ಬುಧ ಸಂಚಾರ ಮೇಷ ರಾಶಿಯಲ್ಲಿ - Mercury Transit in Aries in Kannada

ಬುಧ ಗ್ರಹವು 25 ಏಪ್ರಿಲ್ 2020, ಶನಿವಾರ ರಂದು ಬೆಳಿಗ್ಗೆ 2:26 ಗಂಟೆ (24 ಏಪ್ರಿಲ್ 2020 ರಾತ್ರಿ ) ಮೀನಾ ರಾಶಿಚಕ್ರದಿಂದ ಹೊರಬಂದು ಮಂಗಳನ ಮೇಷ ರಾಶಿಚಕ್ರದಲ್ಲಿ ಪ್ರವೇಶಿಸಲಿದ್ದಾರೆ. ಈ ರಾಶಿಯನ್ನು ಕಾಲಪುರುಷ ಜಾತಕದಲ್ಲಿ ಮೊದಲನೇ ಮನೆ ಅಂದರೆ ಲಗ್ನದ ಮನೆ ಎಂದು ಪರಿಗಣಿಸಲಾಗಿದೆ. ಇದು ಅಗ್ನಿ ಅಂಶ ರಾಶಿ, ಆದ್ದರಿಂದ ಈ ಮನೆಯಲ್ಲಿ ಬುಧ ಗ್ರಹದ ಸಾಗಣೆಯು ಬಹಳ ಶೀಘ್ರ ಫಲಿತಾಂಶವನ್ನು ನೀಡುತ್ತದೆ.

ಯಶಸ್ವಿ ವೃತ್ತಿ ಜೀವನವನ್ನು ಆಯ್ಕೆ ಮಾಡಲು ಸರಿಯಾದ ಮಾರ್ಗವನ್ನು ತಿಳಿದುಕೊಳ್ಳಿ - ಕೋಗ್ನಿಅಸ್ಟ್ರೋ ರಿಪೋರ್ಟ್

ಮೇಷ ರಾಶಿಯಲ್ಲಿ ಬುಧ ಸಂಚಾರದ ರಾಶಿ ಭವಿಷ್ಯ

ನಡೆಯಿರಿ ಈಗ ಮೇಷ ರಾಶಿಯಲ್ಲಿ ಬುಧನ ಸಂಚಾರವು ನಿಮ್ಮ ರಾಶಿಚಕ್ರದ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ತಿಳಿಯೋಣ:

ಈ ರಾಶಿ ಭವಿಷ್ಯ ಚಂದ್ರ ರಾಶಿಯನ್ನು ಆಧರಿಸಿದೆ. ನಿಮ್ಮ ಚಂದ್ರ ರಾಶಿ ಯನ್ನು ತಿಳಿಯಿರಿ.

  1. ಮೇಷ ರಾಶಿ ಭವಿಷ್ಯ

ಮೇಷ ರಾಶಿಚಕ್ರದ ಸ್ಥಳೀಯರ ಮೂರನೇ ಮತ್ತು ಆರನೇ ಮನೆಯ ಮನೆಯ ಮಾಲೀಕ ಬುಧ ಗ್ರಹವು ನಿಮ್ಮ ಮೊದಲನೇ ಮನೆ ಅಂದರೆ ನಿಮ್ಮ ರಾಶಿಯಲ್ಲೇ ಸಾಗುತ್ತಾರೆ. ಮೂರನೇ ಮನೆಯ ಮಾಲೀಕ ಲಗ್ನದ ಮನೆಯಲ್ಲಿ ನೆಲೆಗೊಳ್ಳುವ ಕಾರಣದಿಂದಾಗಿ ನೀವು ನಿಮ್ಮನ್ನು ಹೆಚ್ಚು ನಂಬುವಿರಿ ಮತ್ತು ನೀವು ಸಾಕಷ್ಟು ಪ್ರಯತ್ನಿಸುತ್ತೀರಿ. ನೀವು ನಿಮ್ಮನ್ನು ಯಶಸ್ವಿಯಾಗಿಸಲು, ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವು ಬಲಗೊಳ್ಳುತ್ತದೆ ಮತ್ತು ಈ ಸಮಯದಲ್ಲಿ ನಿಮ್ಮ ಮೂಲಕ ತೆಗೆದುಕೊಳ್ಳಲಾಗುವ ನಿರ್ಧಾರಗಳು ಭವಿಷ್ಯದಲ್ಲಿ ನಿಮಗಾಗಿ ಮಹತ್ವಪೂರ್ಣವೆಂದು ಸಾಬೀತುಪಡಿಸುತ್ತವೆ. ಆದರೆ ಅತಿಯಾದ ಮನೋಬಲಕ್ಕೆ ಬಲಿಯಾಗುವುದನ್ನು ತಪ್ಪಿಸಬೇಕು ಮತ್ತು ಯಾವುದೇ ತಪ್ಪಾದ ಮಾತುಗಳನ್ನು ತಪ್ಪಿಸಬೇಕು.

ಸಂಚಾರದ ಈ ಸಮಯದಲ್ಲಿ ನೀವು ನಿಮ್ಮ ಸಹೋದರ ಸಹೋದರಿಯರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಅವರು ಸಾಧ್ಯವಾದಷ್ಟು ನಿಮಗೆ ಸಹಾಯ ಮಾಡುತ್ತಾರೆ. ಮತ್ತೊಂದೆಡೆ, ಈ ಸಂಚಾರದ ಸಮಯದಲ್ಲಿ ಆರನೇ ಮನೆಯ ಮಾಲೀಕ ನಿಮ್ಮ ಮೊದಲನೇ ಮನೆಗೆ ಪ್ರವೇಶಿಸುತ್ತಾರೆ, ಇದರಿಂದ ನಿಮ್ಮ ಆರೋಗ್ಯವು ಬಳಲಬಹುದು. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು, ಎಲರ್ಜಿ, ನರಗಳಿಗೆ ಸಂಬಂಧಿಸಿದ ಸಮಸ್ಯೆಗಳಂತಹ ಅರೋಗ್ಯ ಸಮಬಂಧಿತ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ದಾಂಪತ್ಯ ಜೀವನಕ್ಕೆ ಈ ಸಂಚಾರವು ಅನುಕೂಲಕರವಾಗಿರುತ್ತದೆ. ನಿಮ್ಮ ಸಂಬಂಧದಲ್ಲಿ ಪ್ರೀತಿ ಹೆಚ್ಚಾಗುತ್ತದೆ ಮತ್ತು ಇಬ್ಬರು ಪರಸ್ಪರರೊಂದಿಗೆ ಚೆನ್ನಾಗಿ ಮಾತನಾಡುವಿರಿ. ಈ ಮೂಲಕ ನಿಮ್ಮ ಸಮಸ್ಯೆಗಳನ್ನು ನಿವಾರಿಸಲಾಗಬಹುದು ಮತ್ತು ನಿಮ್ಮ ಸಂಬಂಧ ಬೆಳೆಯುತ್ತದೆ. ಈ ಸಂಚಾರವು ನಿಮ್ಮ ಸಂಬಂಧವನ್ನು ಉತ್ತಮವಾಗಿ ಸ್ಥಾಪಿಸುತ್ತದೆ. ವ್ಯಾಪಾರ ವಿಷಯದ ಬಗ್ಗೆ ಸ್ವಲ್ಪ ಜಾಗರೂಕರಾಗಿರಬೇಕು, ಏಕೆಂದರೆ ನೀವು ತಪ್ಪು ದಿಕ್ಕಿನಲ್ಲಿ ಮುಂದುವರಿಯುವ ಸಾಧ್ಯತೆ ಇದೆ.

ಪರಿಹಾರ - ನೀವು ಬುಧವಾರದಂದು ಉಪಾಸವನ್ನು ಅನುಸರಿಸಬೇಕು.

ಮುಂದಿನ ವಾರದ ಮೇಷ ರಾಶಿ ಭವಿಷ್ಯ

ಯಾವುದೇ ರೀತಿಯ ಸಮಸ್ಯೆಯ ಪರಿಹಾರಕ್ಕಾಗಿ ಪ್ರಶ್ನಕೇಳಿ
  1. ವೃಷಭ ರಾಶಿ ಭವಿಷ್ಯ

ವೃಷಭ ರಾಶಿಚಕ್ರದ ಎರಡನೇ ಮತ್ತು ಐದನೇ ಮನೆಯ ಮಾಲೀಕ ಬುಧ ಗ್ರಹವು ಹನ್ನೆರಡನೇ ಮನೆಗೆ ಪ್ರವೇಶಿಸಲಿದೆ. ಈ ಸಂಚಾರವು ನಿಮಗೆ ಮಿಶ್ರ ಫಲಿತಾಂಶಗಳನ್ನು ತರಲಿದೆ. ಈ ಸಂಚಾರದ ಪರಿಣಾಮದಿಂದಾಗಿ ಒಂದೆಡೆ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ ಮತ್ತು ಸಂಗ್ರಹಿಸಲಾದ ನಿಮ್ಮ ಹಣಕಾಸು ಕೆಲವು ವಿಶೇಷ ಕಾರ್ಯಗಳಲ್ಲಿ ಖರ್ಚಾಗುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುತ್ತಿರುವ ವಿದ್ಯಾರ್ಥಿಗಳು ಇನ್ನು ಸ್ವಲ್ಪ ಸಮಯ ಕಾಯಬೇಕಾಗುತ್ತದೆ.

ನೀವು ವಿವಾಹಿತರಾಗಿದ್ದರೆ ಮತ್ತು ಮಕ್ಕಳನ್ನು ಹೊಂದುವ ದಿಕ್ಕಿನಲ್ಲಿ ಕಾರ್ಯನಿರತರಾಗಿದ್ದರೆ, ಈ ಸಮಯದಲ್ಲಿ ನೀವು ಯಶಸ್ವಿಯಾಗುತ್ತೀರಿ. ನೀವು ನಿಮ್ಮ ಬುದ್ಧಿವಂತಿಕೆಯ ಮೂಲಕ ನಿಮ್ಮ ಅನೇಕ ಕೆಲಸಗಳನ್ನು ಪೂರ್ಣಗೊಳಿಸಬಹುದು. ವ್ಯಾಪಾರದಲ್ಲಿರುವ ಈ ರಾಶಿಚಕ್ರದ ಸ್ಥಳೀಯರು ವ್ಯಾಪಾರದಲ್ಲಿ ತಮ್ಮ ಸಾಕಷ್ಟು ಹಣಕಾಸು ಹೂಡಿಕೆ ಮಾಡುತ್ತಾರೆ. ಇದರಿಂದ ಮುಂದಿನ ಸಮಯದಲ್ಲಿ ಲಾಭವಾಗುತ್ತದೆ. ನಿಮ್ಮ ಪ್ರೀತಿ ಜೀವನಕ್ಕೆ ಈ ಸಮಯ ಅನುಕೂಲಕರವಾಗಿರುವುದಿಲ್ಲ, ಆದ್ದರಿಂದ ಈ ವಿಷಯದ ಬಗ್ಗೆ ನೀವು ಕಾಳಜಿ ವಹಿಸಬೇಕು. ಯಾವುದೇ ಕೆಲಸದ ಕಾರಣದಿಂದಾಗಿ ನಿಮ್ಮ ಪ್ರೀತಿಪಾತ್ರರು ನಿಮ್ಮಿಂದ ದೂರವಾಗಬಹುದು. ಆದರೂ ನಿಮ್ಮಿಬ್ಬರ ನಡುವಿನ ಸಂವಹನ ಉಳಿದಿರುತ್ತದೆ. ಅವರೊಂದಿಗೆ ಸಾಧ್ಯವಾದಷ್ಟು ಮಾತನಾಡುವ ಮೂಲಕ ನೀವು ಸಂಬಂಧವನ್ನು ಜೀವಂತವಾಗಿಡಲು ಪ್ರಯತ್ನಿಸುತ್ತೀರಿ. ಸಂಚಾರದ ಈ ಸಮಯದಲ್ಲಿ ನಿಮ್ಮ ವೆಚ್ಚಗಳನ್ನು ನಿಯಂತ್ರಿಸುವ ಅಗತ್ಯವಿದೆ. ಇಲ್ಲದಿದ್ದರೆ ಇದು ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಸಾಕಷ್ಟು ಪರಿಣಾಮ ಬೀರಬಹುದು. ಅನಗತ್ಯ ವಿವಾದಗಳಲ್ಲಿ ಬೀಳಬೇಡಿ, ಏಕೆಂದರೆ ಇದರಿಂದ ನೀವು ತೊಂದರೆಕ್ಕೊಳಗಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯವು ದುರ್ಬಲವಾಗಬಹುದು.

ಪರಿಹಾರ - ಬುಧ ಗ್ರಹದ ಅನುಕೂಲತೆಯನ್ನು ಪಡೆಯಲು ನಾಲ್ಕು ಮುಖ ರಾದ್ರಾಕ್ಷ ಧರಿಸಬೇಕು.

  1. ಮಿಥುನ ರಾಶಿ ಭವಿಷ್ಯ

ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಬುಧ ಸಂಚಾರವು ಬಹಳ ಪ್ರಮುಖವಾಗಿರಲಿದೆ, ಏಕೆಂದರೆ ಬುಧ ನಿಮ್ಮದೇ ರಾಶಿಚಕ್ರದ ಮಾಲೀಕ ಮತ್ತು ಈ ಸಂಚಾರದ ಈ ಸಮಯದಲ್ಲಿ ನಿಮ್ಮ ಹನ್ನೊಂದನೇ ಮನೆಗೆ ಪ್ರವೇಶಿಸಲಿದೆ. ಹನ್ನೊಂದನೇ ಮನೆ ನಮ್ಮ ಆದಾಯ ಮತ್ತು ಸಂಪಾದನೆಯ ಮನೆಯಾಗಿದೆ. ಈ ಸಾಚಾರದಿಂದ ಲಾಭ ಸಿಗುತ್ತದೆ ಆದ್ದರಿಂದ ಈ ಮನೆಯಲ್ಲಿ ಬುಧನ ಸಾಗಣೆಯು ನಿಮಗೆ ಬಹಳಷ್ಟು ಅನುಕೂಲಕರವಾಗಿರಲಿದೆ. ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಧ್ವನಿ ಬಲಗೊಳ್ಳುತ್ತದೆ ಮತ್ತು ನೀವು ನಿಮ್ಮ ಬುದ್ಧಿವಂತಿಕೆಯಿಂದ ಉತ್ತಮ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ನಿಮ್ಮ ಹಿರಿಯ ಅಧಿಕಾರಿಗಳೊಂದಿಗಿನ ಸಂಬಂಧವು ಸುಧಾರಿಸುತ್ತದೆ. ಅವರೊಂದಿಗೆ ಸಂವಹನ ಸುಧಾರಿಸುತ್ತದೆ ಮತ್ತು ಕೆಲಸದ ಸ್ಥಳದಲ್ಲಿ ಅದರ ಪ್ರಯೋಜನವನ್ನು ಪಡೆಯುತ್ತೀರಿ.

ನಿಮ್ಮ ಪ್ರೀತಿ ಜೀವನಕ್ಕೆ ಈ ಸಮಯ ತುಂಬಾ ಅನುಕೂಲಕರವೆಂದು ಸಾಬೀತುಪಡಿಸುತ್ತದೆ. ನೀವು ನಿಮ್ಮ ಮಾತುಗಳಿಂದ ನಿಮ್ಮ ಪ್ರೀತಿಪಾತ್ರರನ್ನು ಮೆಚ್ಚಿಸುವಿರಿ ಮತ್ತು ನಿಮ್ಮ ಪ್ರೀತಿ ಜೀವನಕ್ಕೆ ಹೊಸ ಶಕ್ತಿ ದೊರೆಯುತ್ತದೆ. ಈ ಸಂಚಾರದ ಸಮಯದಲ್ಲಿ ದೀರ್ಘಕಾಲದಿಂದ ಸಿಲುಕಿಕೊಂಡಿರುವ ಅನೇಕ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಇದರಿಂದ ನಿಮ್ಮ ಮನೋಬಲ ಹೆಚ್ಚಾಗುತ್ತದೆ ಮತ್ತು ನಿಮ್ಮ ಸಾಮಾಜಿಕ ವಲಯವು ಸಹ ಬಹಳಷ್ಟು ಮಟ್ಟಿಗೆ ವಿಸ್ತರಿಸುತ್ತದೆ. ಈ ಸಮಯದಲ್ಲಿ ಹೊಸ ವ್ಯಕ್ತಿಗಳೊಂದಿಗೆ ನಿಮ್ಮ ಸ್ನೇಹವಾಗುತ್ತದೆ ಮತ್ತು ನಿಮ್ಮ ಸ್ನೇಹಿತರ ವಲಯವು ಬೆಳೆಯುತ್ತದೆ. ಈ ಸಮಯದಲ್ಲಿ ನಿಮ್ಮ ಸಾಮಾಜಿಕ ಗೌರವ ಹೆಚ್ಚಾಗುತ್ತದೆ. ನಿಮ್ಮ ಅನೇಕ ಯೋಜನೆಗಳು ಯಶಸ್ವಿಯಾಗುತ್ತವೆ. ಈ ಸಂಚಾರವು ನಿಮ್ಮ ಜೀವನವನ್ನು ಆರ್ಥಿಕವಾಗಿ ಸಮೃದ್ಧಗೊಳಿಸುತ್ತದೆ.

ಪರಿಹಾರ - ನೀವು ಬುಧ ಗ್ರಹ ಯಂತ್ರ ಅಥವಾ ರತ್ನವನ್ನು ಧರಿಸಬೇಕು

  1. ಕರ್ಕ ರಾಶಿ ಭವಿಷ್ಯ

ಕರ್ಕ ರಾಶಿಚಕ್ರದ ಸ್ಥಳೀಯರ ಹನ್ನೆರಡನೇ ಮತ್ತು ಮೂರನೇ ಮನೆಯ ಮಾಲೀಕ ಬುಧ ಗ್ರಹವು ನಿಮ್ಮ ಹತ್ತನೇ ಮನೆಗೆ ಸಂಚರಿಸುತ್ತದೆ. ಹತ್ತನೇ ಮನೆ ಕರ್ಮದ ಮನೆ ಅಂದರೆ ವೃತ್ತಿ ಜೀವನದ ಮನೆ ಎಂದು ಸಹ ಪರಿಗಣಿಸಲಾಗಿದೆ. ಬುಧನ ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ವೃತ್ತಿ ಜೀವನದಲ್ಲಿ ಕೆಟ್ಟ ಮತ್ತು ಒಳ್ಳೆಯ ಎರಡೂ ಪರಿಸ್ಥಿತಿಗಳು ಉಳಿದಿರುತ್ತವೆ. ಒಂದೆಡೆ ನೀವು ನಿಮ್ಮ ಪ್ರಯತ್ನಗಳ ಮೂಲಕ ನಿಮ್ಮ ಕಾರ್ಯಗಳನ್ನು ಉತ್ತಮಗೊಳಿಸುವಲ್ಲಿ ಯಶಸ್ವಿಯಾಗುತ್ತೀರಿ ಮತ್ತು ನಿಮ್ಮನ್ನು ಪ್ರಶಂಸಿಸಲಾಗುತ್ತದೆ. ಕೆಲಸದ ಸ್ಥಳದಲ್ಲಿನ ಸಹೋದ್ಯೋಗಿಗಳ ಬೆಂಬಲ ಪಡೆಯಿತ್ತಿರಿ, ಇದರಿಂದ ನಿಮ್ಮ ಸ್ನೇಹ ಬಲಗೊಳ್ಳುತ್ತದೆ ಮತ್ತು ಕೆಲಸವನ್ನು ಆನಂದಿಸುವಿರಿ. ಅದೇ ಸಮಯದಲ್ಲಿ ಮತ್ತೊಂದೆಡೆ, ಇದ್ದಕ್ಕಿದ್ದಂತೆ ವರ್ಗಾವಣೆಯ ಸಾಧ್ಯತೆಯು ಇರಬಹುದು.

ಈ ಸಮಯದಲ್ಲಿ ನಿಮ್ಮ ಕೆಲಸವನ್ನು ಸೂಕ್ಷ್ಮವಾಗಿ ಗಮನಿಸುವ ಅಗತ್ಯವಿದೆ, ಆದ್ದರಿಂದ ಬಹಳ ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕು. ಈ ಸಮಯದಲ್ಲಿ ಕೆಲಸದ ಹೊರೆ ನಿಮ್ಮ ಮೇಲೆ ಹಚ್ಚಾಗಿರುತ್ತದೆ ಎಂಬುದರ ಬಗ್ಗೆ ಗಮನ ಹರಿಸಿ ಮತ್ತು ನೀವು ಬಹಳಷ್ಟು ಅಸಮಾಧಾನವನ್ನು ಅನುಭವಿಸುವಿರಿ. ಅಂತಹ ಪರಿಸ್ಥಿತಿಯಲ್ಲಿ ಧೈರ್ಯವನ್ನು ಕಳೆದುಕೊಳ್ಳುವ ಬದಲು ಇನ್ನಷ್ಟು ಶಕ್ತಿಯುತವಾಗಿ ನಿಮ್ಮ ಕೆಲಸವನ್ನು ಉತ್ತಮ ರೀತಿಯಿಂದ ಮಾಡಲು ಪ್ರಯತ್ನಿಸಿ. ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಕುಟುಂಬ ಜೀವನದಲ್ಲಿ ಸಂತೋಷ ಬರುತ್ತದೆ. ನಿಮ್ಮ ತಾಯಿಯ ಆರೋಗ್ಯವು ಉತ್ತಮವಾಗುತ್ತದೆ ಮತ್ತು ನೀವು ನಿಮ್ಮ ಕುಟುಂಬದ ಸದಸ್ಯರ ಸಹಕಾರವನ್ನು ಪಡೆಯುತ್ತೀರಿ. ಕಿರಿಯ ಸಹೋದರ ಸಹೋದರಿಯರು ಅನೇಕ ಕೆಲಸಗಳಲ್ಲಿ ನಿಮಗೆ ಸಹಾಯ ಮಾಡುತ್ತಾರೆ. ಅದೇ ಸಮಯದಲ್ಲಿ ಮತ್ತೊಂದೆಡೆ ನಿಮ್ಮ ತಂದೆಯೊಂದಿಗಿನ ಸಂಬಂಧವು ಸುಧಾರಿಸುತ್ತದೆ. ಸಾಗುವಿಕೆಯ ಈ ಸಮಯದಲ್ಲಿ ನಿಮ್ಮ ವ್ಯಾಪಾರವು ಬೆಳೆಯುತ್ತದೆ ಮತ್ತು ನೀವು ಒಬ್ಬ ಯಶಸ್ವಿ ಉದ್ಯಮಿಯಾಗಿ ಮುಂದುವರಿಯುತ್ತೀರಿ. ಕೆಲಸದ ಸ್ಥಳವನ್ನು ಬಲಗೊಳಿಸಲು ಈ ಸಮಯವನ್ನು ಬಳಸಬೇಕು.

ಪರಿಹಾರ : ಬುಧವಾರದಂದು ಹಸಿರು ಬಟ್ಟೆಗಳನ್ನು ಧರಿಸಿ.

  1. ಸಿಂಹ ರಾಶಿ ಭವಿಷ್ಯ

ಸಿಂಹ ರಾಶಿಚಕ್ರದ ಸ್ಥಳೀಯರ ಒಂಬತ್ತನೇ ಮನೆಯಲ್ಲಿ ಬುಧ ಗ್ರಹವು ಸಂಚರಿಸುತ್ತದೆ. ಒಂಬತ್ತನೇ ಮನೆ ನಿಮ್ಮ ಅದೃಷ್ಟದ ಸ್ಥಾನ ಮತ್ತು ಇದು ದೂರಸ್ಥ ಪ್ರವಾಸಗಳ ಬಗ್ಗೆ ಮಾಹಿತಿ ನೀಡುತ್ತದೆ. ನಿಮ್ಮ ಎರಡನೇ ಮತ್ತು ಹನ್ನೊಂದನೇ ಮನೆಯ ಮಾಲೀಕ ಬುಧ ಗ್ರಹವು ಒಂಬತ್ತನೇ ಮನೆಯಲ್ಲಿ ಪ್ರವೇಶಿಸುವ ಕಾರಣದಿಂದಾಗಿ ಹಣಕಾಸಿನ ವಿಷಯಗಳಲ್ಲಿ ನಿಮ್ಮನ್ನು ಬಲಪಡಿಸುತ್ತದೆ ಮತ್ತು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸಮೃದ್ಧಗೊಳಿಸುತ್ತದೆ. ಈ ಸಂಚಾರದ ಪರಿಣಾಮದಿಂದಾಗಿ ಸಿಲುಕಿಕೊಂಡಿರುವ ನಿಮ್ಮ ಯೋಜನೆಗಳು ವೇಗ ಹಿಡಿಯುತ್ತವೆ ಮತ್ತು ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ. ನೀವು ಮಾಡುವ ಮೊದಲು ಹಿಂಜರಿಯುತ್ತಿದ್ದ ಮತ್ತು ಧೈರ್ಯವನ್ನು ಒಟ್ಟುಗೂಡಿಸಲಾಗದ ಕೆಲಸಗಳು ಸಹ ಸಮಯದಲ್ಲಿ ಪೂರ್ಣಗೊಳ್ಳಲು ಪ್ರಾರಂಭಿಸುತ್ತವೆ. ಇದರಿಂದ ನೀವು ಉತ್ತಮ ಯಶಸ್ಸು ಪಡೆಯುತ್ತೀರಿ.

ನಿಮ್ಮ ಪೂರ್ವಜರ ವ್ಯವಸಾಯವನ್ನು ಮುಂದುವರಿಸುತ್ತೀರಿ ಮತ್ತು ಉದ್ಯೋಗದಲ್ಲಿರುವ ಜನರು ಈ ಸಮಯದಲ್ಲಿ ಸಾಕಷ್ಟು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ನೀವು ಕುಟುಂಬದ ಸದಸ್ಯರೊಂದಿಗೆ ಬಹಳ ಸುಂದರವಾದ ಮತ್ತು ಮನರಂಜನೆ ಸಮಯವನ್ನು ಕಳೆಯಬಹುದು. ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಸಹೋದರ ಸಹೋದರಿಯರೊಂದಿಗಿನ ನಿಮ್ಮ ಸಂಬಂಧವು ಉತ್ತಮಗೊಳ್ಳುತ್ತದೆ ಮತ್ತು ಅವರೊಂದಿಗೆ ನಿಮ್ಮ ಮನಸ್ಸಿನ ವಿಷಯಗಳನ್ನು ಹಂಚಿಕೊಳ್ಳುವಲ್ಲಿ ಹಿಂಜರಿಯುವುದಿಲ್ಲ. ನಿರ್ಧಾರ ತೆಗೆದುಕೊಳ್ಳುವ ಮತ್ತು ಪ್ರಯತ್ನಿಸುವ ನಿಮ್ಮ ಶಕ್ತಿ ಹೆಚ್ಚಾಗುತ್ತದೆ ಮತ್ತು ನಿಮ್ಮ ಸಂವಹನವು ಸಹ ಸಾಕಷ್ಟು ಮಟ್ಟಿಗೆ ಹೆಚ್ಚಾಗುತ್ತದೆ. ಈ ಸಂವಹನದ ಮೂಲಕ ನಿಮಗೆ ತುಂಬಾ ಲಾಭವಾಗುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ ಮತ್ತು ಜನರು ನಿಮ್ಮನ್ನು ಪ್ರಶಂಸಿಸುತ್ತಾರೆ.

ಪರಿಹಾರ - ಮನೆಯ ಅಂಗಳದಲ್ಲಿ ಸಸ್ಯ ನೆಡೆಯಿರಿ.

  1. ಕನ್ಯಾ ರಾಶಿ ಭವಿಷ್ಯ

ಕನ್ಯಾ ರಾಶಿಚಕ್ರದ ಮಾಲೀಕ ಬುಧ ಗ್ರಹ, ಆದ್ದರಿಂದ ಬುಧ ಗ್ರಹದ ಯಾವುದೇ ಸಂಚಾರವು ನಿಮಗೆ ಬಹಳ ಪ್ರಮುಖವಾಗಲಿದೆ.ಇದು ನಿಮ್ಮ ಹತ್ತನೇ ಮನೆ ಅಂದರೆ ಕರ್ಮದ ಮನೆಯ ಮಾಲೀಕ ಕೂಡ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಎಂಟನೇ ಮನೆಗೆ ಪ್ರವೇಶಿಸಲಿದೆ. ಸಾಮಾನ್ಯವಾಗಿ ಎಂಟನೇ ಮನೆಯನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ ಆದರೆ ಬುಧ ಗ್ರಹಕ್ಕೆ ಎಂಟನೇ ಮನೆಯನ್ನು ಅನುಕೂಲಕರವೆಂದು ಪರಿಗಣಿಸಲಾಗಿದೆ

ಅಂತಹ ಪರಿಸ್ಥಿತಿಯಲ್ಲಿ ಈ ಸಂಚಾರದ ಮಿಶ್ರ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ. ಇದರಿಂದ ಕೆಲಸದ ಸ್ಥಳದಲ್ಲಿ ಏರಿಳಿತದ ಪರಿಸ್ಥಿತಿ ಉಂಟಾಗುತ್ತದೆ ಮತ್ತು ನೀವು ಸಂಪೂರ್ಣ ಪ್ರಯತ್ನಗಳಿಂದಲೂ ಯಶಸ್ವಿಯಾಗುತ್ತಿಲ್ಲ ಎಂದು ನಿಮಗೆ ಅನಿಸಬಹುದು. ಇದಲ್ಲದೆ ಕೆಲಸದ ಸ್ಥಳದಿಂದ ನಿಮ್ಮ ಮನಸ್ಸು ಅಲೆದಾಡಬಹುದು. ಈ ಸಂಚಾರದ ಸಮಯದಲ್ಲಿ ರಾಶಿ ಸ್ವಾಮಿ ಎಂಟನೇ ಮನೆಯಲ್ಲಿ ಹಾದುಹೋಗುವುದು, ನಿಮಗೆ ಅರೋಗ್ಯ ಸಮಬಂಧಿತ ಸಮಸ್ಯೆಗಳನ್ನು ಉದ್ಭವಿಸಬಹುದು ಮತ್ತು ನಿಮ್ಮ ಆರೋಗ್ಯಕ್ಕೆ ತೊಂದರೆಯಾಗಬಹುದು ಆದರೆ ಇದೇ ಬುಧವು ನಿಮ್ಮ ಆದಾಯದಲ್ಲಿ ಹೆಚ್ಚಳದ ಮಾರ್ಗವನ್ನು ಸೂಚಿಸುತ್ತದೆ ಮತ್ತು ಅನಿರೀಕ್ಷಿತವಾಗಿ ನಿಮಗೆ ಹಣಕಾಸಿನ ಲಾಭವಾಗಬಹುದು. ಹಲವು ಜನರು ಈ ಸಮಯದಲ್ಲಿ ಅವರ ಬುದ್ಧಿವಂತಿಕೆ ಬಳಕೆಯ ಮೂಲಕ ಗುಪ್ತ ರೀತಿಯಲ್ಲಿ ಹಣವನ್ನು ಪಡೆಯಬಹುದು. ಇದಕ್ಕೆ ವಿರುದ್ಧವಾಗಿ, ಜಾತಕದಲ್ಲಿ ಬುಧವು ಅನುಕೂಲವಾಗಿದ್ದರೆ, ಈ ಸಂಚಾರದ ಸಮಯದಲ್ಲಿ, ಕೆಲಸದ ಸ್ಥಳದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಇದಲ್ಲದೆ ಈ ಸಮಯದಲ್ಲಿ ನೀವು ನಿಮ್ಮ ತಂದೆಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

ಪರಿಹಾರ - ನೀವು ಪ್ರತಿದಿನ ನಿಯಮಿತವಾಗಿ “ ಓಂ ಬ್ರಾಂ ಬ್ರೀಂ ಬ್ರೌಂ ಸಃ ಬುಧಾಯ ನಮಃ “ ಬುಧ ಗ್ರಹ ಬೀಜ ಮಂತ್ರವನ್ನು ಜಪಿಸಬೇಕು.

  1. ತುಲಾ ರಾಶಿ ಭವಿಷ್ಯ

ಬುಧ ಗ್ರಹವು ತುಲಾ ರಾಶಿಚಕ್ರದ ಮಾಲೀಕ ಶುಕ್ರ ದೇವರ ಆಪ್ತ ಸ್ನೇಹಿತ ಮತ್ತು ಇದು ನಿಮ್ಮ ಜಾತಕದ ಒಂಬತ್ತನೇ ಮತ್ತು ಹನ್ನೆರಡನೇ ಮನೆಯ ಮಾಲೀಕ. ಮೇಷ ರಾಶಿಯಲ್ಲಿ ಸಾಂಚಾರದ ಕಾರಣದಿಂದಾಗಿ ಇದು ನಿಮ್ಮ ಏಳನೇ ಮನೆಯಲ್ಲಿ ಪ್ರವೇಶಿಸುತ್ತದೆ ಮತ್ತು ನಿಮಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಸಾಮಾನ್ಯವಾಗಿ ಈ ಸಂಚಾರವು ನಿಮಗೆ ಅನುಕೂಲವೆಂದು ಹೇಳಬಹುದು. ಏಕೆಂದರೆ ಸಂಚಾರದ ಸಮಯದಲ್ಲಿ ನಿಮ್ಮ ವ್ಯಾಪಾರದಲ್ಲಿ ಪ್ರಗತಿಯಾಗುತ್ತದೆ ಮತ್ತು ನಿಮ್ಮ ವ್ಯಾಪಾರವು ಬೆಳೆಯುತ್ತದೆ.

ಈ ಸಮಯದಲ್ಲಿ ನೀವು ಹೊಸ ಕೆಲಸವನ್ನು ಆರಂಭಿಸದರೆ ಅದರಲ್ಲಿ ಯಶಸ್ವಿಯಾಗಬಹುದು ಮತ್ತು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ, ಇದರ ಮೂಲಕ ನೀವು ಬಯಸದೆ ಇರುವ ಕ್ಷೇತ್ರಗಳಿಂದಲೂ ಯಶಸ್ಸು ಪಡೆಯುತ್ತೀರಿ. ಈ ಸಮಯದಲ್ಲಿ ಲಾಭದ ಹೊಸ ಮಾರ್ಗಗಳನ್ನು ಪಡೆಯುತ್ತೀರಿ. ವಿದೇಶಿ ಮೂಲಗಳೊಂದಿಗೆ ಸಹ ಈ ನಿಟ್ಟಿನಲ್ಲಿ ನಿಮ್ಮ ಸಂಪರ್ಕಗಳನ್ನು ಸ್ಥಾಪಿಸಲಾಗುತ್ತದೆ ಮತ್ತು ನಿಮಗೆ ಉತ್ತಮ ಲಾಭ ಸಿಗುತ್ತದೆ. ಇನ್ನು ನಿಮ್ಮ ಮದುವೆ ಆಗಿಲ್ಲದಿದ್ದರೆ, ಈ ಸಮಯದಲ್ಲಿ ನಿಮ್ಮ ಮದುವೆ ಸಂಭವಿಸುವ ಸಾಧ್ಯತೆ ಇದೆ. ಇದಲ್ಲದೆ ನಿಮ್ಮ ಧ್ವನಿಯಲ್ಲಿ ಸಿಹಿ ಹೆಚ್ಚಾಗುತ್ತದೆ. ನಿಮ್ಮ ವ್ಯಕ್ತಿತ್ವದಲ್ಲಿ ಆಕರ್ಷಣೆ ಹೆಚ್ಚಾಗುತ್ತದೆ ಮತ್ತು ಜನರು ನಿಮ್ಮಿಂದ ಪ್ರಭಾವಿತರಾಗುತ್ತಾರೆ. ನಿಮ್ಮ ನಿರ್ಧಾರ ತೆಗೆದುಕೊಳ್ಳಲಾಗುವ ಸಾಮರ್ಥ್ಯ ಮತ್ತು ನಿಮ್ಮ ಬುದ್ಧಿವಂತಿಕೆಯಿಂದ ಪ್ರಭಾವಿತರಾಗಿ ಕೆಲವು ಜನರು ತಮ್ಮ ದೊಡ್ಡ ಮತ್ತು ಪ್ರಮುಖ ಕಾರ್ಯಗಳಲ್ಲಿ ನಿಮ್ಮ ಸಹಾಯ ತೆಗೆದುಕೊಳ್ಳುತ್ತಾರೆ. ಈ ಸಮಯದಲ್ಲಿ ನಿಮ್ಮ ಜನಪ್ರಿಯತೆ ಹೆಚ್ಚಾಗುತ್ತದೆ ಮತ್ತು ನೀವು ಪ್ರಗತಿಯ ಹಾದಿಯಲ್ಲಿ ಮುಂದುವರಿಯುತ್ತಿರಿ.

ಪರಿಹಾರ - ಬುಧವಾರದಂದು ವಿಧರದ ಮೂಲವನ್ನು ನೀರಿನಲ್ಲಿ ನೆನೆಸಿ ಸ್ನಾನ ಮಾಡಿದರೆ, ನೀವು ಅನುಕೂಲಕರ ಫಲಿತಾಂಶವನ್ನು ಪಡೆಯುತ್ತೀರಿ.

  1. ವೃಶ್ಚಿಕ ರಾಶಿ ಭವಿಷ್ಯ

ಬುಧ ಸಂಚಾರವು ವೃಶ್ಚಿಕ ರಾಶಿಚಕ್ರದ ಸ್ಥಳೀಯರ ಆರನೇ ಮನೆಯಲ್ಲಿರುತ್ತದೆ. ಬುಧ ಗ್ರಹವು ನಿಮ್ಮ ಎಂಟನೇ ಮತ್ತು ಹನ್ನೊಂದನೇ ಮನೆಯ ಮಾಲೀಕ. ಆದ್ದರಿಂದ ಆರನೇ ಮನೆಯಲ್ಲಿ ಬುಧನ ಸಂಚಾರವು ಹೆಚ್ಚು ಅನುಕೂಲಕರವಾಗಿರುವುದಿಲ್ಲ. ಈ ಸಂಚಾರದ ಸಮಯದಲ್ಲಿ ಅರೋಗ್ಯ ಸಂಬಂಧಿತ ಅನೇಕ ಸಮಸ್ಯೆಗಳು ಉಂಟಾಗಬಹುದು. ನಿಮ್ಮ ಚರ್ಮದ ಬಣ್ಣವು ಹದಗೆಡಬಹುದು. ಇದರ ಬಗ್ಗೆ ನೀವು ಜಾಗರೂಕರಾಗಿರಬೇಕು. ಇದಲ್ಲದೆ ನಿಮ್ಮ ಜನರೊಂದಿಗೆ ವಿವಾದದ ಕಾರಣದಿಂದಾಗಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ವೆಚ್ಚಗಳು ಸಹ ಹೆಚ್ಚಾಗುತ್ತವೆ. ವೆಚ್ಚಗಳನ್ನು ನಿಯಂತ್ರಿಸದಿದ್ದರೆ, ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಈ ಸಮಯದಲ್ಲಿ ನಿಮ್ಮ ಆದಾಯದಲ್ಲಿ ಕುಸಿತವನ್ನು ಕಾಣಬಹುದು ಮತ್ತು ನಿಮಗೆ ಕೆಲವು ಆರ್ಥಿಕ ಸಮಸ್ಯೆಗಳು ಉಂಟಾಗಬಹುದು. ಯಾವುದೇ ಕಾರಣದಿಂದಾಗಿ ನೀವು ಬ್ಯಾಂಕ್ ಮೂಲಕ ಲೋನ್ ಅಥವಾ ಸಾಲ ತೆಗೆದುಕೊಳ್ಳಬೇಕಾಗಬಹುದು ಮತ್ತು ಇದಕ್ಕಾಗಿ ನೀವು ಸಾಕಷ್ಟು ಪ್ರಯತ್ನಿಸುತ್ತೀರಿ. ಅದರಲ್ಲಿ ನೀವು ಯಶಸ್ವಿಯಾಗುತ್ತೀರಿ. ಇದರಿಂದ ಸಿಲುಕಿಕೊಂಡಿರುವ ನಿಮ್ಮ ಕೆಲಸಗಳು ಪೂರ್ಣಗೊಳ್ಳುತ್ತವೆ. ಆದರೆ ಈ ಸಾಲವನ್ನು ಮರುಪಾವತಿಸಲು ನೀವು ಪ್ರಯತ್ನಿಸಬೇಕು. ಬುಧ ಸಂಚಾರದ ಸಮಯದಲ್ಲಿ ಇದು ನಿಮ್ಮ ಹಿರಿಯ ಅಧಿಕಾರಿಗಳೊಂದಿಗಿನ ನಿಮ್ಮ ಸಂಬಂಧದ ಮೇಲು ಪರಿಣಾಮ ಬೀರುತ್ತದೆ ಮತ್ತು ಅದರಲ್ಲಿ ಹುಳಿ ಬರಬಹುದು. ಆದ್ದರಿಂದ ವಿಶೇಷವಾಗಿ ಇದರ ಬಗ್ಗೆ ಕಾಳಜಿ ವಹಿಸಿ. ಇಲ್ಲದಿದ್ದರೆ ನೀವು ಕೆಲಸದ ಸ್ಥಳದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಪರಿಹಾರ - ಬುಧವಾರದಂದು ಹಸಿರು ಹೆಸರು ಬೇಳೆಯನ್ನು ಸೇವಿಸಿ

  1. ಧನು ರಾಶಿ ಭವಿಷ್ಯ

ಬುಧ ದೇವ ಧನು ರಾಶಿಚಕ್ರದ ಸ್ಥಳೀಯರ ಏಳನೇ ಮತ್ತು ಹತ್ತನೇ ಮನೆಯ ಮಾಲೀಕ. ಆದ್ದರಿಂದ ಇದು ನಿಮ್ಮ ವೃತ್ತಿ, ವ್ಯಾಪಾರ ಮತ್ತು ಜೀವನ ಸಂಗಾತಿ ಮನೆಯ ಅಧಿಪತಿ ಕೂಡ ಆಗಿದೆ. ಬುಧನ ಈ ಸಂಚಾರವು ನಿಮಗೆ ಸಾಕಷ್ಟು ಪ್ರಮುಖವಾಗಿರಲಿದೆ. ನಿಮ್ಮ ರಾಶಿಚಕ್ರದಿಂದ ಐದನೇ ಮನೆಯಲ್ಲಿ ಬುಧನ ಸಂಚಾರವು ನಿಮ್ಮ ಆದಾಯವನ್ನು ನಿರಂತರವಾಗಿ ಹೆಚ್ಚಿಸುವ ಕೆಲಸ ಮಾಡುತ್ತದೆ ಮತ್ತು ನಿಮ್ಮ ಯೋಜನೆಗಳು ಮುಂದುವರಿಯುತ್ತವೆ. ಇಷ್ಟೇ ಮಾತ್ರವಲ್ಲದೆ, ಧನು ರಾಶಿಚಕ್ರದ ಸ್ಥಳೀಯರು ತಮ್ಮ ವ್ಯಾಪಾರದಲ್ಲಿ ಸಹ ಉತ್ತಮ ಲಾಭ ಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಸೋಲಿಸುತ್ತ ಮುಂದುವರಿಯುತ್ತೀರಿ ಮತ್ತು ನಿಮ್ಮ ಕೆಲಸವನ್ನು ಪ್ರಸಂಶಿಸಲಾಗುತ್ತದೆ. ನೀವು ಯಾವುದಾದರು ಬ್ರಾಂಡ್ ಗಾಗಿ ಕೆಲಸ ಮಾಡುತ್ತಿದ್ದರೆ, ಅದು ಹೆಸರುವಾಸಿಯಾಗುತ್ತದೆ, ಇದರ ಮೂಲಕ ಮಾರ್ಕೆಟ್ ನಲ್ಲಿ ನೀವು ಲಾಭ ಪಡೆಯುತ್ತೀರಿ. ಈ ಸಮಯದಲ್ಲಿ ದೊಡ್ಡ ದೊಡ್ಡ ಉದ್ಯಮಿಗಳೊಂದಿಗೆ ನೀವು ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ. ಇದಕ್ಕೆ ವಿರುದ್ಧವಾಗಿ, ನೀವು ಉದ್ಯೋಗದಲ್ಲಿದ್ದರೆ, ಸ್ವಲ್ಪ ಜಾಗರೂಕರಾಗಿರಬೇಕು. ಏಕೆಂದರೆ ಈ ಸಮಯದಲ್ಲಿ ನೀವು ನಿಮ್ಮ ಉದ್ಯೋಗವನ್ನು ಕಳೆದುಕೊಳ್ಳಬಹುದು. ಆದಾಗ್ಯೂ ಮುಂದಿನ ಸಮಯದಲ್ಲಿ ಶೀಘ್ರದಲ್ಲೇ ಹೊಸ ಉದ್ಯೋಗ ಪಡೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿ ಪ್ರಯೋಜನ ಪಡೆಯುತ್ತಾರೆ. ಇದಲ್ಲದೆ ಅವರು ಯಾವುದಾದರು ಉದ್ಯೋಗದಲ್ಲಿದ್ದರೆ, ಬಡ್ತಿ ಪಡೆಯಬಹುದು ಅಥವಾ ಇತರ ಕಾರಣದಿಂದಾಗಿ ಈ ಸಮಯದಲ್ಲಿ ಉತ್ತಮ ಲಾಭದ ಪರಿಸ್ಥಿತಿ ಉಂಟಾಗಬಹುದು. ನೀವು ವಿಧ್ಯಾರ್ಥಿಯಾಗಿದ್ದರೆ, ಅಧ್ಯಯನದಲ್ಲಿ ಸಂಪೂರ್ಣ ಮನಸ್ಸು ಹೊಂದಿರುವಿರಿ ಮತ್ತು ಹೊಸ ವಿಷಯಗಳನ್ನು ಕಲಿಯುತ್ತೀರಿ. ನೀವು ವಿವಾಹಿತರಾಗಿದ್ದರೆ ಮಕ್ಕಳ ಬದಿಯಿಂದ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ.

ಪರಿಹಾರ - ಪ್ರತಿದಿನ ನಿಯಮಿತವಾಗಿ ಚಂದ್ರ ದೇವರನ್ನು ಆರಾಧಿಸಬೇಕು.

  1. ಮಕರ ರಾಶಿ ಭವಿಷ್ಯ

ಮಕರ ರಾಶಿಚಕ್ರದ ಅದೃಷ್ಟ ಮನೆಯ ಮಾಲೀಕ ಬುಧ ದೇವ ನಿಮ್ಮ ಆರನೇ ಮನೆಯ ಅಧಿಪತಿ ಕೂಡ ಆಗಿದ್ದಾರೆ. ತನ್ನ ಈ ಸಂಚಾರದ ಸಮಯದಲ್ಲಿ ನಿಮ್ಮ ಸಂತೋಷದ ಮನೆ ಅಂದರೆ ನಾಲ್ಕನೇ ಮನೆಗೆ ಪ್ರವೇಶಿಸುತ್ತಾರೆ. ಬುಧ ದೇವರ ಈ ಸಂಚಾರದ ಪರಿಣಾಮದಿಂದಾಗಿ ನೀವು ಅನೇಕ ರೀತಿಯ ಸಂತೋಷ ಸಂಪನ್ಮೂಲಗಳನ್ನು ಪಡೆಯುತ್ತೀರಿ ಮತ್ತು ನೀವು ಹೊಸ ವಾಹನವನ್ನು ಸಹ ಖರೀದಿಸಬಹುದು. ಈ ವಾಹನ ನಿಮ್ಮ ಕುಟುಂಬ ಮತ್ತು ನಿಮ್ಮ ಪ್ರಗತಿಯ ಮೂಲವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಕುಟುಂಬದಲ್ಲಿ ಸಂತೋಷ ಹೆಚ್ಚಾಗುತ್ತದೆ ಮತ್ತು ನಿಮ್ಮ ತಂದೆ - ತಾಯಿಯ ಆರೋಗ್ಯವು ಬಲಗೊಳ್ಳುತ್ತದೆ. ಮನೆಯಲ್ಲಿ ಅತಿಥಿಗಳ ಆಗಮನದಿಂದ ನಿಮಗೆ ಸಂತೋಷವಾಗುತ್ತದೆ ಇದರಿಂದ ಕುಟುಂಬದ ಪರಿಸರವು ಉತ್ತಮವಾಗಿರುತ್ತದೆ.

ಅದೇ ಸಮಯದಲ್ಲಿ ಮತ್ತೊಂದೆಡೆ, ವಾಹನವನ್ನು ಸ್ವಲ್ಪ ಜಾಗರೂಕರಾಗಿ ಚಲಾಯಿಸಬೇಕು. ವಿಶೇಷವಾಗಿ, ಎರಡು ಚಕ್ರದ ವಾಹನದಿಂದ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಆದರಿಂದ ಸ್ವಲ್ಪ ಜಾಗರೂಕರಾಗಿರಿ. ಈ ಸಮಯದಲ್ಲಿ ಆಸ್ತಿಗೆ ಸಂಬಂಧಿಸಿದ ಯಾವುದೇ ವಿವಾದವನ್ನು ತಪ್ಪಿಸಬೇಕು, ಏಕೆಂದರೆ ಇದರ ಪರಿಣಾಮವು ನಕಾರಾತ್ಮಕವಾಗಿ ನಿಮ್ಮ ಕುಟುಂಬದ ಮೇಲೆ ಬೀರಬಹುದು. ಈ ಸಂಚಾರದ ಪರಿಣಾಮದಿಂದಾಗಿ ಕೆಲಸದ ಸ್ಥಳದಲ್ಲಿ ನಿಮ್ಮ ಸ್ಥಿತಿ ಉತ್ತಮವಾಗುತ್ತದೆ ಮತ್ತು ಕೆಲಸದಲ್ಲಿ ಪರಿಣಿತಿಯನ್ನು ಪಡೆಯುತ್ತೀರಿ. ಯಾವುದಾದರು ಕಾನೂನು ವಿಷಯ ನಡೆಯುತ್ತಿದ್ದರೆ, ಅದರ ಪರಿಣಾಮವು ನಿಮ್ಮ ಪರವಾಗಿ ಬರಬಹುದು. ಇದರಿಂದ ನೀವು ಸಂತೋಷಪಡುತ್ತೀರಿ. ವಿಶೇಷ ಯೋಜನೆಗಾಗಿ ನಿಮ್ಮ ಸುತ್ತಲಿನ ಜನರಿಂದ ಪ್ರಶಂಸೆ ಪಡೆಯುತ್ತೀರಿ.

ಪರಿಹಾರ - ಬುಧ ದೇವರ ವಿಶೇಷ ಅನುಗ್ರಹವನ್ನು ಪಡೆಯಲು ಸಮುದ್ರಪ ಲಮೂಲವನ್ನು ಧರಿಸಿ.

  1. ಕುಂಭ ರಾಶಿ ಭವಿಷ್ಯ

ಬುಧ ಗ್ರಹದ ಸಂಚಾರವು ಕುಂಭ ರಾಶಿಚಕ್ರದ ಸ್ಥಳೀಯರ ಮೂರನೇ ಮನೆಯಲ್ಲಿರುತ್ತದೆ, ಕಾಲಪುರುಷ ಜಾತಕದಲ್ಲಿ ಇದು ಬುಧ ಗ್ರಹದ ರಾಶಿಯಾಗಿದೆ. ಆದ್ದರಿಂದ ಇಲ್ಲಿ ಬುಧ ಗ್ರಹವು ಬಲವಾದ ಸ್ಥಿತಿಯಲ್ಲಿರುತ್ತದೆ ಮತ್ತು ಸಂವಹನ ಕೌಶಲ್ಯ ಮೂಲಕ ನಿಮಗೆ ಪ್ರಯೋಜನವಾಗುತ್ತದೆ. ಇದು ನಿಮ್ಮ ಜಾತಕದಲ್ಲಿ ಐದನೇ ಮತ್ತು ಎಂಟನೇ ಮಾಲೀಕನಾಗಿದ್ದು ಮೂರನೇ ಮನೆಗೆ ಪ್ರವೇಶಿಸುತ್ತದೆ ಆದ್ದರಿಂದ ಶಿಕ್ಷಣದ ಕ್ಷೇತ್ರದಲ್ಲಿ ಅದ್ಭುತ ಫಲಿತಾಂಶಗಳನ್ನು ಪಡೆಯುತ್ತೀರಿ. ಈ ಸಮಯದಲ್ಲಿ ಇದ್ದಕ್ಕಿದ್ದಂತೆ ಪ್ರವಾಸಗಳ ಯೋಗವಿದೆ ಆದರೆ ಸಧ್ಯಕ್ಕೆ ಅವುಗಳನ್ನು ತಪ್ಪಿಸಿ ಜಾಗರೂಕರಾಗಿರುವುದು ನಿಮಗೆ ಉತ್ತಮ. ಇದಲ್ಲದೆ ಈ ಸಮಯದಲ್ಲಿ ದೈಹಿಕ ಮತ್ತು ಆರ್ಥಿಕ ಸಮಸ್ಯೆಗಳಾಗಬಹುದು.

ಒಂದೆಡೆ ನಿಮ್ಮ ಸಹೋದರ ಸಹೋದರಿಯರಿಗೆ ಹೆಚ್ಚು ಅನುಕೂಲಕರವಾಗಿರುವುದಿಲ್ಲ ಮತ್ತು ಈ ಸಮಯದಲ್ಲಿ ಅವರಿಗೆ ಕೆಲವು ಸಮಸ್ಯೆಗಳಾಗಬಹುದು. ಆದರೆ ನಿಮಗೆ ಬಹಳಷ್ಟು ಪ್ರಯೋಜನವಾಗಬಹುದು. ಏಕೆಂದರೆ ಈ ಸಮಯದಲ್ಲಿ ನಿಮ್ಮ ಆದಾಯವು ಹೆಚ್ಚಾಗುತ್ತದೆ. ನೀವು ವಿವಾಹಿತರಾಗಿದ್ದರೆ, ನಿಮ್ಮ ಮಕ್ಕಳಿಗೆ ಈ ಸಂಚಾರದ ಉತ್ತಮ ಪ್ರಯೋಜನ ಸಿಗುತ್ತದೆ ಮತ್ತು ಅವರು ಯಾವುದೇ ಕ್ಷೇತ್ರದಲ್ಲಿ ತೊಡಗಿರಲಿ ಅದರಲ್ಲಿ ಅವರು ಪ್ರಗತಿ ಪಡೆಯುತ್ತಾರೆ. ಈ ಸಮಯದಲ್ಲಿ ನಿಮ್ಮಲ್ಲಿ ಲೇಖನದ ಪ್ರವೃತ್ತಿ ಜಾಗೃತಗೊಳ್ಳಬಹುದು ಮತ್ತು ನಿಮ್ಮ ಯಾವುದೇ ಹವ್ಯಾಸವನ್ನು ಸಹ ಮುಂದುವರಿಸುತ್ತೀರಿ. ಈ ಸಮಯದಲ್ಲಿ ಸ್ನೇಹಿತರೊಂದಿಗೆ ಭೇಟಿಯಾಗುವ ಅನೇಕ ಅವಕಾಶಗಳನ್ನು ಪಡೆಯುತ್ತೀರಿ ಮತ್ತು ನಿಮ್ಮ ಸ್ನೇಹ ಮುಂದುವರಿಯುತ್ತದೆ. ಕೆಲವು ಹೊಸ ಸ್ನೇಹಿತರು ಭೇಟಿಯಾಗುತ್ತಾರೆ ಮತ್ತು ಕೆಲವು ಹಳೆ ಸ್ನೇಹಿತರೊಂದಿಗೆ ಸಹ ಭೇಟೆಯಾಗುವಿರಿ. ಇದಲ್ಲದೆ ನಿಮ್ಮ ಸಂಬಂಧಿಕರು ಮತ್ತು ನೆರೆಹೊರೆಯರೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮೊಂದಿಗೆ ಕೆಲಸ ಮಾಡುವ ಸಹೋದ್ಯೋಗಿಗಳು ನಿಮ್ಮೊಂದಿಗೆ ಸ್ನೇಹಪ ರವಾಗಿ ವರ್ತಿಸುತ್ತಾರೆ ಮತ್ತು ಇದರಿಂದ ನಿಮ್ಮ ವೃತ್ತಿ ಜೀವನಕ್ಕೆ ಲಾಭವಾಗುತ್ತದೆ.

ಪರಿಹಾರ - ಬುಧವಾರದಂದು ಸಂಪೂರ್ಣ ಹೆಸರು ಬೆಳೆಯನ್ನು ಅಗತ್ಯವಿರುವವರಿಗೆ ದಾನ ಮಾಡಿ.

  1. ಮೀನಾ ರಾಶಿ ಭವಿಷ್ಯ

ಮೀನಾ ರಾಶಿಚಕ್ರಕ್ಕೆ ಬುಧ ದೇವ ನಾಲ್ಕನೇ ಮತ್ತು ಏಳನೇ ಮನೆಯ ಮಾಲೀಕ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಎರಡನೇ ಮನೆಗೆ ಪ್ರವೇಶಿಸುತ್ತಾರೆ. ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಧ್ವನಿಯಲ್ಲಿ ಆಕರ್ಷಣೆ ಹೆಚ್ಚಾಗುತ್ತದೆ ಆದರೆ ನೀವು ತಕ್ಷಣ ಪ್ರತಿಕ್ರಿಯೆ ನೀಡುವವರಾಗುತ್ತೀರಿ. ಅಂದರೆ ಯಾರಾದರೂ ಏನಾದರು ಹೇಳಿದರೆ ನೀವು ತಕ್ಷಣವೇ ಜವಾಬು ನೀಡುತ್ತಿರಿ, ಇದರಿಂದ ತದನಂತರ ನೀವು ವಿಷಾದಿಸಬೇಕಾಗಬಹುದು. ಆದ್ದರಿಂದ ಸ್ವಲ್ಪ ಜಾಗರೂಕರಾಗಿರಿ, ಏಕೆಂದರೆ ಈ ವರ್ತನೆಯಿಂದ ನಿಮ್ಮ ಕೆಲಸಗಳು ಹದಗೆಡಬಹುದು.

ವ್ಯಾಪಾರದ ವಿಷಯದಲ್ಲಿ ಈ ಸಂಚಾರವು ನಿಮಗೆ ಸಾಕಷ್ಟು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ನಿಮ್ಮ ಪ್ರದರ್ಶನ ಮತ್ತು ಹೊಸ ತಂತ್ರವು ನಿಮ್ಮ ವ್ಯಪಾರಕ್ಕೆ ಹೊಸ ವೇಗವನ್ನು ತರುತ್ತದೆ. ಈ ಸಾಗಣೆಯ ಪರಿಣಾಮವೆಂದರೆ ನಿಮ್ಮ ಜೀವನ ಸಂಗಾತಿ ನಿಮ್ಮ ಕುಟುಂಬದ ಕಡೆಗೆ ಹೆಚ್ಚು ಸಮರ್ಪಿತರಾಗಿ ಕೆಲಸ ಮಾಡುತ್ತಾರೆ. ಇದರಿಂದ ನೀವು ಸಂತೋಷಪಡುವಿರಿ ಆದರೆ ನಿಮ್ಮ ಆರೋಗ್ಯವು ಸ್ವಲ್ಪ ದುರ್ಬಲವಾಗಬಹುದು. ನಿಮ್ಮ ಕುಟುಂಬದ ಆದಾಯವು ಹೆಚ್ಚಾಗುತ್ತದೆ ಮತ್ತು ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಹ ಪ್ರಯೋಜನವಾಗುತ್ತದೆ. ನೀವು ಯಾವುದೇ ಸಾರಿಗೆ ಕೆಲಸದಲ್ಲಿ ತೊಡಗಿದ್ದರೆ, ಈ ಸಮಯದಲ್ಲಿ ಅದು ಸಹ ಸಾಕಷ್ಟು ಅಭಿವೃದ್ಧಿ ಹೊಂದುತ್ತದೆ ಮತ್ತು ನಿಮಗೆ ಉತ್ತಮ ಲಾಭ ನೀಡುತ್ತದೆ. ಈ ಸಮಯದಲ್ಲಿ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಕುಟುಂಬದ ಸದಸ್ಯರಲ್ಲಿ ಸಹಕಾರದ ಭಾವನೆ ಜಾಗೃತಗೊಳ್ಳುತ್ತದೆ ಮತ್ತು ಅವರು ಒಗ್ಗಟ್ಟಾಗಿ ಸೇರಿ ಉತ್ತಮಕ್ಕಾಗಿ ಕೆಲಸ ಮಾಡುತ್ತಾರೆ.

ಪರಿಹಾರ - ಬುಧವಾರದಂದು ಶ್ರೀ ರಾಧೆಯನ್ನು ಅಲಂಕರಿಸಿದ ನಂತರ ಅವರನ್ನು ಆರಾಧಿಸಬೇಕು.

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 599/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer