ಬುಧ ಗ್ರಹವನ್ನು ಸಂವಹನ, ವ್ಯವಸಾಯ, ತಾರ್ಕಿಕ ಸಾಮರ್ಥ್ಯ, ವಿಶ್ಲೇಷಣೆ ಮತ್ತು ವೀಕ್ಷಣೆಯ ಅಂಶವೆಂದು ಪರಿಗಣಿಸಲಾಗಿದೆ. ತನ್ನ ಸ್ನೇಹ ರಾಶಿ ವೃಷಭದಲ್ಲಿ 09 ಮೇ 2020 ರಂದು, 09:47 ಗಂಟಿಗೆ ಸಂಚರಿಸುತ್ತದೆ. ಇಲ್ಲಿಂದ 24 ಮೇ 2020, 23:57 ಗಂಟಿಗೆ ಬುಧ ಗ್ರಹವು ತನ್ನ ಸ್ವರಾಶಿ ಮಿಥುನದಲ್ಲಿ ಹಾದುಹೋಗುತ್ತದೆ. ಆದ್ದರಿಂದ ಬುಧ ಗ್ರಹವು ವೃಷಭ ರಾಶಿಯಲ್ಲಿ 16 ದಿನಗಳ ವರೆಗೆ ಇರುತ್ತದೆ.
ಯಾವುದೇ ಸಮಸ್ಯೆಯಿಂದ ತೊಂದರೆಗೊಂಡಿದ್ದರೆ, ಪರಿಹಾರಕ್ಕಾಗಿ ಜ್ಯೋತಿಷಿಯನ್ನು ಪ್ರಶ್ನೆ ಕೇಳಿ
ನಡೆಯಿರಿ ಈಗ ಬುಧ ಗ್ರಹವು ವೃಷಭ ರಾಶಿಚಕ್ರದಲ್ಲಿ ಸಂಚರಿಸಿದಾಗ ನಿಮ್ಮ ಮೇಲೆ ಏನು ಪರಿಣಾಮ ಬೀರುತ್ತದೆ ಮತ್ತು ಕುಟುಂಬ, ವೃತ್ತಿ, ಅರೋಗ್ಯ, ಪ್ರೀತಿ, ಮದುವೆ, ಶಿಕ್ಷಣ ಇತ್ಯಾದಿ ಕ್ಷೇತ್ರಗಳಲ್ಲಿ ನೀವು ಏನು ಫಲಿತಾಂಶಗಳನ್ನು ಪಡೆಯುತ್ತೀರಿ ಎಂದು ತಿಳಿಯೋಣ.
ಈ ರಾಶಿ ಭವಿಷ್ಯ ಚಂದ್ರ ರಾಶಿಯನ್ನು ಆಧರಿಸಿದೆ. ನಿಮ್ಮ ಚಂದ್ರ ರಾಶಿ ಯನ್ನು ತಿಳಿಯಿರಿ.
ಈ ರಾಶಿಚಕ್ರದ ವೃತ್ತಿಪರ ಜನರು ಕೆಲಸದ ಸ್ಥಳದಲ್ಲಿ ಲಾಭವನ್ನು ಪಡೆಯಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಮೇಷ ರಾಶಿಚಕ್ರದ ಉದ್ಯಮಿಗಳು ಈ ಸಮಯದಲ್ಲಿ ವ್ಯಾಪಾರದಲ್ಲಿ ಹೊಸ ಯೋಜನೆಗಳ ಅನುಷ್ಠಾನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಸಾಗಣೆಯ ಸಮಯದಲ್ಲಿ ನೀವು ಯಾವುದೇ ರೀತಿಯ ಲೋನ್ ಅಥವಾ ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು.
ಅರೋಗ್ಯ ಜೀವನದ ಮೇಲೆ ದೃಷ್ಟಿ ಹಾಕಿದರೆ, ನೀವು ನಿಮ್ಮ ಅಕ್ಕ ಪಕ್ಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ನಿಮಗೆ ಹಲ್ಲು ಅಥವಾ ಮುಖಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಾಗಬಹುದು.
ಪರಿಹಾರ - ಹಣ್ಣುಗಳ ದಾನ ಮಾಡಿದರೆ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.
ಈ ಸಮಯದಲ್ಲಿ ನಿಮ್ಮ ಸ್ನೇಹಪರ ಮತ್ತು ಸೌಮ್ಯ ವರ್ತನೆ, ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಈ ರಾಶಿಚಕ್ರದ ವಿವಾಹಿತ ಸ್ಥಳೀಯರು, ತಮ್ಮ ಸಂಬಂಧದಲ್ಲಿ ಹೆಚ್ಚು ಸಂತೋಸ್ಜ ಮತ್ತು ಖುಷಿಯನ್ನು ಅನುಭವಿಸುತ್ತಾರೆ. ಪ್ರೀತಿ ಸಂಬಂಧದಲ್ಲಿರುವ ಈ ರಾಶಿಚಕ್ರದ ಸ್ಥಳೀಯರು ತಮ್ಮ ಪ್ರೀತಿಪಾತ್ರರೊಂದಿಗಿನ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಸಾಧ್ಯವಾಗುತ್ತದೆ.
ಈ ರಾಶಿಚಕ್ರದ ಉದ್ಯೋಗದಲ್ಲಿರುವವರು ಅಥವಾ ಯಾವುದೇ ವೈಯಕ್ತಿಕ ಕೆಲಸದಲ್ಲಿ ತೊಡಗಿರುವವರು, ಬುಧನ ಈ ಸ್ಥಾನವು ಅವರಲ್ಲಿ ಸಾಕಷ್ಟು ಕುತೂಹಲವನ್ನು ಜಾಗೃತಗೊಳಿಸುತ್ತದೆ. ಈ ಕಾರಣದಿಂದ ನೀವು ಹೊಸ ಅನುಭವಗಳ ಮೂಲಕ ಹಾದುಹೋಗುತ್ತೀರಿ. ಇದರಿಂದ ಭವಿಷ್ಯದಲ್ಲಿ ನಿಮ್ಮ ಕೌಶಲ್ಯದಲ್ಲಿ ಇನ್ನಷ್ಟು ಹೊಳಪು ಬರುತ್ತದೆ. ಈ ಸಂಚಾರದ ಸಮಯದಲ್ಲಿ ವೃಷಭ ರಾಶಿಚಕ್ರದ ಸ್ಥಳೀಯರ ನಡವಳಿಕೆಯಲ್ಲಿ ಹೊಂದುಕೊಳ್ಳುವಿಕೆಯನ್ನು ಕಾಣಲಾಗುತ್ತದೆ, ಈ ಕಾರಣದಿಂದಾಗಿ ನೀವು ನಿಮ್ಮ ಎಲ್ಲಾ ಜವಾಬ್ದಾರಿಗಳನ್ನು ಬಹಳ ಸುಲಭವಾಗಿ ಪೂರ್ಣಗೊಳಿಸುವಿರಿ. ನಿಮ್ಮ ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳು ನಿಮ್ಮ ಕೆಲಸದಿಂದ ಸಂತೋಷಪಡುತ್ತಾರೆ. ಈ ರಾಶಿಚಕ್ರದ ಆಮದು ರಫ್ತು ವ್ಯವಹಾರದಲ್ಲಿ ತೊಡಗಿರುವ ಜನರು ಈ ಸಮಯದಲ್ಲಿ ಲಾಭವನ್ನು ಪಡೆಯಬಹುದು. ಈ ರಾಶಿಚಕ್ರದ ಪೋಷಕರ ಸಂತೋಷದ ಕಾರಣವಾಗುತ್ತಾರೆ. ಈ ಸಮಯದಲ್ಲಿ ಈ ರಾಶಿಚಕ್ರದ ವಿದ್ಯಾರ್ಥಿಗಳ ಏಕಾಗ್ರತೆ ಅದ್ಭುತವಾಗಿರುತ್ತದೆ. ಇದರಿಂದಾಗಿ ಶಿಕ್ಷಣದ ಕ್ಷೇತ್ರದಲ್ಲಿ ಅವರು ಉತ್ತಮ ಪ್ರದರ್ಶನ ಮಾಡಲು ಸಾಧ್ಯವಾಗುತ್ತದೆ.
ಪರಿಹಾರ - ಪ್ರತಿದಿನ ನಿಯಮಿತವಾಗಿ ಸೂರ್ಯೋದಯದ ಸಮಯದಲ್ಲಿ ರಾಮ ರಕ್ಷ ಸ್ತ್ರೋತವನ್ನು ಪಠಿಸಬೇಕು.
ಈ ರಾಶಿಚಕ್ರದ ವೃತ್ತಿಪರ ಸ್ಥಳೀಯರ ಬಗ್ಗೆ ಮಾತನಾಡಿದರೆ, ಈ ಸಂಚಾರವು ನಿಮ್ಮ ಮನೋಬಲದಲ್ಲಿ ಕುಸಿತವನ್ನು ತರಬಹುದು. ಇದರೊಂದಿಗೆ ನೀವು ಚಿಂತೆ ಮತ್ತು ತೊಂದರೆಕ್ಕೊಳಗಾಗಬಹುದು. ಆದ್ದರಿಂದ ಈ ಸಮಯದಲ್ಲಿ ನೀವು ಹೊಸ ಕೆಲಸ ಮಾಡುವುದನ್ನು ತಪ್ಪಿಸಬೇಕು ಮತ್ತು ನೀವು ಯಾವುದೇ ಕೆಲಸದಲ್ಲಿ ತೊಡಗಿದ್ದರೆ, ಅದನ್ನು ಬಹಳ ಪರಿಶ್ರಮದೊಂದಿಗೆ ಪೂರ್ಣಗೊಳಿಸಬೇಕು. ನಿಮ್ಮ ಕೌಶಲ್ಯವನ್ನು ನಂಬಿ ಮತ್ತು ಅದನ್ನು ಉತ್ತಮಗೊಳಿಸಲು ನಿರಂತರವಾಗಿ ಪ್ರಯತ್ನಿಸಿ, ಇದರಿಂದ ನಿಮ್ಮಲ್ಲಿ ಪೂರ್ಣತೆ ಬರುತ್ತದೆ. ನಿಮ್ಮ ವೃತ್ತಿಪರ ಜೀವನವನ್ನು ಪ್ರಭಾವಿಸುತ್ತಿರುವ ವಿಷಯಗಳು ನಿಮ್ಮ ವೈಯಕ್ತಿಕ ಜೀವನವನದ ಮೇಲೆ ಸಹ ಪರಿಣಾಮ ಬೀರಬಹುದು. ಈ ಸಮಯದಲ್ಲಿ ನೀವು ಸಣ್ಣ ಪುಟ್ಟ ವಸ್ತುಗಳ ಬಗ್ಗೆಯೂ ಕೋಪಗೊಳ್ಳಬಹುದು. ಈ ಕಾರಣದಿಂದಾಗಿ ಜೀವನದಲ್ಲಿ ಏರಿಳಿತಗಳು ಬರುತ್ತವೆ ಮತ್ತು ನಿಮ್ಮ ಸಂಬಂಧಗಳು ಸಹ ಹದಗೆಡಬಹುದು. ಈ ಸಂಚಾರದ ಸಮಯದಲ್ಲಿ ನೀವು ತಾಳ್ಮೆಯಿಂದ ಮತ್ತು ಶಾಂತವಾಗಿರಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಇದರ ಮೂಲಕ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ ಮತ್ತು ಸಂಚಾರದ ಉತ್ತಮ ಫಲಿತಾಂಶವನ್ನು ನೀವು ಪಡೆಯಬಹುದು.
ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಯಾವುದೇ ಅಜಾಗರೂಕತೆಯನ್ನು ವಹಿಸಬೇಡಿ, ವಿಶೇಷವಾಗಿ ಕಣ್ಣು ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಎಚ್ಚರದಿಂದಿರಿ. ಆದ್ದರಿಂದ ಕಣ್ಣು ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಯ ಬಗ್ಗೆ ಶೀಘ್ರದಲ್ಲೇ ವೈದ್ಯರನ್ನು ಸಂಪರ್ಕಿಸಿ.
ಪರಿಹಾರ - ನಿಮ್ಮ ನೇರ ಕೈಯ ಸಣ್ಣ ಬೆರಳಿನಲ್ಲಿ ಪನ್ನ ರತ್ನ ವನ್ನು ಧರಿಸಬೇಕು.
ಮೂರನೇ ಮನೆಯಿಂದ ನಿಮ್ಮ ಅರ್ಹತೆಯ ಬಗ್ಗೆ ಪರಿಗಣಿಸಲಾಗುತ್ತದೆ. ಆದ್ದರಿಂದ ನಿಮ್ಮ ಸಾಮರ್ಥ್ಯದ ಮೇಲೂ ನೀವು ಹಣಕಾಸು ಸಂಪಾದಿಸಬಹುದು. ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ.ಈ ಸಮಯದಲ್ಲಿ ಸಣ್ಣ ಪುಟ್ಟ ಪ್ರವಾಸಗಳ ಮೂಲಕ ಲಾಭ ಪಡೆಯುವ ಸಾಧ್ಯತೆ ಇದೆ. ಈ ರಾಶಿಚಕ್ರದ ವೃತ್ತಿಪರ ಜನರು ತಮ್ಮ ಹಿಂದಿನ ಸಮಯದಲ್ಲಿ ಮಾಡಿದ ಯಾವುದೇ ಕೆಲಸದ ಪ್ರತಿಫಲವನ್ನು ಪಡೆಯಬಹುದು. ಹನ್ನೊಂದನೇ ಮನೆ ನಿಮ್ಮ ಸಾಮಾಜಿಕ ವಲಯದ ಬಗ್ಗೆ ತಿಳಿಸುತ್ತದೆ, ಆದ್ದರಿಂದ ಬುಧ ಗ್ರಹದ ಸಂಚಾರದ ಈ ಸಮಯದಲ್ಲಿ, ಸಾಮಾಜಿಕ ಮಟ್ಟದಲ್ಲಿ ನೀವು ಎಷ್ಟು ಸಕ್ರಿಯರಾಗಿರುತ್ತಿರೋ, ಯಶಸ್ವಿಯಾಗಲು ಅಷ್ಟೇ ಹೆಚ್ಚಿನ ಅವಕಾಶಗಳನ್ನು ಪಡೆಯುತ್ತೀರಿ. ಆದಾಗ್ಯೂ, ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಸಂಗಾತಿಯಿಂದ ಹೆಚ್ಚು ನಿರೀಕ್ಷೆಗಳನ್ನು ಹೊಂದಿರುತ್ತೀರಿ. ಈ ಕಾರಣದಿಂದ ನಿಮ್ಮ ಸಂಬಂಧದಲ್ಲಿ ಬಿಕ್ಕಟ್ಟು ಉಂಟಾಗಬಹುದು. ನಿಮ್ಮ ಸಂಗಾತಿ ಹೇಗಿದ್ದಾರೋ, ಅದೇ ರೀತಿಯಲ್ಲಿ ಅವರನ್ನು ಅರ್ಥಮಾಡಿಕೊಂಡರೆ ಈ ಸಂಚಾರದ ದೃಷ್ಟಿಯಿಂದ ನಿಮಗೆ ಉತ್ತಮವಾಗಿರಬಹುದು.
ಪರಿಹಾರ - ಮನೆಯಲ್ಲಿ ಮನಿ ಪ್ಲಾಂಟ್ ಅಥವಾ ಹಸಿರು ಸಸ್ಯಗಳನ್ನು ನೆಡೆಯಿರಿ.
ವಾಣಿಜ್ಯಿಕವಾಗಿ, ನಿಮ್ಮ ಸೃಜನಶೀಲ ಮತ್ತು ಸಂಸ್ಥೆಯ ಕೌಶಲ್ಯಗಳು ಹೆಚ್ಚಾಗುತ್ತವೆ ಮತ್ತು ಆ ಕೃತಿಗಳನ್ನು ಸಾಕಾರಗೊಳಿಸಲು ಸಾಧ್ಯವಾಗುತ್ತದೆ. ಇದರ ಪರಿಣಾಮದಿಂದಾಗಿ ಉತ್ಪಾದಕತೆ ಮತ್ತು ದಕ್ಷತೆ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಸಹೋದ್ಯೋಗಿಗಳು ಮತ್ತು ಉನ್ನತ ಅಧಿಕಾರಿಗಳ ನಡುವೆ ನಿಮ್ಮ ಚಿತ್ರವೂ ಸುಧಾರಿಸುತ್ತದೆ. ಚಲನಚಿತ್ರ, ಮನರಂಜನೆ ಮತ್ತು ಇತರ ಸೃಜನಶೀಲ ನಿರ್ವಹಣೆಯಂತಹ ಕೆಲಸಗಳಲ್ಲಿ ತೊಡಗಿರುವ ಸ್ಥಳೀಯರು ಈ ಸಮಯದಲ್ಲಿ ಉತ್ತಮ ಫಲಿತಾಂಶ ಮತ್ತು ಲಾಭ ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಈ ರಾಶಿಚಕ್ರದ ಸಾರ್ವಜನಿಕ ವ್ಯವಹಾರಕ್ಕೆ ಸಂಬಂಧಿಸಿದ ಜನರು ಸಹ ಉತ್ತಮ ಲಾಭ ಪಡೆಯಬಹುದು. ಉದ್ಯಮಿಗಳಿಗೆ ಈ ಸಮಯ ಉತ್ತಮವಾಗಿರಲಿದೆ, ವಿಶೇಷವಾಗಿ ಕುಟುಂಬಕ್ಕೆ ಸಂಬಂಧಿಸಿದ ವ್ಯಾಪಾರದಲ್ಲಿ ತೊಡಗಿರುವ ಜನರು ವಿಶೇಷ ಲಾಭವನ್ನು ಪಡೆಯಬಹುದು. ಈ ಸಂಚಾರದ ಸಮಯದಲ್ಲಿ ನಿಮ್ಮ ಪ್ರರಂಪರೆಯನ್ನು ಮುಂದುವರಿಸಲು ಅವಕಾಶ ಸಿಗುತ್ತದೆ.
ನಿಮ್ಮ ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ಕುಟುಂಬದ ಸದಸ್ಯರ ಸಹಕಾರವನ್ನು ನೀವು ಪಡೆಯುತ್ತೀರಿ, ವಿಶೇಷವಾಗಿ ತಂದೆ ಅಥವಾ ತಂದೆಯಂತಹ ಜನರು ನಿಮ್ಮನ್ನು ಬೆಂಬಲಿಸುತ್ತಾರೆ. ಮನೆಯ ಪರಿಸರವು ಸಂತೋಷವಾಗಿರುತ್ತದೆ. ನಿಮ್ಮ ಪ್ರೀತಿ ಜೀವನದ ಬಗ್ಗೆ ಮಾತನಾಡಿದರೆ. ಬುಧನ ಸ್ಥಾನವು ನಿಮ್ಮ ಸಂಬಂಧಕ್ಕೆ ಸಮತೋಲನವನ್ನು ನೀಡುತ್ತದೆ. ಈ ಸಮಯದಲ್ಲಿ ಪ್ರೀತಿಪಾತ್ರರೊಂದಿಗೆ ನಿಮ್ಮ ನಿಕಟತೆಯನ್ನು ಹೆಚ್ಚಿಸಬಹುದು. ವಿವಾಹಿತ ಜನರ ಜೀವನದಲ್ಲಿ ಪ್ರೀತಿ ಮತ್ತು ಸಂತೋಷ ಉಳಿದಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಯಶಸ್ವಿಯಾಗಲು ಬಯಸುತ್ತಿದ್ದರೆ, ಈ ಸಮಯದಲ್ಲಿ ಅವರು ಇನ್ನು ಸ್ವಲ್ಪ ಹೆಚ್ಚು ಕಠಿಣ ಪರಿಶ್ರಮ ಮಾಡಬೇಕು.
ಪರಿಹಾರ - ಬುಧವಾರದಂದು ಧಾರ್ಮಿಕ ಪುಸ್ತಕಗಳ ಅಧ್ಯಯನ ಮಾಡುವುದು ಮತ್ತು ಬುಧ ಬೀಜ ಮಂತ್ರವನ್ನು ಜಪಿಸುವುದು ನಿಮಗೆ ಉತ್ತಮವಾಗಿರುತ್ತದೆ.
ವೃತ್ತಿಪರ ಜನರ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ಹೊಸ ಉದ್ಯೋಗವನ್ನು ಪಡೆಯಬಹುದು ಮತ್ತು ಆದಾಯದಲ್ಲಿ ಕೂಡ ಹೆಚ್ಚಳವಾಗಬಹುದು. ಈ ಸಂಚಾರದ ಸಮಯದಲ್ಲಿ ಮಾಡಲಾಗುವ ಪ್ರವಾಸಗಳು ನಿಮಗೆ ಲಾಭದಾಯಕವೆಂದು ಸಾಬೀತುಪಡಿಸುತ್ತವೆ.
ಸಂಚಾರದ ಈ ಸಮಯದಲ್ಲಿ ಆಧ್ಯಾತ್ಮಿಕತೆಯ ಕಡೆ ನಿಮ್ಮ ಒಲವು ಹೆಚ್ಚಾಗುತ್ತದೆ, ನೀವು ಜನರಿಗೆ ಸಹಾಯ ಮತ್ತು ಸೇವೆ ಮಾಡಬಹುದು. ಸುಧಾರಣೆಯ ಅಗತ್ಯವಿರುವ ಸಮಾಜದ ಪ್ರಮುಖ ಅಂಶಗಳ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸುತ್ತೀರಿ.
ನೀವು ವಿವಾಹಿತರಾಗಿದ್ದರೆ, ಅತ್ತೆಮನೆಯ ಜನರೊಂದಿಗೆ ನಿಮ್ಮ ಸಂಬಂಧವು ಸುಧಾರಿಸುತ್ತದೆ. ಈ ಕಾರಣದಿಂದ ನಿಮ್ಮ ಸಂಬಂಧವು ಸುಧಾರಿಸುತ್ತದೆ. ಒಬ್ಬಂಟಿಯಾಗಿರುವ ಜನರ ಬಗ್ಗೆ ಮಾತನಾಡಿದರೆ, ನೀವು ಯಾರಾನ್ನಾದರು ಪ್ರೀತಿಸುತ್ತಿದ್ದರೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಲು ಹಿಂಜರಿಯುತ್ತಿದ್ದರೆ, ನೀವು ನಿಮ್ಮ ಸ್ನೇಹಿತರ ಸಹಾಯವನ್ನು ಪಡೆಯಬಹುದು. ಸಂಚಾರದ ಸಮಯದಲ್ಲಿ ಪ್ರವಾಸಗಳು ಸಂಭವಿಸಬಹುದು ಆದರೆ ಸ್ವಲ್ಪ ಸಮಯಕ್ಕೆ ಅವುಗಳನ್ನು ತಪ್ಪಿಸುವುದು ಹಿತಕರ.
ಪರಿಹಾರ - ನಿಮ್ಮ ನೇರ ಕೈಯ ಸಣ್ಣ ಬೆರಳಿನಲ್ಲಿ ಪನ್ನ ರತ್ನ ವನ್ನು ಧರಿಸಬೇಕು.
ಬುಧ ಸಂಚಾರದ ಸಮಯದಲ್ಲೂ ತುಲಾ ರಾಶಿಚಕ್ರದ ಜನರು ಅನೇಕ ಪ್ರಸ್ತಾಪಗಳನ್ನು ಪಡೆಯಬಹುದು ಆದರೆ ಯಾವುದೇ ನಿರ್ಧಾರಕ್ಕೆ ತಲುಪುವ ಮೊದಲು ಪ್ರಯೋಜನ ಮತ್ತು ನಷ್ಟದ ಬಗ್ಗೆ ಚೆನ್ನಾಗಿ ಪರಿಗಣಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಇಲ್ಲದಿದ್ದರೆ ನೀವು ಯಾವುದೇ ರೀತಿಯ ಒಪ್ಪಂದದಲ್ಲಿ ನಷ್ಟ ಪಡೆಯಬಹುದು.
ಈ ಸಮಯದಲ್ಲಿ ರಹಸ್ಯ ಮತ್ತು ಗುಪ್ತ ವಿಜ್ಞಾನವನ್ನು ಕಲಿಯುವಲ್ಲಿ ಮತ್ತು ಅರ್ಥಮಾಡಿಕೊಳ್ಳುವಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಬಹುದು. ಇದರೊಂದಿಗೆ ಯಾವುದೇ ರೀತಿಯ ಸಂಶೋಧನೆಯ ಕಾರ್ಯದಲ್ಲಿ ತೊಡಗಿರುವ ಜನರಿಗೆ ಈ ಸಂಚಾರವು ಶುಭವಾಗಿರುತ್ತದೆ. ಈ ಅಮಯದ್ಲಲಿ ನೀವು ಬಯಸಿದ ಯಶಸ್ಸನ್ನು ಪಡೆಯಬಹುದು.
ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಜೀವನ ಸಂಗಾತಿಯ ಭಾವನಾತ್ಮಕ ಮತ್ತು ಆರ್ಥಿಕ ಸಹಕಾರವನ್ನು ನೀವು ಪಡೆಯುತ್ತೀರಿ. ಇದರಿಂದ ನೀವು ಕಠಿಣ ಪರಿಸ್ಥಿತಿಗಳನ್ನು ಸಹ ಬಹಳ ಸುಲಭವಾಗಿ ಎದುರಿಸಲು ಸಾಧ್ಯವಾಗುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ನಕಾರಾತ್ಮಕ ಆಲೋಚನೆಗಳಿಂದ ದೂರವಿರಬೇಕು ಮತ್ತು ನಿಮ್ಮ ಸಾಮರ್ಥ್ಯವನ್ನು ನಂಬಬೇಕು.
ಪರಿಹಾರ - ತಮ್ಮ ಮನೆಯಲ್ಲಿ ಕರ್ಪುರದ ದೀಪವನ್ನು ಬೆಳಗಿಸುವುದರಿಂದ ನೀವು ಬುಧ ಗ್ರಹದ ಶುಭ ಫಲಿತಾಂಶವನ್ನು ಪಡೆಯುತ್ತೀರಿ.
ಬುಧ ಗ್ರಹವು ವೃಶ್ಚಿಕ ರಾಶಿಚಕ್ರದ ಸ್ಥಳೀಯರ ಎಂಟನೇ ಮನೆಯ ಮಾಲೀಕ ಇದರಿಂದ ಜೀವನದಲ್ಲಿ ಬರುವ ಅಡಚಣೆಗಳ ಬಗ್ಗೆ ತಿಳಿಯುತ್ತದೆ, ಇಲ್ಲೇ ಬುಧ ಗ್ರಹವು ಈ ಸಂಚಾರದ ಸಮಯದಲ್ಲಿ ನಿಮ್ಮ ಸಂಬಂಧದ ಏಳನೇ ಮನೆಯಲಿ ಕುಳಿತಿರುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ವಿಷಯಗಳನ್ನು ಹೊರತೆಗೆಯಬಹುದು. ನಿರಂತರವಾಗಿ ನಿಮ್ಮ ನಡವಳಿಕೆಯಲ್ಲಿ ಉಂಟಾಗುವ ಬದಲಾವಣೆಯ ಕಾರಣದಿಂದಾಗಿ ಜೀವನ ಸಂಗಾತಿಯೊಂದಿಗೆ ತಪ್ಪುಗ್ರಹಿಕೆಗಳು ಉದ್ಭವಿಸಬಹದು. ಆದ್ದರಿಂದ ಜೀವನ ಸಂಗಾತಿಯ ಪ್ರತಿಯೊಂದು ವಿಷಯದಲ್ಲಿ ಪ್ರತಿಕ್ರಿಯೆ ನೀಡುವುದನ್ನು ತಪ್ಪಿಸಬೇಕು ಎಂದು ನಿಮಗೆ ಸಲಹೆ ನೀಡಲಾಗಿದೆ. ಇದರ ಮೂಲಕ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಒಬ್ಬಂಟಿಯಾಗಿರುವ ಈ ರಾಶಿಚಕ್ರದ ಸ್ಥಳೀಯರ ಬಗ್ಗೆ ಮಾತನಾಡಿದರೆ, ಈ ಸಂಚಾರದ ಸಮಯದಲ್ಲಿ ನೀವು ಒಬ್ಬ ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಬಹುದು.
ಬುಧ ಗ್ರಹವು ನಿಮ್ಮ ಯಶಸ್ಸು ಮತ್ತು ಲಾಭದ ಹನ್ನೊಂದನೇ ಮನೆಯ ಮಾಲೀಕ ಮತ್ತು ಸಂಚಾರದ ಈ ಸಮಯದಲ್ಲಿ ನಿಮ್ಮ ಏಳನೇ ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಈ ಸಮಯದಲ್ಲಿ ನೀವು ಲಾಭವನ್ನು ಪಡೆಯಬಹುದು ವಿಶೇಷವಾಗಿ ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಜನರು ಈ ಸಮಯದಲ್ಲಿ ಪ್ರಯೋಜನ ಪಡೆಯಬಹುದು. ಈ ಸಮಯದಲ್ಲಿ ನೀವು ಎಷ್ಟು ಸಾಮಾಜಿಕ ಸಂಪರ್ಕವನ್ನು ಹೊಂದಿತ್ತಿರೋ ಅಷ್ಟೇ ಲಾಭ ಪಡೆಯುವ ಸಾಧ್ಯತೆ ಇದೆ.
ನಿಮ್ಮ ಅರೋಗ್ಯ ಜೀವನದ ಮೇಲೆ ದೃಷ್ಟಿ ಹಾಕಿದರೆ, ಈ ಸಮಯದಲ್ಲಿ ನಿಮ್ಮ ಶಕ್ತಿಯಲ್ಲಿ ಹಚಲವನ್ನು ಅನುಭವಿಸಬಹುದು. ಈ ಶಕ್ತಿಯನ್ನು ನೀವು ರನ್ನಿಂಗ್, ಜಿಮ್ ಅಥವಾ ಯೋಗದಲ್ಲಿ ಬಳಸಿಕೊಂಡರೆ ನಿಮ್ಮ ಆರೋಗ್ಯವನ್ನು ಇನ್ನಷ್ಟು ಉತ್ತಮಗೊಳಿಸಬಹುದು.
ಪರಿಹಾರ - ತಾಯಿ ಸರಸ್ವತಿಯನ್ನು ಪೂಜಿಸಿದರೆ ನೀವು ಬುಧ ಗ್ರಹದ ಶುಭ ಫಲಿತಾಂಶವನ್ನು ಪಡೆಯಬಹುದು.
ಈ ರಾಶಿಚಕದ ಸ್ಥಳೀಯರು ತಮ್ಮ ವ್ಯಾಪಾರವನ್ನು ವಿಸ್ತರಿಸುವ ಬಗ್ಗೆ ಯೋಜನೆಯಿದ್ದರೆ, ಅದನ್ನು ಸ್ವಲ್ಪ ಸಮಯದ ವರೆಗೆ ಮುಂದೂಡುವುದು ಉತ್ತಮವಾಗಿರುತದೆ. ನೀವು ಮಾಡುತ್ತಿದ್ದ ಕೆಲಸ ಮೇಲೆ ಗಮನ ಹರಿಸಿದರೆ ಶುಭ ಫಲಿತಾಂಶಗಳನ್ನು ಪಡೆಯಬಹುದು. ಇದರೊಂದಿಗೆ ಈ ಸಮಯದಲ್ಲಿ ಯಾವುದೇ ಲೋನ್ ಅಥವಾ ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ಇದು ಮಾನಸಿಕ ಆಂತಕಕ್ಕೆ ಕಾರಣವಾಗಬಹುದು.
ನಿಮ್ಮ ವೈಯಕ್ತಿಕ ಸಂಬಂಧಗಳ ಬಗ್ಗೆ ಮಾತನಾಡಿದರೆ ಸಂಚಾರದ ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿಯ ಆರೋಗ್ಯವು ದುರ್ಬಲವಾಗಿರುತ್ತದೆ. ಇದರೊಂದಿಗೆ ಕೆಲವು ತಪ್ಪುಗ್ರಹಿಕೆಗಳು ಮತ್ತು ಸಂಬಂಧದಲ್ಲಿ ಬದಲಾವಣೆ ನಿಮ್ಮಿಬ್ಬರ ನಡುವಿನ ವಿವಾದಕ್ಕೆ ಕಾರಣವಾಗಬಹುದು ಮತ್ತು ಪರಸ್ಪರರ ಬಗ್ಗೆ ನಿಮ್ಮ ಹಿಡಿತಗಳು ಬದಲಾಗಬಹುದು. ಇದರ ಪರಿಣಾಮದಿಂದಾಗಿ ಪರಸ್ಪರರ ಬಗ್ಗೆ ನಿಮ್ಮಲ್ಲಿ ಅಹಿತಕರ ಭಾವನೆ ಉಂಟಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವಿಬ್ಬರು ಪರಸ್ಪರರೊಂದಿಗೆ ಮಾತನಾಡಬೇಕು ಮತ್ತು ಒಬ್ಬರಿಗೊಬ್ಬರ ಮೇಲೆ ದೊಷಿಸುವುದಕ್ಕಿಂತ ಈ ವಿಷಯವನ್ನು ನಿವಾರಿಸಲು ಪ್ರಯತ್ನಿಸಬೇಕು. ಈ ರಾಶಿಚಕ್ರದ ವಿದ್ಯಾರ್ಥಿಗಳ ಬಗ್ಗೆ ಮಾತನಾಡಿದರೆ, ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಈ ಸಮಯದಲ್ಲಿ ಯಶಸ್ಸು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.
ಪರಿಹಾರ - ಪ್ರತಿದಿನ ಹಸುವಿಗೆ ಹಸಿರು ಮೇವನ್ನು ತಿನ್ನಿಸಿ.
ನಿಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ನಿಮ್ಮ ಒಂಬತ್ತನೇ ಮನೆಯ ಮಾಲೀಕ ಬುಧ ಗ್ರಹವು ನಿಮ್ಮ ಐದನೇ ಮನೆಯಲ್ಲಿ ಸಂಚರಿಸುತ್ತದೆ. ಆದ್ದರಿಂದ ಬಡ್ತಿ ಬಯಸುತ್ತಿರುವ ಈ ರಾಶಿಚಕ್ರದ ಸ್ಥಳೀಯರು ಬಡ್ತಿ ಪಡೆಯಬಹುದು ಮತ್ತು ಇದರೊಂದಿಗೆ ನೀವು ಇಷ್ಟಪಡುವ ಸ್ಥಳಕ್ಕೆ ನಿಮ್ಮ ವರ್ಗಾವಣೆಯಾಗುವ ಸಾಧ್ಯತೆ ಇದೆ. ನಿಮ್ಮ ಆಲೋಚನೆಗಳನ್ನು ಉನ್ನತ ಅಧಿಕಾರಿಗಳ ಮೂಲಕ ಮೆಚ್ಚಲಾಗುತ್ತದೆ. ಇದಲ್ಲದೆ ಈ ಸಮಯದಲ್ಲಿ ಹಾಡುಗಾರಿಕೆ, ನುಡಿಸುವಿಕೆ, ನೃತ್ಯ ಇತ್ಯಾದಿಗಳಂತಹ ಯಾವುದೇ ರೀತಿಯ ಸೃಜನಶೀಲ ಕಾರ್ಯಗಳಲ್ಲಿ ತೊಡಗಿರುವಂತಹ ಜನರು ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶ ಪಡೆಯಬಹುದು. ಈ ರಾಶಿಚಕ್ರದ ಉದ್ಯಮಿಗಳು ಈ ಸಮಯದಲ್ಲಿ ಪ್ರಯೋಜನ ಪಡೆಯಬಹುದು
ಈ ಸಂಚಾರದ ಸಮಯದಲ್ಲಿ ಮಕರ ರಾಶಿಚಕ್ರದ ವಿವಾಹಿತ ಜನರು ತಮ್ಮ ಮಕ್ಕಳ ಬದಿಯಿಂದ ಯಾವುದಾದರು ಒಳ್ಳೆ ಸುದ್ಧಿಯನ್ನು ಪಡೆಯಬಹುದು. ಇದರಿಂದ ಅವರು ಸಂತೋಷಪಡುತ್ತಾರೆ. ಉನ್ನತ ಶಿಕ್ಷಣವನ್ನು ಗಳಿಸುತ್ತಿರುವ ಈ ರಾಶಿಚಕ್ರದ ವಿದ್ಯಾರ್ಥಿಗಳು ಸಹ ಈ ಸಂಚಾರವು ಲಾಭದಾಯಕವಾಗಿರುತ್ತದೆ, ವಿಶೇಷವಾಗಿ ವಿದೇಶಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವವರು ಪಡೆಯಲಿದ್ದಾರೆ, ಆರೋಗ್ಯದ ದೃಷ್ಟಿಯಿಂದಲೂ ಈ ಸಂಚಾರವು ಅನುಕೂಲವೆಂದು ಕಂಡುಬರುತ್ತಿದೆ ಮತ್ತು ಯಾವುದೇ ರೀತಿಯ ದೈಹಿಕ ಕಾರ್ಯ ಮಾಡುವುದು ನಿಮಗೆ ಲಾಭದಾಯಕ ಎಂದು ನಿರೀಕ್ಷಿಸಲಾಗಿದೆ.
ಪರಿಹಾರ - ಪ್ರತಿದಿನ ನಿಯಮಿತವಾಗಿ ಭಗವಂತ ಶ್ರೀ ಗಣೇಶನಿಗೆ ದೂರ್ವಾ ಹುಲ್ಲು ಅರ್ಪಿಸಿ.
ನಿಮ್ಮ ವೃತ್ತಿಪರ ಜೀವನದ ಮೇಲೆ ದೃಷ್ಟಿ ಹಾಕಿದರೆ, ಬುಧ ನಿಮ್ಮ ಎಂಟನೇ ಮನೆಯ ಮಾಲೀಕ, ಇದರ ಮೂಲಕ ಬದಲಾವಣೆ ಮತ್ತು ಇದ್ದಕ್ಕಿದ್ದಂತೆ ಸಂಭವಿಸುವ ಘಟನೆಗಳ ಬಗ್ಗೆ ತಿಳಿಯಲಾಗುತ್ತದೆ. ಇದರ ನೇರವಾದ ದೃಷ್ಟಿ ನಿಮ್ಮ ವೃತ್ತಿ ಜೀವನದ ಹತ್ತನೇ ಮ್ಮನೆಯ ಮೇಲೆ ಬೀಳುತ್ತಿದೆ. ಇದರಿಂದ ನಿಮ್ಮ ಜೀವನದಲ್ಲಿ ಕೆಲವು ಏರಿಳಿತಗಳು ಉಂಟಾಗಬಹುದು ಎಂದು ತಿಳಿಯುತ್ತದೆ ಮತ್ತು ಕೆಲಸದ ಸ್ಥಳದಲ್ಲಿ ಕೂಡ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯಲು ಸಾಕಷ್ಟು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಇದಲ್ಲದೆ ಉನ್ನತ ಅಧಿಕಾರಿಗಳೊಂದಿಗೆ ಕೆಲವು ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ನೀವು ತೊಂದರೆಕ್ಕೊಳಗಾಗಬಹುದು. ಆದ್ದರಿಂದ ಘರ್ಷಣೆಯ ಪರಿಸ್ಥಿತಿಯನ್ನು ತಪ್ಪಿಸಿ. ಇಲ್ಲದಿದ್ದರೆ ನಿಮ್ಮ ಚಿತ್ರ ಹದಗೆಡಬಹುದು. ಈ ರಾಶಿಚಕ್ರದ ವ್ಯಾಪಾರಿಗಳು ಇದ್ದಕ್ಕಿದ್ದಂತೆ ಲಾಭ ಪಡೆಯಬಹುದು.
ಪ್ರೀತಿ ಮತ್ತು ಪ್ರಣಯಕ್ಕೆ ಬುಧ ಸಂಚಾರವು ಉತ್ತಮವಾಗಿರುತ್ತದೆ. ಈ ಸಂಚಾರದ ಸಮಯದಲ್ಲಿ ನಮ್ಮ ಸಂಗಾತಿಯು ವೃತ್ತಿಪರ ಜೀವನದಲ್ಲಿ ಯಶಸ್ಸು ಮತ್ತು ಸಾಧನೆ ಪಡೆಯುತ್ತಾರೆ. ಈ ಸಮಯದಲ್ಲಿ ನಿಮ್ಮ ಸಂಗಾತಿ ಸಂಪೂರ್ಣ ಬೆಂಬಲ ನೀಡುತ್ತಾರೆ.
ನಿಮ್ಮ ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ನೀವು ವಾಹನ ಚಲಾಯಿಸಿದರೆ ಈ ಸಮಯದಲ್ಲಿ ಸ್ವಲ್ಪ ಜಾಗರೂರಾಗಿರಬೇಕು, ಇಲ್ಲದಿದ್ದರೆ ಅಪಘಾತ ಸಂಭವಿಸಬಹುದು. ಇದರೊಂದಿಗೆ ಎದೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ, ಶೀತ ಇತ್ಯಾದಿ ಸಮಸ್ಯೆಗಳು ಈ ಸಮಯದಲ್ಲಿ ನಿಮ್ಮನ್ನು ಕಾಡಬಹುದು. ಆದ್ದರಿಂದ ಈ ಸಮಯದಲ್ಲಿ ಅತ್ಯಂತ ತಣ್ಣನೆಯ ಆಹಾರ ಸೇವಿಸುವುದನ್ನು ತಪ್ಪಿಸಬೇಕು.
ಪರಿಹಾರ - ಪ್ರತಿ ಬುಧವಾರದ ದಿನದಂದು ವಿಷ್ಣು ಸಹಸ್ತ್ರನಾಮವನ್ನು ಪಠಿಸಿ.
ಈ ಸಂಚಾರದ ಸಮಯದಲ್ಲಿ ನಿಮ್ಮ ಸಂವಹನ ಮತ್ತು ಮಾತನಾಡುವ ಕೌಶಲ್ಯದಲ್ಲಿ ಬೆಳವಣಿಗೆಯಾಗುತ್ತದೆ, ಇದರಿಂದ ನೀವು ಅನೇಕ ಅವಕಾಶಗಳ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ. ಕಠಿಣ ಪರಿಶ್ರಮದ ಮೂಲಕ ನೀವು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸಹ ಬಲಪಡಿಸಲು ಸಾಧ್ಯವಾಗುತ್ತದೆ. ಬುಧ ಸಂಚಾರದ ಈ ಸಮಯದಲ್ಲಿ ನಿಮ್ಮ ಸಾಹಸ ಮತ್ತು ಪರಾಕ್ರಮ ಹೆಚ್ಚಾಗುತ್ತದೆ ಈ ಕಾರಣದಿಂದಾಗಿ ಕಠಿಣ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಹ ನೀವು ಹಿಂಜರಿಯುವುದಿಲ್ಲ. ನಿಮ್ಮ ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳ ಮುಂದೆ ನಮ್ಮ ಚಿತ್ರವೂ ಉತ್ತಮಗೊಳ್ಳುತ್ತದೆ.
ಅಂದಹಾಗೆ ಈ ಸಂಚಾರದ ಸಮಯದಲ್ಲಿ ನೀವು ಅನೇಕ ಕೆಲಸಗಳನ್ನು ಒಂದೇ ಸಮಯದಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸಬಹುದು, ಇದು ಕೆಲಸದಲ್ಲಿ ಅಸಾಮರಸ್ಯಕ್ಕೆ ಕಾರಣವಾಗಬಹುದು.
ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತಾಡಿದರೆ, ಮನೆಯ ವಾತಾವರಣವು ಸೌಹಾರ್ದಯುತವಾಗಿರುತ್ತದೆ. ಈ ಸಮಯದಲ್ಲಿ ಸಹೋದರ ಸಹೋದರಿಯರ ಸಂಪೂರ್ಣ ಸಹಕಾರವನ್ನು ಪಡೆಯುತ್ತೀರಿ. ಈ ರಾಶಿಚಕ್ರದ ಸ್ಥಳೀಯರು ಇಂಟರ್ನೆಟ್ ಅಥವಾ ಸಾಮಾಜಿಕ ಮಾಧ್ಯಮಗಳಂತಹ ಸಂವಹನ ವಿಧಾನಗಳ ಮೂಲಕ ಯಾವುದೇ ಸಂತೋಷದ ಸುದ್ಧಿಯನ್ನು ಪಡೆಯಬಹುದು. ದಾಂಪತ್ಯ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿ ಲಾಭವನ್ನು ಪಡೆಯಬಹುದು. ಅವರು ವೃತ್ತಿ ಜೀವನದಲ್ಲಿ ಮುಂದುವರಿಯುತ್ತಾರೆ. ಬುಧನ ಈ ಸ್ಥಾನದಿಂದ ನಿಮ್ಮ ಸಂಬಂಧದಲ್ಲಿ ಹೊಳಪು ಬರುತ್ತದೆ.
ಪರಿಹಾರ - ಪ್ರತಿಯೊಂದು ಬುಧವಾರದಂದು ವಿಷ್ಣು ಸಹಸ್ತ್ರನಾಮ ಸ್ತ್ರೋತವನ್ನು ಪಠಿಸಿ.
ಯಂತ್ರ, ರತ್ನಕಲ್ಲು ಇತ್ಯಾದಿಗಳಿಗಾಗಿ ಭೇಟಿಸಿ ಆಸ್ಟ್ರೋಸೇಜ್ ಆನ್ಲೈನ್ ಶಾಪಿಂಗ್ ಸ್ಟೋರ್