ಮಾಗಿ ಹುಣ್ಣಿಮೆ ವ್ರತ: ಗಂಗಾಜಲದಲ್ಲಿ ನೆಲೆಸುವ ವಿಷ್ಣು
ಸನಾತನ ಧರ್ಮದಲ್ಲಿ, ಮಾಗಿ ಮಾಸವು ಮಹತ್ವದ ಸ್ಥಾನವನ್ನು ಹೊಂದಿದೆ ಮತ್ತು ಮಾಸವೂ ಪ್ರಾರಂಭವಾಗಿದೆ. ಈ ಮಾಸದಲ್ಲಿ ದಾನ, ಪವಿತ್ರ ಗಂಗಾ ಸ್ನಾನ ಮತ್ತು ಪೂಜೆಯು ಪ್ರಾಧಾನ್ಯತೆಯನ್ನು ಪಡೆಯುತ್ತದೆ ಮತ್ತು ಅತ್ಯಂತ ಮಂಗಳಕರ ಮತ್ತು ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ಹುಣ್ಣಿಮೆಯ ದಿನಾಂಕವು ಸಹ ಸಾಕಷ್ಟು ಮಹತ್ವದ್ದಾಗಿದೆ ಎಂದು ಪರಿಗಣಿಸಲಾಗಿದೆ. ಮಾಘ ಮಾಸದ ಕೊನೆಯ ದಿನಾಂಕವನ್ನು ಮಾಘ ಪೂರ್ಣಿಮಾ ಅಥವಾ ಮಾಗಿ ಹುಣ್ಣಿಮೆ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ನಾವು ಪೂಜೆಯ ದೃಷ್ಟಿಯಿಂದ ನೋಡಿದಾಗ ಪ್ರತಿ ತಿಂಗಳ ಹುಣ್ಣಿಮೆಯನ್ನು ಪವಿತ್ರವೆಂದು ಪರಿಗಣಿಸಲಾಗಿದ್ದರೂ, ಮಾಘ ಮಾಸದ ಹುಣ್ಣಿಮೆಯು ಉನ್ನತ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿದೆ. ಈ ದಿನ, ವಿಷ್ಣುವು ಗಂಗಾಜಲದಲ್ಲಿ ನೆಲೆಸುತ್ತಾನೆ ಮತ್ತು ಪವಿತ್ರ ಗಂಗೆಯಲ್ಲಿ ಸ್ನಾನ ಮಾಡುವಾಗ ತನ್ನ ಭಕ್ತರನ್ನು ಆಶೀರ್ವದಿಸುತ್ತಾನೆ ಎಂದು ನಂಬಲಾಗಿದೆ. ಈ ಆಚರಣೆಯಲ್ಲಿ ತೊಡಗುವುದರಿಂದ ಎಲ್ಲಾ ಪಾಪಗಳು ತೊಲಗುತ್ತವೆ ಎಂದು ನಂಬಲಾಗಿದೆ. ಇದರೊಂದಿಗೆ, ಮಾಗಿ ಹುಣ್ಣಿಮೆಯ ದಿನದಂದು ದಾನ ಮಾಡುವುದರಿಂದ ವ್ಯಕ್ತಿಗೆ ಮಹಾಯಜ್ಞದಷ್ಟೇ ಲಾಭವಾಗುತ್ತದೆ.
ಮಾಘ ಮಾಸವನ್ನು ಮೊದಲು ಮಾಧ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಮಾಧದ ಅರ್ಥವು ಶ್ರೀಕೃಷ್ಣನ ರೂಪಗಳಲ್ಲಿ ಒಂದಕ್ಕೆ ನೇರವಾಗಿ ಸಂಬಂಧಿಸಿದೆ, ಇದನ್ನು ಮಾಧವ ಎಂದು ಕರೆಯಲಾಗುತ್ತದೆ. ಈ ಪುಣ್ಯ ಮಾಸದಲ್ಲಿ, ತೀರ್ಥಯಾತ್ರೆ, ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಮತ್ತು ಗಂಗಾ, ವಿಷ್ಣು ಮತ್ತು ಸೂರ್ಯನನ್ನು ಪೂಜಿಸುವುದು ಸಾಕಷ್ಟು ಮಂಗಳಕರವೆಂದು ತಿಳಿದುಬಂದಿದೆ.
ವಿಶ್ವದ ಅತ್ಯುತ್ತಮ ಜ್ಯೋತಿಷಿಗಳಿಗೆ ಕರೆ ಮಾಡಿ, ಮಾತನಾಡಿ ಮತ್ತು ನಿಮ್ಮ ಜೀವನದ ಮೇಲೆ ಮಾಗಿ ಹುಣ್ಣಿಮೆಯ ಪರಿಣಾಮವನ್ನು ತಿಳಿಯಿರಿ
ಮಾಗಿ ಹುಣ್ಣಿಮೆ 2023: ತಿಥಿ ಮತ್ತು ಮುಹೂರ್ತ
ಧರ್ಮಗ್ರಂಥಗಳ ಪ್ರಕಾರ, ಮಾಗಿ ಹುಣ್ಣಿಮೆಯ ದಿನದಂದು ಉಪವಾಸ ಮತ್ತು ಸ್ನಾನ ಮಾಡುವುದು ಅತ್ಯುನ್ನತವಾಗಿದೆ. ಈ ಬಾರಿ ಮಾಗಿ ಹುಣ್ಣಿಮೆಯ ದಾನ ಮತ್ತು ಸ್ನಾನವನ್ನು 5ನೇ ಫೆಬ್ರವರಿ 2023, ಭಾನುವಾರದಂದು ಮಾಡಲಾಗುತ್ತದೆ. ಈ ದಿನ ರವಿ ಪುಷ್ಯ ನಕ್ಷತ್ರವೂ ರೂಪುಗೊಳ್ಳುತ್ತದೆ.
ಮಾಗಿ ಹುಣ್ಣಿಮೆ ತಿಥಿ ಪ್ರಾರಂಭ: 4 ಫೆಬ್ರವರಿ 2023, ಶನಿವಾರ ರಾತ್ರಿ 09:33ರಿಂದ
ಮಾಗಿ ಹುಣ್ಣಿಮೆ ತಿಥಿ ಅಂತ್ಯ : 6 ಫೆಬ್ರವರಿ 2023, ಸೋಮವಾರ ಮಧ್ಯಾಹ್ನ 12:01ರ ತನಕ.
ಮಾಗಿ ಹುಣ್ಣಿಮೆ 2023 ಸೂರ್ಯೋದಯ: 5 ಫೆಬ್ರವರಿ ಬೆಳಿಗ್ಗೆ 07:07.
ಮಾಗಿ ಹುಣ್ಣಿಮೆ 2023 ಸೂರ್ಯಾಸ್ತ : 5 ಫೆಬ್ರವರಿ ಸಂಜೆ 06:03.
ಮಾಗಿ ಹುಣ್ಣಿಮೆ ಏಕೆ ಬಹಳ ಮುಖ್ಯ?
ಧಾರ್ಮಿಕ ನಂಬಿಕೆಗಳ ಪ್ರಕಾರ, ಮಾಗಿ ಹುಣ್ಣಿಮೆಯು ಮಾಘ ನಕ್ಷತ್ರದ ಹೆಸರಿನಿಂದ ಹುಟ್ಟಿಕೊಂಡಿದೆ, ಇದು 27 ನಕ್ಷತ್ರಗಳಲ್ಲಿ ಒಂದಾಗಿದೆ. ಪುರಾಣದ ಪ್ರಕಾರ ಮಾಘ ಮಾಸದಲ್ಲಿ ದೇವರು ಮತ್ತು ದೇವತೆಗಳು ಭೂಮಿಗೆ ಇಳಿದು ಮಾನವ ರೂಪಗಳನ್ನು ತೆಗೆದುಕೊಳ್ಳುತ್ತಾರೆ ಎಂದು ನಂಬಲಾಗಿದೆ. ಅವರು ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ, ಪೂಜೆ ಮಾಡುತ್ತಾರೆ ಮತ್ತು ತಮ್ಮ ಮಾನವ ರೂಪಗಳಲ್ಲಿ ದಾನ ಮಾಡುತ್ತಾರೆ. ಈ ದಿನ, ವಿಷ್ಣುವಿನ ಪೂಜೆಯನ್ನು ಮಾಡಲಾಗುತ್ತದೆ ಮತ್ತು ವಿಷ್ಣುವನ್ನು ಸಂಪೂರ್ಣ ಮತ್ತು ಸರಿಯಾದ ಆಚರಣೆಗಳೊಂದಿಗೆ ಪೂಜಿಸುವ ಭಕ್ತರು ಆತನ ಅಂತ್ಯವಿಲ್ಲದ ಅನುಗ್ರಹವನ್ನು ಪಡೆಯುತ್ತಾರೆ. ಪವಿತ್ರ ಗ್ರಂಥಗಳ ಪ್ರಕಾರ, ಈ ದಿನದಂದು ಪುಷ್ಯ ನಕ್ಷತ್ರವು ರೂಪುಗೊಂಡಾಗ, ಅದರ ಮಹತ್ವವು ಅನೇಕ ಪಟ್ಟು ಹೆಚ್ಚಾಗುತ್ತದೆ.
250+ ಪುಟಗಳ ವೈಯಕ್ತಿಕಗೊಳಿಸಿದ ಆಸ್ಟ್ರೋಸೇಜ್ ಬೃಹತ್ ಜಾತಕ: ನಿಮ್ಮ ಜೀವನದ ವಿವರವಾದ ಜ್ಯೋತಿಷ್ಯ -ವಿಶ್ಲೇಷಣೆ ಪಡೆಯಿರಿ
ಮಾಗಿ ಹುಣ್ಣಿಮೆ 2023: ಪೂಜಾ ವಿಧಾನ
ಮಾಗಿ ಹುಣ್ಣಿಮೆಯ ಮಹತ್ವವನ್ನು ತಿಳಿದ ನಂತರ, ಈ ದಿನದ ಸರಿಯಾದ ಪೂಜಾ ವಿಧಾನದ ಬಗ್ಗೆ ತಿಳಿಯೋಣ:
-
ಮಾಗಿ ಹುಣ್ಣಿಮೆಯ ದಿನದಂದು ಭಕ್ತನು ಬ್ರಹ್ಮ ಮುಹೂರ್ತದಲ್ಲಿ ಪವಿತ್ರ ಗಂಗಾ ಸ್ನಾನವನ್ನು ಮಾಡಬೇಕು. ನಿಮಗೆ ಗಂಗಾಸ್ನಾನ ಮಾಡಲು ಸಾಧ್ಯವಾಗದಿದ್ದರೆ, ನೀವು ಸ್ವಲ್ಪ ಗಂಗಾಜಲವನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡಬಹುದು.
-
ಸ್ನಾನದ ನಂತರ, ಈ ಮಂತ್ರವನ್ನು ಪಠಿಸಿ: ಓಂ ನಮೋ ನಾರಾಯಣಾಯ ಮತ್ತು ಈ ಮಂತ್ರವನ್ನು ಪಠಿಸುವಾಗ ಸೂರ್ಯನಿಗೆ ನೀರನ್ನು ಅರ್ಪಿಸಿ.
-
ಇದಾದ ನಂತರ ಸೂರ್ಯನಿಗೆ ಅಭಿಮುಖವಾಗಿ ನಿಂತು, ಎಳ್ಳನ್ನು ನೀರಿನಲ್ಲಿ ಹಾಕಿ, ತದನಂತರ ಅದನ್ನು ಸೂರ್ಯನಿಗೆ ಅರ್ಪಿಸಿ. ಇದನ್ನು ಅನುಸರಿಸಿ, ನಿಮ್ಮ ಪೂಜೆಯನ್ನು ಮುಂದುವರಿಸಿ.
-
ಭೋಜನ ಆಚರಣೆಗಾಗಿ, ಶ್ರೀ ಹರಿ ವಿಷ್ಣುವಿಗೆ ಚರಣಾಮೃತ, ಪಾನ, ಎಳ್ಳು, ಕುಂಕುಮ, ಹಣ್ಣುಗಳು, ಹೂವುಗಳು, ಪಂಚಗವ್ಯ, ವೀಳ್ಯದೆಲೆ, ದೂರ್ವಾ ಹುಲ್ಲು ಇತ್ಯಾದಿಗಳನ್ನು ಅರ್ಪಿಸಿ.
-
ಕೊನೆಯಲ್ಲಿ, ಆರತಿ ಮಾಡಿ ಮತ್ತು ನೀವು ಉದ್ದೇಶಪೂರ್ವಕವಾಗಿ ಅಥವಾ ಗೊತ್ತಿಲ್ಲದೇ ಮಾಡಬಹುದಾದ ಎಲ್ಲಾ ತಪ್ಪುಗಳಿಗಾಗಿ ಭಗವಂತ ವಿಷ್ಣುವಿನ ಕ್ಷಮೆ ಕೇಳಿ.
-
ಹುಣ್ಣಿಮೆಯ ದಿನದಂದು, ಚಂದ್ರನನ್ನು ಪೂಜಿಸುವುದರ ಜೊತೆಗೆ, ಸಂಪತ್ತನ್ನು ನೀಡುವ ಲಕ್ಷ್ಮಿ ದೇವಿಯನ್ನು ಸಹ ಪೂಜಿಸಬೇಕು; ಇದನ್ನು ಹೆಚ್ಚು ಫಲಪ್ರದವೆಂದು ಪರಿಗಣಿಸಲಾಗಿದೆ.
ಪವಿತ್ರ ಗಂಗಾ ಸ್ನಾನದ ಮಹತ್ವ
ನಂಬಿಕೆಗಳ ಪ್ರಕಾರ, ದೇವರುಗಳು ಭೂಮಿಯ ಮೇಲೆ ಇಳಿದು ಇಲ್ಲಿ ನೆಲೆಸುತ್ತಾರೆ ಎಂದು ಹೇಳಲಾಗುತ್ತದೆ. ಈ ದಿನ, ಭಗವಂತ ವಿಷ್ಣುವು ಪವಿತ್ರ ಗಂಗೆಯಲ್ಲಿ ಸ್ನಾನ ಮಾಡುತ್ತಾನೆ. ಅದಕ್ಕಾಗಿಯೇ ಮಾಗಿ ಹುಣ್ಣಿಮೆಯ ದಿನದಂದು ಗಂಗಾ ನದಿಯಲ್ಲಿ ಸ್ನಾನ ಮಾಡುವ ಮಹತ್ವವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಎಲ್ಲಾ ದೈಹಿಕ ಕಾಯಿಲೆಗಳಿಂದ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ. ಭಕ್ತನು ಸ್ವರ್ಗೀಯ ವಾಸಸ್ಥಾನದಲ್ಲಿ ಸ್ಥಾನವನ್ನು ಪಡೆಯುತ್ತಾನೆ ಮತ್ತು ಎಲ್ಲಾ ಪಾಪಗಳಿಂದ ಮುಕ್ತನಾಗುತ್ತಾನೆ.
ಮಾಗಿ ಹುಣ್ಣಿಮೆಯಂದು ಈ ವಸ್ತುಗಳನ್ನು ದಾನ ಮಾಡಿ
ಮಾಗಿ ಹುಣ್ಣಿಮೆಯ ದಿನ ಸ್ನಾನದ ನಂತರ ಧ್ಯಾನ ಮತ್ತು ಪೂಜೆಯನ್ನು ಮಾದುವಾಗ ಭಗವಂತ ವಿಷ್ಣುವು ಪ್ರಸನ್ನನಾಗುತ್ತಾನೆ. ಈ ದಿನದಂದು ದಾನ ಮಾಡುವುದು ಪ್ರಾಶಸ್ತ್ಯವನ್ನು ಪಡೆಯುತ್ತದೆ ಮತ್ತು ಈ ದಿನದಂದು ಹಸು, ಎಳ್ಳು, ಬೆಲ್ಲ ಮತ್ತು ಕಂಬಳಿ ದಾನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ಒಬ್ಬರು ಆಹಾರ, ಬಟ್ಟೆ, ತುಪ್ಪ, ಹಣ್ಣುಗಳು ಮತ್ತು ಲಾಡೂ (ಸಿಹಿ) ದಾನ ಮಾಡಬಹುದು. ಭಕ್ತರು ತಮ್ಮ ಕುಟುಂಬದವರು ಮತ್ತು ಆತ್ಮೀಯರೊಂದಿಗೆ ಸತ್ಯನಾರಾಯಣ ದೇವರ ಕಥೆಯನ್ನು ಆಲಿಸಬೇಕು.
ನಿಮ್ಮ ವೃತ್ತಿ ಮತ್ತು ಶಿಕ್ಷಣದಲ್ಲಿ ಯಶಸ್ಸನ್ನು ಪಡೆಯಲು: ನಿಮ್ಮ ಕಾಗ್ನಿಆಸ್ಟ್ರೋ ವರದಿಯನ್ನು ಈಗಲೇ ಆರ್ಡರ್ ಮಾಡಿ!
ಮಾಗಿ ಹುಣ್ಣಿಮೆಯಂದು ಈ ಕೆಲಸಗಳನ್ನು ಮಾಡಬೇಡಿ
ಮಾಗಿ ಹುಣ್ಣಿಮೆಯಂದು ನಿಮ್ಮ ಪೂಜೆಯ ಸಂಪೂರ್ಣ ಪ್ರಯೋಜನವನ್ನು ಪಡೆಯಲು ನೀವು ಬಯಸಿದರೆ, ಈ ದಿನದಂದು ನಿಷೇಧಿಸಲಾದ ವಿಷಯಗಳು ಅಥವಾ ಚಟುವಟಿಕೆಗಳ ಬಗ್ಗೆಯೂ ನೀವು ತಿಳಿದಿರಬೇಕು. ಆದ್ದರಿಂದ ಈ ಚಟುವಟಿಕೆಗಳನ್ನು ಗಮನಿಸೋಣ:
-
ಮಾಗಿ ಹುಣ್ಣಿಮೆಯ ಪವಿತ್ರ ದಿನದಂದು ಯಾವುದೇ ರೀತಿಯ ತಾಮಸಿಕ ಆಹಾರ ಮತ್ತು ಮದ್ಯವನ್ನು ಸೇವಿಸಬಾರದು. ಇದಲ್ಲದೆ, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ದೂರವಿರಬೇಕು.
-
ಹುಣ್ಣಿಮೆಯ ದಿನದಂದು, ಚಂದ್ರನ ಪ್ರಭಾವವು ಅತ್ಯಧಿಕವಾಗಿರುತ್ತದೆ ಮತ್ತು ಇದರಿಂದಾಗಿ ವ್ಯಕ್ತಿಯು ಭಾವನಾತ್ಮಕ ಮತ್ತು ಉತ್ಸುಕನಾಗುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ ಉದ್ರೇಕಗೊಳ್ಳುವುದನ್ನು ಮತ್ತು ಕೋಪಗೊಳ್ಳುವುದನ್ನು ತಪ್ಪಿಸಿ.
-
ನೀವು ಈ ಉಪವಾಸವನ್ನು ಆಚರಿಸಿದರೆ, ಯಾರೊಬ್ಬರ ಬಗ್ಗೆಯೂ ಗಾಸಿಪ್ ಮತ್ತು ಯಾವುದೇ ತಪ್ಪು ಮಾತುಗಳನ್ನು ಹೇಳುವುದನ್ನು ತಪ್ಪಿಸಿ ಏಕೆಂದರೆ ಆ ವ್ಯಕ್ತಿಯು ಪಾಪವನ್ನು ಮಾಡುತ್ತಾನೆ ಮತ್ತು ಅವನು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುವುದಿಲ್ಲ.
-
ಮಾಗಿ ಹುಣ್ಣಿಮೆಯ ಪುಣ್ಯ ದಿನದಂದು ಮನೆಯಲ್ಲಿ ಜಗಳವಾಡುವುದನ್ನು ತಪ್ಪಿಸಿ. ಒಬ್ಬರು ಉದ್ವಿಗ್ನತೆ ಮತ್ತು ಜಗಳದಲ್ಲಿ ತೊಡಗಿಸಿಕೊಂಡರೆ, ಅದು ಮನೆಯಲ್ಲಿ ನಕಾರಾತ್ಮಕತೆಯನ್ನು ತರುತ್ತದೆ.
ಮಾಗಿ ಹುಣ್ಣಿಮೆ ವ್ರತದ ಬಗ್ಗೆ ಪ್ರಾಚೀನ ಪುರಾಣ
ಪ್ರಾಚೀನ ದಂತಕಥೆಯ ಪ್ರಕಾರ, ಒಬ್ಬ ಬ್ರಾಹ್ಮಣನು ಕಾಂತಿಕಾ ನಗರದಲ್ಲಿ ವಾಸಿಸುತ್ತಿದ್ದನು ಮತ್ತು ಅವನ ಹೆಸರು ಧನೇಶ್ವರ. ದೇಣಿಗೆ ಕೇಳುತ್ತಾ ಜೀವನ ನಡೆಸುತ್ತಿದ್ದ ಆತನಿಗೆ ಮಕ್ಕಳಿರಲಿಲ್ಲ. ಒಂದು ದಿನ ಧನೇಶ್ವರನು ತನ್ನ ಹೆಂಡತಿಯೊಂದಿಗೆ ದೇಣಿಗೆ ಕೇಳುತ್ತಿದ್ದನು, ಜನರು ಅವನ ಹೆಂಡತಿಯನ್ನು ಬಂಜೆ ಎಂದು ಆರೋಪಿಸಿದರು ಮತ್ತು ಅವಳನ್ನು ಅಪಹಾಸ್ಯ ಮಾಡಲು ಪ್ರಾರಂಭಿಸಿದರು ಮತ್ತು ಅವರಿಗೆ ದೇಣಿಗೆ ನೀಡಲು ನಿರಾಕರಿಸಿದರು. ಈ ಘಟನೆಯಿಂದ ಧನೇಶ್ವರನ ಹೆಂಡತಿ ತುಂಬಾ ದುಃಖಿತಳಾಗಿದ್ದಳು, ಮತ್ತು ನಂತರ ಯಾರೋ 16 ದಿನಗಳ ಕಾಲ ಕಾಳಿ ದೇವಿಯನ್ನು ಪೂಜಿಸಲು ಸಲಹೆ ನೀಡಿದರು. ಬ್ರಾಹ್ಮಣ ದಂಪತಿಗಳು 16 ದಿನಗಳ ಕಾಲ ಸಂಪೂರ್ಣ ವಿಧಿವಿಧಾನಗಳೊಂದಿಗೆ ಕಾಳಿ ದೇವಿಯನ್ನು ಪೂಜಿಸಿದರು. ನಂತರ ಅವರ ಭಕ್ತಿಯಿಂದ ಪ್ರಭಾವಿತಳಾದ ಕಾಳಿ ದೇವಿಯು 16 ನೇ ದಿನದಲ್ಲಿ ಕಾಣಿಸಿಕೊಂಡಳು ಮತ್ತು ದಂಪತಿಗಳಿಗೆ ಮಕ್ಕಳಾಗುವಂತೆ ಆಶೀರ್ವದಿಸಿದಳು. ಕಾಳಿ ದೇವಿಯು ಹೆಂಡತಿಗೆ ಪ್ರತಿ ಹುಣ್ಣಿಮೆಯಂದು ದೀಪವನ್ನು ಬೆಳಗಿಸಲು ಹೇಳಿದಳು ಮತ್ತು ಪ್ರತಿ ಹುಣ್ಣಿಮೆಯಂದು ದೀಪಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಕೇಳಿಕೊಂಡಳು. ಮಾಗಿ ಹುಣ್ಣಿಮೆಯಂದು ವ್ರತವನ್ನು ಆಚರಿಸುವಂತೆ ಕಾಳಿ ದೇವಿಯು ದಂಪತಿಗಳಿಗೆ ಹೇಳಿದಳು.
ಬ್ರಾಹ್ಮಣ ದಂಪತಿಗಳು ಉಪವಾಸವನ್ನು ಆಚರಿಸಿದರು ಮತ್ತು ಮಾಗಿ ಹುಣ್ಣಿಮೆಯ ದಿನದಂದು ಕಾಳಿ ದೇವಿಯು ಹೇಳಿದಂತೆ ದೀಪಗಳನ್ನು ಬೆಳಗಿಸಿದರು. ಕಾಳಿ ದೇವಿಯ ಸೂಚನೆಗಳನ್ನು ಅನುಸರಿಸಿ, ಧನೇಶ್ವರನ ಹೆಂಡತಿ ಗರ್ಭಿಣಿಯಾಗಲು ಸಾಧ್ಯವಾಯಿತು ಮತ್ತು ನಂತರ ಅವಳು ಗಂಡು ಮಗುವಿಗೆ ಜನ್ಮ ನೀಡಿದಳು. ಅವರು ಆ ಮಗುವಿಗೆ ದೇವದಾಸ ಎಂದು ಹೆಸರಿಟ್ಟರು ಮತ್ತು ಅವನು ಅಲ್ಪಾಯುಷಿಯಾಗಿದ್ದನು. ದೇವದಾಸ ಬೆಳೆದಂತೆ, ಅವನ ಮಾವನೊಂದಿಗೆ ಕಾಶಿಗೆ ಅಧ್ಯಯನ ಮಾಡಲು ಕಳುಹಿಸಲಾಯಿತು. ಕಾಶಿಯಲ್ಲಿ ದೇವದಾಸ ಆಕಸ್ಮಿಕವಾಗಿ ವಿವಾಹವಾದರು ಮತ್ತು ಸ್ವಲ್ಪ ಸಮಯದ ನಂತರ ಸಾವು ಅವರ ಬಾಗಿಲಿಗೆ ಬಂದಿತು. ಆ ದಿನ ಸಾವು ಬಂದಾಗ ಅದು ಹುಣ್ಣಿಮೆಯಾಗಿದ್ದು ಮತ್ತು ದಂಪತಿಗಳು ತಮ್ಮ ಮಗನಿಗಾಗಿ ಹುಣ್ಣಿಮೆಯ ಉಪವಾಸವನ್ನು ಮಾಡಿದರು. ಆದ್ದರಿಂದ ಅವರ ಉಪವಾಸದಿಂದಾಗಿ, ಮರಣವು ಅವರ ಮಗನನ್ನು ತೆಗೆದುಕೊಂಡು ಹೋಗಲಾಗದೆ ಆತನಿಗೆ ಮರುಜೀವ ನೀಡಿತು. ಹುಣ್ಣಿಮೆಯ ದಿನದಂದು ಉಪವಾಸವನ್ನು ಆಚರಿಸುವುದರಿಂದ ಭಕ್ತರು ಎಲ್ಲಾ ರೀತಿಯ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುತ್ತಾರೆ ಎಂದು ನಾವು ತಿಳಿಯಬಹುದು.
ಮಾಗಿ ಹುಣ್ಣಿಮೆ 2023: ಪರಿಹಾರಗಳು
-
ಮಾಗಿ ಹುಣ್ಣಿಮೆಯ ದಿನದಂದು ತುಳಸಿ (ಪವಿತ್ರ ತುಳಸಿ) ನೆಡುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ತುಳಸಿಯನ್ನು ಪೂಜಿಸಿ ನಂತರ ತುಪ್ಪದ ದೀಪವನ್ನು ಹಚ್ಚಿ, ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ ಮತ್ತು ನಿಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.
-
ಮಾಗಿ ಹುಣ್ಣಿಮೆಯ ದಿನದಂದು ವಿಷ್ಣುವಿನ ಜೊತೆಗೆ ಲಕ್ಷ್ಮಿ ದೇವಿಯನ್ನು ಪೂಜಿಸಬೇಕು. ಪೂಜೆಯನ್ನು ಪ್ರಾರಂಭಿಸುವ ಮೊದಲು, ವೀಳ್ಯದೆಲೆ (ಸುಪಾರಿ) ಮೇಲೆ ರಕ್ಷಾ ಸೂತ್ರವನ್ನು ಕಟ್ಟಿಕೊಳ್ಳಿ, ನಂತರ ಅದರ ಮೇಲೆ ಶ್ರೀಗಂಧವನ್ನು ಲೇಪಿಸಿ ನಂತರ ಅಕ್ಕಿ (ಅಕ್ಷತೆ) ಸೇರಿಸಿ. ಪೂಜೆಯ ನಂತರ ವೀಳ್ಯದೆಲೆಯನ್ನು ನಿಮ್ಮ ಕಪಾಟಿನಲ್ಲಿ ಇರಿಸಿ, ಮತ್ತು ಹೀಗೆ ಮಾಡುವುದರಿಂದ ನಿಮಗೆ ಯಾವುದೇ ಆರ್ಥಿಕ ಕೊರತೆ ಎದುರಾಗುವುದಿಲ್ಲ.
-
ಮಾಗಿ ಹುಣ್ಣಿಮೆಯ ದಿನದಂದು ಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆಯಲು ಶ್ರೀ ಸೂಕ್ತದ ಕನಕಧಾರಾ ಸ್ತೋತ್ರವನ್ನು ಪಠಿಸಬೇಕು. ಹೀಗೆ ಮಾಡುವುದರಿಂದ ಆರಾಧಕನಿಗೆ ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದವನ್ನು ನೀಡಲಾಗುತ್ತದೆ.
-
ಮಾಗಿ ಹುಣ್ಣಿಮೆಯ ರಾತ್ರಿ, ಸಕ್ಕರೆ ಮಿಠಾಯಿಯಲ್ಲಿ (ಮಿಶ್ರಿ) ಗಂಗಾಜಲವನ್ನು ಲಕ್ಷ್ಮಿ ದೇವಿಗೆ ಅರ್ಪಿಸಿ ಮತ್ತು ಚಂದ್ರನಿಗೆ ಖೀರು ಅನ್ನು ಅರ್ಪಿಸಿ. ನೀವು ಲಕ್ಷ್ಮಿ ದೇವಿಗೆ ಖೀರನ್ನು ಸಹ ಅರ್ಪಿಸಬಹುದು. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ.
ರತ್ನಗಳು, ಯಂತ್ರ, ಇತ್ಯಾದಿ ಸೇರಿದಂತೆ ಜ್ಯೋತಿಷ್ಯ ಪರಿಹಾರಗಳಿಗಾಗಿ, ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್
ಈ ಮಾಗಿ ಹುಣ್ಣಿಮೆಯು ನಿಮ್ಮೆಲ್ಲರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಾವು ಭಾವಿಸುತ್ತೇವೆ; ಆಸ್ಟ್ರೋಸೇಜ್ ಜೊತೆಗಿರುವುದಕ್ಕಾಗಿ ಧನ್ಯವಾದಗಳು!
Astrological services for accurate answers and better feature
Astrological remedies to get rid of your problems

AstroSage on MobileAll Mobile Apps
- Saturn Transit 2025: Cosmic Shift Of Shani & The Ripple Effect On Your Destiny!
- Shani Sade Sati: Which Phase Really Tests You The Most?
- Dual Transit Of Mercury In June: A Beginning Of The Golden Period
- Sun Transit In Taurus: Gains & Challenges For All 12 Zodiac Signs!
- Multiple Transits This Week: Major Planetary Movements Blessing 3 Zodiacs
- Lakshmi Narayan Yoga 2025: A Prosperous Time For 4 Zodiacs
- Jyeshtha Month 2025: Ekadashi, Ganga Dussehra, & More Festivities!
- Malavya Rajyoga 2025: Venus Planet Forming A Powerful Yoga After A Year
- Rahu Transit In Aquarius: Big Shifts In Technology & Society!
- Bada Mangal 2025: Bring These Items At Home & Fulfill Your Desires
- सूर्य का वृषभ राशि में गोचर इन 5 राशियों के लिए रहेगा बेहद शुभ, धन लाभ और वेतन वृद्धि के बनेंगे योग!
- ज्येष्ठ मास में मनाए जाएंगे निर्जला एकादशी, गंगा दशहरा जैसे बड़े त्योहार, जानें दान-स्नान का महत्व!
- राहु के कुंभ राशि में गोचर करने से खुल जाएगा इन राशियों का भाग्य, देखें शेयर मार्केट का हाल
- गुरु, राहु-केतु जैसे बड़े ग्रह करेंगे इस सप्ताह राशि परिवर्तन, शुभ-अशुभ कैसे देंगे आपको परिणाम? जानें
- बुद्ध पूर्णिमा पर इन शुभ योगों में करें भगवान बुद्ध की पूजा, करियर-व्यापार से हर समस्या होगी दूर!
- इस मदर्स डे 2025 पर अपनी मां को राशि अनुसार दें तोहफा, खुश हो जाएगा उनका दिल
- टैरो साप्ताहिक राशिफल (11 मई से 17 मई, 2025): इन 5 राशि वालों की होने वाली है बल्ले-बल्ले!
- अंक ज्योतिष साप्ताहिक राशिफल: 11 मई से 17 मई, 2025
- बृहस्पति का मिथुन राशि में गोचर: जानें राशि सहित देश-दुनिया पर इसका प्रभाव
- मोहिनी एकादशी पर राशि अनुसार करें उपाय, मिट जाएगा जिंदगी का हर कष्ट
- Horoscope 2025
- Rashifal 2025
- Calendar 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ராசி பலன் 2025
- రాశిఫలాలు 2025
- ರಾಶಿಭವಿಷ್ಯ 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025