ಶುಭ ಮುಹೂರ್ತ 2025

Author: Sudha Bangera | Updated Wed, 12 June, 2024 5:23 PM

ಸನಾತನ ಧರ್ಮದಲ್ಲಿ, ಜನರು ಯಶಸ್ವಿಯಾಗಲು ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ನೋಡುವ ಮಂಗಳಕರ ಸಮಯದ ಬಗ್ಗೆ ಶುಭ ಮುಹೂರ್ತ 2025 ನಿಮಗೆ ತಿಳಿಸಿಕೊಡುತ್ತದೆ. ವಿಭಿನ್ನ ಕಾರ್ಯಗಳಿಂದ ಉತ್ತಮ ಫಲಿತಾಂಶಗಳನ್ನು ಪಡೆಯುವ ಉದ್ದೇಶ ಇದಾಗಿದೆ. ಸರಳವಾಗಿ ಹೇಳುವುದಾದರೆ, ಸ್ಥಾನ, ಸ್ಥಿತಿ ಅಥವಾ ನಕ್ಷತ್ರದ ಅನುಕೂಲಕರವಾದ ಸಮಯದಲ್ಲಿ ಶುಭ ಕಾರ್ಯವನ್ನು ನಡೆಸಿದರೆ, ಒಬ್ಬರು ತಮ್ಮ ಜೀವನದಲ್ಲಿ ಸಂತೋಷ, ಯಶಸ್ಸು ಮತ್ತು ಸಮೃದ್ಧಿಯನ್ನು ಸಾಧಿಸಬಹುದು. 


ಅದು ಹೇಗೆ, ಯಾಕೆ ಸಂಭವಿಸುತ್ತದೆ ಎಂದು ತಿಳಿಯಲು ನೀವು ಬಯಸುವಿರಾ? ಈ ಲೇಖನವು ಈ ಪ್ರಶ್ನೆಗಳಿಗೆ ಎಲ್ಲಾ ನಿಖರವಾದ ಉತ್ತರಗಳನ್ನು ಒಳಗೊಂಡಿದೆ.

ಶುಭ ಮುಹೂರ್ತದ ಬಗ್ಗೆ ಹೆಚ್ಚು ತಿಳಿಯಲು ಉತ್ತಮ ಜ್ಯೋತಿಷಿಗಳಿಗೆ ಕರೆ ಮಾಡಿ

ಈ ಲೇಖನವು 2025 ರ ಶುಭ ದಿನಾಂಕಗಳು ಮತ್ತು ಶುಭ ಮುಹೂರ್ತಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಒಳಗೊಂಡಿದೆ. ಅಲ್ಲದೆ, ಹಿಂದೂ ಧರ್ಮದಲ್ಲಿ ಮಂಗಳಕರ ಸಮಯದ ಮಹತ್ವ, ಅದನ್ನು ನಿರ್ಧರಿಸಲು ಬಳಸುವ ನಿಯಮಗಳು ಮತ್ತು ಇದಕ್ಕಾಗಿ ಪರಿಗಣಿಸಲಾಗುವ ಅಂಶಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಬಹುದು. ಇಲ್ಲಿ ಓದುಗರಿಗೆ “ಆದಿ” ಪರಿಚಯವಾಗುತ್ತದೆ. ಈಗ, ತಡಮಾಡದೆ ನಾವು ಈ ಲೇಖನವನ್ನು ಪ್ರಾರಂಭಿಸೋಣ ಮತ್ತು ಶುಭ ಮುಹೂರ್ತದ ಬಗ್ಗೆ ತಿಳಿದುಕೊಳ್ಳೋಣ. 

To Read in English: Shubh Muhurth 2025

ಶುಭ ಮುಹೂರ್ತದ ಅರ್ಥವೇನು?

ಸರಳವಾಗಿ ಹೇಳುವುದಾದರೆ, ಶುಭ ಮುಹೂರ್ತವು ಜನರು ಯಾವುದೇ ಹೊಸ ಚಟುವಟಿಕೆ ಅಥವಾ ಶುಭ ಕಾರ್ಯವನ್ನು ಪ್ರಾರಂಭಿಸುವ ಸಮಯವಾಗಿದೆ. ಶುಭ ಮುಹೂರ್ತದ ಸಮಯದಲ್ಲಿ, ಎಲ್ಲಾ ಶುಭ ಗ್ರಹಗಳು ಮತ್ತು ನಕ್ಷತ್ರಗಳು ಅನುಕೂಲಕರ ಸ್ಥಾನದಲ್ಲಿರುತ್ತವೆ. ಇದು ಈ ಅವಧಿಯಲ್ಲಿ ಸಕಾರಾತ್ಮಕ ಫಲಿತಾಂಶಗಳಿಗೆ ಕಾರಣವಾಗುತ್ತದೆ. ಹಿಂದೂ ಧರ್ಮದಲ್ಲಿ, ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು ಮಂಗಳಕರ ದಿನಾಂಕ ಮತ್ತು ತಿಥಿಯನ್ನು ನೋಡುತ್ತಾರೆ ಮತ್ತು ಉತ್ತಮ ಸಮಯವನ್ನು ಶುಭ ಮುಹೂರ್ತ ಎಂದು ಕರೆಯಲಾಗುತ್ತದೆ. ಎಲ್ಲಾ ರೀತಿಯ ಶುಭ ಕಾರ್ಯಗಳನ್ನು ಪೂರ್ಣಗೊಳಿಸಲು ಈ ಅವಧಿಯು ಸೂಕ್ತವಾಗಿರುತ್ತದೆ.

ರಾಜಯೋಗ ವರದಿ: ಸಂಪತ್ತು ಮತ್ತು ಸಮೃದ್ಧಿಯು ನಿಮ್ಮನ್ನು ಯಾವಾಗ ಅನುಗ್ರಹಿಸುತ್ತದೆ ಎಂಬುದನ್ನು ತಿಳಿಯಿರಿ!

ಶುಭ ಮುಹೂರ್ತದ ಬಗ್ಗೆ ಜನರ ಸಿದ್ಧಾಂತವು ಕಾಲಾನಂತರದಲ್ಲಿ ಬದಲಾಗಿದೆ ಮತ್ತು ಅವರು ಮಂಗಳಕರ ಸಮಯವನ್ನು ನೋಡದೆ ಹೊಸ ಕೆಲಸವನ್ನು ಪ್ರಾರಂಭಿಸುತ್ತಾರೆ. ಈ ಕಾರಣದಿಂದಾಗಿ, ಅವರು ತಮ್ಮ ಕೆಲಸದಲ್ಲಿ ನಕಾರಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಶುಭ ಮುಹೂರ್ತವನ್ನು ನೋಡದೆ ಯೋಜನೆಗಳನ್ನು ಪ್ರಾರಂಭಿಸಿದರೆ, ವೈಫಲ್ಯದ ಸಾಧ್ಯತೆಗಳು ಹೆಚ್ಚು. ಹಾಗಾಗಿ ಈ ಶುಭ ಮುಹೂರ್ತ 2025 ಲೇಖನ ಮಹತ್ವದ್ದಾಗಿದೆ.

हिंदी में पढ़े : शुभ मुर्हत २०२५

ಶುಭ ಮುಹೂರ್ತದ ಮಹತ್ವವೇನು?

ನಾವು ಮೊದಲೇ ಹೇಳಿದಂತೆ, ಹಿಂದೂ ಧರ್ಮದಲ್ಲಿ ಶುಭ ಮುಹೂರ್ತಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಪ್ರತಿಯೊಬ್ಬರೂ ಹೆಚ್ಚಿನ ಭರವಸೆ ಮತ್ತು ನಿರೀಕ್ಷೆಗಳೊಂದಿಗೆ ಹೊಸ ಕೆಲಸ ಅಥವಾ ಚಟುವಟಿಕೆಯನ್ನು ಪ್ರಾರಂಭಿಸುತ್ತಾರೆ. ಅವರು ಕೆಲಸವನ್ನು ಪ್ರಾರಂಭಿಸಲು ಅಥವಾ ಪೂರ್ಣಗೊಳಿಸಲು ಶುಭ ಮುಹೂರ್ತವನ್ನು ನೋಡುತ್ತಾರೆ ಮತ್ತು ಹೀಗಾಗಿ ಅವರು ತಮ್ಮ ಯಶಸ್ಸನ್ನು ನಿರ್ಧರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯು ಶುಭ ಮುಹೂರ್ತದಲ್ಲಿ ಅಂದರೆ ಗ್ರಹಗಳು ಮತ್ತು ನಕ್ಷತ್ರಗಳ ಶುಭ ಸ್ಥಾನದಲ್ಲಿ ಹೊಸ ಕಾರ್ಯ ಅಥವಾ ಚಟುವಟಿಕೆಯನ್ನು ಪ್ರಾರಂಭಿಸಿದಾಗ, ಅವರು ತಮ್ಮ ಕ್ರಿಯೆಗಳಿಗೆ ಸೂಕ್ತವಾದ ಫಲಿತಾಂಶಗಳನ್ನು ಪಡೆಯುತ್ತಾರೆ. ಹೊಸ ಅಥವಾ ಶುಭ ಕಾರ್ಯವನ್ನು ಪ್ರಾರಂಭಿಸಲು ಶುಭ ಮುಹೂರ್ತವನ್ನು ತಿಳಿದುಕೊಳ್ಳುವ ಅಭ್ಯಾಸವು ಪುರಾತನ ಕಾಲದಿಂದ ಬಂದಿದೆ. ಏಕೆಂದರೆ ಕೆಲಸದ ಯಶಸ್ಸು ಅಥವಾ ವೈಫಲ್ಯವು ಶುಭ ಮತ್ತು ಅಶುಭಗಳ ಕಾಲಾವಧಿಯಿಂದ ನಿರ್ಧರಿಸಲ್ಪಡುತ್ತದೆ. 

ಜಾತಕ ವಿವರಗಳಿಗಾಗಿ ಹುಡುಕುತ್ತಿರುವಿರಾ? ಜಾತಕ 2025 ನೋಡಿ

ತಿಥಿ ಮತ್ತು ಮುಹೂರ್ತ 

ತಮ್ಮ ಜೀವನದಲ್ಲಿ ಸಮಯದ ಮಹತ್ವವನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿಯು ಯಶಸ್ಸನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ ಮತ್ತು ಅದನ್ನು ಶುಭ ಮುಹೂರ್ತಕ್ಕೂ ಅನ್ವಯಿಸಲಾಗುತ್ತದೆ. ಶುಭ ಮುಹೂರ್ತದಂದು ಕೈಗೊಳ್ಳುವ ಕೆಲಸವು ಯಾವುದೇ ಅಡೆತಡೆಯಿಲ್ಲದೆ ಮಂಗಳಕರ ಫಲಿತಾಂಶಗಳನ್ನು ತರುತ್ತದೆ. ವಿವಾಹ, ಮರಣ, ಅನ್ನಪ್ರಾಶನ, ವಿದ್ಯಾರಂಭ, ಉಪನಯನ ಮುಂತಾದ ವಿಭಿನ್ನ ಕಾರ್ಯಕ್ರಮಗಳಿಗೆ ಶುಭ ಮುಹೂರ್ತವನ್ನು ನೋಡಲು ಮತ್ತು ಅದರಂತೆ ನಡೆಸಲು ಹಿಂದೂ ಧರ್ಮದಲ್ಲಿ ಬಯಸುತ್ತಾರೆ. ಶುಭ ಮುಹೂರ್ತ ಮತ್ತು ತಿಥಿಯ ಆಯ್ಕೆಯು, ವಿಭಿನ್ನ ಆಚರಣೆಗಳನ್ನು ನಿರ್ವಹಿಸುವುದನ್ನು ಖಚಿತಪಡಿಸುತ್ತದೆ. ಇದರಿಂದ ಜನರು ತಮ್ಮ ಜೀವನದಲ್ಲಿ ಅದೃಷ್ಟವನ್ನು ಪಡೆಯುತ್ತಾರೆ. 

ಮುಂಬರುವ ವರ್ಷದಲ್ಲಿ ಅಂದರೆ 2025 ರಲ್ಲಿ ಮದುವೆಗೆ ಅಥವಾ ನಿಮ್ಮ ಮಗುವಿಗೆ ಸಂಬಂಧಿಸಿದ ಮುಂಡನ, ಅನ್ನಪ್ರಾಶನ ಇತ್ಯಾದಿ ಆಚರಣೆಗಳಿಗೆ ಶುಭ ಮುಹೂರ್ತವನ್ನು ತಿಳಿಯಲು ನೀವು ಬಯಸಿದರೆ, ಈ ಲೇಖನ ಮುಹೂರ್ತ ಮತ್ತು ತಿಥಿಯ ವಿವರಗಳನ್ನು ಒಳಗೊಂಡಿದೆ. 

ಕರ್ಣವೇದ ಮುಹೂರ್ತ 2025

2025 ರಲ್ಲಿ ಕರ್ಣವೇದ ಶುಭ ಮುಹೂರ್ತದ ಬಗ್ಗೆ ವಿವರಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. ಕರ್ಣವೇದ ಮುಹೂರ್ತ 2025

ಮದುವೆ ಮುಹೂರ್ತ 2025

2025 ರಲ್ಲಿ ಮದುವೆಯಶುಭ ಮುಹೂರ್ತದ ಬಗ್ಗೆ ವಿವರಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಮದುವೆ ಮುಹೂರ್ತ 2025

ಉಪನಯನ ಮುಹೂರ್ತ 2025 

2025 ರಲ್ಲಿ ಉಪನಯನಶುಭ ಮುಹೂರ್ತದ ಬಗ್ಗೆ ವಿವರಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಉಪನಯನ ಮುಹೂರ್ತ 2025

ನೀವು ರಾಹು ಸಂಚಾರ 2025 ರ ವಿವರಗಳನ್ನು ಪಡೆಯಲು ಬಯಸುವಿರಾ? ಸರಿಯಾದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಾಮಕರಣ ಮುಹೂರ್ತ 2025

2025 ರಲ್ಲಿ ನಾಮಕರಣಶುಭ ಮುಹೂರ್ತದ ಬಗ್ಗೆ ವಿವರಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ನಾಮಕರಣ ಮುಹೂರ್ತ 2025

ಗೃಹಪ್ರವೇಶ ಮುಹೂರ್ತ 2025:

2025 ರಲ್ಲಿ ಗೃಹಪ್ರವೇಶಕ್ಕಾಗಿ ಶುಭ ಮುಹೂರ್ತದ ಬಗ್ಗೆ ವಿವರಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಗೃಹ ಪ್ರವೇಶ ಮುಹೂರ್ತ 2025

ಮುಂಡನ ಮುಹೂರ್ತ 2025: 

2025 ರಲ್ಲಿ ಮುಂಡನಕ್ಕಾಗಿ ಶುಭ ದಿನಾಂಕಗಳು ಮತ್ತು ಮುಹೂರ್ತಗಳನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ ಮುಂಡನ ಮುಹೂರ್ತ 2025

ಅನ್ನಪ್ರಾಶನ ಮುಹೂರ್ತ 2025

2025 ರಲ್ಲಿ ಅನ್ನಪ್ರಾಶನಶುಭ ಮುಹೂರ್ತದ ಬಗ್ಗೆ ವಿವರಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಅನ್ನಪ್ರಾಶನ ಮುಹೂರ್ತ 2025

ಈಗ ನಾವು ಮುಂದುವರಿಯೋಣ ಮತ್ತು ಶುಭ ಮುಹೂರ್ತ ಸೃಷ್ಟಿಯ ಬಗ್ಗೆ ಅರಿವು ಮೂಡಿಸೋಣ. 

ಶುಭ ಮುಹೂರ್ತ ಹೇಗೆ ನೋಡುವುದು?

ಶುಭ ಮುಹೂರ್ತ 2025 ಲೇಖನವು ಶುಭ ಮುಹೂರ್ತ ಎಂದರೇನು ಮತ್ತು ಅದರ ಪ್ರಾಮುಖ್ಯತೆ ಇತ್ಯಾದಿಗಳಿಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳನ್ನು ನಿಮಗೆ ಸ್ಪಷ್ಟವಾಗಿ ತಿಳಿಸುತ್ತದೆ. ಅದನ್ನು ಹೊರತುಪಡಿಸಿ, ಶುಭ ಮುಹೂರ್ತವನ್ನು ಹೇಗೆ ಮಾಡಲಾಗುತ್ತದೆ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಉದ್ಭವಿಸಬಹುದು. ಮುಂಬರುವ ಶುಭ ಅಥವಾ ಅಶುಭ ಸಮಯದ ಬಗ್ಗೆಯೂ ನೀವು ಯೋಚಿಸುತ್ತಿರಬಹುದು. ಜ್ಯೋತಿಷ್ಯವು ಪ್ರತಿಯೊಂದು ಪ್ರಶ್ನೆಗೆ ಸ್ಪಷ್ಟ ಉತ್ತರಗಳನ್ನು ನೀಡುವುದರಿಂದ ಈ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿಯಲು ಜ್ಯೋತಿಷ್ಯವು ನಿಮಗೆ ಸಹಾಯ ಮಾಡುತ್ತದೆ. ಈ ರೀತಿಯಾಗಿ, ವೈದಿಕ ಜ್ಯೋತಿಷ್ಯದಲ್ಲಿ ಶುಭ ಮುಹೂರ್ತವನ್ನು ವಿವರವಾಗಿ ವಿವರಿಸಲಾಗಿದೆ. 

ಭವಿಷ್ಯದ ಎಲ್ಲಾ ಮೌಲ್ಯಯುತ ಒಳನೋಟಗಳಿಗಾಗಿ ಆಸ್ಟ್ರೋಸೇಜ್ ಬೃಹತ್ ಜಾತಕ

ಶುಭ ಮುಹೂರ್ತವನ್ನು ನಿರ್ಧರಿಸಲು, ತಿಥಿ, ದಿನ, ಯೋಗ, ನಕ್ಷತ್ರ, ಒಂಬತ್ತು ಗ್ರಹಗಳ ಸ್ಥಾನಗಳು, ಶುಕ್ರ-ಗುರು ಅಸ್ತಂಗತ, ಮಲಮಾಸ, ಶುಭ ಮತ್ತು ಅಶುಭ ಯೋಗ, ರಾಹು ಕಾಲ, ಶುಭ ಲಗ್ನದ ವಿಶ್ಲೇಷಣೆಯೊಂದಿಗೆ ನಿಖರವಾದ ಲೆಕ್ಕಾಚಾರಗಳನ್ನು ಮಾಡಲಾಗುತ್ತದೆ. ಆದರೆ, ಶುಭ ಮುಹೂರ್ತದಂತೆ, ಕೆಲಸದ ಯಶಸ್ಸು ಅಥವಾ ವೈಫಲ್ಯವನ್ನು ನಿರ್ಧರಿಸುವ ಅಶುಭ ಮುಹೂರ್ತಗಳೂ ಇವೆ. ಸನಾತನ ಧರ್ಮದಲ್ಲಿ ಮುಹೂರ್ತವನ್ನು ಸಮಯ ಮಾಪನದ ಘಟಕವೆಂದು ಪರಿಗಣಿಸಲಾಗುತ್ತದೆ.

ಅದೇ ಅವಧಿಯಲ್ಲಿ, ಪಂಚಾಂಗದ ಪ್ರಕಾರ, ಒಂದು ದಿನ ಮತ್ತು 24 ಗಂಟೆಗಳ ಆಧಾರದ ಮೇಲೆ, ಒಂದು ದಿನದಲ್ಲಿ ಒಟ್ಟು 30 ಮುಹೂರ್ತಗಳು ಬರುತ್ತವೆ. ಪ್ರತಿ ಮುಹೂರ್ತವು 48 ನಿಮಿಷಗಳವರೆಗೆ ಇರುತ್ತದೆ. ಈ ಆಸ್ಟ್ರೋಸೇಜ್ ಲೇಖನದೊಂದಿಗೆ, ಓದುಗರು ಶುಭ ಮುಹೂರ್ತಕ್ಕೆ ಸಂಬಂಧಿಸಿದ ನಿಖರವಾದ ವಿವರಗಳನ್ನು ಮತ್ತು ಅಶುಭ ಸಮಯಗಳ ವಿವರಗಳನ್ನು ಪಡೆಯಬಹುದು. 

ಶುಭ-ಅಶುಭ ಮುಹೂರ್ತದ ವಿವರಗಳು

ಮುಹೂರ್ತದ ಹೆಸರು

ಮುಹೂರ್ತದ ವಿಧ

ರುದ್ರ

ಅಶುಭ

ಅಹಿ

ಅಶುಭ

ಮಿತ್ರ

ಶುಭ

ಪಿತೃ

ಅಶುಭ

ವಸು

ಶುಭ

ವರಾಹ

ಶುಭ

ವಿಶ್ವೇದೇವ

ಶುಭ

ವಿಧಿ

ಶುಭ (ಸೋಮವಾರದಿಂದ ಶುಕ್ರವಾರದವರೆಗೆ ಬಿಟ್ಟು)

ಸತ್ಮುಖಿ

ಶುಭ

ಪುರುಹೂತ

ಅಶುಭ

ವಾಹಿನಿ

ಅಶುಭ

ನಕ್ತಂಚರ

ಅಶುಭ

ವರುಣ

ಶುಭ

ಆರ್ಯಮಾ

ಶುಭ (ಭಾನುವಾರ ಬಿಟ್ಟು)

ಭಾಗ್

ಅಶುಭ

ಗಿರೀಶ್

ಅಶುಭ

ಅಜಪಾದ

ಅಶುಭ

ಅಹಿರ್ಬುಧ್ನ್ಯ

ಶುಭ

ಪುಷ್ಯ

ಶುಭ

ಅಶ್ವಿನಿ

ಶುಭ

ಯಮ

ಅಶುಭ

ಅಗ್ನಿ

ಶುಭ

ವಿಧಾರ್ಥ

ಶುಭ

ಕಂದ

ಶುಭ

ಅದಿತಿ

ಶುಭ

ಅತ್ಯಂತ ಶುಭ

ಅತ್ಯಂತ ಶುಭ

ವಿಷ್ಣು

ಶುಭ

ದ್ಯುಮದ್ಗದ್ಯುತಿ

ಶುಭ

ಬ್ರಹ್ಮ

ಅತ್ಯಂತ ಶುಭ

ಸಮುದ್ರಂ

ಶುಭ

ಶುಭ ಮುಹೂರ್ತ ನೋಡುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ 5 ವಿಷಯಗಳು

ಪಂಚಾಂಗದಲ್ಲಿ ಶುಭ ಮುಹೂರ್ತವನ್ನು ಲೆಕ್ಕಾಚಾರ ಮಾಡುವ ಸಮಯದಲ್ಲಿ, ತಿಥಿ, ವಾರ, ಯೋಗ, ಕರಣ ಮತ್ತು ನಕ್ಷತ್ರ ಇತ್ಯಾದಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹಾಗಾಗಿ ಈ ಐದು ಸಂಗತಿಗಳೊಂದಿಗೆ ಶುಭ ಮುಹೂರ್ತವನ್ನು ನಿರ್ಧರಿಸಲಾಗುತ್ತದೆ.

ತಿಥಿ

ಶುಭ ಮುಹೂರ್ತವನ್ನು ಆರಿಸುವಾಗ ತಿಥಿಯ ಹೆಸರು ಮೊದಲು ಬರುತ್ತದೆ. ಪಂಚಾಂಗದ ಪ್ರಕಾರ, ಒಂದು ತಿಂಗಳಲ್ಲಿ ಒಟ್ಟು 30 ದಿನಗಳು ಇರುತ್ತವೆ, ಇದನ್ನು ತಲಾ 15 ದಿನಗಳ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳನ್ನು ಶುಕ್ಲ ಮತ್ತು ಕೃಷ್ಣ ಪಕ್ಷ ಎಂದು ಕರೆಯಲಾಗುತ್ತದೆ. ಅಮಾವಾಸ್ಯೆಯ ದಿನವನ್ನು ಕೃಷ್ಣ ಪಕ್ಷವೆಂದು ಮತ್ತು ಹುಣ್ಣಿಮೆಯ ದಿನವನ್ನು ಶುಕ್ಲ ಪಕ್ಷವೆಂದು ಉಲ್ಲೇಖಿಸಲಾಗುತ್ತದೆ. ಈಗ, ನಾವು ಮುಂದುವರಿಯೋಣ ಮತ್ತು ಶುಕ್ಲ ಮತ್ತು ಕೃಷ್ಣ ಪಕ್ಷದಲ್ಲಿ ಬರುವ ದಿನಾಂಕಗಳನ್ನು ತಿಳಿದುಕೊಳ್ಳೋಣ.

ಶುಕ್ಲ ಪಕ್ಷ

ಕೃಷ್ಣ ಪಕ್ಷ

ಪ್ರತಿಪದ ತಿಥಿ

ಪ್ರತಿಪದ ತಿಥಿ

ದ್ವಿತೀಯ ತಿಥಿ

ದ್ವಿತೀಯ ತಿಥಿ

ತೃತೀಯ ತಿಥಿ

ತೃತೀಯ ತಿಥಿ

ಚತುರ್ಥಿ ತಿಥಿ

ಚತುರ್ಥಿ ತಿಥಿ

ಪಂಚಮಿ ತಿಥಿ

ಪಂಚಮಿ ತಿಥಿ

ಷಷ್ಠಿ ತಿಥಿ

ಷಷ್ಠಿ ತಿಥಿ

ಸಪ್ತಮಿ ತಿಥಿ

ಸಪ್ತಮಿ ತಿಥಿ

ಅಷ್ಟಮಿ ತಿಥಿ

ಅಷ್ಟಮಿ ತಿಥಿ

ನವಮಿ ತಿಥಿ

ನವಮಿ ತಿಥಿ

ದಶಮಿ ತಿಥಿ

ದಶಮಿ ತಿಥಿ

ಏಕಾದಶಿ ತಿಥಿ

ಏಕಾದಶಿ ತಿಥಿ

ದ್ವಾದಶಿ ತಿಥಿ

ದ್ವಾದಶಿ ತಿಥಿ

ತ್ರಯೋದಶಿ ತಿಥಿ

ತ್ರಯೋದಶಿ ತಿಥಿ

ಚತುರ್ದಶಿ ತಿಥಿ

ಚತುರ್ದಶಿ ತಿಥಿ

ಹುಣ್ಣಿಮೆ ತಿಥಿ

ಹುಣ್ಣಿಮೆ ತಿಥಿ

ದಿನ ಅಥವಾ ವಾರ

ವಾರ ಅಥವಾ ದಿನವು ಶುಭ ಮುಹೂರ್ತವನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಪಂಚಾಂಗದ ಪ್ರಕಾರ, ವಾರದಲ್ಲಿ ಕೆಲವು ದಿನಗಳು ಶುಭ ಕಾರ್ಯಗಳನ್ನು ನಿಷೇಧಿಸಲಾಗಿರುತ್ತದೆ ಮತ್ತು ಅವುಗಳಲ್ಲಿ ಭಾನುವಾರವು ಮೊದಲು ಬರುತ್ತದೆ. ಮಂಗಳಕರ ಕೆಲಸವನ್ನು ಪ್ರಾರಂಭಿಸಲು ಉತ್ತಮ ದಿನಗಳು ಮಂಗಳವಾರ ಮತ್ತು ಗುರುವಾರ.

ನಕ್ಷತ್ರ

ಶುಭ ಮುಹೂರ್ತವನ್ನು ನಿರ್ಧರಿಸುವ ಇನ್ನೊಂದು ಅಂಶವೆಂದರೆ ನಕ್ಷತ್ರ. ಜ್ಯೋತಿಷ್ಯದಲ್ಲಿ, ಒಟ್ಟು 27 ನಕ್ಷತ್ರಗಳನ್ನು ಶುಭ ಅಥವಾ ಅಶುಭವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ, ಪ್ರತಿ ನಕ್ಷತ್ರವನ್ನು ಒಂದು ಅಥವಾ ಹೆಚ್ಚಿನ ಗ್ರಹಗಳು ಆಳುತ್ತವೆ. ಗ್ರಹಗಳು ಆಳುವ ನಕ್ಷತ್ರಗಳ ಬಗ್ಗೆ ಈಗ ತಿಳಿದುಕೊಳ್ಳೋಣ. 

ನಕ್ಷತ್ರ

ಅಧಿಪತಿ ಗ್ರಹ

ಅಶ್ವಿನಿ, ಮಾಘ, ಮೂಲ

ಕೇತು

ಭರಣಿ, ಪೂರ್ವ ಫಲ್ಗುಣಿ, ಪೂರ್ವಷಾಢ

ಶುಕ್ರ

ಕೃತಿಕಾ, ಉತ್ತರ, ಫಲ್ಗುಣಿ, ಉತ್ತರಾಷಾಢ

ಸೂರ್ಯ

ರೋಹಿಣಿ, ಹಸ್ತ, ಶ್ರವಣ

ಚಂದ್ರ

ಮೃಗಶಿರಾ, ಚಿತ್ರ, ಧನಿಷ್ಠ

ಮಂಗಳ

ಆರ್ದ್ರ, ಸ್ವಾತಿ, ಶತಭಿಷ್ಠ

ರಾಹು

ಪುನರ್ವಸು, ವೈಶಾಖ, ಪೂರ್ವಬಾದ್ರಪದ

ಗುರು

ಪುಷ್ಯ, ಅನುರಾಧ, ಉತ್ತರಬಾದ್ರಪದ

ಶನಿ

ಆಶ್ಲೇಷ, ಜ್ಯೇಷ್ಠ, ರೇವತಿ

ಬುಧ

ಯೋಗ

ಶುಭ ಮುಹೂರ್ತವನ್ನು ನಿರ್ಧರಿಸಲು, ಯೋಗವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಜ್ಯೋತಿಷ್ಯದಲ್ಲಿ ಸ್ಪಷ್ಟವಾಗಿ ವಿವರಿಸಿರುವ ಒಟ್ಟು 27 ಯೋಗಗಳಿವೆ. ಅವು ಸೂರ್ಯ ಮತ್ತು ಚಂದ್ರನ ಸ್ಥಾನವನ್ನು ಆಧರಿಸಿವೆ. ಇವುಗಳಲ್ಲಿ 9 ಯೋಗಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ ಮತ್ತು 18 ಯೋಗಗಳನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಇವುಗಳ ಹೆಸರುಗಳನ್ನು ತಿಳಿಯೋಣ-

ಶುಭ ಯೋಗ: ಹರ್ಷನ್, ಸಿದ್ಧಿ, ವರಿಯನ್, ಶಿವ, ಸಿದ್ಧ, ಸಾಧ್ಯ, ಶುಭ, ಶುಕ್ಲ, ಬ್ರಹ್ಮ, ಐಂದ್ರ, ಪ್ರೀತಿ, ಆಯುಷ್ಮಾನ್, ಸೌಭಾಗ್ಯ, ಶೋಭನ್, ಸುಕರ್ಮ, ಧೃತಿ, ವೃದ್ಧಿ, ಧ್ರುವ.

ಶನಿ ವರದಿ ಮೂಲಕ ನಿಮ್ಮ ಜೀವನದ ಮೇಲೆ ಶನಿಯ ಪ್ರಭಾವವನ್ನು ತಿಳಿಯಿರಿ

ಅಶುಭ ಯೋಗ: ಶೂಲ, ಗಂಢ, ವ್ಯಾಘಾತ, ವಿಷ್ಕುಂಭ, ಅತಿಗಂಢ, ಪರಿಘ, ವೈಧೃತಿ, ವಜ್ರ, ವ್ಯತಿಪತ

ಕರಣ 

ಶುಭ ಕಾರ್ಯಗಳಿಗೆ ಶುಭ ಮುಹೂರ್ತವನ್ನು ನಿರ್ಧರಿಸುವಲ್ಲಿ ಕರಣ ಅಂತಿಮ ಅಂಶವಾಗಿದೆ. ಪಂಚಾಂಗದ ಪ್ರಕಾರ, ತಿಥಿಯಲ್ಲಿ ಎರಡು ಕರಣಗಳು ಇದ್ದು ತಿಥಿಯ ಪ್ರತಿ ಅರ್ಧದಲ್ಲಿ ಒಂದು ಬರುತ್ತದೆ. ಈ ಅನುಕ್ರಮದಲ್ಲಿ, ಒಟ್ಟು 11 ಕರಣಗಳಿವೆ ಮತ್ತು ಇದರಲ್ಲಿ 4 ಕರಣಗಳನ್ನು ಸ್ಥಿರವೆಂದು ಪರಿಗಣಿಸಲಾಗುತ್ತದೆ ಮತ್ತು ಇತರ 7 ಚರ ಸ್ವಭಾವವನ್ನು ಹೊಂದಿವೆ. ಈ ಶುಭ ಮುಹೂರ್ತ 2025 ರಲ್ಲಿ ಈ ಕರಣಗಳ ಹೆಸರು ಮತ್ತು ಸ್ವಭಾವಗಳನ್ನು ಪರಿಶೀಲಿಸೋಣ. ಸ್ಥಿರ ಮತ್ತು ಚರ ಕರಣಗಳ ವಿವರಗಳನ್ನು ಕೆಳಗೆ ನೀಡಲಾಗಿದೆ -

ಸ್ಥಿರ ಕರಣ

ಚತುಷ್ಪದ, ಕಿಷ್ತುಘ್ನ, ಶಕುನಿ, ನಾಗ

ಚರ ಕರಣ

ವಿಷ್ಟಿ ಅಥವಾ ಭದ್ರ, ಕೌಲವ, ಗರ, ತೈತಿಲ, ವಾಣಿಜ, ಬಾವ, ಬಾಲವ

ಶುಭ ಮುಹೂರ್ತ ಸಮಯದಲ್ಲಿ ಇಂತಹ ಕೆಲಸಗಳನ್ನು ಮಾಡುವುದನ್ನು ತಪ್ಪಿಸಿ

ರತ್ನಗಳು, ಯಂತ್ರ, ಇತ್ಯಾದಿ ಸೇರಿದಂತೆ ಜ್ಯೋತಿಷ್ಯ ಪರಿಹಾರಗಳಿಗಾಗಿ, ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

ನಮ್ಮ ಲೇಖನವನ್ನು ನೀವು ಇಷ್ಟಪಟ್ಟಿದ್ದೀರಿ ಎಂದು ನಾವು ಭಾವಿಸುತ್ತೇವೆ. ಆಸ್ಟ್ರೋಸೇಜ್‌ನ ಪ್ರಮುಖ ಭಾಗವಾಗಿದ್ದಕ್ಕಾಗಿ ಧನ್ಯವಾದಗಳು. ಇನ್ನಷ್ಟು ಆಸಕ್ತಿದಾಯಕ ಲೇಖನಗಳಿಗಾಗಿ ಟ್ಯೂನ್ ಮಾಡಿ!

ಹೆಚ್ಚಾಗಿ ಕೇಳುವ ಪ್ರಶ್ನೆಗಳು

ಪ್ರಶ್ನೆ1: ಶುಭ ಮುಹೂರ್ತ ಎಂದರೇನು?

ಉತ್ತರ: ಪಂಚಾಂಗದಲ್ಲಿ ಶುಭ ಮುಹೂರ್ತ ಅಥವಾ ಮಂಗಳಕರ ಸಮಯವೆಂದರೆ ಗ್ರಹಗಳು ಮತ್ತು ನಕ್ಷತ್ರಪುಂಜಗಳು ಸ್ಥಳೀಯರಿಗೆ ಉತ್ತಮ ಅಥವಾ ಫಲಪ್ರದ ಫಲಿತಾಂಶಗಳನ್ನು ನೀಡುವ ಸಮಯ.

ಪ್ರಶ್ನೆ2 : ಮುಹೂರ್ತ ಯಾಕೆ ಮಹತ್ವದ್ದಾಗಿದೆ?

ಉತ್ತರ: ಮುಹೂರ್ತದ ಸಮಯದಲ್ಲಿ ಪ್ರಮುಖ ಕಾರ್ಯ ಪ್ರಾರಂಭಿಸುವುದು ಯಶಸ್ಸು ಮತ್ತು ಸಂತೋಷವನ್ನು ತರುತ್ತದೆ ಎಂದು ನಂಬಲಾಗಿದೆ.

ಪ್ರಶ್ನೆ3: ಜ್ಯೋತಿಷ್ಯ 2025 ರ ಪ್ರಕಾರ ಮದುವೆಯ ದಿನಾಂಕವನ್ನು ಹೇಗೆ ಆರಿಸುವುದು?

ಉತ್ತರ: 2025 ರಲ್ಲಿ ಮದುವೆಯಾಗಲು ಅತ್ಯಂತ ಶುಭ ದಿನಾಂಕಗಳನ್ನು ನಿಮ್ಮ ಶುಭ ಮುಹೂರ್ತದ ಮೇಲೆ ನಿಮ್ಮ ಜ್ಯೋತಿಷಿಗಳು ನಿಗದಿಪಡಿಸುತ್ತಾರೆ.

ಪ್ರಶ್ನೆ 4: ಮದುವೆಯಾಗಲು ಅತ್ಯಂತ ಶುಭ ತಿಂಗಳು ಯಾವುದು?

ಉತ್ತರ: ಕೆಲವು ನಂಬಿಕೆಗಳ ಪ್ರಕಾರ ಜೂನ್ ತಿಂಗಳು ಮದುವೆಗೆ ಶುಭವಾಗಿದೆ.

Talk to Astrologer Chat with Astrologer