ಎಲ್ಲಾ ಗ್ರಹಗಳ ನಡುವೆ ರಾಜಕುಮಾರ ಕಿರೀಟ ಸ್ಥಾನಮಾನವನ್ನು ಪಡೆದಿರುವ ಬುಧ ಗ್ರಹವು 24 ಮೇ 2020 ರಂದು , 23:57 ಗಂಟೆಗೆ ತನ್ನ ರಾಶಿ ಮಿಥುನದಲ್ಲಿ ಸಂಚರಿಸುತ್ತದೆ. ಬುಧ ಸಂಚಾರವು ತಾರ್ಕಿಕ ಸಾಮರ್ಥ್ಯ, ವೀಕ್ಷಣೆ ಇತ್ಯಾದಿಗಳ ಅಂಶ ಗ್ರಹವಾಗಿದೆ. ಇದು ಸ್ಥಳೀಯನಿಗೆ ವಾಣಿಜ್ಯ ಗುಣಗಳನ್ನು ನೀಡುತ್ತದೆ. ಜಾತಕದಲ್ಲಿ ಅದರ ಬಲವಾದ ಸ್ಥಾನದಿಂದಾಗಿ, ಮೇಲಿನ ಎಲ್ಲಾ ಗುಣಗಳು ಸ್ಥಳೀಯರಲ್ಲಿ ಕಂಡುಬರುತ್ತವೆ.
ಯಾವುದೇ ಸಮಸ್ಯೆಯಿಂದ ಬಳಲುತ್ತಿದ್ದರೆ, ನಿವಾರಣೆಗಾಗಿ ಜ್ಯೋತಿಷಿಯ ಬಳಿ ಪ್ರಶ್ನೆ ಕೇಳಿ
ಬುಧ ಗ್ರಹದ ಸಾಗಣೆ ತನ್ನದೇ ರಾಶಿಯಾದ ಮಿಥುನ ರಾಶಿಚಕ್ರದಲ್ಲಿ ನಡೆಯುತ್ತಿದೆ ಎಂದು ನಾವು ಹೇಳಿದಂತೆ, ಈ ಸಾಗಣೆಯು ನಿಮ್ಮ ಜೀವನದ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ತಿಳಿಯೋಣ.
ಈ ರಾಶಿ ಭವಿಷ್ಯ ಚಂದ್ರ ರಾಶಿಯನ್ನು ಆಧರಿಸಿದೆ. ನಿಮ್ಮ ಚಂದ್ರ ರಾಶಿ ಯನ್ನು ತಿಳಿಯಿರಿ.
ಮೇಷ ರಾಶಿ
ಈ ಸಮಯದಲ್ಲಿ ನೀವು ನಿಮ್ಮ ಲೋನ್ ಅಥವಾ ಸಾಲವನ್ನು ಮರುಪಾವತಿಸಬಹುದು. ಬುಧನ ದೃಷ್ಟಿ ನಿಮ್ಮ ಒಂಬತ್ತನೇ ಮನೆಯ ಮೇಲೆ ಬೀಳುತ್ತಿದೆ ಮತ್ತು ಇದು ತಂದೆಯ ಮನೆ ಆದ್ದರಿಂದ ನಿಮ್ಮ ತಂದೆಯ ಕಳಪೆ ಆರೋಗ್ಯವು ನಿಮ್ಮ ಚಿಂತೆಯ ವಿಷಯವಾಗಬಹುದು. ಇದಲ್ಲದೆ ಮೇಷ ರಾಶಿಚಕ್ರದ ಕೆಲವು ಸ್ಥಳೀಯರು ತಂದೆಯೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು.
ಈ ಸಮಯದಲ್ಲಿ ನಿಮ್ಮ ಪ್ರೀತಿ ಜೀವನದಲ್ಲಿ ಪ್ರಣಯದ ಹೆಚ್ಚಳವನ್ನು ಕಾಣಲಾಗುತ್ತದೆ. ಪ್ರೀತಿಪಾತ್ರರೊಂದಿಗೆ ನಿಮ್ಮ ಭಾವನೆಗಳನ್ನು ತೆರೆಡ್ ಮನಸ್ಸಿನಿಂದ ಹಂಚಿಕೊಳ್ಳುವಿರಿ. ಅದೇ ಸಮಯದಲ್ಲಿ ಮತ್ತೊಂದೆಡೆ, ವಿವಾಹಿತ ಜನರು ತಮ್ಮ ಜೀವನ ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ ಮತ್ತು ಆರೋಗ್ಯದ ದೃಷ್ಟಿಯಿಂದ ನೋಡಿದರೆ, ಈ ಸಮಯವೂ ಮೇಷ ರಾಶಿಚಕ್ರದ ಸ್ಥಳೀಯರಿಗೆ ಉತ್ತಮವಾಗಿರಲಿದೆ.
ಪರಿಹಾರ - ಬುಧವಾರ ದಿನದಂದು ಶ್ರೀ ಗಣೇಶ ದೇವರಿಗೆ ದೂರ್ವಾ ಹುಲ್ಲು ಅರ್ಪಿಸುವುದು ನಿಮಗೆ ಶುಭವಾಗಿರುತ್ತದೆ.
ವೃಷಭ ರಾಶಿ
ಎರಡನೇ ಮನೆಯಿಂದ ಹಣವನ್ನು ಸಹ ಪರಿಗಣಿಸಲಾಗುತ್ತದೆ. ಬುಧ ಸಾಗಣೆಯ ಈ ಸಮಯದಲ್ಲಿ ನಿಮ್ಮ ಸಂಗ್ರಹಿಸಲಾಗಿರುವ ಹಣ ಹೆಚ್ಚಾಗಬಹುದು. ಹೊಸ ಬ್ಯಾಂಕ್ ಖಾತೆಯನ್ನು ತೆರೆಯಲು, ಇದು ದೀರ್ಘಾವಧಿಯ ಹೂಡಿಕೆಗೆ ಉತ್ತಮ ಸಮಯ. ಹಣಕಾಸಿನ ಪ್ರಗತಿಯು ನಿಮ್ಮ ಆದ್ಯತೆಯಾಗಿರುತದೆ. ಇದರಿಂದ ನೀವು ನಿಮ್ಮ ಮತ್ತು ಕುಟುಂಬದ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ರಾಶಿಚಕ್ರದ ವಿದ್ಯಾರ್ಥಿಗಳ ಬಗ್ಗೆ ಮಾತನಾಡಿದರೆ, ನೀವು ಶಿಕ್ಷಣದ ಕ್ಷೇತ್ರದಲ್ಲಿ ನಿಧಾನವಾಗಿ ಪ್ರಗತಿ ಪಡೆಯುತ್ತೀರಿ.
ಇಂದಿನ ವರೆಗೂ ಒಬ್ಬಂಟಿಯಾಗಿರುವ ಈ ರಾಶಿಚಕ್ರದ ಸ್ಟಲೀಯರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತದೆ ಮತ್ತು ಇದರಿಂದಾಗಿ ಅವರು ಹೊಸ ಸಂಬಂಧವನ್ನು ಸ್ಥಾಪಿಸಬಹುದು. ಅಲ್ಲೇ ಈ ರಾಶಿಚಕ್ರದ ವಿವಾಹಿತ ಜನರ ಕುಟುಂಬದದಲ್ಲಿ ಒಬ್ಬ ಹೊಸ ಸದಸ್ಯ ಬರಬಹುದು. ಆದಾಗ್ಯೂ ನೀವು ನಿಮ್ಮ ಜೀವನ ಸಂಗಾತಿಯ ಆರೋಗ್ಯದ ಬಗ್ಗೆ ಚಿಂತೆಕ್ಕೊಳಗಾಗಬಹುದು.
ಈ ಸಂಚಾರದ ಸಮಯದಲ್ಲಿ ನಿಮ್ಮ ಸುತ್ತಲೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ, ಇಲ್ಲದಿದ್ದರೆ ನಿಮಗೆ ಮುಖ ಅಥವಾ ಹಲ್ಲುಗಳಿಗೆ ಸಂಬಂಧಿಸಿದ ಸಮಸ್ಯೆಗಳಾಗಬಹುದು. ಈ ರಾಶಿಚಕ್ರದ ಸ್ಥಳೀಯರು ಥೈರಾಯ್ಡ್‌ನಂತಹ ಹಾರ್ಮೋನ್ ಗಳಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ, ಅವರು ಖಂಡಿತವಾಗಿಯೂ ಜಾಗರೂಕರಾಗಿರುವ ಅಗತ್ಯವಿದೆ.
ಪರಿಹಾರ - ಪ್ರತಿದಿನ ನಿಯಮಿತವಾಗಿ ತುಳಸಿ ಸಸ್ಯವನ್ನು ಪೂಜಿಸಿ ಮತ್ತು ನೀರನ್ನು ಅರ್ಪಿಸಿ.
ಮಿಥುನ ರಾಶಿ
ಬುಧವು ಸಂಚಾರದ ಈ ಸಮಯದಲ್ಲಿ ದಿಗ್ಬಲಿ ಸ್ಥಿತಿಯಲ್ಲಿರುತ್ತದೆ. ಈ ಕಾರಣದಿಂದಾಗಿ ನೀವು ಸೃಜನಶೀಲ ವಿಚಾರಗಳಿಂದ ತುಂಬಿರುತ್ತೀರಿ ಮತ್ತು ನಿಮ್ಮ ಬೌದ್ಧಿಕ ಸಾಮರ್ಥ್ಯವು ಉತ್ತಮವಾಗಿರುತ್ತದೆ. ಬುಧನ ಈ ಸ್ಥಾನವು ಮಿಥುನ ರಾಶಿಚಕ್ರದ ಶತಾಳೀಯರಿಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಉತ್ತಮ ಬುದ್ಧಿವಂತಿಕೆ ನೀಡುತ್ತದೆ. ಇದರಿಂದಾಗಿ ನೀವು ಅವಕಾಶಗಳ ಉತ್ತಮ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಯಶಸ್ಸು ಮತ್ತು ತೃಪ್ತಿಯನ್ನು ಸಹ ಪಡೆಯುತ್ತೀರಿ. ಆದರೆ ಬುಧ ಸಂಚಾರದ ಈ ಸಮಯದಲ್ಲಿ ನೀವು ಅನೇಕ ಕೆಲಸಗಳನ್ನು ಒಂದೇ ಸಾರಿ ಮಾಡಲು ಪ್ರಯತ್ನಿಸುತ್ತೀರಿ. ಏಕೆಂದರೆ ನೀವು ಶೀಘ್ರದಲ್ಲೇ ಒಂದೇ ಕೆಲಸದ ಬಗ್ಗೆ ಬೇಸರಗೊಳ್ಳುತ್ತೀರಿ. ಆದ್ದರಿಂದ ಇತರ ಕೆಲಸಗಳ ಮೇಲೆ ಸಹ ಗಮನ ಹರಿಸುತ್ತೀರಿ. ನೀವು ಇದನ್ನು ಮಾಡುವುದು ಸರಿಯಲ್ಲ. ಏಕೆಂದರೆ ಅದು ನಿಮ್ಮ ಕೆಲಸದಲ್ಲಿ ಅಸಂಗತತೆಯನ್ನು ಉಂಟುಮಾಡುತ್ತದೆ.
ಬುಧನ ಈ ಸಂಚಾರವು ಈ ರಾಶಿಚಕ್ರದ ಪ್ರೇಮಿಗಳಿಗೆ ಉತ್ತಮವಾಗಿರುತ್ತದೆ. ಇಂದಿನವರೆಗೂ ಒಬ್ಬಂಟಿಯಾಗಿದ್ದವರು ಈ ಸಮಯದಲ್ಲಿ ಒಬ್ಬ ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಬಹುದು. ವೀವಾಹಿತ ಜನರ ಜೀವನದಲ್ಲಿ ಸಂತೋಷ ಉಳಿದಿರುತ್ತದೆ.
ಪರಿಹಾರ - ಬುಧ ಬೀಜ ಮಂತ್ರವನ್ನು ಜಪಿಸುವುದರಿಂದ ನಿಮ್ಮ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.
ಕರ್ಕ ರಾಶಿ
ಆದಾಗ್ಯೂ ಈ ಸಮಯದಲ್ಲಿ ಕರ್ಕ ರಾಶಿಚಕ್ರದ ಸ್ಥಳೀಯರ ಕುಟುಂಬದ ವಾತಾವರಣವು ಸಂತೋಷವಾಗಿರುತ್ತದೆ. ನಿಮ್ಮ ಸಹೋದರ ಸಹೋದರಿಯರು ಪ್ರಗತಿ ಪಡೆಯುವುದರಿಂದಾಗಿ ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ ಹನ್ನೆರಡನೇ ಮನೆಯ ಮೂಲಕ ವಿದೇಶದ ಬಗ್ಗೆ ಪರಿಗಣಿಸಲಾಗುತ್ತದೆ. ಬುಧವು ಸಂಚಾರದ ಸಮಯದಲ್ಲಿ ತನ್ನ ಸ್ವರಾಶಿಯಲ್ಲಿ ನೆಲೆಗೊಂಡಿದೆ ಆದ್ದರಿಂದ ಕರ್ಕ ರಾಶಿಚಕ್ರದ ಕೆಲವು ಸ್ಥಳೀಯರು ಮುಂಬರುವ ಸಮಯದಲ್ಲಿ ವಿದೇಶದಲ್ಲಿ ವಾಸಿಸಲು ಅವಕಾಶವನ್ನು ಹುಡುಕಬಹುದು ಎಂಬುದರ ಬಗ್ಗೆ ಸೂಚಿಸುತ್ತದೆ.
ಪರಿಹಾರ - ಬುಧವಾರದಂದು ಹಸುವಿಗೆ ಹಸಿರು ಮೇವು ತಿನ್ನಿಸುವುದರಿಂದ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.
ಸಿಂಹ ರಾಶಿ
ಈ ಸಮಯದಲ್ಲಿ ಪ್ರಯಾಣಗಳಿಂದಲೂ ಸಹ ನಿಮಗೆ ಉತ್ತಮ ಲಾಭವಾಗಬಹುದು. ನೀವು ನಿಮ್ಮ ಆಸೆಗಳನ್ನು ಈಡೇರಿಸಲು ಸಾಧ್ಯವಾಗುವಂತಹ ಸಮಯವಿದು. ಪ್ರೀತಿ ಮತ್ತು ಪ್ರಣಯಕ್ಕೂ ಸಹ ಈ ಸಮಯ ಉತ್ತಮವಾಗಿದೆ ಆದರೆ ಜೀವನ ಸಂಗಾತಿ ಅಥವಾ ಪ್ರೀತಿಪಾತ್ರರೊಂದಿಗೆ ಖಂಡಿತವಾಗಿಯೂ ಸಮಯಾವನ್ನು ಕಳೆಯಿರಿ, ಇದರಿಂದ ನಿಮ್ಮ ಸಂಬಂಧಕ್ಕೆ ಇನ್ನಷ್ಟು ಬಲ ಸಿಗುತ್ತದೆ.
ಪರಿಹಾರ - ಮನೆಯ ದೇವಾಲಯದಲ್ಲಿ ಕರ್ಪುರವನ್ನು ಬೆಳಗಿಸುವುದರಿಂದ ಬುಧ ಗ್ರಹದ ಉತ್ತಮ ಫಲಿತಾಂಶವನ್ನು ನೀವು ಪಡೆಯಬಹುದು.
ಕನ್ಯಾ ರಾಶಿ
ಈ ಕಾರಣದಿಂದಾಗಿ ಕೆಲಸದ ಸ್ಥಳದಲ್ಲಿನ ಹಿರಿಯ ಅಧಿಕಾರಿಗಳ ಮೆಚ್ಚುಗೆಯನ್ನು ಪಡೆಯಬಹುದು. ಬುಧ ಸಂಚಾರದ ಈ ಸಮಯದಲ್ಲಿ ಕೆಲಸದಲ್ಲಿ ಯಾವುದೇ ತಪ್ಪಿರಬಾರದೆಂದು ನೀವು ಯೋಚಿಸುತ್ತೀರಿ. ಈ ಕಾರಣದಿಂದಾಗಿ ನೀವು ಪ್ರತಿಯೊಂದು ಕೆಲಸವನ್ನು ಪೂರ್ಣಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತೀರಿ. ಇದರಿಂದಾಗಿ ನಿಮ್ಮ ಕೆಲಸಗಳಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ಹೆಚ್ಚು ಸಕ್ರಿಯರಾಗಿರುವ ಅಗತ್ಯವಿದೆ. ನಿಮ್ಮ ಕೃತಿಗಳನ್ನು ತಕ್ಷಣ ವಿಲೇವಾರಿ ಮಾಡುವ ಅವಶ್ಯಕೆತೆಯಿದೆ ಮತ್ತು ಏನಾದರು ಕಾಣೆಯಾಗುತ್ತಿಲ್ಲ ಎಂದು ಯೋಚಿಸುತ್ತ ಕೆಲಸವನ್ನು ಸಿಲುಕಿಸಬಾರದು
ಸಂಚಾರದ ಈ ಸಮಯದಲ್ಲಿ ಕನ್ಯಾ ರಾಶಿಚಕ್ರದ ಸ್ಥಳೀಯರು ವೃತ್ತಿ ಆಧಾರಿತವಾಗಿಯೇ ಇರುತ್ತಾರೆ, ಈ ಕಾರಣದಿಂದಾಗಿ ಅವರು ತಮ್ಮ ಆಪ್ತರಿಗೆ ಮತ್ತು ಜೀವನ ಸಂಗಾತಿಗೆ ಸಮಯ ನೀಡಲಾಗುವುದಿಲ್ಲ. ಇದರಿಂದಾಗಿ ನಿಮ್ಮ ಸಂಬಂಧದಲ್ಲಿ ಏರಿಳಿತ ಬರಬಹುದು. ಆದ್ದರಿಂದ ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲವನ್ನು ಕಾಪಾಡಿಕೊಳ್ಳಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಇದು ನಿಮ್ಮ ವೈಯಕ್ತಿಕ ಜೀವನದಲ್ಲಿ ಸಂತೋಷವನ್ನು ತರುತ್ತದೆ. ಇದಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ಈ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ಉತ್ತಮ ಯಶಸ್ಸು ಪಡೆಯಬಹುದು.
ಪರಿಹಾರ - ಪ್ರತಿದಿನ ನಿಯಮಿತವಾಗಿ ಸೂರ್ಯೋದಯದ ಸಮಯದಲ್ಲಿ ವಿಷ್ಣು ಸಹಸ್ತ್ರನಾಮವನ್ನು ಜಪಿಸಿ.
ತುಲಾ ರಾಶಿ
ನಿಮ್ಮ ವೃತ್ತಿಪರ ಜೀವನದ ಮೇಲೆ ದೃಷ್ಟಿ ಹಾಕಿದರೆ, ಕೆಲಸದ ಸ್ಥಳದಲ್ಲಿ ನೀವು ಬಡ್ತಿ ಪಡೆಯಬಹುದು. ಏಕೆಂದರೆ ಈ ಸಮಯದಲ್ಲಿ ಅದೃಷ್ಟವು ಸಹ ಸಂಪೂರ್ಣವಾಗಿ ನಿಮ್ಮನ್ನು ಬೆಂಬಲಿಸುತ್ತದೆ. ನಿಮ್ಮ ಸಹೋದ್ಯೋಗಿಗಳು ನಿಮ್ಮೊಂದಿಗೆ ಉತ್ತಮವಾಗಿ ವರ್ತಿಸುತ್ತಾರೆ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಹ ನೀವು ಉತ್ತಮ ಸಮಯವನ್ನು ಕಳೆಯಬಹುದು. ಬುಧನ ಈ ಸ್ಥಾನವು ಶುಭ ಹಣಕಾಸಿನ ಯೋಗವನ್ನು ಸಹ ರಚಿಸುತ್ತಿದೆ, ಈ ಕಾರಣದಿಂದಾಗಿ ತುಲಾ ರಾಶಿಚಕ್ರದ ಸ್ಥಳೀಯರ ಆದಾಯ ಹೆಚ್ಚಾಗಬಹುದು. ಬುಧ ಗ್ರಹವು ತುಲಾ ರಾಶಿಚಕ್ರದ ಹನ್ನೆರಡನೇ ಮನೆಯ ಮಾಲೀಕ ಆದ್ದರಿಂದ ಸಂಚಾರದ ಸಮಯದಲ್ಲಿ ವಿದೇಶಕ್ಕೆ ಸಂಬಂಧಿಸಿದ ವ್ಯಾಪಾರದಲ್ಲಿ ಪ್ರಯೋಜನವಾಗಬಹುದು.
ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ಬುಧ ಸಂಚಾರದ ಈ ಸಮಯದಲ್ಲಿ ನೀವು ತಂದೆಯೊಂದಿಗೆ ಕೆಲವು ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ನೀವಿಬ್ಬರು ಒಂದೇ ವ್ಯಾಪಾರದಲ್ಲಿ ತೊಡಗಿದ್ದರೆ ಈ ಭಿನ್ನಾಭಿಪ್ರಾಯವೂ ಇನ್ನೂ ಹೆಚ್ಚಾಗಬಹುದು. ತಂದೆಯೊಂದಿಗೆ ಮಾತನಾಡುವ ಸಮಯದಲ್ಲಿ ನೀವು ನಿಮ್ಮ ಗಡಿಗಳನ್ನು ದಾಟುವುದನ್ನು ತಪ್ಪಿಸಬೇಕು.
ಪ್ರೀತಿ ಜೀವನದ ಬಗ್ಗೆ ಮಾತನಾಡಿದರೆ, ವಿವಾಹಿತ ಜನರು ಈ ಸಮಯದಲ್ಲಿ ಸಾಕಷ್ಟು ಸಂತೋಷವನ್ನು ಪಡೆಯುತ್ತಾರೆ. ಪ್ರೀತಿ ಸಂಬಂಧದಲ್ಲಿರುವವರು ತಮ್ಮ ಸಂಬಂಧಕ್ಕೆ ಹೊಸ ಶಿಖರವನ್ನು ನೀಡಬಹುದು.
ಈ ಸಮಯದಲ್ಲಿ ವಿದ್ಯಾರ್ಥಿಗಲ್ಲಿ ವಿಷಯಗಳನ್ನು ಅರ್ಥಮಾಡಿಕೊಳ್ಳಲಾಗುವ ಸಾಮರ್ಥ್ಯವು ಬೆಳೆಯುತ್ತದೆ, ಉನ್ನತ ಶಿಕ್ಷಣ ಪಡೆಯಲು ಬಯಸುತ್ತಿರುವ ಜನರು ಈ ಸಮಯದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ.
ಪರಿಹಾರ - ಅಗತ್ಯವಿರುವ ಮಕ್ಕಳಿಗೆ ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳನ್ನು ನೀಡಿ. ಆದರೆ ಈ ದಾನವನ್ನು ಕೊರೋನ ಮಾನದಂಡಗಳ ಪ್ರಕಾರ ಮಾತ್ರ ಮಾಡಲು ಪ್ರಯತ್ನಿಸಿ.
ವೃಶ್ಚಿಕ ರಾಶಿ
ಇದಲ್ಲದೆ ಬುಧ ಗ್ರಹವು ನಿಮ್ಮ ಮೂಲಕ ಸಂಗ್ರಹಿಸಲಾಗಿರುವ ಹಣದ ಎರಡನೇ ಮನೆಯ ದೃಷ್ಟಿ ಹಾಕುತ್ತಿದೆ ಆದ್ದರಿಂದ ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗಬಹುದು. ಇದರಿಂದ ನಿಮ್ಮ ಹಣಕಾಸು ಕಡಿಮೆಯಾಗಬಹುದು. ಆದ್ದರಿಂದ ಈ ಸಂಚಾರದ ಸಮಯದಲ್ಲಿ ನಿಮ್ಮ ಸಂಪನ್ಮೂಲಗಳನ್ನು ಚೆನ್ನಾಗಿ ಬಳಸುವಂತೆ ನಿಮಗೆ ಸಲಹೆ ನೀಡಲಾಗಿದೆ. ಎಂಟನೇ ಉಡುಗೊರೆ ಮತ್ತು ಇದ್ದಕ್ಕಿದ್ದಂತೆ ಉಂಟಾಗುವ ಲಾಭಗಳ ಬಗ್ಗೆ ಪರಿಗಣಿಸಲಾಗುತ್ತದೆ ಆದ್ದರಿಂದ ಬುಧ ಗ್ರಹದ ಎಂಟನೇ ಮನೆಯಲ್ಲಿ ಸಂಚಾರದ ಸಮಯದಲ್ಲಿ ನೀವು ಇದ್ದಕ್ಕಿದ್ದಂತೆ ಲಾಭ ಪಡೆಯುವ ಸಾಧ್ಯತೆ ಇದೆ. ಆದರೆ ಈ ಸಂಚಾರದ ಸಮಯದಲ್ಲಿ ನೀವು ಹಾಪೋಹಗಳನ್ನು ತಪ್ಪಿಸಬೇಕು. ಉದ್ಯೋಗದಲ್ಲಿರುವ ಸ್ಥಳೀಯರು ತಮ್ಮ ಉದ್ಯೋಗವನ್ನು ಬದಲಾಯಿಸುವದಕ್ಕಿಂತ ತಮ್ಮ ಅರ್ಹತೆಯನ್ನು ಇನ್ನಷ್ಟು ಸುಧಾರಿಸಿಕೊಳ್ಳಬೇಕು.
ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು, ವಿಶೇಷವಾಗಿ ಅಲೆರ್ಜಿ ಅಥವಾ ಚರ್ಮಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಗಳಿಗೆ ಗುರಿಯಾಗಿರುವ ಜನರು ಗಮನ ಹರಿಸಬೇಕು. ನಿಮಗೆ ಯಾವುದೇ ಅರೋಗ್ಯ ಸಂಬಂಧಿತ ಸಮಸ್ಯೆ ಇದ್ದರೆ, ಶೀಘ್ರದಲ್ಲೇ ವೈದ್ಯರನ್ನು ಸಂಪರ್ಕಿಸಿ. ಯೋಗ, ಧ್ಯಾನ ಮತ್ತು ದೈಹಿಕ ಕೆಲಸ ಮಾಡುವುದರಿಂದ ನಿಮ್ಮೊಳಗಿನ ನಕಾರಾತ್ಮಕತೆ ಮತ್ತು ಒತ್ತಡ ದೂರವಾಗುತ್ತದೆ. ಇದರೊಂದಿಗೆ ನಿಮ್ಮ ಆರೋಗ್ಯದಲ್ಲಿ ಉತ್ತಮ ಬದಲಾವಣೆ ಬರುತ್ತದೆ.
ಯಾವುದೇ ಹೊಸ ಕೋರ್ಸ್ ನಲ್ಲಿ ಪ್ರವೇಶ ಪಡೆಯಲು ಬಯಸುತ್ತಿರುವ ವಿದ್ಯಾರ್ಥಿಗಳಿಗೆ ಈ ಸಾರಿಗೆ ಶುಭವಾಗಿರುತ್ತದೆ, ಬುಧನ ಸ್ಥಾನವು ಹೊಸ ವಿಷಯಗಳನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.
ಪ್ರೀತಿ ಜೀವನ ಮತ್ತು ಸಂಬಂಧಗಳ ಬಗ್ಗೆ ಮಾತನಾಡಿದರೆ, ಸಂಭಾಷಣೆಯ ಸಮಯದಲ್ಲಿ ನೀವು ಎಚ್ಚರದಿಂದಿರಬೇಕು. ಸುಳ್ಳು ಹೇಳುವುದನ್ನು ತಪ್ಪಿಸಿ, ಇಲ್ಲದಿದ್ದರೆ ಏರಿಳಿತ ಉಂಟಾಗಬಹುದು.
ಪರಿಹಾರ - ಸೂರ್ಯೋದಯದ ಸಮಯದಲ್ಲಿ ಪ್ರತಿದಿನದ “ ಓಂ ನಮೋ ಭಾಗವತೇ ವಾಸುದೇವಾಯ್ “ ಮಂತ್ರವನ್ನು 108 ಬಾರಿ ಜಪಿಸಿ.
ಮುಂದಿನ ವಾರದ ವೃಶ್ಚಿಕ ರಾಶಿ ಭವಿಷ್ಯ
ಧನು ರಾಶಿ
ಪ್ರೀತಿಯ ಸಂಬಂಧಗಳಲ್ಲೂ ಬದಲಾವಣೆ ಕಂಡುಬರುತ್ತದೆ ಏಕೆಂದರೆ ಈ ಸಮಯದಲ್ಲಿ ನಿಮ್ಮೊಳಗೆ ಪ್ರಣಯದ ಭಾವನೆ ಹೆಚ್ಚಾಗಬಹುದು. ಪ್ರೀತಿಯ ಸಂಬಂಧವನ್ನು ಮದುವೆಯಲ್ಲಿ ಬದಲಾಯಿಸಲು ಬಯಸುತ್ತಿರುವವರಿಗೂ ಈ ಸಮಯ ಉತ್ತಮವಾಗಿರುತ್ತದೆ. ವಿವಾಹಿತ ಸ್ಥಳೀಯರ ಜೇವನದಲ್ಲಿ ಸಂತೋಷ ಬರುತ್ತದೆ. ಈ ರಾಶಿಚಕ್ರದ ವಿದ್ಯಾರ್ಥಿಗಳು ಶಿಕ್ಷಣದ ಬಗ್ಗೆ ಈ ಸಮಯದಲ್ಲಿ ಗಂಭೀರಾಗುತ್ತಾರೆ. ಇದರಿಂದ ಶಿಕ್ಷಣದ ಕ್ಷೇತ್ರದಲ್ಲಿ ನೀವು ಶುಭ ಫಲಿತಾಂಶಗಳ್ನ್ನು ಪಡೆಯುತ್ತೀರಿ.
ಪರಿಹಾರ - ಪ್ರತಿದಿನ ಬುಧ ಗ್ರಹದ ಹೋರಾ ಸಮಯದಲ್ಲಿ ಬುಧ ಗ್ರಹದ ಮಂತ್ರವನ್ನು ಜಪಿಸಿ.
ಮಕರ ರಾಶಿ
ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ತವರು ಮನೆಯ ಸದಸ್ಯರ ಮೂಲಕ ನೀವು ಉಡುಗೊರೆಯನ್ನು ಪಡೆಯಬಹುದು. ಈ ಸಮಯದಲ್ಲಿ ಕಾನೂನು ಪ್ರಕರಣದ ವಿಷಯಗಳಲ್ಲಿ ನೀವು ಯಶಸ್ವಿಯಾಗಬಹುದು. ಆದಾಗ್ಯೂ ಪ್ರೀತಿ ಜೀವನದಲ್ಲಿ ಈ ಸಂಚಾರವು ನಿಮ್ಮನ್ನು ತುಂಬಾ ಗಂಭೀರವಾಗಿಸಬಹುದು. ಇದು ನಿಮ್ಮ ಸಂಬಂಧದಲ್ಲಿ ಸಮಸ್ಯೆಯನ್ನು ಉಂಟುಮಾಡುತ್ತದೆ. ಆದ್ದರಿಂದ ಈ ಸಮಯದಲ್ಲಿ ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯವನ್ನು ಕಳೆಯಬೇಕು, ಇದರ ಮೂಲಕ ನೀವು ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಬಹುದು ಮತ್ತು ನಿಮ್ಮಿಬ್ಬರ ಸಂಬಂಧ ಬಲಗೊಳ್ಳುತ್ತದೆ.
ಈ ರಾಶಿಚಕ್ರದ ವಿದ್ಯಾರ್ಥಿಗಳ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೊಡಗಿರುವ ಈ ರಾಶಿಚಕ್ರದ ವಿದ್ಯಾರ್ಥಿಗಳು ಯಶಸ್ಸು ಪಡೆಯಬಹುದು. ಈ ಸಮಯದಲ್ಲಿ ನಿಮ್ಮ ಶಕ್ತಿಯ ಮಟ್ಟವು ಹೆಚ್ಚಾಗುತ್ತದೆ, ಆದ್ದರಿಂದ ಓಟ,ಜಿಮಿಂಗ್ ಅಥವಾ ಯೋಗ ಮುಂತಾದ ದೈಹಿಕ ಚಟುವಟಿಕೆಗಳನ್ನು ಮಾಡುವ ಮೂಲಕ ನೀವು ನಿಮ್ಮನ್ನು ಬಲಗೊಳಿಸಬಹುದು ಮತ್ತು ನಿಮ್ಮ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆ ತರಬಹುದು.
ಪರಿಹಾರ - ಹಸುವಿಗೆ ಮೇವು ತಿನ್ನಿಸಿ.
ಕುಂಭ ರಾಶಿ
ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಈ ರಾಶಿಚಕ್ರದ ವಿವಾಹಿತ ಜನರಿಗೆ ಸಮಯ ಬಹಳ ಉತ್ತಮವಾಗಿದೆ. ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಜೀವನ ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಪ್ರೀತಿ ಜೀವನದಲ್ಲಿ ಕೂಡ ಈ ರಾಶಿಚಕ್ರದ ಸ್ಥಳೀಯರು ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ. ನಿಮ್ಮ ನಡವಳಿಕೆ ಉತ್ತಮವಾಗಿರುತ್ತದೆ ಮತ್ತು ಅಗತ್ಯವಿಲ್ಲದ ವಿಷಯಗಳ ಬಗ್ಗೆ ನೀವು ಗಮನ ಹರಿಸುವುದಿಲ್ಲ. ಇದು ನಿಮ್ಮ ಪ್ರೀತಿ ಸಂಬಂಧವನ್ನು ತೀವ್ರಗೊಳಿಸುತ್ತದೆ.
ಮಕ್ಕಳನ್ನು ಹೊಂದಿರುವ ಈ ರಾಶಿಚಕ್ರದ ಸ್ಥಳೀಯರು ತಮ್ಮ ಮಕ್ಕಳ ಪ್ರಗತಿಯನ್ನು ನೋಡಿ ಸಂತೋಷಪಡುತ್ತಾರೆ. ಈ ರಾಶಿಚಕ್ರದ ವಿದ್ಯಾರ್ಥಿಗಳು ಈ ಸಮಯದಲ್ಲಿ ಕಠಿಣ ವಿಷಯಗಳನ್ನು ಬಹಳ ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ. ಈ ಕಾರಣದಿಂದ ವಿದ್ಯಾರ್ಥಿಗಳು ಶಿಕ್ಷಣದ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ಮಾಡಲು ಸಾಧ್ಯವಾಗುತ್ತದೆ.
ನಿಮ್ಮ ಅರೋಗ್ಯ ಜೀವನದ ಮೇಲೆ ದೃಷ್ಟಿ ಹಾಕಿದರೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಾಗಬಹುದು, ಆದ್ದರಿಂದ ಪಾನೀಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದು ನಿಮಗೆ ಬಹಳ ಅವಶ್ಯಕ.
ಪರಿಹಾರ - ದೇವಿ ಸರಸ್ವತಿಯನ್ನು ಆರಾಧಿಸಿ.
ಮೀನಾ ರಾಶಿ
ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ತಾಯಿಯೊಂದಿಗಿನ ಸಂಬಂಧವು ಸುಧಾರಿಸುತ್ತದೆ. ಮೀನಾ ರಾಶಿಚಕ್ರದ ಕೆಲವು ಸ್ಥಳೀಯರು ಈ ಸಮಯದಲ್ಲಿ ಭೂಮಿ ಅಥವಾ ವಾಹನವನ್ನು ಖರೀದಿಸಬಹುದು. ಆದಾಗ್ಯೂ ಯಾವುದೇ ವಸ್ತುವನ್ನು ಖರೀದಿಸುವ ಮೊದಲು ನಿಮ್ಮ ಖರ್ಚುಗಳ ಬಗ್ಗೆ ಗಮನ ಹರಿಸಬೇಕು, ಅದರ ನಂತರ ಮಾತ್ರ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಕು.
ಈ ಸಂಚಾರದ ಸಮಯದಲ್ಲಿ ನಿಮ್ಮ ಜೀವನ ಸಂಗಾತಿಯು ಅವರ ಕೆಲಸದ ಸ್ಥಳದಲ್ಲಿ ಗೌರವ ಮತ್ತು ಪ್ರಶಂಸೆಯನ್ನು ಪಡೆಯುತ್ತಾರೆ. ಇದರಿಂದ ಕುಟುಂಬದ ಸಂತೋಷವು ಹೆಚ್ಚಾಗುತ್ತದೆ. ಸಂತೋಷದ ವಾತಾವರಣದಲ್ಲಿ, ನಿಮ್ಮ ಜೀವನ ಸಂಗಾತಿ ನಿಮ್ಮ ಜೀವನದಲ್ಲಿ ಎಷ್ಟು ಪ್ರಮುಖವಾಗಿದ್ದರೆ ಎಂದು ನೀವು ಅವರಿಗೆ ತಿಳಿಸಿದರೆ, ,ಇದರಿಂದ ನಿಮ್ಮ ಸಂಬಂಧವು ಇನ್ನಷ್ಟು ಬಲಗೊಳ್ಳಬಹುದು.
ಪರಿಹಾರ - ಪ್ರತಿದಿನ ನಿಯಮಿತವಾಗಿ ತುಳಸಿ ಸಸ್ಯದ ಪೂಜೆ ಮಾಡಿ.
ಯಂತ್ರ, ರತ್ನದ ಕಲ್ಲು ಇತ್ಯಾದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ ಆಸ್ಟ್ರೋಸೇಜ್ ಆನ್ಲೈನ್ ಶಾಪಿಂಗ್ ಸ್ಟೋರ್