ಟ್ಯಾರೋ ವಾರ ಭವಿಷ್ಯ: 19 - 25 ಮೇ 2024
ಟ್ಯಾರೋ ಒಂದು ಪುರಾತನ ಇಸ್ಪೀಟ್ ಎಲೆಗಳ ಗುಚ್ಛವಾಗಿದೆ. ಇದನ್ನು ಹಲವಾರು ನಿಗೂಢ ವಿಜ್ಞಾನ ಶಾಸ್ತ್ರಜ್ಞರು ಮತ್ತು ಟ್ಯಾರೋ ಓದುಗರುಟ್ಯಾರೋ ಕಾರ್ಡ್‌ಗಳನ್ನುತಮ್ಮ ಅಂತಃಪ್ರಜ್ಞೆಯನ್ನು ಪ್ರವೇಶಿಸಲು ಬಳಸುತ್ತಾರೆ. ಹೆಚ್ಚಿನ ಆಧ್ಯಾತ್ಮಿಕ ಅಭಿವೃದ್ಧಿ ಮತ್ತು ಸ್ವಯಂ ತಿಳುವಳಿಕೆಗಾಗಿ ಕಾರ್ಡ್‌ಗಳ ಬಳಕೆ ಪ್ರಾಚೀನ ಕಾಲದಿಂದಲೂ ಇದೆ. ಒಬ್ಬ ವ್ಯಕ್ತಿಯು ನಂಬಿಕೆ ಮತ್ತು ನಮ್ರತೆಯಿಂದ ಪ್ರಮುಖ ಮತ್ತು ಜೀವನವನ್ನು ಬದಲಾಯಿಸುವ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲು ಬಂದರೆ ಟ್ಯಾರೋನ ರಹಸ್ಯ ಪ್ರಪಂಚವನ್ನು ಪ್ರವೇಶಿಸುವುದು ಅದ್ಭುತ ಅನುಭವವಾಗಿದೆ.

ಟ್ಯಾರೋ ಕಾರ್ಡ್ ಖಂಡಿತವಾಗಿಯೂ ನಿಮ್ಮನ್ನು ಮತ್ತು ನಿಮ್ಮ ಸ್ನೇಹಿತರನ್ನು ರಂಜಿಸುವ ಕೆಲಸವನ್ನು ಮಾತ್ರ ಮಾಡುವುದಿಲ್ಲ. ಅನೇಕರು ಭಾವಿಸಿರುವಂತೆ. 78 ಕಾರ್ಡ್‌ಗಳ ಡೆಕ್ ಅದರ ಸಂಕೀರ್ಣವಾದ ಮತ್ತು ನಿಗೂಢ ವಿವರಣೆಗಳೊಂದಿಗೆ ಪ್ರಪಂಚದ ಇತರ ಭಾಗಗಳಿಂದ ಮರೆಮಾಡಲಾಗಿರುವ ಕರಾಳ ರಹಸ್ಯಗಳು ಮತ್ತು ನಿಮ್ಮ ಆಳವಾದ ಭಯವನ್ನು ಹೊರಹಾಕುವ ಶಕ್ತಿಯನ್ನು ಹೊಂದಿದೆ.
ಟ್ಯಾರೋ ರೀಡಿಂಗ್ 2024 ಪಡೆಯಲು, ಅತ್ಯುತ್ತಮ ಟ್ಯಾರೋ ರೀಡರ್ ಜೊತೆ ಮಾತನಾಡಿ!
ಮೇ, 2024 ರ 2 ನೇ ವಾರದಲ್ಲಿ ಟ್ಯಾರೋ ನಮಗಾಗಿ ಏನು ಸಂಗ್ರಹಿಸಿಟ್ಟಿದೆ ಎಂಬುದರ ಕುರಿತು ತಿಳಿದುಕೊಳ್ಳುವ ಮೊದಲು ಈ ಪ್ರಬಲವಾದ ಮಾಂತ್ರಿಕ ಸಾಧನವು ಎಲ್ಲಿಂದ ಬರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳೋಣ.
ಟ್ಯಾರೋನ ಮೂಲವು 1400 ರ ದಶಕದ ಹಿಂದಿನದು ಮತ್ತು ಅದರ ಮೊದಲ ಉಲ್ಲೇಖಗಳು ಇಟಲಿ ಮತ್ತು ಅದರ ಹತ್ತಿರದ ಪ್ರದೇಶಗಳಿಂದ ಬಂದವು ಎಂದು ತಿಳಿದುಬಂದಿದೆ. ಇದನ್ನು ಆರಂಭದಲ್ಲಿ ಕೇವಲ ಇಸ್ಪೀಟೆಲೆಗಳ ಆಟವೆಂದು ಪರಿಗಣಿಸಲಾಗುತ್ತಿತ್ತು ಮತ್ತು ದೊಡ್ಡ ಕುಟುಂಬಗಳು ಮತ್ತು ರಾಜಮನೆತನಗಳು ತಮ್ಮ ಸ್ನೇಹಿತರು ಮತ್ತು ಪಾರ್ಟಿಗಳಿಗೆ ಬರುವ ಅತಿಥಿಗಳನ್ನು ಮನರಂಜಿಸಲು ಅದ್ದೂರಿ ಚಿತ್ರಗಳನ್ನು ರಚಿಸಲು ಕಲಾವಿದರಿಗೆ ಸೂಚಿಸುತ್ತಿದ್ದರು. 16ನೇ ಶತಮಾನದ ಸುಮಾರಿಗೆ ಯೂರೋಪ್‌ನಾದ್ಯಂತ ನಿಗೂಢ ವಿಜ್ಞಾನ ಅಭ್ಯಾಸ ಮಾಡಲು ಮತ್ತು ಕಲಿಯಲು ಆರಂಭಿಸಿದಾಗ ಕಾರ್ಡುಗಳನ್ನು ವಾಸ್ತವವಾಗಿ ದೈವಿಕ ಬಳಕೆಗೆ ತರಲಾಯಿತು.
ಹೀಗೆ ಆ ಸಂಕೀರ್ಣ ರೇಖಾಚಿತ್ರಗಳ ಹಿಂದೆ ಅಡಗಿರುವ ಸತ್ಯಗಳನ್ನು ಅರ್ಥಮಾಡಿಕೊಳ್ಳಲು ತಮ್ಮ ಬುದ್ಧಿ ಮತ್ತು ಶಕ್ತಿಯನ್ನು ಜನರು ಬಳಸಿದರು ಮತ್ತು ಅಂದಿನಿಂದ ಟ್ಯಾರೋ ಕೇವಲ ಕಾರ್ಡ್‌ಗಳ ಡೆಕ್ ಆಗಲಿಲ್ಲ. ಮಧ್ಯಕಾಲೀನ ಯುಗದಲ್ಲಿ, ಟ್ಯಾರೋ ವಾಮಾಚಾರದೊಂದಿಗೆ ಸಂಬಂಧ ಹೊಂದಿತ್ತು ಮತ್ತು ಮೂಢನಂಬಿಕೆಯಿಂದ ಹಿನ್ನೆಡೆಯನ್ನು ಹೊಂದಿತ್ತು ಮತ್ತು ನಂತರದ ದಶಕಗಳಲ್ಲಿ ಭವಿಷ್ಯ ಹೇಳುವ ಮುಖ್ಯವಾಹಿನಿಯ ಪ್ರಪಂಚದಿಂದ ದೂರವಿಡಲಾಯಿತು.
ಕೆಲವು ದಶಕಗಳ ಹಿಂದೆಟ್ಯಾರೋ ರೀಡಿಂಗ್ ಅನ್ನು ಮುಖ್ಯವಾಹಿನಿಯ ರಹಸ್ಯ ಜಗತ್ತಿಗೆ ಮರುಪರಿಚಯಿಸಿದಾಗ ಅದು ಮತ್ತೊಮ್ಮೆ ಖ್ಯಾತಿಯನ್ನು ಪಡೆದುಕೊಂಡಿತು ಮತ್ತು ಖಂಡಿತವಾಗಿಯೂ ಈಗ ಹೊಸ ವೈಭವವನ್ನು ಹೊಂದಿದೆ. ಇದು ಮತ್ತೊಮ್ಮೆ ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಭವಿಷ್ಯಜ್ಞಾನದ ಮುಖ್ಯ ಸಾಧನವಾಗಿ ಬಳಸಲ್ಪಡುತ್ತದೆ ಮತ್ತು ಖಂಡಿತವಾಗಿಯೂ ಅದು ಗಳಿಸಿದ ಖ್ಯಾತಿ ಮತ್ತು ಗೌರವಕ್ಕೆ ಅರ್ಹವಾಗಿದೆ. ಈಗ, ಹೆಚ್ಚಿನ ವಿಳಂಬವಿಲ್ಲದೆ ನಾವು ಟ್ಯಾರೋ ಜಗತ್ತಿನಲ್ಲಿ ಒಂದು ಸುತ್ತು ಹೋಗಿ ಬರೋಣ ಮತ್ತು ಮೇ, 2024 ರ 3 ನೇ ವಾರದಲ್ಲಿ ಎಲ್ಲಾ12 ರಾಶಿಚಕ್ರ ಚಿಹ್ನೆಗಳಿಗಾಗಿ ಅದು ಏನನ್ನು ಹೊಂದಿದೆ ಎಂಬುದನ್ನು ತಿಳಿದುಕೊಳ್ಳೋಣ.
ಇದನ್ನೂ ಓದಿ: ಟ್ಯಾರೋ ರೀಡಿಂಗ್ 2024- ವಾರ್ಷಿಕ ಭವಿಷ್ಯ
ರಾಶಿ ಪ್ರಕಾರ ಭವಿಷ್ಯ
ಮೇಷ
ಪ್ರೀತಿ: ದ ಹರ್ಮಿಟ್
ಆರ್ಥಿಕತೆ: ಫೈವ್ ಆಫ್ ಪೆಂಟಕಲ್ಸ್ ( ಹಿಮ್ಮುಖ)
ವೃತ್ತಿ: ದ ಫೂಲ್ (ಹಿಮ್ಮುಖ)
ಅರೋಗ್ಯ: ತ್ರೀ ಆಫ್ ಕಪ್ಸ್
ಆತ್ಮೀಯ ಮೇಷರಾಶಿಯವರೇ! ಪ್ರೀತಿಯಲ್ಲಿರುವ ಹರ್ಮಿಟ್ ನಿಮ್ಮಿಬ್ಬರೂ ಸಂಬಂಧದಿಂದ ನೀವು ಏನನ್ನು ನಿರೀಕ್ಷಿಸುತ್ತೀರಿ ಎಂಬುದರ ಕುರಿತು ಯೋಚಿಸಲು ಬಯಸಬಹುದು ಮತ್ತು ಯಾವುದು ನಿಮ್ಮನ್ನು ಸಂತೋಷಪಡಿಸಬಹುದು ಎಂದು ಸೂಚಿಸುತ್ತದೆ. ಆರಂಭಿಕ ಮಾತುಕತೆಗಳು ಅಹಿತಕರವಾಗಿರಬಹುದು, ಆದರೆ ಮುಂದಿನ ಭವಿಷ್ಯವನ್ನು ನಿಭಾಯಿಸಲು ಬಲವಾದ ಅಡಿಪಾಯವನ್ನು ಸಿದ್ಧಪಡಿಸುತ್ತದೆ. ಫೈವ್ ಆಫ್ ಪೆಂಟಕಲ್ಸ್ (ಹಿಮ್ಮುಖ) ಎಂದರೆ ನೀವು ಬಹಳ ಸಮಯದಿಂದ ಎದುರಿಸುತ್ತಿದ್ದ ಆರ್ಥಿಕ ಬಿಕ್ಕಟ್ಟಿನಿಂದ ಈಗ ಅಂತಿಮವಾಗಿ ಹೊರಬರುತ್ತಿದ್ದೀರಿ ಎಂದರ್ಥ. ಕಳೆದ ಬಾರಿ ನೀವು ಇನ್ಕ್ರಿಮೆಂಟ್ ಅನ್ನು ಸ್ವೀಕರಿಸದಿದ್ದರೆ, ಈ ಬಾರಿ ನೀವು ಅದನ್ನು ಸ್ವೀಕರಿಸುವ ಸಾಧ್ಯತೆಗಳಿವೆ. ಆರ್ಥಿಕತೆ ಈಗ ನಿಮಗೆ ಚಿಂತೆಯ ಕ್ಷೇತ್ರವಾಗಿರುವುದಿಲ್ಲ. ಆರ್ಥಿಕ ಭದ್ರತೆ ಮತ್ತು ಸ್ಥಿರತೆ ಈಗ ನಿಮ್ಮ ಬಳಿಗೆ ಬರುತ್ತಿದೆ. ದ ಫೂಲ್ (ಹಿಮ್ಮುಖ) ನೀವು ಅಪಾಯವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ ಮತ್ತು ಕೆಲಸದಲ್ಲಿ ದೈನಂದಿನ ಕರ್ತವ್ಯಗಳನ್ನು ಅಷ್ಟೇ ಮಾಡಿಕೊಂಡು ನೀವು ಆರಾಮವಾಗಿರುತ್ತೀರಿ ಎಂದು ಸೂಚಿಸುತ್ತದೆ. ನೀವು ಕೆಲಸದಲ್ಲಿ ತಕ್ಷಣದ ಬದಲಾವಣೆಯನ್ನು ಹುಡುಕುತ್ತಿಲ್ಲ. ತ್ರೀ ಆಫ್ ಕಪ್ಸ್ ಈ ವಾರ ನೀವು ಉತ್ತಮ ಆರೋಗ್ಯದಲ್ಲಿರುತ್ತೀರಿ ಎಂದು ಸೂಚಿಸುತ್ತದೆ, ನಿಜವಾಗಿಯೂ ಚಿಂತೆ ಮಾಡಲು ಏನೂ ಇಲ್ಲ.
ಅದೃಷ್ಟ ಬಣ್ಣ: ಇಟ್ಟಿಗೆ ಕೆಂಪು
ವೃಷಭ
ಪ್ರೀತಿ: ಸೆವೆನ್ ಆಫ್ ಪೆಂಟಕಲ್ಸ್
ಆರ್ಥಿಕತೆ: ಸಿಕ್ಸ್ ಆಫ್ ಕಪ್ಸ್
ವೃತ್ತಿ: ಎಯಿಟ್ ಆಫ್ ಪೆಂಟಕಲ್ಸ್
ಅರೋಗ್ಯ: ಫೋರ್ ಆಫ್ ಪೆಂಟಕಲ್ಸ್
ಪ್ರೀತಿ ಸಂಬಂಧದಲ್ಲಿ ಸೆವೆನ್ ಆಫ್ ಪೆಂಟಕಲ್ಸ್ ಸ್ವಾಗತಾರ್ಹ ಕಾರ್ಡ್ ಆಗಿದೆ ಏಕೆಂದರೆ ನೀವು ಮತ್ತು ನಿಮ್ಮ ಸಂಗಾತಿ ಶುದ್ಧ ಉದ್ದೇಶಗಳು ಮತ್ತು ಪ್ರೀತಿಯೊಂದಿಗೆ ಸಂಬಂಧವನ್ನು ಬಲಪಡಿಸಲು ಕೆಲಸ ಮಾಡಲು ಸಿದ್ಧರಾಗಿದ್ದೀರಿ ಎಂದು ತೋರಿಸುತ್ತದೆ. ಪರಸ್ಪರ ಚೆನ್ನಾಗಿ ಅರ್ಥಮಾಡಿಕೊಳ್ಳುವ ಮೂಲಕ ನಿಧಾನವಾಗಿ ಆಳವಾದ ಬಂಧವನ್ನು ನಿರ್ಮಿಸುವ ಸಮಯ ಇದು. ಆರ್ಥಿಕ ರೀಡಿಂಗ್ ಸಿಕ್ಸ್ ಆಫ್ ಕಪ್ಸ್ ಈ ವಾರ ನೀವು ಬೋನಸ್ ಪಡೆಯಬಹುದು ಅಥವಾ ಕೆಲವು ಹಣಕಾಸಿನ ಲಾಭಗಳು ಉಡುಗೊರೆಗಳ ರೂಪದಲ್ಲಿ ಕುಟುಂಬ ಅಥವಾ ಸ್ನೇಹಿತರ ಮೂಲಕ ನಿಮಗೆ ಬರಬಹುದು ಎಂದು ಸೂಚಿಸುತ್ತದೆ. ವೃತ್ತಿ ರೀಡಿಂಗ್ ಎಯಿಟ್ ಆಫ್ ಪೆಂಟಕಲ್ಸ್ ನಿಮ್ಮ ವೃತ್ತಿಯು ಉತ್ತಮ ವೇಗದಲ್ಲಿ ಮುಂದುವರಿಯುತ್ತದೆ ಮತ್ತು ಒಳ್ಳೆಯ ವಿಷಯಗಳು ನಿಮಗಾಗಿ ಬರಲಿವೆ ಎಂದು ಸೂಚಿಸುತ್ತದೆ. ನೀವು ಬಡ್ತಿಗಾಗಿ ಕಾಯುತ್ತಿದ್ದೀರಾ? ಇದು ಸಂಭವಿಸಲಿದೆ. ವ್ಯಾಪಾರ ಮಾಲೀಕರು ಸಹ ಉದ್ಯಮದಲ್ಲಿ ಏರಿಕೆಯನ್ನು ಅನುಭವಿಸುತ್ತಾರೆ. ಫೋರ್ ಆಫ್ ಪೆಂಟಕಲ್ಸ್, ನೀವು ಅತಿಯಾದ ಹೊರೆ ಅಥವಾ ಒತ್ತಡವನ್ನು ಅನುಭವಿಸಬಹುದು. ನೀವು ಯಾವುದೇ ನಕಾರಾತ್ಮಕತೆಯಿಂದ ನಿಮ್ಮನ್ನು ಬಿಡುಗಡೆ ಮಾಡಿ ಮತ್ತು ಹೆಚ್ಚು ಸಕಾರಾತ್ಮಕ ವ್ಯಕ್ತಿಯಾಗಿ ಬೆಳೆಯಲು ನಿಮ್ಮನ್ನು ಮುಕ್ತಗೊಳಿಸಿ ಎಂದು ಸೂಚಿಸುತ್ತದೆ.
ಅದೃಷ್ಟ ಬಣ್ಣ: ತಿಳಿ ಹಳದಿ
ಭವಿಷ್ಯದಲ್ಲಿ ಎಲ್ಲಾ ಮೌಲ್ಯಯುತ ಒಳನೋಟಗಳಿಗಾಗಿ ಆಸ್ಟ್ರೋಸೇಜ್ ಬೃಹತ್ ಜಾತಕ
ಮಿಥುನ
ಪ್ರೀತಿ: ತ್ರೀ ಆಫ್ ಕಪ್ಸ್
ಆರ್ಥಿಕತೆ: ನೈಟ್ ಆಫ್ ವಾಂಡ್ಸ್
ವೃತ್ತಿ: ಕ್ವೀನ್ ಆಫ್ ಕಪ್ಸ್
ಅರೋಗ್ಯ:ದ ಮೂನ್
ಮಿಥುನ ರಾಶಿಯವರೇ ಪ್ರೀತಿ ರೀಡಿಂಗ್ ತ್ರೀ ಆಫ್ ಕಪ್ಸ್ ನೀವು ತುಂಬಾ ಒಂಟಿಯಾಗಿದ್ದೀರಿ ಮತ್ತು ನಿಮ್ಮ ಸ್ನೇಹಿತರ ಕಂಪನಿ ಆನಂದಿಸುತ್ತೀರಿ ಮತ್ತು ವಾರವಿಡೀ ಸಕ್ರಿಯ ಸಾಮಾಜಿಕ ಜೀವನವನ್ನು ಹೊಂದುತ್ತೀರಿ ಎಂದು ಸೂಚಿಸುತ್ತದೆ. ಇದೀಗ ನಿಮ್ಮ ಗಮನವು ಪ್ರೀತಿ ಅಥವಾ ಸಂಬಂಧವನ್ನು ಪಡೆಯುವುದರ ಮೇಲೆ ಇಲ್ಲ. ಆರ್ಥಿಕ ರೀಡಿಂಗ್ ನೈಟ್ ಆಫ್ ವಾಂಡ್ಸ್ ನೀವು ನಿಮ್ಮ ಆರ್ಥಿಕತೆಯನ್ನು ನಿಭಾಯಿಸುವಲ್ಲಿ ಅಜಾಗರೂಕರಾಗಿದ್ದೀರಿ ಎಂದು ಸೂಚಿಸುತ್ತದೆ. ನಿಮ್ಮ ಉಳಿತಾಯವನ್ನು ಖಾಲಿ ಮಾಡಬಾರದು ಎಂದು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು ಏಕೆಂದರೆ ಅದು ನಂತರ ನಿಮಗೆ ಹಣಕಾಸಿನ ತೊಂದರೆಗಳನ್ನು ಉಂಟುಮಾಡಬಹುದು. ನಿಮ್ಮ ಹಣವನ್ನು ಚೆನ್ನಾಗಿ ಉಳಿಸಲು ಮತ್ತು ನಿರ್ವಹಿಸಲು ಪ್ರಾರಂಭಿಸುವುದು ಉತ್ತಮ. ಕ್ವೀನ್ ಆಫ್ ಕಪ್ಸ್ ನೀವು ಕೆಲಸದಲ್ಲಿ ಸಂತೋಷವನ್ನು ಅನುಭವಿಸುತ್ತೀರಿ ಮತ್ತು ಅದೇ ಸ್ಥಳದಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಲು ಬಯಸಬಹುದು ಎಂದು ಸೂಚಿಸುತ್ತದೆ. ನಿಮ್ಮ ಪ್ರಸ್ತುತ ಕಾರ್ಯಸ್ಥಳವು ನಿಮ್ಮ ಕೆಲಸಕ್ಕೆ ಸಂಬಂಧಿಸಿದ ಹಲವಾರು ಹೊಸ ವಿಷಯಗಳನ್ನು ಕಲಿಯಲು ಮತ್ತು ಒಬ್ಬ ವ್ಯಕ್ತಿಯಾಗಿ ಬೆಳೆಯಲು ಸಾಕಷ್ಟು ಅವಕಾಶಗಳನ್ನು ಹೊಂದಿದೆ. ಕೆಲವು ಯೋಚನೆಗಳು ನಿಮ್ಮನ್ನು ತೊಂದರೆಗೊಳಿಸುತ್ತವೆ ಮತ್ತು ನಿಮ್ಮ ಒಟ್ಟಾರೆ ಆರಿಗ್ಯಕ್ಕೆ ಹಾನಿ ತರುತ್ತದೆ. ನಿಮ್ಮ ಸುತ್ತ ಗಮನ ಕೊಡಿ ಮತ್ತು ಅಗತ್ಯ ಬದಲಾವಣೆಗಳನ್ನು ಮಾಡಿ ಇದರಿಂದ ನೀವು ಒಳಗಿನಿಂದ ಗುಣವಾಗಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಲಾಗುತ್ತದೆ.
ಅದೃಷ್ಟ ಬಣ್ಣ: ಹಸಿರು
ಕರ್ಕ
ಪ್ರೀತಿ: ದ ವರ್ಲ್ಡ್
ಆರ್ಥಿಕತೆ: ದ ಹೆರಫ್ಯಾಂಟ್
ವೃತ್ತಿ: ನೈಟ್ ಆಫ್ ಕಪ್ಸ್
ಅರೋಗ್ಯ: ಟೆನ್ ಆಫ್ ಸ್ವೋರ್ಡ್ಸ್
ಪ್ರೀತಿ ಸಂಬಂಧಗಳಲ್ಲಿನ ದ ವರ್ಲ್ಡ್ ಸ್ಥಿರತೆ ಮತ್ತು ತೃಪ್ತಿಯ ಅನುಕೂಲಕರ ಸಂಕೇತವಾಗಿದೆ. ಇದು ಸಮತೋಲಿತ ಮತ್ತು ಸಾಮರಸ್ಯದ ಸಂಬಂಧವನ್ನು ಸಂಕೇತಿಸುತ್ತದೆ, ಅಲ್ಲಿ ನಂಬಿಕೆ ಮತ್ತು ಪರಸ್ಪರ ಗೌರವವು ಬೆಳೆಯುತ್ತದೆ. ನಿಮ್ಮ ಸಂಬಂಧವು ಮುಂದಿನ ಹಂತಕ್ಕೆ ಹೋಗಬಹುದು ಎಂದು ಈ ಕಾರ್ಡ್ ಹೇಳುತ್ತದೆ. ನೀವು ಈ ತಿಂಗಳು ಆರ್ಥಿಕ ಸ್ವಾತಂತ್ರ್ಯ ಮತ್ತು ಸ್ಥಿರತೆಯನ್ನು ಪಡೆಯುತ್ತೀರಿ ಆದರೆ ಅದು ನಿಧಾನವಾಗಿ ಬರುತ್ತದೆ. ಇದರರ್ಥ ನೀವು ಹಣವನ್ನು ಗಳಿಸಲು ಸಾಂಪ್ರದಾಯಿಕ ಮಾರ್ಗಗಳನ್ನು ಮಾತ್ರ ನಂಬುತ್ತೀರಿ ಮತ್ತು ನಿಮ್ಮ ಆರ್ಥಿಕತೆಯನ್ನು ಅಪಾಯಕ್ಕೆ ತರಲು ಬಯಸದಿರಬಹುದು. ನೀವು ನಿಧಾನವಾಗಿ ಮತ್ತು ಸ್ಥಿರವಾಗಿ ಹೋಗಲು ಬಯಸುತ್ತೀರಿ. ವೃತ್ತಿ ರೀಡಿಂಗ್ ನೈಟ್ ಆಫ್ ಕಪ್ಸ್ ನಿಮ್ಮ ದಾರಿಯಲ್ಲಿ ಬರುವ ಹೊಸ ಕೊಡುಗೆಗಳು ಮತ್ತು ಅವಕಾಶಗಳನ್ನು ಸೂಚಿಸುತ್ತದೆ. ನಿಮ್ಮ ಸ್ಥಾನ ಮತ್ತು ನಿಮ್ಮ ಪಾತ್ರಗಳು ಮತ್ತು ಜವಾಬ್ದಾರಿಗಳು ಹೆಚ್ಚಾಗಬಹುದು. ನೀವು ಇದೀಗ ನಿಮ್ಮ ವೃತ್ತಿಯಲ್ಲಿ ಎಲ್ಲಿದ್ದೀರಿ ಎಂಬುದರ ಬಗ್ಗೆ ನೀವು ತೃಪ್ತರಾಗಿದ್ದೀರಿ ಮತ್ತು ಅದೇ ರೀತಿಯಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಲು ಬಯಸುತ್ತೀರಿ. ಆರೋಗ್ಯ ಸಂಬಂಧಿತ ರೀಡಿಂಗ್ ಟೆನ್ ಆಫ್ ಸ್ವೋರ್ಡ್ಸ್, ದೀರ್ಘಾವಧಿಯ ಅನಾರೋಗ್ಯ ಅಥವಾ ಗಾಯ ಗುಣವಾಗುವುದನ್ನು ಸೂಚಿಸುತ್ತದೆ. ದೀರ್ಘಕಾಲದಿಂದ ನಿಮ್ಮನ್ನು ಕಾಡುತ್ತಿದ್ದ ಅನಾರೋಗ್ಯಕ್ಕೆ ಸೂಕ್ತ ಚಿಕಿತ್ಸೆ ಪಡೆಯುವ ಸಾಧ್ಯತೆಯಿದೆ.
ಅದೃಷ್ಟ ಬಣ್ಣ: ಮುತ್ತಿನ ಬಿಳಿ
ಇದನ್ನೂ ಓದಿ: ಆನ್ಲೈನ್ ಜನ್ಮ ಜಾತಕ
ಸಿಂಹ
ಪ್ರೀತಿ: ಕಿಂಗ್ ಆಫ್ ಪೆಂಟಕಲ್ಸ್
ಆರ್ಥಿಕತೆ: ಸೆವೆನ್ ಆಫ್ ವಾಂಡ್ಸ್
ವೃತ್ತಿ: ಕಿಂಗ್ ಆಫ್ ಪೆಂಟಕಲ್ಸ್
ಅರೋಗ್ಯ: ಟು ಆಫ್ ಪೆಂಟಕಲ್ಸ್
ಆತ್ಮೀಯ ಸಿಂಹ ರಾಶಿಯವರೇ! ಪ್ರೀತಿ ರೀಡಿಂಗ್ ಕಿಂಗ್ ಆಫ್ ಪೆಂಟಕಲ್ಸ್ ಆಳವಾದ ಮತ್ತು ವಿಶ್ವಾಸಾರ್ಹವಾದ ಸಂಬಂಧವನ್ನು ಸೂಚಿಸುತ್ತದೆ, ಆದರೆ ತುಂಬಾ ರೋಮ್ಯಾಂಟಿಕ್ ಆಗಿರುವುದಿಲ್ಲ. ನಿಮ್ಮ ಪ್ರೀತಿ ಜೀವನದಲ್ಲಿ ನೀವು ಬದ್ಧತೆ, ಸ್ಥಿರತೆ ಮತ್ತು ಭದ್ರತೆಯನ್ನು ಹುಡುಕುತ್ತಿದ್ದರೆ, ಈ ಕಾರ್ಡ್ ಖಂಡಿತವಾಗಿಯೂ ಸ್ವಾಗತಾರ್ಹ. ಇದು ಪಾಲುದಾರಿಕೆಯನ್ನು ಸೂಚಿಸುತ್ತದೆ, ಇದರಲ್ಲಿ ನೀವಿಬ್ಬರೂ ಒಟ್ಟಿಗೆ ನಿಮ್ಮ ದೀರ್ಘಾವಧಿಯ ಗುರಿಗಳನ್ನು ಸಾಧಿಸುವಿರಿ. ಸೆವೆನ್ ಆಫ್ ವಾಂಡ್ಸ್ ಒಬ್ಬ ವ್ಯಕ್ತಿಯ ಪ್ರಬುದ್ಧತೆಯನ್ನು ಮತ್ತು ಅವನ/ಅವಳ ಬೆಳವಣಿಗೆಯನ್ನು ಸಹ ಸೂಚಿಸುತ್ತದೆ. ಹಣಕಾಸಿ ಈ ಕಾರ್ಡ್ ನೀವು ಉತ್ತಮ ಆರ್ಥಿಕ ಹಂತವನ್ನು ತಲುಪಲು ದೀರ್ಘಾವಧಿಯ ಯುದ್ಧಗಳನ್ನು ಮಾಡಬೇಕು ಎಂದು ಸೂಚಿಸುತ್ತದೆ. ವೃತ್ತಿ ರೀಡಿಂಗ್ ಟು ಆಫ್ ಪೆಂಟಕಲ್ಸ್, ಈ ವಾರ ನಿಮ್ಮ ದಾರಿಯಲ್ಲಿ ಬರುವ ಬಡ್ತಿ ಬೆಳವಣಿಗೆಯನ್ನು ಸೂಚಿಸುತ್ತದೆ. ಈ ವಾರ ನಿಮ್ಮ ಸಂಸ್ಥೆಯಲ್ಲಿ ನೀವು ಪ್ರಮುಖ ಪಾತ್ರವನ್ನು ವಹಿಸುತ್ತೀರಿ ಎಂದು ತೋರಿಸುತ್ತದೆ, ಅದು ನೀವು ಅಲ್ಲಿ ಮಾಲಕರಾಗಿರಬಹುದು ಅಥವಾ ಉದ್ಯೋಗಿಯಾಗಿರಬಹುದು. ನಿಮ್ಮ ಮೇಲಧಿಕಾರಿಗಳು ಮತ್ತು ಗೆಳೆಯರಿಂದ ಪ್ರಶಂಸೆಗೆ ಒಳಗಾಗುತ್ತೀರಿ. ಸೆವೆನ್ ಆಫ್ ಪೆಂಟಕಲ್ಸ್, ಅಂತಿಮವಾಗಿ ನೀವು ನಿಮ್ಮ ಅನಾರೋಗ್ಯ ಮತ್ತು ಇತರ ಅರೋಗ್ಯ ಸಮಸ್ಯೆಗಳಿಂದ ಹೊರಬರುತ್ತಿದ್ದೀರಿ ಎಂದು ತೋರಿಸುತ್ತದೆ, ಆದರೆ ನೀವು ಈಗ ಗುಣಮುಖರಾಗಿದ್ದೀರಿ. ಇದು ನಿಮಗೆ ಚಿಕಿತ್ಸೆ ನೀಡುವ ವಾರ.
ಅದೃಷ್ಟ ಬಣ್ಣ: ಕೇಸರಿ
ಕನ್ಯಾ
ಪ್ರೀತಿ: ದ ಪವರ್
ಆರ್ಥಿಕತೆ: ತ್ರೀ ಆಫ್ ಪೆಂಟಕಲ್ಸ್
ವೃತ್ತಿ: ತ್ರೀ ಆಫ್ ಕಪ್ಸ್
ಅರೋಗ್ಯ: ತ್ರೀ ಆಫ್ ವಾಂಡ್ಸ್
ಕನ್ಯಾರಾಶಿಯವರೇ, ಇದು ಕೆಟ್ಟ ಪ್ರೇಮಭಗ್ನವನ್ನು ಸೂಚಿಸುತ್ತದೆ. ನಿಮ್ಮ ಸಂಬಂಧವು ಸರಿಪಡಿಸಲಾಗದಷ್ಟು ಮುರಿದುಹೋಗುವ ಹಂತವನ್ನು ತಲುಪಿದೆ ಎಂದು ತೋರುತ್ತಿದೆ. ಪ್ರತಿ ಚಿಕ್ಕ ಜಗಳವು ನಿಮಿಷಗಳಲ್ಲಿ ದೊಡ್ಡ ವಾದಕ್ಕೆ ಹೋಗುತ್ತದೆ ಮತ್ತು ಈ ಸಂಬಂಧವು ನಿಮಗೆ ಸರಿಯಾಗಿದೆಯೇ ಎಂದು ಯೋಚಿಸುತ್ತಾ ಇರುತ್ತೀರಿ. ಈ ಸಂಬಂಧವನ್ನು ಮುಚ್ಚುವ ಸಮಯ, ಮುಂದುವರಿಯಿರಿ. ತ್ರೀ ಆಫ್ ಪೆಂಟಕಲ್ಸ್, ಈ ವಾರ ಕನಿಷ್ಠ ಹಣಕಾಸು ನಿಮಗೆ ಸಮಸ್ಯೆಯಾಗುವುದಿಲ್ಲ ಎಂದು ತೋರಿಸುತ್ತದೆ. ಆರ್ಥಿಕತೆಯ ವಿಷಯದಲ್ಲಿ ನೀವು ಪ್ರಸ್ತುತ ಇರುವ ಸ್ಥಳವನ್ನು ತಲುಪಲು ತುಂಬಾ ಶ್ರಮಿಸಿದ್ದೀರಿ ಮತ್ತು ನಿಮ್ಮ ಆರ್ಥಿಕತೆಯನ್ನು ಉತ್ತಮವಾಗಿ ನಿರ್ವಹಿಸಲು ಮತ್ತು ಯೋಜಿಸಲು ನಿಮಗೆ ಸಹಾಯ ಮಾಡುವ ಹೆಚ್ಚು ಅನುಭವಿ ವ್ಯಕ್ತಿಯಿಂದ ನೀವು ಸಹಾಯವನ್ನು ಪಡೆಯುತ್ತೀರಿ. ಸಲಹೆಗಳನ್ನು ಎಚ್ಚರಿಕೆಯಿಂದ ಆಲಿಸಿ. ತ್ರೀ ಆಫ್ ಕಪ್ಸ್, ಖಂಡಿತವಾಗಿಯೂ ನಿಮ್ಮ ವೃತ್ತಿಯು ವಿನೋದಮಯವಾಗಿದೆ ಮತ್ತು ಪ್ರಪಂಚದಾದ್ಯಂತದ ಜನರೊಂದಿಗೆ ಬೆರೆಯುವ ಅವಕಾಶವನ್ನು ನೀಡುತ್ತದೆ ಎಂದು ಹೇಳುತ್ತದೆ. ನಿಮ್ಮ ವೃತ್ತಿಯಲ್ಲಿ ಬೆಳೆಯಲು ಸಹಾಯ ಮಾಡುವ ನಿಮ್ಮ ನೆಟ್ವರ್ಕ್ ವಲಯದ ಜನರೊಂದಿಗೆ ನೀವು ಸಂಪರ್ಕದಲ್ಲಿರಬಹುದು. ಈ ವಾರ ಉದ್ಯೋಗ ಬದಲಾವಣೆ ಸಾಧ್ಯ. ಈ ವಾರ ನೀವು ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆಯನ್ನು ಎದುರಿಸುವುದಿಲ್ಲ ಎಂದು ತ್ರೀ ಆಫ್ ವಾಂಡ್ಸ್ ನಮಗೆ ಹೇಳುತ್ತದೆ. ಇದು ದೀರ್ಘಕಾಲದ ಅನಾರೋಗ್ಯದಿಂದ ಚೇತರಿಸಿಕೊಳ್ಳುವುದನ್ನು ತೋರಿಸುತ್ತದೆ.
ಅದೃಷ್ಟ ಬಣ್ಣ: ತಿಳಿ ಹಸಿರು
ಇದನ್ನೂ ಓದಿ: ಸಂಖ್ಯಾಶಾಸ್ತ್ರ ಭವಿಷ್ಯ 2024
ತುಲಾ
ಪ್ರೀತಿ: ಫೈವ್ ಆಫ್ ಸ್ವೋರ್ಡ್ಸ್
ಆರ್ಥಿಕತೆ: ಏಸ್ ಆಫ್ ಸ್ವೋರ್ಡ್ಸ್
ವೃತ್ತಿ: ಜಡ್ಜ್‌ಮೆಂಟ್
ಅರೋಗ್ಯ: ಡೆತ್
ಆತ್ಮೀಯ ತುಲಾ ರಾಶಿಯವರೇ, ಇದು ಖಂಡಿತವಾಗಿಯೂ ನೀವು ನೋಡಲು ಬಯಸುವ ಕಾರ್ಡ್ ಅಲ್ಲ. ಫೈವ್ ಆಫ್ ಸ್ವೋರ್ಡ್ಸ್, ಸಮಸ್ಯೆಯಿರುವಂತೆ ಮತ್ತು ನಿಮ್ಮ ಸಂಗಾತಿ ನಿಮಗೆ ಸತ್ಯವನ್ನು ಹೇಳುತ್ತಿಲ್ಲ ಎಂದು ಸೂಚಿಸುತ್ತದೆ. ಸಂಘರ್ಷವನ್ನು ಪರಿಹರಿಸಲು ನಿಮ್ಮಲ್ಲಿ ಯಾರೂ ಸಿದ್ಧರಿಲ್ಲ ಮತ್ತು ನೀವು ಅಹಂಕಾರದ ಆಟದಲ್ಲಿ ಒಬ್ಬರನ್ನೊಬ್ಬರು ಮೀರಿಸುತ್ತಿದ್ದೀರಿ.ಆರ್ಥಿಕ ಟ್ಯಾರೋ ರೀಡಿಂಗ್, ಏಸ್ ಆಫ್ ಸ್ವೋರ್ಡ್ಸ್ ಬಹಳ ಸಂವೇದನಾಶೀಲ ನಿರ್ಧಾರಗಳನ್ನು ಮಾಡಲು ನಿಮ್ಮನ್ನು ಪ್ರೋತ್ಸಾಹಿಸುತ್ತದೆ. ನೀವು ಈ ವಾರ ಹೆಚ್ಚುಜಾಗರೂಕರಾಗಿರಬೇಕು ಮತ್ತು ಕ್ಷಿಪ್ರ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು.ವೃತ್ತಿ ರೀಡಿಂಗ್ ಜಡ್ಜ್‌ಮೆಂಟ್, ಈ ವಾರ ನಿಮ್ಮ ಮೇಲಧಿಕಾರಿಗಳಿಂದ ನಿರ್ಣಯಿಸಲ್ಪಡುತ್ತದೆ ಎಂದು ಸೂಚಿಸುತ್ತದೆ. ಯಾರೂ ನಿಮ್ಮನ್ನು ಗಮನಿಸುತ್ತಿಲ್ಲ ಎಂದು ನೀವು ಭಾವಿಸಿದರೆ, ಒಂದು ಹೆಜ್ಜೆ ಹಿಂದಕ್ಕೆ ಇರಿಸಿ ಮತ್ತು ವಿಷಯಗಳನ್ನು ಗಮನಿಸಿ. ನಿಮ್ಮ ಕೆಲಸವನ್ನು ಬಹಳ ಎಚ್ಚರಿಕೆಯಿಂದ ಮತ್ತು ನಿಕಟವಾಗಿ ಮೌಲ್ಯಮಾಪನ ಮಾಡಲಾಗುತ್ತಿದೆ. ನೀವು ಖಂಡಿತವಾಗಿಯೂ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತೀರಿ. ಈ ವಾರ ನೀವು ನಿಮ್ಮ ಆರೋಗ್ಯದ ಅತ್ಯುತ್ತಮ ಸ್ಥಿತಿಯಲ್ಲಿಲ್ಲದಿರಬಹುದು ಮತ್ತು ನಿಮ್ಮ ಆಹಾರ ಮತ್ತು ಫಿಟ್‌ನೆಸ್ ಅನ್ನು ನೀವು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ಕೆಲವು ಅಜ್ಞಾತ ಕಾಯಿಲೆಗಳು ಕಾಡಬಹುದು ಮತ್ತು ನಿಮ್ಮನ್ನು ತೊಂದರೆಗೊಳಿಸಬಹುದು. ಗಾಯಗಳಾಗಬಹುದು.
ಅದೃಷ್ಟ ಬಣ್ಣ: ಗುಲಾಬಿ
ವೃಶ್ಚಿಕ
ಪ್ರೀತಿ: ತ್ರೀ ಆಫ್ ಸ್ವೋರ್ಡ್ಸ್
ಆರ್ಥಿಕತೆ: ನೈಟ್ ಆಫ್ ವಾಂಡ್ಸ್
ವೃತ್ತಿ: ಫೋರ್ ಆಫ್ ಕಪ್ಸ್
ಅರೋಗ್ಯ: ನೈಟ್ ಆಫ್ ಕಪ್ಸ್
ತ್ರೀ ಆಫ್ ಸ್ವೋರ್ಡ್ಸ್ ಈ ವಾರ ನಿಮ್ಮ ವೈಯಕ್ತಿಕ ಜೀವನ ಮತ್ತು ಪ್ರಣಯ ಸಂಬಂಧಗಳಲ್ಲಿ ಬಹಳಷ್ಟು ಏರಿಳಿತಗಳನ್ನು ಅನುಭವಿಸಬೇಕಾಗಬಹುದು ಎಂದು ಸೂಚಿಸುತ್ತದೆ. ನೀವು ನೋವಿನ ಪ್ರೇಮಭಗ್ನವನ್ನು ಎದುರಿಸಬೇಕಾಗಬಹುದು. ಬ್ರೇಕ್ ಅಪ್ ಆಗದಿದ್ದರೆ, ನೀವು ಸಾಕಷ್ಟು ಕೆಟ್ಟ ಜಗಳಗಳನ್ನು ಎದುರಿಸುವಿರಿ. ನೈಟ್ ಆಫ್ ವಾಂಡ್ಸ್ ನಿಮ್ಮ ಆರ್ಥಿಕತೆಯನ್ನು ಚೆನ್ನಾಗಿ ಉಳಿಸುವ ಮತ್ತು ನಿರ್ವಹಿಸುವ ಅಗತ್ಯತೆಯ ಕಡೆಗೆ ಸೂಚನೆ ನೀಡುತ್ತದೆ. ಈ ವಾರ ನಿಮಗೆ ಹಣ ಬರಬಹುದು ಆದರೆ, ನಿಮ್ಮ ಖರ್ಚಿಗೆ ಕಡಿವಾಣ ಹಾಕಬೇಕು. ವೃತ್ತಿ ರೀಡಿಂಗ್ ಫೋರ್ ಆಫ್ ಕಪ್ಸ್, ನಿಮ್ಮ ಕೆಲಸ ಅಥವಾ ವೃತ್ತಿಯು ನಿಮಗೆ ಈ ವಾರ ಅತೃಪ್ತಿಯನ್ನು ನೀಡುತ್ತದೆ ಎಂದು ಸೂಚಿಸುತ್ತದೆ. ನಿಮ್ಮ ವೃತ್ತಿ ಜೀವನದ ಉತ್ತಮ ಅಂಶಗಳನ್ನು ನಿರ್ಲಕ್ಷಿಸಬಹುದು ಏಕೆಂದರೆ ನೀವು ಇತರರ ಯಶಸ್ಸು, ಜೀವನ ಮತ್ತು ಸಾಧನೆಗಳ ಬಗ್ಗೆ ಅಸೂಯೆಪಡುತ್ತೀರಿ.ನೈಟ್ ಆಫ್ ಕಪ್ಸ್, ಅರೋಗ್ಯ ಕಾರ್ಡ್‌ನಂತೆ ಈ ವಾರ ನೀವು ಉತ್ತಮವಾಗಲು ಅಥವಾ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಳ್ಳಲು ಹೆಣಗಾಡುತ್ತಿದ್ದರೆ ವೈದ್ಯರು ಹಾಗೂ ನಿಮ್ಮ ಕುಟುಂಬ ಮತ್ತು ಸ್ನೇಹಿತರಿಂದ ಸರಿಯಾದ ಭಾವನಾತ್ಮಕ ಮತ್ತು ವೈದ್ಯಕೀಯ ಬೆಂಬಲವನ್ನು ಪಡೆಯುತ್ತೀರಿ ಎಂದು ಸೂಚಿಸುತ್ತದೆ.
ಅದೃಷ್ಟ ಬಣ್ಣ: ಗಾಢ ಕೆಂಪು
ಧನು
ಪ್ರೀತಿ: ಟು ಆಫ್ ಕಪ್ಸ್
ಆರ್ಥಿಕತೆ: ಫೈವ್ ಆಫ್ ಪೆಂಟಕಲ್ಸ್
ವೃತ್ತಿ: ನೈಟ್ ಆಫ್ ಸ್ವೋರ್ಡ್ಸ್
ಅರೋಗ್ಯ: ಕ್ವೀನ್ ಆಫ್ ಪೆಂಟಕಲ್ಸ್
ಧನು ರಾಶಿಯವರೇ, ನಿಮ್ಮ ಆತ್ಮ ಸಂಗಾತಿಯನ್ನು ಈ ವಾರ ನೀವು ಭೇಟಿ ಮಾಡಬಹುದು. ಟು ಆಫ್ ಕಪ್ಸ್ ಕಾರ್ಡ್ ರೊಮ್ಯಾಂಟಿಕ್ ಸಂಬಂಧಗಳನ್ನು ಮೀರಿದ ಯಾವುದೇ ಸಂಬಂಧದಲ್ಲಿ ಮೆಚ್ಚುಗೆ ಮತ್ತು ಶಾಂತಿಯ ಪ್ರತಿಫಲವನ್ನು ಸೂಚಿಸಬಹುದು. ಅದು ಇಬ್ಬರು ವ್ಯಕ್ತಿಗಳ ನಡುವಿನ ಪ್ರೀತಿಯ ಹರಿವನ್ನು ಪ್ರತಿನಿಧಿಸುತ್ತವೆ, ಸ್ನೇಹಿತರು, ಕುಟುಂಬ ಅಥವಾ ಪ್ರಣಯ ಸಂಗಾತಿಯಾಗಿರಬಹುದು.ಆರ್ಥಿಕ ರೀಡಿಂಗ್ ಫೈವ್ ಆಫ್ ಪೆಂಟಕಲ್ಸ್, ತೊಂದರೆಯ ಸಂಕೇತವಾಗಿದೆ ಏಕೆಂದರೆ ನೀವು ಎದುರಿಸಬಹುದಾದ ಸನ್ನಿಹಿತ ಆರ್ಥಿಕ ಬಿಕ್ಕಟ್ಟು ಅಥವಾ ದಿವಾಳಿತನದ ಬಗ್ಗೆ ಅದು ನಿಮಗೆ ಎಚ್ಚರಿಕೆ ನೀಡುತ್ತದೆ. ನೀವು ದೊಡ್ಡ ಆರ್ಥಿಕ ತೊಂದರೆಗೆ ಸಿಲುಕಬಹುದು. ದಯವಿಟ್ಟು ಉಳಿತಾಯವನ್ನು ಪ್ರಾರಂಭಿಸಿ ಮತ್ತು ನಿಮ್ಮ ಆರ್ಥಿಕತೆಯನ್ನು ಬಹಳ ಎಚ್ಚರಿಕೆಯಿಂದ ಯೋಜಿಸಿ. ನೈಟ್ ಆಫ್ ಸ್ವೋರ್ಡ್ಸ್, ವೃತ್ತಿಯಲ್ಲಿ ನೀವು ಹೊಸ ಕಾರ್ಯತಂತ್ರಗಳನ್ನು ತೆಗೆದುಕೊಂಡರೆ ಮತ್ತು ದೃಢವಾಗಿ ಇದ್ದರೆ ನಿಮ್ಮ ವೃತ್ತಿ ಚಟುವಟಿಕೆಗಳಲ್ಲಿ ನೀವು ಯಶಸ್ವಿಯಾಗುತ್ತೀರಿ ಎಂದು ಸೂಚಿಸುತ್ತದೆ. ಇದು ಕೆಲಸದ ಬದಲಾವಣೆ ಅಥವಾ ನಾಯಕತ್ವದ ಸ್ಥಾನವನ್ನು ಪಡೆದುಕೊಳ್ಳುವ ಅವಕಾಶವನ್ನು ಸಹ ಸೂಚಿಸುತ್ತದೆ. ಕ್ವೀನ್ ಆಫ್ ಪೆಂಟಕಲ್ಸ್, ಈ ವಾರ ನಿಮ್ಮ ಆರೋಗ್ಯ ಖಂಡಿತವಾಗಿಯೂ ಆರಾಮವಾಗಿದೆ ಎಂದು ಸೂಚಿಸುತ್ತದೆ. ಕೆಲವೊಮ್ಮೆ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯಿದ್ದರೂ ಒಟ್ಟಾರೆಯಾಗಿ ನೀವು ಆರೋಗ್ಯವಾಗಿರುತ್ತೀರಿ.
ಅದೃಷ್ಟ ಬಣ್ಣ: ಹಳದಿ
ಮಕರ
ಪ್ರೀತಿ: ಏಸ್ ಆಫ್ ಕಪ್ಸ್
ಆರ್ಥಿಕತೆ: ಕ್ವೀನ್ ಆಫ್ ಸ್ವೋರ್ಡ್ಸ್
ವೃತ್ತಿ: ದ ಹೈ ಪ್ರೀಸ್ಟೆಸ್
ಅರೋಗ್ಯ: ಟೂ ಆಫ್ ವಾಂಡ್ಸ್
ಪ್ರೀತಿ ರೀಡಿಂಗ್ ಏಸ್ ಆಫ್ ಕಪ್ಸ್ ಮಕರ ರಾಶಿಗಳನ್ನು ಸೆಳೆಯಲು ಅತ್ಯುತ್ತಮ ಕಾರ್ಡ್ ಆಗಿದೆ! ಇದು ಹೊಸ ಮತ್ತು ಸಂತೋಷದ ಆರಂಭವನ್ನು ಸೂಚಿಸುತ್ತದೆ. ಇದು ಪ್ರೀತಿ, ಅನ್ಯೋನ್ಯತೆ, ನಿಜವಾದ ಭಾವನೆಗಳು ಮತ್ತು ಸಹಾನುಭೂತಿಯನ್ನು ಪ್ರತಿನಿಧಿಸುತ್ತದೆ. ಈ ವಾರ ನೀವು ಹೊಸ ಮತ್ತು ಅರ್ಥಪೂರ್ಣ ಸಂಬಂಧಗಳು ಮತ್ತು ಸ್ನೇಹವನ್ನು ಅಭಿವೃದ್ಧಿಪಡಿಸುವುದನ್ನು ಕಾಣಬಹುದು, ಅದು ಬಹಳ ದೀರ್ಘಾವಧಿಗೆ ಹೋಗಬಹುದು. ಆರ್ಥಿಕ ರೀಡಿಂಗ್ ಕ್ವೀನ್ ಆಫ್ ಸ್ವೋರ್ಡ್ಸ್, ಈ ವಾರ ನೀವು ಕ್ಷುಲ್ಲಕ ವಿಷಯಗಳಿಗೆ ಖರ್ಚು ಮಾಡುವುದಿಲ್ಲ ಮತ್ತು ನಿಮ್ಮ ಹಣಕಾಸನ್ನು ಜಾಗ್ರತೆಯಿಂದ ನಿರ್ವಹಿಸುತ್ತೀರಿ ಎಂದು ಸೂಚಿಸುತ್ತದೆ. ಈ ವಾರ ನಿಮ್ಮ ಹಣಕಾಸಿನ ಯೋಜನೆಗೆ ನಿರ್ಣಾಯಕವಾಗಬಹುದು ಏಕೆಂದರೆ ಇದು ನಿಮ್ಮ ಭವಿಷ್ಯದ ವೆಚ್ಚಗಳಿಗೆ ನೀವು ಅಡಿಪಾಯ ಹಾಕುವ ಸಮಯ. ದ ಹೈ ಪ್ರೀಸ್ಟೆಸ್, ಈ ವಾರ ನಿಮ್ಮ ಕೆಲಸವನ್ನು ತೊರೆಯುವ ಬಗ್ಗೆ ಯೋಚಿಸಬಹುದು ಮತ್ತು ನಿಮ್ಮ ಉನ್ನತ ಶಿಕ್ಷಣವನ್ನು ಮುಂದುವರಿಸಲು ಯೋಜಿಸಬಹುದು ಎಂದು ಸೂಚಿಸುತ್ತದೆ. ಅಥವಾ ನಿಮ್ಮ ಉನ್ನತ ಶಿಕ್ಷಣವನ್ನು ಪ್ರಾರಂಭಿಸಲು ನೀವು ಕಾಯುತ್ತಿರುವ ದೃಢೀಕರಣವನ್ನು ನೀವು ಪಡೆಯಬಹುದು. ಅರೋಗ್ಯ ರೀಡಿಂಗ್ ಟೂ ಆಫ್ ವಾಂಡ್ಸ್, ನೀವು ಈಗ ಜಗತ್ತನ್ನು ಹೊಸ ಬೆಳಕಿನಲ್ಲಿ ನೋಡುತ್ತಿರುವಿರಿ ಎಂದು ಸೂಚಿಸುತ್ತದೆ. ಹೆಚ್ಚು ಸಕಾರಾತ್ಮಕತೆ ಇದೆ ನೀವು ನವ ಯೌವನ ಪಡೆಯುತ್ತೀರಿ.
ಅದೃಷ್ಟ ಬಣ್ಣ: ಕಪ್ಪು
ಇದನ್ನೂ ಓದಿ: ಇಂದಿನ ಅದೃಷ್ಟದ ಬಣ್ಣ!
ಕುಂಭ
ಪ್ರೀತಿ: ಟೆಂಪರೆನ್ಸ್
ಆರ್ಥಿಕತೆ: ಟೆನ್ ಆಫ್ ಪೆಂಟಕಲ್ಸ್
ವೃತ್ತಿ: ಏಸ್ ಆಫ್ ವಾಂಡ್ಸ್
ಅರೋಗ್ಯ: ದ ಎಂಪ್ರೆಸ್
ಪ್ರೀತಿ ರೀಡಿಂಗ್ ಟೆಂಪರೆನ್ಸ್ ಕಾರ್ಡ್, ಸಹಿಷ್ಣುತೆ, ಸಮತೋಲನ, ಸಹಾನುಭೂತಿ ಮತ್ತು ಪ್ರಣಯ ಸಂಬಂಧಗಳಲ್ಲಿ ಮಧ್ಯಮ ಮಾರ್ಗವನ್ನು ತೆಗೆದುಕೊಳ್ಳುವುದನ್ನು ಸೂಚಿಸುತ್ತದೆ. ಆದಾಗ್ಯೂ, ಈ ಕಾರ್ಡ್ ಎಚ್ಚರಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಭಾವನಾತ್ಮಕ ವಿಪರೀತಗಳ ಮೇಲೆ ತೇಲಾಡುವುದನ್ನು ತಡೆಯಲು ಸಲಹೆ ನೀಡುತ್ತದೆ. ಟೆನ್ ಆಫ್ ಪೆಂಟಕಲ್ಸ್ ನಿಮ್ಮೆಲ್ಲರಿಗೂ ಆರಾಮದಾಯಕ ಆರ್ಥಿಕ ಪರಿಸ್ಥಿತಿಯನ್ನು ಸೂಚಿಸುತ್ತದೆ. ಹಣ ತುಂಬಿ ತುಳುಕುತ್ತವೆ ಎಂದು ಅರ್ಥವಲ್ಲ ಆದರೆ ನೀವು ಸ್ಥಿರವಾದ ಆದಾಯವನ್ನು ಹೊಂದಿರುತ್ತೀರಿ ಮತ್ತು ನೀವು ಆರ್ಥಿಕವಾಗಿ ಸುರಕ್ಷಿತವಾಗಿರುತ್ತೀರಿ. ಏಸಸ್ ಯಾವಾಗಲೂ ಹೊಸದನ್ನು ಪ್ರಾರಂಭಿಸುವುದನ್ನು ಪ್ರತಿನಿಧಿಸುತ್ತದೆ. ಆದ್ದರಿಂದ, ವೃತ್ತಿ ರೀಡಿಂಗ್ ಏಸ್ ಆಫ್ ವಾಂಡ್ಸ್, ನಿಮ್ಮ ದಾರಿಯಲ್ಲಿ ಹೊಸ ಅವಕಾಶಗಳು ಅಥವಾ ಹೊಸ ಪಾತ್ರಗಳು ಬರುತ್ತಿವೆ ಎಂದು ಸೂಚಿಸುತ್ತದೆ. ನಿಮ್ಮ ವೃತ್ತಿಯು ಈ ತಿಂಗಳು ಖಂಡಿತವಾಗಿಯೂ ನಿಮ್ಮನ್ನು ಬೆಳವಣಿಗೆಯ ಹಾದಿಯಲ್ಲಿ ಕೊಂಡೊಯ್ಯುತ್ತದೆ.ಅರೋಗ್ಯ ರೀಡಿಂಗ್ ದ ಎಂಪ್ರೆಸ್, ನಿಮಗೆ ಉತ್ತಮ ಕಾರ್ಡ್ ಆಗಿದೆ ಏಕೆಂದರೆ ಇದು ವಾರವಿಡೀ ಉತ್ತಮ ಆರೋಗ್ಯದ ಬಗ್ಗೆ ಮಾತನಾಡುವುದಲ್ಲದೆ, ಕುಟುಂಬದಲ್ಲಿ ಮಗುವಿನ ಜನನದಂತಹ ಕೆಲವು ಒಳ್ಳೆಯ ಸುದ್ದಿಗಳ ಬಗ್ಗೆ ಮಾತನಾಡುತ್ತದೆ. ದ ಎಂಪ್ರೆಸ್ ಉತ್ತಮ ಆರೋಗ್ಯ ಹಂತಗಳನ್ನು ಸೂಚಿಸುತ್ತದೆ.
ಅದೃಷ್ಟ ಬಣ್ಣ: ನೇವಿ ಬ್ಲೂ
ಮೀನ
ಪ್ರೀತಿ: ದ ಸ್ಟಾರ್
ಆರ್ಥಿಕತೆ: ಟೂ ಆಫ್ ವಾಂಡ್ಸ್
ವೃತ್ತಿ: ದ ಚಾರಿಯೆಟ್
ಅರೋಗ್ಯ: ಎಯಿಟ್ ಆಫ್ ಸ್ವೋರ್ಡ್ಸ್
ದ ಸ್ಟಾರ್ ಎಂಬುದು ಮೀನ ರಾಶಿಯ ಸೂಚಕವಾಗಿದೆ, ನಿಮ್ಮ ಹಿಂದಿನ ಸಂಬಂಧಗಳ ಭಾರವನ್ನು ನೀವು ಬಿಡಬೇಕು ಮತ್ತು ನಿಮ್ಮ ದಾರಿಯಲ್ಲಿ ಬರುವ ಪ್ರೀತಿಯನ್ನು ಪೂರ್ಣ ಹೃದಯದಿಂದ ಮತ್ತು ಮುಕ್ತ ತೋಳುಗಳಿಂದ ಸ್ವಾಗತಿಸಬೇಕು ಎಂದು ಸಲಹೆ ನೀಡುತ್ತದೆ. ನೀವು ಕಣ್ಣಿಗೆ ಕಾಣುವುದಕ್ಕಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದ್ದೀರಿ ಅಥವಾ ನೀವು ನಿಮ್ಮ ಬಗ್ಗೆ ತಿಳಿದುಕೊಂಡಿರುವುದಕ್ಕಿಂತ ಹೆಚ್ಚಿನದನ್ನು ಹೊಂದಿದ್ದೀರಿ.ಈ ವಾರ ನಿಮ್ಮ ಆರ್ಥಿಕ ಭವಿಷ್ಯವನ್ನು ಸ್ಥಾಪಿಸಲು ನೀವು ಯೋಜಿಸುತ್ತಿರಬಹುದು ಎಂದು ಎಸ್ ಆಫ್ ವಾಂಡ್ಸ್ ಸೂಚಿಸುತ್ತದೆ. ನಿಮ್ಮ ನಿವೃತ್ತಿ ಯೋಜನೆಯನ್ನು ನೀವು ರೂಪಿಸಬಹುದು, ಉಳಿತಾಯ ಮಾಡಬಹುದು ಅಥವಾ ವ್ಯಾಪಾರವನ್ನು ಪ್ರಾರಂಭಿಸಲು ಉಳಿಸಬಹುದು. ವೃತ್ತಿ ರೀಡಿಂಗ್ ದ ಚಾರಿಯೆಟ್ ಸ್ವಾಗತಾರ್ಹ ಕಾರ್ಡ್ ಆಗಿದೆ. ಈ ವಾರ ನಿಮ್ಮ ವೃತ್ತಿಯು ವೇಗವನ್ನು ಪಡೆದುಕೊಳ್ಳುತ್ತದೆ, ನೀವು ವ್ಯಾಪಾರದ ಮಾಲೀಕರಾಗಿರಲಿ ಅಥವಾ ಸಾಮಾನ್ಯ ಉದ್ಯೋಗಿಯಾಗಿರಲಿ ಈ ವಾರ ನೀವು ಉತ್ತಮ ಅವಕಾಶಗಳನ್ನು ಪಡೆಯಬಹುದು. ವಿದೇಶ ಪ್ರಯಾಣವೂ ಸಾಧ್ಯ. ಒಳ್ಳೆಯ ದಿನಗಳು ಮುಂದೆ ಬರಲಿವೆ.ಎಯಿಟ್ ಆಫ್ ಸ್ವೋರ್ಡ್ಸ್, ನೀವು ಆತಂಕ, ವಿವರಿಸಲಾಗದ ಭಯ ಅಥವಾ ಸ್ವಯಂ ಅನುಮಾನಗಳಿಂದ ಬಳಲುತ್ತಿರುವಿರಿ ಎಂದು ಸೂಚಿಸುತ್ತದೆ. ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ. ಹತ್ತಿರವಿರುವ ಯಾರೊಂದಿಗಾದರೂ ಮನಬಿಚ್ಚಿ ಮಾತನಾಡಿ.
ಅದೃಷ್ಟ ಬಣ್ಣ: ಮಸ್ಟರ್ಡ್
ಜ್ಯೋತಿಷ್ಯ ಪರಿಹಾರಗಳು ಮತ್ತು ಸೇವೆಗಳಿಗಾಗಿ, ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್
ನಮ್ಮೊಂದಿಗೆ ಸಂಪರ್ಕದಲ್ಲಿರುವುದಕ್ಕಾಗಿ ಧನ್ಯವಾದಗಳು!
ಹೆಚ್ಚಾಗಿ ಕೇಳುವ ಪ್ರಶ್ನೆಗಳು
ಟ್ಯಾರೋ ರೀಡಿಂಗ್ ನಿಮಗೆ ಏನು ಹೇಳುತ್ತದೆ?
ಸಮಸ್ಯೆಯನ್ನು ಪರಿಗಣಿಸಲು, ಅದನ್ನು ಪರಿಹರಿಸಲು ಮತ್ತು ತೊಂದರೆಗಳು ಎಲ್ಲಿವೆ ಎಂದು ನೋಡಲು ಟ್ಯಾರೋ ನಿಮಗೆ ಸಹಾಯ ಮಾಡುತ್ತದೆ.
ಟ್ಯಾರೋದಲ್ಲಿ ಅತ್ಯಂತ ಪ್ರಬಲ ಕಾರ್ಡ್ ಯಾವುದು?
ದ ಫೂಲ್ ಅತ್ಯಂತ ಪ್ರಭಾವಶಾಲಿ, ಧನಾತ್ಮಕ ಮತ್ತು ಶಕ್ತಿಶಾಲಿ ಕಾರ್ಡ್. ಇದು ಶೂನ್ಯ ಸಂಖ್ಯೆ, ಇದು ಅನಂತ ಸಾಧ್ಯತೆಗಳನ್ನು ಮತ್ತು ಮಿತಿಯಿಲ್ಲದ ಸ್ವಾತಂತ್ರ್ಯವನ್ನು ಸಂಕೇತಿಸುತ್ತದೆ.
ಯಾವ ಟ್ಯಾರೋ ಕಾರ್ಡ್ ಪ್ರೀತಿಗೆ ಉತ್ತಮ?
ಮೊದಲ ದ ಲವರ್ಸ್ ಕಾರ್ಡ್, ಇಬ್ಬರ ನಡುವಿನ ಆಳವಾದ ಸಂಪರ್ಕ, ಆಕರ್ಷಣೆಯನ್ನು ಸಂಕೇತಿಸುತ್ತದೆ. ಎರಡನೆಯ ಕಾರ್ಡ್ ದಿ ಏಸ್ ಆಫ್ ಕಪ್ಸ್, ಪ್ರೀತಿ-ಭಾವನಾತ್ಮಕ ಅನುಭವಗಳಿಂದ ತುಂಬಿದ ಹೊಸ ಸಂಬಂಧದ ಆರಂಭವನ್ನು ಪ್ರತಿನಿಧಿಸುತ್ತದೆ.
ಮಹಿಳಾ ಕಾರ್ಡ್ ಯಾವುದು?
ಪ್ರಬಲ ಮಹಿಳಾ ಕಾರ್ಡ್ ದ ಹೈ ಪ್ರೀಸ್ಟೆಸ್, ದೈವಿಕ ಸ್ತ್ರೀಯ ಒಳಗಿನ ಶೇಖಿನಾ ಜೊತೆ ಗುರುತಿಸಲಾಗಿದೆ. ಸರಳವಾದ ನೀಲಿ ನಿಲುವಂಗಿ ಧರಿಸಿ, ಮಡಿಲಲ್ಲಿ ತನ್ನ ಕೈಗಳನ್ನು ಇಟ್ಟು ಕುಳಿತುಕೊಳ್ಳುತ್ತಾಳೆ.
Astrological services for accurate answers and better feature
Astrological remedies to get rid of your problems

AstroSage on MobileAll Mobile Apps
- Venus Transit In Mrigasira Nakshatra: Monetary Gains & Success For 3 Zodiacs!
- Mercury Retrograde July 2025: Unexpected Luck & Fortune For 4 Zodiac Signs!
- Mercury Transit In Cancer: Fortunate Or Unfortunate, Explore Now
- Mars Nakshatra Transit 2025: Stellar Surge Of Fortunes For 3 Zodiac Signs!
- Gajakesari Rajyoga 2025: A Powerful Alliance Of Jupiter & Moon In Gemini
- Yogini Ekadashi 2025: Date, Time, & Remedies!
- Numerology Weekly Horoscope: From June 22nd To 28th!
- Sun-Saturn Square Creates Kendra Yoga!
- Jupiter Transit in Ardra Nakshatra: Sudden Rise & Riches For 3 Lucky Zodiacs!
- 3 Key Planetary Transits In July 2025: Riches And Good Luck For 3 Zodiacs!
- शत्रु चंद्रमा की राशि में बुध का होगा गोचर, किन्हें रहना होगा सावधान और किन पर रहेंगे मेहरबान? जानें
- योगिनी एकादशी 2025 पर करें ये उपाय, मिलेगा सुख-समृद्धि और स्वास्थ्य लाभ का वरदान!
- साप्ताहिक अंक फल (22 जून से 28 जून, 2025): जानें इस सप्ताह किन जातकों को रहना होगा सावधान!
- टैरो साप्ताहिक राशिफल (22 से 28 जून, 2025): इस सप्ताह इन 4 राशियों पर किस्मत रहेगी मेहरबान!
- बुध का कर्क राशि में गोचर: मिथुन सहित इन 5 राशि के जातकों को मिलेगा तोहफा!
- जुलाई में हरियाली तीज और सावन से आएगी बहार, देखें विवाह का कोई मुहूर्त है या नहीं!
- बुध का कर्क राशि में गोचर: देश-दुनिया पर पड़ेगा प्रभाव!
- योगिनी एकादशी से सजा यह सप्ताह इन राशियों के लिए रहेगा बेहद शुभ, भगवान विष्णु का मिलेगा आशीर्वाद!
- मिथुन संक्रांति 2025 पर करें ये शुभ काम, मिलेगा पद-प्रतिष्ठा और धन लाभ!
- एक साल बाद ग्रहों के राजा मिथुन राशि में करेंगे प्रवेश, इन राशियों के होंगे अच्छे दिन शुरू!
- Horoscope 2025
- Rashifal 2025
- Calendar 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ராசி பலன் 2025
- రాశిఫలాలు 2025
- ರಾಶಿಭವಿಷ್ಯ 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025