ತುಲಾ ರಾಶಿ ಭವಿಷ್ಯ 2022 - Libra Horoscope 2022 in Kannada
ಆಸ್ಟ್ರೋಸೇಜ್ ನ ಈ ತುಲಾ ರಾಶಿ ಭವಿಷ್ಯ 2022 (Libra Horoscope 2022) ರ ಮೂಲಕ, ತುಲಾ ರಾಶಿಚಕ್ರದ ಸ್ಥಳೀಯರ ಪ್ರೀತಿ, ವೃತ್ತಿ, ಮದುವೆ, ಆರ್ಥಿಕ ಪರಿಸ್ಥಿತಿ, ಮಕ್ಕಳು, ಉದ್ಯೋಗ, ವ್ಯಾಪಾರ ಇತ್ಯಾದಿ ಹೇಗಿರಲಿದೆ ಎಂದು ತಿಳಿಯಬಹುದು. ವೈದಿಕ ಜ್ಯೋತಿಷ್ಯವನ್ನು ಆಧರಿಸಿದ ಈ ರಾಶಿ ಭವಿಷ್ಯದಲ್ಲಿ ವರ್ಷ 2022 ರ ಅತ್ಯಂತ ವಿವರವಾದ ಮತ್ತು ನಿಖರವಾದ ರಾಶಿ ಭವಿಷ್ಯವನ್ನು ತಿಳಿಯಿರಿ. 2022 ರ ವಾರ್ಷಿಕ ಮುನ್ಸೂಚನೆಯ ಪ್ರಕಾರ, ವರ್ಷ 2022 ರಲ್ಲಿ ತುಲಾ ರಾಶಿಚಕ್ರದ ಸ್ಥಳೀಯರು ಜೀವನದ ಅನೇಕ ಕ್ಷೇತ್ರಗಳಲ್ಲಿ ಅನುಕೂಲಕರ ಸಮಯದ ಲಾಭವನ್ನು ಪಡೆದುಕೊಳ್ಳಬಹುದು. ಜೀವನದ ಸಮತೋಲನವನ್ನು ಉಳಿಸಿಕೊಳ್ಳಲು ನೀವು ಜೀವನದ ಪ್ರತಿ ಸಣ್ಣ-ದೊಡ್ಡ ವಿಷಯಗಳ ಬಗ್ಗೆ ಕಾಲೇಜಿ ವಹಿಸಬೇಕಾಗುತ್ತದೆ. ಈ ವರ್ಷ ನಿಮ್ಮ ಕುಟುಂಬ ಜೀವನದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದರೆ ಅಂತಹ ಪರಿಸ್ಥಿತಿಯಲ್ಲಿ ನಿಮ್ಮನ್ನು ಶಾಂತವಾಗಿರಿಸಲು ನಿಮಗೆ ಸಲಹೆ ನೀಡಲಾಗಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನಿಮ್ಮ ಪರಿಶ್ರಮ ಮತ್ತು ಹೆಚ್ಚಿನ ಯಶಸ್ಸಿನ ಸಂದರ್ಭದಲ್ಲಿ ಮಂಗಳಕರವಾಗಿರಲಿದೆ. ವರ್ಷವಿಡೀ ನೀವು ನಿಮಗೆ ಬೇಕಾಗಿರುವ ಸೌಕರ್ಯವನ್ನು ಒದಗಿಸುವಲ್ಲಿ ನಿರತರಾಗಿರುತ್ತೀರಿ. ವರ್ಷದ ಹೆಚ್ಚಿನ ಸಮಯದಲ್ಲಿ ನಾಲ್ಕನೇ ಮನೆಯಲ್ಲಿ ಶನಿ ದೇವರ ಸಂಚಾರವು ಕಠಿಣ ಪರಿಶ್ರಮ ಮಾಡಲು ನಿಮ್ಮನ್ನು ಪ್ರೇರೇಪಿಸುತ್ತದೆ. ಕೆಲವೊಮ್ಮೆ ಹತಾಶೆಯಿಂದ ಈ ಕೆಲಸವನ್ನು ಬಿಟ್ಟುಬಿಡಬೇಕು ಎಂದು ನಿಮಗೆ ಅನಿಸುವ ಸಾಧ್ಯತೆಯೂ ಇದೆ, ಆದರೆ ನಂತರ ಅದೇ ಉತ್ಸಾಹದಿಂದ ನೀವು ಆ ಕೆಲಸವನ್ನು ಪ್ರಾರಂಭಿಸುತ್ತೀರಿ.
2022 ರಲ್ಲಿ ನಿಮ್ಮ ಅದೃಷ್ಟ ಬದಲಾಗುತ್ತದೆ?ಪರಿಣಿತ ಜ್ಯೋತಿಷಿಗಳೊಂದಿಗೆ ಚಾಟ್ ಮತ್ತು ಕರೆಯಲ್ಲಿ ಮಾತನಾಡಿ
13 ಏಪ್ರಿಲ್ ರಂದು ಗುರು ಗ್ರಹವು ಮೀನ ರಾಶಿಚಕ್ರದ ಆರನೇ ಮನೆಯಲ್ಲಿ ಮತ್ತು 12 ಏಪ್ರಿಲ್ ರಂದು ರಾಹುವು ಮೇಷ ರಾಶಿಚಕ್ರದ ಏಳನೇ ಮನೆಗೆ ಸಾಗುತ್ತದೆ. 29 ಏಪ್ರಿಲ್ ರಂದು ಶನಿ ದೇವರು ಕುಂಭ ರಾಶಿಯ ಐದನೇ ಮನೆಗೆ ಗೋಚರಿಸುತ್ತಾರೆ ಮತ್ತು 12 ಏಪ್ರಿಲ್ ರಂದು ಇದು ವಕ್ರನಾಗಿ ಮಕರ ರಾಶಿಯಲ್ಲಿ ನಾಲ್ಕನೇ ಮನೆಗೆ ಸಾಗುತ್ತಾರೆ. ವರ್ಷದ ಮಧ್ಯದಲ್ಲಿ. ನಿಮ್ಮ ಕುಟುಂಬದ ಸಂಬಂಧಗಳ ಬಗ್ಗೆ ಕಾಳಜಿ ವಹಿಸಲು ಮತ್ತು ಆಪ್ತರೊಂದಿಗೆ ಹೆಚ್ಚು ಮಾತನಾಡಲು ಮತ್ತು ದೈನಂದಿನ ವಿಷಯಗಳನ್ನು ಸಾಧ್ಯವಾದಷ್ಟು ಬೇಗನೆ ಬಗೆಹರಿಸಲು ನಿಮಗೆ ಸಲಹೆ ನೀಡಲಾಗಿದೆ ಈ ರಾಶಿಚಕ್ರದ ಪರಿಶ್ರಮಿ ಜನರು ವರ್ಶದ ಮಧ್ಯದಲ್ಲಿ ಉತ್ತಮ ಹಣಕಾಸು ಗಳಿಸುತ್ತಾರೆ.
ತುಲಾ ರಾಶಿಚಕ್ರದ ಸ್ಥಳೀಯರಿಗೆ ವರ್ಷದ ಅಂತ್ಯದ ಭಾಗವು ಅನುಕೂಲಕರವಾಗಿರುತ್ತದೆ. ಪ್ರೀತಿ ಮತ್ತು ಕೆಲಸದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ವರ್ಷದ ಅಂತ್ಯದ ವೇಳೆಗೆ ಅದೃಷ್ಟದಲ್ಲಿ ಗಮನಾರ್ಹ ಬದಲಾವಣೆಯಾಗುವ ಸಾಧ್ಯತೆ ಇದೆ. ಸ್ವಲ್ಪ ಸಮಯಕ್ಕೆ ನಿಮ್ಮ ದೈನಂದಿನದ ಕಾರ್ಯನಿರತ ಜೀವನವನ್ನು ತಪ್ಪಿಸಲು ಸಹ ನೀವು ಶುಭ ಸಮಯವನ್ನು ಪಡೆಯಬಹುದು. ಅಂದರೆ ಈ ಸಮಯದಲ್ಲಿ ನೀವು ಯಾವುದೇ ಅಲ್ಪ ದೂರದ ಟ್ರಿಪ್ ಅಥವಾ ರಜೆಯ ಮೇಲೆ ಹೋಗಲು ಯೋಜಿಸಬಹುದು. ಅಸಾಮಾನ್ಯ ಕಾರ್ಯಗಳು ಮತ್ತು ಗುರುಗಳು ಉದ್ಭವಿಸಬಹುದು ಮತ್ತು ನಿಮ್ಮ ಸಂವಹನ ವಲಯಯು ವಿಸ್ತರಿಸುತ್ತದೆ.
- ವರ್ಷದ ಮಧ್ಯದಲ್ಲಿ, ಮಂಗಳ ನಿಮ್ಮ ಹತ್ತನೇ ಮನೆಯಲ್ಲಿ ಕರ್ಕ ರಾಶಿಚ್ಗೆ ಗೋಚರಿಸುತ್ತದೆ, ಇದರ ಪರಿಣಾಮವಾಗಿ ವೃತ್ತಿ ಜೀವನಕ್ಕೆ ಸಂಬಂಧಿಸಿದ ಕೆಲವು ಹೊಸ ಮತ್ತು ಅನನ್ಯ ಅನುಭವಗಳನ್ನು ನೀವು ಹೊಂದಬಹುದು ಮತ್ತು ನಿಮಗೆ ತುಂಬಾ ಲಾಭವಾಗುತ್ತದೆ.
- ನೀವು ಹಿಂದಿನ ಸಮಯದಿಂದ ಯೋಚಿಸುತ್ತಿದ್ದ, ಬಡ್ತಿ ಅಥವಾ ವರ್ಗಾವಣೆಯ ಅಶಿವರಾದವನ್ನು ಗುರುವು ನೀಡುತ್ತಾರೆ,
- ಎಂಟನೇ ಮನೆಯಲ್ಲಿ ಚಂದ್ರನ ಉತ್ತರ ನೋಡ್ ರಾಹುವು ಅನಗತ್ಯ ವೆಚ್ಚಗಳನ್ನು ಹೆಚ್ಚಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ವಿಶೇಷವಾಗಿ ಈ ದಿನಗಳಲ್ಲಿ ನಿಮ್ಮ ಹಣಕಾಸಿನ ವೆಚ್ಚಗಳ ಬಗ್ಗೆ ವಿಶೇಷ ಗಮನ ಹರಿಸಿ.
- ನಿಮ್ಮ ನಾಲ್ಕನೇ ಮನೆಯಲ್ಲಿರುವ ಶನಿಯು ನಿಮ್ಮ ಕುಟುಂಬದ ಕಲ್ಯಾಣ ಮತ್ತು ಸಂತೋಷದಲ್ಲಿ ಕೆಲವೊಮ್ಮೆ ಅಡೆತಡೆಗಳನ್ನು ಉದ್ಭವಿಸಬಹುದು.
- ಹಿಂದಿನ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ನಿಮ್ಮ ಪ್ರೀತಿ ಜೀವನವು ಉತ್ತಮವಾಗಿರುತ್ತದೆ.
ಜನವರಿ ತಿಂಗಳ ಆರಂಭವು ಉತ್ತಮವಾಗಿರುತ್ತದೆ ಮತ್ತು ನಿಮ್ಮ ಕಠಿಣ ಪರಿಶ್ರಮ ಉತ್ತಮ ಫಲವನ್ನು ನೀವು ಪಡೆಯುತ್ತೀರಿ. ಈ ಸಮಯದಲ್ಲಿ ನೀವು ತುಂಬಾ ಸಕ್ರಿಯರಾಗಿರುತ್ತೀರಿ ಮತ್ತು ನೀವು ಹೊಸ ಸ್ನೇಹಿತರನ್ನು ಭೇಟಿಯಾಗುತ್ತೀರಿ ಮತ್ತು ಕುಟುಂಬದಲ್ಲಿ ನಿಕಟತೆ ಉಳಿದಿರುತ್ತದೆ
ಫೆಬ್ರವರಿ ರಿಂದ ಜೂನ್ ತಿಂಗಳು ಮತ್ತು ನಂತರ ಸೆಪ್ಟೆಂಬರ್ ರಿಂದ ಡಿಸೆಂಬರ್ ನಡುವೆ ನೀವು ಯಾವುದೇ ದಾಖಲೆಯ ಬಗ್ಗೆ ವಿಶೇಷ ಕಾಳಜಿ ವಹಿಸಲು ನಿಮಗೆ ಸಲಹೆ ನೀಡಲಾಗಿದೆ. ಯಾವುದೇ ಚರ ಆಸ್ತಿಯನ್ನು ಖರೀದಿಸಲು ನಿಮ್ಮ ಆಸಕ್ತಿ ಹೆಚ್ಚಾಗಬಹುದು. ಆದಾಗ್ಯೂ ಮನೆ ಖರೀದಿಸಲು ಅಥವಾ ಮಾರಾಟ ಮಾಡುವ ಮೊದಲು ಮನೆಯ ಹಿರಿಯರ ಮತ್ತು ಜ್ಞಾನವುಳ್ಳ ವ್ಯಕ್ತಿಯಿಂದ ಸಲಹೆಯನ್ನು ಪಡೆದುಕೊಳ್ಳಬೇಕು. ನೀವು ಯಾವುದೇ ಹೊಸ ಕೆಲಸವನ್ನು ಆರಂಭಿಸಲು ಬಯಸುತ್ತಿದ್ದರೆ, ಆರ್ಥಿಕ ಲಾಭವನ್ನು ಪಡೆಯಲು ನಿಮಗೆ ಅನುಕೂಲಕರವಾಗಿರುತ್ತದೆ.
ಆಗಸ್ಟ್ ನಂತರ ಹಣಕಾಸಿನ ವಿಷಯದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರಲಿದೆ. ಈ ಅವಧಿಯಲ್ಲಿ ನಿಮ್ಮ ಪೋಷಕರ ಮೂಲಕ ನಿಮ್ಮನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ಜಾಗರೂಕರಾಗಿರಬೇಕು. ಸಂಬಂಧಗಳಲ್ಲಿ ಕೆಲವು ಬಿಕ್ಕಟ್ಟುಗಳು ಉಂಟಾಗಬಹುದು. ನೀವು ಯಾವುದೇ ಹೊಸ ಉದ್ಯೋಗವನ್ನು ಆರಂಭಿಸಿದ್ದರೆ, ನೀವು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಪ್ರೀತಿ ಮತ್ತು ಹಣ ಎರಡೂ ವಿಷಯಗಳಲ್ಲಿ ನೀವು ಕಾಳಜಿ ವಹಿಸುವ ಅಗತ್ಯವಿರುತ್ತದೆ. ಆರೋಗ್ಯದ ಬಗ್ಗೆ ಜಾಗರೂಕರಾಗಿದ್ದರೆ, ನಿಮಗೆ ವಿಶೇಷವಾಗಿ ಉತ್ತಮವಾಗಿರುತ್ತದೆ.
ಅಂತ್ಯದ ತ್ರೈಮಾಸಿಕದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ನೀವು ಗಮನಾರ್ಹ ಕಾಳಜಿ ವಹಿಸಬೇಕೆಂದು ಸಲಹೆ ನೀಡಲಾಗಿದೆ. ಕೆಲಸದೊಂದಿಗೆ ನಿಯಮಿತವಾಗಿ ವಿಶ್ರಾಂತಿ ತೆಗೆದುಕೊಳ್ಳುವುದರಿಂದ ನೀವು ತಾಜಾತನವನ್ನು ಅನುಭವಿಸುವಿರಿ. ಒಟ್ಟಾರೆಯಾಗಿ, ಮುಂಬರುವ ವರ್ಷವು ಅದ್ಭುತವಾಗಿರಲಿದೆ. ಯಶಸ್ಸು ನಿಮ್ಮ ಪದಗಳನ್ನು ಮುಟ್ಟುತ್ತದೆ. ಈ ಸಮಯದಲ್ಲಿ ನಿಮ್ಮ ಸಾಮಾಜಿಕ ವಯಲಯವು ಸಹ ವಿಸ್ತರಿಸುತ್ತದೆ.
ವರ್ಷ 2022 ತುಲಾ ರಾಶಿಚಕ್ರದ ಸ್ಥಳೀಯರಿಗೆ ಅದೃಷ್ಟದ ಸಮಯವೆಂದು ಸಾಬೀತುಪಡಿಸುತ್ತದೆ. ಏಕೆಂದರೆ ಶನಿ ದೇವ ಕುಂಭ ರಾಶಿಯ ಐದನೇ ಮನೆಯಲ್ಲಿರುತ್ತಾರೆ. ಈ ಸಮಯದಲ್ಲಿ ನೀವು ವಿಷಯಗಳನ್ನು ಆರಂಭದಿಂದ ಆರಂಭಿಸುತ್ತೀರಿ ಮತ್ತು ನಿಮ್ಮ ಜೀವನದಲ್ಲಿ ಎಲ್ಲಾ ರೀತಿಯ ಹೊಸತನ ಇರುತ್ತದೆ. ಈ ವರ್ಷದಲ್ಲಿ ಬದಲಾವಣೆಗಳು ಮತ್ತು ಅವಕಾಶಗಳು ಎರಡೂ ನಿಮ್ಮ ಜೀವನದಲ್ಲಿ ಸಂಪೂರ್ಣವಾಗಿ ತುಂಬಿರುತ್ತವೆ. ಆದಾಗ್ಯೂ ನಿಮ್ಮನ್ನು ಹೆಚ್ಚು ಆಯಾಸಗೊಳಿಸಬೇಡಿ.
Click here to read in English: Libra Horoscope 2022
ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ
ತುಲಾ ಪ್ರೀತಿ ರಾಶಿ ಭವಿಷ್ಯ 2022
ತುಲಾ ಪ್ರೀತಿ ರಾಶಿ ಭವಿಷ್ಯ 2022 ರ ಪ್ರಕಾರ, 2022 ರಲ್ಲಿ ತುಲಾ ರಾಶಿಚಕ್ರದ ಜೀವನವು ಸಾಕಷ್ಟು ಮಟ್ಟಿಗೆ ಸುಗಮವಾಗಿ ನಡೆಯಬಹುದು. ಪ್ರೀತಿಯ ಸಂಬಂಧದ ಬಗ್ಗೆ ಗಂಭೀರರಾಗಿರುವ ತುಲಾ ರಾಶಿಚಕ್ರದ ಜನರು ಈ ವರ್ಷ ಮದುವೆಯಾಗಬಹುದು. ಒಂಟಿಯಾಗಿರುವವರು ಮತ್ತು ಯಾರೊಂದಿಗಾದರೂ ಸಂಬಂಧವನ್ನು ಹೊಂದಲು ಬಯಸುವವರು ಈ ವರ್ಷ ಯಶಸ್ಸನ್ನು ಪಡೆಯಬಹುದು. ವಿವಾಹಿತ ಜನರ ಜೀವನದಲ್ಲೂ ಪ್ರೀತಿ ಮತ್ತು ಶಾಂತಿ ಉಳಿದಿರಲಿದೆ. ನಿಮ್ಮ ಸಂಗಾತಿಯ ಬಗ್ಗೆ ಕಠೋರ ಧ್ವನಿ ಮತ್ತು ಕೆಟ್ಟ ವ್ಯವಹಾರವನ್ನು ತಪ್ಪಿಸಲು ಪ್ರಯತ್ನಿಸಿ. ಅವರ ಬಗ್ಗೆ ಗೌರವ ಮತ್ತು ತಿಳುವಳಿಕೆಯನ್ನು ತೋರಿಸಿ. ವರ್ಷ 2022, ಉತ್ತಮ ಮತ್ತು ಅರೋಗ್ಯ ಸಂಭಾನ್ಧವನ್ನು ಆನಂದಿಸಲು ಅತ್ಯಂತ ಅದ್ಭುತವಾಗಿದೆ ಎಂದು ಸಾಬೀತಾಗಬಹುದು.
ತುಲಾ ವೃತ್ತಿ ರಾಶಿ ಭವಿಷ್ಯ 2022
ತುಲಾ ವೃತ್ತಿ ರಾಶಿ ಭವಿಷ್ಯ 2022 ರ ಪ್ರಕಾರ, ತುಲಾ ರಾಶಿಚಕ್ರದ ಸ್ಥಳೀಯರಿಗೆ ವೃತ್ತಿ ಜೀವನದ ದೃಷ್ಟಿಕೋನದಿಂದ ಇದು ಸಾಕಷ್ಟು ಸರಾಸರಿ ಎಂದು ಸಾಬೀತುಪಡಿಸುತ್ತದೆ. ವರ್ಷದ ಮೊದಲ ಕೆಲವು ತಿಂಗಳುಗಳ ಸಮಯದಲ್ಲಿ ನೀವು ಬಡ್ತಿ ಪಡೆಯುತ್ತೀರಿ ಎಂದು ನಿರೀಕ್ಷಿಸಲಾಗಿದೆ. ವರ್ಷದ ದ್ವಿತೀಯಾರ್ಧವು ವೃತ್ತಿ ಜೀವನದ ದೃಷ್ಟಿಕೋನದಿಂದ ಸಾಕಷ್ಟು ಸವಾಲುಗಳಿಂದ ತುಂಬಿರಬಹುದು. ಆದ್ದರಿಂದ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಲು ಸಲಹೆ ನೀಡಲಾಗಿದೆ. ಉದ್ಯೋಗ ಅಥವಾ ಕೆಲಸವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿರುವ ಜನರು ತಮ್ಮ ಪ್ರಸ್ತುತ ಉದ್ಯೋಗವನ್ನು ಬಿಡುವ ಮೊದಲು ಮತ್ತು ಹೊಸ ಕೆಲಸಕ್ಕೆ ಸೇರುವ ಮುನ್ನ ಸರಿಯಾದ ವಿಶ್ಲೇಷಣೆ ಮತ್ತು ಸಂಶೋಧನೆ ಮಾಡಲು ನಿಮಗೆ ಸಲಹೆ ನೀಡಲಾಗಿದೆ. ಈ ವರ್ಷ ಫ್ರೆಶರ್‌ಗಳು ತಮ್ಮ ಅಪೇಕ್ಷಿತ ಮತ್ತು ಉತ್ತಮ ಉದ್ಯೋಗವನ್ನು ಪಡೆಯುವ ಸಾಧ್ಯತೆ ಇದೆ.
ತುಲಾ ಶಿಕ್ಷಣ ರಾಶಿ ಭವಿಷ್ಯ 2022
ತುಲಾ ರಾಶಿಚಕ್ರದ ವಿದ್ಯಾರ್ಥಿಗಳು ವರ್ಷ 2022 ರಲ್ಲಿ ಅದ್ಭುತ ಫಲಿತಾಂಶಗಳನ್ನು ಪಡೆಯುವ ಪ್ರಬಲ ಸಾಧ್ಯತೆ ಕಂಡುಬರುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈ ವರ್ಷವೂ ಉತ್ತಮವಾಗಬಹುದು. ಮುಂದಿನ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಲು ಬಯಸುತ್ತಿರುವ ಜನರು ಜನವರಿ ರಿಂದ ಜೂನ್ ನಡುವೆ ಶುಭ ಸುದ್ದಿಯನ್ನು ಪಡೆಯಬಹುದು. ನಿಮ್ಮ ಮುಂಬರುವ ಜೀವನಕ್ಕೆ ಈ ವರ್ಷವು ಪ್ರಮುಖವಾದ ವರ್ಷವಾಗಿದೆ. ನೀವು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ ಮತ್ತು ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದು.
ತುಲಾ ಆರ್ಥಿಕ ರಾಶಿ ಭವಿಷ್ಯ 2022
ತುಲಾ ಆರ್ಥಿಕ ರಾಶಿ ಭವಿಷ್ಯ 2022 ರ ಪ್ರಕಾರ, ತುಲಾ ರಾಶಿಚಕ್ರದ ಸ್ಥಳೀಯರ ಆರ್ಥಿಕ ಜೀವನದ ದೃಷ್ಟಿಕೋನದಿಂದ 2022 ರಲ್ಲಿ ಸ್ಥಿರತೆಯನ್ನು ಸಾಧಿಸಬಹುದು. ಆದರೂ ನಿಮ್ಮ ಆರ್ಥಿಕ ಸ್ಥಿತಿಯ ಬಗ್ಗೆ ಜಾಗರೂಕರಾಗಿರಲು ನಿಮಗೆ ಸೂಚಿಸಲಾಗಿದೆ. ವರ್ಷದ ದ್ವಿತೀಯಾರ್ಧದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗಲಿವೆ. ಆದ್ದರಿಂದ ನೀವು ಜಾಗರೂಕರಾಗಿರಬೇಕು ಮತ್ತು ಹೆಚ್ಚಿನ ಉಳಿತಾಯದತ್ತ ಗಮನ ಹರಿಸಬೇಕು. ಜನವರಿ ರಿಂದ ಏಪ್ರಿಲ್ ವರೆಗೆ ಹಣಕಾಸಿನ ಹರಿವು ನಿರಂತರವಾಗಿರುತ್ತದೆ. ಈ ವರ್ಷ ನಿಮಗೆ ಅದಯಯದ ಯಾವುದೇ ಹೊಸ ಮೂಲ ಉಂಟಾಗುವುದಿಲ್ಲ. ಒಟ್ಟಾರೆಯಾಗಿ ಈ ವರ್ಷ ನಿಮ್ಮ ವೆಚ್ಚಗಳನ್ನು ನೀವು ವಿಶೇಷವಾಗಿ ನಿಯಂತ್ರಣದಲ್ಲಿಡಲು ನಿಮಗೆ ಸಲಹೆ ನೀಡಲಾಗಿದೆ.
ತುಲಾ ಕುಟುಂಬ ರಾಶಿ ಭವಿಷ್ಯ 2022
ಕುಟುಂಬ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷ ನಿಮ್ಮ ಕುಟುಂಬಕ್ಕೆ ಅನುಕೂಲಕರವಾಗಿರಲಿದೆ. ನಿಮ್ಮ ಸಮುದಾಯ ಮತ್ತು ಕುಟುಂಬದೊಂದಿಗಿನ ಸಂಬಂಧವು ಸುಧಾರಿಸುತ್ತದೆ ಮತ್ತು ನೀವು ಅವರ ಬಗ್ಗೆ ಅಥವಾ ಸ್ಥಳೀಯ ಸಮುದಾಯದಲ್ಲಿ ಉತ್ತಮವಾಗಿ ಅನುಭವಿಸುವಿರಿ. ನಿಮ್ಮಲ್ಲಿ ಕೆಲವರು ತಮ್ಮ ಮನೆಯನ್ನು ಉತ್ತಮಗೊಳಿಸಲು ಮತ್ತು ತಮ್ಮ ಪರಿಸರವನ್ನು ಸಂತೋಷವಾಗಿರಿಸಲು ಕೆಲವು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಬಹುದು. ಇದರಿಂದ ಇದು ಇನ್ನಷ್ಟು ಆಕರ್ಷಕವಾಗುತ್ತದೆ. ಈ ಅವಧಿಯಲ್ಲಿ ನೀವು ಉತ್ತಮ ಪ್ರದರ್ಶನ ಮಾಡಬಹುದು.
ಬೃಹತ್ ಕುಂಡಲಿ: ನಿಮ್ಮ ಜೀವನದ ಮೇಲೆ ಗ್ರಹಗಳ ಪರಿಣಾಮ ಮತ್ತು ಪರಿಹಾರವನ್ನು ತಿಳಿಯಿರಿ
ತುಲಾ ರಾಶಿ ಮಕ್ಕಳ ರಾಶಿ ಭವಿಷ್ಯ 2022
ತುಲಾ ರಾಶಿ ಮಕ್ಕಳ ರಾಶಿ ಭವಿಷ್ಯ 2022 ರ ಪ್ರಕಾರ, ಮಕ್ಕಳ ದೃಷ್ಟಿಕೋನದಿಂದ ವರ್ಷದ ಆರಂಭವು ನಿಮಗೆ ಅನುಕೂಲಕರವಾಗಿರಲಿದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಐದನೇ ಮನೆಯ ಮೇಲೆ ಗುರುವಿನ ಶುಭ ದೃಷ್ಟಿ ಇರುತ್ತದೆ. ಇದರಿಂದಾಗಿ ಮಕ್ಕಳು ಅಧ್ಯಯನದತ್ತ ಹೆಚ್ಚು ಮನಸ್ಸು ಹೊಂದಿರುತ್ತಾರೆ. ನಿಮ್ಮ ಮಕ್ಕಳು ಉನ್ನತ ಶಿಕ್ಷಣವನ್ನು ಪಡೆಯಲು ಬಯಸುತ್ತಿದ್ದರೆ, ಈ ಸಮಯದಲ್ಲಿ ಯಾವುದೇ ಪ್ರತಿಷ್ಠಿತ ಸಂಸ್ಥೆಯಲ್ಲಿ ಪ್ರವೇಶವನ್ನು ಪಡೆಯಬಹುದು.
ಒಟ್ಟಾರೆಯಾಗಿ, ಈ ವರ್ಷ ನಿಮ್ಮ ಮಕ್ಕಳು ಯಶಸ್ಸು ಪಡೆಯುತ್ತಾರೆ. ನಿಮ್ಮ ಮಕ್ಕಳು ಮದುವೆಗೆ ಅರ್ಹರಾಗಿದ್ದರೆ, ಈ ವರ್ಷ ಅವರ ಮದುವೆಯಾಗುವ ಸಾಧ್ಯತೆ ಇದೆ. ವರ್ಷದ ದ್ವಿತೀಯಾರ್ಧವು ಸರಸರಿಯಾಗಿರುತ್ತದೆ . ಏಕೆಂದರೆ ಈ ಅವಧಿಯಲ್ಲಿ ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ನೀವು ಚಿಂತೆಗೆ ಒಳಗಾಗಬಹುದು.
ತುಲಾ ಮದುವೆ ರಾಶಿ ಭವಿಷ್ಯ 2022
ತುಲಾ ವಿವಾಹ ರಾಶಿ ಭವಿಷ್ಯದ ಪ್ರಕಾರ, ತುಲಾ ರಾಶಿಚಕ್ರದ ಜನರು 2022 ರಲ್ಲಿ ಮಿಶ್ರ ಫಲಿತಾಂಶಗಳನ್ನು ಪಡೆಯುತ್ತಾರೆ. ಏಕೆಂದರೆ ಈ ವರ್ಷದ ಆರಂಭವು ನಿಮಗೆ ಕೆಲವು ಅಡೆತಡೆಗಳನ್ನು ತರಬಹುದು ಮತ್ತು ನೀವು ಕೆಲವು ಕೌಟುಂಬಿಕ ವಿಷಯಗಳು ಮತ್ತು ನಿಮ್ಮ ಜೀವನ ಸಂಗಾತಿಯೊಂದಿಗೆ ವಿವಾದದ ಸ್ಥಿತಿಯಲ್ಲಿ ಸುತ್ತುವರಿಯಬಹುದು. ಆದಾಗ್ಯೂ, ವರ್ಷದ ಆರಂಭದಲ್ಲಿ ನೀವು ನಿಮ್ಮ ಜೀವನ ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ವರ್ಷದ ಮಧ್ಯದಲ್ಲಿ ಹೆಚ್ಚು ಜಾಗರೂಕರಾಗಿರಲು ನಿಮಗೆ ಸಲಹೆ ನೀಡಲಾಗಿದೆ. ಏಕೆಂದರೆ ಈ ಅವಧಿಯಲ್ಲಿ ನಿಮ್ಮ ಏಳನೇ ಮನೆಯ ಮೇಲೆ ಸಂಚಾರದ ಪರಿಣಾಮಾವನ್ನು ಕಾಣಲಾಗುತ್ತಿದೆ ಮತ್ತು ನಿಮ್ಮ ಜೀವನ ಸಂಗಾತಿಯೊಂದಿಗೆ ಜಗಳವಾಗುವ ಸಾಧ್ಯತೆ ಇದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ವರ್ಷದ ಅಂತ್ಯದಲ್ಲಿ ಮಂಗಳನ ಸ್ಥಳಾಂತರವು, ನಿಮ್ಮ ಭವಿಷ್ಯದಲ್ಲಿನ ಎಲ್ಲಾ ಅನುಮಾನಗಳು ಪರಿಹರಿಸಿ, ಎಲ್ಲಾ ವಿವಾದಗಳನ್ನು ಮತ್ತು ತಪ್ಪುಗ್ರಹಿಕೆಗಳನ್ನು ತೊಡೆದುಹಾಕಲು ಸಹಾಯಕರವೆಂದು ಸಾಬೀತಾಗಬಹುದು. ಇದರಿಂದಾಗಿ ನೀವು ಪರಸ್ಪರರ ಮೇಲೆ ನಂಬಿಕೆ ಮತ್ತು ಪ್ರೀತಿಯೊಂದಿಗೆ ನಿಮ್ಮ ಜೀವನವನ್ನು ಕಳೆಯುತ್ತೀರಿ.
ತುಲಾ ವ್ಯಾಪಾರ ರಾಶಿ ಭವಿಷ್ಯ 2022
ತುಲಾ ವ್ಯಾಪಾರ ರಾಶಿ ಭವಿಷ್ಯ 2022 ರ ಪ್ರಕಾರ, ತುಲಾ ರಾಶಿಚಕ್ರದ ಜನರು ವರ್ಷ 2022 ರಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಜನರು ವ್ಯಾಪಾರಿಕ ದಾಖಲೆಗಳು ಮತ್ತು ಫೈಲಿಂಗ್ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ನಿಮ್ಮ ಪಾಲುದಾರರ ಮೇಲೆ ಯಾವುದೇ ರೀತಿಯ ಕುರುಡರಾಗಿ ನಂಬುವುದನ್ನು ತಪ್ಪಿಸಿ ಎಂದು ನಿಮಗೆ ಸಲಹೆ ನೀಳಗಿದೆ ಮತ್ತು ನಿಮ್ಮ ಪ್ರತಿಭೆ ಮತ್ತು ಕೌಶಲ್ಯಗಳನ್ನೂ ಅವಲಂಬಿಸಿ. ಪ್ರಮುಖ ಹೂಡಿಕೆಗಳು ಈ ವರ್ಷ ಫಲಪ್ರದವೆಂದು ಸಾಬೀತಾಗುವುದಿಲ್ಲ ಮತ್ತು ನೀವು ತುಂಬಾ ನಷ್ಟವನ್ನು ಎದುರಿಸಬೇಕಾಗಬಹುದು. ಪಾಲುದಾರಿಕೆಯ ವ್ಯಾಪಾರವನ್ನು ಆರಂಭಿಸಲು ನೀವು ಯೋಜಿಸುತ್ತಿದ್ದರೆ, ಈ ವರ್ಷ ಅದನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗಿದೆ. ಈ ವರ್ಷ ಯಾವುದೇ ಹೊಸ ಕಾನೂನು ವ್ಯವಹಾರಗಳಿಂದ ದೂರವಿರಿ, ಸರಿಯಾದ ಯೋಜನೆಯ ಮೇಲೆ ಸಮಯವನ್ನು ತೆಗೆದುಕೊಳ್ಳಿ. ಈ ವರ್ಷ ನೀವು ಯಾವುದೇ ಹೊಸ ಯೋಜನೆಯನ್ನು ಪ್ರಾರಂಭಿಸಬೇಕಾದರೆ, ಈ ವರ್ಷ ನಿಮ್ಮ ವ್ಯವಹಾರವನ್ನು ಸಂಕೀರ್ಣಗೊಳಿಸಬೇಡಿ, ಇಲ್ಲದಿದ್ದರೆ ನೀವು ದೊಡ್ಡ ನಷ್ಟವನ್ನು ಅನುಭವಿಸಬೇಕಾಗಬಹುದು.
ತುಲಾ ಆಸ್ತಿ ಮತ್ತು ವಾಹನ ರಾಶಿ ಭವಿಷ್ಯ 2022
ಸಂಪತ್ತು ರಾಶಿ ಭವಿಷ್ಯ 2022 ರ ಪ್ರಕಾರ, ತುಲಾ ರಾಶಿಚಕ್ರದ ಸ್ಥಳೀಯರಿಗೆ ಈ ವರ್ಷವು ವಾಹನವನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಫಲಪ್ರವೆಂದು ಸಾಬೀತುಪಡಿಸುತ್ತದೆ. ನಿಮಗಾಗಿ ನೀವು ಆಸ್ತಿಯನ್ನು ಖರೀಸಿದರೆ ನೀವು ಯಶಸ್ವಿಯಾಗಬಹುದು. ಆದರೆ ಪಿತ್ರಾರ್ಜಿತವಾಗಿ ಪಡೆದಿರುವ ಆಸ್ತಿಯನ್ನು ಮಾರಾಟ ಮಾಡಲು ಸಮಯ ಅನುಕೂಲಕರವಾಗಿರುತ್ತದೆ ಎಂದು ಹೇಳಲಾಗುವುದಿಲ್ಲ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನೀವು ನಿಮ್ಮ ಕುಟುಂಬದ ಸ್ಥಿರತೆಯ ಬಗ್ಗೆ ಎಚ್ಚರಿಕೆಯಿಂದ ಪರಿಗಣಿಸಬೇಕು ಮತ್ತು ಯಾವುದೇ ಸಂಕೀರ್ಣ ಅಸ್ತಿ ವ್ಯವಹಾರಗಳನ್ನು ನೀವು ತಪ್ಪಿಸಬೇಕು, ಇಲ್ಲದಿದ್ದರೆ ನೀವು ಇದರ ನಷ್ಟವನ್ನು ಎದುರಿಸಬೇಕಾಗಬಹುದು. ಈ ವರ್ಷ ನೀವು ಭೂಮಿ, ಕಟ್ಟಡ ಮತ್ತು ವಾಹನವನ್ನು ಖರೀದಿಸುವ ಸಾಧ್ಯತೆ ಇದೆ.
ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್
ತುಲಾ ಹಣಕಾಸು ಮತ್ತು ಲಾಭದ ರಾಶಿ ಭವಿಷ್ಯ 2022
ತುಲಾ ಹಣ ಮತ್ತು ಲಾಭದ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷ 2022 ರಲ್ಲಿ ತುಲಾ ರಾಶಿಚಕ್ರದ ಜನರು ಸ್ಥಿರ ಆದಾಯವನ್ನು ಗಳಿಸುತ್ತಾರೆ. ಸಂಪತ್ತು ಮತ್ತು ದುಬಾರಿ ವಸ್ತುಗಳಲ್ಲಿ ಹೂಡಿಕೆ ಮಾಡದಿರುವುದು ನಿಮಗೆ ಉತ್ತಮ. ಏಕೆಂದರೆ ಇದಕ್ಕಾಗಿ ಸಮಯ ಅನುಕೂಲಕರವಾಗಿಲ್ಲ. ವರ್ಷ 2022 ರಲ್ಲಿ ಕಠಿಣ ಪರಿಶ್ರಮವು ನಿಮಗೆ ಹೆಚ್ಚಿನ ಯಶಸ್ಸು ಹಣಕಾಸು ನೀಡಬಹುದು. ಆನ್ಲೈನ್ ಲಾಟರಿ ಅಥವಾ ಜೂಜಿನಿನಲ್ಲಿ ಹಣವನ್ನು ಹಾಲು ಮಾಡದಿರಲು ನಿಮಗೆ ಸಲಹೆ ನೀಡಲಾಗಿದೆ.
ನೀವು ಹಣಕಾಸಿನ ನಿರಂತರ ಹರಿವನ್ನು ಹೊಂದಿರುತ್ತೀರಿ. ಆದರೆ ಕೌಟುಂಬಿಕ ವಿಷಯಗಳ ಮೇಲೆ ಹಣವನ್ನು ಹೆಚ್ಚು ಖರ್ಚು ಮಾಡುವುದರಿಂದಾಗಿ ನೀವು ಅಪೇಕ್ಷಿತ ಉಳಿತಾಯವನ್ನು ಮಾಡಲು ಸಾಧ್ಯವಾಗುವುದಿಲ್ಲ. ಶನಿ ಮತ್ತು ಗುರುವಿನ ಸಂಚಾರದ ಪರಿಣಾಮವಾಗಿ ನೀವು ಕೌಟುಂಬಿಕ ಸೌಕರ್ಯಗಳು, ಭೂಮಿ, ಕಟ್ಟಡಗಳ ನಿರ್ಮಾಣ ಮತ್ತು ವಾಹನಗಳಲ್ಲಿ ಹೂಡಿಕೆ ಮಾಡಬಹುದು ಮತ್ತು ಏಪ್ರಿಲ್ ತಿಂಗಳು ನಿಮಗೆ ಹೆಚ್ಚು ಅನುಕೂಲಕರವೆಂದು ಸಾಬೀತಾಗುತ್ತದೆ.
ತುಲಾ ಅರೋಗ್ಯ ರಾಶಿ ಭವಿಷ್ಯ 2022
ತುಲಾ ಅರೋಗ್ಯ ರಾಶಿ ಭವಿಷ್ಯ 2022 ರ ಪ್ರಕಾರ, ತುಲಾ ರಾಶಿಚಕ್ರದ ಜನರು ಈ ವರ್ಷ ಸಾಮಾನ್ಯ ಅರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಜೀರ್ಣ ಕ್ರಿಯೆ ಮತ್ತು ವೈರಲ್ ಸೋಂಕಿಗೆ ಸಂಬಂಧಿಸಿದ ರೋಗಗಳು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದಾಗ್ಯೂ, ಈ ಸಮಸ್ಯೆ ದೀರ್ಘಕಾಲದ ವರೆಗೆ ಇರುವುದಿಲ್ಲ. ಈ ವರ್ಷ ನಿಮಗೆ ಗಾಯವಾಗುವ ನಿರೀಕ್ಷೆಯಿದೆ. ಆದ್ದರಿಂದ ವ್ಯಾಯಾಮ ಮಾಡಲು ಮತ್ತು ದೇಹದವನ್ನು ಅರೋಯವಾಗಿಡಲು ಮತ್ತು ತೂಕವನ್ನು ನಿಯಂತ್ರಿಸಲು ಸಲಹೆ ನೀಡಲಾಗಿದೆ. ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಒತ್ತಡವನ್ನು ತಪ್ಪಿಸಲು, ನಿಮಗೆ ನೆಚ್ಚಿನ ಚಟುವಟಿಕೆಗಳನ್ನು ನಿಮ್ಮ ಜೀವನದಲ್ಲಿ ಸೇರಿಸಿ.
ತುಲಾ ರಾಶಿ ಭವಿಷ್ಯ 2022 ರ ಪ್ರಕಾರ ಅದುಷ್ಟ ಸಂಖ್ಯೆ
ವರ್ಷ 2022 ರಲ್ಲಿ ತುಲಾ ರಾಶಿಚಕ್ರದ ಸ್ಥಳೀಯರ ಅದೃಷ್ಟ ಸಂಖ್ಯೆ ಏಳು, ಇದು ಶುಕ್ರನ ಮೂಲಕ ಆಳಲ್ಪಡುತ್ತದೆ ಮತ್ತು ಈ ವರ್ಷದ ಮುನ್ನಡೆ ಅಂಕ 6 ಮಾಡುತ್ತದೆ. ತುಲಾ ರಾಶಿ ಭವಿಷ್ಯದ 2022 ರ ಪ್ರಕಾರ, ಈ ವರ್ಷ ನಿಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳು ಸಂಭವಿಸಲಿವೆ. ನಿಮ್ಮ ರಾಶಿಯ ಮೇಲೆ ಗುರು ಗ್ರಹದ ಪ್ರಮುಖ ಪರಿಣಾಮವನ್ನು ಕಾಣಲಾಗುತದೆ. ಆದಾಗ್ಯೂ, ಮಂಗಳ ಗ್ರಹವು ಸಹ ಸಣ್ಣ ಪಾತ್ರವನ್ನು ವಹಿಸುತ್ತದೆ. ಏಪ್ರಿಲ್ ಮತ್ತು ಅಕ್ಟೋಬರ್ ತಿಂಗಳ ಅವಧಿಯು ನಿಮಗೆ ಅತ್ಯಂತ ನಿರತವಾಗಿರಲಿದೆ. ಈ ಸಮಯದಲ್ಲಿ ಸುರಕ್ಷಿತರಾಗಿರಲು ನಿಮಗೆ ಸಲಹೆ ನೀಡಲಾಗಿದೆ. ನವೆಂಬರ್ ನಂತರ ನಿಮ್ಮ ಸಾಮಾನ್ಯ ಸ್ಥಿತಿಗೆ ಮರಳುತ್ತೀರಿ.
ತುಲಾ ರಾಶಿ ಭವಿಷ್ಯ 2022: ಜ್ಯೋತಿಷ್ಯ ಪರಿಹಾರ
- ಉತ್ತಮ ಗುಣಮಟ್ಟದ ವಜ್ರ ಅಥವಾ ಓಪಲ್ ರತ್ನವನ್ನು ಬೆಳ್ಳಿಯ ಉಂಗುರದಲ್ಲಿ ತಯಾರಿಸಿ ಅದನ್ನು ಯಾವುದೇ ಶುಕ್ರವಾರದಂದು ನಿಮ್ಮ ಉಂಗುರದ ಬೆರಳಿನಲ್ಲಿ ಧರಿಸಿ.
- ಸಾಧ್ಯವಾದಷ್ಟು ಅಗತ್ಯವಿರುವ ಜನರಿಗೆ ಸಹಾಯ ಮಾಡಿ ಮತ್ತು ಶನಿವಾರ ಶನಿ ದೇವಸ್ಥಾನಕ್ಕೆ ಹೋಗಿ ಮತ್ತು ಕಲ್ಲು ಕಡ್ಲೆಯ ಪ್ರಸಾದವನ್ನು ವಿತರಿಸಿ.
- ಈ ವರ್ಷ ಯಾರೊಂದಿಗೂ ತಪ್ಪಾಗಿ ವರ್ತಿಸಬೇಡಿ. ವಿಶೇಷವಾಗಿ ನಿಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮವಾಗಿ ವರ್ತಿಸಿ.
- ಇರುವೆಗಳಿಗೆ ಗೋಧಿ ಹಿಟ್ಟು ಹಾಕಿ.
- ಕೆಲವು ಸಮಯವನ್ನು ಹಸುವಿನ ಸೇವೆಯಲ್ಲಿ ಕಳೆಯಿರಿ ಮತ್ತು ಚಿಕ್ಕ ಹುಡುಗಿಯರ ಕಾಲು ಮುಟ್ಟಿ ಆಶೀರ್ವಾದವನ್ನು ಪಡೆಯಿರಿ.
ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು
1. ತುಲಾ ರಾಶಿಚಕ್ರದ ಜನರಿಗೆ ವರ್ಷ 2022 ಸೂಕ್ತವೇ?
2022 ವರ್ಷವು ತುಲಾ ರಾಶಿಚಕ್ರದ ಜನರಿಗೆ ಅನಿಯಮಿತ ಆಯ್ಕೆಗಳ ಸಮಯವೆಂದು ಸಾಬೀತುಪಡಿಸುತ್ತದೆ. ಈ ಸಮಯದಲ್ಲಿ ನೀವು ಶಕ್ತಿಯನ್ನು ಪಡೆಯುತ್ತೀರಿ. ನೀವು ಮಾಡಲು ಬಯಸುವ ಯಾವುದೇ ಕೆಲಸವನ್ನು ಪ್ರಾರಂಭಿಸಲು ಈ ವರ್ಷ ಅತ್ಯಂತ ಉತ್ತಮ. ನಕ್ಷತ್ರಗಳು ನಿಮ್ಮ ಪರವಾಗಿರುತ್ತವೆ. ಅಂತಹ ಸಂದರ್ಭದಲ್ಲಿ ಈ ವರ್ಷವನ್ನು ಸದುಪಯೋಗಪಡಿಸಿಕೊಳ್ಳಲು ನಿಮಗೆ ಸಲಹೆ ನೀಡಲಾಗಿದೆ.
2. ತುಲಾ ರಾಶಿಚಕ್ರದ ವಿದ್ಯಾರ್ಥಿಗಳಿಗೆ ವರ್ಷ 2022 ಸೂಕ್ತವೇ?
ತುಲಾ ರಾಶಿಚಕ್ರದ ವಿದ್ಯಾರ್ಥಿಗಳು 2022 ರಲ್ಲಿ ಒಂದು ಅದ್ಭುತ ಮತ್ತು ಉತ್ತಮ ಶೈಕ್ಷಣಿಕ ವರ್ಷವನ್ನು ನಿರೀಕ್ಷಿಸಬಹುದು. ಈ ವರ್ಷನು ನಿಮ್ಮ ಮುಂಬರುವ ವೃತ್ತಿ ಜೀವನಕ್ಕೆ ಪ್ರಮುಖ ವರ್ಷವೆಂದು ಸಾಬೀತುಪಡಿಸುತ್ತದೆ. ಆದ್ದರಿಂದ ಕಠಿಣ ಪರಿಶ್ರಮ ಮಾಡಿ ಮತ್ತು ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಿ.
3. ತುಲಾ ರಾಶಿಚಕ್ರದ ಜೀವನ ಸಂಗಾತಿ ಯಾರು?
ತುಲಾ ರಾಶಿಚಕ್ರದ ಜನರಿಗೆ ಮಿಥುನ ರಾಶಿಯು ಉತ್ತಮ ಹೊಂದಾಣಿಕೆ ಎಂದು ಪರಿಗಣಿಸಲಾಗುತ್ತದೆ. ತುಲಾ ರಾಶಿಯ ಜನರಿಗೆ ಮಿಥುನ ರಾಶಿಚಕ್ರದ ಜನರು ಪರಿಪೂರ್ಣ ಸಂಗಾತಿಯಾಗುತ್ತಾರೆ. ಏಕೆಂದರೆ ಇವರು ತುಲಾ ರಾಶಿಚಕ್ರದ ಜನರನ್ನು ಸದಾ ಸಂತೋಷ ಮತ್ತು ಉತ್ಸಾಹದಿಂದ ಇರುವಂತೆ ಮಾಡುತ್ತದೆ ಮತ್ತು ಅವರನ್ನು ತಿಳಿದುಕೊಳ್ಳುವ ಬಯಕೆಯನ್ನು ಎಂದಿಗೂ ಬಿಡುವುದಿಲ್ಲ. ಈ ಎರಡೂ ರ್ಷಿಗಳು ತಮ್ಮ ಸಂಬಂಧದ ಬಗ್ಗೆ ಹೆಚ್ಚು ಗಂಭೀರರಾಗಿರುತ್ತಾರೆ.
4. ತುಲಾ ರಾಶಿಯ ದೌರ್ಬಲ್ಯಗಳೇನು?
ದೌರ್ಬಲ್ಯಗಳು: ಅಂತರ್ಗತ, ಯಾವುದೇ ವಿವಾದ ಅಥವಾ ತೊಂದರೆಗಳನ್ನು ಮಧ್ಯದಲ್ಲೇ ಬಿಟ್ಟುಬಿಡುವುದು, ದೂರುಗಳು, ಅಸಾಮಾನ್ಯ ಸ್ವಯಂ ಕರುಣೆ. ತುಲಾ ರಾಶಿಚಕ್ರದ ಜನರು ಜೀವನದಲ್ಲಿ ಸಮತೋಲನ, ಕರುಣೆ, ಇತರರೊಂದಿಗೆ ಪಾರ್ಟಿ ಮಾಡುವುದು ಮತ್ತು ಹೊರಗಿನ ಚಟುವಟಿಕೆಗಳನ್ನು ಇಷ್ಟಪಡುತ್ತಾರೆ. ತುಲಾ ರಾಶಿಯವರು ಹಿಂಸೆ, ಅನ್ಯಾಯ ಮತ್ತು ಸಂಘರ್ಷವನ್ನು ಇಷ್ಟಪಡುವುದಿಲ್ಲ. ಈ ರಾಶಿಚಕ್ರದ ಜನರು ನ್ಯಾಯಯುತ ಮತ್ತು ಶಾಂತಿಯುತರಾಗಿರುತ್ತಾರೆ ಮತ್ತು ಎಕೆಅಂತದಲ್ಲಿರಲು ಅವರು ದ್ವೇಷಿಸುತ್ತಾರೆ. ಇದಕ್ಕಾಗಿ ಅವರು ನಿರಂತರವಾಗಿ ಜನರೊಂದಿಗೆ ಇರಬೇಕಾಗುತ್ತದೆ.
5. ತುಲಾ ರಾಶಿಚಕ್ರದ ಜನರಿಗೆ ಜೂನ್ ತಿಂಗಳು ಉತ್ತಮವಾಗಿದೆಯೇ?
ಜೂನ್ ತಿಂಗಳು ನಿಮಗೆ ವಿಶ್ರಾಂತಿ ಮತ್ತು ನಿಮ್ಮನ್ನು ನೀವು ಪ್ರೀತಿಸುವ ಸಮಯವೆಂದು ಸಾಬೀತಾಗುತ್ತದೆ. ಆದ್ದರಿಂದ ನಿಮ್ಮ ಗ್ರಹ ಹೆಜ್ಜೆಗಳನ್ನು ಅನುಸರಿಸಿ. ಮೇ ತಿಂಗಳ ಅಂತ್ಯದಲ್ಲಿ ಒತ್ತಡವನ್ನು ಕಡಿಮೆ ಮಾಡಲು ಸ್ವಯಂ ಆರೈಕೆಯ ಕಡೆಗೆ ಹೆಚ್ಚು ಒಲವು ಹೊಂದಿರುತ್ತೀರಿ.
ನಮ್ಮ ಈ ಲೇಖನವನ್ನು ನೀವು ಇಷ್ಟಪಟ್ಟಿದ್ದೀರಿ ಎಂದು ನಾವು ಭಾವಿಸುತ್ತೇವೆ. ಆಸ್ಟ್ರೋಸೇಜ್ ವಾರ್ತಾದೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಧನ್ಯವಾದಗಳು.
Astrological services for accurate answers and better feature
Astrological remedies to get rid of your problems

AstroSage on MobileAll Mobile Apps
- Sun Transit In Leo Blesses Some Zodiacs; Yours Made It To The List?
- Venus Nakshatra Transit Aug 2025: 3 Zodiacs Destined For Luck & Prosperity!
- Janmashtami 2025: Read & Check Out Date, Auspicious Yoga & More!
- Sun Transit Aug 2025: Golden Luck For Natives Of 3 Lucky Zodiac Signs!
- From Moon to Mars Mahadasha: India’s Astrological Shift in 2025
- Vish Yoga Explained: When Trail Of Free Thinking Is Held Captive!
- Kajari Teej 2025: Check Out The Remedies, Puja Vidhi, & More!
- Weekly Horoscope From 11 August To 17 August, 2025
- Mercury Direct In Cancer: These Zodiac Signs Have To Be Careful
- Bhadrapada Month 2025: Fasts & Festivals, Tailored Remedies & More!
- सूर्य का सिंह राशि में गोचर, इन राशि वालों की होगी चांदी ही चांदी!
- जन्माष्टमी 2025 पर बना दुर्लभ संयोग, इन राशियों पर बरसेगी श्रीकृष्ण की विशेष कृपा!
- अगस्त में इस दिन बन रहा है विष योग, ये राशि वाले रहें सावधान!
- कजरी तीज 2025 पर करें ये विशेष उपाय, मिलेगा अखंड सौभाग्य का वरदान
- अगस्त के इस सप्ताह मचेगी श्रीकृष्ण जन्माष्टमी की धूम, देखें व्रत-त्योहारों की संपूर्ण जानकारी!
- बुध कर्क राशि में मार्गी: इन राशियों को रहना होगा सावधान, तुरंत कर लें ये उपाय
- भाद्रपद माह 2025: त्योहारों के बीच खुलेंगे भाग्य के द्वार, जानें किस राशि के जातक का चमकेगा भाग्य!
- अंक ज्योतिष साप्ताहिक राशिफल: 10 से 16 अगस्त, 2025
- टैरो साप्ताहिक राशिफल (10 अगस्त से 16 अगस्त, 2025): इस सप्ताह इन राशि वालों की चमकेगी किस्मत!
- कब है रक्षाबंधन 2025? क्या पड़ेगा भद्रा का साया? जानिए राखी बांधने का सही समय
- Horoscope 2025
- Rashifal 2025
- Calendar 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ராசி பலன் 2025
- రాశిఫలాలు 2025
- ರಾಶಿಭವಿಷ್ಯ 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025