ವೃಶ್ಚಿಕ ರಾಶಿಯಲ್ಲಿ ಬುಧ ಸಂಚಾರ (28 ನವೆಂಬರ್ 2020)
ವೈದಿಕ ಜ್ಯೋತಿಷ್ಯದಲ್ಲಿ ಬುಧ ಗ್ರಹವನ್ನು ಸಂವಹನ, ವ್ಯಾಪಾರದ ತಿಳುವಳಿಕೆ, ವಿಶ್ಲೇಷಣೆ ಮತ್ತು ವೀಕ್ಷಣೆಯ ಗ್ರಹವೆಂದು ಪರಿಗಣಿಸಲಾಗಿದೆ. ಇದಲ್ಲದೆ ಬುಧವನ್ನು ತಟಸ್ಥ ಗ್ರಹವೆಂದು ಪರಿಗಣಿಸಲಾಗುತ್ತದೆ. ತಟಸ್ಥ ಗ್ರಹ ಎಂದರೆ, ಬುಧ ಗ್ರಹದ ಪ್ರಯೋಜನವಾಗುವುದು, ನಿಮ್ಮ ಜಾತಕದಲ್ಲಿ ಬುಧವು ಯಾವ ಗ್ರಹದೊಂದಿಗೆ ಇದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಉತ್ತಮ ಗ್ರಹದೊಂದಿಗೆ ಇದ್ದರೆ, ಬುಧವು ಪ್ರಯೋಜನಕಾರಿ ಫಲಿತಾಂಶಗಳನ್ನು ನೀಡುತ್ತದೆ.
ನಿಮ್ಮ ಜಾತಕದಲ್ಲಿ ರಾಜ ಯೋಗವು ಕೂಡುತ್ತಿದೆಯೇ? ರಾಜ ಯೋಗ
ಯಾವುದೇ ವ್ಯಕ್ತಿಯ ಜಾತಕ ದಲ್ಲಿ ಬುಧ ಗ್ರಹವು ದುರ್ಬಲ ಸ್ಥಿತಿಯಲ್ಲಿದ್ದರೆ, ಇದರಿಂದಾಗಿ ಆ ಮನುಷ್ಯನ ಜೀವನದಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತವೆ, ಆದರೆ ಜಾತಕದಲ್ಲಿ ಬುಧವು ಶಕ್ತಿಯುತನಾಗಿದ್ದರೆ, ಆ ಮನುಷ್ಯನು ಅನೇಕ ಸಂತೋಷಗಳ ಉಡುಗೊರೆಯನ್ನು ಪಡೆಯುತ್ತಾನೆ. ಜಾತಕದಲ್ಲಿ ಬುಧದ ಸ್ಥಾನವು ವ್ಯಕ್ತಿಯು ಹೇಗೆ ಮಾತನಾಡುತ್ತಾನೆ ಮತ್ತು ಹೇಗೆ ವರ್ತಿಸುತ್ತಾನೆ ಅಥವಾ ಅವನ ಬುದ್ಧಿ ಮತ್ತು ವ್ಯಕ್ತಿತ್ವ ಹೇಗಿರುತ್ತದೆ ಎಂಬುವುದನ್ನು ನಿರ್ಧರಿಸುತ್ತದೆ.
ಆಕಾಶ ಗೋಳದಲ್ಲಿ ಬುಧ ಗ್ರಹವು ಸೂರ್ಯ ಮತ್ತು ಶುಕ್ರ ಗ್ರಹದ ಅತ್ಯಂತ ನಿಕಟವಾಗಿದೆ. 28 ನವೆಂಬರ್ ರಂದು 06:53 ಗಂಟೆಗೆ ಬುಧವು ವೃಶ್ಚಿಕ ರಾಶಿಯಲ್ಲಿ ಸಂಚರಿಸುತ್ತದೆ. ಇದರ ನಂತರ 17 ಡಿಸೆಂಬರ್ ವರೆಗೆ ಅಲ್ಲಿಯೇ ಇರುತ್ತದೆ ಮತ್ತು 11:26 ಗಂಟೆಗೆ ಧನು ರಾಶಿಗೆ ಹಾದುಹೋಗುತ್ತದೆ, ಈ ಗ್ರಹ ಬದಲಾವಣೆಯು ನಿಮಗೆ ದೃಢ ನಿಶ್ಚಯದೊಂದಿಗೆ ಸಂಶೋಧನಾ ಕಾರ್ಯಗಳಲ್ಲಿ ಸಹಕಾರಿಯಾಗುತ್ತದೆ. ಇದಲ್ಲದೆ ನೀವು ನಿಮ್ಮನ್ನು ಅರ್ಥಮಾಡಿಕೊಳ್ಳಲು ಸಹ ಈ ಸಂಚಾರವು ಉತ್ತಮವೆಂದು ಸಾಬೀತುಪಡಿಸುತ್ತದೆ.
ನಡೆಯಿರಿ ಈ ಸಾಗಣೆಯು ಎಲ್ಲಾ 12 ರಾಶಿಗಳ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ತಿಳಿಯೋಣ.
ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ
- ಮೇಷ ರಾಶಿ
ಬುಧ ಗ್ರಹವು ಮೇಷ ರಾಶಿಚಕ್ರದ ಸ್ಥಳೀಯರ ಎಂಟನೇ ಮನೆಯಲ್ಲಿ ಸಂಭವಿಸಲಿದೆ. ಇದನ್ನು ಸಂಶೋಧನೆ, ಬದಲಾವಣೆ ಮತ್ತು ಅನಿಶ್ಚಿತತೆಯನ್ನು ಪ್ತತಿನಿಧಿಸುತ್ತದೆ. ಬುಧ ಗ್ರಹವು ಮೇಷ ಸ್ಥಳೀಯರ ಧೈರ್ಯ, ಪ್ರಯತ್ನಗಳು, ಸಹೋದರ ಸಹೋದರಿಯರು ಮತ್ತು ಅಲ್ಪಾವಧಿಯ ಪ್ರಯಾಣದ ಮೂರನೇ ಮನೆಯನ್ನು ನಿಯಂತ್ರಿಸುತ್ತದೆ. ಬುಧ ಗ್ರಹದ ಈ ಸಂಚಾರವು ಮೇಷ ರಾಶಿಚಕ್ರದ ಸ್ಥಳೀಯರಿಗೆ ಉತ್ತಮ ಫಲಿತಾಂಶಗಳನ್ನು ತರುವುದಿಲ್ಲ ಎಂದು ತೋರಿಸುತ್ತದೆ.
ಬುಧವನ್ನು ಸಂವಹನದ ಮಾಲೀಕ ಎಂದು ಪರಿಗಣಿಸಲಾಗಿದೆ ಮತ್ತು ಇದು ನಿಮ್ಮ ಭಾಷಣೆ ಮತ್ತು ಕುಟುಂಬದ ಎರಡನೇ ಮನೆಯನ್ನು ನೇರವಾಗಿ ಪ್ರದರ್ಶಿಸುತ್ತದೆ, ಅಂದರೆ ನೀವು ಮಾತನಾಡುವಾಗ ನಿಮ್ಮ ಪದಗಳನ್ನು ಬಹಳ ಚಿಂತನಶೀಲವಾಗಿ ಮತ್ತು ಎಚ್ಚರಿಕೆಯಿಂದ ಆರಿಸಬೇಕಾಗುತ್ತದೆ. ಇಲ್ಲದಿದ್ದರೆ ನಿಮ್ಮ ಕುಟುಂಬದ ವಾತಾವರಣವು ಹದಗೆಡಬಹುದು.
ಈ ಸಂಚಾರದ ಸಮಯದಲ್ಲಿ ಮೇಷ ರಾಶಿಚಕ್ರದ ಸ್ಥಳೀಯರು ತಮ್ಮ ಆಲೋಚನೆಗಳು ಮತ್ತು ವಿಚಾರಗಳನ್ನು ಪರಿಣಾಮಕಾರಿ ರೀತಿಯಲ್ಲಿ ವ್ಯಕ್ತಪಡಿಸಲು ಸ್ವಲ್ಪ ಕಠಿಣವಾಗಬಹುದು. ಇದರಿಂದಾಗಿ ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಉತ್ತಮ ಪ್ರದರ್ಶನವನ್ನು ತೋರಿಸಲು ಸಾಧ್ಯವಾಗುವುದಿಲ್ಲ. ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಪ್ರಯತ್ನಗಳು ಸರಿಯಾದ ದಿಕ್ಕಿನಲ್ಲಿ ಹೋಗುವುದಿಲ್ಲ ಇದರಿಂದ ನಿಮ್ಮ ಜೀವನದಲ್ಲಿ ಹತಾಶೆ, ಕೋಪ ಮತ್ತು ಒತ್ತಡದ ಪರಿಸ್ಥಿತಿ ಉಂಟಾಗಬಹುದು.
ಅಂತಹ ಪರಿಸ್ಥಿತಿಯಲ್ಲಿ ನೀವು ತಾಳ್ಮೆಯಿಂದಿರಿ ಮತ್ತು ಯಾವುದೇ ಕೆಲಸದಲ್ಲಿ ತುರಾತುರಿಯನ್ನು ತೋರಿಸಬೇಡಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಧಾರಿಯಾದಿಂದಿರಿ ಮತ್ತು ಸಮಯದೊಂದಿಗೆ ಎಲ್ಲವು ಸರಿಯಾಗುತ್ತದೆ. ಇದಲ್ಲದೆ ಈ ಸಮಯದಲ್ಲಿ ಯಾವುದೇ ರೀತಿಯ ಪ್ರಯಾಣವನ್ನು ತಪ್ಪಿಸಿ. ಏಕೆಂದರೆ ಈ ಪ್ರಯಾಣದ ಮೂಲಕ ನಿಮಗೆ ಲಾಭವಾಗುವುದಿಲ್ಲ ಮತ್ತು ನೀವು ಹಾನಿಯನ್ನು ಹೊಂದುವ ಸಂಪೂರ್ಣ ಸಾಧ್ಯತೆ ಇದೆ.
ಈ ಸಂಚಾರದ ಸಮಯದಲ್ಲಿ ನೀವು ಶತ್ರುಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸಬಹುದು. ಅಥವಾ ನಿಮ್ಮನ್ನು ಅವಮಾನಿಸಲು ನಿಮ್ಮ ವಿರುದ್ಧ ಯಾವುದೇ ಪಿತೂರಿ ಅಥವಾ ಯಾವುದೇ ರೀತಿಯ ಯೋಜನೆಯನ್ನು ಮಾಡಲು ಪ್ರಯತ್ನಿಸಬಹುದು. ಆದ್ದರಿಂದ ಈ ಸಮಯದಲ್ಲಿ ನೀವು ಸಾಧ್ಯವಾದಷ್ಟು ಜಾಗರೂಕರಾಗಿರಿ ಮತ್ತು ಎಚ್ಚರದಿಂದಿರಲು ಪ್ರಯತ್ನಿಸಿ. ಇದಲ್ಲದೆ ಈ ಸಮಯದಲ್ಲಿ ಯಾವುದೇ ರೀತಿಯ ಸಾಲ ಅಥವಾ ವಹಿವಾಟುಗಳನ್ನು ತಪ್ಪಿಸಿ.
ಈ ಸಮಯದಲ್ಲಿ ನಿಮ್ಮ ಕಿರಿಯ ಸಹೋದರ ಸಹೋದರಿಯರು ತಮ್ಮ ಜೀವನದಲ್ಲಿ ಕೆಲವು ಅಡೆತಡೆ ಅಥವಾ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದಲ್ಲದೆ ನಿಮ್ಮ ಮತ್ತು ಸಹೋದರ ಸಹೋದರಿಯರ ನಡುವೆ ಕೆಲವು ತಪ್ಪುಗ್ರಹಿಕೆಗಳು ಸಹ ಉಂಟಾಗಬಹುದು. ಮತ್ತೊಂದೆಡೆ ನಿಮ್ಮ ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ಕಿವಿ, ಭುಜ ಮತ್ತು ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಉಂಟಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಆರೋಗ್ಯದ ಬಗ್ಗೆ ಅಸಡ್ಡೆ ತೋರಿಸಬೇಡಿ.
ಪರಿಹಾರ - ತಮಗಾಗಿ ವಸ್ತುಗಳನ್ನು ಪಡೆಯಲು ಸಾಧ್ಯವಾಗದ ಅಗತ್ಯವಿರುವ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ದಾನ ಮಾಡಿ.
- ವೃಷಭ ರಾಶಿ
ಬುಧ ಗ್ರಹವು ವೃಷಭ ರಾಶಿಚಕ್ರದ ಸ್ಥಳೀಯರ ಏಳನೇ ಮನೆಗೆ ಸಂಚರಿಸಲಿದೆ. ಏಳನೇ ಮನೆಯನ್ನು ಜೀವನ ಸಂಗಾತಿ, ಸಂಬಂಧ ಮತ್ತು ವ್ಯಾಪಾರದ ಪಾಲುದಾರಿಕೆಯ ಮನೆಯೆಂದು ಪರಿಗಣಿಸಲಾಗಿದೆ. ಬುಧ ಸಂಚಾರವು ವೃಷಭ ರಾಶಿಚಕ್ರದ ಸ್ಥಳೀಯರಿಗೆ ಅತ್ಯಂತ ಶುಭ ಫಲಿತಾಂಶಗಳನ್ನು ತರುತ್ತದೆ ಎಂದು ಸಬೀಡುತುಪಡಿಸುತ್ತದೆ. ಬುಧವು ನಿಮ್ಮ ಮಕ್ಕಳು, ಪ್ರೀತಿ ಮತ್ತು ಪ್ರಣಯವನ್ನು ನಿಯಂತ್ರಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಮಕ್ಕಳೊಂದಿಗೆ ಉತ್ತಮ ಸಮಯವನ್ನು ಕಳೆಯಲು ಇದು ಅದ್ಭುತ ಸಮಯವಾಗುತ್ತದೆ.
ಈ ಸಮಯದಲ್ಲಿ ನೀವು ನಿಮ್ಮ ಮಕ್ಕಳೊಂದಿಗೆ ಎಲ್ಲಾದರೂ ದೂರ ಹೋಗಲು ಯೋಜಿಸಬಹುದು. ಇದರಿಂದಾಗಿ ನಿಮ್ಮ ಸಂಬಂಧವು ಇನ್ನಷ್ಟು ಬಲವಾಗುತ್ತದೆ. ಶಿಕ್ಷಣದ ಕ್ಷೇತ್ರಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳಿಗೆ ಈ ಸಮಯವೂ ಅನುಕೂಲಕರವಾಗಿರಲಿದೆ. ಈ ಸಮಯದಲ್ಲಿ ನೀವು ನಿಮ್ಮ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ಮಾಡುವಿರಿ. ಏಕೆಂದರೆ ಬುಧ ಗ್ರಹದ ಈ ಸ್ಥಾನವು ನಿಮ್ಮ ಜ್ಞಾಪಕ ಶಕ್ತಿ ಮತ್ತು ನಿಮ್ಮ ಗಮನವನ್ನು ಹೆಚ್ಚಿಸಲು ಬಹಳ ಸಹಾಯವೆಂದು ಸಾಬೀತಾಗುತ್ತದೆ.
ನಿಮ್ಮ ಜಾತಕದಲ್ಲಿ ದೋಷವಿದೆಯೇ? ತಿಳಿಯಲು ಈಗಲೇ ಖರೀದಿಸಿ ಆಸ್ಟ್ರೋಸೇಜ್ ಬೃಹತ್ ಕುಂಡಲಿ
ವ್ಯಾಪಾರ ಅಥವಾ ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಈ ರಾಶಿಚಕ್ರದ ಸ್ಥಳೀಯರಿಗೆ ಈ ಸಮಯವೂ ಉತ್ತಮ ಲಾಭವನ್ನು ನೀಡಬಹುದು. ಈ ಸಮಯದಲ್ಲಿ ಅವರು ತಮ್ಮ ವ್ಯಾಪಾರದಲ್ಲಿ ಸಾಕಷ್ಟು ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಬುಧ ಸಂಚಾರದ ಸಮಯದಲ್ಲಿ ವೃಷಭ ರಾಶಿಚಕ್ರದ ಸ್ಥಳೀಯರ ಆಡಳಿತಾತ್ಮಕ ಸಾಮರ್ಥ್ಯವು ಹೆಚಾಗುತ್ತದೆ. ಇದು ಕೆಲಸದ ಸ್ಥಳದಲ್ಲಿ ನಿಮಗೆ ಒಂದು ಅಂಚವನ್ನು ನೀಡುತ್ತದೆ.
ಈ ಸಮಯದಲ್ಲಿ ನೀವು ನಿಮ್ಮ ಕೆಲಸ ಮತ್ತು ಪ್ರಯತ್ನಗಳನ್ನು ಸರಿಯಾಗಿ ಮಾಡಲು ಸಾಮರ್ಥ್ಯರಗುವಿರಿ, ಇದರಿಂದಾಗಿ ಕೆಲಸದ ಸ್ಥಳದಲ್ಲಿ ನೀವು ಉತ್ತಮ ಯಶಸ್ಸು ಮತ್ತು ಸಮೃದ್ಧಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಒಟ್ಟಾರೆಯಾಗಿ ನೋಡಿದರೆ, ಈ ಸಂಚಾರವು ನಿಮ್ಮ ಸಂಬಂಧ ಮತ್ತು ಪ್ರೀತಿ ಜೀವನಕ್ಕಿ ಉತ್ತಮವಾಗಿರಲಿದೆ. ಆದಾಗ್ಯೂ ಕೆಲವೊಮ್ಮೆ ನಿಮ್ಮ ಅಹಂಕಾರ ಮತ್ತು ಆಕ್ರಮಣಶೀಲತೆ ಸಂಬಂಧದಲ್ಲಿ ಕೆಲವು ಸಮಸ್ಯೆಗಳ್ನ್ನು ಉಂಟುಮಾಡಬಹುದು.
ನಿಮ್ಮ ಬಲಗೈಯ ಚಿಕ್ಕ ಬೆರಳಿನಲ್ಲಿ 6 ಕ್ಯಾರಟ್ ಪನ್ನ ರತ್ನವನ್ನು ಧರಿಸಿ. ಇದರಿಂದ ನೀವು ಪ್ರಯೋಜನಕಾರಿ ಫಲಿತಾಂಶಗಳನ್ನು ಪಡೆಯುತ್ತೀರಿ.
- ಮಿಥುನ ರಾಶಿ ಭವಿಷ್ಯ
ಬುಧ ಗ್ರಹವು ನಿಮ್ಮ ನಾಲ್ಕನೇ ಮತ್ತು ಮೊದಲನೇ ಮಾಲೀಕ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ರಾಶಿಯಿಂದ ಆರನೇ ಮನೆಗೆ ಸಂಚರಿಸಲಿದೆ. ಇದು ಮಿಥುನ ರಾಶಿಚಕ್ರದ ಸ್ಥಳೀಯರ ರೋಗಗಳು, ಶತ್ರು, ಬಿಕ್ಕಟ್ಟುಗಳನ್ನು ಪ್ರತಿನಿಧಿಸುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕೆಂದು ಇದು ಸ್ಪಷ್ಟವಾಗಿ ತೋರಿಸುತ್ತಿದೆ.
ನೀವು ವಾಹನವನ್ನು ಚಲಾಯಿಸಿದರೆ ಈ ಸಮಯದಲ್ಲಿ ಜಾಗರೂಕರಾಗಿರಬೇಕು, ಇಲ್ಲದಿದ್ದರೆ ಯಾವುದೇ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಇದಲ್ಲದೆ, ಈ ಸಮಯದಲ್ಲಿ ಚರ್ಮ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯು ನಿಮ್ಮನ್ನು ಕಾಡಬಹುದು. ಒಟ್ಟಾರೆಯಾಗಿ ಈ ಸಮಯದಲ್ಲಿ ಆರೋಗ್ಯದ ಬಗ್ಗೆ ನೀವು ಅತ್ಯಂತ ಎಚ್ಚರದಿಂದಿರಬೇಕು. ವೃತ್ತಿಪರ ಜನರು ತಮ್ಮ ಗುರಿಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ಇತರ ಸಮಯಕ್ಕಿಂತ ಈ ಸಮಯದಲ್ಲಿ ನೀವು ಹೆಚ್ಚು ಪ್ರಯತ್ನಿಸಬೇಕು ಮತ್ತು ಹೆಚ್ಚು ಕಠಿಣ ಪರಿಶ್ರಮ ಮಾಡಬೇಕು.
ಈ ಸಮಯದಲ್ಲಿ ನಿಮ್ಮ ಹಿರಿಯ ಅಧಿಕಾರಿಗಳು ನಿಮ್ಮ ಕೆಲಸವನ್ನು ಪ್ರಶಂಸಿಸುತ್ತಾರೆ ಮತ್ತು ಪ್ರತಿ ಸಮಯದಲ್ಲಿ ನಿಮ್ಮ ಜೊತೆಯಲ್ಲಿ ನಿಂತಿರುತ್ತಾರೆ. ಇದರ ಹೊರೆತಾಗಿಯೂ ನೀವು ನಿಮ್ಮ ಶತ್ರುಗಳಿಂದ ತಪ್ಪಿಸಿರಬೇಕೆಂದು ನಿಮಗೆ ಸಲಹೆ ನೀಡಲಾಗಿದೆ. ಏಕೆಂದರೆ ಈ ಸಮಯದಲ್ಲಿ ಅವರು ನಿಮ್ಮನ್ನು ಅವಮಾನಿಸಲು ಯಾವುದೇ ಪಿತೂರಿಯನ್ನು ಯೋಜಿಸಬಹುದು, ಇದರಿಂದ ನಿಮಗೆ ನಷ್ಟವಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ಯಾವುದೇ ರೀತಿಯ ಲೋನ್ ತೆಗೆದುಕೊಳ್ಳುವುದನ್ನು ತಪ್ಪಿಸಿ.
ಶಿಕ್ಷಣ ಮತ್ತು ವೃತ್ತಿ ಜೀವನದಲ್ಲಿ ಸಮಸ್ಯೆಗಳು ಉಂಟಾಗುತ್ತಿದ್ದರೆ ಕಾಗ್ನಿ ಆಸ್ಟ್ರೋ ರಿಪೋರ್ಟ್ ಅನ್ನು ಬಳಸಿಕೊಳ್ಳಿ
ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ತಾಯಿಯ ಆರೋಗ್ಯವು ದುರ್ಬಲಗೊಳ್ಳುವ ಸಾಧ್ಯತೆ ಇದೆ. ಇದರಿಂದ ನೀವು ಚಿಂತೆಕ್ಕೊಳಗಾಗಬಹುದು.
ಇದಲಲ್ದೆ ಈ ಸಮಯದಲ್ಲಿ ಯಾವುದೇ ರೀತಿಯ ಸಂಘರ್ಷ ಅಥವಾ ವಾದದಿಂದ ದೂರವಿರಲು ಪ್ರಯತ್ನಿಸಿ. ಇಲ್ಲದಿದ್ದರೆ ಈ ಸಮಯದಲ್ಲಿ ನೀವು ನಿಮ್ಮನ್ನು ಕಾನೂನು ಜಗಳದಲ್ಲಿ ಸಿಲುಕಿಸಿಕೊಳ್ಳಬಹುದು. ಆದಾಗ್ಯೂ ಈ ಸಮಯದಲ್ಲಿ ನಿಮ್ಮ ತಾಯಿಯ ಕುಟುಂಬದ ಕಡೆಯಿಂದ ಯಾವುದೇ ಲಾಭ ಅಥವಾ ಬೆಂಬಲವನ್ನು ಪಡೆಯುವ ಪ್ರಬಲ ಸಾಧ್ಯತೆ ಇದೆ. ಈ ಸಮಯದಲ್ಲಿ ಯಾವುದೇ ರೀತಿಯ ಸಂಪತ್ತಿನ ಖರೀದಿ, ಮಾರಾಟ ಅಥವಾ ನವೀಕರಣ ಮಾಡುವುದನ್ನು ತಪ್ಪಿಸಿ. ಏಕೆಂದರೆ ಅದರಲ್ಲಿ ನಿಮಗೆ ನಷ್ಟವಾಗುವ ಸಂಪೂರ್ಣ ಸಾಧ್ಯತೆ ಇದೆ. ಒಟ್ಟಾರೆಯಾಗಿ ತುರಾತುರಿಯಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ, ಇದು ನೀವು ಹೆಚ್ಚು ಜಾಗರೂಕರಾಗಿರುವ ಸಮಯ.
ಪರಿಹಾರ - ಸೂರ್ಯೋದಯದ ಸಮಯದಲ್ಲಿ ಪ್ರತಿದಿನ ಭಗವಂತ ವಿಷ್ಣು ದೇವರನ್ನು ಪೂಜಿಸಿ.
- ಕರ್ಕ ರಾಶಿ
ಬುಧನ ಈ ಸಂಚಾರವು ಕರ್ಕ ರಾಶಿಚಕ್ರದ ಸ್ಥಳೀಯರ ಐದನೇ ಮನೆಯಲ್ಲಿ ಸಂಭವಿಸಲಿದೆ. ಐದನೇ ಮನೆಯು ಮಕ್ಕಳು, ಆಲೋಚನೆಗಳು, ಬುದ್ಧಿ, ಪ್ರೀತಿ ಮತ್ತು ಪ್ರಣಯವನ್ನು ಪ್ರತಿನಿಧಿಸುತ್ತದೆ. ಬುಧ ಸಂಚಾರವು ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಮಿಶ್ರ ಫಲಿತಾಂಶಗಳನ್ನು ತರಲಿದೆ. ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಗಳಿಸಲು ಬಯಸುತ್ತಿರುವ ಈ ರಾಶಿಚಕ್ರದ ವಿದ್ಯಾರ್ಥಿಗಳ ಕನಸು ಈ ಸಮಯದಲ್ಲಿ ಈಡೇರಬಹುದು. ಆದಾಗ್ಯೂ ಈ ರಾಶಿಚಕ್ರದ ವಿವಾಹಿತ ಜನರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಸ್ವಲ್ಪ ಚಿಂತೆಕ್ಕೊಳಗಾಗಬಹುದು.
ಸೃಜನಾತ್ಮಕ ಮತ್ತು ಕಲೆಯ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಈ ಸಮಯದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲು ಮತ್ತು ಯಶಸ್ವಿಯಾಗಲು ಅನೇಕ ಅವಕಾಶಗಳನ್ನು ಪಡೆಯುವ ಸಾಧ್ಯತೆ ಇದೆ. ಇದಲ್ಲದೆ ತಮ್ಮ ಹವ್ಯಾಸವನ್ನು ವೃತ್ತಿಯಲ್ಲಿ ಬದಲಾಯಿಸಲು ಬಯಸುತ್ತಿರುವ ಜನರು ಸಹ ಈ ಸಮಯದಲ್ಲಿ ಹೊಸ ಹಾದಿ ಅಥವಾ ದಿಕ್ಕು ಪಡೆಯುವ ಸಾಧ್ಯತೆ ಇದೆ.
ವ್ಯಾಪಾರದ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಈ ಸಮಯದಲ್ಲಿ ಯಾವುದೇ ರೀತಿಯ ಜೂಜು ಚಟುವಟಿಕೆಗಳಿಂದ ದೂರವಿರಲು ಪ್ರಯತ್ನಿಸಬೇಕು. ಇಲ್ಲದಿದ್ದರೆ ನಿಮಗೆ ನಷ್ಟವಾಗಬಹುದು. ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಬುಧನ ಈ ಸ್ಥಾನವು ನಿಮ್ಮ ಧ್ವನಿಯನ್ನು ಸ್ವಲ್ಪ ಕಹಿಯಾಗಿ ಮಾಡಬಹುದು, ಇದರಿಂದಾಗಿ ನಿಮ್ಮ ಮತ್ತು ನಿಮ್ಮ ಆಪ್ತರ ಸಂಬಂಧದಲ್ಲಿ ಹುಳಿ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ವಿಷಯವನ್ನು ಹೇಳುವ ಮೊದಲು ನಿಮ್ಮ ಪದಗಳನ್ನು ಸರಿಯಾಗಿ ಆಯ್ಕೆ ಮಾಡಲು ಖಚಿತಪಡಿಸಿಕೊಳ್ಳಿ.
ಕರ್ಕ ರಾಶಿಚಕ್ರದ ವಿವಾಹಿತ ಜನರು ಈ ಸಮಯದಲ್ಲಿ ತಮ್ಮ ಸಂಗಾತಿಯ ಮೂಲಕ ಸಾಕಷ್ಟು ಲಬಹವನ್ನು ಪಡೆಯುವ ಸಾಧ್ಯತೆ ಇದೆ. ಆದರೆ ಸ್ವಲ್ಪ ಜಾಗರೂಕರಾಗಿರಿ ಏಕೆಂದರೆ ಯಾವುದೇ ಸಣ್ಣ ವಿಷಯದ ಬಗ್ಗೆಯೂ ವಿವಾದ ಅಥವಾ ಭಿನ್ನಾಭಿಪ್ರಾಯಗಳು ನಿಮ್ಮ ನಡುವೆ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ಜೀವನ ಸಂಗಾತಿ ಅಥವಾ ಪ್ರೀತಿಪಾತ್ರರೊಂದಿಗೆ ಮಾಡನಾಡುವ ಸಮಯದಲ್ಲಿ ಸಾಧ್ಯವಾದಷ್ಟು ಮೃದು ಮತ್ತು ಸ್ಪಷ್ಟವಾಗಿರಲು ಪ್ರಯತ್ನಿಸಿ.
ಪರಿಹಾರ - ತಾಯಿ ಸರಸ್ವತಿಯ ಪೂಜೆ ಮಾಡಿ.
- ಸಿಂಹ ರಾಶಿ
ಬುಧ ಗ್ರಹವು ಸಿಂಹ ರಾಶಿಚಕ್ರದ ಸ್ಥಳೀಯರ ನಾಲ್ಕನೇ ಮನೆಗೆ ಸಾಗಲಿದೆ. ನಾಲ್ಕನೇ ಮನೆಯ ಮೂಲಕ ತಾಯಿ, ಭೂಮಿ, ಸಂವಹನ, ಐಷಾರಾಮಿ ಮತ್ತು ಆರಾಮದ ಬಗ್ಗೆ ಪರಿಗಣಿಸಲಾಗುತ್ತದೆ. ಬುಧ ಗ್ರಹವು ಸಿಂಹ ರಾಶಿಚಕ್ರದ ಸ್ಥಳೀಯರ ಉಳಿತಾಯ, ಸಂಗ್ರಹಿಸಲಾದ ಹಣಕಾಸು ಮತ್ತು ಕುಟುಂಬದ ಎರಡನೇ ಮನೆಯನ್ನು ನಿಯಂತ್ರಿಸುತ್ತದೆ. ಈ ಸಂಚಾರದ ಸಮಯದಲ್ಲಿ ಸಿಂಹ ರಾಶಿಚಕ್ರದ ಸ್ಥಳೀಯರು ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ.
ಬುಧ ಸಂಚಾರವು ಅನೇಕ ವಿಷಯಗಳಲ್ಲಿ ನಿಮಗೆ ಉತ್ತಮವಾಗಿರಲಿದೆ. ಈ ಸಮಯದಲ್ಲಿ ನೀವು ಕೆಲವು ವಿಷಯಗಳನ್ನು ಕಲಿಯಲು ಮತ್ತು ಕೆಅಲ್ವು ಅನುಭವಗಳಿಗಾಗಿ ಸಮಯವು ಅತ್ಯಂತ ಉತ್ತಮವೆಂದು ಸಾಬೀತುಪಡಿಸುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಹಿರಿಯ ಅಧಿಕಾರಿಗಳು ನಿಮ್ಮ ಕೆಲಸವನ್ನು ಪ್ರಶಂಸಿಸುತ್ತಾರೆ ಮತ್ತು ಪ್ರತಿಯೊಂದು ಹೆಜ್ಜೆಯಲ್ಲಿ ನಿಮ್ಮನ್ನು ಬೆಂಬಲಿಸುತ್ತಾರೆ. ಇದರಿಂದಾಗಿ ನೀವು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಮತ್ತು ನಿಮಗೆ ಹೊಸ ಜವಾಬ್ದಾರಿಗಳನ್ನು ಸಹ ನೀಡಲಾಗುತ್ತದೆ.
ಈ ಸಮಯದಲ್ಲಿ ನೀವು ನಿಮ್ಮಲ್ಲಿ ಹೆಚ್ಚು ಮನೋಬಲವನ್ನು ಅನುಭವಿಸುತ್ತೀರಿ ಮತ್ತು ಈ ಅವಧಿಯಲ್ಲಿ ನಿಮ್ಮ ಆಡಳಿತದ ಗುಣಗಳು ಸಹ ಹೊರಹೊಮ್ಮುತ್ತವೆ. ಇದರಿಂದಾಗಿ ಕೆಲಸದ ಸ್ಥಳದಲ್ಲಿ ನೀವು ಬಡ್ತಿ ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ವೈಯಕ್ತಿಕವಾಗಿ ಸಹ ಈ ಸಮಯವೂ ನಿಮಗೆ ಉತ್ತಮವಾಗಿರಲಿದೆ. ಈ ಸಮಯದಲ್ಲಿ ನೀವು ನಿಮ್ಮ ಕುಟುಂಬದೊಂದಿಗೆ ಸ್ಮರಣೀಯ ಕ್ಷಣಗಳನ್ನು ಕಳೆಯುತ್ತೀರಿ.
ಈ ಸಮಯದಲ್ಲಿ ಕುಟುಂಬದ ಬೆಂಬಲದ ಕಾರಣದಿಂದಾಗಿ ನಿಮ್ಮ ಜೀವನದಲ್ಲಿ ಸಂತೋಷ ತುಂಬುತ್ತದೆ. ಇದರೊಂದಿಗೆ ನಿಮ್ಮ ತಾಯಿಯ ಆರೋಗ್ಯವು ಸಹ ಈ ಸಮಯದಲ್ಲಿ ಸುಧಾರಿಸುತ್ತದೆ. ಈ ಕಾರಣದಿಂದಾಗಿ ಮನೆಯಲ್ಲಿ ಸಂತೋಷ ಉಳಿದಿರುತ್ತದೆ. ಈ ಸಮಯದಲ್ಲಿ ನಿಮ್ಮ ಹಳೆಯ ಸಂಬಂಧಿಕರನ್ನು ಬಹಳ ಸಮಯದ ನಂತರ ಭೇಟಿಯಾಗುತ್ತೀರಿ, ಇದು ನಿಮಗೆ ಸಂತೋಷವನ್ನು ನೀಡುತ್ತದೆ. ಇದಲ್ಲದೆ ಈ ಸಮಯದಲ್ಲಿ ನೀವು ಯಾವುದೇ ಹೊಸ ವಾಹನ ಅಥವಾ ಸಂಪತ್ತನ್ನು ಖರೀದಿಸಬಹುದು. ಈ ಸಮಯದಲ್ಲಿ ಶಿಕ್ಷಣದ ಕ್ಷೇತ್ರಕ್ಕೆ ಸಂಬಂಧಿಸಿದ ಜನರ ಏಕಾಗ್ರತೆಯ ಮಟ್ಟವೂ ಸಹ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇದು ಶಿಕ್ಷಣದ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ಮಾಡಲು ಸಹಾಯ ಮಾಡುತ್ತದೆ.
ಪರಿಹಾರ - ಬುಧ ಹೋರಾ ಸಮಯದಲ್ಲಿ ಪ್ರತಿದಿನ ಬುಧ ಮಂತ್ರವನ್ನು ಪಠಿಸಿ.
- ಕನ್ಯಾ ರಾಶಿ
ಬುಧ ಗ್ರಹವು ಕನ್ಯಾ ರಾಶಿಚಕ್ರದ ಸ್ಥಳೀಯರ ಮೂರನೇ ಮನೆಗೆ ಸಚರಿಸುತ್ತದೆ. ಮೂರನೇ ಮನೆಯು ಧೈರ್ಯ, ಪರಾಕ್ರಮ, ಸಹೋದರ ಸಹೋದರಿ, ಪ್ರಯಾಣ ಮತ್ತು ಸಂವಹನವನ್ನು ಪ್ರತಿನಿಧಿಸುತ್ತದೆ. ಬುಧದ ಈ ಸ್ಥಾನವು ಹಿಂದೆಗಿಂತಲೂ ಹೆಚ್ಚು ಧೈರ್ಯಶಾಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮ್ಮನ್ನು ಇನ್ನಷ್ಟು ದೃಢ ನಿಶ್ಚಯರನ್ನಾಗಿಸುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಗುರಿ ಮತ್ತು ಮಹತ್ವಾಕಾಂಕ್ಷೆಯನ್ನು ಪೂರ್ಣಗೊಳಿಸಲು ಯಾವುದೇ ಪ್ರಯತ್ನವನ್ನು ಮಾಡಲು ಹಿಂಜರಿಯುವುದಿಲ್ಲ
ಈ ಸಂಚಾರವು ಇತರರೊಂದಿಗೆ ನೀವು ನಿಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವಲ್ಲಿ ನಿಮಗೆ ಸಂಪೂರ್ಣ ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಜೀವನದ ವೈಯಕ್ತಿಕ ಮತ್ತು ವೃತ್ತಿಪರ ಎರಡು ಕ್ಷೇತ್ರಗಳಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ. ಇದಲ್ಲದೆ ಮಾರ್ಕೆಟಿಂಗ್, ಮಾರಾಟ ಮತ್ತು ಸವಜನಿಕ ವ್ಯವಹಾರದ ಕ್ಷೇತ್ರಗಳಲ್ಲಿ ಸಂಪರ್ಕ ಹೊಂದಿರುವ ಈ ರಾಶಿಚಕ್ರದ ಸ್ಥಳೀಯರಿಗೆ ಬುಧದ ಈ ಸಂಚಾರವು ಲಾಭವನ್ನು ಒದಗಿಸುತ್ತದೆ.
ಆದಾಗ್ಯೂ, ಈ ಸಂಚಾರದ ಪರಿಣಾಮದಿಂದಾಗಿ ಕೆಲವೊಮ್ಮೆ ನೀವು ಇತರರ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುವಿರಿ. ಇದಲ್ಲದೆ ನೀವು ಇತರರ ಬಗ್ಗೆ ಕಠೋರ ಮತ್ತು ಹೊಸ ಆಲೋಚನೆಗಳನ್ನು ಸಹ ಉಂಟುಮಾಡಬಹುದು. ಈ ಕಾರಣದಿಂದಾಗಿ ನಿಮ್ಮ ಮತ್ತು ನಿಮ್ಮ ಸಹೋದ್ಯೋಗಿಗಳ ನಡುವೆ ಕೆಲವು ಸಮಸ್ಯೆಗಳು ಉಂಟಾಗಬಹುದು.
ಜೀವನದಲ್ಲಿನ ಯಾವುದೇ ಸಮಸ್ಯೆಯ ಪರಿಹಾರಕ್ಕಾಗಿ ಪ್ರಶ್ನೆ ಕೇಳಿ
ಈ ಸಮಯದಲ್ಲಿ ವ್ಯಾಪಾರ ಅಥವಾ ಕೆಲಸಕ್ಕೆ ಸಂಬಂಧಿಸಿದಂತೆ ಯಾವದೇ ಪ್ರಯಾಣಕ್ಕೆ ಹೋಗಬಹುದು ಮತ್ತು ಈ ಪ್ರಯಾಣವು ನಿಮಗೆ ಲಾಭವನ್ನು ನೀಡುತ್ತದೆ ಎಂದು ಸಾಬೀತುಪಡಿಸಬಹುದು. ಇದಲ್ಲದೆ ತಮ್ಮ ಉದ್ಯೋಗವನ್ನು ಬದಲಾಯಿಸಲು ಬಯಸುತ್ತಿದ್ದ ಕೆಲವು ಜನರು ಸಂಚಾರದ ಈ ಸಮಯದಲ್ಲಿ ಅನೇಕ ಉತ್ತಮ ಅವಕಾಶಗಳನ್ನು ಪಡೆಯುವ ಸಾಧ್ಯತೆ ಇದೆ.
ಈ ಸಾಗಣೆಯ ಸಮಯದಲ್ಲಿ ನೀವು ನಿಮ್ಮ ಕುಟುಂಬ ಮತ್ತು ನಿಮ್ಮ ಪ್ರೀತಿಪಾತ್ರರ ಬಗ್ಗೆ ಹೆಚ್ಚು ರಕ್ಷಣಾತ್ಮಕ ಮನೋಭಾವವನ್ನು ಹೊಂದಿರುತ್ತೀರಿ. ನಿಮ್ಮ ಈ ವರ್ತನೆ ನಿಮ್ಮ ಕುಟುಂಬದ ವಾತಾವರಣದಲ್ಲಿ ಸಂತೋಷ ಮತ್ತು ಆನಂದವನು ತರುತ್ತದೆ. ಇದರೊಂದಿಗೆ ಈ ಸಮಯದಲ್ಲಿ ನಿಮ್ಮ ಸಹೋದರ ಸಹೋದರಿಯರು ತಮ್ಮ ಕೆಲಸದ ಸ್ಥಳದಲ್ಲಿ ಯಶಸ್ಸು ಪಡೆಯುತ್ತಾರೆ. ಇದರಿಂದಾಗಿ ಮತ್ತೊಮ್ಮೆ ನಿಮ್ಮ ಕುಟುಂಬದ ವಾತಾವರಣದಲ್ಲಿ ಸಂತೋಷ ಉಳಿದಿರುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಸ್ನೇಹಿತರೊಂದಿಗೆ ಸಮಯವನ್ನು ಕಳೆಯಬಹುದು.
ಈ ಸಂಚಾರದ ಪರಿಣಾಮದಿಂದಾಗಿ ನೀವು ನಿಮ್ಮ ತಂದೆ ಅಥವಾ ತಂದೆಯಂತಹ ಜನರೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಪ್ರಯತ್ನಿಸುವಿರಿ. ಅದಕ್ಕಾಗಿ ಸಮಯವೂ ತುಂಬಾ ಉತ್ತಮವಾಗಿರುತ್ತದೆ. ಇದರಿಂದಾಗಿ ನೀವು ನಿಮ್ಮ ಹಿಂದಿನ ಯಾವುದೇ ತಪ್ಪುಗ್ರಹಿಕೆಯನ್ನು ಪರಿಹರಿಸಲು ಸಂಪೂರ್ಣ ಸಹಾಯ ಪಡೆಯುತ್ತೀರಿ.
ಪರಿಹಾರ - ಉತ್ತಮ ಗುಣಮಟ್ಟದ ಪನ್ನ ರತ್ನವನ್ನು 5 ರಿಂದ 6 ಕ್ಯಾರಟ್ ಚಿನ್ನ ಅಥವಾ ಬೆಳ್ಳಿಯಲ್ಲಿ ತಯಾರಿಸಿ ಬುಧವಾರದಂದು ಧರಿಸಿ. ಇದರಿಂದಾಗಿ ಕನ್ಯಾ ರಾಶಿಚಕ್ರದ ಸ್ಥಳೀಯರು ಶುಭ ಫಲಿತಾಂಶವನ್ನು ಪಡೆಯುತ್ತೀರಿ.
- ತುಲಾ ರಾಶಿ
ಬುಧ ಗ್ರಹವು ತುಲಾ ರಾಶಿಚಕ್ರದ ಸ್ಥಳೀಯರ ಎರಡನೇ ಮನೆಗೆ ಸಂಚರಿಸಲಿದೆ. ಎರಡನೇ ಮನೆಯು ಮನೆ, ಸಂಗ್ರಹಿಸಿದ ಹಣಕಾಸು, ಉಳಿತಾಯ, ಕುಟುಂಬ ಮತ್ತು ಭಾಷಣವನ್ನು ಪ್ರತಿನಿಧಿಸುತ್ತದೆ. ತುಲಾ ರಾಶಿಚಕ್ರದ ಸ್ಥಳೀಯರಿಗೆ ಬುಧ ಸಂಚರಾವು ಶುಭ ಫಲಿತಾಂಶಗಳನ್ನು ನೀಡಲಿದೆ. ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ. ಇದರಿಂದಾಗಿ ಯಾವುದೇ ರೀತಿಯ ಕೆಲಸ ಮತ್ತು ಪ್ರಯತ್ನಗಳಲ್ಲಿ ಯಶಸ್ಸು ಪಡೆಯುತ್ತೀರಿ.
ಈ ಸಮಯದಲ್ಲಿ ಬುಧವು ನಿಮಗಾಗಿ ಬಲವಾದ ಹಣಕಾಸಿನ ಸ್ಥಿತಿಯನ್ನು ಸೃಷ್ಟಿಸುತ್ತದೆ. ಅಂತಹ ಸಂದರ್ಭದಲ್ಲಿ ನೀವು ಹಣಕಾಸಿನ ಉತ್ತಮ ಆದಾಯವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನೀವು ವಿದೇಶಿ ಸಂಪರ್ಕಗಳಿಂದ ಲಾಭ ಅಥವಾ ಯಾವುದೇ ಉತ್ತಮ ಸುದ್ಧಿಯನ್ನು ಪಡೆಯುವ ಸಾಧ್ಯತೆ ಇದೆ. ಇದಲ್ಲದೆ ಈ ಸಮಯದಲ್ಲಿ ನೀವು ಕೆಲವು ವೆಚ್ಚಗಳನ್ನು ಸಹ ಮಾಡಬೇಕಾಗಬಹುದು. ಆದ್ದರಿಂದ ಬುಧ ಸಂಚಾರದ ಸಮಯದಲ್ಲಿ ನೀವು ನಿಮ್ಮ ವೆಚ್ಚ ಮತ್ತು ಉಳಿತಾಯದ ಮಧ್ಯೆ ಸರಿಯಾದ ಸಮತೋಲನವನ್ನು ಕಾಪಾಡಿಕೊಳ್ಳಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಕುಟುಂಬ ವ್ಯಾಪಾರದಲ್ಲಿ ತೊಡಗಿರುವ ಸ್ಥಳೀಯರು ಸಂಚಾರದ ಈ ಸಮಯದಲ್ಲಿ ವ್ಯಾಪರಕ್ಕೆ ಹೊಸ ಎತ್ತರವನ್ನು ನೀಡುವಂತಹ ಅನೇಕ ಅವಕಾಶಗಳನ್ನು ಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ವೈಯಕ್ತಿಕವಾಗಿ ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಸಾಧ್ಯವಾದಷ್ಟು ಸಮಯವನ್ನು ಕಳೆಯಲು ಪ್ರಯತ್ನಿಸುವಿರಿ. ಇದು ನಿಮ್ಮ ಕುಟುಂಬದ ಸಂಬಂಧದಲ್ಲಿ ಮಾಧುರ್ಯ ಉಂಟಾಗುತ್ತದೆ ಮತ್ತು ಕುಟುಂಬದೊಂದಿಗಿನ ನಿಮ್ಮ ಸಂಬಂಧವು ಬಲಗೊಳ್ಳುತ್ತದೆ. ಸಂಚಾರದ ಸಮಯದಲ್ಲಿ ನೀವು ನಿಮ್ಮ ಕುಟುಂಬದೊಂದಿಗೆ ಯಾವುದೇ ತೀರ್ಥ ಯಾತ್ರೆ ಅಥವಾ ಯಾವುದೇ ದೂರಸ್ಥ ಪ್ರಯಾಣವನ್ನು ಯೋಜಿಸಬಹುದು.
ಈ ಸಮಯದಲ್ಲಿ ನಿಮ್ಮ ಸಂಗಾತಿಯ ಆರೋಗ್ಯವು ದುರ್ಬಲವಾಗಬಹುದು. ಆದ್ದರಿಂದ ಈ ಸಮಯದಲ್ಲಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಇದಲ್ಲದೆ ಹೂಡಿಕೆಯ ಬಗೆಗಿನ ಯಾವುದೇ ನಿರ್ಧಾರವನ್ನು ತುರಾತುರಿಯಲ್ಲಿ ತೆಗೆದುಕೊಳ್ಳಬೇಡಿ. ಇಲ್ಲದಿದ್ದರೆ ನೀವು ಹಾನಿಯನ್ನು ಎದುರಿಸಬೇಕಾಗಬಹುದು. ಆದ್ದರಿಂದ ತಜ್ಞರ ಸಲಹೆಯನ್ನು ಪಡೆದುಕೊಳ್ಳಿ ಎಂದು ನಿಮಗೆ ಸಲಹೆ ನೀಡಲಾಗಿದೆ. ನಿಮ್ಮ ಆರೋಗ್ಯದ ಬಗ್ಗೆ ಮಾತನಾಡಿದರೆ, ಸರಿಯಾದ ಸ್ವಚ್ಛತೆ ಮತ್ತು ನಿಮ್ಮ ಹಲ್ಲುಗಳ ಬಗ್ಗೆ ಜಾಗರೂಕರಾಗಿರಲು ಸಲಹೆ ನೀಡಲಾಗಿದೆ. ಇಲ್ಲದಿದ್ದರೆ, ಹಲ್ಲುಗಳು ಅಥವಾ ಮುಖಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನೀವು ಎದುರಿಸಬೇಕಾಗಬಹುದು.
ಪರಿಹಾರ - ಪ್ರತಿದಿನ ತುಳಸಿ ಸಸ್ಯಕ್ಕೆ ನೀರು ಅರ್ಪಿಸಿ ಮತ್ತು ಪೂಜೆ ಮಾಡಿ. ಅದನ್ನು ಮಾಡುವುದರಿಂದ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.
- ವೃಶ್ಚಿಕ ರಾಶಿ
ಬುಧ ಗ್ರಹವು ತುಲಾ ರಾಶಿಚಕ್ರದ ಸ್ಥಳೀಯರ ಮೊದಲನೇ ಮನೆಗೆ ಪ್ರವೇಶಿಸುತ್ತದೆ. ಬುಧವು ನಿಮ್ಮ ಬದಲಾವಣೆ, ಆಯುಷ್ಯ, ಸಂಶೋಧನೆಯ ಎಂಟನೇ ಮತ್ತು ಯಶಸ್ಸು ಮತ್ತು ಲಾಭದ ಹನ್ನೊಂದನೇ ಮನೆಯನ್ನು ನಿಯಂತ್ರಿಸುತ್ತದೆ. ಸಂಚಾರದ ಈ ಸಮಯದಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ಸಾಮಾಜಿಕವಾಗಿ ಸಂಪರ್ಕವನ್ನು ಹೊಂದಲು ಬುಧ ಸಂಚಾರವು ನಿಮಗೆ ಉತ್ತಮವೆಂದು ಸಾಬೀತುಪಡಿಸುತ್ತದೆ.
ಇದಲ್ಲದೆ ಈ ಸಂಚಾರದ ಈ ಸಮಯದಲ್ಲಿ ವೃಶ್ಚಿಕ ರಾಶಿಚಕ್ರದ ಸ್ಥಳೀಯರು ಕೆಅಲ್ವು ಚಿಂತೆ ಮತ್ತು ಒತ್ತಡಕ್ಕೆ ಸಂಬಂಧಿಸಿಂದ ವಿಷಯಗಳನ್ನು ಎದುರಿಸಬೇಕಾಗಬಹುದು. ಇದು ವಿಷಯಗಳನ್ನು ಇನ್ನಷ್ಟು ಸಂಕೀರ್ಣಗೊಳಿಸಬಹುದು. ಇದರಿಂದಾಗಿ ವೈಯ್ಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಇದಲ್ಲದೆ ಈ ಸಮಯದಲ್ಲಿ ನೀವು ಇದ್ದಕ್ಕಿದ್ದಂತೆ ಯಾವುದೇ ರೀತಿಯ ಲಾಭವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಬುಧ ಸಂಚಾರವು ನಿಮ್ಮ ಜೀವನದ ಮೇಲೆ ಪರಿಣಾಮ ಬೀರಬಹುದು. ಇದರ ಪರಿಣಾಮದಿಂದಾಗಿ ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಈ ಕಾರಣದಿಂದಾಗಿ ಕೆಲವು ಗ್ಯಾಸ್ಟ್ರಿಕ್ ಅಥವಾ ಜೀರ್ಣಾಂಗಕ್ಕೆ ಸಂಬಂಧಿಸಿದ ಸಮಸ್ಯೆ ನಿಮ್ಮನ್ನು ಕಾಡಬಹುದು. ಆದ್ದರಿಂದ ಈ ಸಮಯದಲ್ಲಿ ನೀವು ಯೋಗ ಧ್ಯಾನ ಅಥವಾ ಯಾವುದೇ ದೈಹಿಕ [ಚಟುವಟಿಕೆಯನ್ನು ಆಶ್ರಯಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಇದರಿಂದಾಗಿ ನೀವು ನಿಮ್ಮ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ಸಹಾಯ ಪಡೆಯುತ್ತೀರಿ. ಇದು ನಿಮ್ಮ ಅರೋಗ್ಯ ಜೀವನದಲ್ಲಿ ಸಕಾರಾತ್ಮಕ ಪರಿಣಾಮವನ್ನು ತರುತ್ತದೆ ಮತ್ತು ನಿಮ್ಮ ಮನಸ್ಸು ಸಹ ಶಾಂತವಾಗಿರುತ್ತದೆ.
ಪರಿಹಾರ - ಪ್ರತಿದಿನ ನಿಮ್ಮ ಕೆಲಸದ ಸ್ಥಳದಲ್ಲಿ ಕರ್ಪುರವನ್ನು ಬೆಳಗಿಸಿ. ಇದರಿಂದ ನೀವು ಸಕಾರಾತ್ಮಕ ಫಲಿತಾಂಶವನ್ನು ಪಡೆಯುತ್ತೀರಿ.
- ಧನು ರಾಶಿ
ಬುಧ ಗ್ರಹವು ಧನು ರಾಶಿಚಕ್ರದ ಸ್ಥಳೀಯರ ಹನ್ನೆರಡನೇ ಮನೆಗೆ ಸಾಗುತ್ತದೆ. ಇದು ವೆಚ್ಚ ಮತ್ತು ವಿದೇಶಿ ಮೂಲಗಳನ್ನು ಪ್ರತಿನಿಧಿಸುತ್ತದೆ. ಬುಧವು ಮದುವೆ, ವ್ಯಾಪಾರ, ಪಾಲುದಾರಿಕೆ ಮತ್ತು ವೃತ್ತಿಯ ಏಳನೇ ಮತ್ತು ಹತ್ತನೇ ಮನೆಯನ್ನು ನಿಯಂತ್ರಿಸುತ್ತದೆ. ಈ ಸಂಚಾರವು ವಿಶೇಷವಾಗಿ ಮದುವೆ ಮತ್ತು ಪಾಲುದಾರಿಕೆಗೆ ಸಂಬಂಧಿಸಿದ ವಿಷಯಗಳಲ್ಲಿ ಮಿಶ್ರ ಫಲಿತಾಂಶಗಳನ್ನು ತರುತ್ತದೆ ಎಂದು ಸಾಬೀತುಪಡಿಸಬಹುದು. ಆದಾಗ್ಯೂ, ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರು ಅಥವಾ ವಿದೇಶದಲ್ಲಿ ತಮ್ಮ ವೃತ್ತಿಯನ್ನು ಹೊಂದಲು ಬಯಸುತ್ತಿರುವವರು ಸಂಚಾರದ ಈ ಸಮಯದಲ್ಲಿ ಶುಭ ಫಲಿತಾಂಶಗಳನ್ನು ಪಡೆಯುವ ಪ್ರಬಲ ಸಾಧ್ಯತೆ ಇದೆ. ಇದಲ್ಲದೆ ಆಮದು ರಾಫ್ತುವಿನ ವ್ಯಾಪಾರಕ್ಕೆ ಸಂಬಂಧಿಸಿದ ಧನು ರಾಶಿಚಕ್ರದ ಸ್ಥಳೀಯರು ಸಂಚಾರದ ಈ ಸಮಯದಲ್ಲಿ ಲಾಭವನ್ನು ಗಳಿಸಬಹುದು.
ಸಂಚಾರದ ಸಮಯದಲ್ಲಿ ನೀವು ವಿದೇಶಿ ಮೂಲಗಳಿಂದ ಕೆಲವು ಉತ್ತಮ ಪ್ರಸ್ತಾಪಗಳನ್ನು ಪಡೆಯಬಹುದು. ಇದರ ಸಹಾಯದಿಂದ ನೀವು ನಿಮ್ಮ ವ್ಯಾಪಾರವನ್ನು ಯಶಸ್ಸಿವಿಯಾಗಿ ಸ್ಥಾಪಿಸಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನೀವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಬಗ್ಗೆ ಕಾಳಜಿ ವಹಿಸಿ ಮತ್ತು ಅದಕ್ಕೆ ತಕ್ಕಂತೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಇಲ್ಲದಿದ್ದರೆ ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ನೀವು ನಿಮ್ಮ ವೆಚ್ಚಗಳ ಬಗ್ಗೆ ಸರಿಯಾದ ಬಜೆಟ್ ಅನ್ನು ತಯಾರಿಸುವುದು ಅಗತ್ಯವಾಗಿದೆ.
ಆದಾಗ್ಯೂ ನಿಮ್ಮ ಜೀವನ ಸಂಗಾತಿ ಕೆಲವು ಅರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದರಿಂದಾಗಿ ನೀವು ಒತ್ತಡಕ್ಕೊಳಗಾಗಬಹುದು. ಇದಲ್ಲದೆ ಈ ಸಮಯದಲ್ಲಿ ನೀವು ಔಷಧಿಗಳ ಮೇಲೆ ಹೆಚ್ಚು ವೆಚ್ಚ ಮಾಡಬೇಕಾಗಬಹದು. ಒಟ್ಟಾರೆಯಾಗಿ ಈ ಸಮಯದಲ್ಲಿ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ ಆದರೆ ಈ ಸಮಯದಲ್ಲಿ ನೀವು ನಿದ್ರೆಗೆ ಸಂಬಂಧಿಸಿದ ಸಮಸ್ಯೆಯನ್ನು ಹೊಂದಬಹುದು. ಈ ಕಾರಣದಿಂದಾಗಿ ನೀವು ಕಣ್ಣು ಅಥವಾ ತಲೆ ನೋವಿಗೆ ಸಮಬಂಧಿಸಿದ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಆದ್ದರಿಂದ ಅದಕ್ಕಾಗಿಯೇ ನೀವು 1 ದಿನದಲ್ಲಿ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ಸಾಕಷ್ಟು ನಿದ್ರೆ ಪಡೆಯುವುದು ಸೂಕ್ತವಾಗಿದೆ ಎಂದು ನಿಮಗೆ ಸಲಹೆ ನೀಡಲಾಗಿದೆ. ಇದರಿಂದಾಗಿ ನೀವು ನಿಮ್ಮ ಅರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯವಾಗುತ್ತದೆ.
ಪರಿಹಾರ - ನಿಮ್ಮ ಸುತ್ತಲಿನ ದೇವಸ್ಥಾನದಲ್ಲಿ ಬುಧವಾರದಂದು ಹಸಿರು ತರಕಾರಿಗಳ ದಾನ ಮಾಡಿ
-
ಮಕರ ರಾಶಿ
ಯಶಸ್ಸು, ಲಾಭ ಮತ್ತು ಆದಾಯದ ಮನೆಯಲ್ಲಿ ಬುಧದ ಸಂಚಾರವು ಮಕರ ರಾಶಿಚಕ್ರದ ಸ್ಥಳೀಯರಿಗೆ ಶುಭ ಫಲಿತಾಂಶಗಳನ್ನು ತರಲಿದೆ. ಇದು ಸಹೋದರ ಸಹೋದರಿಯರೊಂದಿಗಿನ ಸಂಬಂಧವನ್ನು ತೋರಿಸುತ್ತದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಹಿರಿಯ ಸಹೋದರ ಸಹೋದರಿಯರ ಮತ್ತು ಸ್ನೇಹಿತರ ಬಂಬಲವನ್ನು ನೀವು ಪಡೆಯುತ್ತೀರಿ. ಈ ಸಮಯದಲ್ಲಿ ಯಾವುದೇ ಹಳೆಯ ಸ್ನೇಹಿತನನ್ನು ನೀವು ಭೇಟಿ ಮಾಡಬಹುದು ಮತ್ತು ಈ ಭೇಟಿ ನಿಮಗೆ ಕೆಲವು ಹೊಸ ಅವಕಾಶಗಳನ್ನು ತರುತ್ತದೆ.
ಸಂಚಾರದ ಪರಿಣಾಮದಿಂದಾಗಿ ನಿಮಗೆ ನಿಮ್ಮ ಕೆಲಸದ ಸ್ಥಳದಲ್ಲಿ ಸಹ ಲಾಭ ಸಿಗುತ್ತದೆ. ಈ ಸಮಯದಲ್ಲಿ ನಿಮ್ಮ ಸ್ಪರ್ಧಾತ್ಮಕ ಶಕ್ತಿಯು ಉತ್ತುಂಗದಲ್ಲಿರುತ್ತದೆ. ಇದರಿಂದ ಯಾವುದೇ ಅಡೆತಡೆ ಅಥವಾ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಲು ನಿಮಗೆ ಸಾಧ್ಯವಾಗುತ್ತದೆ. ಆದಾಗ್ಯೂ ಈ ಸಂಚಾರದ ಸಮಯದಲ್ಲಿ ನಿಮ್ಮ ವಿರೋಧಿಗಳಿಂದ ನೀವು ಜಾಗರೂಕರಾಗಿರಬೇಕು. ಏಕೆಂದರೆ ಈ ಸಮಯದಲ್ಲಿ ಅವರು ನಿಮಗೆ ಯಾವುದೇ ರೀತಿಯ ನಷ್ಟವನ್ನು ಮಾಡಬಹುದು.
ಈ ಸಮಯದಲ್ಲಿ ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಯಾವುದೇ ಕಾನೂನು ವಿಷಯದಲ್ಲಿ ನೀವು ಗೆಲ್ಲುವ ಸಾಧ್ಯತೆ ಇದೆ. ಮನೆಯಲ್ಲಿ ನಡೆಯಲಾಗುವ ಯಾವುದೇ ಧಾರ್ಮಿಕ ಕುಟುಂಬ ಸಮಾರಂಭದಲ್ಲಿ ನೀವು ಬಹಿರಂಗವಾಗಿ ಖರ್ಚು ಮಾಡಲು ಹಿಂಜರಿಯುವುದಿಲ್ಲ. ಬುಧದ ಈ ಸ್ಥಾನವು ನಿಮ್ಮ ಮತ್ತು ನಿಮ್ಮ ಜೀವನ ಸಂಗಾತಿಯ ನಡುವೆ ಉತ್ತಮ ತಿಳುವಳಿಕೆಯನ್ನು ಹೆಚಿಸುವುದನ್ನು ಕಾಣಲಾಗುತ್ತದೆ. ಇದರಿಂದಾಗಿ ನಿಮ್ಮಿಬ್ಬರ ಸಂಬಂಧವು ಇನ್ನಷ್ಟು ಬಲಗೊಳ್ಳುತ್ತದೆ.
ಒಟ್ಟಾರೆಯಾಗಿ, ಮಕರ ರಾಶಿಚಕ್ರದ ಸ್ಥಳೀಯರಿಗೆ ಈ ಸಂಚಾರವು ಶುಭ ಫಲಿತಾಂಶಗಳನ್ನು ತರಲಿದೆ. ಈ ಸಮಯದಲ್ಲಿ ಅವರ ಆಸೆಗಳು ಈಡೇರುತ್ತವೆ. ಈ ಸಮಯದಲ್ಲಿ ನೀವು ಧೈರ್ಯದಿಂದಿರಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಏಕೆಂದರೆ ಈ ಸಮಯದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡಲು ನಿಮ್ಮ ತಿಳುವಳಿಕೆ ಮತ್ತು ಪರಿಪಕ್ವತೆಯು ನಿಮಗೆ ಸಹಾಯ ಮಾಡುತ್ತದೆ.
ಪರಿಹಾರ - ಗಣೇಶ ದೇವರ ಸ್ತುತಿಯಲ್ಲಿ ಸಂಕಟನಾಶನ ಗಣೇಶ ಸ್ತ್ರೋತವನ್ನು ಪಠಿಸುವುದು ನಿಮಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ.
- ಕುಂಭ ರಾಶಿ
ಬುಧ ಗ್ರಹದ ಸಂಚಾರವು ಕುಂಭ ರಾಶಿಚಕ್ರದ ಸ್ಥಳೀಯರ ಹತ್ತನೇ ಮನೆಯಲ್ಲಿ ಸಂಭವಿಸಲಿದೆ. ವೈದಿಕ ಜ್ಯೋತಿಷ್ಯದಲ್ಲಿ ಹತ್ತನೇ ಮನೆಯು ಸಮಾಜದಲ್ಲಿ ಪ್ರತಿಷ್ಠೆ, ವೃತ್ತಿಪರ ಮತ್ತು ವೃತ್ತಿಯನ್ನು ತೋರಿಸುತ್ತದೆ. ಬುಧವು ಪ್ರೀತಿ, ಬುದ್ಧಿ, ಮಕ್ಕಳ ಐದನೇ ಮನೆ ಮತ್ತು ಸಂಶೋಧನೆ ಮತ್ತು ಬದಲಾವಣೆಯ ಎಂಟನೇ ಮನೆಯನ್ನು ನಿಯಂತ್ರಿಸುತ್ತದೆ. ಈ ಸಂಚಾರದ ಸಮಯದಲ್ಲಿ ಈ ರಾಶಿಚಕ್ರದ ಸ್ಥಳೀಯರು ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು.
ವೃತ್ತಿಪರವಾಗಿ ಮಾತನಾಡಿದರೆ, ಈ ಸಮಯದಲ್ಲಿ ನೀವು ನಿಮ್ಮ ಆಲೋಚನೆಗಳನ್ನು ಯಶಸ್ವಿಯಾಗಿ ನಿಮ್ಮ ಹಿರಿಯ ಅಧಿಕಾರಿಗಳ ಮುಂದಿಡಲು ಸಾಕಷ್ಟು ಸಹಾಯವನ್ನು ಪಡೆಯುತ್ತೀರಿ. ಇದರಿಂದಾಗಿ ಕೆಲಸದ ಸ್ಥಳದಲ್ಲಿ ನೀವು ನಿಮ್ಮ ಅಧೀನ ಅಧಿಕಾರಿಗಳು ಮತ್ತು ಹಿರಿಯ ಜನರ ಮಧ್ಯೆ ವಿಭಿನ್ನ ಗುರುತು ಬಿಡಲು ನಿಮಗೆ ಸಾಧ್ಯವಾಗುತ್ತದೆ. ಇದಲ್ಲದೆ ಈ ಸಂಚಾರದ ಪರಿಣಾಮದಿಂದಾಗಿ ನೀವು ಹಳೆಯ ವಿಧಾನಗಳನ್ನು ತ್ಯಜಿಸಿ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುವಿರಿ. ಅದು ಕೆಲಸದ ಸ್ಥಳದಲ್ಲಿ ನಿಮ್ಮನ್ನು ವಿಭಿನ್ನಗೊಳಿಸುತ್ತದೆ.
ಇದರಿಂದ ನೀವು ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಹಿರಿಯ ಮತ್ತು ಉನ್ನತ ನಿರ್ವಹಣದ ಮೂಲಕ ಪ್ರಶಂಸೆಯನ್ನು ಪಡೆಯುತ್ತೀರಿ ಮತ್ತು ನಿಮ್ಮ ಕೆಲಸಕ್ಕೆ ಗುರುತು ಸಿಗುತ್ತದೆ. ಇದಲ್ಲದೆ ನೀವು ಉನ್ನತ ಸ್ಥಾನ ಅಥವಾ ಸಂಬಳದ ಹೆಚ್ಚಳವನ್ನು ಕಾಯುತ್ತಿದ್ದರೆ, ಈ ಸಂಚಾರದ ಸಮಯದಲ್ಲಿ ನೀವು ಒಳ್ಳೆಯ ಸುದ್ಧಿಯನ್ನು ಪಡೆಯಬಹುದು. ವೈಯಕ್ತಿಕವಾಗಿ ಈ ಸಂಚಾರದ ಪರಿಣಾಮದಿಂದಾಗಿ ನೀವು ನಿಮ್ಮ ಜೀವನ ಸಂಗಾತಿಯೊಂದಿಗಿನ ಸಂಬಂಧದಲ್ಲಿ ಮಾಧುರ್ಯವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ಪ್ರೀತಿ ಹೆಚ್ಚಾಗುತ್ತದೆ. ಇದಲ್ಲದೆ ನಿಮ್ಮ ಸಂಗಾತಿಯ ಉತ್ತಮ ಬೆಂಬಲವನ್ನು ಪಡೆಯುವ ಸಾಧ್ಯತೆ ಇದೆ. ನಿಮ್ಮಿಬ್ಬರ ಸಂಬಂಧವು ಇನ್ನಷ್ಟು ಬಲಗೊಳ್ಳುತ್ತದೆ.
ವಿವಾಹಿತ ಜನರು ತಮ್ಮ ಮಕ್ಕಳಿಗೆ ಸಂಬಂಧಿಸಿದ ಯಾವುದೇ ಉತ್ತಮ ಸುದ್ಧಿಯನ್ನು ಪಡೆಯಬಹುದು. ಯಾವುದೇ ರೀತಿಯ ಸರ್ಕಾರಿ ಅಥವಾ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಈ ಸಮಯದಲ್ಲಿ ಶುಭ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ.
ಪರಿಹಾರ - ಪ್ರತಿದಿನ ಸೂರ್ಯೋದಯದ ಸಮಯದಲ್ಲಿ ದೇವಿ ದುರ್ಗೆಯನ್ನು ಪೂಜಿಸಿ.
- ಮೀನಾ ರಾಶಿ
ಬುಧ ಸಂಚಾರವು ಮೀನಾ ರಾಶಿಚಕ್ರದ ಸ್ಥಳೀಯರ ಒಂಬತ್ತನೇ ಮನೆಯಲ್ಲಿ ಸಂಭವಿಸಲಿದೆ. ಇದು ನಿಮ್ಮ ಉನ್ನತ ಶಿಕ್ಷಣ ಮತ್ತು ಆಧ್ಯಾತ್ಮಿಕತೆಯನ್ನು ಪ್ರತಿನಿಧಿಸುತ್ತದೆ. ಇದು ನಿಮ್ಮ ನಾಲ್ಕನೇ ಮತ್ತು ಏಳನೇ ಮನೆಯ ಅಧಿಪತಿ. ಬುಧದ ಈ ಸಂಚಾರವು ಮೀನಾ ರಾಶಿಚಕ್ರದ ಶಿಕ್ಷಣಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶಗಳನ್ನು ತರಲಿದೆ. ವಿದೇಶದಲ್ಲಿ ಅಥವಾ ತಮ್ಮ ಅಪೇಕ್ಷಿತ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುತ್ತಿರುವವರ ಕನಸು ಈ ಸಮಯದಲ್ಲಿ ಈಡೇರಬಹುದು.
ವೈಯಕ್ತಿಕವಾಗಿ ಈ ಸಮಯವು ಜೀವನ ಸಂಗಾತಿಯೊಂದಿಗೆ ಸಮಯವನ್ನು ಕಳೆಯಲು ಉತ್ತಮ ಸಮಯವೆಂದು ಸಾಬೀತುಪಡಿಸಬಹುದು. ನಿಮ್ಮಿಬ್ಬರ ನಡುವೆ ಯಾವುದೇ ವಿವಾದ ನಡೆಯುತ್ತಿದ್ದರೆ ಈ ಸಮಯದಲ್ಲಿ ಅದನ್ನು ನಿವಾರಿಸಬಹುದು. ಇದಲ್ಲದೆ ನಿಮ್ಮ ತಾಯಿಯೊಂದಿಗಿನ ಸಂಬಂಧವು ಸುಧಾರಿಸುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಕುಟುಂಬದೊಂದಿಗೆ ಯಾವುದೇ ದೂರಸ್ಥ ಪ್ರಯಾಣ ಅಥವಾ ತೀರ್ಥ ಸ್ಥಾನಕ್ಕೆ ಹೋಗಲು ಯೋಜಿಸಬಹುದು.
ಈ ಸಂಚಾರದ ಸಮಯದಲ್ಲಿ ನೀವು ಉನ್ನತ ಶಿಕ್ಷಣ ಮತ್ತು ಜ್ಞಾನವನ್ನು ಪಡೆಯಲು ಹೆಚ್ಚು ಆಸಕ್ತಿಯನ್ನು ಹೊಂದಿರುವಿರಿ. ಈ ಸಮಯದಲ್ಲಿ ಆದಾಯವನ್ನು ಹೆಚ್ಚಿಸಲು ನಿಮ್ಮ ಮುಂದೆ ಅನೇಕ ಅವಕಾಶಗಳು ಬರುತ್ತವೆ. ಈ ಸಮಯದಲ್ಲಿ ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡಬಹುದು. ಈ ಹೂಡಿಕೆ ನಿಮಗೆ ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ.
ವೃತ್ತಿಪರ ಮತ್ತು ಶಿಕ್ಷಣದ ದೃಷ್ಟಿಯಿಂದ ಈ ಸಮಯದಲ್ಲಿ ನೀವು ನಿಮ್ಮ ಹಿರಿಯ ಅಧಿಕಾರಿಗಳ ಮತ್ತು ಶಿಕ್ಷಕರ ಬೆಂಬಲವನ್ನು ಪಡೆಯುತ್ತೀರಿ ಎಂದು ನಿರೀಕ್ಷಿಸಲಾಗಿದೆ. ಈ ಸಮಯದಲ್ಲಿ ಯೋಗ ಮತ್ತು ಧ್ಯಾನವನ್ನು ಆಶ್ರಯಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಇದರಿಂದಾಗಿ ನಿಮ್ಮ ಶಕ್ತಿಗೆ ಸಕಾರಾತ್ಮಕ ದಿಕ್ಕು ಸಿಗುತ್ತದೆ. ಒಟ್ಟಾರೆಯಾಗಿ, ಈ ಸಂಚಾರವು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ಸಮಯದಲ್ಲಿ ಅದೃಷ್ಟವು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ.
ಪರಿಹಾರ - ಪ್ರತಿ ಬುಧವಾರದಂದು ಹಸುವಿಗೆ ಹಸಿರು ಮೇವು ತಿನ್ನಿಸಿ.
ರತ್ನದ ಕಲ್ಲು ಇತ್ಯಾದಿಗಳಂತಹ ಜ್ಯೋತಿಷ್ಯ ಪರಿಹಾರಗಳಿಗೆ ಆಸ್ಟ್ರೋಸೇಜ್ ಆನ್ಲೈನ್ ಸ್ಟೋರ್ ಅನ್ನು ಸಂಪರ್ಕಿಸಿ