್ದರಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಲು ಬಯಸುತ್ತಿದ್ದರೆ. ನಿಮ್ಮ ಕೆಲಸಗಳನ್ನು ಸಂಪೂರ್ಣ ಜವಾಬ್ದಾರಿಯೊಂದಿಗೆ ಪೂರ್ಣಗೊಳಿಸಿ.

ಪರಿಹಾರ - ಚಂದ್ರ ಗ್ರಹಣದ ಸಮಯದಲ್ಲಿ ಚಂದ್ರ ಯಂತ್ರವನ್ನು ಜಪಿಸಿ.

  1. ಧನು ರಾಶಿ

ಈ ಸಮಯಾವಧಿಯಲ್ಲಿ ಧನು ರಾಶಿಚಕ್ರದ ಸ್ಥಳೀಯರ ಸ್ಥಾನಮಾನವು ಹೆಚ್ಚಾಗುತ್ತದೆ. ಇದಲ್ಲದೆ ಜೀವನ ಸಂಗಾತಿ ಅಥವಾ ಪ್ರೀತಿಪಾತ್ರರೊಂದಿಗಿನ ಸಂಬಂಧದಲ್ಲಿ ಸಂತೋಷ ಮತ್ತು ಸಾಮರಸ್ಯವೂ ಹೆಚ್ಚಾಗುತ್ತದೆ. ಇದರ ಸಂಪೂರ್ಣ ಆನಂದವನ್ನು ನೀವು ಪಡೆಯುತ್ತೀರಿ. ನಿಮ್ಮ ಸಾಹಸ ಮತ್ತು ಭೈರ್ಯದ ಬಲದ ಮೇಲೆ ಈ ಸಮಾಯ್ದಲ್ಲಿ ನೀವು ದೊಡ್ಡ ಕೆಲಸವನ್ನು ಸಹ ಸುಲಬಹವಾಗಿ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಜೀವನದಲ್ಲಿ ಅಡಚಣೆಗಳು ಬರುತ್ತವೆ, ಆದರೆ ನೀವು ನಿಮ್ಮ ಬಲವಾದ ಮನೋಬಲದಿಂದ ಅವುಗಳನ್ನು ನಿವಾರಿಸುವಲ್ಲಿ ಸಾಮರ್ಥ್ಯರಾಗುವಿರಿ. ಆರ್ಥಿಕ ದೃಷ್ಟಿಯಿಂದ ಈ ಸಮಯವೂ ನಿಮಗೆ ಉತ್ತಮವಾಗಿರುತ್ತದೆ. ಆದರೆ ವೆಚ್ಚಗಳು ಅಷ್ಟೇ ಹೆಚ್ಚಾಗಿರುತ್ತವೆ. ಇದಲ್ಲದೆ ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದು ನಿಮಗೆ ಸಲಹೆ ನೀಡಲಾಗಿದೆ, ಏಕೆಂದರೆ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

ಪರಿಹಾರ - ಚಂದ್ರ ಗ್ರಹಣದ ಸಮಯದಲ್ಲಿ ಭಗವಂತ ಶಿವನ ಸ್ತುತಿಯಲ್ಲಿ “ ರುದ್ರಾಷ್ಟಕಂ “ ಸ್ತ್ರೋತವನ್ನು ಪಠಿಸಿ ,

ನಿಮ್ಮ ಜಾತಕದಲ್ಲಿ ಯಾವುದೇ ದೋಷವಿದೆಯೇ? ತಿಳಿಯಲು ಈಗಲೇ ಖರೀದಿಸಿ ಆಸ್ಟ್ರೋಸೇಜ್ ಬೃಹತ್ ಕುಂಡಲಿ
  1. ಮಕರ ರಾಶಿ

ಈ ಸಮಯದಲ್ಲಿ ಮಕರ ರಾಶಿಚಕ್ರದ ಸ್ಥಳೀಯರ ಆರ್ಥಿಕ ಪರಿಸ್ಥಿತಿ ಮತ್ತು ಸ್ಥಾನಮಾನದಲ್ಲಿ ಹೆಚ್ಚಳವನ್ನು ಕಾಣಲಾಗುತದೆ. ಈ ರಾಶಿಚಕ್ರಡ್ ಕೆಲವು ಸ್ಥಳೀಯರು, ಸಂಬಳ ಹೆಚ್ಚಾಗುವ ಮತ್ತು ಗೌರವ ಹೆಚ್ಚಾಗುವಂತಹ ಅವಕಾಶಗಳನ್ನು ಈ ಸಮಯದಲ್ಲಿ ಪಡೆಯಬಹುದು. ಹೊಸ ವ್ಯಾಪಾರವನ್ನು ಆರಂಭಿಸಲು ಬಯಸುತ್ತಿರುವ ಜನರು, ಚಂದ್ರ ಗ್ರಹಣದ ನಂತರ ಅನೇಕ ಉತ್ತಮ ಅವಕಾಶಗಳನ್ನು ಪಡೆಯಬಹುದು. ಈ ಸಮಯದಲ್ಲಿ ನೀವು ಅನೇಕ ಕೆಲಸಗಳಲ್ಲಿ ಪಾಲ್ಗೊಳ್ಳುವಿರಿ. ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿ ಅಥವಾ ಪ್ರೀತಿಪಾತ್ರರೊಂದಿಗಿನ ಸಂಬಂಧವು ಸ್ವಲ್ಪ ದುರ್ಬಲಗೊಳ್ಳಬಹುದು. ಆದ್ದರಿಂದ ಸಾಧ್ಯವಾದಷ್ಟು ಉತ್ತಮ ಸಮಯವನ್ನು ಅವರೊಂದಿಗೆ ಕಳೆಯಿರಿ ಎಂದು ನಿಮಗೆ ಸಲಹೆ ನೀಡಲಾಗಿದೆ.

ಪರಿಹಾರ - ಚಂದ್ರ ಗ್ರಹಣದ ಸಮಯದಲ್ಲಿ ಶ್ರೀ ಕೃಷ್ಣ ಮಂತ್ರ ಅಥವಾ ಕಥೆಯನ್ನು ಕೇಳಿ ಅಥವಾ ಅವರನ್ನು ಪಠಿಸಿ.

  1. ಕುಂಭ ರಾಶಿ

ಚಂದ್ರ ಗ್ರಹಣವು, ನಿಮ್ಮ ವೃತ್ತಿಪರದ ಹತ್ತನೇ ಮನೆಯ ಮೂಲಕ ಹಾದುಹೋಗುತ್ತದೆ. ಈ ಸಮಯದಲ್ಲಿ ನಿಮ್ಮ ಕೆಲಸಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ನೀವು ಎದುರಿಸಬೇಕಾಗಬಹುದು. ಏಕೆಂದರೆ ಈ ಸಮಯದಲ್ಲಿ ನಿಮ್ಮ ಶತ್ರುಗಳು ಮತ್ತು ಹಿರಿಯ ಅಧಿಕಾರಿಗಳು ನಿಮ್ಮಮೇಲೆ ಪ್ರಾಬಲ್ಯ ಸಾಧಿಸಲು ಸಂಪೂರ್ಣವಾಗಿ ಪ್ರಯತ್ನಿಸುತ್ತಾರೆ. ಇದಲ್ಲದೆ ಈ ಸಮಯದಲ್ಲಿ ನೀವು ನಿಮ್ಮ ಆರಾಮ ವಲಯದಿಂದ ಹೊರಬರಲು ಬಯಸುವುದಿಲ್ಲ, ಇದು ಪರಿಸ್ಥಿತಿಯನ್ನು ನಿಭಾಯಿಸುವ ಮತ್ತು ಹೊಸ ಅವಕಾಶವನ್ನು ಪಡೆದುಕೊಳ್ಳುವ ನಿಮ್ಮ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಅಲ್ಲದೆ, ಈ ಸಮಯದಲ್ಲಿ ನಿಮ್ಮ ಆರೋಗ್ಯವು ಸ್ವಲ್ಪ ಸಡಿಲವಾಗಿ ಉಳಿಯಬಹುದು. ಇದರಿಂದಾಗಿ ನೀವು ಸೋಂಕಿಗೆ ಹೆಚ್ಚು ಒಳಗಾಗುತ್ತೀರಿ. ಆದ್ದರಿಂದ ನೀವು ಆತ್ಮವಿಶ್ವಾಸದಿಂದಿರಿ ಮತ್ತು ನಿಮ್ಮ ಆರಾಮ ವಲಯದಿಂದ ಹೊರಬನ್ನಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಇದಲ್ಲದೆ ನಿಮ್ಮ ಹೊಟ್ಟೆಯ ಆರೋಗ್ಯವನ್ನು ಸುಧಾರಿಸಲು ಪೌಷ್ಟಿಕ ಆಹಾರವನ್ನು ಸೇವಿಸಿ ಮತ್ತು ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಿರಿ.

ಪರಿಹಾರ - ಚಂದ್ರ ಗ್ರಹಣದ ಸಮಯದಲ್ಲಿ ಚಂದ್ರನ ಮಂತ್ರ “ ಓಂ ಚಂದ್ರಾಯ ನಮಃ “ ವನ್ನು ಪಠಿಸಿ.

  1. ಮೀನಾ ರಾಶಿ

ಮೀನಾ ರಾಶಿಚಕ್ರದ ಸ್ಥಳೀಯರು ಈ ಚಂದ್ರ ಗ್ರಹಣದಿಂದ ಕೆಲವು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ ಇದು ಅವರ ಅದೃಷ್ಟ ಮತ್ತು ಭಾಗ್ಯದ ಒಂಬತ್ತನೇ ಮನೆಯ ಮೂಲಕ ಮುಂದುವರಿಯುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಅದೃಷ್ಟದ ಬೆಂಬಲದಿಂದ ದೀರ್ಘಕಾಲದಿಂದ ಸಿಲುಕಿಕೊಂಡಿದ್ದ ನಿಮ್ಮ ಕಾರ್ಯಗಳನ್ನು ಬಹಳ ಸುಲಭವಾಗಿ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುತದೆ. ಆಧ್ಯಾತ್ಮಿಕತೆಯ ಬಗ್ಗೆ ನಿಮ್ಮ ಆಸಕ್ತಿ ಹೆಚ್ಚಾಗುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಚಂದ್ರ ಗ್ರಹಣದ ನಂತರ ನೀವು ಯಾರಾದರೂ ಆಧ್ಯಾತ್ಮಿಕ ಗುರುಗಳೊಂದಿಗೆ ಕೂಡ ಸೇರಬಹುದು. ಈ ಸಮಯದಲ್ಲಿ ನಿಮ್ಮ್ ಆಲೋಚನೆಗಳನ್ನು ಪ್ರಶಂಸಿಸಲಾಗುತ್ತದೆ. ಈ ಕಾರಣದಿಂದ ಜೀವನದಲ್ಲಿ ನೀವು ಮುಂದುವರಿಯಲು ನಿಮಗೆ ಸಾಧ್ಯವಾಗುತದೆ. ಇದಲ್ಲದೆ ಖಂಡಿತವಾಗಿಯೂ ನೀವು ನಿಮ್ಮ ಮಕ್ಕಳೊಂದಿಗೆ ಸಮಯ ಕಳೆಯಿರಿ ಎಂದು ನಿಮಗೆ ಸಲಹೆ ನೀಡಲಾಗಿದೆ.

ಪರಿಹಾರ - ಚಂದ್ರ ಗ್ರಹಣದ ಸಮಯದಲ್ಲಿ ದೇವಿ ದುರ್ಗೆಯ ಮಂತ್ರಗಳನ್ನು ಪಠಿಸಿ ಮತ್ತು ಕೇಳಿ


ಯಂತ್ರ, ರತ್ನದ ಕಲ್ಲು ಇತ್ಯಾದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ ಆಸ್ಟ್ರೋಸೇಜ್ ಆನ್ಲೈನ್ ಶಾಪಿಂಗ್ ಸ್ಟೋರ್

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 399/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer