ಬೇವು - ಬೆಲ್ಲ ಸಮಾಗಮದ ಹೊಸವರ್ಷ ಯುಗಾದಿಯ ಮಹತ್ವ!
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂಬ ಹಾಡು ಕರ್ನಾಟದಲ್ಲಿ ಎಲ್ಲರೂ ಗುನುಗುನಿಸುವ ಹಾಡು, ಅದೇ ಹೇಳುತ್ತದೆ ನಮಗೆ ಯುಗಾದಿ ಅದೆಷ್ಟು ಮಹತ್ವದ ಹಬ್ಬವೆಂದು. ಈ ಹಬ್ಬವನ್ನು ಭಾರತದಲ್ಲಿ ಬೇರೆ-ಬೇರೆ ಹೆಸರಿನಿಂದ, ಸಾಮಾನ್ಯವಾಗಿ ಎಲ್ಲಾ ಪ್ರದೇಶಗಳಲ್ಲಿ ಎಲ್ಲರೂ ಆಚರಿಸುವರು.
ಚೈತ್ರ ಮಾಸದ ಶುಕ್ಲಪಕ್ಷದ ಪಾಡ್ಯದಂದು ನಾವು ಈ ಹಬ್ಬವನ್ನು ಆಚರಿಸುತ್ತೇವೆ. ಆಗ ಪ್ರಕೃತಿಯಲ್ಲಿ ನವ ಚೈತನ್ಯ ಕಾಣುತ್ತೇವೆ. ಮರ-ಗಿಡಗಳಲ್ಲಿ ಹೊಸ ಚಿಗುರು ಬಿಡುವ ಕಾಲ. ಮರಗಳು ಹೂವಿನಿಂದ ಮೈ ತುಂಬಿ ನಿಂತಿರುವುದನ್ನು ಕಾಣುತ್ತೇವೆ. ಯುಗಾದಿಯನ್ನು ಸಂಭ್ರಮದಿಂದ ಆಚರಿಸಿ ನಾವು ಪ್ರಕೃತಿಯ ಸಡಗರದೊಂದಿಗೆ ಯುಗದ ಆದಿಗೆ ನಾಂದಿ ಹಾಡೋಣ ಎಂಬಂತೆ ಈ ಹಬ್ಬವನ್ನು ಆಚರಿಸುತ್ತೇವೆ.
ತಜ್ಞ ಜ್ಯೋತಿಷ್ಯರೊಂದಿಗೆ ಮಾತನಾಡಿ ಮತ್ತು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರಗಳನ್ನು ಪಡೆಯಿರಿ
ಯುಗಾದಿಯನ್ನು ಚಂದ್ರಮಾನ ಯುಗಾದಿ ಹಾಗೂ ಸೌರಮಾನ ಯುಗಾದಿ ಎಂದು ಎರಡು ಬಗೆಯಲ್ಲಿ ಆಚರಿಸಲಾಗುತ್ತದೆ. ಚಂದ್ರನ ಚಲನೆ ಯನ್ನು ಆಧರಿಸಿ ಮಾಡುವ ಯುಗಾದಿಗೆ ಚಾಂದ್ರಮಾನ ಯುಗಾದಿಯೆಂದೂ ಸೂರ್ಯನು ಮೇಷ ರಾಶಿಗೆ ಪ್ರವೇಶ ಮಾಡುವ ದಿನವನ್ನು ಸೌರಮಾನ ಯುಗಾದಿ ಎಂದು ಕರೆಯುತ್ತೇವೆ. ಚಂದ್ರಮಾನ ಯುಗಾದಿಯನ್ನು ಕರ್ನಾಟಕ, ಆಂಧ್ರಪ್ರದೇಶ , ಮಹಾರಾಷ್ಟ್ರ ಹಾಗೂ ಗುಜರಾತ್‍ಗಳಲ್ಲಿ ಆಚರಿಸುತ್ತಾರೆ. ಹಾಗೆಯೇ ಸೌರಮಾನ ಯುಗಾದಿಯನ್ನು ಕರ್ನಾಟಕದ ಕರಾವಳಿ ಭಾಗ, ಕೇರಳ, ತಮಿಳುನಾಡು ಹಾಗೂ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಆಚರಿಸುತ್ತಾರೆ.
ಯುಗಾದಿ 2022 ಮಂಗಳಕರ ಸಮಯಗಳು
2 ಏಪ್ರಿಲ್ 2022 (ಶನಿವಾರ)
ಪ್ರತಿಪದ ತಿಥಿಯು ಏಪ್ರಿಲ್ 1, 2022 ರಂದು 11:56:15 ಕ್ಕೆ ಪ್ರಾರಂಭವಾಗುತ್ತದೆ
ಪ್ರತಿಪದ ತಿಥಿಯು ಏಪ್ರಿಲ್ 2, 2022 ರಂದು 12:00:31 ಕ್ಕೆ ಕೊನೆಗೊಳ್ಳುತ್ತದೆ
ಮಾಹಿತಿ: ಈ ಸಮಯಗಳು ನವದೆಹಲಿಗೆ ಅನ್ವಯಿಸುತ್ತವೆ. ನಿಮ್ಮ ನಗರಕ್ಕೆ ಅನುಗುಣವಾಗಿ ಶುಭ ಸಮಯಗಳನ್ನು ತಿಳಿಯಲು, ಇಲ್ಲಿ ಕ್ಲಿಕ್ ಮಾಡಿ
ಈ ಮಂಗಳಕರ ಯೋಗಗಳು ಯುಗಾದಿಯ ಮಹತ್ವವನ್ನು ಹೆಚ್ಚಿಸುತ್ತವೆ
ಯುಗಾದಿಯು ಒಂದು ಸುಂದರ ಹಬ್ಬವಾಗಿದ್ದು , ಸ್ವತಃ ಮಂಗಳಕರ ಮತ್ತು ಮಹತ್ವದ್ದಾಗಿದೆ. ಆದರೆ ಈ ದಿನದಂದು ಮಂಗಳಕರ ಸಂಯೋಗಗಳು ರೂಪುಗೊಂಡಾಗ ಅದರ ಮೌಲ್ಯವು ಹೆಚ್ಚಾಗುತ್ತದೆ. ಈಗ, ಯುಗಾದಿಯಂದು ರೂಪುಗೊಳ್ಳುವ ಮಂಗಳಕರ ಯೋಗಗಳ ಬಗ್ಗೆ ಮಾತನಾಡೋಣ.
- ಏಪ್ರಿಲ್ 2 ರಂದು ಸೂರ್ಯೋದಯವು ಬೆಳಿಗ್ಗೆ 5:51 ಕ್ಕೆ ಇರುತ್ತದೆ ಮತ್ತು ಪ್ರತಿಪದ ದಿನಾಂಕವು 11:29 ರಿಂದ ಪ್ರಾರಂಭವಾಗುತ್ತದೆ.
- ಈ ದಿನ, ರೇವತಿ ನಕ್ಷತ್ರವು ಹಗಲಿನಲ್ಲಿ 12:57 ರಿಂದ ಇರುತ್ತದೆ ಮತ್ತು ನಂತರ ಅಶ್ವಿನಿ ನಕ್ಷತ್ರವು ಪ್ರಾರಂಭವಾಗುತ್ತದೆ.
- ಏಪ್ರಿಲ್ 2 ರಂದು ಐಂದ್ರ ಯೋಗ ರಚನೆಯಾಗುತ್ತಿದೆ. ಐಂದ್ರ ಯೋಗವು 8:22 ರವರೆಗೆ ಇರುತ್ತದೆ ಮತ್ತು ನಂತರ ವೈಧೃತಿ ಯೋಗವು ರೂಪುಗೊಳ್ಳುತ್ತದೆ.
- ಇದಲ್ಲದೇ ಈ ದಿನ ಧಾತ ಎಂಬ ಯೋಗವೂ ರೂಪುಗೊಳ್ಳುತ್ತಿದೆ.
ಕರ್ನಾಟಕದಲ್ಲಿ ಯುಗಾದಿಯನ್ನು ಬಹಳ ಸಂಭ್ರಮದಿಂದ ಅರ್ಥಪೂರ್ಣವಾಗಿ ಆಚರಿಸುತ್ತಾರೆ. ಆ ದಿನ ಮುಂಜಾನೆ ಬೇವು ಮಿಶ್ರಿತ ನೀರಿನಿಂದ ಸ್ನಾನ ಮಾಡಿ, ಹೊಸಬಟ್ಟೆ ಧರಿಸಿ ತಂತಮ್ಮ ದೇವರನ್ನು ಪೂಜಿಸಿ, ಬೇವು ಬೆಲ್ಲವನ್ನು ಸೇವನೆ ಮಾಡುತ್ತಾರೆ. ಬೇವು-ಬೆಲ್ಲವು ಸುಖ-ದುಃಖ, ರಾತ್ರಿ-ಹಗಲು ಇವುಗಳ ಸಂಕೇತಗಳಾಗಿವೆ. ಬದುಕಿನಲ್ಲಿ ಸುಖ-ದುಃಖಗಳು ಅವಿಭಾಜ್ಯ ಅಂಶಗಳು. ಇವೆಲ್ಲವುಗಳೊಂದಿಗೆ ಸಮತೋಲನ ಕಾಯ್ದುಕೊಂಡೇ ಮನುಷ್ಯ ಬದುಕಬೇಕು. ಜೀವನ ಕಷ್ಟ-ಸುಖ, ನೋವು ನಲಿವುಗಳ ಸಮ್ಮಿಶ್ರಣವಾಗಿದೆ. ಇವೆರಡೂ ಒಟ್ಟಿಗೆ ಇರುವವು. ಎರಡನ್ನೂ ಸಮದೃಷ್ಟಿಯಿಂದ ಸವಿಯುವುದನ್ನು ಕಲಿಯಲೆಂದೇ ಯುಗಾದಿಯಂದು ಬೇವು-ಬೆಲ್ಲವನ್ನು ತಿನ್ನುವ ಸಂಪ್ರದಾಯವಿದೆ.
ಭವಿಷ್ಯದ ಎಲ್ಲಾ ಮೌಲ್ಯಯುತ ಒಳನೋಟಗಳಿಗಾಗಿ ಆಸ್ಟ್ರೋಸೇಜ್ ಬೃಹತ್ ಜಾತಕ
ಯುಗಾದಿಯ ದಿನ ನೆನಪಿಗೆ ಬರುವುದು ಹಸಿರು ತೋರಣಗಳು, ಬಣ್ಣದ ರಂಗೋಲಿ, ಅಭ್ಯಂಗ ಸ್ನಾನ, ಬೇವು-ಬೆಲ್ಲ, ಪಂಚಾಂಗ ಶ್ರವಣ, ಹೋಳಿಗೆ ಊಟ, ಲಂಗ ದಾವಣಿ ತೊಟ್ಟ ಮಕ್ಕಳು ಯುವತಿಯರು ಹೀಗೆ ಸಂಭ್ರಮ. ಕೆಲವರು ಯುಗಾದಿಯ ಹಿಂದಿನ ದಿವಸ ಅಮಾವಾಸ್ಯೆಯಂದು ಲಕ್ಷ್ಮಿ ಪೂಜೆಯನ್ನು ನೆರವೇರಿಸುತ್ತಾರೆ. ಮನೆಯನ್ನು ಸ್ವಚ್ಛಗೊಳಿಸಿ ಶಾಸ್ತ್ರೋಕ್ತವಾಗಿ ಕಳಸ ಪ್ರತಿಷ್ಠಾಪಿಸಿ ಶಕ್ತ್ಯಾನುಸಾರ ಪೂಜೆ ಮಾಡುವರು.
ಅಮಾವಾಸ್ಯೆಯ ಮಾರನೆ ದಿನ ಯುಗಾದಿ. ಮುಂಜಾನೆಯೇ ಎದ್ದು ಬಾಗಿಲು ಸಾರಿಸಿ ಬಣ್ಣದ ರಂಗೋಲಿಯನ್ನು ಹಾಕಿ ಬಾಗಿಲಿಗೆ ಮಾವಿನ ಎಲೆ ಮತ್ತು ಬೇವಿನ ಎಲೆಯ ತಳಿರು ತೋರಣ ಕಟ್ಟುವರು. ಹಾಗೂ ಮನೆಯವರೆಲ್ಲರೂ ಎಣ್ಣೆ ಸ್ನಾನವನ್ನು ಮಾಡುವರು. ದೇಹದ ಉಷ್ಣತೆ ಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಪದ್ಧತಿಯು ರೂಢಿಗೆ ಬಂದಿದೆ. ನಂತರ ಹೊಸ ಬಟ್ಟೆಯನ್ನು ಧರಿಸಿ ದೇವರನ್ನು ಅಲಂಕರಿಸಿ ಹೋಳಿಗೆಯೊಂದಿಗೆ ಇತರ ಭಕ್ಷ್ಯಗಳನ್ನು ಮಾಡಿ ದೇವರಿಗೆ ಸಮರ್ಪಿಸಿ ಪೂಜೆ ಮಾಡುವರು. ಬೇವು-ಬೆಲ್ಲ ಸ್ವೀಕರಿಸುವರು.
ಪೌರಾಣಿಕ ಹಿನ್ನೆಲೆ:
ಯುಗಾದಿ ಹಬ್ಬವು ಪೌರಾಣಿಕ ಹಾಗೂ ಐತಿಹಾಸಿಕ ವಿಶೇಷತೆಗಳ ದಿನವಾಗಿದೆ. ಇದು ಬ್ರಹ್ಮದೇವನ ಸೃಷ್ಟಿಯ ದಿನ. ಚೈತ್ರಶುದ್ಧ ಪಾಡ್ಯದಂದು ಸೂರ್ಯೋದಯವಾಗುತ್ತಿರುವಾಗ ಬ್ರಹ್ಮನು ವಿಶ್ವವನ್ನು ಸೃಷ್ಟಿಸಿದನೆಂದೂ, ಅಂದಿನಿಂದ ಕಾಲಗಣನೆಗಾಗಿ ಗ್ರಹ-ನಕ್ಷತ್ರ-ಮಾಸ-ಋತು-ವರ್ಷ ಇವುಗಳನ್ನು ಏರ್ಪಡಿಸಿದನೆಂದೂ ವ್ರತಖಂಡದಲ್ಲೂ ಪುರಾಣಗಳಲ್ಲೂ ಉಲ್ಲೇಖವಿದೆ. ಅಷ್ಟು ಮಾತ್ರವಲ್ಲದೆ, ಶ್ರೀರಾಮನು ರಾವಣನನ್ನು ಸಂಹರಿಸಿ ಬಂದಾಗ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪಟ್ಟಾಭಿಷೇಕವಾದ ದಿನವೆಂದೂ ಹೇಳಲಾಗುತ್ತದೆ. ಅಲ್ಲದೆ ಮಹಾಭಾರತದಲ್ಲಿ ಬರುವ ಚೀದಿರಾಜ್ಯದ ಅರಸು ವಸುವಿನ ಉಗ್ರ ತಪಸ್ಸಿಗೆ ಮೆಚ್ಚಿದ ಇಂದ್ರನು ವೈಜಯಂತಿ ಮಾಲೆಯನ್ನು ಅವನಿಗೆ ಕೊಟ್ಟು, ಚಿನ್ನದ ಕಲಶವುಳ್ಳ ಚಕ್ರಾಧಿಪತ್ಯದ ಧ್ವಜವನ್ನು ರಾಜನ ತಲೆಯ ಮೇಲೆ ಇಟ್ಟಿರುವ ದಿನವೂ ಇದು ಎಂದು ಪರಿಗಣಿಸಲಾಗುತ್ತದೆ.
ಅಷ್ಟು ಮಾತ್ರವಲ್ಲದೆ, ಯುಗಾದಿಯ ದಿನ ಜನರು ಸೂರ್ಯೋದಯಕ್ಕೆ ಮುನ್ನ ಎದ್ದು ಮನೆಯ ಎದುರು ರಂಗೋಲಿ ಹಾಕಿ, ಬಾಗಿಲುಗಳನ್ನು ತಳಿರು ತೋರಣಗಳಿಂದ ಸಿಂಗರಿಸುತ್ತಾರೆ. ಹೀಗೆ ಮಾವಿನೆಲೆಗಳಿಂದ ಸಿಂಗರಿಸುವುದರ ಹಿಂದೆಯೂ ಕತೆಯಿದೆ.
ಶಿವನ ಮಕ್ಕಳಾದ ಕಾರ್ತಿಕೇಯ ಹಾಗೂ ಗಣೇಶರಿಬ್ಬರಿಗೂ ಮಾವಿನ ಹಣ್ಣುಗಳೆಂದರೆ ಇಷ್ಟ. ಕಾರ್ತಿಕೇಯನು ಜನರಿಗೆ ಯುಗಾದಿ ದಿನ ಮನೆಯನ್ನು ಮಾವಿನೆಲೆಗಳಿಂದ ಸಿಂಗರಿಸಿದರೆ ಉತ್ತಮ ಇಳುವರಿಯನ್ನೂ, ಸಮೃದ್ಧಿಯನ್ನೂ ಪಡೆಯಬಹುದಾಗಿ ಹೇಳಿದ ಎನ್ನಲಾಗುತ್ತದೆ. ನಂತರ ಜನರು ತಮ್ಮಿಷ್ಟದ ದೇವರಲ್ಲಿ ಪ್ರಾರ್ಥಿಸಿ, ಇಡೀ ವರ್ಷ ಚೆನ್ನಾಗಿರುವಂತೆ ಕೋರುತ್ತಾರೆ.
ನಮ್ಮ ಗೌರವಾನ್ವಿತ ಜ್ಯೋತಿಷಿಗಳ ಬಳಿ ಮುಂದೆ ಏನಾಗಬಹುದು ಎಂಬುದರ ಕುರಿತು ಸುಳಿವುಗಳು ಲಭ್ಯವಿವೆ
ಐತಿಹಾಸಿಕ ಹಿನ್ನೆಲೆ:
ದಕ್ಷಿಣ ಭಾರತವನ್ನು ಆಳಿದ ಶಾಲಿವಾಹನನು ಚೈತ್ರಶುದ್ಧ ಪಾಡ್ಯಮಿಯಂದು ಪಟ್ಟಾಭಿಷೇಕಗೊಂಡನೆಂದೂ, ಆಗಿನಿಂದ ಶಾಲಿವಾಹನ ಶಕೆ ಆರಂಭವಾಯಿತೆಂದೂ ಹೇಳಲಾಗುತ್ತದೆ. ಹಿಂದುಗಳು ಶಾಲಿವಾಹನ ಶಕೆಯ ಸಂವತ್ಸರಗಳನ್ನಾಧರಿಸಿ ಆಯಾ ಸಂವತ್ಸರವನ್ನು ಚೈತ್ರ ಮಾಸದ ಪ್ರತಿಪದೆಯಿಂದ ಆರಂಭಿಸುವರು. ಯುಗಾದಿಯು ಚಂದ್ರಮಾನದ ಸಂವತ್ಸರದ ಆರಂಭದ ದಿನವಾಗಿದೆ.
ಹೀಗೆ ಯುಗಾದಿಯು ಒಂದು ಸಂಭ್ರಮ ಸಂತಸದಿಂದ ಹೊಸ ಋತುವನ್ನು ಬರಮಾಡಿಕೊಳ್ಳುವ ಹಬ್ಬ. ಇಡೀ ಜಗತ್ತು ಸಮೃದ್ಧಿಯಿಂದ ಕೂಡಿರಲಿ ಎಂದು ಈ ಹಬ್ಬ ಸಂದೇಶವನ್ನು ಸಾರುತ್ತದೆ.
ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಜ್ಯೋತಿಷ್ಯ ಪರಿಹಾರಗಳು ಮತ್ತು ಸೇವೆಗಳಿಗಾಗಿ, ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್
ಆಸ್ಟ್ರೋಸೇಜ್ ಜೊತೆಗೆ ಸಂಪರ್ಕದಲ್ಲಿರುವುದಕ್ಕಾಗಿ ಧನ್ಯವಾದಗಳು!
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
- Horoscope 2025
- Rashifal 2025
- Calendar 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ராசி பலன் 2025
- రాశిఫలాలు 2025
- ರಾಶಿಭವಿಷ್ಯ 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025