ಸಂಖ್ಯಾಶಾಸ್ತ್ರ ವಾರ ಭವಿಷ್ಯ: 16 - 22 ಫೆಬ್ರವರಿ 2025
ಸಂಖ್ಯಾಶಾಸ್ತ್ರವು ನಿಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಂಖ್ಯಾಶಾಸ್ತ್ರವು ನಮ್ಮ ಜೀವನದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಏಕೆಂದರೆ ಸಂಖ್ಯೆಗಳು ನಮ್ಮ ಜನ್ಮ ದಿನಾಂಕಗಳೊಂದಿಗೆ ಎಲ್ಲವನ್ನೂ ಹೊಂದಿವೆ. ವ್ಯಕ್ತಿಯ ಮೂಲ ಸಂಖ್ಯೆಯೆಂದರೆ ಅವನ/ಅವಳ ಜನ್ಮ ದಿನಾಂಕವನ್ನು ಕೂಡಿಸಿರುವುದಾಗಿರುತ್ತದೆ ಮತ್ತು ಇದು ವಿವಿಧ ಗ್ರಹಗಳ ಆಡಳಿತದ ಅಡಿಯಲ್ಲಿ ಬರುತ್ತದೆ.

ಸಂಖ್ಯೆ 1 ಅನ್ನು ಸೂರ್ಯ, 2 ನೇ ಚಂದ್ರ, 3 ನೇ ಗುರು, 4 ನೇ ರಾಹು, 5 ನೇ ಬುಧ, 6 ನೇ ಶುಕ್ರ, 7 ನೇ ಕೇತು, 8 ನೇ ಶನಿ ಮತ್ತು 9 ನೇ ಸ್ಥಾನವನ್ನು ಮಂಗಳ ಆಳುತ್ತಾನೆ. ಈ ಗ್ರಹಗಳ ಸಂಚಾರದಿಂದಾಗಿ ಒಬ್ಬರ ಜೀವನದಲ್ಲಿ ಅನೇಕ ಬದಲಾವಣೆಗಳು ನಡೆಯುತ್ತವೆ ಮತ್ತು ಅವುಗಳಿಂದ ನಿರ್ವಹಿಸಲ್ಪಡುವ ಸಂಖ್ಯೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.
ವರ್ಷದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಅತ್ಯುತ್ತಮ ಜ್ಯೋತಿಷಿ ಗಳೊಂದಿಗೆ ಮಾತನಾಡಿ
ನಿಮ್ಮ ಮೂಲ ಸಂಖ್ಯೆಯನ್ನು (ಮೂಲಾಂಕ) ತಿಳಿಯುವುದು ಹೇಗೆ?
ನಾವು ಸಂಖ್ಯಾಶಾಸ್ತ್ರ ವಾರ ಭವಿಷ್ಯ 2025 ಪ್ರಾರಂಭಿಸುವ ಮೊದಲು ಮತ್ತು ಅದರ ವಿವಿಧ ಅಂಶಗಳನ್ನು ಅನ್ವೇಷಿಸುವ ಮೊದಲು, ನಿಮ್ಮ ಮೂಲ ಸಂಖ್ಯೆಯನ್ನು ಹೇಗೆ ನಿರ್ಧರಿಸುವುದು ಎಂಬುದನ್ನು ತಿಳಿಯೋಣ. ನಿಮ್ಮ ಜನ್ಮ ದಿನಾಂಕವನ್ನು ತೆಗೆದುಕೊಂಡು ಅದನ್ನು ಒಂದೇ ಅಂಕೆಗೆ ಪರಿವರ್ತಿಸುವ ಮೂಲಕ ನಿಮ್ಮ ಮೂಲ ಸಂಖ್ಯೆಯನ್ನು ಕಂಡುಹಿಡಿಯಬಹುದು; ಇದು ಸಾಕಷ್ಟು ನೇರವಾದ ಪ್ರಕ್ರಿಯೆಯಾಗಿದೆ. ಉದಾಹರಣೆಗೆ, ನೀವು ಯಾವುದೇ ತಿಂಗಳ 11 ರಂದು ಜನಿಸಿದರೆ, ನಿಮ್ಮ ಮೂಲ ಸಂಖ್ಯೆ 1+1 ಆಗಿರುತ್ತದೆ, ಇದು 2 ಕ್ಕೆ ಸಮನಾಗಿರುತ್ತದೆ, ಇದು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ. ನಿಮ್ಮ ಮೂಲ ಸಂಖ್ಯೆ 2 ಆಗಿರುತ್ತದೆ.
ಇದನ್ನೂ ಓದಿ: ಸಂಖ್ಯಾಶಾಸ್ತ್ರ ಭವಿಷ್ಯ 2025
ಸಂಖ್ಯಾಶಾಸ್ತ್ರ ವಾರ ಭವಿಷ್ಯ: 16 - 22 ಫೆಬ್ರವರಿ 2025
ಮೂಲ ಸಂಖ್ಯೆ 1
(ನೀವು ಯಾವುದೇ ತಿಂಗಳ 1, 10, 19, 28 ರಂದು ಜನಿಸಿದ್ದರೆ)
ಈ ವಾರ ಮೂಲಾಂಕ ಒಂದರ ರಂಗ ನಟರು, ಕಲಾವಿದರು ಮತ್ತು ಸೃಜನಶೀಲ ಪ್ರಕಾರಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಗುಣಮಟ್ಟದ ಕಲಾಕೃತಿಯನ್ನು ರಚಿಸುವ ನಿಮ್ಮ ಬಯಕೆಯು ತೃಪ್ತಿಗೊಳ್ಳುತ್ತದೆ ಮತ್ತು ನಿಮ್ಮ ಸಾಮರ್ಥ್ಯಗಳನ್ನು ಜಗತ್ತಿಗೆ ಪ್ರದರ್ಶಿಸಲು ನಿಮಗೆ ಹಲವಾರು ಅವಕಾಶಗಳಿವೆ.ಅಗತ್ಯವಿರುವವರ ಪರವಾಗಿ ನಿಲ್ಲಲು, ಸಾಮಾಜಿಕ ಕಾರ್ಯಕರ್ತರು ಮತ್ತು ನಾಯಕರು ಸಹ ನಂಬಲಾಗದಷ್ಟು ಧೈರ್ಯಶಾಲಿ, ನಿರ್ಭೀತ ಮತ್ತು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ.
ಪ್ರಣಯ ಸಂಬಂಧ -ಪ್ರಣಯಕ್ಕೆ ಸಂಬಂಧಿಸಿದಂತೆ, ಈ ವಾರ ನಿಮಗೆ ಧನಾತ್ಮಕ ಮತ್ತು ಋಣಾತ್ಮಕ ಫಲಿತಾಂಶಗಳನ್ನು ತರುತ್ತದೆ. ನೀವು ಅವರ ಸ್ನೇಹಿತರ ಗುಂಪಿನಲ್ಲಿ ಯಾರೊಂದಿಗಾದರೂ ಪ್ರೇಮ ಸಂಬಂಧ ಪ್ರಾರಂಭಿಸಬಹುದು.ವಿವಾಹಿತ ಅಥವಾ ಬದ್ಧ ಸಂಬಂಧದಲ್ಲಿರುವವರು ಸ್ವಲ್ಪ ಎಚ್ಚರಿಕೆ ವಹಿಸಬೇಕು ಏಕೆಂದರೆ ಅವರು ಅಹಂಕಾರ ಮತ್ತು ಬೇರ್ಪಡುವಿಕೆ ಸಮಸ್ಯೆಗಳನ್ನು ಅನುಭವಿಸಬಹುದು ಅದು ಸಂಘರ್ಷಗಳು ಮತ್ತು ವಾಗ್ವಾದಗಳಿಗೆ ಕಾರಣವಾಗಬಹುದು.
ಶಿಕ್ಷಣ -ಈ ವಾರವು ಮೂಲ ಸಂಖ್ಯೆ 1 ರ ವಿದ್ಯಾರ್ಥಿಗಳಿಗೆ ಉತ್ಪಾದಕವಾಗಿರುತ್ತದೆ. ನಿಮ್ಮ ಆತ್ಮವಿಶ್ವಾಸ, ಸೃಜನಶೀಲತೆ ಮತ್ತು ಕ್ರಿಯಾ-ಆಧಾರಿತತೆಯನ್ನು ನೀವು ಸಂಯೋಜಿಸಿದಾಗ, ನೀವು ಗಮನಹರಿಸಲು ಮತ್ತು ನಿಮ್ಮ ಉದ್ದೇಶಗಳನ್ನು ಸಾಧಿಸಲು ಸಾಧ್ಯವಾಗುತ್ತದೆ.ವಿಶೇಷವಾಗಿ ರಾಜಕೀಯ ವಿಜ್ಞಾನ, ಸಮಾಜ ವಿಜ್ಞಾನ, ಮಾನವ ವಿಜ್ಞಾನ ಅಥವಾ ವಿನ್ಯಾಸದಂತಹ ಯಾವುದೇ ಸೃಜನಶೀಲ ಕ್ಷೇತ್ರವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಇದು ಪ್ರಗತಿಪರ ವಾರವಾಗಿರುತ್ತದೆ.
ವೃತ್ತಿ -ಈ ವಾರ ನಿಮ್ಮ ವೃತ್ತಿಪರ ಜೀವನದ ನಿಮ್ಮ ಸಾಧನೆಯ ಬಗ್ಗೆ ನಿರ್ಲಿಪ್ತತೆ ಅಥವಾ ಅಸಮಾಧಾನವನ್ನು ಅನುಭವಿಸಬಹುದು.ಆದ್ದರಿಂದ ನೀವು ಹೊಸ ಗುರಿಗಳನ್ನು ಹೊಂದಿಸಲು ಸಲಹೆ ನೀಡಲಾಗುತ್ತದೆ. ಮತ್ತೊಂದೆಡೆ ಸಂಶೋಧನಾ ವಲಯದಲ್ಲಿರುವವರು ತಮ್ಮ ಸಂಶೋಧನಾ ಕಾರ್ಯಕ್ಕೆ ಫಲಪ್ರದ ವಾರವನ್ನು ಹೊಂದಿರುತ್ತಾರೆ.
ಆರೋಗ್ಯ - ನಿಮ್ಮ ಆರೋಗ್ಯದ ವಿಷಯದಲ್ಲಿ, ನೀವು ಈ ಸಮಯದಲ್ಲಿ ಉತ್ಸಾಹ ಮತ್ತು ಚೈತನ್ಯದಿಂದ ಕೂಡಿರಬಹುದು. ನಿಮ್ಮ ಶಕ್ತಿಯ ಮಟ್ಟವನ್ನು ನಿಯಂತ್ರಿಸುವುದರಿಂದ ನೀವು ಹೆಚ್ಚು ನಿರಾಳವಾಗಿರಬಹುದು.
ಪರಿಹಾರ - ಪ್ರತಿದಿನ ಐದು ಕೆಂಪು ಗುಲಾಬಿಗಳನ್ನು ದೇವಿ ದುರ್ಗೆಗೆ ಅರ್ಪಿಸಿ.
ಮೂಲ ಸಂಖ್ಯೆ 2
(ನೀವು ಯಾವುದೇ ತಿಂಗಳ 2, 11, 20, 29 ರಂದು ಜನಿಸಿದ್ದರೆ)
ಈ ವಾರ, ಮೂಲ ಸಂಖ್ಯೆ 2 ರ ಪುರುಷರು ತಮ್ಮ ಭಾವನೆಗಳನ್ನು ಗ್ರಹಿಸಲು ಮತ್ತು ಸಂವಹನ ಮಾಡಲು ಕಷ್ಟವಾಗಬಹುದು, ಇದು ಅವರ ಆತ್ಮವಿಶ್ವಾಸವದ ಏರಿಳಿತಕ್ಕೆ ಕಾರಣವಾಗಬಹುದು. ಆದರೆ, ಮಹಿಳೆಯರು ತಮ್ಮನ್ನು ತಾವು ಸುಧಾರಿಸಿಕೊಳ್ಳಲು ಮತ್ತು ತಮ್ಮ ಭಾವನೆಗಳನ್ನು ವಿಶ್ವಾಸದಿಂದ ನಿರ್ವಹಿಸಲು ವಾರವನ್ನು ಬಳಸುತ್ತಾರೆ.
ಪ್ರಣಯ ಸಂಬಂಧ - ಪ್ರಣಯ ಜೀವನದ ಬಗ್ಗೆ ಮಾತನಾಡುತ್ತಾ, ಈಗಾಗಲೇ ಹೇಳಿದಂತೆ, ಪುರುಷರು ಭಾವನಾತ್ಮಕ ಅಡಚಣೆಯ ಪರಿಣಾಮವಾಗಿ ಸಂಬಂಧದ ಸಮಸ್ಯೆಗಳನ್ನು ಅನುಭವಿಸಬಹುದು, ಆದರೆ ಸ್ತ್ರೀಯರು ತಮ್ಮ ಸಂಗಾತಿ ಜೊತೆ ಬಲವಾದ ಬಂಧಗಳನ್ನು ರೂಪಿಸಬಹುದು.
ಶಿಕ್ಷಣ - ಈ ವಾರದ ಬಹಳಷ್ಟು ಗೊಂದಲಗಳ ಕಾರಣ, ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಗಮನ ಕೇಂದ್ರೀಕರಿಸಲು ಕಷ್ಟವಾಗಬಹುದು.
ವೃತ್ತಿ - ವೃತ್ತಿ ಕ್ಷೇತ್ರದಲ್ಲಿ ಈ ವಾರ ಅನುಕೂಲಕರವಾಗಿದೆ. ಸರ್ಕಾರದ ಸಹಯೋಗವು ನಿಮಗೆ ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಪಾಲುದಾರಿಕೆ ಮತ್ತು ವ್ಯಾಪಾರಕ್ಕಾಗಿ ಈ ಸಮಯವು ಅನುಕೂಲಕರವಾಗಿರುತ್ತದೆ. ನೀವು ರಿಯಲ್ ಎಸ್ಟೇಟ್, ಕೃಷಿ ಆಸ್ತಿ ಅಥವಾ ಪ್ರಾಚೀನ ವಸ್ತುಗಳಲ್ಲಿ ಹೂಡಿಕೆ ಮಾಡಿದ್ದರೆ ಉತ್ತಮ ಲಾಭ ಗಳಿಸುವಿರಿ.
ಆರೋಗ್ಯ - ಈ ವಾರ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳಿಲ್ಲದಿದ್ದರೂ, ಭಾವನಾತ್ಮಕ ಏರಿಳಿತಗಳು ನಿಮಗೆ ಶಕ್ತಿಯ ಕುಸಿತದ ಭಾವನೆಯನ್ನು ಉಂಟುಮಾಡಬಹುದು.
ಪರಿಹಾರ - ಪ್ರತಿದಿನ ಶಿವನಿಗೆ ಹಾಲನ್ನು ಅರ್ಪಿಸಿ.
250+ ಪುಟಗಳು ವೈಯಕ್ತೀಕರಿಸಿದ ಆಸ್ಟ್ರೋಸೇಜ್ ಬೃಹತ್ ಜಾತಕ ವು ಮುಂಬರುವ ಎಲ್ಲಾ ಘಟನೆಗಳನ್ನು ಮುಂಚಿತವಾಗಿ ತಿಳಿದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ
ಮೂಲ ಸಂಖ್ಯೆ 3
(ನೀವು ಯಾವುದೇ ತಿಂಗಳ 3, 12, 21, 30 ರಂದು ಜನಿಸಿದ್ದರೆ)
ಮೂಲ ಸಂಖ್ಯೆ 3 ರ ಸ್ಥಳೀಯರು ಈ ವಾರ ನೀವು ಹೊರಗಿನ ಪ್ರಪಂಚಕ್ಕೆ ಆತ್ಮವಿಶ್ವಾಸಿಯಂತೆ ತೋರಿದರೂ, ಆಂತರಿಕವಾಗಿ ನಿಮ್ಮ ಆಧ್ಯಾತ್ಮಿಕ ಬೆಳವಣಿಗೆಯ ಬಗ್ಗೆ ಗೊಂದಲಕ್ಕೊಳಗಾಗಬಹುದು.
ಪ್ರಣಯ ಸಂಬಂಧ - ನೀವು ಒಂಟಿಯಾಗಿದ್ದರೆ ಈ ವಾರ ನೀವು ಸಾಕಷ್ಟು ಪ್ರೇಮ ಪ್ರಸ್ತಾಪಗಳನ್ನು ಸ್ವೀಕರಿಸುತ್ತೀರಿ, ಆದರೆ ಎಚ್ಚರಿಕೆಯಿಂದ ಯೋಚಿಸಿದ ನಂತರವೇ ಸಂಬಂಧವನ್ನು ಪ್ರವೇಶಿಸಲು ಸಲಹೆ ನೀಡಲಾಗುತ್ತದೆ. ಮತ್ತು ನೀವು ಈಗಾಗಲೇ ಮದುವೆಯಾಗಿದ್ದರೆ, ನಿಮ್ಮ ಸಂಗಾತಿಯ ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತೀರಿ.
ಶಿಕ್ಷಣ - ವಿದ್ಯಾರ್ಥಿಗಳು ಸಿವಿಲ್ ಸರ್ವೀಸ್ ಅಥವಾ ಇನ್ನಾವುದೇ ಸರ್ಕಾರಿ ಉದ್ಯೋಗದಂತಹ ಆಡಳಿತಾತ್ಮಕ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಿರುವವರಿಗೆ ಈ ವಾರ ಅತ್ಯುತ್ತಮವಾಗಿದೆ.
ವೃತ್ತಿ - ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ, ನೀವು ಆತ್ಮವಿಶ್ವಾಸದಿಂದ ಇರುತ್ತೀರಿ. ಆದರೆ ನಿಮ್ಮ ಪ್ರಯತ್ನಗಳು ಅಪೇಕ್ಷಿತ ಫಲಿತಾಂಶವನ್ನು ನೀಡದ ಕಾರಣ ನೀವು ಇನ್ನೂ ಬೇಸರ ಅನುಭವಿಸಬಹುದು.
ಆರೋಗ್ಯ - ನಿಮ್ಮ ಆರೋಗ್ಯದ ದೃಷ್ಟಿಯಿಂದ ಈ ವಾರ ಅತ್ಯುತ್ತಮವಾಗಿದೆ. ನೀವು ಸಾತ್ವಿಕ ಆಹಾರವನ್ನು ಸೇವಿಸಲು ಮತ್ತು ಯೋಗ ಮತ್ತು ಧ್ಯಾನದಂತಹ ಆಧ್ಯಾತ್ಮಿಕ ಮತ್ತು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಶಿಫಾರಸು ಮಾಡಲಾಗಿದೆ
ಪರಿಹಾರ- ಪ್ರತಿದಿನ ಗಣಪತಿಯನ್ನು ಪೂಜಿಸಿ ಮತ್ತು ಬುಧವಾರದಂದು 5 ಕಡ್ಲೆಹಿಟ್ಟಿನ ಲಡ್ಡುಗಳನ್ನು ಅರ್ಪಿಸಿ.
ಮೂಲ ಸಂಖ್ಯೆ 4
(ನೀವು ಯಾವುದೇ ತಿಂಗಳ 4, 13, 22, 31 ರಂದು ಜನಿಸಿದ್ದರೆ)
ಮೂಲ ಸಂಖ್ಯೆ 4 ಸ್ಥಳೀಯರೇ, ನೀವು ಈ ವಾರ ವಿವಿಧ ಅನುಭವಗಳಿಂದ ತುಂಬಿರುವಿರಿ. ನೀವು ವಾರವನ್ನು ಆತ್ಮವಿಶ್ವಾಸ ಮತ್ತು ಪೂರ್ಣ ಜೀವನದಿಂದ ಪ್ರಾರಂಭಿಸುತ್ತೀರಿ. ಸಾಮಾಜಿಕವಾಗಿ ಪ್ರತಿ ಕ್ಷಣವನ್ನು ಆನಂದಿಸುತ್ತೀರಿ, ಹಳೆಯ ಸ್ನೇಹಿತರಿಗೆ ವಿದಾಯ ಹೇಳುತ್ತೀರಿ ಮತ್ತು ಹೊಸ ಜನರನ್ನು ಭೇಟಿಯಾಗುತ್ತೀರಿ. ಆದರೆ ವಾರದ ದ್ವಿತೀಯಾರ್ಧದಲ್ಲಿ ನೀವು ಈ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಕಳೆದುಕೊಳ್ಳಬಹುದು ಮತ್ತು ಇತರರಿಗೆ ಸಹಾಯ ಮಾಡುವ ಮಾರ್ಗಗಳನ್ನು ಹುಡುಕಲು ಪ್ರಾರಂಭಿಸಬಹುದು.
ಪ್ರಣಯ ಸಂಬಂಧ - ರೋಮ್ಯಾಂಟಿಕ್ ಜೀವನದ ಬಗ್ಗೆ ಮಾತನಾಡುತ್ತಾ, ನಿಮ್ಮ ಸಂಗಾತಿಯೊಂದಿಗೆ ಹಲವಾರು ಪ್ರವಾಸಗಳನ್ನು ಯೋಜಿಸಬಹುದು ಮತ್ತು ಉತ್ತಮ ಸಮಯವನ್ನು ಕಳೆಯಬಹುದು. ಅದೇ ಸಮಯದಲ್ಲಿ, ನಿಮ್ಮಲ್ಲಿನ ಅಹಂಕಾರವು ಸಂಗಾತಿಯೊಂದಿಗಿನ ಸಂಬಂಧವನ್ನು ನಾಶಪಡಿಸಬಾರದು ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು.
ಶಿಕ್ಷಣ - ವಿದ್ಯಾರ್ಥಿಗಳು, ಪಠ್ಯೇತರ ಚಟುವಟಿಕೆಗಳಲ್ಲಿ ಗಮನ ಹೋಗಿ ಈ ವಾರದ ಪಾಠಗಳು ಹಿಂಬದಿಯ ಸ್ಥಾನವನ್ನು ತೆಗೆದುಕೊಳ್ಳಬಹುದು, ಇತರ ಚಟುವಟಿಕೆಗಳ ಜೊತೆಗೆ ನಿಮ್ಮ ಅಧ್ಯಯನದೊಂದಿಗೆ ಸ್ಥಿರವಾಗಿರಲು ಪ್ರಯತ್ನಿಸಲು ಸೂಚಿಸಲಾಗುತ್ತದೆ.
ವೃತ್ತಿ - ಇದು ವಾರಕ್ಕೆ ಉತ್ತಮ ಆರಂಭವಾಗಿದೆ, ವಿಶೇಷವಾಗಿ ನೀವು ನಟಿ, ಯೂಟ್ಯೂಬರ್ ಅಥವಾ ಸಾಮಾಜಿಕ ಮಾಧ್ಯಮದ ಮನರಂಜನಾ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದರೆ ವೃತ್ತಿಯಲ್ಲಿ ನೀವು ಉತ್ತಮ ವಾರವನ್ನು ಹೊಂದಿರುತ್ತೀರಿ.
ಆರೋಗ್ಯ - ಆರೋಗ್ಯದ ಪ್ರಕಾರ, ನಿಮಗೆ ಯಾವುದೇ ಸಮಸ್ಯೆಗಳು ಇರುವುದಿಲ್ಲ. ಆದರೆ ಅತಿಯಾದ ಆಲ್ಕೋಹಾಲ್ ಸೇವನೆಯು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಆದ್ದರಿಂದ ಎಚ್ಚರಿಕೆ ವಹಿಸಬೇಕು.
ಪರಿಹಾರ - ಪ್ರತಿದಿನ ಮಾತೆ ಕಾಳಿಯನ್ನು ಪೂಜಿಸಿ.
ನಿಮ್ಮ ವೃತ್ತಿ ಮತ್ತು ಶಿಕ್ಷಣದಲ್ಲಿ ಯಶಸ್ಸನ್ನು ಪಡೆಯಲು: ನಿಮ್ಮ ಕಾಗ್ನಿಆಸ್ಟ್ರೋ ವರದಿಯನ್ನು ಈಗಲೇ ಆರ್ಡರ್ ಮಾಡಿ!
ಮೂಲ ಸಂಖ್ಯೆ 5
(ನೀವು ಯಾವುದೇ ತಿಂಗಳ 5, 14, 23 ರಂದು ಜನಿಸಿದ್ದರೆ)
ಮೂಲ ಸಂಖ್ಯೆ 5 ಸ್ಥಳೀಯರಾದ ನೀವು ಈ ವಾರ ಉತ್ತಮ ಸಮಯವನ್ನು ಹೊಂದಿರುತ್ತೀರಿ. ನಿಮ್ಮ ಸಂವಹನವು ಸ್ಪಷ್ಟ, ಸಂಕ್ಷಿಪ್ತ ಮತ್ತು ಆತ್ಮವಿಶ್ವಾಸದಿಂದ ಕೂಡಿರುತ್ತದೆ, ಇದು ಪ್ರಭಾವಿ ವ್ಯಕ್ತಿಗಳ ಗಮನ ಸೆಳೆಯುತ್ತದೆ.
ಪ್ರಣಯ ಸಂಬಂಧ -ಸಂಬಂಧಗಳ ವಿಷಯದಲ್ಲಿ, ನೀವು ಈ ವಾರ ಅದ್ಭುತ ಸಮಯವನ್ನು ಹೊಂದಿರುತ್ತೀರಿ ಮತ್ತು ಪ್ರೀತಿ ಮತ್ತು ಪ್ರಣಯವನ್ನು ಅನುಭವಿಸುತ್ತೀರಿ. ಜೀವನವು ಉತ್ತಮವಾಗಿ ಮುಂದುವರಿಯುತ್ತದೆ. ವಿವಾಹಿತರು ಸಂತೋಷವಾಗಿರುತ್ತಾರೆ. ತಮ್ಮ ಸಂಗಾತಿಗೆ ದ್ರೋಹ ಮಾಡುವವರು ಕಷ್ಟ ಅನುಭವಿಸಬಹುದು.
ಶಿಕ್ಷಣ -ವಿದ್ಯಾರ್ಥಿಗಳು ವಾರದ ಪ್ರಾರಂಭದಲ್ಲಿ ತಮ್ಮ ಅಧ್ಯಯನಗಳಿಗಿರುವ ಯಾವುದೇ ಅಡೆತಡೆಗಳನ್ನು ಎದುರಿಸಲು ಮತ್ತು ದಾಟಲು ಈ ವಾರ ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕು.ಕಠಿಣ ಪರಿಶ್ರಮದಿಂದ, ವಾರದ ಅಂತ್ಯದ ವೇಳೆಗೆ ಎಲ್ಲವೂ ನಿವಾರಣೆಯಾಗುತ್ತವೆ.
ವೃತ್ತಿ -ವೃತ್ತಿಯ ಮುಂಭಾಗದಲ್ಲಿ, ಐಷಾರಾಮಿ ಪ್ರಯಾಣ ಮತ್ತು ಪ್ರವಾಸ ಉದ್ಯಮದಲ್ಲಿದ್ದರೆ ಅಥವಾ ಐಷಾರಾಮಿ ಎಲೆಕ್ಟ್ರಾನಿಕ್ ಸಾಧನಗಳನ್ನು ತಯಾರಿಸಿದರೆ ಉತ್ತಮ, ಲಾಭದಾಯಕ ವಾರವನ್ನು ಹೊಂದಿರುತ್ತೀರಿ.ಸಾಮಾಜಿಕ ಮಾಧ್ಯಮ ನಿರ್ವಾಹಕರು, ನಟರು, ಗಾಯಕರು ಅಥವಾ ಕಲಾವಿದರಾರು ವೃತ್ತಿಜೀವನದ ಪ್ರಗತಿಯನ್ನು ಅನುಭವಿಸುತ್ತಾರೆ.
ಆರೋಗ್ಯ -ನಿಮ್ಮ ಆರೋಗ್ಯದ ಕುರಿತು ಮಾತನಾಡುತ್ತಾ, ಈ ವಾರ ನೀವು ಅಲರ್ಜಿಗಳು ಮತ್ತು ಚರ್ಮದ ಸಮಸ್ಯೆಗಳನ್ನು ಅನುಭವಿಸಬಹುದು. ತುಂಬಾ ನೀರು ಕುಡಿಯಿರಿ, ಸೊಳ್ಳೆ-ಕೀಟ ಕಡಿತದ ಬಗ್ಗೆ ಜಾಗರೂಕರಾಗಿರಿ.
ಪರಿಹಾರ - ಪ್ರತಿದಿನ ಹಸುಗಳಿಗೆ ಹಸಿರು ಎಲೆಗಳ ತರಕಾರಿಗಳನ್ನು ತಿನ್ನಿಸಿ.
ಮೂಲ ಸಂಖ್ಯೆ 6
(ನೀವು ಯಾವುದೇ ತಿಂಗಳ 6, 15, 24 ರಂದು ಜನಿಸಿದ್ದರೆ)
ಆತ್ಮೀಯ ಮೂಲ ಸಂಖ್ಯೆ 6 ಸ್ಥಳೀಯರೇ, ನೀವು ಅತ್ಯಂತ ಯಶಸ್ವಿ ಮತ್ತು ಉತ್ಪಾದಕ ವಾರವನ್ನು ಹೊಂದಿರುತ್ತೀರಿ.
ಪ್ರಣಯ ಸಂಬಂಧ - ಮೂಲ ಸಂಖ್ಯೆ 6 ಸ್ಥಳೀಯರು ಈ ವಾರ ಹಣ, ಪ್ರೀತಿ ಅಥವಾ ಗಮನದಿಂದ ಅಗತ್ಯವಿರುವವರಿಗೆ ಸಹಾಯ ಮಾಡುವವರಾಗಿದ್ದಾರೆ. ಇದು ಉದಾತ್ತ ಕಾರ್ಯವಾಗಿದ್ದರೂ, ನಿಮ್ಮ ಸಂಗಾತಿಯು ನಿರ್ಲಕ್ಷ್ಯವನ್ನು ಅನುಭವಿಸಬಹುದು ಮತ್ತು ಇದು ನಿಮ್ಮ ನಡುವಿನ ಸಂಘರ್ಷದ ಮೂಲವೂ ಆಗಬಹುದು.
ಶಿಕ್ಷಣ - ಸೃಜನಾತ್ಮಕ ಒಲವು ಹೊಂದಿರುವ ವಿದ್ಯಾರ್ಥಿಗಳು, ಅಂದರೆ ನಟನೆ, ಗಾಯನ, ಕವನ ಅಥವಾ ವಿನ್ಯಾಸಕಾರರು ಒಳ್ಳೆಯ ವಾರವನ್ನು ಹೊಂದಿರುತ್ತಾರೆ. ಮಾನವಶಾಸ್ತ್ರ, ಮಾನವ ಹಕ್ಕುಗಳು ಮತ್ತು ಸಾಮಾಜಿಕ ವಿಜ್ಞಾನವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಸಂಶೋಧನೆ ನಡೆಸುವುದನ್ನು ಆನಂದಿಸುತ್ತಾರೆ ಮತ್ತು ಅವರ ವಿಚಾರಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ.
ವೃತ್ತಿ - ವೃತ್ತಿಯಲ್ಲಿ, ಮೂಲ ಸಂಖ್ಯೆ 6 ಸ್ಥಳೀಯರು ಎನ್‌ಜಿಒಗಳು, ಸಮಾಜ ಸುಧಾರಕ ಸಂಸ್ಥೆಗಳು ಅಥವಾ ಹಿಂದುಳಿದವರಿಗೆ ಹಣ ಸಂಗ್ರಹಿಸುವುದನ್ನು ಒಳಗೊಂಡಿರುವ ಯಾವುದೇ ಪ್ರೊಫೈಲ್‌ಗಾಗಿ ಕೆಲಸ ಮಾಡಿದರೆ ಈ ವಾರ ಪ್ರಯೋಜನ ಪಡೆಯುತ್ತಾರೆ.
ಆರೋಗ್ಯ - ಈ ವಾರ ನಿಮ್ಮ ಕೆಲಸ ಒತ್ತಡ, ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಲು ಬಿಡಬೇಡಿ. ನಿಮ್ಮ ವ್ಯಕ್ತಿತ್ವ ಸುಧಾರಣೆಗೆ ಗಮನ ಕೊಡಿ.
ಪರಿಹಾರ- ಅಂಧ ಶಾಲೆಯ ಮಕ್ಕಳಿಗೆ ಸಹಾಯ ಮಾಡಿ.
ಮೂಲ ಸಂಖ್ಯೆ 7
(ನೀವು ಯಾವುದೇ ತಿಂಗಳ 7, 16, 25 ರಂದು ಜನಿಸಿದ್ದರೆ)
ಮೂಲಾಂಕ 7ರ ಸ್ಥಳೀಯರೇ, ನಿಮಗಾಗಿ ಇದು ಅತ್ಯುತ್ತಮ ವಾರವಾಗಿದೆ. ನೀವು ಶಕ್ತಿಯುತವಾಗಿರುತ್ತೀರಿ, ಸ್ವಯಂ-ಭರವಸೆ ಹೊಂದುತ್ತೀರಿ ಮತ್ತು ಸ್ಪಷ್ಟವಾಗಿ ಯೋಚಿಸಲು ಸಾಧ್ಯವಾಗುತ್ತದೆ. ನಿಮ್ಮ ಗುರಿಗಳನ್ನು ತಲುಪಲು ಇದು ನಿಮಗೆ ಸಹಾಯ ಮಾಡುತ್ತದೆ.
ಪ್ರಣಯ ಸಂಬಂಧ - ಈ ವಾರ, ನೀವು ನಿಮ್ಮ ಸಂಬಂಧದ ಬಗ್ಗೆ ತುಂಬಾ ಉತ್ಸುಕರಾಗಿರುತ್ತೀರಿ ಮತ್ತು ನಿಮ್ಮ ಸಂಗಾತಿಯನ್ನು ಮೆಚ್ಚಿಸಲು ಸಾಕಷ್ಟು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತೀರಿ, ಪ್ರೀತಿ ಮತ್ತು ಮದುವೆಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸುತ್ತೀರಿ. ಆದರೆ, ಅತಿ ಪ್ರೀತಿ ಮತ್ತು ಪೊಸೆಸಿವ್ ಆಗಿರುವುದರ ನಡುವಿನ ತೆಳು ರೇಖೆಯ ಬಗ್ಗೆ ಎಚ್ಚರವಿರಲಿ.
ಶಿಕ್ಷಣ - ವಿದ್ಯಾರ್ಥಿಗಳು ಯುಪಿಎಸ್‌ಸಿ ಮತ್ತು ಎಸ್‌ಎಸ್‌ಸಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಥವಾ ಪೊಲೀಸ್ ಅಥವಾ ಡಿಫೆನ್ಸ್‌ನಂತಹ ಹುದ್ದೆಗಳಿಗೆ ತಯಾರಿ ನಡೆಸುತ್ತಿದ್ದರೆ ಅನುಕೂಲಕರ ಸಮಯವನ್ನು ಹೊಂದಿರುತ್ತಾರೆ. ಕ್ರೀಡೆಗಳಲ್ಲಿ ವಿಶೇಷವಾಗಿ ಸಮರ ಕಲೆಗಳಲ್ಲಿ ಉತ್ಕೃಷ್ಟರಾಗುತ್ತಾರೆ ಮತ್ತು ಸಕಾರಾತ್ಮಕ ವಾರವನ್ನು ಹೊಂದಿರುತ್ತಾರೆ. ಸೇನೆ ಅಥವಾ ಪೊಲೀಸ್ ಪಡೆಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವವರೂ ಯಶಸ್ವಿಯಾಗುತ್ತಾರೆ.
ವೃತ್ತಿ - ಈ ವಾರ, ನಿಮ್ಮ ವೃತ್ತಿ ಪರಿಣತಿಯಿಂದ ನೀವು ಆರ್ಥಿಕವಾಗಿ ಲಾಭ ಪಡೆಯುತ್ತೀರಿ. ನೀವು ಯಾವುದೇ ಎರಡನೇ ಆದಾಯದ ಮೂಲಗಳನ್ನು ಹೊಂದಿಲ್ಲದಿದ್ದರೆ ಈಗ ಅವಕಾಶಗಳಿಗಾಗಿ ನೋಡಿ; ನಿಸ್ಸಂದೇಹವಾಗಿ ನಿಮಗೆ ಸಿಗುತ್ತದೆ.
ಆರೋಗ್ಯ - ಈ ವಾರ ನಿಮ್ಮ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ನಿಮ್ಮ ರೋಗನಿರೋಧಕ ಶಕ್ತಿ ಮತ್ತು ದೈಹಿಕ ಸಾಮರ್ಥ್ಯವು ದೃಢವಾಗಿರುತ್ತದೆ. ವ್ಯಾಯಾಮ, ಸಮತೋಲಿತ ಆಹಾರವನ್ನು ಸೇವಿಸುವುದು ಮತ್ತು ಧ್ಯಾನ ಮಾಡುವ ಮೂಲಕ ನೀವು ಸದೃಢತೆ ಕಾಪಾಡಿಕೊಳ್ಳಲು ಸಲಹೆ ನೀಡಲಾಗುತ್ತದೆ.
ಪರಿಹಾರ- ತಜ್ಞ ಜ್ಯೋತಿಷಿಗಳೊಂದಿಗೆ ಮಾತನಾಡಿದ ನಂತರ, ಅದೃಷ್ಟಕ್ಕಾಗಿ ಬೆಕ್ಕಿನ ಕಣ್ಣಿನ ಬಳೆಯನ್ನು ಧರಿಸಿ.
ನೀವು ಮನೆಯಲ್ಲಿ ವಿಶ್ರಾಂತಿ ಪಡೆಯುವಾಗ ನಿಮಗೆ ಬೇಕಾದಂತೆ ಆನ್‌ಲೈನ್ ಪೂಜೆ ಮಾಡಲು ಜ್ಞಾನವುಳ್ಳ ಅರ್ಚಕರನ್ನು ಸಂಪರ್ಕಿಸಿ ಉತ್ತಮ ಫಲಿತಾಂಶಗಳನ್ನು ಪಡೆಯಿರಿ!
ಮೂಲ ಸಂಖ್ಯೆ 8
(ನೀವು ಯಾವುದೇ ತಿಂಗಳ 8, 17, 26 ರಂದು ಜನಿಸಿದ್ದರೆ)
ಈ ವಾರವು ಎಲ್ಲರಿಗೂ ಅವಕಾಶಗಳಿಂದ ತುಂಬಿರುತ್ತದೆ. ಆದರೆ ನೀವು ಸ್ವಲ್ಪ ಸೋಮಾರಿತನ ತೋರಿಸಬಹುದು, ಇದು ಅವಕಾಶಗಳನ್ನು ಕಳೆದುಕೊಳ್ಳಲು ಮತ್ತು ನಿಮ್ಮ ವೈಯಕ್ತಿಕ ಅಭಿವೃದ್ಧಿಗೆ ಉತ್ತಮ ಸಮಯವನ್ನು ನೀಡಬಹುದು.
ಪ್ರಣಯ ಸಂಬಂಧ - ಈ ವಾರ ಮದುವೆ ಮತ್ತು ಪ್ರೀತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸುತ್ತೀರಿ. ಈ ಸಮಯವನ್ನು ಆನಂದಿಸಿ ಮತ್ತು ಅಹಂಕಾರ ಹೊಂದಬೇಡಿ. ಅದು ಸಂಪೂರ್ಣವಾಗಿ ಹಿಮ್ಮುಖವಾಗಬಹುದು. ನಿಮ್ಮ ಸಂಗಾತಿ ನಿಮ್ಮನ್ನು ಮೆಚ್ಚಿಸಲು ಮತ್ತು ನಿಮ್ಮೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಶ್ರಮಿಸುತ್ತಾರೆ.
ಶಿಕ್ಷಣ - ಇಂಜಿನಿಯರಿಂಗ್ ಓದುತ್ತಿರುವ, ಅದಕ್ಕೆ ತಯಾರಾಗುತ್ತಿರುವ ಅಥವಾ ಬೇರೆ ಯಾವುದೇ ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ವಾರ ಉತ್ತಮವಾಗಿರುತ್ತದೆ. ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ವೃತ್ತಿ - ಮೂಲ ಸಂಖ್ಯೆ 8 ರ ಸ್ಥಳೀಯರು ಈ ವಾರ ಕೆಲಸದ ಜೀವನದಲ್ಲಿ ತುಂಬಾ ಅತೃಪ್ತರಾಗಬಹುದು ಏಕೆಂದರೆ ನಿಮ್ಮ ಪ್ರಯತ್ನಗಳಿಗೆ ಪ್ರತಿಫಲ ಸಿಗುತ್ತಿಲ್ಲ ಎಂದು ನೀವು ಭಾವಿಸುತ್ತೀರಿ. ಪರಿಣಾಮವಾಗಿ, ಹೊಸದನ್ನು ಪ್ರಾರಂಭಿಸುವ ಅಗತ್ಯವನ್ನು ನೀವು ಅನುಭವಿಸಬಹುದು ಅದು ನಿಮಗೆ ಬೆಳವಣಿಗೆ ನೀಡುತ್ತದೆ ಮತ್ತು ನಿಮ್ಮ ಜೀವನಕ್ಕೆ ಹೊಸ ದಿಕ್ಕನ್ನು ನೀಡುತ್ತದೆ.
ಆರೋಗ್ಯ - ಈ ವಾರ ಅಂತಹ ದೊಡ್ಡ ಆರೋಗ್ಯ ಸಮಸ್ಯೆಗಳಿರುವುದಿಲ್ಲ. ಆದರೆ ನೀವು ಈ ವಾರ ಹೆಚ್ಚು ಸಕ್ರಿಯವಾಗಿರುವುದರ ಮೇಲೆ ಗಮನಹರಿಸಬೇಕು ಮತ್ತು ಸೋಮಾರಿತ ಬಿಡಬೇಕು.
ಪರಿಹಾರ- ಬೀದಿ ನಾಯಿಗಳನ್ನು ನೋಡಿಕೊಳ್ಳಿ ಮತ್ತು ಅವುಗಳಿಗೆ ಆಹಾರ ನೀಡಿ.
ಮೂಲ ಸಂಖ್ಯೆ 9
(ನೀವು ಯಾವುದೇ ತಿಂಗಳ 9, 18, 27 ರಂದು ಜನಿಸಿದ್ದರೆ)
ನಿಮ್ಮ ವೈಯಕ್ತಿಕ ಅಥವಾ ವೃತ್ತಿ ಜೀವನವೇ ಆಗಿರಲಿ, ಪ್ರಾಯೋಗಿಕವಾಗಿ ನಿಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಈ ವಾರ ನಿಮಗೆ ಒಳ್ಳೆಯದು. ಕಷ್ಟಪಟ್ಟು ಕೆಲಸ ಮಾಡಲು ಮತ್ತು ನಿಮ್ಮ ಗುರಿಗಳನ್ನು ಸಾಧಿಸಲು ನೀವು ಶಕ್ತಿಯನ್ನು ಹೊಂದಿರುತ್ತೀರಿ.
ಪ್ರಣಯ ಸಂಬಂಧ - ನಿಮ್ಮ ಪ್ರೀತಿ ಮತ್ತು ಪ್ರಣಯದ ಬಗ್ಗೆ ಮಾತನಾಡುತ್ತಾ, ಈ ವಾರ ನೀವು ಹೆಚ್ಚು ಅಭಿವ್ಯಕ್ತಿ ಮತ್ತು ಭಾವೋದ್ರಿಕ್ತರಾಗಿರುತ್ತೀರಿ, ನಿಮ್ಮ ಪ್ರೇಮ ಜೀವನಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತೀರಿ. ನಿಮ್ಮ ಸಂಗಾತಿಯ ಆಸಕ್ತಿಗಳು ಮತ್ತು ಇಷ್ಟಗಳಿಗೆ ನೀವು ಗಮನಹರಿಸುತ್ತೀರಿ, ಆದರೆ ಇದು ಪೊಸೆಸಿವ್ ಆಗಿ ಕಂಡುಬರಬಹುದು ಮತ್ತು ತಪ್ಪು ಸಂವಹನಗಳು ಮತ್ತು ವಾದಗಳನ್ನು ಉಂಟುಮಾಡಬಹುದು.
ಶಿಕ್ಷಣ - ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ನಿರತರಾಗಿರುತ್ತಾರೆ ಮತ್ತು ತಮ್ಮ ಓದಿನ ಬಗ್ಗೆ ಗಮನ ಹರಿಸುತ್ತಾರೆ, ಇದು ಅವರ ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಗಳನ್ನು ಅನುಸರಿಸುವವರು ಈ ಸಮಯ ಪ್ರಯೋಜನ ಪಡೆಯುತ್ತಾರೆ ಏಕೆಂದರೆ ಅವರು ತಮ್ಮ ಮಾರ್ಗದರ್ಶಕರು ಮತ್ತು ಬೋಧಕರಿಂದ ಸಹಾಯವನ್ನು ಪಡೆಯುತ್ತಾರೆ.
ವೃತ್ತಿ - ಈ ವಾರ ನಿಮ್ಮ ಸಂಪೂರ್ಣ ಗಮನವು ನಿಮ್ಮ ಕೆಲಸದ ಜೀವನದ ಮೇಲೆ ಇರುತ್ತದೆ ಮತ್ತು ನಿಮ್ಮ ನಿರಂತರ ಪರಿಶ್ರಮವು ನಿಮ್ಮ ವೃತ್ತಿ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ನಿಮ್ಮ ಬೆಳವಣಿಗೆಯು ನಿಧಾನ ಮತ್ತು ಸ್ಥಿರವಾಗಿರುತ್ತದೆ, ಇದು ದೀರ್ಘಾವಧಿಯಲ್ಲಿ ಪ್ರಯೋಜನಕಾರಿಯಾಗಿದೆ.
ಆರೋಗ್ಯ - ಈ ವಾರ ನೀವು ಶಕ್ತಿಯುತ ಮತ್ತು ಉತ್ತಮ ಆರೋಗ್ಯವನ್ನು ಹೊಂದಿರುತ್ತೀರಿ, ಆದರೆ ನೀವು ಅಪಘಾತಗಳು ಮತ್ತು ಗಾಯಗಳಿಗೆ ಒಳಗಾಗಬಹುದಾದ್ದರಿಂದ ರಸ್ತೆಯಲ್ಲಿ ಚಾಲನೆ ಮಾಡುವಾಗ ಮತ್ತು ಪ್ರಯಾಣಿಸುವಾಗ ಎಚ್ಚರಿಕೆ ವಹಿಸಬೇಕು.
ಪರಿಹಾರ - ಪ್ರತಿದಿನ ಹನುಮಂತನನ್ನು ಪೂಜಿಸಿ ಮತ್ತು ಮಂಗಳವಾರದಂದು ಅವನಿಗೆ ಬೂಂದಿ ಪ್ರಸಾದವನ್ನು ಅರ್ಪಿಸಿ.
ರತ್ನಗಳು, ಯಂತ್ರ, ಇತ್ಯಾದಿ ಸೇರಿದಂತೆ ಜ್ಯೋತಿಷ್ಯ ಪರಿಹಾರಗಳಿಗಾಗಿ, ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್
ಈ ಲೇಖನವನ್ನು ನೀವು ಇಷ್ಟಪಟ್ಟಿದ್ದೀರಿ ಎಂದು ನಾವು ಭಾವಿಸುತ್ತೇವೆ. ಆಸ್ಟ್ರೋಸೇಜ್‌ನ ಪ್ರಮುಖ ಭಾಗವಾಗಿದ್ದಕ್ಕಾಗಿ ಧನ್ಯವಾದಗಳು. ಇನ್ನಷ್ಟು ಆಸಕ್ತಿದಾಯಕ ಲೇಖನಗಳಿಗಾಗಿ ಟ್ಯೂನ್ ಮಾಡಿ!
ಹೆಚ್ಚಾಗಿ ಕೇಳುವ ಪ್ರಶ್ನೆಗಳು
1. ಯಾವ ಸಂಖ್ಯೆ ಅದೃಷ್ಟವಂತವಾಗಿದೆ?
1,2, 3, 6, 8, 9, 11 ಮತ್ತು 38 ನಂತಹ ಅದೃಷ್ಟ ಸಂಖ್ಯೆಗಳು ಸಕಾರಾತ್ಮಕತೆ ಮತ್ತು ಸಮೃದ್ಧಿಯನ್ನು ತರುತ್ತವೆ.
2. ಯಾವ ಸಂಖ್ಯೆ ಶ್ರೀಮಂತವಾಗಿರುತ್ತದೆ?
ಭೌತಿಕ ಸಂಪತ್ತು ಮತ್ತು ಯಶಸ್ಸಿನ ವಿಷಯದಲ್ಲಿ ಸಂಖ್ಯೆ 8 ಅನ್ನು ಅತ್ಯಂತ ಶಕ್ತಿಶಾಲಿ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ.
3. ವೃತ್ತಿಗೆ ಅದೃಷ್ಟ ಸಂಖ್ಯೆ ಯಾವುದು?
ವೃತ್ತಿಗೆ ಅದೃಷ್ಟ ಸಂಖ್ಯೆಗಳೆಂದರೆ, 9, 2, 5, 3, 4 ಮತ್ತು 6.
Astrological services for accurate answers and better feature
Astrological remedies to get rid of your problems

AstroSage on MobileAll Mobile Apps
- Mercury Direct in Cancer: Wealth & Windom For These Zodiac Signs!
- Rakshabandhan 2025: Saturn-Sun Alliance Showers Luck & Prosperity For 3 Zodiacs!
- Sun Transit August 2025: Praises & Good Fortune For 3 Lucky Zodiac Signs!
- From Chaos To Control: What Mars In Virgo Brings To You!
- Fame In Your Stars: Powerful Yogas That Bring Name & Recognition!
- August 2025 Overview: Auspicious Time For Marriage And Mundan!
- Mercury Rise In Cancer: Fortunes Awakens For These Zodiac Signs!
- Mala Yoga: The Role Of Benefic Planets In Making Your Life Comfortable & Luxurious !
- Saturn Retrograde July 2025: Rewards & Favors For 3 Lucky Zodiac Signs!
- Sun Transit In Punarvasu Nakshatra: 3 Zodiacs Set To Shine Brighter Than Ever!
- बुध कर्क राशि में मार्गी, इन राशि वालों का शुरू होगा गोल्डन टाइम!
- मंगल का कन्या राशि में गोचर, देखें शेयर मार्केट और राशियों का हाल!
- किसे मिलेगी शोहरत? कुंडली के ये पॉवरफुल योग बनाते हैं पॉपुलर!
- अगस्त 2025 में मनाएंगे श्रीकृष्ण का जन्मोत्सव, देख लें कब है विवाह और मुंडन का मुहूर्त!
- बुध के उदित होते ही चमक जाएगी इन राशि वालों की किस्मत, सफलता चूमेगी कदम!
- श्रावण अमावस्या पर बन रहा है बेहद शुभ योग, इस दिन करें ये उपाय, पितृ नहीं करेंगे परेशान!
- कर्क राशि में बुध अस्त, इन 3 राशियों के बिगड़ सकते हैं बने-बनाए काम, हो जाएं सावधान!
- बुध का कर्क राशि में उदित होना इन लोगों पर पड़ सकता है भारी, रहना होगा सतर्क!
- शुक्र का मिथुन राशि में गोचर: जानें देश-दुनिया व राशियों पर शुभ-अशुभ प्रभाव
- क्या है प्यासा या त्रिशूट ग्रह? जानिए आपकी कुंडली पर इसका गहरा असर!
- Horoscope 2025
- Rashifal 2025
- Calendar 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ராசி பலன் 2025
- రాశిఫలాలు 2025
- ರಾಶಿಭವಿಷ್ಯ 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025