ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಆಚರಣೆ; ಸಮಯ ಮತ್ತು ಮಹತ್ವ
ಮಕರ ಸಂಕ್ರಾಂತಿಯನ್ನು ಭಾರತದಲ್ಲಿ ಒಂದು ಧಾರ್ಮಿಕ ಹಬ್ಬವೆಂದು ಪರಿಗಣಿಸಲಾಗಿದೆ, ಇದನ್ನು ದೇಶದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಮತ್ತು ವಿವಿಧ ಹೆಸರುಗಳಿಂದ ಆಚರಿಸಲಾಗುತ್ತದೆ ಮತ್ತು ಕರೆಯಲಾಗುತ್ತದೆ.
ಸಾಮಾನ್ಯವಾಗಿ ಜನವರಿ ಅಂತ್ಯವು ದೀರ್ಘ ದಿನಗಳ ಪ್ರಾರಂಭವನ್ನು ಸೂಚಿಸುತ್ತದೆ. ಅಲ್ಲದೆ, ಇದು ಸುಗ್ಗಿಯ ಪರ್ವ. ಅನ್ನದಾತನು ತನ್ನನ್ನು ಪೊರೆಯುವ ಭೂಮಿತಾಯಿಗೆ ಕೃತಜ್ಞತೆ ಹೇಳುವ ಒಂದು ಸಂಭ್ರಮದ ಸಮಯ. ಈ ಅರ್ಥಪೂರ್ಣ, ಸುಂದರ ಸಂದೇಶವನ್ನು ಸಾರುವ ಹಬ್ಬವನ್ನು ನಾವು ಮಕರ ಸಂಕ್ರಾಂತಿಯಾಗಿ ಆಚರಿಸುತ್ತೇವೆ.
ಮಕರ ಸಂಕ್ರಾಂತಿ 2022: ಶುಭ ಸಮಯಗಳು:
ಜನವರಿ 14, 2022 (ಶುಕ್ರವಾರ)
ಪುಣ್ಯ ಕಾಲ ಮುಹೂರ್ತ: 14:12:26 ರಿಂದ 17:45:10 ವರೆಗೆ
ಅವಧಿ: 3 ಗಂಟೆ 32 ನಿಮಿಷಗಳು
ಮಹಾಪುಣ್ಯ ಕಾಲ ಮುಹೂರ್ತ: 14:12:26 ರಿಂದ to 14:36:26 ವರೆಗೆ
ಅವಧಿ: 0 ಗಂಟೆ 24 ನಿಮಿಷ
ಸಂಕ್ರಾಂತಿ ಮುಹೂರ್ತ: 14:12:26
ಅದೃಷ್ಟವು ನಿಮಗೆ ಅನುಕೂಲಕರವಾಗಿದೆಯೇ ಅಥವಾ ಪ್ರತಿಕೂಲವಾಗಿದೆಯೇ? ರಾಜಯೋಗ ವರದಿ ಎಲ್ಲವನ್ನೂ ಬಹಿರಂಗಪಡಿಸುತ್ತದೆ!
ಮಕರರಾಶಿಯಲ್ಲಿ ಸೂರ್ಯ ಸಂಕ್ರಮಣ:
ಮಕರ ಸಂಕ್ರಾಂತಿಯು ಪ್ರಧಾನವಾಗಿ ಸೂರ್ಯನು ತನ್ನ ಪಥವನ್ನು ಬದಲಾಯಿಸುವುದನ್ನು ಸೂಚಿಸುವುದು ಮಾತ್ರವಲ್ಲದೆ ಉತ್ತರಾಯಣ ಪುಣ್ಯ ಕಾಲದ ಆರಂಭವೂ ಇದಾಗಿದೆ. ಮಕರ ಸಂಕ್ರಾಂತಿ ಅಥವಾ ಸಂಕ್ರಮಣದ ಅರ್ಥವು ಮಕರ ರಾಶಿಯನ್ನು ಹಾದು ಹೋಗುವುದು ಅಥವಾ ಮಕರ ರಾಶಿಗೆ ಬದಲಾಗುವುದು ಎಂಬುದಾಗಿದೆ. ವೇದಶಾಸ್ತ್ರದ ಪ್ರಕಾರ ಇದು ಮನಸ್ಸಿನ ಕಾರಿರುಳನ್ನು ಹೋಗಲಾಡಿಸಿ ಸ್ವ ಪ್ರಜ್ಞೆಯ ದಾರಿಯಾದ ಮೋಕ್ಷವನ್ನು ಹೊಂದಲು ಸಹಾಯ ಮಾಡುತ್ತದೆ. . ಆದುದರಿಂದಲೇ ಇದನ್ನು ಪುಣ್ಯ ಕಾಲವೆಂದು ಕರೆಯಲಾಗುತ್ತದೆ. ಈ ಕಾಲವು ಸ್ವರ್ಗದ ಬಾಗಿಲು ತೆರೆದಿರುವ ಕಾಲವೆಂದು ಹೇಳುತ್ತಾರೆ, ಈ ಅವಧಿಯಲ್ಲಿ ಮರಣ ಹೊಂದುವವರು ಸ್ವರ್ಗವನ್ನು ಪಡೆಯುತ್ತಾರೆ ಎಂಬ ಐತಿಹ್ಯವಿದೆ. ಈ ಕಾಲದಲ್ಲಿ ಇರುಳಿನ ಅವಧಿಯು ಕಡಿಮೆಯಿದ್ದು ಸೂರ್ಯನ ಬೆಳಕು ಸದಾ ಭೂಮಿ ಮೇಲಿರುತ್ತದೆ.
ಮಕರ ಸಂಕ್ರಾಂತಿಯಂದು ಸೂರ್ಯ ಮತ್ತು ಶನಿಯ ಸಂಯೋಗದ ಪ್ರಭಾವ
ಈ ವರ್ಷ, ಮಕರ ಸಂಕ್ರಾಂತಿಯಂದು ಶನಿ ಈಗಾಗಲೇ ಮಕರ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಇದರ ಜೊತೆಗೆ ಜನವರಿ 14 ರಂದು ಮಕರ ಸಂಕ್ರಾಂತಿಯಲ್ಲಿ ಸೂರ್ಯನ ಸಂಚರಿಸುವುದರಿಂದ ಶನಿ ಮತ್ತು ಸೂರ್ಯನ ಸಂಯೋಗವನ್ನು ಇದು ರೂಪಿಸುತ್ತದೆ, ಇದು ಒಂದು ಸವಾಲಿನ ಅವಧಿಯಾಗಿರುತ್ತದೆ.
ಸೂರ್ಯ ಮತ್ತು ಶನಿಗ್ರಹದ ದುಷ್ಪರಿಣಾಮಗಳನ್ನು ತಪ್ಪಿಸಲು ಬೆಲ್ಲ, ಕಡಲೆಕಾಯಿ, ಖಿಚಡಿ ಮತ್ತು ಕಂಬಳಿ ಮುಂತಾದ ಸೂರ್ಯ ಮತ್ತು ಶನಿಗೆ ಸಂಬಂಧಿಸಿದ ವಸ್ತುಗಳನ್ನು ಬಡವರಿಗೆ ದಾನ ಮಾಡಬೇಕು.
ಭವಿಷ್ಯದ ಎಲ್ಲಾ ಮೌಲ್ಯಯುತ ಒಳನೋಟಗಳಿಗಾಗಿ ಆಸ್ಟ್ರೋಸೇಜ್ ಬೃಹತ್ ಜಾತಕ
ಕರ್ನಾಟಕದಲ್ಲಿ ಸಂಕ್ರಾಂತಿ ಆಚರಣೆ:
“ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ” ಇದು ನಮ್ಮ ಕರ್ನಾಟದಲ್ಲಿ ಪ್ರಚಲಿತದಲ್ಲಿರುವ ಒಂದು ಮಾತು. ಈ ಮಾತು ನಮ್ಮ ಮಕರ ಸಂಕ್ರಾಂತಿ ಹಬ್ಬದ ಆಚರಣೆಯನ್ನು ಪ್ರತಿನಿಧಿಸುತ್ತದೆ. ಭಾರತದ ಎಲ್ಲಾ ರಾಜ್ಯಗಳಂತೆ ಕರ್ನಾಟಕದಲ್ಲಿಯೂ ಸಂಕ್ರಾಂತಿಯನ್ನು ಸಂಭ್ರಮ ಮತ್ತು ಸಂತೋಷದಿಂದ ಆಚರಿಸುತ್ತಾರೆ. ಋತುವಿನ ಮೊದಲ ಸುಗ್ಗಿಯ ದಿನವಾದ ಸಂಕ್ರಾಂತಿಯಂದು, ರೈತರು ತಮ್ಮ ಕೃಷಿ ಭೂಮಿಗೆ ಹೇರಳವಾಗಿ ಬೆಳಕು ನೀಡುವಂತೆ ಸೂರ್ಯ ದೇವನನ್ನು ಪ್ರಾರ್ಥಿಸುತ್ತಾರೆ. ಸೂರ್ಯನ ಬೆಳಕು ಗಿಡಮರ ಬೆಳೆಗಳಿಗೆ ತುಂಬಾ ಒಳ್ಳೆಯದು. ಸಂಕ್ರಾಂತಿಯ ಸಿದ್ಧತೆಗಳು ಮನೆಯನ್ನು ಸ್ವಚ್ಛಗೊಳಿಸುವ ಮತ್ತು ಅಲಂಕರಿಸುವ ಮೂಲಕ ಆರಂಭವಾಗುತ್ತವೆ. ಈ ಸಿದ್ಧತೆಗಳು ಹಲವು ದಿನಗಳ ಮುಂಚಿತವಾಗಿ ಪ್ರಾರಂಭವಾಗುತ್ತವೆ.ಹಬ್ಬದ ದಿನದಂದು ಮುಖ್ಯ ಬಾಗಿಲುಗಳಿಗೆ ಮಾವಿನ ತೋರಣವನ್ನು ಕಟ್ಟಲಾಗುತ್ತದೆ ಮತ್ತು ಬಾಗಿಲಿನ ಹೊರಗೆ ಅಂಗಳದಲ್ಲಿ ಬಣ್ಣ ಬಣ್ಣದ ರಂಗೋಲಿ ಹಾಕಲಾಗುತ್ತದೆ.
ಎಳ್ಳು ಬೆಲ್ಲ:
ತಮ್ಮ ಹೊಸ ಬೆಳೆಯಾದ ಭತ್ತ, ಕಬ್ಬು, ಎಳ್ಳು ಇತ್ಯಾದಿಗಳನ್ನು ಹೊಲಗಳಿಂದ ಮನೆಗೆ ತಂದು ಅವುಗಳನ್ನು ದಾನ ಮಾಡಿದ ನಂತರ ಸೇವಿಸುವ ಪದ್ಧತಿಯು ಪುರಾತನ ಕಾಲದಿಂದಲೇ ನಡೆದುಕೊಂಡು ಬಂದಿದೆ. ಕರ್ನಾಟಕದಲ್ಲಿ ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು ಎಳ್ಳು. ಮಹಿಳೆಯರು ಮತ್ತು ಮಕ್ಕಳು ಮನೆ-ಮನೆಗೆ ತೆರಳಿ ಕಬ್ಬಿನ ತುಂಡು, ಎಳ್ಳು ಮತ್ತು ಬೆಲ್ಲದ ಮಿಶ್ರಣ ಮತ್ತು ಸಕ್ಕರೆ ಅಚ್ಚನ್ನು ಒಳಗೊಂಡಿರುವ ತಟ್ಟೆಗಳನ್ನು ಬದಲಿಸಿಕೊಳ್ಳುತ್ತಾರೆ. ಈ ಸಂಪ್ರದಾಯವು ಸಂತೋಷವನ್ನು ಹಂಚಿಕೊಳ್ಳುವುದನ್ನು ಸಂಕೇತಿಸುತ್ತದೆ. ಈ ಸಂಪ್ರದಾಯವನ್ನು "ಎಳ್ಳು ಬೀರುವುದು" ಎಂದು ಕರೆಯುತ್ತಾರೆ. ಸಂಕ್ರಾತಿಯ ಆಚರಣೆಯಲ್ಲಿ ಎಳ್ಳು ಬೆಲ್ಲದ ಸೇವನೆಯು ಆರೋಗ್ಯಕರವಾಗಿರುತ್ತದೆ. ಅಲ್ಲದೆ, ಮಕರ ಸಂಕ್ರಾಂತಿಯು ಚಳಿಯ ಋತುಮಾನದಲ್ಲಿ ಬರುವುದರಿಂದ ಈ ಉಷ್ಣ ಪದಾರ್ಥಗಳು ದೇಹವನ್ನು ಬೆಚ್ಚಗಿಡುತ್ತವೆ ಎಂಬುವುದೂ ಒಂದು ಅಗತ್ಯ ಕಾಳಜಿ. ಈ ಸಂದರ್ಭದಲ್ಲಿ, ಗಾಳಿಪಟ ಹಾರಿಸುವುದು, ರಂಗೋಲಿ ಬಿಡಿಸುವುದು, ಯಾಲ್ಚಿ ಕಾಯಿ ಎಂದು ಕರೆಯಲ್ಪಡುವ ಕೆಂಪು ಹಣ್ಣುಗಳನ್ನು ನೀಡುವುದು ಹಬ್ಬದ ಕೆಲವು ಸಂಪ್ರದಾಯಗಳು.
ಮುಂದೆ ಏನಾಗುತ್ತದೆ ಎಂಬುದರ ಕುರಿತು ಸುಳಿವು ಬೇಕೇ? ನಮ್ಮ ತಜ್ಞ ಜ್ಯೋತಿಷಿಗಳೊಂದಿಗೆ ಮಾತಾಡಿ.
ಕಿಚ್ಚು ಹಾಯಿಸುವುದು:
ಗ್ರಾಮೀಣ ಕರ್ನಾಟಕದ ಮತ್ತೊಂದು ಪ್ರಮುಖ ಆಚರಣೆಯೆಂದರೆ ಅಲಂಕರಿಸಿದ ಹಸುಗಳು ಮತ್ತು ಎತ್ತುಗಳ ಪ್ರದರ್ಶನ. ಜನರು ಮುಂಜಾನೆ ಎದ್ದು ತಮ್ಮ ತಮ್ಮ ಹಸುಗಳು ಅಥವಾ ಎತ್ತುಗಳನ್ನು, ಇಲ್ಲದವರು ಊರ ಬಸವನನ್ನು ಊರಿನ ಕೆರೆಗೆ ಕರೆದೊಯ್ದು, ಅದಕ್ಕೆ ಸ್ನಾನ ಮಾಡಿಸಿ, ನಂತರ ಅವುಗಳನ್ನು ಹೊಳೆಯುವ ವೇಷಭೂಷಣ ಮತ್ತು ಆಭರಣಗಳಿಂದ ಅಲಂಕರಿಸಿ, ಅವುಗಳ ಮೆರವಣಿಗೆ ಮಾಡಿ, ‘ಕಿಚ್ಚು ಹಾಯಿಸುವುದು’ ಎಂಬ ಪದ್ದತಿಯ ಮೂಲಕ ಈ ಹಸು- ಎತ್ತುಗಳಿಂದ ಬೆಂಕಿಯ ದೊಡ್ಡ ಹಳ್ಳವನ್ನು ದಾಟುವಂತೆ ಮಾಡಲಾಗುತ್ತದೆ. ಇದು ಜನರಿಗೆ ಮತ್ತು ಗ್ರಾಮಕ್ಕೆ ಅದೃಷ್ಟ ತರುತ್ತದೆ ಎಂಬುವುದು ನಂಬಿಕೆ.
ಒಟ್ಟಾರೆಯಾಗಿ ಈ ಸಂಭ್ರಮದ ಹಬ್ಬವು ಮಣ್ಣಿನ ಮಗ ಭೂಮಿತಾಯಿಗೆ, ಪ್ರಕೃತಿಗೆ ಸಲ್ಲಿಸುವ ಒಂದು ಕೃತಜ್ಞತೆಯಾಗಿದೆ. ಇದು ಜನರಲ್ಲಿ ಸಾಮರಸ್ಯವನ್ನು ಹರಡುವ ಹಬ್ಬವಾಗಿದೆ.
ಜ್ಯೋತಿಷ್ಯ ಪರಿಹಾರಗಳು ಮತ್ತು ಸೇವೆಗಳಿಗಾಗಿ, ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್
ಆಸ್ಟ್ರೋಸೇಜ್ ಜೊತೆಗೆ ಸಂಪರ್ಕದಲ್ಲಿರುವುದಕ್ಕಾಗಿ ಧನ್ಯವಾದಗಳು!
Astrological services for accurate answers and better feature
Astrological remedies to get rid of your problems

AstroSage on MobileAll Mobile Apps
- Horoscope 2023
- राशिफल 2023
- Calendar 2023
- Holidays 2023
- Chinese Horoscope 2023
- Education Horoscope 2023
- Purnima 2023
- Amavasya 2023
- Shubh Muhurat 2023
- Marriage Muhurat 2023
- Chinese Calendar 2023
- Bank Holidays 2023
- राशि भविष्य 2023 - Rashi Bhavishya 2023 Marathi
- ராசி பலன் 2023 - Rasi Palan 2023 Tamil
- వార్షిక రాశి ఫలాలు 2023 - Rasi Phalalu 2023 Telugu
- રાશિફળ 2023 - Rashifad 2023
- ജാതകം 2023 - Jathakam 2023 Malayalam
- ৰাশিফল 2023 - Rashifal 2023 Assamese
- ରାଶିଫଳ 2023 - Rashiphala 2023 Odia
- রাশিফল 2023 - Rashifol 2023 Bengali
- ವಾರ್ಷಿಕ ರಾಶಿ ಭವಿಷ್ಯ 2023 - Rashi Bhavishya 2023 Kannada