ಸಿಂಹ ರಾಶಿ ಭವಿಷ್ಯ 2022 - Leo Horoscope 2022 in Kannada
ಸಿಂಹ ರಾಶಿ ಭವಿಷ್ಯ 2022 (Leo Yearly Horoscope 2022) ವೈದಿಕ ಜ್ಯೋತಿಷ್ಯವನ್ನು ಆಧಿರಿಸಿದೆ. ಈ ವಿಶೇಷ ಆರ್ಟಿಕಲ್ ಮೂಲಕ ನಿಮ್ಮ ಆರ್ಥಿಕ ಭಾಗ, ಅರೋಗ್ಯ, ಕುಟುಂಬ ಜೀವನ ಮತ್ತು ಇತರ ಪ್ರಮುಖ ವಿಷಯಗಳ ಬಗ್ಗೆ ವರ್ಷ 2022 ರಲ್ಲಿ ಸಿಂಹ ರಾಶಿಚಕ್ರದ ಸ್ಥಳೀಯರ ಜೀವನವು ಹೇಗಿರಲಿದೆ ಎಂದು ನೀವು ಸುಲಭವಾಗಿ ತಿಳಿದುಕೊಳ್ಳಬಹುದು. ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ ಈ ವರ್ಷ ನೀವು ಜೀವನದ ವಿಭಿನ್ನ ವಿಷಯಗಳಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಇದರಿಂದಾಗಿ ನೀವು ಅತ್ಯಂತ ಆತ್ಮವಿಶ್ವಾಸ ಮತ್ತು ಕೌಶಲ್ಯದಿಂದ ನಿಭಾಯಿಸುವಲ್ಲಿ ಯಶಸ್ವಿಯಾಗುತ್ತೀರಿ. ಈ ವರ್ಷ ನಿಮ್ಮ ಕುಟುಂಬದಲ್ಲಿ ಶಾಂತಿ ಉಳಿದಿರುತ್ತದೆ ಮತ್ತು ವರ್ಷವಿಡೀ ಧನಾತ್ಮಕ ಆಲೋಚನೆಗಳಿಂದ ತುಂಬಿರುತ್ತೀರಿ. ಕೆಲಸ ಮತ್ತು ಸಂಬಂಧಗಳಲ್ಲಿ ನೀವು ಸಕಾರಾತ್ಮಕ ಶಕ್ತಿಯನ್ನು ಸಂಪೂರ್ಣವಾಗಿ ಬಳಸುವಿರಿ.
ಸಿಂಹ ರಾಶಿ ಭವಿಷ್ಯ 2022 ರ ಪ್ರಕಾರ, ಈ ರಾಶಿಚಕ್ರದ ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಅಡೆತಡೆಗಳು ಉಂಟಾಗಬಹುದು ಇದರೊಂದಿಗೆ ಈ ವರ್ಷ ನಿಮ್ಮ ಮಕ್ಕಳ ಆರೋಗ್ಯವು ಸಹ ನಿಮ್ಮ ಚಿಂತೆಗೆ ಕಾರಣವಾಗಬಹುದು. ವರ್ಷ 2022 ರ ವಾರ್ಷಿಕ ಭವಿಷ್ಯವಾಣಿಯ ಪ್ರಕಾರ, ಸಂಪತ್ತು ಖರೀದಿಸಲು ಈ ಸಮಯ ಉತ್ತಮವೆಂದು ಸಾಬೀತುಪಡಿಸಬಹುದು, ಮತ್ತು ವಿವಾಹಿತ ಜೋಡಿಗಳು ಮಕ್ಕಳನ್ನು ಪಡೆಯಬಹುದು. ಈ ವರ್ಷ ನಿಮ್ಮ ಸಾಮಾಜಿಕ ಸ್ಥಾನಮಾನ ಹೆಚ್ಚಾಗಬಹುದು. ಈ ಸಮಯದಲ್ಲಿ ನಿಮ್ಮ ಕುಟುಂಬದಲ್ಲಿ ಮಂಗಳಕರ ಕಾರ್ಯ ಸಂಭವಿಸಬಹುದು.
Read Simha Rashi Bhavishya 2023 here
ಸಿಂಹ ರಾಶಿಚಕ್ರದ ಸ್ಥಳೀಯರ ರಾಶಿ ಭವಿಷ್ಯದ ಪ್ರಕಾರ, ಜನವರಿ 2022 ರಲ್ಲಿ, ಶನಿ ದೇವ ಅದೃಷ್ಟ, ಆಶಾವಾದ, ವಿಸ್ತರಣೆ ಮತ್ತು ಕೆಲಸದ ಸಾಮರ್ಥ್ಯದಲ್ಲಿ ಸಂತೋಷವನ್ನು ತರುತ್ತದೆ. ಇದಲ್ಲದೆ ಜ್ಯೋತಿಷ್ಯ-ಆಧಾರಿತ ಸಿಂಹ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷ 2022 ರ ಮೊದಲ ಒಂಬತ್ತು ತಿಂಗಳುಗಳಲ್ಲಿ ನಿಮಗೆ ಗುರುವು ತುಂಬಾ ಆಸಕ್ತಿದಾಯಕ ಮತ್ತು ಆಕರ್ಷಕ ಅವಕಾಶಗಳನ್ನು ತರಬಹುದು. ಆದಾಗ್ಯೂ, ಇದು ಎಷ್ಟೇ ಅನುಕೂಲಕರವಾಗಿ ಕಂಡುಬಂದರು ನೀವು ಯಾವಾಗಲೂ ಎಚ್ಚರಿಕೆ, ಜಾಗರೂಕತೆ ಮತ್ತು ಯಾವುದೇ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಲು ನಿಮಗೆ ಸಲಹೆ ನೀಡಲಾಗಿದೆ. ಈ ವರ್ಷ ಗುರು ಗ್ರಹವು 13 ಏಪ್ರಿಲ್ 2022 ರಂದು ಮೀನ ರಾಶಿಗೆ ಮತ್ತು 12 ಏಪ್ರಿಲ್ ರಂದು ರಾಹುವು ಮೇಷ ರಾಶಿಯಲ್ಲಿ ಒಂಬತ್ತನೇ ಮನೆಗೆ ಪ್ರವೇಶಿಸುತ್ತದೆ. 29 ಏಪ್ರಿಲ್ ರಂದು ಶನಿ ದೇವ ಕುಂಭ ರಾಶಿಯಲ್ಲಿ ಏಳನೇ ಮನೆಗೆ ಪ್ರವೇಶಿಸುತ್ತಾರೆ ಮತ್ತು 12 ಜೂಲೈ ರಂದು ಇದು ವಕ್ರತೆಯೊಂದಿಗೆ ಮಕರ ರಾಶಿಯಲ್ಲಿ ಆರನೇ ಮನೆಗೆ ಪ್ರವೇಶಿಸುತ್ತದೆ.
ಕುಟುಂಬ, ಮದುವೆ ಮತ್ತು ಪ್ರೀತಿಗೆ ಸಂಬಂಧಿಸಿದ ವಿಷಯಗಳನ್ನು ಹೊರತುಪಡಿಸಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಏಪ್ರಿಲ್ ಅಂತ್ಯದ ವಾರದಿಂದ ಜೂಲೈ ಮಧ್ಯದ ವರೆಗೆ ಕೌಟುಂಬಿಕ ಕಾರ್ಯಕ್ರಮದ ಆಯೋಜನೆಯಿಂದಾಗಿ ನಿಮ್ಮ ಜೀವನದಲ್ಲಿ ಸಂತೋಷ ಬರುತ್ತದೆ. ನೀವು ವಿವಾಹಿತರಾಗಿದ್ದರೆ, ಈ ವರ್ಷ ನಿಮಗೆ ಉತ್ತಮವಾಗಿರಲಿದೆ. ಆದರೆ ಜೀವನ ಸಂಗಾತಿಯ ಯಾವುದೇ ಅರೋಗ್ಯ ಸಮಸ್ಯೆಯಿಂದಾಗಿ ನೀವು ಮಾನಸಿಕ ಒತ್ತಡವನ್ನು ಹೊಂದಿರಬಹುದು.
ಜನವರಿ ತಿಂಗಳಲ್ಲಿ, ತಿಂಗಳ ಮೊದಲಾರ್ಧದಲ್ಲಿ, ಸಿಂಹ ರಾಶಿಚಕ್ರದ ಸ್ಥಳೀಯರು ವೃತ್ತಿಯ ಬದಲಾವಣೆ ಅಥವಾ ವಿದೇಶದಲ್ಲಿ ಉದ್ಯೋಗದತ್ತ ಆಕರ್ಷಿತರಾಗಬಹುದು. ವ್ಯಾಪಾರಕ್ಕೆ ಸಂಬಂಧಿಸಿದ ಈ ರಾಶಿಚಕ್ರದ ಜನರು ತಮ್ಮ ವ್ಯಾಪಾರಕ್ಕಾಗಿ ಗುರಿಗಳನ್ನು ನಿರ್ಧರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ವರ್ಷದ ಆರಂಭದಲ್ಲಿ ನೀವು ಸ್ವಲ್ಪ ಚಿಂತೆಕ್ಕೊಳಗಾಗಬಹುದು. ಫೆಬ್ರವರಿ ತಿಂಗಳಲ್ಲಿ ಸಿಂಹ ರಾಶಿಚಕ್ರದ ಜನರು ಇತ್ತೀಚಿನ ಯಾವುದೇ ಒತ್ತಡವನ್ನು ತೊಡೆದುಹಾಕಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳುವಲ್ಲಿ ಯಾಹ್ಯಾಸ್ವಿಯಾಗುತ್ತಾರೆ. ಸೆಪ್ಟೆಂಬರ್ ನಿಂದ ನವೆಂಬರ್ ನಡುವೆ ಮಂಗಳ ದೇವ ವಕ್ರನಾದಾಗ. ಸಿಂಹ ರಾಶಿಚಕ್ರದ ಜನರು ತಮ್ಮ ಭಾವನೆಗಳನ್ನು ರಚನಾತ್ಮಕವಾಗಿ ನಿರ್ವಹಿಸುವಲ್ಲಿ ಕೆಲವು ನೈಜ ಸಮಸ್ಯೆಗಳನ್ನು ಎದುರಿಸಬಹುದು. ಅಂತಹ ಸಂದರ್ಭದಲ್ಲಿ ಸಿಂಹ ರಾಶಿಚಕ್ರದ ಜನರು, ಇತರರನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸಬಾರದು ಮತ್ತು ತಮ್ಮ ಶಕ್ತಿಗಳನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂಬುದನ್ನು ಕಲಿಯಬೇಕು.
ವರ್ಷ 2022 ರಲ್ಲಿ, ಸಿಂಹ ರಾಶಿ ಭವಿಷ್ಯ 2022 ರ ಪ್ರಕಾರ, ಶಕ್ತಿಯನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ ಒಬ್ಬ ವಿಶೇಷ ವ್ಯಕ್ತಿಯ ಮುಂದೆ ನಿಮ್ಮ ಹೃದಯದ ವಿಷಯವನ್ನು ವ್ಯಕ್ತಪಡಿಸುವಲ್ಲಿ ನೀವು ಯಶಸ್ವಿಯಾಗುವಿರಿ. ಸಿಂಹ ರಾಶಿಚಕ್ರದ ಕೆಲವು ಜನರು ಅನೇಕ ದೊಡ್ಡ ಸವಾಲುಗಳನ್ನು ಎದುರಿಸಬಹುದು. ಕೆಲಸದ ಸ್ಥಳದಲ್ಲಿ ಯಾವುದೇ ವ್ಯಕ್ತಿ ಅಥವಾ ನಿಮ್ಮ ಯಾವುದೇ ನಿಕಟ ಸ್ನೇಹಿತ ನಿಮ್ಮನ್ನು ತನ್ನ ಕಡೆಗೆ ಆಕರ್ಷಿಸಬಹುದು.
ಮಾರ್ಚ್ ತಿಂಗಳಲ್ಲಿ ನಿಮ್ಮ ಉದ್ಯೋದಗಲ್ಲಿ ನೀವು ಬಡ್ತಿಯ ಅವಕಾಶವನ್ನು ಪಡೆಯಬಹುದು. ಈ ತಿಂಗಳು ಸಿಂಹ ರಾಶಿಚಕ್ರದ ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಮತ್ತು ಯಾವುದೇ ರೀತಿಯ ಹೆಚ್ಚುವರಿ ಒತ್ತಡವನ್ನು ತಪ್ಪಿಸಲು ಸಲಹೆ ನೀಡಲಾಗಿದೆ. ಏಪ್ರಿಲ್ ತಿಂಗಳಲ್ಲಿ, ತಿಂಗಳ ಮೊದಲಾರ್ಧದಲ್ಲಿ ಸಿಂಹ ರಾಶಿಚಕ್ರದ ಜನರು ಅನಗತ್ಯ ವೆಚ್ಚಗಳು ಅಥಾ ಯಾವುದೇ ವಿದೇಶ ಹೂಡಿಕೆ ಅಥವಾ ಬೆಟ್ಟಿಂಗ್ ಮಾಡದಿರಲು ಸಲಹೆ ನೀಡಲಾಗಿದೆ.
ಮಾರ್ಚ್ ನಿಂದ ಮೇ ಮಧ್ಯೆ ಯಾವುದೇ ವೃತ್ತಿಪರ ಕೋರ್ಸ್ ನಲ್ಲಿ ಪ್ರವೇಶ ಪಡೆಯುವ ನಿಮ್ಮ ಬಯಕೆ ಈಡೇರಬಹುದು. ಸಂಬಂಧಗಳ ವಿಷಯಗಳಲ್ಲಿ ನೀವು ಜಾಗರೂಕರಾಗಿರಬೇಕು. ನಿಮ್ಮ ಸಂಬಂಧವನ್ನು ಬೆಳೆಸಲು ಆತುರ ಪಟ್ಟರೆ ನೀವು ತೊಂದರೆಗೆ ಒಳಗಾಗಬಹುದು. ಮೇ ತಿಂಗಳು ಸ್ವಲ್ಪ ಒತ್ತಡದಿಂದ ತುಂಬಿರಬಹುದು. ಆದ್ದರಿಂದ ಸಿಂಹ ರಾಶಿಚಕ್ರದ ಜನರು ವಿಶ್ರಾಂತಿ ತೆಗೆದುಕೊಳ್ಳಲು ಮತ್ತು ಧೈರ್ಯದಿಂದ ಕೆಲಸ ಮಾಡಲು ಸಲಹೆ ನೀಡಲಾಗಿದೆ. ಜೂನ್ ಮತ್ತು ಜೂಲೈ ತಿಂಗಳಲ್ಲಿ, ಸಿಂಹ ರಾಶಿಚಕ್ರದ ಜನರು ವೃತ್ತಿಪರ ಕ್ಷೇತ್ರದಲ್ಲಿ ನಂತರ ವಿಷಾದಿಸುವಂತಹ ಯೋಚಿಸದೆ ಮತ್ತು ತುರಾತುರಿಯಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಲು ಸಲಹೆ ನೀಡಲಾಗಿದೆ. ಸಿಂಹ ರಾಶಿಚಕ್ರದ ಜನರು ತನ್ನ ಯಾವುದೇ ಸಾಲ, ಲೋನ್ ಅನ್ನು ಮರುಪಾವತಿಸುವಲ್ಲಿ ಯಶಸ್ವಿಯಾಗಬಹುದು. ಜೂನ್ ತಿಂಗಳಲ್ಲಿ ಕೆಲವು ಸ್ಥಳೀಯರು ಅನಿರೀಕ್ಷಿತ ಹಣ ಅಥವಾ ಆಸ್ತಿಯ ಮೂಲಕ ಯಾವುದೇ ರೀತಿಯ ಲಾಭವನ್ನು ಪಡೆಯುವ ಸಾಧ್ಯತೆ ಇದೆ.
ನಿಮ್ಮ 2022 ವಾರ್ಷಿಕ ರಾಶಿ ಭವಿಷ್ಯದ ಪ್ರಕಾರ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ, ನಿಮ್ಮ ಕೌಟುಂಬಿಕ ಸಂಬಂಧಗಳಲ್ಲಿ ಒತ್ತಡ ಹೆಚ್ಚಾಗುವ ನಿರೀಕ್ಷೆಯಿದೆ. ಈ ವರ್ಷ ದೈಹಿಕವಾಗಿ ನೀವು ಆರೋಗ್ಯವಾಗಿರುತ್ತೀರಿ. ಇದರ ನಂತರ ನಿಮ್ಮ ಮನಸ್ಸಿನಲ್ಲಿ ನಡೆಯುತ್ತಿರುವ ನಕಾರಾತ್ಮಕ ಆಲೋಚನೆಗಳಿಂದಾಗಿ ನೀವು ಆಯಾಸವನ್ನು ಅನುಭವಿಸಬಹುದು. ನಿಮ್ಮ ದೇಹದಲ್ಲಿ ಗಾಳಿ ಮತ್ತು ಪಿತ್ತದ ಪರಿಣಾಮ ಇರುತ್ತದೆ. ಕಣ್ಣುಗಳಲ್ಲಿ ಊತ, ದೃಷ್ಟಿ ಮಂದವಾಗುವುದು ಅತಃವ ತಲೆನೋವಿನಂತಹ ಕೆಲವು ಅರೋಗ್ಯ ಸಮಸ್ಯೆಗಳು ನಿಮ್ಮನ್ನು ತೊಂದರೆಗೊಳಿಸಬಹುದು ಮತ್ತು ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆಯೂ ನೀವು ನೀವು ಚಿಂತೆಗೆ ಒಳಗಾಗಬಹುದು. ಈ ರಾಶಿಚಕ್ರದ ಅವಿವಾಹಿತ ಜನರು ಹೊಸ ಪ್ರೀತಿಯ ಸಂಬಂಧವನ್ನು ಹೊಂದಬಹುದು ಮತ್ತು ದೀರ್ಘಕಾಲದಿಂದ ಯಾವುದೇ ಸಂಬಂಧದಲ್ಲಿರುವ ಜನರು ಮದುವೆಯ ಪ್ರಸ್ತಾಪವನ್ನು ಪಡೆಯಬಹುದು. ಈಗಾಗಲೇ ಮದುವೆಯಾಗಿರುವ ಜನರು ತಮ್ಮ ಸಂಬಂಧವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯಬಹುದು. ಸೆಪ್ಟೆಂಬರ್ ತಿಂಗಳಲ್ಲಿ ವ್ಯಕ್ತಿಯು ಹೊಸ ಉದ್ಯೋಗವನ್ನು ಹುಡುಕಬಹುದು ಅಥವಾ ಅವರು ತಮ್ಮ ವೈಯಕ್ತಕ ವ್ಯವಸಾಯದತ್ತ ಕೇಂದ್ರೀಕರಿಸಬಹುದು.
ವರ್ಷದ ಅಂತ್ಯದ ಸಮಯವು ನೀವು ಇಷ್ಟಪಡುವ ಸಮಯವಾಗಿರುತ್ತದೆ. ನಿಮ್ಮ ಸಂಪೂರ್ಣ ಶಕ್ತಿಯನ್ನು ನೀವು ಕೆಲಸದ ಮೇಲೆ ಖರ್ಚು ಮಾಡುವಿರಿ ಮತ್ತು ನಿಮ್ಮ ಜೀವನದಲ್ಲಿ ಸಾಕಷ್ಟು ಉತ್ಸಾಹ ಮತ್ತು ಒಲವನ್ನು ಕಾಣಲಾಗುತ್ತದೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಸಿಂಹ ರಾಶಿಚಕ್ರದ ಜನರು ಸರಿಯಾದ ಆಹಾರವನ್ನು ಆರಂಭಿಸಲು, ವ್ಯಾಯಾಮ ಮಾಡಲು, ವಿಶ್ರಾಂತಿ ಪಡೆಯಲು ಮತ್ತು ದೇಹವನ್ನು ಶಾಂತವಾಗಿರುವಲ್ಲಿ ಹೆಚ್ಚು ಸಮಯವನ್ನು ಕಳೆಯಲು ಅವಕಾಶವನ್ನು ಪಡೆಯಬಹುದು.
ಸಿಂಹ ಪ್ರೀತಿ ರಾಶಿ ಭವಿಷ್ಯ 2022
ಸಿಂಹ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷ 2022 ರಲ್ಲಿ ಸಿಂಹ ರಾಶಿಚಕ್ರದ ಸ್ಥಳೀಯರ ಪ್ರೀತಿ ಜೀವನವು ಏರಿಳಿತಗಳಿಂದ ತುಂಬಿರಲಿದೆ. ಆದಾಗ್ಯೂ, ನಿಮ್ಮ ಸಂಬಂಧದಲ್ಲಿ ನೀವು ನಿಷ್ಟವಂತರಗಿದ್ದರೆ ಮತ್ತು ನಿಮ್ಮ ಸಂಗಾತಿಯನ್ನು ನಿಜವಾಗಿ ನೀವು ನಿಜವಾಗಿ ಪ್ರೀತಿಸುತ್ತಿದ್ದರೆ, ಈ ವರ್ಷ ನಿಮ್ಮಿಬ್ಬರ ಮದುವೆಯಾಗಬಹುದು. ಏಪ್ರಿಲ್ ನಂತರ ಮದುವೆಯ ಪ್ರಸ್ತಾಪಕ್ಕೆ ಅಂತಿಮಗೊಳಿಸಬಹುದು. ಜನವರಿ ಮತ್ತು ಫೆಬ್ರವರಿ ತಿಂಗಳ ಸಮಯದಲ್ಲಿ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ವಿವಾದ ಹೆಚ್ಚಾಗಬಹುದು. ವರ್ಷ 2022 ಪ್ರೀತಿಯಲ್ಲಿರುವ ಜನರ ಜೀವನವು ಮಿಶ್ರವಾಗಿರಲಿದೆ. ಆದರೆ ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ತಿಳುವಳಿಕೆಯನ್ನು ನಿರೀಕ್ಷಿಸಬಹುದು. ಸಣ್ಣ ಪುಟ್ಟ ವಾದ ಮತ್ತು ಭಿನ್ನಾಭಿಪ್ರಾಯಗಳು ಸಂಭವಿಸಬಹುದು. ಆದರೆ ನಿಮ್ಮ ಸಂಬಂಧದ ಮೇಲೆ ಇವುಗಳ ವಿಶೇಷ ಪರಿಣಾಮ ಬೀರುವುದಿಲ್ಲ.
ಸಿಂಹ ವೃತ್ತಿ ಜೀವನ ರಾಶಿ ಭವಿಷ್ಯ 2022
ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಕೆಲಸ ಮತ್ತು ವೃತ್ತಿ ಜೀವನದ ದೃಷ್ಟಿಕೋನದಿಂದ, ವರ್ಷದ ಆರಂಭವು ಶುಭವಾಗಿರುತ್ತದೆ. ಸಿಂಹ ರಾಶಿಚಕ್ರದ ಸ್ಥಳೀಯರಿಗೆ ವೃತ್ತಿ ಜೀವನ ರಾಶಿ ಭವಿಷ್ಯ 2022 ರ ಪ್ರಕಾರ, ಏಳನೇ ಮನೆಯಲ್ಲಿ ಗುರುವಿನ ಸ್ಥಾನದಿಂದಾಗಿ ನಿಮ್ಮ ಕೆಲಸ ಮತ್ತು ವೃತ್ತಿಯಲ್ಲಿ ನೀವು ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತೀರಿ. ನೀವು ಪಾಲುದಾರಿಕೆಯಲ್ಲಿ ಯಾರೊಂದಿಗಾದರೂ ಕೆಲಸ ಮಾಡುತ್ತಿದ್ದರೆ, ಆದಾಯದ ಹೊಸ ಮೂಲಗಳನ್ನು ಪಡೆಯುವ ಪ್ರಬಲ ಸಾಧ್ಯತೆ ಇದೆ. ನೀವು ಅಪೇಕ್ಷಿತ ಲಾಭವನ್ನು ಪಡೆಯುತ್ತೀರಿ ಮತ್ತು ನಿಮ್ಮ ಸಂಗಾತಿಯೊಂದಿಗೆ ನೀವು ತೃಪ್ತರಾಗುತ್ತೀರಿ. ಉದ್ಯೋಗದಲ್ಲಿ ತೊಡಗಿರುವ ಜನರು ತಮ್ಮ ಕೆಲಸದ ಸ್ಥಳದಲ್ಲಿ ಗೌರವವನ್ನು ಪಡೆಯುತ್ತಾರೆ.
ವರ್ಷದ ದ್ವಿತೀಯಾರ್ಧದಲ್ಲಿ ಸ್ವಲ್ಪ ಪ್ರತಿಕೂಲ ಫಲಿತಾಂಶಗಳನ್ನು ಪಡೆಯುವ ನಿಕ್ಷೆಯಿದೆ. ಈ ಅವಧಿಯಲ್ಲಿ, ನಿಮ್ಮ ಶತ್ರುಗಳು ನಿಮಗೆ ಅಡೆತಡೆಯನ್ನು ಉಂಟುಮಾಡಬಹುದು. ಆದರೆ ಆರನೇ ಮನೆಯ ಮೇಲಿನ ಶನಿ ದೇವರ ಧನಾತ್ಮಕ ಪರಿಣಾಮದಿಂದಾಗಿ ನಿಮ್ಮ ಕೆಲಸ ಮತ್ತು ವೃತ್ತಿಯ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ.
ಸಿಂಹ ಶಿಕ್ಷಣ ರಾಶಿ ಭವಿಷ್ಯ 2022
ಸಿಂಹ ಶಿಕ್ಷಣ ರಾಶಿ ಭವಿಷ್ಯ 2022 ರ ಪ್ರಕಾರ, ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿಧ್ಯಾರ್ಥಿಗಳು ವರ್ಷದ ಆರಂಭದಲ್ಲಿ ಯಶಸ್ಸು ಪಡೆಯುವ ಪ್ರಬಲ ಸಾಧ್ಯತೆ ಇದೆ. ಆದಾಗ್ಯೂ, ವರ್ಷದ ಮಧ್ಯದ ಭಾಗದಲ್ಲಿ ಈ ರಾಶಿಚಕ್ರದ ವಿಧ್ಯಾರ್ಥಿಗಳು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಉನ್ನತ ಶಿಕ್ಷಣವನ್ನು ಪಡೆಯಲು ಬಯಸುತ್ತಿರುವ ವಿಧ್ಯಾರ್ಥಿಗಳು ಅಪೇಕ್ಷಿತ ಸಂಸ್ಥೆಯಲ್ಲಿ ಪ್ರವೇಶವನ್ನು ಪಡೆಯಬಹುದು. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸುತ್ತಿರುವ ಜನರು ಈ ವರ್ಷದ ಅಂತ್ಯದ ಭಾಗದಲ್ಲಿ ಅಂದರೆ ಸೆಪ್ಟೆಂಬರ್ ರಿಂದ ಡಿಸೆಂಬರ್ ವರೆಗೆ ಶುಭ ಸುದ್ದಿಯನ್ನು ಪಡೆಯಬಹುದು.
ಸಿಂಹ ಆರ್ಥಿಕ ರಾಶಿ ಭವಿಷ್ಯ 2022
ಸಿಂಹ ಆರ್ಥಿಕ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷ ಆರ್ಥಿಕ ದೃಷ್ಟಿಯಿಂದ, ತುಂಬಾ ಶುಭವಾಗಿರಲಿದೆ. ಈ ವರ್ಷ ನಿಮ್ಮ ಆರ್ಥಿಕ ಸ್ಥಿತಿ ತುಂಬಾ ಅದ್ಭುತವಾಗಿರಲಿದೆ. ವೃತ್ತಿಪರವಾಗಿ ಹಠಾತ್ ಪ್ರಗತಿಯಾಗುವುದರಿಂದಾಗಿ ನಿಮ್ಮ ಆದಾಯ ಹೆಚ್ಚಾಗುತ್ತದೆ. 6 ಏಪ್ರಿಲ್ ನಂತರದ ಸಮಯವು ತುಂಬಾ ಶುಭವಾಗಿರಲಿದೆ ಮತ್ತು ಈ ಸಮಯದಲ್ಲಿ ನೀವು ವೃತ್ತಿಪರವಾಗಿ ಸ್ನೇಹಿತರು, ಜೀವನ ಸಂಗಾತಿ ಅಥವಾ ವೃತ್ತಿಪರ ಪಾಲುದಾರರ ಮೂಲಕ ಹಣಕಾಸು ಗಳಿಸುವಲ್ಲಿ ಯಶ್ವಸಿಯಾಗುತ್ತೀರಿ.
ಸಿಂಹ ಕುಟುಂಬ ರಾಶಿ ಭವಿಷ್ಯ 2022
ಸಿಂಹ ಕುಟುಂಬ ರಾಶಿ ಭವಿಷ್ಯ 2022 ರ ಪ್ರಕಾರ, ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಈ ವರ್ಷ ತುಂಬಾ ಉತ್ತಮವಾಗಿರುತ್ತದೆ. ವಿಶೇಷವಾಗಿ ವಯಸ್ಸಿನಲ್ಲಿ ಹೆಚ್ಚಾಗಿರುವ ನಿಮ್ಮ ಪುರುಷ ಸಂಬಂಧಿಕರೊಂದಿಗೆ ನೀವು ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ. ಇದರಲ್ಲಿ ಸಹೋದರ-ಸಹೋದರಿಯರೂ ಸೇರಿದ್ದಾರೆ. ಸಿಂಹ ರಾಶಿಚಕ್ರದ ಸ್ಥಳೀಯರು ಎರಡನೇ ಮಗುವಿನ ಸಂತೋಷವನ್ನು ಪಡೆಯಬಹುದು. ಇದನ್ನು ಹೊರತುಪಡಿಸಿ, ವಿವಾಹದ ದೃಷ್ಟಿಯಿಂದಲೂ ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಈ ವರ್ಷ ತುಂಬಾ ಉತ್ತಮವಾಗಿರಲಿದೆ. ನೀವು ವಿವಾಹಿತರಾಗಿದ್ದರೆ, ಗರ್ಭ ಧರಿಸಲು ಇದು ಉತ್ತಮ ಸಮಯ. ಇದು ನಿಮಗೆ ಸಂತೋಷದ ಅವಕಾಶವನ್ನು ನೀಡುವುದಲ್ಲದೆ, ಅತ್ತೆಮನೆಯವರೊಂದಿಗಿನ ನಿಮ್ಮ ಸಂಬಂಧವನ್ನು ಬಲಪಡಿಸಲು ಸಹ ಇದು ಉತ್ತಮ ಸಮಯವೆಂದು ಸಾಬೀತಾಗುತ್ತದೆ.
ಸಿಂಹ ಮಕ್ಕಳ ರಾಶಿ ಭವಿಷ್ಯ 2022
ಸಿಂಹ ಮಕ್ಕಳ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷ ನಿಮ್ಮ ಮಿಶ್ರ ಭಾವನೆಗಳೊಂದಿಗೆ ತುಂಬಿರುತ್ತಾರೆ. ನಿಮ್ಮ ಸಾಮಾಜಿಕ ವಲಯದ ಬಗ್ಗೆ ನೀವು ತುಂಬಾ ಜಾಗರೂಕರಾಗಿರಬೇಕು ಮತ್ತು ಸಂಘರ್ಷಗಳಿಗೆ ನಿಮ್ಮ ಪ್ರತಿಕ್ರಿಯೆಗಳಲ್ಲಿ ಉತ್ಪ್ರೇಕ್ಷೆ ಮಾಡಬೇಡಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಈ ವರ್ಷ ಮಂಗಳ ಗ್ರಹವು ನಿಮ್ಮ ಮಕ್ಕಳೊಂದಿಗೆ ಶಾಂತಿಯುತವಾಗಿರಲು ನಿಮಗೆ ಸಹಾಯ ಮಾಡುತ್ತದೆ. ಕುಟುಂಬ ಮತ್ತು ಮಕ್ಕಳೊಂದಿಗೆ ಹೆಚ್ಚಿನ ಆನಂದವನ್ನು ಪಡೆಯಲು ಮತ್ತು ಅವರಿಗೆ ಹತ್ತಿರವಾಗಲು ನಿಮಗೆ ಸೂಚಿಸಲಾಗಿದೆ. ಹಾಗೆ ಮಾಡುವುದರಿಂದ ನಿಮಗೆ ಆಗುತ್ತಿದ್ದ ತಪ್ಪುಗ್ರಹಿಕೆಗಳು ಮತ್ತು ಸಣ್ಣ ಸಂಘರ್ಷಗಳನ್ನು ತೊಡೆದುಹಾಕಲು ನೀವು ಸಹಾಯವನ್ನು ಪಡೆಯುತ್ತೀರಿ. ವರ್ಷದ ಆರಂಭವು ನಿಮ್ಮ ಮಕ್ಕಳಿಗೆ ಸರಸರಿಯಾಗಿರುತ್ತದೆ. ಏಳನೇ ಮನೆಯಲ್ಲಿ ಗುರುವು ಮಕ್ಕಳಿಗೆ ಶುಭಕರ. ವಿಶೇಷವಾಗಿ ಈ ಅವಧಿಯು ನಿಮ್ಮ ಎರಡನೇ ಮಗುವಿಗೆ ಶುಭವಾಗಿರುತ್ತದೆ. ವರ್ಷದ ದ್ವಿತೀಯಾರ್ಧದಲ್ಲಿ, ಮಕ್ಕಳ ಆರೋಗ್ಯದ ಬಗ್ಗೆ ಜಾಗರೂಕರಾಗಿರಲು ನಿಮಗೆ ಸಲಹೆ ನೀಡಲಾಗಿದೆ. ಎಂಟನೇ ಮನೆಯಲ್ಲಿ ಗುರುವು, ನಿಮ್ಮ ಮಕ್ಕಳಿಗೆ ಮಾನಸಿಕ ಅಸಮಾಧಾನವನ್ನು ನೀಡಬಹುದು ಮತ್ತು ಅವರ ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.
ಸಿಂಹ ವಿವಾಹ ರಾಶಿ ಭವಿಷ್ಯ 2022 ಸಿಂಹ ವಿವಾಹ ರಾಶಿ ಭವಿಷ್ಯ 2022 ರ ಪ್ರಕಾರ, ಸಿಂಹ ರಾಶಿಚಕ್ರದ ಸ್ಥಳೀಯರು ವೈವಾಹಿಕ ಜೀವನದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ. ಏಪ್ರಿಲ್ ತಿಂಗಳು ನಿಮ್ಮ ಸಂಬಂಧಕ್ಕೆ ಉತ್ತಮವೆಂದು ಸಾಬೀತಾಗುತ್ತದೆ. ಈ ಸಮಯದಲ್ಲಿ ನಿಮ್ಮ ಸಂಬಂಧವು ಬಲಗೊಳ್ಳುತ್ತದೆ ಮತ್ತು ನೀವು ಪ್ರತಿಯೊಂದು ತಪ್ಪುಗ್ರಹಿಕೆಗಳು ಮತ್ತು ವಿವಾದವನ್ನು ಪರಿಹರಿಸುವಲ್ಲಿ ಯಶಸ್ವಿಯಾಗುವಿರಿ. ಈ ಸಮಯದಲ್ಲಿ ನೀವು ಒಂದು ಸುಂದರವಾದ ಪ್ರಯಾಣವನ್ನುಯೋಜಿಸಬಹುದು. ಇದು ನಿಮ್ಮ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಮತ್ತು ಬಲಪಡಿಸಲು ಅನೇಕ ಹೊಸ ಅವಕಾಶಗಳನ್ನು ಒದಗಿಸಬಹುದು.
ಸಿಂಹ ವ್ಯವಹಾರ ರಾಶಿ ಭವಿಷ್ಯ 2022
ಸಿಂಹ ರಾಶಿ ವ್ಯವಹಾರ ರಾಶಿ ಭವಿಷ್ಯ 2022 ರ ಪ್ರಕಾರ, ವ್ಯಾಪಾರದ ಕ್ಷೇತ್ರಕ್ಕೆ ಸಂಬಂಧಿಸಿದ ಸ್ಥಳೀಯರು ವರ್ಷ 2022 ರಲ್ಲಿ ಲಾಭವನ್ನು ನಿರೀಕ್ಷಿಸಬಹುದು. ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಜನರು ವಿಶೇಷವಾಗಿ ಈ ವರ್ಷದ ದ್ವಿತೀಯಾರ್ಧದಲ್ಲಿ ಉತ್ತಮ ಲಾಭವನ್ನು ಗಳಿಸಬಹುದು. ಈ ವರ್ಷ ದೊಡ್ಡ ಹೂಡಿಕೆಗಳನ್ನು ಮಾಡುವಲ್ಲಿ ಅಪಾಯವಿರಬಹುದು. ಈ ವರ್ಷ ವ್ಯಾಪಾರದ ವಿಷಯದಲ್ಲಿ ನೀವು ವಿದೇಶದ ಪ್ರಯಾಣವನ್ನು ಸಹ ಮಾಡಬಹುದು. ಈ ವರ್ಷ ನೀವು ಹೊಸ ವ್ಯಾಪಾರದ ಒಪ್ಪಂದಗಳು ಮತ್ತು ಅವಕಾಶಗಳನ್ನು ಪಡೆಯುತ್ತೀರಿ. ಆದರೆ ಯಾವುದೇ ಹೂಡಿಕೆ, ಚಿನ್ನ, ಬೆಳ್ಳಿ ಅಥವಾ ಸಂಪತ್ತಿನಲ್ಲಿ ಹೂಡಿಕೆ ಮಾಡುವ ಮೊದಲು ಎಲ್ಲಾ ದಾಖಲೇಗಳನ್ನು ಸರಿಯಾಗಿ ಪರೀಕ್ಷಿಸಲು ನಿಮಗೆ ಸೂಚಿಯಲಾಗಿದೆ. ಇಲ್ಲದಿದ್ದರೆ ನಿಮ್ಮೊಂದಿಗೆ ಮೋಸವಾಗಬಹುದು. ಒಟ್ಟಾರೆಯಾಗಿ ವ್ಯಾಪಾರದ ಕ್ಷೇತ್ರಕ್ಕೆ ಸಂಬಂಧಿಸಿದ ಸಿಂಹ ರಾಶಿಚಕ್ರದ ಜನರು ಅನೇಕ ಯೋಜನೆಗಳನ್ನು ಪೂರ್ಣಗೊಳಿಸಲು ಕಠಿಣ ಸಂಘರ್ಷ ಮಾಡಬೇಕಾಗಬಹುದು. ವರ್ಷದ ಮೊದಲಾರ್ಧದಲ್ಲಿ ನಿಮ್ಮ ವ್ಯಪಾದರಾದ ಮೇಲೆ ಹೆಚ್ಚು ಗಮನ ಹರಿಸಲು ನಿಮಗೆ ಸಲಹೆ ನೀಡಲಾಗಿದೆ. ಏಕೆಂದರೆ ಸರಿತಾದ ವ್ಯಾಪಾರ ಜೆಯೋಜನೆಗಳು ಉತ್ತಮ ವ್ಯಾಪಾರದತ್ತ ಕೊಂಡೊಯ್ಯುತ್ತವೆ. ಒಂದೇ ರೀತಿಯ ವ್ಯಾಪಾರದಲ್ಲಿ ನಿಮ್ಮ್ ಸ್ಪರ್ಧಿಗಳೊಂದಿಗೆ ನೇರ ಸಂಪರ್ಕಿಸುವುದನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗಿದೆ.
ಸಿಂಹ ಆಸ್ತಿ ಮತ್ತು ವಾಹನ ರಾಶಿ ಭವಿಷ್ಯ 2022
ಸಿಂಹ ಆಸ್ತಿ ಮತ್ತು ವಾಹನ ರಾಶಿ ಭವಿಷ್ಯ 2022 ರ ಪ್ರಕಾರ, ಸಿಂಹ ರಾಶಿಚಕ್ರದ ಜನರು ದಿಗ್ಗಜರು, ಅವರು ತಮ್ಮ ಜೀವನದಲ್ಲಿ ಒಂದು ಗುರಿಯನ್ನು ಇಟ್ಟುಕೊಂಡು ನಡೆಯುತ್ತಾರೆ. ಸಂಪತ್ತು ಮತ್ತು ವಾಹನದ ವಿಷಯದಲ್ಲಿ ಸಿಂಹ ರಾಶಿಚಕ್ರದ ಸ್ಥಳೀಯಾಯ್ರಿಗೆ ಈ ವರ್ಷ ಅನುಕೂಲಕರ ಎಂದು ಸಾಬೀತುಪಡಿಸುತ್ತದೆ. ಏಕೆಂದರೆ ಈ ವರ್ಷ ಅವರ ಆರ್ಥಿಕ ಪರಿಸ್ಥಿತಿ ಸಾಕಷ್ಟು ಬಲವಾಗಿರಲಿದೆ. ನಿಮ್ಮ ವೃತ್ತಿಪರ ಜೀವನದಲ್ಲಿ ನೀವು ಪ್ರಗತಿ ಸಾಧಿಸುವಿರಿ ಮತ್ತು ನಿಮ್ಮ ಆದಾಯದಲ್ಲಿ ಹೆಚ್ಚಳವಾಗುತ್ತದೆ. ಇದರಿಂದಾಗಿ ನೀವು ಯಾವುದೇ ಹೊಸ ವಾಹನವನ್ನು ಖರೀದಿಸಲು ಯೋಜಿಸಬಹುದು. ನೀವು ನಿಮ್ಮ ಸ್ನೇಹಿತರು, ಜೀವನ ಸಂಗಾತಿ ಮತ್ತು ವೃತ್ತಿಪರ ಪಾಲುದಾರರ ಸಹಾಯದ ಮೂಲಕ ಉತ್ತಮ ಸಂಪತ್ತನ್ನು ಪಡೆಯುವಲ್ಲಿ ಯಶಸ್ವಿಯಾಗುವಿರಿ ಎಂದು ಗುರುವಿನ ಸ್ಥಾನವು ಸೂಚಿಸುತ್ತಿದೆ ಕೊನೆಯಾಗಿ ಯಾವುದೇ ಆಸ್ತಿಯನ್ನು ಖರೀದಿಸುವ ಅಥವಾ ಹೂಡಿಕೆ ಮಾಡುವ ಮೊದಲು ಚಿಂತನಶೀಲವಾಗಿ ಯೋಚಿಸಿ ಮತ್ತು ಎಲ್ಲಾ ದಾಖಲೆಗಳನ್ನು ಚೆನ್ನಾಗಿ ಪರಿಷಲೀಸಿದ ನಂತರ ಮಾತ್ರ ಯಾವುದೇ ಕ್ರಮವನ್ನು ಕೈಗೊಳ್ಳಿರಿ ಎಂದು ನಿಮಗೆ ಸಲಹೆ ನೀಡಲಾಗಿದೆ.
ಸಿಂಹ ಹಣ ಮತ್ತು ಲಾಭದ ರಾಶಿ ಭವಿಷ್ಯ 2022
ಸಿಂಹ ಹಣ ಮತ್ತು ಲಾಭದ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷ 2022 ನಿಮಗೆ ಹೆಚ್ಚು ಅನುಕೂಲಕರವಾಗಿರುತ್ತದೆ ಎಂದು ಹೇಳಲಾಗುವುದಿಲ್ಲ. ಹಣವನ್ನು ಖರ್ಚು ಮಾಡುವ ನಿಮ್ಮ ನೈಸರ್ಗಿಕ ಅಗತ್ಯವು ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ವರ್ಷದ ಮಧ್ಯದಲ್ಲಿ ಜವಾಬ್ದಾರಿಯ ಭಾವನೆ ಹೆಚ್ಚಾಗುತ್ತದೆ ಆದರೆ ಈ ಸಮಯದಲ್ಲಿ ಅತಿಯಾದ ಆತ್ಮವಿಶ್ವಾಸವನ್ನು ಹೊಂದದಿರುವುದು ನಿಮಗೆ ಹೆಚ್ಚು ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ವೆಚ್ಚಗಳನ್ನು ನಿಯಂತ್ರಿಸಲು ನಿಮಗೆ ಸಲಹೆ ನೀಡಲಾಗಿದೆ. ನಿಮ್ಮ ದೀರ್ಘಕಾಲದ ಭವಿಷ್ಯವು ನಿಮ್ಮ ನಿರ್ವಹಿಸಿದ ಹಣಕಾಸಿನ ಮೇಲೆ ಅವಲಂಬಿತವಾಗಿರುತ್ತದೆ, ಏಕೆಂದರೆ ಈ ವರ್ಷ ನೀವು ಮನೆ, ಜಮೀನು, ನಿಮ್ಮ ಹಿರಿಯರು ಮತ್ತು ನಿಮ್ಮ ಕುಟುಂಬದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೀರಿ. ಈ ವರ್ಷ ನಿಮ್ಮ ಹಣವನ್ನು ಖರ್ಚು ಮಾಡಲು ಬಯಸಿದರೆ, ನಿಮ್ಮ ಮನೆಯ ರಿಪೇರಿ ಮಾಡಲು ಅಥವಾ ಮನೆಯನ್ನು ಅಲಂಕರಿಸಲು ಅದನ್ನು ನೀವು ಖರ್ಚು ಮಾಡಿ. ವರ್ಷ 2022 ರ ರಾಶಿ ಭವಿಷ್ಯದ ಪ್ರಕಾರ, ದೀರ್ಘಕಾಲದ ಹೂಡಿಕೆಯನ್ನು ಮಾಡಲು ಅಹ ಇದು ಉತ್ತಮ ಸಮಯ, ಏಕೆಂದರೆ ಇದರಿಂದಾಗಿ ನಿಮ್ಮ ಹಣವನ್ನು ಹೆಚ್ಚಿಸಲು ನೀವು ಸಹಾಯವನ್ನು ಪಡೆಯುತ್ತೀರಿ.
ಸಿಂಹ ಅರೋಗ್ಯ ರಾಶಿ ಭವಿಷ್ಯ 2022
ಸಿಂಹ ಅರೋಗ್ಯ ರಾಶಿ ಭವಿಷ್ಯ 2022 ರ ಪ್ರಕಾರ, ಸಿಂಹ ರಾಶಿಚಕ್ರದ ಸ್ಥಳೀಯರು ಈ ವರ್ಷ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವರ್ಷದ ಆರಂಭದಲ್ಲಿ ನೀವು ಅಂದರೆ, ಜನವರಿ ರಿಂದ ಏಪ್ರಿಲ್ ವರೆಗೆ ಸ್ಥಿರ ಅರೋಗ್ಯ ಸ್ಥಿತಿಯನ್ನು ಆನಂದಿಸುವಿರಿ ಆದರೆ ಇದರ ನಂತರ ನೀವು ಬಿಪಿ, ವೈರಲ್ ಸೋಂಕು ಅಥವಾ ಅಜೀರ್ಣದಂತಹ ಸಮಸ್ಯೆಗಳಿಗೆ ಒಳಗಾಗಬಹುದು. 2022 ರಲ್ಲಿ ನಿಮಗೆ ದೊಡ್ಡ ರೋಗಗಳು ಮತ್ತು ಗಾಯಗಳಾಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ. ಆದ್ದರಿಂದ ಈ ಸಮಯದಲ್ಲಿ ಹೆಚ್ಚುವರಿ ಜಾಗರೂಕರಾಗಿರಲು ನಿಮಗೆ ಸಲಹೆ ನೀಡಲಾಗಿದೆ. ಉತ್ತಮ ಆಹಾರದ ಅಭ್ಯಾಸಗಳು ಮತ್ತು ಜೀವನ ಶೈಲಿಯಲ್ಲಿನ ಬದಲಾವಣೆಗಳು ಉತ್ತಮ ಅರೋಗ್ಯ ಮತ್ತು ಉತ್ತಮ ಸ್ಥಿತಿಯಲ್ಲಿರಲು ನಿಮಗೆ ಸಹಾಯಕರವೆಂದು ಸಾಬೀತಾಗಬಹುದು
ಸಿಂಹ ರಾಶಿ ಭವಿಷ್ಯದ 2022 ರ ಪ್ರಕಾರ ಅದೃಷ್ಟ ಸಂಖ್ಯೆ
ವರ್ಷ 2022 ಸಿಂಹ ರಾಶಿಚಕ್ರದ ಸ್ಥಳೀಯರ ಅದೃಷ್ಟ ಸಂಖ್ಯೆ 5. ಸಿಂಹ ರಾಶಿಚಕ್ರದ ಅಧಿಪತಿ ಸೂರ್ಯ ಮತ್ತು ವರ್ಷ ಬುಧ ದೇವರ ಆಡಳಿತವಿರುತ್ತದೆ, ಈ ಅವಧಿಯಲ್ಲಿ ಸಿಂಹ ರಾಶಿಚಕ್ರದ ಸ್ಥಳೀಯರು ತುಂಬಾ ತರ್ಕಬದ್ಧರಾಗಿರುತ್ತಾರೆ. ಅವರ ಅದೃಷ್ಟ ಸಂಖ್ಯೆಯ ಪ್ರಕಾರ, ಈ ವರ್ಷ ಉತ್ಸಾಹ ಮತ್ತು ಜೋಶವನ್ನು ತರುತ್ತದೆ. ಅನೇಕ ಕೆಲಸಗಳಲ್ಲಿ ನೀವು ಹೊಸ ಪಾಠಗಳನ್ನು ಪಡೆಯಬಹುದು. ಇದು ನಿಮ್ಮ ಸಂಪೂರ್ಣ ಜೀವನಕ್ಕೆ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಈ ವರ್ಷ ನಿಮ್ಮ ವೆಚ್ಚಗಳು ಹೆಚ್ಚಾಗಬಹುದು. ಸ್ವಂತ ಮನೆ ಅಥವಾ ಅಂಗಡಿಯ ಮಾಲೀಕರಾಗುವ ನಿಮ್ಮ ಕನಸು ಈ ವರ್ಷ ಈಡೇರಬಹುದು. 2022 ನಿಮ್ಮ ವ್ಯಾಪಾರ ಅಥವಾ ಉದ್ಯೋಗದಲ್ಲಿ ಹೊಸ ಅವಕ್ಶಗಳನ್ನು ತರುತ್ತದೆ ಏಕೆಂದರೆ ಬುಧ ಮತ್ತು ಸೂರ್ಯ ಪರಸ್ಪರ ಉತ್ತಮ ಸ್ನೇಹವನ್ನು ಹೊಂದಿರುತ್ತಾರೆ.
2022 ಸಿಂಹ ರಾಶಿ ಭವಿಷ್ಯ: ಜ್ಯೋತಿಷ್ಯ ಪರಿಹಾರ
- ಶನಿ ಯಂತ್ರವನ್ನು ಸರಿಯಾದ ಆಚರಣೆಗಳನ್ನು ಮಾಡಿದ ನಂತರ ತಾಮ್ರದ ತಟ್ಟೆಯಲ್ಲಿ ಇರಿಸಿ ಮತ್ತು ನಂತರ ಅದನ್ನು ಪೂಜಿಸಿ.
- ವಿವಾಹಿತ ಜೋಡಿಗಳು ತಮ್ಮ ವೈವಾಹಿಕ ಜೀವನದಲ್ಲಿ ಸೌಹಾರ್ದತೆ, ಶಾಂತಿ ಮತ್ತು ಉಷ್ಣತೆಯನ್ನು ಕಾಪಾಡಿಕೊಳ್ಳುವ ಅಗತ್ಯವಿದೆ.
- ಯಾವಾಗಲು ಸಿಹಿ ತಿಂಡಿಯನ್ನು ಸೇವಿಸಿ ಮತ್ತು ಆದರೆ ನಂತರವೇ ಯಾವುದೇ ಶುಭ ಯೋಜನೆಯಲ್ಲಿ ಭಾಗವಹಿಸಿ . ಉದ್ಯೋಗ ಸಂದರ್ಶನ ಅಥವಾ ವ್ಯಾಪಾರ ಮೀಟಿಂಗ್ ಮುಂತಾದ ಯಾವುದೇ ಇತರ ಪ್ರಮುಖವಾದ ಕೆಲಸಕ್ಕಾಗಿ ಹೋಗುವ ಮೊದಲು ಸಿಹಿಯನ್ನು ಸೇವಿಸಿ.
- ನಿಮ್ಮ ಸೋದರ ಮಾವ, ಅಳಿಯ ಅಥವಾ ಒಡಹುಟ್ಟಿದವರ ಮಗನ ಸೇವೆ ಮಾಡಿ ಅಥವಾ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಿ.
- ಯಾವಾಗಲೂ ನಿಜ ಹೇಳಿ, ಯಾರೊಂದಿಗೂ ಸುಳ್ಳು ಹೇಳಬೇಡಿ, ಯಾವಾಗಲು ನಿಮ್ಮ ಆಶ್ವಾಸನೆಗಳು ಮತ್ತು ಭರವಸೆಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಲು ಕಾಳಜಿ ವಹಿಸಿ.
ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು
1. ವರ್ಷ 2022 ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಉತ್ತಮವೆಂದು ಸಾಬೀತಾಗುತ್ತದೆಯೇ?
ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಈ ವರ್ಷ ಸಂತೋಷ ಮತ್ತು ಉತ್ಸಾಹವನ್ನು ತರುತ್ತದೆ. ಅನೇಕ ಕ್ಷೇತ್ರಗಳಲ್ಲಿ ನೀವು ಹೊಸ ಪಾಠವನ್ನು ಕಲಿಯಬಹುದು, ಇದು ನಿಮಗೆ ಅತ್ಯಂತ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಆದಾಗ್ಯೂ, ಈ ವರ್ಷ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ. ನಿಮ್ಮ ಹಣವನ್ನು ನೀವು ಜೀವನ ಶೈಲಿಯನ್ನು ಅಪ್ಗ್ರೇಡ್ ಮಾಡಲು ಅಥವಾ ಬದಲಾಯಿಸಲು ಖರ್ಚು ಮಾಡಬಹುದು.
2. 2022 ರಲ್ಲಿ ಯಾವ ರಾಶಿ ಅದೃಷ್ಟಶಾಲಿಯಾಗುತ್ತದೆ?
ಧನು ರಾಶಿ! ಧನು ರಾಶಿಚಕ್ರದ ಸ್ಥಳೀಯರು ಈ ವರ್ಷದಲ್ಲಿ ತಮ್ಮ ಜೀವನ ಸಂಗಾತಿಯನ್ನು ಪಡೆಯುವ ಪ್ರಬಲ ಸಾಧ್ಯತೆ ಇದೆ.
3. ಮಕ್ಕಳನ್ನು ಹೊಂದಲು ವರ್ಷ 2022 ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಉತ್ತಮವಾಗಿದೆಯೇ?
ಹೌದು, ವರ್ಷ 2022 ಮಕ್ಕಳಿಗಾಗಿ ಯೋಚಿಸಲು ಅಥವಾ ತಮ್ಮ ಕುಟುಂಬವನ್ನು ಹೆಚ್ಚಿಸಲು ಒಳ್ಳೆಯ ವರ್ಷವಾಗಿದೆ. ಏಕೆಂದರೆ ಈ ವರ್ಷ ಗುರುವಿನ ಧನಾತ್ಮಕ ಸ್ಥಾನವು ನಿಮಗೆ ಗರ್ಭ ಧರಿಸಲು ಸಹಕಾರವಾಗುತ್ತದೆ ಎಂದು ಸಾಬೀತುಪಡಿಸುತ್ತದೆ.
4. ಸಿಂಹ ರಾಶಿಚಕ್ರದ ಸ್ಥಳೀಯರಿಗೆ 2022 ಉತ್ತಮ ವರ್ಷವೇ?
ಸಿಂಹ ರಾಶಿಚಕ್ರದ ಅಡಿಯಲ್ಲಿ ಜನಸಿರುವ ಜನರ ಜೀವನದಲ್ಲಿ ಈ ವರ್ಷ ಏರಿಳಿತಗಳು ಇರುತ್ತವೆ. ಏಕೆಂದರೆ ಹತ್ತನೇ ಮನೆಯಲ್ಲಿ ರಾಹುವು ನೆಲೆಗೊಂಡಿರುತ್ತದೆ, ಇದು ಎಲ್ಲಾ ಅಂಶಗಳಿಂದ ಉತ್ತಮ ಫಲಿತಾಂಶಗಳನ್ನು ಪಡೆಯಲು ಸಹಕಾರ ಎಂದು ಸಾಬೀತುಪಡಿಸುತ್ತದೆ. ನಿರ್ಧಾರ ತೆಗೆದುಕೊಳ್ಳುವ ನಿಮ್ಮ ಸಾಮರ್ಥ್ಯದಲ್ಲಿ ಸುಧಾರಣೆಯನ್ನು ಕಾಣಲಾಗುತ್ತದೆ. ಈ ವರ್ಷವಿಡೀ ನಿಮ್ಮ ಆಪ್ತರೊಂದಿಗಿನ ನಿಮ್ಮ ಸಂಬಂಧಗಳು ಅತ್ಯಂತ ಉತ್ತಮವಾಗಿರುತ್ತವೆ.
ನೀವು ನಮ್ಮ ಲೇಖನವನ್ನು ಇಷ್ಟಪಟ್ಟಿದ್ದೀರಿ ಎಂದು ನಾವು ಭಾವಿಸುತ್ತೇವೆ. ಆಸ್ಟ್ರೋಸೇಜ್‌ನ ಪ್ರಮುಖ ಭಾಗವಾಗಿದ್ದಕ್ಕಾಗಿ ಧನ್ಯವಾದಗಳು. ಇನ್ನಷ್ಟು ಆಸಕ್ತಿದಾಯಕ ಲೇಖನಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ.
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
- Rashifal 2025
- Horoscope 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ராசி பலன் 2025
- రాశిఫలాలు 2025
- ರಾಶಿಭವಿಷ್ಯ 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025