ಕರ್ಕ ರಾಶಿಯಲ್ಲಿ ಬುಧ ಸಂಚಾರ (25 th July 2021 )

ಬೌದ್ಧಿಕ ಶಾಖೆಯ ಅಂಶ ಬುಧವು ವ್ಯಕ್ತಿಯ ಧ್ವನಿ, ವಿಶ್ಲೇಷಣಾ ಕೌಶಲ್ಯ ಮತ್ತು ಸಂವಹನ ಕೌಶಲ್ಯವನ್ನು ನಿಯಂತ್ರಿಸುತ್ತದೆ. ಇದು ಸೂರ್ಯನಿಗೆ ತುಂಬಾ ಹತ್ತಿರವಾದ ಗ್ರಹವಾಗಿದೆ ಮತ್ತು ಸಾಂಪ್ರದಾಯಿಕವಾಗಿ ಇದು ರಾಶಿಚಕ್ರದ ಮೂರನೇ ಮತ್ತು ಆರನೇ ಮನೆಯ ಅಧಿಪತಿ. ಈ ಪ್ರಭಾವಿ ಗ್ರಹ ಬುಧವು, ಗಾಳಿಯ ಅಂಶದ ತನ್ನದೇ ರಾಶಿಯಾದ ಮಿಥುನದಿಂದ ಚಂದ್ರನು ಅಳುವ ನೀರಿನ ಅಂಶದ ಕರ್ಕ ರಾಶಿಗೆ ಪ್ರವೇಶಿಸುತ್ತದೆ. ಕಾಲಪುರುಷ ಜಾತಕದ ನಾಲ್ಕನೇ ಮನೆ ಇದು.

ಆಸ್ಟ್ರೋಸೇಜ್ ವಾರ್ತಾ ಮೂಲಕ ಪ್ರಪಂಚದಾದ್ಯಂತದ ಜ್ಯೋತಿಷಿಗಳೊಂದಿಗೆ ಕರೆಯಲ್ಲಿ ಮಾತನಾಡಿ

ಈ ಸೂಕ್ಷ್ಮ ರಾಶಿಯಲ್ಲಿ ಬುಧ ಸಾಗಣೆಯು, ಈ ಸಮಯದಲ್ಲಿ ಜನರು ತುಂಬಾ ಭಾವುಕರಬಹುದು ಎಂದು ತೋರಿಸುತ್ತದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಮನಸ್ಥಿತಿಗೆ ಅನುಗುಣವಾಗಿ ನಿಮ್ಮ ಭಾವನೆಗಳು ಬದಲಾಗಬಹುದು. ಬುಧ ಸಂಚಾರವು 25 ಜೂಲೈ 2021 ರಂದು ಬೆಳಿಗ್ಗೆ 11.31 ಗಂಟೆಗೆ ಕರ್ಕ ರಾಶಿಯಲ್ಲಿ ಇರುತ್ತದೆ ಮತ್ತು 9 ಆಗಸ್ಟ್ ರಂದು ಮಧ್ಯಾಹ್ನ 1.23 ಗಂಟೆಗೆ ಇದು ಸಿಂಹ ರಾಶಿಗೆ ಗೋಚರಿಸುತ್ತದೆ.

ನಡೆಯಿರಿ ಎಲ್ಲಾ ಹನ್ನೆರಡು ರಾಶಿಗಳ ಮೇಲೆ ಇದರ ಪರಿಣಾಮವನ್ನು ತಿಳಿಯೋಣ -

ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ಚಂದ್ರ ರಾಶಿ ಕ್ಯಾಲ್ಕ್ಯುಲೇಟರ್ ಮೂಲಕ ಚಂದ್ರ ರಾಶಿಯ ಬಗ್ಗೆ ತಿಳಿಯಿರಿ

मेष/ಮೇಷ ರಾಶಿ

ನಿಮ್ಮ ಧೈರ್ಯ - ಪರಾಕ್ರಮ, ಸಹೋದರ - ಸಹೋದರಿಯರು, ಸಂವಹನದ ಮೂರನೇ ಮನೆ ಮತ್ತು ಶತ್ರು, ರೋಗ ಮತ್ತು ಸ್ಪರ್ಧೆಗಳ ಆರನೇ ಮನೆಯ ಅಧಿಪತಿ ಬುಧವು ಪ್ರಸ್ತುತ ಸಾರಿಗೆ ಸ್ಥಾನದಲ್ಲಿ ನಿಮ್ಮ ನಾಲ್ಕನೇ ಮನೆಯಲ್ಲಿ ಕುಳಿತುಕೊಳ್ಳುತ್ತದೆ. ನಾಲ್ಕನೇ ಮನೆಯನ್ನು ಸುಖ, ತಾಯಿ ಇತ್ಯಾದಿಯ ಅಂಶವೆಂದು ಪರಿಗಣಿಸಲಾಗಿದೆ. ಬುಧವನ್ನು ಶಿಕ್ಷಣಕ್ಕೆ ಸಂಬಂಧಿಸಿದ ಗ್ರಹವೆಂದು ಪರಿಗಣಿಸಲಾಗಿದೆ. ಆದ್ದರಿಂದ ಈ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಈ ಸಮಯ ಶುಭವಾಗಿರುತ್ತದೆ. ನಿಮ್ಮ ತಾರ್ಕಿಕ ಸಾಮರ್ಥ್ಯ ಉತ್ತಮವಾಗಿರುತ್ತದೆ ಮತ್ತು ವಿಷಯಗಳ ಬಗ್ಗೆ ನಿಮ್ಮ ತಿಳುವಳಿಕೆ ಸುಧಾರಿಸುತ್ತದೆ. ನೀವು ಬೇಗನೆ ಏನನ್ನೂ ಕಲಿಯಲು ಸಾಧ್ಯವಾಗುತ್ತದೆ ಮತ್ತು ಏನಾದರೂ ತಪ್ಪಾದಲ್ಲಿ ನೀವು ಅದನ್ನು ಶೀಘ್ರದಲ್ಲೇ ಸರಿಪಡಿಸಲು ಸಾಧ್ಯವಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೊಡಗಿರುವ ಈ ರಾಶಿಚಕ್ರದ ಸ್ಥಳೀಯರಿಗೂ ಸಮಯ ಉತ್ತಮವಾಗಿರುತ್ತದೆ.

ಈಸಮಯದಲ್ಲಿ ತಾಯಿಯ ಆರೋಗ್ಯದ ಬಗೆಗಿನ ಆತಂಕಗಳು ನಿಮ್ಮನ್ನು ಕಾಡಬಹುದು. ಅವರು ಚರ್ಮಕ್ಕೆ ಸಂಬಂಧಿಸಿದ ಅಲರ್ಜಿ ಇಂದ ಬಳಲುತ್ತಬಹುದು ಆದ್ದರಿಂದ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅಗತ್ಯವಿದ್ದರೆ ಅವರ ವೈದ್ಯಕೀಯ ತಪಾಸಣೆಯನ್ನು ಸಹ ಮಾಡಿಸುವುದು ಉತ್ತಮ. ಈ ಸಮಯದಲ್ಲಿ ಮನೆಯ ಕೆಲವು ಸದಸ್ಯರೊಂದಿಗೆ ಸೈದ್ಧಾಂತಿಕ ಭಿನ್ನತೆಗಳನ್ನು ಹೊಂದಿರಬಹುದು. ಈ ಸಮಯದಲ್ಲಿ ನೀವು ವೈಯಕ್ತಿಕ ಜೀವನದಲ್ಲಿ ನಿರತರಾಗಿರುತ್ತೀರಿ ಮತ್ತು ಮನೆಯ ಎಲ್ಲಾ ವಿಷಯಗಳನ್ನು ಪರಿಹರಿಸಲು ಪ್ರಯತ್ನಿಸುವಿರಿ. ಉದ್ಯೋಗದಲ್ಲಿ ತೊಡಗಿರುವ ಜನರು ಮತ್ತು ವರ್ಗಾವಣೆಯನ್ನು ಬಯಸುತ್ತಿರುವವರ ಕನಸು ಈ ಸಮಯದಲ್ಲಿ ಪೂರ್ಣಗೊಳ್ಳಬಹುದು, ಸೇಲ್ಸ್, ಮಾರ್ಕೆಟಿಂಗ್ ಮತ್ತು ಜಾಹೀರಾತು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಈ ರಾಶಿಚಕ್ರದ ಜನರು ಈ ಸಾಗಣೆಯ ಸಮಯದಲ್ಲಿ ಪ್ರಯೋಜನಗಳನ್ನು ಪಡೆಯುತ್ತಾರೆ.

ಪರಿಹಾರ - ಭಗವಂತ ವಾಮನ ಕಥೆಗಳನ್ನು ಕೇಳುವುದು ನಿಮಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ.

वृषभ / ವೃಷಭ

ಈ ಸಂಚಾರದ ಸಮಯದಲ್ಲಿ ನಿಮ್ಮ ಎರಡನೇ ಮತ್ತು ಐದನೇ ಮನೆಯ ಅಧಿಪತಿ ಬುಧ ಗ್ರಹವು, ನಿಮ್ಮ ಧೈರ್ಯ, ಸಹೋದರ - ಸಹೋದರಿಯರು ಮತ್ತು ಬಯಕೆಗಳ ಮೂರನೇ ಮನೆಗೆ ಸಾಗುತ್ತದೆ. ಮೂರನೇ ಮನೆಯು ನಿಮ್ಮ ಕೌಶಲ್ಯ ಮತ್ತು ಸಂವಹನವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಮಾರಾಟಗಾರ, ಪತ್ರಕರ್ತ, ವರದಿಗಾರ, ಬರಹಗಾರ, ವಕೀಲರು ಅಥವಾ ಶಿಕ್ಷಣ ಮತ್ತು ಸಲಹೆಗಾರ ಕ್ಷೇತ್ರದಂತಹ ಸಂವಹನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಈ ಸಮಯ ಅಂಕೋಲಕರವಾಗಿರುತ್ತದೆ. ಈ ಸಮಯದಲ್ಲಿ ವೃಷಭ ರಾಶಿಚಕ್ರದ ಜನರು ಮಾತನಾಡುವಾಗ ತುಂಬಾ ಸಭ್ಯರಾಗಿರುತ್ತಾರೆ ಇದರಿಂದಾಗಿ ಸುತ್ತಮುತ್ತಲಿನ ಜನರು ಆಕರ್ಷಿತರಾಗುತ್ತಾರೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಒಂಬತ್ತನೇ ಮನೆಯ ಮೇಲೂ ಬುಧ ದೇವರ ದೃಷ್ಟಿ ಇರುತ್ತದೆ. ಅಂದರೆ ಈ ಸಮಯವು ವಿದೇಶದಲ್ಲಿ ಶಿಕ್ಷಣ ಪಡೆಯಲು ಕನಸು ಕಾಣುತ್ತಿರುವ ಈ ರಾಶಿಚಕ್ರದ ವಿದ್ಯಾರ್ಥಿಗಳ ಕನಸು ಈಡೇರಬಹುದು.

ನಿಮ್ಮ ಸಾಮಾಜಿಕ ವಲಯದಲ್ಲಿ ನೀವು ಖ್ಯಾತಿ ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ಸಹೋದರ - ಸಹೋದರಿಯರು ಮತ್ತು ಆಪ್ತರೊಂದಿಗೆ ಅಲ್ಪ ದೂರದ ಪ್ರಯಾಣವನ್ನು ಸಹ ನೀವು ಯೋಜಿಸಬಹುದು. ನೀವು ಸಾಮಾಜಿಕ ಅಥವಾ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬಹುದು. ಆದಾಗ್ಯೂ, ಈ ಸಮಯದಲ್ಲಿ ಯಾವುದೇ ಕಾರಣದಿಂದಾಗಿ ಮಾನಸಿಕವಾಗಿ ನೀವು ಒತ್ತಡಕ್ಕೆ ಒಳಗಾಗಬಹುದು. ಆದ್ದರಿಂದ ಯೋಗ ಮತ್ತು ಧ್ಯಾನವನ್ನು ನಿಮ್ಮ ಜೀವನ ಶೈಲಿಯಲ್ಲಿ ಸೇರಿಸುವುದರಿಂದ ನಿಮ್ಮ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಪಡೆಯುತ್ತೀರಿ. ವ್ಯಾಪಾರದಲ್ಲಿ ತೊಡಗಿರುವ ಜನರಿಗೂ ಈ ಸಮಯ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.

ಪರಿಹಾರ - ಈ ಸಂಚಾರದ ಸಮಯದಲ್ಲಿ ಪಕ್ಷಿಗಳಿಗೆ ಆಹಾರ ನೀಡುವುದರಿಂದ ಶುಭ ಫಲಿತಾಂಶಗಳು ದೊರೆಯುತ್ತವೆ.

मिथुन / ಮಿಥುನ ರಾಶಿ

ಕರ್ಕ ರಾಶಿಯಲ್ಲಿ ಸಂಚಾರದ ಸಮಯದಲ್ಲಿ ಬುಧ ಗ್ರಹವು ಮಿಥುನ ರಾಶಿಚಕ್ರದ ಸ್ಥಳೀಯರ ಎರಡನೇ ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಈ ಮನೆ ಹಣಕಾಸು ಮತ್ತು ನಸಂಪತ್ತನ್ನು ಪ್ರತಿನಿಧಿಸುತ್ತದೆ. ಮಿಥುನ ರಾಶಿಚಕ್ರದ ಸ್ಥಳೀಯರ ಎರಡನೇ ಮನೆಯ ಅಧಿಪತಿ ಚಂದ್ರ, ಚಂದ್ರ ದೇವ ಬುಧನನ್ನು ತನ್ನ ಮಿತ್ರ ಎಂದು ಪರಿಗಣಿಸುತ್ತಾರೆ. ಆದರೆ ಬುಧ ಚಂದ್ರನನ್ನು ತನ್ನ ಶತ್ರು ಎಂದು ಪರಿಗಣಿಸುತ್ತಾನೆ. ಬುಧ ಗ್ರಹವು ಚಂದ್ರನ ಮನೆಯಲ್ಲಿರುವುದರಿಂದ ನೀವು ಆರ್ಥಿಕವಾಗಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದಾಗ್ಯೂ, ಧ್ವನಿ ಮತ್ತು ಬರವಣಿಗೆಯಂತಹ ನಿಮ್ಮ ಸಂವಹನ ಕೌಶಲ್ಯಗಳ ಮೂಲಕ ನಿಮ್ಮ ವೈಯಕ್ತಿಕ ಜೀವನದಲ್ಲಿ ನೀವು ಹಣಕಾಸು ಗಳಿಸಬಹುದು. ಈ ಸಮಯದಲ್ಲಿ ನಿಮ್ಮ ರಾಜತಾಂತ್ರಿಕ ಕೌಶಲ್ಯಗಳು ಸುಧಾರಿಸುತ್ತವೆ. ವಿವಾಹಿತ ಜನರ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ಅತ್ತೆಮನೆ ಕಡೆಯಿಂದ ನೀವು ಲಾಭವನ್ನು ಪಡೆಯಬಹುದು. ನಿಮ್ಮ ತಾಯಿಯಿಂದಲೂ ನೀವು ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಜೀವನ ಸಂಗಾತಿ ನಿಮ್ಮ ಸಹಕಾರದಿಂದ ವೃತ್ತಿಪರ ಜೀವನದಲ್ಲಿ ಮುಂದುವರಿಯುತ್ತಾರೆ.

ಕೆಲಸವನ್ನು ಸರಿಯಾದ ತೀತಿಯಲ್ಲಿ ಪೂರ್ಣಗೊಳಿಸಲು ನೀವು ಪ್ರಯತ್ನಿಸುತ್ತೀರಿ ಮತ್ತು ಉದ್ಯೋಗದಲ್ಲಿ ತೊಡಗಿರುವ ಈ ರಾಶಿಚಕ್ರದ ಜನರು ವಿದೇಶ ಪ್ರಯಾಣಕ್ಕೆ ಹೋಗಲು ಸಹ ಯೋಜಿಸಬಹುದು. ವ್ಯಾಪಾರಸ್ಥರು ತಮ್ಮ ಕೆಲಸದಲ್ಲಿ ಹೆಚ್ಚಿನ ಹೊಸತನವನ್ನು ತರಲು ಪ್ರಯತ್ನಿಸುತ್ತಾರೆ. ಅದು ಅವರ ವ್ಯವಹಾರವನ್ನು ಅಭಿವೃದ್ಧಿ ಹೊಂದಲು ಸಹಾಯ ಮಾಡುತ್ತದೆ. ನೀವು ಯಾವುದೇ ಸವಾಲನ್ನು ಎದುರಿಸುತ್ತಿದ್ದರೆ, ಅದನ್ನು ನಿಯಮಗಳ ಪ್ರಕಾರ ಪರಿಹರಿಸಲು ಪ್ರಯತ್ನಿಸಿ. ಈ ಸಮಯದಲ್ಲಿ ನಿಮ್ಮ ತಂದೆ ಅನಾರೋಗ್ಯಕ್ಕೆ ಒಳಗಾಗಬಹುದು. ಆದ್ದರಿಂದ ಅವರ ಬಗ್ಗೆ ವಿಶೇಷ ಕಾಳಜಿ ವಹಿಸಿ.

ಪರಿಹಾರ - ಪ್ರತಿದಿನ ಭಗವದ್ಗೀತೆಯನ್ನು ಓದಿರಿ.


ವೃತ್ತಿಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಯನ್ನು ತೊಡೆದುಹಾಕಲು ಈಗಲೇ ಆದೇಶಿಸಿ - ಕಾಗ್ನಿ ಆಸ್ಟ್ರೋ ರಿಪೋರ್ಟ್

कर्क / ಕರ್ಕ ರಾಶಿ

ನಿಮ್ಮ ಮೂರನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಗ್ರಹವು ಈ ಸಂಚಾರದ ಸಮಯದಲ್ಲಿ ನಿಮ್ಮ ಲಗ್ನದ ಮನೆ ಅಂದರೆ ಮೊದಲನೇ ಮನೆಯಲ್ಲಿ ಕುಳಿತಿರುತ್ತದೆ. ವ್ಯಾಪಾರದಲ್ಲಿ ತೊಡಗಿರುವ ಈ ರಾಶಿಚಕ್ರದ ಜನರಿಗೆ ಈ ಸಮಯ ಅನುಕೂಲಕರವಾಗಿರುತ್ತದೆ. ನಿಮ್ಮ ಶಕ್ತಿ ಇನ್ನಷ್ಟು ಹೆಚ್ಚಾಗುತ್ತದೆ. ನಿಮ್ಮ ಕೆಲಸದ ಸ್ಥಳದಲ್ಲಿ ನೀವು ತುಂಬಾ ಉತ್ತಮ ಪ್ರದರ್ಶನ ಮಾಡುತ್ತೀರಿ, ಇದಕ್ಕಾಗಿ ನಿಮ್ಮ ಮೇಲಧಿಕಾರಿಗಳು ಸಹ ನಿಮ್ಮನ್ನು ಪ್ರಶಂಸಿಸುತ್ತಾರೆ. ಸಮಾಜದಲ್ಲಿ ನೀವು ಗೌರವವನ್ನು ಪಡೆಯುತ್ತೀರಿ. ವಿದೇಶ ಪ್ರವಾಸಗಳಿಗೂ ಉತ್ತಮ ವಕಾಶಗಳಿವೆ. ನಿಮ್ಮ ಸಹೋದರ ಸಹೋದರಿಯರತ್ತ ನೀವು ಕಾಳಜಿ ವಹಿಸಬೇಕು. ಏಕೆಂದರೆ ಈ ಸಮಯದಲ್ಲಿ ಅನಾರೋಗ್ಯಕ್ಕೆ ಒಳಗಾಗಬಹುದು. ಆರ್ಥಿಕವಾಗಿ ನೀವು ಜಾಗರೂಕರಾಗಿರಬೇಕು. ಏಕೆಂದರೆ ಉತ್ತಮ ಜೀವನ ಶೈಲಿಯನ್ನು ಬಯಸುತ್ತೀರಿ, ಇದಕ್ಕಾಗಿ ಈ ಸಮಯದಲ್ಲಿ ನೀವು ಭೌತಿಕ ವಿಷಯಗಳಿಗಾಗಿ ಹಣಕಾಸು ಖರ್ಚು ಮಾಡಬಹುದು.

ಮೊದಲನೇ ಮನೆಯಲ್ಲಿ ಕುಳಿತಿರುವ ಬುಧವು ನಿಮ್ಮ ಏಳನೇ ಮನೆಯ ಮೇಲೆ ದೃಷ್ಟಿ ಹಾಕುತ್ತಾರೆ. ಅಂದರೆ ಪಾಲುದಾರಿಕೆಯ ವ್ಯಾಪಾರದಲ್ಲಿ ನೀವು ಜಾಗರೂಕರಾಗಿರಬೇಕು. ಏಕೆಂದರೆ ಈ ಸಮಯದಲ್ಲಿ ನಿಮ್ಮ ಪಾಲುದಾರರು ನಿಮಗೆ ಮೋಸ ಮಾಡಬಹುದು. ಈ ಸಂಚಾರದ ಸಮಯದಲ್ಲಿ ನಿಮಗೆ ಕುತೂಹಲವಿರುತ್ತದೆ ಮತ್ತು ಹೊಸ ಮಾಹಿತಿಗಳನ್ನು ಮತ್ತು ಆಲೋಚನೆಗಳನ್ನು ತಿಳಿಯಲು ಪ್ರಯತ್ನಿಸುತ್ತೀರಿ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಆರಾಮ ವಲಯದಿಂದ ಹೊರಬಂದು ಏನಾದರೂ ಇತರ ಕೆಲವು ವಿಷಯಗಳನ್ನು ಪರಿಶೀಲಿಸಬಹುದು. ಈ ಅವಧಿಯಲ್ಲಿ ನೀವು ಉತ್ತಮ ಮೂಲಗಳನ್ನು ಹೊಂದಿರುವುದಿಲ್ಲ ಇದು ನಿಮ್ಮ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಸಮಯದಲ್ಲಿ ನೀವು ನೇರವಾಗಿ ನಿಮ್ಮ ಮಾತುಗಳನ್ನು ಜನರ ಮುಂದೆ ಇಡಬಹುದು. ಈ ಕಾರಣದಿಂದಾಗಿ ಕೆಲವು ಜನರು ನಿಮ್ಮ ಬಗ್ಗೆ ತಪ್ಪು ಆಲೋಚನೆಗಳನ್ನು ಹೊಂದಬಹುದು.

ಪರಿಹಾರ - ಬುಧ ಬೀಜ ಮಂತ್ರವನ್ನು ದಿನಕ್ಕೆ 108 ಬಾರಿ ಜಪಿಸಿ.

सिंह / ಸಿಂಹ ರಾಶಿ

ಸಿಂಹ ರಾಶಿಚಕ್ರದ ಸ್ಥಳೀಯರ ಎರಡನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಸಂಚಾರದ ಸಮಯದಲ್ಲಿ ನಿಮ್ಮ ಹನ್ನೆರಡನೇ ಮನೆಗೆ ಗೋಚರಿಸುತ್ತಾರೆ. ಹನ್ನೆರಡನೇ ಮನೆ ಹಾನಿ, ಕಳಪೆ ಅರೋಗ್ಯ, ಆಧ್ಯಾತ್ಮಿಕತೆಯನ್ನು ಪ್ರತಿನಿಧಿಸುತ್ತದೆ. ಈ ಕಾರಣದಿಂದಾಗಿ ಈ ಸಮಯದಲ್ಲಿ ನೀವು ಬಹಳ ತತ್ವಬದ್ಧ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ತಯತ್ನಿಸುತ್ತೀರಿ ಮತ್ತು ಭೌತಿಕ ವಸ್ತುಗಳಿಗೆ ಖರ್ಚು ಮಾಡುತ್ತೀರಿ. ಈ ಕಾರಣದಿಂದಾಗಿ ಆರ್ಥಿಕವಾಗಿ ನೀವು ಸ್ವಲ್ಪ ಅಸ್ಥಿರವಾಗಬಹುದು. ನ್ಯಾಯಾಲಯದ ವಿಷಯಗಳಲ್ಲಿ ನೀವು ಖರ್ಚು ಮಾಡಬಹುದು ಅಥವಾ ನಿಮ್ಮ ವಿರೋಧಿಗಳಿಂದ ಗೆಲ್ಲಲು ಸಹ ಹಣವನ್ನು ಖರ್ಚು ಮಾಡಬಹುದು. ಕುಟುಂಬದ ಸದಸ್ಯರೊಬ್ಬರು ಆಸ್ಪತ್ರೆಯಲ್ಲಿ ದಾಖಲೆಯಾಗುವುದರಿಂದಲೂ ನೀವು ಖರ್ಚು ಮಾಡಬೇಕಾಗಬಹುದು. ನಿಮ್ಮ ಹಣಕಾಸು ನಿರಂತರವಾಗಿ ಖರ್ಚಾಗುವುದರಿಂದಾಗಿ ಸಹ ನೀವು ಒತ್ತಡಕ್ಕೆ ಒಳಗಾಗಬಹುದು. ಇದು ನಿಮಗೆ ತುಂಬಾ ಸವಾಲಿನ ಸಮಯವಾಗಿರಬಹುದು. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ಈ ಸಮಯದಲ್ಲಿ ನೀವು ಅನಾರೋಗ್ಯಕ್ಕೆ ಒಳಗಾಗಬಹುದು.

ಈ ಸಮಯದಲ್ಲಿ ನಿಮಗೆ ಕೆಲವು ಕಾಳಜಿಗಳೂ ಇರಬಹುದು, ಅವುಗಳನ್ನು ತಪ್ಪಿಸಲು ನಿಮ್ಮ ಜೀವನ ಶೈಲಿಯಲ್ಲಿ ಯೋಗ ಮತ್ತು ಧ್ಯಾನವನ್ನು ಆಶ್ರಯಿಸುವುದು ನಿಮಗೆ ಉತ್ತಮ. ನಿಮ್ಮ ಆಹಾರದಲ್ಲಿ ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಲು ನಿಮಗೆ ಸಲಹೆ ನೀಡಲಾಗಿದೆ. ಇದಲ್ಲದೆ ನಿಮ್ಮ ರಹಸ್ಯಗಳನ್ನು ಯಾರೊಂದಿಗೆ ಹಂಚಿಕೊಳ್ಳದಿರಲು ಸಹ ಸುಚಿಲ್ಸಲಾಗಿದೆ. ಈ ಸಮಯದಲ್ಲಿ ನಿಮ್ಮ ವಿರೋಧಿಗಳು ಸಕ್ರಿಯರಾಗಿರುತ್ತಾರೆ. ಆದ್ದರಿಂದ ಅವರಿಂದ ಜಾಗರೂಕರಾಗಿರಬೇಕು. ಈ ಸಮಯದಲ್ಲಿ ನಿಮ್ಮ ಕಿರಿಯ ಸಹಿದಾರ ಸಹೋದರಿಯರ ಬೆಂಬಲವನ್ನು ನೀವು ಪಡೆಯಲಾಗುವುದಿಲ್ಲ. ವಿವಾಹಿತ ಜನರ ದಾಂಪತ್ಯ ಜೀವನದಲ್ಲಿ ಕೆಲವು ವಿವಾದಗಳು ಉಂಟಾಗಬಹುದು,

ಪರಿಹಾರ - ಬುಧವಾರ ವಿಷ್ಣು ಸಹಸ್ರನಾಮವನ್ನು ಪಠಿಸಿ.

कन्या / ಕನ್ಯಾ ರಾಶಿ

ನಿಮ್ಮ ಮೊದಲನೇ ಮತ್ತು ಹತ್ತನೇ ಮನೆಯ ಅಧಿಪತಿ ಬುಧ ಗ್ರಹವು ಈ ಸಮಯದಲ್ಲಿ ನಿಮ್ಮ ಹನ್ನೊಂದನೇ ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಈ ಸಮಯದಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿ ನೀವು ಸುಧಾರಣೆಯನ್ನು ಕಾಣುವಿರಿ. ಇದು ನಿಮ್ಮ ಸುತ್ತಮುತ್ತಲಿನ ಜನರನ್ನು ಆಕರ್ಷಿಸುತ್ತದೆ. ನಿಮ್ಮ ಬುದ್ಧಿವಂತಿಕೆ ಮತ್ತು ತಾರ್ಕಿಕ ಚಿಂತನೆ ಉತ್ತಮವಾಗಿರುತ್ತದೆ, ಕೆಲಸದ ಸ್ಥಳದಲ್ಲಿ ಇದು ನಿಮಗೆ ಸಹಾಯ ಮಾಡುತ್ತದೆ. ಕೆಲವು ಜನರು ತಮ್ಮ ಬುದ್ಧಿವಂತಿಕೆಯನ್ನು ಮೋಸದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಬಳಸಬಹುದು. ನೀವು ಸಣತೋಷವಾಗಿರಲು ಬಯಸುತ್ತೀರಿ. ಅದನ್ನು ಪೂರೈಸಲು ನೀವು ಭೌತಿಕ ವಿಷಯಗಳ ಮೇಲೆ ಹಣಕಾಸು ಖರ್ಚು ಮಾಡಬಹುದು. ಅದನ್ನು ಮಾಡುವುದರಿಂದ ನಿಮ್ಮ ಮೇಲೆ ಅದು ಆರ್ಥಿಕವಾಗಿ ಪರಿಣಾಮ ಬೀರಬಹುದು. ಆದ್ದರಿಂದ ಯಾವುದೇ ತಪ್ಪು ಕೆಲಸ ಮಾಡುವುದನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗಿದೆ. ಹನ್ನೊಂದನೇ ಮನೆಯಲ್ಲಿ ಬುಧ ದೇವನ ದೃಷ್ಠಿ ಮಾನಸಿಕತೆಯ ಐದನೇ ಮನೆಯ ಮೇಲೆ ಇರುತ್ತದೆ. ಪರಿಣಾಮವಾಗಿ ಈ ಸಮಯದಲ್ಲಿ ನೀವು ಜಗಳ ಮಾಡಬಹುದು.

ಹನ್ನೆರಡನೇ ಮನೆ ಲಾಭದ ಮನೆ. ಅಂದರೆ ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳ ಬೆಂಬಲವನ್ನು ನೀವು ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ಶತ್ರುಗಳನ್ನು ಸೋಲಿಸುವಿರಿ. ನಿಮ್ಮ ಸಂವಹನ ಕೌಶಲ್ಯದೊಂದಿಗೆ ಸಮಾಜದಲ್ಲಿ ಗೌರವವನ್ನು ಪಡೆಯುತ್ತೀರಿ. ನಿಮ್ಮ ಮಕ್ಕಳಿಂದಲೂ ನೀವು ಸಂತೋಷ ಪಡೆಯುತ್ತೀರಿ. ಈ ಸಮಯದಲ್ಲಿ ವಿದ್ಯಾರ್ಥಿಗಳು ವಿಜ್ಞಾನ ಮತ್ತು ಸಂಶೋಧನೆಯ ವಿಷಯಗಳತ್ತ ಆಕರ್ಷಿತರಾಗಬಹುದು. ಈ ಸಮಯದಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡಲು ನೀವು ಆಸಕ್ತಿ ಹೊಂದಿರಬಹುದು. ಅದು ನಿಮಗೆ ಆಂತರಿಕ ಶಾಂತಿಯನ್ನು ನೀಡುತ್ತದೆ. .

ಪರಿಹಾರ - ಮಂಗಳವಾರ ದೇವಸ್ಥಾನದಲ್ಲಿ ಹಸಿರು ಬೇಳೆ ದಾನ ಮಾಡಿ.

तुला / ತುಲಾ ರಾಶಿ

ಪ್ರಸ್ತುತ ಸಂಚಾರದ ಸಮಯದಲ್ಲಿ ನಿಮ್ಮ ಹನ್ನೆರಡನೇ ಮತ್ತು ಒಂಬತ್ತನೇ ಮನೆಯ ಅಧಿಪತಿ ಬುಧ ದೇವ ನಿಮ್ಮ ಹತ್ತನೇ ಮನೆಗೆ ಪ್ರವೇಶಿಸುತ್ತಾರೆ. ಉದ್ಯೋಗದಲ್ಲಿರುವ ಜನರಿಗೆ ಕೆಲಸಕ್ಕೆ ಸಂಬಂಧಿಸಿದಂತೆ ವಿದೇಶ ಪ್ರವಾಸಕ್ಕೆ ಹೋಗಬೇಕಾಗಬಹುದು. ವಿದೇಶ ವ್ಯಾಪಾರಕ್ಕೆ ಸಂಬಂಧಿಸಿದ ಜನರು ತಮ್ಮ ವ್ಯಾಪಾರವನ್ನು ಅಭಿವೃದ್ಧಿಪಡಿಸುತ್ತಾರೆ. ಈ ಸಮಯದಲ್ಲಿ ಈ ರಾಶಿಚಕ್ರದ ಕೆಲವು ಜನರು ವಿದೇಶದಲ್ಲಿ ವಾಸಿಸಲು ಸಹ ಯೋಜಿಸಬಹುದು. ನಿಮ್ಮ ಕೆಲಸದ ಸ್ಥಳದಲ್ಲಿನ ರಾಜಕೀಯವನ್ನು ನೀವು ಎದುರಿಸಬೇಕಾಗಬಹುದು ಆದ್ದರಿಂದ ಕಚೇರಿಯಲ್ಲಿ ನಡೆಯುತ್ತಿರುವ ರಾಜಕೀಯದಿಂದ ದೂರವಿರಲು ನಿಮಗೆ ಸಲಹೆ ನೀಡಲಾಗಿದೆ. ಈ ಸಮಯದಲ್ಲಿ ನೀವು ಸಂಪತ್ತಿನ ಮೇಲೆ ಯಾವುದೇ ಹೂಡಿಕೆ ಮಾಡಲು ಯೋಜಿಸಬಹುದು ಅಥವಾ ಹೊಸ ವಾಹನವನ್ನು ಖರೀದಿಸಲು ಸಹ ಯೋಜಿಸಬಹುದು.

ಕುಟುಂಬ ಜೀವನದ ಮೇಲೆ ದೃಷ್ಟಿ ಹಾಕಿದರೆ, ನಿಮ್ಮ ತಂದೆಯೊಂದಿಗಿನ ಸಂಬಂಧವನ್ನು ಸುಧಾರಿಸಲು ನೀವು ಪ್ರಯತ್ನಿಸಬೇಕು. ಈ ಸಮಯದಲ್ಲಿ ನಿಮ್ಮ ಆಲೋಚನೆ ಸಕಾರಾತ್ಮಕವಾಗಿರುತ್ತದೆ ಮತ್ತು ನೀವು ಸಂತೋಷವನ್ನು ಅನುಭವಿಸುವಿರಿ. ನಿಮ್ಮ ವಿರೋಧಿಗಳ ಮೇಲೆ ನೀವು ಪ್ರಾಬಲ್ಯ ಸಾಧಿಸುವಿರಿ. ನಿಮ್ಮ ತಂದೆಯೊಂದಿಗೆ ವ್ಯಾಪಾರದಲ್ಲಿ ತೊಡಗಿದ್ದರೆ, ನೀವು ಯಶಸ್ಸು ಪಡೆಯುತ್ತೀರಿ. ಈ ಸಮಯದಲ್ಲಿ ನೀವು ಆಧ್ಯಾತ್ಮಿಕ ಅಥವಾ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಬಹುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಸಂಬಂಧಿಕರು ಮತ್ತು ಸ್ನೇಹಿತರ ಬೆಂಬಲವನ್ನು ನೀವು ಪಡೆಯುತ್ತೀರಿ. ಇದು ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯಲು ಸಹಾಯ ಮಾಡುತ್ತದೆ. ಸರ್ಕಾರದ ನೀತಿಗಳಿಂದಲೂ ನಿಮಗೆ ಬೆಂಬಲ ಸಿಗುತ್ತದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ನೀವು ಶೀತ, ಕೆಮ್ಮು ಮತ್ತು ಜ್ವರದಿಂದ ಬಳಲುತ್ತಬಹುದು.

ಪರಿಹಾರ - ಬುಧವಾರ ಭಾವನಾತ ಗಣೇಶನಿಗೆ ದುರ್ವಾ ಅರ್ಪಿಸಿ.

वृश्चिक / ವೃಶ್ಚಿಕ ರಾಶಿ

ಬುಧ ಗ್ರಹವು ನಿಮ್ಮ ಎಂಟನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಒಂಬತ್ತನೇ ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಈ ಸಂಚಾರದ ಸಮಯದಲ್ಲಿ ನೀವು ಅದೃಷ್ಟವಂತರಾಗಿರುತ್ತೀರಿ ಮತ್ತು ನಿಮ್ಮ ಅದೃಷ್ಟ ಮತ್ತು ಭಾಗ್ಯದ ಸಹಾಯದಿಂದ ಹಣವನ್ನು ಪಡೆಯುತ್ತೀರಿ. ಪೂರ್ವಜರ ಸಂಪತ್ತಿನಿಂದಲೂ ನೀವು ಲಾಭವನ್ನು ಪಡೆಯಬಹುದು. ಇದರೊಂದಿಗೆ ನೀವು ಲೇಖನ, ಸಂಪಾದನೆ, ಹಾಡುವಂತಹ ವ್ಯವಹಾರ ಅಥವಾ ವೃತ್ತಿಗೆ ಸಂಬಂಧಿಸಿದ್ದರೆ ನಿಮಗೆ ಹಣಕಾಸಿನ ಲಾಭವಾಗಬಹುದು. ಈ ಸಮಯದಲ್ಲಿ ನೀವು ಯಾವುದೇ ಕೆಲಸಕ್ಕೆ ಸಂಬಂಧಿಸಿದ ಸಂಶೋಧನೆಯನ್ನು ಮಾಡಿದಾಗ ಮಾತ್ರ ಅದರಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಜೀವನದ ಬಗೆಗಿನ ನಿಮ್ಮ ದೃಷ್ಟಿಕೋನವು ಸಕಾರಾತ್ಮಕವಾಗಿರುತ್ತದೆ. ಆದಾಗ್ಯೂ ಅನವಶ್ಯಕ ವಿಷಯಗಳ ಮೇಲೆ ನಿಮ್ಮ ಸಮಯವನ್ನು ಹಾಳುಮಾಡಬಹುದು.

ಆದಾಗ್ಯೂ, ಈ ಸಮಯದಲ್ಲಿ ಸಮಾಜದಲ್ಲಿ ಸ್ವಲ್ಪ ಖ್ಯಾತಿಯನ್ನು ನೀವು ಕಳೆದುಕೊಳ್ಳಬಹುದು. ಆದ್ದರಿಂದ ಸಾಮಾಜಿಕ ಮಟ್ಟದಲ್ಲಿ ನೀವು ಜಾಗರೂಕರಾಗಿರಬೇಕು. ನಿಮ್ಮ ಧಾರ್ಮಿಕ ಆಲೋಚನೆಗಳನ್ನು ಬೆಂಬಲಿಸುವಲ್ಲಿ ನೀವು ಹಿಂಸಾತ್ಮರಾಗಬಹುದು. ಆದ್ದರಿಂದ ನಿಮ್ಮ ಯಾವುದೇ ಸಲಹೆಗಳನ್ನು ಯಾರ ಮೇಲೂ ನೀವು ಹೇರಬಾರದು ಎಂದು ನಿಮಗೆ ಸಲಹೆ ನೀಡಲಾಗಿದೆ. ಆದಾಗ್ಯೂ, ನಿಮ್ಮ ಅಂಶಗಳನ್ನು ಶಾಂತಿಯುತ ರೀತಿಯಲ್ಲಿ ವಿವರಿಸಲು ನಿಮಗೆ ಸಾಧ್ಯವಾದರೆ ನೀವು ಯಶಸ್ವಿಯಾಗಬಹುದು. ವಿದೇಶದಲ್ಲಿ ಶಿಕ್ಷಣ ಪಡೆಯಲು ಪ್ರಯತ್ನಿಸುತ್ತಿರುವ ವಿದ್ಯಾರ್ಥಿಗಳು ಯಶಸ್ಸು ಪಡೆಯಬಹುದು. ಈ ರಾಶಿಚಕ್ರದ ವಿದ್ಯಾರ್ಥಿಗಳು ಯಾವುದೇ ಭಾಷೆಯಲ್ಲಿ ಉನ್ನತ ಶಿಕ್ಷಣವನ್ನು ಪಡೆಯಬಹುದು.

ಪರಿಹಾರ - ದುರ್ಗಾ ಸ್ತೋತ್ರಂ ಅನ್ನು ನಿಯಮಿತವಾಗಿ ಪಠಿಸಿ, ಏಕೆಂದರೆ ಇದು ನಿಮ್ಮ ಜೀವನದ ಅಡೆತಡೆಗಳನ್ನು ಪರಿಹರಿಸುತ್ತದೆ.


ವೃತ್ತಿ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಲು ಈಗಲೇ ಆದೇಶಿಸಿ - ಕಾಗ್ನಿ ಆಸ್ಟ್ರೋ ರಿಪೋರ್ಟ್

धनु / ಧನು ರಾಶಿ

ನಿಮ್ಮ ಏಳನೇ ಮತ್ತು ಹತ್ತನೇ ಮನೆಯ ಅಧಿಪತಿ ಬುಧ ಗ್ರಹವು ಸಂಚಾರದ ಸಮಯದಲ್ಲಿ ನಿಮ್ಮ ಎಂಟನೇ ಮನೆಯಲ್ಲಿ ಕುಳಿತುಕೊಳ್ಳುತ್ತದೆ. ಈ ಸಮಯ ನಿಮಗೆ ಅನುಕೂಲಕರವೆಂದು ಹೇಳಲಾಗುವುದಿಲ್ಲ. ಉದ್ಯೋಗದಲ್ಲಿರುವ ಈ ರಾಶಿಚಕ್ರದ ಜನರು ಈ ಸಮಯದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ವ್ಯಾಪಾರಸ್ಥರು ಸಹ ಕೆಲವು ನಷ್ಟಗಳನ್ನು ಎದುರಿಸಬೇಕಾಗಬಹುದು. ಹಣಕಾಸು ಸಂಗ್ರಹಿಸಲು ನೀವು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ವಿದೇಶದಲ್ಲಿ ಕೆಲಸ ಮಾಡಲು ನಿಮಗೆ ಅವಕಾಶವೂ ಸಿಗಬಹುದು.

ಕೆಲವು ಸ್ಥಳೀಯರಿಗೆ ಪೂರ್ವಜರ ಅಸ್ಥಿಯ ಮೂಲಕ ಲಾಭವಾಗಬಹುದು. ತಮ್ಮ ವೃತ್ತಿಯ ಮೂಲಕ ಇತರವನ್ನು ನೋಡಿಕೊಳ್ಳುವ ಅಥವಾ ಸಹಾಯ ಮಾಡುವ ಜನರು ಈ ಸಮಯದಲ್ಲಿ ಲಾಭ ಪಡೆಯುತ್ತಾರೆ. ಇದಲ್ಲದೆ ಈ ಸಮಯದಲ್ಲಿ ನಿಮ್ಮ ಮೆದುಳು ತುಂಬಾ ವೇಗವಾಗಿ ಕೆಲಸ ಮಾಡುತ್ತದೆ. ಆದ್ದರಿಂದ ಗುಪ್ತಚರ ಸೇವೆಗಳಲ್ಲಿರುವವರು ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಈ ಸಮಯದಲ್ಲಿ ಭೌತಿಕ ವಿಷಯಗಳತ್ತ ನೀವು ಹೆಚ್ಚು ಒಲವು ಹೊನ್ದಿರುತ್ತೀರಿ. ವಿವಾಹತ ಜನರು ತಮ್ಮ ಜೀವನ ಸಂಗಾತಿಯೊಂದಿಗೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅದಕ್ಕಾಗಿಯೇ ಅವರೊಂದಿಗಿನ ಪ್ರತಿಯೊಂದು ಸಮಸ್ಯೆಯನ್ನು ತಾಳ್ಮೆಯಿಂದ ಪರಿಹರಿಸಲು ನಿಮಗೆ ಸೂಚಿಸಲಾಗಿದೆ.

ಪರಿಹಾರ - ಬುಧವಾರ ನಪುಂಸಕರ ಆಶೀರ್ವಾದ ತೆಗೆದುಕೊಳ್ಳಿ.

मकर / ಮಕರ ರಾಶಿ

ಮಕರ ರಾಶಿಚಕ್ರದ ಸ್ಥಳೀಯರ ಆರನೇ ಮತ್ತು ಒಂಬತ್ತನೇ ಮನೆಯ ಅಧಿಪತಿ ಬುಧ ಗ್ರಹವು ಪ್ರಸ್ತುತ ಸಂಚಾರದ ಸಮಯದಲ್ಲಿ ನಿಮ್ಮ ವಿವಾಹ ಮತ್ತು ಪಾಲುದಾರಿಕೆಯ ಏಳನೇ ಮನೆಯಲ್ಲಿ ಕುಳಿತುಕೊಳ್ಳುತ್ತದೆ. ಆರನೇ ಮನೆ ಜಗಳ, ರೋಗ ಮತ್ತು ಸರ್ಧೆಯನ್ನು ಪ್ರತಿನಿಧಿಸುತ್ತದೆ ಮತ್ತು ಒಂಬತ್ತನೇ ಮನೆ ಸಮೃದ್ಧಿ, ಶುಭ ಘಟನೆಗಳು ಮತ್ತು ಅದೃಷ್ಟದ ಅಂಶವಾಗಿದೆ. ಈ ಸಂಚಾರದ ಸಮಯದಲ್ಲಿ ನೀವು ಜಾಗರೂಕ್ರಗಿರಲು ಮತ್ತು ನಿಮ್ಮ ಜೀವನ ಸಂಗಾತಿಯ ಬಗ್ಗೆ ವಿಶೇಷ ಕಾಳಜಿ ವಹಿಸಲು ನಿಮಗೆ ಸಲಹೆ ನೀಡಲಾಗಿದೆ. ಏಕೆಂದರೆ ಈ ಸಮಯದಲ್ಲಿ ಅವರು ಅನಾರೋಗ್ಯಕ್ಕೆ ಒಳಗಾಗಬಹುದು. ಇದಲ್ಲದೆ ಒಬ್ಬರಿಗೊಬ್ಬರು ಅರ್ಥಮಾಡಿಕೊಳ್ಳಲು ನೀವು ಪರಸ್ಪರ ಸಮಯ ಕಳೆಯಬೇಕು. ಏಕೆಂದರೆ ನಿಮ್ಮಿಬ್ಬರ ನಡುವೆ ಜಗಳ ಅಥವಾ ವಿವಾದದ ಸಾಧ್ಯತೆಯಿದೆ. ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಈ ರಾಶಿಚಕ್ರದ ಜನರು ಈ ಸಮಯದಲ್ಲಿ ಪಾಲುದಾರರೊಂದಿಗೆ ಮಾತನಾಡುವಾಗ ಎಚ್ಚರಿಕೆವಹಿಸಬೇಕು. ಈ ಸಮಯದಲ್ಲಿ ಅವರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆ ಇದೆ. ಇದಲ್ಲದೆ ಆರೋಪಗಳು-ಪ್ರತಿ ಆರೋಪಗಳ ಪ್ರಕ್ರಿಯೆಯು ಸಹ ಮುಂದುವರಿಯಬಹುದು.

ವಕಾಲತ್ತು ಮಾಡುತ್ತಿರುವ ಈ ರಾಶಿಚಕ್ರದ ಸ್ಥಳೀಯರಿಗೆ ಸಮಯ ಉತ್ತಮವಾಗಿರುತ್ತದೆ, ನಿಮ್ಮ ಅಂಶವನ್ನು ಸಾಬೀತುಪಡಿಸಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ಗ್ರಾಹಕರನ್ನು ಅರ್ಥಮಾಡಿಕೊಳ್ಳಲು ಮತ್ತು ಉತ್ತಮವಾಗಿ ಗಳಿಸಲು ನಿಮಗೆ ಉತ್ತಮ ಅವಕಾಶಗಳು ಸಿಗುತ್ತವೆ. ಈ ರಾಶಿಚಕ್ರದ ಏಕೈಕ ಜನರು ಅದೃಷ್ಟವಂತರಾಗಬಹುದು ಮತ್ತು ಈ ಸಮಯದಲ್ಲಿ ನಿಮ್ಮ ಕನಸುಗಳ ರಾಜಕುಮಾರ ಅಥವಾ ರಾಜಕುಮಾರಿಯನ್ನು ಭೇಟಿ ಮಾಡಬಹುದು. ಆದಾಗ್ಯೂ, ಅವಸರದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಎಂದು ನಿಮಗೆ ಸಲಹೆ ನೀಡಲಾಗಿದೆ ಮತ್ತು ಅಂತಿಮ ತೀರ್ಮಾನಕ್ಕೆ ತಲುಪುವ ಮೊದಲು ಅವರೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ಸಂಪತ್ತು ಖರೀದಿಸಲು ಲೋನ್ ಅಥವಾ ಸಾಲ ತೆಗೆದುಕೊಳ್ಳಲು ಬಯಸುತ್ತಿದ್ದರೆ, ಸಮಯ ಅನುಕೂಲಕರವಾಗಿದೆ, ನೀವು ಉತ್ತಮ ವ್ಯವಹಾರ ಮಾಡಬಹುದು.

ಪರಿಹಾರ - ಬುಧ ಗ್ರಹದ ಶುಭ ಫಲಿತಾಂಶಗಳನ್ನು ಪಡೆಯಲು ಬುಧವಾರ ಚಿಕ್ಕ ಹುಡುಗಿಯರಿಗೆ ಹಸಿರು ಬಳೆಗಳನ್ನು ದಾನ ಮಾಡಿ.


ಶನಿ ರಿಪೋರ್ಟ್ ಮೂಲಕ ಶನಿ ದೇವ ನಿಮ್ಮ ಜೀವನದ ಮೇಲೆ ಏನು ಪರಿಣಾಮ ಬೀರುತ್ತಾರೆ ಎಂಬುದನ್ನು ತಿಳಿದುಕೊಳ್ಳಿ

कुंभ / ಕುಂಭ ರಾಶಿ

ನಿಮ್ಮ ಐದನೇ ಮತ್ತು ಎಂಟನೇ ಮನೆಯ ಅಧಿಪತಿ ಬುಧ ಗ್ರಹವು ಈ ಸಮಯದಲ್ಲಿ ನಿಮ್ಮ ಆರನೇ ಮನೆಗೆ ಗೋಚರಿಸುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳ ಲೇಖನ ಕೌಶಲ್ಯವು ಈ ಸಮಯದಲ್ಲಿ ಉತ್ತಮವಾಗಿರುತ್ತದೆ. ಇದಲ್ಲದೆ ತಮ್ಮ ವಿಷಯದ ಬಗ್ಗೆ ಉತ್ತಮ ಹಿಡಿತವನ್ನು ಹೊಂದಿರುತ್ತಾರೆ. ಸಂಶೋಧನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳ ಏಕಾಗ್ರತೆ ಉತ್ತಮವಾಗಿರುವುದಿಲ್ಲ. ಅವರು ಅಧ್ಯಯನದಲ್ಲಿ ಕೆಲವು ಬಿಕ್ಕಟ್ಟುಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ನೀವು ಹೆಚ್ಚು ಕಾಳಜಿ ವಹಿಸಬೇಕು. ಏಕೆಂದರೆ ನಿಮ್ಮ ರೋಗನಿರೋಧಕ ಸಾಮರ್ಥ್ಯವು ಉತ್ತಮವಾಗಿರುವುದಿಲ್ಲ ಮತ್ತು ನೀವು ಕಳಪೆ ಆಹಾರವನ್ನು ಸೇವಿಸುವುದರಿಂದಾಗಿ ನಿದ್ರಾಹೀನತೆ, ಅಲರ್ಜಿ ಮತ್ತು ಜ್ವರಕ್ಕೆ ಗುರಿಯಾಗುತ್ತೀರಿ.

ವೃತ್ತಿಪರ ಜೀವನದಲ್ಲಿ ಕೆಲವು ಬದಲಾವಣೆಗಳು ಉಂಟಾಗಬಹುದು. ಉದ್ಯೋಗದಲ್ಲಿ ವರ್ಗಾವಣೆಯನ್ನು ಬಯಸುತ್ತಿದವರ ಆಶಯ ಈಡೇರಬಹುದು. ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದವರು ಉತ್ತಮ ಕಚೇರಿಯನ್ನು ಹುಡುಕಬೇಕು. ಏಕೆಂದರೆ ಈ ಸಂಚಾರದ ಸಮಯದಲ್ಲಿ ಸ್ವಿಚ್ ಮಾಡಲು ಉತ್ತಮ ಸಾಧ್ಯತೆಗಳಿವೆ. ಈ ಸಮಯದಲ್ಲಿ ಯಾವುದೇ ರೀತಿಯ ಹೂಡಿಕೆ ಅಥವಾ ಹಣಕಾಸು ಸಾಲವಾಗಿ ನೀಡುವಾಗ ಜಾಗರೂಕರಾಗಿರಬೇಕು. ಏಕೆಂದರೆ ನಷ್ಟದ ಸಾಧ್ಯತೆ ಇದೆ. ವೃತ್ತಿಪರ ಜೀವನದಲ್ಲಿ ಯಶಸ್ಸು ಪಡೆಯಲು ಈ ರಾಶಿಚಕ್ರದ ಜನರು ಈ ಸಮಯದಲ್ಲಿ ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ನಿಮ್ಮ ಮಕ್ಕಳ ಕಾರಣದಿಂದಾಗಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು, ಏಕೆಂದರೆ ಈ ಸಮಯದಲ್ಲಿ ಅವರು ಗಾಯಗೊಳ್ಳುವ ಅಪಾಯವಿದೆ, ಆದ್ದರಿಂದ ಅವರ ಬಗ್ಗೆ ವಿಶೇಷ ಕಾಳಜಿ ವಹಿಸಿ.

ಪರಿಹಾರ - ತುಳಸಿ ಸಸ್ಯವನ್ನು ನೆಟ್ಟು ನಿಯಮಿತವಾಗಿ ಪೂಜೆ ಮಾಡಿ.

मीन / ಮೀನಾ ರಾಶಿ

ಮೀನಾ ರಾಶಿಚಕ್ರದ ಸ್ಥಳೀಯರಿಗೆ ಬುಧ ದೇವ ತಾಯಿ, ಸಂತೋಷ, ಭೂಮಿ ಇತ್ಯಾದಿಯ ನಾಲ್ಕನೇ ಮತ್ತು ಮದುವೆ, ಪಾಲುದಾರಿಕೆಯ ಏಳನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ಬುಧ ಗ್ರಹವು ಮಕ್ಕಳು, ಅಧ್ಯಯನ, ಪ್ರೀತಿ ಇತ್ಯಾದಿಯ ಐದನೇ ಮನೆಗೆ ಗೋಚರಿಸುತ್ತದೆ. ಬುಧ ಗ್ರಹದ ಈ ಸ್ಥಾನವು ಈ ರಾಶಿಚಕ್ರದ ಸ್ಥಳೀಯರಿಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಉದ್ಯೋಗದಲ್ಲಿರುವ ಜನರು ಅಥವಾ ವ್ಯಾಪಾರದಲ್ಲಿ ತೊಡಗಿರುವ ಜನರಿಗೆ ಈ ಸಮಯ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಆದಾಗ್ಯೂ, ಕೆಲಸದ ಸ್ಥಳದಲ್ಲಿ ಶಾಂತ ಮನೋಭಾವವನ್ನು ಇಟ್ಟುಕೊಳ್ಳಬೇಕು ಮತ್ತು ಆಕ್ರಮಣಕಾರಿ ಆಗುವುದನ್ನು ತಪ್ಪಿಸಿ. ನಿಮ್ಮ ಕುಟುಂಬ ಜೀವನವನ್ನು ಉತ್ತಮವಾಗಿ ನಿರ್ವಹಿಸಲು ನಿಮಗೆ ಸಾಧ್ಯವಾಗುತ್ತದೆ ಮತ್ತು ಕುಟುಂಬದಲ್ಲಿ ಪ್ರತಿಯೊಬ್ಬರೂ ಪರಸ್ಪರರೊಂದಿಗೆ ಉತ್ತಮ ಸಾಮರಸ್ಯವನ್ನು ಹೊಂದಿರುತ್ತಾರೆ.

ಪ್ರೀತಿಯ ಸಂಬಂಧದಲ್ಲಿರುವ ಜನರಿಗೆ ಈ ಸಮಯ ಅನುಕೂಲಕರವಾಗಿರುತ್ತದೆ. ನೀವಿಬ್ಬರೂ ಪರಸ್ಪರ ಸಮಯವನ್ನು ಅನಂಡಿಸುತ್ತೀರಿ. ನಿಮ್ಮಲ್ಲಿ ಕೆಲವರು ಆಸ್ತಿಯ ಮೇಲೆ ಹೂಡಿಕೆ ಮಾಡಲು ಯೊಜಿಸಬಹುದು. ಧಾರ್ಮಿಕ ಅಥವಾ ಆಧ್ಯಾತ್ಮಿಕ ಕಾರ್ಯಗಳಲ್ಲಿ ನೀವು ಒಲವು ಹೊಂದಿರುತ್ತೀರಿ. ಈ ಸಮಯದಲ್ಲಿ ನೀವು ಸ್ವಲ್ಪ ಜಾಗರೂಕರಾಗಿರಬೇಕು. ಏಕೆಂದರೆ ನಿಮಗೆ ಗಾಯವಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ಉತ್ತಮ ಆಹಾರವನ್ನು ಸೇವಿಸಲು ಸಲಹೆ ನೀಡಲಾಗಿದೆ. ದೈನಂದಿನ ಆಹಾರದಲ್ಲಿ ಹಣ್ಣುಗಳು ಮತ್ತು ತರಕಾರಿಯನ್ನು ಸೇರಿಸಿ. ವಿಧ್ಯಾರ್ಥಿಗಳು ಶಿಕ್ಷಣದಲ್ಲಿ ಉತ್ತಮ ಪ್ರದರ್ಶನ ಮಾಡುತ್ತಾರೆ ಮತ್ತು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ.

ಪರಿಹಾರ - ಭಗವಂತ ವಿಷ್ಣುವಿನ ಕಥೆಯನ್ನು ಕೇಳಿ ಅಥವಾ ಓದುವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.


ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 599/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer