P ಅಕ್ಷರದವರ 2022ರ ವಾರ್ಷಿಕ ಭವಿಷ್ಯ
2022 ರ ಈ ಭವಿಷ್ಯವಾಣಿಗಳು 2022 ರಲ್ಲಿ ಸಂಭವಿಸುವ ಘಟನೆಗಳ ಅನುಕೂಲಕರ ಮತ್ತು ಪ್ರತಿಕೂಲ ಪರಿಣಾಮಗಳನ್ನು ತಿಳಿದುಕೊಳ್ಳುವ ಮಾಧ್ಯಮವಾಗಿದೆ ಏಕೆಂದರೆ ಅವು ನಮಗೆ ಭರವಸೆಯ ಕಿರಣವನ್ನು ನೀಡುತ್ತವೆ. ಕೊರೋನಾ ಸಾಂಕ್ರಾಮಿಕವು ಬಹುತೇಕ ಎಲ್ಲರ ಜೀವನಗಳ ಮೇಲೆ ಪರಿಣಾಮ ಬೀರಿದೆ ಎಂದು ನಾವು ಹೇಳಬಹುದು. ಅಂತಹ ಸನ್ನಿವೇಶದಲ್ಲಿ, 2022 ರ ಪ್ರಾರಂಭವು ಕೆಲವು ಪರಿಹಾರಗಳನ್ನು ನಿಮಗೆ ನೀಡಬಹುದು. ಹಲವಾರು ಪ್ರಶ್ನೆಗಳು ನಮ್ಮನ್ನು ಇನ್ನೂ ಕಾಡುತ್ತಿವೆ ಮತ್ತು 2022 ವರ್ಷವು ಉತ್ತಮವಾಗಿದೆಯೇ ಅಥವಾ ಹಿಂದಿನ ವರ್ಷಗಳಂತೆಯೇ ಇರುತ್ತದೆಯೇ ಎಂದು ತಿಳಿಯಲು ನಾವು ಉತ್ಸುಕರಾಗಿದ್ದೇವೆ. ಮುಖ್ಯ ಕಾಳಜಿಯು ದೈಹಿಕ ಮತ್ತು ಮಾನಸಿಕ ಆರೋಗ್ಯ, ಆರ್ಥಿಕತೆ, ಉದ್ಯೋಗ, ಇತ್ಯಾದಿ. ಈ ಭವಿಷ್ಯದ ಸೂಚನೆಗಳು ಮೂಲತಃ "P" ಅಕ್ಷರದಿಂದ ಹೆಸರು ಪ್ರಾರಂಭವಾಗುವ ಮತ್ತು ತಮ್ಮ ನಿಖರವಾದ ಜನ್ಮ ದಿನಾಂಕದ ಬಗ್ಗೆ ತಿಳಿದಿಲ್ಲದವರಿಗೆ ಸಂಬಂಧಿಸಿದೆ.
ನಿಮ್ಮ ಭವಿಷ್ಯದ ಬಗ್ಗೆ ವಿವರವಾಗಿ ತಿಳಿಯಲು ವಿಶ್ವದ ಅತ್ಯುತ್ತಮ ಜ್ಯೋತಿಷಿಗಳಿಗೆ ಕರೆ ಮಾಡಿ.
ಚಾಲ್ಡಿಯನ್ ಸಂಖ್ಯಾಶಾಸ್ತ್ರದ ಪ್ರಕಾರ, 'P' ಅಕ್ಷರಕ್ಕೆ ಶನಿ ದೇವನನ್ನು ಪ್ರತಿನಿಧಿಸುವ 8ನೇ ಸಂಖ್ಯೆಯನ್ನು ನೀಡಲಾಗಿದೆ. ವೈದಿಕ ಜ್ಯೋತಿಷ್ಯದಲ್ಲಿ, ಇದು ಸೂರ್ಯ ಆಡಳಿತಾಧಿಪತಿಯಾಗಿರುವ ಉತ್ತರ ಫಲ್ಗುಣಿ ನಕ್ಷತ್ರದ ಅಡಿಯಲ್ಲಿ ಬರುತ್ತದೆ, ಮತ್ತು ಬುಧ ಅಧಿಪತಿಯಾಗಿರುವ ಕನ್ಯಾರಾಶಿಯು ಅದರ ರಾಶಿಚಕ್ರದ ಚಿಹ್ನೆಯಾಗಿದೆ. ಅಂದರೆ ಶನಿ, ಸೂರ್ಯ ಮತ್ತು ಬುಧನ ವಿವಿಧ ಗ್ರಹಗಳ ಸ್ಥಾನದಿಂದ 'P' ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ಜನರು ಧನಾತ್ಮಕ ಮತ್ತು ಋಣಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ. ಈಗ, 'P' ವರ್ಣಮಾಲೆಯೊಂದಿಗೆ ಹೆಸರು ಪ್ರಾರಂಭವಾಗುವವರ 2022ರ ಭವಿಷ್ಯ ಹೇಗಿರುತ್ತದೆ ತಿಳ್ಕೊಳ್ಳೋಣ.
ಅದೃಷ್ಟ ನಿಮ್ಮ ಪರವಾಗಿದೆಯೇ? ರಾಜಯೋಗ ವರದಿ ಎಲ್ಲವನ್ನೂ ಬಹಿರಂಗಪಡಿಸುತ್ತದೆ!
ವೃತ್ತಿ ಮತ್ತು ವ್ಯಾಪಾರ
ನಾವು ವೃತ್ತಿಯ ದೃಷ್ಟಿಕೋನದಿಂದ ವಿಷಯಗಳನ್ನು ನೋಡಿದರೆ, "P" ಅಕ್ಷರದಿಂದ ಪ್ರಾರಂಭವಾಗುವ ಸ್ಥಳೀಯರಿಗೆ 2022 ರ ಭವಿಷ್ಯದ ಮುನ್ಸೂಚನೆಯಂತೆ 2022ನೇ ವರ್ಷವು ಏರಿಳಿತಗಳಿಂದ ತುಂಬಿರುತ್ತದೆ. ನೀವು ವರ್ಷದ ಆರಂಭದಲ್ಲಿ ಹೊಸ ಕೆಲಸಕ್ಕೆ ಬದಲಾಯಿಸಲು ಯೋಜಿಸಬಹುದು ಮತ್ತು ಅದು ನಿಮಗೆ ಉತ್ತೇಜನಕಾರಿಯಾಗಬಹುದು ಮತ್ತು ನೀವು ಉತ್ತಮ ಮತ್ತು ತೃಪ್ತಿಕರವಾದ ಕೆಲಸವನ್ನು ಪಡೆಯಬಹುದು. ವರ್ಷದ ಮಧ್ಯದಲ್ಲಿ, ನೀವು ನಿಮ್ಮ ವಿರೋಧಿಗಳನ್ನು ಎದುರಿಸುತ್ತೀರಿ, ಪರಿಣಾಮವಾಗಿ, ನೀವು ಮಾನಸಿಕ ಒತ್ತಡಕ್ಕೆ ಬಲಿಯಾಗಬಹುದು. ಈ ಎಲ್ಲದರ ಹೊರತಾಗಿಯೂ, ನಿಮ್ಮ ಕೆಲಸದ ಸ್ಥಳದಲ್ಲಿ ಉತ್ತಮ ಖ್ಯಾತಿಯನ್ನು ಗಳಿಸಲು ನೀವು ನಿಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ನೀವು ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಬಡ್ತಿ ಪಡೆಯಬಹುದು. ಆದ್ದರಿಂದ, ಪರಿಸ್ಥಿತಿಯನ್ನು ಉತ್ತಮವಾಗಿ ಬಳಸಿಕೊಳ್ಳಲು ಪ್ರಯತ್ನಿಸಿ. ಈಗಾಗಲೇ ಕಾಡುತ್ತಿರುವ ಸಮಸ್ಯೆಗಳು ಕಡಿಮೆಯಾಗುತ್ತವೆ.
ನೀವು ವ್ಯಾಪಾರದಲ್ಲಿದ್ದರೆ, ಏರಿಳಿತಗಳನ್ನು ಎದುರಿಸುತ್ತೀರಿ. ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ನೀವು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಬೇಕಾಗುತ್ತದೆ. ಇದರ ನಂತರ, ಏಪ್ರಿಲ್ ನಿಂದ ಜುಲೈ ಅವಧಿಯವರಿಗೆ ಕೆಲವು ಸವಾಲುಗಳು ಕಾಡುತ್ತವೆ. ನಿಮ್ಮ ಹೂಡಿಕೆಗಳು ಹೆಚ್ಚಾಗುತ್ತವೆ ಆದರೆ ಆದಾಯವು ನಿರೀಕ್ಷಿಸಿದಷ್ಟು ಇರುವುದಿಲ್ಲ, ಆದ್ದರಿಂದ ನೀವು ಮಾನಸಿಕ ಒತ್ತಡಕ್ಕೆ ಒಳಗಾಗುತ್ತೀರಿ. ಜುಲೈ ನಂತರ, ಪರಿಸ್ಥಿತಿಯಲ್ಲಿ ಬದಲಾವಣೆ ಕಂಡುಬರುತ್ತದೆ ಮತ್ತು ನಿಮ್ಮ ವ್ಯವಹಾರವು ಪ್ರವರ್ಧಮಾನಕ್ಕೆ ಬರುವುದನ್ನು ನೀವು ಗಮನಿಸುತ್ತೀರಿ. ನಿಮ್ಮ ಪಾಲುದಾರರು ನಿಮ್ಮ ವ್ಯವಹಾರದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಮತ್ತು ತಮ್ಮ ಶ್ರಮದಿಂದ ಅದನ್ನು ಅಭಿವೃದ್ಧಿಗೊಳಿಸಲು ಪ್ರಯತ್ನಿಸುತ್ತಾರೆ. ನೀವು ಎಲ್ಲಾ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ ಮತ್ತು ನಿಮ್ಮ ವ್ಯವಹಾರವು ಸರಿಯಾದ ದಿಕ್ಕಿನಲ್ಲಿ ಪ್ರಗತಿ ಸಾಧಿಸುತ್ತದೆ ಮತ್ತು ನೀವು ಅದರಲ್ಲಿ ಯಶಸ್ಸನ್ನು ಸಾಧಿಸುವಿರಿ.
ಶನಿ ವರದಿ: ನಿಮ್ಮ ಜಾತಕದಲ್ಲಿ ಶನಿದೇವನ ಪ್ರಭಾವ
ವೈವಾಹಿಕ ಜೀವನ:
ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ, ವರ್ಷದ ಆರಂಭವು ನಿಮಗೆ ಸರಾಸರಿಯಾಗಲಿದೆ ಮತ್ತು ನಿಮ್ಮ ಸಂಗಾತಿಯು ಧಾರ್ಮಿಕ ಚಟುವಟಿಕೆಗಳಿಗೆ ಸಾಕಷ್ಟು ಹಣವನ್ನು ಖರ್ಚು ಮಾಡಲು ನಿಮಗೆ ಅವಕಾಶ ಮಾಡಿಕೊಡುತ್ತಾರೆ ಮತ್ತು ನೀವು ಅವರ ಸುತ್ತಮುತ್ತಲೂ ಉಳಿಯಲು ಯಾವುದೇ ಅವಕಾಶವನ್ನು ಬಿಡುವುದಿಲ್ಲ. ಅವರು ಸಣ್ಣ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು ಮತ್ತು ಆದ್ದರಿಂದ, ಅಗತ್ಯವಿದ್ದಾಗ ಸಕಾಲದಲ್ಲಿ ವೈದ್ಯರನ್ನು ಸಂಪರ್ಕಿಸಲು ಅವರಿಗೆ ಸಲಹೆ ನೀಡಲಾಗುತ್ತದೆ. ವರ್ಷದ ಮಧ್ಯದಲ್ಲಿ ಅಂದರೆ ಏಪ್ರಿಲ್ ನಿಂದ ಜುಲೈ ವರೆಗಿನ ಅವಧಿಯಲ್ಲಿ ನಿಮ್ಮಿಬ್ಬರ ನಡುವೆ ಉತ್ತಮ ತಿಳುವಳಿಕೆ ಇರುತ್ತದೆ ಮತ್ತು ಇದು ನಿಮ್ಮ ವೈವಾಹಿಕ ಜೀವನವನ್ನು ಬಲಪಡಿಸಲು ಕಾರಣವಾಗುತ್ತದೆ. ನೀವು ಜಂಟಿಯಾಗಿ ಅಥವಾ ನಿಮ್ಮ ಸಂಗಾತಿಯ ಹೆಸರಿನಲ್ಲಿ ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು ಅದು ಅಪಾರ ಯಶಸ್ಸನ್ನು ನೀಡುತ್ತದೆ. ನಿಮ್ಮ ಸಂಗಾತಿಯು ಪ್ರತಿ ಹಂತದಲ್ಲೂ ನಿಮ್ಮೊಂದಿಗೆ ನಿಲ್ಲಲು ಪ್ರಯತ್ನಿಸುತ್ತಾರೆ ಮತ್ತು ನೀವು ಏಕಾಂಗಿಯಾಗಿರಲು ಬಿಡುವುದಿಲ್ಲ. ವರ್ಷವು ಈ ರೀತಿ ಮುಂದುವರಿಯುತ್ತದೆ ಮತ್ತು ಕೊನೆಯಲ್ಲಿ, ನಿಮ್ಮ ಸಂಬಂಧವು ಬಲವಾಗಿರುತ್ತದೆ. ಮಕ್ಕಳ ವಿಷಯದಲ್ಲಿ, ಅವರು ಸ್ವಲ್ಪ ಒರಟಾಗಿರಬಹುದು. ಅವರು ತಮ್ಮ ಕ್ಷೇತ್ರದಲ್ಲಿ ಪರಿಣಿತರಾಗಿರುತ್ತಾರೆ, ಅದು ಅವರ ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆ. ಇದು ಮತ್ತಷ್ಟು ಯಶಸ್ಸಿಗೆ ಕಾರಣವಾಗುತ್ತದೆ. ಅವರು ಉದ್ಯೋಗದಲ್ಲಿದ್ದರೆ ಅಥವಾ ವ್ಯಾಪಾರವನ್ನು ನಡೆಸುತ್ತಿದ್ದರೆ, ಅವರು ತಮ್ಮ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಯಶಸ್ಸನ್ನು ಸಾಧಿಸಬಹುದು ಮತ್ತು ಇದು ನಿಮಗೆ ಹೆಮ್ಮೆ ಅನಿಸಬಹುದು.
ಶಿಕ್ಷಣ
ವಿದ್ಯಾರ್ಥಿಗಳ ದೃಷ್ಟಿಯಲ್ಲಿ, ಅಕ್ಷರ ಭವಿಷ್ಯ 2022ರ ಮುನ್ಸೂಚನೆಗಳ ಪ್ರಕಾರ ವರ್ಷದ ಆರಂಭವು ತುಂಬಾ ಚೆನ್ನಾಗಿರಲಿದೆ. ನಿಮ್ಮ ಶಿಕ್ಷಣದ ಮಾರ್ಗದಲ್ಲಿ ಅಡೆತಡೆಗಳು ಇದ್ದರೂ, ಅವು ನಿಮ್ಮ ಗಮನವನ್ನು ಬೇರೆಡೆಗೆ ತಿರುಗಿಸುವುದಿಲ್ಲ ಮತ್ತು ನಿಮ್ಮನ್ನು ಹೆಚ್ಚು ಗಮನಹರಿಸುವಂತೆ ಮಾಡುತ್ತದೆ. ನಮಗೆಲ್ಲರಿಗೂ ತಿಳಿದಿರುವಂತೆ ಕಠಿಣ ಪರಿಶ್ರಮವು ಎಂದಿಗೂ ಪ್ರತಿಫಲವನ್ನು ನೀಡುತ್ತದೆ ಮತ್ತು ಆದ್ದರಿಂದ, ನೀವು ಸಹ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ ಮತ್ತು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಮುಂದುವರಿಯಲು ಸಾಧ್ಯವಾಗುತ್ತದೆ. ನೀವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರೆ, ಏಪ್ರಿಲ್ ಮತ್ತು ಜುಲೈ ನಡುವೆ ಯಶಸ್ಸನ್ನು ಸಾಧಿಸುವ ಉತ್ತಮ ಸಾಧ್ಯತೆ ಇರುವುದರಿಂದ ನಿಮ್ಮ ಪರಿಶ್ರಮ ಹಾಕಿ ಮತ್ತು ನಿಮಗೆ ಸರ್ಕಾರಿ ಕೆಲಸವೂ ಸಿಗಬಹುದು. ನೀವು ಉನ್ನತ ಶಿಕ್ಷಣಕ್ಕಾಗಿ ತಯಾರಿ ನಡೆಸುತ್ತಿದ್ದರೆ, ಈ ಅವಧಿಯು ಹೆಚ್ಚು ಅನುಕೂಲಕರವಾಗಿರುತ್ತದೆ ಮತ್ತು ನಿಮ್ಮ ಆಯ್ಕೆಯ ವಿಷಯಗಳೊಂದಿಗೆ ನೀವು ಅತ್ಯಂತ ಪ್ರತಿಷ್ಠಿತ ಕಾಲೇಜಿಗೆ ಪ್ರವೇಶ ಪಡೆಯಬಹುದು. ನೀವು ವಿದೇಶದಲ್ಲಿ ನಿಮ್ಮ ಅಧ್ಯಯನವನ್ನು ಮುಂದುವರಿಸುವ ಕನಸು ಹೊಂದಿದ್ದರೆ, ಅದು ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಅಥವಾ ಏಪ್ರಿಲ್‌ನಿಂದ ಮೇ ಅಥವಾ ಜುಲೈ-ಆಗಸ್ಟ್ ತಿಂಗಳ ಅವಧಿಯಲ್ಲಿ ನನಸಾಗಬಹುದು. ಈ ವರ್ಷ, ನೀವು ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿವೇತನ ಅಥವಾ ಬಹುಮಾನವನ್ನು ಸಹ ಗೆಲ್ಲಬಹುದು.
ನಿಮ್ಮ ವೃತ್ತಿ ಮತ್ತು ಶಿಕ್ಷಣದಲ್ಲಿ ಯಶಸ್ಸನ್ನು ಪಡೆಯಲು: ನಿಮ್ಮ ಕಾಗ್ನಿಆಸ್ಟ್ರೋ ವರದಿಯನ್ನು ಈಗಲೇ ಆರ್ಡರ್ ಮಾಡಿ!
ಪ್ರೇಮ ಜೀವನ
ಪ್ರೀತಿಯ ದೃಷ್ಟಿಕೋನದಿಂದ, ವರ್ಷವು ಆರೋಗ್ಯಕರವಾಗಿರುತ್ತದೆ. ನಿಮ್ಮ ಪ್ರೀತಿಯ ಪರೀಕ್ಷೆಯಾಗಬಹುದು ಮತ್ತು ನೀವು ಅದರಿಂದ ಯಶಸ್ವಿಯಾಗಿ ಹೊರಬಂದು ನಿಮ್ಮ ಸಂಬಂಧಕ್ಕೆ ಅಂಟಿಕೊಂಡರೆ, ಅವರನ್ನು ನೀವು ಜೀವನ ಸಂಗಾತಿಯಾಗಿ ಪಡೆಯಬಹುದು. ಶನಿಯ ಪ್ರಭಾವದಿಂದಾಗಿ, ಏಪ್ರಿಲ್ ನಿಂದ ಜುಲೈವರೆಗೆ ಕೆಲವು ಸಮಸ್ಯೆಗಳು ಉಂಟಾಗಬಹುದು ಮತ್ತು ಈ ಸಮಯದಲ್ಲಿ, ನೀವು ಅವರ ಮೇಲೆ ಎಲ್ಲಾ ವಿಷಯಗಳಲ್ಲಿ ನಿಮ್ಮ ಸಂಪೂರ್ಣ ನಂಬಿಕೆಯನ್ನು ಇರಿಸಬೇಕಾಗುತ್ತದೆ. ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಿ ಮತ್ತು ಅವುಗಳನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸಿ ಮತ್ತು ಆದರ್ಶ ಸಂಗಾತಿಯಾಗಿ ಅವರೊಂದಿಗೆ ನಿಲ್ಲಿ. ಜುಲೈ ತಿಂಗಳ ನಂತರ, ಎಲ್ಲಾ ರೀತಿಯ ಭಿನ್ನಾಭಿಪ್ರಾಯಗಳು ಅದರಷ್ಟಕ್ಕೆ ಅದೇ ಬಗೆಹರಿಯುತ್ತವೆ ಮತ್ತು ಇಬ್ಬರೂ ಮದುವೆಯಾಗಲು ಸಿದ್ಧರಾಗುತ್ತೀರಿ. ವರ್ಷದ ಕೊನೆಯಲ್ಲಿ, ನೀವು ಬಹಳ ಆಡಂಬರದಿಂದ ಮದುವೆಯಾಗುತ್ತೀರಿ.
ಆರ್ಥಿಕ ಜೀವನ
ಹಣಕಾಸಿನ ಅಂಶಕ್ಕೆ ಸಂಬಂಧಿಸಿದಂತೆ, ವರ್ಷದ ಆರಂಭವು ಸ್ವಲ್ಪ ದುರ್ಬಲವಾಗಿರುತ್ತದೆ. ಆಸ್ತಿ-ಸಂಬಂಧಿತ ವಿಷಯಗಳಲ್ಲಿ ನೀವು ಘರ್ಷಣೆಗಳನ್ನು ಹೊಂದಬಹುದು ಮತ್ತು ಕಾನೂನು ಹೋರಾಟವನ್ನು ಎದುರಿಸಬಹುದು. ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ನ್ಯಾಯಾಲಯದ ಪ್ರಕರಣಗಳು ನಡೆಯುತ್ತಿದ್ದರೆ, ಅದು ದೀರ್ಘಕಾಲದವರೆಗೆ ಮುಂದುವರಿಯಬಹುದು ಆದರೆ ಜುಲೈ ತಿಂಗಳ ನಂತರ ಅದು ನಿಮ್ಮ ಪರವಾಗಿ ವಾಲಬಹುದು, ಆದರೆ ಅದೆಲ್ಲದರ ಹೊರತಾಗಿಯೂ, ನಿಮಗೆ ಮಾನಸಿಕ ಒತ್ತಡ ಕಾಡಬಹುದು. ನೀವು ಉದ್ಯೋಗದಲ್ಲಿದ್ದರೆ, ಪ್ರಾರಂಭದಿಂದ ವರ್ಷದ ಮಧ್ಯದವರೆಗೆ ಸಮಯವು ಅನುಕೂಲಕರವಾಗಿರುತ್ತದೆ. ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಸಂಬಳವನ್ನು ನೀವು ಸಮಯಕ್ಕೆ ಸರಿಯಾಗಿ ಪಡೆಯುತ್ತೀರಿ ಮತ್ತು ವರ್ಷದ ಕೊನೆಯ ಮೂರು ತಿಂಗಳಲ್ಲಿ ನೀವು ಪ್ರೋತ್ಸಾಹಧನವನ್ನು ಪಡೆಯಬಹುದು. ನೀವು ವ್ಯಾಪಾರಸ್ಥರಾಗಿದ್ದರೆ, ವರ್ಷದ ಆರಂಭದಿಂದ ಮಧ್ಯದವರೆಗಿನ ಅವಧಿಯು ಸವಾಲಿನದಾಗಿರುತ್ತದೆ. ನಿಮ್ಮ ಖರ್ಚುಗಳು ಅಧಿಕವಾಗಿರುತ್ತದೆ ಮತ್ತು ನೀವು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಬೇಕಾಗುತ್ತದೆ, ಆದ್ದರಿಂದ ನೀವು ವರ್ಷದ ಆರಂಭದಿಂದ ಜಾಗರೂಕರಾಗಿರಬೇಕು, ಇಲ್ಲದಿದ್ದರೆ, ಸಮಸ್ಯೆಗಳು ಕಾಡಬಹುದು. ವರ್ಷದ ಆರಂಭಕ್ಕೆ ಹೋಲಿಸಿದರೆ ವರ್ಷದ ಕೊನೆಯ ಭಾಗವು ಅನುಕೂಲಕರವಾಗಿರುತ್ತದೆ ಮತ್ತು ನಿಮ್ಮ ಹೂಡಿಕೆಗಳಿಂದ ಕ್ರಮೇಣ ನಿಮ್ಮ ಲಾಭದ ಬಾಗಿಲು ತೆರೆಯುತ್ತದೆ.
ಹಣಕಾಸು ಸಂಬಂಧಿತ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರಗಳನ್ನು ಪಡೆಯಿರಿ: ಹಣಕಾಸು ವರದಿ
ಆರೋಗ್ಯ
2022 ರ ಭವಿಷ್ಯದ ಪ್ರಕಾರ P ಅಕ್ಷರದ ಹೆಸರಿನವರ ಆರೋಗ್ಯಕ್ಕೆ ಸಂಬಂಧಿಸಿದಂತೆ, ಈ ವರ್ಷವು ಮಿಶ್ರ ಫಲಿತಾಂಶಗಳನ್ನು ನೀಡಲಿದೆ. ನೀವು ಕೀಲು ನೋವು, ಭುಜದ ನೋವಿನಿಂದ ಬಳಲಬಹುದು ಅಥವಾ ವರ್ಷದ ಆರಂಭದಲ್ಲಿ ಅಪಘಾತವನ್ನು ಎದುರಿಸಬಹುದು. ನೀವು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಿರುವುದರಿಂದ ನಿಮ್ಮ ಆಹಾರಕ್ರಮದಲ್ಲಿ ನೀವು ಕಾಳಜಿ ವಹಿಸಬೇಕಾಗಬಹುದು. ಆದಾಗ್ಯೂ, ವರ್ಷದ ಆರಂಭಕ್ಕೆ ಹೋಲಿಸಿದರೆ ವರ್ಷದ ಕೊನೆಯ ಭಾಗವು ಉತ್ತಮವಾಗಿರುತ್ತದೆ ಮತ್ತು ನಿಮ್ಮ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ. ನೀವು ಫಿಟ್ ಆಗಿರಲು ಪ್ರತಿದಿನ ವ್ಯಾಯಾಮ ಮಾಡಬೇಕು. ಎಷ್ಟು ಸಾಧ್ಯವೋ ಅಷ್ಟು ನೀರು ಸೇವಿಸಿ ಮತ್ತು ಬೆಳಗಿನ ನಡಿಗೆಗೆ ಹೋಗಿ. ನಿಯಮಿತ ವೈದ್ಯಕೀಯ ತಪಾಸಣೆಗೆ ಹೋಗಿ ಇದರಿಂದ ಯಾವುದೇ ಕಾಯಿಲೆ ಇದ್ದರೆ, ಅದನ್ನು ಸುಲಭವಾಗಿ ಪತ್ತೆಹಚ್ಚಬಹುದು ಮತ್ತು ಸಮಯಕ್ಕೆ ಸರಿಯಾಗಿ ಗುಣಪಡಿಸಬಹುದು.
ಪರಿಹಾರ
ಪ್ರತಿದಿನ ದುರ್ಗಾ ಕವಚ ಪಠಣ ಜಪಿಸಿ. ಇದಲ್ಲದೆ, ದುರ್ಗೆಗೆ ಅಕ್ಕಿಯಿಂದ ಮಾಡಿದ ಪಾಯಸವನ್ನು ಅರ್ಪಿಸಿ ಮತ್ತು ಅದನ್ನು ಪ್ರಸಾದವಾಗಿ ತೆಗೆದುಕೊಳ್ಳಿ.
ಜ್ಯೋತಿಷ್ಯ ಪರಿಹಾರಗಳು ಮತ್ತು ಸೇವೆಗಳಿಗಾಗಿ, ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್
ಆಸ್ಟ್ರೋಸೇಜ್ ಜೊತೆಗಿರುವುದಕ್ಕಾಗಿ ಧನ್ಯವಾದಗಳು!!
Astrological services for accurate answers and better feature
Astrological remedies to get rid of your problems

AstroSage on MobileAll Mobile Apps
AstroSage TVSubscribe
- Horoscope 2023
- राशिफल 2023
- Calendar 2023
- Holidays 2023
- Chinese Horoscope 2023
- Education Horoscope 2023
- Purnima 2023
- Amavasya 2023
- Shubh Muhurat 2023
- Marriage Muhurat 2023
- Chinese Calendar 2023
- Bank Holidays 2023
- राशि भविष्य 2023 - Rashi Bhavishya 2023 Marathi
- ராசி பலன் 2023 - Rasi Palan 2023 Tamil
- వార్షిక రాశి ఫలాలు 2023 - Rasi Phalalu 2023 Telugu
- રાશિફળ 2023 - Rashifad 2023
- ജാതകം 2023 - Jathakam 2023 Malayalam
- ৰাশিফল 2023 - Rashifal 2023 Assamese
- ରାଶିଫଳ 2023 - Rashiphala 2023 Odia
- রাশিফল 2023 - Rashifol 2023 Bengali
- ವಾರ್ಷಿಕ ರಾಶಿ ಭವಿಷ್ಯ 2023 - Rashi Bhavishya 2023 Kannada