ಚಂದ್ರ ಗ್ರಹಣ 2021- Lunar Eclipse 2021 in Kannada

ಚಂದ್ರ ಗ್ರಹಣ 2021 (Chandra Grahana 2021) ರ ನಮ್ಮ ಈ ಲೇಖನದಲ್ಲಿ, ವರ್ಷ 2021 ರಲ್ಲಿ ಸಂಭವಿಸಲಾಗುವ ಎಲ್ಲಾ ಸಣ್ಣ - ದೊಡ್ಡ ಗ್ರಹಣಗಳಿಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯ ಬಗ್ಗೆ ನೀವು ಓದುವಿರಿ. ಇದರೊಂದಿಗೆ ಎಲ್ಲಾ ಚಂದ್ರ ಗ್ರಹಣಗಳ ಸಮಯ, ದಿನಾಂಕ, ನಿಮ್ಮ ಮೇಲೆ ಬೀರುವ ಗ್ರಹಣದ ಪರಿಣಾಮ, ಚಂದ್ರ ಗ್ರಹಣದ ಧಾರ್ಮಿಕ ಮತ್ತು ಪೌರಾಣಿಕ ನಂಬಿಕೆಗಳ ಬಗ್ಗೆ ನಿಮಗೆ ತಿಳಿಸುತ್ತೇವೆ.

ಆಸ್ಟ್ರೋಸೇಜ್ ಬೃಹತ್ ಕುಂಡಲಿ ನಿಮ್ಮಜಾತಕದ ಅತ್ಯಂತ ನಿಖರ ಮತ್ತು ವಿವರವಾದ ಲಾಲ್ ಕಿತಾಬ್ ರಿಪೋರ್ಟ್ ಅನ್ನು ನೀಡುತ್ತದೆ

Lunar Eclipse 2021 Dates

ಸಹ ಸೂರ್ಯ ಗ್ರಹಣದಂತೆಯೇ ಚಂದ್ರ ಗ್ರಹಣ 2021 ಕೂಡ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಇದು ವೈಜ್ಞಾನಿಕ ಪ್ರಾಮುಖ್ಯತೆಯ ಜೊತೆಗೆ ಪೌರಾಣಿಕವಾಗಿಯೂ ಧಾರ್ಮಿಕ ಮತ್ತು ಜ್ಯೋತಿಷ್ಯ ಪ್ರಾಮುಖ್ಯತೆಯನ್ನು ಹೊಂದಿದೆ. ಸಾಮಾನ್ಯವಾಗಿ, ಗ್ರಹಣದ ಹೆಸರು ಬಂದ ಕೂಡಲೇ ಜನರ ಮನಸ್ಸಿನಲ್ಲಿ ಅನೇಕ ನಕಾರಾತ್ಮಕ ಆಲೋಚನೆಗಳು ಬರಲಾರಂಭಿಸುತ್ತವೆ. ಅದಕ್ಕಾಗಿಯೇ ನಾವು ಜಾನಪದ ಭಾಷೆಯಲ್ಲಿ ಗ್ರಹಣವನ್ನು ನಷ್ಟದೊಂದಿಗೆ ನೋಡಲಾರಂಭಿಸುತ್ತೇವೆ.

2021 ರ ಚಂದ್ರ ಗ್ರಹಣದ ಬಗ್ಗೆ ತಿಳಿದುಕೊಳ್ಳುವ ಮೊದಲು ವೈದಿಕ ಜ್ಯೋತಿಷ್ಯ ತಜ್ಞರ ಪ್ರಕಾರ ಗ್ರಹಣದ ಅವಧಿಯನ್ನು ಭೂಮಿಯ ಎಲ್ಲಾ ಜೀವಿಗಳಿಗೆ ನಕಾರಾತ್ಮಕ ಪರಿಣಾಮಗಳ ಅವಧಿಯೆಂದು ಪರಿಗಣಿಸಲಾಗಿದೆ. ಇದನ್ನು ತಪ್ಪಿಸಲು ಅನೇಕ ಪರಿಹಾರಗಳನ್ನು ತಿಳಿಸಲಿದ್ದೇವೆ. ಇದನ್ನು ಖಗೋಳ ಘಟನೆಯಾಗಿ ನೋಡಲಾಗುತ್ತದೆ, ಈ ಸಮಯದಲ್ಲಿ ಯಾವುದೇ ಶುಭ ಕಾರ್ಯವನ್ನು ನಿಷೇಧಿಸಲಾಗುತ್ತದೆ. ನಡೆಯಿರಿ, ಚಂದ್ರ ಗ್ರಹಣವು ಯಾವ ಸ್ಥಿತಿಯಲ್ಲಿ ಸಂಭವಿಸುತ್ತದೆ ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ.

Click Here To Read In English: Lunar Eclipse 2021

ಯಾವ ಪರಿಸ್ಥಿತಿಗಳಲ್ಲಿ ಚಂದ್ರ ಗ್ರಹಣ ಸಂಭವಿಸುತ್ತದೆ?

ವಿಜ್ಞಾನದ ಪ್ರಕಾರ, ಭೂಮಿಯು ಸೂರ್ಯನ ಮತ್ತು ಚಂದ್ರನು ಭೀಮಿಯನ್ನು ಪರಿಭ್ರಮಿಸುವಾಗ ಒಂದು ನೇರ ರೇಖೆಯಲ್ಲಿ ಬರುತ್ತಾರೆ, ಆ ಸಮಯದಲ್ಲಿ ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಬಂದು ಸೂರ್ಯನ ಬೆಳಕನ್ನು ಅವರಿಸುತ್ತಾನೆ. ಈ ಸ್ಥಿತಿಯಲ್ಲಿ ಸೂರ್ಯ ಗ್ರಹಣವು ಸಂಭವಿಸುತ್ತದೆ, ಆದರೆ ಇದಕ್ಕೆ ವ್ಯತಿರಿಕ್ತವಾಗಿ ಭೂಮಿಯು ಚಂದ್ರ ಮತ್ತು ಸೂರ್ಯನ ನಡುವೆ ಬಂದು, ಚಂದ್ರನ ನೆರಳನ್ನು ಆವರಿಸಿಕೊಂಡಾಗ, ಅದನ್ನು ಚಂದ್ರ ಗ್ರಹಣ ಎಂದು ಪರಿಗಣಿಸಲಾಗಿದೆ.

ಚಂದ್ರ ಗ್ರಹಣದ ಪೌರಾಣಿಕ ಮಹತ್ವ

ಆದಾಗ್ಯೂ, ಹಿಂದೂ ಧರ್ಮದ ಅನೇಕ ಪೌರಾಣಿಕ ಗ್ರಂಥಗಳಲ್ಲಿ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣಗಳ ಸಂಬಂಧವನ್ನು ರಾಹು-ಕೇತುವಿನೊಂದಿಗೆ ಸೇರಿಸಿ ನೋಡಲಾಗುತ್ತದೆ. ಇದರ ಹಿಂದಿನ ಒಂದು ಪೌರಾಣಿಕ ಕಥೆ ಹೆಚ್ಚು ಪ್ರಚಲಿತವಾಗಿದೆ. ಇದರ ಪ್ರಕಾರ, ಪೌರಾಣಿಕ ಕಾಲದಲ್ಲಿ ಸ್ವರಭಾನು ಎಂಬುವ ಒಬ್ಬ ಅಸುರನಿದ್ದನು. ಕ್ಷೀರ ಸಾಗರದ ಮಂಥನದ ನಂತರ, ಮೋಹಿನಿ ರೂಪದಲ್ಲಿದ್ದ ಭಗವಂತ ಶ್ರೀ ಕೃಷ್ಣನಿಗೆ ಮೋಸ ಮಾಡಿ, ಅವನು ಕೆಲವು ಹನಿ ಅಮೃತವನ್ನು ಕುಡಿದನು. ಈ ಸಮಯದಲ್ಲಿ ಅವನು ಅಸುರರ ಬದಲು ದೇವರುಗಳ ಸರತಿಯಲ್ಲಿದ್ದನು. ಆದರೆ ಅಮೃತದ ಕೆಲವೇ ಹನಿ ಅವನ ಕುತ್ತಿಗೆಯಿಂದ ಕೆಳಗೆ ಇಳಿದಿತ್ತು, ಅಷ್ಟರಲ್ಲೇ ಸೂರ್ಯ ದೇವ ಮತ್ತು ಚಂದ್ರ ದೇವರು ವಿಷ್ಣುವಿನ ಮುಂದೆ ಅವನ ರಹಸ್ಯವನ್ನು ತೆರೆದರು. ಇದರ ಪರಿಣಾಮವಾಗಿ, ಶ್ರೀ ಮೋಹಿನಿಯ ಅವತಾರವನ್ನು ಧರಿಸಿದ ಭಗವಂತ ಶ್ರೀ ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಸ್ವರಭಾನುವಿನ ತಲೆಯನ್ನು ಅವನ ಮುಂಡದಿಂದ ಬೇರ್ಪಡಿಸಿದರು. ಆದರೆ ಅಷ್ಟರೊಳಗೆ ಅಸುರನು ಅಮೃತವನ್ನು ಕುಡಿಯುವಲ್ಲಿ ಯಶಸ್ವಿಯಾಗಿದ್ದನು, ಇದರಿಂದಾಗಿ ಅವನ ತಲೆ ಮತ್ತು ಮುಂಡ ಶಾಶ್ವತವಾಗಿ ಅಮರವಾಯಿತು. ಇದರಲ್ಲಿ ಅವನ ತಲೆಯನ್ನು ರಾಹು ಮತ್ತು ಅವನ ಮುಂಡವನ್ನು ಕೇತು ಎಂದು ಪರಿಗಣಿಸಲಾಯಿತು. ಅಂದಿನಿಂದ ತನ್ನ ಆ ದ್ವೇಷದ ಕಾರಣದಿಂದಾಗಿ ಪ್ರತಿ ವರ್ಷ ರಾಹು-ಕೇತುವು ಸೂರ್ಯ ಮತ್ತು ಚಂದ್ರ ಮೇಲೆ ಗ್ರಹಣವನ್ನು ಹಾಕಲು ಬರುತ್ತಾರೆ.

ಕಾಗ್ನಿಆಸ್ಟ್ರೋ ವೃತ್ತಿ ಸಮಾಲೋಚನೆ ರಿಪೋರ್ಟ್ ಮೂಲಕ ನಿಮ್ಮ ವೃತ್ತಿ ಜೀವನದಲ್ಲಿ ಸರಿಯಾದ ಆಯ್ಕೆಯನ್ನು ಆರಿಸಿ!

ಎಷ್ಟು ರೀತಿಯ ಚಂದ್ರ ಗ್ರಹಣಗಳಿವೆ?

ಸೂರ್ಯ ಗ್ರಹಣವು ಎಲ್ಲಾ ರೀತಿಯಲ್ಲಿ ವಿಭಿನ್ನ ಸಮಯದಲ್ಲಿ ಬೀಳುತ್ತದೆ, ಅದೇ ರೀತಿ ಚಂದ್ರ ಗ್ರಹಣದ ಅವಧಿಯು ಸೂರ್ಯ ಗ್ರಹಣಕ್ಕಿಂತ ಕೆಲವು ಗಂಟೆಗಳವರೆಗೆ ಇರುತ್ತದೆ. ಹುಣ್ಣಿಮೆಯ ದಿನದಂದು ಮಾತ್ರ ಚಂದ್ರ ಗ್ರಹಣವು ಸಂಭವಿಸುತ್ತದೆ. ಸಾಮಾನ್ಯವಾಗಿ ಸೂರ್ಯ ಗ್ರಹಣದಂತೆಯೇ ಈ ಚಂದ್ರ ಗ್ರಹಣವು ಸಹ ಮೂರು ವಿಧಗಳಲ್ಲಿದೆ:-

  • ಪೂರ್ಣ ಚಂದ್ರ ಗ್ರಹಣ: ಈ ಸಮಯದಲ್ಲಿ ಸೂರ್ಯ ಮತ್ತು ಚಂದ್ರನ ನಡುವೆ ಭೂಮಿಯು ಸುತ್ತುತ್ತದೆ ಮತ್ತು ಚಂದ್ರನನ್ನು ಸಂಪೂರ್ಣವಾಗಿ ಆವರಿಸುತ್ತದೆ. ಈ ಸಂದರ್ಭದಲ್ಲಿ ಚಂದ್ರನು ಭೂಮಿಯ ಹಿಂದೆ ಸಂಪೂರ್ಣವಾಗಿ ಕೆಂಪು ಮತ್ತು ಗುಲಾಬಿ ಬಣ್ಣದ್ದಾಗಿ ಕಂಡುಬರುತ್ತದೆ. ಈ ಆಧಿಯಲ್ಲಿ ಭೂಮಿಯಿಂದ ನೋಡಿದಾಗ ಚಂದ್ರನ ಮೇಲಿನ ಕಲೆಗಳು ಸಂಪೂರ್ಣವಾಗಿ ಗೀಚರಿಸುತ್ತವೆ. ಇದನ್ನು ಸಂಪೂರ್ಣ ಚಂದ್ರ ಗ್ರಹಣ ಮತ್ತು ರಕ್ತ ಚಂದ್ರ ಗ್ರಹಣ ಎಂದು ಕರೆಯಲಾಗುತ್ತದೆ.

  • ಪಾರ್ಶ್ವ ಚಂದ್ರ ಗ್ರಹಣ: ಸೂರ್ಯ ಮತ್ತು ಚಂದ್ರನ ನಡುವೆ ಭೂಮಿಯು ಬಂದು ಅದನ್ನು ಆವರಿಸುತ್ತದೆ, ಆದರೆ ಈ ಸಮಯದಲ್ಲಿ ಚಂದ್ರನು ಭೂಮಿಯ ಹಿಂದೆ ಸಂಪೂರ್ಣವಾಗಿ ಅಡಗಿಕೊಳ್ಳುವುಲಾಗುವುದಿಲ್ಲ. ಈ ಕಾರಣದಿಂದಾಗಿ ಚಂದ್ರನ ಕೆಲವೇ ಭಾಗಗಳಲ್ಲಿ ಭೂಮಿಯ ನೆರಳು ಬೀಳುತ್ತದೆ. ಇದನ್ನು ನಾವು ಪಾರ್ಶ್ವ ಚಂದ್ರ ಗ್ರಹಣ ಎಂದು ಕರೆಯುತ್ತೇವೆ. ಇದರ ಅವಧಿ ದೀರ್ಘಕಾಲದವರೆಗೆ ಇರುವುದಿಲ್ಲ.

  • ಅರೆನೆರಳಿನ ಚಂದ್ರ ಗ್ರಹಣ: ಈ ಸ್ಥಿತಿಯಲ್ಲಿ ಸೂರ್ಯ, ಚಂದ್ರ ಮತ್ತು ಭೂಮಿಯು ಒಂದೇ ಸರಳ ರೇಖೆಯಲ್ಲಿ ಇಲ್ಲಲಿದ್ದಾಗ, ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬರುತ್ತದೆ. ಈ ಕಾರಣದಿಂದಾಗಿ ಭೂಮಿಯ ಹೊರಗಿನ ಭಾಗದ ನೆರಳನ್ನು ಅರೆನೆರಳು ಅಥವಾ ಪಿನಂಬ್ರಾ ಎಂದು ಕರೆಯಲಾಗುತ್ತದೆ. ಅದು ಚಂದ್ರನ ಮೇಲೆ ಬೀಳುತ್ತದೆ. ಈ ಸಂದರ್ಭದಲ್ಲಿ ಚಂದ್ರನ ಮೇಲ್ಮೈ ಮಂಜಿಯಾಗುತ್ತದೆ. ಇದನ್ನು ಅರೆನೆರಳಿನ ಚಂದ್ರನ ಗ್ರಹಣ ಎಂದು ಕರೆಯಲಾಗುತ್ತದೆ.

ಚಂದ್ರ ಗ್ರಹಣ 2021 ರಲ್ಲಿ ಸೂತಕ ಆಧಿಯ ಮಹತ್ವ

ಸನಾತನ ಧರ್ಮದ ಪ್ರಕಾರ, ಚಂದ್ರ ಗ್ರಹಣದ ಸೂತಕ ಅವಧಿಯನ್ನು ದುರುದ್ವೇಷಪೂರಿತ ಸಮಯ ಎಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಯಾವುದೇ ಶುಭ ಕೆಲಸ ಮಾಡುವುದನ್ನು ನಿಷೇಧಿಸಲಾಗಿದೆ. ಇಲ್ಲದಿದ್ದರೆ, ಗ್ರಹಣದ ನಕಾರಾತ್ಮಕ ಪರಿಣಾಮವು ಆ ಕಾರ್ಯದಿಂದ ಶುಭ ಫಲಿತಾಂಶಗಳನ್ನು ಪಡೆಯಲು ಅನುಮತಿಸುವುದಿಲ್ಲ. ಈ ಅವಧಿಯ ಪರಿಣಾಮವು ಭೂಮಿಯ ಪ್ರತಿಯೊಂದು ಜೀವಿಗಳ ಮೇಲೆ ಬೀರುತ್ತದೆ. ಈ ಅವಧಿಯು ಚಂದ್ರ ಗ್ರಹಣಕ್ಕೆ ಸ್ವಲ್ಪ ಸಮಯ ಮೊದಲು ಆರಂಭವಾಗುತ್ತದೆ. ಇದನ್ನು ನಾವು ಗ್ರಹಣದ ಸೂತಕ ಸಮಯ ಎಂದು ಕರೆಯುತೇವೆ. ಇದು ಗ್ರಹಣದ ಅಂತ್ಯದೊಂದಿಗೆ ಕೊನೆಗೊಳ್ಳುತ್ತದೆ. ಚಂದ್ರ ಗ್ರಹಣದಲ್ಲಿ ಸೂತಕ ಅವಧಿಯು ಗ್ರಹಣಕ್ಕೆ ಒಂಬತ್ತು ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ ಮತ್ತು ಆ ಗ್ರಹಣ ಮುಗಿಯುವುದರೊಂದಿಗೆ ಅದು ಸುಪ್ತವಾಗುತ್ತದೆ. ನಡೆಯಿರಿ ಈಗ 2021 ರಲ್ಲಿ ಒಟ್ಟು ಎಷ್ಟು ಚಂದ್ರ ಗ್ರಹಣಗಳು ಸಂಭವಿಸಲಿವೆ ಎಂದು ತಿಳಿದುಕೊಳ್ಳೋಣ.

ವರ್ಷ 2021 ರಲ್ಲಿ ಸಂಭವಿಸುವ ಚಂದ್ರ ಗ್ರಹಣ

ವಿಜ್ಞಾನದ ಪ್ರಕಾರ, ಚಂದ್ರ ಗ್ರಹಣವು ಖಗೋಳ ಘಟನೆ ಎಂದು ಪರಿಗಣಿಸಲಾಗಿದೆ. ಆದಾಗ್ಯೂ, ಇದರ ಸಂಖ್ಯೆ ಬದಲಾಗುತ್ತಿರುವುದನ್ನು ಕಾಣಬಹುದು. ಈ ಕಾರಣದಿಂದಾಗಿ ವರ್ಷ 2021 ರಲ್ಲಿ ಒಟ್ಟು 2 ಚಂದ್ರ ಗ್ರಹಣಗಳು ಸಂಭವಿಸುತ್ತವೆ.

  • ವರ್ಷ 2021 ರ ಮೊದಲ ಚಂದ್ರ ಗ್ರಹಣ, ವರ್ಷದ ಮಧ್ಯದಲ್ಲಿ 26 ಮೇ 2021 ರಂದು ಗೋಚರಿಸುತ್ತದೆ

ಚಂದ್ರ ಗ್ರಹಣ 2021 ರಲ್ಲಿ ಒಂದು ನಿರ್ಧಿಷ್ಟ ವಿಷಯವೆಂದರೆ, ಈ ವರ್ಷ ಭಾರತದಲ್ಲಿ ಈ ಎರಡೂ ಗ್ರಹಣಗಳು ಸೂತಕವು ಮಾನ್ಯವಾಗಿರುವುದಿಲ್ಲ.

ಈಗ ಆಸ್ಟ್ರೋಸೇಜ್ ವಾರ್ತಾ ಮೂಲಕ ಪರಿಣಿತ ಜ್ಯೋತಿಷಿಗಳೊಂದಿಗೆ ನೇರ ಕರೆಯಲ್ಲಿ ಮಾತನಾಡಿ

2021 ರಲ್ಲಿ ಗೋಚರಿಸಲಾಗುವ ಚಂದ್ರ ಗ್ರಹಣದ ಸಮಯ

ಮೊದಲ ಚಂದ್ರ ಗ್ರಹಣ 2021
ದಿನಾಂಕ ಚಂದ್ರ ಗ್ರಹಣದ ಆರಂಭ ಚಂದ್ರ ಗ್ರಹಣದ ಅಂತ್ಯ ಗ್ರಹಣದ ವಿಧ ಗೋಚರಿಸುವ ಕ್ಷೇತ್ರಗಳು
26 ಮೇ 2021 14:17 ಗಂಟೆಯಿಂದ 19:19 ಗಂಟೆಯ ವರೆಗೆ ಸಂಪೂರ್ಣಚಂದ್ರ ಗ್ರಹಣ ಭಾರತ, ಪೂರ್ವ ಏಷ್ಯಾ, ಆಸ್ಟ್ರೇಲಿಯ, ಪೆಸಿಫಿಕ್ ಸಾಗರ ಮತ್ತು ಅಮೇರಿಕ

ಸೂಚನೆ: ಮೇಲಿರುವ ಕೋಷ್ಟಕದಲ್ಲಿ ನೀಡಲಾದ ಸಮಯವು ಭಾರತೀಯ ಸಮಯಕ್ಕೆ ಅನುಗುಣವಾಗಿದೆ. ಈ ಕಾರಣದಿಂದಾಗಿ ಚಂದ್ರ ಗ್ರಹಣವು ಭಾರತದಲ್ಲಿ ಗೋಚರಿಸುತ್ತದೆ. ಆದರೆ ಇಲ್ಲಿ ಈ ಚಂದ್ರ ಗ್ರಹಣವು ಅರೆನೆರಳಿನ ಗ್ರಹಣದಂತೆ ಕಾಣಿಸುತ್ತದೆ. ಆದ್ದರಿಂದ ಭಾರತದಲ್ಲಿ ಈ ಚಂದ್ರ ಗ್ರಹಣದ ಧಾರ್ಮಿಕ ಪರಿಣಾಮ ಮತ್ತು ಸೂತಕ ಅವಧಿ ಮಾನ್ಯವಾಗಿರುವುದಿಲ್ಲ.

ಮೊದಲ ಚಂದ್ರ ಗ್ರಹಣ 26 ಮೇ 2021

  • ಚಂದ್ರ ಗ್ರಹಣ 2021 ರ ಪ್ರಕಾರ, ವರ್ಷದ ಮೊದಲ ಚಂದ್ರ ಗ್ರಹಣವು ಸಂಪೂರ್ಣ ಚಂದ್ರ ಗ್ರಹಣವಾಗಿರುತ್ತದೆ, ಇದು ವರ್ಷದ ಮಧ್ಯದಲ್ಲಿ 26 ಮೇ 2021 ರಂದು ಗೋಚರಿಸುತ್ತದೆ.

  • ಹಿಂದೂ ಪಂಚಾಂಗದ ಪ್ರಕಾರ, ಈ ಚಂದ್ರ ಗ್ರಹಣದ ಸಮಯವೂ 26 ಮೇ 2021ರಂದು, ಮಧ್ಯಾಹ್ನ 14:17 ರಿಂದ, ಸಂಜೆ 19:19 ವರೆಗೆ ಇರುತ್ತದೆ.

  • ಇದರೊಂದಿಗೆ ಪಂಚಾಂಗವನ್ನು ನಂಬಿದರೆ, ವರ್ಷ 2021 ರ ಈ ಮೊದಲ ಚಂದ್ರ ಗ್ರಹಣವು ವಿಕ್ರಮ ಸಂವತ 2078 ರಲ್ಲಿ ವೈಶಾಖ ಮಾಸದ ಹುಣ್ಣಿಮೆಯಂದು ಸಂಭವಿಸುತ್ತದೆ.

  • ಈ ಚಂದ್ರ ಗ್ರಹಣದ ಗೋಚರತೆ ಪೂರ್ವ ಏಷ್ಯಾ, ಆಸ್ಟ್ರೇಲಿಯ, ಪೆಸಿಫಿಕ್ ಮಹಾಸಾಗರ ಮತ್ತು ಅಮೇರಿಕ ದಲ್ಲಿರುತ್ತದೆ. ಈ ಸ್ಥಳಗಳಲ್ಲಿ ಇದು ಪೂರ್ಣ ಚಂದ್ರ ಗ್ರಹಣದಂತೆ ಗೋಚರಿಸುತ್ತದೆ.

  • ಭಾರತದಲ್ಲಿಯೂ ಇದು ಗೋಚರಿಸುತ್ತದೆ, ಆದರೆ ಇಲ್ಲಿ ಇದನ್ನು ಕೇವಲ ಅರೆನೆರಳಿನ ಚಂದ್ರ ಗ್ರಹಣದಂತೆ ಕಾಣಲಾಗುತ್ತದೆ. ಈ ಕಾರಣದಿಂದಾಗಿ ಭಾರತದಲ್ಲಿ ಇದರ ಸೂತಕವು ಇರುವುದಿಲ್ಲ

ಎರಡನೇ ಚಂದ್ರ ಗ್ರಹಣ 2021
ದಿನಾಂಕ ಚಂದ್ರ ಗ್ರಹಣದ ಆರಂಭ ಚಂದ್ರ ಗ್ರಹಣದ ಅಂತ್ಯ ಗ್ರಹಣದ ವಿಧ ಗೋಚರಿಸುವ ಕ್ಷೇತ್ರಗಳು
19 ನ ವೆಂಬರ್ 11:32 ಗಂಟೆಯಿಂದ 17:33 ಗಂಟೆಯವರೆಗೆ ಪಾರ್ಶ್ವ ಭಾರತ, ಅಮೇರಿಕ, ಉತ್ತರ ಯುರೋಪ್, ಪೂರ್ವ ಏಷ್ಯಾ, ಆಸ್ಟ್ರೇಲಿಯ ಮತ್ತು ಪೆಸಿಫಿಕ್ ಮಹಾಸಾಗರದ ಕೆಲವು ಕ್ಷೇತ್ರಗಳು

ಸೂಚನೆ: ಮೇಲಿರುವ ಕೋಷ್ಟಕದಲ್ಲಿ ನೀಡಲಾದ ಸಮಯವು ಭಾರತ ಸಮಯಕ್ಕೆ ಅಂಗುಣವಾಗಿದೆ. ಈ ಕಾರಣದಿಂದಾಗಿ ಈ ಚಂದ್ರ ಗ್ರಹಣವು ಭಾರತದಲ್ಲಿ ಕಾಣಿಸುವುದಿಲ್ಲ. ಆದರೆ ಅರೆನೆರಳಿನ ಚಂದ್ರ ಗ್ರಹಣದಂತೆ ಗೋಚರಿಸುವುದರಿಂದಾಗಿ, ಈ ಚಂದ್ರ ಗ್ರಹಣದ ಧಾರ್ಮಿಕ ಪರಿಣಾಮ ಮತ್ತು ಸೂತಕ ಅವಧಿಯು ಇಲ್ಲಿ ಮಾನ್ಯವಾಗಿರುವುದಿಲ್ಲ.

ಎರಡನೇ ಚಂದ್ರ ಗ್ರಹಣ 19 ನವೆಂಬರ್ 2021

  • ವರ್ಷದ ಎರಡನೇ ಚಂದ್ರ ಗ್ರಹಣವು ಶುಕ್ರವಾರ 19 ನವೆಂಬರ್ 2021ರಂದು ಗೋಚರಿಸುತ್ತದೆ, ಇದು ಪಾರ್ಶ್ವ ಗ್ರಹಣ.

  • ಹಿಂದೂ ಪಂಚಾಂಗದ ಪ್ರಕಾರ, ಈ ಚಂದ್ರ ಗ್ರಹಣದ ಸಮಯ ಮಧ್ಯಾಹ್ನ 11:32 ಗಂಟೆಯಿಂದ, ರಾತ್ರಿ 17:33 ವರೆಗೆ ಇರುತ್ತದೆ.

  • ಹಿಂದೂ ಪಂಚಾಂಗವನ್ನು ನಂಬಿದರೆ, ವರ್ಷ 2021 ರ ಈ ಎರಡನೇ ಚಂದ್ರ ಗ್ರಹಣವು ವಿಕ್ರಮ ಸಂವತ 2078 ರಲ್ಲಿ ಕಾರ್ತಿಕ ಮಾಸದ ಹುಣ್ಣಿಮೆಯಂದು ಸಂಭವಿಸುತ್ತದೆ. ಇದರ ಪರಿಣಾಮವನ್ನು ವೃಷಭ ರಾಶಿ ಮತ್ತು ಕಾರ್ತಿಕ ನಕ್ಷತ್ರದಲ್ಲಿ ಹೆಚ್ಚು ಕಾಣಲಾಗುತ್ತದೆ.

  • ಇದರ ಗೋಚರತೆ ಭಾರತ, ಅಮೇರಿಕ, ಉತ್ತರ ಯೂರೋಪ್, ಪೂರ್ವ ಏಷ್ಯಾ, ಆಸ್ಟ್ರೇಲಿಯ, ಪೆಸಿಫಿಕ್ ಮಹಾಸಾಗರದ ಕೆಲವು ಕ್ಷೇತ್ರಗಳಲ್ಲಿ ಇರುತ್ತದೆ.

  • ಭಾರತದಲ್ಲಿ ಈ ಚಂದ್ರ ಗ್ರಹಣವು ಅರೆನೆರಳಿನ ಗ್ರಹಣದಂತೆ ಕಾಣಿಸುವುದರಿಂದಾಗಿ, ಇಲ್ಲಿ ಇದರ ಸೂತಕ ಅವಧಿಯ ಪರಿಣಾಮ ಬೀರುವುದಿಲ್ಲ.

ನಿಮ್ಮ ರಾಶಿಯ ಪ್ರಕಾರ, ವರ್ಷ 2021 ರ ಎಲ್ಲಾ ಭವಿಷ್ಯವಾಣಿಯನ್ನು ಪಡೆಯಿರಿ - ರಾಶಿ ಭವಿಷ್ಯ 2021

ಚಂದ್ರ ಗ್ರಹಣ 2021 ರ ಸಮಯದಲ್ಲಿ ತಪ್ಪಾಗಿ ಕೂಡ ಈ ಕೆಲಸಗಳನ್ನು ಮಾಡಬೇಡಿ

  • ಚಂದ್ರ ಗ್ರಹಣದ ಸಮಯದಲ್ಲಿ, ಅದರ ಸೂತಕ ಅವಧಿಯು ಮುಗಿಯುವವರೆಗೆ ಯಾವುದೇ ರೀತಿಯ ಹೊಸ ಕಾರ್ಯವನ್ನು ಪ್ರಾರಂಭಿಸಬೇಡಿ.

  • ಚಂದ್ರ ಗ್ರಹಣದ ಸೂತಕ ಸಮಯದಲ್ಲಿ ಅಡಿಗೆ ತಯಾರಿಸುವುದು ಮತ್ತು ಅದನ್ನು ಸೇವಿಸುವುದನ್ನು ತಪ್ಪಿಸಿ.

  • ಯಾವುದೇ ರೀತಿಯ ಜಗಳ-ವಾದವನ್ನು ತಪ್ಪಿಸಿ

  • ಯಾವುದೇ ತೀಕ್ಷಣವಾದ ವಸ್ತುಗಳನ್ನು ಬಳಸಬೇಡಿ.

  • ದೇವರ ವಿಗ್ರಹಗಳು ಮತ್ತು ತುಳಸಿ ಸಸ್ಯವನ್ನು ಮುಟ್ಟಬೇಡಿ.

  • ಸೂತಕ ಅವಧಿಯಲ್ಲಿ ನಿದ್ರೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ನಂಬಲಾಗಿದೆ.

ಚಂದ್ರ ಗ್ರಹಣ 2021 ರ ಸಮಯದಲ್ಲಿ ಈ ವಿಶೇಷ ಪರಿಹಾರಗಳನ್ನು ಮಾಡಿ

  • ಸೂತಕ ಅವಧಿ ಮುಗಿಯುವವರೆಗೆ ಧ್ಯಾನ, ಭಜನೆ, ದೇವರ ಪೂಜೆ ಇತ್ಯಾದಿ ಕಾರ್ಯಗಳಿಂದ ಮನಸ್ಸನ್ನು ಸಕಾರಾತ್ಮಕಗೊಳಿಸಿ.

  • ಈ ಸಮಯದಲ್ಲಿ ಚಂದ್ರ ಗ್ರಹಕ್ಕೆ ಸಂಬಂಧಿಸಿದ ಮಂತ್ರ ಮತ್ತು ರಾಹು-ಕೇತುವಿನ ಶಾಂತಿಗಾಗಿ ಅವರ ಬೀಜ ಮಂತ್ರವನ್ನು ಉಚ್ಚರಿಸಿ

  • ಚಂದ್ರ ಗ್ರಹಣವು ಕೊನೆಗೊಂಡ ತಕ್ಷಣವೇ ಸ್ನಾನ ಮಾಡಿ, ಮನೆಯಲ್ಲಿ ಗಂಗಾ ನೀರನ್ನು ಸಿಂಪಡಿಸಿ ಶುದ್ಧೀಕರಿಸಿ.

  • ದೇವರ ವಿಗ್ರಹಗಳನ್ನು ಸಹ ಸ್ನಾನ ಮಾಡಿಸಿ ಶುದ್ಧಗೊಳಿಸಿ.

  • ಗ್ರಹಣದ ಸೂತಕ ಅವಧಿಯಿಂದ ಅದರ ಅಂತ್ಯದವರೆಗೆ ಬ್ರಹ್ಮಚರ್ಯವನ್ನು ಅನುಸರಿಸಿ.

  • ನಿಮ್ಮ ಜಾತಕದಲ್ಲಿ ಏಳುವರೆ ಶನಿಯ ಪರಿಣಾಮವು ಗ್ರಹಣದ ಸಮಯದಲ್ಲಿ, ನೀವು ಸೂತಕ ಅವಧಿಯು ಮುಗಿಯುವವರೆಗೆ ಶನಿ ಮಂತ್ರವನ್ನು ಜಪಿಸುವುದು ಮತ್ತು ಶ್ರೀ ಹನುಮಾನ್ ಚಾಲೀಸವನ್ನು ಪಠಿಸುವುದು ಶುಭಕರವಾಗಿರುತ್ತದೆ.

  • ಮಂಗಲ ದೋಷದಿಂದ ಬಳಲುತ್ತಿರುವ ಜನರು ವಿಶೇಷವಾಗಿ ಗ್ರಹಣದ ದಿನನದು ಸುಂದರಕಾಂಡವನ್ನು ಪಠಿಸುವುದು ಸೂಕ್ತವಾಗಿದೆ.

  • ಚಂದ್ರ ಗ್ರಹಣ 2021 ರ ಅಂತ್ಯದ ನಂತರ ಹಿಟ್ಟು, ಅಕ್ಕಿ, ಸಕ್ಕರೆ, ಬಿಳಿ ಬಟ್ಟೆ, ಸಂಪೂರ್ಣ ಹೆಸರು ಬೇಳೆ , ಏಳು ರೀತಿಯ ದಾನ್ಯ, ಕಪ್ಪು ಎಳ್ಳು, ಕಪ್ಪು ಬಟ್ಟೆ ಇತ್ಯಾದಿಗಳನ್ನು ಅಗತ್ಯವಿರುವ ಜನರಿಗೆ ದಾನ ಮಾಡಿ.

  • ಚಂದ್ರ ಗ್ರಹಣದ ದುರುದ್ವೇಷಪೂರಿತ ಫಲಿತಾಂಶಗಳನ್ನು ನಿವಾರಿಸಲು ಸೂತಕ ಸಮಯದಲ್ಲಿ ನವಗ್ರಹ, ಗಾಯತ್ರಿ ಮತ್ತು ಮಹಾಮೃತ್ಯುಂಜಯ ಇತ್ಯಾದಿಗಳಂತಹ ಶುಭ ಮಂತ್ರಗಳನ್ನು ಜಪಿಸಿ.

  • ಸೂತಕ ಅವಧಿಯಲ್ಲಿ ದುರ್ಗಾ ಚಾಲೀಸ, ವಿಷ್ಣು ಸಹಸ್ತ್ರನಾಮ, ಶ್ರೀಮದ್ ಭಗವದ್ ಗೀತ, ಗಜೇಂದ್ರ ಮೋಕ್ಷ ಇತ್ಯಾದಿಗಳನ್ನು ಪಠಿಸುವುದು ಉತ್ತಮವಾಗಿರುತ್ತದೆ.

  • ಸೂತಕ ಸಮಯದ ಮೊದಲು ತಯಾರಿಸಿದ ಆಹಾರಕ್ಕೆ ತುಳಸಿಯನ್ನು ಸೇರಿಸಿ ಅದನ್ನು ಶುದ್ಧೀಕರಿಸಿ.

  • ಗ್ರಹಣದ ದಿನದಂದು ಸೂತಕ ಅವಧಿಯ ಅಂತ್ಯದವರೆಗೆ ಗರ್ಭವತಿ ಮಹಿಳೆಯರು ಮನೆಯೊಳಗೇ ಇರುವುದು ಉತ್ತಮ ಇಲ್ಲದಿದ್ದರೆ, ಅವರ ಮೇಲೆ ಗ್ರಹಣದ ಅಡ್ಡಪರಿಣಾಮಗಳು ಹೆಚ್ಚು ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ನಂಬಲಾಗಿದೆ. ಇದರಿಂದಾಗಿ ಅವರ ಮಗುವಿಗೆ ಹಾನಿಯಾಗಬಹುದು.

ಚಂದ್ರ ಗ್ರಹಣ 2021 ರ ಸಮಯದಲ್ಲಿ ಈ ಮಂತ್ರಗಳನ್ನು ಜಪಿಸಿ

ತಮೋಮಯ್ ಮಹಾಭೀಮ್ ಸೋಮಸೂರ್ಯವಿಮರ್ದನ್।
ಹೇಮತಾರಾಪ್ರದಾನೇನ ಮಮ ಶಾಂತಿಪ್ರದೋ ಭವ ॥१॥

ವಿಧುನ್ತುದ್ ನಭಸ್ತುಭ್ಯಮ್ ಸಿಂಹಿಕಾನಂದನಾಚ್ಯುತ ।
ದಾನೇನಾನೇನ ನಾಗಸ್ಯ ರಕ್ಷ ಮಾಂ ವೇಧಜಾಬ್ಡ್ಯಾಯಾತ್ ವೇಧಜಾಬ್ದಯಾತ್॥२॥

ಆರೋಗ್ಯ ಸಮಾಲೋಚನೆಯ ಮೂಲಕ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯ ಜ್ಯೋತಿಷ್ಯ ಪರಿಹಾರವನ್ನು ಪಡೆಯಿರಿ

2021 ರ ಚಂದ್ರ ಗ್ರಹಣಕ್ಕೆ ಸಂಬಂಧಿಸಿದ ಈ ಲೇಖನವನ್ನು ನೀವು ಇಷ್ಟಪಟ್ಟಿದ್ದೀರಿ ಎಂದು ನಾವು ಭಾವಿಸುತ್ತೇವೆ. ಈ ಲೇಖನವನ್ನು ಇಷ್ಟಪಟ್ಟ ಮತ್ತು ಓಡಿದ್ದಕ್ಕಾಗಿ ಧನ್ಯವಾದಗಳು!

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 399/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer