ಕರ್ಕಾಟಕ ರಾಶಿ ಭವಿಷ್ಯ 2022 ವೈದಿಕ ಜ್ಯೋತಿಷ್ಯವನ್ನು ಆಧರಿಸಿದೆ. ಈ ವಾರ್ಷಿಕ ರಾಶಿ ಭವಿಷ್ಯ 2022 (Yearly Horoscope 2022) ರ ಪ್ರಕಾರ, 13 ಏಪ್ರಿಲ್ ರಂದು ಗುರು ಗ್ರಹವು ಮೀನ ರಾಶಿಯಲ್ಲಿ ಒಂಬತ್ತನೇ ಮನೆಗೆ ಪ್ರವೇಶಿಸುತ್ತದೆ ಮತ್ತು ರಾಹುವು 12 ಏಪ್ರಿಲ್ ರಂದು ಮೇಷ ರಾಶಿಯಲ್ಲಿ ಒಂಬತ್ತನೇ ಮನೆಗೆ ಪ್ರವೇಶಿಸುತ್ತದೆ ಮತ್ತು 12 ಏಪ್ರಿಲ್ ರಂದು ರಾಹುವು ಹತ್ತನೇ ಮನೆಗೆ ಗೋಚರಿಸುತ್ತದೆ. 29 ಏಪ್ರಿಲ್ ರಂದು, ಶನಿ ದೇವ ಕುಂಭ ರಾಶಿಯ ಎಂಟನೇ ಮನೆಗೆ ಸಾಗುತ್ತಾರೆ ಮತ್ತು 12 ಜೂಲೈ ರಂದು, ವಕ್ರನಾಗಿ ಮಕರ ರಾಶಿಯಲ್ಲಿ ಏಳನೇ ಮನೆಗೆ ಗೋಚರಿಸುತ್ತಾರೆ.
ಕರ್ಕ ರಾಶಿಚಕ್ರದ ಜನರು ಅತ್ಯಂತ ಭಾವನಾತ್ಮಕ ಸ್ವಭಾವದವರು ಮತ್ತು ಅವರ ಸಂಬಂಧಗಳು ಅವರಿಗೆ ಮೊದಲ ಆದ್ಯತೆ. ಈ ಕಾರಣದಿಂದಾಗಿ ಬಹುಶಃ ಅವರ ಯಾವುದೇ ನಿರ್ಧಾರಗಳನ್ನು ವಿಶೇಷವಾಗಿ ಭಾವನೆಗಳ ಆಧಾರದ ಮೇಲೆ ತೆಗೆದುಕೊಳ್ಳುತ್ತಾರೆ. ಆದರೆ ವರ್ಷ 2022 ರಲ್ಲಿ ಯಾರಾದರು ವಿಶೇಷ ವ್ಯಕ್ತಿ ನಿಮ್ಮ ನಂಬಿಕೆಗೆ ದ್ರೋಹ ಮಾಡಬಹುದು. ಈ ಕಾರಣದಿಂದಾಗಿ ನಿಮ್ಮ ನಂಬಿಕೆ ಮುರಿಯಬಹುದು ಮತ್ತು ನಿಮ್ಮ ಜೀವನವನ್ನು ಹೊಸ ಹಂತ ಮತ್ತು ಹೊಸ ತತ್ವಗಳ ಮೇಲೆ ಆರಂಭಿಸಲು ನೀವು ಯೋಜಿಸಬಹುದು. ಈ ವರ್ಷ ಕರ್ಕಾಟಕ ರಾಶಿಚಕ್ರದ ಜನರು ತಮ್ಮ ನಡವಳಿಕೆ ಮತ್ತು ಅಭ್ಯಾಸಗಳನ್ನು ಮರುಪರಿಶೀಲಿಸುವಂತೆ ಭವಿಷ್ಯವಾಣಿ ಮಾಡುತ್ತದೆ.
Read Karka Rashi Bhavishya 2023 here
ಕರ್ಕ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷದಲ್ಲಿ ಆಳವಾದ ಮತ್ತು ಶಾಶ್ವತವಾದ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಶನಿ ದೇವ ಸಹಾಯಕ ಎಂದು ಸಾಬೀತುಪಡಿಸುತ್ತಾರೆ, ಗುರುವು ಮಾಹಿತಿಯ ವರೆಗೆ ತಲುಪಲು ಅನುಕೂಲ ಮಾಡಿಕೊಡುತ್ತಾನೆ ಮತ್ತು ಸ್ಥಳೀಯರಿಗೆ ಹೊಸ ಆಲೋಚನೆಗಳನ್ನು ಕಾರ್ಯಗತಗೊಳಿಸಲು ಸಹಾಯ ಮಾಡುತ್ತದೆ. ಇದು ಓದಲು, ಬರೆಯಲು, ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಿಗೆ ಸೈನ್ ಅಪ್ ಮಾಡಲು, ವಾಹನ ಚಲಾಯಿಸುವುದನ್ನು ಕಲಿಯಲು, ಯಾವುದೇ ವಿದೇಶಿ ಭಾಷೆಯನ್ನು ಕಲಿಯಲು, ಇತ್ಯಾದಿಗಳಿಗೆ ಸೂಕ್ತ ಸಮಯ ಎಂದು ಸಾಬೀತುಪಡಿಸಬಹುದು. ಆದಾಗ್ಯೂ, ಗುರುವು ನಿಮ್ಮ ಕೆಲಸ, ದೈನಂದಿನ ದಿನಚರಿ ಮತ್ತು ಅರೋಗ್ಯ ಕ್ಷೇತ್ರದಲ್ಲಿ ಕೆಲವು ಅಡೆತಡೆಗಳನ್ನು ಉದ್ಭವಿಸಬಹುದು. ಮಂಗಳ ದೇವ ವಕ್ರ ಸ್ಥಿತಿಯಲ್ಲಿ, ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಕಠಿಣ ಸಮಯವೆಂದು ಸಾಬೀತುಪಡಿಸಬಹುದು. ಏಕೆಂದರೆ ಅವರು ವಿವಿಧ ಪರೀಕ್ಷೆಗಳನ್ನು ಎದುರಿಸಸಬೇಕಾಗಬಹುದು. ಇದರಿಂದ ಅವರು ಬಹಳಷ್ಟು ಕಲಿಯಬೇಕಾಗುತ್ತದೆ.
ಜನವರಿ ತಿಂಗಳಲ್ಲಿ, ಏಳನೇ ಮನೆಯಲ್ಲಿ ಶನಿ ದೇವರ ಸ್ಥಾನದಿಂದಾಗಿ ನೀವು ಕೆಲಸದ ಹೊರೆಯನ್ನು ಅನುಭವಿಸಬಹುದು. ಈ ಸಮಯದಲ್ಲಿ ನಿಮ್ಮ ಸಂಬಂಧಕ್ಕೆ ಹೆಚ್ಚು ಗಮನ ಬೇಕಾಗಬಹುದು. ಆದರೆ ನೀವು ಪಡೆಯುವ ಚಿಹ್ನೆಗಳಿಗೆ ಗಮನ ಹರಿಸದಿದ್ದರೆ, ಇದನ್ನು ಅರ್ಥಮಾಡಿಕೊಳ್ಳುವುದನ್ನು ನೀವು ತಪ್ಪಿಸಬಹುದು. ಜನವರಿ ಮಧ್ಯದಲ್ಲಿ ಆರೋಗ್ಯದ ವಿಷಯಗಳು ಸಹ ಗಮನದ ಕೇಂದ್ರವಾಗಿ ಉಳಿಯುತ್ತವೆ. ನಿಮ್ಮ ಆರ್ಥಿಕ ವಿಷಯಗಳ ಬಗ್ಗೆ ಕಾಳಜಿ ವಹಿಸಲು ನಿಮಗೆ ಸಲಹೆ ನೀಡಲಾಗಿದೆ. ಫೆಬ್ರವರಿ ತಿಂಗಳಲ್ಲಿ ನೀವು ಹೆಚ್ಚು ಸಕ್ರಿಯ ಮತ್ತು ಕ್ರಿಯಾಶೀಲರಾಗಿರುತ್ತೀರಿ. ಕುಟುಂಬ ಮನೆಯ ಮೇಲೆ ಗುರುವಿನ ದೃಷ್ಟಿಯಿಂದಾಗಿ, ನೀವು ಮನೆ, ಕುಟುಂಬ ಮತ್ತು ವೈಯಕ್ತಿಕ ಜೀವನದ ಮೇಲೆ ಹೆಚ್ಚು ಕಾಳಜಿ ವಹಿಸುತ್ತೀರಿ.
ಏಪ್ರಿಲ್ ತಿಂಗಳಲ್ಲಿ ಒಂಬತ್ತನೇ ಮನೆಗೆ ಗುರುವಿನ ಸಂಚಾರವು ನಿಮ್ಮನ್ನು ಮನೆ ಮತ್ತು ವೃತ್ತಿ ಜೀವನದ ಬೆಳವಣಿಗೆಯ ಮೇಲೆ ಕೇಂದ್ರೀಕರಿಸುತ್ತದೆ. ಕರ್ಕ ರಾಶಿ ಭವಿಷ್ಯ 2022 ರ ಪ್ರಕಾರ, ಈ ತಿಂಗಳಲ್ಲಿ ನೀವು ನೀವು ಮಾಡಬಹುದಾದ ಉತ್ತಮ ಪರಿಹವೆಂದರೆ, ನಿಮ್ಮ ನಿರತ ದಿನಚರಿಯಿಂದ ಸ್ವಲ್ಪ ಸಮಯವನ್ನು ತೆಗೆದುಕೊಂಡು ಎಲ್ಲಾ ಒತ್ತಡಗಳಿಂದ ದೂರವಿರಬಹುದು. ಸಾಧ್ಯವಾದರೆ ಎಲ್ಲಾದರೂ ಸುತ್ತಾಡಲು ಯೋಜಿಸಿ.
ಮೇ ತಿಂಗಳಲ್ಲಿ ಬುಧ ವಕ್ರನಾಗುತ್ತಾನೆ, ಇದರಿಂದಾಗಿ ನಿಮ್ಮ ವೃತ್ತಿ ಜೀವನದಲ್ಲಿ ಕೆಲವು ಏರಿಳಿತಗಳನ್ನು ಕಾಣಬಹುದು. ಮಾರ್ಚ್ ಅಂತ್ಯ ಮತ್ತು ಏಪ್ರಿಲ್ ತಿಂಗಳಲ್ಲಿ ಯಾವುದೇ ವಿವಾದದ ಕಾರಣದಿಂದಾಗಿ, ನಿಮ್ಮ ವೈಯಕ್ತಿಕ ಜೀವನದಲ್ಲಿ ನೀವು ಕಿರಿಕಿರಿ ಮತ್ತು ಅಸಮಾಧಾನದ ಭಾವನೆಯನ್ನು ಅನುಭವಿಸಬಹುದು. ಜೀವನದ ಕೆಲವು ನಿರ್ಧಾರಗಳನ್ನು ಬಹಳ ಚಿಂತನಶೀಲವಾಗಿ ಮತ್ತು ನಿಧಾನವಾಗಿ ತೆಗೆದುಕೊಳ್ಳಬೇಕು ಎಂದು ನೀವು ಅರ್ಥಮಾಡಿಕೊಳ್ಳಬೇಕು. ಇದು ಆತುರದ ಬದಲು ತಾಳ್ಮೆಯಿಂದಿರಬೇಕಾದ ಸಮಯ ಇದು.
ಜೂಲೈ ತಿಂಗಳಲ್ಲಿ ಶನಿ ದೇವ ಮಕರ ರಾಶಿಗೆ ಗೋಚರಿಸುತ್ತಾರೆ. ಹಿಂದಿನ ಎರಡು ವರ್ಷಗಳಲ್ಲಿ ನೀವು ಮಾಡಿದ ಕೆಲಸಗಳು ಮತ್ತು ಪ್ರಯತ್ನಗಳನ್ನು ಅಭಿವೃದ್ಧಿಪಡಿಸಲು ಮತ್ತು ಆರಂಭಿಸುವ ಸಮಯ ಬಂದಿದೆ. ಈ ಸಮಯದಲ್ಲಿ ನೀವು ಕಡಿಮೆ ಒತ್ತಡದಲ್ಲಿರುತ್ತೀರಿ ಮತ್ತು ಕಡಿಮೆ ಹೊರೆಯನ್ನು ಸಹ ಅನುಭವಿಸುವಿರಿ. ನಿಮ್ಮ ದೈಹಿಕ ಅರೋಗ್ಯವು ಈಗ ನಿರ್ದಿಷ್ಟ ಸುಧಾರಣೆಯ ಸಂಕೇತವನ್ನು ನೀಡುತ್ತಿದೆ ಮತ್ತು ಈ ಸಮಯದಲ್ಲಿ ನಿಮ್ಮ ಜೀವನ ಶಕ್ತಿಯನ್ನು ಹೆಚ್ಚಿಸುವಂತಹ ಕೆಲವು ಟಾನಿಕ್ ಮತ್ತು ತಡೆಗಟ್ಟುವ ಪರಿಹಾರಗಳನ್ನು ತೆಗೆದುಕೊಳ್ಳಲು ನಿಮಗೆ ಸಲಹೆ ನೀಡಲಾಗಿದೆ.
ಅಕ್ಟೋಬರ್ ತಿಂಗಳಲ್ಲಿ ಮಿಥುನ ರಾಶಿಗೆ ಮಂಗಳನ ಸಂಚಾರದೊಂದಿಗೆ, ನಿಮ್ಮನ್ನು ನೀವು ಶಾಂತಿದೂತರ ಪಾತ್ರದಲ್ಲಿ ಕಾಣುವಿರಿ. ಈ ತಿಂಗಳು ನಿಮ್ಮ ಶಕ್ತಿಯನ್ನು ಪುನಃಸ್ಥಾಪಿಸಲು ಸಹ ಇದು ಸಮಯ ತೆಗೆದುಕೊಳ್ಳುತ್ತದೆ. ಅಕ್ಟೋಬರ್ ತಿಂಗಳಲ್ಲಿ ಹನ್ನೆರಡನೇ ಮನೆಯಲ್ಲಿ ಮಂಗಳ ಸಂಚಾರದದಿಂದಾಗಿ ನಿಮ್ಮ ರೋಗನಿರೋಧಕ ಸಾಮರ್ಥ್ಯದಲ್ಲಿ ಇಳಿಕೆಯನ್ನು ಕಾಣಬಹುದು. ತುಲಾ ರಾಶಿಯಲ್ಲಿ ಬುಧ ಸಂಚಾರದೊಂದಿಗೆ, ಈ ತಿಂಗಳು ನಿಮ್ಮ ಹೆಚ್ಚಿನ ಚಟುವಟಿಕೆಗಳು ಕುಟುಂಬ, ನಿಕಟ ಸ್ನೇಹಿತರು ಮತ್ತು ನಿಮ್ಮ ಸಹೋದ್ಯೋಗಿಗಳೊಂದಿಗೆ ನಿಮ್ಮ ಪ್ರಮುಖ ಸಂಬಂಧಗಳನ್ನು ಸೇರಿಸಲು ತೋರಿಸುತ್ತಿದೆ .
ವರ್ಷದ ಅಂತ್ಯದ ವೇಳೆಗೆ, ನಿಮ್ಮ ಜೀವನದಿಂದ ಅನಗತ್ಯ ಜವಾಬ್ದಾರಿಗಳನ್ನು ಮತ್ತು ಚಟುವಟಿಕೆಗಳನ್ನು ತೊಡೆದುಹಾಕಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ಜೀವನವನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳುವ ಮೂಲಕ ದೈಹಿಕ ಅರೋಗ್ಯವು ಉತ್ತಮವಾಗಿರುವುದು ಬಹಳ ಮುಖ್ಯ. ಮಕರ ರಾಶಿಯಲ್ಲಿ ಬುಧ ಸಂಚಾರದ ಪರಿಣಾಮದಿಂದಾಗಿ, ನಿಮ್ಮ ಸಂಗಾತಿಯೊಂದಿಗೆ ನೀವು ಆರ್ಥಿಕ ಗುರಿಗಳನ್ನು ನಿರ್ಧರಿಸಿದರೆ, ಇದು ನಿಮಗೆ ತುಂಬಾ ಉಪಯುಕ್ತವೆಂದು ಸಾಬೀತಾಗಬಹುದು.
ಒಟ್ಟಾರೆಯಾಗಿ, ವರ್ಷ 2022 ರಲ್ಲಿ ಕರ್ಕಾಟಕ ರಾಶಿಚಕ್ರದ ಜನರಿಗೆ, ಮೀನ ರಾಶಿಯಲ್ಲಿ ಗುರುವಿನ ಸಂಚಾರವು, ಅತ್ಯಂತ ಪ್ರಯೋಜನಕಾರಿಯಾಗಿದೆ. ಅದಕ್ಕಿಂತ ಮೊದಲು ವರ್ಷದ ಆರಂಭದಲ್ಲಿ ಗುರು ಗ್ರಹವು ಕುಂಭ ರಾಶಿಗೆ ಸಾಗಿದಾಗ, ಪ್ರತಿಯೊಂದು ಕ್ಷೇತ್ರದಲ್ಲಿ ನೀವು ಕಷ್ಟಕರ ಸಂದರ್ಭಗಳನ್ನು ಎದುರಿಸಬೇಕಾಗಬಹುದು.
ಈ ವರ್ಷ ಮೀನ ರಾಶಿಯಲ್ಲಿ ಗುರುವಿನ ಸಂಚಾರದಿಂದಾಗಿ, ಸ್ಥಳೀಯ ತನ್ನ ಮಿತಿಯನ್ನು ದಾಟುವ ಮೂಲಕ ಹೊರಗಿನ ಜಗತ್ತಿಗೆ ತನ್ನ ಅರ್ಹತೆಯನ್ನು ಸಾಬೀತುಪಡಿಸಲು ಸಾಧ್ಯವಾಗುತ್ತದೆ. ನೀವು ದೀರ್ಘಕಾಲದಿಂದ ವರ್ಗಾವಣೆಯ ಬಗ್ಗೆ ಯೋಚಿಸುತ್ತಿದ್ದರೆ, ಅದಕ್ಕೂ ಈ ಸಮಯ ಶುಭವೆಂದು ಸಾಬೀತಾಗಬಹುದು. ಕರ್ಕಾಟಕ ವಾರ್ಷಿಕ ರಾಶಿ ಭವಿಷ್ಯ 2022 ಅನ್ನು ಇನ್ನಷ್ಟು ವಿವರವಾಗಿ ಓದಿರಿ.
ಕರ್ಕ ರಾಶಿ ಭವಿಷ್ಯ 2022 ರ ಪ್ರಕಾರ, ಕರ್ಕ ರಾಶಿಚಕ್ರದ ಜನರು ವರ್ಷದ ಮೊದಲಾರ್ಧದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ, ಆದರೆ ವರ್ಷದ ಮಧ್ಯದಲ್ಲಿ ನಿಮ್ಮ ಸಂಬಂಧಗಳು ಇನ್ನಷ್ಟು ಉತ್ತಮವಾಗಬಹದು. ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ನಡುವೆ ಪ್ರೀತಿ ಮತ್ತು ಗೌರವ ಉಳಿದಿರುತ್ತದೆ. ಕರ್ಕ ರಾಶಿಚಕ್ರದ ಸ್ಥಳೀಯರು ಪ್ರಸ್ತುತ ಸಮಯದಲ್ಲಿ ಒಂಟಿಯಾಗಿದ್ದರೆ, ಅವರು ವರ್ಷದ ದ್ವಿತೀಯಾರ್ಧದಲ್ಲಿ ಸೂಕ್ತ ಸಂಗಾತಿಯನ್ನು ಪಡೆಯಬಹುದು. ನಿಮ್ಮ ಸಾಮಾಜಿಕ ಮತ್ತು ಪ್ರಣಯದ ಜೀವನದಲ್ಲಿ ಬಲವಾದ ಉತ್ಸಾಹದ ಪ್ರಾಬಲ್ಯ ಹೊಂದುವ ಸಾಧ್ಯತೆ ಇದೆ. ನಿಮ್ಮ ದೈನಂದಿನ ಜೀವನದಲ್ಲೂ, ನೀವು ಮೊದಲಿಗಿಂತ ಹೆಚ್ಚು ಜೀವಂತವಾಗಿ ಮತ್ತು ಹರ್ಷಚಿತ್ತದಿಂದ ಇರುತ್ತೀರಿ. ಈ ವರ್ಷದ ಸಮಯದಲ್ಲಿ ನಿಮ್ಮ ಸಾಮಾಜಿಕ ಅಸ್ತಿತ್ವದಲ್ಲಿ ನೀವು ಕೆಲವು ಏರಿಳಿತಗಳನ್ನು ಎದುರಿಸಬೇಕಾಗಬಹುದು.
ಕರ್ಕ ವೃತ್ತಿ ಜೀವನ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷವು ನಿಮಗೆ ತುಂಬಾ ಉತ್ಪಾದಕವಾಗಿರುತ್ತದೆ ಎಂದು ಸಾಬೀತಾಗಲಿದೆ. ಜೀವನದ ಇತರ ಕ್ಷೇತ್ರಗಳಲ್ಲಿ ಸಂಭಾವ್ಯ ಕಾಳಜಿಗಳ ಹೊರತಾಗಿಯೂ, ವೃತ್ತಿಪರ ಜೀವನದಲ್ಲಿ ಸ್ಥಿರತೆ, ಉನ್ನತ ಕಾರ್ಮಿಕ ಉತ್ಪಾದಕತೆ ಮತ್ತು ನಿರ್ವಹಣೆಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ. ವರ್ಷದ ದ್ವಿತೀಯಾರ್ಧದಲ್ಲಿ ಕೆಲವು ವೃತ್ತಿ ಅವಕಾಶಗಳು ನಿಮ್ಮ ಮುಂದೆ ಬರಬಹುದು. ಬದಲಾವಣೆಗಳನ್ನು ಮಾಡುವ ಮೊದಲು ಯಾವುದೇ ವಿಷಯದ ಬಗೆಗಿನ ಒಳ್ಳೆಯ ಮತ್ತು ಕೆಟ್ಟ ಅಂಶಗಳನ್ನು ಪರಿಗಣಿಸಲು ಮರೆಯಬೇಡಿ. ಏಕೆಂದರೆ ಆಶಾವಾದವು ನಿಮಗೆ ಉತ್ತಮವೆಂದು ಸಾಬೀತಾಗಬಹುದು. ನೆಟ್ವರ್ಕಿಂಗ್ ಮತ್ತು ಅತ್ಯಂತ ಲಾಭದಾಯಕ ನಿರ್ಧಾರ ತೆಗೆದುಕೊಳ್ಳುವವರೊಂದಿಗೆ ನಿಮ್ಮನ್ನು ಹೊಂದಿಸಿಕೊಳ್ಳುಲು ಇದು ಅತ್ಯಂತ ಪ್ರಯೋಜನಕಾರಿ. ಇದರ ಪರಿಣಾಮವಾಗಿ ನಿಮ್ಮ ಉದ್ಯೋಗವನ್ನು ನೀವು ಸುರಕ್ಷಿತವಾಗಿರಿಸಿಕೊಳ್ಳಬಹುದು.
ಕರ್ಕ ಶಿಕ್ಷಣ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷ 2022 ರಲ್ಲಿ ಕರ್ಕಾಟಕ ರಾಶಿಚಕ್ರದ ವಿದ್ಯಾರ್ಥಿಗಳ ಶಿಕ್ಷಣ ಜೀವನವು ಸರಾಸರಿಗಿಂತ ಉತ್ತಮವಾಗಿರಲಿದೆ. ಈಗಾಗಲೇ ಉತ್ತಮ ಶಾಲೆ ಅಥವಾ ಪ್ರತಿಷ್ಠಿತ ಸಂಸ್ಥೆಯಲ್ಲಿರುವ ವಿದ್ಯಾರ್ಥಿಗಳು ವರ್ಷದ ದ್ವಿತೀಯಾರ್ಧದಲ್ಲಿ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ನಿರೀಕ್ಷಿತ ಫಲಿತಾಂಶಗಳನ್ನು ಪಡೆಯದಿರುವ ಸಾಧ್ಯತೆ ಇದೆ. ಕರ್ಕ ರಾಶಿಚಕ್ರದ ಅಡಿಯಲ್ಲಿ ಜನಿಸಿದ ಜನರು 2022 ವರ್ಷದಲ್ಲಿ ತಮ್ಮ ಅಧ್ಯಯನದಲ್ಲಿ ಯಶಸ್ಸು ಪಡೆಯಲು ಕಠಿಣ ಪರಿಶ್ರಮ ಮಾಡುವುದು ಮಾತ್ರ ಏಕೈಕ ಅಂಶವೆಂದು ಸಲಹೆ ನೀಡಲಾಗಿದೆ. ಇದಲ್ಲದೆ ಈ ವರ್ಷದ ಸಮಯದಲ್ಲಿ ಅಧ್ಯಯನದಿಂದ ಗಮನವನ್ನು ಕಳೆದುಕೊಳ್ಳಬೇಡಿ ಅಥವಾ ಯಾವುದೇ ವಿಷಯದಿಂದಲೂ ವಿಚಲಿತರಾಗಬೇಡಿ ಎಂದು ಸಲಹೆ ನೀಡಲಾಗಿದೆ. ಉನ್ನತ ಶಿಕ್ಷಣವನ್ನು ಪಡೆಯಲು ಬಯಸುತ್ತಿರುವ ಕರ್ಕಾಟಕ ರಾಶಿಚಕ್ರದ ಸ್ಥಳೀಯರು, ಏಪ್ರಿಲ್ ನಂತರ ಗುರು ಗ್ರಹವು ಮೀನ ರಾಶಿಗೆ ಗೋಚರಿಸಿದಾಗ, ವಿದ್ಯಾರ್ಥಿಗಳು ಯಾವುದೇ ಗೊಂದಲವಿಲ್ಲದೆ ಏಕಾಗ್ರತೆಯಲ್ಲಿ ಯಶಸ್ಸನ್ನು ಪಡೆಯಬಹುದು.
ಕರ್ಕಾಟಕ ಆರ್ಥಿಕ ರಾಶಿ ಭವಿಷ್ಯ 2022 ರ ಪ್ರಕಾರ, ಆರ್ಥಿಕ ದೃಷ್ಟಿಕೋನದಿಂದ ಈ ವರ್ಷ ಶುಭವಾಗಿರಲಿದೆ. ಹನ್ನೊಂದನೇ ಮನೆಯಲ್ಲಿ ರಾಹುವಿನ ಉಪಸ್ಥಿತಿ ಎಂದರೆ ಖಂಡಿತವಾಗಿಯೂ ನಿಮ್ಮ ಬಳಿ ಅಪೇಕ್ಷಿತ ಉಳಿತಾಯ ಇರುತ್ತದೆ. ಈ ವರ್ಷ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ನೀವು ಉತ್ತಮ ರೀತಿಯಿಂದ ಕೆಲಸ ಮಾಡಬೇಕು. ಕರ್ಕಾಟಕ ರಾಶಿಚಕ್ರದ ಜನರು ಶುಭ ಕುಟುಂಬ ಕಾರ್ಯಕ್ರಮಗಳ ಮೇಲೆ ಹಣವನ್ನು ಖರ್ಚು ಮಾಡುತ್ತಾರೆ ಮತ್ತು ಯಾವುದೇ ದೊಡ್ಡ ಹೂಡಿಕೆಗೆ ಈ ಅಮಾಯ ಅನುಕೂಲಕರವಾಗಿದೆ.
ಕರ್ಕ ಕೌಟುಂಬಿಕ ರಾಶಿ ಭವಿಷ್ಯ 2022 ರ ಪ್ರಕಾರ, ಕುಟುಂಬ ದೃಷ್ಟಿಕೋನದಿಂದ ವರ್ಷವು ಸರಾಸರಿ ಫಲಿತಾಂಶಗಳನ್ನು ತರುತ್ತದೆ. ನಾಲ್ಕನೇ ಮನೆಯಲ್ಲಿ ಗುರು ಮತ್ತು ಶನಿಯ ಸಂಯೋಗದಿಂದಾಗಿ ನಿಮ್ಮ ಕುಟುಂಬದಲ್ಲಿ ಶಾಂತಿ ಮತ್ತು ಸದ್ಭಾವನೆಯ ವಾತಾವರಣವಿರುತ್ತದೆ. ನೀವು ನಿಮ್ಮ ತಾಯಿಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ವರ್ಷದ ದ್ವಿತೀಯಾರ್ಧದಲ್ಲಿ ಮಕ್ಕಳ ಚಿಂತೆ ಮುಗಿದುಹೋಗುತ್ತದೆ ಮತ್ತು ಈ ಸಮಯದಲ್ಲಿ ಸಾಮಜಿಕ ಗೌರವ - ಪ್ರತಿಷ್ಠೆ ಹೆಚ್ಚಾಗುತ್ತದೆ ಮತ್ತು ನೀವು ಸಾಮಾಜಿಕ ಚಟುವಟಿಕೆಗಳಲ್ಲೂ ಉತ್ಸಾಹದಿಂದ ಭಾಗವಹಿಸುವಿರಿ ಮತ್ತು ನಿಮ್ಮ ಕಿರಿಯ ಸಹೋದರ ಸಹಾದ್ರಿಯರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ.
ಕರ್ಕಾಟಕ ಮಕ್ಕಳ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷ ಮಂಗಲಕಾರವೆಂದು ಹೇಳಲಾಗುವುದಿಲ್ಲ, ಏಕೆಂದರೆ ನಿಮ್ಮ ಮಕ್ಕಳ ಅರೋಗ್ಯ, ಶಿಕ್ಷಣ ಮತ್ತು ಉದ್ಯೋಗದ ಸಮಸ್ಯೆಗಳು ಮತ್ತು ಅಡೆತಡೆಗಳು ನಿಮ್ಮನ್ನು ಕಾಡಬಹುದು. ವರ್ಷದ ದ್ವಿತೀಯಾರ್ಧದಲ್ಲಿ ಮಕ್ಕಳ ಬಗೆಗಿನ ಯಾವುದೇ ಚಿಂತೆಯನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ. ಈ ವರ್ಷ ಹೊಸದಾಗಿ ಮದುವೆಯಾಗಿರುವ ಜನರು ಯಾವುದೇ ಶುಭ ಸುದ್ದಿಯನ್ನು ಪಡೆಯಬಹುದು.
ನಿಮ್ಮ ಮಕ್ಕಳು, ಸೃಜನಶೀಲತೆ, ಪ್ರಣಯ ಹೂಡಿಕೆ ಮತ್ತು ಅವಕಾಶಗಳ ಐದನೇ ಮನೆಯಲ್ಲಿ ವಿಭಿನ್ನ ಗ್ರಹಗಳ ಸಂಚಾರದಿಂದಾಗಿ ಈ ಎಲ್ಲಾ ವಿಷಯಗಳು ನಿಮ್ಮ ಜೀವನದಲ್ಲಿ ಪ್ರಮುಖವಾಗಿ ಕಂಡುಬರುತ್ತವೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಮಕ್ಕಳೊಂದಿಗೆ ಬಲವಾದ ಸಂಬಂಧವನ್ನು ಹೊಂದುವುದು, ಅವರು ಬೆಳೆಯುವುದನ್ನು ನೋಡುವುದು ಅಥವಾ ಅವರ ಜೀವನದಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದನ್ನು ನೋಡುವ ಸಮಯ ಎಂದು ಸಾಬೀತುಪಡಿಸುವುದು ಸಹಜ. ಯಾವುದೇ ಹೊಸ ಹವ್ಯಾಸವು ನಿಮ್ಮ ಗಮನವನ್ನು ಸೆಳೆಯಬಹುದು. ಇದರಿಂದಾಗಿ ನಿಮ್ಮ ಮಕ್ಕಳೊಂದಿಗೆ ಸೇರಿ ನಿಮ್ಮ ಸಂಬಂಧವನ್ನು ನೀವು ಇನ್ನಷ್ಟು ಬಲಪಡಿಸಬಹುದು.
ಕರ್ಕ ವಿವಾಹ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷ ಸ್ವಲ್ಪ ಸವಾಲುಗಳಿಂದ ತುಂಬಿರಬಹುದು ಮತ್ತು ನಿಮ್ಮ ಪರಿಸ್ಥಿತಿಗಳನ್ನು ನೀವು ಧೈರ್ಯದಿಂದ ನಿಯಂತ್ರಿಸದಿದ್ದರೆ, ನಿಮ್ಮ ಸಂಬಂಧದಲ್ಲಿ ಸಮಸ್ಯೆಗಳು ಉದ್ಭವಿಸಬಹುದು. ಆದಾಗ್ಯೂ ವರ್ಷದ ಮಧ್ಯ ಭಾಗವು ನಿಮಗೆ ಅನುಕೂಲಕರವಾಗಿರುತ್ತದೆ. ಎಲ್ಲವನ್ನೂ ನೀವು ಸರಿಯಾಗಿ ನಿಯಂತ್ರಿಸಿದರೆ, ವರ್ಷದ ಕೊನೆಯ ತಿಂಗಳು ನಿಮಗೆ ಫಲಪ್ರದವೆಂದು ಸಾಬೀತುಪಡಿಸುತ್ತದೆ. ಈ ವರ್ಷ ನಿಮ್ಮ ಕುಟುಂಬದ ಸಂತೋಷ ಮತ್ತು ಶಾಂತಿಗೆ ಉತ್ತಮವಾಗಿರುತ್ತದೆ. ಕೆಲವೊಮ್ಮೆ ನಿಮ್ಮ ಮಕ್ಕಳ ಚೇಷ್ಟೆಯ ವರ್ತನೆಯಿಂದಾಗಿ ನೀವು ಚಿಂತೆಗೆ ಒಳಗಾಗಬಹುದು. ಈ ಕಾರಣದಿಂದಾಗಿ ನೀವು ಅವರೊಂದಿಗೆ ಮಾತನಾಡಬಹುದು. ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಪರಸ್ಪರ ತಿಳುವಳಿಕೆ ಉಳಿದಿರುತ್ತದೆ, ಆದರೂ ಯಾವುದೇ ಹೊರಗಿನ ವ್ಯಕ್ತಿಯನ್ನು ನಿಮ್ಮ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡಲು ಅನುಮತಿಸಬೇಡಿ ಎಂದು ನಿಮಗೆ ಸಲಹೆ ನೀಡಲಾಗಿದೆ.
ಕರ್ಕಾಟಕ ವ್ಯಾಪಾರ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷ 2022 ರಲ್ಲಿ ಕರ್ಕ ರಾಶಿಚಕ್ರದ ವ್ಯಾಪಾರಸ್ಥರಿಗೆ ವ್ಯಾಪಾರವನ್ನು ನಿರ್ವಹಿಸಲು ಸ್ವಲ್ಪ ಕಷ್ಟವಾಗಬಹುದು. ವಿಶೇಷವಾಗಿ ವರ್ಷದ ಅಂತ್ಯದಲ್ಲಿ, ನಿಮ್ಮ ವ್ಯಾಪಾರದಿಂದ ಬೆಳವಣಿಗೆಯನ್ನು ನಿರೀಕ್ಷಿಸಬಹುದು. ಆದರೆ ಇದರೊಂದಿಗೆ ಈ ಸಮಯದಲ್ಲಿ ನಿಮ್ಮ ಶತ್ರುಗಳು ನಿಮ್ಮನ್ನು ಹಿಂದಕ್ಕೆ ಎಳೆಯಲು ಪ್ರಯತ್ನಿಸಬಹುದು. 2022 ರಲ್ಲಿ ನಿಮ್ಮ ವ್ಯಾಪಾರವನ್ನು ಸರಾಗವಾಗಿ ನಡೆಸಲು ನಿಮ್ಮ ಕೌಶಲ್ಯ, ಅನುಭವ ಮತ್ತು ಅಂತಃಪ್ರಜ್ಞೆಯನ್ನು ಬುದ್ಧಿಯೊಂತಿಕೆಯಿಂದ ಬಳಸಿ. ವ್ಯಾಪಾರದ ದೃಷ್ಟಿಕೋನದಿಂದ ವರ್ಷದ ಆರಂಭವು ತುಂಬಾ ಅನುಕೂಲಕರವಾಗಿರುವುದಿಲ್ಲ ಮತ್ತು ಯಶಸ್ಸು ಪಡೆಯಲು ನೀವು ಕಠಿಣ ಪರಿಶ್ರಮ ಮತ್ತು ಕೇಂದ್ರೀಕರಿಸಬೇಕಾಗಬಹದು. ಆದರೆ ವರ್ಷದ ದ್ವಿತೀಯಾರ್ಧದಲ್ಲಿ ನಿಮ್ಮ ವ್ಯಾಪಾರದಲ್ಲಿ ನೀವು ಸ್ವಲ್ಪ ಯಶಸ್ಸನ್ನು ಪಡೆಯಬಹುದು.
ಕರ್ಕ ರಾಶಿ ವ್ಯಾಪಾರ ರಾಶಿ ಭವಿಷ್ಯ 2022 ರ ಪ್ರಕಾರ, ಮಕರ ರಾಶಿಯ ಏಳನೇ ಮನೆಯಲ್ಲಿ ಶನಿ ದೇವರ ಸ್ಥಾನದಿಂದಾಗಿ ಈ ವರ್ಷ ಎಲ್ಲಾ ರಾಶಿಚಕ್ರದ ಸ್ಥಳೀಯರು ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು ಪಡೆಯುತ್ತಾರೆ. ತಮ್ಮ ವ್ಯಾಪಾರದಲ್ಲಿ ಅನಿರೀಕ್ಷಿತ ಯಶಸ್ಸನ್ನು ನಿರೀಕ್ಷಿಸಬೇಡಿ, ಕೇವಲ ಕಠಿಣ ಪರಿಶ್ರಮ ಮತ್ತು ಬದ್ಧತೆಯ ಬಲದ ಮೇಲೆ ಮಾತ್ರ ಈ ವರ್ಷ ನೀವು ಯಶಸ್ಸು ಪಡೆಯಲು ಸಾಧ್ಯವಾಗಬಹುದು.
ಕರ್ಕ ವಾಹನ ಮತ್ತು ಸಂಪತ್ತು ರಾಶಿ ಭವಿಷ್ಯ 2022 ರ ಪ್ರಕಾರ, ಕರ್ಕ ರಾಶಿಚಕ್ರದ ಜನರಿಯೂ ತಮ್ಮ ಹೆಚ್ಚಿನ ಅಗತ್ಯಗಳನ್ನು ಉತ್ತಮ ಆರ್ಥಿಕ ಸ್ಥಿತಿಯ ಮೂಲಕ ಪೂರೈಸಬಹುದು. ಕರ್ಕ ರಾಶಿಚಕ್ರದ ಜನರು ಅಪೇಕ್ಷಿತ ಉಳಿತಾಯವನ್ನು ಮಾಡುವ ಮೂಲಕ ಉತ್ತಮ ಸಂಪತ್ತನ್ನು ಪಡೆಯುವಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮನ್ನು ಶ್ರೀಮಂತರೆಂದು ಅನುಭವಿಸುತ್ತಾರೆ. ಕರ್ಕ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ಕುಟುಂಬದಲ್ಲಿ ಮಂಗಳಕರ ಕಾರ್ಯಗಳಲ್ಲಿ ಹಣಕಾಸು ಖರ್ಚು ಮಾಡುತ್ತಾರೆ ಮತ್ತು ಈ ಸಮಯವು ದೊಡ್ಡ ಹೂಡಿಕೆಗೂ ಅನುಕೂಲಕರವಾಗಿರುತ್ತದೆ.
ಆಸ್ತಿಯ ಮಾರಾಟ ಮತ್ತು ಖರೀದಿಗೆ ಈ ಸಮಯ ಶುಭವಾಗಲಿದೆ. ತಮ್ಮ ಆಸ್ತಿಯನ್ನು ಮಾರಾಟ ಮಾಡಲು ಬಯಸುತ್ತಿರುವ ಜನರು ವರ್ಷದ ಮೊದಲಾರ್ಧದಲ್ಲಿ ಯಶಸ್ಸು ಪಡೆಯಬಹುದು. ಆಸ್ತಿಯನ್ನು ಖರೀದಿಸಲು ಲೋನ್ ತೆಗೆದುಕೊಳ್ಳಲು ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ, ಅದರಲ್ಲೂ ನೀವು ಯಶಸ್ಸನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಆದರೆ ಹೂಡಿಕೆಯ ಬಗ್ಗೆ ಜಾಗರೂಕರಾಗಿರಲು ನಿಮಗೆ ಸಲಹೆ ನೀಡಲಾಗಿದೆ. ಏಕೆಂದರೆ ಈ ವರ್ಷ ನಿಮ್ಮ ವೆಚ್ಚಗಳು ಸಾಕಷ್ಟು ಹೆಚ್ಚಾಗಲಿವೆ.
ಕರ್ಕ ಹಣ ಮತ್ತು ಲಾಭದ ರಾಶಿ ಭವಿಷ್ಯ 2022 ರ ಪ್ರಕಾರ, ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಹಣಕಾಸಿನ ವಿಷಯದಲ್ಲಿ ಈ ವರ್ಷ ತುಂಬಾ ಉತ್ತಮವಾಗಿರಲಿದೆ. ಇದರೊಂದಿಗೆ ವರ್ಷದ ಆರಂಭವು ಸ್ವಲ್ಪ ದುರ್ಬಲವಾಗಿರಬಹುದು. ಆದ್ದರಿಂದ ನಿಮ್ಮ ವೆಚ್ಚಗಳನ್ನು ಖಡಿತಗೊಳಿಸಲು ನಿಮಗೆ ಸಲಹೆ ನೀಡಲಾಗಿದೆ ಮತ್ತು ನೀವು ಹಣಕಾಸು ಸಂಗ್ರಹಿಸುವ ದಿಕ್ಕಿನಲ್ಲಿ ಕೆಲಸ ಮಾಡುವುದು ಉತ್ತಮ.
ಆದರೆ ವರ್ಷದ ದ್ವಿತೀಯಾರ್ಧದಲ್ಲಿ ವಿಶೇಷವಾಗಿ ಸರ್ಕಾರಿ ಕ್ಷೇತ್ರದಿದ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ಉತ್ತಮ ಸ್ಥಿತಿಯಲ್ಲಿರುತ್ತೀರಿ ಮತ್ತು ನಿಮ್ಮ ಹಳೆಯ ಬಿಲ್ ಗಳನ್ನು ಸುಲಭವಾಗಿ ಪಾವತಿಸಲು ನಿಮಗೆ ಸಾಧ್ಯವಾಗುತ್ತದೆ. ಈ ನಿಮ್ಮ ವರ್ಷ ಆರೋಗ್ಯವು ಅಸ್ಥಿರವಾಗಿರುವುದರಿಂದಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗಬಹುದು. ಈ ವರ್ಷದ ಮಾರ್ಚು ತಿಂಗಳು ಎಲ್ಲಾ ರೀತಿಯಲ್ಲಿ ನಿಮಗೆ ಉತ್ತಮವಾಗಿರುತ್ತದೆ ಮತ್ತು ಈ ತಿಂಗಳಲ್ಲಿ ವ್ಯಾಪಾರದ ಮೂಲಕ ನೀವು ಉತ್ತಮ ಪ್ರಯೋಜನವನ್ನು ಗಳಿಸಲು ಸಾಧ್ಯವಾಗುತ್ತದೆ
ಕರ್ಕ ಹಣ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷದ ಅಂತ್ಯದಲ್ಲಿ ಜೂಲೈ ರಿಂದ ಡಿಸೆಂಬರ್ ವರೆಗೆ ವಿವಿಧ ರೂಪಗಳಲ್ಲಿ ನೀವು ಹಣಕಾಸು ಪಡೆಯಬಹುದು ಮತ್ತು ಈ ವರ್ಷ ನೀವು ಸಾಕಷ್ಟು ಪ್ರಮಾಣದಲ್ಲಿ ಹಣಕಾಸು ಉಳಿಸುವಲ್ಲಿ ಸಾಮರ್ಥ್ಯರಾಗಬಹುದು. ಆದ್ದರಿಂದ ನಿಮಗಾಗಿ ನೀವು ಕೆಲವು ಉಪಯುಕ್ತ ವಸ್ತುಗಳನ್ನು ಖರೀದಿಸಲು ದೊಡ್ಡ ಹಣವನ್ನು ಖರ್ಚು ಮಾಡಬಹುದು.
ಅರೋಗ್ಯ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷದ ಆರಂಭವು ಸರಾಸರಿ ಫಲಿತಾಂಶಗಳನ್ನು ನೀಡುತ್ತದೆ. ಎಂಟನೇ ಮನೆಯಲ್ಲಿ ಗುರುವಿನ ಪರಿಣಾಮದಿಂದಾಗಿ ಹವಾಮಾನ ಸಂಬಂಧಿತ ರೋಗಗಳಿಂದ ಸಮಸ್ಯೆಗಳಾಗುವ ನಿರೀಕ್ಷೆಯಿದೆ. ಆಹಾರ ಪಾನೀಯದೊಂದಿಗೆ ನಿಮ್ಮ ದಿನಚರಿಯನ್ನು ಸುಧಾರಿಸಲು ಮತ್ತು ನಿಯಮಿತವಾಗಿ ಯೋಗ ಮತ್ತು ಧ್ಯಾನವನ್ನು ಆಶ್ರಯಿಸಲು ನಿಮಗೆ ಸಲಹೆ ನೀಡಲಾಗಿದೆ. ಆರ್ಥಿಕ ಭಾಗ ಅಥವಾ ಯಾವುದೇ ವಿರೋಧಿಯಿಂದಾಗಿ ಮಾನಸಿಕ ಒತ್ತಡವನ್ನು ತೆಗೆದುಕೊಳ್ಳಬೇಡಿ. ವರ್ಷದ ದ್ವಿತೀಯಾರ್ಧದಲ್ಲಿ ಆರೋಗ್ಯವು ಉತ್ತಮ ಮತ್ತು ಸ್ಥಿರವಾಗಿರುತ್ತದೆ ಮತ್ತು ಲಗ್ನದ ಮನೆಯ ಮೇಲೆ ಗ್ರಹಗಳ ಪ್ರಯೋಜನಕಾರಿ ಪರಿಣಾಮದಿಂದಾಗಿ ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕ ದೃಷ್ಟಿಕೋನ ಮತ್ತು ಆಲೋಚನೆಗಳನ್ನು ಹೊಂದಿರುತ್ತೀರಿ.
ಕರ್ಕ ರಾಶಿಯ ಅಧಿಪತಿ ಗ್ರಹ ಚಂದ್ರ ಮತ್ತು ಕರ್ಕ ರಾಶಿಚರ್ಕ್ದ್ ಸ್ಥಳೀಯರ ಅದೃಷ್ಟ ಸಂಖ್ಯೆ ಎರಡು ಎಂದು ಪರಿಗಣಿಸಲಾಗಿದೆ. 2022 ರಾಶಿ ಭವಿಷ್ಯದ ಪ್ರಕಾರ, ಈ ವರ್ಷ ನಿಮಗೆ ಪ್ರಯೋಜನಕಾರಿಯಾಗಲಿದೆ ಮತ್ತು ಈ ವರ್ಷ ನಿಮ್ಮ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ನೀವು ಸಮೃದ್ಧರಾಗಿರುತ್ತೀರಿ. ಕರ್ಕ ರಾಶಿಚಕ್ರದ ಸ್ಥಳೀಯರ ಮೇಲೆ ಈ ವರ್ಷ ಒಂಬತ್ತನೇ ಮನೆಯಲ್ಲಿ ಗುರುವಿನ ಸ್ಥಾನದ ಪರಿಣಾಮವು ಅತ್ಯಂತ ಧನಾತ್ಮಕವಾಗಿರಲಿದೆ.
ಒಟ್ಟಾರೆಯಾಗಿ, ಕರ್ಕ ರಾಶಿಚಕ್ರದ ಸ್ಥಳೀಯರಿಗೆ ವರ್ಷ 2022 ಮಿಶ್ರವಾಗಿರಲಿದೆ. ಜೀವನದ ವಿವಿಧ ಕ್ಷೇತ್ರಗಳಲ್ಲಿ ಉತಮದತ್ತ ನಿಮ್ಮ ಹಾಡಿನಲ್ಲಿ ಬರಲಾಗುವ ಅಡತಡೆಗಳನ್ನು ನೀವು ಎದುರಿಸಬೇಕಾಗಬಹುದು. ಸ್ವಾವಲಂಬನೆ ಮತ್ತು ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದ ಮೂಲಕ ನೀವು ಸಮಯವನ್ನು ಉತ್ತಮಗೊಳಿಸಬಹುದು. ಕುಟುಂಬದಲ್ಲಿ ಶಾಂತಿ ಇರುತ್ತದೆ ಮತ್ತು ಈ ವರ್ಷ ವಿವಿಧ ರೂಪಗಳಲ್ಲಿ ನಿಮ್ಮ ತಾಯಿಯ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ನೀವು ಇತರರಿಂದ ಗೌರವ ಮತ್ತು ಸಹೋದರ ಸಹೋದರಿಯರ ಮತ್ತು ಕುಟುಂಬದ ಸದಸ್ಯರಿಂದ ಬೆಂಬಲವನ್ನು ನಿರೀಕ್ಷಿಸಬಹುದು. ಮಕ್ಕಳ ಶೈಕ್ಷಣಿಕ ವರ್ಷವು ಉತ್ತಮವಾಗಿರುವ ಸಾಧ್ಯತೆ ಇದೆ. ಈ ವರ್ಷ ನೀವು ನಿಮ್ಮ ಆರೋಗ್ಯವನ್ನು ಉತ್ತಮ ಕಾಳಜಿ ವಹಿಸಬೇಕು.
ನೀವು ನಮ್ಮ ಲೇಖನವನ್ನು ಇಷ್ಟಪಟ್ಟಿದ್ದೀರಿ ಎಂದು ನಾವು ಭಾವಿಸುತ್ತೇವೆ. ಆಸ್ಟ್ರೋಸೇಜ್‌ನ ಪ್ರಮುಖ ಭಾಗವಾಗಿದ್ದಕ್ಕಾಗಿ ಧನ್ಯವಾದಗಳು. ಇನ್ನಷ್ಟು ಆಸಕ್ತಿದಾಯಕ ಲೇಖನಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ.