ಸಿಂಹ ರಾಶಿಯಲ್ಲಿ ಮಂಗಳ ಸಂಚಾರ (20th July 2021 )

ಮಂಗಳ ಗ್ರಹವು ಚಲನಶೀಲತೆ ಮತ್ತು ಜೀವನದ ಶಕ್ತಿಯ ಅಂಶ ಗ್ರಹವೆಂದು ಪರಿಗಣಿಸಲಾಗಿದೆ ಮತ್ತು ಎಲ್ಲಾ ಗ್ರಹಗಳಲ್ಲಿ ಇದು ಯೋಧ ಮತ್ತು ಸೇನಾ ನಾಯಕನ ಸ್ಥಾನಮಾನವನ್ನು ಹೊಂದಿದೆ. ಜಾತಕದಲ್ಲಿ ಇದರ ಉತ್ತಮ ಸ್ಥಾನವು ವ್ಯಕ್ತಿಯನ್ನು ಯುವ ಶಕ್ತಿಯಿಂದ ತುಂಬುತ್ತದೆ ಮತ್ತು ಇದಲ್ಲದೆ ವಿಶೇಷವಾಗಿ ಅದು ಲಗ್ನದ ಮನೆಯಲ್ಲಿರುವಾಗ ಅದ್ಭುತ ಶಕ್ತಿಯನ್ನು ಒದಗಿಸುತ್ತದೆ.

ಆಸ್ಟ್ರೋಸೇಜ್ ವಾರ್ತಾ ಮೂಲಕ ಪ್ರಪಂಚದಾದ್ಯಂತದ ಜ್ಯೋತಿಷಿಗಳೊಂದಿಗೆ ಕರೆಯಲ್ಲಿ ಮಾತನಾಡಿ

ಮಂಗಳ ಗ್ರಹವನ್ನು ಪ್ರೀತಿಯಲ್ಲಿ ಪ್ರಣಯ ಮತ್ತು ಆಕರ್ಷಣೆಯನ್ನು ತರುವ ಭಾವೋದ್ರಿಕ್ತ ಪ್ರೇಮಿ ಎಂದು ಪರಿಗಣಿಸಲಾಗಿದೆ. ಅಗ್ನಿ ಮತ್ತು ಭೂಮಿಯ ಅಂಶ ಗ್ರಹ ಮಂಗಳ, ಸಂಪತ್ತಿನ ಮನೆಯಲ್ಲಿದ್ದಾಗ ಸಂಪತ್ತು ಮತ್ತು ಭೂಮಿಯನ್ನು ಒದಗಿಸುತ್ತದೆ. ಇದು ಮೂಳೆ ಮತ್ತು ರಕ್ತಕ್ಕೆ ಸಂಬಂಧಿಸಿದ ಎಂದು ಪರಿಗಣಿಸಲಾಗಿದೆ. ಆದ್ದರಿಂದ ವ್ಯಕ್ತಿಯ ಜಾತಕದಲ್ಲಿ ಇದು ಉತ್ತಮ ಸ್ಥಾನದಲ್ಲಿದ್ದರೆ, ವ್ಯಕ್ತಿಯನ್ನು ಉತ್ತಮ ಶಸ್ತ್ರಚಿಕಿತ್ಸಕರಾಗಲು ಪ್ರೇರೇಪಿಸಲಾಗುತ್ತದೆ. ಶನಿ ಸ್ವಾಮಿತ್ವದ ಮಕರ ರಾಶಿಯಲ್ಲಿ ಇದು ಉನ್ನತ ಸ್ಥಾನದಲ್ಲಿರುತ್ತದೆ ಮತ್ತು ಚಂದ್ರನ ಸ್ವಾಮಿತ್ವದ ಕರ್ಕ ರಾಶಿಯಲ್ಲಿ ದುರ್ಬಲವಾಗಿರುತ್ತದೆ. ಮಂಗಳ ಗ್ರಹವು 20 ಜೂಲೈ 2021 ರಂದು 17.21 ಸಿಂಹ ರಾಶಿಯಲ್ಲಿ ಪ್ರವೇಶಿಸಲಿದೆ. 6 ಸೆಪ್ಟೆಂಬರ್ 2021 ವರೆಗೆ ಸಿಂಹ ರಾಶಿಯಲ್ಲೇ ಉಳಿದಿರುತ್ತದೆ ಮತ್ತು 6 ಸೆಪ್ಟೆಂಬರ್ ರಂದು ಬೆಳಿಗ್ಗೆ 3.21 ಗಂಟೆಗೆ ಕನ್ಯಾ ರಾಶಿಗೆ ಪ್ರವೇಶಿಸುತ್ತದೆ.

ನಡೆಯಿರಿ ಎಲ್ಲಾ ಹನ್ನೆರಡು ರಾಶಿಗಳ ಮಂಗಳ ಸಂಚಾರದ ಪರಿಣಾಮದ ಬಗ್ಗೆ ತಿಳಿಯೋಣ.

ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ

मेष / ಮೇಷ ರಾಶಿ

ಮೇಷ ರಾಶಿಚಕ್ರದ ಸ್ಥಳೀಯರಿಗೆ ಮಂಗಳ ಗ್ರಹವು ಅವರ ಆತ್ಮ ಮತ್ತು ದೇಹದ ಮೊದಲನೇ ಮತ್ತು ಅನಿಶ್ಚಿತತೆಯ ಎಂಟನೇ ಮನೆಯ ಅಧಿಪತಿ. ಆದ್ದರಿಂದ ಮೇಷ ರಾಶಿಚಕ್ರದ ಸ್ಥಳೀಯರಿಗೆ ಇದು ಮುಖ್ಯವಾದ ಗ್ರಹವೆಂದು ಪರಿಗಣಿಸಲಾಗಿದೆ. ಇದು ಮೇಷ ರಾಶಿಚಕ್ರದ ಜನರ ಮನಸ್ಥಿತಿ ಮತ್ತು ದೈನಂದಿನದ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಸಮಯದಲ್ಲಿ ಮಂಗಳ ಸಂಚಾರವು ನಿಮ್ಮ ಅಧ್ಯಯನ, ಪ್ರೀತಿ ಮತ್ತು ಮಕ್ಕಳ ಐದನೇ ಮನೆಯಲ್ಲಿ ಸಂಭವಿಸಲಿದೆ. ಈ ಮನೆಯಲ್ಲಿ ಮಂಗಳ ಇರುವ ಕಾರಣದಿಂದಾಗಿ ನಿಮಗೆ ಸುಡುವಿಕೆ ಮತ್ತು ಆಮ್ಲೀಯಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಉದ್ಭವಿಸಬಹುದು. ನಿಮ್ಮ ಆರೋಗ್ಯದತ್ತ ಕಾಳಜಿವಹಿಸಲು ಮತ್ತು ತುಂಬಾ ಬಿಸಿ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸದಿರಲು ನಿಮಗೆ ಸೂಚಿಸಲಾಗಿದೆ. ಇಲ್ಲದಿದ್ದರೆ ನಿಮ್ಮ ಅರೋಗ್ಯ ಹದಗೆಡಬಹುದು. ಇದಲ್ಲದೆ ಈ ಸಮಯದಲ್ಲಿ ವಾಹನವನ್ನು ಚಲಾಯಿಸುವಾಗ ನೀವು ಜಾಗರೂಕರಾಗಿರಬೇಕು. ಮಂಗಳನ ನಾಲ್ಕನೇ ದೃಷ್ಟಿಯು ನಿಮ್ಮ ಎಂಟನೇ ಮನೆಯ ಮೇಲಿರುತ್ತದೆ. ಇದರಿಂದಾಗಿ ನೀವು ಅಪಘತಗಳ ಅಪಾಯಕ್ಕೆ ಒಳಗಾಗಬಹುದು. ಪ್ರೀತಿಯ ಸಂಬಂಧದಲ್ಲಿರುವ ಜನರು ಜಾಗರೂಕರಾಗಿರಿ. ಏಕೆಂದರೆ ನಿಮ್ಮ ತೀವ್ರವಾದ ಭಾವನೆಗಳು ಮತ್ತು ನಿಮ್ಮ ಕ್ರಿಯೆಗಳು ನಿಮ್ಮ ಅಸಮಾಧಾನಗೊಳಿಸಬಹುದು ಮತ್ತು ನಿಮ್ಮ ಪ್ರೀತಿಯ ಜೀವನದಲ್ಲಿ ನೀವು ತೊಂದರೆಕ್ಕೊಳಗಾಗಬಹುದು. ನಿಮ್ಮ ಆರ್ಥಿಕ ಜೀವನ ಉತ್ತಮವಾಗಿರುತ್ತದೆ ಮತ್ತು ನಿಮ್ಮ ಹನ್ನೊಂದನೇ ಮನೆಯ ಮಗಳನ ದೃಷ್ಟಿಯಿರುವ ಕಾರಣದಿಂದಾಗಿ ಅನಿರೀಕ್ಷಿತ ಮತ್ತು ಹಠಾತ್ ಲಾಭದ ಸಾಧ್ಯತೆ ಇದೆ. ಮೆಡಿಕಲ್ ಅಧ್ಯಯನದಲ್ಲಿ ತೊಡಗಿರುವ ಈ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿರುತ್ತದೆ. ನಿಮ್ಮ ವಿಷಯಗಳನ್ನು ತಿಳಿದುಕೊಳ್ಳುವ ನಿಮ್ಮ ಉತ್ಸಾಹ ಹೆಚ್ಚಾಗುತ್ತದೆ ಮತ್ತು ನಿಮ್ಮ ಪರೀಕ್ಷೆಗಳಲ್ಲಿ ನೀವು ಉತ್ತಮ ಪ್ರದರ್ಶನ ನೀಡಲು ನಿಮಗೆ ಸಾಧ್ಯವಾಗುತ್ತದೆ.

ಪರಿಹಾರ - ಮಂಗಳವಾರ ಉಪವಾಸ ಮಾಡುವುದು ನಿಮಗೆ ಉತ್ತಮ.

वृषभ / ವೃಷಭ ರಾಶಿ

ವೃಷಭ ರಾಶಿಚಕ್ರದ ಸ್ಥಳೀಯರಿಗೆ ಮಂಗಳ ಗ್ರಹವು ಹಾನಿ ಮತ್ತು ವಿದೇಶ ಪ್ರವಾಸಗಳ ಹನ್ನೆರಡನೇ ಮನೆಯ ಅಧಿಪತಿ ಮತ್ತು ಇದಲ್ಲದೆ ಇದು ನಿಮ್ಮ ಮದುವೆಯ ಏಳನೇ ಮನೆಯ ಅಧಿಪತಿ ಕೂಡ ಆಗಿದೆ. ಸಂಚಾರದ ಸಮಯದಲ್ಲಿ ಇದು ಕುಟುಂಬ ಮತ್ತು ನಾಲ್ಕನೇ ಮನೆಗೆ ಪ್ರವೇಶಿಸುತ್ತದೆ. ಈ ಮನೆಯಲ್ಲಿ ಮಂಗಳನ ಸ್ಥಾನವು ನಿಮ್ಮ ತಾಯಿಯ ಆರೋಗ್ಯಕ್ಕೆ ಉತ್ತಮವೆಂದು ಹೇಳಲಾಗುವುದಿಲ್ಲ. ಅವರ ಅರೋಗ್ಯ ಹದಗೆಡಬಹುದು, ನೀವು ನಿಯಮಿತವಾಗಿ ಅವರ ಟೆಸ್ಟ್ ಮಾಡಿಸಬೇಕು ಮತ್ತು ಅವರು ತಮ್ಮ ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕು. ಯಾವುದೇ ಆಸ್ತಿಯ ಮೇಲೆ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ಈ ಸಮಯ ಅನುಕೂಲಕರವಾಗಿದೆ. ಈ ಸಮಯದಲ್ಲಿ ನೀವು ಯಾವುದೇ ಉತ್ತಮ ವ್ಯವಹಾರವನ್ನು ಮಾಡುವಲ್ಲಿ ಯಶಸ್ವಿಯಾಗುತ್ತೀರಿ. ಇದಲ್ಲದೆ ಈ ಸಮಯವೂ ಆಸ್ತಿಯ ಮಾರಾಟ ಮಾಡಲು ಸಹ ಅನುಕೂಲಕರವಾಗಿದೆ. ಏಕೆಂದರೆ ನೀವು ಸಂಭಾವ್ಯ ಗ್ರಾಹಕರನ್ನು ಪಡೆಯುತ್ತೀರಿ. ಈ ಕಾರಣದಿಂದಾಗಿ ನೀವು ಉತ್ತಮ ವ್ಯವಹಾರಗಳನ್ನು ಪಡೆಯಬಹುದು.

ಈ ರಾಶಿಚಕ್ರದ ವಿವಾಹಿತರ ಜೀವನದಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು. ಆದಾಗ್ಯೂ, ವಾದ ಮತ್ತು ಜಗಳಗಳನ್ನು ತಪ್ಪಿಸಬೇಕು ಮತ್ತು ನಿಮ್ಮ ಜೀವನ ಸಂಗಾತಿಯ ಹಿತಾಸಕ್ತಗಳನ್ನು ಪರಿಗಣಿಸಿ ಅನುಕೂಲಕರವಾಗಿ ವರ್ತಿಸಬೇಕು. ಮಿಲಿಟರಿ ಸೇವೆಗಳಲ್ಲಿರುವವರು, ಪೊಲೀಸ್ ಸೇವೆಗಳು, ಎಂಜಿನೀಯರ್ಗಳು, ವೈದ್ಯರು, ಶಸ್ತ್ರ ಚಿಕಿತ್ಸಕರು ತಮ್ಮ ವೃತ್ತಿ ಜೀವನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ಪ್ರಗತಿಯ ಹಾದಿಯಲ್ಲಿ ಮುಂದುವರಿಯಬಹುದು. ಉದ್ಯೋಗಪರರ ಜೀವನವು ಸಮತೋಲಿತವಾಗಿರುತ್ತದೆ. ಆರ್ಥಿಕ ಜೀವನ ತುಂಬಾ ಉತ್ತಮವಾಗಿರುತ್ತದೆ ಎಂದು ಹೇಳಲಾಗುವುದಿಲ್ಲ. ಏಕೆಂದರೆ ನೀವು ನಿಮ್ಮ ಗಳಿಕೆಯ ಹೆಚ್ಚಿನ ಹಣವನ್ನು ನಿಮ್ಮ ಪ್ರೀತಿಪಾತ್ರರ ಅರೋಗ್ಯ ಮತ್ತು ಸುರಕ್ಷತೆಗಾಗಿ ಖರ್ಚು ಮಾಡುವಿರಿ. ಈ ಸಮಯದಲ್ಲಿ ನೀವು ವ್ಯಾಪಾರ ಪ್ರಯಾಣಕ್ಕೂ ಖರ್ಚು ಮಾಡಬಹುದು.

ಪರಿಹಾರ - ಪ್ರತಿದಿನ ಹನುಮಾನ್ ಚಾಲೀಸವನ್ನು ಪಠಿಸಿ.

मिथुन / ಮಿಥುನ ರಾಶಿ

ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಮಂಗಳ ಗ್ರಹವು ಸ್ಪರ್ಧೆ, ಸಾಲ ಮತ್ತು ರೋಗಗಳ ಆರನೇ ಮನೆಯ ಅಧಿಪತಿ ಮತ್ತು ಇದರೊಂದಿಗೆ ಆದಾಯ, ಲಾಭ ಮತ್ತು ಹಿರಿಯ ಸಹೋದರ ಸಹೋದರಿಯರ ಮೂರನೇ ಮನೆಯ ಅಧಿಪತಿ. ಸಂಚಾರದ ಸಮಯದಲ್ಲಿ ಮಂಗಳ ಗ್ರಹವು ನಿಮ್ಮ ಧೈರ್ಯ ಮತ್ತು ಕಿರಿಯ ಸಹೋದರ ಸಹೋದರಿಯರ ಮೂರನೇ ಮನೆಗೆ ಗೋಚರಿಸಲಿದೆ. ಈ ಮನೆಯಲ್ಲಿ ಮಂಗಳನ ಸ್ಥಾನವು ನಿಮಗೆ ಪೆಯೋಜನಕಾರಿಯಾಗಿದೆ. ಏಕೆಂದರೆ ನಿಮ್ಮ ಪ್ರತಿಯೊಂದು ಕೆಲಸವನ್ನು ಪೂರ್ಣಗೊಳಿಸಲು ಇದು ನಿಮಗೆ ಧೈರ್ಯ ಮತ್ತು ಶಕ್ತಿಯನ್ನು ಒದಗಿಸುತ್ತದೆ. ಉದ್ಯೋಗವನ್ನು ಹುಡುಕುತ್ತಿರುವ ಈ ರಾಶಿಚಕ್ರದ ಫೆಶರ್ಸ್ ಗೆ ಈ ಸಾಗಣೆಯಿಂದ ಲಾಭವಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ಅವರು ಉತ್ತಮ ಅವಕಾಶಗಳು ಮತ್ತು ಉದ್ಯೋಗಗಳ ಪ್ರಸ್ತಾಪವನ್ನು ಪಡೆಯುತ್ತಾರೆ ಮತ್ತು ನೀವು ನಿಮ್ಮ ಪ್ರಯತ್ನಗಳ ಮೂಲಕ ಅತ್ಯುತ್ತಮ ಉದ್ಯೋಗವನ್ನು ಪಡೆಯಲು ಸಾಧ್ಯವಾಗುತ್ತದೆ.

ಉದ್ಯೋಗವನ್ನು ಬದಲಾಯಿಸಲು ಪ್ರಯತ್ನಿಸುತ್ತಿರುವ ಜನರು ಸಹ ಈ ಸಮಯದಲ್ಲಿ ಯಾವುದೇ ಉದ್ಯೋಗವನ್ನು ಪಡೆಯಬಹುದು, ಈ ಸಮಯದಲ್ಲಿ ನಿಮ್ಮ ಕಾರ್ಯ ಕೌಶಲ್ಯ ಮತ್ತು ಚಲನಶೀಲತೆ ಅತ್ಯುತ್ತಮವಾಗಿರುತ್ತದೆ ಇದು ಸಂದರ್ಶನವನ್ನು ಭೇದಿಸಲು ನಿಮಗೆ ಸಹಾಯ ಮಾಡುತ್ತದೆ. ವರ್ಗಾವಣೆಯನ್ನು ಬಯಸುತ್ತಿದ್ದ ಜನರು ಸಹ ಈ ಸಮಯದಲ್ಲಿ ಸಂತೋಷದ ಸುದ್ಧಿಯನ್ನು ಪಡೆಯಬಹುದು ಮತ್ತು ಸಮಯ ಅನುಕೂಲಕರವಾಗಿರುತ್ತದೆ. ನಿಮ್ಮ ಕಿರಿಯ ಸಹೋದರ ಸಹೋದರಿಯರೊಂದಿಗಿನ ನಿಮ್ಮ ಸಂಬಂಧವು ತುಂಬಾ ಸೌಹಾರ್ದಯುತವಾಗಿರುವುದಿಲ್ಲ ಮತ್ತು ಅವರೊಂದಿಗೆ ನೀವು ಜಗಳ ಮಾಡಬಹುದು. ಈ ಸಮಯದಲ್ಲಿ ನಿಮ್ಮ ಸ್ವಭಾವವು ಸ್ನೇಹಪರವಾಗಿರುತ್ತದೆ ಮತ್ತು ನೀವು ಹೊಸ ಸ್ನೇಹಿತರನ್ನು ಮಾಡಬಹುದು. ನಿಮ್ಮ ಸ್ನೇಹಿತರು ಮತ್ತು ಪರಿಚಿತ ಜನರೊಂದಿಗೆ ನೀವು ಅಲ್ಪ ದೂರದ ಪ್ರಯಾಣಕ್ಕೂ ಹೋಗಬಹುದು.

ಪರಿಹಾರ - ಮಂಗಳವಾರ ಭಗವಂತ ಹನುಮಂತನಿಗೆ ಕುಂಕುಮ ಮತ್ತು ಕೆಂಪು ಬಟ್ಟೆಯನ್ನು ಅರ್ಪಿಸಿ.

कर्क / ಕರ್ಕ ರಾಶಿ

ಕರ್ಕ ರಾಶಿಚಕ್ರದ ಜನರಿಗೆ ಮಂಗಳ ಗ್ರಹವು ಯೋಗಕಾರಕ ಗ್ರಹವಾಗಿದೆ. ಇದು ಕರ್ಕ ರಾಶಿಚಕ್ರದ ಸ್ಥಳೀಯರ ಐದನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಹಣ, ಕುಟುಂಬ ಮತ್ತು ಧ್ವನಿಯ ಎರಡನೇ ಮನೆಗೆ ಗೋಚರಿಸುತ್ತದೆ. ಈ ಸಮಯದಲ್ಲಿ ನಿಮ್ಮ ಧ್ವನಿಯನ್ನು ನಿಯಂತ್ರಣದಲ್ಲಿಡಲು ನಿಮಗೆ ಸೂಚಿಯಿಸಲಾಗಿದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಧ್ವನಿಯಲ್ಲಿ ಆಕ್ರಮಣಶೀಲತೆ ಮತ್ತು ಅಸಭ್ಯತೆಯನ್ನು ಕಾಣಬಹುದು. ನಿಮ್ಮ ಕೋಪವು ಮನೆಯಲ್ಲಿ ಸಂಘರ್ಷವನ್ನು ತರಬಹುದು ಮತ್ತು ನಿಮ್ಮ ತಾಯಿಯೊಂದಿಗಿನ ನಿಮ್ಮ ಸಂಬಂಧವನ್ನು ಹದಗೆಡಿಸಬಹುದು. ಈ ಸಮಯವು ಸಮಾನ್ಯವಾಗಿ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರುತ್ತದೆ. ನಿಮ್ಮ ವಿಷಯಗಳತ್ತ ನೀವು ಒಲವು ಹೊಂದಿರುತ್ತೀರಿ ಮತ್ತು ಪೂರ್ಣ ಉತ್ಸಾಹ ಮತ್ತು ಸಮರ್ಪಣೆಯೊಂದಿಗೆ ಅಧ್ಯಯನ ಮಾಡುವಿರಿ. ಈ ರಾಶಿಚಕ್ರದ ಉದ್ಯೋಗಪರರಿಗೆ ಈ ಸಮಯ ಶುಭವಾಗಿರುತ್ತದೆ. ಈ ರಾಶಿಚಕ್ರದ ಕೆಲವು ಜನರು ತಮ್ಮ ಹವ್ಯಾಸವನ್ನು ತಮ್ಮ ವೃತ್ತಿಯಾಗಿ ಪರಿವರ್ತಿಸಬಹುದು. ಈ ಸಮಯ ನಿಮಗೆ ಅನೇಕ ಉತ್ತಮ ಅವಕಾಶಗಳನ್ನು ನೀಡುತ್ತದೆ, ಅವಿಗಳಲ್ಲಿ ನಿಮ್ಮ ಕೆಲಸದ ಸಾಮರ್ಥ್ಯವನ್ನು ತೋರಿಸುವ ಮೂಲಕ ನೀವು ಉತ್ತಮ ಹಣಕಾಸು ಗಳಿಸಬಹುದು. ವ್ಯಾಪಾರದಲ್ಲಿ ತೊಡಗಿರುವ ಜನರು ಸಹ ಉತ್ತಮ ಗಳಿಕೆಯನ್ನು ಪಡೆಯುವ ಸಾಧ್ಯತೆ ಇದೆ. ಏಕೆಂದರೆ ನಿಮ್ಮ ವ್ಯವಹಾರದ ಬಗ್ಗೆ ನೀವು ಉತ್ತಮ ತಿಳುವಳಿಕೆಯನ್ನು ಹೊಂದಿರುತ್ತೀರಿ ಮತ್ತು ನೀವು ಪ್ರಯೋಜನಕಾರಿ ಡೀಲ್ ಪಡೆಯಲು ಸಾಮರ್ಥ್ಯರಾಗಿರುತ್ತೀರಿ. ಈ ಸಮಯದಲ್ಲಿ ನಿಮ್ಮ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ನೀವು ಹೆಚ್ಚು ಶ್ರಮವಿಲ್ಲದೆ ನಿಮ್ಮ ಪ್ರಯತ್ನಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಸಹ ನೀವು ಇಷ್ಟಪಡುತ್ತೀರಿ

ಪರಿಹಾರ - ಭಾನುವಾರ ದೇವಸ್ಥಾನದಲ್ಲಿ ಕಿತ್ತಳೆ ಕಡ್ಲೆ ಬೇಳೆ ದಾನ ಮಾಡಿ.


ವೃತ್ತಿ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಯನ್ನು ನಿವಾರಿಸಲು ಈಗಲೇ ಆದೇಶಿಸಿ - ಕಾಗ್ನಿ ಆಸ್ಟ್ರೋ ರಿಪೋರ್ಟ್

सिंह / ಸಿಂಹ ರಾಶಿ

ಈ ಸಂಚಾರದ ಸಮಯದಲ್ಲಿ ಮಂಗಳ ಗ್ರಹವು ನಿಮ್ಮ ಮೊದಲನೇ ಮನೆಯಲ್ಲಿರುತ್ತದೆ. ಈ ಸಮಯದಲ್ಲಿ ನೀವು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ. ಆದರೆ ಅದು ಅತಿಯಾದ ಆತ್ಮವಿಶ್ವಾಸ ಮತ್ತು ಅಹಂಕಾರಕ್ಕೆ ತಿರುಗುವುದಿಲ್ಲ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ನೀವು ಬಲವಾದ ಮನೋಬಲವನ್ನು ಹೊಂದಿದ್ದೀರಿ, ಅದು ಸಾರ್ವಜನಿಕ ವ್ಯವಹಾರಗಳಲ್ಲಿ ಅನೇಕ ವಿಷಯಗಳನ್ನು ಸುಲಭಗೊಳಿಸುತ್ತದೆ. ಈ ಸಮಯದಲ್ಲಿ ನೀವು ರಾಜಮನೆತನದ ಜೀವನಶೈಲಿಯನ್ನು ಬದುಕಲು ಇಷ್ಟಪಡುತ್ತೀರಿ. ಪ್ರೀತಿಯ ಸಂಬಂಧದಲ್ಲಿರುವ ಈ ರಾಶಿಚಕ್ರದ ಜನರು ಈ ಸಮಯದಲ್ಲಿ ಹೆಚ್ಚುವರಿ ಬೋಲ್ಡ್ ಆಗಬಹುದು, ಆದರೆ ನಿಮ್ಮ ಸಂಗಾತಿಯ ವಿಷಯಗಳನ್ನು ಸಹ ನೀವು ಕೇಳುತ್ತೀರಿ ಎಂದು ಖಚಿತಪಡಿಸಿಕೊಳ್ಳಬೇಕು ಮತ್ತು ನಿಮ್ಮ ಜೀವನದಲ್ಲಿ ಅವರು ಬಹಳ ಮುಖ್ಯ ಎಂಬ ಭಾವನೆ ಅವರಿಗೆ ಮೂಡಿಸಿ. ವಿವಾಹಿತ ಜನರು ದಾಂಪತ್ಯ ಜೀವನದಲ್ಲಿ ಕೆಲವು ತಪ್ಪುಗ್ರಹಿಕೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ದಾಂಪತ್ಯ ಜೀವನದಲ್ಲಿನ ವಿಷಯಗಳನ್ನು ಶಾಂತಿಯಿಂದ ಪರಿಹರಿಸಲು ನೀವು ಪ್ರಯತ್ನಿಸಬೇಕು. ನಿಮ್ಮ ಜೀವನ ಸಂಗಾತಿಯನ್ನು ನಂಬುವ ಮತ್ತು ಅತಿಯಾದ ಅಧಿಕಾರವನ್ನು ತೋರಿಸುವುದನ್ನು ತಪ್ಪಿಸಲು ಸಲಹೆ ನೀಡಲಾಗಿದೆ. ನೀವು ಸರ್ಕಾರಿ ವಲಯ, ಆಡಳಿತ ಸೇವೆ ಅಥವಾ ಯಾವುದೇ ಅಧಿಕೃತ ಹುದ್ದೆಯಲ್ಲಿದ್ದಾರೆ, e ಅವಧಿಯಲ್ಲಿ ನೀವು ಯಶಸ್ಸು ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ಒತ್ತಡದ ಕಾರಣದಿಂದಾಗಿ ನೀವು ತಲೆನೋವಿನ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಇದರೊಂದಿಗೆ ಕೆಲವು ಜನರಿಗೆ ಆಮ್ಲೀಯತೆಯ ಸಮಸ್ಯೆಯೂ ಇರಬಹುದು.

ಪರಿಹಾರ ಪ್ರತಿದಿನ ನಿಯಮಿತವಾಗಿ ಸೂರ್ಯ ದೇವರಿಗೆ ನೀರು ಅರ್ಪಿಸಿ.

कन्या / ಕನ್ಯಾ ರಾಶಿ

ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಮಂಗಳ ಸಂಚಾರವು ಅವರ ಹನ್ನೆರಡನೇಅನೆಯಲ್ಲಿ ಸಂಭವಿಸುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ಈ ರಾಶಿಚಕ್ರದ ವ್ಯಾಪಾರಸ್ಥರು ಮತ್ತು ಉದ್ಯೋಗದಾತರು e ಸಂಚಾರದ ಸಮಯದಲ್ಲಿ ಆರ್ಥಿಕ ಲಾಭವನ್ನು ನಿರೀಕ್ಷಿಸಬಹುದು ಮತ್ತು ಅನೇಕ ಮೂಲಗಳಿಂದ ಹಣವನ್ನು ಪಡೆಯಬಹುದು. ಈ ಸಮಯ ನಿಮಗೆ ಖ್ಯಾತಿಯನ್ನು ತರುತ್ತದೆ ಮತ್ತು ಸಮಾಜದಲ್ಲಿ ನಿಮ್ಮ ಸ್ಥಾನಮಾನವನ್ನು ಹೆಚ್ಚಿಸುತ್ತದೆ. ಆದಾಗ್ಯೂ, e ಸಮಯದಲ್ಲಿ ನೀವು ಅತಿಯಾದ ಒತ್ತಡಕ್ಕೆ ಒಳಗಾಗಬಹುದು ಮತ್ತು ನಿಮ್ಮ ನಿದ್ರೆಗೆ ತೊಂದರೆಯಾಗಬಹುದು. ನೀವು ಕೆಲವು ಅನಿರೀಕ್ಷಿತ ವೆಚ್ಚಗಳನ್ನು ನೋಡಬಹುದು, ಅದು ಆರ್ಥಿಕವಾಗಿ ನಿಮ್ಮನ್ನು ಅಸ್ಥಿರಗೊಳಿಸುತ್ತದೆ. ಆದ್ದರಿಂದ ನಿಮ್ಮ ವೆಚ್ಚಗಳತ್ತ ಗಮನ ಹರಿಸಲು ನಿಮಗೆ ಸಲಹೆ ನೀಡಲಾಗಿದೆ ಮತ್ತು ಸರಿಯಾದ ಬಜೆಟ್ಟನ್ನು ಯೋಜಿಸಿ. ನೀವು ವಿದೇಶದಲ್ಲಿ ವಾಸಿಸಲು ಯೋಜಿಸುತ್ತಿದ್ದರೆ, ಈ ಸಮಯವು ನಿಮಗೆ ಅದೃಷ್ಟಶಾಲಿ ಎಂದು ಪರಿಗಣಿಸಲಾಗುವುದಿಲ್ಲ. ಇದಲ್ಲದೆ ನೀವು ಈಗಾಗಲೇ ವಿದೇಶದಲ್ಲಿ ಕೆಲಸ ಮಾಡುತ್ತಿದ್ದರೆ, ನೀವು ಕೆಲವು ಸಂಘರ್ಷಗಳನ್ನು ಎದುರಿಸಬೇಕಾಗುತ್ತದೆ. ಯಾವುದೇ ಅಪಘಾತ ಅಥವಾ ದೈಹಿಕ ಗಾಯವನ್ನು ತಪ್ಪಿಸಲು ನೀವು ತುಂಬಾ ಜಾಗರೂಕರಾಗಿರಬೇಕು. ವಿವಾಹಿತ ಜನರ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ವಿವಾದ ಮಾಡಬಹುದು. ಇದನ್ನು ತಪ್ಪಿಸಲು ನೀವು ಪ್ರಯತ್ನಿಸಬೇಕು.

ಪರಿಹಾರ - ಮಂಗಳವಾರ ತಾಮ್ರದ ಪಾತ್ರವನ್ನು ದಾನ ಮಾಡುವುದು ನಿಮಗೆ ಉತ್ತಮ.


ರಾಜ ಯೋಗ ರಿಪೋರ್ಟ್ ಮೂಲಕ ನಿಮ್ಮ ಅದೃಷ್ಟ ಮತ್ತು ಜೀವನದಲ್ಲಿ ಸಂತೋಷ ಯಾವಾಗ ಬರುತ್ತದೆ ಎಂದು ತಿಳಿಯಿರಿ

तुला / ತುಲಾ ರಾಶಿ

ಮಂಗಳ ತನ್ನ ಪ್ರಸ್ತುತ ಸಂಚಾರದ ಸ್ಥಿತಿಯಲ್ಲಿ ನಿಮ್ಮ ಹನ್ನೊಂದನೇ ಮನೆಗೆ ನೆಲೆಗೊಳ್ಳುತ್ತದೆ. ಈ ಮನೆಯಲ್ಲಿ ಮಂಗಳನ ಸ್ಥಾನವು ನಿಮಗೆ ಬಲವಾದ ಶಕ್ತಿಯನ್ನು ನೀಡುತ್ತದೆ. ಈ ಸಮಯದಲ್ಲಿ ಸವಾಲುಗಳಿಂದ ತುಂಬಿರುವ ಕೆಲಸಗಳನ್ನು ನೀವು ಬಹಳ ಸಲುಭವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಯಶಸ್ಸು ಪಡೆಯಲು ನೀವು ಕಠಿಣ ಪರಿಶ್ರಮ ಮಾಡುವಿರಿ. ನೀವು ಹಣಕಾಸು ಸಂಗ್ರಹಿಸುವಲ್ಲೂ ಯಶಸ್ವಿಯಾಗುತ್ತೀರಿ. ಈ ಸಮಯದಲ್ಲಿ ನಿಮ್ಮ ಕುಟುಂಬ ಮತ್ತು ಸ್ನೇಹಿತರ ಬೆಂಬಲವನ್ನು ನೀವು ಪಡೆಯುತ್ತೀರಿ. ನೀವು ಕ್ರೀಡಾಪಟುವಾಗಿದ್ದರೆ, ಈ ಸಮಯದಲ್ಲಿ ನೀವು ಎತ್ತರವನ್ನು ಮುಟ್ಟಬಹುದು. ಈ ಸಮಯದಲ್ಲಿ ನೀವು ದೇಶೀಯ ವಸ್ತುಗಳಿಗೆ ಮತ್ತು ಕುಟುಂಬಕ್ಕೆ ಅನುಕೂಲಕರವಾದ ವಿಸ್ತುಗಳ ಮೇಲೆ ಖರ್ಚು ಮಾಡಬಹುದು. ಪ್ರೀತಿಯ ಸಂಬಂಧದಲ್ಲಿರುವ ಈ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ತಮ್ಮ ಪ್ರೀತಿಪಾತ್ರರೊಂದಿಗೆ ಜಗಳ ಮಾಡಬಹುದು. ಪ್ರೀತಿಪಾತ್ರರೊಂದಿಗೆ ಯಾವುದೇ ವಾದಕ್ಕೆ ಇಳಿಯುವುದನ್ನು ನೀವು ತಪ್ಪಿಸಬೇಕು ಮತ್ತು ಸಂಬಂಧವನ್ನು ಕಾಪಾಡಿಕೊಳ್ಳಲು ಪ್ರತಿಯೊಂದು ಪರಿಸ್ಥಿತಿಯನ್ನು ಶಾಂತಿಯುತವಾಗಿ ಪರಿಹರಿಸಬೇಕು. ಪ್ರೀತಿಯ ಸಂಬಂಧದಲ್ಲಿರುವ ಕಾರಣದಿಂದಾಗಿ ನಿಮ್ಮ ಪ್ರೇಮಿಯನ್ನು ಮದೆವೆಗಾಗಿ ಪ್ರಸ್ತಾಪಿಸಲು ಬಯಸುತ್ತಿದ್ದರೆ, ಇದು ಉತ್ತಮ ಸಮಯ. ಹನ್ನೊಂದನೇ ಮನೆಯಲ್ಲಿ ಕುಳಿತಿರುವ ಮಂಗಳನ ದೃಷ್ಟಿ, ನಿಮ್ಮ ಧ್ವನಿಯ ಎರಡನೇ ಮನೆಯ ಮೇಲೆ ಇರುತ್ತದೆ. ಆದ್ದರಿಂದ ಈ ಸಮಯದಲ್ಲಿ ಮಾತನಾಡುವಾಗ ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕು. ಈ ಸಮಯದಲ್ಲಿ ನಿಮ್ಮ ಧ್ವನಿಯಲ್ಲಿ ಕಠೋರತೆ ಇರಬಹುದು ಮತ್ತು ಇದರಿಂದಾಗಿ ಇನ್ನೊಬರ ಹೃದಯವನ್ನು ನೋಯಿಸಬಹುದು.

ಪರಿಹಾರ - ನಿಮ್ಮ ಸಹೋದರ ಸಹೋದರಿಯರಿಗೆ ಉಪಹಾರ ಮತ್ತು ಸಿಹಿ ತಿಂಡಿಯನ್ನು ಉಡುಗೊರೆಯಾಗಿ ನೀಡುವುದು ನಿಮಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ.

वृश्चिक / ವೃಶ್ಚಿಕ ರಾಶಿ

ಸಂಚಾರದ ಸಮಯದಲ್ಲಿನ ಮಂಗಳ ದೇವ ವೃಶ್ಚಿಕ ರಾಶಿಚಕ್ರದ ಸ್ಥಳೀಯರ ಹತ್ತನೇ ಮನೆಗೆ ಗೋಚರಿಸುತ್ತಾರೆ. ಸರ್ಕಾರಿ ಉದ್ಯೋಗದಲ್ಲಿ ಕಾರ್ಯನಿರತರಾಗಿರುವ ಜನರಿಗೆ ಈ ಸಮಯ ಯಶಸ್ಸು ತರುತ್ತದೆ. ಈ ಸಮಯದಲ್ಲಿ ನೀವು ಏನು ಮಾಡಿದರೂ ಅದು ನಿಯಮಗಳು ಮತ್ತು ಕಾನೂನಿನ ಪ್ರಕಾರ ಇರಬೇಕು ಎಂದು ನಿಮಗೆ ಸಲಹೆ ನೀಡಲಾಗಿದೆ. ನೀವು ಕಾನೂನು ಕಾನೂನಿನ ಪ್ರಕಾರ ನಡೆದುಕೊಂಡರೆ, ಸಮಾಜದಲ್ಲಿಯೂ ನೀವು ಗೌರವವನ್ನು ಪಡೆಯುತ್ತೀರಿ. ನೀವು ಆತ್ಮವಿಶ್ವಾಸದಿಂದ ಕೂಡಿರುತ್ತೀರಿ ಮತ್ತು ನಿಮ್ಮ ವ್ಯಕ್ತಿತ್ವ ಬಲವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ನಿರ್ವಹಣಾ ಸಾಮರ್ಥ್ಯಗಳನ್ನು ಎಲ್ಲರಿಂದಲೂ ಪ್ರಶಂಸಿಸಲಾಗುತ್ತದೆ. ನಿಮ್ಮ ಧ್ವನಿ ದೃಢವಾಗಿರುತ್ತದೆ ಮತ್ತು ಜನರು ನಿಮ್ಮ ಮಾತುಗಳನ್ನು ಕೇಳುತ್ತಾರೆ ಮತ್ತು ಅವುಗಳನ್ನು ಗೌರವಿಸುತ್ತಾರೆ. ಆದಾಗ್ಯೂ, ನೀವು ಕಚೇರಿ ರಾಜಕಾರಣದಲ್ಲಿ ಪಾಲ್ಗೊಳ್ಳದಂತೆ ನಿಮಗೆ ಸಲಹೆ ನೀಡಲಾಗಿದೆ. ಏಕೆಂದರೆ ಇದು ಕೆಲಸದಲ್ಲಿ ನಿಮ್ಮ ಪ್ರಗತಿಗೆ ಅಡ್ಡಿಯಾಗಬಹುದು. ಈ ಸಛರಾಉ ನಿಮ್ಮ ತಾಯಿಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುವುದಿಲ್ಲ. ಈ ಸಮಯದಲ್ಲಿ ನೀವು ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಮತ್ತು ಅಗತ್ಯವಿದ್ದರೆ ಯಾವುದೇ ಉತ್ತಮ ವೈದ್ಯರ ಬಳಿಗೆ ಕರೆದೊಯ್ಯಿರಿ. ನಿಮ್ಮ ಕುಟುಂಬದ ಎಲ್ಲರ ನಡುವೆ ಸಾಮರಸ್ಯ ಇರುತ್ತದೆ ಮತ್ತು ವಿವಾಹಿತ ಜನರು ತಮ್ಮ ಜೀವನ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತಾರೆ. ನಿಮ್ಮ ಕುಟುಂಬದಲ್ಲಿ ನೀವು ಜವಾಬ್ದಾರಿಯುತರಾಗಿ ವರ್ತಿಸುತ್ತೀರಿ ಮತ್ತು ಎಲ್ಲರೂ ನಿಮ್ಮನ್ನು ನಂಬುತ್ತಾರೆ.

ಪರಿಹಾರ - ಪ್ರತಿದಿನ ದೇವಸ್ಥಾನಕ್ಕೆ ಹೋಗಿ ಹನುಮಂತ ದೇವರ ಆಶೀರ್ವಾದವನ್ನು ಪಡೆಯಿರಿ.


ವೃತ್ತಿ ಜೀವನಕ್ಕೆ ಸಂಬಂಧಿಸಿದ ಪ್ರತಿ ಸಮಸ್ಯೆಯನ್ನು ಪರಿಹರಿಸಲು ಈಗಲೇ ಆದೇಶಿಸಿ - ಕಾಗ್ನಿ ಆಸ್ಟ್ರೋ ರಿಪೋರ್ಟ್

धनु / ಧನು ರಾಶಿ

ಧನು ರಾಶಿಚಕ್ರದ ಸ್ಥಳೀಯರಿಗೆ ಮಂಗಳ ಗ್ರಹವು ವಿದೇಶ ಮತ್ತು ನಷ್ಟದ ಹನ್ನೆರಡನೇ ಮತ್ತು ಮನರಂಜನೆ, ಶಿಕ್ಷಣ ಇತ್ಯಾದಿಯ ಐದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಮಂಗಳ ದೇವ ನಿಮ್ಮ ಒಂಬತ್ತನೇ ಮನೆಗೆ ಸಾಗುತ್ತಾರೆ. ಈ ಸಂಚಾರದ ಸಮಯದಲ್ಲಿ ನೀವು ಪ್ರಯಾಣಿಸಬಹುದು. ನೀವು ಧಾರ್ಮಿಕ ಸ್ಟಳಗಳಿಗೆ ಹೋಗಬಹುದು ಅಥವಾ ಯಾವುದೇ ತೀರ್ಥ ಯಾತ್ರೆಗೂ ಹೋಗಬಹುದು. ವಿದ್ವಂಸರು ಮತ್ತು ಶಿಕ್ಷಕರಿಗೆ ಅನುಕೂಲಕರ ಅವಧಿ ಇರುತ್ತದೆ. ಈ ಸಮಯದಲ್ಲಿ ನಿಮ್ಮ ಜ್ಞಾನವನ್ನು ನೀವು ಹೆಚ್ಚಿಸಬಹುದು. ಇದಲ್ಲದೆ ಉನ್ನತ ಶಿಕ್ಷಣ ಪಡೆಯಲು ಯೋಜಿಸುತ್ತಿದ್ದ ಜನರು ಈ ಸಮಯವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಏಕೆಂದರೆ ಅದೃಷ್ಟ ನಿಮ್ಮನ್ನು ಬೆಂಬಲಿಸುತ್ತದೆ ಮತ್ತು ನಿಮ್ಮ ಕನಸುಗಳನ್ನು ಪೂರ್ಣಗೊಳಿಸಬಹುದು. ಈ ಸಮಯದಲ್ಲಿ ಉತ್ತಮ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯಬಹುದು. ಈ ಸಮಯದಲ್ಲಿ ನೀವು ನಿಮ್ಮ ತಂದೆ ಮತ್ತು ಗುರುಗಳೊಂದಿಗಿನ ಸಂಬಂಧದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಅವರೊಂದಿಗೆ ಯಾವುದೇ ರೀತಿಯ ತಪ್ಪು ಚರ್ಚೆ ಅಥವಾ ಸಂಭಾಷಣೆ ನಡೆಸಬೇಡಿ ಎಂದು ಸಲಹೆ ನೀಡಲಾಗಿದೆ. ಈ ಸಂಚಾರದ ಸಮಯದಲ್ಲಿ ನೀವು ಶಾಸ್ತ್ರಗಳು ಮತ್ತು ಪೌರಾಣಿಕ ವಿಷಯಗಳನ್ನು ಓದಲು ಆಸಕ್ತಿ ವಹಿಸಬಹುದು. ಕಾಲೇಜು ಅಥವಾ ಕೆಲಸದ ಸ್ಥಳದಲ್ಲಿ ನಿಮ್ಮ ಯೋಜನೆಗಳನ್ನು ಪೂರ್ಣಗಳಿಸುವಲ್ಲಿ ನಿಮ್ಮ ಕಿರಿಯ ಸಹೋದರ ಸಹೋದರಿಯರು ನಿಮಗೆ ಸಹಾಯ ಮಾಡುತ್ತಾರೆ. ಪ್ರೀತಿಯ ಸಂಬಂಧದಲ್ಲಿರುವ ಜನರು ತಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯಾವನ್ನುಂ ಕಳೆಯುತ್ತಾರೆ ಮತ್ತು ಸಂಗಾತಿಯತ್ತ ಆಕರ್ಷಣೆಯನ್ನು ಅನುಭವಿಸುತ್ತಾರೆ ಮತ್ತು ಪ್ರೀತಿಯ ಭಾವನೆಗಳು ತೀವ್ರವಾಗಿರುತ್ತವೆ. ನಿಮ್ಮ ಸಂಬಂಧವನ್ನು ಮುಂದಿನ ಮಟ್ಟಕ್ಕೆ ಕೊಂಡೊಯ್ಯಲು ಮತ್ತು ನಿಮ್ಮ ಸಂಗಾತಿಯನ್ನು ಕುಟುಂಬದೊಂದಿಗೆ ಪರಿಚಯಿಸಲು ಸಹ ಯೋಜಿಸಬಹುದು.

ಪರಿಹಾರ - ಯಾವುದೇ ಪ್ರಮುಖ ಕಾರ್ಯಕ್ಕೆ ಹೋಗುವ ಮೊದಲು ನಿಮ್ಮ ಗುರು, ತಂದೆ ಮತ್ತು ಹಿರಿಯರ ಆಶೀರ್ವಾದವನ್ನು ಪಡೆಯಿರಿ.

मकर / ಮಕರ ರಾಶಿ

ಮಕರ ರಾಶಿಯಲ್ಲಿ ಮಂಗಳ ಗ್ರಹವು ಉತ್ತಮ ಸ್ಥಾನದಲ್ಲಿರುತ್ತದೆ. ಅಂದರೆ ಮಕರ ರಾಶಿಚಕ್ರದ ಸ್ಥಳೀಯರ ಜೀವನದಲ್ಲಿ ಮಂಗಳ ಸಂಚಾರವು ಕೆಲವು ಪ್ರಮುಖ ಬದಲಾವಣೆಗಳನ್ನು ತರುತ್ತದೆ ಎಂದು ಅರ್ಥ. ಮಂಗಳ ಗ್ರಹವು ನಿಮ್ಮ ದೇಶಿಯ ಸಂಪನ್ಮೂಲಗಳ ನಾಲ್ಕನೇ ಮನೆ ಮತ್ತು ಲಾಭದ ಹನ್ನೊಂದನೇ ಮನೆಯ ಅಧಿಪತಿ. ಮಂಗಳನ ಈ ಸಂಚಾರವು ನಿಮ್ಮ ಎಂಟನೇ ಮನೆಯಲ್ಲಿ ಸಂಭವಿಸಲಿದೆ. ಮಂಗಳ ಸಂಚಾರವು ಮಕರ ರಾಶಿಚಕ್ರದ ಸ್ಥಳೀಯರ ಆರೋಗ್ಯಕ್ಕೆ ಉತ್ತಮವೆಂದು ಹೇಳಲಾಗುವುದಿಲ್ಲ. ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಮತ್ತು ರಸ್ತೆಯಲ್ಲಿ ನಡೆಯುವಾಗ ಅಥವಾ ಚಾಲನೆ ಮಾಡುವಾಗ ಜಾಗರೂಕರಾಗಿರಿ ಎಂದು ಸಲಹೆ ನೀಡಲಾಗಿದೆ, ಏಕೆಂದರೆ ನೀವು ಅಪಘಾತಕ್ಕೆ ಬಲಿಯಾಗಬಹುದು. ಯಾವುದೇ ವಾಹನವನ್ನು ಖರೀದಿಸಲು ಯೋಜಿಸುತ್ತಿದ್ದರೆ, ಸ್ವಲ್ಪ ಸಮಯಕ್ಕೆ ನಿಲ್ಲಿಸಿ. ಏಕೆಂದರೆ ಈ ಸಮಯ ನಿಯಂಗೆ ಅನುಕೂಲಕರವಾಗಿಲ್ಲ. ನಿಮ್ಮ ಕುಟುಂಬ ಜೀವನದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಅಥವಾ ಯಾವುದೇ ರೀತಿಯ ಜಗಳದಲ್ಲಿ ಬೀಳುವುದನ್ನು ತಪ್ಪಿಸಬೇಕು. ಏಕೆಂದರೆ ಜಗಳವು ಹಿಂಸೆಯಾಗಿ ಬದಲಾಗಬಹುದು. ಈ ಸಮಯದಲ್ಲಿ ನಿಮ್ಮ ಆದಾಯದಲ್ಲಿ ಹಠಾತ್ ಹೆಚ್ಚಳವಾಗುವುದರಿಂದ ನಿಮಗೆ ಲಾಭವಾಗಬಹುದು. ಈ ಸಮಯದಲ್ಲಿ ಹೊಸ ಸ್ನೇಹಿತರನ್ನು ಮಾಡುವಾಗ ನೀವು ಜಾಗರೂಕರಾಗಿರಬೇಕು. ಏಕೆಂದರೆ ಅವರು ನಿಮ್ಮ ವಿರುದ್ಧ ಪಿತೂರಿ ರಚಿಸಬಹುದು. ನಿಮ್ಮ ವ್ಯಾಪಾರ ಯೋಜನೆಗಳು ಮತ್ತು ವ್ಯವಹಾರಗಳ ಬಗ್ಗೆ ಈ ಸಮಯದಲ್ಲಿ ಯಾರಿಗೂ ಹೇಳಬೇಡಿ. ಏಕೆಂದರೆ ಪ್ರತಿಸ್ಪರ್ಧಿಗಳು ನಿಮ್ಮನ್ನು ಗಮನಿಸುತ್ತಿರುವುದರಿಂದ ಅವರು ನಿಮ್ಮ ಆಲೋಚನೆಗಳನ್ನು ಕದಿಯಬಹುದು.

ಪರಿಹಾರ - ಮಂಗಳವಾರ ಹನುಮಂತ ದೇವರಿಗೆ ಕಡ್ಲೆ ಹಿಟ್ಟಿನ ಸಿಹಿತಿಂಡಿಯನ್ನು ಅರ್ಪಿಸಿ.


ಶನಿ ರಿಪೋರ್ಟ್ ಮೂಲಕ ನಿಮ್ಮ ಜೀವನದ ಮೇಲೆ ಶನಿ ದೇವರ ಪರಿಣಾಮ ಏನು ಎಂದು ತಿಳಿದುಕೊಳ್ಳಿ

कुंभ / ಕುಂಭ ರಾಶಿ

ಮಂಗಳ ಗ್ರಹವು ನಿಮ್ಮ ಧೈರ್ಯದ ಮೂರನೇ ಮತ್ತು ವೃತ್ತಿ ಜೀವನದ ಹತ್ತನೇ ಮನೆಯ ಅಧಿಪತಿ. ಇದು ನಿಮ್ಮ ಪಾಲುದಾರಿಕೆ, ವ್ಯಾಪಾರ ಮತ್ತು ದಾಂಪತ್ಯ ಜೀವನದ ಏಳನೇ ಮನೆಗೆ ಗೋಚರಿಸುತ್ತದೆ. ಈ ಸಮಯದಲ್ಲಿ ವ್ಯಾಪಾರಸ್ಥರ ಉದ್ಯಮ ವಿಸ್ತರಿಸಲಿದೆ. ನೀವು ನಿಮ್ಮ ಆಯಾ ಉದ್ಯಮದಲ್ಲಿ ನೀವು ಖ್ಯಾತಿಯನ್ನು ಪಡೆಯುತ್ತೀರಿ ಮತ್ತು ಗ್ರಾಹಕರ ಹೃದಯವನ್ನು ಗೆಲ್ಲಲು ಸಾಧ್ಯವಾಗುತ್ತದೆ. ಈ ರೀತಿ ನಿಮ್ಮ ಸಂಪನ್ಮೂಲಗಳು ವಿಸ್ತರಿಸುತ್ತವೆ ಮತ್ತು ವ್ಯವಹಾರವು ಬೆಳೆಯುತ್ತದೆ. ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಜನರು ಸಹ ಮನಸ್ಸು ಹೊಂದಿ ಕೆಲಸ ಮಾಡುತ್ತಾರೆ ಮತ್ತು ಉತ್ತಮ ವ್ಯವಹಾರ ಪಡೆಯಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಸ್ನೇಹಿತರು ಮತ್ತು ಪರಿಚಯಸ್ಥರ ಸಹಾಯವನ್ನೂ ನೀವು ಪಡೆಯಬಹುದು. ಇದರಿಂದಾಗಿ ನೀವು ಶಕ್ತಿಯನ್ನು ಪಡೆಯುತ್ತೀರಿ. ನೀವು ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣಿಸಬಹುದು, ಈ ಪ್ರಯಾಣಗಳು ಭವಿಷ್ಯದಲ್ಲಿ ನಿಮಗೆ ಉತ್ಪಾದಕ ಫಲಿತಾಂಶಗಳನ್ನು ನೀಡಬಹುದು. ವಿವಾಹಿತ ಜನರು ಜಾಗರೂಕರಾಗಿರಲು ಸಲಹೆ ನೀಡಲಾಗಿದೆ ಏಕೆಂದರೆ ನಿಮ್ಮ ವೈವಾಹಿಕ ಜೀವನದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಶಾಂತವಾಗಿರಿ ಮತ್ತು ಕೋಪಗೊಳ್ಳಬೇಡಿ ಎಂದು ಸೂಚಿಸಲಾಯಿದೆ. ಇಲ್ಲದಿದ್ದರೆ ನಿಮ್ಮ ಜೀವನ ಸಂಗಾತಿ ಜಗಳ ಮಾಡುವ ಮೂಲಕ ವಿಷಯವನ್ನು ಇನ್ನಷ್ಟು ಸಂಕೀರ್ಣಗೊಳಿಸಬಹುದು.

ಪರಿಹಾರ -ಮಂಗಳವಾರ ಮತ್ತು ಶನಿವಾರ ಬಜರಂಗಾಬಾಣವನ್ನು ಜಪಿಸುವುದು ನಿಮಗೆ ಉತ್ತಮ.

मीन / ಮೀನ ರಾಶಿ

ಮಂಗಳ ಗ್ರಹದ ಸಂಚಾರವು ಮೀನಾ ರಾಶಿಚಕ್ರದ ಸ್ಥಳೀಯರ ಆರನೇ ಮನೆಯಲ್ಲಿ ಸಂಭವಿಸಲಿದೆ. ಈ ಸಮಯ ನಿಮಗೆ ಮಿಶ್ರ ಫಲಿತಾಂಶಗಳನ್ನು ತರುತ್ತದೆ. ನೀವು ಯಶಸ್ಸು ಪಡೆಯುತ್ತೀರಿ ಆದರೆ ಸಂಘರ್ಷ ಮತ್ತು ಕಠಿಣ ಪರಿಶ್ರಮದ ನಂತರ. ನೀವು ಶಿಕ್ಷಕ, ಎಂಜಿನಿಯರ್, ಮೆಕ್ಯಾನಿಕ್ ಅಥವಾ ಈ ರೀತಿಯ ಕೆಲಸದಲ್ಲಿ ತೊಡಗಿದ್ದರೆ, ಯಶಸ್ಸು ಪಡೆಯಲು ಸುಲಭವಾಗುತ್ತದೆ. ನಿಮ್ಮ ಸಹೋದ್ಯೋಗಿಗಳ ಬೆಂಬಲವನ್ನು ಪಡೆಯುತ್ತಿಲ್ಲ ಎಂದು ಕೆಲವೊಮ್ಮೆ ನೀವು ಭಾವಿಸಬಹುದು. ಇದು ನೀವು ಜನರ ಸ್ವಾಭಿಮಾನವನ್ನು ನಿರ್ಲಕ್ಷಿಸುವುದರಿಂದ ಆಗಿರಬಹದು. ನೀವು ಸಾಧ್ಯವಾದಷ್ಟು ಮಾನವೀಯವಾಗಿ ವರ್ತಿಸುತ್ತೀರಿ. ವಾಸ್ತವದಲ್ಲಿ ಆಗಲು ಸಾಧ್ಯವಾಗದ ಯಾವುದಕ್ಕೂ ಆಶಿಸಬೇಡಿ. ಈ ಸಮಯದಲ್ಲಿ ನಿಮ್ಮ ವಿರೋಧಿಗಳ ಮೇಲೆ ನೀವು ಪ್ರಾಬಲ್ಯ ಸಾಧಿಸಲು ನಿಮಗೆ ಸಾಧ್ಯವಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ನಡವಳಿಕೆಯಲ್ಲಿ ಶಕ್ತಿ ಕಾಣಿಸುತ್ತದೆ. ಕೆಲವು ಅನಿರೀಕ್ಷಿತ ವೆಚ್ಚಗಳನ್ನು ನೀವು ಮಾಡಬೇಕಾಗಬಹುದು. ಇದರಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಅಸಮತೋಲಿತವಾಗಬಹುದು. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಏಕೆಂದರೆ ಮೂಳೆಗಳು, ಚರ್ಮ ಅಥವಾ ಕಣ್ಣುಗಳಿಗೆ ಸಂಬಂಧಿಸದ ಯಾವುದೇ ರೋಗದಿಂದ ನೀವು ಬಳಲುತ್ತಬಹುದು. ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ನಿಮ್ಮ ಸಹೋದರನೊಂದಿಗೆ ನಿಮ್ಮ ಜಗಳವಾಗಬಹುದು. ನೀವು ಯಾವುದೇ ವಿಷಯವನ್ನು ಶಾಂತಿಯಿಂದ ಪರಿಹರಿಸಲು ಪ್ರಯತ್ನಿಸಬೇಕು. ನಿಮ್ಮ ಸಹೋದರ ಸರ್ಕಾರಿ ನೌಕರರಾಗಿದ್ದರೆ, ಈ ಸಮಯದಲ್ಲಿ ಅವರು ಯಶಸ್ಸು ಪಡೆಯಬಹುದು. ಈ ಸಮಯದಲ್ಲಿ ನೀವು ಕುಟುಂಬದ ಜನರೊಂದಿಗೆ ಸೇರುವಲ್ಲಿ ಬಿಕ್ಕಟ್ಟುಗಳನ್ನು ಎದುರಿಸಬೇಕಾಗಬಹುದು.

ಪರಿಹಾರ - ಮಂಗಳ ಸ್ತ್ರೋತ್ರವನ್ನು ಪಠಿಸುವುದರಿಂದ ಶುಭ ಫಲಿತಾಂಶಗಳನ್ನು ಪಡೆಯಲಾಗುತ್ತದೆ.


ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 399/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer