ವೃಷಭ ರಾಶಿ ಭವಿಷ್ಯ 2022 - Taurus Horoscope 2022 in Kannada

ವೃಷಭ ರಾಶಿ ಭವಿಷ್ಯ 2022 ವೈದಿಕ ಜ್ಯೋತಿಷ್ಯವನ್ನು ಆಧರಿಸಿದೆ. ಇದು ವೃಷಭ ರಾಶಿಚಕ್ರದ ಸ್ಥಳೀಯರಿಗೆ ಮುಂಬರುವ ವರ್ಷದ ನಿಖರವಾದ ಭವಿಷ್ಯವಾಣಿಯನ್ನು ನೀಡುತ್ತದೆ. ಅನೇಕ ಮೂಲಗಳಿಂದ ಗಳಿಸುತ್ತಿರುವ ಈ ರಾಶಿಚಕ್ರದ ಜನರಿಗೆ ಈ ವರ್ಷವೂ ಅತ್ಯಂತ ಅದ್ಭುತವಾಗಿರಲಿದೆ. ಅಂತಹ ಪರಿಸ್ಥಿತಿಯಲ್ಲಿ ಸ್ಥಳೀಯರ ವೈಯಕ್ತಿಕ ಜೀವನವು ಸಂತೋಷದಿಂದ ತುಂಬಿರುವ ಪ್ರಬಲ ಸಾಧ್ಯತೆ ಇದೆ. ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ. ಇದರೊಂದಿಗೆ, ಕೆಲಸ ಅಥವಾ ಉದ್ಯೋಗದಲ್ಲಿ ತೊಡಗಿರುವ ವೃಷಭ ರಾಶಿಚಕ್ರದ ಸ್ಥಳೀಯರಿಗೆ ವರ್ಷ 2022 ಅತ್ಯಂತ ಶುಭ ಮತ್ತು ಫಲಪ್ರದವಾಗಲಿದೆ. ಈ ಸಮಯದಲ್ಲಿ ನೀವು ಉನ್ನತ ಸ್ಥಾನ ಮತ್ತು ವೇತನದಲ್ಲಿ ಹೆಚ್ಚಳವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ವೃಷಭ ರಾಶಿ ಭವಿಷ್ಯ 2022 (Taurus Horoscope 2022) ರ ಪ್ರಕಾರ, ನೀವು ತಡೆಹಿಡಿದ ಎಲ್ಲಾ ವ್ಯಾಪಾರ ಉದ್ಯಮಗಳು ಮತ್ತೆ ಸಕ್ರಿಯವಾಗಬಹುದು. ನಿಮ್ಮ ಜೀವನದಲ್ಲಿ ನೀವು ಯಶಸ್ವಿಯಾಗುವ ಸಂಕೇತ ಇದು.

Taurus Horoscope 2022 In Kannada

ಈ ವರ್ಷ 13 ಏಪ್ರಿಲ್ ರಂದು, ಗುರು ಗ್ರಹವು ಮೀನ ರಾಶಿಯಲ್ಲಿ ಹನ್ನೊಂದನೇ ಮನೆಗೆ ಮತ್ತು 12 ಏಪ್ರಿಲ್ ರಂದು ಹನ್ನೆರಡನೇ ಮನೆಗೆ ಗೋಚರಿಸುತ್ತದೆ. 29 ಏಪ್ರಿಲ್ ರಂದು ಶನಿ ಗ್ರಹವು ಕುಂಭ ರಾಶಿಯಲ್ಲಿ ಹತ್ತನೇ ಮನೆಗೆ ಪ್ರವೇಶಿಸುತ್ತದೆ ಮತ್ತು 12 ಜೂಲೈ ರಂದು ವಕ್ರನಾಗಿ ಒಂಬತ್ತನೇ ಮನೆಯಲ್ಲಿ ಮೀನ ರಾಶಿಗೆ ಗೋಚರಿಸುತ್ತದೆ.

Read Vrushabha Rashi Bhavishya 2023here

ವೃಷಭ ರಾಶಿ ಭವಿಷ್ಯ 2022 ರ ಪ್ರಕಾರ, ಕಳೆದ ಕೆಲವು ವರ್ಷಗಳಿಗಿಂತ ಈ ವರ್ಷವು ಉತ್ತಮವೆಂದು ಸಾಬೀತಾಗಲಿದೆ. ಮೀನ ರಾಶಿಯಲ್ಲಿ ಗುರು ಗ್ರಹದ ಪ್ರವೇಶದಿಂದಾಗಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಸರಿಯಾದ ಮತ್ತು ನಿಖರವಾದ ಪರಿಹಾರವನ್ನು ನೀವು ಪಡೆಯುತ್ತೀರಿ. ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ನಿರ್ಧಾರ ಮತ್ತು ಯೋಚಿಸುವ ಭಾವನೆ ಸುಧಾರಿಸುತ್ತದೆ. ಆದಾಗ್ಯೂ, ಕುಂಭ ರಾಶಿಯ ಮನೆಯಲ್ಲಿ ಶನಿಯ ಉಪಸ್ಥಿತಿಯು ಕೆಲವು ಒತ್ತಡವನ್ನು ತರಬಹುದು. ಈ ವರ್ಷ ನಿಮ್ಮ ರಾಶಿಯಲ್ಲಿ ಮಂಗಳ ಗ್ರಹದ ಸಂಚಾರದಿಂದಾಗಿ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.

ವೃಷಭ ವಾರ್ಷಿಕ ರಾಶಿ ಭವಿಷ್ಯ 2022 ಪ್ರಕಾರ, ವರ್ಷ 2022 ರಲ್ಲಿ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಆಶಾವಾದ ಉಳಿದಿರುತ್ತದೆ ಮತ್ತು ಈ ಸಮಯದಲ್ಲಿ ನಿಮ್ಮ ಜೀವನದಲ್ಲಿ ಉತ್ತಮ ವಿಷಯಗಳು ಸುಲಭವಾಗಿ ಬರಲಾರಂಭಿಸುತ್ತವೆ. ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುವ ಸಾಧ್ಯತೆ ಇದೆ ಮತ್ತು ನೀವು ವಿದೇಶಕ್ಕೆ ಹೋಗಿ ಉನ್ನತ ಅಧ್ಯಯನ ಮಾಡಲು ಸಹ ಪರಿಗಣಿಸಬಹುದು. ಹೂಡಿಕೆಗಳು, ವ್ಯವಹಾರ ಒಪ್ಪಂದಗಳು ಅಥವಾ ನಿಮ್ಮ ಅದೃಷ್ಟದ ಬಲದ ಮೇಲೆ ಮಾತ್ರ ನಿಮ್ಮ ಹಣವನ್ನು ಹೆಚ್ಚಿಸುವಲ್ಲಿ ನೀವು ಯಶಸ್ವಿಯಾಗಬಹುದು. ವರ್ಷ 2022 ರಲ್ಲಿ ಬುಧವು ವಕ್ರನಾಗುವುದು, ಸಂವಹನ ಮತ್ತು ತಂತ್ರಜ್ಞಾನದ ಸ್ಥಗಿತ, ಚಿಂತೆಗಳು, ಪ್ರಯಾಣದ ವಿಳಂಬ ಮತ್ತು ಕಳೆದುಹೋದ ವಸ್ತುಗಳ ಸಾಧ್ಯತೆಯನ್ನು ತರಬಹುದು. ನೀವು ವಿಷಯಗಳನ್ನು ಮಾಡುವುದು ಮತ್ತು ಹಿಂದಿನ ವಿಷಯಗಳ ಬಗ್ಗೆ ಯೋಚಿಸುವುದು ಅಥವಾ ಅನಿರೀಕ್ಷಿತವಾಗಿ ಹಿಂದಿನ ಜನರನ್ನು ಭೇಟಿ ಮಾಡಲು ನಿರೀಕ್ಷಿಸಬಹುದು.

ಜೂನ್ ತಿಗಳಲ್ಲಿ, ಶುಕ್ರ ಸಂಚಾರವು ನಿಮ್ಮ ಜೀವನದ ಅತ್ಯುತ್ತಮ ಸಮಯಗಳಲ್ಲಿ ಇಂದು ಎಂದು ಸಾಬೀತಾಗಬಹುದು. ಈ ಸಮಯದಲ್ಲಿ ನೀವು ಜನರಿದ ಪ್ರೀತಿ ಮತ್ತು ಸ್ನೇಹವನ್ನು ಪಡೆಯುತ್ತೀರಿ ಮತ್ತು ಅಷ್ಟೇ ಪ್ರೀತಿ ಮತ್ತು ಸ್ನೇಹವನ್ನು ಜನರಿಗೆ ನೀಡುತ್ತಿರಿ. ಇದರೊಂದಿಗೆ ನೀವು ಸಾಮಾನ್ಯಕ್ಕಿಂತ ಹೆಚ್ಚು ಆಕರ್ಷಕ, ಪ್ರಲೋಭಕ ಮತ್ತು ಜನಪ್ರಿಯರಾಗುತ್ತೀರಿ. ಮನರಂಜನೆ ಮಾತು ಪಾರ್ಟಿಯನ್ನು ಆನಂದಿಸಲು ಇದು ಅನುಕೂಲಕರ ಸಮಯ. ಇದಲ್ಲದೆ ಮಕ್ಕಳೊಂದಿಗೆ ಮೋಜು ಮಾಡಲು ಮತ್ತು ವಿಶ್ರಾಂತಿ ಪಡೆಯಲು ಸಹ ಇದು ಅತ್ಯಂತ ಅದ್ಬುತ ಸಮಯವಾಗಿರಲಿದೆ. ಸೃಜನಶೀಲ ಕಾರ್ಯಗಳು, ಖರೀದಿ ಮತ್ತು ಇತರ ಹಣಕಾಸಿನ ವಿಷಯಗಳಿಗೂ ಇದು ಅನುಕೂಲಕರ ಸಮಯ ಎಂದು ಸಾಬೀತುಪಡಿಸುತ್ತದೆ.

ಅಕ್ಟೋಬರ್ ತಿಂಗಳಲ್ಲಿ ಗುರು ಗ್ರಹವು ಹಣಕಾಸಿನ ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ತರುತ್ತದೆ. ಹೊಸ ಸಾಹಸಗಳು ನಿಮ್ಮ ಪರಿಧಿಯನ್ನು ವಿಸ್ತರಿಸುತ್ತವೆ ಮತ್ತು ಜೀವನದ ಬಗೆಗಿನ ನಿಮ್ಮ ದೃಷ್ಟಿಕೋನವನ್ನು ಹೆಚ್ಚಿಸುತ್ತದೆ. ಈ ಸಮಯದಲ್ಲಿ ಆಧ್ಯಾತ್ಮಿಕ ಮತ್ತು ಧಾರ್ಮಿಕ ಅಭಿವೃದ್ಧಿ ಹೆಚ್ಚಾಗುವ ಪ್ರಬಲ ಸಾಧ್ಯತೆ ಇದೆ. ಆದಾಗ್ಯೂ, ಗುರುವು ವಕ್ರನಾಗಿರುವಾಗ ಅತಿಯಾದ ಆತ್ಮ ವಿಶ್ವಾಸ ಮತ್ತು ಅತಿರಂಜಿತವಾಗಬಾರದು ಎಂಬುದನ್ನು ನೆನಪಿನಲ್ಲಿಡಿ.

ವೃಷಭ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷದ ಅಂತ್ಯದ ವೇಳೆಗೆ ಶನಿ ದೇವ ವೃಷಭ ರಾಶಿಚಕ್ರದ ಸ್ಥಳೀಯರ ಜೀವನದಲ್ಲಿ ಕೆಲವು ತಿರವುಗಳನ್ನು ಪ್ರತಿನಿಧಿಸಬಹುದು. ನಿಮ್ಮ ಮಹತ್ವಾಕಾಂಕ್ಷೆಗಳು ಪೂರ್ಣಗೊಳ್ಳದಿದ್ದರೆ, ಈ ಸಮಯದಲ್ಲಿ ನಿಮ್ಮ ಗುರಿಗಳನ್ನು ಮೌಲ್ಯ ಮಾಪನ ಮಾಡಲು ಸಲಹೆ ನೀಡಲಾಗಿದೆ. ವೃಷಭ ರಾಶಿ ಭವಿಷ್ಯ 2022 ರ ಪ್ರಕಾರ, ಒಂದು ಸಾರಿ ಜೀವನದ ಈ ಕಠಿಣ ಮತ್ತು ಕಷ್ಟಕರ ಹಂತವು ಮುಗಿದ ನಂತರ, ನಿಮ್ಮ ಆತ್ಮವಿಶ್ವಾಸ ಮತ್ತು ಉತ್ಸಾಹ ಮತ್ತೊಮ್ಮೆ ನಿಮ್ಮ ಜೀವನದಲ್ಲಿ ಮರಳಿ ಬರುತ್ತದೆ. ನಂತರ ನೀವು ನಿಮ್ಮ ಜೀವನದಲ್ಲಿ ಹೊಸ ದಿಕ್ಕು ಮತ್ತು ಉತ್ಸಾಹದೊಂದಿಗೆ ಮತ್ತೊಮ್ಮೆ ಹೊಸ ಹಂತವನ್ನು ಆರಂಭಿಸಬಹುದು.

ನಡೆಯಿರಿ ವೃಷಭ ರಾಶಿ ವಾರ್ಷಿಕ ರಾಶಿ ಭವಿಷ್ಯ 2022 ಅನ್ನು ಈಗ ನಾವು ವಿವವಾಗಿ ಓದಿ ತಿಳಿದುಕೊಳ್ಳೋಣ.

ವೃಷಭ ಪ್ರೀತಿ ರಾಶಿ ಭವಿಷ್ಯ 2022

ವೃಷಭ ಪ್ರೀತಿ ರಾಶಿ ಭವಿಷ್ಯ 2022 ರ ಪ್ರಕಾರ, ಸ್ಥಳೀಯರು ಸಂಪೂರ್ಣ ಹೃದಯದಿಂದ ತಮ್ಮ ಸಂಗಾತಿಯ ಬೆಂಬಲವನ್ನು ಪಡೆಯುತ್ತಾರೆ ಮತ್ತು ನಿಮ್ಮ ಸಂಗಾತಿ ಜೀವನದಲ್ಲಿ ಪ್ರಗತಿಗೆ ದೊಡ್ಡ ಪ್ರೋತ್ಸಾಹ ಎಂದು ಸಾಬೀತಾಗುತ್ತಾರೆ. ಅವರು ನಿಮ್ಮಲ್ಲಿ ಆತ್ಮವಿಶ್ವಾಸದ ಭಾವನೆಯನ್ನು ಹೆಚ್ಚಿಸುತ್ತಾರೆ. ಆದಾಗ್ಯೂ, ನಿಮ್ಮ ಸಂಗಾತಿಯೊಂದಿಗೆ ಸ್ವಲ್ಪ ಸಮಯದ ವರೆಗೆ ಇಲ್ಲಿ ನೀವು ಯಾವುದೇ ಸಂಘರ್ಷ ಅಥವಾ ಅಸಮಾಧಾನವನ್ನು ತರಬಾರದು ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು. ವೃಷಭ ರಾಶಿಚಕ್ರದ ಸ್ಥಳೀಯರ ಪ್ರೀತಿ ಜೀವನದಲ್ಲಿ ಈ ವರ್ಷ ಸಂತೋಷ ಉಳಿದಿರುತ್ತದೆ ಮತ್ತು ವರ್ಷ 2022 ಮಧ್ಯವು ನಿಮ್ಮ ಪ್ರೀತಿ ಜೀವನಕ್ಕೆ ಗಮನಾರ್ಹವಾಗಿ ಶುಭಕರ ಎಂದು ಸಾಬೀತುಪಡಿಸುತ್ತದೆ.

ವೃಷಭ ವೃತ್ತಿ ಜೀವನ ರಾಶಿ ಭವಿಷ್ಯ 2022

ವೃಷಭ ವೃತ್ತಿ ಜೀವನ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷ ವೃಷಭ ರಾಶಿಚಕ್ರದ ಜನರಿಗೆ ಉತ್ತಮವಾಗಿರುತ್ತದೆ. ಏಕೆಂದರೆ ವರ್ಷದ ಹೆಚ್ಚಿನ ಸಮಯದಲ್ಲಿ ಗುರು ಗ್ರಹವು ನಿಮ್ಮ ಹನ್ನೊಂದನೇ ಮನೆಯಲ್ಲಿರುತ್ತದೆ. ಇದರ ಪರಿಣಾಮವಾಗಿ ನಿಮ್ಮ ಕೆಲಸದ ಸ್ಥಳದಲ್ಲಿ ನೀವು ತುಂಬಾ ಲಾಭವನ್ನು ಗಳಿಸಬಹುದು. ಇದರ ಹೊರತಾಗಿ, ನೀವು ವ್ಯಾಪಾರ ಕ್ಷೇತ್ರಕ್ಕೆ ಸಂಬಂದಿಸಿದ್ದರೂ, ಉತ್ತಮ ಲಾಭವನ್ನು ಗಳಿಸುವಿರಿ. ವರ್ಷದ ಮೊದಲಾರ್ಧದಲ್ಲಿ ನಿಮ್ಮ ನಾಲ್ಕನೇ ಮನೆಯ ಮೇಲೆ ಶನಿ ದೇವರ ದೃಷ್ಟಿ ಇರುವುದರಿಂದಾಗಿ, ಸಲ್ಪ ಸಮಯದವರೆಗೆ ಸ್ಥಳಾಂತರದ ಪ್ರಬಲ ಸಾಧ್ಯತೆ ಕಂಡುಬರುತ್ತಿದೆ. ಉದ್ಯೋಗವನ್ನು ಹುಡುಕುತ್ತಿರುವ ಜನರು ಶುಭ ಸುದ್ದಿಯನ್ನು ಪಡೆಯುತ್ತಾರೆ. ವ್ಯಾಪಾರದಲ್ಲಿ ಹಿಂದಿನ ವರ್ಷಕ್ಕಿಂತ ಉತ್ತಮ ಲಾಭವನ್ನು ಗಳಿಸುತ್ತೀರಿ. ಹಣಕಾಸಿನ ವಂಚನೆಯ ಬಗ್ಗೆ ಜಾಗರೂಕರಾಗಿರಿ ಮತ್ತು ನೀವು ಕೇಳುವ ಎಲ್ಲವನ್ನೂ ನಂಬಬೇಡಿ. ಒಟ್ಟಾರೆಯಾಗಿ ವೃಷಭ ರಾಶಿಚಕ್ರದ ಸ್ಥಳೀಯರ ಸಮೃದ್ಧಿ ಖಚಿತ, ಏಕೆಂದರೆ ಈ ವರ್ಷ ಶನಿ ದೇವ ಒಂಬತ್ತನೇ ಮನೆಗೆ ಗೋಚರಿಸುತ್ತಾರೆ.

ವೃಷಭ ಶಿಕ್ಷಣ ರಾಶಿ ಭವಿಷ್ಯ 2022

ವೃಷಭ ಶಿಕ್ಷಣ ರಾಶಿ ಭವಿಷ್ಯ 2022 ರ ಪ್ರಕಾರ, ವೃಷಭ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಈ ವರ್ಷವು ಅತ್ಯಂತ ಅನುಕೂಲಕರವಾಗಿರಲಿದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣದಲ್ಲಿ ಆಸಕ್ತಿ ಮತ್ತು ಹೆಚ್ಚು ಗಮನವನ್ನು ಹೊಂದಿರುತ್ತಾರೆ. ಇದರೊಂದಿಗೆ ಈ ರಾಶಿಚಕ್ರದ ಕೆಲವು ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ತಮ್ಮ ಕನಸನ್ನು ಈಡೇರಿಸುವಲ್ಲಿ ಯಶಸ್ವಿಯಾಗುತ್ತಾರೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಏಪ್ರಿಲ್ ತಿಂಗಳ ನಂತರ ಯಶಸ್ಸು ಪಡೆಯುತ್ತಾರೆ.

ವೃಷಭ ಆರ್ಥಿಕ ರಾಶಿ ಭವಿಷ್ಯ 2022

ವೃಷಭ ಆರ್ಥಿಕ ರಾಶಿ ಭವಿಷ್ಯ 2022 ರ ಪ್ರಕಾರ, ಆರ್ಥಿಕವಾಗಿ ಈ ವರ್ಷ ಉತ್ತಮವಾಗಿರಲಿದೆ. ಇದರೊಂದಿಗೆ ಈ ವರ್ಷ ನೀವು ಅನೇಕ ಅವಕಾಶಗಳನ್ನು ಪಡೆಯಬಹುದು. ಸಾಮಾಜಿಕ ಬದ್ಧತೆ ಅಥವಾ ಯಾವುದೇ ಶುಭ ಸಮಾರಂಭದ ಆಚರಣೆಯಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗಬಹುದು, ಆದರೆ ಸಮಯದ ಜೊತೆಗೆ ನಿಮ್ಮ ಅದೃಷ್ಟ ಮತ್ತು ಹಣದಲ್ಲಿ ಉತ್ತಮ ಹೆಚ್ಚಳವನ್ನು ನೀವು ನೋಡಲು ಸಾಧ್ಯವಾಗುತ್ತದೆ. 2022 ವರ್ಷದ ಮಧ್ಯದ ಸಮಯವು ದೀರ್ಘಕಾಲದ ಹೂಡಿಕೆ ಮತ್ತು ನಿಮ್ಮ ಆರ್ಥಿಕ ಯೋಜನೆಗಳನ್ನು ಈಡೇರಿಸಲು ಉತ್ತಮವೆಂದು ಸಾಬೀತುಪಡಿಸುತ್ತದೆ. ಸೆಪ್ಟೆಂಬರ್ ಮಧ್ಯದ ವೇಳೆಗೆ, ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ನೀವು ಒಂದು ಪ್ರಮುಖ ಯೋಜನೆ ಮತ್ತು ಹೊಸ ಆಲೋಚನೆಯೊಂದಿಗೆ ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಬಹುದು. ಆದಾಗ್ಯೂ, ನೀವು ಜಾಗರೂಕರಾಗಿರಲು ಸೂಚಿಸಲಾಗಿದೆ.

ವೃಷಭ ಕುಟುಂಬ ಜೀವನ ರಾಶಿ ಭವಿಷ್ಯ 2022

ವೃಷಭ ಕುಟುಂಬ ಜೀವನ ರಾಶಿ ಭವಿಷ್ಯ 2022 ರ ಪ್ರಕಾರ, ವೃಷಭ ರಾಶಿಚಕ್ರದ ಸ್ಥಳೀಯರಿಗೆ ಯಾವುದೇ ಹೊಸ ಸ್ಥಳ ಅಥವಾ ಹೊಸ ವಾತಾವರಣವು ನಿಮ್ಮ ಪರಿಧಿಯನ್ನು ವಿಸ್ತರಿಸಲು ಸಹಾಯಕರ ಎಂದು ಸಾಬೀತುಪಡಿಸುತ್ತದೆ. ಮನೆಯಲ್ಲಿ ಹೊಸ ಅತಿಥಿ ಪ್ರವೇಶಿಸುವ ನಿರೀಕ್ಷೆಯಿದೆ. ಈ ರಾಶಿಚಕ್ರದ ಸ್ಥಳೀಯರು ವಿವಿಧ ರೀತಿಯ ಹೊಸ ಅನುಭವಗಳಿಗೆ ನಿಮ್ಮನ್ನು ಸಿದ್ಧರಾಗಿಸಿ. ಕೌಟುಂಬಿಕ ಕಾರಣಗಳಿಂದಾಗಿ ನೀವು ದೂರಸ್ಥ ಸ್ಥಳಗಳಿಗೆ ಪ್ರಯಾಣಿಸಬೇಕಾಗಬಹುದು. ಇದರ ಪರಿಣಾಮವಾಗಿ ನಿಮ್ಮ ಕುಟುಂಬ ಅಥವಾ ಸಮುದಾಯ ಸಂಬಂಧಗಳಲ್ಲಿ ಸುಧಾರಣೆ ಕಂಡುಬರುತ್ತದೆ. ವೃಷಭ ರಾಶಿ ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ನಿಮ್ಮ ಕಾರ್ಯಾಚರಣೆಯ ಆಧಾರವು ಒಂದು ಹೊಸ ಸ್ಥಳಕ್ಕೆ ಚಲಿಸಬಹುದು ಮತ್ತು ಸಂಪತ್ತಿನ ವಿನಿಮಯ ಅಥವಾ ಖರೀದಿ ಮತ್ತು ಮಾರಾಟದ ವಿಷಯದಲ್ಲಿ ನೀವು ಉತ್ತಮವಾಗಿ ಕಾರ್ಯನಿರ್ವಹಿಸಬಹುದು.

ವೃಷಭ ಮಕ್ಕಳ ರಾಶಿ ಭವಿಷ್ಯ 2022

ವೃಷಭ ಮಕ್ಕಳ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷದ ಆರಂಭವು ಸಾಧಾರಣವಾಗಿ ಶುಭವಾಗಿರುತ್ತದೆ. ಏಕೆಂದರೆ ನಿಮ್ಮ ಮಕ್ಕಳು ತಮ್ಮ ಕಠಿಣ ಪರಿಶ್ರಮದ ಮೇಲೆ ಮುಂದುವರಿಯಲಿದ್ದಾರೆ. ಅವರು ತಮ್ಮ ಮಾನಸಿಕ ಸಾಮರ್ಥ್ಯಗಳ ಕಾರಣದಿಂದ ಗುರಿಗಳನ್ನು ಸಾಧಿಸುತ್ತಾರೆ. ಏಪ್ರಿಲ್ ತಿಂಗಳಲ್ಲಿ ಗುರು ಸಂಚಾರ ಮತ್ತು ಐದನೇ ಮನೆಯ ಮೇಲೆ ಗುರುವಿನ ದೃಷ್ಟಿಯಿಂದಾಗಿ, ಹೊಸದ ಮದುವೆಯಾಗಿರುವವರು ಶುಭ ಸುದ್ದಿಯನ್ನು ಪಡೆಯಬಹುದು. ನಿಮ್ಮ ಮಕ್ಕಳು ಪ್ರಗತಿ ಸಾಧಿಸುತ್ತಾರೆ. ನಿಮ್ಮ ಮೊದಲ ಮಗುವಿನಿಂದ ನೀವು ಶುಭ ಸುದ್ದಿಯನ್ನು ಪಡೆಯುತ್ತೀರಿ ಮತ್ತು ಶಿಕ್ಷಣದ ಕ್ಷೇತ್ರದಲ್ಲಿ ನಿಮ್ಮ ಮಕ್ಕಳು ಈ ವರ್ಷ ನಿರಂತರ ಪ್ರಗತಿಯನ್ನು ಪಡೆಯಲಿದ್ದಾರೆ. ನಿಮ್ಮ ಮಕ್ಕಳು ವಯಸ್ಸಿನವರಾಗಿದ್ದರೆ, ಈ ವರ್ಷ ಅವರ ಮದುವೆಯಾಗುವ ಪ್ರಬಲ ಸಾಧ್ಯತೆ ಇದೆ.

ವೃಷಭ ಮದುವೆ ರಾಶಿ ಭವಿಷ್ಯ 2022

ವೃಷಭ ವಿವಾಹ ರಾಶಿ ಭವಿಷ್ಯ 2022 ರ ಪ್ರಕಾರ, ವೃಷಭ ರಾಶಿಚಕ್ರದ ಸ್ಥಳೀಯರ ಪ್ರಸ್ತುತ ಸಂದರ್ಭಗಳಲ್ಲಿ ಸುಧಾರಣೆಯ ಅಗತ್ಯವಿದೆ. ನಿಮ್ಮ ಕುಟುಂಬದ ಸದಸ್ಯರು ಮತ್ತು ನಿಕಟ ಜನರ ಬಗೆಗಿನ ಬದ್ಧತೆ ನಿಮ್ಮ ವೈವಾಹಿಕ ಜೀವನದಲ್ಲಿ ನೆಮ್ಮದಿ ಮತ್ತು ಶಾಂತಿಯನ್ನು ತರುತ್ತದೆ. ಗುರುವಿನ ದೃಷ್ಟಿಯು ಎಲ್ಲಾ ಅನುಮಾನಗಳು ಮತ್ತು ಗೊಂದಲಗಳನ್ನು ಪರಿಹರಿಸಲು ಸಹಾಯಕರ ಎಂದು ಸಾಬೀತಾಗುತ್ತದೆ. ಲವಲವಿಕೆಯನ್ನು ಹುಡುಕುವ ನಿಮ್ಮ ಪ್ರವೃತ್ತಿಯು ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಸಮಸ್ಯೆಗಳು ಅಥವಾ ಅಂತರವನ್ನು ಸೃಷ್ಟಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ಜಾಗರೂಕರಾಗಿರಿ. ಶುಕ್ರ ದೇವ ನಿಮ್ಮ ಸಂಗಾತಿಯೊಂದಿಗೆ ಅಗತ್ಯವಾದ ಭಾವನಾತ್ಮಕ ಸಂಪರ್ಕವನ್ನು ನಿಮಗೆ ಒದಗಿಸುತ್ತಾರೆ. ಈ ವರ್ಷವಿಡೀ ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ತುಂಬಾ ನೆಮ್ಮದಿಯಾಗಿರುತ್ತೀರಿ. ನೀವು ಒಂಟಿಯಾಗಿದ್ದರೆ, ಸೋಶಿಯಲ್ ಮೀಡಿಯಾ ಮೂಲಕ ನಿಮ್ಮ ಜೀವನ ಸಂಗಾತಿಯನ್ನು ನೀವು ಪಡೆಯಬಹುದು. ಒಟ್ಟಾರೆಯಾಗಿ, ವೃಷಭ ರಾಶಿಚಕ್ರದ ಸ್ಥಳೀಯರ ಪ್ರೀತಿ ಜೀವನದಲ್ಲಿ ಈ ವರ್ಷ ಬಲ ಮತ್ತು ಪ್ರೀತಿ ಶಾಶ್ವತವಾಗಿ ಉಳಿದಿರಲಿದೆ.

ವೃಷಭ ವ್ಯಾಪಾರ ರಾಶಿ ಭವಿಷ್ಯ 2022

ವೃಷಭ ವ್ಯಾಪಾರ ರಾಶಿ ಭವಿಷ್ಯ 2022 ಪ್ರಕಾರ, ವೃಷಭ ರಾಶಿಚಕ್ರದ ವ್ಯಾಪಾರ ಮಾಲೀಕರಿಗೆ ಈ ವರ್ಷವು ತುಂಬಾ ಒಳ್ಳೆಯದು ಮತ್ತು ಶುಭಕರ ಎಂದು ಸಾಬೀತಾಗಲಿದೆ. ವ್ಯಾಪಾರಕ್ಕೆ ಸಂಬಂಧಿಸಿದ ಜನರು ಈ ವರ್ಷ ವ್ಯಾಪಾರದಿಂದ ಅಪೇಕ್ಷಿತ ಲಾಭಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಬಹುದು. ನೀವು ಹೊಸ ಯೋಜನೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಣಕಾಸಿನ ಹೂಡಿಕೆಯನ್ನು ಸಹ ಮಾಡಬಹುದು ಮತ್ತು ಇದರಿಂದ ನೀವು ಫಲಪ್ರದ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯೂ ಇದೆ. ನಿಮ್ಮ ವ್ಯಾಪಾರದಲ್ಲಿ ವಿವಿಧ ರೀತಿಯಲ್ಲಿ ನಿಮಗೆ ಸಹಾಯ ಮಾಡುವಂತಹ ಪ್ರಭಾವಶಾಲಿ ಜನರೊಂದಿಗೆ ಸಂಪರ್ಕ ಸಾಧಿಸುವಲ್ಲಿ ಈ ವರ್ಷ ನೀವು ಯಶಸ್ವಿಯಾಗುತ್ತೀರಿ. ಆದಾಗ್ಯೂ, ಈ ವರ್ಷ ಹಣಕಾಸಿನ ವಹಿವಾಟಿನ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಲು ನಿಮಗೆ ಸೂಚಿಸಲಾಗಿದೆ. ಯಾವುದೇ ಕಾರಣದಿಂದಾಗಿ ಸ್ಥಗಿತಗೊಂಡ ಅಥವಾ ಸಿಲುಕಿಕೊಂಡಿರುವ ವ್ಯಾಪಾರ ಉದ್ಯಮಗಳು ಮತ್ತೆ ಸಕ್ರಿಯವಾಗಬಹುದು.ಇತರರ ಅಭಿಪ್ರಾಯಗಳನ್ನು ಹೊಂದಿಕೊಳ್ಳಲು ನೀವು ಹಿಂದೆಗಿಂತ ಹೆಚ್ಚು ಪ್ರಯತ್ನಿಸಿದರೂ ಸಹ ನಿಮ್ಮ ಜೀವನದಲ್ಲಿ ನೀವು ಯಶಸ್ವಿಯಾಗುತ್ತೀರಿ ಎಂದು ಇದು ಸೂಚಿಸುತ್ತಿದೆ.

ವೃಷಭ ಸಂಪತ್ತು ಮತ್ತು ವಾಹನ ರಾಶಿ ಭವಿಷ್ಯ 2022

ವೃಷಭ ಸಂಪತ್ತು ಮತ್ತು ವಾಹನ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷ ವೃಷಭ ರಾಶಿಚಕ್ರದ ಸ್ಥಳೀಯರಿಗೆ ಶುಭವಾಗಿರಲಿದೆ. ಆರ್ಥಿಕ ದೃಷ್ಟಿಕೋನದಿಂದ ಈ ವರ್ಷ ಅನುಕೂಲಕರವಾಗಿರಬಹುದು ಮತ್ತು ನಿಮ್ಮ ಆದಾಯದ ಪರಿಸ್ಥಿತಿ ಸಾಕಷ್ಟು ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ವರ್ಷ ಆದಾಯದ ಹರಿವಿನಲ್ಲಿನ ನಿರಂತರತೆಯನ್ನು ನೀವು ಮುಕ್ತವಾಗಿ ಆನಂದಿಸುವಿರಿ. ವರ್ಷದ ಹೆಚ್ಚಿನ ಸಮಯದಲ್ಲಿ ಒಂಬತ್ತನೇ ಮನೆಯಲ್ಲಿ ಶನಿ ದೇವರ ಉಪಸ್ಥಿತಿಯು, ಭೂಮಿ, ಮನೆ ಮತ್ತು ವಾಹನದೊಂದಿಗೆ ಆಭರಣಗಳನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಕುಟುಂಬ ಸದಸ್ಯರು ಮತ್ತು ಸಂಬಂಧಿಕರ ಮಂಗಳಕರ ಸಮಾರಂಭದಲ್ಲಿ ನೀವು ಹೆಚ್ಚು ಖರ್ಚು ಮಾಡುತ್ತೀರಿ. ಆದಾಗ್ಯೂ ಯಾವುದೇ ದೊಡ್ಡ ಹೂಡಿಕೆ ಮಾಡುವ ಮೊದಲು ಎರಡು ಬಾರಿ ಯೋಚಿಸಲು ನಿಮಗೆ ಸಲಹೆ ನೀಡಲಾಗಿದೆ ಮತ್ತು ಆ ಕ್ಷೇತ್ರದ ಯಾವುದೇ ಅನುಭವಿ ವ್ಯಕ್ತಿಯ ಮೂಲಕ ಸಲಹೆಯನ್ನು ಪಡೆದುಕೊಂಡು ಮಾತ್ರ ಯಾವುದೇ ಹೆಜ್ಜೆ ಮುಂದಿಡಿ.

ವೃಷಭ ಹಣ ಮತ್ತು ಲಾಭ ರಾಶಿ ಭವಿಷ್ಯ 2022 ಹಣ ಮತ್ತು ಲಾಭ ರಾಶಿ ಭವಿಷ್ಯ 2022 ರ ಪ್ರಕಾರ, ವೃಷಭ ರಾಶಿಚಕ್ರದ ಸ್ಥಳೀಯರಿಗೆ ಈ ವರ್ಷ ಅನುಕೂಲಕರವಾಗಿರಲಿದೆ. ಏಕೆಂದರೆ ಈ ವರ್ಷದ ಅವಧಿಯಲ್ಲಿ ಶುಕ್ರ ಮತ್ತು ಗುರು ಗ್ರಹದ ಸ್ಥಿತಿ ಅನುಕೂಲಕರವಾಗಿರುತ್ತದೆ. ಹಣ ಮತ್ತು ಲಾಭದ ರೂಪದಲ್ಲಿ ನೀವು ಹೆಚ್ಚು ಆದಾಯವನ್ನು ಪಡೆಯುತ್ತೀರಿ. ಈ ರಾಶಿಚಕ್ರದ ಸ್ಥಳೀಯರಿಗೆ ಸಮಯ ಅನುಕೂಲಕರವಾಗಿರುತ್ತದೆ ಮತ್ತು ಇದರೊಂದಿಗೆ ಈ ಸಮಯದಲ್ಲಿ ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ವರ್ಷದ ಆರಂಭವು ಹಣ ಮತ್ತು ಲಾಭದ ವಿಷಯದಲ್ಲಿ ಅನುಕೂಲಕರ ಫಲಿತಾಂಶಗಳನ್ನು ತರುತ್ತದೆ. ಒಂದೆಡೆ ಈ ವರ್ಷ ನಿಮ್ಮ ಆದಾಯವು ಉತ್ತಮವಾಗಿ ಹರಿಯಲಿದ್ದರೆ, ಅದೇ ಸಮಯದಲ್ಲಿ ಮತ್ತೊಂದೆಡೆ ನಿಮ್ಮ ವೆಚ್ಚಗಳು ಸಹ ತುಂಬಾ ಹೆಚ್ಚಾಗಿರುತ್ತವೆ. ಭೂಮಿ, ಸಂಪತ್ತು ಮತ್ತು ವಾಹನದ ಮೇಲೆ ಖರ್ಚು ಮಾಡಲು ನೀವು ಹೆಚ್ಚು ಆಸಕ್ತಿ ಹೊಂದಿರುತ್ತೀರಿ. ಏಪ್ರಿಲ್ ತಿಂಗಳಲ್ಲಿ ಗುವಿನ ಸಂಚಾರ ಮತ್ತು ಹನ್ನೊಂದನೇ ಮನೆಯಲ್ಲಿ ಇದರ ಸಂಚಾರದ ಪರಿಣಾಮದಿಂದಾಗಿ, ದೀರ್ಘಕಾಲದಿಂದ ಸಿಲುಕಿಕೊಂಡಿರುವ ಸಾಲಗಳು ಮುಕ್ತವಾಗುತ್ತವೆ. ಈ ವರ್ಷ ನಿಮ್ಮ ಹಿರಿಯ ಸಹೋದರ - ಸಹೋದರಿ ಅಥವಾ ಮಗನಿಗಾಗಿ ಯಾವುದೇ ಶುಭ ಸಮಾರಂಭದಲ್ಲೂ ನೀವು ಹಣಕಾಸು ಖರ್ಚು ಮಾಡುವಿರಿ. ವೃಷಭ ಅರೋಗ್ಯ ರಾಶಿ ಭವಿಷ್ಯ 2022

ವೃಷಭ ಅರೋಗ್ಯ ರಾಶಿ ಭವಿಷ್ಯ 2022 ರ ಪ್ರಕಾರ,ಈ ವರ್ಷದ ಮಧ್ಯದಿಂದ ಅಂತ್ಯದ ವರೆಗೆ ನೀವು ಪ್ರಯೋಜನಜನಕಾರಿ ಅರೋಗ್ಯ ದಿನಚರಿಯನ್ನು ಅಭಿವೃದ್ಧಿಪಡಿಸುವುದು ಸುಲಭವಾಗುತ್ತದೆ. ಇದರ ಹೊರತಾಗಿ, ನೀವು ಧೂಮಪಾನ ಅಥವಾ ಕುಡಿಯುವಂತಹ ಯಾವುದೇ ವಿಷಯ, ಆಹಾರ ಅಥವಾ ಕೆಟ್ಟ ಅಭ್ಯಾಸಗಳಿಗೆ ವ್ಯಸನಿಯಾಗಿದ್ದರೆ, ಅವುಗಳನ್ನು ತೊಡೆದುಹಾಕಲು ಸುಲಭವಾಗುತ್ತದೆ. ಈ ಸಮಯದಲ್ಲಿ ದೈನಂದಿನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ನಿಮಗೆ ಸಲಹೆ ನೀಡಲಾಗಿದೆ. ಇದರ ಪರಿಣಾಮವಾಗಿ ನೀವು ಯಾವ ಕೆಲಸವನ್ನು ಮಾಡುತ್ತಿಲ್ಲ ಎಂಬುದನ್ನು ಸರಿಪಡಿಸಲು ಸಾಧ್ಯವಾಗುತ್ತದೆ. ಈ ವರ್ಷ ನಿಮ್ಮ ತೂಕವನ್ನು ಸ್ಥಿರವಾಗಿರಿಸಿಕೊಳ್ಳುವುದು ನಿಮಗೆ ಸವಾಲಾಗಿ ಪರಿಣಮಿಸುತ್ತದೆ. ಆದರೆ ನೀವು ಶಿಸ್ತಿನಿಂದ ಈ ಸಮಸ್ಯೆಯನ್ನು ಪರಿಹರಿಸಬೇಕಾಗುತ್ತದೆ.

2022 ರಲ್ಲಿ ವೃಷಭ ರಾಶಿಚಕ್ರದ ಜನರಿಗೆ ಅದೃಷ್ಟ ಸಂಖ್ಯೆ

(Taurus Yearly Prediction 2022) ವೃಷಭ ರಾಶಿ ಭವಿಷ್ಯ 2022 ರ ಪ್ರಕಾರ, ಆರು ಮತ್ತು ಎಂಟು ವೃಷಭ ರಾಶಿಚಕ್ರದ ಸ್ಥಳೀಯರ ಅದೃಷ್ಟ ಸಂಖ್ಯೆಗಳು ಮತ್ತು ವೃಷಭ ರಾಶಿಚಕ್ರದ ಜನರು ತುಂಬಾ ತರ್ಕಬದ್ಧರಾಗಿರುತ್ತಾರೆ. ಜೀವನದ ಪ್ರತಿ ಸೆಕೆಂಡಿನಲ್ಲಿ , ಅವರು ಈ ವರ್ಷ ಅಪೇಕ್ಷಿತ ಯೋಗಕ್ಷೇಮ ಮತ್ತು ಜೀವನದ ಮಟ್ಟದಲ್ಲಿ ಕಠಿಣ ಪರಿಶ್ರಮ ಮಾಡುವ ದಿಕ್ಕಿನಲ್ಲಿ ತಮ್ಮ ಪ್ರಯತ್ನಗಳನ್ನು ಕೇಂದ್ರೀಕರಿಸುತ್ತಾರೆ.

ವೃಷಭ ರಾಶಿ ಭವಿಷ್ಯ 2022: ಜ್ಯೋತಿಷ್ಯ ಪರಿಹಾರ

  • ಓಪಲ್ ರತ್ನವನ್ನು ಬೆಳ್ಳಿ ಅಥವಾ ಬಿಳಿ ಚಿನ್ನದಲ್ಲಿ ತಯಾರಿಸಿ ಉಂಗುರದ ಬೆರಳಿನಲ್ಲಿ ಧರಿಸುವುದು ನಿಮಗೆ ಉತ್ತಮ.
  • ಅಧ್ಯಯನದಲ್ಲಿ ಗಮನ ಮತ್ತು ಏಕಾಗ್ರತೆಯನ್ನು ಸುಧಾರಿಸಲು ಅಧ್ಯಯನ ಮೇಜಿನ ಮೇಲೆ ಆಕಾಶ ನೀಲಿ ಲ್ಯಾಂಪ್ ಅನ್ನು ಇರಿಸಿ.
  • ಮಂಗಳವಾರದಂದು ವಿವಾಹಿತ ಮಹಿಳೆಯರಿಗೆ ಆಹಾರವನ್ನು ನೀಡಿ
  • ಕಟ್ಟಡ ಅಥವಾ ನಿರ್ಮಾಣ ಸ್ಥಳದಲ್ಲಿ ಕೆಲಸಗಾರರಿಗೆ ಆಹಾರವನ್ನು ವಿತರಿಸಿ
  • ಶುಕ್ರವಾರ ಬಡಜನರಿಗೆ ಸಕ್ಕರೆ, ಬಿಳಿ ಸಿಹಿ ತಿಂಡಿ ಅಥವಾ ಸಕ್ಕರೆ ಕಲ್ಲು ದಾನ ಮಾಡಿ. ಇದನ್ನು ಮಾಡುವುದರಿಂದ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ.

ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು

1. ವೃಷಭ ರಾಶಿಚಕ್ರದ ಜನರು ಹೇಗಿರುತ್ತಾರೆ?

ವೃಷಭ ಒಂದು ಲೌಕಿಕ ರಾಶಿಯಾಗಿದೆ ಮತ್ತು ಈ ರಾಶಿಚಕ್ರದ ಜನರು ಸ್ವತಂತ್ರರು, ಪರಿಶ್ರಮಿ, ಶ್ರಮಶೀಲರು ಮತ್ತು ಸೃಜನಶೀಲ ವ್ಯಕ್ತಿತ್ವನ್ನು ಹೊಂದಿರುತ್ತಾರೆ.

2. ವೃಷಭ ರಾಶಿಚಕ್ರದ ಜನರ ಕೆಟ್ಟ ವಿಷಯಗಳು ಯಾವುವು?

ವೃಷಭ ರಾಶಿಚಕ್ರದ ಜನರು ಸ್ವಭಾವತಃ ಸ್ವಲ್ಪ ಸ್ವಾರ್ಥಿಗಳು ಎಂದು ಪರಿಗಣಿಸಲಾಗಿದೆ ಮತ್ತು ಸುಲಭವಾಗಿ ರಾಜಿ ಮಾಡಲು ಸಾಧ್ಯವಾಗುವುದಿಲ್ಲ.

3. ವೃಷಭ ರಾಶಿಚಕ್ರದ ಜನರಿಗೆ ವರ್ಷ 2022 ಒಳ್ಳೆಯದೇ?

ವರ್ಷ 2022 ವೃಷಭ ರಾಶಿಚಕ್ರದ ಜನರಿಗೆ ಉತ್ತಮ ಜೀವನ, ಸಂತೋಷ ಮತ್ತು ಆನಂದದಿಂದ ತುಂಬಿರುವ ವರ್ಷ ಎಂದು ಸಾಬೀತಾಗಲಿದೆ. ಈ ವರ್ಷ ಗುರು ಮತ್ತು ಶನಿಯ ಸ್ಥಾನವು, ಸ್ಥಳೀಯರು ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಹಾಯ ಮಾಡುತ್ತದೆ.

4. ವೃಷಭ ರಾಶಿಚಕ್ರದ ಜನರಿಗೆ ಆರ್ಥಿಕವಾಗಿ ಈ ವರ್ಷ 2022 ಉತ್ತಮವಾಗಿದೆಯೇ?

2021ಕ್ಕಿಂತ ವರ್ಷ 2022 ಉತ್ತಮ ವರ್ಷ ಎಂದು ಪರಿಗಣಿಸಬಹುದು. ಏಕೆಂದರೆ ತನ್ನ ಸ್ವಂತ ರಾಶಿಯಲ್ಲಿ ಗುರುವಿನ ಸಂಚಾರದಿಂದಾಗಿ, ಈ ವರ್ಷ ನಿಮ್ಮ ಎಲ್ಲಾ ಸಮಸ್ಯೆಗಳನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ

5. 2022 ರಲ್ಲಿ ಯಾವ ರಾಶಿ ಅದೃಷ್ಟಶಾಲಿ?

2022 ರಲ್ಲಿ ಧನು ರಾಶಿಯನ್ನು ಅತ್ಯಂತ ಅದೃಷ್ಟಶಾಲಿ ಎಂದು ಪರಿಗಣಿಸಬಹುದು. ಏಕೆಂದರೆ ಈ ವರ್ಷ ಧನು ರಾಶಿಯು ಹಣಕಾಸು, ವೃತ್ತಿ ಜೀವನ ಮತ್ತು ಆರೋಗ್ಯದ ವಿಷಯದಲ್ಲಿ ಅದೃಷ್ಟಶಾಲಿಯಾಗಲಿದೆ

ನಮ್ಮ ಲೇಖನವನ್ನು ನೀವು ಇಷ್ಟಪಟ್ಟಿದ್ದೀರಿ ಎಂದು ನಾವು ಭಾವಿಸುತ್ತೇವೆ. ಆಸ್ಟ್ರೋಸೇಜ್‌ನ ಪ್ರಮುಖ ಭಾಗವಾಗಿದ್ದಕ್ಕಾಗಿ ಧನ್ಯವಾದಗಳು. ಇನ್ನಷ್ಟು ಆಸಕ್ತಿದಾಯಕ ಲೇಖನಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ.

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 399/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer