ಮಾಗಿ ಹುಣ್ಣಿಮೆ ವ್ರತ: ಗಂಗಾಜಲದಲ್ಲಿ ನೆಲೆಸುವ ವಿಷ್ಣು

Author: Sudha Bangera | Updated Tue, 31 Jan 2023 10:30 AM IST

ಸನಾತನ ಧರ್ಮದಲ್ಲಿ, ಮಾಗಿ ಮಾಸವು ಮಹತ್ವದ ಸ್ಥಾನವನ್ನು ಹೊಂದಿದೆ ಮತ್ತು ಮಾಸವೂ ಪ್ರಾರಂಭವಾಗಿದೆ. ಈ ಮಾಸದಲ್ಲಿ ದಾನ, ಪವಿತ್ರ ಗಂಗಾ ಸ್ನಾನ ಮತ್ತು ಪೂಜೆಯು ಪ್ರಾಧಾನ್ಯತೆಯನ್ನು ಪಡೆಯುತ್ತದೆ ಮತ್ತು ಅತ್ಯಂತ ಮಂಗಳಕರ ಮತ್ತು ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ಹುಣ್ಣಿಮೆಯ ದಿನಾಂಕವು ಸಹ ಸಾಕಷ್ಟು ಮಹತ್ವದ್ದಾಗಿದೆ ಎಂದು ಪರಿಗಣಿಸಲಾಗಿದೆ. ಮಾಘ ಮಾಸದ ಕೊನೆಯ ದಿನಾಂಕವನ್ನು ಮಾಘ ಪೂರ್ಣಿಮಾ ಅಥವಾ ಮಾಗಿ ಹುಣ್ಣಿಮೆ ಎಂಬ ಹೆಸರಿನಿಂದ ಕರೆಯಲಾಗುತ್ತದೆ.


ನಾವು ಪೂಜೆಯ ದೃಷ್ಟಿಯಿಂದ ನೋಡಿದಾಗ ಪ್ರತಿ ತಿಂಗಳ ಹುಣ್ಣಿಮೆಯನ್ನು ಪವಿತ್ರವೆಂದು ಪರಿಗಣಿಸಲಾಗಿದ್ದರೂ, ಮಾಘ ಮಾಸದ ಹುಣ್ಣಿಮೆಯು ಉನ್ನತ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿದೆ. ಈ ದಿನ, ವಿಷ್ಣುವು ಗಂಗಾಜಲದಲ್ಲಿ ನೆಲೆಸುತ್ತಾನೆ ಮತ್ತು ಪವಿತ್ರ ಗಂಗೆಯಲ್ಲಿ ಸ್ನಾನ ಮಾಡುವಾಗ ತನ್ನ ಭಕ್ತರನ್ನು ಆಶೀರ್ವದಿಸುತ್ತಾನೆ ಎಂದು ನಂಬಲಾಗಿದೆ. ಈ ಆಚರಣೆಯಲ್ಲಿ ತೊಡಗುವುದರಿಂದ ಎಲ್ಲಾ ಪಾಪಗಳು ತೊಲಗುತ್ತವೆ ಎಂದು ನಂಬಲಾಗಿದೆ. ಇದರೊಂದಿಗೆ, ಮಾಗಿ ಹುಣ್ಣಿಮೆಯ ದಿನದಂದು ದಾನ ಮಾಡುವುದರಿಂದ ವ್ಯಕ್ತಿಗೆ ಮಹಾಯಜ್ಞದಷ್ಟೇ ಲಾಭವಾಗುತ್ತದೆ.

ಮಾಘ ಮಾಸವನ್ನು ಮೊದಲು ಮಾಧ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಮಾಧದ ಅರ್ಥವು ಶ್ರೀಕೃಷ್ಣನ ರೂಪಗಳಲ್ಲಿ ಒಂದಕ್ಕೆ ನೇರವಾಗಿ ಸಂಬಂಧಿಸಿದೆ, ಇದನ್ನು ಮಾಧವ ಎಂದು ಕರೆಯಲಾಗುತ್ತದೆ. ಈ ಪುಣ್ಯ ಮಾಸದಲ್ಲಿ, ತೀರ್ಥಯಾತ್ರೆ, ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಮತ್ತು ಗಂಗಾ, ವಿಷ್ಣು ಮತ್ತು ಸೂರ್ಯನನ್ನು ಪೂಜಿಸುವುದು ಸಾಕಷ್ಟು ಮಂಗಳಕರವೆಂದು ತಿಳಿದುಬಂದಿದೆ.

ವಿಶ್ವದ ಅತ್ಯುತ್ತಮ ಜ್ಯೋತಿಷಿಗಳಿಗೆ ಕರೆ ಮಾಡಿ, ಮಾತನಾಡಿ ಮತ್ತು ನಿಮ್ಮ ಜೀವನದ ಮೇಲೆ ಮಾಗಿ ಹುಣ್ಣಿಮೆಯ ಪರಿಣಾಮವನ್ನು ತಿಳಿಯಿರಿ

ಮಾಗಿ ಹುಣ್ಣಿಮೆ 2023: ತಿಥಿ ಮತ್ತು ಮುಹೂರ್ತ

ಧರ್ಮಗ್ರಂಥಗಳ ಪ್ರಕಾರ, ಮಾಗಿ ಹುಣ್ಣಿಮೆಯ ದಿನದಂದು ಉಪವಾಸ ಮತ್ತು ಸ್ನಾನ ಮಾಡುವುದು ಅತ್ಯುನ್ನತವಾಗಿದೆ. ಈ ಬಾರಿ ಮಾಗಿ ಹುಣ್ಣಿಮೆಯ ದಾನ ಮತ್ತು ಸ್ನಾನವನ್ನು 5ನೇ ಫೆಬ್ರವರಿ 2023, ಭಾನುವಾರದಂದು ಮಾಡಲಾಗುತ್ತದೆ. ಈ ದಿನ ರವಿ ಪುಷ್ಯ ನಕ್ಷತ್ರವೂ ರೂಪುಗೊಳ್ಳುತ್ತದೆ.

ಮಾಗಿ ಹುಣ್ಣಿಮೆ ತಿಥಿ ಪ್ರಾರಂಭ: 4 ಫೆಬ್ರವರಿ 2023, ಶನಿವಾರ ರಾತ್ರಿ 09:33ರಿಂದ

ಮಾಗಿ ಹುಣ್ಣಿಮೆ ತಿಥಿ ಅಂತ್ಯ : 6 ಫೆಬ್ರವರಿ 2023, ಸೋಮವಾರ ಮಧ್ಯಾಹ್ನ 12:01ರ ತನಕ.

ಮಾಗಿ ಹುಣ್ಣಿಮೆ 2023 ಸೂರ್ಯೋದಯ: 5 ಫೆಬ್ರವರಿ ಬೆಳಿಗ್ಗೆ 07:07.

ಮಾಗಿ ಹುಣ್ಣಿಮೆ 2023 ಸೂರ್ಯಾಸ್ತ : 5 ಫೆಬ್ರವರಿ ಸಂಜೆ 06:03.

ಮಾಗಿ ಹುಣ್ಣಿಮೆ ಏಕೆ ಬಹಳ ಮುಖ್ಯ?

ಧಾರ್ಮಿಕ ನಂಬಿಕೆಗಳ ಪ್ರಕಾರ, ಮಾಗಿ ಹುಣ್ಣಿಮೆಯು ಮಾಘ ನಕ್ಷತ್ರದ ಹೆಸರಿನಿಂದ ಹುಟ್ಟಿಕೊಂಡಿದೆ, ಇದು 27 ನಕ್ಷತ್ರಗಳಲ್ಲಿ ಒಂದಾಗಿದೆ. ಪುರಾಣದ ಪ್ರಕಾರ ಮಾಘ ಮಾಸದಲ್ಲಿ ದೇವರು ಮತ್ತು ದೇವತೆಗಳು ಭೂಮಿಗೆ ಇಳಿದು ಮಾನವ ರೂಪಗಳನ್ನು ತೆಗೆದುಕೊಳ್ಳುತ್ತಾರೆ ಎಂದು ನಂಬಲಾಗಿದೆ. ಅವರು ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ, ಪೂಜೆ ಮಾಡುತ್ತಾರೆ ಮತ್ತು ತಮ್ಮ ಮಾನವ ರೂಪಗಳಲ್ಲಿ ದಾನ ಮಾಡುತ್ತಾರೆ. ಈ ದಿನ, ವಿಷ್ಣುವಿನ ಪೂಜೆಯನ್ನು ಮಾಡಲಾಗುತ್ತದೆ ಮತ್ತು ವಿಷ್ಣುವನ್ನು ಸಂಪೂರ್ಣ ಮತ್ತು ಸರಿಯಾದ ಆಚರಣೆಗಳೊಂದಿಗೆ ಪೂಜಿಸುವ ಭಕ್ತರು ಆತನ ಅಂತ್ಯವಿಲ್ಲದ ಅನುಗ್ರಹವನ್ನು ಪಡೆಯುತ್ತಾರೆ. ಪವಿತ್ರ ಗ್ರಂಥಗಳ ಪ್ರಕಾರ, ಈ ದಿನದಂದು ಪುಷ್ಯ ನಕ್ಷತ್ರವು ರೂಪುಗೊಂಡಾಗ, ಅದರ ಮಹತ್ವವು ಅನೇಕ ಪಟ್ಟು ಹೆಚ್ಚಾಗುತ್ತದೆ.

250+ ಪುಟಗಳ ವೈಯಕ್ತಿಕಗೊಳಿಸಿದ ಆಸ್ಟ್ರೋಸೇಜ್ ಬೃಹತ್ ಜಾತಕ: ನಿಮ್ಮ ಜೀವನದ ವಿವರವಾದ ಜ್ಯೋತಿಷ್ಯ -ವಿಶ್ಲೇಷಣೆ ಪಡೆಯಿರಿ

ಮಾಗಿ ಹುಣ್ಣಿಮೆ 2023: ಪೂಜಾ ವಿಧಾನ

ಮಾಗಿ ಹುಣ್ಣಿಮೆಯ ಮಹತ್ವವನ್ನು ತಿಳಿದ ನಂತರ, ಈ ದಿನದ ಸರಿಯಾದ ಪೂಜಾ ವಿಧಾನದ ಬಗ್ಗೆ ತಿಳಿಯೋಣ:

ಪವಿತ್ರ ಗಂಗಾ ಸ್ನಾನದ ಮಹತ್ವ

ನಂಬಿಕೆಗಳ ಪ್ರಕಾರ, ದೇವರುಗಳು ಭೂಮಿಯ ಮೇಲೆ ಇಳಿದು ಇಲ್ಲಿ ನೆಲೆಸುತ್ತಾರೆ ಎಂದು ಹೇಳಲಾಗುತ್ತದೆ. ಈ ದಿನ, ಭಗವಂತ ವಿಷ್ಣುವು ಪವಿತ್ರ ಗಂಗೆಯಲ್ಲಿ ಸ್ನಾನ ಮಾಡುತ್ತಾನೆ. ಅದಕ್ಕಾಗಿಯೇ ಮಾಗಿ ಹುಣ್ಣಿಮೆಯ ದಿನದಂದು ಗಂಗಾ ನದಿಯಲ್ಲಿ ಸ್ನಾನ ಮಾಡುವ ಮಹತ್ವವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಎಲ್ಲಾ ದೈಹಿಕ ಕಾಯಿಲೆಗಳಿಂದ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ. ಭಕ್ತನು ಸ್ವರ್ಗೀಯ ವಾಸಸ್ಥಾನದಲ್ಲಿ ಸ್ಥಾನವನ್ನು ಪಡೆಯುತ್ತಾನೆ ಮತ್ತು ಎಲ್ಲಾ ಪಾಪಗಳಿಂದ ಮುಕ್ತನಾಗುತ್ತಾನೆ.

ಮಾಗಿ ಹುಣ್ಣಿಮೆಯಂದು ಈ ವಸ್ತುಗಳನ್ನು ದಾನ ಮಾಡಿ

ಮಾಗಿ ಹುಣ್ಣಿಮೆಯ ದಿನ ಸ್ನಾನದ ನಂತರ ಧ್ಯಾನ ಮತ್ತು ಪೂಜೆಯನ್ನು ಮಾದುವಾಗ ಭಗವಂತ ವಿಷ್ಣುವು ಪ್ರಸನ್ನನಾಗುತ್ತಾನೆ. ಈ ದಿನದಂದು ದಾನ ಮಾಡುವುದು ಪ್ರಾಶಸ್ತ್ಯವನ್ನು ಪಡೆಯುತ್ತದೆ ಮತ್ತು ಈ ದಿನದಂದು ಹಸು, ಎಳ್ಳು, ಬೆಲ್ಲ ಮತ್ತು ಕಂಬಳಿ ದಾನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ಒಬ್ಬರು ಆಹಾರ, ಬಟ್ಟೆ, ತುಪ್ಪ, ಹಣ್ಣುಗಳು ಮತ್ತು ಲಾಡೂ (ಸಿಹಿ) ದಾನ ಮಾಡಬಹುದು. ಭಕ್ತರು ತಮ್ಮ ಕುಟುಂಬದವರು ಮತ್ತು ಆತ್ಮೀಯರೊಂದಿಗೆ ಸತ್ಯನಾರಾಯಣ ದೇವರ ಕಥೆಯನ್ನು ಆಲಿಸಬೇಕು.

ನಿಮ್ಮ ವೃತ್ತಿ ಮತ್ತು ಶಿಕ್ಷಣದಲ್ಲಿ ಯಶಸ್ಸನ್ನು ಪಡೆಯಲು: ನಿಮ್ಮ ಕಾಗ್ನಿಆಸ್ಟ್ರೋ ವರದಿಯನ್ನು ಈಗಲೇ ಆರ್ಡರ್ ಮಾಡಿ!

ಮಾಗಿ ಹುಣ್ಣಿಮೆಯಂದು ಈ ಕೆಲಸಗಳನ್ನು ಮಾಡಬೇಡಿ

ಮಾಗಿ ಹುಣ್ಣಿಮೆಯಂದು ನಿಮ್ಮ ಪೂಜೆಯ ಸಂಪೂರ್ಣ ಪ್ರಯೋಜನವನ್ನು ಪಡೆಯಲು ನೀವು ಬಯಸಿದರೆ, ಈ ದಿನದಂದು ನಿಷೇಧಿಸಲಾದ ವಿಷಯಗಳು ಅಥವಾ ಚಟುವಟಿಕೆಗಳ ಬಗ್ಗೆಯೂ ನೀವು ತಿಳಿದಿರಬೇಕು. ಆದ್ದರಿಂದ ಈ ಚಟುವಟಿಕೆಗಳನ್ನು ಗಮನಿಸೋಣ:

ಮಾಗಿ ಹುಣ್ಣಿಮೆ ವ್ರತದ ಬಗ್ಗೆ ಪ್ರಾಚೀನ ಪುರಾಣ

ಪ್ರಾಚೀನ ದಂತಕಥೆಯ ಪ್ರಕಾರ, ಒಬ್ಬ ಬ್ರಾಹ್ಮಣನು ಕಾಂತಿಕಾ ನಗರದಲ್ಲಿ ವಾಸಿಸುತ್ತಿದ್ದನು ಮತ್ತು ಅವನ ಹೆಸರು ಧನೇಶ್ವರ. ದೇಣಿಗೆ ಕೇಳುತ್ತಾ ಜೀವನ ನಡೆಸುತ್ತಿದ್ದ ಆತನಿಗೆ ಮಕ್ಕಳಿರಲಿಲ್ಲ. ಒಂದು ದಿನ ಧನೇಶ್ವರನು ತನ್ನ ಹೆಂಡತಿಯೊಂದಿಗೆ ದೇಣಿಗೆ ಕೇಳುತ್ತಿದ್ದನು, ಜನರು ಅವನ ಹೆಂಡತಿಯನ್ನು ಬಂಜೆ ಎಂದು ಆರೋಪಿಸಿದರು ಮತ್ತು ಅವಳನ್ನು ಅಪಹಾಸ್ಯ ಮಾಡಲು ಪ್ರಾರಂಭಿಸಿದರು ಮತ್ತು ಅವರಿಗೆ ದೇಣಿಗೆ ನೀಡಲು ನಿರಾಕರಿಸಿದರು. ಈ ಘಟನೆಯಿಂದ ಧನೇಶ್ವರನ ಹೆಂಡತಿ ತುಂಬಾ ದುಃಖಿತಳಾಗಿದ್ದಳು, ಮತ್ತು ನಂತರ ಯಾರೋ 16 ದಿನಗಳ ಕಾಲ ಕಾಳಿ ದೇವಿಯನ್ನು ಪೂಜಿಸಲು ಸಲಹೆ ನೀಡಿದರು. ಬ್ರಾಹ್ಮಣ ದಂಪತಿಗಳು 16 ದಿನಗಳ ಕಾಲ ಸಂಪೂರ್ಣ ವಿಧಿವಿಧಾನಗಳೊಂದಿಗೆ ಕಾಳಿ ದೇವಿಯನ್ನು ಪೂಜಿಸಿದರು. ನಂತರ ಅವರ ಭಕ್ತಿಯಿಂದ ಪ್ರಭಾವಿತಳಾದ ಕಾಳಿ ದೇವಿಯು 16 ನೇ ದಿನದಲ್ಲಿ ಕಾಣಿಸಿಕೊಂಡಳು ಮತ್ತು ದಂಪತಿಗಳಿಗೆ ಮಕ್ಕಳಾಗುವಂತೆ ಆಶೀರ್ವದಿಸಿದಳು. ಕಾಳಿ ದೇವಿಯು ಹೆಂಡತಿಗೆ ಪ್ರತಿ ಹುಣ್ಣಿಮೆಯಂದು ದೀಪವನ್ನು ಬೆಳಗಿಸಲು ಹೇಳಿದಳು ಮತ್ತು ಪ್ರತಿ ಹುಣ್ಣಿಮೆಯಂದು ದೀಪಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಕೇಳಿಕೊಂಡಳು. ಮಾಗಿ ಹುಣ್ಣಿಮೆಯಂದು ವ್ರತವನ್ನು ಆಚರಿಸುವಂತೆ ಕಾಳಿ ದೇವಿಯು ದಂಪತಿಗಳಿಗೆ ಹೇಳಿದಳು.

ಬ್ರಾಹ್ಮಣ ದಂಪತಿಗಳು ಉಪವಾಸವನ್ನು ಆಚರಿಸಿದರು ಮತ್ತು ಮಾಗಿ ಹುಣ್ಣಿಮೆಯ ದಿನದಂದು ಕಾಳಿ ದೇವಿಯು ಹೇಳಿದಂತೆ ದೀಪಗಳನ್ನು ಬೆಳಗಿಸಿದರು. ಕಾಳಿ ದೇವಿಯ ಸೂಚನೆಗಳನ್ನು ಅನುಸರಿಸಿ, ಧನೇಶ್ವರನ ಹೆಂಡತಿ ಗರ್ಭಿಣಿಯಾಗಲು ಸಾಧ್ಯವಾಯಿತು ಮತ್ತು ನಂತರ ಅವಳು ಗಂಡು ಮಗುವಿಗೆ ಜನ್ಮ ನೀಡಿದಳು. ಅವರು ಆ ಮಗುವಿಗೆ ದೇವದಾಸ ಎಂದು ಹೆಸರಿಟ್ಟರು ಮತ್ತು ಅವನು ಅಲ್ಪಾಯುಷಿಯಾಗಿದ್ದನು. ದೇವದಾಸ ಬೆಳೆದಂತೆ, ಅವನ ಮಾವನೊಂದಿಗೆ ಕಾಶಿಗೆ ಅಧ್ಯಯನ ಮಾಡಲು ಕಳುಹಿಸಲಾಯಿತು. ಕಾಶಿಯಲ್ಲಿ ದೇವದಾಸ ಆಕಸ್ಮಿಕವಾಗಿ ವಿವಾಹವಾದರು ಮತ್ತು ಸ್ವಲ್ಪ ಸಮಯದ ನಂತರ ಸಾವು ಅವರ ಬಾಗಿಲಿಗೆ ಬಂದಿತು. ಆ ದಿನ ಸಾವು ಬಂದಾಗ ಅದು ಹುಣ್ಣಿಮೆಯಾಗಿದ್ದು ಮತ್ತು ದಂಪತಿಗಳು ತಮ್ಮ ಮಗನಿಗಾಗಿ ಹುಣ್ಣಿಮೆಯ ಉಪವಾಸವನ್ನು ಮಾಡಿದರು. ಆದ್ದರಿಂದ ಅವರ ಉಪವಾಸದಿಂದಾಗಿ, ಮರಣವು ಅವರ ಮಗನನ್ನು ತೆಗೆದುಕೊಂಡು ಹೋಗಲಾಗದೆ ಆತನಿಗೆ ಮರುಜೀವ ನೀಡಿತು. ಹುಣ್ಣಿಮೆಯ ದಿನದಂದು ಉಪವಾಸವನ್ನು ಆಚರಿಸುವುದರಿಂದ ಭಕ್ತರು ಎಲ್ಲಾ ರೀತಿಯ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುತ್ತಾರೆ ಎಂದು ನಾವು ತಿಳಿಯಬಹುದು.

ಮಾಗಿ ಹುಣ್ಣಿಮೆ 2023: ಪರಿಹಾರಗಳು

ರತ್ನಗಳು, ಯಂತ್ರ, ಇತ್ಯಾದಿ ಸೇರಿದಂತೆ ಜ್ಯೋತಿಷ್ಯ ಪರಿಹಾರಗಳಿಗಾಗಿ, ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

ಈ ಮಾಗಿ ಹುಣ್ಣಿಮೆಯು ನಿಮ್ಮೆಲ್ಲರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಾವು ಭಾವಿಸುತ್ತೇವೆ; ಆಸ್ಟ್ರೋಸೇಜ್ ಜೊತೆಗಿರುವುದಕ್ಕಾಗಿ ಧನ್ಯವಾದಗಳು!

Talk to Astrologer Chat with Astrologer